Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ?

ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ?

ನಾನು ಕ್ರೈಸ್ತ. ಜನ್ಮತಃ ಕ್ರೈಸ್ತ. ನಾನು ಪಾಲಿಸುವುದು, ಅನುಸರಿಸುವುದು, ವಿಶ್ವಾಸಿಸುವುದೂ ಕ್ರೈಸ್ತ ಧರ್ಮವನ್ನೇ. ಪ್ರತಿ ಭಾನುವಾರ ಚರ್ಚ್ ಗೆ ಹೋಗುತ್ತೇನೆ.

ಆದರೆ…

ನಾನು ಆರೆಸ್ಸೆಸ್ ನಿಂದಲೂ ಬಹಳಷ್ಟು ವಿಚಾರಗಳನ್ನು ಕಲಿತಿದ್ದೇನೆ. ನಾನು ಆರೆಸ್ಸೆಸ್ ನ ಅಭಿಮಾನಿಯಾಗಿದ್ದು 1979ರಲ್ಲಿ. ಆಗ ಕೋಯಿಕ್ಕೋಡ್ ನ ಜಿಲ್ಲಾ ನ್ಯಾಯಾಧೀಶನಾಗಿದ್ದೆ. ಸರಳ ಜೀವನ, ಉದಾತ್ತ ಚಿಂತನೆ ಆರೆಸ್ಸೆಸ್ ನ ಹೆಗ್ಗುರುತು. ಮಹಾತ್ಮ ಗಾಂಧೀಜಿ ಹತ್ಯೆಗೆ ಆರೆಸ್ಸೆಸ್ ಕಾರಣ ಎನ್ನುವ ಕೆಟ್ಟ ಪ್ರಚಾರಾಂದೋಲನ ಮೊದಲು ನಿಲ್ಲಬೇಕು. ಯಾವುದೋ ಒಂದು ಕಾಲದಲ್ಲಿ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ವ್ಯಕ್ತಿ ಎಸಗಿದ ಕೃತ್ಯಕ್ಕೆ ಸಂಘಟನೆಯನ್ನೇ ದೂರುವುದು ಸರಿಯಲ್ಲ. ಆರೆಸ್ಸೆಸ್ಸನ್ನು ನ್ಯಾಯಾಲಯವೇ ನಿರ್ದೋಷಿಯೆಂದು ತೀರ್ಪಿತ್ತಿದೆ. ಮಿಗಿಲಾಗಿ ಇಡೀ ಸಿಖ್ ಸಮುದಾಯವೇ ಇಂದಿರಾ ಗಾಂಧಿ ಹತ್ಯೆಗೆ ಕಾರಣ ಎನ್ನಲು ಸಾಧ್ಯವೆ? ಆರೆಸ್ಸೆಸ್ ಅಲ್ಪಸಂಖ್ಯಾತ ವಿರೋಧಿ ಎಂಬ ಪ್ರಚಾರಾಂದೋಲನ ಕೂಡ ಆಧಾರರಹಿತ. ನಾನು ಆರೆಸ್ಸೆಸ್್ನ ದೊಡ್ಡ ಅಭಿಮಾನಿ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಏಕಮಾತ್ರ ರಾಜಕೀಯೇತರ ಸಂಘಟನೆ ಆರೆಸ್ಸೆಸ್. ನಮ್ಮ ಮೂಲಭೂತ ಹಕ್ಕುಗಳನ್ನು ಮರಳಿ ಗಳಿಸಿಕೊಡುವುದಕ್ಕಾಗಿ ಹಲವು ಜೀವಗಳನ್ನೇ ಬಲಿಕೊಟ್ಟ ಆರೆಸ್ಸೆಸ್ ಗೆ ನಾವೆಲ್ಲ ಆಭಾರಿಯಾಗಿರಬೇಕು…….”

ಮೊನ್ನೆ ಆಗಸ್ಟ್ 1ರಂದು ಕೊಚ್ಚಿಯಲ್ಲಿ ನಡೆದ ಸಮಾರಂಭವೊಂದನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್್ನ ಮಾಜಿ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಈ ರೀತಿ ಹೇಳುತ್ತಿದ್ದರೆ ನೆರೆದವರು ನಿಬ್ಬೆರಗಾಗಿ ನೋಡುತ್ತಿದ್ದರು!

ತುರ್ತು ಪರಿಸ್ಥಿತಿಯೊಂದೇ ಅಲ್ಲ. ಭಾರತ-ಪಾಕಿಸ್ತಾನ, ಭಾರತ-ಚೀನಾ ಯುದ್ಧಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡಿದ ಸಂಘಟನೆ ಅದು. ಯಾವ ಪ್ರಧಾನಿ ನೆಹರು ಗಾಂಧೀ ಹತ್ಯೆ ನೆಪದಲ್ಲಿ ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದರೋ ಅದೇ ನೆಹರು ಚೀನಾ ಯುದ್ಧದ ತರುವಾಯ ಗಣರಾಜ್ಯೋತ್ಸವ ದಿನದ ಪರೇಡ್ ಗೆ ಆರೆಸ್ಸೆಸ್ ಗೆ ಆಹ್ವಾನ ನೀಡಿದ್ದರು. ಇಂದಿಗೂ ಬರ, ನೆರೆ, ಪ್ರವಾಹ, ಪ್ರಕೋಪ, ವಿಕೋಪ, ಭೂಕಂಪ, ದುರ್ಘಟನೆ ಯಾವುದೇ ಅನಾಹುತಗಳು ಸಂಭವಿಸಿದರೂ ಮೊದಲಿಗೆ ಧಾವಿಸುವುದು ಆರೆಸ್ಸೆಸ್, ನಂತರ ಆಗಮಿಸುತ್ತದೆ ನಮ್ಮ ಸರ್ಕಾರಿ ಆಡಳಿತ ಯಂತ್ರ. ಇಷ್ಟಾಗಿಯೂ ಬಹಳಷ್ಟು ಜನ ಆರೆಸ್ಸೆಸ್ ಶಾಖೆಗೂ ಮದ್ರಸಾಗಳಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಭಾವಿಸಿದ್ದಾರೆ, ಮಾಧ್ಯಮಗಳ ಒಂದು ವರ್ಗವೂ ಅದೇ ತೆರನಾದ ಪ್ರಚಾರಾಂದೋಲನ ಮಾಡುತ್ತದೆ, ಅನುಮಾನಗಳನ್ನು ಹೋಗಲಾಡಿಸುವ ಬದಲು ಹುಸಿ ವರದಿಗಳ ಮೂಲಕ ಅನುಮಾನಕ್ಕೆ ಇನ್ನಷ್ಟು ಆತಂಕಗಳ ಭಾರವನ್ನು ಹೊರಿಸುತ್ತವೆ. ಹಾಗಂತ ಆರೆಸ್ಸೆಸ್ ಬಗ್ಗೆ ಇರುವ ಅನುಮಾನಗಳು ನಿಜವಾಗಿ ಬಿಡುತ್ತವೆಯೇ? ಮದ್ರಸಾಗಳಿಗೂ, ಶಾಖೆಗಳಿಗೂ ವ್ಯತ್ಯಾಸವಿಲ್ಲವೆ? ಇಷ್ಟಕ್ಕೂ ಶಾಖೆಗಳಲ್ಲಿ ಹೇಳಿಕೊಡುವುದಾದರೂ ಏನನ್ನು? ತಥಾಕಥಿತ ವಿರೋಧಿಗಳು ಎಂದಾದರೂ ಶಾಖೆಗೆ ಹೋಗಿ ಸತ್ಯಾಸತ್ಯವನ್ನು ಪರೀಕ್ಷಿಸಿ ನೋಡಿದ್ದಾರೆಯೇ? ಆರೆಸ್ಸೆಸ್ ಕಚೇರಿಗಳಿಗೆ ಹೋಗಿ, ಅಲ್ಲಿರುವ ಗ್ರಂಥಾಲಯದ ಕಪಾಟುಗಳನ್ನು ತಡಕಾಡಿದರೆ ಏನು ಸಿಗಬಹುದು ಅಂದುಕೊಂಡಿರಿ?

 

ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಶಿವಾಜಿ ಮಹಾರಾಜ, ಚಂದ್ರಶೇಖರ ಆಝಾದ್, ಆಲ್ಫಾಕುಲ್ಲಾ ಖಾನ್ ಇಂತಹ ಅಪ್ರತಿಮ ಶೂರರ ಶೌರ್ಯ, ಸಾಹಸ, ಹೋರಾಟ, ತ್ಯಾಗ, ಬಲಿದಾನಗಳನ್ನು ಹೇಳುವ ಪುಸ್ತಕಗಳು ಸಿಗುತ್ತವೆಯೇ ಹೊರತು ಬಾಂಬ್್ಗಳಲ್ಲ. ಆರೆಸ್ಸೆಸ್ ನ ಶಾಖೆಗಳಲ್ಲಿ ಹೇಳಿಕೊಡುವುದೂ ಇಂತಹ ವೀರರ ಕಥೆಗಳನ್ನೇ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಇಂತಹ ಕ್ರಾಂತಿಕಾರಿಗಳನ್ನು NCERT ಪುಸ್ತಕಗಳಲ್ಲಿ  “ಭಯೋತ್ಪಾದಕ “ರೆಂದು ಚಿತ್ರಿಸಿರುವ ಕಾಂಗ್ರೆಸ್ಸಿಗರಿಂದ ಆರೆಸ್ಸೆಸ್ ಬಗ್ಗೆ ಒಳ್ಳೆಯ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವೇ? ಕಳೆದ ವಾರ ಸಿಎನ್ ಎನ್-ಐಬಿಎನ್ ಚಾನೆಲ್ ನ  “ಡೆವಿಲ್ಸ್ ಅಡ್ವೊಕೇಟ್  ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್  “ಆರೆಸ್ಸೆಸ್ ಒಂದು ಬಾಂಬ್ ತಯಾರಿಸುವ ಕಾರ್ಖಾನೆ ” ಎಂದಿದ್ದಾರೆ! 2008ರಲ್ಲಿ ಮುಂಬೈ ಮೇಲೆ ದಾಳಿಯಾದಾಗಲೂ ಹಿಂದು ಭಯೋತ್ಪಾದಕರ ಕೈವಾಡವಿರಬಹುದು ಎಂದಿದ್ದ ಆಗಿನ ಕೇಂದ್ರ ಸಚಿವ ಎ.ಆರ್. ಅಂಟುಳೆ ಆರೆಸ್ಸೆಸ್ ನತ್ತ ಬೆರಳು ತೋರಿದ್ದರು. ಅದರ ಬೆನ್ನಲ್ಲೇ ತಮ್ಮ ಆಚಾರವಿಲ್ಲದ ನಾಲಗೆಯನ್ನು ಹೊರ ಹಾಕಿದ್ದ ದಿಗ್ವಿಜಯ್ ಸಿಂಗ್,  “ಮುಂಬೈ ದಾಳಿಯಲ್ಲಿ ಮಡಿದ ಹೇಮಂತ್ ಕರ್ಕರೆ ದಾಳಿಗಿಂತ 2 ಗಂಟೆ ಮೊದಲು ನನಗೆ ಕರೆ ಮಾಡಿ, ಹಿಂದು ಕಟ್ಟರ್ ವಾದಿಗಳಿಂದ ನನಗೆ ಜೀವ ಬೆದರಿಕೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು ” ಎನ್ನುವ ಮೂಲಕ ಮತ್ತೆ ಆರೆಸ್ಸೆಸ್-ವಿಶ್ವ ಹಿಂದು ಪರಿಷತ್ ಬಗ್ಗೆಯೇ ಸಲ್ಲದ ಟೀಕೆ ಮಾಡಿದ್ದರು. ಮೊನ್ನೆ ಜುಲೈ 13ರಂದು ಕಸಬ್ ಜನ್ಮದಿನದ ಕೊಡುಗೆ ರೂಪದಲ್ಲಿ ಮತ್ತೆ ಮುಂಬೈ ಮೇಲೆ ಆಕ್ರಮಣವಾದಾಗಲೂ ದಿಗ್ವಿಜಯ್ ಆರೆಸ್ಸೆಸ್ ನ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ನನ್ನ ಬಳಿ ಸಾಕ್ಷ್ಯಾಧಾರವಿದೆ ಎಂದೂ ಪ್ರತಿಪಾದಿಸಿದರು. ಈತ ಎಂತಹ ಹರುಕುಬಾಯಿಯ ವ್ಯಕ್ತಿ ಎಂಬುದು ಇಡೀ ದೇಶಕ್ಕೇ ಗೊತ್ತಾಗಿದೆ. ಟ್ವಿಟ್ಟರ್ ನಲ್ಲಿ  “ಡಿಗ್ಗಿಲೀಕ್ಸ್  ” ಎಂಬ ಒಂದು ಥ್ರೆಡ್ ಇದ್ದರೆ, ಫೇಸ್ ಬುಕ್, ಆರ್ಕುಟ್ ಗಳಲ್ಲಿ ನಾಯಿಯ ಮುಸುಡಿಗೆ ಇವರ ಮುಖ ಅಂಟಿಸಿ,  “DOGvijay ”  ಎಂದೇ ಸಂಬೋಧಿಸಲಾಗುತ್ತಿದೆ! ಹಾಗಿದ್ದರೂ ಮಾಧ್ಯಮಗಳೇಕೆ ಇಂತಹ ಮತಿಗೇಡಿ ಮನುಷ್ಯನ ಮಾತಿಗೆ ಸಲ್ಲದ ಪ್ರಚಾರ ಕೊಟ್ಟು ಆರೆಸ್ಸೆಸ್ಸನ್ನು ಪದೇ ಪದೆ ಕಟಕಟೆಗೆ ತಂದು ನಿಲ್ಲಿಸಲು, ಸಮಜಾಯಿಸಿ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸಲು ಪ್ರಯತ್ನಿಸುತ್ತವೆ? ಪಾಕಿಸ್ತಾನದ ಅಬೋಟಾಬಾದ್್ನಲ್ಲಿ ಅಡಗಿದ್ದ ಒಸಾಮ ಬಿನ್ ಲಾಡೆನ್ ನನ್ನು ಕಳೆದ ಮೇ 2ರಂದು ಅಮೆರಿಕ ಪತ್ತೆಹಚ್ಚಿ ಕೊಂದಾಗ,  “ಒಸಾಮಾಜಿ ” ಎಂದು ಸಂಬೋಧಿಸಿದ್ದ ಈ ವ್ಯಕ್ತಿಯ ಯೋಗ್ಯತೆ ಏನೆಂದು ಗೊತ್ತಾಗಿಲ್ಲವೇ? ಆತನ ಮಾತಿಗೆ ಎಷ್ಟು ಬೆಲೆ ಕೊಡಬೇಕೆಂಬುದು ತಿಳಿದಿಲ್ಲವೆ? ಏಕೆ ಆರೆಸ್ಸೆಸ್ಸನ್ನು ಹಳಿಸಲು ಇಂತಹ ಅಯೋಗ್ಯ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಾರೆ?

ಅದಿರಲಿ, ಕಳೆದ ಎಂಟೂವರೆ ದಶಕಗಳಿಂದ ರಾಷ್ಟ್ರಚಿಂತನೆಯ ಪ್ರಸಾರದಲ್ಲಿ, ರಾಷ್ಟ್ರಭಕ್ತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆರೆಸ್ಸೆಸ್್ನಲ್ಲಾಗಲಿ, ಅದಕ್ಕೆ ಹೊಂದಿಕೊಂಡಿರುವ ವಿಶ್ವ ಹಿಂದು ಪರಿಷತ್್ನಲ್ಲಾಗಲಿ ಅಸೀಮಾನಂದ, ಪ್ರಗ್ಯಾಸಿಂಗ್, ಇಂದ್ರೇಶ್ ಕುಮಾರ್ ಮುಂತಾದ ಕೋಪಾಗ್ನಿಗಳು ಏಕೆ ಸೃಷ್ಟಿಯಾದವು? ಈ ಬಗ್ಗೆ ದಿಗ್ವಿಜಯ್ ಸಿಂಗ್ ಅವರು ಹಾಗೂ ಅವರ ಮಾಧ್ಯಮ ಮಿತ್ರರು ಒಸಾಮನ ವಂಶಸ್ಥರನ್ನೇ ಪ್ರಶ್ನಿಸಬಹುದಲ್ಲವೆ? 900 ವರ್ಷಗಳ ಮುಸ್ಲಿಂ ಆಕ್ರಮಣಕಾರರ ದೌರ್ಜನ್ಯ, 150 ವರ್ಷಗಳ ಬ್ರಿಟಿಷ್ ದೌರ್ಜನ್ಯವನ್ನೇ ಸಹಿಸಿಕೊಂಡಿದ್ದ ಹಿಂದುಗಳಲ್ಲಿ ಈಗೇಕೆ ಕೋಪಾಗ್ನಿ ಸ್ಫೋಟಗೊಳ್ಳುತ್ತಿದೆ? ಮಾಲೆಗಾಂವ್ ಸ್ಫೋಟ, ಅಜ್ಮೇರ್ ದುರಂತಗಳು ಏಕೆ ಸಂಭವಿಸಿದವು? ಮುಸ್ಲಿಮರು ಭಯೋತ್ಪಾದನೆಯತ್ತ ಆಕರ್ಷಿತಗೊಳ್ಳಲು ಅನಕ್ಷರತೆ, ನಿರುದ್ಯೋಗ, ಹಿಂದು ಕೋಮುವಾದ ಹೀಗೆ ಕಾರಣ ಹುಡುಕುತ್ತಾರಲ್ಲಾ ಹಿಂದುಗಳ ಪ್ರತಿದಾಳಿಗೆ ಎಡೆಮಾಡಿಕೊಟ್ಟಿರುವ ಕಾರಣವನ್ನೂ ಹುಡುಕಬಹುದಲ್ಲವೆ? ಇನ್ನು ಎಷ್ಟು ವರ್ಷ ಅಂತ ಇಸ್ಲಾಮಿಕ್ ಭಯೋತ್ಪಾದನೆಯನ್ನು ಸಹಿಸಿಕೊಳ್ಳಬೇಕು? ಸುಮ್ಮನೆ ಕುಳಿತರೆ ಯಾವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಕಾಶ್ಮೀರಿ ಪಂಡಿತರ ಉದಾಹರಣೆ ಕಣ್ಣಮುಂದಿಲ್ಲವೆ? ಇಸ್ಲಾಮಿಕ್ ಭಯೋತ್ಪಾದನೆಯನ್ನು ನಮ್ಮ ಸರ್ಕಾರವೇ ತಹಬಂದಿಗೆ ತರುವ ದಾಢಸಿತನ ತೋರಿದ್ದರೆ ಹಿಂದುಗಳ ಆಕ್ರೋಶಕ್ಕೆ ಕಾರಣವೇ ಇರುತ್ತಿರಲಿಲ್ಲ, ಅಲ್ಲವೆ?

1947ರಲ್ಲಿ ದೇಶ ವಿಭಜನೆಯಾದಾಗ ಪೂರ್ವಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) 30 ಪರ್ಸೆಂಟ್ ಇದ್ದ ಹಿಂದುಗಳ ಸಂಖ್ಯೆ ಈಗ ಎಷ್ಟಿದೆ? 1991ರ ಬಾಂಗ್ಲಾ ಜನಗಣತಿಯ ಪ್ರಕಾರ ಹಿಂದುಗಳ ಸಂಖ್ಯೆ 10.5 ಪರ್ಸೆಂಟ್! ಇವತ್ತು ಆ ಪ್ರಮಾಣ 5 ಪರ್ಸೆಂಟ್್ಗಿಂತಲೂ ಕೆಳಗಿಳಿದಿದೆ. ಇದಕ್ಕೆ ಯಾರು ಕಾರಣ? ಇದುವರೆಗೂ 2 ಕೋಟಿ ಬಾಂಗ್ಲಾ ಹಿಂದುಗಳು ಕಣ್ಮರೆಯಾಗಿದ್ದಾರೆ. ಒಂದೋ ಅವರು ಬಲವಂತವಾಗಿ ಮತಾಂತರಗೊಂಡಿದ್ದಾರೆ, ಇಲ್ಲವೆ ಮಸಣ ಸೇರಿದ್ದಾರೆ. ಈ ಮಧ್ಯೆ ನಮ್ಮ ಪಶ್ಚಿಮ ಬಂಗಾಳದಲ್ಲಿ 1947ರಲ್ಲಿ ಶೇ 12ರಷ್ಟಿದ್ದ ಮುಸ್ಲಿಮರ ಸಂಖ್ಯೆ ಇವತ್ತು 26 ಪರ್ಸೆಂಟ್ ದಾಟಿದೆ! ಅದು ಸಾಲದೆಂಬಂತೆ ದೀಪಾವಳಿಯ ಮುನ್ನಾದಿನ ರಾಜಧಾನಿ ದಿಲ್ಲಿಯಲ್ಲಿ ಹಬ್ಬದ ಖರೀದಿಯಲ್ಲಿ ತೊಡಗಿದ್ದ 65 ಹಿಂದೂಗಳನ್ನು ಬಾಂಬ್ ಸ್ಫೋಟಿಸಿ ಕೊಂದರು, ಅಕ್ಷರಧಾಮದ ಮೇಲೆ ಆಕ್ರಮಣ ಮಾಡಿದರು. ಇಂತಹ ಘಟನೆಗಳನ್ನು ಹಿಂದುಗಳು ಎಷ್ಟು ದಿನ ಅಂತ ಸಹಿಸಿಕೊಂಡು ಕುಳಿತುಕೊಳ್ಳಬೇಕು? ಹಿಂದುಗಳು ಬಂದೂಕು ಎತ್ತುವಂತೆ, ಬಾಂಬಿಡುವಂತೆ ಮಾಡಿದವರಾರು? ಆತ್ಮರಕ್ಷಣೆಗಾಗಿ ಬಾಂಬ್ ಮೂಲಕವೇ ಪ್ರತ್ಯುತ್ತರ ನೀಡಲು ಹೊರಟರೆ ಅದನ್ನು ಹೇಗೆ ಭಯೋತ್ಪಾದನೆ ಎನ್ನಲು ಸಾಧ್ಯ? 1972ರ ಮ್ಯೂನಿಕ್ ಒಲಿಂಪಿಕ್ಸ್ ವೇಳೆ ಇಸ್ರೇಲಿ ಕ್ರೀಡಾ ತಂಡವನ್ನು ಒತ್ತೆಯಾಗಿ ತೆಗೆದುಕೊಂಡು ಕಗ್ಗೊಲೆಗೈದ ಇಸ್ಲಾಮಿಕ್ ಭಯೋತ್ಪಾದಕರು ಹಾಗೂ ಅವರಿಗೆ ಬೆಂಬಲ ಕೊಟ್ಟವರನ್ನು ಇಸ್ರೇಲ್ ಹೆಕ್ಕಿ ಕೊಲ್ಲಲಿಲ್ಲವೆ? 9/11 ದಾಳಿಗೆ ಪ್ರತಿಯಾಗಿ ಅಮೆರಿಕ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಲಿಲ್ಲವೆ? ಒಸಾಮನನ್ನು ಬೆನ್ನಟ್ಟಿ ಹೋಗಿ ಕುಕ್ಕಿ ಸಾಯಿಸಲಿಲ್ಲವೆ? ಪಾಕಿಸ್ತಾನದ ಪರಮಮಿತ್ರ ಚೀನಾವೇ ತನ್ನ ನೆಲದಲ್ಲಿ ತಲೆಯೆತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಗೆ ಮೊನ್ನೆ ಪಾಕಿಸ್ತಾನವನ್ನು ದೂರಿಲ್ಲವೆ? ಸ್ಥಳೀಯರ ಸಹಾಯವಿಲ್ಲದೆ ಮುಂಬೈನಂಥ ದಾಳಿಯನ್ನು, ಹೈದರಾಬಾದ್್ನ ಲುಂಬಿನಿ ಗಾರ್ಡನ್, ದಿಲ್ಲಿ, ಪುಣೆಯ ಜರ್ಮನ್ ಬೇಕರಿ ಸ್ಫೋಟಗಳಂಥ ದಾಳಿಗಳನ್ನು ಮಾಡಲು ಸಾಧ್ಯವಿತ್ತೆ? ಅಸೀಮಾನಂದ, ಪ್ರಗ್ಯಾಸಿಂಗ್್ರಂಥವರು ಇಂತಹ ದಾಳಿಗಳಿಂದ ಸೃಷ್ಟಿಯಾದ ಪ್ರತ್ಯಾಸ್ತ್ರಗಳೆನಿಸುವುದಿಲ್ಲವಾ?

ಈ ದೇಶ ಇಬ್ಭಾಗವಾಗಲು ಕಾರಣವಾದ ಮುಸ್ಲಿಂ ಲೀಗ್ ನ ಹೆಸರನ್ನಿಟ್ಟುಕೊಂಡಿರುವವರ ಜತೆ ಸೇರಿ ಕೇರಳದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ಸಿಗರಿಗೆ ಆರೆಸ್ಸೆಸ್ ಎಂಥ ರಾಷ್ಟ್ರವಾದಿ ಸಂಘಟನೆ, ಹಿಂದುಗಳ ಆತಂಕಗಳೇನು ಎಂಬುದು ಹೇಗೆ ತಾನೇ ಅರ್ಥವಾದೀತು?

68 Responses to “ಆರೆಸ್ಸೆಸ್ ಬಾಂಬ್ ತಯಾರಿಸುವ ಕಾರ್ಖಾನೆಯೇ?”

 1. Shobha Desai says:

  we want ‘hammurabi shasan’

 2. sathish says:

  SUPER ARTICLE SIR

 3. H.S.Shyamachar says:

  nice one nijavaagiyu namma deshada ondu hemmeya vishaya andare RSS namma deshadalli iruvudu

 4. pramod shetty says:

  ಈ ಮಾತನ್ನು ಸಾಮಾನ್ಯ ಮನುಷ್ಯರು ಯಾವಾಗ ಅರ್ಥ ಮಾಡುತ್ತಾರೋ ಗೊತ್ತಿಲ್ಲ .ಎಲ್ಲದಕ್ಕೂ ಈ ರಾಜಕೀಯ ಪಕ್ಷಗಳೇ ಕಾರಣ .ಅರ್.ಎಸ್.ಎಸ್ .ಎಂಬುದು ಸನಾತನ ಧರ್ಮವನ್ನು ಉಳಿಸಲು ಹೋರಾಟ ಮಾಡುತ್ತಿರುವ ಸಂಘಟನೆ .ನಮ್ಮ ಧರ್ಮ ಯಾರ ವಿರೋಧಿಯೂ ಅಲ್ಲ .ನಾವು ನಮ್ಮ ಧರ್ಮವನ್ನು ಉಳಿಸಿ ,ಬೆಳೆಸಲು ,ಒದ್ದಾಡುತ್ತಿದ್ದೇವೆ .ಕೇಸರಿ ಶಾಲು .ಲುಂಗಿ ಹಾಕಿದರೆ ಎಲ್ಲರೂ ಕೋಮುವಾದಿಗಳು ಅಂತ ಹೇಳುತ್ತಾರೆ .ಎಲ್ಲವೂ ರಾಜಕೀಯದಿಂದ ……ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಸತ್ಯ ವಾದ ಮಾತುಗಳನ್ನು ನಿಮ್ಮ ಈ ಲೇಖನದ ಬಗ್ಗೆ ತಿಳಿಸಿದಕ್ಕೆ ತುಂಬಾ ಧನ್ಯ ವಾದಗಳು .ನಾವು ಹಿಂದೂ ಪ್ರೇಮಿಗಳೇ ಹೊರತು ..ಉಳಿದ ಧರ್ಮ ವಿರೋಧಿಗಳಲ್ಲ

 5. Deepu says:

  Nice article.

  To follow the American and Israel way…we should have RSS government at the center or Mr. LK Advani as our President.

 6. Reddi says:

  Super article Pratap and long live RSS.

 7. Shrinidhi says:

  That’s true..but whatever u tell to congress people they actually find fault in what u tell rather than correcting it..

 8. Rachanna says:

  Sir really superb article thank you very much sir…..!!

 9. Rudra nagendra swamy says:

  its realy right answer to congress people

 10. Vinod says:

  As noted by Dr. Subramaniam Swamy, I believe that, unless we Hindus unite nothing much can be done. The article in DNA “How to wipe out Islamic Terror” is the correct solution. Eye for an eye doesn’t do much apart from spilling more blood. Dr. Swamy does not promote violence in his article but gives some tactical solutions. If we involve in violence then it proves something dangerous and narrows the difference between we Hindus and Violent Islamic extremists (I am referring to those Muslims of India for whom Islamic Brotherhood is superior than the nation).

 11. Sathwik says:

  Nice article…

 12. bhale, Pratapa Simha, congressina mukhavada chennagi kalachiddiri. `vote bank’ raajakarana maaduttiruva congrss haagu itare pakshagalige buddhi kalisalu iruvudonde dari. adu `hindu mata bank’ stapisuvudu. Hindugalella tamma jati, mata, pantha, paksha bedha maretu ondadalli ide congress tanu `hindu paksha’ endu helikollalu hesuvudilla. `navugalu hindugale. Adare mahatma Gandhi, swamy vivekanandaru heluva `hindu’ horatu RSS heluva `Hidutva’ alla endu egagale kelavu congressigaru `summana’ haduvante maduttiruvudu ide `mata bank’ rajakarana! rajakeeyavaadi `hindugalu’ oggattagadiddare avarire bhavishyavilla ennuvudu `katu satya’.

 13. vani says:

  excellent article sir…….. people should understand RSS is not ‘komuvadi’ it is ‘rashtreeyavadi’

 14. Poornachandra says:

  Hi, Pratap…..
  Became too much happy after reading Ur Article ! About the Bad DOG! I was requested for the Same to U,

  Happy………. To see the article about dog ! Very Well written carry on , Keep the Things up!

  Thnaks………

 15. Vijay says:

  Nice article!!! Hats off to RSS…..

 16. Shivaraj says:

  Good article Prathap… Got lots of thing from this… If it is in English then at least “DOGvijay” cane able to read.. also his another name is “PIGvijay”….

 17. Varun.naikar says:

  Hmmm……I know you are a prejudiced….remember….”Hell hath no fury like justice scorned”

 18. mudasar says:

  Dear Pratap,

  This article is really nice. After reading this article felt like reading other articles of yours but friend after reading your appeal to the readers first time in my life i got a feeling that am a muslim.

  I did my schooling in a Brahmin Management school, I have more non muslim friends than muslim friends never felt in 24 years that we are different. I am not a columnist, not a writer, nor a journalist. I am a proud indian want to always be one.

  JAI HIND

 19. Pramod says:

  Excellent…article bro…JAI HIND!

 20. girish says:

  Hindhustan jindabad, RSS jindabad

 21. Vivan Manoj says:

  This is not only one christian Persons opinion..It is the opinion of many Christians in fact im a christian…But Unfortunately the thinking of the separatism and opposition of holy Hindu views starting from Church itself coz of some uncultured Religious leaders..Also the Whole community mislead ed by some of the political parties so called “protectors of minorities” such as congress or more

 22. Kiran says:

  Hightime that RSS should have a media wing to reach out to people.. and create more awareness about themselves.

 23. praveen says:

  hindu horatavannu balapadisabeku…rajya congres nayakaru ee bagge yake matanaduvudilla..

 24. arvind says:

  these nalayak parties like congress,jantadal, DMK, dont want anyone to question them for what r all done by them and which they r going to go in future. but for them, d only person who is opposing is d RSS.so,they r trying to drag RSS to any situation where in is sanghatan cant lift its face in public.they r waiting like a cunning fox to ban RSS.

 25. arun says:

  yes u r right brother.. for ever incident here blood is boiling….. and am requesting u to right articls for any english news paper……. the centrel or lokhsabha people may read ur article…. thank u

 26. Abdul Muthalib says:

  Hay……Pratap Simha…. every one know that he is Chaddi Simha……pratap simha member of chaddi group…. off-course he will wright like this….

  i request to all my brothers and friends that please try to learn the Indian history and RSS Hidden Agendas…..

  Hindustan Zindabad… we love country we live country and weare ready to die for the country.

 27. viveka shankara says:

  Unfortunate to say that, till today, RSS doesn’t have a Media or a media which is supporting RSS. Though they have intellectuals they are exposed to the world through media. Don’t know whether they are reluctant to the new technology. The pracharaks of Sangh are the people who left their home and family for the sake of Samskruti and Raastra. Irony is people never understood their greatness. Irony is people who proclaim that they are part of RSS, disciplined soldier are creating havoc in the politics.

 28. govind says:

  RSS jindabad

 29. Lokesh D says:

  Hi Prathap,

  Always your articles will be highly informative and enlightens us with more and more information which we cannot expect from our School/college text Books where we studied only about Gandhiji, Nehru, Ambedkar and very few others. All previous Congress Governments were successful in hiding facts and true information about our freedom fighters and Invaders for their political advantage.

  Thanks a lot for all information which you provided us so briefly and effectively. As others also told your articles (Information Base) should reach to all parts of the country.

 30. diviVINAY says:

  we do not have right to pass such a cheep comment on RSS. congress does not know anything about RSS. what they know is just to critiqe on RSS and other who talk about hindus, they do not believe their nationality is indian and they are born hindus,,,,,,. i believe RSS is the only one who is really struggling for hindus and to save barath,
  my dear friends ANY BODY KNOW RSS FOUNDER SRI. HEDGEWAR AND GURUJI
  GOWALKAR WERE GREAT HUMANS, IF U DO NOT KNOW ANYTHING ABOUT THEM
  PLEASE TRY TO KNOW,,,,,,,, I BOW MY HEAD DOWN,,,,,,
  GREAT ARTICLE PRATAPJI

 31. superb article sir atleast nw by reading dis people can understand dat wat RSS is…..!

 32. vinay says:

  good article we expect more articles like this… 🙂

 33. chandu sharma says:

  Excellent ,, ಪ್ರತಾಪ್ ಜಿ,,
  ಮೊದ್ಲು ( ದಿಗ್ವಿಜಯ್ ಸಿಂಗ ) ಇಂಥ ದೇಶದ್ರೋಹಿಗಳ ನಾಲಿಗೆ ಕೊಯ್ದು- ಗಡಿಯಲ್ಲಿ ಬಡಿದು ನೇತ್ ಹಾಕಿದ್ರೆ ದೇಶದ ಒಳಗಿರುವ ದೇಶದ್ರೋಹಿಗಳಿಗೂ ಮತ್ತು ಒಳನುಸುಳುತ್ತಿರುವ ಕಮಂಗಿಗಳಿಗೂ ಬುದ್ದಿ ಬರ್ಬಹುದು,,,

 34. Naveen Kumar says:

  ನಾವು ಹಿಂದುತ್ವವನ್ನು ಇಂದು ಕಾಪಾಡಬೇಕಾದ ಸಂದಬ೵ ಬಂದಾಗಿದೆ, ಈಗಾಗಲೇ ಹಲವು ಧಮ೵ದವರು ನಮ್ಮ ಮೇಲೆ ಹಣದ ಻ಮೀಶ ಒಡ್ಡಿ ಅವರ ದಮ೵ಕ್ಕೆ ಮತಾಂತರ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿರುವಾಗ ನಮ್ಮ ಪೂರಾತನ ಹಿಂದೂಸ್ಥಾನದ ಹಿಂದೂ ಧಮ೵ವನ್ನು ಕಾಪಾಡುತ್ತಿರುವ ಆರ್.ಎಸ್.ಎಸ್ ನ ಬಾಂಬ್ ತಯಾರಿಸುವ ಕಾಖಾ೵ನೆ ಎಂದು ಸಂಬೋಧಿಸಿರುವ ಬ್ರಷ್ಟಾಚಾರಿ ಒಬ್ಬ ಪರ ಧಮ೵ದವರಿಗೆ ಹುಟ್ಟಿ ಈ ರೀತಿ ಮಾತನಾಡಿರಬೇಕು, ಇಂತಹ ಜಾತಿ ರಾಜಕಾರಣ ಮಾಡುವ ಬ್ರಷ್ಟಾಚಾರಿಗಳನ್ನು ಗಲ್ಲಿಗೇರಿಸಿದಾಗ ಮಾತ್ರ ನಮ್ಮ ಭಾರತದ ಅಭಿವೃದ್ದಿಯನ್ನು ಕಾಣಲು ಸಾದ್ಯ. ಪ್ರತಿಯೊಂದು ಧಮ೵ಕ್ಕೆ ತಮ್ಮದೆ ಆದ ಸಂಘ ಸಂಸ್ಥೆಗಳು ರೂಪುಗೊಂಡು ಅವರ ಸ್ಥಾನ ಮಾನ ಕಾಪಾಡುವಲ್ಲಿ ಅವು ಯಶಸ್ಸು ಕಾಣುತ್ತಿವೆ. ಅದರಲ್ಲಿ ಹಿಂದು ಧಮ೵ವನ್ನು ಕಾಪಾಡಲು ರೂಪುಗೊಂಡಂತಹ ಈ ಆರ್.ಎಸ್.ಎಸ್. ನ ಬಗ್ಗೆ ಮಾತನಾಡುವಂತಹ ಹಕ್ಕು ಇವರಿಗೆ ಇದೆಯೇ? ನೀವೇ ಹೇಳಿ

 35. PRASHANTH SHENI says:

  everyone must read these

 36. superb article…….. political peoples should aware of these things

 37. human says:

  ofcoarse iagree with u but u are alwaysone sided.
  You dont give credit to any freedom fihterd who are muslims.
  Your article blames every muslim for the misdeed done by a few muslims like abdali,aurangzeb,afzal guru,kasab etc.
  Do u know the intensity of terrorism increased after the babri masjid demolition.
  And many times after going through ur aryticles i think ur a spokesperson for
  Mr.modi who was responsible for the massacre of 2000 muslims.One can never
  boast of development onthe dead body of a particular community.Just go and
  ask what goes inthe heart of the family of Mr.ehsaan jafri who was killed in the
  Gujrath riots.
  Comeon Mr.Jayasimha dont spit venom be broadminded.
  And for ur kind information I am not a muslim or hindu,i am just a common man.

 38. human says:

  human Your comment is awaiting moderation.
  August 11th, 2011 at 584331
  ofcoarse iagree with u but u are alwaysone sided.
  You dont give credit to any freedom fihterd who are muslims.
  Your article blames every muslim for the misdeed done by a few muslims like abdali,aurangzeb,afzal guru,kasab etc.
  Do u know the intensity of terrorism increased after the babri masjid demolition.
  And many times after going through ur aryticles i think ur a spokesperson for
  Mr.modi who was responsible for the massacre of 2000 muslims.One can never
  boast of development onthe dead body of a particular community.Just go and
  ask what goes inthe heart of the family of Mr.ehsaan jafri who was killed in the
  Gujrath riots.
  Comeon Mr.Jayasimha dont spit venom be broadminded.
  And for ur kind information I am not a muslim or hindu,i am just a common man.

 39. Pavan Naik says:

  We Hindus need to get the unity and support the GREAT RSS. For the end of Terrorism we need Narendra Modi as prime minister. Gujrat after getting the Narendra Modi as prime minister the terrorism got an end in whole Gujrat State.

 40. jagadeesha says:

  last 3 paragraphs are outstanding.

  we have some people in media in assumption that they are running our so called “secular” country.

  Rajdeep sardesai
  Barkha dutt
  Sagarika gosh

 41. Amith. says:

  come on youths…get ready to join RSS.. Save India…

 42. Ravi R Gowda says:

  Hi Pratap,

  Good Article…

 43. Amaresh says:

  Really Superb article, Prathap I am requesting you start to right for any English news papers….. because your research should reach to every Indian

 44. Kempawad says:

  DEAR MR. PRATAP,

  RSS IS AN ORGANISATION OF PURE PATRIOTIC NATIONALISTS. I HAVE READ ONE OR TWO ARTICLES OF YOURS. YOU HAVE VERY BRIGHT FUTURE MY DEAR. PLEASE KEEP IT UP.

  SEE WE SHOULD NOT EXPECT ANY BETTER FROM CONGRESS OR JDS OR ANY OTHER PARTIES. BECAUSE THEIR ULTIMATE GOAL IS VOTE BANK.

  HAVING SAID THAT, BJP IS INDIFFERENT AND RSS TOP BRASS IS IGNORING ALL WRONG DOINGS OF OF BJP POLITICIANS WHICH IS NOT A GOOD SIGN AND NOT AT ALL ACCEPTABLE. YOU BEING RSS MEMBER, IN A POSITION TO INFLUENCE THEM. RSS MUST SHOW DOORS TO ALL SUCH WRONG DOERS.

  HOPE YOU WILL DO THE NEEDFUL.

 45. girish says:

  even i m one of the swayam sevaka in RSS i agree ur article but my question s dat do u think by the patience u ll get the sollution so we should protest against them(UPA) otherwise nothing ll happen …..so be ready for everything

 46. Wonderful article bro…keep going…we are with you..

 47. Manju says:

  Thank you pratap for your such a incredible articles,i am reading your articles since from last six years, each time when i read your articles i feel proud that at least we have one person in journalism who writes about the truth. Not only you are appreciating RSS but sometimes you also blame them when they elected their SANCHALAK (Ex.- Mohan Bhagwat). It shows your concerns about the correct news.
  But I feel sorry that you will not get any padmashree awards since you are not a congress dog like digvijay singh (planning to become PM).

 48. NAGARAJA K says:

  very nice article sir
  we proud to be born an Indian
  Jai Hind
  Vande Matharam
  Jai RSS

 49. Darshan says:

  ‘m a big fan f ur’s 4m ma childhood
  i love all ur articles