Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕಾಂಗೈ ಹುಣ್ಣಿಗೆ ಕನ್ನಡಿ ಬೇಕೆ?

ಕಾಂಗೈ ಹುಣ್ಣಿಗೆ ಕನ್ನಡಿ ಬೇಕೆ?

ಅಮೇಥಿ ಜಿಲ್ಲೆಯಲ್ಲಿ ಐದು ವಿಧಾನಸಭೆ ಕ್ಷೇತ್ರಗಳಿವೆ.

1. ತಿಲೋಯಿ

2. ಸಲೋನ್

3. ಜಗ್್ದೀಶ್್ಪುರ್

4. ಗೌರಿಗಂಜ್

5. ಅಮೇಥಿ

ರಾಯ್್ಬರೇಲಿ ಜಿಲ್ಲೆಯಲ್ಲೂ ಐದು ಅಸೆಂಬ್ಲಿ ಸ್ಥಾನಗಳಿವೆ.

1. ಬಛ್ರಾವಾನ್

2. ಹರ್್ಚಂದ್್ಪುರ್

3. ರಾಯ್್ಬರೇಲಿ

4. ಸರೇನಿ

5. ಉಂಚಾಹರ್

ಅಮೇಥಿಯಲ್ಲಂತೂ ಗಾಂಧಿ ಕುಟುಂಬದ ಸದಸ್ಯರ ವಿರುದ್ಧ ನಿಂತು ಗೆದ್ದವರೇ ಇಲ್ಲ. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಈ ಕ್ಷೇತ್ರದಿಂದ ಗೆದ್ದುಬಂದಿದ್ದು ಕಳೆದೆರಡು ಚುನಾವಣೆಗಳಿಂದ ರಾಹುಲ್ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಯ್್ಬರೇಲಿಯಲ್ಲಿ ಒಮ್ಮೆ ಇಂದಿರಾ ಗಾಂಧಿಯವರು ಸೋತರೂ 1951ರಲ್ಲಿ ನಡೆದ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆಯಿಂದ ಆರಂಭವಾಗಿ ಇದುವರೆಗೂ ಅಲ್ಲಿ ನೆಹರು-ಗಾಂಧಿ ಕುಟುಂಬದ್ದೇ ದರ್ಬಾರು. ಫಿರೋಝ್ ಗಾಂಧಿ, ಇಂದಿರಾ ಗಾಂಧಿ, ಅರುಣ್ ನೆಹರು ಇಲ್ಲಿಂದ ಆರಿಸಿ ಬಂದಿದ್ದಾರೆ. ಕಳೆದ ಎರಡು ಚುನಾವಣೆಗಳಿಂದ ಸೋನಿಯಾ ಗಾಂಧಿಯವರು ರಾಯ್್ಬರೇಲಿಯ ವಿವಾದಾತೀತ ನಾಯಕಿಯಾಗಿದ್ದಾರೆ. ಹಾಗಿರುವಾಗ ಸೋನಿಯಾ ಹಾಗೂ ರಾಹುಲ್ ಗಾಂಧಿಯವರ ಕ್ಷೇತ್ರಗಳಲ್ಲಿ ಅನ್ಯ ಪಕ್ಷಗಳ ಅಭ್ಯರ್ಥಿಗಳು ಗೆಲ್ಲುವುದಕ್ಕಾದರೂ ಸಾಧ್ಯವಿದೆಯೇ?

ಉಹೂಂ!

ಅಮೇಥಿ ಹಾಗೂ ರಾಯ್್ಬರೇಲಿಯಲ್ಲಿ ನಮ್ಮನ್ನು ಮಣಿಸುವವರು ಯಾರೂ ಇಲ್ಲ ಎಂಬ ಸೊಕ್ಕು ಗಾಂಧಿ-ನೆಹರು ಕುಟುಂಬಕ್ಕಿದೆ. ಅಲ್ಲಿನ ಜನರನ್ನು ತನ್ನ ಅಡಿಯಾಳುಗಳು ಎಂದು ಅದು ಪರಿಗಣಿಸಿರುವುದೂ ನಿಜ. ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಜೀವ್ ಗಾಂಧಿಯವರ ಪುತ್ರಿ ಪ್ರಿಯಾಂಕ ವಾದ್ರಾ, ‘ಈ ಎರಡೂ ಕ್ಷೇತ್ರಗಳಲ್ಲಿರುವ ಹತ್ತಕ್ಕೆ ಹತ್ತೂ ಸ್ಥಾನಗಳನ್ನು (ಪರ್ಫೆಕ್ಟ್ ಟೆನ್) ಗೆದ್ದುಕೊಡುವುದಾಗಿ ಅಮ್ಮನಿಗೆ ಪ್ರಾಮಿಸ್ ಮಾಡಿದ್ದೇನೆ’ ಎಂದರು! ಅಷ್ಟೇ ಅಲ್ಲ, ಆ ಚುನಾವಣಾ ಸಭೆಗೆ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಬಂದು, ರಾಹುಲ್ ನಂತರ ಭಾರತವನ್ನಾಳುವ ಭವಿಷ್ಯದ ನಾಯಕರಿವರು ಎಂಬಂತೆ ಪ್ರದರ್ಶನವನ್ನೂ ಮಾಡಿದರು. ಇಷ್ಟಕ್ಕೂ ಶಾಲೆಗೆ ಹೋಗುವ ಮಕ್ಕಳನ್ನು ಚುನಾವಣಾ ಪ್ರಚಾರಾಂದೋಲನಕ್ಕೆ ಕರೆದುಕೊಂಡು ಬರಲು ಕಾರಣವಾದರೂ ಏನಿತ್ತು ಹೇಳಿ? ಅಷ್ಟು ಮಾತ್ರವಲ್ಲ, ಫೆಬ್ರವರಿ 15ರಂದು ಚುನಾವಣಾ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಪ್ರಣಾಳಿಕೆಯನ್ನು ಹರಿದು ಬಿಸಾಡಿದರು!

ಇಂತಹ ಸೊಕ್ಕು, ದರ್ಪಕ್ಕೆ ಉತ್ತರಪ್ರದೇಶದ ಜನ ಕೊಟ್ಟ ಉತ್ತರವಾದರೂ ಏನು ಅಂದುಕೊಂಡಿರಿ?!

ಹತ್ತಕ್ಕೆ ಹತ್ತಲ್ಲ, ಕಾಂಗ್ರೆಸ್್ನ ಕಪಾಳಕ್ಕೆ ಬಿತ್ತು. ಸೋನಿಯಾ ಪ್ರತಿನಿಧಿಸುವ ರಾಯ್್ಬರೇಲಿಯಲ್ಲಿ ಐದಕ್ಕೆ ಐದೂ ಸ್ಥಾನಗಳಲ್ಲಿ ಕಾಂಗ್ರೆಸ್ ಸೋತು ಮುಖಭಂಗಕ್ಕೊಳಗಾಗಿದೆ. ಅದು ಬರೀ ಸೋಲಲ್ಲ, ಐದರಲ್ಲಿ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಅಮೇಥಿಯಲ್ಲೂ ಕಾಂಗ್ರೆಸ್ ಗೆದ್ದಿದ್ದು ಐದರಲ್ಲಿ ಎರಡು ಮಾತ್ರ. ಅಷ್ಟು ಮಾತ್ರವಲ್ಲ, ಗಾಂಧೀ ಕುಟುಂಬ ಭದ್ರ ನೆಲೆಗಳು ಎಂದು ಗುರುತಿಸಲ್ಪಡುವ ಅಮೇಥಿ-ರಾಯ್್ಬರೇಲಿಯ ನೆರೆಯ ಪ್ರತಾಪ್್ಗಢ್ ಹಾಗೂ ಸುಲ್ತಾನ್್ಪುರಗಳಲ್ಲೂ 10 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಸಮಾಜವಾದಿ ಪಕ್ಷ ಗೆದ್ದುಕೊಂಡಿದೆ.

ಇದು ಏನನ್ನು ಸೂಚಿಸುತ್ತದೆ?

ಅನ್ಯಪಕ್ಷಗಳ ಪ್ರಣಾಳಿಕೆಯನ್ನು ಹರಿದು ಬಿಸಾಡುತ್ತಾರಲ್ಲಾ, ಮಕ್ಕಳನ್ನು ಮುಂದಿನ ನಾಯಕರೆಂದು ಪ್ರದರ್ಶನ ಮಾಡುತ್ತಾರಲ್ಲಾ ಈ ದೇಶವೇನು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರ ಅಪ್ಪ, ಅಜ್ಜಿ, ಮುತ್ತಜ್ಜ ನೆಹರು ಅವರ ಆಸ್ತಿಯೇನು? ಪ್ರಧಾನಿ ಸ್ಥಾನ ಹಾಗೂ ಉತ್ತರಪ್ರದೇಶ ತಮ್ಮ ಕುಟುಂಬದ ಆಸ್ತಿಯೆಂಬಂತೆ ವರ್ತಿಸುತ್ತಿರುವ ರಾಹುಲ್ ಗಾಂಧಿಯವರು ಈ ದೇಶಕ್ಕೆ ಕೊಟ್ಟಿರುವ ಕೊಡುಗೆ, ಮಾಡಿರುವ ಸಾಧನೆಯಾದರೂ ಏನು?

http://rahulgandhiachievements.com

ಈ ವೆಬ್್ಸೈಟನ್ನು ತೆರೆದುನೋಡಿ. ಇಡೀ ಪುಟ ಖಾಲಿ ಕಾಣುತ್ತದೆ. ಅಡಿಯಲ್ಲಿ, Last Updated: March 9, 2012ಎಂಬ ಸೂಚನೆಯೂ ಕಾಣುತ್ತದೆ. ಹಾಗಂತ ವೆಬ್್ಸೈಟ್್ನಲ್ಲಿ ಏನೋ ದೋಷವಿದೆ ಎಂಬ ಗೊಂದಲಕ್ಕೊಳಗಾಗಬೇಡಿ. ರಾಹುಲ್ ಗಾಂಧಿ ಈ ದೇಶಕ್ಕೆ ಏನಾದರೂ ಕೊಡುಗೆ ಕೊಟ್ಟಿದ್ದರೆ ತಾನೇ ಅಲ್ಲಿ ಪಟ್ಟಿ ಮಾಡಲು ಸಾಧ್ಯ? ರಾಹುಲ್ ತಾಯಿ ಸೋನಿಯಾ ಗಾಂಧಿಯವರ ಬಗ್ಗೆ ಹೇಳುತ್ತಾ, “Her only contribution is adding two children to 1 billion population of our country’ ಎಂದಿದ್ದರು ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್. ಇದನ್ನು ಯಾರು ಒಪ್ಪಲಿ ಬಿಡಲಿ ಸೋನಿಯಾ ಗಾಂಧಿಯವರಾಗಲಿ, ಅವರ ಸುಪುತ್ರನಾಗಲಿ ಈ ದೇಶಕ್ಕೆ ಕೊಟ್ಟ ಕೊಡುಗೆ ಮಾತ್ರ ಶೂನ್ಯ. ಮೊನ್ನೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿದ ನಂತರ“The Dynasty is over; Go on Rahul, get a Real Life’ ಎಂಬ ಶೀರ್ಷಿಕೆಯಡಿ ಆರ್. ಜಗನ್ನಾಥನ್ ಅವರು ‘ಫಸ್ಟ್ ಪೋಸ್ಟ್್’ ಡಾಟ್್ಕಾಮ್್ನಲ್ಲಿ ಒಂದು ಅದ್ಭುತ ಲೇಖನ ಬರೆದಿದ್ದಾರೆ. ಹೌದು, ಕುಟುಂಬದ ಮುಖ ನೋಡಿ ಮತ ಹಾಕುವ ಕಾಲಹೋಯಿತು.

ಆದರೆ…

ನೆಹರು ಕುಟುಂಬಕ್ಕಾಗಲಿ, ಮಾಧ್ಯಮಗಳಿಗಾಗಲಿ ಇದೇಕೆ ಅರ್ಥವಾಗುತ್ತಿಲ್ಲ? ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು ಕುಟುಂಬಕ್ಕೆ ಸೇರಿದವರು ಎಂಬ ಒಂದು ಅಂಶವನ್ನು ಬಿಟ್ಟರೆ ಈ ರಾಹುಲ್ ಗಾಂಧಿಯವರ ಕೊಡುಗೆಯಾಗಲಿ, ಯೋಗ್ಯತೆಯಾಗಲಿ ಏನೂ ಇಲ್ಲ. ಇಷ್ಟಾಗಿಯೂ ಮಾಧ್ಯಮಗಳೇಕೆ ರಾಹುಲ್ ಗಾಂಧಿಯವರ ಬಗ್ಗೆ ಇಂಥದ್ದೊಂದು ಮೋಹ ಇಟ್ಟುಕೊಂಡಿವೆ?

Youth Icon/ಯುವಜನತೆಯ ಮುಕುಟಮಣಿ

Most eligible bachelor

ಯುವರಾಜ/Prince

ಇಂತಹ ಹಲವಾರು ಬಿರುದು ಬಾವಲಿಗಳನ್ನು ಕೊಟ್ಟು ಹೊಗಳುವ ಮಾಧ್ಯಮಗಳು ವಾಸ್ತವವನ್ನು ಮರೆಮಾಚುವುದೇಕೆ? ಇವತ್ತು ರಾಹುಲ್ ಗಾಂಧಿಗಿಂತ ಅಣ್ಣಾ ಹಜಾರೆಯವರ ಹಿಂದೆ ಅತಿ ಹೆಚ್ಚು ಯುವಕರಿದ್ದಾರೆ.

ಏಕೆ ಅಂತೀರಾ?

ಈ ಗಾಂಧಿ-ನೆಹರು ಕುಟುಂಬಕ್ಕೆ ಒಂದು ರೀತಿಯ ಅರೋಗೆನ್ಸ್ ಇದೆ. ಪ್ರಧಾನಿ ಸ್ಥಾನ ತಮ್ಮದೇ, ತಾವೇನಾದರೂ ಆದರೆ ಅದು ಪ್ರಧಾನಿ ಮಾತ್ರ ಎಂಬ ದರ್ಪವಿದೆ. ಅವರು ಯಾರ ಕೆಳಗೂ ಕೆಲಸ ಮಾಡಲು ಒಪ್ಪುವುದಿಲ್ಲ. ಅದು 1947ರಲ್ಲೇ ಸಾಬೀತಾಗಿತ್ತು. 1947, ಆಗಸ್ಟ್ 15ರಂದು ಸ್ವಾತಂತ್ರ್ಯ ಬರುವುದು ಖಚಿತವಾದಾಗ ಬ್ರಿಟಿಷರು ಅಧಿಕಾರ ಹಸ್ತಾಂತರಿಸಲು ಭಾರತೀಯರದ್ದೇ ಒಂದು ಸರ್ಕಾರ ರಚಿಸಬೇಕಾದ ಪ್ರಸಂಗ ಎದುರಾಯಿತು. ಸ್ವಾತಂತ್ರ್ಯ ಚಳವಳಿಯನ್ನು ಗುತ್ತಿಗೆ ಪಡೆದುಕೊಂಡಂತೆ ವರ್ತಿಸುತ್ತಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯೂ ನಡೆಯಿತು. ಅದರಲ್ಲಿ ಸರ್ದಾರ್ ಪಟೇಲ್ ಅವರನ್ನು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಆದರೆ, ಮಹಾತ್ಮ ಗಾಂಧೀಜಿಯವರು ಜವಾಹರಲಾಲ್ ನೆಹರು ಅವರೇ ಪ್ರಧಾನಿಯಾಗಬೇಕೆಂದು ಹಟ ಹಿಡಿದ ಕಾರಣ ಪಟೇಲ್ ಹಿಂದೆ ಸರಿದರು, ನೆಹರು ಪ್ರಧಾನಿಯಾದರು. ಅಂದು ನೆಹರು ಉಪಪ್ರಧಾನಿಯಾಗಬಹುದಿತ್ತು. ಆದರೆ, ಈ ದೇಶ ತನ್ನ ಆಸ್ತಿ, ಅದಕ್ಕೆ ತಾನು ಮಾತ್ರ ವಾರಸುದಾರ ಎಂಬಂತೆ ವರ್ತಿಸಿದರು. ಅಷ್ಟಾಗಿ ಆಡಳಿತದ ಅನುಭವವೇ ಇರದ ಇಂದಿರಾ ಗಾಂಧಿಯವರೂ 1966ರಲ್ಲಿ ಪ್ರಧಾನಿಯಾದರು. ಇಂದಿರಾ ಗಾಂಧಿಯವರ ನಂತರ ರಾಜೀವ್ ಗಾಂಧಿ ಕೂಡ ನೇರವಾಗಿ ಪ್ರಧಾನಿ ಗದ್ದುಗೆ ಏರಿದರೇ ಹೊರತು ಯಾರ ಕೆಳಗೂ ಕೆಲಸ ಮಾಡಲಿಲ್ಲ. 2009ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಿದಾಗ ಪ್ರಧಾನಿ ಮನಮೋಹನ್ ಸಿಂಗ್ ಸಾರ್ವಜನಿಕವಾಗಿ ರಾಹುಲ್ ಅವರನ್ನು ತಮ್ಮ ಸಂಪುಟಕ್ಕೆ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರೂ ಅದು ಸಾಧ್ಯವಾಗಲಿಲ್ಲ. ಏಕೆಂದರೆ ನೆಹರು ಕುಟುಂಬ ಯಾರ ಕೈ ಕೆಳಗೂ ಕೆಲಸ ಮಾಡುವುದಿಲ್ಲ. ಇಂತಹ ದರ್ಪ ಇವತ್ತು ನಡೆಯುವುದಿಲ್ಲ. ಏಕೆಂದರೆ ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಭೂಭಾಗಗಳಷ್ಟೇ ದಾಸ್ಯ ಮುಕ್ತವಾದವು. ಆದರೆ Subordinate Mindset ನಮ್ಮಿಂದ ದೂರವಾಗಲಿಲ್ಲ. ಬ್ರಿಟಿಷರು ನೂರೈವತ್ತು ವರ್ಷಗಳ ಕಾಲ ನಮ್ಮ ನೆಲ, ಜಲ, ಭೂಭಾಗವನ್ನು ಮಾತ್ರ ಆಳಲಿಲ್ಲ. ನಮ್ಮ ಮನಸ್ಥಿತಿಯನ್ನೂ ಆಳಿದರು. ಆ ದಾಸ್ಯವೆಂಬುದು ಭೂಮಿಗೆ ಮಾತ್ರ ಸೀಮಿತವಾಗಲಿಲ್ಲ, ನಮ್ಮ ಮನಸ್ಸಿಗೂ ಅಂಟಿಕೊಂಡಿತ್ತು. ದುರದೃಷ್ಟವಶಾತ್, ಕಾಂಗ್ರೆಸ್ ಹಾಗೂ ನೆಹರು ಕುಟುಂಬ ನಮ್ಮ ಅಡಿಯಾಳು ಮನಸ್ಥಿತಿ ಅಥವಾ Subordinate Mindset ಅನ್ನು ತನ್ನ ದಾಸ್ಯಕ್ಕೆ ಇಟ್ಟುಕೊಂಡಿತು. ಸರ್ಕಾರಿ ಕೆಲಸ, ಅದಕ್ಕೆ ಮೀಸಲಾತಿ ಮುಂತಾದ ಆಮಿಷಗಳ ಮೂಲಕ ಜನರನ್ನು ಅಡಿಯಾಳಾಗಿಟ್ಟುಕೊಳ್ಳುವ ಪ್ರಯತ್ನ ಮುಂದುವರಿಯಿತು. ಇಂಥ ಅಡಿಯಾಳು ಮನಸ್ಥಿತಿ ಹೋಗಲು ಪ್ರಾರಂಭವಾಗಿದ್ದೇ ನರಸಿಂಹ ರಾವ್ ಅವರು ತಂದ 1991ರ ಆರ್ಥಿಕ ಉದಾರೀಕರಣದ ನಂತರ. ಆನಂತರ ಸರ್ಕಾರಕ್ಕಿಂತ ಖಾಸಗಿ ಕ್ಷೇತ್ರ ಅತಿದೊಡ್ಡ ಉದ್ಯೋಗದಾತನಾಗಿ ಹೊರಹೊಮ್ಮಿತು. ಕೇಂದ್ರ ಸರ್ಕಾರಿ ಉದ್ಯೋಗಗಳಿಗಿಂತಲೂ ಹೆಚ್ಚಿನ ಸಂಬಳ ಸವಲತ್ತು ನೀಡಲಾರಂಭಿಸಿದವು. ಅದುವರೆಗೂ ಉದ್ಯೋಗಕ್ಕಾಗಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಪ್ರತಿಭಾನ್ವಿತರಿಗೆ ಖಾಸಗಿ ಕ್ಷೇತ್ರದಲ್ಲಿ ಒಳ್ಳೊಳ್ಳೆಯ ಅವಕಾಶಗಳು ಲಭ್ಯವಾದ ಕಾರಣ ಸರ್ಕಾರದ ದಾಸ್ಯದಿಂದ ಮುಕ್ತಿಪಡೆಯುವಂತಾಯಿತು. ಅದರಲ್ಲೂ ಸಾಫ್ಟ್್ವೇರ್ ಕ್ಷೇತ್ರ ನಮ್ಮ ದೇಶದ ಹಣೆ ಬರಹವನ್ನೇ ಬದಲಾಯಿಸಿತು. 1991ರ ನಂತರ ಹೊಸದೊಂದು ತಲೆಮಾರು ಹುಟ್ಟಿಬಂತು. ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗದ ನಡುವೆ ಹೊಸದಾದ Upper Middle Class ತಲೆಯೆತ್ತಿತು. ನಮ್ಮ ಸಾಫ್ಟ್್ವೇರ್ ಎಂಜಿನಿಯರ್್ಗಳು, 1991ರ ನಂತರದ ತಲೆಮಾರು ಬಿಡುವಿನ ಸಮಯದಲ್ಲಿ ಟ್ವಿಟ್ಟರ್, ಫೇಸ್್ಬುಕ್, ಆರ್ಕುಟ್್ಗಳಂಥ ಸಾಮಾಜಿಕ ತಾಣಗಳಲ್ಲಿ ಸರ್ಕಾರದ ತಲೆಗೆ ಮೊಟಕುವ, ನೇರವಾಗಿ ಟೀಕಿಸುವ, ತಮಗೆ ಸರಿ ಕಂಡಿದ್ದನ್ನು ಅಂಜಿಕೆಯಿಲ್ಲದೆ ವ್ಯಕ್ತಪಡಿಸುವ ಧೈರ್ಯ ತೋರಿತು. ಇಂದು ರಾಹುಲ್ ಗಾಂಧಿಯ ಅಪ್ಪ, ಅಜ್ಜಿ, ಮುತ್ತಜ್ಜ ಯಾರು ಎಂದು ಗೊತ್ತಿಲ್ಲದ ದೊಡ್ಡ ತಲೆಮಾರೇ ನಮ್ಮ ಮುಂದಿದೆ. ಹೀಗೆ ರಾಜೀವ್ ಗಾಂಧಿಯವರ ಸ್ಫುರದ್ರೂಪಕ್ಕೆ ಮರುಳಾಗುವ, ನೆಹರು-ಗಾಂಧಿ ಕುಟುಂಬವೆಂದ ಕೂಡಲೇ ಸಮ್ಮೋಹನಕ್ಕೊಳಗಾಗುವ ಕಾಲ ಹೋಯಿತು. ಅದಿರಲಿ, ವಿವಿ ಕ್ಯಾಂಪಸ್್ಗಳಿಗೆ ರಾಹುಲ್ ಭೇಟಿಕೊಟ್ಟಾಗ ಸುತ್ತುವರಿಯುವ ಯುವತಿಯರನ್ನು ಕಂಡು ಆತ ಯುವಜನತೆಯ ಮುಕುಟಮಣಿ ಎಂದು ಹೇಳಲು ಸಾಧ್ಯವೇ? ಇಂದಿನ ಬಹಳಷ್ಟು ಹುಡುಗಿಯರು ಚೆಂದ ಇರುವ ಹುಡುಗರ ಚೇಷ್ಟೆಗೆ ಒಂದು ನೋಟ ಬೀರುತ್ತಾರೆ, ನಗು ಚೆಲ್ಲುತ್ತಾರೆ. ಅದಕ್ಕೆ ರಾಹುಲ್ ಗಾಂಧಿಯೇ ಆಗಬೇಕೆಂದಿಲ್ಲ. ಇಬ್ಬರು ಹೆಂಗಸರು ಬೀದಿ ಜಗಳ ಮಾಡುತ್ತಿದ್ದರೂ ಜನ ಗುಂಪುಗಟ್ಟಿ, ಸುತ್ತುವರೆದು ಮಜಾ ತೆಗೆದುಕೊಳ್ಳುತ್ತಾರೆ. ನಮ್ಮ ಮಂದಿಯ ಮನಸ್ಥಿತಿಯೇ ಅಂಥದ್ದು. ಅಂದಮಾತ್ರಕ್ಕೆ ನೋಡಲು ಬಂದವರೆಲ್ಲ ಮೆಚ್ಚಿಕೊಂಡವರು ಎಂದು ಭಾವಿಸಿದರೆ ಮೂರ್ಖತನವಾಗುತ್ತದೆ. ಇಂಥ ಮೂರ್ಖತನ ನಮ್ಮ ಮಾಧ್ಯಮಗಳು ಹಾಗೂ ನೆಹರು ಕುಟುಂಬಕ್ಕೆ ಆದಷ್ಟು ಬೇಗ ಅರ್ಥವಾಗಬೇಕು. ಜತೆಗೆ ನಮ್ಮ ಮಾಧ್ಯಮಗಳಲ್ಲಿರುವ ಮೂರ್ಖರು ದೇಶದ ಜನರ ಬುದ್ಧಿಮತ್ತೆಯನ್ನೇ ಕೀಳಂದಾಜು ಮಾಡುವುದನ್ನು ನಿಲ್ಲಿಸಬೇಕು. ಇಷ್ಟಕ್ಕೂ ನೆಹರು-ಗಾಂಧಿ ಎಂದರೆ ಏನೆಂದು ಕೇಳುವ ಕಾಲ ಬಂದಿರುವಾಗ ಕುಟುಂಬದ ಹೆಸರು ನೋಡಿಕೊಂಡು ಓಟು ಕೊಡುತ್ತಾರೆ, ನಾಯಕರೆಂದು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಿದರೆ ಅದು ನಮ್ಮ ಮೂರ್ಖತನವಷ್ಟೇ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿರುವುದೂ ಇದೇ. ಮಾಧ್ಯಮಗಳು ಸೃಷ್ಟಿಸಿದ ಉನ್ಮಾದವನ್ನೇ ನೆಚ್ಚಿಕೊಂಡ ರಾಹುಲ್ ಬಾಬಾ ಮ್ಯಾಜಿಕ್ ಮತ ಪೆಟ್ಟಿಗೆಗಳನ್ನು ತೆಗೆದಾಗ ಖಾಲಿ ಖಾಲಿ. ಇಂದಿರಾ ಬಣದ ಕಾಂಗ್ರೆಸ್ಸನ್ನು ಈ ಹಿಂದೆ ‘ಕಾಂಗೈ’ ಎನ್ನುತ್ತಿದ್ದರು. ನಮ್ಮಲ್ಲಿ ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?’ ಎಂಬ ಮಾತಿದೆ. ಅದೇ ರೀತಿ ಉತ್ತರ ಪ್ರದೇಶದ ಜನ ಕಾಂಗ್ರೆಸ್ ಹುಣ್ಣಿಗೆ ಕನ್ನಡಿ ಬೇಕೆ? ಎಂಬ ಸಂದೇಶವನ್ನು ರವಾನಿಸಿರುವುದು ಫೆ.6ರ ಫಲಿತಾಂಶದಿಂದ ಬೆಳಕಿಗೆ ಬಂದಿದೆ.

ಇಷ್ಟಕ್ಕೂ…

Nothing succeeds like successಎಂಬ ಮಾತು ರಾಹುಲ್ ವಿಷಯದಲ್ಲಿ, Nothing succeds like failure ಆಗಿದೆ ಎಂದು ಬಿಜೆಪಿಯ ರವಿಶಂಕರ್ ಪ್ರಸಾದ್ ಮಾರ್ಮಿಕವಾಗಿ ಹೇಳಿದ್ದರೂ ಅದು ನಿಜವೆನಿಸುತ್ತಿದೆಯಲ್ಲವೆ?

44 Responses to “ಕಾಂಗೈ ಹುಣ್ಣಿಗೆ ಕನ್ನಡಿ ಬೇಕೆ?”

  1. Dr.Sahana says:

    Very true!!!! monocracy should be completely eradicated from our nation…
    feel proud of ppl of UP, hope this happens in every state of our India !!

  2. Vinay S O says:

    Rahul Gandhi Congress ge Mattu Sonia Gandhi ge Sampattu agirabahudu Aadare E Namma Bharati ge alla..
    Neharu vamshada jeans ondu ivarallide enda matrakke Deshavannu aaluva Dhurase especially Rahul ge salladu mattu dakkadu..
    Indina pancha rajya chunaavane Rahul ra Vaibhaveekarana da result endare tappagalaradu..
    Thumba chennagi varnisiddera sir..

  3. Shantkumar n k says:

    Superb article Sir..

  4. Gururaj says:

    One Rahul D is WALL of india & other Rahul G is FALL of India. D gave us pride & G tried to make us dumb like him……..

  5. koushik says:

    Its true..I am impressed very much of ur article..I agree with this..

  6. arunshankar raga says:

    It’s true sir they will get real result in future parliment election these elections are mirror of common people feeling towards congress. he is not able to compare even kasab,The real youth icons are like sandeep unnikrishnan & others they served for nation.
    he is simply a fraud…………………………………….

  7. Vinay says:

    Adbhuta lekhana.

    I loved the article as always but what caught my eye was the rationale that the younger generation is becoming aware of the reality because of twitter, Facebook and Orkut. Now that I think about it, its so true! When I joined Facebook, it was more about Mafia wars and Farmville. But now, I open Facebook mostly to read the articles and links posted by you and other like minded people. The first time I heard about the ‘real’ history of Sonia Gandhi and Rahul Gandhi was when a friend of mine shared a video of Dr. Subramanian Swamy’s lecture.
    I wish this silent online revolution continues and hope that we don’t get to see any of the Nehru-Gandhi family people in Indian politics.
    Once again, excellent article!

  8. manoj rao says:

    simply superb…

  9. muthu raj says:

    so called youth icon will not win 2014 election n surely dynasty will be over.

  10. Haleshappa s says:

    Good article pratap ji. This country never belongs to any individuals. Generation is changed awareness is more in youths. So all should understand the real problems and should work hard for the nation then only people identify the politicians otherwise there is no life in future to dongi politicians like Rahul gandhi

  11. Santosh says:

    sakattagi bardiddira article.

  12. ಕಾಂಗೈ ಭ್ರಷ್ಟರ ಪರ, ದೇಶದ ವಿರೋಧಿ!

  13. Suhas v athreya says:

    Very nice article

  14. Amith guptha says:

    Sir now last updated 13 march 2012. The article was superb and i’m giving a suggestion that you’ve to discuss about this matter in suvarna news 24*7 channel that will reach more people whats the realistic face of rahul baba:-):)

  15. savitri says:

    ಹೌದು ಸರ್…

  16. paresh says:

    good article

  17. B N Uday Shankar says:

    Good article sir:)

  18. Poornachandra says:

    Nice Article…

    ಮತ್ತೊಮ್ಮೆ ಗಂಧೀ ಪರಿವಾರದ ಮೇಲೆ ಕೆಂಡ ಕಾರಿದ್ದು ತುಂಬಾನೇ ಇಷ್ಟ ಆಯ್ತುರೀ, ಅದು ಫೆ. 6 ಅಲ್ಲ ; ಮಾರ್ಚ್ 6……….

    ತುಂಬಾನೇ ಕಡಿಮೆ ತಾವು ಮಾಡೋ ಮಿಸ್ಟಕ್ಸ್ ಆದ್ರೆ ಟೈಪೂ…………..

  19. sudheer says:

    EXCELLENT – The author’s line of reasoning was crystal clear

  20. sudheer says:

    The lines of reasoning was crystal clear ”EXCELLENT” !!

  21. Bharadwaj says:

    Provide a facebook share option for every article…

  22. Anaveeresh says:

    Sir, please write about prime minister of Russia Vladimir Putin the coming Saturday

  23. Ram says:

    Pratap ji,
    Write-up is really good, enjoyed reading it.. But people of UP have elected ‘Yadav’ family instead of ‘Nehru-Gandhi’ family.. It is very sad that a person with out political background can not come up in politics in our country

  24. Shashi says:

    Nice article…

    I feel our karnataka people should learn from these UP and TN people, as to vote for only one party get to the power…with good margin

  25. deepak says:

    superb article…..i request all my fellow indians… plz dont vote for caste based politics….

  26. ಸ್ವತಂತ್ರದ ನಂತರ ಇವರದೇ ವಂಶಾಡಳಿತ … ೫೦ ವರ್ಷದ ಧೀರ್ಘ ಸರ್ವಾಧಿಕಾರ .. ಪ್ರಗತಿ ಬರೀ ಶೂನ್ಯ… ಇದಕ್ಕೆ ತಾನೇ ಗಣರಾಜ್ಯ ಪ್ರಜಾಪ್ರಭುತ್ವ ಎಂದೆಲ್ಲಾ ಬೊಬ್ಬೆ ಹಾಕಿ, ನಂತರದ ಅವರದೇ ಆದ ತಲೆಮಾರನ್ನು ಗದ್ದುಗೆಗೆ ಏರಿಸುವುದು…. ಗಾಂಧಿ ಹೆಸರನ್ನಿಟ್ಟುಕೊಂಡು ಅವರ ಹೆಸರಿಗೇ ಮಸಿ ಬಳಿಯುವವರು, ಜಾತ್ಯಾತೀತ ಪಕ್ಷ ಮಣ್ಣಿನ ಮಕ್ಕಳು ಎಂದೆಲ್ಲಾ ಬೊಗಳಿ ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಸೇರಿದ ದೇವರನ್ನು ಪೂಜಿಸುವವರು, ಸಹಾನುಭೂತಿಯಿಂದ ಗದ್ದುಗೆಗೇರಿ ತಪ್ಪೆಸಗಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡವರು, ಇವರೆಲ್ಲರಿಂದ ದೇಶದ ಉದ್ದಾರ ಅಸಾದ್ಯ .. ನರೇಂದ್ರ ಮೋದಿಯವರಂತಹಾ ಸಜ್ಜನ ರಾಜಕಾರಣಿಯ ಅವಶ್ಯಕತೆ ನಮ್ಮ ದೇಶಕ್ಕಿದೆ..

  27. NITHIN KUMAR says:

    ITS WONDERFUL…. DOWN DOWN RAHUL…..

  28. Shivakumar says:

    Good article sir

  29. nice article sir, if india want to bcm super power wn sonia gandhi family go back to itali ts gandhi family s big dangeors nuclear bomb for our nation.

  30. Sandeep vb says:

    ದೇಶ ನಮ್ಮಪ್ಪನ್ ಸೊತ್ತು ಅ೦ದುಕೊ೦ಡಿದ್ರು ಯಾರ್ ಸೊತ್ತು ಅ೦ತ ಇವಾಗ ಗೊತ್ತಾಗಿರಬಹುದು….

  31. Shivakumar D says:

    Fine sir…
    Mahatmaru annisikondavru ondu tappu madidru adara parinama doddadagirutte.

  32. ramesh nayak says:

    What’s your point? The Gandhis have been humbled by another dynasty. The man of the moment Akhilesh Yadav wouldn’t have become the chief minister of UP at 38 if he wasn’t Mulayam Singh Yadav’s son.

  33. Sangamesh karadi says:

    Ofcourse sir… If any body ask @ me that who is waste fellow of our nation , my answer is only should include mother{Soni} + son{Rahu}….
    If they are honest , leave d chairman seat of UPA!

  34. Balakrishna says:

    Its true..I am impressed very much of ur article..I agree with this is Superb article Sir.ಭ್ರಷ್ಟರ ಪರ, ದೇಶದ ವಿರೋಧಿ ಕಾಂಗೈ

  35. HEMANTH says:

    True lines……..

  36. hitesh says:

    Hi Pratap,

    Thank you for your articles…and they give lot of knowledge to us..since we don’t know most of the things..those things are mentioned and quoted…so and can you please suggest how we need to improve our knowledge as you? please suggest..

    Please suggest i’ll wait for your suggestion…..

    Yours,
    Hitesh

  37. hitesh says:

    also please suggest good article websites…which we can refer…please

  38. MUTHURAJ says:

    OF COURSE I AGREE WITH LINES SUPERB

  39. sridhar says:

    superb…………….

  40. susanna says:

    Swalpa karnataka rajakaranada baggenu baredu janara kan teresi pl……
    BJP olavu nimage swalpa jasthi annisutte.

  41. ravihonda says:

    Ayyo… paapa, Neevella yakingadthira ??? Rahul gandhi ge kanasu beelabaradenu ?? Hogli bidi let him enjoy his ” THIRUKANA KANASU ” !!

  42. BKK says:

    It’s really wonderful, Yuvakarella seri yenadu changes madbeku.

  43. jagadish says:

    excelent sir

  44. PT says:

    Heard about you on twitter! Try to translate these to english to benefit northies like me !
    thanks..

    PT