Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅವರು ಅಡ್ಡಗಾಲು ಹಾಕದಿದ್ದರೆ ಪಟೇಲ್ ಪ್ರಧಾನಿ ಆಗಿರುತ್ತಿದ್ದರು, ದೇಶಕ್ಕೊಬ್ಬ ಧೀರ ನಾಯಕ ಸಿಕ್ಕಿರುತ್ತಿದ್ದ!

ಅವರು ಅಡ್ಡಗಾಲು ಹಾಕದಿದ್ದರೆ ಪಟೇಲ್ ಪ್ರಧಾನಿ ಆಗಿರುತ್ತಿದ್ದರು, ದೇಶಕ್ಕೊಬ್ಬ ಧೀರ ನಾಯಕ ಸಿಕ್ಕಿರುತ್ತಿದ್ದ!

ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಇಂದಿಗೂ ಅವರನ್ನು ಮಾತ್ರ Man of steel‘ ಅಥವಾ “ಉಕ್ಕಿನ ಮನುಷ್ಯ’ ಎಂದು ಕರೆಯುತ್ತೇವೆ. ಅಂತಹ ಒಬ್ಬ ನಾಯಕ ಮತ್ತೆ ಜನಿಸಲೇ ಇಲ್ಲ. ಈ ಉಕ್ಕಿನ ಮನುಷ್ಯ ಬಾಲಕನಾಗಿದ್ದಾಗ ಕಂಕುಳದ ಕೆಳಗೆ ಕಜ್ಜಿಯಂಥ ಬೊಬ್ಬೆಯೊಂದು ಮೂಡಿತ್ತು. ಈ ರೀತಿಯ ಬೊಬ್ಬೆಗಳಿಗೆ ಆ ಕಾಲದಲ್ಲಿ ಕಾದ ಕಬ್ಬಿಣದ ಸಲಾಕೆಯಿಂದ ಸುಡುವ ಪದ್ಧತಿ ರೂಢಿಯಲ್ಲಿತ್ತು. ಆ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ವ್ಯಕ್ತಿಯ ಬಳಿಗೆ ಬಾಲಕನನ್ನು ಕರೆದುಕೊಂಡು ಹೋದರು. ಆತ ಕಬ್ಬಿಣ ಕೆಂಪಾಗುವವರೆಗೂ ಕಾಯಿಸಿದರೂ ಹಸುಳೆಯನ್ನು ನೋಡಿದಾಗ ಸುಡಲು ಮನಸಾಗಲಿಲ್ಲ. ಅದನ್ನು ಕಂಡ ಬಾಲಕ, “ಏಕಾಗಿ ತಡಮಾಡುತ್ತಿದ್ದೀಯಾ ಕಾವು ಆರುತ್ತಿದೆ, ಬೊಬ್ಬೆಯನ್ನು ಸುಡು…’ ಎಂದು ಸ್ವತಃ ಹೇಳಿದ. ಆ ವ್ಯಕ್ತಿ ಇನ್ನಷ್ಟು ದಿಗಿಲುಗೊಂಡ. ಅಷ್ಟರಲ್ಲಿ ಸ್ವತಃ ಸಲಾಕೆಯನ್ನು ತೆಗೆದುಕೊಂಡ ಬಾಲಕ ತಾನೇ ಬೊಬ್ಬೆಯ ಮೇಲಿಡುತ್ತಿದ್ದರೆ ಅಲ್ಲಿ ನೆರೆದವರು ದಿಗ್ಭ್ರಮೆಯಿಂದ ಚೀರುತ್ತಿದ್ದರು.

ಆದರೆ…

ಆ ಬಾಲಕನ ಮುಖದಲ್ಲಿ ಮಾತ್ರ ಭಯ-ಭೀತಿ ಅಥವಾ ನೋವಿನ ಲವಲೇಶವೂ ಕಾಣುತ್ತಿರಲಿಲ್ಲ. ಆತ ಮತ್ತಾರೂ ಅಲ್ಲ, ಸರ್ದಾರ್ ವಲ್ಲಭಭಾಯಿ ಪಟೇಲ್! ಅವರು ಶಾಲೆಗೆ ಸೇರಿದಾಗ ಭಾಷಾ ವಿಷಯವಾಗಿ ಮೊದಲು ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡಿದ್ದರು, ನಂತರ ಗುಜರಾತಿಗೆ ಬದಲಾಯಿಸಿಕೊಂಡರು. ಆ ಶಾಲೆ

 

ಯಲ್ಲಿ ಗುಜರಾತಿ ಬೋಧಿಸುತ್ತಿದ್ದ ಮೇಷ್ಟ್ರಿಗೆ ಸಂಸ್ಕೃತ ವ್ಯಾಮೋಹ ಬಹುವಾಗಿ ಇತ್ತು. ಹಾಗಾಗಿ ಸಂಸ್ಕೃತ ಬಿಟ್ಟು ಗುಜರಾತಿ ಆಯ್ಕೆ ಮಾಡಿಕೊಂಡಿದ್ದ ಪಟೇಲ್, ತನ್ನ ತರಗತಿಗೆ ಕಾಲಿಟ್ಟ ಕೂಡಲೇ “ದೊಡ್ಡ ಮನುಷ್ಯ ಬಾರಪ್ಪಾ…’ ಎಂದು ಅಣಕಿಸಿದರು. ಅ ಸಣ್ಣ ಮನಸ್ಸಿನ ಮೇಷ್ಟ್ರಿಗೇನು ಗೊತ್ತಿತ್ತು ಮುಂದೊಂದು ದಿನ ಆ ಬಾಲಕ ದೊಡ್ಡ ಮನುಷ್ಯನೇ ಅಗುತ್ತಾನೆಂದು! ತರಗತಿಗೆ ಆಗಮಿಸಿದ ಪಟೇಲರನ್ನು ಉದ್ದೇಶಿಸಿ, “ಸಂಸ್ಕೃತವನ್ನೇಕೆ ಬಿಟ್ಟು ಗುಜರಾತಿ ಆಯ್ಕೆ ಮಾಡಿಕೊಂಡೆ’ ಎಂದು ಪ್ರಶ್ನಿಸಿದರು. ಅದಕ್ಕೆ ಪಟೇಲ್ ಹೇಳಿದರು, “ಎಲ್ಲರೂ ಸಂಸ್ಕೃತ ಆಯ್ಕೆ ಮಾಡಿಕೊಂಡರೆ ನಿಮಗೆ ಕೆಲಸವೇ ಇರುವುದಿಲ್ಲ!’. ಮತ್ತೆ ಸಿಟ್ಟಿಗೆದ್ದ ಮೇಷ್ಟ್ರು ಹೆಡ್್ಮಾಸ್ಟರ್್ಗೆ ದೂರು ನೀಡಿದರು. ಅವರು ಕರೆಸಿ ಕೇಳಿದಾಗ ಪಟೇಲ್ ಎಲ್ಲವನ್ನೂ ವಿವರಿಸಿದರು. ಆಗ ಹೆಡ್್ಮಾಸ್ಟರ್ ಹೇಳುತ್ತಾರೆ, “ಇಂತಹ ಧೈರ್ಯವಂಥ ವಿದ್ಯಾರ್ಥಿಯನ್ನು ನಾನೆಂದೂ ನೋಡಿರಲಿಲ್ಲ!’ 1946ರಲ್ಲಿ ಸರ್ದಾರ್ ಪಟೇಲರೇ ಮುಂದಿನ ಪ್ರಧಾನಿಯಾಗಬೇಕು ಎಂದು 16ರಲ್ಲಿ 13 ರಾಜ್ಯಗಳು ಒಕ್ಕೊರಲಿನ ಕರೆಕೊಟ್ಟಿದ್ದು, ನಿರ್ಧಾರ ತೆಗೆದುಕೊಂಡಿದ್ದು ಬಹುಶಃ ಇದೇ ಕಾರಣಕ್ಕೆ!! ಅವರನ್ನು ಉಕ್ಕಿನ ಮನುಷ್ಯ ಎಂದು ದೇಶವಾಸಿಗಳು ಕರೆಯುವುದೂ ಈ ಕಾರಣದಿಂದಲೇ!!!

ಆದರೂ ಪಟೇಲರೇಕೆ ಪ್ರಧಾನಿಯಾಗಲಿಲ್ಲ?

ಅಂದು ನಡೆದದ್ದಿಷ್ಟೇ. 1946ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಏರ್ಪಾಡಾಗಿತ್ತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವುದೂ ಖಾತ್ರಿಯಾಗಿತ್ತು. ಹಾಗಾಗಿ ಯಾರು ಆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೋ ಅವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗುತ್ತಾರೆ ಎಂದಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 16ರಲ್ಲಿ 13 ರಾಜ್ಯಗಳು ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರನ್ನು ಸೂಚಿಸಿದವು. ಇನ್ನೇನು ಪಟೇಲ್ ಅಧ್ಯಕ್ಷರಾಗುತ್ತಾರೆ, ಮೊದಲ ಪ್ರಧಾನಿಯೂ ಅವರೇ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಆದರೆ ಪಟೇಲರನ್ನು ಕರೆಸಿಕೊಂಡ “ಮಹಾತ್ಮ’ ಗಾಂಧೀಜಿ, “ಚುನಾವಣೆಗೆ ನಿಲ್ಲಬೇಡ, ಬದಲಿಗೆ ಜವಾಹರಲಾಲ್ ನೆಹರು ಉಮೇದುವಾರಿಕೆಗೆ ಬೆಂಬಲ ನೀಡು’ ಎಂದು ಮನವಿ ಮಾಡಿಕೊಂಡರು. ಅಂದು ಗಾಂಧೀಜಿಯವರ ಸಣ್ಣತನಕ್ಕೆ ಪ್ರತಿಯಾಗಿ ಪಟೇಲ್ ಅದೇ ತೆರನಾದ ಸಣ್ಣತನ ತೋರಲಿಲ್ಲ, ಮರುಮಾತನಾಡದೇ, ಮರುಯೋಚನೆ ಮಾಡದೆ ನಿಜವಾದ ಮಹಾತ್ಮನಂತೆ ಗಾಂಧೀಜಿ ಮನವಿಗೆ ಓಗೊಟ್ಟರು!

ಹೀಗೆ ದುರದೃಷ್ಟವಶಾತ್, ಸ್ವಾತಂತ್ರ್ಯ ತಂದುಕೊಟ್ಟ ಹೆಗ್ಗಳಿಕೆಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡ ಗಾಂಧೀಜಿ, ಹೊಸ ರಾಷ್ಟ್ರನಿರ್ಮಾಣಕ್ಕೆ ಕಳಪೆ ಅಡಿಗಲ್ಲು ಇಟ್ಟು ಭಾರತೀಯರ ಭವಿಷ್ಯವನ್ನೇ ಮಂಕಾಗಿಸಿ ಬಿಟ್ಟರು!

ಹಾಗಂತ ಸರ್ದಾರ್ ಪಟೇಲ್ ನೆಹರು ಅವರಂತೆ ಸ್ವಾರ್ಥಿ, ಅಧಿಕಾರ ಲಾಲಸಿಯಾಗಿರಲಿಲ್ಲ, ಗಾಂಧೀಜಿಯವರಂತೆ ನಾನು, ನಾನು ಹೇಳಿದ್ದೇ ನಡೆಯಬೇಕು ಎಂಬ ಹಠವಾದಿಯೂ ಆಗಿರಲಿಲ್ಲ, ಅವರಿಗೆ ಮುಖ್ಯವಾಗಿದ್ದಿದ್ದು ದೇಶದ ಹಿತ ಮಾತ್ರ. ಅದಕ್ಕೆ ಯಾರೇ ವಿರುದ್ಧವಾಗಿದ್ದರೂ ಸಹಿಸುತ್ತಿರಲಿಲ್ಲ. 1942ರಲ್ಲಿ ಕ್ವಿಟ್ ಇಂಡಿಯಾ ಅಥವಾ ಚಲೇ ಜಾವ್ ಅಥವಾ ಭಾರತ ಬಿಟ್ಟು ತೊಲಗಿ ಚಳವಳಿ ಆರಂಭವಾದಾಗ ಬ್ರಿಟಿಷರು ಕಾಂಗ್ರೆಸ್್ನ ಬಹುತೇಕ ಎಲ್ಲ ನಾಯಕರನ್ನೂ ಬಂಧಿಸಿ ಜೈಲಿಗೆ ತಳ್ಳಿದರು. ಅವರು ಮತ್ತೆ ಬಿಡುಗಡೆಯಾಗಿದ್ದು 3 ವರ್ಷಗಳ ನಂತರ. ಹಾಗೆ ಹೊರಬರುವ ಮುನ್ನ ಬ್ರಿಟಿಷರ ಜತೆ ಕೈಜೋಡಿಸಿದ್ದ ದೇಶದ್ರೋಹಿ ಮುಸ್ಲಿಂ ಲೀಗ್್ನ ನಾಯಕರು ಒಂದರ ನಂತರ ಒಂದರಂತೆ ಅಡಚಣೆಗಳನ್ನು ಒಡ್ಡಲಾರಂಭಿಸಿದರು. ಭಾರತ ಸ್ವತಂತ್ರಗೊಳ್ಳುವುದಕ್ಕೇ ಅಡ್ಡಿಯಾದರು. ಆಗ ಮುಸಲ್ಮಾನರ ವಿರುದ್ಧ, We shall fight all those who came in the way of India’s freedom‘, ಭಾರತ ಸ್ವತಂತ್ರಗೊಳ್ಳುವುದಕ್ಕೆ ಯಾರೇ ಅಡ್ಡಿಯಾದರೂ ಅವರನ್ನು ಮೆಟ್ಟಿ ಗುರಿ ಮುಟ್ಟುತ್ತೇವೆ ಎಂದು ಗುಡುಗಿದ ಏಕಮಾತ್ರ ಕಾಂಗ್ರೆಸ್ಸಿಗ ಪಟೇಲ್! ಇಂತಹ ಪಟೇಲ್ ಸ್ವಾತಂತ್ರ್ಯ ಬಂದಾಗ ಪ್ರಧಾನಿಯಾಗಬೇಕಿತ್ತು, ಆದರೆ ಉಪಪ್ರಧಾನಿಯಾಗಿ ಗೃಹಖಾತೆ ಪಡೆದುಕೊಂಡರು. ಒಂದು ಕಾಲದಲ್ಲಿ ಶೋಕಿಲಾಲನೇ ಆಗಿದ್ದ ಗಾಂಧೀಜಿಗೆ ಬಹುಶಃ ನೆಹರು ಧಿರಿಸು, ಧಿಮಾಕು, ದುಡ್ಡಿನ ಮದಗಳು ಹಿತವಾಗಿ ಕಂಡಿರಬಹುದು. ಆದರೆ ಪಟೇಲ್ ಧಿರಿಸಿನಲ್ಲಿ ಅಪ್ಪಟ ಭಾರತೀಯತೆ ಇದ್ದರೂ ವಿದ್ಯೆಯಲ್ಲಿ ಅವರು ನೆಹರುಗಿಂತ ಕಡಿಮೆ ಇರಲಿಲ್ಲ. 1875, ಅಕ್ಟೋಬರ್ 31ರಂದು ಜನಿಸಿದ ಪಟೇಲ್, ಇಂಗ್ಲೆಂಡಿಗೆ ಹೋಗಲು ಹಣವಿಲ್ಲದಿದ್ದರೂ ವಕೀಲನಾಗಬೇಕೆಂಬ ಕನಸನ್ನು ಕೈಬಿಡದೆ, ಅನ್ಯರಿಂದ ಪುಸ್ತಕಗಳನ್ನು ಎರವಲು ಪಡೆದು, ಮನೆಯಲ್ಲೇ ಕುಳಿತು ಓದಿ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡು ಪಾಸಾಗಿ ಯಶಸ್ವಿ ಬ್ಯಾರಿಸ್ಟರ್ ಆಗಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ಅವರೊಬ್ಬ ಸ್ವಾರ್ಥರಹಿತ ದೇಶಪ್ರೇಮಿ. ಇಂತಹ ವ್ಯಕ್ತಿಯನ್ನು ಬಿಟ್ಟು ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಮೌಂಟ್್ಬ್ಯಾಟನ್ ಪತ್ನಿ ಜತೆ ಸಿಗರೇಟು ಸುಡುತ್ತಾ ದೇಶವನ್ನು ದಹಿಸಲು ಬಿಟ್ಟಿದ್ದ ನೆಹರು ಅದಾವ ಕಾರಣಕ್ಕೆ ಗಾಂಧೀಜಿಗೆ ಇಷ್ಟವಾದರೋ ಅವರ ಆ ರಾಮನೇ ಬಲ್ಲ?!

ಇದೇನೇ ಇರಲಿ, ಉಪಪ್ರಧಾನಿಯಾದ ಪಟೇಲರ ಮುಂದಿನ ಕೆಲಸ ಸುಲಭವಾಗಿರಲಿಲ್ಲ!

ಭಾರತವನ್ನು ಬಿಟ್ಟು ತೊಲಗುವಾಗಲೂ ಬ್ರಿಟಿಷರು ತಮ್ಮ ಕಿಡಿಗೇಡಿ ಬುದ್ಧಿಯನ್ನು ಬಿಡಲಿಲ್ಲ, ತಮ್ಮ ನಿಯಂತ್ರಣದಲ್ಲಿದ್ದ ಪ್ರದೇಶಗಳು ಮಾತ್ರವಲ್ಲ, ತಮ್ಮ ಅಧೀನದಲ್ಲಿದ್ದ, ಡಚ್ಚರು, ಪೋರ್ಚುಗೀಸರ ಕೈಯಲಿದ್ದ ರಾಜ್ಯಗಳೂ “ಇನ್ನು ಸ್ವತಂತ್ರ” ಎಂದು ಹೊರಟುಹೋದರು. ಅಂದರೆ ಅವಿಭಜಿತ ಭಾರತ 625 ಸಣ್ಣ, ದೊಡ್ಡ ರಾಜ್ಯಗಳಾಗಿ ಹೋಯಿತು. ಅವುಗಳಲ್ಲಿ 554 ರಾಜ್ಯಗಳು ಪಾಕ್್ನಿಂದ ಪ್ರತ್ಯೇಕಗೊಂಡ ಭಾರತದಲ್ಲಿದ್ದವು! ಇವುಗಳನ್ನೆಲ್ಲ ಭಾರತದ ಒಕ್ಕೂಟದೊಳಗೆ ಸೇರ್ಪಡೆ ಮಾಡುವುದು, ಒಬ್ಬೊಬ್ಬ ರಾಜನನ್ನೇ ಮನವೊಲಿಸುವುದು ಸಾಮಾನ್ಯ ಕೆಲಸವೇ? ಒಂದು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು 17 ವರ್ಷ ದೇಶವಾಳಿದ ನೆಹರುಗೆ ಆಗಲಿಲ್ಲ, ಆನಂತರ 49 ವರ್ಷ ದೇಶವಾಳಿದ ಇನ್ನುಳಿದವರಿಗೂ ಆಗಿಲ್ಲ, ಹಾಗಿರುವಾಗ ಕೇವಲ ಮೂರು ವರ್ಷ ಉಪಪ್ರಧಾನಿಯಾಗಿದ್ದ ಒಬ್ಬ ವ್ಯಕ್ತಿ 554 ರಾಜ್ಯ, ರಾಜರುಗಳನ್ನು ಹೇಗೆ ಮನವೊಲಿಸಿರಬೇಕು, ಬೆದರಿಸಿ ಬಗ್ಗಿಸಿರಬೇಕು, ಇಲ್ಲವೆ ಬಗ್ಗುಬಡಿದು ದಾರಿಗೆ ತಂದಿರಬೇಕು ಯೋಚಿಸಿ?! ಅವತ್ತಿದ್ದ ಪರಿಸ್ಥಿತಿಯನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾ? ಒರಿಸ್ಸಾ ಒಂದೇ ರಾಜ್ಯದಲ್ಲಿ 26 ಸಣ್ಣ ರಾಜ್ಯಗಳಿದ್ದವು ಈಗಿನ ಛತ್ತೀಸ್್ಗಢದಲ್ಲಿ 15, ಸೌರಾಷ್ಟ್ರದಲ್ಲಿ 14 ಜನ ಆಳುತ್ತಿದ್ದರು. ಈ ಪುಡಿ ಪಾಳೇಗಾರರ ಮಾತು ಹಾಗಿರಲಿ, 500 ಪ್ರಿನ್ಸ್ಲಿ ಸ್ಟೇಟ್(ಅಧೀನ ಸಂಸ್ಥಾನ)ಗಳಿದ್ದವು.

ಇಷ್ಟು ಮಾತ್ರವಲ್ಲ, ಭಾರತದೊಂದಿಗೆ ಸೇರ್ಪಡೆಗೊಳ್ಳಲು ಖಡಾಖಂಡಿತವಾಗಿ ನಿರಾಕರಿಸಿದ, ಪ್ರತಿರೋಧಕ್ಕೂ ಮುಂದಾದ ಹೈದರಾಬಾದ್ ನಿಜಾಮನನ್ನು ಬಗ್ಗುಬಡಿಯಲು ಪಟೇಲ್ ರೂಪಿಸಿದ “ಆಪರೇಷನ್ ಪೋಲೋ’ವನ್ನು ಮರೆಯಲಾದೀತೆ?

ದಕ್ಷಿಣದ ದಖ್ಖನ್ ಪ್ರಸ್ಥಭೂಮಿಯಲ್ಲಿ ಗೋವು, ಗೋಟ್್ಗಳ ಪುಷ್ಕಳ ಭೋಜನ ಮಾಡಿಕೊಂಡಿದ್ದ ಹೈದರಾಬಾದ್ ನಿಜಾಮ ನವಾಬ್ ಮೀರ್ ಉಸ್ಮಾನ್ ಅಲಿಖಾನ್ ಹಾಗೂ ಆತನ ಬೆಂಗಾವಲಿಗೆ ನಿಂತಿದ್ದ ಕಾಸಿಂ ರಿಝ್ವಿ ನೇತೃತ್ವದ ರಝಾಕರ್್ಗಳು ಕಾಲುಕೆರೆದುಕೊಂಡು ಸಂಘರ್ಷಕ್ಕೆ ಬಂದಿದ್ದರು. ಹಿಂದುಗಳು ಬಹುಸಂಖ್ಯಾತರಾಗಿದ್ದರೂ ಮುಸ್ಲಿಂ ಅಧಿಪತ್ಯಕ್ಕೊಳಗಾಗಿದ್ದ ರಾಜ್ಯ ಹೈದರಾಬಾದಾಗಿತ್ತು. ಹಾಗಿದ್ದರೂ ಭಾರತದೊಂದಿಗೆ ಸೇರ್ಪಡೆಯಾಗಬೇಕೆಂದು ಒತ್ತಡ ಹೆಚ್ಚಾದ ಕೂಡಲೇ ಸ್ಥಳೀಯ ಹಿಂದುಗಳ ಮಾರಣಹೋಮ ಮಾಡಲಾರಂಭಿಸಿದರು. ಅರಬ್, ರೋಹಿಲ್ಲಾ, ಉತ್ತರ ಪ್ರದೇಶದ ಮುಸ್ಲಿಮರು ಹಾಗೂ ಪಠಾಣರನ್ನು ಸೇರಿಸಿಕೊಂಡು 22 ಸಾವಿರ ಸಂಖ್ಯೆಯ ಬಂದೂಕುಧಾರಿ ಸೇನೆ ಯುದ್ಧಕ್ಕೆ ನಿಂತಿತ್ತು, ಇನ್ನು ಸುಮಾರು ಒಂದೂವರೆ ಲಕ್ಷ ಮುಸಲ್ಮಾನರು ಕತ್ತಿ, ಖಡ್ಗ ಹಿಡಿದುಕೊಂಡು ಸಿದ್ಧರಾಗಿದ್ದರು. ಆಗ ಮೇಜರ್ ಜನರಲ್ ಚೌಧರಿಯವರ ನೇತೃತ್ವದಲ್ಲಿ ಸೇನಾ ತುಕಡಿಯನ್ನು ಕಳುಹಿಸಿದ ಪಟೇಲರು, ನಿಜಾಮ ಹಾಗೂ ಅವನ ಬೆಂಬಲಿಗರನ್ನು ಮಟ್ಟಹಾಕಿ, ಹೈದರಾಬಾದನ್ನು ಭಾರತದೊಂದಿಗೆ  ವಿಲೀನ ಮಾಡಿದರು. ಅಣಕವೆಂದರೆ ಅಂದು ದೇಶ ಒಡೆದ ಮುಸ್ಲಿಂ ಲೀಗ್ ಹೆಸರು ಇಟ್ಟುಕೊಂಡಿರುವವರ ಜತೆ ಇಂದು ಕೇರಳದಲ್ಲಿ ಕೈಜೋಡಿಸಿರುವುದು ಮಾತ್ರವಲ್ಲ, ಅವತ್ತು ರಝಾಕರ್ಸ್ ಆರ್ಮಿ ಕಟ್ಟಿಕೊಂಡು ಭಾರತದ ಸೇನೆಯ ಜತೆ ಸಂಘರ್ಷಕ್ಕಿಳಿದಿದ್ದ ಕುಟುಂಬಕ್ಕೆ ಸೇರಿರುವ ಮತಾಂಧ ಅಸಾದುದ್ದೀನ್ ಓವೈಸಿ ಜತೆಯೂ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ! ಪಟೇಲ್ ಸಾಧನೆ ಇಷ್ಟು ಮಾತ್ರವಲ್ಲ, 1947ರ ಸೆಪ್ಟೆಂಬರ್ 25ರಂದು ಕಾಶ್ಮೀರದ ರಾಜ ಹರಿಸಿಂಗ್ ಬಳಿಗೆ ಫೀಲ್ಡ್ ಮಾರ್ಷಲ್ ಮಾಣಿಕ್್ಷಾ ಜತೆ ಕೆಪಿ ಮೆನನ್್ರನ್ನು ಭಾರತದೊಂದಿಗೆ ವಿಲೀನಗೊಳಿಸಲು ಒಪ್ಪಿದ ಪತ್ರವನ್ನು ತರಿಸಿಕೊಂಡು ಕಾಶ್ಮೀರ ಪಾಕಿಸ್ತಾನದ ಪಾಲಾಗದಂತೆ ತಡೆದವರೂ ಪಟೇಲರೇ. ಇಂತಹ ಸಾಧನೆ, ಪ್ರಯತ್ನ, ಎದೆಗಾರಿಕೆಯನ್ನು ಕಂಡ ಡಾ. ರಾಜೇಂದ್ರ ಪ್ರಸಾದ್ ಪಟೇಲರನ್ನು ಶ್ಲಾಘಿಸುತ್ತಾ-‘ಇಂಥದ್ದೊಂದು ಉದಾಹರಣೆ ನಮ್ಮ ದೇಶದ ಇತಿಹಾಸದಲ್ಲೇ ಇಲ್ಲ, ಅಷ್ಟೇಕೆ ಮಗದೊಂದು ದೇಶದಲ್ಲೂ ಇಂತಹ ಉದಾಹರಣೆಯನ್ನು ಕಾಣಲು ಸಾಧ್ಯವಿಲ್ಲ’ ಎಂದಿದ್ದರು! ಅಷ್ಟು ಮಾತ್ರವಲ್ಲ, ಪಟೇಲರ ಎದೆಗಾರಿಕೆಗೆ ನಿಬ್ಬೆರಗಾದ ಅಮೆರಿಕದ ಖ್ಯಾತ “ಟೈಮ್್’ ಮ್ಯಾಗಜಿನ್, ಪಟೇಲರ ಭಾವಚಿತ್ರ ಹೊಂದಿದ್ದ ಕವರ್ ಸ್ಟೋರಿ ಪ್ರಕಟಿಸಿತ್ತು.

ಇಷ್ಟಾಗಿಯೂ ಸರ್ದಾರ್ ಪಟೇಲ್ ಅಗಲಿದ ನಂತರ ಆಗಿದ್ದೇನು?

ಅವರು ಬದುಕಿರುವವರೆಗೂ ದೇಶ ಸರಿದಾರಿಯಲ್ಲಿತ್ತು. ಅವರು ಹಾಸಿಗೆ ಹಿಡಿಯುವ ಸನಿಹಕ್ಕೆ ಬಂದ ಸಂದರ್ಭದಲ್ಲೂ ಅಂದರೆ 1950, ನವೆಂಬರ್ 7ರಂದು ಪ್ರಧಾನಿ ನೆಹರುಗೆ ಪತ್ರ ಬರೆದು ಚೀನಾದ ಅಪಾಯದ ಬಗ್ಗೆ ಎಚ್ಚರಿಸಿದ್ದರು, ಭಾರತ ಎಂತಹ ಪರಿಸ್ಥಿತಿಗೂ ಸಿದ್ಧವಾಗಿರಬೇಕು ಎಂದು ಸಲಹೆ ನೀಡಿದ್ದರು. ನೆಹರು ಕಿವಿಗೊಡಲಿಲ್ಲ, ಚೀನಿ ನಾಯಕ ಝೌ ಎನ್ಲಾ ಜತೆ ಪಂಚಶೀಲ ಅಂತೆಲ್ಲ ಹುಚ್ಚುಚ್ಚು ಒಪ್ಪಂದ ಮಾಡಿಕೊಂಡು ಮೈಮರೆತು ಒಂದರ ನಂತರ ಒಂದು ತಪ್ಪು ಮಾಡಿದರು. ಕೊನೆಗೆ 1959ರಲ್ಲಿ ಟಿಬೆಟ್ ಚೀನಾದ ವಶವಾಗಿದ್ದು ಮಾತ್ರವಲ್ಲ, 1962ರಲ್ಲಿ ಚೀನಾ ಭಾರತದ ಮೇಲೂ ಎರಗಿತು. ಹೀಗೆ ಚೀನಾ ಎದುರು ಸೋತು, ದೇಶದ ಆತ್ಮಸ್ಥೈರ್ಯ ಉಡುಗಿಸಿ, ದೇಶವನ್ನು ಸೋಲಿನ ಅವಮಾನಕ್ಕೊಳಗಾಗಿಸಿ ನೆಹರು ಸ್ವರ್ಗಸ್ಥರಾದರು.

ಸರ್ದಾರ್ ಪಟೇಲರು ಬದುಕಿದ್ದಾಗ ಯಾವ ರೀತಿ ನಡೆದುಕೊಂಡಿದ್ದರು?

ಸ್ವಾತಂತ್ರ್ಯಾನಂತರ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿಖಾನ್ ಅವರನ್ನು 1950ರಲ್ಲಿ ಭೇಟಿಯಾದ ನಮ್ಮ ಉಪಪ್ರಧಾನಿ ಸರ್ದಾರ ಪಟೇಲ್, “ಎರಡೂ ದೇಶಗಳು ತಮ್ಮ ಏಳಿಗೆ ಬಗ್ಗೆ ಪ್ರತ್ಯೇಕವಾಗಿಯೇ ಯೋಚಿಸಬೇಕೆಂದು ನನಗೆ ಅರಿವಾಗಿದೆ ಹಾಗೂ ಆ ಏಳಿಗೆ ನಮ್ಮ ಕೈಯಲ್ಲೇ ಇದೆ. ನಮ್ಮೆರಡೂ ದೇಶಗಳ ನಡುವಿನ ಸಂಬಂಧ ಏನೇ ಆಗಬಹುದು, ಆದರೆ ನಾನು ಭವ್ಯ, ಸಮೃದ್ಧ ಭಾರತದ ಕನಸ್ಸನ್ನು ಹೊಂದಿದ್ದೇನೆ. ಪಾಕಿಸ್ತಾನದ ಜತೆ ಒಳ್ಳೆಯ ಸಂಬಂಧವಿರಲಿ, ಬಿಡಲಿ, ನಾವು ಸ್ನೇಹಿತರಾಗಿ ಉಳಿಯಲಿ, ಬಿಡಲಿ ಭವ್ಯ ಭಾರತ ನಿರ್ಮಾಣದ ಕನಸನ್ನು ಮಾತ್ರ ನಾವು ಸಾಕಾರಗೊಳಿಸಿಯೇ ತೀರುತ್ತೇವೆ’ ಎಂದಿದ್ದರು.

ಆದರೆ…

ಅದೇ ಸರ್ದಾರ್ ಪಟೇಲರ ಕಾಂಗ್ರೆಸ್ಸಿನ ಪ್ರಧಾನಿಯಾಗಿರುವ ಮನಮೋಹನ್ ಸಿಂಗ್ ಹಾಗೂ ಅವರ ಲಂಗು-ಲಗಾಮು ಹಿಡಿದುಕೊಂಡಿರುವ ಪರಕೀಯ ಮಹಿಳೆ ಸೋನಿಯಾ ಗಾಂಧಿಯವರು ದೇಶದ ಅಮೂಲ್ಯ ನೈಸರ್ಗಿಕ  ಸಂಪತ್ತನ್ನು ಹೊಂದಿರುವ ಗುಜರಾತಿನ “ಸರ್ ಕ್ರೀಕ್್’ ಪ್ರದೇಶವನ್ನು ದೇಶ ಒಡೆದು ಪ್ರತ್ಯೇಕಗೊಂಡಿರುವ ದ್ರೋಹಿಗಳ ನಾಡಾದ ಪಾಕಿಸ್ತಾನದ ಜತೆ ಉತ್ತಮ ಬಾಂಧವ್ಯ ಬೆಳೆಸುವ ಸಲುವಾಗಿ ತ್ಯಾಗ ಮಾಡಲು ಹೊರಟಿದ್ದಾರಲ್ಲಾ…!? ಈ ವಿಷಯವೇನಾದರೂ ಗೊತ್ತಾದರೆ ಸರ್ದಾರ್ ಪಟೇಲರ ಸಮಾಧಿಯೇ ರೋದಿಸೀತು…!

ಇಷ್ಟಕ್ಕೂ ಇಂದು (ಡಿಸೆಂಬರ್ 15) ಪಟೇಲರ ಪುಣ್ಯತಿಥಿ!

24 Responses to “ಅವರು ಅಡ್ಡಗಾಲು ಹಾಕದಿದ್ದರೆ ಪಟೇಲ್ ಪ್ರಧಾನಿ ಆಗಿರುತ್ತಿದ್ದರು, ದೇಶಕ್ಕೊಬ್ಬ ಧೀರ ನಾಯಕ ಸಿಕ್ಕಿರುತ್ತಿದ್ದ!”

 1. Vijay says:

  Dear Pratap
  You are right,its our fate from Rana Sangram Singh to PrithwiRaj Chouhan we lost in when required, again its repeated in 3rd battle of Panipat even today people still fights in the name of rationality rather than nationality, GOD help us.
  Ramachandra Vijay

 2. Veeresh Kotagi says:

  Hats of to u Sardar Patelji

 3. basvaraju says:

  ಭಾರತೀಯರ ಮಿಡಿತ ಪರಕೀಯ ಮಹಿಳೆಗೆ ಹೇಗೆ ಅಥ್್ವಾಗಬೇಕು.

 4. manju says:

  Apartima Horatagaara , jananaayak ukkin manushyaa patelralliya chaati naavu kaantirodu kevala modi yevaralli matraa……..Thank you gor wonderfull information

 5. Ajay says:

  Good One!!!!!

 6. Gurudatta says:

  Good one Pratap.

  Regards
  Gurudatta N.R

 7. Most realistic article…

 8. ARUNSHANKAR RAGA says:

  SIR
  ONCE AGAIN A GOOD ARTICLE ………………….WE CAN EXPECT THIS TYPE ARTICLE FROM U ONLY.

 9. Mango Man says:

  I think India would have been great economy and super power in the world, had the Independent India been put in to the hands of true patriots like Sardar Valbhai Patel, Subhas Chandra Bose, Lal Bahadhur Shastri .etc.
  En mododu namma karma.

 10. Basavaraj says:

  Hello sir,

  Aavattin saradar patel pradab mantri aagadiddare enayeetu sar, aadare ivattin narendra modi pradan mantri aagtare sir.

 11. puneeth says:

  Really fantabulous Sir…….

 12. kallanagouda mallapur says:

  Real iron man for patil 1947 before

 13. Raghavendra.L says:

  Sardar Patelravaru vabba mahan deshabhaktha haagu swathanthrya horatagara annuvudaralli eradu mathilla… adare neevu pade pade Gandhijiyavarannu yake hiyalisi bareyuttiri..? Gandhiji vabba mahan vyakthiyagiddidduddarindale Sardar patelranthaha mahan nayakaru avara mathige ashtondu gowrava koduttiddaru.. Anthaha mahan vyakthithva Gandhijiyavaradagittu… Deshada swathanthryakke ivarellara kodugegalu, thyaga, balidanagalannu navu holisi nodalu sadhyavilla… hage madabaradu kooda.. Namma agina nayakarigella iddidda vande goori .. ade deshada swanthanthrya… Edi vishwakke shanthi, ahimseya mantravannu heli ellarinda mahathma endu kareyisikonda Gandhijiyavarannu pade pade hiyalisi bereyuvudannu nillisi.. Neevu bareyuva hage avaralli nyunyathegaliddali ashtondu brahut pramanadalli agina kalada janasthoma avarige ashtondu bembala niduttiralilla allave..? Hagadare ashondu koti – koti janasamudaya gandhijiyavara karege ogottu avarannu thamma nayakarannagi vappikondu swathanthrya horata chaluvaliyalli dumukida avarige gandhiji yarendu gottiralillave..? nimma prakara avarella moorkhare..? Ghandhijiyavarannu kettavarannagi chithrisi enu sadisalu horatiddiri..? Don’t forget he is also human being like us. avarindalu kelavondu manushyasahajavada thappugalagirabahudu.. thappe madada manushyannannu thorisi nodona..? Prathyaksha kandaru pramanisi nodu ennuva gaadeye irovaga.. avara jeevithavadiyalli naavu-neevella hutte iralilla..!!! hagiruvaga avara bagge 100% heege nedeyithu endu hege heluttiri..? Adhara granthagalu yavattu 100% sathyavannu heluvudilla.. ella kaladallu vabba vyakthi athava vandu vyavastheya bagge para-viroda bhavagalu bande bandiruttade… ishtakku neevu gandhijiyavarannu dooshisuvudarindu neevu galisuvudadaru enu..? I am a big fan of your writings… hage nimma baravanigegalu yuva janatheyannu sariyada margadalli nadesuvanthirali, haagu sariyada jnanavannu koduvanthaddagirali endu ashisuttene..

 14. Gangadhar G Shendrekar says:

  Once again the time has come to us to choose a right person of the same sardar Patel state. That is Modi. Please vote BJP and bring back the shining days of India.

 15. santhosh shetty says:

  Thats true, Gandhiji’s favoritism has spoiled India. Still we have suffering from that favoritism – Gandi family is controlling our country. Even though, India got freedom, but still we are under dictator of Gandi family.

 16. bs siddegowda says:

  what u r written the facts r very true.but people of India are very unlucky. because SRI. sardar patel was not P.m. of INDIA.

 17. bs siddegowda says:

  THANKS A LOT. I AM READER OF UR ARTICLES.I LIKE VERY MUCH. what u r written the facts r very true.but people of India are very unlucky. because SRI. sardar patel was not P.m. of INDIA.THIS ARTiCLES WAS IN WRITE TIME.ONCE AGAIN I am very greatful to u to publish this article.

 18. Dinaraj shetty says:

  excellent article

 19. Dheeraj M Pai says:

  Thank you sir for this beautiful article
  every article of yours is really inspiring

 20. rajshekhar says:

  I’ve been reading ur artcls frm so many days..i realy apreciate ur writng skill..ur artcls r very much influencng..

 21. vishwajith says:

  i don what to say about neharu and mr. Gandhi bt i salute to patel ji with full heart…..

 22. PRAKASH says:

  Fine article

 23. sri says:

  Yea, he is the same fanatic who forced Hindi on non-hindi speaking state as national language with lie.

 24. abcd says:

  ನೆಹರು ಸ್ವರ್ಗಸ್ಥರಾದರು???????????????? please dont say so………. may his soul rust in pieces for eve and ever and ever……….