Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸೋನಿಯಾರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?

ಸೋನಿಯಾರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?


ಇದು ಸ್ವೀಕಾರಾರ್ಹವಲ್ಲ, ಸಲ್ಲ!! ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ

ಆರು ವಾರಗಳ ಹಿಂದೆ ಫೇಸ್್ಬುಕ್, ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಮುಂತಾದ ಪ್ರಮುಖ ಇಂಟರ್್ನೆಟ್ ಸೇವಾ ಪೂರೈಕೆದಾರ ಕಂಪನಿಗಳ ಕಾನೂನು ಸಲಹೆಗಾರರನ್ನು ಹೊಸದಿಲ್ಲಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಕೇಂದ್ರ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್, ಫೇಸ್್ಬುಕ್ ಪ್ರತಿನಿಧಿಯನ್ನು ಬಳಿಗೆ ಕರೆದು ಚಿತ್ರವೊಂದನ್ನು ಮುಂದೆ ಹಿಡಿದು “This is unacceptable’ ಎಂದು ಗುಡುಗಿದ್ದರು. ಕಳೆದ ಸೋಮವಾರ ಎರಡನೇ ಬಾರಿಗೆ ಮತ್ತೆ ಸಭೆ ಕರೆದಾಗಲೂ ಆಕ್ಷೇಪಾರ್ಹ, ಪ್ರಚೋದನಾತ್ಮಕ ಚಿತ್ರ ಅಥವಾ ವಿಷಯಗಳ ಬಳಕೆ ಹಾಗೂ ಪ್ರಸಾರವನ್ನು ತಡೆಗಟ್ಟಬೇಕು ಎಂದು ಫೇಸ್್ಬುಕ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳಿಗೆ ತಾಕೀತು ಹಾಕಿದರು. ನಮ್ಮ ಗಮನಕ್ಕೆ ತಂದರೆ ಡಿಲೀಟ್ ಮಾಡುತ್ತೇವೆ ಎಂದು ಫೇಸ್್ಬುಕ್ ಹೇಳಿದರೆ ಗೂಗಲ್ ಹಾಗೂ ಮೈಕ್ರೋಸಾಫ್ಟ್ ಸರ್ಕಾರದ ಎಚ್ಚರಿಕೆಗೆ ಅಷ್ಟಾಗಿ ಸೊಪ್ಪುಹಾಕಲಿಲ್ಲ. ಒಂದು ವೇಳೆ ಈ ಸಂಬಂಧ ಕಾನೂನು ಅಥವಾ ನ್ಯಾಯಾಲಯದ ಆದೇಶವೇನಾದರೂ ಇದ್ದರೆ ನಾವು ಅದರಂತೆ ನಡೆದುಕೊಳ್ಳುತ್ತೇವೆ. ಜತೆಗೆ ಇಂಟರ್್ನೆಟ್್ನಲ್ಲಿ ಯಾವುದನ್ನು ಹಾಕಬೇಕು, ಹಾಕಬಾರದು ಎಂದು ನಿರ್ಧರಿಸುವುದಾಗಲಿ, ಯಾವುದು ಮಾನನಷ್ಟವುಂಟು ಮಾಡುತ್ತದೆ, ಯಾವುದು ಮಾಡುವುದಿಲ್ಲ ಎಂಬುದನ್ನು ನಿರ್ಧರಿಸುವುದಾಗಲಿ ಕಂಪನಿಗಳ ಕೆಲಸವಲ್ಲ ಎಂದು ಬಿಟ್ಟರು. ಇದರಿಂದ ಕುಪಿತಗೊಂಡ ಕಪಿಲ್ ಸಿಬಲ್ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ಕರೆದು ಕಂಪನಿಗಳಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ.

ಅಂದಹಾಗೆ, ಕಪಿಲ್ ಸಿಬಲ್ ಅವರನ್ನು ಕೆಂಡಾಮಂಡಲರಾಗಿಸಿದ ಫೇಸ್್ಬುಕ್ ಚಿತ್ರವಾದರೂ ಯಾವುದು ಅಂದುಕೊಂಡಿರಿ?

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಕೈಗೊಂಬೆ ಪ್ರಧಾನಿ ಮನಮೋಹನ್ ಸಿಂಗ್ ರೋಮ್ಯಾನ್ಸ್ ಮಾಡುತ್ತಿರುವಂಥ ಚಿತ್ರ! ಇದೊಂದೇ ಅಲ್ಲ, ದಿಗ್ವಿಜಯ್ ಸಿಂಗ್, ಮನೀಶ್ ತಿವಾರಿ, ರಶೀದ್ ಆಲ್ವಿಗಳನ್ನು ಸೋನಿಯಾ ಗಾಂಧಿಯವರ ನಾಯಿಗಳೆಂಬಂತೆ ರೂಪಿಸಿರುವ ಚಿತ್ರಗಳೂ ಸಾಕಷ್ಟಿವೆ!! ಛೇ..ಛೇ.. ಇದೆಲ್ಲ ಸಲ್ಲ, ಇಂತಹ ಚಿತ್ರಗಳನ್ನು ಫೇಸ್್ಬುಕ್, ಆರ್ಕುಟ್, ಗೂಗಲ್ ಪ್ಲಸ್ ಅಥವಾ ಬ್ಲಾಗ್್ಗಳಲ್ಲಿ ಹಾಕುವುದು ಸರಿಯೇ ತಪ್ಪೇ ಎಂದು ನ್ಯಾಯ ಪಂಚಾಯಿತಿ ಮಾಡುವ, ತೀರ್ಪು ಕೊಡುವ ಮೊದಲು ಜನರಲ್ಲಿ ಏಕಿಂಥಾ ಹತಾಶೆ ಮನೆಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೀರಾ? ಇರಾಕ್ ಸಂಬಂಧಿ ಆಹಾರಕ್ಕಾಗಿ ಇಂಧನ ಹಗರಣದಿಂದ ಆರಂಭವಾಗಿ ಕಾಮನ್ವೆಲ್ತ್ ಹಗರಣ, 2ಜಿ ಹಗರಣ, ಲವಾಸಾ ಹಗರಣ, ಅದರ್ಶ್ ಹೌಸಿಂಗ್ ಸೊಸೈಟಿ ಹಗರಣ ಹೀಗೆ ಹಗರಣಗಳ ಸರಮಾಲೆಯೇ ಸೃಷ್ಟಿಯಾದರೂ ಯಾವ ಪತ್ರಿಕೆ ಅಥವಾ ಟಿವಿ ಚಾನೆಲ್ ಕೇಂದ್ರ ಸರ್ಕಾರದ ನಿಜವಾದ ಚಕ್ರಾಧಿಪತಿ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದವು ಹೇಳಿ ನೋಡೋಣ? ಯುಪಿಎ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ(ಎನ್್ಎಸಿ) ಅಧ್ಯಕ್ಷೆಯಾದ ಸೋನಿಯಾ ಗಾಂಧಿಯವರೂ ಈ ಹಗರಣಗಳಿಗೆ ಹೊಣೆಗಾರರಲ್ಲವೆ? ಅಷ್ಟಾಗಿಯೂ ಯಾವ ಮಾಧ್ಯಮಗಳು ಆಕೆಯನ್ನು ಕಟಕಟೆಗೆ ತಂದು ನಿಲ್ಲಿಸಿದವು? ಪ್ರತಿಯೊಬ್ಬರನ್ನೂ ಲೆಕ್ಕ ಕೇಳುವ ಅಥವಾ ಆದಾಯ-ಖರ್ಚನ್ನು ಲೆಕ್ಕಹಾಕಿ ಸಂಪತ್ತಿನ ಮೂಲದ ಬಗ್ಗೆ ಪ್ರಶ್ನಿಸುವ ಮಾಧ್ಯಮಗಳು, ಸೋನಿಯಾ ಗಾಂಧಿಯವರು ಇದುವರೆಗೂ ಎಷ್ಟು ಭಾರಿ ವಿದೇಶ ಪ್ರಯಾಣ ಮಾಡಿದ್ದಾರೆ, ಅವರ ಆದಾಯವೆಷ್ಟು, ಐಶಾರಾಮಿ ಜೀವನ ನಡೆಸಲು ಹೇಗೆ ಸಾಧ್ಯವಾಗಿದೆ, ಅವರಿಗೆ ಹಗರಣಗಳ ಪಾಲು ಸಿಗುತ್ತಿಲ್ಲವೆ ಇಂತಹ ಪ್ರಶ್ನೆ, ಅನುಮಾನಗಳ ಬಗ್ಗೆ ಎಂದಾದರೂ ಬೆಳಕು ಚೆಲ್ಲಿವೆಯೇ? ಮಾಯಾವತಿ, ಕಾನ್ಶಿರಾಮ್, ಅಂಬೇಡ್ಕರ್ ಹಾಗೂ ಆನೆಗಳ ಪ್ರತಿಮೆಗಳಿಗೆ ಇಷ್ಟು ಕೋಟಿ ವ್ಯಯವಾಯಿತು ಎಂದು ಬೊಬ್ಬೆಹಾಕುವವರು ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಿನಲ್ಲಿ ಎಷ್ಟು ಸಂಘ, ಸಂಸ್ಥೆ, ಟ್ರಸ್ಟ್್ಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ ಹಾಗೂ ಎಷ್ಟೆಷ್ಟು ಅನುದಾನವನ್ನು ನುಂಗುತ್ತಿವೆ ಎಂಬುದನ್ನು ಹೊರತೆಗೆದಿದ್ದಾರಾ? ಇಂತಹ ವಿಷಯಗಳ ಬಗ್ಗೆ ಜನಮಾನಸದಲ್ಲಿ ಅನುಮಾನ, ಶಂಕೆಗಳಿವೆ. ಅವುಗಳನ್ನು ವ್ಯಕ್ತಪಡಿಸಲು, ತಮ್ಮ ಸಾತ್ವಿಕ ಸಿಟ್ಟನ್ನು ತೋಡಿಕೊಳ್ಳಲು, ಹೊರಹಾಕಲು ವೇದಿಕೆಗಳಾದರೂ ಯಾವುದಿವೆ? ಇಂತಹ ವಿಷಯಗಳ ಬಗ್ಗೆ ಬರೆದು ಕಳುಹಿಸಿದರೆ ಪತ್ರಿಕೆಗಳು ಪ್ರಕಟಿಸುತ್ತವೆಯೇ? ಜನರು ತಮ್ಮ ಭಾವನೆಗಳನ್ನು, ಹತಾಶೆಯನ್ನು ವ್ಯಕ್ತಪಡಿಸಲು ಚಾನೆಲ್್ಗಳು ವೇದಿಕೆ ಕೊಡುತ್ತವೆಯೇ? ಹಾಗಾದರೆ ತಮ್ಮಲ್ಲಿರುವ ನೋವು, ಹತಾಶೆ, ಸಿಟ್ಟನ್ನು ಹೊರಹಾಕಲು, ಪರಸ್ಪರ ಹಂಚಿಕೊಳ್ಳಲು ಇಂಟರ್್ನೆಟ್ ಬಿಟ್ಟರೆ ಬೇರಾವ ಮಾಧ್ಯಮವಿದೆ?

1. I hate Sonia Gandhi
2. We hate Sonia Gandhi
3. Manamohan singh is a puppet of Sonia Gandhi!

ಆರ್ಕುಟ್, ಫೇಸ್್ಬುಕ್್ಗಳಲ್ಲಿ ಇಂತಹ ಥ್ರೆಡ್ ಅಥವಾ ಕಮ್ಯುನಿಟಿಗಳು ಸೃಷ್ಟಿಯಾಗಿರುವುದು ಜನರಲ್ಲಿರುವ ಸಾತ್ವಿಕ ಸಿಟ್ಟಿನ ಫಲ. ಹಾಗಿದ್ದರೂ ‘ಅವಹೇಳನಕಾರಿ, ಕಿರುಕುಳ, ಧರ್ಮನಿಂದನೆ, ಮಾನನಷ್ಟವುಂಟು ಮಾಡುವಂಥ ಹಾಗೂ ಯಾವುದೇ ಕಾನೂನುಬಾಹಿರ ಚಿತ್ರ ಅಥವಾ ವಿಷಯವನ್ನು ನಿಷೇಧಿಸಬೇಕು’ ಎಂದು ಕಪಿಲ್ ಸಿಬಲ್ ತಾಕೀತು ಹಾಕಿದ್ದಾರಲ್ಲಾ, ಈ ಮಾನ, ಚಾರಿತ್ರ್ಯಗಳಿರುವುದು ಸೋನಿಯಾ ಗಾಂಧಿಯವರಿಗೆ ಮಾತ್ರವೆ? ಅನ್ಯರ ಬಗ್ಗೆ ಕಾಂಗ್ರೆಸ್ಸಿಗರು ಹುಸಿ ಆರೋಪ ಮಾಡಿದಾಗ, ಭ್ರಷ್ಟರೆಂದು ಕರೆದಾಗ ಮಾನ ಹೋಗುವುದಿಲ್ಲವೆ? ಬಾಬಾ ರಾಮ್್ದೇವ್ ಬಗ್ಗೆ ದಿಗ್ವಿಜಯ್ ಸಿಂಗ್ ಬಾಯಿಗೆ ಬಂದಂತೆ ಮಾತನಾಡಿದಾಗ ಚಾರಿತ್ರ್ಯ ಹರಣವಾಗುವುದಿಲ್ಲವೆ? ಸಾರ್ವಜನಿಕರ ಮನದಲ್ಲಿ ಅನುಮಾನಗಳು ಸೃಷ್ಟಿಯಾಗುವುದಿಲ್ಲವೆ? ಈ ಮನೀಶ್ ತಿವಾರಿ, ದಿಗ್ವಿಜಯ್ ಸಿಂಗ್ ಕೊಡುವ ಹೇಳಿಕೆಗಳು ಕೋಮು ಹಿಂಸಾಚಾರಕ್ಕೆ ಪ್ರಚೋದಿಸುವುದಿಲ್ಲವೆ? 2008, ನವೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿಗೆ ಆರೆಸ್ಸೆಸ್ ಕಾರಣ ಎಂದು ಕಾಂಗ್ರೆಸ್ಸಿನ ಅಬ್ದುಲ್ ರೆಹಮಾನ್ ಅಂಟುಳೆ ಹೇಳಿಕೆ ನೀಡಿದ್ದು ಆರೆಸ್ಸೆಸ್ ವಿರುದ್ಧದ ‘ಹೇಟ್್ಸ್ಪೀಚ್್’ ಅಲ್ಲವೆ? ಹೇಮಂತ್ ಕರ್ಕರೆ ಸಾವಿಗೆ ಹಿಂದೂ ಕಟ್ಟರ್್ಪಂಥೀಯರೇ ಕಾರಣ, ಮುಂಬೈ ಬಾಂಬ್ ದಾಳಿಯಲ್ಲಿ ಆರೆಸ್ಸೆಸ್ ಭಾಗಿಯಾಗಿದೆ ಎಂಬುದಕ್ಕೆ ನನ್ನ ಬಳಿ ಪುರಾವೆ ಇದೆ ಎಂದು ಹುಚ್ಚಾಪಟ್ಟೆ ಮಾತನಾಡುವ ದಿಗ್ವಿಜಯ್ ಸಿಂಗ್ ಅವರದ್ದು ಹೇಟ್್ಸ್ಪೀಚ್ ಎನಿಸುವುದಿಲ್ಲವೆ? ಸೋನಿಯಾ ಗಾಂಧಿಯವರ ಚಿತ್ರವನ್ನು ಫೇಸ್್ಬುಕ್್ನಲ್ಲಿ ತಿರುಚುವ ಕಾರ್ಯಕ್ಕೆ ಬಳಸಿಕೊಂಡರೆ ಚಾರಿತ್ರ್ಯವಧೆ ಎನಿಸುವುದಾದರೆ ಸುಖಾಸುಮ್ಮನೆ ಅಣ್ಣಾ ಹಜಾರೆಯವರನ್ನು ಮನೀಶ್ ತಿವಾರಿ ಹಾಗೂ ಹರಿಪ್ರಸಾದ್ ಅವರು ಭ್ರಷ್ಟ ಎಂದು ಕರೆದಿದ್ದು ಚಾರಿತ್ರ್ಯವಧೆಯಾಗಿರಲಿಲ್ಲವೆ? 1999ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಸೋನಿಯಾ ಗಾಂಧಿಯವರು ‘ಗದ್ದರ್್'(ದೇಶದ್ರೋಹಿ) ಎಂದಿದ್ದು ಚಾರಿತ್ರ್ಯಹರಣವಲ್ಲದೆ ಮತ್ತೇನಾಗಿತ್ತು? ನ್ಯಾಯಾಲಯದ ತೀರ್ಪು ಬರುವ ಮುನ್ನವೆ, ಕೋರ್ಟ್್ನಲ್ಲಿ ಏನೂ ಸಾಬೀತಾಗುವ ಮೊದಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಸೋನಿಯಾ ಗಾಂಧಿ ಕರೆದಿದ್ದು ಮೋದಿ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟುವ ದೂರ್ತ, ವೈಷಮ್ಯಯುತ ಉದ್ದೇಶ ಹೊಂದಿರಲಿಲ್ಲವೆ? ಕಾಂಗ್ರೆಸ್ ವಕ್ತಾರ ರಶೀದ್ ಆಲ್ವಿ ನೀಡುವ ಮೋದಿ ವಿರೋಧಿ ಹೇಳಿಕೆಗಳು ಸಮಾಜ ಒಡೆಯುವ ಹೇಟ್ ಕ್ಯಾಂಪೇನ್್ಗಳೆನಿಸುವುದಿಲ್ಲವೆ?

ಅಲ್ಲ, ಧರ್ಮನಿಂದನೆಯ ಮಾತನಾಡುತ್ತಿದ್ದಾರಲ್ಲಾ ಇವರು 2007ರಲ್ಲಿ ರಾಮಸೇತುವನ್ನು ಒಡೆಯಲು ಹೊರಟಿದ್ದು ಯಾವ ಕಾರ್ಯ? ಶ್ರೀರಾಮ ಯಾವ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದ ಎಂದು ವಿವೇಕರಹಿತವಾಗಿ ಪ್ರಶ್ನಿಸುವ ಮೂಲಕ ಕರುಣಾನಿಧಿ ಕೋಟ್ಯಂತರ ರಾಮಭಕ್ತರ ಮನಸ್ಸಿಗೆ ನೋವುಂಟು ಮಾಡಿದಾಗ ಅದು ಧರ್ಮನಿಂದನೆ ಎನಿಸಿರಲಿಲ್ಲವೆ? ‘ಜೀಸಸ್ ಕ್ರೈಸ್ಟ್ ಸೂಪರ್ ಸ್ಟಾರ್್’, ‘ಡಾ ವಿನ್ಸಿ ಕೋಡ್್’ ಚಿತ್ರಗಳು ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತದೆ ಎಂಬ ಕಾರಣಕೊಟ್ಟು ನಿಷೇಧಿಸಿದ ಈ ಸರ್ಕಾರಕ್ಕೆ ‘ಎ ಸ್ಲಮ್ ಡಾಗ್ ಮಿಲಿಯನೇರ್್’ ಚಿತ್ರದಲ್ಲಿ ಹಿಂದುಗಳನ್ನು ಕಟುಕರಂತೆ ಚಿತ್ರಿಸಿರುವುದು ಬಹುಸಂಖ್ಯಾತರ ಭಾವನೆಗೆ ನೋವುಂಟು ಮಾಡುತ್ತಿದೆ ಎನಿಸಿರಲಿಲ್ಲವೆ? ಇವತ್ತು ಮಡೆಸ್ನಾನದ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯೇ ಅಗುತ್ತಿದೆ. ನಮ್ಮ ಹಿಂದು ಧರ್ಮದ ಹಲವಾರು ಅನಿಷ್ಟ ಪದ್ಧತಿಗಳ ಬಗ್ಗೆ ಸಾರ್ವಜನಿಕ ಚರ್ಚೆಯೂ ನಡೆದಿದೆ, ಮೌಢ್ಯಾಚರಣೆಗಳ ಮೇಲೆ ಸರ್ಕಾರ ನಿಷೇಧ ಹಾಕಿದ್ದನ್ನೂ ನಾವು ಕಂಡಿದ್ದೇವೆ. ಆದರೆ ಇತರ ಧರ್ಮ ಹಾಗೂ ಧರ್ಮೀಯರ ಮೌಢ್ಯ ಹಾಗೂ ಆಚರಣೆಗಳ ಬಗ್ಗೆ ಇಂಥದ್ದೊಂದು ಮುಕ್ತ ಹಾಗೂ ಅಹಿಂಸಾ ಚರ್ಚೆಯನ್ನು ಟಿವಿ, ಪತ್ರಿಕೆಗಳಲ್ಲಿ ಎಂದಾದರೂ ಕಂಡಿದ್ದೇವಾ? ಅತ್ಯಾಚಾರ ಮಾಡಿದ ಮಾವನನ್ನೇ ಗಂಡನೆಂದು, ಗಂಡನನ್ನು ಮಗನೆಂದು ಭಾವಿಸಬೇಕೆಂದ ಇಮ್ರಾನಾ ಪ್ರಕರಣ ನಡೆದಾಗ ಮಾಧ್ಯಮಗಳ ವರದಿ ಮಾಡಿದವೆ ಹೊರತು, ಏಕೆ ಅಂಥ ತೀರ್ಪು ನೀಡಲಾಯಿತು ಎಂಬುದನ್ನು ವಿಶ್ಲೇಷಿಸಿ ಟೀಕಿಸುವ ಕೆಲಸವನ್ನು ಯಾರಾದರೂ ಮಾಡಿದರೇ? ಇಸಾಯಿಗಳ ಬೀಟಿಫಿಕೇಷನ್, ಕ್ಯಾನೋನೈಜೇಷನ್ ಹಾಗೂ ಅದಕ್ಕೆ ಮೊದಲು ಜರುಗುವ ‘ಪವಾಡ’ಗಳು ಮೌಢ್ಯವೆನಿಸುವುದಿಲ್ಲವೆ? ಈ ವಿಚಾರಗಳ ಬಗ್ಗೆ ಯಾವ ಪತ್ರಿಕೆ ಅಥವಾ ಚಾನೆಲ್್ಗಳಲ್ಲಿ ಮುಕ್ತ ಚರ್ಚೆ ನಡೆದಿದೆ ಹೇಳಿ?

ಆದರೆ… ಇಂಟರ್್ನೆಟ್್ನಿಂದ ಸಾಧ್ಯವಾಗಿರುವ ‘ಇಂಡಿಪೆಂಡೆಂಟ್ ಮೀಡಿಯಾ’ದಲ್ಲಿ, ಫೇಸ್್ಬುಕ್, ಆರ್ಕುಟ್್ನಂಥ ಸಾಮಾಜಿಕ ತಾಣಗಳಲ್ಲಿ ಮುಕ್ತ ಚರ್ಚೆ ನಡೆಯುತ್ತದೆ. ಜನ ಯಾರ ಭಯ, ಅಂಜಿಕೆಯೂ ಇಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದಿರಲಿ, ಸೋನಿಯಾ ಬಿಟ್ಟು ಉಳಿದವರ ಬಗ್ಗೆಯೇಕೆ ಸಾಮಾಜಿಕ ತಾಣಗಳಲ್ಲಿ ಇಂತಹ ಕೋಪವೇಕೆ ವ್ಯಕ್ತವಾಗುತ್ತಿಲ್ಲ? ಅಂಕುಶ ಹಾಕುವ ಮೊದಲು ಕಾಂಗ್ರೆಸ್ ತನ್ನ ಆತ್ಮಾವಲೋಕನ ಮಾಡಿಕೊಳ್ಳಬಾರದೇಕೆ? ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಎಂಬ ಸಣ್ಣ ವ್ಯಾಪಾರಿ ಹೇಗೆ ಏಕಾಏಕಿ ಕೋಟ್ಯಧಿಪತಿಯಾದರು? ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಅವರ ಅಳಿಯ(ದತ್ತು ಪುತ್ರಿ ನಿಹಾರಿಕಾ ಅವರ ಪತಿ) ರಂಜನ್ ಭಟ್ಟಾಚಾರ್ಯ ಅವರ ಬಗ್ಗೆ ಪುಟಗಟ್ಟಲೆ ‘ಕಾನ್್ಸ್ಪಿರೆಸಿ ಥಿಯರಿ’ಗಳನ್ನು ಬರೆಯುತ್ತಿದ್ದ ಮಾಧ್ಯಮಗಳು ರಾಬರ್ಟ್ ವಾದ್ರಾ ಬಗ್ಗೆ ಏಕೆ ಒಂದಕ್ಷರವನ್ನೂ ಬರೆಯುವುದಿಲ್ಲ? ಸೋನಿಯಾ ಗಾಂಧಿಯವರ ಅಪ್ತಕಾರ್ಯದರ್ಶಿಯಾಗಿದ್ದ ವಿನ್ಸೆಂಟ್ ಜಾರ್ಜ್ ಸೃಷ್ಟಿಸಿದ್ದ ಹಗರಣಗಳನ್ನು ಏಕೆ ಯಾವ ಮಾಧ್ಯಮಗಳೂ ಹೊರತೆಗೆಯುವುದಿಲ್ಲ? ಇವುಗಳ ಬಗ್ಗೆ ಜನ ಎಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು? ಸಾಮಾಜಿಕ ತಾಣಗಳು ಹಾಗೂ ಇಂಟರ್್ನೆಟ್್ನಿಂದ ಲಭ್ಯವಾಗಿರುವ ಸ್ವತಂತ್ರ ಮಾಧ್ಯಮ ಬಿಟ್ಟರೆ ಅವರಿಗೆ ಯಾವ ವೇದಿಕೆ ಇದೆ? ‘ಪಟ್ಟಭದ್ರ ಹಿತಾಸಕ್ತಿಗಳು, ಮಾಧ್ಯಮ ಮಾಲೀಕರು ಹಾಗೂ ಕಾಸಿಗಾಗಿ ಗೀಚುವ ಪತ್ರಕರ್ತರಿಂದ ಮುಕ್ತವಾಗಿರುವ ಹಾಗೂ ಏಕೈಕ ಪ್ರಜಾತಾಂತ್ರಿಕ ಮಾಧ್ಯಮವೆಂದರೆ ಇಂಟರ್್ನೆಟ್. ಕಪಿಲ್ ಸಿಬಲ್ ಅಂಕುಶ ಹಾಕಲು ಹೊರಟಿರುವುದೇ ಆ ಕಾರಣಕ್ಕೆ’ ಎಂಬ ವರುಣ್್ಗಾಂಧಿಯವರ ಹೇಳಿಕೆ ಹಾಲಿ ಪರಿಸ್ಥಿತಿಗೆ ಕನ್ನಡಿಯಾಗಿದೆಯಲ್ಲವೆ?

ಇಷ್ಟಕ್ಕೂ ಕಾಂಗ್ರೆಸ್್ಗೆ ದಿಗಿಲು ಹುಟ್ಟಿಸುತ್ತಿರುವ ಸಂಗತಿಯಾದರೂ ಯಾವುದೆಂದುಕೊಂಡಿರಿ?

ಭಾರತದಲ್ಲಿ ಫೇಸ್್ಬುಕ್ ಬಳಕೆದಾರರ ಸಂಖ್ಯೆ 2.5 ಕೋಟಿ ಇದೆ. ಸುಮಾರು 10 ಕೋಟಿಗೂ ಹೆಚ್ಚು ಇಂಟರ್್ನೆಟ್ ಬಳಕೆದಾರರು ಗೂಗಲ್ ಉಪಯೋಗಿಸುತ್ತಾರೆ. ಇಷ್ಟೊಂದು ಸಂಖ್ಯೆಯ ಬಳಕೆದಾರರಿರುವಾಗ ರೋಗಿಷ್ಠ ಮನಸ್ಥಿತಿಗಳಿರುವುದನ್ನು ತಳ್ಳಿಹಾಕಲು ಯಾರಿಗೂ ಸಾಧ್ಯವಿಲ್ಲ. ಬಹಳಷ್ಟು ಜನರು ಸಾಮಾಜಿಕ ತಾಣಗಳ ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದು, ವೈಯಕ್ತಿಕ ನಿಂದನೆ ಹಾಗೂ ಚಾರಿತ್ರ್ಯವಧೆಗೆ ಬಳಸಿಕೊಳ್ಳುತ್ತಿರುವುದೂ ನಿಜ. ಅಂಥವರ ಮೇಲೆ ನಿಗಾ ಇಡಬೇಕು, ಅಂಕುಶ ಹಾಕಬೇಕು, ಶಿಕ್ಷಿಸಬೇಕು ಎಂಬುದೂ ಸರಿ. ಆದರೆ ಕಾಂಗ್ರೆಸ್ ಕುಪಿತಗೊಂಡಿರುವುದು ಈ ಕಾರಣಕ್ಕೆ ಖಂಡಿತ ಅಲ್ಲ. ಇತ್ತೀಚೆಗೆ ಈಜಿಪ್ಟ್್ನಲ್ಲಿ ನಡೆದ ಕ್ರಾಂತಿಗೆ ಕಾರಣವಾಗಿರುವುದು ಸೋಷಿಯಲ್ ಮೀಡಿಯಾ. ಫಾಲುನ್ ಗಾಂಗ್ ಚೀನಾವನ್ನು ನಿದ್ದೆಗೆಡಿಸಿದ್ದೂ ಆನ್್ಲೈನ್ ಮೂಲಕವೇ. ವಿಕಿಲೀಕ್ಸ್ ಅಂತೂ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಹಾಗೂ ಸರ್ಕಾರದ ಚುಕ್ಕಾಣಿ ಹಿಡಿದವರ ನಿಜ ಹಾಗೂ ಭ್ರಷ್ಟರೂಪವನ್ನು ಬಯಲು ಮಾಡಿದೆ. ಅದು ಹೊರಹಾಕಿದ ಹಗರಣಗಳ ಬಗ್ಗೆ ಫೇಸ್್ಬುಕ್, ಆರ್ಕುಟ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಮಾಧ್ಯಮ ತಾಣಗಳು ಹಾಗೂ ಇಂಟರ್್ನೆಟ್್ನಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಪ್ರಸ್ತುತ ರಷ್ಯಾದಲ್ಲಿ ವ್ಲಾದಿಮಿರ್ ಪುಟಿನ್ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿರುವುದೂ ಸೋಷಿಯಲ್ ಮೀಡಿಯಾ ಮೂಲಕವೇ. ಇತ್ತ ಕಾಂಗ್ರೆಸ್ ಮುಖಕ್ಕೆ ರಾಡಿ ಎರಚಿದ ‘ರಾಡಿಯಾ ಟೇಪ್ಸ್್’ ಮೊದಲು ಚರ್ಚೆಗೆ ಗ್ರಾಸವಾಗಿದ್ದೇ, ಆ ಮೂಲಕ ಜನಾಭಿಪ್ರಾಯ ಹಾಗೂ ಒತ್ತಡ ಸೃಷ್ಟಿಯಾಗಿದ್ದೇ ಟ್ವಿಟ್ಟರ್ ಮೂಲಕ. ಇವತ್ತು ಕಾಂಗ್ರೆಸ್ಸಿನ ಹೊಣೆಗೇಡಿತನವನ್ನು ಚೆನ್ನಾಗಿ ತೊಳೆಯುತ್ತಿರುವುದೇ ಫೇಸ್್ಬುಕ್ ಹಾಗೂ ಟ್ವಿಟ್ಟರ್್ಗಳಲ್ಲಿ. ಇಂತಹ ಸಾಮಾಜಿಕ ತಾಣಗಳು ಹಾಗೂ ್ನಇಂಟರ್್ನೆಟ್್ನಿಂದ ಬಹುವಾಗಿ ದೂಷಣೆಗೆ ಒಳಗಾಗುತ್ತಿರುವುದು ಹಾಗೂ ಬಣ್ಣಬಯಲು ಮಾಡಿಸಿಕೊಳ್ಳುತ್ತಿರುವುದು ಹಗರಣಗಳ ಮೂಲ ಜನಕ ಕಾಂಗ್ರೆಸ್ ಹಾಗೂ ಅದರ ಮುಖ್ಯಸ್ಥೆ ಸೋನಿಯಾ ಗಾಂಧಿ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮೂಲೆಗುಂಪಾಗುವ ಭಯಕ್ಕೊಳಗಾಗಿರುವ ಕಾಂಗ್ರೆಸ್ ಇಂಥದ್ದೊಂದು ಅಂಕುಶ ಹಾಕಲು ಮುಂದಾಗಿದೆಯಷ್ಟೇ. ಈ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದವರಿಂದ ಇದಕ್ಕಿಂತ ಬೇರೇನನ್ನು ನಿರೀಕ್ಷಿಸಲು ಸಾಧ್ಯ?

ಹಾಗಾಗಿ ಕಪಿಲ್ ಸಿಬಲ್ ತರಲು ಹೊರಟಿರುವ ವಿಧೇಯಕವನ್ನು ‘”Social Networking Inspection Act (SONIA)’ ಎಂದು ಟ್ವಿಟ್ಟರ್್ನಲ್ಲಿ ಟೀಕಿಸಿರುವುದು ಸರಿಯಾಗಿಯೇ ಇದೆಯಲ್ಲವೇ?

69 Responses to “ಸೋನಿಯಾರನ್ನು ಟೀಕಿಸಿದರೆ ಮಾತ್ರ ಚಾರಿತ್ರ್ಯವಧೆಯಾಗುತ್ತದೆಯೇ?”

  1. Deepak says:

    I couldn’t agree less on some points and disagree more with Kapil Sibal on some points, but it is a known fact that personal attacks and ‘chaaritya vadhe’ are not Congress’ strength. The rumor and FUD engine of the Sangh Parivar spews venom at all it’s detractors far more aggressively than even Digvijaya (who is a definitely looney). I wouldn’t agree with internet censorship to the extent that I would cancel my Indian passport the day such a law comes to force. But you cannot deny the fact that the miscreant elements are working over-time of late on a grand smear campaign against Congress in general and Sonia in particular, which should be condemned (no excuse to censor). I recently came across a facebook viral, which tries to trace the root of pseudo-secularism in India by tracing the religious affiliations of the Nehru-Gandhi family. Nothing wrong in that, except that Feroze Gandhi was shown as a Muslim (he was a Parsi, so this is a lie) and there were suggestions of Indira having conceived Sanjiv/Sanjay Gandhi through extra-marital affairs with her secretary named Mohammed Yunus (which is cheap and slanderous). And there was another viral circulated regarding a Swiss magazine published in 1992, citing Rajiv Gandhi among the top depositors in a local bank, which was meant to suggest the black money stowed in foreign accounts. Nothing wrong in sharing that (though a district court recently rejected a case filed against Gandhi family based on that magazine clipping) since it is a published article, but there is another ‘made-up’ Wikileaks document listing top depositors in a unnamed foreign bank with names of many Congress/DMK politicians and some others like Madhu Koda and HDK. I searched through Wikileaks for confirmation, but that was never part of any Wikileaks. This rumor engine needs to be condemned. Why I take the name of the Sangh is because you never see any rumors or viral share of anything related to Vajpayee’s celebacy or Modi being involved in corruption, but a huge majority against Congress and Left, which are sometimes not just lies, but very slanderous.

  2. pradeep says:

    @ Anand
    Mr.Anand it seems like you are a devotee of congress.If you are a congress party worker go and lick the boots of your nethas…you don’t have any rights to criticize pratap..Do you think that all the other who are thanking him here are fools?Grow up man..Cheap is your mindset, not truth…you stupid commenter

    dear pratap sir keep going,we all love you…

  3. harshvardhan says:

    Dear pratap, please interact with your humble fans and commentators.

  4. Lokesh says:

    Sonia is our Gaddafi.

  5. Mangala C R says:

    Superb article sir…….

  6. amith says:

    Nice article.U r dng a great work by exposing the greediness and antisocial activities of such shameless peoples through ur articles.

  7. Shantaveer C M says:

    Very good article sir……..

  8. Shantaveer C M says:

    Very good

  9. jagadish says:

    sir please tell me, to whoom we have to vote..?

  10. Anand says:

    Pradeep,

    Thank you for your kind words. Anybody opposing fascist writings becomes congressman! Is it such a big issue as hyped by Pratap. He don’t leave a single opportunity to write against Congress. It is OK, if Sibal comments something untill it is stance of the government. Simply making hue & cry is cheap! I have neither in support of banning something nor in support of blaming the whole congress! Do not limit your readings only to Pratap, extend it to understand other’s views also.

    Mr.Pratap makes big voice against delay in hanging of Afjal guru. Don’t he know that nobody can be hanged without undergoing different phases of appeals? Do you think president of India can bypass others in the list and take decidion about Afjal.

    Why I gave this example is, Mr. Pratap is using his pen to write articles of one view, which are just provocative and keeps the readers forget their brains.

  11. Anand says:

    Is it not cheap to say “If they make OK, If we make not Ok naa?”

  12. PRASHANTH SHENI says:

    who is that stupid ANAND?worlds biggest idiot……

  13. gurukiran says:

    prajaprbhuthwakke maaraka….ee congress ….Really nice article sir…..We all with you sir…..

  14. Muduka says:

    @All,

    Got it! Anand is an old foe of VB it seems! Hence taking revenge on him indirectly!! Anand, your way of talking is not just cheap but shitty stinking gutter!!

  15. pramod sudi says:

    super sir! nimminda namage sonia avara nija banna gottagide.thank you. wonderful article!!!!!!!!!!!

  16. Sushma. P says:

    Really nice article sir..

  17. Shruthi says:

    Pratap,
    Very good article. but I dont its easy to ban something on internet..We are democracy, world’s biggest !! Kapil Sibal seems to be out of his mind and wit.

    Anand,
    You are either biased or new to Pratap’s articles. I have been reading his columns since his first (and I am glad now that I did). Now, I am better in knowing what politicians are up to , by the way they speak. You should perhaps read his articles on bettale Jagattu.. Its unbiased, mind opening,and informative.Everything really is the same for him ,if you are right , you are supported else objected..:)

  18. ravi says:

    Dear pratap sir super, congress some limited leaders poisen for india.there is no vison, just curuption govt lost 50years, shame shame………..

  19. vijesh says:

    Hi sir its really very nice article…….