Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆ ಯೇಸುವಿನಂತೆಯೇ ದಯಾಮಯಿ ಈ ಯೇಸುಪುತ್ರಿ!

ಆ ಯೇಸುವಿನಂತೆಯೇ ದಯಾಮಯಿ ಈ ಯೇಸುಪುತ್ರಿ!

ಅವರು ಪರಿಚಯವಾಗಿದ್ದೇ ಒಂದು ರೀತಿಯ ಅಸಹಜ ಸನ್ನಿವೇಶದಲ್ಲಿ!

ಅನ್ಯ ಧರ್ಮಗಳನ್ನು ನುಂಗಿ ತನ್ನ ಹೊಟ್ಟೆ ದಪ್ಪ ಮಾಡಿಕೊಳ್ಳುವ ಮತಗಳನ್ನು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು “Predatory religions’ ಎನ್ನುತ್ತಾರೆ. ಅರಬ್್ನಲ್ಲಿ ಹುಟ್ಟಿ ಜಗದುದ್ದಗಲಕ್ಕೂ ಹರಡಿದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿಗೆ ಈ ಮಾತು ಬಹುವಾಗಿ ಅನ್ವಯವಾಗುತ್ತದೆ. Number gameನಲ್ಲಿ ಈ ಎರಡು ಮತಗಳಿಗೆ ಇರುವಷ್ಟು ನಂಬಿಕೆ ಬಹುಶಃ ಮತ್ತಾವ ಧರ್ಮಗಳಿಗೂ ಇಲ್ಲ. ಬೌದ್ಧ ಧರ್ಮ ಬೆಳೆದಿದ್ದೂ ಅನ್ಯ ನಂಬಿಕೆಗಳನ್ನು ಹೊಡೆದೇ ಎಂಬುದು ನೈಜ ಸಂಗತಿಯಾದರೂ ಅದೆಂದೂ ಬೇಟೆಯಾಡಲಿಲ್ಲ. ಬೌದ್ಧ ಮತ್ತು ಜೈನ ಧರ್ಮಗಳು ಭಾರತದಲ್ಲೇ ಹುಟ್ಟಿದರೂ ಹಿಂದು ಧರ್ಮವನ್ನು ಅಲುಗಿಸಲು ಅವುಗಳಿಂದಾಗಲಿಲ್ಲ. ಬೌದ್ಧ ಮತ ಹೊರದೇಶಗಳಿಗೆ ಹೋಗಿ ಬೇರೂರಿದರೂ ಭಾರತದಲ್ಲಿ ಮಾತ್ರ ಹಿಂದು ಧರ್ಮದ ಒಂದು byproduct ನಂತೆಯೇ ಉಳಿಯಿತು. ಆದರೆ ಆಫ್ರಿಕಾ, ಯುರೋಪ್, ಅಮೆರಿಕ ಖಂಡಗಳನ್ನೆಲ್ಲ ಆಕ್ರಮಿಸಿ ಆಗಮಸಿದ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಯ onslaught ಅನ್ನು ಪ್ರತಿರೋಧಿಸಲು ಹಿಂದು ಧರ್ಮ ಕ್ಕಾಗಲಿಲ್ಲ. ಇಂದಿಗೂ ಹಿಂದು ಸನಾತನ ಧರ್ಮದ ಪಾಲಿಗೆ ಮತಾಂತರ ವೆಂಬುದು ಒಂದು ದೊಡ್ಡ ಅಪಾಯವಾಗಿ, ಪಿಡುಗಾಗಿ ಕಾಡುತ್ತಿದೆ. ಇದೇ ವಿಷಯವಾಗಿ 2004, ಅಕ್ಟೋಬರ್್ನಲ್ಲಿ,”Úಮರೆಯಾಗುತ್ತಿರುವ ಮಾರಮ್ಮ, ಮನೆಮನೆಗಳಲ್ಲಿ ಮೇರಿಯಮ್ಮ’ ಎಂಬ ಲೇಖನ ಬರೆದಿದ್ದೆ. You have tried Maari, Now you try Mary ಅಂದರೆ”Úನಿರ್ಮಾ’ದಲ್ಲಿ ಕೊಳೆ ಹೋಗೋಲ್ಲ,”Úರಿನ್್’ನಲ್ಲಿ ಭಾರೀ ಚೆನ್ನಾಗಿ ಕೊಳೆ ಬಿಡುತ್ತದೆ ಎಂಬಂತೆ ಪಾಪದ ಕೊಳೆ ತೊಳೆದುಕೊಳ್ಳಲು ಹಿಂದು ಮಾರಮ್ಮನ ಬದಲು ನಮ್ಮ ಮೇರಿಯಮ್ಮನನ್ನು ಆರಾಧಿಸಿ ಎಂದು ಮತಾಂತರಕ್ಕೆ ಬರುತ್ತಾರೆ ಎಂದು ಟೀಕಿಸಿದ್ದೆ. ಜತೆಗೆ”Úಬಾಲ ಯೇಸುವನ್ನು ಆರಾಧಿಸಿ, ರೋಗ ಗುಣವಾಗುತ್ತದೆ’ ಎಂದು  ಕರೆಕೊಡುವುದನ್ನು, ಅಂತಹ ಹುಸಿ ಭರವಸೆ ನೀಡಿ ಹಿಂದುಗಳನ್ನು ಸಾಮೂಹಿಕ ಪ್ರಾರ್ಥನೆಗೆ ಕರೆದೊಯ್ಯುವುದನ್ನು ವಿರೋಧಿಸಿ, ಒಂದು ವೇಳೆ ಬಾಲ ಯೇಸುವನ್ನು ಆರಾಧಿಸಿದರೆ ರೋಗ ಗುಣವಾಗುವುದಾದರೆ ಇಷ್ಟೆಲ್ಲ ಮೆಡಿಕಲ್ ಕಾಲೇಜುಗಳನ್ನೇಕೆ ಕಟ್ಟಿ ವೈದ್ಯರನ್ನು ತಯಾರು ಮಾಡಬೇಕು, ಏಕೆ ಅಸ್ಪತ್ರೆ ಕಟ್ಟಬೇಕು, ಯೇಸುವಿನ ಮಂದಿರ ಕಟ್ಟಿದರೆ ಸಾಕಾಗುವುದಿಲ್ಲವೆ? ಎಂದು ವಾದಿಸಿದ್ದೆ.

ಅದಕ್ಕೆ ಪ್ರತಿಯಾಗಿ ಒಂದು”Úಹೇಟ್ ಮೇಯ್ಲ್್’ ಎನ್ನಬಹುದಾದ ಮಿಂಚಂಚೆಯೊಂದು ಬಂದಿತ್ತು!

ನೀನು ನಮ್ಮ ಧರ್ಮವನ್ನು ಅವಹೇಳನ ಮಾಡಿದ್ದೀಯಾ, ನಿಮ್ಮ ಧರ್ಮವೇನು ಸಾಚಾವೇ, ಅದರಲ್ಲಿ ಏನೆಲ್ಲ ಹುಳುಕುಗಳಿವೆ ಎಂದೆಲ್ಲ ಅದರಲ್ಲಿ ಬರೆಯಲಾಗಿತ್ತು. ನಾನೂ ಸುಮ್ಮನಾಗಲಿಲ್ಲ. ಮೇಯ್ಲಿನಲ್ಲೇ ವಾದ-ಪ್ರತಿವಾದ ಆರಂಭವಾಯಿತು. ಆದರೆ ಕೊನೆಗೆ ಗೊತ್ತಾದ ಸಂಗತಿಯೇನೆಂದರೆ ಮೇಯ್ಲ್್ನಲ್ಲಿ ನನ್ನ ಮೇಲೆ ಹರಿಹಾಯುತ್ತಿದ್ದ”Úಜಾಯೆಲ್್’ಗೆ ತನ್ನಮ್ಮನ ಸಹಮತವೇ ಇರಲಿಲ್ಲ.

ಅವಳ ತಾಯಿ ಮತ್ತಾರೂ ಅಲ್ಲ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಅಗಿದ್ದ ಯೇಸುಪುತ್ರಿ!

ಕ್ರೈಸ್ತರಾದರೂ ಅವರು ಮತಾಂತರವನ್ನು ಒಪ್ಪುತ್ತಿರಲಿಲ್ಲ. ಹೀಗೆ ಒಂದು ಅಸಹಜ ಸನ್ನಿವೇಶದಲ್ಲಿ ಪರಿಚಿತರಾದ ಅವರೊಂದಿಗೆ ಸ್ನೇಹವೂ ಬೆಳೆಯಿತು. ಒಂದು ಭಾನುವಾರದಂದು ಅವರ ಮನೆಗೆ ಹೋಗಿದ್ದಾಗ,”Úಅಮ್ಮಾ, ನೀವು ಚರ್ಚ್್ಗೆ ಹೋಗುವುದಿಲ್ಲವೆ?’ ಎಂದು ಕೇಳಿದಾಗ “We don’t worship god, we follow god!’ ಎಂದಿದ್ದರು. ಇದು ಮಾತಿಗೆ ಹೇಳಿದ ಶಬ್ದಾಡಂಬರವಲ್ಲ, ಅವರ ಬದುಕಿನಲ್ಲೂ ಅಪ್ಪಟ ಪ್ರಾಮಾಣಿಕತೆ, ಶುದ್ಧಹಸ್ತತೆಯನ್ನು ಕಾಣಬಹುದು. ಬೆಂಗಳೂರಿನ ಎಂ.ಎಸ್. ಬಿಲ್ಡಿಂಗ್್ನಲ್ಲಿರುವ ಅವರ ಕಚೇರಿಗೆ ಹೋಗಿ ಯೇಸುಪುತ್ರಿಯವರ ಬಗ್ಗೆ ಕೇಳಿ,”Úಅಯ್ಯೋ, ಆ ಯಮ್ಮಾ ತಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ’ ಎಂಬ ಗೊಣಗು ಕೇಳಿಬರುತ್ತದೆ. ಅವರ ಪ್ರಾಮಾಣಿಕತೆಯೇ ಅವರಿಗೆ ಮುಳುವಾಗಿದ್ದುಂಟು. 2008ರಲ್ಲಿ ಯೇಸುಪುತ್ರಿಯವರನ್ನು ಏಕಾಏಕಿ ಕೋಲಾರಕ್ಕೆ ವರ್ಗಾವಣೆ ಮಾಡಲಾಯಿತು. ಅವರಿಗಾಗ ನಿವೃತ್ತಿಗೆ ಕೇವಲ ಒಂದು ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲ ಉಳಿದಿತ್ತು. ಸೇವಾವಧಿಯ ಕೊನೆಯ ಎರಡು ವರ್ಷಗಳಲ್ಲಿ ಇಚ್ಛೆಗೆ ವಿರುದ್ಧವಾಗಿ ವರ್ಗಾವಣೆ ಮಾಡಬಾರದು ಹಾಗೂ ಕೇಳಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಬೇಕು ಎಂಬ ಸರಕಾರಿ ನಿಯಮವೇ ಇದೆ. ಆದರೂ ಕೋಲಾರಕ್ಕೆ ಹಾಕಿದರು. ಅವರಿಗೆ ತೀವ್ರ ಬೆನ್ನುನೋವು ಇತ್ತು, ಜತೆಗೆ ಸಿಂಗಲ್ ಮದರ್. ನಿತ್ಯವೂ ಕೋಲಾರಕ್ಕೆ ಹೋಗಿ-ಬರುವುದು ನರಕ ಯಾತನೆಯಾಯಿತು. ಈ ಮಧ್ಯೆ ಕುಮಾರಸ್ವಾಮಿಯವರ ವಚನಭ್ರಷ್ಟತೆ, ಸರಕಾರ ಪತನ ಕಳೆದು ರಾಷ್ಟ್ರಪತಿ ಆಳ್ವಿಕೆ ಬಂತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಹಾಗೂ ಮೂರ್ನಾಲ್ಕು ಜನ ಪ್ರತಿನಿಧಿಗಳನ್ನಿಟ್ಟುಕೊಂಡು ಕೇಂದ್ರದ ಕಾಂಗ್ರೆಸ್ ಸರಕಾರವೇ ರಾಜ್ಯವನ್ನಾಳತೊಡಗಿತು. ಆ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದ ಕೇರಳದ ತಾರಕನ್ ಕ್ರೈಸ್ತರಾಗಿದ್ದರು. ಹಾಗಾಗಿ ಬಿಶಪ್ ಮೂಲಕ ತಾರಕನ್್ಗೆ ಹೇಳಿಸಿ ವರ್ಗಾವಣೆ ರದ್ದು ಮಾಡಿಸುವ ಪ್ರಯತ್ನವೂ ಕೈಗೂಡಲಿಲ್ಲ. ಆಗ ಆಶಾಕಿರಣವಾಗಿ ಕಂಡವರು ನಮ್ಮ ಸಂಪಾದಕರಾದ ವಿಶ್ವೇಶ್ವರ ಭಟ್. ಅವರ ಪ್ರಯತ್ನದಿಂದಾಗಿ ಯೇಸುಪುತ್ರಿಯವರು ಮತ್ತೆ ವರ್ಗಾವಣೆಗೊಂಡು ಬೆಂಗಳೂರಿನ ಎಂದಿನ ಸ್ಥಳಕ್ಕೆ ಬಂದರು.

ಬಹುಶಃ ಅವರು ಯಾರಿಂದಾದರೂ, ಯಾವುದಾದರೂ ಸಹಾಯ ಪಡೆದಿದ್ದರೆ ಅದು ವಿಶ್ವೇಶ್ವರ ಭಟ್ಟರ ಪ್ರಯತ್ನವನ್ನಷ್ಟೇ!

ಪೋಲೀಸ್ ಇಲಾಖೆಯಲ್ಲಿ ಆರ್.ಕೆ. ದತ್ತ, ಮಧುಕರ್ ಶೆಟ್ಟಿ, ನಾಗರೀಕ ಸೇವೆಯಲ್ಲಿ ಹರೀಶ್ ಗೌಡ ಅವರಿರುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಅತ್ಯಂತ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು ಈ ಯೇಸುಪುತ್ರಿ. ಅಪ್ತರ ವಿಷಯದಲ್ಲೂ ಕಾನೂನನ್ನು ಬೆಂಡ್ ಮಾಡಿದವರಲ್ಲ, ಅಷ್ಟೇಕೆ ತಮ್ಮ ಇಲಾಖೆಯ ಸಚಿವರಿಗೂ ಕಾನೂನಿನ ಬಿಗಿ ಸಡಿಲಿಸಿದವರಲ್ಲ. ಕಾಂಗ್ರೆಸ್್ನ ಮೋಟಮ್ಮನವರು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆಯಾಗಿದ್ದಾಗ ಇಂಥದ್ದೇ ಘಟನೆಯೊಂದು ನಡೆದಿತ್ತು. ಆಗ ಯೇಸುಪುತ್ರಿ ಹಾಸನದಲ್ಲಿದ್ದರು. ಸಚಿವರು ಆಗಮಿಸುತ್ತಿದ್ದಾರೆಂದರೆ ಅವರಿಗೆ ಐಬಿ ಬುಕ್ ಮಾಡುವುದು, ಖುದ್ದಾಗಿ ಬರಮಾಡಿಕೊಳ್ಳುವುದು, ತಿಂಡಿ-ತೀರ್ಥ, ಬಗೆ ಬಗೆಯ ಮಾಂಸಾಹಾರವನ್ನು ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡುವುದೂ ಒಂದು ಸಾಮಾನ್ಯ ಸರ್ಕಾರಿ”Úಶಿಷ್ಟಾಚಾರ’! ಮೋಟಮ್ಮನವರು ಆಗಮಿಸುತ್ತಿದ್ದಾರೆ,”Úಎಲ್ಲಾ’ ವ್ಯವಸ್ಥೆ ಮಾಡಿ ಎಂದು ಸೂಚಿಸಿದಾಗ,”Úಸಚಿವೆ, ಆಕೆಯ ಗನ್ ಮ್ಯಾನ್್ಗಳು ಹಾಗೂ ವೈಯಕ್ತಿಕ ಕಾರ್ಯದರ್ಶಿಗೆ ಸರಳ ಸಸ್ಯಾಹಾರವನ್ನು ಬೇಕಾದರೆ ವ್ಯವಸ್ಥೆ ಮಾಡುತ್ತೇನೆ. ಆದರೆ ಮಾಂಸಾಹಾರವನ್ನು ನನ್ನ ಖರ್ಚಿನಲ್ಲಿ ಅರೇಂಜ್ ಮಾಡಲು ಸಾಧ್ಯವಿಲ್ಲ’ ಎಂದು ಸಾರಾಸಗಟಾಗಿ ನಿರಾಕರಿಸಿದ್ದರು. ಯಾರ ಮರ್ಜಿಗೂ ಬೀಳದ, ಯಾರಿಂದಲೂ ಲಂಚ ಪಡೆಯದ ಅವರ ವ್ಯಕ್ತಿತ್ವ ಸಚಿವೆಗೇ ಸೆಡ್ಡು ಹೊಡೆಯುವಂಥ ಅತ್ಮಸ್ಥೈರ್ಯವನ್ನು ತಂದುಕೊಟ್ಟಿತ್ತು. ಕೊನೆಕೊನೆಗಂತೂ,”Úಅಯ್ಯೋ ಈ ಯೇಸುಪುತ್ರಿ ಒಂದು ಲೋಟ ನೀರನ್ನೂ ಕೊಡುವುದಿಲ್ಲ’ ಎನ್ನುತ್ತಾ ಆಗಿನ ಕಂದಾಯ ಸಚಿವ ಹಾಗೂ ಹಾಸನದ ಉಸ್ತುವಾರಿ ಸಚಿವರಾಗಿದ್ದ ಎಚ್.ಸಿ.ಶ್ರೀಕಂಠಯ್ಯನವರು, ಜಿಲ್ಲಾ ಕಂದಾಯ ಇಲಾಖೆಗೆ ಹೇಳಿ ಮೋಟಮ್ಮನವರಿಗೆ ವ್ಯವಸ್ಥೆ ಮಾಡಿಸುತ್ತಿದ್ದರು! ಈ ಯೇಸುಪುತ್ರಿ ಎಂತಹ ಖಡಕ್ ಅಧಿಕಾರಿಯೆಂದರೆ ಪೂರ್ವ ಸೂಚನೆ ಕೊಡದೆ ಬಂದರೆ ಸಚಿವರನ್ನು ಭೇಟಿಯಾಗುವುದಕ್ಕೂ ಹೋಗುತ್ತಿರಲಿಲ್ಲ. ಸಚಿವರ ಪಿಎಗಳು ಕಾರಿಗೆ ಪೆಟ್ರೋಲ್ ಹಾಕಿಸಿ ಎಂದರೆ ದಬಾಯಿಸಿ ಕಳುಹಿಸುತ್ತಿದ್ದರು. ಕೊನೆಗೆ ಇವರ ಕಾರ್ಯವೈಖರಿಯನ್ನು ಮೆಚ್ಚಿ ಮೋಟಮ್ಮನವರು ತಮ್ಮ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾಯಿಸಿಬಿಟ್ಟಿದ್ದರು.

ಹಾಗಂತ ಇಲಾಖೆ ಹಾಗೂ ಸಾಮಾನ್ಯ ಜನರ ವಿಷಯಕ್ಕೆ ಬಂದರೆ ಕಟು ಮನಸ್ಸು ಅವರದ್ದಲ್ಲ. ಯಾರಿಗಾದರೂ, ಯಾವ ಸಂಸ್ಥೆಗಳಿಗಾದರೂ ಸಹಾಯದ ಅಗತ್ಯವಿದೆ ಎಂದಾದರೆ ಎಲ್ಲ ಮಾರ್ಗಗಳನ್ನೂ ಕಂಡು ಹುಡುಕಿ ಕಷ್ಟಪರಿಹರಿಸುತ್ತಿದ್ದರು. ಅಂಗನವಾಡಿ, ಮಕ್ಕಳ ಬೌದ್ಧಿಕ, ಮಾನಸಿಕ, ಭಾವನಾತ್ಮಕ ಹೀಗೆ ಮಗುವಿನ ಒಟ್ಟಾರೆ ಬೆಳವಣಿಗೆ, ಸಾರ್ವಜನಿಕ ಜಾಗೃತಿ, ಸ್ವಯಂಸೇವಾ ಸಂಸ್ಥೆಗಳು, ಮಹಿಳಾ ಜಾಗೃತಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಕೌಟುಂಬಿಕ ಕಿರುಕುಳ ತಡೆ, ವರದಕ್ಷಿಣೆ ಕಿರುಕುಳ, ಸಾಂತ್ವನ ಕೇಂದ್ರ ಇವರಡಿ ಬರುತ್ತವೆ. ಮಹಿಳೆ, ಮಕ್ಕಳು ಹಾಗೂ ಸಾಮಾನ್ಯರ ಅಳಲಿನ, ಬವಣೆಯ ವಿಚಾರ ಬಂದರೆ ಈ ಯೇಸುಪುತ್ರಿ ಆ ಯೇಸುವಿನಂತೆಯೇ ದಯಾಮಯಿ. ಬೀದರ್, ಗುಲ್ಬರ್ಗ, ರಾಯಚೂರುಗಳಿಂದ ಬಂದಿರುತ್ತಾರೆ, ಅವರನ್ನು ಕಾಯಿಸದೇ ಯೋಜನೆಯನ್ನು ವಿವರಿಸಿ, ಕೂಡಲೇ ನಿಧಿ ಬಿಡುಗಡೆ ಮಾಡುವಂತೆ ತಮ್ಮ ಸಿಬ್ಬಂದಿ ವರ್ಗಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದ್ದರು.

ಅವರ ಪ್ರಾಮಾಣಿಕತೆಯಿಂದ ಜನಸಾಮಾನ್ಯರಿಗೆ ಅನುಕೂಲವಾದರೆ,”Úನಾವೇನು ಇವರಪ್ಪನದು ತಿನ್ತೇವೋ, ಸರಕಾರದ ದುಡ್ಡು ತಿಂದರೆ ಯಾಕಿಂಗಾಡುತ್ತೆ…’ ಎಂದು ಇಲಾಖೆಯೊಳಗೇ ಶಾಪ ಹಾಕುತ್ತಿದ್ದರು. ಹೌದು, ಸ್ವಯಂ ಸೇವಾ ಸಂಸ್ಥೆಗಳು ಯೋಜನೆಗಳನ್ನು ಹಿಡಿದುಕೊಂಡು ಬಂದರೆ ಅವುಗಳ ಪರಿಶೀಲನೆಗೆ ಇಷ್ಟು, ನಿಧಿ ಮಂಜೂರಿಗೆ ಇಷ್ಟು, ನಿಧಿ ಬಿಡುಗಡೆ ಮಾಡುವ ಮುನ್ನ ವರ್ಷ ವರ್ಷವೂ ಮಾಮೂಲಿ ಇಂತಿಷ್ಟು, ಅಂಗನವಾಡಿ ಕಾರ್ಯಕರ್ತೆಯರ ನೇಮಕದಲ್ಲಿ ಒಂದಿಷ್ಟು ಗಳಿಸುವುದು ಅವರ ಇಲಾಖೆಯಲ್ಲಿ ಸರ್ವೇಸಾಮಾನ್ಯ. 2000ದಿಂದ ಆರಂಭವಾದ ಹಾಗೂ ತಮಿಳುನಾಡಿನಿಂದ ಪೂರೈಕೆಯಾಗುವ”Úಕ್ರಿಸ್ಟೀ ಫುಡ್್’ ಖರೀದಿಯಲ್ಲಿ ಬರುವ ಮಾಮೂಲಿ ಕಚೇರಿ ಮಟ್ಟ, ತಾಲೂಕು ಮಟ್ಟದಿಂದ ಮಂತ್ರಿವರೆಗೂ ಸಲ್ಲುತ್ತದೆ. ಇವೆಲ್ಲದಕ್ಕೂ ಅಪವಾದದಂತೆ, ಕೈಲಾದಷ್ಟು ತಡೆಯಾಗಿ ನಿಂತಿದ್ದ ಯೇಸುಪುತ್ರಿ ಮೊನ್ನೆ ಜೂನ್ 30ರಂದು ನಿವೃತ್ತರಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಹುದ್ದೆಗೇರಿದರೂ ಅವರ ಬಳಿ ಇರುವುದಕ್ಕೆ ಒಂದು ಸ್ವಂತ ಸೂರಿಲ್ಲ, ಕಡೇ ಪಕ್ಷ ಒಂದು ನಿವೇಶನವಾದರೂ ಇದೆಯಾ, ಅದೂ ಇಲ್ಲ. ಐದು ವರ್ಷ ಕೇಂದ್ರ ಸರಕಾರದ ಸೇವೆಯಲ್ಲಿದ್ದು ರಾಜ್ಯಕ್ಕೆ ಆಗಮಿಸಿದ ಕಾರಣ ಕೇಂದ್ರದ ಸೇವಾವಧಿ ಪರಿಗಣನೆಯಾಗದೆ ನಿವೃತ್ತಿ ವೇತನದಲ್ಲೂ ಖೋತಾ ಆಗಿದೆ. ಇದ್ಯಾವುದರ ಬಗ್ಗೆ ಕಿಂಚಿತ್ತು ಕೊರಗೂ ಅವರಲ್ಲಿಲ್ಲ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹೆಮ್ಮೆಯಷ್ಟೇ ಇದೆ.

ನಮ್ಮ ಸರಕಾರಿ ಉದ್ಯೋಗಿಗಳಿಗೆ, ರಾಜಕಾರಣಿಗಳಿಗೆ ಯೇಸುಪುತ್ರಿಯವರು ಮಾದರಿಯಾಗಿದ್ದರೆ ಈ ರಾಜ್ಯ ಎಂದೋ ಸುಭಿಕ್ಷವಾಗಿರುತ್ತಿತ್ತು, ಅಲ್ಲವೆ?!

18 Responses to “ಆ ಯೇಸುವಿನಂತೆಯೇ ದಯಾಮಯಿ ಈ ಯೇಸುಪುತ್ರಿ!”

 1. H.R.SHREEPADARAO says:

  Idakke helodu satyavantarigidu kalavalla.adre nanna abhiprayavu ide agide ella matadallu olleyavaru iruttare, adre avru virodhisuva shakti hondiruvudilla. namma dharma dallu,bahala huluku ive, adanna saripadisalu nannanta obninda sadyavagolla. haganta sanatana dharma sarasagatagi tiraskarisuva darmavantu khandita alla.idara vaijnanika talahadi samshodhane agbeku ex; uttara dikkige tale haki malagabaradu, andre uttara dikkige kayam agi talr haki malagidare, uttara dhruvada magnetic power jasti irodrinda medulina mele parinama jasti anta.

 2. S.S.Bharath says:

  really hatsof to that lady officer and please convey my regards and honour from my side and if possible please send her contact to my mail id because i love this kind of people and since am an advocate i should meet her face to face please dont disappointment me sir

 3. vishwas km says:

  good article

 4. Sharath says:

  Hi Prathap …a journo meets up wid diff ppl..some of them turn out to inspire us…religion does nt matter …a sacred gud heart is enuf to serve ppl..pramana madtivi anta helta idralla avrige ivra hatra spl classes kodsi …How to serve ppl anta..gud article

 5. Ashoka says:

  Really great mother …….Mathantharavannu ondu business agi madiruva vanchaka varga cristian rige nanna dikkara …

 6. ananth says:

  1 article about Dog Vijay(Digvijay) please Sir………

 7. mahesh yadawad bijapur says:

  very nice article sir.

 8. ಹೊಸ ಗಾಳಿ…..

  ಗಜೇಂದ್ರ

 9. Mugali says:

  Dear sir good evening.
  “We dont worship God We just follow god” It tells lot about Dharma. Human mind is just like black dog n his character never been changed wherever he is jumped.Japan rejected to do suply urenium to the India because it wanted to be first in the world but now evry one knows what happened to the Japan country.Nature is the real Dharma n it governs all dharmas here.No one is controlled by his own energy but each tiny energy is controlled by this universal energy so whoever, however n anywhere n let them try to finish our great Hindu dharma but it is highly impossible because Hindu Dharma is alws loving all ie its speciality n no one can vanish on this earth.Tirupati surroundings many activities done in the tenure of Mr.Rajshekar reddy n what happened there? Whole India has been being governed by Italian Mom but any thing is affected in our nation, nothing, may be little scraches which can be cured very well . what do u say sir?

 10. chidanand says:

  she is model to other.

 11. ABHYUDAYA says:

  GOOD ARTICLE… HATS UP TO HER…

 12. Sangamesh s karadi says:

  Hi sir you make another article she is model to us

 13. sathi says:

  I PROUD OF HER PERSONALITY…….SHE IE REAL MOTHER OF KARNATAKA

 14. santosh says:

  Very good article very rare to see people like her …………hats up to her

 15. ವಾಸುದೇವ says:

  ಫ್ರಾಮಾಣಿಕತೆಗೆ ಜಾತಿ ಧರ್ಮ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಏಸುಪುತ್ರಿ ಸಾಕ್ಶಿ. ಧರ್ಮಗಳ ನಡುವಿನ ಕಂದಕ ನಿರ್ಮೂಲನೆಯತ್ತ ಒಂದು ಪುಟ್ಟ ಪ್ರಯತ್ನ.ಇಂಠ ಲೇಖ್ಹನಗಳು ಇನ್ನೂ ಬರಲಿ

 16. kumar says:

  Good article… our politician should learn from her….

 17. Gururaj says:

  I didnt like the article.. it seemed as if you wrote something just for the sake of it.

 18. nishagopinath says:

  nijavagalu mechuvanthadhu nanu saha hesu bhakthale nangu anubhava agidhe jannakagi deshakagi preethiyobaru hordidare nama desha gandhi jji kannada kanasu nijavaguthe

  really good article i love that…..