Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಒಳ್ಳೆಯ ಚಿತ್ರವಾಗುವುದು ಸ್ವಲ್ಪದರಲ್ಲೇ ತಪ್ಪಿತಲ್ಲಾ ಎಂಬ ಬೇಸರ!

ಒಳ್ಳೆಯ ಚಿತ್ರವಾಗುವುದು ಸ್ವಲ್ಪದರಲ್ಲೇ ತಪ್ಪಿತಲ್ಲಾ ಎಂಬ ಬೇಸರ!

ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ

ಕಡಲು ಕರೆದಂತೆ ನದಿಯನು ಭೇಟಿಗೇ

ಯಾರು ಬಂದಿರದ ಮನಸಲಿ… ನಿನ್ನ ಆಗಮನ ಈ ದಿನ…

ನೀಡುವ ಮುನ್ನ ನಾನೆ ಆಮಂತ್ರಣಾ.

                 ಹಾಗೂ

ಸಂಜು ಮತ್ತು ಗೀತಾ ಸೇರಬೇಕು ಅಂತ

ಬರೆದಾಗಿದೆ ಇಂದು ಬ್ರಹ್ಮನು

ನನ್ನ ಜೀವನಕ್ಕಿಂತ… ನೀನೆ ನನ್ನ ಸ್ವಂತ..

ಇಂತಹ ಲಿರಿಕ್ಸ್, ಅದಕ್ಕೆ ಸೋನು ನಿಗಮ್ ಹಾಗೂ ಶ್ರೇಯಾ ಘೋಶಾಲ್ ಅವರ ಮಧುರ ಕಂಠ ಸೇರಿದರೆ ಕಿವಿಗೆ ಇಂಪಾಗದೆ ಇರಲು ಸಾಧ್ಯವೆ? ಈ ಎರಡೂ ಗೀತೆಗಳು ಎಫ್್ಎಂ ಹಾಗೂ ಟಿವಿಯಲ್ಲಿ ಬಂದಾಗಲೆಲ್ಲ ‘ಸಂಜು weds ಗೀತಾ’ ಚಿತ್ರವನ್ನು ನೋಡಲೇಬೇಕೆನಿಸುತ್ತಿತ್ತು. ಇತ್ತೀಚೆಗೆ ತೀವ್ರ ವಿವಾದದಲ್ಲಿ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ, ‘ಸಂಜು weds ಗೀತಾ ಚಿತ್ರ ನಿಜಕ್ಕೂ ಚೆನ್ನಾಗಿದೆ. ಅದನ್ನು ಪ್ರಮೋಟ್ ಮಾಡ್ತೀನಿ’ ಅಂತ ರಮ್ಯಾ ಕೂಡ ಹೇಳಿದ್ದರು. ಯುಟ್ಯೂಬ್್ನಲ್ಲಿ ತಡಕಾಡಿದಾಗಲೂ ಒಂದೊಂದು ಹಾಡಿಗೂ ಒಟ್ಟಾರೆ ತಲಾ ಲಕ್ಷಕ್ಕೂ ಹೆಚ್ಚು ಹಿಟ್ ಗಳಿದ್ದವು. ಜತೆಗೆ ಸತ್ಯ ಹೆಗಡೆಯವರ ಸಿನೆಮಾಟೋಗ್ರಫಿ ಅಷ್ಟೇ ಆಕರ್ಷಕವಾಗಿ ಕಾಣುತ್ತಿತ್ತು. ಯಾವ ಪ್ರೇಮಿಯಾದರೂ ಸರಿ, ಥಿಯೇಟರ್ ಗೆ ಹೋಗಬೇಕು ಎಂದನಿಸಲು ಅಷ್ಟು ಸಾಕಿತ್ತು. ಅಂತೆಯೇ ಯುಗಾದಿ ಹಬ್ಬದ ರಜೆಯ ನೆಪದಲ್ಲಿ ಥಿಯೇಟರನಲ್ಲಿ ಕುಳಿತಾಗ, ‘ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ’ ಹಾಡಿನ ಅಗಮನಕ್ಕಾಗಿ ಮನಸ್ಸು ಹಾತೊರೆಯಲು ಆರಂಭಿಸಿಯೇ ಬಿಟ್ಟಿತು. ಆ ರೇಡಿಯೋ, ಅದರಲ್ಲಿ ಬಿತ್ತರವಾಗುತ್ತಿದ್ದ ಶಂಕರ್ ನಾಗ್ ಅವರ ‘ಗೀತಾ’ ಚಿತ್ರದ ‘ಹಾಯ್ ಗೀತಾ…’ ಎಂಬ ಆಹ್ವಾನ, ಧೋ ಸುರಿಯಲು ಅನುವಾಗುತ್ತಿದ್ದ ಮಳೆಯೊಂದಿಗೆ ಆರಂಭವಾಗುವ ಚಿತ್ರ, ಪ್ರಾರಂಭದಲ್ಲೇ ಆಸಕ್ತಿ ಕೆರಳಿಸಿದ್ದಂತೂ ನಿಜ. ಇನ್ನೂ ಲೈವ್ಲಿಯಾಗಿ ಮಾಡಬೇಕಿತ್ತು, ಸಿಲ್ಲಿತನ ಒಂದಿಷ್ಟು ಕಡಿಮೆಯಾಗಬೇಕಿತ್ತು, ಮನಸು-ಹೃದಯಕ್ಕೆ ನಾಟುವಂಥ ಒಂದಷ್ಟು ಡೈಲಾಗ್್ಗಳಿರಬೇಕೆಂದು ಬಲವಾಗಿ ಅನಿಸಿದರೂ ಫಸ್ಟ್ ಹಾಫ್ ಹೇಗೋ ಸಾಗಿ ಬಿಡುತ್ತದೆ. ದ್ವಿತಿಯಾರ್ಧದಲ್ಲಿ ಕಥೆಗೆ ಯಾವುದಾದರೂ ತಿರುವು ಸಿಗಬಹುದಾ ಎಂಬ ಕುತೂಹಲವೂ ಮೂಡುತ್ತದೆ.

ಆದರೆ…

‘ಸಂಜು ಮತ್ತು ಗೀತಾ ಸೇರಬೇಕು ಅಂತ’ ಹಾಗೂ ‘ರಾವಣ ಸೀತೇನ್ ಕದ್ದ’ ಎಂಬ ಹಾಡುಗಳು, ಜೈಲಿನ ಸನ್ನಿವೇಶ ಹಾಗೂ ಕೆಲ ಡೈಲಾಗ್್ಗಳು ಕಥೆಯಲ್ಲಿನ ಕೊರತೆಗೆ saving graceನಂತೆ ಕಾಣಿಸುತ್ತವಷ್ಟೇ. ಥಿಯೇಟರ್್ನಿಂದ ಹೊರಬರುವಾಗ ಆ ಪ್ರೇಮಿಗಳಿಗೆ ಅಂತಹ ಕೊನೆ ಬರಬಾರದಿತ್ತು, ಛೇ ಎಂಬ ಭಾವನೆ ಮೂಡುವಂತೆ ಮಾಡಿದ್ದರೆ ಖಂಡಿತ ಅದೊಂದು ಒಳ್ಳೆಯ ಸಿನೆಮಾವಾಗಿ ಬಿಡುತ್ತಿತ್ತು. ಆರಂಭದ ದೃಶ್ಯದಲ್ಲಿ ಬಹಳ ಪ್ರಾಮಿಸಿಂಗ್ ಆಗಿ ಕಾಣುವ ನಿರ್ದೇಶಕ ನಾಗಶೇಖರ್ ಅವರ ಕೈಚಳಕ ಚಿತ್ರ ಮುಂದುವರಿದಂತೆ ಏಕೆ ಪೇಲವವಾಗುತ್ತಾ ಹೋಗುತ್ತದೆ? ಅಪ್ರಾಪ್ತ ವಯಸ್ಸಿನಲ್ಲಿ ತನ್ನ ಮೇಲಾದ ಬಲಾತ್ಕಾರವನ್ನು ಗೀತಾ ತನ್ನ ಇನಿಯನಲ್ಲಿ ಮನಬಿಚ್ಚಿ ಹೇಳಿಕೊಂಡಿದ್ದೇನೋ ಸರಿ. ಆದರೆ, ಅಪ್ಪ-ಅಮ್ಮ ಆಟ ಅಂತೆಲ್ಲ ಸೆಕ್ಸನ್ನು ಹಸಿ ಹಸಿಯಾಗಿ ವಿವರಿಸಲು ಹೊರಟಿದ್ದೇಕೆ? ಮಕ್ಕಳ ಜತೆ ಕುಟುಂಬ ಸಮೇತ ಚಿತ್ರ ವೀಕ್ಷಿಸಲು ಬಂದವರಿಗೆ ಅಂತಹ ದೃಶ್ಯಗಳಿಂದ ಕಿರಿಕಿರಿಯಾಗುವುದಿಲ್ಲವೆ? ಆಕೆಯ ಮೇಲಾದ ಬಲಾತ್ಕಾರದ ಬಗ್ಗೆ ಸೂಚ್ಯವಾಗಿ ಹೇಳಿ ಜನರ ಮನ ಕರಗುವಂತೆ ಮಾಡುವ ಬದಲು ವರ್ಣಿಸಲು ನಿಂತು, ಮನಸ್ಸಿಗೆ ಕಿರಿಕಿರಿ ಮಾಡಲು ಹೊರಟಿದ್ದೇಕೆ, ಸಭ್ಯವೆನಿಸುವ ಪುನೀತ್ ರಾಜ್್ಕುಮಾರ್ ಚಿತ್ರಗಳನ್ನು ಇಲ್ಲಿ ಗಮನವಿಟ್ಟುಕೊಳ್ಳಬಹುದಿತ್ತಲ್ಲವೆ? ಇಂತಹ ಪ್ರಶ್ನೆಗಳು ಕಾಡುತ್ತವೆ. ಇತ್ತೀಚಿನ ಜಾಕಿ ಚಿತ್ರದಲ್ಲಿ ಹೆಣ್ಣುಮಕ್ಕಳ ಮಾರಾಟದ ಕಥೆಯಿದ್ದರೂ ನಿರ್ದೇಶಕ ಸೂರಿ ಅಂದುಕೊಂಡಿದ್ದ ಕೆಲವು ಹಸಿಹಸಿ ಕಲ್ಪನೆಗಳಿಗೆ, ಅದು ನಮ್ಮ ಪ್ರೇಕ್ಷಕರಿಗೆ ಅಪಥ್ಯ ಎಂಬ ಕಾರಣಕ್ಕಾಗಿ ಕತ್ತರಿ ಹಾಕಲಾಯಿತು ಎಂಬುದು ಇಲ್ಲಿ ಗಮನಾರ್ಹ.

ಆದರೆ ಅದಾದ ನಂತರವೂ, ಅಂಥ ಸೂಕ್ಷ್ಮ ವಿಷಯಕ್ಕೆ ಸಂವೇದನೆ ತೋರಿಸುವಷ್ಟರಲ್ಲೇ ಇನ್ನೊಂದು ದುರಂತ ಎದುರಾಗುವುದರಿಂದ ಪ್ರೇಕ್ಷಕ ಕೈಚೆಲ್ಲುತ್ತಾನೆ. ಚಿಕ್ಕವಯಸ್ಸಿನಲ್ಲಿ ನಡೆದ ಅಪ್ಪ ಅಮ್ಮನ ಆಟ, ಒಂದೆರಡು ಕ್ಷಣಗಳಲ್ಲೇ ನಾಯಕಿಯ ಮದುವೆಯ ಸಂದರ್ಭದಲ್ಲಿ ಅವಳ ಬಲಾತ್ಕಾರದ ರೂಪದಲ್ಲಿ ಕಾಣಿಸಿಕೊಂಡು, ಮಧ್ಯಂತರದ ಹೊತ್ತಿಗೆ ರಸ್ತೆಯ ಮಧ್ಯದಲ್ಲೇ ನಾಯಕ ಕೊಲೆ ಮಾಡುವ ದೃಶ್ಯ ನೋಡಿದ ಕೂಡಲೇ, ಕನಿಷ್ಠ ಪಕ್ಷ ಅನುಭವಿ ಪ್ರೇಕ್ಷಕರಿಗೆ ಈ ಚಿತ್ರದ ಅಂತ್ಯ, ದುರಂತದಲ್ಲೇ ಎಂಬ ಜ್ಞಾನೋದಯವಾಗಿಬಿಡುತ್ತದೆ. ಅದು ನಿರ್ದೇಶಕರ ಸಾಮರ್ಥ್ಯ ದುರ್ಬಲವಾಗುವ ಕ್ಷಣ. ಬಲಾತ್ಕಾರಕ್ಕೊಳಗಾದ ನಾಯಕಿಯ ಕಥೆಗೆ ಸುಖಾಂತ್ಯ ಒದಗಿಸುವ ಧೈರ್ಯ ನಿರ್ದೇಶಕರಿಗಿಲ್ಲ, ಅದನ್ನು ಒಪ್ಪಿಕೊಳ್ಳುವ ಧೈರ್ಯ ಪ್ರೇಕ್ಷಕರಿಗೂ ಇರುವುದಿಲ್ಲ. ಅದು ಸಹಜ. ಅಂಥ ಕ್ರಾಂತಿಕಾರಿ ಮನೋಭಾವವನ್ನು ಒಂದೇ ಸಲಕ್ಕೆ ದೊಡ್ಡ ಮಟ್ಟದಲ್ಲಿ ತೋರಿಸುವುದು ಕಷ್ಟವಾದರೂ, ನಾಯಕಿಯ ಮೇಲಿನ ದೌರ್ಜನ್ಯವನ್ನು ಅಪ್ಪ ಅಮ್ಮನ ಆಟಕ್ಕೆ ಸೀಮಿತಗೊಳಿಸಿದ್ದಿದ್ದರೆ, ಕನಿಷ್ಟ ಸಣ್ಣ ಮಟ್ಟದಲ್ಲಿ ಅಂಥದೊಂದು ಸುಖಾಂತ್ಯ ಕೊಡುವ ಎಲ್ಲ ಅವಕಾಶಗಳೂ ನಾಗಶೇಖರಗಿದ್ದವು.

ಜೈಜಗದೀಶ್, ಸುಹಾಸಿನಿಯಂತಹ ನಟರನ್ನು ಇನ್ನೂ ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಿತ್ತು, ಅಪ್ಪ-ಅಮ್ಮನಾಗಿ ಅವರು ಸ್ಪಂದಿಸುವ ಪರಿಯನ್ನು ಅರ್ಥಪೂರ್ಣ ಸಂಭಾಷಣೆಗಳ ಮೂಲಕ ಹಿಗ್ಗಿಸಿ, ಖ್ಯಾತ ಹಿಂದಿ ಚಿತ್ರ ‘ಕ್ಯಾ ಕೆಹ್ನಾ’ದಲ್ಲಿದ್ದ ದೃಷ್ಟಿಕೋನದೊಂದಿಗೆ, ಕಥೆಗೆ ಬೇರೆ ರೀತಿಯ ಕ್ಲೈಮ್ಯಾಕ್ಸ್ ಕೊಡಬಹುದಿತ್ತೇನೋ? ಎಂದನಿಸುತ್ತದೆ.

ಬಲಾತ್ಕಾರದಲ್ಲಿ ಗರ್ಭ ಪಡೆದ ಶಿಶು ಹುಟ್ಟುವಾಗಲೇ ಸಾವಿಗೆ ಬಲಿಯಾಗಿದ್ದು, ನಾಯಕ-ನಾಯಕಿಗಾದ ಗತಿ, ಎಲ್ಲೋ ಒಂದು ಕಡೆ Mindless Killing ಎನಿಸಿ ಬಿಡುತ್ತದೆ, ದ್ವಿತೀಯಾರ್ಧದಲ್ಲಿನ ನಿರ್ದೇಶಕರ ದೃಷ್ಠಿಕೋನದಿಂದಾಗಿ ಅವರ ಉದ್ದೇಶ ಸಾಯಿಸುವುದೇ ಆಗಿದ್ದರೂ ‘ಖಯಾಮತ್ ಸೆ ಖಯಾಮತ್ ತಕ್ ನಂತಹ ಹೃದಯ ಕಲಕುವ ಕ್ಲೈಮ್ಯಾಕ್ಸ್ ಬೇಕಿತ್ತು ಎಂಬ ಭಾವನೆ ಮೂಡುತ್ತದೆ. ನಾಯಕ ನಾಯಕಿ ಸತ್ತುಬಿದ್ದಿದ್ದಾಗ ಚಿತ್ರ ಮುಗಿದರೆ, ಚಿತ್ರ ಎಷ್ಟೇ ಅದ್ಭುತವಾಗಿದ್ದರೂ ಯಾವ ಸಹೃದಯಿ ಪ್ರೇಕ್ಷಕನೂ ಎದ್ದು ‘ಬ್ಯೂಟಿ’ ಎಂದು ಕೂಗಲಾರ. ಅದೇನಿದ್ದರೂ ಮೊದಲ ದಿನದ, ಮೊದಲ ಪ್ರದರ್ಶನದ ಪ್ರಾಯೋಜಿತ ಅಭಿಮಾನಿಗಳಿಗಷ್ಟೇ ಸಾಧ್ಯ. ಅದು ನಾಗಶೇಖರ್್ಗೆ ಗೊತ್ತಿರದ ವಿಷಯವೇನಲ್ಲ.

ಮಿಗಿಲಾಗಿ, ನಮ್ಮ ಕನ್ನಡದ ಜನ ತಮಿಳು ಹಾಗೂ ಅನ್ಯ ಭಾಷಿಕರಂಥಲ್ಲ, ದುರಂತ ಅಂತ್ಯವನ್ನು ಒಪ್ಪಿಕೊಳ್ಳುವುದು ತುಂಬಾ ವಿರಳ. ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಶಾಪ’ದಂತಹ ಒಂದು ಒಳ್ಳೆಯ ಚಿತ್ರವನ್ನೇ ಫ್ಲಾಪ್ ಮಾಡಿ ಬಿಸಾಕಿದ್ದರು. ಇದೇನೇ ಇರಲಿ, ‘ಒಲವೇ ಮಂದಾರ’ದ ನಂತರ ಈ ಚಿತ್ರ ಜನ ಮತ್ತೆ ಥಿಯೇಟರ್ ಕಡೆಗೆ ಮುಖ ಮಾಡುವಂತೆ ಮಾಡಿರುವುದನ್ನು ಖಂಡಿತ ಒಪ್ಪಲೇಬೇಕು. ಚಿತ್ರ ಹಿಟ್ ಆಗುವುದೂ ಖಂಡಿತ. ಆದರೆ, ಒಂದು ಚಿತ್ರ ಸೂಪರ್್ಹಿಟ್ ಎನಿಸಿಕೊಳ್ಳಬೇಕಾದರೆ ಪ್ರೇಕ್ಷಕರು ಮತ್ತೆ ಮತ್ತೆ ಥಿಯೇಟರ್ ಗೆ ಬರುವಂತೆ ಮಾಡಬೇಕು. ಹಾಗಾಗಬೇಕಾದರೆ ಚಿತ್ರದಲ್ಲಿ ಪಾಸಿಟಿವ್ ವೈಬ್ರೇಷನ್್ಗಳಿರಬೇಕು. ಇಲ್ಲದಿದ್ದರೆ ಪ್ರಾರಂಭಿಕ ಒಂದೆರಡು ವಾರ ಹಣಗಳಿಸಿ, ಪರವಾಗಿಲ್ಲ ಎನಿಸಿಕೊಂಡು ನೆನಪಿನಾಳದಿಂದ ಮರೆಯಾಗಿಬಿಡುತ್ತವೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಒಂದು ಒಳ್ಳೆಯ ಸಿನೆಮಾವಾಗಲು ಬೇಕಿದ್ದ ಎಲ್ಲ ಅಂಶಗಳನ್ನೂ ಹೊಂದಿದ್ದ ಹಾಗೂ ಸೂಪರ್್ಹಿಟ್ ಚಿತ್ರವಾಗುವ ಎಲ್ಲ ಸಾಧ್ಯತೆ ಹೊಂದಿದ್ದ ‘ಸಂಜು weds ಗೀತಾ’ ಏಕೆ ಸ್ವಲ್ಪದರಲ್ಲಿಯೇ ಎಡವಿತು? ಎಂಬ ಬೇಸರ ಥಿಯೇಟರ್್ನಿಂದ ಹೊರಬರುವಾಗ ಆವರಿಸಿರುತ್ತದೆ.

ಆ ಚಿತ್ರ ನೋಡಿದ ಮೇಲೆ ನಮ್ಮ ಕನ್ನಡ ಚಿತ್ರರಂಗ ಏಕೆ ಎಡವುತ್ತಿದೆ, ಏಕೆ ಜನರನ್ನು ಥಿಯೇಟರ್್ಗೆ ಎಳೆತರುವ ಚಿತ್ರಗಳು ಬರುತ್ತಿಲ್ಲ? ಎಂಬ ಪ್ರಶ್ನೆಯೂ ಕಾಡತೊಡಗುತ್ತದೆ.

ಅನ್ಯ ಭಾಷೆಗಳ ಚಿತ್ರಗಳನ್ನು ಇಂತಿಷ್ಟೇ ಥಿಯೇಟರ್್ಗಳಲ್ಲಿ ಬಿಡುಗಡೆ ಮಾಡಬೇಕು, ಇಂತಿಷ್ಟು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶವೀಯಬೇಕು, ಡಬ್ಬಿಂಗ್್ಗೆ ಅವಕಾಶ ಕೊಟ್ಟರೆ ಕನ್ನಡ ಚಿತ್ರರಂಗ ನಶಿಸಿ ಹೋಗುತ್ತವೆ ಇಂತಹ ಭೀತಿ ಸೃಷ್ಟಿಸುವುದು, ಭಾಷಾ ವಿಷಯವೆತ್ತಿಕೊಂಡು ಒಳ್ಳೆಯ ಸಿನೆಮಾ ನೀಡಲಾಗದ ತಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಯತ್ನಿಸುವುದು ಮುಂತಾದ ಗಿಮಿಕ್್ಗಳನ್ನೇ ಎಷ್ಟು ದಿನ ಅಂತ ಮಾಡಿಕೊಂಡಿರಲು ಸಾಧ್ಯ? ಕಳಪೆ ಕನ್ನಡ ಚಿತ್ರಗಳನ್ನೆಲ್ಲ ಬಹಳ ಅದ್ಭುತ ಚಿತ್ರಗಳೆಂಬಂತೆ ವಿಜಯಸಾರಥಿಯವರು ರೀಡಿಫ್ ಡಾಟ್ ಕಾಮ್ ನಲ್ಲಿ ವಿಮರ್ಶೆ ಮಾಡಿರುತ್ತಾರೆ. ಅವರ ವಿಮರ್ಶೆಯ ಕೆಳಗೆ ಕಾಣುವ ಕಾಮೆಂಟ್ ಗಳು ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಿರುತ್ತವೆ. ಕೆಲವೊಂದು ಪ್ರತಿಕ್ರಿಯೆಗಳು ಎಷ್ಟು ಕೀಳಾಗಿರುತ್ತವೆಯೆಂದರೆ Message banned ಸಂದೇಶವಷ್ಟೇ ಕಾಣುತ್ತಿರುತ್ತದೆ. ತಮಿಳು, ತೆಲುಗು ಚಿತ್ರರಂಗಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿರುವಾಗ ಕನ್ನಡ ಚಿತ್ರರಂಗದಲ್ಲಿ ಮಾತ್ರ ಏಕಿಂಥ ಪರಿಸ್ಥಿತಿ ಸೃಷ್ಟಿಯಾಗಿದೆ? ಯಾರು ಬೇಕಾದರೂ ಡೈರೆಕ್ಟರ್ ಅಗಬಹುದು, ಯಾರು ಬೇಕಾದರೂ ಹೀರೋ ಅಗಬಹುದು, ದುಡ್ಡಿದ್ದವರೆಲ್ಲ ಪ್ರೊಡ್ಯೂಸರ್ ಅಗಬಹುದು ಎಂಬ ಗಾಂಧೀನಗರದ ಮನಸ್ಥಿತಿ ಬದಲಾಗದಿದ್ದರೆ, ರಿಯಲ್ ಎಸ್ಟೇಟ್ ಟೋಪಿಗಳನ್ನು, ಹೈದರನ್ನು ಬಗಲಿಗೆ ಬಿಟ್ಟುಕೊಳ್ಳುವುದನ್ನ ಬಿಡದಿದ್ದರೆ ಕನ್ನಡ ಚಿತ್ರರಂಗ ಉದ್ಧಾರವಾಗಲು ಸಾಧ್ಯವೆ? ಸುದೀಪ್, ಪುನೀತ್, ದರ್ಶನ್, ದಿಗಂತ್, ಕಿಟ್ಟಿ, ವಿಜಯ್, ಗಣೇಶ್, ಯೋಗಿ ಇಂತಹ ಕೆಲವರನ್ನು ಬಿಟ್ಟರೆ ನಮ್ಮ ಕನ್ನಡದ ಬಹಳಷ್ಟು ಹೀರೋಗಳ ಮುಖವನ್ನಾದರೂ ನೋಡಲು ಸಾಧ್ಯವಿದೆಯೇ? ಪ್ಯಾಶನ್ ಇಲ್ಲದಿದ್ದರೂ ಪಿಕ್ಚರ್ ಮಾಡುವವರನ್ನು ನಮ್ಮ ಕನ್ನಡ ಚಿತ್ರರಂಗವಲ್ಲದೆ ಮತ್ತೆಲ್ಲಾದರೂ ಕಾಣಲು ಸಾಧ್ಯವುಂಟೆ?

ಇತರ ಚಿತ್ರರಂಗಗಳಲ್ಲಿ ಎಂತೆಂಥ ಬದಲಾವಣೆಗಳಾಗುತ್ತಿವೆ, ಎಂತಹ ಪ್ರತಿಭಾನ್ವಿತ ಹೊಸ ನಿರ್ದೇಶಕರು ತಲೆಯೆತ್ತುತ್ತಿದ್ದಾರೆ? Old school ಹೋಗಿ, New school ಅಪ್ರೋಚ್ ಬಂದಿರುವುದರ ಜತೆಗೆ ಹೊಸ ತಲೆಮಾರಿನ ನಿರ್ದೇಶಕರು ಹೊರಹೊಮ್ಮಿದ್ದಾರೆ, ನಟರಿಗಿಂತ ನಿರ್ದೇಶಕರೇ ಹೆಚ್ಚು ಸುದ್ದಿ ಮಾಡಲಾರಂಭಿಸಿದ್ದಾರೆ. ಮನೀಶ್ ಶರ್ಮಾ (ಬ್ಯಾಂಡ್ ಬಾಜಾ ಬಾರಾತ್), ವಿಕ್ರಮಾದಿತ್ಯ ಮೋಟ್ವಾನಿ (ಉಡಾನ್), ನೀರಜ್ ಪಾಂಡೆ(ಎ ವೆಡ್ನೆಸ್್ಡೆ), ನಿಶಿಕಾಂತ್ ಕಾಮತ್ (ಮುಂಬೈ ಮೇರಿ ಜಾನ್), ಅಭಿಷೇಕ್ ಚೌಬೆ (ಇಷ್ಕಿಯಾ), ಅಭಿಷೇಕ್ ಕಪೂರ್ (ರಾಕ್ ಆನ್), ಸಾಗರ್ ಬೆಳ್ಳಾರಿ(ಬೇಜಾಫ್ರೈ), ದಿಬಾಕರ್ ಬ್ಯಾನರ್ಜಿ(ಖೋಸ್ಲಾ ಕಾ ಘೋಶ್ಲಾ), ಅಯಾನ್ ಮುಖರ್ಜಿ(ವೇಕ್ ಅಪ್ ಸಿದ್), ಶಿಮಿತ್ ಅಮೀನ್ (ಚಕ್ ದೇ ಇಂಡಿಯಾ), ರಾಜ್ ಕುಮಾರ್ ಗುಪ್ತ(ಆಮೀರ್, ನೋ ವನ್ ಕಿಲ್ಡ್ ಜೆಸಿಕಾ), ಕುನಾಲ್ ದೇಶ್್ಮುಖ್ (ಜನ್ನತ್), ಅಬ್ಬಾಸ್ ಟೈಯರ್್ವಾಲಾ(ಜಾನೆ ತು ಜಾನೇನಾ). ತಮಿಳಿನಲ್ಲಿ ಮುರುಗದಾಸ್ (ಘಜನಿ), ತೆಲುಗಿನಲ್ಲಿ ಪುರಿ ಜಗನ್ನಾಥ್ (ಪೋಕಿರಿ), ರಾಜಮೌಳಿ(ಮಗಧೀರ), ಗೌತಮ್ ಮೆನನ್ (ಕಾಕಾ ಕಾಕಾ) ಮುಂತಾದ ನಿರ್ದೇಶಕರು ವೀಕ್ಷಕರು ಹೌಹಾರುವಂತಹ ಚಿತ್ರಗಳನ್ನು ರೂಪಿಸುತ್ತಿದ್ದಾರೆ. ಆದರೆ ನಮ್ಮವರು ಅವರ ಚಿತ್ರಗಳನ್ನು ರಿಮೇಕ್ ಮಾಡಲು ಮಾತ್ರ ಪ್ರಯತ್ನಿಸುತ್ತಾರೆ. ತಮಗೆ ಮೊದಲ ಗೆಲುವು ತಂದು ಕೊಟ್ಟದ್ದು ರಿಮೇಕ್ ಚಿತ್ರ ಎಂಬ ಕಾರಣಕ್ಕೆ ‘ರಿಮೇಕ್್’ ನನ್ನ ತಾಯಿ ಎಂದು ಘೋಷಿಸುತ್ತಾರೆ. ಹೆಸರು ಮಾಡಿದ ಕೆಲವು ನಿರ್ದೇಶಕರು ಟಿವಿ ಧಾರಾವಾಹಿಗಳಲ್ಲಿ ಅದನ್ನು ಕ್ಯಾಷ್ ಮಾಡಿಕೊಳ್ಳಲು ಹೊರಡುತ್ತಾರೆ. ಇನ್ನು ಕೆಲವರು ಕನ್ನಡ ಚಿತ್ರರಂಗ 5 ವರ್ಷದಲ್ಲಿ ಮುಚ್ಚುತ್ತದೆ ಎಂದು ಹೇಳಿಕೊಂಡು ತಿರುಗಾಡುತ್ತಾರೆ. 

ಒಂದು ಒಳ್ಳೆಯ ಚಿತ್ರಕ್ಕೆ ಮೊದಲಿಗೆ ಬೇಕಾಗಿರುವುದು ಒಳ್ಳೆಯ ಸ್ಕ್ರಿಪ್ಟ್ ಹಾಗೂ ಒಳ್ಳೆಯ ನಿರ್ದೇಶಕ. ಈ ವಿಷಯದಲ್ಲಿ ನಮ್ಮ ಕನ್ನಡ ಚಿತ್ರರಂಗ ಎಲ್ಲಿದೆ? ನಮ್ಮಲ್ಲಿ ಎಷ್ಟು ಜನ ನಿರ್ದೇಶಕರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಫಿಲ್ಮ್ ಇನ್್ಸ್ಟಿಟ್ಯೂಟ್್ಗಳಲ್ಲಿ ತರಬೇತಿ ಪಡೆದವರಾಗಿದ್ದಾರೆ? ಅಮೆಚ್ಯುರಿಶ್ ಪ್ರಯತ್ನಗಳು ಎಲ್ಲೋ ಕೆಲವು ಭಾರಿ ಒಳ್ಳೆಯ ಫಲ ನೀಡಬಹುದು. ಆದರೆ ಒಂದಿಡೀ ಇಂಡಸ್ಟ್ರಿಯನ್ನು ಎತ್ತಿಹಿಡಿಯಲು ವೃತ್ತಿಪರ ತರಬೇತಿ ಪಡೆದ ವ್ಯಕ್ತಿಗಳು, ಪ್ಯಾಶನ್ ಹೊಂದಿರುವ ಮನಸುಗಳು ಅಗತ್ಯ. ಇಲ್ಲದಿದ್ದರೆ ಹೊಸ ಐಡಿಯಾಗಳಾಗಲಿ, ವಿನೂತನ ಪ್ರಯೋಗಗಳಾಗಲಿ ನಡೆಯುವುದಿಲ್ಲ. ಹಳೆಯದನ್ನೇ ಒಂದಿಷ್ಟು ಭಿನ್ನವಾಗಿ ರಿಸೈಕಲ್ ಮಾಡಬಹುದಷ್ಟೇ.

ದುಡ್ಡಿದ್ದವರ ಮಕ್ಕಳೆಲ್ಲ ಹೀರೋಗಳಾಗಬಹುದು ಎಂಬ ಪರಿಸ್ಥಿತಿಯೂ ಹೋಗಬೇಕು. ರೂಪ, ನಟನೆ ಎರಡೂ ಇಲ್ಲದ ಹೀರೋಗಳ, ಹತ್ತಾರು ಕಥೆಗಳನ್ನು ಕದ್ದು ಚಿತ್ರ ಮಾಡುತ್ತೇವೆ ಎಂದು ರಾಜಾರೋಷವಾಗಿ ಹೇಳುವ ನಿರ್ದೇಶಕರ ಚಿತ್ರಗಳನ್ನು ನೋಡುವುದಕ್ಕಿಂತ ಹಿಂಸೆ ಇನ್ನೇನಿದೆ? ಇತರ ಭಾಷಿಗರಿಗೆ ಕನ್ನಡ ಚಿತ್ರಗಳನ್ನು ನೋಡಿ ಎಂದು ಶಿಫಾರಸು ಮಾಡಲು ಕನ್ನಡ ಪ್ರೇಕ್ಷಕ ಎಷ್ಟು ಚಡಪಡಿಸುತ್ತಾನೆ ಎಂಬುದು ಗಾಂಧಿನಗರಕ್ಕೆ ಅರ್ಥವಾಗುವುದು ಯಾವಾಗ?

33 Responses to “ಒಳ್ಳೆಯ ಚಿತ್ರವಾಗುವುದು ಸ್ವಲ್ಪದರಲ್ಲೇ ತಪ್ಪಿತಲ್ಲಾ ಎಂಬ ಬೇಸರ!”

  1. Shree says:

    Yaak sir, Upendra, Yograja Bhat ranthaha nirdeshakara hesarannu uddeshapoorvakavaagiye bitri lekhanadalli? avarenu olleya nirdeshakaralva Kannada cinema kshetra dalli nimma prakara>?

  2. Vinay says:

    Guruve….ishT samaadhaanvaag baidideeyalla tande…
    ee cinemakke review baryodoo danDa….
    baiyyok manassaaglilva ninge?

    ee cinema yaak maaDdru anta hELteeni….
    pure business….nam kannaDa janakke ond sentiment iro movie maaDbiTre (serial nalloo torsirbaardu…anthaa kathe…..) bandu family audience ella nODbiDtaare anno kaaraNa
    ishT level sentiment koTre haakid duD double aagatte anno guarentee….

    10 paisa kale illa movie nalli……
    Satya hegDe yaavo fish eye lens iTkonDu onde frame nalli building gaLu hero heroine na capture maaDodu ella nODdre ond daridra Mass movie maaDak hogidaare annod antoo khanDita….
    avr torso drushyagaLu…..ondoo taste illa….
    dialogues antoo on the fly bard haagide….bEkaa biTTi….(puTTakka puTTakka anta koogdaagella mai parchkoLLo haag aagtittu)
    ashT jana actors bEka? ella gimmick….star cast torsi theater ge karyo chanda idu….

    Ramya acting sareeg itta? swalpa noo innocence illa…..KiTTy antoo uncle thara kaaNtaane…..
    mama mama anta koogtaane….
    koDaginalli huTTi beLdiro thara Enaadroo itta? language aagli, allin jana aagli?

    poor effort….money making effort….
    Which still made a few go to the theaters….
    The producer has won it this time…..Bluff maaDbiTTa….
    nijwaagloo…naavideevalla…kannaDa prEmi…kannaDa cinema support maaDo jana….
    namg buddi illa

  3. Naveen says:

    Vinay,
    Super reply… movie nodida yellardu ide response.
    songs bitre bereenu illa… fully tragedy movie..
    Ramyange actinge baralla. bari looks ashte.

  4. Muralidhar N says:

    Hello guys….i am not fan of either RAVIBELEGRE or RAMYA or ANYONE…..
    for your kind info…”if movie is not good..its not at all bad…” please dont criticize unnecessarilly…..i feel movie is good….espescailly seond ramya’s acting, cinematography…..THERE ARE MORE GOOD THINGS IN MOVIE THAN LOOP HOLES….
    this movie is better than many movies which were hit……

  5. Muralidhar N says:

    Pratap sorrry to tell this…i am really big fan of yours….please dont get too BIASED in what you write…hope you understood what i meant.

  6. Amar Hegde says:

    Pratap anna thanks for wonderful article…i was planning to go for movie….you saved me from that….

  7. Nidhi says:

    Nanu usually films nodalla, ninne frnds ottayakke hode, adre nan luck chennagittu, ticket sikkilla, even next show ge koodanu ticket sikkilla.
    e article odo 2 minute munche nan frnd jote next week hogona anta frnd helda. after reading article and Vinay reply i have decided not to go this film n lets enjoy kannada film songs… 🙂

  8. SURESHA says:

    Camerawork looks good
    Songs good

    Pratap comments are realistic

  9. Pradeep says:

    Inta artical bariyoke bere janane iddare..

    nimminda ee taraddu nirikshisirlilla… 🙁

  10. Aishwarya says:

    naaninnu cinima nodilla.. nodbittu nimmellara pratikriyegu nan pratikriye match aguttaa test maduve..

  11. Soma says:

    Average movie, had a lot expectations!! apart from few songs pretty boring.
    Kitty did his best but Ramya ‘MADam’ not, she thinks that she is Heroine when she’s facing camera she never involve in a role…

  12. mahalappa says:

    sir;
    nimma article tumba chennagide naanu FM nalli song kelibittu cinema
    chennagirabahuda anta sagar theaterge hogidde haage nammuaralli shooting
    agide anno kotuhala bere ittu gaganave baagi bhooviyanu e songnalli
    nammuradantaha bidarna kote tumba chennagi bandide adanna bittare
    E filmnalli bere enu illa anistu ade reeti chitrada climax kathe ello end
    Agutte nimma baraha tumba ista aytu

  13. Dimple says:

    Filmdhu songs kayle movie inttesting aag eruthay antha hodhay, aadray filmnalley songs bitray en ella……….. movie 1st half okay okay type, interval nanthara movie hyanga turn thagolthatha antha thumba exitment nodedhray interesting ending gay ella………….. nan prashnay en andray “putakka haygay car endha thapskondu hogthaalay? (aval parents jothay iddhu kuda?) its a bakvaas………. cinema SONGS endha HIT aagbahudhu but STORY endha alla………

    Prathap review is gud and Vinay’s too……..

  14. Santhosh Kumar B says:

    Sir….

    I havent watchd the movie and i’ll not watch. But i will not agree some of your points. You are praising actors like sudeep, darshan, vijay and yogi. Sudeep his movies are like copy and paste, darshan old wine in a new bottle, yogi not at all fit for a lead role…vijay dint give aa single hit after duniya… We too have some best directors Suri, his recent jackie is technically a suoerb movie… u dint mentioned about puneth…. yograj bhat who is giving back to back hit movies. Sir there are lot of talented people they aren’t getting any chance…..

  15. Veeru says:

    @Shree: u r telling right,but upendra and Yograj bhat they they r not maintaining consistency in there movies. You can see some Upendra Movies(Nanu Naane,Lava kusha ..etc) still they have to improve,learn.

  16. Sushil says:

    Exactly paratap.. Correctaagi helidira!!
    Nangaagiddu ade. First half mugiyovargu chennage hogta ittu.. Nantra kole madodu.. adad mele devru isht keTTdagi avr bhavishya bardiralla ashtondu worst tragedy create madi.. deliberate aagi saaysodu ella tumba bejaaraaytu.

    Movie nalli ramya chikkappa famous lawyer avl hatra bandornella oorinda odistidda anthe.. Adre hero jail nalliddaga mane inda kalkond bidtaalanthe (hege enu yargu gottilla).. Swalpa nadru common sense bedva tegyorige.. HaaLaaddu sumsumne saaysi nam thalege anasin necessity create maadi..”In Heaven” antha caption bere. Ugiyoku bejaragatte.. Adre nivu chennage adne decent aagi helidira paratap.

  17. Sharath says:

    Nagshekar comes from Bhats camp n he had made a good try in Aramane..Expectation was thr for Sanju n Geetha…ondu dry scene tegibeku anta 10 tinglu kayo director ..script madoke en time spend madidare anta nodbeku ..film antu bekar ..songs are good ashte..totally agreed with Vinay..kannada bashe premigalu ….film nodi kaas kalkolli…good ariticle Pratap..

  18. jagadeesh says:

    pratap what you said it is correct, bad movie sorry to say this . because it’s our kannada movie .

  19. LaThEsH sHeTty says:

    ya man..watched lot of movies…most of them wer scrap….n it made me to watch only selected people movie in theater like punith…..

  20. venki says:

    sanju mathu geetha nodabeku antha…..ticket tegondu holage hoda mele ada anubava idhagide…..nanu tumba nirikse itkondu film ge hode .adre baruvaga kanditha nirashe aithu….yekendare kly maks solpanu idisa lilla…adre nange tumba istavadaddu rammy avara natane…nivu adannu illi mensan made illa…adakke tumba bejar aithu….nagasher is a brilian director antha nanu heluvudakke istapadtini yekendare avarobba bada hassy nata avara parisrama vanna mechale beku…mudhe avarige olleya bavissy idhe…all the best nagashekar..
    RAMYA ACTING……IS/……………BEAUTEEEEEEEEEEEEEEY

  21. ashwini reddy says:

    sanju weds gita is good movie .i like most ,hero character the way he look after heroin and express his loves in the form of singing title song of the film and proposing style to her that i like most but last climax is not good.over all it is good

  22. chaitra narayan says:

    hi pratap,

    i just want to made a sentence that before criticise anything we should have some talent to correct ion the same field. if you have that’s great other wise keep it in mind /.

    correction is more important than criticism.

    thanks

  23. Naveen kumar says:

    Frankly speaking the movie is awesome…..adru songs anthu thumba chenagittu…..but end ista aaglilla…..ramya maama ondu olle advocate aagi hero na bidiskondu barokke aaglilla…..avru bidiskondu bandidre movie bega mugitu antha irbeku:)

  24. Jayashree hegde says:

    ಅಲ್ಲಣ್ಣ…. ಇದ್ರಲ್ಲಿ ಇನ್ನೂ ಏನೇನೋ ಮಿಸ್ ಆಗಿದೆ….

    ಕಿಟ್ಟಿ ದು ಆಕ್ಟಿಂಗ್ ಚೆನ್ನಗಿತ್ತಾ ? ಅವ್ನು ಇಡೀ ಫಿಲಂ ಪೂರ್ತಿ whispering ವಾಯ್ಸ್ ನಲ್ಲಿ ಮತಾಡ್ತ್ಹಿದ್ದದ್ದು irritate ಅಗ್ತಿರ್ಲಿಲ್ವಾ ? ಹೊಸದಾಗಿ ಇನ್ನು ಕನ್ನಡ ಇಂಡಸ್ಟ್ರಿ ನಲ್ಲಿ ನೆಲೆ ಕಾನ್ಕೊಂತಿರೊನು, body maintain ಮಾಡಬೇಕಿತ್ತು ಅನ್ಸಲ್ವಾ ?

    ರಮ್ಯ ಅವಳದ್ದೇ ವಾಯ್ಸ್ ನಲ್ಲಿ ಬೇಕಾಗಿದ್ದಕ್ಕಿಂಥ ಹೆಚ್ಚು ಮುದ್ದಾಗಿ ಮಾತಾಡಿದ್ದು ಚೆನ್ನಗಿತ್ತಾ ?

    ಪ್ರೀತಿ ಹುಟ್ಟೋಕೆ, ಡೈರೆಕ್ಟ್ ಮಾಡಿರೋ scenes effective ಇತ್ತ?.. ಅಲ್ಲಿ ನಾಯಕ ನಾಯಕಿ ಯಲ್ಲಿ ಪ್ರೇಮ ಉಂಟಾದರೆ, ಪ್ರೇಕ್ಷಕರಿಗೂ ಒಂದು ಭಾವನೆ ಉಂಟಾಗಬೇಕು… ಅದೇನೂ ಇರಲಿಲ್ಲ…
    ಪ್ರೀತಿ ಶುರುವಾಗುತ್ತಿದಂತೆ ನಾಯಕಿ,’ ನಾವೂ ಸತ್ ಹೋಗ್ತೀವ’ ಅಂಥಾ ಕೇಳೋಕೆ ಸ್ಟಾರ್ಟ್ ಮಾಡ್ತಾಳೆ… ನಾಯಕ ನಾಯಕಿ ಬೇರೆ ಆದಾಗಲೂ ಏನೂ ಅನ್ನಿಸೋಲ್ಲ… ಸುಮ್ನೆ ಮನಸ್ಸಿಗೆ torture ಆಗತ್ತೆ ಅಷ್ಟೇ…

    ಫಿಲಂ ಪೂರ್ತಿ ಬರೀ ಮಳೆ … ಅದೂ pleasant ಇಲ್ಲ… ಕತ್ತಲು

    ಎಷ್ಟು ಒಳ್ಳೊಳ್ಳೆ ಹಿರಿಯ ನಟರನ್ನೆಲ್ಲ ಇನ್ನು ಚೆನ್ನಾಗಿ use ಮಾಡಿಕೊಳ್ಳಬಹುದಿತ್ತು ಅಲ್ವಾ… ಅವರೆಲ್ಲ ಏನೋ ಹೆಸರಿಗೆ, ಕೌಂಟ್ ಗೆ ಇರ್ಲಿ ಅಂತ.. director ಕರೆದಿದ್ದಾರೆ ಅನ್ನಿಸೋಲ್ವಾ..
    ಸುಹಾಸಿನಿ,ಉಮಾಶ್ರಿ.ದೊಡ್ಡಣ್ಣ, ಜೈಜಗದೀಶ್… ಇವರೆಲ್ಲ ನಿಜವಾಗಲು ಬೇಕಿದ್ರಾ? ಓಕೆ.. ಬೇಕಿದ್ರೂ, ಅವರನ್ನೆಲ್ಲ ಸರಿಯಾಗಿ ಬಳಸಿಕೊಂಡಿದ್ದರಾ?

    ಅದೆಲ್ಲ ಹೋಗ್ಲಿ ಬಿಡಿ… ಏನೋ director ಗೆ ಗೊತ್ತಾಗಿಲ್ಲ… ನಮ್ದೆ ಕನ್ನಡವರು… ಕ್ಷಮಿಸಿಬಿಡೋನಾ ಅಂದ್ಕೊಂಡ್ರೆ, atleast ಕಥೆ ಲಿ ಒಳ್ಳೆ ತಿರುವು ಕೊಡೋಕಾಗ್ತ್ಹಿರ್ಲಿಲ್ವಾ,
    ಎಂತೆಂಥ ಇರ್ರಿತತಿಂಗ್ scenes ಹಾಕಿದ್ದಾರೆ… ಅವ್ರು ರಿಲೀಸ್ ಮಾಡೋಕಿಂತಾ ಮುಂಚೆ ಒಮ್ಮೆ ನೂ ತಮ್ಮ ಫಿಲಂ ನಾ audiance ವ್ಯೂ ನಲ್ಲಿ ನೋಡೇ ಇಲ್ವಾ..?

    director , ಒಂದಿಷ್ಟು ಒಳ್ಳೆ songs ಹಾಕ್ಬಿತ್ರೆ, ಅಥವಾ ತುಂಬಾ ಫೇಮಸ್ ನಟರನ್ನ ಹಾಕೊಂಡು ಫಿಲಂ ಮಾಡಿದ್ರೆ success ಅಂದ್ಕೊಂಡ್ ಬಿಟ್ರಾ?

    ಅದರೂ ಒಂದೇ ಒಂದು ಆಶ್ಚರ್ಯ ಅಂದ್ರೆ, ಫಿಲಂ ಚೆನ್ನಾಗಿ ಒಡ್ತ್ಹಿದೆ ಅಂಥಾ ಮಾಧ್ಯಮ ದವರು ಹೇಳ್ತಿದ್ದಾರೆ…
    ಫಿಲಂ ನೋಡಿದವರು, ನನ್ನಂಥಾ ಕನ್ನಡದ ಅಭಿಮಾನಿ ಆಗಿರಬೇಕು.. ಅಥವಾ songs ನೋಡಿ, actors ಲಿಸ್ಟ್ ನೋಡಿ, adds ನೋಡಿ ಹೋಗ್ತ್ಹಿರ್ಬೇಕು..
    ಇಲ್ಲ ವಿಮರ್ಶ್ರೆ ಕೇಳಿ ನೂ, ‘ಇವರಿಗೆ ಹಿಡಿಸದಿದ್ರೆ ಏನಾಯ್ತು .. ನಮಗೆ ಹಿಡ್ಸತ್ತ್ಹೇನೋ’ ಅಂದ್ಕೊಂಡು ಹೋಗಿರಬೇಕು ಅಷ್ಟೇ.. ಒಮ್ಮೆ ನೋಡಿದವರು ಮಾತ್ರ ಇನ್ನೊಮ್ಮೆ ಹೋಗೋಲ್ಲ…

  25. tanu says:

    @Jayashree Hegde

    neevu kannada abhimaani andre nambokagtilla. modalu cinema nododu hege annodanna kalitukolli. baree mai torisuva hindi cinemagala gungininda horabanni. aaga nimage kannada cinema khandita hidisutte. Pratap avarigoo ee maatu anvaya.

  26. Jayashree hegde says:

    ಹಾಯ್ ಮನು .. ನಮಗೂ ನೂ ಕನ್ನಡ ಫಿಲಂಸ್ ಚೆನ್ನಾಗಿ ಮೂಡಿ ಬರಲಿ.. ಎಲ್ಲ ಜನ ನೋಡಲಿ,,, ಅಂಥಾ ಇದೆ.. ನಮಗೇನೂ ಹಿಂದಿ ಫಿಲಂಸ್ ಥರ ಇರ್ಬೇಕು ಅಂತ expect ಮಾಡ್ತಿಲ್ಲ… ಮಾಡಿರೋ ಫಿಲಂ ನಾ ಚೆನ್ನಾಗಿ ಮಾಡ್ಲಿ, ದುಡ್ಡು ಕೊಟ್ಟು ಅಭಿಮಾನದಿಂದ ನೋಡೋ ಜನಕ್ಕೆ ಖುಷಿ ಸಿಗಲಿ ಅಂತ ಅಷ್ಟೇ … i even like to watch art movies .. that is different thing …
    ಮೊನ್ನೆ ಬಂದಿರೋ ಹುಡುಗ್ರು ಫಿಲಂ ನೋಡಿ.. ಅದನ್ನ ಎಷ್ಟು ಚೆನ್ನಾಗಿ ಮಾಡಿದ್ದರೆ ಅಂಥಾ ….

    i wish kannada fim indtustry much grow well.. such a way that.. people from other language also start liking our films..

    ನಮ್ ಫಿಮ್ಸ್ ಗಳಿಗೆ , ಕನ್ನಡಿಗ ಅಭೀಮಾನಿ ಮಾತ್ರಾ ಇದ್ದಾರೆ,.. ಅದೇ ತಮಿಳ್, ತೆಲುಗು ಫಿಲಂಸ್ ನಾ ನಮ್ ಕನ್ನಡಿಗರೂ ನೋಡ್ತಾರೆ .. ಅದು ಯವಾಗ ಸರಿ ಹೋಗತ್ತೆ ?
    ಅವರೆಲ್ಲ ನಮ್ಮ ಒಂದೂ ಫಿಲಂ ನೋಡದೇನೆ ‘ಕನ್ನಡ ಫಿಲಂ ಚೆನ್ನಾಗಿ ಇರಲ್ಲ ಅದಕ್ಕೆ ನೋಡೋಲ್ಲ… ತಮ್ಮ ಫಿಲಂಸ್ ಚೆನ್ನಾಗಿರತ್ತೆ ಅದಕ್ಕೆ, ನೀವ್ ನೋಡ್ತೀರ ‘ ಅಂತ ಹೇಳಿದಾಗ ಮನಸ್ಸಿಗೆ ಬೇಜಾರ್ ಆಗೋಲ್ವ ..
    ಆಗ , ನಮ್ ಕನ್ನಡದಲ್ಲಿ ಒಳ್ಳೊಳ್ಳೆ ಫಿಲಂ ಮಾಡಿ, ಬೇರೆ ಜನರೂ ನೋಡೋ ಥರ ಆಗಲಿ ಅಂತ ಕಿಚ್ಚು ಬರೋಲ್ವಾ…
    inox ಗೆ ಹೋಗಿ, ಇವಾಗ ಯಾವ ಕನ್ನಡ ಫಿಲಂ ಇದೇನಪ್ಪ. ಅಂತ ಕೇಳಿದ್ರೆ,,, ಎಲ್ಲ english ಹಿಂದಿ ತಮಿಳ್ , ತೆಲುಗು ಇದೆ.. ಒಂದೂ ಕನ್ನಡ ಫಿಲಂ ಇಲ್ಲ ಅಂದಾಗ ಬೇಜಾರ್ ಆಗೋಲ್ವಾ..ಅದು ಅವರ ತಪ್ಪಲ್ಲ…
    ನಾವ್ ನಮ್ ಫಿಲಂಸ್ ನಾ ತುಂಬಾ ಚೆನ್ನಾಗಿ ಮಾಡಬೇಕು… ಅದರಿಂದ ಜನ ನೋಡೋ ಥರ ಆಗ್ಬೇಕು.. ಸುಮ್ನೆ, ಕನ್ನಡ ನೋಡೋಲ್ಲ ಅಂತ ಜನರನ್ನ ಬೈದರೆ ಪ್ರಯೋಜನ ಇಲ್ಲ..
    ಜನ ದುಡ್ಡು ಹಾಕಿ ಎಂಜಾಯ್ ಮಾಡೋಕೆ ಬರ್ತಾರೆ .. ನಮ್ಮಷ್ಟು ಎಲ್ಲರು ತಲೆ ಕೆಡಿಸ್ಕೊಲೋಲ್ಲ

  27. Ashok says:

    My feeling is that, you better write on the larger issues which haunt many people. Commenting on film industry(ILLUSION !!!) is not suitable for you. You are much much above that !!!

  28. last half an hour cinema worst anistu……

  29. ಗಗನವೇ ಬಾಗಿ ಭುವಿಯನು ಕೇಳಿದಾ ಹಾಗೆ

    ಕಡಲು ಕರೆದಂತೆ ನದಿಯನು ಭೇಟಿಗೇ

    ಯಾರು ಬಂದಿರದ ಮನಸಲಿ… ನಿನ್ನ ಆಗಮನ ಈ ದಿನ…

    ನೀಡುವ ಮುನ್ನ ನಾನೆ ಆಮಂತ್ರಣಾ.

    ಹಾಗೂ

    ಸಂಜು ಮತ್ತು ಗೀತಾ ಸೇರಬೇಕು ಅಂತ

    ಬರೆದಾಗಿದೆ ಇಂದು ಬ್ರಹ್ಮನು

    ನನ್ನ ಜೀವನಕ್ಕಿಂತ… ನೀನೆ ನನ್ನ ಸ್ವಂತ..

  30. Manjushree says:

    actually nanu kooda nimma hage feelade

  31. Vinayakumar says:

    ಹಾಯ್ ಪ್ರತಾಪ್,ನಾನು ಇವತ್ತು ಇ ಆರ್ಟಿಕಲ್ ಓದಿದೆ ಅದಕ್ಕಾಗಿ ಇವತ್ತು ನನ್ನ ಅಭಿಪ್ರಾಯವನ್ನು ಬರೀತಾ ಇದ್ದೇನೆ. ಈ ಚಿತ್ರದಲ್ಲಿ ಹಾಡುಗಳನ್ನು ಬಿಟ್ಟರೆ ಬೇರೆ ಏನು ಚೆನ್ನಾಗಿಲ್ಲ.ಈ ಚಿತ್ರ ಬರಿ ಹೈಪ್ ಮಾಡಿ ೫೦ ದಿನ ಅದು ಹೇಗೆ ಓಡಿಸಿದ್ರೋ ಗೊತ್ತಿಲ್ಲ.ಮುಂಗಾರು ಮಳೆ ಬಂದ ಮೇಲೆ ಅದೇ ಥರ ಟ್ರಾಜಿಡಿ ಕ್ಲೈಮ್ಯಾಕ್ಷ್ ಮಾಡಿದ ಚಿತ್ರಗಳು ಬಾಳ ಬಂದವು ಹಾಗೆ ತೋಪು ಆದವು.ಈ ನಾಗಶೇಖರ್ ಅರಮನೆ ಚಿತ್ರ ಮಾಡಿ ಟ್ರಾಜಿಡಿ ಕ್ಲೈಮ್ಯಾಕ್ಷ್ ಮಾಡಿ ತೋಪು ಆಗಿರೋದು ಎಲ್ಲರಿಗೂ ಗೊತ್ತೇ ಇದೆ ಆದರೂ ಇಂಥ ಚಿತ್ರವನ್ನೇ ಮತ್ತೆ ಮಾಡಿದ್ದಾರೆ,ಅನುಬವಿಸಲಿ ಏನು ಮಾಡೋದು. ನಾನು ಎಲ್ಲ ಭಾಷೆ ಚಿತ್ರಗಳನ್ನ ನೋಡುತ್ತೇನೆ ಆದರೆ ಕನ್ನಡ ಚಿತ್ರಗಳನ್ನ ಮಾತ್ರ ಥಿಯೇಟರಲ್ಲಿ ನೋಡೋದು.ನೀವು ಹೇಳಿದ ಹಾಗೆ ಕನ್ನಡ ಫಿಲಂ ಇಂಡಸ್ಟ್ರಿ ಅವನಥಿಎಲ್ಲಿರುವುದು ನಿಜ ಅದಕ್ಕೆ ಇನ್ನು ಸ್ವಲ್ಪ ಕಾರಣಗಳು ಇಲ್ಲಿವೆ.
    ೧.ಈ ಎಲ್ಲ ನ್ಯೂಸ್ ಚಾನ್ನೆಲ್ಲಗಳನ್ನ ನೋಡಿ ಸ್ವಲ್ಪ ಮಾತ್ರ ಕನ್ನಡ ಫಿಲಂ ಬಗ್ಗೆ ತೋರಿಸದರೆ ಉಳಿದದ್ದು ಬರಿ ಬೇರೆ ಭಾಷೆ ಚಿತ್ರಗಳ ಬಗ್ಗೆ,ಅದರಲ್ಲೂ tv9 ಕನ್ನಡ ಅಂತ ಹೆಸರು ಇಟ್ಕೊಂಡು ಬರಿ ಹೆಚ್ಚಾಗಿ ತೋರಿಸೋದು ತೆಲುಗು ಸಿನೆಮಾಗಳ ಬಗ್ಗೆ ಅಸ್ಟ್ಟೆ ಅಲ್ಲ ಬರಿ ಆಂದ್ರಪ್ರದೇಶದ ನ್ಯೂಸ್ ಮಾತ್ರ ಇರುತ್ತೆ,ಇಂತಾ ಚಾನೆಲ್ಲಗಳಿಗೆ ಮೊದಲು ಕಡಿವಾಣ ಹಾಕಬೇಕು.
    ೨.ಎಸ್ಟೋ ಜನ ಕನ್ನಡಿಗರು ಕನ್ನಡ ಚಿತ್ರಗಳನ್ನ ನೋಡೋದೇ ಇಲ್ಲ ಅಂಥವರು ಹೇಳೋದು ಬರಿ ಕನ್ನಡ ಚಿತ್ರಗಳು ಚೆನ್ನಾಗಿರೋದಿಲ್ಲ ಅಂತ ಅಂದ್ರೆ ಚೆನ್ನಾಗಿರೋ ಫಿಲಂಗಳು ಬಂದ್ರೆ ಇಂಥವರಿಂದ ಹೇಗೆ ಓಡಬೇಕು ಹೇಳಿ,ಅಂಥವರು ಮೊದಲು ಬಾಯಿ ಮುಚ್ಚೋ ಹಾಗೆ ಮಾಡ್ಬೇಕು.
    ೩.ಕನ್ನಡ ಫಿಲಂಗಳನ್ನ ಕನ್ನಡಿಗರೇ ನೋಡಿದ್ರೆ ಸಾಕು.

  32. btmnayak says:

    ವಿಜಯ್ , ನಿಮಗೆ ನನ್ನದೊಂದು ದೊಡ್ಡ ಸಲಾಮು , ದೇವರಾಣೆ ನನ್ನ ಮನಸಿನಲ್ಲಿದ್ದುದನ್ನು ನೀವ್ ಬರೆದಿದ್ದೀರಿ… ನಿಮಗೆ ದನ್ಯವಾದಗಳು…
    ಬರಿ TV 9 ಅಲ್ಲ ಎಲ್ಲಾ ಚಾನೆಲ್ಗಳು ಕನ್ನಡ ಬಿಟ್ಟು ಬೇರೆ ಭಾಷೆ ಚಿತ್ರಗಳನ್ನ ಪ್ರೋಮೊತ್ ಮಾಡಿದ್ರೆ ನಮ್ಮವರು ಕನ್ನಡ ನೋಡ್ಥಾರ ..

  33. ritesh says:

    nnge tumba ista aytu sir