Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನೂರಾ ಇಪ್ಪತ್ತೆ ೈದಾದರೂ ಮುಪ್ಪಡರದ ಮುತ್ತೆ ೈದೆಯದು!

ನೂರಾ ಇಪ್ಪತ್ತೆ ೈದಾದರೂ ಮುಪ್ಪಡರದ ಮುತ್ತೆ ೈದೆಯದು!

Grass is for the cows! ಟೆನಿಸ್ ದಂತಕಥೆ ರಾಡ್ ಲೆವರ್್ರಿಂದ ‘He is a magician on clay’ಎಂದು ಹೊಗಳಿಸಿಕೊಂಡಿದ್ದ ಸ್ಪೇನ್್ನ ಖ್ಯಾತ ಆಟಗಾರ ಮ್ಯಾನ್ಯುಯೆಲ್ ಸಂಟಾನಾಗೆ ಗ್ರಾಸ್ ಕೋರ್ಟ್ (ಹುಲ್ಲುಹಾಸು) ಬಹಳ ಕಸಿವಿಸಿಯನ್ನುಂಟುಮಾಡುತ್ತಿತ್ತು. ಹಾಗಾಗಿ ಮೊದಲ ಸಲ ವಿಂಬಲ್ಡನ್ ಆಡಲು ಬಂದಾಗ ಈ ಮೇಲಿನ ಹೇಳಿಕೆ ನೀಡಿದ್ದರು ಸಂಟಾನಾ. ನಾಲ್ಕು ಗ್ರಾನ್್ಸ್ಲಾಮ್್ಗಳಲ್ಲಿ ವಿಂಬಲ್ಡನ್ ಮಾತ್ರ ಇಂಥದ್ದೇ ನಿಗದಿತ ತಾರೀಖಿನಂದು ಆರಂಭವಾಗುವುದಿಲ್ಲ. ಅಗಸ್ಟ್ ತಿಂಗಳ ಮೊದಲ ಸೋಮವಾರಕ್ಕೆ ಸರಿಯಾಗಿ 6 ವಾರಗಳ ಮೊದಲು ವಿಂಬಲ್ಡನ್ ಟೂರ್ನಿ ಆರಂಭವಾಗುತ್ತದೆ. ವಿಂಬಲ್ಡನ್ ಆರಂಭಕ್ಕೆ ಕನಿಷ್ಠ 2 ವಾರ ಮೊದಲು ಪೂರ್ಣಗೊಳ್ಳುವಂತೆ ಫ್ರೆಂಚ್ ಓಪನ್ ಅನ್ನು ಆಯೋಜಿಸಿರುತ್ತಾರೆ. ಬಹಳ ನಿಧಾನಗತಿಯಲ್ಲಿ ಬಾಲ್ ಆಗಮಿಸುವ ಫ್ರೆಂಚ್ ಓಪನ್್ನ ಮಣ್ಣಿನಲ್ಲಿ ಮಿಂದೆದ್ದು ಬಂದು ಕ್ಷಿಪಣಿಯಂತೆ ಬರುವ ವಿಂಬಲ್ಡನ್್ನ ಸರ್ವ್್ಗಳನ್ನು ಎದುರಿಸಲು ಬಹಳಷ್ಟು ಆಟಗಾರರು ತಡವರಿಸುತ್ತಾರೆ. ಇನ್ನು ಕೆಲವರಂತೂ ಎಷ್ಟು ಕುಪಿತಗೊಳ್ಳುತ್ತಾರೆಂದರೆ ಮ್ಯಾನ್ಯುಯೆಲ್ ಸಂಟಾನಾನ ಹೇಳಿಕೆಯನ್ನು ಪುನರಾವರ್ತನೆ ಮಾಡಿ ವಿಂಬಲ್ಡನ್್ಗೇ ಚಕ್ಕರ್ ಹೊಡೆದು ಬಿಡುತ್ತಾರೆ. 1982ರಲ್ಲಿ ವಿಂಬಲ್ಡನ್್ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸುವಾಗ ಖ್ಯಾತ ಟೆನಿಸ್ ತಾರೆ ಇವಾನ್ ಲೆಂಡ್ಲ್ ಕೊಟ್ಟ ಸಬೂಬು ಕೂಡ-Grass is for the cows! ಅಂದಿನಿಂದ ಈ ಮಾತಿಗೆ ಅನಂತತೆ ಬಂದು ಬಿಟ್ಟಿದೆ. ವಿಂಬಲ್ಡನ್್ಗೆ ಬೈ ಬೈ ಹೇಳುವಾಗ ಗುಸ್ತಾವೋ ಕುರ್ಟನ್ ಇದೇ ಮಾತನ್ನು ಹೇಳಿದ್ದರು. ಯಾವೊಂದೂ ಗ್ರಾನ್್ಸ್ಲಾಮ್ ಗೆಲ್ಲದಿದ್ದರೂ 1998ರಲ್ಲಿ ಎಟಿಪಿ ರ್ಯಾಂಕಿಂಗ್್ನಲ್ಲಿ ನಂ.1 ಸ್ಥಾನಕ್ಕೇರಿದ್ದ ಹಾಗೂ ಕ್ಲೇ ಕೋರ್ಟ್್ಗಳಲ್ಲಷ್ಟೇ ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದ ಚಿಲಿಯ ಮಾರ್ಸಿಲೋ ರಿಯೋಸ್ ಕೂಡ, Grass is for cows and soccer!ಎಂದಿದ್ದರು. ಮೊದಲ ಹಾಗೂ ಎರಡನೇ ಸುತ್ತಿನಿಂದಲೇ ಹೊರಬೀಳುತ್ತಿದ್ದ ರಷ್ಯಾದ ಮರಾಟ್ ಸಾಫಿನ್ ಗ್ರಾಸ್ ಬಗ್ಗೆ ಎಷ್ಟು ಕೋಪಿಸಿಕೊಂಡಿದ್ದರೆಂದರೆ ‘Grass is best left for the cows!’  ಎನ್ನುವ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದ್ದರು.

ಆದರೇನಂತೆ, ವಿಂಬಲ್ಡನ್ ಗೆಲ್ಲುವುದು ಪ್ರತಿಯೊಬ್ಬ ಟೆನಿಸ್ ಆಟಗಾರನ ದೊಡ್ಡ ಕನಸು!

ಸ್ಯಾಂಪ್ರಾಸ್ ತನ್ನ ಕ್ರೀಡಾ ಜೀವನದಲ್ಲಿ ಎಂದೂ ಫ್ರೆಂಚ್ ಓಪನ್ ಗೆಲ್ಲಲಿಲ್ಲ. ಆದರೂ ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬನೆಂಬ ಹೆಗ್ಗಳಿಕೆ ಗಳಿಸುವುದಕ್ಕೆ ಅದೆಂದೂ ಅಡ್ಡವಾಗಲಿಲ್ಲ. ಆದರೆ… ಒಬ್ಬ ಫ್ರೆಂಚ್, ಆಸ್ಟ್ರೇಲಿಯನ್ ಹಾಗೂ ಯುಎಸ್ ಓಪನ್್ಗಳನ್ನು ಎಷ್ಟು ಸಲ ಗೆದ್ದರೂ ವಿಂಬಲ್ಡನ್ ಗೆಲ್ಲದೇ ಹೋದರೆ ಅದು ಅವನನ್ನು ಜೀವನವಿಡೀ ದೊಡ್ಡ ಕೊರಗಾಗಿ ಕಾಡುತ್ತದೆ. ವಿಶ್ವವಿಖ್ಯಾತ ಜೋರ್ನ್ ಬೋರ್ಗ್ 6 ಬಾರಿ ಫ್ರೆಂಚ್ ಓಪನ್ ಗೆದ್ದರೂ ಆತನ ಗ್ರೇಟ್ನೆಸ್ ಅನ್ನು ಅಳೆದಿದ್ದು, ಗ್ರೇಟ್ ಆಟಗಾರ ಅಂತ ಕರೆಸಿಕೊಂಡಿದ್ದು 1976ರಿಂದ 1980ರವರೆಗೂ ಸತತ 5 ಬಾರಿಗೆ ವಿಂಬಲ್ಡನ್ ಗೆದ್ದಾಗಲೇ. ಫ್ರೆಂಚ್ ಓಪನ್್ನಲ್ಲಿ ಆತನಿಗೆ ಸಾಟಿಯೇ ಇರಲಿಲ್ಲ. ಆದರೆ ವಿಂಬಲ್ಡನ್್ನಲ್ಲಿ ಅತ್ಯಂತ ಕಠಿಣ ಸ್ಪರ್ಧೆ, ಪ್ರತಿರೋಧ ಎದುರಾಗುತ್ತಿತ್ತು. ಹಾಲಿ ಪರಿಸ್ಥಿತಿಯನ್ನೇ ನೋಡಿ, 6 ಸಲ ಫ್ರೆಂಚ್ ಓಪನ್ ಗೆದ್ದಿದ್ದರೂ ರಾಫೆಲ್ ನಡಾಲ್್ನನ್ನು ಟೆನಿಸ್ ಪ್ರೇಮಿಗಳು ಗೌರವಿಸಲಾರಂಭಿಸಿದ್ದು ಆತ ವಿಂಬಲ್ಡನ್ ಗೆದ್ದ ಮೇಲೆಯೇ. ಮಣ್ಣಿನ ಅಂಕಣದ ಮೇಲೆ ಸಾಮಾನ್ಯರಲ್ಲಿ ಸಾಮಾನ್ಯರೆಂಬಂತೆ ಕಾಣುವ ರೋಜರ್ ಫೆಡರರ್, ಜೋಕೋವಿಚ್, ಆ್ಯಂಡಿ ಮರ್ರೆ ಹುಲ್ಲು ಹಾಸಿನ ಮೇಲೆ ಅತ್ಯಂತ ಕಠಿಣ ಎದುರಾಳಿಗಳಾಗಿ ಬಿಡುತ್ತಾರೆ.

ವಿಂಬಲ್ಡನ್್ನ ವೈಶಿಷ್ಟ್ಯವೇ ಅದು.

200, 210, ಕೆಲವೊಮ್ಮೆ 220 ಕಿ.ಮೀ. ವೇಗದಲ್ಲಿ ಬರುವ ಮೊದಲ ಸರ್ವ್್ಗಳನ್ನು ನೋಡುವುದೇ ಒಂದು ಅದ್ಭುತ ಸುಖ. ಸರ್ವ್ ಹಾಕಿ ನೆಟ್ ಬಳಿಗೆ ಧಾವಿಸಿ ವಾಲಿ ಮಾಡುವುದಂತೂ ಬಣ್ಣಿಸಲಸದಳ. ಜಾನ್ ಮೆಕೆನ್ರೊ ಅದರಲ್ಲಿ ಮಾಸ್ಟರ್. ಇಂತಹ ಮೆಕೆನ್ರೊ ಹಾಗೂ ಬೋರ್ಗ್ ನಡುವೆ 1980ರಲ್ಲಿ ನಡೆದ ವಿಂಬಲ್ಡನ್ ಫೈನಲ್ ಪಂದ್ಯವನ್ನು ಯಾವ ಟೆನಿಸ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಪ್ರತಿ ವರ್ಷ ವಿಂಬಲ್ಡನ್ ಟೂರ್ನಿ ಆರಂಭವಾಗುವ ಪೂರ್ವಭಾವಿ Build up ಸಮಯದಲ್ಲಿ ಇಎಸ್ಪಿಎನ್-ಸ್ಟಾರ್್ಸ್ಪೋರ್ಟ್ಸ್ ಚಾನೆಲ್್ನಲ್ಲಿ ಕಡ್ಡಾಯವಾಗಿ ಈ ಪಂದ್ಯವನ್ನು ಮರುಪ್ರಸಾರ ಮಾಡಿಯೇ ಮಾಡುತ್ತಾರೆ. ಇಲ್ಲವಾದರೆ ಯು ಟೂಬ್್ನಲ್ಲೂ ವೀಕ್ಷಿಸಬಹುದು. ಅದನ್ನು ವಿಂಬಲ್ಡನ್ ಇತಿಹಾಸದಲ್ಲೇ ಅತ್ಯುತ್ತಮ ಫೈನಲ್ ಎಂದು ಪರಿಗಣಿಸಲಾಗಿದೆ. 1980ರ ವೇಳೆಗಾಗಲೇ ಬೋರ್ಗ್ ಟೆನಿಸ್್ನ ಜೀವಂತ ದಂತಕಥೆಯಾಗಿದ್ದ. ಸತತ 4 ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಆತ, ಐದನೆಯದಕ್ಕಾಗಿ ಕಾಯುತ್ತಿದ್ದ. ಇತ್ತ ಯುವಕ ಜಾನ್ ಮೆಕೆನ್ರೊ ಆಗಿನ್ನೂ ಟೆನಿಸ್ ಅಂಗಳದಲ್ಲಿ ಕಣ್ಣುಬಿಡುತ್ತಿದ್ದ. ಇವರಿಬ್ಬರೂ ಫೈನಲ್್ನಲ್ಲಿ ಮುಖಾಮುಖಿಯಾಗಿದ್ದರು. ಬೋರ್ಗ್ ಪ್ರತಿಭೆಯ ಜತೆ ಉತ್ತಮ ನಡತೆಯಿಂದಲೂ ಹೆಸರಾಗಿದ್ದರೆ, ಮೆಕೆನ್ರೊನ ಕ್ಯಾತೆಗಳು ಅದಾಗಲೇ ಆರಂಭವಾಗಿದ್ದವು. ಜಿಮ್ಮಿ ಕಾನರ್ಸ್ ಜತೆಗಿನ ಸೆಮಿಫೈನಲ್ ಹಣಾಹಣಿ ವೇಳೆ ಅಂಪೈರ್ ಹಾಗೂ ಇತರ ಅಧಿಕಾರಿಗಳ ಜತೆ ಕಿತ್ತಾಡಿಕೊಂಡಿದ್ದ ಮೆಕೆನ್ರೊ, ಫೈನಲ್ ಆಡಲು  ‘ಸೆಂಟರ್ ಕೋರ್ಟ್್’ಗೆ ಕಾಲಿಡುತ್ತಿದ್ದಂತೆಯೇ ಪ್ರೇಕ್ಷಕರು ಅಣಕಿಸಿ ಸ್ವಾಗತ ನೀಡಿದರು. ಆದರೆ ಪಂದ್ಯ ಆರಂಭವಾದ ನಂತರ ಪರಿಸ್ಥಿತಿಯೇ ಬದಲಾಗತೊಡಗಿತು. ಇಪ್ಪತ್ನಾಲ್ಕು ವರ್ಷದ ಬೋರ್ಗ್ ಒಬ್ಬ ಮಾಸ್ಟರ್ ಆದರೆ, 21 ವರ್ಷದ ಮೆಕೆನ್ರೊ ಪ್ರಳಯಾಂತಕ. ಒಬ್ಬ ಸೌಮ್ಯವಾದಿಯಾದರೆ, ಮತ್ತೊಬ್ಬ ಗಲಾಟೆ ಸ್ವಭಾವದವ. ಇವರಿಬ್ಬರ ಸೆಣಸಾಟ ಆಟವನ್ನೇ ರಂಗೇರಿಸಿತು. ಎಲ್ಲರನ್ನೂ ನೇರ ಸೆಟ್್ಗಳಲ್ಲಿ ಸೋಲಿಸುತ್ತಿದ್ದ ಬೋರ್ಗ್ ಮೊದಲನೇ ಸೆಟ್ಟನ್ನು 1-6ರಿಂದ ಸೋತು ಬಿಟ್ಟ! ಎರಡನೇ ಸೆಟ್ ಟೈ ಬ್ರೇಕರ್್ಗೆ ಹೋಯಿತು. ಆತನ ನಾಗಾಲೋಟಕ್ಕೆ ಕಡಿವಾಣ ಬಿತ್ತು ಎಂದು ಎಲ್ಲರೂ ಅಂದುಕೊಳ್ಳಲಾರಂಭಿಸಿದರು. ಅಷ್ಟರಲ್ಲಿ ಹೇಗೋ ಪರದಾಡಿ ಎರಡನೆ ಸೆಟ್ ಗೆದ್ದುಕೊಂಡ ಬೋರ್ಗ್, ಮೂರನೇ ಸೆಟ್ಟನ್ನು 6-3ರಿಂದ ತನ್ನದಾಗಿಸಿಕೊಂಡ. ಮತ್ತೆ ನಿರೀಕ್ಷೆಗಳು ಬೋರ್ಗ್ ಪರ ವಾಲತೊಡಗಿದವು. ಆದರೆ ನಾಲ್ಕನೇ ಸೆಟ್ ವಿಂಬಲ್ಡನ್ ಟೆನಿಸ್ ಇತಿಹಾಸಕ್ಕೆ ಒಂದು ಅದ್ಭುತ ಅಧ್ಯಾಯವನ್ನು ಸೇರ್ಪಡೆ ಮಾಡಲಿದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಮಾಮೂಲಿನಂತೆ ಬೇಸ್್ಲೈನ್್ನಲ್ಲಿ ನಿಂತು ಆಡತೊಡಗಿದ ಬೋರ್ಗ್್ನ ಪ್ರತಿ ಹೊಡೆತಕ್ಕೂ ಮೆಕೆನ್ರೊ ತಕ್ಕ ಪ್ರತ್ಯುತ್ತರ ನೀಡಲಾರಂಭಿದ. ಆ ಸೆಟ್್ನಲ್ಲಿ ಒಟ್ಟು 34 ಪಾಯಿಂಟ್್ಗಳು ಜಿದ್ದಾಜಿದ್ದಿಯಿಂದ ಕೂಡಿದ್ದವು. ಒಂದೊಂದು ಪಾಯಿಂಟ್್ಗೂ ದೊಡ್ಡ ಹೋರಾಟವನ್ನೇ ಮಾಡಿದರು. ಹಾಗಾಗಿ ನಾಲ್ಕನೆ ಸೆಟ್ ಕೂಡ ಟೈಬ್ರೇಕರ್್ಗೆ ಹೋಯಿತು. ಒಂದೇ ಒಂದು ಟೈಬ್ರೇಕರ್ 22 ನಿಮಿಷಗಳ ಕಾದಾಟಕ್ಕೆ ಕಾರಣವಾಯಿತು ಎಂದರೆ ನಂಬುತ್ತೀರಾ? ಈ ಕಾದಾಟದಲ್ಲಿ ಬೋರ್ಗ್್ಗೆ 5 ಚಾಂಪಿಯನ್್ಶಿಪ್ ಪಾಯಿಂಟ್್ಗಳು ದೊರಕಿದ್ದವು. ಅಷ್ಟನ್ನೂ ಮೆಕೆನ್ರೊ ನಿಷ್ಫಲಗೊಳಿಸಿದ. ಮೆಕೆನ್ರೊಗೆ 7 ಸೆಟ್ ಪಾಯಿಂಟ್್ಗಳು ದೊರೆತಿದ್ದವು. ಒಂದನ್ನೂ ಸದುಪಯೋಗಪಡಿಸಿಕೊಳ್ಳಲು ಬೋರ್ಗ್ ಬಿಡಲಿಲ್ಲ. ಕೊನೆಗೆ ಟೈಬ್ರೇಕರ್್ನಲ್ಲಿ 18-16ರಲ್ಲಿ ಸೆಟ್ ಗೆದ್ದ ಮೆಕೆನ್ರೊ, ಪಂದ್ಯವನ್ನು ಐದನೇ ಸೆಟ್್ಗೆ ಕೊಂಡೊಯ್ದ. ಐದನೇ ಸೆಟ್ ಮತ್ತೆ ಟೈಬ್ರೇಕರ್್ಗೆ ಹೋಯಿತು. ಇಷ್ಟಾಗಿಯೂ 8-6 ಸೆಟ್ ಗೆದ್ದ ಬೋರ್ಗ್ 5ನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ. ಅಷ್ಟರಲ್ಲಿ ಮೆಕೆನ್ರೊ, ಬೋರ್ಗ್್ನ ಆತ್ಮಸ್ಥೈರ್ಯವನ್ನೇ ಉಡುಗಿಸಿದ್ದ. ಆಡಲು ಆಗಮಿಸಿದಾಗ ಮೆಕೆನ್ರೊನನ್ನು ಯಾವ ಪ್ರೇಕ್ಷಕರು ಅಣಕಿಸಿದ್ದರೋ ಅದೇ ಪ್ರೇಕ್ಷಕರು ಎದ್ದು ನಿಂತು ಮೆಕೆನ್ರೊಗೆ ಗೌರವ ಸೂಚಿಸಿದರು. ಅದೇ ವರ್ಷದ ಕೊನೆಯಲ್ಲಿ ನಡೆದ ಯುಎಸ್ ಓಪನ್ ಫೈನಲ್್ನಲ್ಲಿ ಮೆಕೆನ್ರೊ-ಬೋರ್ಗ್ ಮತ್ತೆ ಮುಖಾಮುಖಿಯಾದರು. ಆ ಪಂದ್ಯ ಕೂಡ ಐದು ಸೆಟ್್ಗಳಿಗೆ ಸಾಗಿತು. ಈ ಬಾರಿ ಗೆದ್ದ ಮೆಕೆನ್ರೊ ಸೇಡು ತೀರಿಸಿಕೊಂಡ. ಮರು ವರ್ಷ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಎರಡರಲ್ಲೂ ಫೈನಲ್್ನಲ್ಲಿ ಇವರಿಬ್ಬರೇ ಎದುರಾಳಿಗಳಾದರು. ಎರಡರಲ್ಲೂ ಗೆದ್ದ ಮೆಕೆನ್ರೊ ನವತಾರೆಯಾಗಿ ಹೊರಹೊಮ್ಮಿದರೆ ಬೋರ್ಗ್ ನಿವೃತ್ತಿ ಘೋಷಣೆ ಮಾಡಿಬಿಟ್ಟ. ಆಗ ಆತನಿಗೆ ಕೇವಲ 26 ವರ್ಷ!

ಟೆನಿಸ್್ನ ಇತಿಹಾಸದಲ್ಲೇ ಅತಿ ದೊಡ್ಡ Rivalryಗಳು ಸೃಷ್ಟಿಯಾಗಿದ್ದು, ಅತಿ ದೊಡ್ಡ ಸೆಣಸಾಟಗಳು ನಡೆದಿದ್ದು ವಿಂಬಲ್ಡನ್್ನಲ್ಲಿ!

ಯಾವುದೇ ಒಂದು ಆಟ ರಂಗೇರಬೇಕಾದರೆ, ಆಟವನ್ನೇ ಎತ್ತರಿಸುವಂಥ ಸೆಣಸಾಟಗಳನ್ನು ಏರ್ಪಡಿಸುವಂಥ ಕ್ರೀಡಾಂಗಣದ ವೈರತ್ವಗಳಿರಬೇಕು.  ಬೋರ್ಗ್- ಮೆಕೆನ್ರೊ, ಲೆಂಡ್ಲ್-ಮೆಕೆನ್ರೊ, ಬೆಕರ್-ಎಡ್ಬರ್ಗ್, ಫೆಡರರ್-ನಡಾಲ್, ಕ್ರಿಸ್ ಎವರ್ಟ್-ಮಾರ್ಟಿನಾ ನವ್ರಾತಿಲೋವಾ, ಸ್ಟೆಫಿ-ಸೆಲೆಸ್, ಹಿಂಗಿಸ್-ಡೆವನ್್ಪೋರ್ಟ್, ಸ್ಯಾಂಪ್ರಾಸ್ ಒಂದು ಕಡೆಯಾದರೆ, ಆತನ ಪಟ್ಟು ಹಾಕಿ ಬೀಳಿಸಲು ಒಬ್ಬರ ನಂತರ ಒಬ್ಬರಂತೆ ಮುಗಿಬೀಳುತ್ತಿದ್ದ ಆ್ಯಂಡ್ರೆ ಅಗಾಸಿ, ಗೊರಾನ್ ಇವಾನಿಸೆವಿಚ್, ಪ್ಯಾಟ್ರಿಕ್ ರ್ಯಾಫ್ಟರ್, ಏಸ್್ಗಳೇ ತಮ್ಮ ಆಟದ ಜೀವಾಳವಾಗಿಟ್ಟುಕೊಂಡಿದ್ದ ಮಾರ್ಕ್ ಫಿಲಿಫ್ಪೋಸಿಸ್, ಸೆಮಿಫೈನಲ್್ನವರೆಗಷ್ಟೇ ಬರುತ್ತಿದ್ದ ಟಿಮ್ ಹೆನ್ಮನ್ ಆಟವನ್ನು ರಂಗೇರಿಸಿದ್ದರು. ಇವರೆಲ್ಲರಿಗಿಂತ ಮುಖ್ಯವಾಗಿ ಅತಿಸುಂದರ ಬೋರಿಸ್ ಬೆಕರ್, ಸ್ಟೀಫನ್ ಎಡ್ಬರ್ಗ್, ಜಿಮ್ ಕುರಿಯರ್ ಹಾಗೂ  ಸತತ ಎರಡು ಭಾರಿ ಫೈನಲ್್ನಲ್ಲಿ ಸೋತ ಇವಾನ್ ಲೆಂಡ್ಲ್ ವಿಂಬಲ್ಡನ್್ಗೆ ಒಂದು ಕಳೆ ತಂದುಕೊಟ್ಟಿದ್ದರು. ಇಲ್ಲಿ ತಾರೆಗಳ ಆಟದ ಸೊಗಸೇ ಬೇರೆ. ವಿಂಬಲ್ಡನ್ ಗೆಲ್ಲಲು ಬೇಕಾದ ಅತ್ಯಂತ ದೊಡ್ಡ ಅಸ್ತ್ರ ಯಾವುದು ಅಂತ ಕೇಳಿದ್ದಕ್ಕೆ ‘‘You need big second serve’ ಎಂದಿದ್ದರು ಸ್ಯಾಂಪ್ರಾಸ್. ಅಂದರೆ ವಿಂಬಲ್ಡನ್್ನಲ್ಲಿ ಒಳ್ಳೆಯ ಆಟಗಾರರ ಫಸ್ಟ್ ಸರ್ವ್್ಗಳು ಸಾಮಾನ್ಯವಾಗಿ 200 ಕಿ.ಮೀ. ವೇಗವನ್ನು ದಾಟುತ್ತವೆ. ಒಂದು ವೇಳೆ ಫಸ್ಟ್ ಸರ್ವ್ ವಿಫಲವಾದರೆ ಡಬಲ್ ಫಾಲ್ಟ್ ಭಯದಿಂದ ಸೆಕೆಂಡ್ ಸರ್ವ್ ಅನ್ನು ನಿಧಾನವಾಗಿ ಹಾಕುತ್ತಾರೆ. ಹಾಗಾಗಿ ಎದುರಾಳಿಗಳು ಸೆಕೆಂಡ್ ಸರ್ವ್ ಅನ್ನು ಅಟ್ಯಾಕ್ ಮಾಡುತ್ತಾರೆ. ಆದರೆ ಸ್ಯಾಂಪ್ರಾಸ್್ನ ಸೆಕೆಂಡ್ ಸರ್ವ್್ಗಳೇ ಬಲಿಷ್ಠವಾಗಿರುತ್ತಿದ್ದವು, ಸೆಕೆಂಡ್ ಸರ್ವ್್ನಲ್ಲಿ ಏಸ್ ಹಾಕಿಬಿಡುತ್ತಿದ್ದ. ಆತನ ಆಟದ ಬಗ್ಗೆ ಖ್ಯಾತ ಕ್ರೀಡಾ ವಿಶ್ಲೇಷಕ ನಿರ್ಮಲ್ ಶೇಖರ್ ಎಷ್ಟು ಮನಸೋತಿದ್ದರೆಂದರೆ, ‘‘Federer all class, but Sampras the king on grass’ ಎಂದು ಒಂದು ಲೇಖನವನ್ನೇ ಬರೆದು ಹೊಗಳಿದ್ದರು. ವಿಂಬಲ್ಡನ್್ನಲ್ಲಿ ಸರ್್ಪ್ರೈಸ್ ವಿನ್ನರ್ಸ್ ಬಹಳ ವಿರಳ, ಶಾಕ್ ಡಿಫೀಟ್್ಗಳು ಇಲ್ಲಿ ತುಂಬಾ ಕಡಿಮೆ. ಒಳ್ಳೆಯ ಆಟಗಾರರು ಮಾತ್ರ ಸೆಮಿಫೈನಲ್, ಫೈನಲ್್ಗೆ ತಲುಪುತ್ತಾರೆ. ಇಲ್ಲಿನ ಮತ್ತೊಂದು ಗಮನಾರ್ಹ ಅಂಶವೆಂದರೆ ಗ್ರೇಟ್ ರೈವಲ್ರಿ ಜತೆಗೆ ಸಸ್ಟೈನ್ಡ್ ರೈವಲ್ರಿಯನ್ನು ಕಾಣಬಹುದು. ವರ್ಷಕ್ಕೊಬ್ಬ ಎದುರಾಳಿಗಳು ಉದ್ಭವಿಸುವುದಿಲ್ಲ. ಅತ್ಯುತ್ತಮ ಆಟಗಾರರೇ ವರ್ಷಂಪ್ರತಿ ಜಿದ್ದಾಜಿದ್ದಿಗೆ ಬೀಳುತ್ತಾರೆ.

ಇಲ್ಲಿನ ಇನ್ನೊಂದು ಉಲ್ಲೇಖಾರ್ಹ ವಿಶೇಷತೆಯೆಂದರೆ ಇಂಗ್ಲಿಷರು ಇಂದಿಗೂ ‘Purist ಗಳು, ಮಡಿವಂತಿಕೆ ಬಿಟ್ಟಿಲ್ಲ!

ಆಸ್ಟ್ರೇಲಿಯನ್, ಫ್ರೆಂಚ್, ಯು.ಎಸ್. ಓಪನ್್ಗಳಲ್ಲಿ ಆಟಗಾರರು ತಮಗಿಷ್ಟ ಬಂದ ಬಣ್ಣದ ಉಡುಪು ಧರಿಸಬಹುದು. ಆದರೆ ವಿಂಬಲ್ಡನ್್ನಲ್ಲಿWhite-only!!  ಬಿಳಿ ವಸ್ತ್ರವನ್ನೇ ಧರಿಸಬೇಕು. ವೀಕ್ಷಕರೂ ಕೂಡ ‘ಎಲ್ಲೆ ಮೀರದ’ ಉಡುಪು ಧರಿಸಿ ವಿಶಿಷ್ಟವಾದ ಫ್ಯಾಶನ್ ಸ್ಟೇಟ್್ಮೆಂಟ್ ಕೊಡುತ್ತಾರೆ. ಇತರ ಗ್ರಾನ್್ಸ್ಲಾಮ್್ಗಳಲ್ಲಿ ‘ವಿಮೆನ್ಸ್ ಸಿಂಗಲ್ಸ್್’, ‘ಮೆನ್ಸ್ ಸಿಂಗಲ್ಸ್್’ ಎಂದರೆ ವಿಂಬಲ್ಡನ್್ನಲ್ಲಿ ಮಾತ್ರ ‘ಲೇಡೀಸ್ ಸಿಂಗಲ್ಸ್್’ ಹಾಗೂ ‘ಜೆಂಟಲ್್ಮನ್ಸ್ ಸಿಂಗಲ್ಸ್್’ ಎನ್ನಲಾಗುತ್ತದೆ. ಟೆನಿಸ್ ನೋಡಲು ಬರುವವರೂ ಕೂಡ ಜೆಂಟಲ್್ಮನ್್ಗಳಂತೆಯೇ ವರ್ತಿಸುತ್ತಾರೆ. ರಾಯಲ್ ಹ್ಯಾಟ್ ಹಾಕಿಕೊಂಡು ಬರುವುದು, ಮುಂಗಾರು ಆರಂಭವಾದ ಮೇಲೆ ಬಿಟ್ಟು ಬಿಟ್ಟು ಸುರಿಯುವ ಮಳೆಯಂತೆ Rhythmical ಆಗಿ ಚಪ್ಪಾಳೆ ತಟ್ಟುವುದು ಕಣ್ಣು, ಕಿವಿಗಳಿಗೊಂದು ಹಬ್ಬ. ಅಷ್ಟೇ ಅಲ್ಲ, ಬಾಲ್್ಬಾಯ್ಸ್ ಕೂಡ ಬಾಲನ್ನು ಮೇಲಿಂದ ಬಿಸಾಡುವಂತಿಲ್ಲ, ನೆಲದಿಂದಲೇ ಟಾಸ್ ಮಾಡಬೇಕು. ಬಾಲನ್ನು ಹೆಕ್ಕಿ ಹಿಂದಿರುಗುವಾಗಲೂ ಬ್ಯಾಕ್ವರ್ಡ್ ಸ್ಟೆಪ್ಸ್ ಹಾಕಬೇಕು, ಬೆನ್ನು ತೋರಿಸುವಂತಿಲ್ಲ. ಸ್ಕೋರ್ ಬೋರ್ಡ್ ಮೇಲೆ ಆಟಗಾರರ ಹೆಸರು ಬರೆಯುವಾಗಲೂ ‘ಮಿಸ್ಟರ್್’ ಫೆಡರರ್, ‘ಮಿಸ್ಟರ್್’ ನಡಾಲ್, ‘ಮಿಸ್್’ ಶರಪೋವಾ, ‘ಮಿಸೆಸ್್’ ಕಿಮ್್ಕ್ಲೈಸರ್ಸ್ ಹೀಗೆ ಬಹಳ ಡಿಗ್ನಿಫೈಡ್ ಆಗಿ ಬರೆಯುತ್ತಾರೆ. ಆಟ ಚಾಲ್ತಿಯಲ್ಲಿರುವಾಗ ಕೂಡ ಪಾಯಿಂಟ್ಸ್ ಹೇಳುವಾಗ ಫೆಡರರ್, ನಡಾಲ್ ಎನ್ನುವುದಿಲ್ಲ. ಮಿಸ್ಟರ್ ಫೆಡರರ್, ಮಿಸ್ಟರ್ ನಡಾಲ್ ಎಂದೇ ಸಂಬೋಧಿಸುತ್ತಾರೆ.

ಇಂತಹ ವಿಂಬಲ್ಡನ್್ಗೀಗ 125ರ ಸಂಭ್ರಮ!

ಆದರೂ ಮುಪ್ಪಡರದ ಮುತ್ತೈದೆಯಂತಿದೆ. ಇಷ್ಟಕ್ಕೂ ಒಬ್ಬ ಟೆನಿಸ್ ಆಟಗಾರನಾಗಿ ವಿಂಬಲ್ಡನ್ ಅನ್ನು ಮಾತ್ರ ತನ್ನ ಗುರಿಯಿಂದ ಹೊರಗಿಡಲು ಯಾವೊಬ್ಬನಿಗೂ ಸಾಧ್ಯವಿಲ್ಲ. ಅಣಕವೆಂದರೆ Grass is for the cows ಎಂದಿದ್ದ ಮ್ಯಾನ್ಯುಯೆಲ್ ಸಂಟಾನಾನೇ 1966ರಲ್ಲಿ ವಿಂಬಲ್ಡನ್ ಗೆದ್ದುಬಿಟ್ಟ!

ನಾಳೆಯಿಂದ ವಿಂಬಲ್ಡನ್ ಆರಂಭ. Watch it and Enjoy!

9 Responses to “ನೂರಾ ಇಪ್ಪತ್ತೆ ೈದಾದರೂ ಮುಪ್ಪಡರದ ಮುತ್ತೆ ೈದೆಯದು!”

  1. Krishnaprasad says:

    ಮಜಾ ಏನು ಗೊತ್ತಾ.. ಈ ಬಾರಿ ಕಳೆದ ವರ್ಷ ಟೆನಿಸ್ ಇತಿಹಾಸದಲ್ಲೇ ಅತಿ ಹೆಚ್ಚು ದೀರ್ಘ ಕಾಲದ ಪಂದ್ಯವನ್ನಾಡಿದ ಜಾನ್ ಐಸ್ನರ್ ಮತ್ತು ಮಹುತ್ ಜೋಡಿ ಮೊದಲ ಪಂದ್ಯದಲ್ಲೇ ಮಖಾಮುಖೀಯಾಗಲಿದ್ದಾರೆ!!

  2. Basu says:

    Thanks Pratap!

    Very informative article.

  3. Avinash Basavaraj says:

    Lets expect a surprise winner this time.

  4. vijayakumar says:

    respected sir

    very very informative article sir i thanks to giving oppartunity to read this much of information.

    thank you once again

    vijaykumar.

  5. Keshini says:

    Very informative & amazingly written sir… Thank u.. 🙂
    But my wishes & prayers that Rafa wins the Wimbledon title this year…It’d be a grand victory for him after the French Open.. 🙂

  6. keshav muthy says:

    really superb article ….what an information collected by u it’s really great work done by u sir……………………

  7. vanaja gowda says:

    very informative article senior….all the best…..keep rockin…

  8. vanaja gowda says:

    Another year has passed in your life, making you even wiser and stronger. Let your age not age your spirits. On your special day, I wish you all that you desire. May God bless you with love and care. Enjoy every moment, every day of your life.My heartiest wishes to you on your Birthday. Have a successful year filled with success and glory. Enjoy your day and the life ahead senior……SORRY FOR THE BELATED WISHES….

    “HAPPY BIRTHDAY”

  9. Dr Shailesh says:

    as usual… excellent.. u r the boss