*/
Date : 27-07-2009 | 18 Comments. | Read More
ಹಾನ್ಸ್ ಲೂಥರ್ ಅಂದರೆ ಬಹುಶಃ ಯಾರಿಗೂ ಅರ್ಥವಾಗುವುದಿಲ್ಲ. ಮಾರ್ಟಿನ್ ಲೂಥರ್ ಅಂದರೆ ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಎಂದು ತಪ್ಪಾಗಿ ಗ್ರಹಿಸುವವರೇ ಹೆಚ್ಚು. ಅಣಕವೆಂದರೆ ಕಿಂಗ್‌ಗೆ ಆ ಹೆಸರು ಬಂದಿದ್ದೇ ಜರ್ಮನಿಯ ಮಾರ್ಟಿನ್ ಲೂಥರ್ ಅವರಿಂದ. ಮಾರ್ಟಿನ್ ಲೂಥರ್ ಸಾಮಾನ್ಯ ವ್ಯಕ್ತಿಯಲ್ಲ. ಕ್ರೈಸ್ತಮತಕ್ಕೆ ಒಂದು ಮಹತ್ತರ ತಿರುವು ನೀಡಿದ ಧರ್ಮಸುಧಾರಕ. ಮಾರ್ಟಿನ್ ಲೂಥರ್ ಅವರ ಮೂಲ ಹೆಸರು ಹಾನ್ಸ್ ಲುದರ್, ತದನಂತರ ಲೂಥರ್ ಆಯಿತು. ಅವರು ಹುಟ್ಟಿದ್ದು 1483, ನವೆಂಬರ್ 10ರಂದು, ಜರ್ಮನಿಯಲ್ಲಿ. ಆಗ ಜರ್ಮನಿ […]
Date : 22-07-2009 | 9 Comments. | Read More
ಟಿವಿಯಿಂದ ಎಲ್ಲಕ್ಕಿಂತ ಮಿಗಿಲಾದ ಒಂದು ಲಾಭವಿದೆ! ಒಂದು ವೇಳೆ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸೌಲಭ್ಯ ಕಲ್ಪಿಸಿದರೆ ಜನ ನಡುರಾತ್ರಿಯವರೆಗೂ ಟಿವಿ ನೋಡಿ, ಮಲಗಿಕೊಂಡು ಬಿಡುತ್ತಾರೆ. ಮಕ್ಕಳನ್ನು ಮಾಡಲು ಅವರಿಗೆ ಸಮಯಾವಕಾಶವೇ ಸಿಗುವುದಿಲ್ಲ!! ಎಲ್ಲಿ ವಿದ್ಯುತ್ ಇಲ್ಲವೋ ಅಲ್ಲಿ ಮಕ್ಕಳು ಹುಟ್ಟಿಸುವುದನ್ನು ಬಿಟ್ಟರೆ ಬೇರೇನೂ ಕೆಲಸವಿರುವುದಿಲ್ಲ!!! ಇದನ್ನು ಲಘುವಾಗಿ ಹೇಳುತ್ತಿದ್ದೇನೆ ಎಂದು ಭಾವಿಸಬೇಡಿ. I am serious. ಟಿವಿ ಬಹುದೊಡ್ಡ ಪರಿಣಾಮ ಬೀರಬಲ್ಲದು. ಜನಸಂಖ್ಯಾಸ್ಫೋಟ ಸಮಸ್ಯೆಯನ್ನು ನಿವಾರಿಸಲು ಇದೊಂದು ಪರಿಣಾಮಕಾರಿ ಮಾರ್ಗ. ಜನಸಂಖ್ಯೆ ಹೆಚ್ಚಳ ಸಮಸ್ಯೆಯನ್ನು ಟಿವಿ […]
Date : 12-07-2009 | 9 Comments. | Read More
ಅವರು ಹೇಳುತ್ತಿರುವುದೆಲ್ಲ ಕೇಳಲು ಚೆನ್ನಾಗಿಯೇ ಇದೆ. ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಅವರು ಜೂನ್ 25ರಂದು “ಶತದಿನಗಳ ಯೋಜನೆ” ಯನ್ನು ಘೋಷಣೆ ಮಾಡುತ್ತಾ ಆಡಿರುವ ಮಾತುಗಳು, ಮುಂದಿಟ್ಟಿರುವ ಹೊಸ Plan ಖಂಡಿತ ಕುತೂಹಲಕಾರಿಯಾಗಿದೆ. “ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೊಳಗಾಗು ತ್ತಾರೆ. ಮಕ್ಕಳ ಜತೆಗೆ ತಂದೆ-ತಾಯಂದಿರ ಮೇಲೂ ಅನಗತ್ಯ ಒತ್ತಡವುಂಟಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾರೆ. ವಿದ್ಯಾರ್ಥಿಗಳ ಮೇಲಿನ ಹೊರೆ, ಒತ್ತಡವನ್ನು ಕಡಿಮೆ ಮಾಡಲೇಬೇಕು. ಆದ ಕಾರಣ, 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ […]
Date : 05-07-2009 | 32 Comments. | Read More
ಅಯ್ಯಯ್ಯೋ ಪರಿಸ್ಥಿತಿ ಎಲ್ಲಿಗೆ ಬಂತಪ್ಪಾ, ನಮ್ಮ ಜನರಿಗೆ ಏನಾಗುತ್ತಿದೆಯಪ್ಪಾ ಎಂದು ತಲೆಕೆಡಿಸಿಕೊಳ್ಳಬೇಡಿ. ಇದೂ ಕೂಡ ಒಂದು Fad. Latest Fad ಅಥವಾ ‘ಹೊಸ ತೆವಲು’ ಎನ್ನಬಹುದು. ಒಂದು ಕಾಲದಲ್ಲಿ ಭಾರತದಲ್ಲಿ Leftism ಒಂದು Fad ಆಗಿತ್ತು. ದಿಲ್ಲಿಯ ಜವಾಹರಲಾಲ್ ನೆಹರು ವಿವಿ(ಜೆಎನ್‌ಯು), ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಕ್ಲಾಸ್‌ರೂಮ್‌ಗಳಲ್ಲಿ, ಕಾರಿಡಾರ್‌ನಲ್ಲಿ ನಿಂತು ಎಡಪಂಥೀಯ ವಾದದ ಬಗ್ಗೆ ಮಾತನಾಡುವುದು, ದೇಶ-ವ್ಯವಸ್ಥೆಯನ್ನು ಟೀಕೆ ಮಾಡುವುದೇ ಒಂದು ತೆವಲು ಹಾಗೂ ಹೆಮ್ಮೆಯ ವಿಚಾರವಾಗಿತ್ತು. ಆನಂತರ ‘Animal Rights’ ಎಂಬ ಹೊಸ ಫ್ಯಾಡ್ ಬಂತು. […]