Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮುಝಫರ್‌ನಗರದಲ್ಲಿ ನಿಜಕ್ಕೂ ನಡೆದಿದ್ದೇನು?

ಮುಝಫರ್‌ನಗರದಲ್ಲಿ ನಿಜಕ್ಕೂ ನಡೆದಿದ್ದೇನು?

“2013, ಆಗಸ್ಟ್ 27ರಂದು ಮುಝಫರ್‌ನಗರ ಹಾಗೂ ಶಾಮ್ಲಿಯಲ್ಲಿ ಹಿಂದು ಹಾಗೂ ಮುಸಲ್ಮಾನರ ನಡುವೆ ಘರ್ಷಣೆ ಆರಂಭವಾಯಿತು. ಮುಝಫರ್ ನಗರದ ಕವಲ್ ಗ್ರಾಮದ ಹಿಂದು ಜಾಟ್ ಸಮುದಾಯಕ್ಕೆ ಸೇರಿದ ಯುವತಿ ಶಾಲೆಗೆ ತೆರಳುವಾಗ ಮುಸ್ಲಿಂ ಯುವಕನೊಬ್ಬ ನಿತ್ಯವೂ ಉಪದ್ರವ ಕೊಡುತ್ತಿದ್ದ, ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಕೊನೆಗೆ ಯುವತಿಯ ಸಹೋದರರಾದ ಸಚಿನ್ ಸಿಂಗ್ ಹಾಗೂ ಗೌರವ್ ಸಿಂಗ್ ಇಬ್ಬರಲ್ಲಿ ಒಬ್ಬರು ನಿತ್ಯವೂ ಆಕೆಯನ್ನು ಬಸ್ಸಿನವರೆಗೂ ಕಳುಹಿಸಿ ಬರುತ್ತಿದ್ದರು. ಆದರೂ ಮುಸ್ಲಿಂ ಯುವಕ ಶಾನವಾಜ್ ಖುರೇಶಿಯ ಕಾಟ ತಪ್ಪಲಿಲ್ಲ. ಒಂದು ದಿನ ಆಕೆಯ ಸಹೋದರರ ಜೊತೆಯೂ ಕ್ಯಾತೆ ತೆಗೆದ. ಇದರಿಂದ ಕುಪಿತಗೊಂಡ ಸಚಿನ್ ಸಿಂಗ್ ಹಾಗೂ ಗೌರವ್ ಸಿಂಗ್ ಶಾನವಾಜ್‌ನನ್ನು ಹಿಡಿದು ಬಡಿದಿದ್ದಾರೆ. ಆ ಘಟನೆಯಲ್ಲಿ ಆತನ ಪ್ರಾಣವೇ ಹೊರಟುಹೋಗಿದೆ. ಇದಕ್ಕೆ ಪ್ರತಿಯಾಗಿ ದಂಡು ಸೇರಿದ ಮುಸ್ಲಿಮರು ಸಚಿನ್ ಹಾಗೂ ಗೌರವ್‌ನನ್ನು ಕೊಂದುಹಾಕಿದರು. ಆದರೆ ಶಾನವಾಜ್ ಖುರೇಶಿ ಹತ್ಯೆ ಸಂಬಂಧವಾಗಿ ಯುವತಿಯ ಕುಟುಂಬದ 11 ಸದಸ್ಯರನ್ನು ಬಂಧಿಸಿದ ಪೊಲೀಸರು, ಹಿಂದು ಸಹೋದರರನ್ನು ಸಾಯಿಸಿದವರ ವಿರುದ್ಧ  ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ”. ಇದು ಸಾಮಾನ್ಯವಾಗಿ ಕೇಳಿಬರುತ್ತಿರುವ ಹಿಂಸಾಚಾರದ ಮುನ್ನುಡಿ.

ಆದರೆ…

ಗ್ರಾಮಸ್ಥರು ಮಾಡಿದ್ದು ಮಾತ್ರ ಕೇವಲ ಆರೋಪವಾಗಿರಲಿಲ್ಲ! ಪ್ರತಿನಿತ್ಯವೂ ಕಿರುಕುಳಕ್ಕೊಳಗಾಗುತ್ತಿದ್ದ ಯುವತಿಯ ಕುಟುಂಬಸ್ಥರು ತಮ್ಮಿಬ್ಬರು ಮಕ್ಕಳ ಹತ್ಯೆಯ ಬಗ್ಗೆ ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ಪ್ರಕರಣವನ್ನೇ ದಾಖಲಿಸಿಕೊಳ್ಳಲಿಲ್ಲ. ಆದರೆ ಯುವತಿಗೆ ಕಿರುಕುಳಕೊಟ್ಟು ಕೊಲೆಯಾದ ಯುವಕನ ಮನೆಯವರು ದೂರು ಕೊಟ್ಟ ಕೂಡಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ತಂದೆ ಹಾಗೂ ಸಂಬಂಧಿಕರನ್ನು ಬಂಧಿಸಿಬಿಟ್ಟರು! ಆಗ ಕಾರ್ಯಪ್ರವೃತ್ತವಾದ ಜಾಟ್ ಸಮುದಾಯ ಪ್ರಕರಣವನ್ನು ಹಿಂಪಡೆದು ಯುವತಿಯ ತಂದೆ ಹಾಗೂ ಸಂಬಂಧಿಕರನ್ನು ಬಿಡುಗಡೆ ಮಾಡುವಂತೆ ಆಡಳಿತ ವರ್ಗದ ಮೇಲೆ ಒತ್ತಡ ಹೇರಲು ಮುಂದಾಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಈ ಮಧ್ಯೆ, ತಮ್ಮ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಚಿಂತಿತರಾದ ಜಾಟರು ‘ಸೊಸೆ, ಮಗಳ ರಕ್ಷಣೆ ಸಮ್ಮೇಳನ’ ಎಂಬ ಮಹಾಪಂಚಾಯಿತಿ ನಡೆಸಲು ಮುಂದಾಯಿತು. ಮುಝಫರ್ ನಗರದಿಂದ 20 ಕಿ.ಮೀ. ದೂರದಲ್ಲಿ ನಡೆದ ಆ ಸಭೆಗೆ ಹೋಗಿ ವಾಪಸ್ಸಾಗುತ್ತಿದ್ದ ಒಂದಿಷ್ಟು ಜಾಟರು ಮಸೀದಿಯೊಂದನ್ನು ಹಾದುಹೋಗುತ್ತಿರುವಾಗ ದಾಳಿ ಮಾಡಿದ ಮುಸ್ಲಿಮರು ಹಿಂದುಗಳ ಮೇಲೆ ತೀವ್ರ ಹಲ್ಲೆಗೈದರು. ಬಂದೂಕಿನ ನಳಿಕೆಗಳಿಂದ ಗುಂಡುಗಳು ಹಾರಿ ಜಾಟರ ಮೈಹೊಕ್ಕಿದವು. ಆ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಒಂದೆಡೆ ಬಿಎಸ್ಪಿ ಹಾಗೂ ಸಮಾಜವಾದಿ ಪಕ್ಷದ ಮುಸ್ಲಿಂ ಶಾಸಕರು ತಮ್ಮ ಕೋಮಿನವರನ್ನು ಎತ್ತಿ ಕಟ್ಟಿದರೆ, ಬಿಜೆಪಿ ಜಾಟರ ಬೆಂಗಾವಲಿಗೆ ನಿಂತಿತು. ಆಗ ಆರಂಭವಾಯಿತು ಕೋಮು ದಳ್ಳುರಿ. ಇದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ ಜಾತಿ ಒಳಜಗಳಗಳಿಂದಲೇ ಪರಸ್ಪರ ಕತ್ತಿಮಸೆಯುವ ಹಿಂದುಗಳು ಸಂಘಟಿತರಾಗುವುದು, ತಾವಾಗಿಯೇ ಬೇರೆಯವರ ಮೇಲೆ ಮುಗಿಬೀಳುವುದಂತೂ ಇಲ್ಲವೇ ಇಲ್ಲ.

ಹಾಗಿದ್ದರೂ ಮುಝಫರ್‌ನಗರ ಹೊತ್ತಿ ಉರಿದಿದ್ದೇಕೆ? ಜಾಟರು ವಾಪಸ್ ಜಾಡಿಸಲು ಮುಂದಾಗಿದ್ದೇಕೆ?

ಇಂಥದ್ದೊಂದು ಹಿಂಸಾಚಾರಕ್ಕೆ ಕಾರಣವಾದ ಪೂರ್ವಭಾವಿ ಘಟನೆಗಳನ್ನು ಸೆಪ್ಟೆಂಬರ್ 9ರಂದು ಬಿಚ್ಚಿತು ‘indianwires.com’, ತದನಂತರ ಟ್ವಿಟ್ಟರ್‌ನಲ್ಲಿ ಬಹಳ ಕ್ರಿಯಾಶೀಲರಾಗಿರುವ ಅಖಿಲೇಶ್ ಮಿಶ್ರಾ (@amishra77) ಎಂಬವರು ಸರಣಿ ಟ್ವೀಟ್‌ಗಳಲ್ಲಿ ವೆಬ್‌ಸೈಟ್‌ಗಳ ಕೊಂಡಿ ಸಮೇತ ಘಟನೆಗಳ ವಿವರ ನೀಡಿದರು. ಅಂದಹಾಗೆ, ಮುಝಫರ್ ನಗರ ಕೊತ ಕೊತ ಕುದಿಯುವಂತೆ, ಜಾಟರು ಸಿಡಿದೇಳುವಂತೆ ಮಾಡಿದ ಘಟನೆಗಳಾದರೂ ಯಾವುವು ಎಂದುಕೊಂಡಿರಿ?

ಘಟನೆ-1

2012, ಡಿಸೆಂಬರ್ 21, ಮುಝಫರ್‌ನಗರ: ಇಲ್ಲಿ ನಡೆದ ಅತ್ಯಂತ ಅಮಾನವೀಯ ಘಟನೆಯಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಯಿತು. ನೆರೆ ಮನೆಯ ತಸಾವುರ್ ಎಂಬಾತ 15 ವರ್ಷದ ಬಾಲಕಿಯನ್ನು ಅಪಹರಿಸಿ ಮೂರು ದಿನಗಳ ಕಾಲ ಅತ್ಯಾಚಾರ ನಡೆಸಿದ. ಆತನ ಕಪಿಮುಷ್ಠಿಯಿಂದ ಹೇಗೋ ತಪ್ಪಿಸಿಕೊಂಡ ಬಾಲಕಿ ಮನೆಗೆ ಮರಳಿ ವಿಷಯ ತಿಳಿಸಿದಾಗ, ಕುಟುಂಬಸ್ಥರು ಸ್ಥಳೀಯ ಪಂಚಾಯಿತಿಗೆ ದೂರು ನೀಡಿದರು. ಇನ್ನೂ ಆಘಾತಕಾರಿ ವಿಷಯವೇನೆಂದರೆ, ಪೊಲೀಸರಿಗೆ ದೂರು ನೀಡದಂತೆ ತಾಕೀತು ಹಾಕಿದ ಪಂಚಾಯಿತಿ, ಬಾಲಕಿಯ ಕುಟುಂಬದವರಿಗೆ ಒಂದೂವರೆ ಲಕ್ಷ ಪರಿಹಾರ ನೀಡುವಂತೆ ಸೂಚಿಸಿತು.

ಘಟನೆ-2

2012, ಡಿಸೆಂಬರ್ 24, ಮುಝಫರ್‌ನಗರ: ಶಾಮ್ಲಿಯಲ್ಲಿ ನಡೆದ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಮೂವರು ಯುವಕರು 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು. ಜಾವೆದ್, ಪರ್ವೇಜ್ ಮತ್ತು ಮನ್ನನ್ ಎಂಬ ಮೂವರ ವಿರುದ್ಧ ಕೇಸು ದಾಖಲಿಸಿದರಾದರೂ ಪೊಲೀಸರು ಯಾರನ್ನೂ ಬಂಧಿಸಲಿಲ್ಲ!

ಘಟನೆ-3

2012, ಡಿಸೆಂಬರ್ 29, ಲಕ್ನೋ: ಕಳೆದ 24 ಗಂಟೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಅಮ್ರೋಹದ ಬಳಿ ಒಬ್ಬ ಶಾಲಾ ಶಿಕ್ಷಕಿ ಹಾಗೂ ಮುಝಫರ್‌ನಗರದಲ್ಲಿ ಒಬ್ಬ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಮನೆಯಿಂದ ಹೊರಟ ಶಿಕ್ಷಕಿಯನ್ನು ರಸ್ತೆ ಮಧ್ಯೆ ತಡೆದ ಗಾಲಿಬ್ ಮತ್ತು ಫಿರೋಝ್ ಪಕ್ಕದಲ್ಲೇ ಇದ್ದ ಹೊಲಕ್ಕೆ ಹೊತ್ತೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.

ಮತ್ತೊಂದು ಘಟನೆ ಮುಝಫರ್‌ನಗರ ಜಿಲ್ಲೆಯ ಜೊಗಿಯಾ ಖೇರಾ ಗ್ರಾಮದಲ್ಲಿ ನಡೆದಿದ್ದು. ಬಹಿರ್ದೆಸೆಗೆ ಹೊಲಕ್ಕೆ ಹೋಗಿದ್ದ ಯುವತಿ ಮೇಲೆ ಅದೇ ಗ್ರಾಮದ ಶೌಕೀನ್ ಮತ್ತು ರಾಹಿಲ್ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳನ್ನು ಶೋಧಿಸುವ ಯತ್ನ ನಡೆಯುತ್ತಿದೆ.

ಘಟನೆ-4

2013, ಫೆಬ್ರವರಿ 13, ಮುಝಫರ್‌ನಗರ: ಇಲ್ಲಿನ ಸಿಕ್ರಿ ಗ್ರಾಮದಲ್ಲಿ 30 ವರ್ಷದ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಅಷ್ಟೇ ಅಲ್ಲ, ದುರುಳರು ಅತ್ಯಾಚಾರದ ವಿಡಿಯೋ ಚಿತ್ರೀಕರಣವನ್ನೂ ಮಾಡಿಕೊಂಡಿದ್ದಾರೆ.

ಗಂಡ ಮನೆಯಲ್ಲಿದಾಗ ಒಳ ಪ್ರವೇಶಿಸಿದ ದುರುಳರು ಬಂದೂಕು ತೋರಿಸಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಅಪರಾಧ ಎಸ್ಪಿ ಕಲ್ಪನಾ ಸಕ್ಸೇನಾ ಹೇಳಿದ್ದಾರೆ. ನಾಲ್ವರು ಆರೋಪಿಗಳನ್ನು ನೌಶಾದ್, ಪರ್ವೇಜ್, ಕಮಲ್ ಹಸನ್ ಮತ್ತು ನಾಝರ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಘಟನೆ- 5

2013, ಆಗಸ್ಟ್ 23, ಮುಝಫರ್‌ನಗರ: ಜಿಲ್ಲೆಯ ಮಿರಾನ್‌ಪುರ್ ನಗರದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಐವರು ಯುವಕರು ಅತ್ಯಾಚಾರವೆಸಗಿದ್ದು, ಕುಪಿತಗೊಂಡ ಜನ ಡಿಲ್ಲಿ-ಪೌರಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ. ಮುಖ್ಯ ಆರೋಪಿ ಸಲ್ಮಾನ್‌ನನ್ನು ಬಂಧಿಸಲಾಗಿದ್ದು, ಆತನ ನಾಲ್ವರು ಸಹಚರರು ತಲೆಮರೆಸಿಕೊಂಡಿದ್ದಾರೆ.

ಘಟನೆ-6

2013, ಆಗಸ್ಟ್ 24, ಮುಝಫರ್‌ನಗರ: ಶಾಮ್ಲಿಯ ಲಿಲೋನ್ ಗ್ರಾಮದಲ್ಲಿ 13 ವರ್ಷದ 9ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ. ಶಾಲೆಗೆ ತೆರಳುತ್ತಿದ್ದ ಆಕೆಯನ್ನು ತಡೆದ ದಿಲ್ಷಾದ್ ಎಂಬಾತ ‘ನಿಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ’ ಎಂದು ಸುಳ್ಳು ಹೇಳಿ ವಾಪಸ್ ಕರೆದುಕೊಂಡು ಹೋಗುವ ನೆಪದಲ್ಲಿ ನಿರ್ಜನ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಇದು Tip of the iceberg ಅಂತಾರಲ್ಲ, ಒಂದು ಆಗಾಧ ಸಮಸ್ಯೆಯ ಸಣ್ಣ ತುಣುಕಷ್ಟೇ! ಇವು ಬರೀ ಅತ್ಯಾಚಾರಗಳ ಪಟ್ಟಿಯಷ್ಟೇ. ಮುಝಫರ್‌ನಗರದಲ್ಲಿ ಹಿಂದುಗಳು ಶೇ.49ರಷ್ಟಿದ್ದರೆ ಮುಸ್ಲಿಮರು 47 ಪರ್ಸೆಂಟ್ ಇದ್ದಾರೆ. ಇಂಥ ವಾಸ್ತವದ ಜತೆಗೆ ಮುಝಫರ್‌ನಗರದ ಮತ್ತೊಂದು ದುರದೃಷ್ಟವೇನೆಂದರೆ ಆ ಜಿಲ್ಲೆಯ ಉಸ್ತುವಾರಿ ಸಚಿವ ಆಝಮ್ ಖಾನ್! ಈತ ಅಕ್ಬರುದ್ದೀನ್ ಓವೈಸಿ, ಪ್ರವೀಣ್ ಭಾಯಿ ತೊಗಾಡಿಯಾಗಿಂತಲೂ ಅಪಾಯಕಾರಿ. ಸಚಿನ್ ಮತ್ತು ಗೌರವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮವನ್ನೂ ಕೈಗೊಳ್ಳದಂತೆ ತಡೆದವನೇ ಈ  ಅಝಮ್ ಖಾನ್. ಅನ್ಯಾಯಕ್ಕೊಳಗಾದ ಯುವತಿಯ ಮನೆಯವರನ್ನೇ ಬಂಧಿಸಿ ಜೈಲಿಗಟ್ಟುವಂತೆ ಮಾಡಿದವನೂ ಈ ಅಝಮ್ ಖಾನನೇ. ಅದನ್ನು ಹೆಡ್‌ಲೈನ್ಸ್ ಟುಡೆ ಚಾನೆಲ್ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಪೊಲೀಸ್ ಅಧಿಕಾರಿಗಳೇ ಬಹಿರಂಗಮಾಡಿದ್ದಾರೆ. ಇಷ್ಟಾಗಿಯೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಏಕಾಗಿ ಈ ಅಝಮ್ ಖಾನ್‌ನನ್ನು ತಮ್ಮ ಸಂಪುಟದಿಂದ ಇನ್ನೂ ಕಿತ್ತೊಗೆದಿಲ್ಲ? ಅಂತಹ ತಾಕತ್ತನ್ನು ಅಖಿಲೇಶ್ ಆಗಲಿ, ಅವರಪ್ಪ ‘ಮುಲ್ಲಾ’ಯಂ ಆಗಲಿ ಏಕೆ ತೋರುತ್ತಿಲ್ಲ? ಅಲ್ಪಸಂಖ್ಯಾತರ ಓಲೈಕೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ? ಆದರೆ ಒಂದು ನಕಲಿ ವಿಡಿಯೋವನ್ನು ಹಂಚಿದರು ಎಂಬ ಕಾರಣಕ್ಕೆ ಬಿಜೆಪಿ ಶಾಸಕ ಸಂಗೀತ್ ಸೋಮ್‌ರನ್ನು ಬಂಧಿಸಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ, ಮುಸ್ಲಿಮರನ್ನು ಹಿಂದುಗಳ ವಿರುದ್ಧ ಎತ್ತಿಕಟ್ಟಿದ ಬಿಎಸ್ಪಿ ನಾಯಕರಾದ ಖದೀರ್ ರಾಣಾ, ನೂರ್‌ಸಲೀಂ, ಮೌಲಾನಾ ಜಲೀಲ್ ಹಾಗೂ ಕಾಂಗ್ರೆಸ್ ನೇತಾರ ಸಯೀದುಝಮಾನ್ ವಿರುದ್ಧ ಏಕೆ ಮಾತನಾಡುತ್ತಿಲ್ಲ? ಒಂದು ವೇಳೆ ಜಾಟರ ಮೇಲೆ ದೌರ್ಜನ್ಯ ನಡೆದಾಗ, ಜಾಟ್ ಯುವತಿಯರ ಮಾನಭಂಗವಾದಾಗ ಆಡಳಿತ ಸೂಕ್ತ ಕ್ರಮ ಕೈಗೊಂಡಿದ್ದರೆ ಮುಸ್ಲಿಮರು-ಜಾಟರು ಪರಸ್ಪರ ಕತ್ತಿ ಹಿಡಿದು ನಿಲ್ಲುವ ಪ್ರಸಂಗವೂ ಎದುರಾಗುತ್ತಿರಲಿಲ್ಲ, ಮುಝಫರ್‌ನಗರ ರಣರಂಗವೂ ಆಗುತ್ತಿರಲಿಲ್ಲ. ಮುಸ್ಲಿಂ-ಯಾದವ್(MY) ಸೂತ್ರವನ್ನಿಟ್ಟುಕೊಂಡು ಅಧಿಕಾರಕ್ಕೆ ಬಂದ ಸಮಾಜವಾದಿ ಪಕ್ಷದ ಸರ್ಕಾರದಡಿ ಕಳೆದ ಒಂದೂವರೆ ವರ್ಷಗಳಲ್ಲಿ 113 ಕೋಮು ಗಲಭೆಗಳು ನಡೆದಿವೆಯಲ್ಲಾ, ಇದಕ್ಕೆಲ್ಲ ಹೊಣೆ ಯಾರು? ಮುಝಫರ್‌ನಗರದಲ್ಲಿನ ಗಲಭೆಗಳಿಗೆ ಹಿಂದುಗಳತ್ತ ಬೆರಳು ತೋರುತ್ತಿದ್ದಾರಲ್ಲಾ, ಈ ದೇಶದಲ್ಲಿ ಹಿಂದುಗಳೇ ಆರಂಭಿಸಿದ ಒಂದೇ ಒಂದು ಕೋಮು ಗಲಭೆಯನ್ನು ಉದಾಹರಿಸಿ ನೋಡೋಣ? ಇಷ್ಟಕ್ಕೂ Hindus never act, they only react!

ಮುಝಫರ್‌ನಗರದಲ್ಲಿಯೂ ಆಗಿದ್ದೂ ಅದೇ!

ಒಂದು ವೇಳೆ, ಜಾಟ್ ಸಮುದಾಯದ ಯುವತಿಯರ ಮೇಲೆ ನಡೆದ ಸರಣಿ ಅತ್ಯಾಚಾರಗಳಲ್ಲಿ ಆರೋಪಿಯಾಗಿದ್ದವರನ್ನು ಹಿಡಿದು ಶಿಕ್ಷಿಸಿದ್ದರೆ, ಅಂತಹ ಘಟನೆಗಳು ಹೆಚ್ಚಾಗದಂತೆ ತಡೆದಿದ್ದರೆ ಮುಝಫರ್‌ನಗರವೇಕೆ ರಣರಂಗವಾಗುತ್ತಿತ್ತು? ಈ ಬಗ್ಗೆ ಮುಸ್ಲಿಮರೇ ಆದ ಅಂಕಣಕಾರ ಸುರೂರ್ ಅಹಮದ್ ಏನು ಹೇಳುತ್ತಾರೆ ಕೇಳಿ-

—-

“ಉತ್ತರಪ್ರದೇಶದ ಮುಝಫರ್ ನಗರದ ದೊಡ್ಡ ಕೋಮುಗಲಭೆಯೇ ಇರಲಿ ಅಥವಾ ಬಿಹಾರ್‌ನ ನವಾಡಾದಲ್ಲಿನ ಚಿಕ್ಕ ಹೊಡೆದಾಟಗಳೇ ಇರಲಿ, ಅವುಗಳ ಬಗ್ಗೆ ಮುಸಲ್ಮಾನರು ಮತ್ತು ಮುಖ್ಯವಾಗಿ ಅದರ ನಾಯಕರು  ಆತ್ಮವಿಮರ್ಷೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಕೆಲವರಂತೂ ಈ ಘಟನೆಯನ್ನು ಗುಜರಾತ್‌ನ ಕೋಮುಗಲಭೆಗೆ ಹೋಲಿಸತೊಡಗಿದ್ದಾರೆ ಮತ್ತು ಮುಲಾಯಂ ಅವರನ್ನು ಉತ್ತರಪ್ರದೇಶದ ನರೇಂದ್ರ ಮೋದಿ ಎನ್ನತೊಡಗಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಎ-ಮುಶಾವರಾತ್ ‘ಅಖಿಲೇಶ್ ಸರ್ಕಾರವನ್ನು ಕಿತ್ತೆಸೆಯಬೇಕು’ ಎಂದು ಅರಚಾಡುತ್ತಿದೆ (ಇದೇ ಸರಿಯಾದ ಪರಿಹಾರವೇನೋ ಎಂಬಂತೆ!). ಆದರೆ ಇವರ್ಯಾರೂ ಕೂಡ ಕೆಲವು ಮುಖ್ಯ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಅದೇಕೆ ಮುಸಲ್ಮಾನ ಹುಡುಗರು/ಯುವಕರು ಈ ರೀತಿ ವಿಚಿತ್ರವಾಗಿ ವರ್ತಿಸುತ್ತಾರೆ? ಅದೇಕೆ ಮುಸ್ಲಿಂ ಯುವಕರು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ? (ಹೀಗೆಂದಾಕ್ಷಣ, ಹಿಂದು ಯುವಕರೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ ಎನ್ನುವ ವಾದ ಮುಂದಿಡಲಾಗುತ್ತದೆ). ಲವ್ ಜಿಹಾದ್‌ನಂಥ ಘಟನೆಗಳಿಂದ ಸಮುದಾಯದ ಹೆಸರು ಕೆಡುತ್ತಿರುವಾಗಲೂ ಅವರು ಈ ರೀತಿ ಮಾಡುತ್ತಾರೆಂದರೆ ಏನರ್ಥ? ಲೈಂಗಿಕ ದೌರ್ಜನ್ಯ ಬಹುದೊಡ್ಡ ಸಾಮಾಜಿಕ ಕಂದಕವನ್ನು ಮೂಡಿಸಬಲ್ಲದು ಎನ್ನುವುದು ಮುಸ್ಲಿಂ ನಾಯಕರಿಗೆ ಗೊತ್ತಿದ್ದರೂ, ಅವರೇಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಬಹುಶಃ ಹಾಗೆ ಮಾತನಾಡುವುದು ತಮ್ಮ ಕೆಲಸವಲ್ಲ ಎಂದವರು ಭಾವಿಸತೊಡಗಿದ್ದಾರೇನೋ? ಬಿಹಾರ್‌ನ ನವಾಡಾದಲ್ಲಿನ ಘಟನೆಯನ್ನೇ ನೋಡಿ- ಕೆಲವು ಮುಸ್ಲಿಂ ಯುವಕರು ಈದ್ ದಿನದಂದು ಆ ಊರಿನ ಹೆದ್ದಾರಿಯಲ್ಲಿರುವ ಹೊಟೇಲ್ ಒಂದಕ್ಕೆ ಹೋಗಿ ಕುಡಿದು ಗಲಾಟೆ ಮಾಡಿದ್ದಾರೆ. ಪವಿತ್ರ ರಂಜಾನ್ ತಿಂಗಳು ಮುಗಿದ ನಂತರ ಬರುತ್ತದೆ ಈದ್. ಆ ಗಲಾಟೆಯ ಪರಿಣಾಮವೇನಾಯಿತು? ಅಲ್ಲಿ ಸಾವಿನ ಸಂಖ್ಯೆ ಕಡಿಮೆಯಿರಬಹುದಾದರೂ, ಹೆಚ್ಚು ಹಾನಿಯಾದದ್ದು ಮುಸ್ಲಿಂ ಆಸ್ತಿಗಳಿಗೇ! ಇದಕ್ಕೆ ಯಾರನ್ನು ಹೊಣೆಗಾರ ಎನ್ನುತ್ತೀರಿ? ಕೆಲವು ಮುಸಲ್ಮಾನರು ಈ ಕಥೆಯನ್ನು ‘ಮಾಧ್ಯಮಗಳ ಸಂಚು’ ಎಂದು ಬಣ್ಣಿಸಿದರು. ಕೊನೆಗೆ ಈ ಕೋಮು ದಳ್ಳುರಿಗೆ ತಮ್ಮ ಸಮುದಾಯದ ಯುವಕರೇ ತುಪ್ಪ ಸುರಿದರು ಎನ್ನುವುದನ್ನು ಮುಸ್ಲಿಂ ನಾಯಕತ್ವ ಒಪ್ಪಿಕೊಂಡಿತು. ರಸ್ತೆಯಲ್ಲಿ ಸಂಗೀತ ಹಚ್ಚಿಕೊಂಡು ರಾತ್ರಿಯೆಲ್ಲ ಕುಡಿದು ಕುಣಿಯುವುದು(ಕೆಲವೊಮ್ಮೆ ಮಸೀದಿಯ ಮುಂದೆಯೇ) ಈಗ ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಮೈಮರೆತು ಕುಡಿದು ತೂರಾಡುವವರಲ್ಲಿ ಅನಕ್ಷರಸ್ಥರಷ್ಟೇ ಅಲ್ಲ, ಅನಿವಾಸಿ ಭಾರತೀಯರ ಮತ್ತು ಶ್ರೀಮಂತರ ಮಕ್ಕಳೂ ಕೂಡ ಈ ಹುಚ್ಚಾಟದಲ್ಲಿ ಬಹುಸಂಖ್ಯೆಯಲ್ಲಿರುತ್ತಾರೆ. ಆದರೆ ಇವರಿಗೆಲ್ಲ ಬುದ್ಧಿ ಹೇಳುವುದಕ್ಕೆ ಮಾತ್ರ ನಮ್ಮ ಉಲೇಮಾಗಳು ಮುಂದಾಗುವುದಿಲ್ಲ.

ಶಬ್-ಎ-ಬಾರಾತ್‌ನ ರಾತ್ರಿಗಳಂದು ಮುಸ್ಲಿಂ ಹುಡುಗರು ರಸ್ತೆಯಲ್ಲೆಲ್ಲ ತಮ್ಮ ಬೈಕ್‌ಗಳನ್ನು ದೆವ್ವ ಹಿಡಿದವರಂತೆ ಓಡಿಸುತ್ತಾರೆ. ಇದು ನಿಜಕ್ಕೂ ಖಂಡನಾರ್ಹ. ಇನ್ನೂ ವಿಚಿತ್ರವೆಂದರೆ, ಯಾರನ್ನಾದರೂ ಸಮಾಧಿ ಮಾಡಲು ಒಯ್ಯುವ ವೇಳೆ ಅಥವಾ ಸ್ಮಶಾನದಿಂದ ಬರುವ ವೇಳೆಯಲ್ಲೂ ಇವರುಗಳು ತಮ್ಮ ಗಾಡಿಯ ಹಾರ್ನ್ ಹೊಡೆಯುತ್ತಾ, ಜೋರಾಗಿ ಚೀರುತ್ತಾ ಓಡಾಡುತ್ತಾರೆ. ಮಧ್ಯರಾತ್ರಿ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿಬಿಡುತ್ತಾರೆ. ಇಂಥ ಕೆಲಸಗಳು ಇಸ್ಲಾಂಗೆ ವಿರುದ್ಧವಾದವು, ಧರ್ಮವಿರೋಧಿಯಾದವು ಮತ್ತು ಹಿಂಸಾಚಾರಕ್ಕೆ ಮೂಲವಾಗಬಲ್ಲವು ಎನ್ನುವುದನ್ನು ನಾವು ನಮ್ಮ ಯುವಕರಿಗೆ ಹೇಳುವುದೇ ಇಲ್ಲ. ಮುಝಫರ್‌ನಗರದಲ್ಲಿ ಸರಿಯಾದ ಸಮಯದಲ್ಲಿ ಕ್ರಮ ತೆಗೆದುಕೊಳ್ಳಬಹುದಾದ ಶಕ್ತಿ ಮುಸ್ಲಿಂ ನಾಯಕರಿಗಿತ್ತು. ಆದರೆ ಪರಿಸ್ಥಿತಿ ಕೈ ಜಾರಿಹೋಗುವವರೆಗೂ ಸುಮ್ಮನಿದ್ದು, ಈಗ ಅಖಿಲೇಶ್ ಯಾದವ್‌ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಖಿಲೇಶ್‌ಗಿಂತ ಮಾಯಾವತಿ ಸರ್ಕಾರವೇ ಚೆನ್ನಾಗಿತ್ತು ಎಂದು ಬಡಬಡಿಸುತ್ತಿದ್ದಾರೆ. ಪ್ರಸಕ್ತ ಕೋಮು ಗಲಭೆಯಿಂದಾಗಿ ಮುಸ್ಲಿಂ ಮತ್ತು ಜಾಟ್ ಸಮುದಾಯದ ಮಧ್ಯೆ ಒಡಕು ಮೂಡಿದೆ. ಮುಸ್ಲಿಂ ನಾಯಕರು ಈಗಲಾದರೂ ಪ್ರಬುದ್ಧತೆ ತೋರಿಸದಿದ್ದರೆ ಪರಿಸ್ಥಿತಿ ಹೀಗೆ ಮುಂದುವರಿದು, ಮುಸ್ಲಿಂ ಮತ್ತು ಯಾದವ್‌ರ ಮಧ್ಯೆಯೂ ಒಡಕು ಮೂಡಲು ಶುರುವಾಗಬಹುದು.”

ಅವರ ಮಾತಲ್ಲೇ ನಿಜವಾದ ಸಮಸ್ಯೆ ಎಲ್ಲಿ ಅಡಗಿದೆ ಎಂಬುದು ತಿಳಿಯುತ್ತದೆ. ಅದನ್ನು ಮುಸ್ಲಿಂ ನಾಯಕತ್ವ ಅಷ್ಟೇ ಸಹೃದಯತೆಯಿಂದ, ಸಂಯಮದಿಂದ ಸ್ವೀಕರಿಸಿದರೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಇಲ್ಲವಾದರೆ ಮುಝಫರ್‌ನಗರಗಳಂಥ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಿರುತ್ತವೆ, ಅಲ್ಲವೆ?

57 Responses to “ಮುಝಫರ್‌ನಗರದಲ್ಲಿ ನಿಜಕ್ಕೂ ನಡೆದಿದ್ದೇನು?”

  1. manju gowda says:

    ಇದು ಸತ್ಯಕ್ಕೆ ಹಿಡಿದ ಕನ್ನಡಿ………………

  2. ashwath s naik says:

    Awesome sir……as u said hindus never act, they only react…thats true sir……

  3. Basavaraj s y says:

    you are right sir.our india becoming isalamic

  4. ramesh says:

    ನಮ್ಮವರೆ ನಮಗೆ ಮೋಸ ಮಾಡ್ತಾರೆ. ಇಬ್ಬರ ಜಗಳ ದಿಂದ ರಾಜಕೀಯದವರು ಮೂರನೇಯವರಾಗಿ ಲಾಭ ಮಾಡ್ತಾರೆ.

  5. rajesh j says:

    hindu janaru egaladaru jaati vyavaste annu bittu ondagabeku hagu namma henumakalla rakshane madabeku muslimmaru enadru namma hennumakkalige tondare madidare anthavaranna atyanta kruravagi himsegevolapadisi sayisabeku……

  6. shiva parasad says:

    yaake innu ee halada cong govn iddanna nodtha illa hindu sangatane galeke jagrutha vaaguvudilla

  7. prasanna says:

    ennadaru hindugalella ottagali ennadaru e muslimge support maduva pakshaglannu solisuvantha buddiyannu e janarige a devaru kodali…jai hind…