Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಂಡಿಯನ್ ಮುಜಾಹಿದ್ದೀನ್ ಮಾತ್ರವಲ್ಲ, ಮಾಧ್ಯಮಗಳ ಮೊದಲ ಟಾರ್ಗೆಟ್ ಕೂಡ ಮೋದಿಯೇ?!

ಇಂಡಿಯನ್ ಮುಜಾಹಿದ್ದೀನ್ ಮಾತ್ರವಲ್ಲ, ಮಾಧ್ಯಮಗಳ ಮೊದಲ ಟಾರ್ಗೆಟ್ ಕೂಡ ಮೋದಿಯೇ?!

1. ನರೇಂದ್ರ ಮೋದಿ

2. ನರೇಂದ್ರ ಮೋದಿ

3. ನರೇಂದ್ರ ಮೋದಿ

4. ನರೇಂದ್ರ ಮೋದಿ

5. ನರೇಂದ್ರ ಮೋದಿ

6. ನರೇಂದ್ರ ಮೋದಿ

7. ನರೇಂದ್ರ ಮೋದಿ

8. ನರೇಂದ್ರ ಮೋದಿ

9. ನರೇಂದ್ರ ಮೋದಿ

ಹಾಗೂ….

10. ನರೇಂದ್ರ ಮೋದಿ

ಕಳೆದ ಆಗಸ್ಟ್‌ನಲ್ಲಿ ಬಂಧಿತನಾದ “ಇಂಡಿಯನ್ ಮುಜಾಹಿದ್ದೀನ್‌” ಭಯೋತ್ಪಾದಕ ಸಂಘಟನೆಯ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ್‌ನನ್ನು ತನಿಖಾಧಿಕಾರಿಗಳು ವಿಚಾರಣೆಗೆ ಗುರಿಪಡಿಸಿ “ನಿಮ್ಮ 10 ಅತಿ ಮುಖ್ಯ ಗುರಿಗಳು ಯಾರ್ಯಾರು” ಎಂದು ಪ್ರಶ್ನಿಸಿದಾಗ “ನಮ್ಮ ನಂಬರ್-1 ಟಾರ್ಗೆಟ್ ನರೇಂದ್ರ ಮೋದಿ! ನಂಬರ್- 2, 3, 4, 5, 6, 7, 8, 9 ಹಾಗೂ ನಂಬರ್ 10 ಕೂಡಾ ಅವರೇ. ಒಂದು ವೇಳೆ, ನಾವು ನರೇಂದ್ರ ಮೋದಿಯವರನ್ನು ಮುಗಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬಗ್ಗೆ ಸಹಾನುಭೂತಿ ಹೊಂದಿದವರಿಂದ ಹರಿದು ಬರುವ ಹಣ ಸಹಾಯ ಕೂಡ ಗಣನೀಯವಾಗಿ ಹೆಚ್ಚುತ್ತದೆ” ಎಂದುಬಿಟ್ಟ!! ಇದೊಂದೇ ವಿಷಯ ಸಾಕು, ನರೇಂದ್ರ ಮೋದಿಯವರು ಎಂಥಾ ಅಪಾಯವನ್ನು ಎದುರಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಈ ಮಧ್ಯೆ, ಮೋದಿಯವರನ್ನು ಮುಗಿಸಲು ಪಾಕಿಸ್ತಾನದ ಐಎಸ್‌ಐ, ಭೂಗತ ದೊರೆ ದಾವೂದ್ ಇಬ್ರಾಹಿಂನ ಸಹಾಯ ಯಾಚಿಸುತ್ತಿದೆ ಎಂಬ ವರದಿ ಬಂದಿದೆ. ಇವತ್ತು ದೇಶದ ಪ್ರಧಾನಿಗಿಂತ ಅತಿ ಹೆಚ್ಚು ಅಪಾಯದಲ್ಲಿರುವುದು ನರೇಂದ್ರ ಮೋದಿ ಎಂಬುದನ್ನು ಅವರ ಕಟ್ಟಾ ವಿರೋಧಿಗಳೂ ಒಪ್ಪುತ್ತಾರೆ.

ಆದರೆ…

ಕಳೆದ 11 ವರ್ಷಗಳಿಂದ ಮಾಧ್ಯಮಗಳು ನಡೆದುಕೊಂಡು ಬರುತ್ತಿರುವ ರೀತಿಯನ್ನು ನೋಡಿದಾಗ, ಮೋದಿಯವರಲ್ಲಿ ಹುಳುಕು ಹುಡುಕಲು ಯಾವ ಮಟ್ಟಕ್ಕೂ ಇಳಿಯುವ ಧೋರಣೆಯನ್ನು ಕಂಡಾಗ ಮಾಧ್ಯಮಗಳ “ನಂಬರ್-1 ಟಾರ್ಗೆಟ್‌” ಕೂಡಾ ನರೇಂದ್ರ ಮೋದಿಯವರೇ ಎಂಬ ಅನುಮಾನವುಂಟಾಗುವುದಿಲ್ಲವೆ?!

ಉದಾಹರಣೆ ಬೇಕಾ?

2013, ಅಕ್ಟೋಬರ್ 27. ಅಂದು ಬಿಹಾರದ ರಾಜಧಾನಿ ಪಟನಾದಲ್ಲಿ ಮೊದಲ ಬಾಂಬು ಸಿಡಿದಿದ್ದು ಬೆಳಗ್ಗೆ 10.30ಕ್ಕೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಐತಿಹಾಸಿಕ ಗಾಂಧಿ ಮೈದಾನಕ್ಕೆ 12.30ಕ್ಕೆ ಆಗಮಿಸಲಿದ್ದರು. ಈ ನಡುವೆ ಮತ್ತೆ ನಾಲ್ಕು ಬಾಂಬುಗಳು ಸಿಡಿದವು. ಆತಂಕಿತರಾದ ಬಿಹಾರ ಬಿಜೆಪಿ ನಾಯಕ ಸುಶೀಲ್‌ಕುಮಾರ್ ಮೋದಿ, ರಾಜ್ಯ ಪೋಲಿಸ್ ಮಹಾನಿರ್ದೇಶಕ ಅಭಯಾನಂದ್‌ಗೆ ಕರೆ ಮಾಡಿದರೆ ಆ ಮಹಾಶಯರಿಗೆ ಬಾಂಬ್ ಸಿಡಿದಿದೆ ಎಂಬ ಸಂಗತಿಯೇ ಗೊತ್ತಿರಲಿಲ್ಲ! ರೈಲು ನಿಲ್ದಾಣದಲ್ಲಿ ಪಟಾಕಿ ಹೊಡೆದಿದ್ದಾರೆ ಎಂದು ಕೇಳಿದೆ ಎಂದರು!! ಆದರೆ, ಅಷ್ಟರಲ್ಲಾಗಲೇ ಬಾಂಬ್ ಸ್ಫೋಟದ ಸುದ್ದಿ ಗೊತ್ತಾಗಿ ವಿಮಾನ ನಿಲ್ದಾಣಕ್ಕೆ ಧಾವಿಸಿದ ಗುಜರಾತ್ ಪೊಲೀಸರು, ರ್ಯಾಲಿಯನ್ನು ಸ್ಥಗಿತಗೊಳಿಸುವಂತೆ ನರೇಂದ್ರ ಮೋದಿಯವರಲ್ಲಿ  ಮನವಿ ಮಾಡಿಕೊಂಡರು. ಆದರೆ ಮೋದಿ ಮನಸ್ಸು ಬದಲಿಸಲಿಲ್ಲ, ಬಾಂಬುಗಳಿಗೆ ಹೆದರಲಿಲ್ಲ. ಸರಣಿ ಸ್ಫೋಟಗಳ ನಡುವೆಯೂ ವೇದಿಕೆಗೆ ಆಗಮಿಸಿದ ಅವರ ಮುಖದಲ್ಲಿ ಆತಂಕದ ಸಣ್ಣ ಗೆರೆಯೂ ಇರಲಿಲ್ಲ. ಸರಿ ಸುಮಾರು ಒಂದು ಗಂಟೆ ಕಾಲ ನಿರರ್ಗಳವಾಗಿ ಮಾತನಾಡಿದರು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರರನ್ನು ಝಾಡಿಸಿದರು. ಜನರನ್ನು ಹುಚ್ಚೆಬ್ಬಿಸಿದರು. ಇತಿಹಾಸವನ್ನು ಉಲ್ಲೇಖಿಸಿದರು. ರಕ್ಷಣೆ ಕೊಡುವ ಮಾತನಾಡಿದರು. ಅವಸರ ಮಾಡದೆ ನಿಧಾನವಾಗಿ ಹಾಗೂ ಸುರಕ್ಷಿತವಾಗಿ ಮನೆ ತಲುಪಿ ಎಂದು ಜನರಿಗೆ ಮನವಿ ಮಾಡಿ ವೇದಿಕೆಯಿಂದ ಕೆಳಗಿಳಿದರು. ಇತ್ತ ಒಂದೆಡೆ ನಿತೀಶ್ ಕುಮಾರ್ ಸರ್ಕಾರ ನಿಷ್ಕ್ರಿಯವಾಗಿ ಕುಳಿತಿದ್ದರೆ, ಇನ್ನೊಂದೆಡೆ ಬಾಂಬ್ ಸ್ಫೋಟದ ಸುದ್ದಿ ಕೇಳಿದ ನಂತರವೂ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ ಸಿ.ಡಿ. ಬಿಡುಗಡೆಗೆ ಹೋಗಿದ್ದರು.

ಅಂದು ಸ್ಫೋಟಿಸಿದ ಹಾಗೂ ಸ್ಫೋಟಿಸದ ಒಟ್ಟು ಬಾಂಬುಗಳ ಸಂಖ್ಯೆ 18!!

ಇಷ್ಟಾಗಿಯೂ ಇಂಥದ್ದೊಂದು ಭಯಾನಕ ಪಿತೂರಿಯನ್ನು ಬೆನ್ನು ಹತ್ತುವ ಬದಲು ಮಾಧ್ಯಮಗಳು ದೃಷ್ಟಿ ಹಾಯಿಸಿದ್ದು ಮಾತ್ರ ಮೋದಿಯವರ ಭಾಷಣದಲ್ಲಿ ಹುಳುಕು ಹುಡುಕುವ ಕೆಲಸದ ಮೇಲೆ! ಒಂದು ವೇಳೆ, ರಾಹುಲ್ ಅಥವಾ ಸೋನಿಯಾ ಗಾಂಧಿಯವರನ್ನು ಕೊಲ್ಲಲು ಇಂಥದ್ದೊಂದು ಪ್ರಯತ್ನ, ಪಿತೂರಿ ನಡೆದಿದ್ದರೆ ಮಾಧ್ಯಮಗಳು ಯಾವ ರೀತಿ ವರ್ತಿಸುತ್ತಿದ್ದವು ಊಹೆ ಮಾಡಿಕೊಳ್ಳಿ?! ಆಕಾಶ ಕಳಚಿ ತಮ್ಮ ಮೇಲೇ ಬಿದ್ದಂತೆ, ತಮ್ಮ ಮನೆಗೇ ಸೂತಕ ಆವರಿಸಿಕೊಂಡಂತೆ ವರ್ತಿಸುತ್ತಿರಲಿಲ್ಲವೆ? ಕಳೆದ ಸೆಪ್ಟೆಂಬರ್ 2ರಂದು ಆಹಾರ ಭದ್ರತಾ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರಿಗೆ ಸಣ್ಣಮಟ್ಟದ ಆರೋಗ್ಯ ತಪ್ಪಿದಾಗ ಮಾಧ್ಯಮಗಳು ಹೇಗೆ ನಡೆದುಕೊಂಡಿದ್ದವು? ಸಂಸತ್ತಿನಲ್ಲಿ ಅಂಗೀಕಾರವಾದ ವಿಧೇಯಕವನ್ನು ಸೋನಿಯಾ ಗಾಂಧಿಯವರ ಪಾದಕ್ಕೆ ಸಮರ್ಪಿಸಿದ್ದಲ್ಲದೆ, ಆನಾರೋಗ್ಯದ ಹೊರತಾಗಿಯೂ ಸಂಸತ್ತಿನಲ್ಲಿ ಕುಳಿತಿದ್ದ ಆಕೆ ಮಹಾನ್ ಗಟ್ಟಿಗಿತ್ತಿ, ಬಡವರ ಬಂಧು ಎಂದು ವರ್ಣಿಸಿರಲಿಲ್ಲವೆ? ಆಕೆ ದಾಖಲಾಗಿದ್ದ ‘ಏಮ್ಸ್‌’ ಆಸ್ಪತ್ರೆಯ ಬಳಿ ರಾತ್ರಿಯಿಡೀ ಬೀಡುಬಿಟ್ಟು, ಜನರಿಗೆ ಕಣ್ಣೀರಿನ ಕಥೆಗಳನ್ನು ಹೇಳಿರಲಿಲ್ಲವೆ? ಅಷ್ಟೇಕೆ, ‘ನಾನೂ ಕೂಡಾ ನನ್ನ ಅಜ್ಜಿ, ಅಪ್ಪನಂತೆ ಕೊಲೆಯಾಗಬಹುದು’ ಎಂದು ರಾಹುಲ್ ಗಾಂಧಿಯವರು ಇತ್ತೀಚೆಗೆ ಸುಖಾಸುಮ್ಮನೆ ಹೇಳಿದಾಗಲೂ ಮಾಧ್ಯಮಗಳ ಕಣ್ಣಲ್ಲಿ ನೀರು ಜಿನುಗಿತ್ತು. ಆದರೆ ಪಟನಾ ಸರಣಿ ಸ್ಫೋಟದ ವಿಷಯದಲ್ಲಿ ಇದೇ ಮಾಧ್ಯಮಗಳು ಹೇಗೆ ನಡೆದುಕೊಂಡವು? ಬಿಹಾರದಲ್ಲಿ ನರೇಂದ್ರ ಮೋದಿ ಹಾಗೂ 6 ಲಕ್ಷ ಜನ ವಸ್ತುಶಃ ಲ್ಯಾಂಡ್‌ಮೈನ್ (ನೆಲಬಾಂಬ್) ಮೇಲೆ ನಿಂತಿದ್ದರು. ಅಂಥ ಸಂದರ್ಭದಲ್ಲೂ ಸಭೆಯನ್ನು ರದ್ದು ಮಾಡದೆ ಕಾಲ್ತುಳಿತಕ್ಕೆ ಸಿಕ್ಕಿ ಸಾವಿರಾರು ಜನ ಸಾಯಬಹುದಾಗಿದ್ದಂಥ ಬಹುದೊಡ್ಡ ಅನಾಹುತವನ್ನು ಮೋದಿ ತಪ್ಪಿಸಿದ್ದನ್ನು ಹೊಗಳಬೇಕೆಂದು ಮಾಧ್ಯಮಗಳಿಗೇಕೆ ಅನ್ನಿಸಲಿಲ್ಲ? ಸಾವನ್ನು ಎದುರಿಗಿಟ್ಟುಕೊಂಡು ಒಂದು ಗಂಟೆ ಕಾಲ ನಿರರ್ಗಳವಾಗಿ ಮಾತನಾಡಿದ ಮೋದಿಯವರಲ್ಲಿ ಯಾವ ಪೌರುಷವೂ ಕಾಣಲಿಲ್ಲವೆ?

ಉಹ್ಞೂಂ!

ಮಾಧ್ಯಮಗಳಿಗೆ ಮೋದಿಯವರಲ್ಲಿ ಒಳ್ಳೆಯದು ಕಾಣುವುದೂ ಇಲ್ಲ ಹಾಗೂ ಅವು ಒಳ್ಳೆಯದ್ದನ್ನು ನೋಡುವುದೂ ಇಲ್ಲ. ಇಂಥ ಮೋದಿ ವಿರೋಧಿ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ‘ಔಟ್‌ಲುಕ್‌’ ನಿಯತಕಾಲಿಕೆಯ ಹಾಲಿ ಕವರ್ ಸ್ಟೋರಿ “Modi, RSS & Contemporary World”! ಪಟನಾ ರ್ಯಾಲಿಯ ಬೆನ್ನಲ್ಲೂ ನಮ್ಮ ಮಾಧ್ಯಮಗಳು ಮೋದಿಯವರ ಎದೆಗಾರಿಕೆ, ಸಮಯಪ್ರಜ್ಞೆಯನ್ನು ಹೊಗಳುವ ಬದಲು, ಅವರಿಗಿರುವ ಅಪಾಯವನ್ನು ವಿವರಿಸುವ ಬದಲು ಅವರು ಮಾಡಿದ ಭಾಷಣದಲ್ಲಿ ಹುಳುಕು ಹುಡುಕುವ, ತಿರುಚುವ ಕೆಲಸವನ್ನು ಮಾತ್ರ ಚಾಚೂ ತಪ್ಪದೆ ಮಾಡಿದವು. “Why Modi Needs a history Guru?” ಎಂದು ಬೊಬ್ಬೆ ಹಾಕಿದವು! ಹಾಗಾದರೆ ಪ್ರತಿ ಭಾಷಣದಲ್ಲೂ ನರೇಂದ್ರ ಮೋದಿ ತಪ್ಪು ಹೇಳುತ್ತಾರಾ? ಅಥವಾ ಮಾಧ್ಯಮಗಳು ಅವರನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಿವೆಯೇ?

ಇಷ್ಟಕ್ಕೂ ಇತಿಹಾಸದ ಗುರು ಬೇಕಾಗಿರುವುದು ಇಂಗ್ಲಿಷ್ ಮಾಧ್ಯಮಗಳು ಹಾಗೂ ಸಬಾ ನಕ್ವಿಯಂಥ ಔಟ್‌ಲುಕ್ ವರದಿಗಾರ್ತಿಗೋ ಅಥವಾ ಮೋದಿಯವರಿಗೋ?

ಮೋದಿ ಹೇಳಿದ್ದು: “ನಾವು ನಮ್ಮ ಪುರಾತನ ಜ್ಞಾನದ ಬಗ್ಗೆ ಮಾತನಾಡುವಾಗ ನಳಂದಾ ಮತ್ತು ತಕ್ಷಶಿಲಾ (ಈಗ ತಕ್ಷಿಲಾ ಎನ್ನುತ್ತಾರೆ) ನೆನಪು ಮಾಡಿಕೊಳ್ಳುತ್ತೇವೆ”.

ಮಾಧ್ಯಮಗಳು ತಿರುಚಿದ್ದು: ಬಿಹಾರದ ಪಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, ತಕ್ಷಶಿಲಾ ಇರುವುದು ಬಿಹಾರದಲ್ಲಿ ಎಂದರು! ಆದರೆ ಇತಿಹಾಸ ಹೇಳುವುದೇನು? ತಕ್ಷಶಿಲಾ ಇರುವುದು ಈಗಿನ ಪಾಕಿಸ್ತಾನದಲ್ಲಿ. ರಾವಲ್ಪಿಂಡಿಯಿಂದ 32 ಕಿ.ಮೀ. ದೂರದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲೂ ಅದು ಅವಿಭಜಿತ ಪಂಜಾಬ್ ರಾಜ್ಯದಲ್ಲಿತ್ತೇ ಹೊರತು ಬಿಹಾರದಲ್ಲಲ್ಲ.

ನೀವೇ ಯೋಚಿಸಿ: ಮೋದಿ ಬಿಹಾರದಲ್ಲಿ ಮಾಡಿದ ಭಾಷಣವನ್ನು ನೀವು ಈಗಲೂ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. ತಮ್ಮ ಭಾಷಣದಲ್ಲಿ ಎಲ್ಲೂ ಅವರು ತಕ್ಷಶಿಲಾ ಬಿಹಾರದಲ್ಲಿದೆ ಎಂದು ಹೇಳಿಲ್ಲ. ಬಿಹಾರಿಗಳನ್ನು ಉದ್ದೇಶಿಸಿ ಮಾತನಾಡುವಾಗ ಜ್ಞಾನದ ನೆಲೆಯನ್ನು ಹೇಳುವುದಕ್ಕಾಗಿ ತಕ್ಷಶಿಲಾ ಹಾಗೂ ನಳಂದಗಳೆಂಬ ಇತಿಹಾಸ ಪ್ರಸಿದ್ಧ ವಿಶ್ವವಿದ್ಯಾಲಯಗಳ ಹೆಸರನ್ನು ಉಲ್ಲೇಖಿಸಿದರು. ಏಕೆಂದರೆ ನಳಂದ ಇರುವುದು ಬಿಹಾರದಲ್ಲಿ. ಹಾಗಂತ ತಕ್ಷಶಿಲಾ ಬಿಹಾರದಲ್ಲಿದೆ ಎನ್ನಲಿಲ್ಲ. ನೀವೇ ಹೇಳಿ, ಐತಿಹಾಸಿಕ ವಿಶ್ವವಿದ್ಯಾಲಯಗಳ ಹೆಸರು ಉಲ್ಲೇಖಿಸುವಾಗ ತಕ್ಷಶಿಲಾ ಹಾಗೂ ನಳಂದಗಳಲ್ಲಿ ಒಂದನ್ನು ಬಿಟ್ಟು ಮತ್ತೊಂದನ್ನು ಹೇಳಲು ಸಾಧ್ಯವೆ?

ಮೋದಿ ಹೇಳಿದ್ದು: ಅಲೆಗ್ಸಾಂಡರ್ ಅಂತಿಮವಾಗಿ ಗಂಗೆಯ ಪಾಲಾದ!

ಮಾಧ್ಯಮಗಳು ತಿರುಚಿದ್ದು: ಸಿಕಂದರ್(ಅಲೆಗ್ಸಾಂಡರ್)ನನ್ನು ಬಿಹಾರಿಗಳು ಗಂಗಾ ನದಿಯ ದಡದಲ್ಲಿ ಸೋಲಿಸಿದರು ಎಂದು ಮೋದಿ ಹೇಳಿದರು. ಆದರೆ ಈ ಸಿಕಂದರ್‌ನನ್ನು ಮೋದಿ ಅದ್ಹೇಗೆ ಬಿಹಾರದ ಗಂಗೆಯ ತಟಕ್ಕೆ ಕರೆತಂದರು?! ಭಾರತೀಯ ಉಪಖಂಡದಲ್ಲಿ ಅಲೆಗ್ಸಾಂಡರ್ ಮಾಡಿದ ಕೊನೆಯ ಯುದ್ಧ ಪೋರಸ್‌ನ ವಿರುದ್ಧ. ಆತನ ಪೌರವ ಸಾಮ್ರಾಜ್ಯ ಇದ್ದಿದ್ದು ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬ್‌ನಲ್ಲಿ!

ನೀವೇ ಯೋಚಿಸಿ: ಸ್ವತಃ ವಿಡಿಯೋ ವೀಕ್ಷಿಸಿ, ವಾಸ್ತವದಲ್ಲಿ ಮೋದಿ ಎಲ್ಲೂ ಅಲೆಗ್ಸಾಂಡರ್‌ನನ್ನು ಗಂಗಾ ನದಿ ದಡದಲ್ಲಿ ಬಿಹಾರಿಗಳು ಸೋಲಿಸಿದರು ಎನ್ನಲಿಲ್ಲ! ಅವರೊಂದು ಪದ್ಯವನ್ನು ಉಲ್ಲೇಖಿಸಿದರು. ಅದರ ಕೊನೆಯ ಸಾಲು ‘ಅಲೆಗ್ಸಾಂಡರ್ ಗಂಗೆಯ ಪಾಲಾದ’ ಎನ್ನುತ್ತದೆ. ಇದೊಂದು ಸಾಂಕೇತಿಕ ಪದ್ಯವಾಗಿದ್ದು, ಪೋರಸ್‌ನನ್ನು ಸೋಲಿಸಿ ಮುಂದುವರಿದ ಅಲೆಗ್ಸಾಂಡರ್‌ಗೆ ಗಂಗೆಯ ಇನ್ನೊಂದು ಬದಿಯಲ್ಲಿ ನಂದ ಸಾಮ್ರಾಜ್ಯದ ಬಲಿಷ್ಠ ಸೇನೆ ಕಾಯುತ್ತಿದೆ ಎಂಬ ಸುದ್ದಿ ತಿಳಿದಾಗ ಆತ ಅಲ್ಲಿಂದ ಹಿಮ್ಮೆಟ್ಟುತ್ತಾನೆ. ನಂದ ಸಾಮ್ರಾಜ್ಯದ ರಾಜಧಾನಿ ಪಾಟಲಿಪುತ್ರವಾಗಿರುತ್ತದೆ. ಆ ಪಾಟಲಿಪುತ್ರ ಮತ್ತಾವುದೂ ಅಲ್ಲ, ಈಗಿನ ಬಿಹಾರ ರಾಜಧಾನಿ ಪಟನಾ. ಪದ್ಯಗಳು ಕವಿಯ ಕಲ್ಪನೆಯ ಫಲವಾಗಿರುತ್ತವೆ. ಆದರೂ ಪದ್ಯದಲ್ಲಿ ಗಂಗೆಯ ಪಾಲಾದ ಎಂಬುದು ಸಾಂಕೇತಿಕವಾಗಿದ್ದರೂ ಅಲೆಗ್ಸಾಂಡರ್ ಗಂಗೆಯತ್ತ ಸುಳಿಯುವ ಧೈರ್ಯ ಮಾಡಲಿಲ್ಲ ಎಂಬುದು ಸತ್ಯ ಸಂಗತಿಯೇ ಅಲ್ಲವೆ?

ಮೋದಿ ಹೇಳಿದ್ದು: “ನಾವು ಗುಪ್ತ ವಂಶದ ಬಗ್ಗೆ ಯೋಚಿಸಿದಾಗ ಚಂದ್ರಗುಪ್ತ ನೆನಪಾಗುತ್ತಾನೆ”.

ಮಾಧ್ಯಮಗಳು ತಿರುಚಿದ್ದು: ಚಂದ್ರಗುಪ್ತ ‘ಮೌರ್ಯ’ ಗುಪ್ತ ವಂಶಕ್ಕೆ ಸೇರಿದವನು ಹಾಗೂ ಆತನ ಕಾಲ ಭಾರತದ ಇತಿಹಾಸದಲ್ಲಿ ಸುವರ್ಣ ಯುಗವಾಗಿತ್ತು ಎಂದರು ಮೋದಿ! ಆದರೆ ಚಂದ್ರಗುಪ್ತನು “ಮೌರ್ಯ” ವಂಶಕ್ಕೆ ಸೇರಿದ್ದ!! ಆತ ಮೌರ್ಯ ವಂಶವನ್ನು ಕ್ರಿ.ಪೂ. 322ರಲ್ಲಿ ಸ್ಥಾಪನೆ ಮಾಡಿದ. ಆತನ ಗುರು ಚಾಣಕ್ಯ.

ನೀವೇ ಯೋಚಿಸಿ: ನರೇಂದ್ರ ಮೋದಿಯವರು ಚಂದ್ರಗುಪ್ತ ಎಂದರೇ ಹೊರತು, ಚಂದ್ರಗುಪ್ತ ಮೌರ್ಯ ಎಂದು ಎಲ್ಲೂ ಹೇಳಲಿಲ್ಲ! ವಾಸ್ತವದಲ್ಲಿ ಮೋದಿಯವರು ಹೇಳಿದ್ದು ಗುಪ್ತ ವಂಶಕ್ಕೆ ಸೇರಿದ ಎರಡನೇ ಚಂದ್ರಗುಪ್ತನ ಬಗ್ಗೆ. ಕ್ರಿ.ಶ. 375ರಿಂದ 415ರವರೆಗೂ ಆಡಳಿತ ನಡೆಸಿದ ಈತನ ಕಾಲವನ್ನು ಖಂಡಿತ ಸುವರ್ಣ ಯುಗ ಎಂದು ಇತಿಹಾಸದ ಎಲ್ಲ ಪುಸ್ತಕಗಳೂ ಹೇಳುತ್ತವೆ. ಜತೆಗೆ ಎರಡನೇ ಚಂದ್ರಗುಪ್ತ ಶಕರನ್ನು ಸೋಲಿಸುವವರೆಗೂ ಪಾಟಲಿಪುತ್ರವೇ (ಪಟನಾ) ಆತನ ರಾಜಧಾನಿಯಾಗಿತ್ತು!

ನರೇಂದ್ರ ಮೋದಿ ಹಾಗೆ ಹೇಳಿದರೋ ಇಲ್ಲವೋ ಎಂಬುದನ್ನು ಪರೀಕ್ಷಿಸದೇ ‘ಟೆಲಿಗ್ರಾಫ್‌’ ಪತ್ರಿಕೆ ಇಂಥ ಸುಳ್ಳಿನ ಕಂತೆಗಳನ್ನು ಪ್ರಕಟ ಮಾಡಿತು. ಅದನ್ನೇ ಕಾದುಕುಳಿತಿದ್ದ ‘ಸಿಕ್‌’ಯುಲರ್‌ವಾದಿಗಳು ಚಪ್ಪರಿಸಿಕೊಂಡು ನರೇಂದ್ರ ಮೋದಿಯವರ ಬುದ್ಧಿಮತ್ತೆಯನ್ನೇ ಪ್ರಶ್ನಿಸಿದರು. ಹಾಗಂತ ಪತ್ರಿಕೆಯ ಮಾಧ್ಯಮಗಳ ಲಜ್ಜೆಗೇಡಿತನ ಅಷ್ಟಕ್ಕೇ ನಿಲ್ಲಲಿಲ್ಲ. “ಜೈಪುರದಲ್ಲಿ ಮಾತನಾಡುತ್ತಿದ್ದ ಮೋದಿ, ಸರ್ದಾರ್ ಪಟೇಲರ ಅಂತಿಮಯಾತ್ರೆಯಲ್ಲಿ ಪ್ರಧಾನಿ ನೆಹರು ಪಾಲ್ಗೊಳ್ಳಲಿಲ್ಲ” ಎಂದರು ಎಂಬ ವರದಿ ಗುಜರಾತಿ ದೈನಿಕ ‘ದಿವ್ಯ ಭಾಸ್ಕರ್‌’ನಲ್ಲಿ ಪ್ರಕಟವಾಯಿತು. ಅದನ್ನು ನೋಡಿದ್ದೇ ತಡ, ದಿಗ್ವಿಜಯ್ ಸಿಂಗ್‌ರೆಂಬ ಕಾಂಗ್ರೆಸ್ಸಿನ ಮಹಾನುಭಾವ ಮೊರಾರ್ಜಿ ದೇಸಾಯಿಯವರ ಆತ್ಮಚರಿತ್ರೆಯ ಹಾಳೆಯೊಂದನ್ನು ತೋರಿಸಿ, “ನೆಹರು ಪಾಲ್ಗೊಂಡಿದ್ದರು ಎಂಬುದಕ್ಕೆ ಇಲ್ಲಿದೆ ಸಾಕ್ಷ್ಯ” ಎಂದರು. ಮೋದಿಯೊಬ್ಬ ಸುಳ್ಳುಗಾರ ಎಂದರು. ಮರುದಿನ ಉಳಿದ ಇಂಗ್ಲಿಷ್ ಪತ್ರಿಕೆಗಳೂ ಮೋದಿ ಸುಳ್ಳು ಹೇಳಿದ್ದಾರೆ ಎಂದು ಬರೆದವು.

ಆದರೆ….

ಅಕ್ಟೋಬರ್ 29ರಂದು ಸ್ಪಷ್ಟನೆಯೊಂದನ್ನು ನೀಡಿದ ದಿವ್ಯ ಭಾಸ್ಕರ್, ಮೋದಿಯವರು ಹಾಗೆ ಹೇಳಿರಲಿಲ್ಲ ಎಂದು ತಪ್ಪೊಪ್ಪಿಕೊಂಡಿತು. ಅದನ್ನು ಮೋದಿ ಟ್ವೀಟ್ ಕೂಡಾ ಮಾಡಿದರು. ಇಷ್ಟಾಗಿಯೂ ‘ಔಟ್‌ಲುಕ್‌’ ಮ್ಯಾಗಜೀನ್‌ನ ನವೆಂಬರ್ 25ರ ಸಂಚಿಕೆಯಲ್ಲಿ “God knows where he got it from but Modi claims Nehru missed Patel’s funeral” ಎಂದು ಸಬಾ ನಕ್ವಿ ಬರೆದಿದ್ದಾರೆ! ಇದೇನು ಪತ್ರಿಕೋದ್ಯಮವಾ, ಪ್ರಚಾರಾಂದೋಲನವಾ? ಏಕಾಗಿ ಹೀಗೆ ಹೇಸಿಗೆ ಹುಟ್ಟುವಂತೆ ಬರೆಯುತ್ತಾರೆ? ಈ ಸಬಾ ನಕ್ವಿ ಮುಂದುವರೆದು ಬರೆಯುತ್ತಾರೆ, “ಹರ್ಯಾಣದ ವ್ಯಕ್ತಿಯೊಬ್ಬ ಕೇಳಿದ ಮಾಹಿತಿ ಹಕ್ಕು ಪ್ರಶ್ನೆಯನ್ನು ಆಧಾರವಾಗಿಟ್ಟುಕೊಂಡು, ವಿದೇಶದಲ್ಲಿ ಸೋನಿಯಾ ಗಾಂಧಿಯವರ ಕ್ಯಾನ್ಸರ್ ಚಿಕಿತ್ಸೆ, ಪ್ರಯಾಣ ಹಾಗೂ ಇನ್ನಿತರ ವೆಚ್ಚ 1800 ಕೋಟಿಗಳಾಗಿದೆ ಎನ್ನುತ್ತಾರೆ ಮೋದಿ. ಆದರೆ ಸರ್ಕಾರದಿಂದ ನಿರ್ದಿಷ್ಟ ಮೊತ್ತ ನೀಡಿಲ್ಲ, ಕೆಲವು ಲಕ್ಷ ಖರ್ಚಾಗಿದೆ, ಅದೂ ಆಕೆಯ ಸ್ವಂತ ಕಿಸೆಯಿಂದ ಎಂಬ ಉತ್ತರ ಬಂದಿದೆ ಎಂದು ಆ ಪ್ರಶ್ನೆ ಕೇಳಿದಾತ ಹೇಳುತ್ತಾನೆ” ಎಂದು! ಆದರೆ, ಮಜಾ ಸಂಗತಿಯೇನೆಂದರೆ ಸರ್ಕಾರದ ಉತ್ತರದಲ್ಲೇ ಸುಳ್ಳು ಅಡಗಿದೆ. ಸೋನಿಯಾ ಗಾಂಧಿಯವರ ಮೆಡಿಕಲ್ ಟ್ರೀಟ್‌ಮೆಂಟ್ ಬಿಲ್ಲನ್ನು ಸಬಾ ನೋಡಿದ್ದಾರೆಯೇ? ಮತ್ಹೇಗೆ ಮೋದಿಯವರು ಹೇಳಿದ್ದು ಸುಳ್ಳು ಎನ್ನುತ್ತಿದ್ದಾರೆ? ಆಕೆ ಚಿಕಿತ್ಸೆಗಾಗಿ ಅಮೆರಿಕಕ್ಕೆ ಸ್ವಂತ ಖರ್ಚಿನಲ್ಲೇ ಹೋಗಿದ್ದರೆ ‘ಕೆಲವು ಲಕ್ಷ’ ಎನ್ನುವ ಬದಲು ನಿರ್ದಿಷ್ಟ ಮೊತ್ತವನ್ನು ಕೊಡಬಹುದಿತ್ತಲ್ಲವೆ? ಆಕೆ ಹೋಗುವಾಗ ಎಸ್‌ಪಿಜಿ ರಕ್ಷಣೆ ಅವರನ್ನು ಹಿಂಬಾಲಿಸುವುದಿಲ್ಲವೆ? ಅದರ ಖರ್ಚನ್ನೂ ಸೋನಿಯಾ ಭರಿಸಿದ್ದರೆ? ಆಕೆ ದಾಖಲಾಗಿದ್ದು ಅಮೆರಿಕದ ಅತ್ಯಂತ ದುಬಾರಿ ಆಸ್ಪತ್ರೆಗಳಲ್ಲಿ ಒಂದಾದ “Memorial Sloan- Kettering Cancer Center”ನಲ್ಲಿ. ಅಂಥ ಆಸ್ಪತ್ರೆಯಲ್ಲಿ ತಿಂಗಳ ಖರ್ಚು ಕೆಲವು ಲಕ್ಷ ಮಾತ್ರವಾದೀತೆ? ಅದಿರಲಿ, ಮೋದಿ 1800 ಕೋಟಿ ಎಂದೇ ಹೇಳಿದ್ದರೂ ಸರ್ಕಾರ ನಿರ್ದಿಷ್ಟ ವೆಚ್ಚವನ್ನೇಕೆ ಬಾಯಿಬಿಡುತ್ತಿಲ್ಲ? ಇಂಥ ಯಾವ ವಿಷಯಗಳ ಬಗ್ಗೆಯೂ ಮಾಧ್ಯಮಗಳು ಸಹಜ ಅನುಮಾನವನ್ನೂ ಪಡುವುದಿಲ್ಲ, ಏಕೆ ಸ್ವಾಮಿ? ಮೋದಿ ಹಣಿಯಲು ಮಾಧ್ಯಮಗಳಿಗೂ ಸುಪಾರಿ ಸಿಕ್ಕಿದೆಯೇ?

ಹಾಗಂತ ಮೋದಿ ತಪ್ಪೇ ಮಾಡುವುದಿಲ್ಲ ಎಂದಲ್ಲ. ಇತ್ತೀಚೆಗೆ ಶ್ಯಾಮ್‌ಜಿ ಕೃಷ್ಣವರ್ಮಾ ಎನ್ನುವುದನ್ನು ಶ್ಯಾಮಪ್ರಸಾದ ಮುಖರ್ಜಿ ಎಂದು ಬಾಯಿತಪ್ಪಿ ಹೇಳಿದ ಮೋದಿ ಮರುಕ್ಷಣವೇ ಕ್ಷಮೆಯಾಚಿಸಿ ತಪ್ಪು ತಿದ್ದಿಕೊಂಡರು. ಗಾಂಧಿ ಬಗ್ಗೆ ಹೇಳುತ್ತಾ ಮೋಹನ್‌ದಾಸ್ ಎನ್ನುವುದನ್ನು ಮೋಹನ್‌ಲಾಲ್ ಎಂದಿದ್ದೂ ಇದೆ. ಇಂಥ ತಪ್ಪನ್ನು ಯಾರು ತಾನೇ ಮಾಡುವುದಿಲ್ಲ? ಅವಹೇಳನಕಾರಿಯಾಗಿ ಬರೆದು ಪತ್ರಿಕೆಗಳು ಕ್ಷಮೆ ಕೇಳುವುದನ್ನೇ ಒಪ್ಪಿಕೊಳ್ಳುವುದಾದರೆ ಬಾಯ್ತಪ್ಪಿನಿಂದಾದನ್ನು ಕ್ಷಮೆ ಕೇಳಿದರೂ ಮನ್ನಿಸಲಾಗದ ಮನಸ್ಥಿತಿ ಎಂಥದ್ದು?

ನರೇಂದ್ರ ಮೋದಿಯವರಿಗೆ ಇತಿಹಾಸದ ಪಾಠ ಹೇಳಿಕೊಡಲು ಮುಂದಾಗಿರುವ ಮಾಧ್ಯಮಗಳು, ಝಾನ್ಸಿ ರಾಣಿಯನ್ನು ‘ರಾಣಿ ಕಿ ಝಾನ್ಸಿ’ ಎಂದ, ಬಡತನವನ್ನು ‘ಪಾವರ್ಟಿ ಈಸ್ ಎ ಸ್ಟೇಟ್ ಆಫ್ ಮೈಂಡ್‌’ (ಅದೊಂದು ಮನಃಸ್ಥಿತಿ) ಎಂದ, ಭಾಷಣದ ಟಿಪ್ಪಣಿಗಳ ಹಾಳೆಯನ್ನು ಅದಲು ಬದಲು ಮಾಡಿಕೊಂಡು ‘ಐ ಮಿಸ್ಡಿಟ್‌’ ಎಂದ ರಾಹುಲ್ ಗಾಂಧಿಯವರ ಪೆದ್ದುತನವನ್ನು ಎಂದಾದರೂ ಪ್ರಶ್ನಿಸಿವೆಯೇ? ರಾಜಧಾನಿ ದಿಲ್ಲಿಯಲ್ಲಿ ದಲಿತ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ಯಶಸ್ಸು ಪಡೆಯಬೇಕಾದರೆ ದಲಿತರು “needs the escape velocity of Jupitor” ಎಂದ ರಾಹುಲ್ ಗಾಂಧಿಯವರನ್ನು ನಿಮ್ಮ ಮಾತಿನ ಅರ್ಥವೇನು ಸ್ವಾಮಿ ಎಂದು ಕೇಳಿದವೇ? ಪ್ರತಿ ಭಾಷಣದಲ್ಲೂ ಅರ್ಧ ರೊಟ್ಟಿ, ಫುಲ್ ರೊಟ್ಟಿ ಎಂದೇ ಮಾತನಾಡುವ ರಾಹುಲ್ ಗಾಂಧಿಯವರನ್ನು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಯಾವ ಯೋಜನೆ, ಯೋಚನೆಗಳು ನಿಮ್ಮ ಬಳಿ ಇವೆ ಎಂದು ಮಾಧ್ಯಮಗಳು ಪ್ರಶ್ನಿಸಿದ್ದನ್ನು ನೋಡಿದ್ದೀರಾ? ಇವತ್ತು ಎಂಥ ಪರಿಸ್ಥಿತಿ ಸೃಷ್ಟಿಯಾಗಿದೆಯೆಂದರೆ “ಮೋದಿಗೆ ಇತಿಹಾಸ ಗೊತ್ತಿಲ್ಲ” ಅಂತ ಚಿತ್ರನಟಿ ರಮ್ಯಾ ಅವರಂಥ ಪೆದ್ದಿ ಮಾಡಿದ ವೃಥಾ ಆರೋಪವನ್ನೂ ಮಾಧ್ಯಮಗಳು “ಬ್ರೇಕಿಂಗ್ ನ್ಯೂಸ್‌” ಮಾಡುತ್ತವೆ!

ಅಂದಹಾಗೆ “ಮೋದಿಯನ್ನು ಮುಗಿಸಿದರೆ ಅಂತಾರಾಷ್ಟ್ರೀಯ ದೇಣಿಗೆ ಹೇರಳವಾಗಿ ಹರಿದು ಬರುತ್ತದೆ” ಎನ್ನುತ್ತಾನೆ ಯಾಸೀನ್ ಭಟ್ಕಳ್. ಹಾಗಾದರೆ ಮೋದಿಯವರನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವ ಮಾಧ್ಯಮಗಳಿಗೆ ಹರಿದು ಬರುತ್ತಿರುವುದು “ಯಾರಿಂದ”?!

38 Responses to “ಇಂಡಿಯನ್ ಮುಜಾಹಿದ್ದೀನ್ ಮಾತ್ರವಲ್ಲ, ಮಾಧ್ಯಮಗಳ ಮೊದಲ ಟಾರ್ಗೆಟ್ ಕೂಡ ಮೋದಿಯೇ?!”

  1. Sushanth says:

    I think that the continuous portraying of Modi as villanous, demonic figure in the media (baiting) has led to him being a target for terrorists. As revealed by Bhatkal, Modi is now the most prized target in the country for terrorists.

  2. Murali says:

    Namaskara sir,

    plz throw the light on Rothschild conspiracy theory which says the whole world is controlled by his family and most of the media too…. then our country too….>??? is it true…? he who was in fact controlled east India company and robed our country….? for instance Rothschild has always used the Syrian Christian run vernacular media to their advantage before Independence. Edwina had recommended MO Mathai, a Syrian Christian as his assistant for the PMO—though he was trained in the US military in spying. MO Mathai was charged with spying and dismissed by Nehru himself in 1959 after serving for 13 years.
    If m not wrong.. presently our Congress govt. first lead by the nostrils by his party Chief — a foreign Italian Catholic woman who associated with the robber the Rothschild…? then now also they literally robbing our nation….?

    Thanks and regards,
    MK/

  3. mallikarjuna says:

    MODI yavara romavannu muttalu yava bhayotpadakarinda sadyavilla aadre janara manassinalli visha beeja bittuttiruva ee madhyamagalannu sari daarige taralu aa devarindloo sadyavillanta ansutte. .

  4. Jagadeesha K Parameshwarappa says:

    Sir it’s a good article please keep spreading the same. ..

  5. Sunil V Sanglekar says:

    Sir, nimma lekhanagalu adbuta.
    Regular aagi namma abhipraaya yaavudakke kaluhisaeku?
    Daridra dongi seculargalu BJPna muslim virodhi anta b
    Bimbisi vote bank maadikollo haage BJP YAAKE CONGRESS HINDU VIRODHI ANTA PRACHAARA KOTTU HINDU VOTE BANK CREATE MAADTA ILLA?

  6. Nagaraj.Sajjan says:

    nice brother, ur article is super
    modi modi
    modi modi
    modi modi
    modi modi

  7. Vasudev says:

    Is there any channel who knows proper ethics of media. Who will correct media if they are involved in stupid blunders. Fed up with media.

  8. Lakshmi Hegde says:

    Let every one attack Modiji. Modiji is like a Phinix. He has taken birth for India, to save India. We make him PM. After that the same media goes behind him shamelessly praising him. Such a dirty politics.

  9. Prakash says:

    Sir.. kindly accept my sincere compliments to your guts… I really appreciate it. I am also one frustrated citizen of India because of this congress government and congress politicians. I know you are not here to support any political party but then it is a fact that congress government is exploiting our country, especially Sonia and her family. Please write as many articles as possible about Modiji and lets bring some change to our country.

    I am your fan sir. I am already following you in FB and kindly add me in your friend’s list if possible. Thanks so much for this article. Keep going.

    Regards,
    Prakash B

  10. true indian says:

    devare, modiyavaraana ella reetiya dushta shaktigalinda rakshisu. ee deshada janara bhavishyakke avaru beku.
    everyone pray for modiji’s safety…………we need him…… jai modi……..

  11. Bhat V P says:

    Mr Pratap, If most of the people don’t like him means there should be a problem with the guy itself. It is common sense. Unfortunately great scholars like you won’t understand this.

  12. kitty says:

    THROUGH CONGRESS ONLY……..

  13. Sumukha B Udupa says:

    Read an awesome article about Mr. Modi. Thanks for giving this wonderful article Pratap Sir. In fact the these media’s behaviour has reached to such an extent that “even if they produce some proof for the issues they have raised against Modi, people will ignore them by thinking they have build some rubbish stories, as usual”. But unfortunately we don’t have any medias at the national level, which can reveal the secrets behind this congress sponsered medias.

  14. Pavithra says:

    Hi,

    I really agree on the same. I wonder why people are like this. Don’t they have any kind of patriotism in them. Are they Indian?

    Regards
    Pavithra

  15. umesh says:

    awesome article……how much the media will attack on modi, day by day he will become more and more strong.

  16. shridhar says:

    SIR,

    Really good artical

  17. Bhaira Naik says:

    Great Sir.. Love you all..
    Thanking You,
    Bhaira Naik

  18. prashanth says:

    The “GREAT NAMO”
    The “KING”
    The real HERO

  19. Ramkumar Magge says:

    Pratap,

    I was extremely happy to read through the articles you have written about Modi. We need to expose these biased Media houses which are propagating hatred against Modi and make people aware that what they see or hear on the Media is not completely true. But the fact of the matter is that “Modi really is far far ahead of his opponents in the Political battle and he is unstoppable”. He is the real “STAR” of India. Thanks for bringing out the facts.

    I want to reply in “Kannada” but I am not sure how to do that ? Should I use “Lipi” or some other software ?

  20. Santhosh Gowda says:

    Modi ,,Modi,,modi,,,,, Namo 2014 PM Pakka no tension…congress will collapse 100% Pakka ..

  21. praveen says:

    idu atee shokad sangati……….congress koduv enjalu kasigagi jollu surisuttive madhyamagalu…

  22. Mahesh says:

    Hello Pratap,

    This one is really sensible article. Really shows, how pathetic is Indian media. It is not just English media, many regional medias are not far behind in biased opinions & brainwashing the public.

    There is a real need for stopping this brainwashing which our media’s have been doing . They have already fooled & converted many of the Indians ideologically.

    I think your writings should reach a wider segment of the society & diverse communities. I request, if you can arrange for the English version of your writings as well.

  23. ಕೇಂದ್ರದಲ್ಲಿ ಎಂದು ದೇಶಪ್ರೇಮಿ ಸರ್ಕಾರ ಬರುವುದೊ… ಅಂದು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ

  24. Manjunath says:

    We all know how much indian media is paid for behaving in favour of your Mr Modi by corporate dons… They do his chamchagiri… At least u stop doing it… We tolerated all these false things told by u all these days… But it’s enough Mr Pratap… Stop this chamchagiri journalism… Please…

  25. srinivasamurthy says:

    ಕನ್ನಡಪ್ರಬದಲ್ಲಿ ಬರೆದ ಲೇಕನಗಳ ಜೊತೆಗೆ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡ ಲೇಕನವನ್ನು ಹಾಕಿ.

  26. Ganesh says:

    ಯಾಸಿನ್ ಭಟ್ಕಳ್ ನನ್ನು ,,,,,ಸರ್ ಅಂತ ಕರೆಯೋ ಮುಖ್ಯಮಂತ್ರಿಗಳು ನಮ್ಮ ರಾಜ್ಯದಲ್ಲಿ ಇದ್ದಾರೆ ಇಂತ ಕಾಂಗ್ರೆಸ್ ನ ಹುಳು ವಿನಿಂದ ಇನ್ನು ಏನು ತಾನೆ ನಿರಿಕ್ಸಿಸಲು ಸಾದ್ಯ
    ಕಾಂಗ್ರೆಸ್ ನಲ್ಲಿ ಪ್ರಧಾನಿ ಪಟ್ಟಕ್ಕೆ ಯೋಗ್ಯರಾಗಿ ಇರುವವರು ರಾಷ್ಟ್ರಪತಿಯಾಗಿರುವ ಪ್ರಣಬ ಮುಖರ್ಜಿ ಮಾತ್ರ ಆದರೆ ಭಟ್ಟಂಗಿ ಗಳಿಂದ ಕೂಡಿರುವ ಕಾಂಗ್ರೆಸ್ ಸರಕಾರ ರಾಹುಲನನ್ನು ಮಾಡಲು ಕಾಯುತಿದೆ ಪ್ರಧಾನಿ ಪೋಸ್ಟ್ ರಾಹುಲನನ್ನು ನೇಮಕ ಮಾಡಿದರೆ ಖಂಡಿತ ವಿಶ್ವವೇ ಬಿದ್ದು ಬಿದ್ದು ನಗೆ ಆಡಲಿದೆ
    ಕೊನೆಯದಾಗಿ ದೇಶದ ಕೊಳೆಯನ್ನು ತೊಳೆದು ಹಾಕಲು ಮೋದಿ ನೇತ್ರತ್ವದಲ್ಲಿ ಬಿಜೆಪಿ ಸರಕಾರ ಸತತ ಕನಿಷ್ಠ 4 ಬರಿ ಯಾದರು ಬರಬೇಕು

  27. ವಾಸುಕಿ ನರಸಿಂಹ says:

    ದಯವಿಟ್ಟು ವೀಡಿಯೊಗೆ ಲಿಂಕ್ ಕೊಡಿ.

    ಧನ್ಯವಾದಗಳು.

  28. Super articlet Pratap sir…

  29. MANOHARA M R says:

    Hi Pratap Simha sir

    I am a big fan of your articles from my engineering dayz. I used to collect paper cuttings of your articles from Vijaya Karnataka.

    Coming to the matter. I am staying in Delhi from 4 years. I have told my colleagues about your articles. There social content. They got impressed and want to read it. But those are all in Kannada. Can you help me out in getting English once, if you have.??

  30. siddu says:

    Dear sir

    We red fantastic truth. We need modi like P.m

    Thanking you
    Siddu

  31. siddu says:

    Dear sir
    We we red your fantastic truth. India need modi as pm.

    Thank you
    Siddu

  32. siddu says:

    Dear sir
    We red your fantastic truth. India need modi as pm.

    Thank you
    Siddu

  33. Ramachandra B says:

    shame less medias!! what more we can say prathap?. they have totally forgotten their duties and responsibilities for their bread and butter!!

  34. ajay says:

    Sir,

    I feel great to read ur article’s .sir,..and plz one suggestion that,write the articles in English and let the every Indian get the chance to read a article’s of a prompt writer and the nation need u not only karnataka

  35. Manjunath says:

    As actress ramya told that modi does not know history, let us ask her first that whether she knows history or not

  36. shwetha says:

    really nice article sir,,,this article shows how media people betraying all and simply creates a negative public about MODI…

  37. manjunatha cs says:

    modi is the greatest man in the world