*/
Date : 14-08-2012, Tuesday | 13 Comments
ನೀವೇನಾದರೂ 1996ರಲ್ಲಿ ನಡೆದ ಅಟ್ಲಾಂಟಾ ಒಲಿಂಪಿಕ್ಸ್್ನ ಜಿಮ್ನಾಸ್ಟಿಕ್ ಸ್ಪರ್ಧೆಯನ್ನು ನೋಡಿದ್ದೇ ಆಗಿದ್ದರೆ ಕೆರ್ರಿ ಸ್ಟ್ರಗ್ ಖಂಡಿತ ನಿಮಗೆ ನೆನಪಿರುತ್ತಾಳೆ. Pint-Sized Dynamo ಎಂದೇ ಹೆಸರಾದ ಅವಳು ಅಮೆರಿಕದ Magnificent Seven ಖ್ಯಾತಿಯ ಜಿಮ್ನಾಸ್ಟಿಕ್ ತಂಡದ 7 ಸದಸ್ಯರಲ್ಲಿ ಒಬ್ಬಳು. ಅವರಲ್ಲಿ ಶಾನನ್ ಮಿಲ್ಲರ್ ಅಮೆರಿಕದ ಅತ್ಯಂತ ಪ್ರಸಿದ್ಧ ಜಿಮ್ನಾಸ್ಟ್. ಇನ್ನು 14 ವರ್ಷದ ಡಾಮಿನಿಕ್ ಮೊಸೇನು ನವತಾರೆ. ಡಾಮಿನಿಕ್ ಡಾಸ್, ಅಮಿ ಚೋವ್, ಅಮಂಡಾ ಬೋರ್ಡೆನ್, ಜೈಸಿ ಫೆಲ್ಪ್ಸ್ ಇತರ ಖ್ಯಾತನಾಮ ಹೆಸರುಗಳಾದರೆ 4 ಅಡಿ 9 ಅಂಗುಲದ ಕೆರ್ರಿ ಸ್ಟ್ರಗ್ ಖ್ಯಾತಿಯಲ್ಲಿ ಎಲ್ಲರಿಗಿಂತ ಕಡೆಯವಳು. ನಿಜ ಹೇಳಬೇಕೆಂದರೆ ಅವಳ ಬಗ್ಗೆ ಅಷ್ಟಾಗಿ ಯಾವ ಭರವಸೆಯೂ ಇರಲಿಲ್ಲ. ಇಂತಹ 7 ಜನರ ಅಮೆರಿಕ ತಂಡ ರಷ್ಯಾವನ್ನು ಎದುರಿಸಲು ಸಿದ್ಧವಾಗಿತ್ತು. ಇವತ್ತು ಚೀನಿಯರು, ಜಪಾನಿಯರು, ಕೊರಿಯನ್ನರು ಜಿಮ್ನಾಸ್ಟಿಕ್್ನಲ್ಲಿ ಸಡ್ಡುಹೊಡೆಯುತ್ತಿರಬಹುದು, ಆದರೆ ಅಟ್ಲಾಂಟಾ ಒಲಿಂಪಿಕ್ಸ್್ಗೂ ಮುನ್ನ 40 ವರ್ಷಗಳ ಕಾಲ ಜಿಮ್ನೇಷಿಯಂ ಅಂಗಳವನ್ನು ಆಳಿದ್ದೇ ರಷ್ಯನ್ ಬಾಲೆಯರು. 1948ರಿಂದ ರಷ್ಯನ್ನರನ್ನು ಸೋಲಿಸಲು ಯಾವೊಂದು ತಂಡಕ್ಕೂ ಆಗಿರಲಿಲ್ಲ. 1996ರಲ್ಲೂ ರಷ್ಯನ್ನರದ್ದೇ ದರ್ಬಾರು ನಡೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು.
1996, ಜುಲೈ 23ರಂದು ನಡೆದಿದ್ದೇ ಬೇರೆ!
ತಂಡ ಸ್ಪರ್ಧೆಯ ಕೊನೆಯ ಸುತ್ತಿನ ವೇಳೆಗೆ ಅಮೆರಿಕ 0.897 ಅಂಕ ಮುನ್ನಡೆ ಸಾಧಿಸಿತ್ತು! ಆದರೆ ಕೊನೆಯ ಸುತ್ತಿನಲ್ಲಿ ಸ್ವಲ್ಪ ಎಡವಿದರೂ ರಷ್ಯನ್ನರು ಚಿನ್ನ ಕಿತ್ತುಕೊಳ್ಳುವ ಸಾಧ್ಯತೆ ಇತ್ತು. ರಷ್ಯಾ ಕೂಡ ಹಾಗೆಯೇ ಭಾವಿಸಿತ್ತು. ಅದಕ್ಕೆ ತಕ್ಕಂತೆ ಎರಡು ಬಾರಿ ಕೆಳಗುರುಳಿದ ಅಮೆರಿಕದ ಡಾಮಿನಿಕ್ ಮೊಸೇನು ರಷ್ಯಾದ ಭರವಸೆ ಮತ್ತೂ ಹೆಚ್ಚಾಗುವಂತೆ ಮಾಡಿದಳು. ಕಡೆಯ ಜಿಗಿತ ಕೆರ್ರಿ ಸ್ಟ್ರಗ್್ಳದ್ದು 9.413 ಅಂಕ ಬಂದರಷ್ಟೇ ಚಿನ್ನ. ಮೊದಲ ಯತ್ನದಲ್ಲಿ ಸರಿಯಾಗಿ ಲ್ಯಾಂಡ್ ಆಗಲಾಗದೆ ಕಾಲಿನ ಮಣಿಕಟ್ಟನ್ನೇ ಟ್ವಿಸ್ಟ್ ಮಾಡಿಕೊಂಡಳು. ಆ ಹಂತದಲ್ಲಿ ಚಿನ್ನ ಕೈತಪ್ಪಿಹೋಯಿತು ಎಂದೇ ಭಾವಿಸಿದರು. ಏಕೆಂದರೆ ಕೆರ್ರಿ ಸ್ಟ್ರಗ್ ಮತ್ತೊಂದು ಪ್ರಯತ್ನ ಮಾಡುವ ಸ್ಥಿತಿಯಲ್ಲೇ ಇರಲಿಲ್ಲ. ಕಾಲು ಊದಲು ಆರಂಭಿಸಿತು. ಹತ್ತಿರಕ್ಕೆ ಬಂದ ಕೋಚ್, “ಕೆರ್ರಿ ನೀನು ಮತ್ತೊಮ್ಮೆ ಜಿಗಿಯಲೇಬೇಕು, ಜಿಗಿದರಷ್ಟೇ ಚಿನ್ನ” ಎಂದು ಹುರಿದುಂಬಿಸಲಾರಂಭಿಸಿದರು. ಆದರೆ ಜಿಗಿಯುವ ಮಾತು ಹಾಗಿರಲಿ, ಕೆರ್ರಿಗೆ ಕಾಲನ್ನು ಮುಂದಿಡುವುದಕ್ಕೇ ಆಗುತ್ತಿಲ್ಲ. ಆ ಕ್ಷಣದಲ್ಲಿ ಅದ್ಯಾವುದೋ ಶಕ್ತಿ ಪರಕಾಯ ಪ್ರವೇಶವಾದಂತೆ ಎದ್ದುನಿಂತ ಕೆರ್ರಿ, ಓಡೋಡಿ ಬಂದು ಗಾಳಿಯಲ್ಲಿ ಪುಟಿದು ಲ್ಯಾಂಡ್ ಆದಳು, ಹಾಗೆ ಲ್ಯಾಂಡ್ ಆಗುವಾಗ ನಿಲ್ಲಲು ಒಂದೇ ಕಾಲಿನ ಆಶ್ರಯ ಪಡೆದುಕೊಳ್ಳಬೇಕಾಯಿತು. ಅಷ್ಟೇ ಅಲ್ಲ, ಒಂದೇ ಕಾಲಿನಲ್ಲಿ ಹಾಪ್ ಮಾಡುತ್ತಾ ತೀರ್ಪುಗಾರರಿಗೆ ನಮಿಸಿ, ಅಲ್ಲಿಯೇ ಕುಸಿದಳು. ಗೆಲುವಿಗೆ ಬೇಕಿದ್ದಿದ್ದು 9.413 ಅಂಕವಾದರೆ ಸ್ಕೋರ್್ಬೋರ್ಡ್ ಮೇಲೆ ಮೂಡಿದ್ದು 9.712!
ಅವತ್ತು ವೀಕ್ಷಕರ ಕಣ್ಣಾಲಿಗಳು ಒದ್ದೆಯಾಗಿದ್ದವು!
ಚಿನ್ನ ಪಡೆಯುವಾಗ ಆಕೆಯನ್ನು ವೇದಿಕೆಗೆ ಎತ್ತಿಕೊಂಡು ಬರಬೇಕಾಯಿತು. ಅದನ್ನು ಕಂಡು ಇಡೀ ಅಮೆರಿಕವೇ ಎದ್ದುನಿಂತು ಆಕೆಗೆ ವಂದಿಸಿತು. ಅಧ್ಯಕ್ಷ ಕ್ಲಿಂಟನ್ ಟೀವಿಯಲ್ಲಿ ಕಾಣಿಸಿಕೊಂಡು ಶ್ಲಾಘಿಸಿದರು. ಖ್ಯಾತ ಕ್ರೀಡಾ ಪತ್ರಿಕೆ “ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್್”ನ ಮುಖಪುಟದಲ್ಲಿ ಕಾಣಿಸಿಕೊಂಡಳು. ಅಮೆರಿಕದ “ಐಕಾನ್್” (ಮುಕುಟಮಣಿ) ಆಗಿ ಬಿಟ್ಟಳು.
ಆದರೇನಂತೆ…
ಮಣಿಕಟ್ಟಿನ ಗಾಯ, ಪ್ರಾಣಾಂತಿಕ ನೋವಿನ ನಡುವೆಯೂ ಚಿನ್ನ ಗೆದ್ದುಕೊಟ್ಟ ಕೆರ್ರಿ ಸ್ಟ್ರಗ್ ಒಂದುಕಡೆಯಾದರೆ, ಮತ್ತೊಂದುಕಡೆ ಪ್ರಸ್ತುತ ನಡೆಯುತ್ತಿರುವ 2012ರ ಲಂಡನ್ ಒಲಿಂಪಿಕ್ಸ್್ನಲ್ಲಿ ಕಾಲೇ ಇಲ್ಲದವರು, ಹುಟ್ಟುವಾಗಲೇ ಕೈ ಕಳೆದುಕೊಂಡವರು ಎಲ್ಲಾ ಇರುವ ಶಕ್ತ ಕ್ರೀಡಾಪಟುಗಳ ಜತೆ ಸ್ಪರ್ಧಿಸುತ್ತಿದ್ದಾರೆ!! ಅವರೇ ದಕ್ಷಿಣ ಆಫ್ರಿಕಾದ ಆಸ್ಕರ್ ಪಿಸ್ಟೋರಿಯಸ್ ಹಾಗೂ ಪೋಲೆಂಡ್್ನ ನತಾಲಿಯಾ ಪಾರ್ಟಿಕಾ. ಜುಲೈ 31ರಂದು 23 ವರ್ಷದ ಪಾರ್ಟಿಕಾ ಟೇಬಲ್ ಟೆನಿಸ್್ನ ಸಿಂಗಲ್ಸ್್ನಲ್ಲಿ ನೆದರ್್ಲ್ಯಾಂಡ್್ನ ಜೀ ಲೀ ವಿರುದ್ಧ ಸೆಣಸಾಡುವುದನ್ನು ಕಂಡು ನಿಜಕ್ಕೂ ಅಚ್ಚರಿಯೆನಿಸುತ್ತಿತ್ತು. ಆಕೆಗೆ ಬಲಗೈಯೇ ಇಲ್ಲ! ಮೊಂಡು ಮೊಣಕೈನಲ್ಲಿ ಬಾಲನ್ನು ಸ್ಪಿನ್ ಮಾಡಿ ಎಡಗೈನಲ್ಲಿ ಬಾರಿಸುವುದನ್ನು ಕಂಡಾಗ ಆಕೆಯ ಗೆಲುವಿಗಾಗಿ ಮನಸು ಪ್ರಾರ್ಥಿಸತೊಡಗಿತು. ಮೊದಲ ಎರಡು ಸೆಟ್್ಗಳನ್ನು ಗೆದ್ದುಕೊಂಡಾಗಲಂತೂ ಖುಷಿಗೆ ಪಾರವೇ ಇರಲಿಲ್ಲ. ಆದರೆ ನಂತರ 3 ಸೆಟ್್ಗಳನ್ನು ಸೋತ ಪಾರ್ಟಿಕಾ, ಸಿಂಗಲ್ಸ್್ನಿಂದ ಹೊರಬಿದ್ದಿದ್ದಾರೆ. ಒಲಿಂಪಿಕ್ಸ್್ನಲ್ಲಿ ಪದಕ ಗೆಲ್ಲುವುದು ಆಕೆಯ ಕನಸು. ಪೋಲೆಂಡ್್ನ ಟೇಬಲ್ ಟೆನಿಸ್ ತಂಡದಲ್ಲೂ ಸ್ಥಾನ ಪಡೆದಿದ್ದ ಆಕೆ ಟೀಮ್ ಇವೆಂಟ್್ನ ಕ್ವಾರ್ಟರ್ ಫೈನಲ್್ವರೆಗೂ ಮುನ್ನಡೆದಳು. ಅಲ್ಲಿ ತಂಡ ಸಿಂಗಾಪುರಕ್ಕೆ ಶರಣಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್್ನಲ್ಲಿ ದಕ್ಷಿಣ ಆಫ್ರಿಕಾದ ಒಂಟಿ ಕಾಲಿನ ಮಹಿಳೆ ನಟಾಲಿ ಡು ಟಾಯ್ಟ್ ಪಾಲ್ಗೊಂಡಿದ್ದರೆ, ಈ ಬಾರಿ ದಕ್ಷಿಣ ಆಫ್ರಿಕಾದವರೇ ಆದ ಆಸ್ಕರ್ ಪಿಸ್ಟೋರಿಯಸ್ 4×400 ಮೀಟರ್ ರಿಲೆ ತಂಡದಲ್ಲಿ ಸ್ಪರ್ಧಿಸಿದ್ದರು.
ಆತ ಎಂತಹ ಸಾಧಕನೆಂಬುದನ್ನು ತಿಳಿದುಕೊಳ್ಳುವ ಮೊದಲು ಒಂದು ನೀತಿಕಥೆ ಕೇಳಿ…
ಒಬ್ಬ ಅಂಧ ಹುಡುಗನಿರುತ್ತಾನೆ. ಆತನಿಗೆ ಎರಡೂ ಕಣ್ಣು ಕಾಣುವುದಿಲ್ಲ. ಭಿಕ್ಷೆ ಬೇಡುವುದೇ ನಿತ್ಯ ಕಾಯಕ. ದಿನಬೆಳಗಾದ ಕೂಡಲೇ ರಸ್ತೆ ಬದಿಗೆ ಬಂದು ಕುಳಿತುಕೊಳ್ಳುವ ಆತ ಆಗಸದತ್ತ ಬಾಯಿ ತೆರೆದುಕೊಂಡಿರುವ ಹ್ಯಾಟನ್ನು ಮುಂದೆ ಇಟ್ಟುಕೊಳ್ಳುತ್ತಾನೆ. ಅದರ ಪಕ್ಕದಲ್ಲಿ “I am blind, please help” ಎಂಬ ಪುಟ್ಟ ಬೋರ್ಡನ್ನೂ ನಿಲ್ಲಿಸುತ್ತಾನೆ. ಅದನ್ನು ನೋಡುವ ದಾರಿಹೋಕರಲ್ಲಿ ಕೆಲವರು ಹ್ಯಾಟ್್ಗೆ ಚಿಲ್ಲರೆ ಹಾಕಿ ಮುಂದೆ ಹೋಗುತ್ತಾರೆ. ಆದರೆ ಯಾರೂ ಅಷ್ಟಾಗಿ ಸಹಾಯ ಮಾಡುವ ಮನಸ್ಸು ತೋರುತ್ತಿರಲಿಲ್ಲ. ಹೀಗಿರುವಾಗ, ಒಂದು ದಿನ ಅದೇ ಮಾರ್ಗವಾಗಿ ಸಾಗುತ್ತಿದ್ದ ಅಪರಿಚಿತ ಅಧಿಕಾರಿಯೊಬ್ಬ ಭಿಕ್ಷೆ ಬೇಡುತ್ತಿದ್ದ ಈ ಹುಡುಗನನ್ನು ಗಮನಿಸುತ್ತಾನೆ. ಬಳಿಗೆ ಬಂದ ಆತ ತನ್ನ ಪಾಕೆಟ್್ನಿಂದ ಚಿಲ್ಲರೆ ತೆಗೆದು ಹ್ಯಾಟ್್ಗೆ ಹಾಕುತ್ತಾನೆ. ಆದರೆ ಮುಂದೆ ಹೋಗುವ ಮೊದಲು ಅಂಧ ಹುಡುಗ ತನ್ನ ಮುಂದೆ ಇಟ್ಟುಕೊಂಡಿದ್ದ ಬೋರ್ಡನ್ನು ಕೈಗೆತ್ತಿಕೊಂಡು ಅದರ ಹಿಂಭಾಗದ ಮೇಲೆ ಏನನ್ನೋ ಬರೆದು ಬೋರ್ಡನ್ನು ತಿರುಗಿಸಿಟ್ಟು ಮುಂದೆ ಸಾಗುತ್ತಾನೆ. ಆಶ್ಟರ್ಯವೆಂದರೆ ಇದ್ದಕ್ಕಿದ್ದಂತೆ ಹ್ಯಾಟ್್ನೊಳಕ್ಕೆ ನಾಣ್ಯಗಳು ಬೀಳಲಾರಂಭಿಸುತ್ತವೆ. ಸದಾ ಅದೇ ದಾರಿಯಲ್ಲಿ ಸಾಗುತ್ತಿದ್ದರೂ ಅದುವರೆಗೆ ಎಂದೂ ಸಹಾಯ ಮಾಡದ ದಾರಿಹೋಕರೂ ಚಿಲ್ಲರೆ ಹಾಕಲಾರಂಭಿಸುತ್ತಾರೆ! ಒಂದೆಡೆ ಹುಡುಗನ ಸಂತಸಕ್ಕೆ ಪಾರವೇ ಇಲ್ಲ. ಇನ್ನೊಂದೆಡೆ ಕುತೂಹಲ. ಒಮ್ಮಿಂದೊಮ್ಮೆಲೇ ಇಂತಹ ಬದಲಾವಣೆ ಹೇಗೆ ಎಂಬ ಪ್ರಶ್ನೆ. ಹೀಗೆ ಚಿಂತಿಸುತ್ತಿರುವಾಗಲೇ ಸಮಯ ಉರುಳಿ ಸಂಜೆಯಾಗುತ್ತದೆ. ಇನ್ನೇನು ಮನೆಯತ್ತ ತೆರಳಬೇಕು, ಅಷ್ಟರಲ್ಲಿ ಹೆಜ್ಜೆ ಸಪ್ಪಳ ಕೇಳಲಾರಂಭಿಸುತ್ತದೆ. ಅದು ಬೆಳಗ್ಗೆ ಬೋರ್ಡ್ ಹಿಂಬದಿ ಮೇಲೆ ಏನನ್ನೋ ಬರೆದು ತಿರುಗಿಸಿಟ್ಟ ವ್ಯಕ್ತಿಯದ್ದೇ ಎಂಬುದು ಹುಡುಗನಿಗೆ ಗೊತ್ತಾಗುತ್ತದೆ. “ಬೆಳಗ್ಗೆ ಬೋರ್ಡ್ ಬದಲಿಸಿದ್ದು ನೀವೇ ಅಲ್ಲವೆ?” ಎಂದು ಪ್ರಶ್ನಿಸುತ್ತಾನೆ.”ಹೌದು’ ಎಂಬ ಉತ್ತರ ಬರುತ್ತದೆ. ಹಾಗಂತ ಆ ಹುಡುಗ ಸುಮ್ಮನಾಗುವುದಿಲ್ಲ. “ಅದರ ಮೇಲೆ ನೀವು ಬರೆದಿದ್ದಾದರೂ ಏನು?” ಎಂದು ಮರು ಪ್ರಶ್ನೆ ಹಾಕುತ್ತಾನೆ.”I only wrote the truth‘ ಎಂದು ಉತ್ತರಿಸುತ್ತಾನೆ ಆ ಅಧಿಕಾರಿ. “ನಾನು ಕುರುಡ, ದಯವಿಟ್ಟು ಸಹಾಯ ಮಾಡಿ ಅಂತ ನಾನು ಬರೆದಿದ್ದೂ ಸತ್ಯವನ್ನೇ ಅಲ್ಲವೆ?” ಎಂದು ಹುಡುಗ ಮತ್ತೆ ಪ್ರಶ್ನಿಸುತ್ತಾನೆ. ಅದಕ್ಕೆ, “ನೀನು ಬರೆದಿದ್ದೂ ಸತ್ಯವೇ. ಆದರೆ ಆ ಸತ್ಯವನ್ನು ನಾನು ಸ್ವಲ್ಪ ಭಿನ್ನವಾಗಿ ಬರೆದೆನಷ್ಟೆ” ಎನ್ನುತ್ತಾನೆ ಅಧಿಕಾರಿ. ಆತ “Today is a beautiful day. But I cannot see it’ ಎಂದು ಬರೆದು ಹೋಗಿರುತ್ತಾನೆ.
ಅದನ್ನು ನೋಡಿದ ದಾರಿಹೋಕರು “ನಮಗೆ ದೇವರು ಈ ಸುಂದರ ಪ್ರಪಂಚವನ್ನು ನೋಡುವ ಭಾಗ್ಯವನ್ನಾದರೂ ಕೊಟ್ಟಿದ್ದಾನೆ. ಆ ಹುಡುಗನಿಗೆ ಆ ಭಾಗ್ಯವೂ ಇಲ್ಲ” ಎಂದು ಅನುಕಂಪದಿಂದ ಚಿಲ್ಲರೆ ಹಾಕಲಾರಂಭಿಸಿರುತ್ತಾರೆ.
ಆದರೆ….
ಎರಡೂ ಕಾಲಿಲ್ಲದ ಆಸ್ಕರ್ ಪಿಸ್ಟೋರಿಯಸ್್ಗೆ ಮಾತ್ರ ನಿಮ್ಮ ಅನುಕಂಪವಾಗಲಿ, ಮರುಕವಾಗಲಿ ಬೇಕಾಗಿಲ್ಲ. ಸಹಾಯಕ್ಕಾಗಿಯೂ ಮೊರೆಯಿಟ್ಟವನಲ್ಲ. ಅಂಗವಿಕಲರ ಪ್ಯಾರಾಲಿಂಪಿಕ್ಸ್ ಬೇಡ, ಕೈ-ಕಾಲು, ಕಣ್ಣು, ಕಿವಿ ಹೊಂದಿರುವ ಶಕ್ತ ಅಥ್ಲೀಟ್್ಗಳ ಜತೆ ಸೆಣಸಲು ಸಮಾನ ಅವಕಾಶ ಕೊಡಿ ಎಂದು ಒತ್ತಾಯಿಸಿ 2008ರ ಬೀಜಿಂಗ್ ಒಲಿಂಪಿಕ್ಸ್ ವೇಳೆಯೇ ಅಂತಾರಾಷ್ಟ್ರೀಯ ಕ್ರೀಡಾ ಸಮಿತಿಗೆ ಮನವಿ ಮಾಡಿಕೊಂಡಿದ್ದ. ಈ ಆಸ್ಕರ್ ಪಿಸ್ಟೋರಿಯಸ್್ಗೆ ಅಂಗವಿಕಲನೆಂದು ಹೇಳಿಸಿಕೊಳ್ಳುವುದೇ ಸುತಾರಾಂ ಇಷ್ಟವಿಲ್ಲ. ಯಾರಾದರೂ ಆತನನ್ನು”The Fastest Thing On No Legs‘ ಅಂತ ಇತರರಿಗೆ ಪರಿಚಯ ಮಾಡಿಕೊಟ್ಟರೆ ಕೂಡಲೇ ಆತನ ಮುಖ ಅರಳುತ್ತದೆ. “I am not disabled, I just dont have legs” ಎನ್ನುತ್ತಾನೆ! ಅಂತಹ ಆತ್ಮವಿಶ್ವಾಸ, ಗಟ್ಟಿತನ ಆತನಲ್ಲಿ ಕಾಣುತ್ತದೆ.
ಆಸ್ಕರ್ ಪಿಸ್ಟೋರಿಯಸ್್ನ ಜೀವನದಲ್ಲಿ ದೇವರೇ ವಿಲನ್!
1986, ನವೆಂಬರ್ 22ರಂದು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಪಿಸ್ಟೋರಿಯಸ್ ನಿಜಕ್ಕೂ ನತದೃಷ್ಟ. ಹುಟ್ಟಿದಾಗಲೇ ಆತನ ಎರಡು ಕಾಲುಗಳಲ್ಲೂ ಮಂಡಿ ಕೆಳಗಿನ ಒಂದು ಮೂಳೆಯೇ (Fibula ಅಥವಾ Calf bone) ಇರಲಿಲ್ಲ! ಚಿಂತಿತರಾದ ಅಪ್ಪ-ಅಮ್ಮ ಹತ್ತಾರು ವೈದ್ಯರನ್ನು ಭೇಟಿಯಾದರು. ಸಲಹೆ ಕೇಳಿದರು. ಯಾವ ಪ್ರಯತ್ನಗಳೂ ಫಲ ಕಾಣಲಿಲ್ಲ. ವಿಧಿಯಿಲ್ಲದೆ ಮಗನ ಕಾಲುಗಳನ್ನು ಮಂಡಿ ಹಾಗೂ ಹಿಮ್ಮಡಿ (Ankle) ಮಧ್ಯೆ ಕತ್ತರಿಸಬೇಕಾಗಿ ಬಂತು. ಆಗ ಪಿಸ್ಟೋರಿಯಸ್್ಗೆ ಕೇವಲ 11 ತಿಂಗಳು. ಆತನ ಗೋಳು ಅಷ್ಟಕ್ಕೇ ಮುಗಿಯುವುದಿಲ್ಲ. ಹದಿನೈದು ವರ್ಷ ತುಂಬುವಷ್ಟರಲ್ಲಿ ಪ್ರೀತಿಯ ಅಮ್ಮನನ್ನೂ ಕಳೆದುಕೊಳ್ಳಬೇಕಾಗಿ ಬಂತು. ಅನಾರೋಗ್ಯಕ್ಕೊಳಗಾಗಿದ್ದ ಅಮ್ಮನಿಗೆ ಔಷಧವೇ ವಿಷವಾಯಿತು. ಆದರೂ ಆತ ಧೃತಿಗೆಡಲಿಲ್ಲ. ಇತ್ತ ರಗ್ಬಿ ಆತನ ನೆಚ್ಚಿನ ಆಟ. ಒಮ್ಮೆ ಕೃತಕ ಕಾಲುಗಳಲ್ಲಿ ರಗ್ಬಿ ಆಡುತ್ತಿರುವಾಗ ಕೆಳಗೆ ಬಿದ್ದ ಪಿಸ್ಟೋರಿಯಸ್ ಗಂಭೀರವಾದ ಮಂಡಿನೋವಿಗೆ ಒಳಗಾದ. ಆಲ್ಲಿಗೆ ರಗ್ಬಿ ಮೋಹ ಬಿಡಬೇಕಾಗಿ ಬಂತು. ಆದರೇನಂತೆ ಕಾಲಿಗೆ ಒ ಆಕಾರದ ಕಾರ್ಬನ್ ಫೈಬರ್ ಬ್ಲೇಡ್್ಗಳನ್ನು ಹಾಕಿಸಿಕೊಂಡ ಆತ ರನ್ನಿಂಗ್್ನತ್ತ ಗಮನಹರಿಸಿದ. ಆತ ಎಂತಹ ಪರಿಶ್ರಮಿ ಎಂದರೆ 2004ರಲ್ಲಿ ನಡೆದ ಅಥೆನ್ಸ್ ಪ್ಯಾರಾಲಿಂಪಿಕ್ಸ್್ನಲ್ಲಿ (ವಿಕಲಚೇತನರಿಗಾಗಿ ನಡೆಯುವ ಒಲಿಂಪಿಕ್ಸ್) ಭಾಗವಹಿಸಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಯ್ಕೆಯಾದ. ಅಷ್ಟೇ ಅಲ್ಲ, 17 ವರ್ಷದ ಪಿಸ್ಟೋರಿಯಸ್ 200 ಮೀಟರ್ ಓಟದಲ್ಲಿ ಚಿನ್ನ, 100 ಮೀಟರ್್ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದ. ಮರು ವರ್ಷವೇ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೈ-ಕಾಲುಗಳಿರುವ ಶಕ್ತ ಅಥ್ಲೀಟ್್ಗಳ (Able-bodied) ಜತೆ ಸೆಣಸಿದ ಆತ 6ನೆಯವನಾಗಿ ಗುರಿಮುಟ್ಟಿದ. ಅದು ಆತನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. 2007ರ ನ್ಯಾಷನಲ್ ಚಾಂಪಿಯನ್್ಶಿಪ್್ನ 400 ಮೀಟರ್ ಓಟದಲ್ಲಿ ಎರಡನೆಯವನಾಗಿ ಗುರಿಮುಟ್ಟಿದ ಪಿಸ್ಟೋರಿಯಸ್್ಗೆ ಆತ್ಮವಿಶ್ವಾಸದ ಮುಂದೆ ಯಾವ ತಡೆಯೂ ನಿಲ್ಲುವುದಿಲ್ಲ ಎಂಬುದು ಅರಿವಾಯಿತು. ಆನಂತರ ರೋಮ್ ಮತ್ತು ಶೆಫೀಲ್ಡ್್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಕೂಟದಲ್ಲಿಯೂ ಪಾಲ್ಗೊಂಡ ಆತ, 2008ರಲ್ಲಿ ನಡೆಯಲಿದ್ದ ಬೀಜಿಂಗ್ ಒಲಿಂಪಿಕ್ಸ್್ನಲ್ಲಿ Able-bodied ಅಥ್ಲೀಟ್್ಗಳ ಜತೆ ಸೆಣಸುವ ಆಸೆ ಇಟ್ಟುಕೊಂಡಿದ್ದ.
ಆದರೆ ಇಂಟರ್್ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ಸ್ ಫೆಡರೇಷನ್ (IAAF) ಆತನ ಆಸೆಗೆ ತಣ್ಣೀರು ಎರಚಿತು. ಇಂತಹ ನಿರ್ಧಾರಕ್ಕೆ ಸವಾಲೆಸೆದು ಗೆದ್ದರೂ ದಕ್ಷಿಣ ಆಫ್ರಿಕಾವೇ ತನ್ನ ಅಥ್ಲೀಟ್್ಗಳ ಪಟ್ಟಿಯಲ್ಲಿ ಪಿಸ್ಟೋರಿಯಸ್್ಗೆ ಸ್ಥಾನ ನೀಡಲಿಲ್ಲ. ಹಾಗಂತ ಪಿಸ್ಟೋರಿಯಸ್ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಮುಂದಿನ ನಾಲ್ಕು ವರ್ಷದವರೆಗೂ ಆತ ವಹಿಸಿದ ತಾಳ್ಮೆ ಕೊನೆಗೂ ಫಲಕೊಟ್ಟಿದೆ. ಪ್ರಸ್ತುತ ಲಂಡನ್್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್್ನಲ್ಲಿ ಆಸ್ಕರ್ ಪಿಸ್ಟೋರಿಯಸ್ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.
ಫಲಿತಾಂಶ ಏನೇ ಇರಲಿ, ಆದರೆ ಅಂಗವೈಕಲ್ಯವನ್ನು ಮೀರಿ ಶಕ್ತ ಕ್ರೀಡಾಪಟುಗಳ ಜತೆ ಸೆಣಸುವ ಇವರ ಆತ್ಮಸ್ಥೈರ್ಯಕ್ಕೊಂದು ಸಲಾಮ್!
ಇದುವರೆಗೂ ನೆರೋಲಿ ಫೇರ್್ಹಾಲ್, ಪೌಲಾ ಫ್ಯಾಂಟಟೋ, ಮರ್ಲಾ ರನ್ಯಾನ್, ಆಸ್ಕರ್ ಪಿಸ್ಟೋರಿಯಸ್, ನತಾಲಿಯಾ ಪಾರ್ಟಿಕಾ, ನತಾಲಿ ಡು ಟಾಯ್ಟ್ ಹೀಗೆ ಆರು ಜನ ಅಂಗವಿಕಲರು ಒಲಿಂಪಿಕ್ಸ್್ನಲ್ಲಿ ಪಾಲ್ಗೊಂಡಿದ್ದಾರೆ. ಇವರಾರೂ ತಮ್ಮ ಪರಿಸ್ಥಿತಿಯ ಬಗ್ಗೆ ಪರಿತಪಿಸುತ್ತ ಕುಳಿತವರಲ್ಲ, ಅಸಹಾಯಕತೆಯ ಬಗ್ಗೆ ಕೊರಗಿದವರಲ್ಲ, ನನಗೇಕೆ ಇಂತಹ ಸ್ಥಿತಿಯನ್ನು ಕೊಟ್ಟೆ ಅಂತ ದೇವರನ್ನು ದೂರುವವರೂ ಅಲ್ಲ. “ನನ್ನ ಅಪ್ಪ ಅಮ್ಮನಿಗಿಂತ ಒಳ್ಳೆಯ ಪೋಷಕರು ಬೇಕಿತ್ತು ಅಂತ ಖಂಡಿತ ನಾನಂದುಕೊಳ್ಳುವುದಿಲ್ಲ. ನನ್ನ ಹಿರಿಯ ಸಹೋದರ ಕಾರ್ಲ್ ಹಾಗೂ ಸಹೋದರಿ ಏಮಿಯನ್ನು ಹೇಗೆ ಬೆಳೆಸಿದರೋ ಅಷ್ಟೇ ಪ್ರೀತಿ, ಆದರಗಳಿಂದ ನನ್ನನ್ನೂ ಸಲಹಿದ್ದಾರೆ. ಒಂದುವೇಳೆ ನನಗೂ ಅಂಗವಿಕಲ ಮಗು ಜನಿಸಿದರೆ ನನ್ನ ಅಪ್ಪ ಅಮ್ಮನನ್ನೇ ಮಾದರಿಯಾಗಿಟ್ಟುಕೊಳ್ಳುತ್ತೇನೆ. ನನಗೆ ಅವರು ಕೊಟ್ಟಷ್ಟೇ ಪ್ರೀತಿಯನ್ನು ನನ್ನ ಮಗುವಿಗೂ ಧಾರೆಯೆರೆಯುತ್ತೇನೆ” ಎನ್ನುತ್ತಾನೆ ಆಸ್ಕರ್ ಪಿಸ್ಟೋರಿಯಸ್. ನಮ್ಮ ನಡುವೆಯೂ ಎಷ್ಟೋ ಅಂಗವಿಕಲರಿದ್ದಾರೆ. ಅವರಲ್ಲಿನ ಅಸಹಾಯಕತೆ ಕೆಲವೊಮ್ಮೆ ಅವರ ವರ್ತನೆಯಲ್ಲಿ, ಹತಾಶೆ, ಕೋಪದ ರೂಪದಲ್ಲಿ ವ್ಯಕ್ತವಾಗುತ್ತದೆ. ಅದನ್ನು ಅರ್ಥಮಾಡಿಕೊಂಡು ಹೆಚ್ಚು ಪ್ರೀತಿಯನ್ನು ಕೊಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಬದಲು “ಕುಂಟನಿಗೆ ಎಂಟು ಚೇಷ್ಟೆ” ಎಂದು ಹೀಗಳೆಯುವ ವಿಕ್ಷಿಪ್ತ ಮನಸ್ಸುಗಳೇ ನಮ್ಮ ನಡುವೆ ಇವೆ. ಅಂತಃಕರಣವಿಲ್ಲದವರೇ ನಿಜವಾದ ಅಂಗವಿಕಲರು ಎಂಬುದನ್ನು ನಾವೆಲ್ಲ ಅರ್ಥಮಾಡಿಕೊಂಡು ಅಂಗವಿಕಲ ಮಕ್ಕಳಿಗೂ ಸಮಾನ ಪ್ರೀತಿ, ಪ್ರೋತ್ಸಾಹ ನೀಡಿದರೆ ನಮ್ಮಲ್ಲೂ ಅಸ್ಕರ್ ಪಿಸ್ಟೋರಿಯಸ್, ಪಾರ್ಟಿಕಾರಂಥ ಸಾಧಕರು ಹೊರಹೊಮ್ಮಬಹುದು, ಇತರರಿಗೆ ಪ್ರೇರಕ ಶಕ್ತಿಗಳಾಗಬಹುದು.
pratap plz go through the link below and its not related to above article
sorry i dont know where i have to post this link so i have posted here
i want you to see this movie
http://youtu.be/4uT4tvTERSs
It’s true Pratap, the article is eye opening for all. Hats off to Oskar Pistorius, his will power is real motivation to every one. Once again thanks for article.
its a very heart touching article.
article odi kanniru banthu……….manasu gatti aithu……..partica adida match nodide…….it was great match
I will say in one word — Great Inspirational !!!!
Namaskara Prathap Sir,
Naanu, nimma abhimani aantha halkolaaka khushi padteeni.
Naanad ondhu vinaanthi. Nimma lakhanagallanu diavittu angla bhashe yaalu kottare thumba sahayavagutade.
Yaakandre, naana galayaru hagu sambhandikaru videsha gallali idaare, mathu averge yaala, kannada baralla. Nimma, lakhanagallanu oodidera, avarigu kannadada maale abhimana bharisua ondhu prayathna.
Naanage goothu, nima hattira samaya irruvudilla yaandhu, adharu oondhu vinaanthi yaaste.
Dhanayadhagalu.
Great motivational article Pratap.. Keep it up.
superb article sir….
ಸರೠಅದೃಷà³à²Ÿ, ಮನಸà³à²¸à³, ಸಾದಿಸà³à²µ ಶಕà³à²¤à²¿ ಇದà³à²¦à²°à³† à²à²¨à³†à²²à³à²²à²¾ ಸಾದಿಸಬಹà³à²¦à³
sir i want to meet you
Hi Sir,
The Article that u have Publised above is really nice and having lot of motvational factors,
inspiring………………
http://youtu.be/4uT4tvTERSs – its a nice short movie.