Date : 28-02-2012, Tuesday | 25 Comments
Yuvi,
I want you to know that the entire LIVESTRONG team is here for you. We say it all the time, and truly believe in it: Knowledge is Power, Unity is Strength, and Attitude is Everything.
Please know that we are here to help you and your family in any way possible.
Go Yuvi!!
Livestrong!
ವಿಶ್ವವಿಖ್ಯಾತ ಸೈಕ್ಲಿಂಗ್ ಚಾಂಪಿಯನ್ ಲ್ಯಾನ್ಸ್ ಆರ್ಮ್್ಸ್ಟ್ರಾಂಗ್ ಕಳುಹಿಸಿರುವ ಈ ಸಂದೇಶವನ್ನು ನಮ್ಮ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ತಮ್ಮ ಟ್ವಿಟ್ಟರ್ ಪುಟದ ಮೇಲೆ ಹಾಕಿಕೊಂಡಿ ದ್ದಾರೆ. ‘@lancearmstrong makes me feel better! Thank you lance means a lot hope we can meet’ ಎಂದು ತಮ್ಮ ಧನ್ಯತೆಯನ್ನೂ ವ್ಯಕ್ತಪಡಿಸಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್್ಗೆ ತುತ್ತಾಗಿರುವ ಯುವರಾಜ್ ಸಿಂಗ್ ಅಮೆರಿಕದ ಬೋಸ್ಟನ್್ನಲ್ಲಿ ಕೀಮೋಥೆರಪಿಗೆ ಒಳಗಾಗಿದ್ದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಮತ್ತಾರೂ ಅಲ್ಲ, ಸೈಕ್ಲಿಂಗ್್ನಲ್ಲಿ ಸತತ 7 ಬಾರಿ ಪ್ರತಿಷ್ಠಿತ ‘ಟೂರ್ ಡಿ ಫ್ರಾನ್ಸ್್’ ಗೆದ್ದಿರುವ ಅಮೆರಿಕದ ಲ್ಯಾನ್ಸ್ ಆರ್ಮ್್ಸ್ಟ್ರಾಂಗ್ ಅವರನ್ನು ಗುಣಪಡಿಸಿದ ಡಾ. ಲಾರೆನ್ಸ್. ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತಿರುವ ಯುವಿ, ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟಕ್ಕೆ ಪ್ರೇರಣೆ ಮತ್ತು ಆತ್ಮಸ್ಥೈರ್ಯ ಪಡೆದುಕೊಳ್ಳಲು ಕೈಯಲ್ಲಿ ಹಿಡಿದುಕೊಂಡಿದ್ದಾರೆ-“It’s Not About the Bike: My Journey Back to Life’! ಇದು ಲ್ಯಾನ್ಸ್ ಆರ್ಮ್್ಸ್ಟ್ರಾಂಗ್ ಅವರ ಆತ್ಮಚರಿತ್ರೆ. 2011ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್್ನಲ್ಲಿ ‘ಮ್ಯಾನ್ ಆಫ್ ದಿ ಸೀರೀಸ್್’ ಆಗಿದ್ದ ಯುವರಾಜ್ ಸಿಂಗ್ ಸ್ವತಃ ಒಬ್ಬ ಹೋರಾಟಗಾರ. 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್್ನಲ್ಲಿ ಇಂಗ್ಲೆಂಡ್್ನ ಸ್ಟುವರ್ಟ್ ಬ್ರಾಡ್ ಬೌಲಿಂಗ್್ನಲ್ಲಿ 6 ಬಾಲಿಗೆ 6 ಸಿಕ್ಸರ್ ಹೊಡೆದಿದ್ದ ಆತನಲ್ಲಿ ಎದೆಗಾರಿಕೆಗಂತೂ ಕೊರತೆಯೇ ಇಲ್ಲ. ಅಂತಹ ಯುವಿ ಅತ್ಮಸ್ಥೈರ್ಯ ಪಡೆದುಕೊಳ್ಳಲು ಆರ್ಮ್್ಸ್ಟ್ರಾಂಗ್ ಅವರ ಆತ್ಮಚರಿತ್ರೆ ಹಿಡಿದುಕೊಂಡು ಕುಳಿತಿದ್ದಾನೆ ಎಂದರೆ ಆರ್ಮ್್ಸ್ಟ್ರಾಂಗ್ ಇನ್ನೆಂತಹ ಹೋರಾಟಗಾರನಿರಬಹುದು?
ಏಡ್ಸ್್ಗೆ ಚಿಕಿತ್ಸೆಯೇ ಇಲ್ಲವಾದರೆ, ಕ್ಯಾನ್ಸರ್ ಬಂದರೆ ಬದುಕು ಅನಿಶ್ಚಿತಎಂಬಂತಹ ಪರಿಸ್ಥಿತಿ ಇವತ್ತು ಸೃಷ್ಟಿಯಾಗಿದೆ!
ಹಾಗಿರುವಾಗ 1996ರಲ್ಲೇ ಕ್ಯಾನ್ಸರ್್ಗೆ ತುತ್ತಾಗಿರುವುದು ತಿಳಿದಾಗ ಲ್ಯಾನ್ಸ್ ಆರ್ಮ್್ಸ್ಟ್ರಾಂಗ್ ಮನದಲ್ಲಿ ಯಾವ ಭಾವನೆಗಳು ಮೂಡಿರಬಹುದು? ಅಂದು ಆರ್ಮ್್ಸ್ಟ್ರಾಂಗ್್ನ ಆಯುಷ್ಯ ಇಪ್ಪತೈದು ವರ್ಷಕ್ಕೇ ಅಂತ್ಯವಾಗುವ ಅಪಾಯ ಎದುರಾಗಿತ್ತು. ಅದನ್ನು ಆತ ಎದುರಿಸಿದ್ದಾದರೂ ಹೇಗೆ? ಏಕೆ ಎಲ್ಲರೂ ಪ್ರೇರಣೆಗಾಗಿ ಆರ್ಮ್್ಸ್ಟ್ರಾಂಗ್್ನತ್ತ ಮುಖಮಾಡುತ್ತಾರೆ? ಆತನ “It’s Not About the Bike: My Journey Back to Life ಪುಸ್ತಕವನ್ನು ಓದುತ್ತಿದ್ದರೆ ಕಣ್ಣಾಲಿಗಳು ಒದ್ದೆಯಾಗುತ್ತವೆ. ನೀವೊಬ್ಬ ಕ್ಯಾನ್ಸರ್ ಪೀಡಿತರಾಗಿದ್ದರೆ ಬದುಕಿಗೆ ಖಂಡಿತ ಹೊಸಚೈತನ್ಯ ದೊರೆಯುತ್ತದೆ. What is stronger, fear or hope? ಭಯ ಅಥವಾ ಭರವಸೆ ಇವೆರಡರಲ್ಲಿ ಯಾವುದು ಬಲಿಷ್ಠ ಎಂದು ಆತ ಕೇಳುತ್ತಾನೆ. ಆತನಿಗೆ ವೃಷಣದ ಕ್ಯಾನ್ಸರ್ ಬಂದಾಗ ಗುಣ ಮಾಡುವಂತೆ ದೇವರಿಗೆ ಮೊರೆಯಿಡುತ್ತಾ ಕುಳಿತುಕೊಳ್ಳುವುದಿಲ್ಲ, ವಿಧಿಯನ್ನೂ ಶಪಿಸಲಿಲ್ಲ, ಬದಲಿಗೆ “If there was a god, I’d still have both nuts’ ಎಂದು ಕುಹಕವಾಡುತ್ತಾನೆ, ಕ್ಯಾನ್ಸ್್ರ್ ವಿರುದ್ಧ ಹೋರಾಟಕ್ಕೆ ಸಿದ್ಧನಾಗುತ್ತಾನೆ.
ಅವನ ಜೀವನವೇ ಒಂದು ಪ್ರೇರಣೆ.
ಸೈಕ್ಲಿಂಗ್ ಎಂಬುದು ನಮ್ಮ ಜನರಿಗೆ ಆಕರ್ಷಕ ಸ್ಪರ್ಧೆ ಅಥವಾ ಕ್ರೀಡೆಯಾಗಿಲ್ಲದಿರಬಹುದು. ಆದರೆ ಅದರಷ್ಟು ಶಕ್ತಿ-ಸಾಮರ್ಥ್ಯ ಬೇಕಾದ ಕ್ರೀಡೆ ಮತ್ತೊಂದಿಲ್ಲ. ಇತರ ಸ್ಪರ್ಧೆಗಳಲ್ಲಿ ಒಬ್ಬ ಕ್ರೀಡಾಳುವಿಗೆ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆಯಲು ಕಷ್ಟವಾಗಬಹುದು, ತಡವಾಗಿಯಾದರೂ ಗುರಿಮುಟ್ಟುವುದಕ್ಕೆ ಅಡ್ಡಿಯಿಲ್ಲ. ಆದರೆ ಸೈಕ್ಲಿಂಗ್್ನಲ್ಲಿ ಗುರಿಮುಟ್ಟುವುದೇ ಒಂದು ಸಾಧನೆ ಎನಿಸಿಬಿಡುತ್ತದೆ. ಇಪ್ಪತ್ತು ವರ್ಷದ ಲ್ಯಾನ್ಸ್ 1991ರಲ್ಲಿ 12 ಹಂತಗಳ ಹಾಗೂ 1,085 ಮೈಲು ಗುರಿಯ ‘ಟೂರ್ ಡುಪಾಂಟ್್’ ಸ್ಪರ್ಧೆಯನ್ನು ಪೂರ್ಣಗೊಳಿಸಿದಾಗ ಅಂತಾರಾಷ್ಟ್ರೀಯ ಸೈಕ್ಲಿಂಗ್್ನಲ್ಲಿ ಅಮೋಘ ಕಥನವೊಂದು ಆರಂಭವಾಗುತ್ತಿದೆ ಎಂದೇ ಕ್ರೀಡಾ ವಿಶ್ಲೇಷಕರು, ಪ್ರಾಯೋಜಕರು ಭಾವಿಸಿದರು. ಆನಂತರ ಇಟಲಿಯಲ್ಲಿ ನಡೆದ ಸ್ಪರ್ಧೆಯಲ್ಲೂ ಗುರಿಮುಟ್ಟಿದರು. 1992ರ ಒಲಿಂಪಿಕ್ಸ್್ನಲ್ಲಿ ಎರಡನೇ ಸ್ಥಾನ ಪಡೆದರು. 1993ರ ‘ಟೂರ್ ಡುಪಾಂಟ್್’ನಲ್ಲೂ ಎರಡನೇ ಸ್ಥಾನ. 1996ರಲ್ಲಂತೂ ‘ಟೂರ್ ಡುಪಾಂಟ್್’ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸುತ್ತಾನೆ, ಅತಿ ವೇಗದ ಸೈಕಲ್ ಚಾಲನೆಯನ್ನು ದಾಖಲಿಸುತ್ತಾನೆ. ಆದರೆ ಪ್ರತಿಷ್ಠಿತ ‘ಟೂರ್ ಡಿ ಫ್ರಾನ್ಸ್್’ನಿಂದ ಮಧ್ಯದಲ್ಲೇ ಹೊರಹೋಗಬೇಕಾಗುತ್ತದೆ. ದೈಹಿಕವಾಗಿ ತೀವ್ರವಾಗಿ ಬಳಲಿ ಬಿಡುತ್ತಾನೆ, ವೃಷಣ ಊದಿಕೊಳ್ಳುತ್ತದೆ, ಸೈಕಲ್ ಏರುವುದಕ್ಕೂ ಕಷ್ಟವಾಗತೊಡಗುತ್ತದೆ. ಇಂತಹ ಲಕ್ಷಣಗಳು ಕಾಣಿಸಲಾರಂಭಿಸಿ ಹಲವು ತಿಂಗಳುಗಳೇ ಕಳೆದಿದ್ದವು. ಒಬ್ಬ ಕ್ರೀಡಾಳುವಿನ ದೇಹದ ನೋವು, ಸ್ನಾಯುಸೆಳೆತಗಳಿಗೆ ಮೈದಾನವಿದ್ದಂತೆ. ಹಾಗಾಗಿ ಲ್ಯಾನ್ಸ್ ಅವುಗಳ ಬಗ್ಗೆ ಗಮನ ಕೊಟ್ಟಿರುವುದಿಲ್ಲ. ಆದರೆ ವೃಷಣದ ಊತ, ಅದರಿಂದ ಉಂಟಾದ ನೋವು, ತಲೆ ಸಿಡಿತ ಸಹಿಸಲಾಧ್ಯವಾದವು. ರಕ್ತದ ವಾಂತಿ ಆರಂಭವಾಯಿತು. ಆಗ ಆಸ್ಪತ್ರೆಯತ್ತ ಮುಖ ಮಾಡಿದ. ಆತನನ್ನು ಕೂಲಂಕಷ ಪರೀಕ್ಷೆಗೆ ಒಳಪಡಿಸಿದ ವೈದ್ಯರು ಹೇಳಿದ ಮಾತು ದಂಗುಬಡಿಸುವಂತಿತ್ತು.
Lance, You have cancer!
ಆತ್ಮಘಾತುಕ ಕ್ಯಾನ್ಸರ್ ದೇಹವನ್ನು ಆಕ್ರಮಿಸಿರುವ ಸುದ್ದಿಯನ್ನು ವೈದ್ಯರು ತಿಳಿಸುತ್ತಾರೆ. ಅಲ್ಲಿಗೆ ಅಂತಾರಾಷ್ಟ್ರೀಯ ಸೈಕ್ಲಿಂಗ್್ನಲ್ಲಿ ಅದ್ಭುತ ಅಧ್ಯಾಯವೊಂದು ಆರಂಭವಾಗುವ ಮೊದಲೇ ಅಂತ್ಯಗೊಳ್ಳುವ ಸೂಚನೆ ಹೊರಬಿದ್ದಿತು.
ಏಕೆ ಗೊತ್ತಾ?
ನಮ್ಮ ಯುವರಾಜನ ಕ್ಯಾನ್ಸರ್ ಮೊದಲ ಹಂತದಲ್ಲೇ ಪತ್ತೆಯಾಗಿದ್ದು ಸಂಪೂರ್ಣವಾಗಿ ಗುಣಮುಖನಾಗುವ ಎಲ್ಲ ಸಾಧ್ಯತೆಗಳೂ ಇದ್ದರೆ ಲ್ಯಾನ್ಸ್್ಗೆ ಕ್ಯಾನ್ಸರ್ ಇರುವುದು ತಿಳಿಯುವ ವೇಳೆಗೆ ಅದು ನಾಲ್ಕನೇ ಹಂತ ಮುಟ್ಟಿತ್ತು! ವೃಷಣ ಮಾಮೂಲಿ ಗಾತ್ರಕ್ಕಿಂತ ಮೂರು ಪಟ್ಟು ದೊಡ್ಡದಾಗಿ ಊದಿತ್ತು, ಸಹಿಸಲಸಾಧ್ಯ ನೋವು ಕೊಡುತ್ತಿತ್ತು, ಹೊಟ್ಟೆ, ಗಂಟಲು, ಮೆದುಳಿಗೆ ಕ್ಯಾನ್ಸರ್ ಹರಡಿತ್ತು. ಸಾಮಾನ್ಯವಾಗಿ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಪತ್ತೆಯಾದವರಿಗೆ ದೀರ್ಘಕಾಲ ಬದುಕುಳಿಯುವ ಸಾಧ್ಯತೆಯನ್ನು 70 ಪರ್ಸೆಂಟ್ ನೀಡುತ್ತಾರೆ. ಆದರೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಲ್ಯಾನ್ಸ್ ಬದುಕುವ ಸಾಧ್ಯತೆ ಶೇ.40ಕ್ಕಿಂತಲೂ ಕಡಿಮೆ ಎಂದರು. ಇತ್ತ ಆತನ ಸೈಕ್ಲಿಂಗ್ ಟೀಮ್ ಲ್ಯಾನ್ಸ್್ನನ್ನು ತಂಡದಿಂದ ಹೊರಹಾಕಿತು. ಹಾಗಾಗಿ ಆತ ನಿರುದ್ಯೋಗಿಯಾದ, ಆರೋಗ್ಯ ವಿಮೆಯಿಂದಲೂ ವಂಚಿತನಾದ. ಕೀಮೋಥೆರಪಿಯ ಪರಿಣಾಮವಾಗಿ ತಲೆಯಿಂದ ಕೂದಲೇ ಮಾಯವಾದವು, ಸೈಕಲ್ ಮೇಲೆ ಕೂರಲು ಪೃಷ್ಠದಲ್ಲಿ ಹಿಡಿ ಮಾಂಸವೂ ಇಲ್ಲದಂತಾಯಿತು. ಆಗ ಅವನ ಅಮ್ಮ ಹೇಳಿದ ಮಾತು ಬದುಕಿಗೆ ಹೊಸ ಉತ್ತೇಜನ ನೀಡುತ್ತದೆ. ‘ನೀನು ಯಾವುದಾದರೂ ಗುರಿಯನ್ನು ತಲುಪಬೇಕಾದರೆ ನಿನ್ನ ಹೆಜ್ಜೆಯನ್ನು ನೀನೇ ಇಡಬೇಕು. ನಿನ್ನ ಪರವಾಗಿ ಬೇರೊಬ್ಬರು ಆ ಕೆಲಸ ಮಾಡಲಾಗದು. ಹಾಗೆಯೇ ನಿನ್ನ ದೇಹಕ್ಕಂಟಿರುವ ಕ್ಯಾನ್ಸರ್ ಜಾಡ್ಯದ ವಿರುದ್ಧ ನೀನೇ ಹೋರಾಡಬೇಕು’ ಎಂದು ಅಮ್ಮ ಹೇಳುತ್ತಾಳೆ. ಆ ಘಟನೆಯನ್ನು ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಳ್ಳುತ್ತಾ ಲ್ಯಾನ್ಸ್ ಹೇಳುತ್ತಾನೆ, ‘ಪಿಸುಮಾತಿನ ಉತ್ತೇಜನ ಚಪ್ಪಾಳೆಗಿಂತಲೂ ಗಟ್ಟಿ’. ಅಂದು ಲ್ಯಾನ್ಸ್ ತನ್ನೊಳಗಿನಿಂದಲೇ ಪ್ರೇರಣೆ, ಅತ್ಮಸ್ಥೈರ್ಯ ಪಡೆದುಕೊಳ್ಳಲು ಮುಂದಾಗುತ್ತಾನೆ.
ಆತನೆಂದೂ ದೇವರ ಮೇಲೆ ಭಾರ ಹಾಕಿ ಸುಮ್ಮನಾಗಲಿಲ್ಲ!
ನಾನು ಯಾವುದರಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ನನಗೆ ನಾನೇ ಕೇಳಿಕೊಂಡೆ. ನಾನೆಂದೂ ದೈವದ ಮುಂದೆ ಪ್ರಾರ್ಥಿಸಿದವನಲ್ಲ. ಪ್ರಾರ್ಥನೆಗಿಂತ ಆಶಾವಾದದಲ್ಲಿ ನಂಬಿಕೆ ಇಟ್ಟವ. ನಾನು ಎಳೆಯ ಪ್ರಾಯದವನಾಗಿದ್ದಾಗಲೇ ಈ ಸ್ಥಾಪಿತ ಧರ್ಮ ವ್ಯವಸ್ಥೆಯ ಬಗ್ಗೆ ನನ್ನಲ್ಲಿ ಒಂದು ಬಗೆಯ ಅಪನಂಬಿಕೆ ಬೆಳೆದಿತ್ತು. ಆದರೂ ಎಲ್ಲರ ಅಭ್ಯುದಯವನ್ನು ಬಯಸುವ ಹಾಗೂ ನನ್ನದೇ ಆದ ನಂಬಿಕೆಯನ್ನು ಹೊಂದುವ ಸಾಮರ್ಥ್ಯವನ್ನು ರೂಢಿಸಿಕೊಂಡಿದ್ದೆ. ಅದನ್ನೇ ಸರಳವಾಗಿ ಹೇಳುವುದಾದರೆ ನಾನೊಬ್ಬ ಸಂಪನ್ನ ವ್ಯಕ್ತಿಯಾಗುವ ಹೊಣೆ ನನ್ನಲ್ಲಿತ್ತು. ಅದಕ್ಕೆ ನೇರ, ನಿಷ್ಠ, ಸದಾಚಾರವೇ ಮಾರ್ಗ ಎಂಬುದೂ ಗೊತ್ತಿತ್ತು. ಎಲ್ಲವನ್ನೂ ಮೀರಿದ ಶಕ್ತಿಯೊಂದು ನನ್ನ ಸಾರ್ಥಕತೆಯನ್ನು ಅಳೆಯುವುದಾದರೆ ಅದು ನನ್ನ ನಡೆ-ನುಡಿಯಿಂದಾಗಿಯೇ ಹೊರತು ನನ್ನ ಧರ್ಮಶಾಸ್ತ್ರದ ಪಾಂಡಿತ್ಯ ಅಥವಾ ಧರ್ಮಶ್ರದ್ಧೆಯಿಂದಲ್ಲ ಎನ್ನುವುದೇ ನನ್ನ ಅಚಲ ನಂಬಿಕೆ ಎಂದ ಲ್ಯಾನ್ಸ್ ಕ್ಯಾನ್ಸರ್್ಗೇ ಸವಾಲೆಸೆದ, ಚಿಕಿತ್ಸೆಗೆ ಸ್ಪಂದಿಸಿದ. ಅದು ಸಕಾರಾತ್ಮಕ ಪರಿಣಾಮ ಬೀರಿತು. Hope that is the only antidote to fearಎನ್ನುತ್ತಿದ್ದ ಲ್ಯಾನ್ಸ್್ಗೆ ಭರವಸೆಯೇ ಭಯಕ್ಕೆ ರಾಮಬಾಣವಾಯಿತು. ಹೀಗೆ ಕ್ಯಾನ್ಸರ್್ನಿಂದ ಹೊರಬಂದ ಆತ ‘ಲ್ಯಾನ್ಸ್ ಆರ್ಮ್್ಸ್ಟ್ರಾಂಗ್ ಫೌಂಡೇಷನ್್’ ಹಾಗೂ LIVESTRONG ಸೆಂಟರ್ ಆರಂಭಿಸಿ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಹಾಗೂ ಆರ್ಥಿಕ ಸಹಾಯಕ್ಕೆ ಮುಂದಾದ.
ಅಷ್ಟೇ ಅಲ್ಲ, Giving up was never an option ಎಂದು ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಮಾತ್ರ ಆತ ಹೇಳಲಿಲ್ಲ, ಮತ್ತೆ ಸೈಕಲ್ ಏರಿದ!
ಸೈಕ್ಲಿಂಗ್ ಸ್ಪರ್ಧೆಯಲ್ಲೇ ‘ಟೂರ್ ಡಿ ಫ್ರಾನ್ಸ್್’ ಅತ್ಯಂತ ಜನಪ್ರಿಯ ಹಾಗೂ ಪ್ರತಿಷ್ಠಿತವಾದುದು. ಸುಮಾರು 2,274 ಮೈಲು ದೂರವನ್ನು 23 ದಿನಗಳಲ್ಲಿ ಕ್ರಮಿಸುವಾಗ ಒಬ್ಬ ಕ್ರೀಡಾಳುವಿನ ಶಕ್ತಿ, ಸಾಮರ್ಥ್ಯದ ನಿಜವಾದ ಪರೀಕ್ಷೆ ನಡೆಯುತ್ತದೆ. ಜೀವವನ್ನೇ ಕಿತ್ತುಕೊಳ್ಳಲು ಹೊರಟಿದ್ದ ಕ್ಯಾನ್ಸರ್ ಅನ್ನು ಜಯಿಸಿಬಂದ ನಂತರ 1999ರಿಂದ 2005ರವರೆಗೂ ಇಂಥದ್ದೊಂದು ಅತ್ಯಂತ ಕಠಿಣ ಸ್ಪರ್ಧೆಯನ್ನು ಲ್ಯಾನ್ಸ್ ಆರ್ಮ್್ಸ್ಟ್ರಾಂಗ್ ಸತತವಾಗಿ 7 ಬಾರಿ ಗೆದ್ದ ಎಂದರೆ ಯಾರಿಗಾದರೂ ನಂಬಲು ಸಾಧ್ಯವೆ?! ಆದಕಾರಣಕ್ಕೇ ಆತ ವಿಶೇಷವೆನಿಸುತ್ತಾನೆ, ಆದಕಾರಣಕ್ಕೇ ಯುವರಾಜ್ ಆದಿಯಾಗಿ ಎಲ್ಲರೂ ಪ್ರೇರಣೆಗಾಗಿ ಲ್ಯಾನ್ಸ್್ನತ್ತ ಮುಖ ಮಾಡುತ್ತಾರೆ. ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಅತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು, ಬದುಕುವ ಇಚ್ಛೆಯನ್ನೇ ಕೈಬಿಡಬಾರದು ಎಂಬುದನ್ನು ಬಹಳ ಚೆಂದವಾಗಿ ಲ್ಯಾನ್ಸ್ ವರ್ಣಿಸುತ್ತಾನೆ. ‘ನೋವು ಕ್ಷಣಿಕ. ಅದು ಒಂದು ಕ್ಷಣ, ನಿಮಿಷ, ಗಂಟೆ, ದಿನ ಅಥವಾ ವರ್ಷಗಳ ಕಾಲ ಕಾಡಬಹುದು. ಅಂತಿಮವಾಗಿ ಮಾಯವಾಗುತ್ತದೆ. ಆದರೆ, ನಾವು ಅದಕ್ಕೆ ಶರಣಾದರೆ ಅದು ಕಡೆತನಕ ಕಾಡುತ್ತದೆ. ಅದು ಎಷ್ಟೇ ಸಣ್ಣದಿರಲಿ ಶರಣಾಗತಿ ಶಾಶ್ವತವಾಗಿ ಉಳಿದುಬಿಡುತ್ತದೆ. ಅಂತಹ ನಿರ್ಧಾರ ಕೈಗೊಳ್ಳಬೇಕಾಗಿ ಬಂದಾಗ ಈ ಎರಡರ ನಡುವೆ ಯಾವುದರ ಜತೆ ಜೀವಿಸಲಿ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತೇನೆ’.
ಇವತ್ತು ನಮ್ಮ ನಡುವೆಯೇ ಕ್ಯಾನ್ಸರ್ ಪ್ರಕರಣಗಳು ಸಾಕಷ್ಟು ಕೇಳಿಬರುತ್ತಿವೆ. ಮನೆಯಲ್ಲಿ ಯಾರಿಗಾದರೂ ಕ್ಯಾನ್ಸರ್ ಬಂದಿದೆ ಎಂದಾದರೆ ಸೂತಕ ಛಾಯೆ ಮೂಡಲಾರಂಭಿಸಿದೆ. ಎಷ್ಟು ಖರ್ಚು ಮಾಡಿದರೂ ಉಳಿಯುವುದಿಲ್ಲವಂತೆ, ಹಾಗಿರುವಾಗ ದುಡ್ಡೇಕೆ ವ್ಯಯ ಮಾಡಬೇಕು ಎಂದು ಕೈಚೆಲ್ಲುವವರೂ ಕಾಣಸಿಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುವರಾಜ್ ಸಿಂಗ್ ನೆಪದಲ್ಲಾದರೂ ಲ್ಯಾನ್ಸ್ ಆರ್ಮ್್ಸ್ಟ್ರಾಂಗ್್ನ ಹೋರಾಟವನ್ನು ನೆನಪಿಸಿಕೊಳ್ಳಬೇಕೆನಿಸಿತು.
ಇಷ್ಟಕ್ಕೂ Giving up is not an option!
Pratap sir, very very inspirational. too good article… !!!
ಆತà³à²®à³€à²¯ ಪà³à²°à²¤à²¾à²ªà²¸à²¿à³¦à²¹ ಲà³à²²à³‡à²–ನ ತà³à³¦à²¬ ಚೆನà³à²¨à²¾à²—ಿದೆ ಒದà³à²¤à³à²¤à²¿à²¦à³à²¦à²°à³† ಕಣà³à²£à³à²—ಳà³à²²à³ ತà³à³¦à²¬à²¿à²¬à²°à³à²¤à³à²¤à²¦à³† ಎನಾದರಾಗಲಿ Giving up is not an option
adbhutavaada vyaktitvavannu parichayisiddakke naanu nimage aabhaari..
Shubhavaagali.
Really Superb article Sir
Saavira Saavira novina Hrudayagalige nim e article Badukuva Hosa Chaitanyavanu needuttade….
-Thank you so much Dear Sir.
ಮನ ಮà³à²Ÿà³à²Ÿà³à²µ ಆತà³à²® ಕಥನ…..
boss make an shortcut to recommend your article to other social sites like fb,twitter,
it will be better instead of copy and paste
do not forget
bye
take care
its nice dude :))
Loved it sir 🙂
Hello Sir,
I really don’t know, how i can react for this… !!, thanks for giving such a great article…. and i wish to say ” UV we are also with u… pls come back to us, we need u with lot of hopes, spirit and don’t forget that still, no one can replace YOU”
with best wishes…
lalitha
Wonderful and inspiring article. Keep up the good ork Pratap.
Superb…….
Superb Article sir……. very inspiring and motivational….. Hats off to Lance….. and wish a speedy recovery for Yuvi……..and all other cancer patients……
Inspiring article sir..
Thanks Sir for inspiring article
Inspiring article, liked it a lot!
lovely
inspiration……………inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration………….inspiration…………. i had’t no words……. Ram.
pratap sir,very inspirational,beautiful article.when i read this article,i was lying on bed due to illhealthy.i just grabbed so much confidence from this wonderful article.thank you sir keep writing such articles for us.
Very good article.
Nice…..
Thanks pratap….lance ignited me too
Really Touching….. an inspiration to the downed ones
nc inpirational writing….
Sir… i am wordless to write about this article. and one requestis their.
pls pls translate the book “It’s Not About the Bike;My Journey Back to Life”
to kannada language..
very inspiring……..
must read……