Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಏನು ಹೇಳುತ್ತಿದ್ದೀರಿ ಬುದ್ಧಿಜೀವಿಗಳೇ, ಸಂಬಳಕ್ಕಾಗಿ ದುಡಿಯಲು ವಿಶ್ವೇಶ್ವರಯ್ಯನವರೇನು ಕೆಲಸ ಕೇಳಿಕೊಂಡು ಬಂದಿದ್ದರೆ?!

ಏನು ಹೇಳುತ್ತಿದ್ದೀರಿ ಬುದ್ಧಿಜೀವಿಗಳೇ, ಸಂಬಳಕ್ಕಾಗಿ ದುಡಿಯಲು ವಿಶ್ವೇಶ್ವರಯ್ಯನವರೇನು ಕೆಲಸ ಕೇಳಿಕೊಂಡು ಬಂದಿದ್ದರೆ?!

1909, ಏಪ್ರಿಲ್ 10ರಂದು ಅಮೆರಿಕ ಪ್ರವಾಸವನ್ನು ಮುಗಿಸಿ ಮುಂಬೈಗೆ ಬಂದಿಳಿದರು ವಿಶ್ವೇಶ್ವರಯ್ಯ. 1909, ಮಾರ್ಚ್ 31ರವರೆಗೂ ಮೈಸೂರು ದಿವಾನರಾಗಿದ್ದ ವಿ.ಪಿ. ಮಾಧವರಾವ್ ಅದಾಗಲೇ ವಿಶ್ವೇಶ್ವರಯ್ಯನವರ ಮುಂಬೈ ವಿಳಾಸಕ್ಕೆ ಟೆಲಿಗ್ರಾಮ್್ವೊಂದನ್ನು ಕಳುಹಿಸಿದ್ದರು. ಮೈಸೂರಿನ ಮುಖ್ಯ ಎಂಜಿನಿಯರ್ ಆಗಿ ಸೇವೆಗೆ ಸೇರುವಂತೆ ಅದರಲ್ಲಿ ಕೋರಿದ್ದರು. ಇಷ್ಟಕ್ಕೂ 1909, ಜೂನ್್ನಲ್ಲಿ ಮೈಸೂರಿನ ಮುಖ್ಯ ಎಂಜಿನಿಯರ್ ಆಗಿದ್ದ ಮ್ಯಾಕ್ ಹಚಿನ್್ರವರು ನಿವೃತ್ತಿ ಹೊಂದುವವರಿದ್ದರು. ಹಾಗಾಗಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಯೋಗ್ಯ ವ್ಯಕ್ತಿಯ ಶೋಧನೆಯಲ್ಲಿ ತೊಡಗಿದ್ದರು.

ಆದರೆ…

ವಿಶ್ವೇಶ್ವರಯ್ಯನವರು ಆ ಆಹ್ವಾನವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ! ಪ್ರವಾಹ ಸೃಷ್ಟಿಸುತ್ತಿದ್ದ, ಉಕ್ಕಿ ಹರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದ್ದ ಮೂಸಿ ನದಿಯನ್ನು ನಿಯಂತ್ರಿಸುವುದು ಹೇಗೆ ಎಂದು ಚಿಂತಿತರಾಗಿದ್ದ ಹೈದರಾಬಾದ್ ನಿಜಾಮರು ವಿಶ್ವೇಶ್ವರಯ್ಯನವರ ಸಹಾಯ ಕೋರಿದ್ದರು. ಅದಕ್ಕೆ ವಿಶ್ವೇಶ್ವರಯ್ಯನವರು ಒಪ್ಪಿಗೆಯನ್ನೂ ಸೂಚಿಸಿದ್ದರು. ಇತ್ತ ಹಿಂದೊಮ್ಮೆ ವಿಶ್ವೇಶ್ವರಯ್ಯನವರನ್ನು ಸಂಪರ್ಕಿಸಿ, ಆಹ್ವಾನಿಸಿ ಸೋತಿದ್ದ ಮಾಧವರಾಯರಿಗೂ ವಿಶ್ವೇಶ್ವರಯ್ಯನವರಿಗೆ ಮೈಸೂರಿಗೆ ಬರಲು ಇಷ್ಟವಿಲ್ಲ ಎಂಬುದು ಗೊತ್ತಿತ್ತು. ಆದರೂ ಮಾಧವರಾವ್ ಅವರ ಉತ್ತರಾಧಿಕಾರಿ ಮೈಸೂರಿನ ದಿವಾನರಾಗಿ ಬಂದ ಟಿ. ಆನಂದರಾವ್ ಕೂಡ ತಮ್ಮ ಪ್ರಯತ್ನ ಮಾಡಿದರು. 1909 ಮೇ 24ರಂದು ಪತ್ರವೊಂದನ್ನು ಕಳುಹಿಸಿದರು- ‘ನಿಮ್ಮ ಉನ್ನತ ಪದವಿ ಮತ್ತು ಅಮೋಘ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಜರು ನಿಮ್ಮ ಸೇವೆಯನ್ನು ಮೈಸೂರು ಸರ್ಕಾರಕ್ಕೆ ಪಡೆಯಲು ಇಚ್ಛಿಸುತ್ತಿದ್ದಾರೆ. ಅಲ್ಲದೆ ಹುಟ್ಟಿನಿಂದ ನೀವು ಮೈಸೂರಿಗರೇ ಆಗಿರುತ್ತೀರಿ. ಹಾಗಾಗಿ ಮಹಾರಾಜರು ತಮ್ಮ ಕೋರಿಕೆಯನ್ನು ನೀವು ಒಪ್ಪಿಕೊಳ್ಳುತ್ತೀರೆಂಬ ವಿಶ್ವಾಸವಿಟ್ಟುಕೊಂಡಿದ್ದಾರೆ. ನಿಮ್ಮದೇ ನೆಲದಲ್ಲಿ ನಿಮ್ಮ ಸತ್ವಯುತ ಸೇವೆ ಹಾಗೂ ಪ್ರತಿಭೆಗೆ ತಕ್ಕ ಅವಕಾಶ ಲಭಿಸುತ್ತದೆ. ಇಲ್ಲಿ ನೀರಾವರಿ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ವಿಫುಲ ಅವಕಾಶಗಳಿವೆ. ಸರ್ಕಾರಿ ಹುದ್ದೆಯಿಂದ ದೊರೆಯುವ ಆರ್ಥಿಕ ಅನುಕೂಲಗಳಿಗಿಂತ ತಾವು ಸಾರ್ವಜನಿಕ ಸೇವೆಯ ಅವಕಾಶವನ್ನು ಅರಸುವ ಮನಸ್ಥಿತಿಯಲ್ಲಿದ್ದೀರಿ ಹಾಗೂ ಅದರಿಂದ ಆತ್ಮತೃಪ್ತಿ ಹೊಂದಲು ಬಯಸುತ್ತೀರಿ ಎಂಬ ವಿಚಾರ ಮಹಾರಾಜರ ಗಮನಕ್ಕೂ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೈಸೂರು ಸರ್ಕಾರದ ಉದ್ದೇಶಿತ ಯೋಜನೆ ಮತ್ತು ಕಾರ್ಯಗಳು ತಮ್ಮ ಈ ಮನೋಧರ್ಮಕ್ಕೆ ಸೂಕ್ತವಾಗಿ ಹೊಂದಿಕೊಳ್ಳಬಹುದಾಗಿದೆ’ ಎಂದು ಅದರಲ್ಲಿ ಬರೆದಿದ್ದರು.

ಆದರೇನಂತೆ…

ಸರ್ಕಾರಿ ಸೇವೆಗೆ ಸೇರುವ ಯಾವ ಇಚ್ಛೆ, ತುಡಿತವನ್ನೂ ಹೊಂದಿರದ ವಿಶ್ವೇಶ್ವರಯ್ಯನವರು ಉತ್ತರಿಸಲು 3 ವಾರ ಕಾಲಾವಕಾಶ ಕೇಳಿ ಪತ್ರ ಬರೆದರು. ಅದರಲ್ಲಿ ‘ರಾಜ್ಯದಲ್ಲಿ ಅಗತ್ಯ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ತಾಂತ್ರಿಕ ಶಿಕ್ಷಣವನ್ನು ಆರಂಭಿಸುವ ಯಾವುದಾದರೂ ದೂರದೃಷ್ಟಿಯ ಮಹತ್ತರ ಯೋಜನೆಗಳು ಸರ್ಕಾರದ ಮುಂದಿವೆಯೇ ಅಥವಾ ಈಗಿರುವಂತೆ ಸಾಮಾನ್ಯ ಎಂಜಿನಿಯರಿಂಗ್ ಕೆಲಸಗಳಿಗಾಗಿ ಮಾತ್ರವೇ ನನ್ನ ಸೇವೆಯನ್ನು ಕೋರಲಾಗುತ್ತಿದೆಯೇ? ಎಂಬ ವಿವರಣೆ ಕೇಳಿ…’, ಹೈದರಾಬಾದ್್ನತ್ತ ಮುಖಮಾಡಿದರು. ಮೂಸಿ ನದಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ, ಹೆಚ್ಚುವರಿ ನೀರನ್ನು ‘ಹುಸೇನ್ ಸಾಗರ್್’ ಹಾಗೂ ‘ಹಿಮಾಯತ್ ಸಾಗರ್್’ಗಳಲ್ಲಿ ಹಿಡಿದಿಡುವ ವ್ಯವಸ್ಥೆ ಮಾಡಿದರು. ವಿಶಾಖಪಟ್ಟಣಮ್್ನಲ್ಲಿ ಸಮುದ್ರ ಕೊರೆತವನ್ನು ತಡೆದಿದ್ದೂ ಇವರೇ. ಈ ಮಧ್ಯೆ, ‘ನೀವು ಇಚ್ಛಿಸಿರುವ ವಿಚಾರಗಳು ಮಹಾರಾಜರ ಕಾರ್ಯಸೂಚಿಯಲ್ಲೂ ಇವೆ ಹಾಗೂ ನೀವು ನೀಡಿರುವ ಸಲಹೆಗಳನ್ನು ಮಹಾರಾಜರು ತಮಗೆ ದೊರೆಯುವ ಅಪೂರ್ವ  ಅವಕಾಶವೆಂದು ಭಾವಿಸಿದ್ದಾರೆ’ ಎಂಬ ಪತ್ರ ಮೈಸೂರಿನಿಂದ ಬಂತು!

1909, ನವೆಂಬರ್ 15ರಂದು ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್ ಆಗಿ ವಿಶ್ವೇಶ್ವರಯ್ಯನವರು ಅಧಿಕಾರ ವಹಿಸಿಕೊಂಡರು. ಆ ಘಟನೆಯನ್ನು 1951ರಲ್ಲಿ ಪ್ರಕಟವಾದ “Memoirs of my Working Life’ ಕೃತಿಯಲ್ಲಿ ಸ್ವತಃ ವಿಶ್ವೇಶ್ವರಯ್ಯನವರೇ ವಿವರಿಸಿದ್ದಾರೆ. ಆ ಪುಸ್ತಕವನ್ನು ‘ನನ್ನ ವೃತ್ತಿ ಜೀವನದ ನೆನಪುಗಳು’ ಹೆಸರಿನಲ್ಲಿ ಗಜಾನನ ಶರ್ಮಾ ಅವರು ಕನ್ನಡಕ್ಕೂ ತಂದಿದ್ದಾರೆ. ಅವತ್ತು ಮೈಸೂರು ಮಹಾರಾಜರಿಗೇ ಷರತ್ತು ಹಾಕಿ, ಅವರು ಒಪ್ಪಿಕೊಂಡ ನಂತರವಷ್ಟೇ ಅಧಿಕಾರವಹಿಸಿಕೊಂಡ ವ್ಯಕ್ತಿ ವಿಶ್ವೇಶ್ವರಯ್ಯನವರೇ ಹೊರತು, ಸಂಬಳಕ್ಕಾಗಿ ಕೆಲಸ ಕೇಳಿಕೊಂಡು ಬಂದವರಲ್ಲ!!

ಇಷ್ಟಾಗಿಯೂ ಮೈಸೂರಿನ ಕೆಲವರು ಲದ್ದಿಜೀವಿ, ಅಲ್ಲಲ್ಲ ಬುದ್ಧಿಜೀವಿಗಳು ಹೇಳುತ್ತಿರುವುದೇನು? ಅವರ ಬಾಯಿಂದ ವಿಶ್ವೇಶ್ವರಯ್ಯನವರ ಬಗ್ಗೆ ಹೊರಡುತ್ತಿರುವ ಮಾತುಗಳಾದರೂ ಯಾವ ಮಟ್ಟದ್ದಾಗಿವೆ?

ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ನಡೆದಿತ್ತು. 2016ಕ್ಕೆ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೊಂಡು 100 ವರ್ಷಗಳಾಗುತ್ತವೆ. ಶತಮಾನೋತ್ಸವ ಸಮಾರಂಭದ ಸಂದರ್ಭದಲ್ಲಿ ವಿವಿಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರು ಮತ್ತು ವಿವಿ ಸ್ಥಾಪನೆಯ ಹಿಂದಿದ್ದ ಶಕ್ತಿ ವಿಶ್ವೇಶ್ವರಯ್ಯನವರ ಪ್ರತಿಮೆಗಳನ್ನು ಸ್ಥಾಪಿಸಬೇಕೆಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಅದರ ಬೆನ್ನಲ್ಲೇ ಅನವಶ್ಯಕ ವಿವಾದವೊಂದು ತಲೆಯೆತ್ತಿತು. ಮೈಸೂರಿನ ಅಲ್ಲಲ್ಲಿ ಪ್ರತಿಭಟನೆಗಳೂ ಆಗಿವೆ! ವಿಶ್ವೇಶ್ವರಯ್ಯನವರು ಮೀಸಲಾತಿಗೆ ವಿರುದ್ಧವಾಗಿದ್ದರು, ಹಾಗಾಗಿ ಅವರ ಪ್ರತಿಮೆಯನ್ನು ವಿವಿಯಲ್ಲಿ ಯಾವುದೇ ಕಾರಣಕ್ಕೂ ಪ್ರತಿಷ್ಠಾಪಿಸಬಾರದು ಎಂದು ಬಹುಜನ ಸಮಾಜ ಪಕ್ಷದ ವಿದ್ಯಾರ್ಥಿ ಸಂಘಟನೆ ತಗಾದೆ ತೆಗೆದರೆ, ಕೆಲವು ಬುದ್ಧಿಜೀವಿಗಳು ದೊಡ್ಡ ಸಭೆಯನ್ನೇ ನಡೆಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆ ಮಾತ್ರ ಸಾಕು, ಯಾವುದೇ ಕಾರಣಕ್ಕೂ ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ನಿರ್ಮಿಸಬಾರದು ಎಂದು ಒಕ್ಕೊರಲಿನ ಕರೆ ಅಲ್ಲಿಂದ ಮೊಳಗಿತು. ಅದರಲ್ಲೂ ಭಾಷಣಕ್ಕೆ ನಿಂತ ಪ್ರೊ.ಕೆ.ಎಸ್. ಭಗವಾನ್ ಬಾಯಿಂದ ಹೊರಬಂದಿದ್ದು Verbal Diarrhea!ಹೀನಾತಿ ಹೀನ ತರ್ಕ, ಮಾತುಗಳ ಭೇದಿ ಮಾಡಿಕೊಂಡರು. ಹಾಗಂತ ಹೇಳಲೇಬೇಕಾಗಿದೆ, ಏಕೆಂದರೆ ಅಂದು ಅವರ ಬಾಯಿಂದ ಹೊರಟ ಮಾತುಗಳಾದರೂ ಹೇಗಿದ್ದವು?

‘ಮೈಸೂರಿಗಾಗಲಿ, ಮೈಸೂರು ವಿಶ್ವವಿದ್ಯಾಲಯಕ್ಕಾಗಲಿ, ಕನ್ನಂಬಾಡಿ ಕಟ್ಟೆಗಾಗಲಿ ವಿಶ್ವೇಶ್ವರಯ್ಯ ಏನೂ ಮಾಡಲಿಲ್ಲ. ಕನ್ನಂಬಾಡಿ ಕಟ್ಟಿದ್ದು ವಿಶ್ವೇಶ್ವರಯ್ಯನವರಲ್ಲ, ನಾಲ್ವಡಿ ಕೃಷ್ಣರಾಜ ಒಡೆಯರ್. ವಿಶ್ವೇಶ್ವರಯ್ಯನವರು ನಾಲ್ವಡಿಯವರ ಬಳಿ ಸಂಬಳಕ್ಕಾಗಿ ಕೆಲಸಕ್ಕಿದ್ದರು. ಅಂತಹ ವ್ಯಕ್ತಿಯ ಪುತ್ಥಳಿಯನ್ನು ಏಕೆ ಸ್ಥಾಪಿಸಬೇಕು?’

ಮೈಸೂರು ವಿವಿ, ಕನ್ನಂಬಾಡಿ ಕಟ್ಟಿದ್ದು ವಿಶ್ವೇಶ್ವರಯ್ಯನವರಲ್ಲದಿದ್ದರೆ ಪ್ರೊ. ಭಗವಾನರ ಪೂರ್ವಜರೇನು?! ಒಬ್ಬ ವಿವಿ ಪ್ರಾಧ್ಯಾಪಕರಾಗಿ ಕಟ್ಟಿದ್ದು ಹಾಗೂ ಕಟ್ಟಿಸಿದ್ದರ ನಡುವೆ ವ್ಯತ್ಯಾಸವೇ ಗೊತ್ತಿಲ್ಲವೆ? ಮೂಸಿ ನದಿಯ ಪ್ರವಾಹವನ್ನು ತಡೆಯಬೇಕೆಂದು ಹೈದರಾಬಾದ್ ನಿಜಾಮರಿಗೂ ಬಯಕೆಯಿತ್ತು, ಹಾಗಂತ ತಡೆಯುವ ತಾಕತ್ತು ಇದ್ದಿದ್ದು ಯಾರಲ್ಲಿ? ಇವತ್ತು ಭಾರತದ ಪ್ರಧಾನಿಗೂ ಖಂಡಾಂತರ ಕ್ಷಿಪಣಿ ತಯಾರಿಸಬೇಕು, ಆ ಮೂಲಕ ಚೀನಾಕ್ಕೆ ಪ್ರತ್ಯುತ್ತರ ನೀಡಬೇಕೆಂಬ ಇಚ್ಛೆಯಿದೆ. ಹಾಗಂತ ಕ್ಷಿಪಣಿ ತಯಾರು ಮಾಡುವ ವಿಜ್ಞಾನಿ ಮೇಲೋ, ಇಚ್ಛೆ ಹಾಗೂ ಹಣಕಾಸು ಪೂರೈಕೆ ಮಾಡುವವರು ಮೇಲೋ? ಹೋಮಿ ಜಹಾಂಗೀರ್ ಭಾಭಾ, ರಾಜಾರಾಮಣ್ಣನವರಿಲ್ಲದಿದ್ದರೆ ಭಾರತ ಅಣ್ವಸ್ತ್ರ ರಾಷ್ಟ್ರವಾಗುವುದಕ್ಕಾದರೂ ಸಾಧ್ಯವಿತ್ತಾ? ಬೇಲೂರು ದೇವಾಲಯವನ್ನು ನೋಡಿದವರು ಅಮರಶಿಲ್ಪಿ ಜಕಣಾಚಾರಿಯನ್ನು ನೆನಪಿಸಿಕೊಳ್ಳುತ್ತಾರೋ ಅಥವಾ ಅದನ್ನು ಕಟ್ಟಿಸಿದ ವಿಷ್ಣುವರ್ಧನನನ್ನೋ? ಏಕೆ ತರ್ಕರಹಿತ ವಾದ ಮಾಡುತ್ತಾರೆ? ಈ ಬುದ್ಧಿಜೀವಿಗಳು ತಮ್ಮ ಒಡಲಲ್ಲಿ ತುಂಬಿಕೊಂಡಿರುವ ವಿಷವನ್ನು ಕಾರುವುದಕ್ಕೆ ವಿಶ್ವೇಶ್ವರಯ್ಯನವರೇ ಬೇಕಿತ್ತೇ? ನಾಲ್ವಡಿ ಕೃಷ್ಣರಾಜ ಒಡೆಯರೇ ಕನ್ನಂಬಾಡಿ ಕಟ್ಟಿಸಿದರು ಎನ್ನುವುದಾದರೆ ವಿಶ್ವೇಶ್ವರಯ್ಯನವರಿಗಿಂತ ಮೊದಲು ಮೈಸೂರಿನ ಮುಖ್ಯ ಎಂಜಿನಿಯರ್ ಆಗಿದ್ದ ಮ್ಯಾಕ್ ಹಚಿನ್ ಅವರಿಂದಲೇ ಏಕೆ ಕಟ್ಟಿಸಿಕೊಳ್ಳಲಿಲ್ಲ? ಮೈಸೂರು ವಿವಿಯಂಥ ಒಂದು ವಿಶ್ವವಿದ್ಯಾಲಯದ ಅಗತ್ಯ ಮೈಸೂರು ಸಂಸ್ಥಾನಕ್ಕಿದೆ ಎಂದು ವಿಶ್ವೇಶ್ವರಯ್ಯನವರಿಗಿಂತ ಮೊದಲು ದಿವಾನರಾಗಿದ್ದವರಿಗೇಕೆ ಅನಿಸಲಿಲ್ಲ? ಅವರ ತಲೆಯಲ್ಲೇಕೆ ಅಂಥದ್ದೊಂದು ಯೋಜನೆ ರೂಪತಳೆಯಲಿಲ್ಲ? “If Australia and Canada could have universities of their own for less than a million population, cannot Mysore with a population of not less that 60 lakhs have a University of its own?”ಅಂದರೆ ಅರ್ಧ ದಶಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಆಸ್ಟ್ರೇಲಿಯಾ, ಕೆನಡಾಗಳೇ ಸ್ವಂತ ವಿವಿಗಳನ್ನು ಹೊಂದಿರುವಾಗ 60 ಲಕ್ಷಕ್ಕೂ ಮೀರಿ ಜನಸಂಖ್ಯೆ ಹೊಂದಿರುವ ಮೈಸೂರು ಸಂಸ್ಥಾನಕ್ಕೇಕೆ ಸ್ವಂತ ವಿವಿಯಿಲ್ಲ ಎಂದು ಮೈಸೂರು ವಿವಿಯನ್ನು 1916ರಲ್ಲಿ ಸ್ಥಾಪನೆ ಮಾಡಿದ್ದು ವಿಶ್ವೇಶ್ವರಯ್ಯನವರಲ್ಲದೆ ಮತ್ತಾರು?

ವಿಶ್ವೇಶ್ವರಯ್ಯ ಶ್ರಮ ಪಡದಿದ್ದರೆ

ಕನ್ನಂಬಾಡಿಯ ಕಟ್ಟದಿದ್ದರೆ

ಆಗುತ್ತಿತ್ತೇ ಈ ನಾಡು

ಚಿನ್ನದ ಸಿರಿನಾಡು…

ಎಂಬ ಸಾಲುಗಳು ‘ಬಂಗಾರದ ಮನುಷ್ಯ’ ಚಿತ್ರದ ಹಾಡಿನಲ್ಲಿ ಬರುತ್ತವೆ. ಅದನ್ನೂ ತೆಗೆಯಬೇಕೆಂದು ಪ್ರೊಫೆಸರ್ ಭಗವಾನರು ಆಜ್ಞಾಪಿಸಿದ್ದಾರೆ! ಇವತ್ತು ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಹಸಿರಾಗಿದ್ದರೆ, ಜನ ನೀರು ಕುಡಿಯುತ್ತಿದ್ದರೆ ಅದಕ್ಕೆ ವಿಶ್ವೇಶ್ವರಯ್ಯನವರು ಕಾರಣ. ಆದರೆ ಈ ಭಗವಾನ್ ಹೊಟ್ಟೆಗೆ ಏನು ಕುಡಿಯುತ್ತಿದ್ದಾರೆ? ಒಂದು ವೇಳೆ ವಿಶ್ವೇಶ್ವರಯ್ಯನವರು ಸಂಬಳಕ್ಕಾಗಿ ಕೆಲಸಕ್ಕೆ ಸೇರಿದ್ದರೆ ಭಗವಾನರಂತೆ ಮೈಸೂರು ವಿವಿಯಲ್ಲಿ ಅಧ್ಯಾಪಕಗಿರಿ ಹೆಸರಿನಲ್ಲಿ ವಿದ್ಯಾರ್ಥಿಗಳ ತಲೆಗೆ ಇಲ್ಲಸಲ್ಲದ ವಿಚಾರಗಳನ್ನು ತುರುಕಿ ಪಗಾರ ಪಡೆಯುತ್ತಿದ್ದರೇ ಹೊರತು ಶತಶತಮಾನಗಳು ಬಂದರೂ ನಾಡು ನೆನೆಯುವ ಜನಪರ ಕೆಲಸ ಮಾಡುತ್ತಿರಲಿಲ್ಲ. ನಾನು ಹಿಂದೊಮ್ಮೆ ವಿಶ್ವೇಶ್ವರಯ್ಯನವರ ಬಗ್ಗೆ ಬರೆದಾಗ ಮೆಚ್ಚಿ ಕಚೇರಿಗೆ ಬಂದಿದ್ದ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಜನಸೇವಕ ಬೆಟ್ಟೇಗೌಡರು ವಿಶ್ವೇಶ್ವರಯ್ಯವರ ಲ್ಯಾಮಿನೇಟೆಡ್ ಫೋಟೋ ಕೊಟ್ಟು, ‘ನೋಡಿ, ಈ ಚಿತ್ರದಲ್ಲಿ ವಿಶ್ವೇಶ್ವರಯ್ಯನವರು ಮಹಾರಾಜರಾದ ಜಯಚಾಮರಾಜ ಒಡೆಯರ ಮುಂದೆ ಕಾಲಮೇಲೆ ಕಾಲು ಹಾಕಿ ಕುಳಿತುಕೊಂಡಿದ್ದಾರೆ, ಮಹಾರಾಜರೇ ಬಾಗಿ ವಿಶ್ವೇಶ್ವರಯ್ಯನವರ ಮಾತು ಕೇಳಿಸಿಕೊಳ್ಳುತ್ತಿದ್ದಾರೆ. ಇದು ವಿಶ್ವೇಶ್ವರಯ್ಯನವರ ಮೇರುಸ್ಥಾನವನ್ನು ತೋರುತ್ತದೆ’ ಎಂದು ಹೆಮ್ಮೆಯಿಂದ ತೋರಿಸಿದ್ದರು. ಇವತ್ತು ಜನರಲ್ಲಿ ವಿಶ್ವೇಶ್ವರಯ್ಯನವರ ಬಗ್ಗೆ ಎಲ್ಲ ಗೌರವ, ಪ್ರೀತಿ ಆದರಗಳಿವೆ. ತಮ್ಮ ‘ಜ್ಞಾಪಕ ಚಿತ್ರಶಾಲೆ’ಯಲ್ಲಿ ಡಿವಿಜಿಯವರು ಅತಿ ಹೆಚ್ಚು ಬರೆದಿರುವುದೇ ಸರ್ ಎಂವಿ ಬಗ್ಗೆ. ಅಂತಹ ಗೌರವವನ್ನು ವಿಶ್ವೇಶ್ವರಯ್ಯನವರು ಸಂಪಾದಿಸಿದ್ದಾರೆ.

ಇಷ್ಟಕ್ಕೂ ಸರ್ ಎಂ.ವಿ. ಅಂದರೆ ಸಾಮಾನ್ಯ ಮನುಷ್ಯನೇ?

ಕನ್ನಂಬಾಡಿ ಕಟ್ಟೆ, ಹಿಂದೂಸ್ಥಾನ್ ಏರ್್ಕ್ರಾಫ್ಟ್ ಫ್ಯಾಕ್ಟರಿ (ಈಗ ಎಚ್.ಎ.ಎಲ್.), ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಸರಕಾರಿ ಸಾಬೂನು ಕಾರ್ಖಾನೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿವಿ, ಶಿವನಸಮುದ್ರ, ಜೋಗ್ ಜಲವಿದ್ಯುತ್ ಯೋಜನೆ, ಬ್ಲಾಕ್ ಸಿಸ್ಟಮ್(ನೀರಾವರಿ ಯೋಜನೆ), ಪ್ಯಾರಾಸಿಟಾಯ್ಡ್ ಲ್ಯಾಬೋರೇಟರಿ, ಮೈಸೂರು ಸಕ್ಕರೆ ಕಾರ್ಖಾನೆ, ಮೈಸೂರು ಸ್ಯಾಂಡಲ್ ಸೋಪ್, ಪ್ರಿಂಟಿಂಗ್ ಪ್ರೆಸ್, ಭಟ್ಕಳ ಬಂದರು, ಶ್ರೀಗಂಧ ಎಣ್ಣೆ ತಯಾರಿಕೆ, ಹಿಂದೂ ಮಾಡರ್ನ್ ಹೊಟೇಲ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು, ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ, ಕಬ್ಬನ್ ಪಾರ್ಕ್್ನ ಸೆಂಚುರಿ ಕ್ಲಬ್, ಪೂನಾ ಡೆಕ್ಕನ್ ಕ್ಲಬ್, ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ದೇಶದಲ್ಲಿಯೇ ಮೊಟ್ಟಮೊದಲಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿ, ಗ್ವಾಲಿಯರ್ ಟೈಗರ್ ಡ್ಯಾಂ, ಪುಣೆಯ ಖಡಕ್್ವಾಸ್ಲಾ ಜಲಾಶಯ ಹಾಗೂ ಕನ್ನಂಬಾಡಿ ಕಟ್ಟೆಗೆ ವಿಶ್ವದಲ್ಲಿಯೇ ಮೊದಲ ಸ್ವಯಂಚಾಲಿತ ಗೇಟ್್ಗಳ ಅಳವಡಿಕೆ, ಒರಿಸ್ಸಾದ ಮಹಾನದಿ ಪ್ರವಾಹ ನಿಯಂತ್ರಣ ಯೋಜನೆ. ಇವೆಲ್ಲವೂ ಅವರ ಕನಸಿನ ಕೂಸುಗಳೇ, ಅವರ ದೂರದೃಷ್ಟಿಯ ಫಲಗಳೇ. ಆದರೆ ಒಬ್ಬ ವ್ಯಕ್ತಿಯಿಂದ ಒಂದು ದೇಶಕ್ಕೆ ಇಷ್ಟೆಲ್ಲಾ ಲಾಭವಾದ ಮತ್ತೊಂದು ಉದಾಹರಣೆ ಜಗತ್ತಿನ ಯಾವ ಭಾಗದಲ್ಲಾದರೂ ಇದೆಯೇ? ಅಂತಹ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಅಥವಾ ಕಂಡಿದ್ದೀರಾ? 1915ರಲ್ಲೇ ಬ್ರಿಟನ್ ಸರಕಾರ ನೈಟ್ ಹುಡ್ ಕೊಟ್ಟು ಗೌರವಿಸುತ್ತದೆಯೆಂದರೆ ವಿಶ್ವೇಶ್ವರಯ್ಯನವರ ವ್ಯಕ್ತಿತ್ವ, ಸಾಧನೆ ಎಂಥದ್ದಿರಬಹುದು? ಒಬ್ಬ ಒಳ್ಳೆಯ ವಿಜ್ಞಾನಿಯನ್ನು, ಎಂಜಿನಿಯರ್್ನನ್ನು, ಸಾಫ್ಟ್್ವೇರ್ ತಂತ್ರಜ್ಞನನ್ನು, ಆಡಳಿತಗಾರನನ್ನು ಖಂಡಿತ ಕಾಣಬಹುದು. ಆದರೆ ಇಷ್ಟೆಲ್ಲಾ ಯೋಗ್ಯತೆಗಳೂ ಒಬ್ಬನೆ ವ್ಯಕ್ತಿಯಲ್ಲಿ ಅಡಗಿರುವುದು ಸಾಧ್ಯವೇ?

ಇನ್ನು ಕನ್ನಂಬಾಡಿ ಕಟ್ಟೆ ಕಟ್ಟಿದ್ದರ ಹಿಂದಿನ ಕಥೆಯನ್ನು ಕೇಳಿ. ಅಂದು ವಿಶ್ವೇಶ್ವರಯ್ಯನವರು ಕಾವೇರಿ ನದಿಗೆ ಆಣೆಕಟ್ಟೆ ಕಟ್ಟಲು ಹೊರಟಾಗ ತಮಿಳರು ವಿರೋಧಕ್ಕೆ ನಿಂತರು. ಬ್ರಿಟಿಷರ ಮುಖ್ಯ ನೆಲೆ ಇದ್ದಿದ್ದೇ ಮದ್ರಾಸ್್ನಲ್ಲಿ. ಮೈಸೂರು ರಾಜ್ಯಕ್ಕೆ ವಿಶ್ವೇಶ್ವರಯ್ಯನವರಿಗೂ ಮೊದಲು ದಿವಾನರಾಗಿ ಬಂದವರೆಲ್ಲ ತಮಿಳು ಅಯ್ಯರ್, ಐಯ್ಯಂಗಾರಿಗಳೇ. ಇವರು ಬ್ರಿಟಿಷರ ಜತೆ ತಮಗಿದ್ದ ಸಾಮಿಪ್ಯ, ಸಾನ್ನಿಧ್ಯ, ಸ್ನೇಹವನ್ನು ಬಳಸಿ ಎಲ್ಲ ಅಡ್ಡಗಾಲು ಹಾಕಿದರು. ಇತ್ತ ಬ್ರಿಟಿಷರ ಅಧೀನದಲ್ಲಿದ್ದ ಮಹಾರಾಜರು ಅಧಿಕಾರ ಉಳಿಸಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿತರಾಗಿದ್ದರೇ ಹೊರತು ಬ್ರಿಟಿಷರನ್ನು ಎದುರು ಹಾಕಿಕೊಳ್ಳುವ ಧೈರ್ಯ ತೋರಲು ಸಾಧ್ಯವಿರಲಿಲ್ಲ. ಅಂದು ಒಂದು ಡಾನ್ಯೂಬ್ ನದಿಯನ್ನು ಹೇಗೆ ಇಡೀ ಯುರೋಪ್ (ಒಟ್ಟು 10 ರಾಷ್ಟ್ರಗಳು- ಜರ್ಮನಿ, ಆಸ್ಟ್ರೀಯಾ, ಸ್ಲೊವಾಕಿಯಾ, ಹಂಗರಿ, ಕ್ರೊವೇಶಿಯಾ, ಸೆರ್ಬಿಯಾ, ಬಲ್ಗೇರಿಯಾ, ಮಾಲ್್ಡೋವಾ, ಉಕ್ರೇನ್, ರೊಮಾನಿಯಾ, ಟರ್ಕಿ) ಬಳಸಿಕೊಳ್ಳುತ್ತಿದೆ, ಅಮೆರಿಕದಲ್ಲಿ ಹೇಗೆ ಇಂಟರ್ ಸ್ಟೇಟ್ ನದಿ ನೀರು ಹಂಚಿಕೆಯಾಗುತ್ತಿದೆ ಎಂಬುದನ್ನು ಬ್ರಿಟಿಷರ ಮುಂದಿಟ್ಟು ಆಣೆಕಟ್ಟು ಕಟ್ಟಲು ಅನುಮತಿ ಪಡೆದುಕೊಂಡವರು ವಿಶ್ವೇಶ್ವರಯ್ಯನವರಲ್ಲದೆ ಮತ್ತಾರು? ಅವತ್ತು ವಿಶ್ವೇಶ್ವರಯ್ಯನವರು ಪಟ್ಟ ಶ್ರಮ ಹಾಗೂ ತಮಿಳರು ಕೊಟ್ಟ ಉಪದ್ರವವನ್ನು ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಆತ್ಮಕಥೆ ‘ಭಾವ’ದಲ್ಲಿ ಬರೆದಿದ್ದಾರೆ. ಹೀಗೆ ಪಡಬಾರದ ಕಷ್ಟಪಟ್ಟು ಕನ್ನಂಬಾಡಿ ಕಟ್ಟಿದ ಮಹಾನುಭಾವನ ಸಾಧನೆ, ಕೊಡುಗೆಯನ್ನೇ ಅಲ್ಲಗಳೆಯುತ್ತಾರಲ್ಲಾ ಇವರು ಹೊಟ್ಟೆಗೆ ಏನು ತಿನ್ನುತ್ತಾರೆರೀ?

ಮತ್ತೆ ಅಣೆಕಟ್ಟಿನ ವಿಷಯಕ್ಕೆ ಬರುವುದಾದರೆ ಆ ಕಾಲದಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಅಣೆಕಟ್ಟು ಎಂಬ ಖ್ಯಾತಿ ಪಡೆದಿದ್ದ ಕನ್ನಂಬಾಡಿ(ಕೆಆರ್್ಎಸ್) ಕಟ್ಟೆಯನ್ನು ಕೇವಲ ನಾಲ್ಕು ವರ್ಷಗಳಲ್ಲೇ ಕಟ್ಟಿ ಮುಗಿಸಿದರು. ಇಂದಿಗೂ ಗಡುವಿಗಿಂತ ಮೊದಲೇ ಪೂರ್ಣಗೊಂಡ ಭಾರತದ ಏಕೈಕ ಅಣೆಕಟ್ಟೆಯೆಂದರೆ ಕನ್ನಂಬಾಡಿ ಕಟ್ಟೆ ಮಾತ್ರ. ಅಷ್ಟೇ ಅಲ್ಲ, ಕನ್ನಂಬಾಡಿ ಕಟ್ಟೆಗೆ ಸ್ವಯಂಚಾಲಿತ ಗೇಟುಗಳನ್ನು ಅಳವಡಿಸಿದ ವಿಶ್ವೇಶ್ವರಯ್ಯನವರು ಜಗತ್ತಿನಲ್ಲಿಯೇ ಯಾರೂ ಮಾಡದ ಸಾಧನೆಯನ್ನೂ ಮಾಡಿದರು. ಇಷ್ಟಾಗಿಯೂ ಕನ್ನಂಬಾಡಿಯ ನಾಲೆಗೆ ಮಹಾರಾಜರು ‘ಇರ್ವಿನ್ ಕೆನಾಲ್್’ ಎಂದು ಹೆಸರಿಟ್ಟರು, ಬ್ರಿಟಿಷರನ್ನು ಸಂತೃಪ್ತಿಪಡಿಸುವ ಅಗತ್ಯ ಅವರಿಗಿತ್ತು! ಆದರೇನಂತೆ, ಸ್ವಾತಂತ್ರ್ಯ ಬಂದ ಮೇಲೆ ಮೈಸೂರು ರಾಜ್ಯದ ಎರಡನೇ ಮುಖ್ಯಮಂತ್ರಿಯಾದ ಕೆಂಗಲ್ ಹನುಮಂತಯ್ಯನವರು ಇರ್ವಿನ್  ಕೆನಾಲ್ ಎಂಬ ಹೆಸರನ್ನು ಬದಲಿಸಿ ‘ವಿಶ್ವೇಶ್ವರಯ್ಯ ನಾಲೆ’ ಎಂದು ಮರುನಾಮಕರಣ ಮಾಡಿದರು. ಅಷ್ಟೇ ಅಲ್ಲ, ವಿಶ್ವೇಶ್ವರಯ್ಯನವರ ಬಗ್ಗೆ ಕೆಂಗಲ್್ಗೆ ಅಪಾರ ಗೌರವ. ಅವರನ್ನೇ ಆದರ್ಶ ಹಾಗೂ ಮೇಲ್ಪಂಕ್ತಿಯಾಗಿಟ್ಟುಕೊಂಡಿದ್ದರು. ವಿಶ್ವೇಶ್ವರಯ್ಯನವರಿಂದ ಪ್ರೇರಣೆ ಪಡೆದೇ ಅವರು ಕನ್ನಡ ಸಂಸ್ಕೃತಿ ಇಲಾಖೆಯನ್ನು ಆರಂಭಿಸಿದ್ದು. ಅದಕ್ಕೆ ಎ.ಎನ್. ಮೂರ್ತಿರಾಯರು ಮೊದಲ ನಿರ್ದೇಶಕರಾಗಿದ್ದರು. ಒಮ್ಮೆ ಮೂರ್ತಿರಾಯರು ಮುಖ್ಯಮಂತ್ರಿ ಕೆಂಗಲ್ ಅವರ ಭೇಟಿಗೆ ಅವಕಾಶ ಕೇಳಿದ್ದರು ಹಾಗೂ ಸಮಯವೂ ನಿಗದಿಯಾಗಿತ್ತು. ಸಮಯಕ್ಕೆ ಸರಿಯಾಗಿ ಮೂರ್ತಿರಾಯರು ಮುಖ್ಯಮಂತ್ರಿ ಕಚೇರಿಗೆ ಬಳಿಗೆ ಆಗಮಿಸಿದರು, ಆದರೆ ಬಹಳ ಆತುರದಿಂದ ಹೊರಬಂದ ಕೆಂಗಲ್, ಮೂರ್ತಿರಾಯರನ್ನು ಜತೆಯಲ್ಲೇ ಬನ್ನಿ, ಕಾರಿನಲ್ಲೇ ಮಾತಾಡೋಣ. ಬಹಳ ಶೀಘ್ರವಾಗಿ ಬೇರೆಲ್ಲಿಗೋ ಹೋಗಬೇಕು ಎಂದು ಕರೆದುಕೊಂಡು ಕಾರು ಏರಿದರು. ‘ನೋಡಿ… ಆಡಳಿತಕ್ಕೆ ಸಂಬಂಧಪಟ್ಟಂತೆ ಕೆಲವು ಸಲಹೆ ಪಡೆದುಕೊಳ್ಳಲು ವಿಶ್ವೇಶ್ವರಯ್ಯನವರ ಅಪಾಯಿಂಟ್್ಮೆಂಟ್ ಕೇಳಿ ಎಂದು ಪಿಎಗಳಿಗೆ ಹೇಳಿದ್ದೆ. ಆದರೆ ಈ ಬುದ್ಧಿಯಿಲ್ಲದ ಪಿಎಗಳು ಅವರನ್ನೇ ಬರಹೇಳಿದ್ದಾರೆ. ಅವರು ಹೊರಡುತ್ತಿದ್ದಾರೆ ಎಂಬ ಸುದ್ದಿ ಈಗಷ್ಟೇ ಬಂತು. ಅವರು ಮನೆಯಿಂದ ಕಾಲ್ತೆಗೆಯುವುದರೊಳಗೆ ಅವರ ನಿವಾಸಕ್ಕೆ ಹೋಗಬೇಕು. ಅಂತಹ ಮಹಾನ್ ವ್ಯಕ್ತಿಯನ್ನು ನನ್ನ ಬಳಿಗೆ ಕರೆಯಿಸಿಕೊಳ್ಳುವುದು ನನಗೆ ಶ್ರೇಯಸ್ಕರವಲ್ಲ, ನಾವೇ ಅವರ ಬಳಿಗೆ ಹೋಗಬೇಕು’ ಎಂದರು ಕೆಂಗಲ್, ಮೂರ್ತಿರಾಯರು ದಂಗಾದರು!

ಸರ್ ಎಂ. ವಿಶ್ವೇಶ್ವರಯ್ಯನವರ ಸ್ಥಾನ ಅಷ್ಟು ಮೇರುಮಟ್ಟದ್ದು!

ಅದು ಕೆಂಗಲ್್ರಂಥ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದವರಿಗೇ ಗೊತ್ತಿತ್ತು, ಆದರೆ ಭಗವಾನ್್ರಂಥ ಯಕಶ್ಚಿತ್ ಮನುಷ್ಯನಿಗೆ ಹೇಗೆ ಗೊತ್ತಾಗಬೇಕು ಹೇಳಿ? ಇತ್ತ ವಿಶ್ವೇಶ್ವರಯ್ಯನವರು ಮೀಸಲಾತಿಯ ವಿರುದ್ಧ ಇದ್ದರು, ಹಾಗಾಗಿ ಅವರನ್ನು ಈಗ ವಿರೋಧಿಸುತ್ತೇವೆ ಎನ್ನುವ ದಲಿತರೂ ಒಂದು ವಿಚಾರವನ್ನು ಮೊದಲು ತಿಳಿದುಕೊಳ್ಳಬೇಕು. ವಿಶ್ವೇಶ್ವರಯ್ಯನವರು ದಲಿತರ ವಿರೋಧಿಯಾಗಿರಲಿಲ್ಲ, ಅವರು ಒಟ್ಟಾರೆ Meritocracy ಪರ, Mediocrity ವಿರುದ್ಧವಾಗಿದ್ದರು. ಅಂದು ನಡೆದಿದ್ದಿಷ್ಟೇ. ಬ್ರಿಟಿಷರು ಭಾರತಕ್ಕೆ ಬಂದ ಪ್ರಾರಂಭದಲ್ಲೇ ಇಂಗ್ಲಿಷ್ ಕಲಿತ ಅಯ್ಯರ್ಸ್, ಐಯ್ಯಂಗಾರ್ಸ್ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸರ್ಕಾರಿ ಹುದ್ದೆಗಳನ್ನು ಆಕ್ರಮಿಸಿಕೊಳ್ಳಲಾರಂಭಿಸಿದರು. ಆದರೆ ತಮಿಳುನಾಡಿನಲ್ಲಿ ಶ್ರೀಮಂತಿಕೆಯಲ್ಲಿ ಪ್ರಬಲವಾಗಿದ್ದವರು ಮೊದಲಿಯಾರ್ಸ್ ಹಾಗೂ ಚೆಟ್ಟಿಯಾರ್ಸ್. ಇವರು ತಮ್ಮ ಪ್ರಭಾವ ಬಳಸಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಉದ್ಯೋಗದಲ್ಲಿ ಮೀಸಲು ಪಡೆಯುವಲ್ಲಿ ಯಶಸ್ವಿಯಾದರು. ಬ್ರಿಟಿಷರ ಅಧೀನದಲ್ಲೇ ಇದ್ದ ಮೈಸೂರು ರಾಜ್ಯದಲ್ಲೂ ಅದೇ ತೆರನಾದ ಬೇಡಿಕೆ ಕೇಳಿಬಂತು. ಹಾಗೆ ಬೇಡಿಕೆ ಇಟ್ಟವರು ದಲಿತರಲ್ಲ, ಇಲ್ಲಿನ ಪ್ರಭಾವಿ ಸಮುದಾಯಗಳಾದ, ಆದರೆ ವಿದ್ಯೆಯಲ್ಲಿ ಹಿಂದಿದ್ದ ಒಕ್ಕಲಿಗರು ಹಾಗೂ ಲಿಂಗಾಯತರು. ಆದರೆ ಮೀಸಲು ನೀಡುವುದಕ್ಕೆ ದಿವಾನರಾದ ವಿಶ್ವೇಶ್ವರಯ್ಯನವರು ವಿರೋಧ ವ್ಯಕ್ತಪಡಿಸಿದರು. ಅವರ ಉದ್ದೇಶವೇನಿ ತ್ತೆಂದರೆ ಆಡಳಿತದಲ್ಲಿ ವಿದ್ಯೆ, ಬುದ್ಧಿಗೆ ಬದಲು ಮೀಸಲು ಮೂಲಕ Mediocrityಗೆ ಅವಕಾಶ ಕೊಟ್ಟರೆ ಹಾಳಾಗುವುದು ಆಡಳಿತಯಂತ್ರವೇ, ಹಾಗಾಗಿ ಹಿಂದುಳಿದವರಿಗೆ ಉಚಿತ ಊಟ, ವಸತಿ, ತರಬೇತಿ, ಶಿಕ್ಷಣ ಕೊಟ್ಟು ಉಳಿದವರ ಜತೆ ಸ್ಪರ್ಧಿಸುವಂತೆ ಮಾಡಿದರೆ ಸಶಕ್ತೀಕರಣವೂ ಅಗುತ್ತದೆ, ಆಡಳಿತವೂ ಚೆನ್ನಾಗಿ ನಡೆಯುತ್ತದೆ. ನಾನಿಲ್ಲಿರುವುದು ಜಾತಿ ಬಲದಿಂದಲ್ಲ, ವಿದ್ಯೆ ಬಲದಿಂದ ಎಂಬ ಸ್ವಾಭಿಮಾನ ಪ್ರತಿಯೊಬ್ಬನಲ್ಲೂ ಮೂಡಬೇಕು ಎಂದು ಮಹಾರಾಜರಿಗೆ ಹೇಳಿದರು. ಆದರೂ ಕೆಲ ಒತ್ತಡಗಳಿಂದಾಗಿ ಮಹಾರಾಜರು ಮಿಲ್ಲರ್ ಸಮಿತಿ ರಚನೆ ಮಾಡಿ, ಅದರ ಶಿಫಾರಸಿಗೆ ಅನುಗುಣವಾಗಿ ಮೀಸಲು ತರಲು ಹೊರಟಾಗ ವಿಶ್ವೇಶ್ವರಯ್ಯನವರು ದಿವಾನ್್ಗಿರಿಗೆ ರಾಜೀನಾಮೆ ಕೊಟ್ಟು ಹೊರಬಂದರು. ಇದರಲ್ಲಿ ಯಾರೋ ಮುನಿಸಿಕೊಳ್ಳುವಂಥದ್ದು, ವಿಶ್ವೇಶ್ವರಯ್ಯನವರನ್ನು ದ್ವೇಷಿಸುವಂಥದ್ದೇನಿದೆ? ಡಾ. ಅಂಬೇಡ್ಕರ್ ಕೂಡ 10 ವರ್ಷಗಳಿಗಷ್ಟೇ ಮೀಸಲು ಕೊಡಬೇಕು ಎಂದಿದ್ದರು. ಅಷ್ಟರೊಳಗೆ ದಲಿತರ ಶ್ರೇಯೋಭಿವೃದ್ಧಿಯಾಗಿ ಎಲ್ಲರ ಜತೆ ಸ್ಪರ್ಧಿಸುವಂತಾಗುತ್ತಾರೆ ಎಂಬುದು ಅವರ ಯೋಚನೆಯೂ ಆಗಿತ್ತು. ವಿಶ್ವೇಶ್ವರಯ್ಯನವರು ಮೀಸಲಿಗೆ ಬದಲು ಅರ್ಹತೆ ಹೆಚ್ಚು ಮಾಡುವತ್ತ ದೃಷ್ಟಿ ಹಾಯಿಸಬೇಕೆಂದು ಪ್ರತಿಪಾದಿಸಿದರು. ಇವರಿಬ್ಬರ ಉದ್ದೇಶವೂ ಒಂದಿಲ್ಲೊಂದು ರೀತಿಯಲ್ಲಿ ಒಂದೇ ಆಗಿತ್ತು. ಮತ್ತೇಕೆ ಅಪಸ್ವರ?

ಇಂತಹ ಮಹಾನ್್ಚೇತನದ ಬಗ್ಗೆ ಕೆಟ್ಟ ಮಾತನಾಡಲು, ಅವರು ಯಾವ ಕೊಡುಗೆಯನ್ನೂ ಕೊಟ್ಟಿಲ್ಲ ಎಂದು ಹೇಳಲು ಇವರಿಗೆ ಮನಸ್ಸಾದರೂ ಹೇಗೆ ಬರುತ್ತದೆ? ಒಬ್ಬ ಕಟುಕ, ದುರುಳನಲ್ಲೂ ಉಪಕಾರ ಸ್ಮರಣೆ, ಕೃತಜ್ಞತೆಗಳಂಥ ಕೆಲ ಒಳ್ಳೆ ಗುಣಗಳನ್ನು ಕಾಣಬಹುದು. ಇಂತಹ ಕನಿಷ್ಠ ಒಳ್ಳೆಯತನಗಳೂ ಇಲ್ಲದ ಭಗವಾನ್್ರಂಥವರನ್ನು ‘ಕೃತಘ್ನರು ಎನ್ನಲು ಮುಲಾಜು ಬೇಕೆ? ಒಬ್ಬ ಆದರ್ಶ ಪುರುಷನಿಲ್ಲದಿದ್ದರೆ ನಾವು ಪ್ರೇರಣೆ ಪಡೆದುಕೊಳ್ಳುವುದಾದರೂ ಯಾರಿಂದ? ವಿಶ್ವೇಶ್ವರಯ್ಯನವರಂತಹ ಆದರ್ಶ ಪುರುಷನ ವ್ಯಕ್ತಿತ್ವಕ್ಕೂ ಮಸಿಬಳಿಯಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳು ಸಮಾಜಘಾತಕರಲ್ಲದೆ ಮತ್ತೇನು? ಈಗ್ಗೆ ತಿಂಗಳ ಹಿಂದಷ್ಟೇ, ‘ವೀರಶೈವ ಭಯೋತ್ಪಾದನೆ’ ಎಂದೆಲ್ಲ ಆಚಾರವಿಲ್ಲದ ನಾಲಗೆ ತೋರಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಪ್ರೊ. ಭಗವಾನ್, ಗೋವಿಂದರಾವ್ ಅಂಥವರಿಗೆ ಸಮಾಜವೇ ಸರಿಯಾದ ಪಾಠ ಕಲಿಸಬೇಕು. ಜತೆಗೆ ಬಸವಣ್ಣನವರ ಮೂಲದ ಬಗ್ಗೆ ಅನ್ಯಥಾ ಬರೆದಾಗ ಸಿಡಿದೇಳುವ ಲಿಂಗಾಯತರು, ಸದಾನಂದಗೌಡರನ್ನು ಕೆಳಗಿಳಿಸುತ್ತೇವೆ ಎಂದ ಕೂಡಲೇ ಪ್ರತಿಭಟಿಸುವ ಒಕ್ಕಲಿಗರು ಹಾಗೂ ಈ ರೀತಿಯ ಜಾತಿ ಮನಸ್ಸುಗಳು ವಿಶ್ವೇಶ್ವರಯ್ಯನವರ ಬಗ್ಗೆ ಕೆಟ್ಟ ಮಾತನಾಡಿದಾಗ ಒಂದು ಸಣ್ಣ ಪ್ರತಿಭಟನೆ ಮಾಡದಿದ್ದುದು, ವಿರೋಧಿಸದಿದ್ದುದೂ ಭಗವಾನರದ್ದಷ್ಟೇ ‘ಕೃತಘ್ನ’ ಕೆಲಸ. ಇಷ್ಟಕ್ಕೂ ವಿಶ್ವೇಶ್ವರಯ್ಯನವರಿಂದ ಅತಿ ಹೆಚ್ಚು ಉಪಕೃತರಾಗಿರುವವರು ಅವರ ಸ್ವಜಾತಿಯವರಿಗಿಂತ ಒಕ್ಕಲಿಗರು, ಲಿಂಗಾಯತರು, ಕುರುಬರೇ ಅಲ್ಲವೇ?

ಇದೇನೇ ಇರಲಿ, ಈ ದೇಶ ತನ್ನ ಸುಪುತ್ರರಿಗೆ ಕೊಡುವ ಅತಿದೊಡ್ಡ ಪುರಸ್ಕಾರ, ಗೌರವ ‘ಭಾರತರತ್ನ’. ಅಂತಹ ಭಾರತರತ್ನ ಪುರಸ್ಕಾರ ಆರಂಭವಾದ ಮರುವರ್ಷವೇ (1955ರಲ್ಲಿ) ನಾಗರಿಕ ಸೇವೆಗಾಗಿ ವಿಶ್ವೇಶ್ವರಯ್ಯನವರಿಗೆ ನೀಡಿದರು. ಒಂದು ವೇಳೆ ಅವರು ಸಂಬಳಕ್ಕಾಗಿ ದುಡಿಯುತ್ತಿದ್ದ ಸಾಮಾನ್ಯ ನೌಕರನಾಗಿದ್ದರೆ ಯಾಕಾಗಿ ಅವರಿಗೆ ಭಾರತರತ್ನದಂಥ ಪುರಸ್ಕಾರ ನೀಡುತ್ತಿದ್ದರು? ಯಾಕಾಗಿ ಪ್ರತಿವರ್ಷ ಸೆಪ್ಟೆಂಬರ್ 15ರಂದು ವಿಶ್ವೇಶ್ವರಯ್ಯನವರ ಜನ್ಮದಿನವನ್ನು ‘ಎಂಜಿನಿಯರ್ಸ್ ಡೇ’ ಎಂದು ಆಚರಿಸುತ್ತಾರೆ?

ಕ್ಷಮಿಸಿ ವಿಶ್ವೇಶ್ವರಯ್ಯನವರೇ, ಚಿರಋಣಿಗಳಾದ ನಾವು ನಿಮ್ಮನ್ನು ಇಂದು ಧನ್ಯತೆ, ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು, ನಿಮ್ಮಂಥ ಚೇತನವೊಂದು ನಮ್ಮ ನಾಡನ್ನು ಬೆಳಗಿತಲ್ಲಾ ಎಂದು ನಮಿಸಬೇಕಿತ್ತು.

ಆದರೆ…

ಆಚಾರವಿಲ್ಲದವರ ಅವಿವೇಕಿ ಮಾತುಗಳ ಹಿನ್ನೆಲೆಯಲ್ಲಿ ನಿಮ್ಮನ್ನು ಸಮರ್ಥಿಸಿಕೊಳ್ಳಬೇಕಾಗಿ ಬಂತು. ಇದೇನೇ ಇರಲಿ, ನಿಮ್ಮಂಥ ಸುಪುತ್ರನಿಗೆ ಜನ್ಮನೀಡಿದ ಈ ನಾಡು ಧನ್ಯ. Happy Engineers’ Day!

44 Responses to “ಏನು ಹೇಳುತ್ತಿದ್ದೀರಿ ಬುದ್ಧಿಜೀವಿಗಳೇ, ಸಂಬಳಕ್ಕಾಗಿ ದುಡಿಯಲು ವಿಶ್ವೇಶ್ವರಯ್ಯನವರೇನು ಕೆಲಸ ಕೇಳಿಕೊಂಡು ಬಂದಿದ್ದರೆ?!”

  1. B prabhu Gulbarga says:

    Great article sir…

  2. prashanth says:

    Nice information. – ಒಳ್ಳೆಯ ವಿಷಯ ತಿಳಿಸಿದ್ದೀರ, ವಿಶ್ವೇಶ್ವರಯ್ಯ ನವರ ಬಗ್ಗೆ ಕೀಳು ಮನೋಬಾವ ಇಟ್ಟುಕೊಂಡವರಿಗೆ ದಿಕ್ಕಾರ ದಿಕ್ಕಾರ ದಿಕ್ಕಾರ….!

  3. praveen says:

    ಅದ್ಭುತವಾಗಿ ಬರೆದಿದ್ದೀರಿ ಪ್ರತಾಪ್ ಅವರೆ…ಇರುವ ಸತ್ಯವನ್ನು ನಿಷ್ತೂರವಾಗೆ ಹೇಳಿದ್ದೀರಿ…ಮೀಸಲಾತಿ ಅಂತ ಬೊಬ್ಬಿಡೊ ಬುದ್ದಿ ಜೀವಿಗಳಿಗೆ ಇದು ಅರ್ಥವಾಗದು…..

  4. VIKAS H C says:

    what a hell he is………. we should throw that person out of karnataka

  5. shruthi says:

    hi,anna…nimma article tumba chennagide…….e prapanchadalli yaru duddu kotro ade mukya,yaru shrama pattu kelsa madidaro avrige bele illa..vishveshwarriha avru krs dam kattisilla andidre namma paristithi anagutithho oosisokollodikku agalla……thanks to vishveshwarriah avrige……..

  6. shruthi says:

    hi,anna…nimma article tumba chennagide…….e prapanchadalli yaru duddu kotro ade mukya,yaru shrama pattu kelsa madidaro avrige bele illa..vishveshwarriha avru krs dam kattisilla andidre namma paristithi anagutithho oosisokollodikku agalla……thanks to vishveshwarriah avrige……..

  7. ASHOK says:

    bhagvan ge thale kettu huchu iddirabeku

  8. Sachin says:

    when i hear that word “buddhigeevigalu” i feel like killing them. and among them some have manged to get “gnanapeeta” award with congress influence.
    If all these were to be in pakistan probably they would have got shot by this time.

  9. Kiran Kumar says:

    Hi Pratap…

    This is first time i am responding to your article, it’s simply good. Sir M.V is the Greatest Scientiest , we proud to say that Sir MV is an indian.

    Kiran

  10. Hi Pratap…

    This is first time i am responding to your article, it’s simply good. Sir M.V is the Greatest Scientiest , we proud to say that Sir MV is an indian.

    Kiran

  11. vinay says:

    Dear Mr.Pratap,
    Thanks a million for the article. There is no way by which, we people of this state in particular and country in general can ever thank this great soul called Sir.MV for his contributions and nation building. I believe if one person whom today’s generation can look upto for inspiration is Sir MV.
    It is said that when Bharath Rathna award to Sir MV was announced, he took a promise from then Prime minister, Nehru that he would not be expected to praise Nehru Govt. for their award and only when Nehru agreed to that, Sir MV accepted the award. That was the height he scaled, to say the least.
    I remember an article of yours which appeared a few years ago, where you had argued that Sir MV’s name be given to Bangalore Int. airport. I think that is the one small way by which we can honor him. Unfortunately that also has not happened yet.

  12. Maheshwari BM says:

    Hi pratap,

    Thanks for remembering the great work and service of Sir M Visvesvaraya to our people.

  13. premraj says:

    its nice sir

  14. Pradeep says:

    We should always be grateful to Sir M Vishweshwaraiha…no body is eligible to talk about SMV…down down Bhagawan and Bahujan Samaj party low class student organization

  15. Sudheer says:

    Dear Prathap, I went through this article and felt that if anybody targets Sir MV only because he was a brahmin. You know all the evil things of this society points the actual weaker section Brahmins. They neither protest nor reacts for whatever comments anybody passes on them. I feel many times that the good things done to this socienty and motherland is not considered. Even I know that being a brahmin if I comment on such an issue it becomes communal but if the same is done by any other person of other community do not bother anybody. Fate of our people…….. Fed up in such a where we can’t react for anything.

  16. prashant reddy says:

    bhagavan tele ketu erabeku avangi bere yaaru sikila ant kanute viroda madodake. kilmatad aalochane maadodu bitu student ge paatamaadi ela andre yavadadre huchha hospital ge hogi treatment togoli.

  17. Prashanth S says:

    Greatness of great man is not understood by a Prof. Bhagavan. Very Good teaching for common sense less people.

    Namma deshadalli yaru thamashege bharatha rathna kodalla.

    Thanks Pratap.

  18. Kartikeya says:

    Guys go through this nice documentory on Sir MV in youtube:
    http://www.youtube.com/watch?v=f1LbPgeTekw&feature=related

  19. Kumar Kanchan says:

    Thanks prathap simhare,

  20. Lalitha s chavan says:

    Super sir,
    Nice and very interesting article

  21. VIKAS H C says:

    yaru ri bhagvan andre avn mail ID yaradru kodtira,
    Stupids………. we should kill thhis blasterds

  22. Anand says:

    Very good article…ur article gave deep incite abt gr8 statesmen india ever seen i.e sir MV,,,he is a real BHARAT RATNA…

  23. Guru Kanti says:

    very suitable words you used about mr s k bhagwan……….

    it is the article should be read by every indian..

  24. Satish.dasar. says:

    Thank you sir, what an information. That’s why British gave him “SIR” Honour.
    But today let him be school teacher or college lecturer everybody is SIR, MAY BE THAT’S THE REASON, THINKING HE(SIR M.V.) WAS ALSO LIKE US LETS have a chance
    This so called professor(Because of seniority, not for good research) Bhagvan showed what knowledge he got about KARNATAKA BUILDERS. It was time that these people became professors many students started to believe them self as Einstein, sir MV, its all because of these gays. any way Many many Thanks for kicking their ass.

  25. shoban says:

    he is real legend for india sr mv is great

  26. Sowmya says:

    Nice and interesting article, i got to know many things from this article, i’m proud to be an Engineer

  27. GaneshBabu R says:

    Hi Sir,
    Thank you for your precious article,

  28. Jaikumar says:

    Very Very good information…… Thanks Pratap sir, also that Badavan wont eat food and he wont drink water it seems…… its safe us to show that Bagavan is professor.

  29. ಜಗದೀಶ ಪಸ್ಪೂಲ್ ಯಾದಗಿರಿ says:

    ಕನ್ನಡಿಗರಾದ ನಾವೇ ಭಗವಾನರ ವರಿಗೆ ದೇವರು ಓಳ್ಳೆಯ ಬುಧ್ಧಿ ಕೊಡಬೆಕೆಂದು ಬೆಡಿಕೋಳ್ಳಬೆಕಷ್ಠೆ

    ತುಂಬಾ ಚೆನ್ನಾಗಿ ಬರೆದಿದ್ದಿರಾ ಸರ್ ಇದನ್ನು ಓದಿದ ಮೆಲಾದ್ರು ಬುಧ್ಧಿ ಬರಲಿ

  30. ವೆ೦ಕಿ, ಬೆ೦ಗಳೂರು says:

    ಪ್ರಿಯ ಪ್ರತಾಪ್, ಅಧ್ಬುತ ಲೇಖನ. ಇ೦ಥಹಾ ದೈರ್ಯದ ಲೇಖನ ಓದಲು ನಿಜಕ್ಕೂ ಸ೦ತಸವೆನಿಸುತ್ತದೆ.
    ಪ್ರತೀವಾರ ಬಿಡದೇ ಓದುವ ನಿಮ್ಮ ಈ ಲೇಖನ ಹೇಗೆ ತಪ್ಪಿಹೋಯಿತೋ ಗೊತ್ತಾಗುತ್ತಿಲ್ಲ.
    ಈ ಭಗವಾನ್, ಜಿ.ಕೆ. ಗೋವಿ೦ದನ ತುಚ್ಚ ನಾಲಗೆಗಳು ಸ೦ಸ್ಕಾರ, ಆಚಾರವಿಲ್ಲದ್ದು. ಇಬ್ಬರೂ ಅನ್ನವನ್ನು ತಿನ್ನುವುದು ಅನುಮಾನ, ಹೊಲಸು ತಿ೦ಬವರು…

    ಇರಲಿ, ಶ್ರೀ ಭೈರಪ್ಪನವರು ಹೇಳುವ೦ತೆ ಹೊಲಸು ತಿನ್ನಲು ಇ೦ಥಾ ಎಸ್ ಕೆ. ಭಗವಾನ್ ಹ೦ದಿಗಳೂ ಬೇಕು. ಆ ಜಿ.ಕೆ. ಗೋವಿ೦ದನ ಪರವಾಗಿ ವಿಜಯಾ ಕಾಲೇಜಿನ ವಿಧ್ಯಾರ್ಥಿಗಳು ಹೇಗೆ ಸ್ಟ್ರೈಕ್ ಮಾಡುತ್ತಾರೋ ಅರ್ಥವಾಗದ ವಿಷಯ (ಮಾರ್ಕ್ಸ್ ಗಾಗೇ?). ಅವನೊಬ್ಬ ಗಬ್ಬೆದ್ದು ಹೋದವ. ಸಾಯಲಿ ಬಿಡಿ. ಈ ಗ್ಯಾ೦ಗು ದೊಡ್ಡದಿದೆ.
    ಈಗ ಜೈಲು ಕ೦ಬಿ ಎಣಿಸಲು ಸಿದ್ಧನಾಗಿರುವ ಕೊಳೆಗೇರಿ, ನಕ್ಸಲ್ ನಾಯಕಿ ಕಪಿತಾ ಲ೦ಪೇಶ, ಉ೦ಡ ಮನೆಗೆ ಎರೆಡು ಬಗೆಯೋ ಅನ೦ತವಾದ ಯೂರಿಯಾ ಮೂರ್ತಿ, ಕಾರ್ನಾಡಿನಿ೦ದ ದಿಕ್ಕೆಟ್ಟು ಹೋದ ಭಾರೀ ನಾಟಕಕಾರ, ಅಗ್ನಿಯ ಹೆಸರನ್ನು ಹಾಳುಮಾಡುವ ಕ್ವಾ೦ಟಮ್ ಸಿದ್ದಾ೦ತಿ, ಹೆಸರಿಗೆ ತಕ್ಕವನಲ್ಲದ ಕಿರೇಮಠ, ಮಾನವ ಹಕ್ಕುಗಳೆ೦ದರೆ ಕಾ೦ಗ್ರೆಸ್ ನವರಿಗೆ ಮಾತ್ರ ಮೀಸಲು ಎ೦ದು ತಿಳಿದಿರುವ ಟುಸ್ಸಾರ್ ನಾಯಕ, ಮುಪ್ಪಾದರೂ ಇನ್ನೂ ಸಣ್ಣ ಮಗುವಿನ ಹೆಸರನ್ನು ಇಟ್ಟುಕೊ೦ಡಿರುವ ಪಾಪಿ….ಇನ್ನೂ ಇ೦ಥವೇ ಹಲವು ಮತ್ತು ಇವರ ಚೇಲಾಗಳು. ಇವರಿ೦ದ ಕನ್ನಡನಾಡಿಗೆ ಯಾವಾಗ ಮುಕ್ತಿ ಸಿಗುತ್ತದೋ ಗೊತ್ತಿಲ್ಲ.
    ಆಗಲಿ, ಊರಿದ್ದಲ್ಲಿ ಹೊಲಗೇರಿಯ೦ತೆ ಇವರ ಇರವನ್ನು ತಡೆಯಲಾದೀತೇ?.

    ಕನ್ನ೦ಬಾಡಿ ಆಣೆಕಟ್ಟಿಗೆ ಸ೦ಬ೦ಧ ಪಟ್ಟ೦ತೆ ಇನ್ನೊ೦ದು ಅ೦ಶ: ನೀವು ಹೇಳಿದಹಾಗೆ, ಕನ್ನ೦ಬಾಡಿ ಕಟ್ಟುವಾಗ ವಿಶ್ವೇಶ್ವರಯ್ಯನವರಿಗೆ ಮದರಾಸು ಅಯ್ಯರ್ ಗಳಿ೦ದ ಭಾರೀ ಪ್ರತಿರೋಧ ಬ೦ದಿತು. ಆಗ ಮೈಸೂರಿನ ನಿರ್ಧಾರಗಳೆಲ್ಲಾ ಮದರಾಸಿನಲ್ಲಿ ಆಗುತ್ತಿತ್ತು. ಮೈಸೂರಿನ ಪರವಾಗಿ ವಿಶ್ವೇಶ್ವರಯ್ಯರೊಬ್ಬರೇ ಹೋರಾಡಬೇಕಿತ್ತು, ಪ್ರಖ್ಯಾತ ಲಾಯರ್ ಗಳೆಲ್ಲಾ ಮದ್ರಾಸಿನವರಾಗಿದ್ದರು. ಹಾಗಾಗಿ ಕಟ್ಟೆಯನ್ನು 90ಅಡಿ ಎತ್ತರಕ್ಕೆ ಮಾತ್ರ ಕಟ್ಟಲು ಅನುಮತಿ ಇತ್ತು. ನಮ್ಮ ವಿಶ್ವೇಶ್ವರಯ್ಯನವರು ಸಮರ್ಥವಾಗಿ ವಾದವನ್ನು ಮಾಡುತ್ತಾ, ಕೈಕೆಳಗಿನ ಇ೦ಜಿನಿಯರುಗಳು ಭಯದಿ೦ದ ಹಿ೦ಜರಿದರೂ, ಬ್ರಿಟಿಶರಿಗೆ/ಮದ್ರಾಸಿನವರಿಗೆ ಕಣ್ಣಿಗೆ ಮಣ್ಣೆರಚಿ ಭಾರೀ ವಿರೋಧದ ನಡುವೆಯೂ 120 ಅಡಿಯವರೆಗೂ ಕಟ್ಟಿ ಅ೦ತಿಮವಾಗಿ 124 ಅಡಿಗೂ ಏರಿಸಿ ಬಿಟ್ಟರು. ಕೆಲಸ ಮುಗಿದಮೇಲೆ ಒಡೆಯಲಾದೀತೇ? ಈ ಅಮೂಲ್ಯ ಕೆಲಸವಾಗುವಾಗ ವಿಶ್ವೇಶ್ವರಯ್ಯನವರು ಕೆಲಸ ಹೋಗಬಹುದೆ೦ದೂ ಲೆಕ್ಕಿಸಲಿಲ್ಲ. ಇದರಿ೦ದಾಗಿ ಬರಡುಭೂಮಿಯಾಗಿದ್ದ ಮ೦ಡ್ಯ/ಹಳೇಮೈಸೂರು ಭಾಗದ ಜನರ ಹೊಲಗಳನ್ನು ಬ೦ಗಾರವಾಗಿಸಿದರು.
    ಆದ್ದರಿ೦ದಲೇ ಈ ಭಾಗದ ರೈತರು ಎ೦ದಿಗೂ ವಿಶ್ವೇಶ್ವರಯ್ಯನವರನ್ನು ಮರೆಯಲಾರರು, ಅಲ್ಲಿ ಪ್ರತಿಯೊಬ್ಬರ ಮನೆಗಳಲ್ಲಿ ವಿಶ್ವೇಶ್ವರಯ್ಯನವರ ಫೋಟೋ ಇದೆ, ಅವರಿಗೆ ವಿಶ್ವೇಶ್ವರಯ್ಯನವರು ದೇವ ಸಮಾನ. ಇದೆಲ್ಲಾ ಆ ತಿಕ್ಕಲು ಭಗವಾನನಿಗೆ ಹೇಗೆ ಅರ್ಥವಾಗ ಬೇಕು?

  31. sudeesh says:

    really grate man

  32. chooti says:

    ys ….kannadamathe is crying in the eve of kannada rajyotsava…that..matte kaanalilla nanna makkalalli illiyavaregu nanna vishveshwarayyanannu

  33. Gagan Nanjappa says:

    Hi Prathap Sir,

    superb sir

  34. Shiva says:

    Just superb.

  35. Venkatesh jambagi says:

    pratapaji..
    buddijeevigalu anisikondavaru atiyada janatana torisalu hogi samajada mahan ratnagalige maduttiruv avamanavannu kandisuvadar jotege nammanta asnkyat odugarige tilisaddakke dhanyavadagalu

    keep moving with ur aims and visions..

    we are always with u

    jai bhata mate….

  36. DAYANANDA says:

    ಕೇವಲ ಬಾಯಿ ಚಪಲ ಮತ್ತು ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುವ ಇವರು ವಿಶ್ವೇಶ್ವರಯ್ಯ ನವರ ಪ್ರಾಮಾಣಿಕತೆ ಮತ್ತು ದಕ್ವತೆ ಬಗ್ಗೆ ಗೂತ್ತಿಲ್ಲದ ಗುಬಾಲ್ ಗಳು

  37. Umesh says:

    Hi very we’ll articulated… Keep going…

  38. Mahesh ,T says:

    Pratap sir,
    Nimma e lekhan odi tumba khushi ayitu , adare dhukka kooda ayitu, ವೆ೦ಕಿ, ಬೆ೦ಗಳೂರು avaru helidante avaru ade jaatige seridavaru, ene agali ‘pratap sir’ innu munde adaru avaru buddhi jeevigalagali ! , lekhan barediddakke dhanyavada
    naavu sir’ M V , avarige chiraruni agirona,

    mahesh,t

  39. PRASAD says:

    PEPOLE OF MANDYA MYSORE BANGALORE HAVE TO KILL THOSE BLOODY IDIOTS . I FEEL PEOPLE FROM THIS REGION HAS TO WORSHIP SIR M. V , HE IS LIKE A GOD FOR THEM .I DONT KNOW WHY THESE PEOPLE ARE KEEPING QUIET. OR I DONT KNOW WHETHER THEY HAVE FORGOT HIM. REALLY A BAD THING .

  40. Naresha Babu says:

    Hi Pratap,

    Wonderful article. Bhagavn, better to revisit your comments.
    As student of Prof. K.S. Bhagavan, I had great respect for him until I have seen this article. It is unfortunate to see such comment by Bhagavan, Why people always play their cast card to seek the popularity among their cast. It is better to understand that Sir M.V was Visionary and he was well aware that the reservation policies will further split the society and will not lead the ultimate goal of creating balanced society which we are witnessing now.

    Naresha

  41. jeevappa pujar bagalkot says:

    Hi Prathap anna tumba chennagi baredidira. Bagavan buddigedi. Avnu hottege en tinbardo adna tintane. En kudibardo adna kuditane. Doddora bagge matadbekadre avra bagge tilkondu matado samanya dnyana kooda illa aa tikal bagvange. Kattegenu gottu kasturi parimala andange e huchhanige(KATTE) en gottu SMV AVRA BAGGE.

  42. RAJU says:

    Eshtondu kelas keval vabba vektiyinda aaglu khandita asadya. HATS OF SIR.V.V.

  43. Ajay says:

    Good Job!

  44. Ram# says:

    Nice article