Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > “ಕಾನ್’ಗಳ ನಡುವೆ ಹೆಮ್ಮರವಾಗಿ ಬೆಳೆದ “ಐಕಾನ್’!

“ಕಾನ್’ಗಳ ನಡುವೆ ಹೆಮ್ಮರವಾಗಿ ಬೆಳೆದ “ಐಕಾನ್’!

 

ಮೈಕೆಲ್ ಜಾಕ್ಸನ್

ಫ್ರೆಡ್ಡಿ ಮರ್ಕುರಿ

ಬ್ರೂಸ್ ಲೀ

ಆರ್ನಾಲ್ಡ್ ಸ್ವಾಝನೆಗರ್

ಸಿಲ್ವೆಸ್ಟರ್ ಸ್ಟ್ಯಾಲನ್

ಜಾನ್ ಮೆಕೆನ್ರೋ

ಕಾರ್ಲ್ ಲೂಯಿಸ್

ಮಹಮ್ಮದ್ ಅಲಿ

ಮೈಕ್ ಟೈಸನ್

ಮಿಖಾಯಿಲ್ ಗೋರ್ಬಚೇವ್

ಈ ಮೇಲಿನ ಒಂದೊಂದು ಹೆಸರೂ ನಮ್ಮೊಳಗೆ ತಲ್ಲಣವುಂಟುಮಾಡಿದಂಥವು. ಇವರೆಲ್ಲರೂ ಆಯಾ ಕಾಲಘಟ್ಟಗಳಲ್ಲಿ ಜಗತ್ತಿನ ಜನರ ಮುಕುಟಮಣಿಗಳಾಗಿದ್ದವರು. ಇಷ್ಟೂ ಜನರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತಿಮಾನವ ಸಾಧನೆಯ ಮೂಲಕ ನಮ್ಮನ್ನು ದಿಗ್ಭ್ರಮೆಗೊಳಿಸಿದ್ದೂ ಉಂಟು, ಪ್ರೇರಕಶಕ್ತಿಗಳಾಗಿದ್ದೂ ಇದೆ. ಇವತ್ತು ಉಸೈನ್ ಬೋಲ್ಟ್ ಓಟ ಆ ಕ್ಷಣಕ್ಕೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಬಹುದು, ಆದರೆ ಒಂದು ತಲೆಮಾರಿಗೇ ಪ್ರೇರಣೆ ನೀಡಿದ್ದು ಕಾರ್ಲ್ ಲೂಯಿಸ್ ಮಾತ್ರ. ಆರ್ನಾಲ್ಡ್, ಸ್ಟ್ಯಾಲನ್ ದೇಹವನ್ನು ಕಂಡು ಅದೆಷ್ಟು ಕೋಟಿ ಯುವಕರು ಜಿಮ್್ಗೆ ಹೋಗಿಲ್ಲ ಹೇಳಿ? ಮೈಕೆಲ್ ಜಾಕ್ಸನ್ ಥರ ಕುಣಿಯಲು ಹೋಗಿ ಎಷ್ಟು ಜನ ಕಾಲನ್ನು ಟ್ವಿಸ್ಟ್ ಮಾಡಿಕೊಂಡಿಲ್ಲ? ಸೋವಿಯತ್ ರಷ್ಯಾದ ಮಿಖಾಯಿಲ್ ಗೋರ್ಬಚೇವ್ ಅವರ ಗ್ಲಾಸ್್ನಾಸ್ಟ್ ಆ್ಯಂಡ್ ಪೆರಿಸ್ಟ್ರೋಯಿಕಾ ರಾಜಕೀಯರಂಗದಲ್ಲಿ ಸೃಷ್ಟಿಸಿದ ಕಂಪನವನ್ನು ಮರೆಯಲಾದೀತೆ? ಇಂತಹ ಹೀರೋಗಳು ಜಾಗತಿಕ ವೇದಿಕೆಯಲ್ಲಿ ಮಿಂಚಿ ಮೆರೆಯುತ್ತಿದ್ದಾಗ ಭಾರತೀಯರಾದ ನಾವೂ ಒಬ್ಬ ಐಕಾನ್್ಗಾಗಿ, ಪ್ರೇರಕಶಕ್ತಿಗಾಗಿ, ನಮ್ಮೆಲ್ಲರನ್ನೂ ಒಂದು ಮಾಡುವ ದೈವಕ್ಕಾಗಿ ಹಾತೊರೆದಿದ್ದಿದೆ. ನಮ್ಮ ನೆಲದಲ್ಲೂ ಅಂತಹ ತಾರೆಯೊಂದು ಜನ್ಮಿಸಲಿ ಎಂದು ಮೊರೆಯಿಟ್ಟಿದ್ದಿದೆ.

ಆ ಮೊರೆಗೆ ದೇವರು ಸ್ಪಂದಿಸಿದಾಗ ಸಿಕ್ಕವನೇ ಸಚಿನ್ ರಮೇಶ್ ತೆಂಡೂಲ್ಕರ್!

ಅವತ್ತು 1989ರಲ್ಲಿ ಪಾಕಿಸ್ತಾನದಲ್ಲಿ ನೀನು ಟೆಸ್ಟ್್ಗೆ ಪದಾರ್ಪಣೆ ಮಾಡಿದೆ. ಮೂರನೇ ಟೆಸ್ಟ್್ನಲ್ಲಿ ಇಮ್ರಾನ್ ಖಾನ್, ವಾಸಿಂ ಅಕ್ರಂ ಮತ್ತು ವಕಾರ್ ಯೂನಿಸ್ ದಾಳಿಗೆ ಭಾರತೀಯ ಬ್ಯಾಟ್ಸ್್ಮನ್್ಗಳು ತರಗೆಲೆಗಳಂತೆ ಉದುರಿದ್ದರು. ಇನ್ನೊಂದು ಬದಿಯಲ್ಲಿ ಸಿಧು ಅಸಹಾಯಕನಾಗಿ ನಿಂತಿದ್ದ. ಅಂತಹ ವೇಳೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ನೀನು ಬ್ಯಾಟ್ ಹಿಡಿದು ಬಂದೆ. ನೋಡನೋಡುತ್ತಿದ್ದಂತೆಯೇ ವಕಾರ್ ಹಾಕಿದ ಬೌನ್ಸರ್ ನಿನ್ನ ಮೂಗನ್ನೇ ಚಚ್ಚಿತು. ರಕ್ತ ಬಳಬಳನೆ ಸುರಿಯಲಾರಂಭಿಸಿತು. ಧಾವಿಸಿ ಬಂದ ದೈಹಿಕ ತಜ್ಞ ಮೂಗಿಗೆ ಬ್ಯಾಂಡೇಜ್ ಹಾಕಿದ. ಇನ್ನೇನು ನೀನು ಪೆವಿಲಿಯನ್್ನತ್ತ ಸಾಗುತ್ತೀಯಾ ಅಂತಅಂದುಕೊಂಡೆವು. ಉಹೂಂ… ಪೆಟ್ಟು ತಿಂದರೂ ಹೇಡಿಯಂತೆ ಶತ್ರುವಿಗೆ ನೀನು ಬೆನ್ನು ತೋರಲಿಲ್ಲ. ವಕಾರ್ ಎಸೆದ ಲಾಸ್ಟ್ ಬಾಲನ್ನು ಬೌಂಡರಿಗಟ್ಟಿದಾಗ ನಿನ್ನಲ್ಲೊಬ್ಬ ಸೇನಾನಿ ಕಂಡುಬಂದ. ಅಬ್ಬಾ… ಕೊನೆಗೂ ಕೀಳರಿಮೆಯಿಂದ, ಆತ್ಮವಿಶ್ವಾಸದ ಕೊರತೆಯಿಂದ ನರಳುತ್ತಿದ್ದ ನಮಗೊಬ್ಬ ಗಂಡುಗಲಿ ಸಿಕ್ಕಿದ ಅಂತ ಆನಂದಪಟ್ಟೆವು. ರದ್ದಾದ ಏಕದಿನ ಪಂದ್ಯದಲ್ಲಿ ಆಗಿನ ಸ್ಪಿನ್ ಮಾಂತ್ರಿಕ ಅಬ್ದುಲ್ ಖಾದಿರ್ ಅವರ ಬೌಲಿಂಗ್್ನಲ್ಲಿ ಸತತ ನಾಲ್ಕು ಸಿಕ್ಸರ್ ಬಾರಿಸಿದಾಗಲಂತೂ ನಮ್ಮ ಖುಷಿಗೆ ಎಲ್ಲೆಯೇ ಇರಲಿಲ್ಲ. 150 ವರ್ಷಗಳ ಕಾಲ ಬ್ರಿಟಿಷರಿಗೆ ನಮ್ಮ ನೆಲ, ಜಲವಷ್ಟೇ ಅಲ್ಲ ಮನಸ್ಸನ್ನೂ ದಾಸ್ಯಕ್ಕಿಟ್ಟು ಸ್ವಾತಂತ್ರ್ಯ ಬಂದ ಮೇಲೂ ದಾಸ್ಯದ ಗುಂಗಿನಿಂದ ಹೊರಬರಲು ಹೆಣಗುತ್ತಿರುವಾಗ, ನಮಗೂ ಆಳುವ ತಾಕತ್ತಿದೆ ಅನ್ನೋದನ್ನು ನೀನು ಬ್ಯಾಟ್ ಮೂಲಕ ಸಾಬೀತು ಮಾಡಿದೆ. ಆಗ ನಾವೇ ನೀನಾಗಿ ಖುಷಿಪಟ್ಟೆವು.

ಈ ನಡುವೆ 1992ರಲ್ಲಿ ನಿನ್ನ ಅಗ್ನಿ ಪರೀಕ್ಷೆಗೆಂದು ವೇದಿಕೆ ಸಜ್ಜಾಗಿತ್ತು. ಅದು ಜಗತ್ತಿನಲ್ಲಿಯೇ ಅತ್ಯಂತ ಋಛಡಡಿಜಡಡಿ ಮತ್ತು ಇ್ಟ್ಡಟ್ಛಿಣ ಪಿಚ್ ಎಂಬ ಖ್ಯಾತಿ ಪಡೆದಿದ್ದ ಪರ್ತ್! ಭಾರತ ಸೋಲುವುದು ಪೂರ್ವ ನಿರ್ಧರಿತ ಎಂದು ಅದಾಗಲೇ ಷರಾ ಬರೆದಿದ್ದರೂ ಎಲ್ಲರ ಕಣ್ಣು ನಿನ್ನ ಮೇಲಿತ್ತು. ಆ ದಿನ ನೀ ಬ್ಯಾಟ್ ಹಿಡಿದು ಬಂದೆ… ಪರ್ತ್್ನಲ್ಲಿ ಆಡಿದ ಮೊದಲ ಇನಿಂಗ್ಸ್್ನಲ್ಲೇ ಶತಕಬಾರಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಪಡೆದೆ. ನೀ ಹೊಡೆದ 118 ರನ್್ಗಳು ನಿಜಕ್ಕೂ ಅದ್ಭುತ. ಮುಂದಿನ ಟೆಸ್ಟ್ ಸಿಡ್ನಿಯಲ್ಲಿ. ಪಟಪಟನೆ ವಿಕೆಟ್ ಕಳೆದುಕೊಂಡಿದ್ದ ಭಾರತ ಡ್ರಾ ಮಾಡಿಕೊಳ್ಳಲು ಹೆಣಗುತ್ತಿತ್ತು. ಆಗ ರವಿಶಾಸ್ತ್ರಿಗೆ, ಹೆಗಲಿಗೆ ಹೆಗಲು ಕೊಟ್ಟು ನೀ ಗಳಿಸಿದ ಅಜೇಯ 148 ರನ್್ಗಳು ಭಾರತವನ್ನು ಮುಖಭಂಗದಿಂದ ತಪ್ಪಿಸಿದವು. ಅದೇ ವರ್ಷ ಕೇಪ್್ಟೌನ್್ನಲ್ಲಿ ಅಜರ್ ಜತೆಗೂಡಿ ನೀ ಗಳಿಸಿದ 169ರನ್್ಗಳು ತಂದುಕೊಟ್ಟ ಖುಷಿ ಇಂದಿಗೂ ಮನದಲ್ಲಿ ಬೆಚ್ಚಗಿದೆ.

1998ರಲ್ಲಿ ಶಾರ್ಜಾದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸೆಂಚುರಿ ಹೊಡೆದು ಕಪ್ ತಂದು ಕೊಟ್ಟಿದ್ದೂ ನೆನಪಿದೆ. ಟೆನ್್ಸ್ಪೋರ್ಟ್ಸ್ ಚಾನೆಲ್್ನಲ್ಲಿ ಆ ಆಟವನ್ನು ಇಂದಿಗೂ ಕುತೂಹಲದಿಂದ ನೋಡ್ತೀವಿ. ನೇರ ಪ್ರಸಾರ ಆಗುತ್ತಿದೆ ಅನ್ನೋ ರೀತಿ ಟಿ.ವಿ. ಮುಂದೆ ಕುಳಿತ್ಕೋತೀವಿ. 2003ರ ವರ್ಲ್ಡ್್ಕಪ್್ನಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 271 ರನ್ ಹೊಡೆದಾಗ”ಸೋತುಬಿಡ್ತೀವೇನೋ’ ಅಂತ ಅನ್ನಿಸಿತ್ತು. ಆದರೆ ರಣಹದ್ದಿನಂತೆ ಬರುವ ಶೋಯೆಬ್ ಅಖ್ತರ್್ನ ಬೌಲಿಂಗ್್ನ ಲಯವನ್ನೇ ಹಾಳು ಮಾಡಿ, ಅಂದು ನೀನು ಗಳಿಸಿದ ಬಿರುಸಿನ 98 ರನ್್ಗಳು ಭಾರತದ ಗೆಲುವಿಗೆ ಕಾರಣವಾದವು. ಪಾಕ್ ವಿರುದ್ಧ ನಾಲ್ಕನೇ ಯುದ್ಧದಲ್ಲಿ ಜಯಿಸಿದಷ್ಟು ಖುಷಿಯಾಯಿತು.

ಜತೆಗೆ ನೀನೆಂದೂ ಸೋಗು ಹಾಕಿದವನಲ್ಲ. ಅಂದು ನಿನ್ನ ಹುಟ್ಟುಹಬ್ಬದ ದಿನ ಶಾರ್ಜಾದಲ್ಲಿ ಸೆಂಚುರಿ ಹೊಡೆದು ಪತ್ನಿಗೆ ಅರ್ಪಣೆ ಮಾಡಿದೆ. ಕೆಲವರು ಬೇಸರಪಟ್ಟುಕೊಂಡರು. ಆದರೆ ಅವತ್ತು”ಈ ಸೆಂಚುರಿ ಶತಕೋಟಿ ಭಾರತೀಯರಿಗೆ’ ಅಂತ ಎಲ್ಲರಂತೆ ನೀನೂ ಸೋಗು ಹಾಕಬಹುದಿತ್ತು. ಆದರೆ ಟೀಕಾಕಾರರ ಬಗ್ಗೆ ತಲೆಕೆಡಿಸಿಕೊಳ್ಳದೆ, ಪತ್ನಿಯ ಮೇಲಿನ ಪ್ರೀತಿಯನ್ನು ತೋರಿಸಿಕೊಂಡೆ ಆಟವೊಂದೇ ಅಲ್ಲ, ವ್ಯಕ್ತಿತ್ವದಿಂದಲೂ ಆದರ್ಶ ವ್ಯಕ್ತಿಯೆನಿಸಿದೆ. ಸೋಗಲಾಡಿತನಕ್ಕೆ ಬದಲು ಆಟದಿಂದ ದೊಡ್ಡವನೆನಿಸಿದೆ. ಹೆಸರು ಹೇಳಿಕೊಳ್ಳದೆ ತೆರೆಮರೆಯಲ್ಲಿ ಮುಕ್ತ ಮನಸ್ಸಿನಿಂದ ದಾನ ಕಾರ್ಯವನ್ನು ಮಾಡುತ್ತಾ ಬಂದಿದ್ದೀಯಾ. ಮ್ಯಾಚ್ ಫಿಕ್ಸಿಂಗ್ ಕಳಂಕ ಎಲ್ಲರನ್ನೂ ಅಂಟಿದರೂ ನಿನ್ನ ನಿಷ್ಠೆ ಬಗ್ಗೆ, ದೇಶಪ್ರೇಮದ ಬಗ್ಗೆ ನಮ್ಮ ಮನದಲ್ಲಿ ಕಿಂಚಿತ್ತೂ ಸಂಶಯ ಮೂಡಲಿಲ್ಲ.

ಇಷ್ಟಕ್ಕೂ “Con’ಗಳ (ವಂಚಕರು) ನಡುವೆ”ಐಕಾನ್್’ ಆಗಿ ಉಳಿದವನು ನೀನು!

ಸಚಿನ್ ಮೇಲೆ ನಾವು ಇಟ್ಟಿರುವ ವಿಶ್ವಾಸ, ಕೊಟ್ಟಿರುವ ಸ್ಥಾನ ಅಂಥದ್ದು. ಭಾರತದಲ್ಲಿ ಕ್ರಿಕೆಟ್ಟೇ ಧರ್ಮ ಎನ್ನುವುದಾದರೆ ಅದಕ್ಕೆ ತೆಂಡೂಲ್ಕರ್ ದೇವರು. ಹೌದು, ಸಚಿನ್ ಕ್ರಿಕೆಟ್ ಪಾದಾರ್ಪಣೆ ಮಾಡಿದ ಆಸುಪಾಸಿನಲ್ಲಿ ಉಚ್ಚ್ರಾಯಸ್ಥಿತಿಗೆ ಬಂದ ಪಿಟಿ ಉಷಾ, ವಿಶ್ವನಾಥನ್ ಆನಂದ್ ಕೂಡ ನಮ್ಮ ಮುಕುಟಮಣಿಗಳಾಗಿದ್ದವರೇ. ಆದರೆ ಸಚಿನ್ ನಮ್ಮನ್ನು ಆವರಿಸಿದಷ್ಟು ಬೇರಾರಿಗೂ ಆಗಲಿಲ್ಲ. ಕಪಿಲ್ ದೇವ್ ವಿಶ್ವಕಪ್ ಗೆಲ್ಲಿಸುವ ಮೂಲಕ ನಮಗೆ ಖುಷಿ ತಂದರೇ ಹೊರತು ನಾವೆಂದೂ ಕಪಿಲ್್ರಿಂದ ದೊಡ್ಡದೇನನ್ನೂ ನಿರೀಕ್ಷಿಸಿದವರಲ್ಲ. ಸುನೀಲ್ ಗವಾಸ್ಕರ್ ಸಚಿನ್್ಗಿಂತ ಸಾಕಷ್ಟು ಮೊದಲೇ ಟೆಸ್ಟ್್ನಲ್ಲಿ 34 ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರಾದರೂ ನಾವು ಸಂಭ್ರಮಿಸಿದ್ದು ಮಾತ್ರ ಸಚಿನ್ ಸೆಂಚುರಿ ಹೊಡೆದಾಗಲಷ್ಟೇ. ಆತ ಏಕಾಂಗಿಯಾಗಿ ದೇಶವನ್ನು ಗೆಲ್ಲಿಸಿದ ಪಂದ್ಯಗಳ ಸಂಖ್ಯೆ ವಿರಳವಾಗಿರಬಹುದು. ಆದರೆ ಒಂದಿಡೀ ತಲೆಮಾರನ್ನು ಯಾರಾದರೂ ಬಹುವಾಗಿ ಪ್ರೇರೇಪಿಸಿದ್ದರೆ, ಹುರಿದುಂಬಿಸಿದ್ದರೆ ಅದು ಸಚಿನ್ ಮಾತ್ರ. ಆತ ಸತತವಾಗಿ ವಿಫಲಗೊಂಡಾಗ ನಮ್ಮ ಮನಸ್ಸು ಬೇಸರಗೊಂಡು, ನೋವು ತಿಂದು ಕಟುವಾಗಿ ಟೀಕಿಸಿದ್ದೂ ಇದೆ. ಇಷ್ಟಕ್ಕೂ ಬ್ಯಾಟಿಂಗ್್ನಲ್ಲಿ ಸೃಷ್ಟಿಸಬಹುದಾದ ಪ್ರತಿ ದಾಖಲೆಯೂ ಸಚಿನ್ ಹೆಸರಲ್ಲೇ ಇರಬೇಕೆಂದು ಆತನಿಗಿಂತ ಹೆಚ್ಚಾಗಿ ಬಯಸಿದ್ದವರು ನಾವೇ. ಸಚಿನ್ ಬಗ್ಗೆ ಯಾರಾದರೂ This little Bonzer plays like me ಅನ್ಯಥಾ ಮಾತನಾಡಿದಾಗ ಅವರ ಮೈಮೇಲೆ ಎರಗಿ ಬೀಳುತ್ತಿದ್ದವರೂ, ಏರಿ ಹೋಗುತ್ತಿದ್ದವರೂ ನಾವೇ.  ಎಂದು ಡಾನ್ ಬ್ರಾಡ್್ಮನ್ ಹೇಳಿದಾಗ ಸಚಿನ್್ಗಿಂತಲೂ ಹೆಮ್ಮೆಯಿಂದ ಬೀಗಿದ್ದವರೂ ನಾವೇ. ಸ್ವಂತಕ್ಕಾಗಿ ದೇವರನ್ನು ಭಜಿಸುವ ನಾವು ನಿಸ್ವಾರ್ಥವಾಗಿ ದೈವದ ಮುಂದೆ ಯಾರಿಗಾದರೂ ಪ್ರಾರ್ಥಿಸಿದ್ದರೆ ಅದು ಸಚಿನ್ ಶತಕಕ್ಕಾಗಿಯಷ್ಟೇ. ಭಾರತ ಸೋತಾಗಲೂ ಸಚಿನ್ ಹೊಡೆದನಲ್ಲಾ ಸಾಕು ಎಂದು ಅದೆಷ್ಟು ಸಲ ನಮಗೇ ನಾವೇ ಸಮಾಧಾನ ಮಾಡಿಕೊಂಡಿಲ್ಲ? ಭಗವಂತನ ಮೇಲೆ ವಿಶ್ವಾಸದ ಭಾರ ಹಾಕುವ ನಮ್ಮ, ನಿರೀಕ್ಷೆಯ ಭಾರವನ್ನು ಹೊತ್ತವನು ಸಚಿನ್ ಮಾತ್ರ.

ಕಳೆದ ಏಪ್ರಿಲ್್ನಲ್ಲಿ ಭಾರತ ವಿಶ್ವಕಪ್ ಗೆದ್ದಾಗ ನಮ್ಮ ಇಡೀ ತಂಡ ಟ್ರೋಫಿಗಿಂತ ಮೊದಲು ಹೊತ್ತು ಕುಣಿದಿದ್ದು ಸಚಿನ್್ನನ್ನು. ಆ ಬಗ್ಗೆ ಕೇಳಿದಾಗ,“He carried the burden of the nation for 21 years. It was time we carried him” ಎಂದಿದ್ದ ವಿರಾಟ್ ಕೋಹ್ಲಿ. ಹೌದು ಕಳೆದ 22 ವರ್ಷಗಳಿಂದ ನಮ್ಮ ನಿರೀಕ್ಷೆಗಳ ಭಾರಹೊತ್ತು ಬರುತ್ತಿರುವ ಸಚಿನ್ 100ನೇ ಶತಕ ದಾಖಲಿಸುವ ಮೂಲಕ ಮತ್ತೊಮ್ಮೆ ನಮ್ಮ ಆಶಯವನ್ನು ಈಡೇರಿಸಿದ್ದಾನೆ. ಆತನನ್ನು ಎತ್ತಿ ಕುಣಿಸುವ, ಹೊತ್ತು ಮೆರೆಯುವ,ಹಾಡಿ ಹೊಗಳುವ ದಿನ ಇಂದು ಮತ್ತೆ ಬಂದಿದೆ.

Thank you Sachin!

38 Responses to ““ಕಾನ್’ಗಳ ನಡುವೆ ಹೆಮ್ಮರವಾಗಿ ಬೆಳೆದ “ಐಕಾನ್’!”

  1. Deepa says:

    Good one… 🙂

  2. ranjith.b says:

    Realy a true Article and heart touching whatever you explained in this article is the same feeling whole nation.

  3. Raghavendra Shet says:

    Awesome article 🙂

  4. Maheshg says:

    wonderful sir…….

  5. hitesh says:

    Hi Pratap,

    Thank you for your good article on Sachin…:)

    Thanks
    Hitesh

  6. Vishwa Hegde says:

    good one sir, but yu have written exact same lines long back, yu have jus updated the previous one, i still have that paper wid me,

  7. Parameshwar says:

    ಕ್ರಿಕೇಟ್ ನ ರೋಚಕ ಕಾಲಘಟ್ಟ ಗಳನ್ನು ಮೆಲುಕು ಹಾಕುವ ಲೇಖನ ಅದ್ಭುತವಾಗಿದೆ. ಇಂತಹ ಲೇಖನಕ್ಕಾಗಿ ನಿಮಗೆ ಧನ್ಯವಾದಗಳು.

  8. Anand kendole says:

    Goood one Sir……

  9. murthy m gowda says:

    really a super article…. this will inspire so many people… and increase respect about GOD SACHIN thank u for this article…

  10. Shivaraj says:

    Nice article Pratap Brother. I dont know where you collect like this effective words…really i appreciate your every article..whenever i read your articles it feels me different…..superb…keep it up.

  11. Krishnamurthy says:

    Saadhakarige baravill Bharathadalli, Adare SACHIN kevala saadhakanalla MAHAN PRERAKA!
    INDIA’S REAL ROLE MODEL AFTER INDEPENDENCE!
    Thankyou Sachin

  12. deepak says:

    good one…

  13. Shantkumar n k says:

    Really Great God of Cricket ..

  14. DATTA says:

    a true indian

  15. Raghu says:

    He is a Genius……. Nice Article……

  16. We were expecting a new article,not modified of Old one

  17. Prashant Mane says:

    Dear Pratap Sir,

    Nice article, Please we all your fans want to see you in Suvarna News…….!!!

    I hope you rocks on Suvarna News……!!!!!!

  18. jp giliyar says:

    ಪ್ರತಾಪ್ ಕ್ರಿಕೆಟ್ ದೇವರ ಬಗ್ಗೆ ಎಷ್ಟು ಹೇಳಿದರು ಕಮ್ಮಿನೆ …..ದಿನವೆಲ್ಲ ಬೆವರು ಸುರಿಸುವ ಬಡವ ಅವನ ಒಂದೊಂದು ರನ್ನಿಗು ಚಪ್ಪಾಳೆ ತಟ್ಟಿ ಖುಷಿ ಪಡುತ್ತಾನೆ ……ನಿಮ್ಮ ಎಂದಿನ ಬರವಣಿಗೆಯಂತೆ ಇರಲಿಲ್ಲವಾದರೂ ………ಇನ್ನಸ್ಟು ಚೆನ್ನಾಗಿ ಬರಿಬಹುದಿತ್ತು ……ಕೊನೆಗೂ ಸಚ್ಚಿನ ಬಗ್ಗೆ ಬರೆದಿದ್ದಕ್ಕೆ ಥ್ಯಾಂಕ್ಸ್ ………now days im waiting for your article….jai hoooooooooo chak de india

  19. Nagaraj.k says:

    Super article sir.sachin vabba adbutha aatagara avaru madiruva dakalegalu bharatiyarada namage hemmeya vichara. Avara sports man spirit yuva cridapatugalige adarsha.sachin cricket ge vidaya heluvuduakke edu vallexa samaya. Kaleda 1 varsadinda avara aata namage besara tandide. Monne bangladeduru India solalu kevala bowlergala vypalyavaste alla alli sachinravara satakada karanavu ede. 40 vayassige sameepadalliruva sachin yuvakarige avakasa madikodabeku. Sachin elladiddaru sehavag,Gambir,kohli,Dhoni,Raina rantha match gellisi koduva aatagarariddare. Testnalli dravidravara agatya eddaru yuvakarige avakasa madikottiddare.

  20. hi pratap sir,
    very nice article about sachin.hatesup to sachin

  21. Deepika says:

    Great one…..Heart touching article….Whole nation was waiting 4 his 100th TON. When he scored 100th 100 even we lost d match against Bangladesh, all were happy because of Sachin.
    Sachin is the GOD of Cricket…

  22. super guru……………………

  23. Kiran says:

    For your information , 1n 1998 he made both the centurys against australia

  24. Anil says:

    Yes, really heart touching, very true, well said

  25. Nagesh says:

    Nice Article about cricket god..

  26. Reality article………….sir……………..,

  27. charushree says:

    sir,,,,,,ya its fantastic,,,,here u,, did not said only abt god how special he is from others,,,,,,,,,,then ur unique dimenshion abt thinking a subject is nice,,,,ya that is what u said ,,how curiously we waits for sachin’s progress ?,,,its abt how indians likes the best person,,,,,,,,,.

  28. muthu raj says:

    22 varshadinda yaaru kottiddare heli istondu khushiyanna.

  29. shivashankar says:

    thank u sir…… Nice article………..

  30. Soujanya N Jain says:

    Yes.. you are right thank you for such a wonderful .. Article its really heart touching awesome. .. The Great Simple Super Man Sachin .. no words.

  31. Vijaya Kumara M says:

    Dear Prathap,

    Article is wonderful, you have written about Sachin’s greatness, meanwhile why don’t you write about his weaknesses. So that the new generation will learn about his weaknesses & they will come out from them. Hopefully it would be a useful lesson to all of us.

    Regards,
    Vijaya Kumara M

  32. Chandru says:

    Superb sir.. You are such a wonderful article columnist………. 🙂

  33. ASHOK says:

    anna, it is wounderfull wrighting

  34. Shridhar Gangadhar says:

    you are right. But His time is Up. please retire Gracefully !!

  35. ANIL says:

    we cant talk about your writing………………….

  36. Keerthinarayan says:

    Pratap! definitely Sachin is an icon…….. True enough..But for a person to be a role model for the people just his acheivements don’t suffice. It has to be something greater than that.The person should have served that field selflessly..
    In your previous articles you yourelf had highlighted how sachin would skip minor tournaments stating he required rest and yet make himself available for ipl..
    You had written about how ponting and clarke prioritised their country over ipl.
    You yourself had dwelt about the selfless service of Dravid.
    Given all that, would you still say he is a true role model for the nation and its lakhs of budding cricketers?

    I ve got nothing against sachin and am myself a great fan of his.

  37. Mallesh says:

    nice one

  38. manjunath.v.c says:

    he is god….. such a wonderful article…. thank u sir…..