Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಡೆಲ್ಲಿಯಲ್ಲಿ ಇಬ್ಬರೇ ಸೇಫ್; ಸೋನಿಯಾ ಮತ್ತು ಶೀಲಾ!

ಡೆಲ್ಲಿಯಲ್ಲಿ ಇಬ್ಬರೇ ಸೇಫ್; ಸೋನಿಯಾ ಮತ್ತು ಶೀಲಾ!

ಸಂಜಯ್ ಚೋಪ್ರಾ

ಗೀತಾ ಚೋಪ್ರಾ

ಇವರಿಬ್ಬರೂ ದಕ್ಷಿಣ ದೆಹಲಿಯಲ್ಲಿದ್ದ ಸೇನಾ ಅಧಿಕಾರಿಯೊಬ್ಬರ ಅಪ್ರಾಪ್ತ ವಯಸ್ಸಿನ ಮಕ್ಕಳು. 1978, ಅಗಸ್ಟ್ 16ರಂದು ಇದ್ದಕ್ಕಿದ್ದಂತೆಯೇ ಕಾಣೆಯಾದರು. ಎಲ್ಲಿಗೆ ಹೋದರು ಅಂತ ಯಾರಿಗೂ ತಿಳಿಯದಾಯಿತು. ವಾಸ್ತವದಲ್ಲಿ ಅವರು ಅಪಹರಣಕ್ಕೊಳಗಾಗಿದ್ದರು. ಹಣ ವಸೂಲಿ ಮಾಡುವ ಯೋಜನೆ ಹಾಕಿಕೊಂಡಿದ್ದ ರಂಗ ಖುಷ್ ಅಲಿಯಾಸ್ ಖುಲ್ಜಿತ್ ಸಿಂಗ್ ಹಾಗೂ ಜಸ್ಬೀರ್ ಸಿಂಗ್ (ಬಿಲ್ಲ) ಅವರನ್ನು ಅಪಹರಿಸಿದ್ದರು. ಆದರೆ ಅವರು ಸಾಗುತ್ತಿದ್ದ ಕಾರು ಸಾರ್ವಜನಿಕ ಬಸ್್ಗೆ ಡಿಕ್ಕಿ ಹೊಡೆದ ಕಾರಣ ಇಡೀ ಪ್ಲಾನ್ ಉಲ್ಟಾ ಹೊಡೆಯಿತು. ಹಾಗಂತ ಸಂಜಯ್ ಹಾಗೂ ಗೀತಾ ಮನೆಗೆ ವಾಪಸ್ಸಾಗಲಿಲ್ಲ. ಪೊಲೀಸರ ಹುಡುಕಾಟ ಆರಂಭವಾಯಿತು. ಆದರೂ ಪ್ರಯೋಜನವಾಗಲಿಲ್ಲ. ಅಗಸ್ಟ್ 29ರಂದು ಎರಡು ಮೃತ ದೇಹಗಳು ದೊರೆತವು. ದುರಾದೃಷ್ಟವಶಾತ್, ಸಂಜಯ್ ಹಾಗೂ ಗೀತಾ ಹೆಣವಾಗಿದ್ದರು. ಶವಪರೀಕ್ಷೆ ವೇಳೆ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂತು. ಬಾಲಕಿ ಗೀತಾ ಮೇಲೆ ಅತ್ಯಾಚಾರವೂ ಎಸಗಲಾಗಿತ್ತು. ಇಂಥದ್ದೊಂದು ಘನಘೋರ ಕೃತ್ಯ ಎಸಗಿ ರಂಗ-ಬಿಲ್ಲ ನಗರವನ್ನೇ ತೊರೆದು ಪರಾರಿಯಾಗಿದ್ದರು.

ಅಂದು ಇಡೀ ದೆಹಲಿ ಬೀದಿಗಿಳಿಯಿತು. ಜನತಾ ಪಕ್ಷದ ಮೊರಾರ್ಜಿ ದೇಸಾಯಿ ಸರ್ಕಾರ ಥರ ಥರ ನಡುಗತೊಡಗಿತು!

ಇವತ್ತಿನಂತೆ ಅಂದು ಸೆಟಲೈಟ್ ಅಥವಾ ಕೇಬಲ್ ಚಾನೆಲ್್ಗಳಿರಲಿಲ್ಲ. ಇಪ್ಪತ್ನಾಲ್ಕುಗಂಟೆ ಸುದ್ದಿ ಪ್ರಸಾರ ಮಾಡುವ ವಾಹಿನಿಗಳೂ ಇರಲಿಲ್ಲ. ಅದು ಬಿಡಿ, ಕನಿಷ್ಠ ಬೆಳಗ್ಗೆ, ಮಧ್ನಾಹ್ನ, ರಾತ್ರಿಗೊಮ್ಮೆಯಂತೆ ಸುದ್ದಿ ಬಿತ್ತರಿಸುವ ಚಾನೆಲ್್ಗಳೂ ಇರಲಿಲ್ಲ. The nation is OUTRAGED, The Country is PAINED, The people are asking QUESTIONS ಎಂದು ದೇಶವಾಸಿಗಳ ಪರವಾಗಿ ಬೊಬ್ಬಿರಿಯುವ, ಧ್ವನಿಯೆತ್ತುವ ಆ್ಯಂಕರ್್ಗಳೂ ಇರಲಿಲ್ಲ. ಅತ್ಯಾಚಾರವೆಸಗಿದವರನ್ನು ನಿರ್ವೀರ್ಯರನ್ನಾಗಿಸಬೇಕು (chemical castration) ಎಂದು ಪ್ರತಿಪಾದಿಸುವ ಪರಿಣತರೂ ಇರಲಿಲ್ಲ, ಅಂತಹ ಟೀವಿ ಚರ್ಚೆಗಳೂ ನಡೆಯುತ್ತಿರಲಿಲ್ಲ.

ಇಷ್ಟಾಗಿಯೂ…

ಇಡೀ ನಗರವೇ ರೊಚ್ಚಿಗೆದ್ದಿತು. ಪ್ರತಿಯೊಂದು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತರಗತಿಗಳಿಂದ ಹೊರಬಂದು ಸರ್ಕಾರಕ್ಕೆ ಪಾಠ ಕಲಿಸಲು ಮುಂದಾದರು. ಪ್ರತಿಭಟನೆ ನಿಲ್ಲಲಿಲ್ಲ, ಪ್ರತಿಭಟನಾಕಾರರು ಕದಲಲಿಲ್ಲ. ಸರ್ಕಾರ ದಿಕ್ಕೆಟ್ಟಿತು. ಅಪರಾಧಿಗಳನ್ನು ಹಿಡಿಯಲು ಎಲ್ಲ ಪ್ರಯತ್ನವನ್ನೂ ಮಾಡಿತು. ಕೊನೆಗೂ ರಂಗ-ಬಿಲ್ಲ ರೈಲೊಂದರಲ್ಲಿ ಪತ್ತೆಯಾಗಿ, ಸಿಕ್ಕಿಬಿದ್ದರು. ನ್ಯಾಯಾಲಯವೂ ಜನಧ್ವನಿಗೆ ಸ್ಪಂದಿಸಿತು. ಅತ್ಯಂತ ತ್ವರಿತವಾಗಿ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿತು. ಇತ್ತ ಮೊರಾರ್ಜಿ ಸರ್ಕಾರ ತನ್ನ ಕೆಲಸ ಮುಗಿಯಿತೆಂದು ಕೈತೊಳೆದುಕೊಳ್ಳಲಿಲ್ಲ. ಸಂಜಯ್ ಚೋಪ್ರಾ ಹಾಗೂ ಗೀತಾ ಚೋಪ್ರಾ ಹೆಸರಿನಲ್ಲಿ ಮಕ್ಕಳ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಯನ್ನು ಆರಂಭಿಸುವ ಮೂಲಕ ಜನರ ಭಾವನೆಗಳಿಗೆ ಮನ್ನಣೆಯನ್ನೂ ನೀಡಿತು,ನೋವಿಗೆ ಸ್ಪಂದಿಸುವ ಕೆಲಸವನ್ನೂ ಮಾಡಿತು.

ಆದರೆ…

ಡಿಸೆಂಬರ್ 16ರಂದು ಚಲಿಸುವ ಬಸ್್ನಲ್ಲಿ 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಕಬ್ಬಿಣದ ರಾಡಿನಿಂದ ಅಮಾನುಷವಾಗಿ ಚುಚ್ಚಿ ರಸ್ತೆಯ ಮೇಲೆ ನಗ್ನವಾಗಿ ಬಿಸಾಡಿ ಹೋಗಿದ್ದ ಘಟನೆ ಹಾಗೂ ಅದರ ಬೆನ್ನಲ್ಲೇ ಎದ್ದ ಪ್ರತಿಭಟನೆಗೆ ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಸ್ಪಂದಿಸಿದ್ದಾದರೂ ಹೇಗೆ? 1978ರಂತೆ ಈ ಬಾರಿಯೂ ದೆಹಲಿಯ ಜನ ಸ್ವಯಂಪ್ರೇರಿತರಾಗಿ ಬೀದಿಗಿಳಿದರು. ವಿದ್ಯಾರ್ಥಿಗಳು ಶಾಲೆ, ಕಾಲೇಜು ಬಿಟ್ಟು ಪ್ರತಿಭಟನೆಗೆ ಮುಂದಾದರು. ಅವರೇನು ರಾಜಕೀಯ ಪಕ್ಷಗಳ ರ್ಯಾಲಿಗಳಿಗೆ ನೂರು, ಐನೂರು ರೂಪಾಯಿ ಗರಿಗರಿ ನೋಟು ಪಡೆದುಕೊಂಡು ಲಾರಿಗಳಲ್ಲಿ ಬಂದ ಜನರಾಗಿರಲಿಲ್ಲ. ಅಂಥವರನ್ನು ಆಕ್ಸ್್ಫರ್ಡ್್ನಲ್ಲಿ ಕಲಿತ ಮನಮೋಹನ್ ಸಿಂಗ್ ಹಾಗೂ ಬ್ರಿಟನ್್ನಂಥ ಅತ್ಯಂತ ನಾಗರಿಕ ರಾಷ್ಟ್ರದಲ್ಲಿ ಅಷ್ಟಿಷ್ಟು ಕಲಿತ ಸೋನಿಯಾ ಗಾಂಧಿಯವರ ಸರ್ಕಾರ ನಡೆಸಿಕೊಂಡ ರೀತಿ ಹೇಗಿತ್ತು? ಅನಾಗರಿಕರಂತೆ ನಡೆದುಕೊಂಡಿದ್ದೇಕೆ? ಚೀನಾದ ತಿಯಾನನ್್ಮನ್ ಸ್ಕ್ವೇರ್ ಎದುರು ಜನ ಸೇರಿದರೆ, ಯುಗೋಸ್ಲಾವಿಯಾದ ಸರ್ವಾಧಿಕಾರಿ ಸ್ಲೊಬದಾನ್ ಮಿಲೊಸೆವಿಚ್ ವಿರುದ್ಧ ಜನ ಸಿಡಿದೆದ್ದರೆ, ಈಜಿಪ್ಟ್್ನ ತಹ್ರೀರ್ ಸ್ಕ್ವೇರ್ ಮುಂದೆ ಜನ ನೆರೆದರೆ, ಮುಮ್ಮರ್ ಗಢಾಫಿಯನ್ನು ಪದಚ್ಯುತಗೊಳಿಸಲು ಜನ ಮುಂದಾದರೆ ನಮ್ಮ ಮಾಧ್ಯಮ ಹಾಗೂ ಸರ್ಕಾರದಿಂದ “Popular Movement’, “Popular Outrage’ ಎಂಬ ಹೊಗಳಿಕೆ ಕೇಳಿಬರುತ್ತದೆ. ಅದೇ ನಮ್ಮ ದೇಶದ ರಾಜಧಾನಿಯಲ್ಲಿ ಭ್ರಷ್ಟ, ನಿರ್ವೀರ್ಯ, ನಿಶ್ಶಕ್ತ ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ನೀರಿನ ಫಿರಂಗಿ, ಆಶ್ರುವಾಯು ಪ್ರಯೋಗ ಹಾಗೂ ಲಾಠಿ ಚಾರ್ಜ್! ಒಂದು ಪ್ರಭುದ್ಧ ಪ್ರಜಾಪ್ರಭುತ್ವ ರಾಷ್ಟ್ರದ ಚುಕ್ಕಾಣಿ ಹಿಡಿದ ಸರ್ಕಾರ ನಡೆದುಕೊಳ್ಳುವ ರೀತಿಯೇ ಇದು? ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತಾರಲ್ಲಾ ಇವರಿಗೆ ನಾಚಿಕೆಯೇ ಇಲ್ಲವೆ? ಇಷ್ಟಕ್ಕೂ ವಿದ್ಯಾರ್ಥಿಗಳು ಮಾಡಿದ ತಪ್ಪಾದರೂ ಏನು? ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳೊಳಗೆ ಕಾಂಗ್ರೆಸ್ ವಿದ್ಯಾರ್ಥಿ ಸಂಘವಾದ ಎನ್್ಎಸ್್ಯುಐನ ಗೂಂಡಾಗಳನ್ನು ನುಗ್ಗಿಸಿ ಇಡೀ ಪ್ರತಿಭಟನೆಗೆ ಕಳಂಕ ತರಲು ಪ್ರಯತ್ನಿಸಿದರಲ್ಲಾ ಇವರಿಗೆ ನೈತಿಕತೆ ಅನ್ನೋದೇ ಇಲ್ಲವೆ? ಈ ಸೋನಿಯಾ ಗಾಂಧಿ ಕೃಪಾಪೋಷಿತ ನಾಟಕ ಮಂಡಳಿಯಿಂದ ನಾವು ಇನ್ನು ಯಾವ್ಯಾವ ನಾಟಕಗಳನ್ನು ನೋಡಬೇಕು? ಈ ಕಾಂಗ್ರೆಸ್ಸಿಗರು ದೇಶವನ್ನು ಯಾವ ಮಟ್ಟಕ್ಕೆ ಇಳಿಸಿಯಾರು? ಇನ್ನು ಈ ದೇಶದ ಯೂತ್ ಐಕಾನ್ (ಯುವಜನತೆಯ ಮುಕುಟಮಣಿ) ರಾಹುಲ್ ಗಾಂಧಿ ಮಾಡಿದ ನಾಟಕವೇನು ಸಾಮಾನ್ಯದ್ದೇ? ವಿದ್ಯಾರ್ಥಿಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಭರವಸೆಯನ್ನು ಕೊಡುವ ಹಗಲುವೇಷ ತೊಟ್ಟರು. ಕೊನೆಗೆ ತಿಳಿದುಬಂದಿದ್ದೇನೆಂದರೆ ಅವರೆಲ್ಲ ಕಾಂಗ್ರೆಸ್್ನ ಎನ್್ಎಸ್್ಯುಐ ಸಂಘಟನೆಯವರೇ ಆಗಿದ್ದರು! ಕಣ್ಣೆದುರಿಗೇ ಇಂಥ ಮೋಸ ಮಾಡುತ್ತಾರಲ್ಲಾ ಇವರಿಗೆ ಅತ್ಮಸಾಕ್ಷಿ ಅನ್ನುವುದೇ ಇಲ್ಲವೆ?

1999, ಇದೇ ಡಿಸೆಂಬರ್ 24ರಂದು ನಮ್ಮ ಇಂಡಿಯನ್ ಏರ್್ಲೈನ್ಸ್ ವಿಮಾನ ಅಪಹರಣವಾದಾಗ ಆಗಿನ ಅಟಲ್್ಬಿಹಾರಿ ವಾಜಪೇಯಿ ಸರ್ಕಾರ ಹೇಗೆ ನಡೆದುಕೊಂಡಿತು?

ಅಂದು ಕೂಡ ವಿಮಾನದಲ್ಲಿದ್ದ ಪ್ರಯಾಣಿಕರ ಕುಟುಂಬದವರು ಪ್ರಧಾನಿ ಮನೆಗೆ ಮುತ್ತಿಗೆ ಹಾಕಿದ್ದರು. ಹಾಗಂತ ಪೊಲೀಸರನ್ನು ಕರೆದು ಅವರನ್ನು ಅಟಲ್ ಹೊರದಬ್ಬಿಸಲಿಲ್ಲ. ಅತಿದೊಡ್ಡ ಬೆಲೆ ತೆತ್ತಾದರೂ 184 ದೇಶವಾಸಿಗಳ ಪ್ರಾಣ ರಕ್ಷಣೆಗೆ ಮುಂದಾದರು. ಆದರೆ ಈ ಸರ್ಕಾರ ಪ್ರಧಾನಿ ಮನೆಮುಂದೆ, ರಾಷ್ಟ್ರಪತಿ ಭವನದ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೂ ಹೇಗೆ ನಡೆದುಕೊಂಡಿತು? ಅದು ಬಿಡಿ, ಇಡೀ ದೇಶ ರೊಚ್ಚಿಗೆದ್ದಿದ್ದರೂ, ನೊಂದಿದ್ದರೂ ಅವರ ಮೇಲೆ ಲಾಠಿ ಚಾರ್ಜ್ ನಡೆದು ನೂರಾರು ವಿದ್ಯಾರ್ಥಿ ಹಾಗೂ ಪೋಷಕರು ಗಾಯಗೊಳ್ಳುವವರೆಗೂ ನಮ್ಮ ಪ್ರಧಾನಿ ಎಲ್ಲಿ ನಿದ್ರೆ ಮಾಡುತ್ತಿದ್ದರು? ಒಂದು ಹೇಳಿಕೆ ಕೊಡಲು ನಮ್ಮ ಪ್ರಧಾನಿಗೆ 7 ದಿನ(ಡಿಸೆಂಬರ್ 23) ಬೇಕಾಯಿತೆ? ಅದೇ ಡಿಸೆಂಬರ್ 15ರಂದು ಅಮೆರಿಕದ ಕನೆಕ್ಟಿಕಟ್್ನಲ್ಲಿ ತಲೆಕೆಟ್ಟವನೊಬ್ಬ ಮಾಡಿದ ಗುಂಡಿನ ದಾಳಿಯಲ್ಲಿ 20 ಮಕ್ಕಳು ಮಡಿದಾಗ ದೇಶವಾಸಿಗಳನ್ನುದ್ದೇಶಿ ಮಾತನಾಡುತ್ತಿದ್ದ ಅಧ್ಯಕ್ಷ ಬರಾಕ್ ಒಬಾಮ “Heal the broken hearted and bind up their wounds’ ಎನ್ನುತ್ತಾ ಕಣ್ಣೀರಿಟ್ಟರು. ಆದರೆ ನಮ್ಮ ಪ್ರಧಾನಿ ನಡೆದುಕೊಂಡಿದ್ದು ಹೇಗೆ?

‘ನನ್ನ ಭಾರತ ದೇಶವಾಸಿಗಳೇ, ಕಳೆದ ಭಾನುವಾರ (ಡಿಸೆಂಬರ್ 16) ದೆಹಲಿಯಲ್ಲಿ ನಡೆದ ಪೈಶಾಚಿಕ ಗ್ಯಾಂಗ್್ರೇಪ್ ವಿರುದ್ಧ ಎದ್ದಿರುವ ಕೋಪತಾಪ ಖಂಡಿತ ಅರ್ಥಮಾಡಿಕೊಳ್ಳುವಂಥದ್ದೇ. ಮೂವರು ಹೆಣ್ಣುಮಕ್ಕಳ ತಂದೆಯಾದ ನಾನೂ ನಿಮ್ಮಂತೆಯೇ ನೊಂದಿರುವೆನು… ಇಂಥ ಕೃತ್ಯವೆಸಗಿದವರಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯಾವ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದನ್ನು ನಿಮಗೆ ಆಗಿಂದಾಗ್ಗೆ ತಿಳಿಸಲಿದೆ. ನಾನು ಸಮಾಜದ ಎಲ್ಲ ಸಮುದಾಯಗಳಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಹಾಗೂ ನಮ್ಮ ಪ್ರಯತ್ನಕ್ಕೆ ಸಹಕಾರ ನೀಡುವಂತೆ ಕೋರುತ್ತೇನೆ…’ ಎಂಬ ಬರೆದುಕೊಟ್ಟ ಸಂದೇಶವನ್ನು ಯಾಂತ್ರಿಕವಾಗಿ ಓದಿದ ಮನಮೋಹನ್ ಸಿಂಗ್, ಕೊನೆಗೆ ‘ಠೀಕ್ ಹೈ’ (ಓಕೆನಾ? ಸರೀನಾ?) ಎಂದು ಬಿಟ್ಟರು.

‘ಅದೃಷ್ಟವಶಾತ್್’ ಅದೂ ಪ್ರಸಾರವಾಗಿಬಿಟ್ಟಿತು, ಪ್ರಧಾನಿಯ ವೇಷವೂ ಕಳಚಿ ಬಿತ್ತು!

ಅದುವರೆಗೂ ಪ್ರಧಾನಿ ಹೇಳಿದ್ದೆಲ್ಲ ಬೊಗಳೆ ಎಂದು ಸಾಬೀತಾಗಲಿಲ್ಲವೆ? ನನಗೂ ಮೂವರು ಹೆಣ್ಣುಮಕ್ಕಳಿದ್ದಾರೆ ಎಂದು ಹೇಳಿದ್ದೆಲ್ಲ ಜನರ ಕಣ್ಣೊರೆಸುವ ಮಾತುಗಳಷ್ಟೇ ಎಂದು ಅದರಿಂದ ತಿಳಿಯಲಿಲ್ಲವೆ? ಅಲ್ಲ, ಈ ವ್ಯಕ್ತಿಯೇನು ಮನುಷ್ಯನೋ, ಮರದ ತುಂಡೋ? ಈ ವ್ಯಕ್ತಿ ಭಾವುಕರಾಗುವುದು ಅಣು ಸಹಕಾರ ಒಪ್ಪಂದ ಮಾಡಿಕೊಂಡು ಅಮೆರಿಕಕ್ಕೆ ಲಾಭ ಮಾಡುವ ಸಲುವಾಗಿ ಸಂಸತ್ತಿನ ಒಪ್ಪಿಗೆ ಪಡೆಯಲು ಭಾಷಣಕ್ಕೆ ನಿಂತಾಗ ಮಾತ್ರವೇ? ನಮ್ಮ ದೇಶದ ಚಿಲ್ಲರೆ ಮಾರುಕಟ್ಟೆಗೆ ನೂರಕ್ಕೆ ನೂರು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟು ನಮ್ಮ ವ್ಯಾಪಾರಿಗಳನ್ನು ಬೀದಿಪಾಲು ಮಾಡಿ ಅಮೆರಿಕದ ವಾಲ್್ಮಾರ್ಟ್, ಬ್ರಿಟನ್್ನ  ಟೆಸ್ಕೋ, ಫ್ರಾನ್ಸ್್ನ ಕ್ಯಾರ್್ಫೋರ್್ಗಳಂಥ ಕಂಪನಿಗಳಿಗೆ ಲಾಭ ಮಾಡಿಕೊಡಲು ಮುಂದಾದಾಗ ಮಾತ್ರ ಮನಮೋಹನ್ ಸಿಂಗ್್ರ ಮನಸ್ಸು, ಹೃದಯ ಮಿಡಿಯುತ್ತವೆಯೇ? ಇನ್ನು ಪ್ರಧಾನಿಯ ಜುಟ್ಟು ಹಿಡಿದುಕೊಂಡಿರುವ ಸೋನಿಯಾ ಗಾಂಧಿಯವರಿಗೆ ಯಾವ ಹೊಣೆಗಾರಿಕೆ, ಜವಾಬ್ದಾರಿಗಳೇ ಇಲ್ಲವೆ?

ಯುಪಿಎ ಅಧ್ಯಕ್ಷೆ ಹಾಗೂ ಪ್ರಧಾನಿಯೇ ಹೀಗಿರುವಾಗ ಅವರ ಸಂಪುಟದಲ್ಲಿರುವ ಸಚಿವರು ಹಾಗೂ ಪಕ್ಷದಲ್ಲಿರುವವರಿಂದ ಯಾವ ಸಭ್ಯತೆ, ಸುಸಂಸ್ಕೃತತೆಯನ್ನು ನಿರೀಕ್ಷಿಸಲು ಸಾಧ್ಯ? ಪ್ರಸ್ತುತ ರಾಷ್ಟ್ರಪತಿಯಾಗಿರುವ ಪ್ರಣಬ್ ಮುಖರ್ಜಿ ಅವರ ಸುಪುತ್ರ ಹಾಗೂ ಕಾಂಗ್ರೆಸ್ ಪುಢಾರಿ ಅಭಿಜಿತ್ ಮುಖರ್ಜಿ ಗ್ಯಾಂಗ್ ರೇಪ್ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಮಧ್ಯ ವಯಸ್ಸು ದಾಟಿರುವ ಮಹಿಳೆಯರನ್ನು “DENTED and PAINTED women’ ಎಂದು ಅತ್ಯಂತ ಕೀಳಾಗಿ ಕರೆದಿದ್ದಾನೆ. ಇವನ ಪ್ರಕಾರ ಶಾಲೆ, ಕಾಲೇಜಿಗೆ ತಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವ ಅಮ್ಮಂದಿರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲವೆ? ಐವತ್ತೆರಡು ವರ್ಷದ ಈತ ತನ್ನ ಪತ್ನಿ ಹಾಗೂ ಸಹೋದರಿಯರನ್ನೂ DENTED and PAINTED ಎನ್ನುತ್ತಾನಾ? ಅವರ ದೇಹದಲ್ಲೂ Dent (ಉಬ್ಬು-ತಗ್ಗು)ಗಳಿಲ್ಲವೇ? (ಈ ಪದಕ್ಕೆ ಅನೈತಿಕ ಎನ್ನುವ ಅರ್ಥವೂ ಬರುತ್ತದೆ) ಅವರೂ ಮೇಕಪ್ ಮಾಡಿಕೊಳ್ಳುವುದಿಲ್ಲವೇ? ಟ್ವಿಟರ್್ನಲ್ಲಿ ಪ್ರಿಯಾ ಜೇಮ್ಸ್ ಎಂಬಾಕೆ “MUCK-her-jee’ ಎಂದು ಕರೆದಿರುವುದು ಈತನ ಮನಸ್ಥಿತಿಗೆ ಹಿಡಿದ ಕನ್ನಡಿಯಲ್ಲದೆ ಮತ್ತೇನು? ಈ ಕೇಂದ್ರದ ಕಾಂಗ್ರೆಸ್ಸಿಗರು ಯಾವ ಮಟ್ಟಕ್ಕಿಳಿದಿದ್ದಾರೆಂದರೆ 2ಜಿ, ಕಲ್ಲಿದ್ದಲು, ಕಾಮನ್ವೆಲ್ತ್, ಲವಾಸಾ, ಅದರ್ಶ ಹೌಸಿಂಗ್ ಎಂಥ ಹಗರಣ ಸಂಭವಿಸಿದರೂ ಇವರಿಗೆ ನಾಚಿಕೆಯಾಗುವುದಿಲ್ಲ. ಹಾಗಾಗಿಯೇ ಮುಖ್ಯ ವಿಷಯ ಬಿಟ್ಟು ಉಳಿದೆಲ್ಲ ಮಾತನಾಡುವ ತಿವಾರಿ ಹಾಗೂ ವಕೀಲೆಯೊಬ್ಬರನ್ನು ಜಡ್ಜ್ ಮಾಡುವುದಾಗಿ ಅಮಿಷವೊಡ್ಡಿ ಮಂಚಕ್ಕೆಳೆದಿದ್ದ ಬೋಳುದಲೆಯ ವ್ಯಕ್ತಿಯೊಬ್ಬ ಇವತ್ತು ರೇಪ್ ಬಗ್ಗೆ ಕಾಂಗ್ರೆಸ್್ನ ಕ್ರಮವನ್ನು ಸಮರ್ಥನೆ ಮಾಡುತ್ತಿದ್ದಾನೆ. ಇದಕ್ಕಿಂತ ನಾಚಿಕೆಗೇಡು ಮತ್ತೇನಿದೆ? ಈಗ ಹೇಳಿ, ಕೇಂದ್ರದಲ್ಲಿರುವುದು ಮಾನ-ಮರ್ಯಾದೆ ಇಲ್ಲದವರ ಸರ್ಕಾರ ಎಂಬ ಬಗ್ಗೆ ಯಾವುದಾದರೂ ಅನುಮಾನವಿದೆಯೇ? ಡೆಲ್ಲಿಯಲ್ಲಿರುವುದು ಕಾಂಗ್ರೆಸ್ ಸರ್ಕಾರ, ಪೊಲೀಸ್ ವ್ಯವಸ್ಥೆ ಕೇಂದ್ರ ಸರ್ಕಾರದ ಕಾಂಗ್ರೆಸ್ ಹಿಡಿತದಲ್ಲಿದೆ. ಹಾಗಿರುವಾಗ ಯಾರು ಅದರ ಹೊಣೆ ಹೊರಬೇಕು ಹೇಳಿ? ಡೆಲ್ಲಿಯಲ್ಲಿ ಇಬ್ಬರೇ ಸೇಫ್ ಸೋನಿಯಾ ಮತ್ತು ಶೀಲಾ ಎಂದು ಜನ ಆಡಿಕೊಳ್ಳುತ್ತಿರುವುದರಲ್ಲಿ ಯಾವ ಆಶ್ಚರ್ಯವಿದೆ?

18 Responses to “ಡೆಲ್ಲಿಯಲ್ಲಿ ಇಬ್ಬರೇ ಸೇಫ್; ಸೋನಿಯಾ ಮತ್ತು ಶೀಲಾ!”

 1. mayur hegde says:

  super sir… namma pradhaniyavarige kannada language arta agolla hagagi tamma barahada barchi avara edege natolla..

 2. keerthinath says:

  Awesome……………really true….

 3. Kashyap says:

  Dear Mr.Pratap Simha,

  I completely agree with the opinions you have expressed in this article. This incumbent union govt. is something which we(or an country) don’t need. They are bunch of perverted thieves who can be equated to those rapists. Abhijit Mukherjee’s(A Goon) statement on our’s sisters corroborates this. Our PM is shameless and who can be controlled easily by his fellow workers.

  It’s high-time we must oust this!!!!

 4. gururaj kodkani says:

  ಅನೇಕ ಬಾರಿ ನಿಮ್ಮನ್ನು ನಾನು ಒಪ್ಪುವುದಿಲ್ಲವಾದರೂ , ಈ ಬಾರಿ ನಿಮಗೆ ಹಾಟ್ಸ್ ಆಫ್.ಹೌದು ಇದೊ೦ದು ಮರದ ತು೦ಡಿನಿ೦ದ ನಡೆಯುತ್ತಿರುವ ಸರಕಾರವೇ

 5. kishore says:

  please publish your articles in facebook so that all youngsters will come to know the corrupted congress administration…

 6. anvith says:

  i still dont understand how congress wins despite of all this today being a Indian being a Hindu has tuned life miserable Visveshwar Bhat sir said it right “E Deshadalli Badukuvudakkinta saayalu Hecchu kaaranaglu” will anything change will our country be happy country again

 7. Keshav says:

  Really good article Pratap. Indians need to think before voting for congress.
  shame on congress..
  shame on there leaders…?
  ಠೀಕ್ ಹೈ…,

 8. ಸಿಂಹಾ ರವರೆ
  ನಾನು ಮಿಮ್ಮ ಮಾತು ಸರಿ ಎಂದು ಭಾವಿಸುತ್ತೇನೆ. ಆದರೆ ನೀವೊಬ್ಬ ಸಮಾಜಿಕ ಬರಹಗಾರ ಎಂಬುವುದಕ್ಕಿಂತ ಈ ಲೇಖನದಿಂದ ಬಿ.ಜೆ.ಪಿ. ಮತ್ತು ಆರ್ ಎಸ್ ಎಸ್ ನ ಮನುಷ್ಯ ಎಂದೂ ತೊರುತ್ತಿದೆ. ಬರವಣಿಗೆಯಲ್ಲಿ ರಾಜಕೀಯ ಮಾಡಬೇಡಿ ನಿಮ್ಮ ಬರಹವನ್ನು ಅನೇಕ ಜನ ನಂಬಿದ್ದಾರೆ. ಓದುಗರನ್ನು ಮಳ್ಳರೆಂದು ತಿಳಿಯಬೇಡಿ ನಿಮ್ಮ ಬರವಣಿಗೆ ಆದಷ್ಟು ಪಕ್ಷವನ್ನು ಎತ್ತಿಕಟ್ಟುವಂತೆ ಬಿಂಬಿಸುತ್ತದೆ. ಒಬ್ಬ ಸಾಮಾಜಿಕ ಬರಹಗಾರನಿಗೆ ಸಾಮಾಜಿಕ ಕಳಕಳಿ ಇರಬೇಕು ಆದರೆ ಒಂದು ಪಕ್ಷ ಮೇಲೆತ್ತಿ ಮಾತಾಡುವ ಹಕ್ಕಿಲ್ಲಾ ಅದೂ ಸಾದೂವು ಅಲ್ಲಾ . ಕೇಂದ್ರದ ಕಾಂಗ್ರೇಸ್ ಸರ್ಕಾರ ತಪ್ಪು ಮಾಡಿದೆ ಆದರೆ ಬಿ.ಜೆ.ಪಿ ತಪ್ಪು ಮಾಡಿಲ್ಲಾ ಎಂತಿಲ್ಲಾ ಅವರೆಲ್ಲರು ನಮ್ಮನ್ನು ಕಾಯುತ್ತಿಲ್ಲಾ ಬದಲಾಗಿ ಕೊಲ್ಲುತ್ತಿದ್ದಾರೆ.

  ನಿಮ್ಮ ಹೀಗೆ ಅನೇಕ ಬರಹಗಳು ಬಿ.ಜೆ.ಪಿ. ಸರ್ಕಾರದ ಪರವಹಿಸಿ ಬರೆಯುತ್ತಿದ್ದೀರಿ ಆದಷ್ಟು ನಿಮ್ಮ ಬರಹ ಪಕ್ಷಾತೀತವಿರಲಿ ಎಂಬುವುದು ನನ್ನ ಆಶೆಯ

  ಕೆ.ಎಂ.ವಿಶ್ವನಾಥ
  ಹವ್ಯಾಸಿ ಬರಹಗಾರರು.
  9620633104

 9. ಸಿಂಹಾ ರವರೆ ಬರಿ ಸರ್ಕಾರ ಬದಲಾಗಿ ಅಂದರೆ ಸಾಲದು ನಾವು ಕೂಡಾ ಬದಲಾಗಬೇಕು ಈ ಬರಹ ಓದಿ ಗೊತ್ತಗುತ್ತೆ
  ಧನ್ಯವಾದ ಕುಲಕರ್ಣಿ ಸರ್
  ಯಾರು ಬದಲಾಗಬೇಕು ?
  January 10, 2013 – 3:19am
  Praveen.Kulkarn…

  ಭಾರತಮಾತೆ ಎಂದೇ ನಮ್ಮ ದೇಶವನ್ನು ಸಂಭೋದಿಸುವ ಈ ನೆಲದಲ್ಲಿ ಬರ್ಬರ ಕ್ರತ್ಯವೊಂದು ನಡೆದುಹೋಯಿತು.ಬರತಭೂಮಿಯಲ್ಲಿ ಮಗಳೋಬ್ಬಳು ಹೋರಾಡಿ ಕೊನೆಗೂ ಸಾವನಪ್ಪಿದಳು.ಇದರ ಬಗ್ಗೆ ಸಾಕಷ್ಟು ಲೇಖನಗಳು ಈಗಾಗಲೇ ಬಂದಿವೆ,ಚರ್ಚೆಗಳು ನಡೀತಾ ಇವೆ.ಮೊನ್ನೆ ಟಿವಿಯ ಯಾವುದೋ ಖಾಸಗಿ ಚಾನೆಲ್ನಲ್ಲಿ ಅವತ್ತು ಆ ಹುಡುಗಿಯೊಂದಿಗೆ ಇದ್ದ ಸ್ನೇಹಿತ ಕಿಂಚಿತ್ತು ಹೆದರದೆ ಎಳೆ ಎಳೆಯಾಗಿ ಸತ್ಯವನ್ನೇಲ್ಲ ಬಿಚ್ಚಿಟ್ಟಾಗ ಎಲ್ಲರು ಯಾರ ತಪ್ಪು ,ಅಪರಾಧಿಗಳಿಗೆ ಯಾವ ಶಿಕ್ಷೆ ಆಗಬೇಕು,ಪೋಲಿಸ್ ಲೇಟಾಗಿ ಬಂದರಂತೆ ಹಾಗೆ ಹೀಗೆ ಅಂತ ನಾವೆಲ್ಲಾ ಎಷ್ಟು ಚರ್ಚೆ ಮಾಡಿದ್ವಿ.ಅಬ್ಬಾ ನಾವೆಲ್ಲಾ ಅದೆಷ್ಟು ಉಚಿತ ಸಲಹೇಗಳನ್ನ ಕೊಡುತ್ತಿವಿ,ಅದೆಷ್ಟು ತೀಕ್ಷ್ಣವಾಗಿ ಟಿಕಿಸುತ್ತಿವಿ.ಶಭಾಶ್ ನಾವೆಲ್ಲಾ ಅಂದು ಮೊಂಬತ್ತಿ ಹಿಡಿದುಕೊಂಡು ಪ್ರತಿಭಟಿಸದಿದ್ದರೆ ಅವಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿರಲಿಲ್ಲ ಎಂದು ನಮ್ಮ ಬೆನ್ನು ನಾವೇ ಚಪ್ಪರಿಸಿಕೊಂಡೆವು ,ನಿರ್ಭಯಾ,ದಾಮಿನಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಏನೇನೋ ಮಾಡಿದ್ವಿ.ಅಶ್ರುವಾಯುವಿಗೆ ಎದೆಯೊಡ್ಡಿ,ಜಲಧಾರೆ ಲೆಕ್ಕಿಸದೆ,ಪೋಲೀಸರ ಬೆತ್ತದ ದಾಳಿಗೂ ಹೆದರದೆ ಪ್ರತಿಭಟಿಸಿದೆವು .ಕೊನೆಗೆ ಎಲ್ಲರ ಕೂಗು ಒಂದೇ ಆಗಿತ್ತು..ಬದಲಾಗಬೇಕು……ಹೌದು ಬದಲಾಗಬೇಕು ..ಆದರೆ ಯಾರು ಸರ್ಕಾರವೇ ?,ವ್ಯವಸ್ಥೆಯೇ?,ಪೋಲಿಸ್ ಸಂಸ್ಥೆಯೇ,?ಅಥವಾ ನಾವೇ ?.

  ನಮ್ಮಿಂದಲೇ ಶುರು ಮಾಡೋಣಾ.ನಾವು ಬದಲಾಗಬೇಕು.ಅಂದು ಅವರಿಬ್ಬರನ್ನು ರಸ್ತೆಯ ಬದಿ ಬಿಸಾಕಿ ಹೋದ ಮೇಲೆ ನಾವೆಲ್ಲಾ ನಮ್ಮ ಟೂ ವೀಲರ್ ಹಾಗು ಫೋರ್ ವೀಲರ್ ಸ್ಲೋ ಮಾಡಿಏನಾಗಿದೆ ಅಂತ ನೋಡಿ ಹೋದೆವು ಹೊರತು ನಾವ್ಯಾರು ಕೆಳಗಿಳಿಯಲೇ ಇಲ್ಲ,ಹೆಣ್ಣೊಬ್ಬಳು ಮೈ ಮೇಲೆ ಬಟ್ಟೆ ಇಲ್ಲದ ಕೊರೆಯುವ ಚಳಿಯಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದಾಗ ನಾವು ಹೆದರಿ ಮುಖ ತಿರುವಿ ಕಣ್ಣುಮುಚ್ಚಿಕೊಂಡೆವು ಹೊರತು ಕೆಳಗಿಳಿಯಲಿಲ್ಲ,ಯಾರಾದ್ರೂ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಎಂದು ಅವರು ಅಂಗಲಾಚಿದರು ನಾವು ಇಲ್ಲದ ಉಸಾಬರಿ ನಮಗ್ಯಾಕೆ ಅಂತ ಮುಂದೆ ಸಾಗಿದೇವೆ ಹೊರತು ಕೆಳಗಿಳಿಯಲೇ ಇಲ್ಲಾ.ಹಾಗಾದ್ರೆ ನಮಗೆಲ್ಲ ಮೊಂಬತ್ತಿ ಹಿಡಿದು ಪ್ರತಿಭಟಿಸುವ ಹಕ್ಕಿದೆಯಾ ? ನಾವ್ಯಾಕೆ ಎಲ್ಲ ಮುಗಿದ ನಂತರ ರಸ್ತೆಗೆಳಿಯುತ್ತಿವಿ.ನಮ್ಮಲ್ಲೇ ಯಾರಾದರೂ ಅವರನ್ನು ಬೇಗನೆ ಆಸ್ಪತ್ರೆಗೆ ಸಾಗಿಸಿದ್ದರೇ ಅವಳು ಬದುಕುಳಿಯುತಿದ್ದಳೋ ಏನೋ..ನಾವು ಹಾಗು ನಮ್ಮ ಯೋಚನಾಶಕ್ತಿ ಬದಲಾಗಬೇಕಿದೆ.

  ಹಾಗಾದರೆ ನಾವು ಹೇಗೆ ಬದಲಾಗಬೇಕು.

  1.ಧೈರ್ಯದಿಂದ ಕೆಳಗಿಳಿದು ಏನಾಗಿದೆ ಎಂದು ನೋಡಿ..ಕಾನೂನಿನ ತೊಡಕು ಎದುರಿಸುವ ತೊಂದರೆ ಬಂದರು ಪರವಾಗಿಲ್ಲ ಎನ್ನುವ ಯೋಚನೆಯಿಂದ ಮುನ್ನುಗ್ಗಿ(ಹೀಗೆ ಮುನ್ನುಗ್ಗಿದಲ್ಲಿ ಮಾತ್ರ ನಮ್ಮಂತೆ ಇತರರು ಅನುಕರಿಸುವರು).

  2.ಮೊದಲು ಅವರ ಮನೆಯವರ ಅಥವಾ ಬಂಧುಗಳ,ಗೆಳೆಯರ ಫೋನ್ ನಂಬರ್ ಗೆ ಕರೆ ಮಾಡಿ ಸುದ್ದಿ ತಿಳಿಸಿ.

  3.100 ಗೆ ಕರೆ ಮಾಡಿ ಸೂಕ್ತ ಮಾಹಿತಿ ನೀಡಿ(ಉದಾಹರಣೆಗೆ ರಕ್ತಸ್ರಾವ ಜಾಸ್ತಿಯಾದಲ್ಲಿ ಅವರಿಗೆ ಅದರ ಬಗ್ಗೆ ತಿಳಿಸಿ).

  4.ನಿಮಗೆ ಗೊತ್ತಿದ್ದ್ದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿ.ಹತ್ತಿರದ ಆಸ್ಪತ್ರೆಗೆ ಸಾಗಿಸಿ.

  5.ಮಾಧ್ಯಮದವರ ನಂಬರ್ ಇದ್ದಲ್ಲಿ ಅವರಿಗೂ ತಿಳಿಸಿ (ಇತ್ತಿಚಿಗೆ ಮಾಧ್ಯಮದ ಹೆದರಿಕೆಯಿಂದ ಕೆಲಸಗಳು ಬೇಗ ಆಗುತ್ತಿವೆ).

  6.ಹೆಣ್ಣು ಬರಿ ಭೋಗದ ವಸ್ತುವಲ್ಲ ಗೆಳೆಯರೇ.ಅದು ಒಂದು ಜೀವ.ಅದಕ್ಕೂ ನೋವಾಗುತ್ತದೆ.ಹೆಣ್ಣನ್ನು ಮನೆಗೆಲಸಕ್ಕೆ ಮಾತ್ರವಲ್ಲದೆ ಎಲ್ಲೆಡೆ ನಮ್ಮೊಂದಿಗೆ ಧೈರ್ಯವಾಗಿ ಮುನ್ನುಗ್ಗುವ ವಾತಾವರಣ ಕಲ್ಪಿಸಿ.

  7.ತಾಯಂದಿರೆ,ಅಕ್ಕಂದಿರೆ,ತಂಗಿಯರೇ,ಸ್ನೇಹಿತರೆ ನಿಮ್ಮನ್ನು ನೀವು ರಕ್ಷಿಸುಕೊಳ್ಳಲು ಸದಾ ಸಿದ್ಧರಿರಿ.ಮಾರುಕಟ್ಟೆಯಲ್ಲಿ ಹಲವು ಸ್ಪ್ರೇಗಳು ಇವೆಯಂತೆ.ನಿಮ್ಮೊಂದಿಗೆ ಯಾವಾಗಲು ಇಟ್ಟುಕೊಂಡು ದುಷ್ಕರ್ಮಿಗಳ ಮೇಲೆ ಸ್ಪ್ರೇ ಮಾಡಿ.

  ಪೋಲಿಸ್ ಸಂಸ್ಥೆ ಹೇಗೆ ಬದಲಾಗಬೇಕು

  1.ಕೇಸು ಯಾವ ಇಲಾಖೆಗೆ ಸೇರುತ್ತದೆ ಎನ್ನುವ ವಿಚಾರ ಮಾಡದೆ ಮೊದಲು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪ್ರಾರಂಭಿಸಲು ಸಹಾಯ ಮಾಡಿ.

  2.ಗಾಯಾಳುಗಳನ್ನು ಮೊದಲು ಸಹಾಯ ಮಾಡಿದವರಿಗೆ ವಿಶ್ವಾಸದಿಂದ ಮಾತನಾಡಿ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುವ ಭರವಸೆ ಕೊಡಿ(ಈ ನಿಮ್ಮ ಮಾತುಗಳು ಅವರಿಗೆ ಖಂಡಿತ ಮುಂದೆ ಕೂಡ ಯಾರಿಗಾದರು ಸಹಾಯ ಮಾಡಲು ಪ್ರೇರೇಪಿಸುತ್ತದೆ).

  3.ಮನೆಯವರು ಅಥವಾ ಬಂದು ಮಿತ್ರರು ಬಂದ ಮೇಲೆ ಅವರನ್ನು(ಸಹಾಯ ಮಾಡಿದವರನ್ನು)ಕಾಯಿಸದೇ ಕಳುಹಿಸಿಕೊಡಿ

  4.ಶಾಲೆಗಳಲ್ಲಿ ಕಾಲೇಜುಗಳಲ್ಲಿ ಇಂಥಾ ಸಮಯದಲ್ಲಿ ಹೇಗೆ ಜನರು ನಡೆದುಕೊಳ್ಳಬೇಕು,ಸಹಾಯ ಮಾಡಬೇಕು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಿ(ಏಕೆಂದರೆ ನಾವೆಲ್ಲಾ ಹೆದರುವುದೇ ಪೋಲಿಸಿನವರು ನಮಗೇನು ಕೆಳುತ್ತಾರೆಂದು).

  ಸರ್ಕಾರ ಹೇಗೆ ಬದಲಾಗಬೇಕು

  1.ಪೋಲಿಸ್ ಪಡೆಯನ್ನು ಇನ್ನು ಸಶಕ್ತರನ್ನಾಗಿ ಮಾಡಿ(ಯುವಕರನ್ನು ಯುವತಿಯರನ್ನು ಹೆಚ್ಚಾಗಿ ಸೇರಿಸಿಕೊಳ್ಳಿ).ಎಲ್ಲೆಂದರಲ್ಲಿ ಪೋಲಿಸ್ ಪಡೆಯ ಕಾವಲಿರಲಿ.

  2.ಜನರೊಂದಿಗೆ ಮುಖಾಮುಖಿ ಭೇಟಿ ಆಗಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿ(ಟಿವಿ ಮಾತ್ರವಲ್ಲ).

  3.ಗಾಯಾಳುಗಳನ್ನ ಸರಕಾರಿ ಆಸ್ಪತ್ರೆಯಲ್ಲದೆ ಖಾಸಗಿ ಆಸ್ಪತ್ರೆ ಹತ್ತಿರವಿದ್ದಲ್ಲಿ ಗಾಯಾಳುಗಳನ್ನು ದಾಖಲಿಸಲೇ ಬೇಕು ಎನ್ನುವ ಹಾಗು ಚಿಕಿತ್ಸೆ ಪ್ರಾರಂಭಿಸಲು ಆದೇಶ ಹೊರಡಿಸಿ.

  4.ಆದಷ್ಟು ನಮ್ಮ ಶಾಸಕರು ,ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆ ನಡೆಯುವಾಗ ಸ್ಥಳಕ್ಕೆ ಖುದ್ದಾಗಿ ಬಂದು ಮಾತನಾಡಲಿ ಹೊರತು ಪೋಲೀಸರ ಬೆತ್ತ ,ಜಲದಾಳಿ,ಅಶ್ರುವಾಯುಗಳು ಮಾತನಾಡುವುದು ಬೇಡ.ಇದರಿಂದಾ ಪರಿಸ್ಥಿತಿ ಹತೋಟಿಗೆ ಬರದ ಹೊರತು ಇನ್ನಷ್ಟು ಅನಾಹುತಗಳು ಆಗಲು ಎಡೆ ಮಾಡಿಕೊಡುತ್ತವೆ.

  5.ಬಹಳಷ್ಟು ಈ ತರಹದ ಘಟನೆಗಳು ಮಧ್ಯದ ಅಮಲಿನಲ್ಲೇ ಆಗುತ್ತಿರುವುದರಿಂದ ದಯಮಾಡಿ ಮಧ್ಯಪಾನವನ್ನ ಸಂಪೂರ್ಣ ನಿಷೇಧಿಸಿ.ಸರ್ಕಾರದ ಬೊಕ್ಕಸಕ್ಕೆ ಇದರಿಂದ ನಷ್ಟವಾದರೂ ಪರವಾಗಿಲ್ಲ.ಈ ದರಿದ್ರ ಮಧ್ಯಪಾನದಿಂದ ಆಗುವ ಸರಕಾರದ ನಷ್ಟ ನಮ್ಮ ಅಕ್ಕತಂಗಿಯರ ಮಾನಕ್ಕಿಂತ ಹೆಚ್ಚಲ್ಲವಲ್ಲಾ.

  6.ಸೆನ್ಸಾರ ಮಂಡಳಿಯನ್ನು ಇನ್ನಷ್ಟು ಬಲಪಡಿಸಿ ಯಾವುದೇ ಜಾಹಿರಾತಿನಲ್ಲಿ,ಚಲನಚಿತ್ರಗಳಲ್ಲಿ,ಧಾರಾವಾಹಿಗಳಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ತೋರಿಸುವುದನ್ನ ಖಡಕ್ಕಾಗಿ ನಿಲ್ಲಿಸಲಿ.

  ಈ ಮೂರು(ನಾವು+ಪೊಲೀಸರು+ಸರಕಾರ)ಬದಲಾದಲ್ಲಿ ವ್ಯವಸ್ಥೆ ಅದಾಗೇ ಬದಲಾಗುತ್ತೆ.ಹಮ್ ಬದಲೆಂಗೆ ತೋ ದೇಶ್ ಬದಲೇಗಾ…

  ——ಪ್ರವೀಣ್.ಎಸ್.ಕುಲಕರ್ಣಿ

 10. Raghavendra says:

  Dear Pratap,

  Good artical about the issue. but please dont mix the politics into it.

 11. krishnamurthy says:

  namage gottirada aneka vishayagalannu tilisidakke dhanyavada sir

 12. Durgesh says:

  Hello Prathap,
  First of all congratulations for letting Indians know the originality of Congress. Your attention to detaisl are incredible.

  What has happened to the Indians who vote for Congress? Only for silly money, bloody reservations. Please work towards spreading all these information and let all 120+ crore indians know the realty of Congress. Due to this party, we Indians have become jokers infront of world. Nehru himself was a big joker.

  We all support Mr.Narendra Modi to be our next PM. He is the most eligible person to take forward this nation and get back the pride of Indians. He is the only person I could see to tackle the cheap tacticks of Congress. Let us destroy Congress.

  Thanks you Prathap once again for your fabulous articles. I am reading your articles form day 1 till date and also I read your book on Narendra Modi yesterday.
  Thanks for everyting.

  A true Indian,

  Bharath Mata ki Jai

 13. Anil says:

  I don’t think this article talks about any political party. The message in this article is completely true.

 14. raj says:

  i hate K M Vishwanath who badly comments on this article…

 15. Gowri. says:

  Heloo…. Prathap sir,

  nimma ella ariticals thumbha chennagiruthave sathaymshane hechagiruthe, adare elli badalagbekadaddu sarkara matra alla, K.M. Vishwanath avru helida haage jana, police, mathu sarkara 3 badalagbeku….anodu nan abhipraya sir.

 16. Raghu Mathad says:

  COngress ge patha kaliso samaya bandide.. buda sameta kittogeyona narasatta congress sarkara.. sainikaranna pakistana kollidaru nam pradhani niddeyallirtare.. rape adu rajadhani delhi li adru nam pradhani sonia gandhi nidre madtare.. shame on u sonia!!!!

 17. Krishnamurthy Hegde says:

  ಆರ್ಟಿಕಲ್ ತುಂಬಾನೇ ಚೆನ್ನಾಗಿದೆ, ಮತ್ತು ಅರ್ಥ ಪೂರ್ಣವಾಗಿದೆ, ಪ್ರತಾಪ್ ಅವ್ರು ಮೋದಿಯವರನ್ನು ಹೊಗಳಿದ ಮಾತ್ರಕ್ಕೆ ಅವ್ರು ಒಂದು ಪಕ್ಷದ ಪರವಾಗಿ ಮಾತನಾಡುತ್ತಿದ್ದಾರೆ ಅಂತ ಭಾವಿಸಬೇಡಿ, ಎ ಲೇಖನದಲ್ಲಿ ಪ್ರಕಟವಾಗಿರುವ ಅಂಶವನ್ನು ಗಮನಿಸಿ. ಇದರಲ್ಲಿ ಯಾವದಾದರು ತಪ್ಪಿದೆಯೆ. ದೇಶದ ಪ್ರಧಾನಿ ಏನಿಸಿಕೊಂಡಿರುವ ಸಿಂಗ್ ಅವರು ಅಕ್ಷರ ಸಹ ಕೀಲಿ ಕೊಡುವ ಗೊಂಬೆಯೇ. ಇದರಲ್ಲಿ ಎರಡನೆ ಮಾತಿಲ್ಲ.