Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕಲೆಯೇ ಸಾಯಲು ಅದೇನು ಆತನ ಜತೆ ಹುಟ್ಟಿದ್ದಲ್ಲ!

ಕಲೆಯೇ ಸಾಯಲು ಅದೇನು ಆತನ ಜತೆ ಹುಟ್ಟಿದ್ದಲ್ಲ!

ಅವರು ಕುಸುರಿ ಕೆಲಸ ಬಿಟ್ಟು ಬಹಳ ಸರಳವಾಗಿ ಚಿತ್ರಿಸುತ್ತಾ ಹೋದರು. ಎಲ್ಲರಿಗಿಂತ ವಿಭಿನ್ನ ಎನಿಸುವಂತೆ ಚಿತ್ರಿಸಿದರು. ಏನೋ ಹೊಸತನ ನೀಡಿದರು. ಆ ಕಾರಣಕ್ಕಾಗಿಯೇ ಎಲ್ಲರ ಗಮನ ಸೆಳೆದರು. ಮಾಡರ್ನ್ ಆರ್ಟ್್ನ ಈ ಪರ್ವದಲ್ಲಿ ಇಂಡಿಯನ್ ಆರ್ಟ್್ಗೆ ವಿಶ್ವಮನ್ನಣೆ ತಂದು ಕೊಟ್ಟರು. ಭಾರತೀಯ ಕಲಾವಿದರ ಚಿತ್ರಗಳೂ ಲಕ್ಷಾಂತರ ರೂ.ಗಳಿಗೆ ಮಾರಾಟವಾಗಬಲ್ಲವು ಎಂಬುದನ್ನು ತೋರಿಸಿಕೊಟ್ಟರು. ಚಿತ್ರಗಳಿಗೆ ಬಣ್ಣಗಳಿಂದ ಜೀವ ತುಂಬಿದರು. ಆ ಬಣ್ಣಗಳಲ್ಲೇ ಭಾವನೆಯನ್ನು ವ್ಯಕ್ತಪಡಿಸಲು ಹೊರಟರು.

ಹಾಗಿದ್ದರೂ ಈ ದೇಶ, ಅದರ ನೆಲ, ಜಲ, ಕಣ ಕಣಗಳಲ್ಲೂ ದೈವತ್ವವನ್ನು ಕಾಣುವ, ಪೂಜಿಸುವ, ಮಾತೆಯೆಂದು ಆರಾಧಿಸುವ ಕೋಟ್ಯಂತರ ಜನರ ಭಾವನೆಗಳೇಕೆ ಅವರಿಗೆ ಅರ್ಥವಾಗಲಿಲ್ಲ?

ಒಬ್ಬ ಕಲಾವಿದನಾದ ಮಾತ್ರಕ್ಕೆ ವೋತಪ್ರೋತವಾಗಿ ಕುಂಚದಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದು ಸರಿಯೇ? ಆ ಭಾವನೆಗಳೂ “”Selective”  ಆಗಬೇಕಿತ್ತೆ? ಒಬ್ಬ ಮಹಾನ್ ಕಲಾವಿದನೆನಿಸಿಕೊಂಡವನ ಮನಸ್ಸೂ ಪಕ್ಷಪಾತಿಯಾಗಿ ಬಿಟ್ಟರೆ ಗತಿಯೇನು? ಹಾಗಿದ್ದೂ  Artistic freedom ಹೆಸರಿನಲ್ಲಿ ಅನ್ಯರ ಭಾವನೆಗಳಿಗೆ ಘಾಸಿಯುಂಟು ಮಾಡುವ ಕೆಲಸವನ್ನು ಸಮರ್ಥಿಸಿಕೊಳ್ಳಲು ಹೊರಟರೆ ಸಮಾಜ ಸುಮ್ಮನಾಗಿ ಬಿಡುತ್ತದೆಯೇ? ಅಂತಾರಾಷ್ಟ್ರೀಯ ಖ್ಯಾತಿಯ ಭಾರತೀಯ ಕಲಾವಿದ ಎಂ.ಎಫ್. ಹುಸೇನ್ ಲಂಡನ್್ನಲ್ಲಿ ಮರಣ ಹೊಂದಿರುವ ಈ ಸಮಯದಲ್ಲಿ ಇಂತಹ ಪ್ರಶ್ನೆಗಳು ಕಾಡುತ್ತಿವೆ. ಏಕಾಗಿ ಅವರು ಲಂಡನ್್ನಲ್ಲಿ ಸಾಯಬೇಕಾಯಿತು? ಏಕಾಗಿ ಕತಾರ್್ನ ಪ್ರಜೆಯಾಗಬೇಕಾಯಿತು? ಏಕಾಗಿ ಪಲಾಯನಗೈದ ವ್ಯಕ್ತಿಯಂತೆ ಬದುಕಬೇಕಾಯಿತು? ಏಕಾಗಿ ಕಾನೂನಿನ ದೃಷ್ಟಿಯಲ್ಲಿ ತಾವೊಬ್ಬ  Fugitive ಎನಿಸಿಕೊಳ್ಳಬೇಕಾಯಿತು? ಏಕಾಗಿ ಭಾರತವನ್ನು ತ್ಯಜಿಸಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿಕೊಂಡರು?

ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ಅವರು ವಿವರಿಸಿದಂತೆ ಕಲೆಯಲ್ಲಿ ಎರಡು ವಿಧಗಳಿವೆ.

1. ಭಾವನಾತ್ಮಕ ಕಲೆ

2. ಭಾವನಾತೀತ ಕಲೆ

ಈ ಭಾವನಾತೀತ ಕಲೆಗೆ ಅದರದ್ದೇ ಆದ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಭಾವನಾತ್ಮಕ ಕಲೆಗೆ, ಸಂಬಂಧಕ್ಕೆ ಚೌಕಟ್ಟಿದೆ. ಹಾಗಾಗಿ ಇಲ್ಲಿ ಮೂರು ಭಾಷೆಗಳಿವೆ. ಒಂದು ಕಥಾ ಭಾಷೆ, ಎರಡನೆಯದ್ದು ಚರಿತ್ರ ಭಾಷೆ, ಮೂರನೆಯದ್ದು ಕಾವ್ಯ ಭಾಷೆ. ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು ಚರಿತ್ರ ಭಾಷೆ, ಸ್ವಲ್ಪ ಸೇರಿಸಿ ಹೇಳುವುದು ಕಥಾ ಭಾಷೆ. ಇಲ್ಲದ್ದನ್ನು ಸೃಷ್ಟಿಸಿ ಹೇಳುವುದು ಕಾವ್ಯ ಭಾಷೆ.

ಅವರು…

I mean, ಮಕ್ಬೂಲ್ ಫಿದಾ ಹುಸೇನ್ ಕಾವ್ಯ ಭಾಷೆಯಲ್ಲಿ ಅನುಭವಿಸುತ್ತಾ ಭಾವನಾತೀತರಾಗಿ ಭಾವನಾತ್ಮಕ ಕಲೆಯನ್ನು ಏಕಾಗಿ ಚಿತ್ರಿಸಿದರು? ಅದರಿಂದ ಈ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟಾಗುತ್ತದೆ ಎಂಬುದರ ಅರಿವಿರಲಿಲ್ಲವೆ? ಎಡವುದಕ್ಕೂ, ಉದ್ದೇಶಪೂರ್ವಕವಾಗಿ ಚಿತ್ರಿಸುವುದಕ್ಕೂ ವ್ಯತ್ಯಾಸವಿದೆಯಲ್ಲವೆ? ಸೀತೆ, ಸರಸ್ವತಿ, ಲಕ್ಷ್ಮಿ, ಭಾರತಮಾತೆ, ಬ್ರಾಹ್ಮಣ ಹೀಗೆ ಒಂದರ ಹಿಂದೆ ಒಂದರಂತೆ ನಗ್ನ ಚಿತ್ರಗಳನ್ನು ಬರೆಯುತ್ತಾ ಹೋಗಿದ್ದೇಕೆ? ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದಾದರೆ ಅವರ ಅಭಿವ್ಯಕ್ತಿಯಲ್ಲೂ ಪಕ್ಷಪಾತ ತೋರಿದ್ದೇಕೆ? ಹಿಂದೂ ಧರ್ಮದ ದೇವತೆಗಳನ್ನು ಚಿತ್ರಿಸುವಾಗ ಕಾಣುವ ನಗ್ನತೆಯನ್ನು ಸ್ವಧರ್ಮ,  ಧರ್ಮೀಯರ ಚಿತ್ರಣಗಳಲ್ಲೇಕೆ ತೋರಲಿಲ್ಲ? ಒಂದು ವೇಳೆ, ಬೆತ್ತಲಾಗಿ, ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಇಸ್ಲಾಮ್್ನ ಪೂಜನೀಯರನ್ನೂ ಚಿತ್ರಿಸಿದ್ದರೆ ಮುಸ್ಲಿಮರು ಸುಮ್ಮನಾಗುತ್ತಿದ್ದರೆ? ಷರಿಯಾ ಕಾನೂನಿನಡಿ ಹುಸೇನ್್ರನ್ನು ಕಲ್ಲು ಹೊಡೆದು ಸಾಯಿಸದೇ ಬಿಡುತ್ತಿದ್ದರೆ?

ಇಷ್ಟಕ್ಕೂ “ಫ್ರೀಡಂ ಆಫ್ ಎಕ್ಸ್್ಪ್ರೆಷನ್್” ಅಂದರೆ ಏನು? ಯಾರು ಯಾರನ್ನ ಬೇಕಾದರೂ ಬೆತ್ತಲಾಗಿ ಚಿತ್ರಿಸುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೇ? ಈ ಹುಸೇನ್ ಅವರ ಕಣ್ಣಿಗೆ ಬರೀ ಹಿಂದೂ ದೇವ-ದೇವತೆಗಳೇ ಏಕೆ ನಗ್ನವಾಗಿ ಕಾಣುತ್ತಾರೆ? ಒಂದೆಡೆ ದುರ್ಗೆ ಹುಲಿಯೊಂದಿಗೆ ಸಂಭೋಗದಲ್ಲಿ ತೊಡಗಿರುವಂತೆ ಚಿತ್ರಿಸುವ ಹುಸೇನ್, ತಮ್ಮ ಪುತ್ರಿಯನ್ನು ಮಾತ್ರ ಮೈ ತುಂಬ ಬಟ್ಟೆಯೊಂದಿಗೆ ಚಿತ್ರಿಸಿದ್ದಾರೆ. ಭಾರತಮಾತೆಯನ್ನು ನಗ್ನವಾಗಿಸಿರುವ ಅವರು, ತಮ್ಮ ತಾಯಿ ಜುನೈಬ್ ಮೈಯನ್ನು ಬಟ್ಟೆಯಿಂದ ಮುಚ್ಚಿದ್ದಾರೆ! ವೇಷ- ಭೂಷಣಗಳಿಂದ ಅಲಂಕೃತನಾಗಿರುವ ಮುಸ್ಲಿಮ್ ರಾಜನ ಪಕ್ಕದಲ್ಲಿ ನಗ್ನ ಬ್ರಾಹ್ಮಣನ ಚಿತ್ರವಿದೆ. ದ್ರೌಪದಿ, ಸರಸ್ವತಿ, ಪಾರ್ವತಿ, ಸೀತೆಯರನ್ನು ನಗ್ನಗೊಳಿಸಿರುವ ಹುಸೇನ್, ಮುಸ್ಲಿಂ ಮಹಿಳೆ ಹಾಗೂ ಮದರ್ ಥೆರೇಸಾ ಅವರ ಮೈ ಮುಚ್ಚಿದ್ದಾರೆ!!

ಇಂತಹ ಇಬ್ಬಂದಿತನ ಬೇಕಿತ್ತೆ?

ಒಂದು ವೇಳೆ, ಬೆತ್ತಲೆ ಚಿತ್ರ ಬರೆಯುವುದೇ ಕಲೆ ಅನ್ನುವುದಾದರೆ, “ಫ್ರೀಡಂ ಆಫ್ ಎಕ್ಸ್್ಪ್ರೆಷನ್್” ನಡಿ ಅಂತಹ ಪರಧರ್ಮ, ಅವಹೇಳನವನ್ನೂ ಸಮರ್ಥಿಸಿಕೊಳ್ಳಬಹುದೇ ಆಗಿದ್ದರೆ ಹುಸೇನ್ ಅವರು ತಮ್ಮ ತಾಯಿ, ಮಗಳನ್ನೂ ಬೆತ್ತಲಾಗಿ ಕಲ್ಪಿಸಿಕೊಂಡು ಚಿತ್ರ ಬರೆಯಬಹುದಿತ್ತಲ್ಲವೆ?” ದುರ್ಗೆ ಬದಲು ತನ್ನ ತಾಯಿಯೇ ಹುಲಿಯ ಜತೆ ರತಿಕ್ರೀಡೆ ನಡೆಸುವಂತೆ ಏಕೆ ಚಿತ್ರಿಸಲಿಲ್ಲ? “ಫ್ರೀಡಂ ಆಫ್ ಎಕ್ಸ್್ಪ್ರೆಷನ್್” ಸೂತ್ರವನ್ನು ತಮ್ಮ ಕುಟುಂಬ ಹಾಗೂ ಸ್ವಧರ್ಮಕ್ಕೂ ಏಕೆ ಅನ್ವಯ ಮಾಡಿಕೊಳ್ಳಲಿಲ್ಲ? ಇಂತಹ ದ್ವಂದ್ವ ನಿಲುವಿನ ಹುಸೇನ್ ಅವರನ್ನು ಸಮರ್ಥಿಸಿಕೊಂಡಿದ್ದ ಶಶಿ ತರೂರ್, “ಖಜುರಾಹೋದಲ್ಲಿರುವುದು ಕಾಮಕ್ರೀಡೆಯ ಅಭಿವ್ಯಕ್ತಿಯೇ ಅಲ್ಲವೆ?” ಎಂದು ಪ್ರಶ್ನಿಸಿದ್ದರು. ಹೌದು, ಕಾಮಸೂತ್ರವನ್ನು ಜಗತ್ತಿಗೆ  ಕೊಟ್ಟವರು ನಾವೇ. ಖಜುರಾಹೋದಲ್ಲಿರುವ ಶಿಲ್ಪಕಲೆಗಳಲ್ಲಿ ಲೈಂಗಿಕ ಕ್ರಿಯೆಗಳ ಚಿತ್ರಣ ಇರುವುದೂ ದಿಟವೇ. ಆದರೆ ಈಗಿನ ವಿಜ್ಞಾನದಂತೆಯೇ ಆಗ ಶಿಲ್ಪ ಚಿತ್ರಗಳ ಮೂಲಕ ಲೈಂಗಿಕ ಕ್ರಿಯೆಯನ್ನು ತೋರಿಸಿದ್ದಾರಷ್ಟೇ. ಹಾಗೆ ತೋರಿಸುವುದಕ್ಕೂ ಅವುಗಳಿಗೆ ಸೀತೆ, ಸರಸ್ವತಿಯರ ಹೆಸರು ಕೊಟ್ಟು ವಿವರಿಸುವುದಕ್ಕೂ ವ್ಯತ್ಯಾಸವಿದೆ. ಅಷ್ಟಕ್ಕೂ ಒಂದು ಹುಡುಗಿಯನ್ನು ನಗ್ನವಾಗಿ ಕಲ್ಪಿಸಿಕೊಳ್ಳುವುದಕ್ಕೂ ಅದೇ ಸ್ಥಾನದಲ್ಲಿ ಸ್ವಂತ ತಾಯಿ, ತಂಗಿ, ಮಗಳನ್ನು ಕಲ್ಪಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆಯಲ್ಲವೆ? ಮಿಗಿಲಾಗಿ ಸೀತೆ, ಸರಸ್ವತಿ, ಲಕ್ಷ್ಮೀ, ದುರ್ಗೆಯರಂತಹ ಪೂಜನೀಯರನ್ನು ಯಾವ ದೇವಸ್ಥಾನದಲ್ಲಿ ಅಶ್ಲೀಲವಾಗಿ ತೋರಿಸಿದ್ದಾರೆಯೇ ಹೇಳಿ?

ಏಕೆ ಇಂತಹ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಬೇಕಾಗಿದೆಯೆಂದರೆ ಧರ್ಮ, ದೇಶಾಭಿಮಾನದ ವಿಷಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಡ್ಡ ತರಲು ಸಾಧ್ಯವಿಲ್ಲ. ನೀವೇ ಹೇಳಿ, ಯಾರಾದರೂ ತ್ರಿವರ್ಣ ಧ್ವಜವನ್ನು ಸುಡುತ್ತಿರುವುದು ಕಂಡರೆ ನಿಮ್ಮ ಮನಸ್ಸಿಗೆ ನೋವಾಗಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಸಿಡಿದೇಳುತ್ತೀರೋ ಅಥವಾ ಸುಟ್ಟಿದ್ದು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯನ್ನಷ್ಟೇ ಅಂತ ಸುಮ್ಮನಾಗುತ್ತೀರೋ? “ರಾಷ್ಟ್ರಗೀತೆಯನ್ನು ಹಾಡುವ ಬದಲು ವಾದ್ಯ ಸಂಗೀತವನ್ನು ಆಲಿಸೋಣ” ಎಂದ ನಾರಾಯಣಮೂರ್ತಿಯವರ ವಿರುದ್ಧವೇ ಕೇಸು ಹಾಕಿದವರು ನಾವು. ಏಕೆಂದರೆ ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಯಾರಾದರೂ ಅಗೌರವ, ಅಸಡ್ಡೆ ತೋರಿದರೆ ನಮ್ಮ ಮನಸ್ಸಿಗೆ ನೋವಾಗುವುದು ಮಾತ್ರವಲ್ಲ, ರೋಷ ಉಕ್ಕಿ ಬರುತ್ತದೆ. ನಮ್ಮ ಪಾಲಿಗೆ ತ್ರಿವರ್ಣ ಧ್ವಜವೆಂದರೆ ಸಾಂಕೇತಿಕ ಮಹತ್ವ ಹೊಂದಿರುವ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲ. ಅದರಲ್ಲಿ ಭಾವನಾತ್ಮಕ ಸಂಬಂಧವಿದೆ. ತಾಯಿಯ ಜತೆಯೂ ಅಂತಹದ್ದೇ ಸಂಬಂಧವಿರುತ್ತದೆ. ಹಾಗಾಗಿಯೇ ತಾಯಿಗೆ ಅವಮಾನ ಮಾಡಿದರೆ ಅದನ್ನು ಸಹಿಸಲು ನಮ್ಮಿಂದಾಗುವುದಿಲ್ಲ. ಹುಸೇನ್ ಅವರಂಥವರಿಗೆ ಮಾತ್ರ ತಾಯಿಗೂ ಹೆಂಡತಿಗೂ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಅಕಸ್ಮಾತ್ ಗೊತ್ತಿದ್ದರೂ ತನ್ನ ತಾಯಿಯ ಮೈಯನ್ನು ಬಟ್ಟೆಯಿಂದ ಮುಚ್ಚಿ, ಪರರ ತಾಯಿಯನ್ನು ನಗ್ನವಾಗಿ ಚಿತ್ರಿಸುತ್ತಾರೆ. ಎಂ.ಎಫ್ ಹುಸೇನ್ ಎಂದ ಕೂಡಲೇ ನಮಗೆ ಅವರ ರೇಖೆಗಳಿಗಿಂತ ಧಾರ್ಮಿಕ ಭಾವನೆಗಳಿಗೆ ಮಾಡಿದ ಘಾಸಿಯೇ ದೊಡ್ಡದಾಗಿ ಕಾಣಲು ಈ ಧೋರಣೆಯೇ ಕಾರಣವಲ್ಲವೆ?

ಅದಿರಲಿ, ಆರ್ಟ್್ಗೂ ಪೋರ್ನೋಗ್ರಫಿಗೂ ವ್ಯತ್ಯಾಸವೇ ಇಲ್ಲವೆ? ಎಂ.ಎಫ್. ಹುಸೇನ್ ಅವರ ವಿರುದ್ಧ ದೇಶಾದ್ಯಂತ ಸುಮಾರು 1250 ಪೊಲೀಸ್ ದೂರುಗಳು ದಾಖಲಾಗಿದ್ದವು. ನ್ಯಾಯಾಲಯಗಳಲ್ಲಿ 7 ಮೊಕದ್ದಮೆಗಳನ್ನು ಹೂಡಲಾಗಿದೆ. ಭಾರತೀಯ ದಂಡಸಂಹಿತೆ (ಐಪಿಸಿ) ಯ 153 (ಎ), 295, 295 (ಎ) ಪ್ರಕಾರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದ ಹುಸೇನ್ ಅವರ ಕೃತ್ಯ ಶಿಕ್ಷಾರ್ಹ ಮಾತ್ರವಲ್ಲ ಕ್ರಿಮಿನಲ್ ಅಪರಾಧ. ಹಾಗಾಗಿಯೇ ಹರಿದ್ವಾರದ ನ್ಯಾಯಾಲಯ ಹುಸೇನ್ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಈ ವಾರಂಟ್ ನಂತರ ಭೀತಿಗೊಂಡ ಹುಸೇನ್ ದೇಶದಿಂದಲೇ ಪಲಾಯನ ಮಾಡಿದ್ದರು.

ಕಲೆಯೆಂಬುದು ಮನುಷ್ಯನನ್ನು ಅರಳಿಸಬೇಕು, ಕೆರಳಿಸುವುದಲ್ಲ!

ಎಂ.ಎಫ್. ಹುಸೇನ್್ರ ಪೇಟಿಂಗ್್ಗಳು ಮಿಲಿಯನೇರ್, ಬಿಲಿಯನೇರ್್ಗಳ ಡ್ರಾಯಿಂಗ್ ರೂಮ್್ಗಳ ಗೋಡೆಯನ್ನು ಆಕ್ರಮಿಸಿದ ಮಾತ್ರಕ್ಕೆ ಅವರು ದೊಡ್ಡ ಕಲಾವಿದ, ಕಲಾಕ್ಷೇತ್ರದ ಯುಗ ಪುರುಷನಾಗುವುದಿಲ್ಲ. ಇಷ್ಟಕ್ಕೂ ಮಾಡರ್ನ್ ಆರ್ಟ್ ಎಂದು ಬಾಯಿ ಚಪ್ಪರಿಸುವವರು ಎಲೀಟ್ ವರ್ಗ ಮಾತ್ರ. ಅವು ಶ್ರೀಮಂತರ ಖಯಾಲಿಗಳಷ್ಟೇ. ಹಾಗಿರುವಾಗ ಹುಸೇನ್ ಅಂತ್ಯದೊಂದಿಗೆ ಎಲ್ಲಾ ಮುಗಿದು ಹೋಯಿತೆಂಬಂತೆ ಅಲವತ್ತುಕೊಳ್ಳುತ್ತಿರುವುದರಲ್ಲಿ, ಉತ್ಪ್ರೇಕ್ಷೆಯಿಂದ ಮಾತನಾಡುವುದರಲ್ಲಿ ಅರ್ಥವಿಲ್ಲ. ಕಲೆಯೇನೂ ಎಂ.ಎಫ್. ಜತೆ ಸಾಯುವುದಿಲ್ಲ. ಏಕೆಂದರೆ ಅದೇನು ಅವರ ಜತೆ ಹುಟ್ಟಿದ್ದಲ್ಲ. ಕಲೆಯ ಮೂಲವಿರುವುದು ಹುಸೇನ್್ರಲ್ಲಲ್ಲ. ಇವತ್ತಿಗೂ ಯಾವುದೋ ಒಂದು ಕುಗ್ರಾಮದ ಮನೆಯೊಂದರ ಗೋಡೆಯನ್ನು ಅಲಂಕರಿಸಿರುವುದು ರಾಜಾ ರವಿವರ್ಮನ ಲಕ್ಷ್ಮಿ, ಶಾರದೆಯೇ ಹೊರತು ಎಂ.ಎಫ್. ಹುಸೇನರ ದುಬಾರಿ ಕುದುರೆ ಚಿತ್ರಗಳಲ್ಲ. ಜತಗೆ ಅವನೀಂದ್ರನಾಥ್ ಟಾಗೋರ್, ಜಾಮಿನಿ ರಾಯ್, ನಂದಲಾಲ್ ಬೋಸ್್ರಂತಹ ಅಪ್ರತಿಮ ಕಲಾವಿದರು ಭರತ ಖಂಡದಲ್ಲಿ ಜನ್ಮವೆತ್ತಿ ಹೋಗಿದ್ದಾರೆ.

ಹುಸೇನ್ ಬಹುದೊಡ್ಡ ಕಲಾವಿದ, ಆತನ ಮರಣ ಭಾರತಕ್ಕೆ ಒಂದು ದೊಡ್ಡ ನಷ್ಟ ಎಂದು ಪದಕೋಶದಲ್ಲಿರುವ ಎಲ್ಲ ವಿಶೇಷಣಗಳನ್ನು ಬಳಸಿ ಕೆಲವರು ಹೊಗಳಿದ್ದಾರೆ. ಆದರೆ, ಆತನ ಹೆಸರು ಕೇಳಿದರೆ ಕಣ್ಣಮುಂದೆ ಬರುವ ಒಂದೇ ಒಂದು ಚಿತ್ರವನ್ನು ಹೇಳಿ ನೋಡೋಣ?!

ಇನ್ನು ಮಾಡರ್ನ್ ಆರ್ಟ್ ವಿಷಯಕ್ಕೆ ಬಂದರೂ ಹುಸೇನ್್ಗಿಂತ ಮೊದಲೇ ಅಮೃತಾ ಶೇರ್್ಗಿಲ್, ಕೆ.ಕೆ. ಹೆಬ್ಬಾರ್ ಭಾರತಕ್ಕೆ ವಿಶ್ವ ಮನ್ನಣೆ   ತಂದುಕೊಟ್ಟಿ ದ್ದರು.  ಬಾಲ್ಯದಲ್ಲೇ ನಮ್ಮಲ್ಲಿ ಉನ್ನತ ಮೌಲ್ಯಗಳನ್ನು ತುಂಬುವ ಮಾಧ್ಯಮವೆಂದರೆ ನಮ್ಮಲ್ಲಿನ ರಾಮಾ ಯಣ, ಮಹಾಭಾರತ ಹಾಗೂ ನೀತಿಕತೆಗಳೇ. ಇಲ್ಲಿನ ಪಾತ್ರಗಳಿಗೆಲ್ಲ ಬಣ್ಣ ತುಂಬಿ ಅಮರ ಚಿತ್ರಕತೆಯಾಗಿಸಿ ಚಿಕ್ಕಂದಿನಲ್ಲೇ ನಮಗರಿವಿಲ್ಲದಂತೆ ನಮ್ಮ ಮನ ಅರಳಿಸಿದ ಡಾ. ಎಸ್.ಎಂ. ಪಂಡಿತ್ ಅವರಂಥ ಚಿತ್ರಕಾರರನ್ನು ನಾವು ಅನವರತ ನೆನಪಿಸಿಕೊಳ್ಳಬೇಕು. ಮೇಲ್ಮಧ್ಯಮವರ್ಗ ಹಾಗೂ ಆಂಗ್ಲ ಮಾಧ್ಯಮದ ಒಂದು ಚಿಕ್ಕ ಗುಂಪು ಹುಸೇನ್ ಅವರನ್ನು ಭಾರತದ ಪಿಕಾಸೋ ಎಂದು ಎಷ್ಟೇ ಹೊಗಳಿದರೂ ಆತ ಭಾರತೀಯ ಎನಿಸಲಾರ. ಭಾರತೀಯ ಮನಸ್ಸುಗಳಿಗೆ ಆತ ನಮ್ಮ ಚಿತ್ರ ಪರಂಪರೆಯ ಒಂದು “ಕಪ್ಪುಕಲೆ’ ಮಾತ್ರ.

ಹುಸೇನ್ ತಮ್ಮ ಕೊನೆ ಕಾಲವನ್ನು ತಾಯ್ನಾಡಲ್ಲಿ ಕಳೆಯಲಾಗಲಿಲ್ಲವಲ್ಲಾ, ಅವರ ಅಂತ್ಯ ಸಂಸ್ಕಾರ ಈ ಮಣ್ಣಿನಲ್ಲಾಗಲಿಲ್ಲವಲ್ಲಾ.. ಭಾರತಕ್ಕೆ ಇದೊಂದು ಕಪ್ಪು ಚುಕ್ಕೆ ಎಂದು ಸಮಕಾಲೀನ ಕಲಾವಿದರಾದ ಕಿಶನ್ ಖನ್ನಾ, ಆಂಜೋಲಿ ಇಳಾ ಮೆನನ್, ಯುವಕಲಾವಿದ ಜಿತಿಶ್ ಕಲ್ಲಟ್ ಮುಂತಾದವರು ಕಣ್ಣೀರು ಸುರಿಸಿದ್ದಾರೆ.  ಆದರೆ ಅಂತಹ ಪರಿಸ್ಥಿತಿ ಏಕಾಗಿ ಸೃಷ್ಠಿಯಾಯಿತು?ಈ ದೇಶದ ಕಾನೂನಿಗೆ ಹೆದರಿ, ಕೋರ್ಟ್ ಮುಂದೆ ಹಾಜರಾಗದೆ ಪಲಾಯನ ಮಾಡಿದ, ಯಾವ ಭೂಮಿಯನ್ನು ಭಾರತಮಾತೆ ಎಂದು ಆರಾಧಿಸುತ್ತೇವೋ ಅದನ್ನು ನಗ್ನವಾಗಿ, ಅಶ್ಲೀಲವಾಗಿ ಚಿತ್ರಿಸಿದ ವ್ಯಕ್ತಿಗೆ ಈ ನೆಲದ ಮೇಲೆ ಯಾವ ಪ್ರೀತಿ ಇದ್ದೀತು?

ಇರಲಿ, ಸತ್ತ ಮೇಲೂ ಶಪಿಸುವ ಸಂಸ್ಕೃತಿ ನಮ್ಮ ಭಾರತೀಯರದ್ದಲ್ಲ. May his soul rest in peace “forever”!

71 Responses to “ಕಲೆಯೇ ಸಾಯಲು ಅದೇನು ಆತನ ಜತೆ ಹುಟ್ಟಿದ್ದಲ್ಲ!”

 1. Ajith says:

  Read in KP yesterday 🙂
  For the sake of “Vote Bank” politicians can bear and will support what ever is said against our country and hinduism.
  Pratap, Pls write on Raul Vinci.

 2. Narahari Jois says:

  Quite wonderful article on MFH….. am waiting for black money article……

 3. Hi Pratap,

  Excellent article and true to the core indeed.

  Thanks and Warm Regards,
  Krishna
  ( http://thatzkrish.googlepages.com )

 4. allappa says:

  i already told u he don know t value of his wife, mother,sister n daughter dis bled y now not belongs to an Indian let it go….

 5. Harish Nayak A says:

  Yes you are 100% right Pratap.. He was a Psycho, sick.. He was not an artist but just a business person…
  As you told rightly..not a single picture comes to my mind..as it comes infront my eyes..when you talk about Ravivarma..

 6. manju says:

  Nice article sir ……

 7. pramod says:

  agree wid u prathap.

 8. VG says:

  ಒಂದು ಕೆಟ್ಟ ಹುಳು ಸತ್ತಿತು.

 9. Vinay says:

  Wah wah! I was waiting for an article like this! Nowhere in our media has this face of M F Hussain been shown after his death! All of them were just praising him and describing how narrow minded we Indians were. It was so disgusting to read the newspapers and see the news channels glorifying this religious bigot! I hope that at least the Kannada readers get to know what MF really is by your article. Thanks again for writing it!

 10. Dr Manjunatha P M says:

  ಹಿ೦ದೂ ದೇವತೆಗಳ ಚಿತ್ರಗಳನ್ನು ವಿಚಿತ್ರ ವಾಗಿ ಬಿಡಿಸಿ..ಕೋಟ್ಯಾ೦ತರ ಹಿ೦ದುಗಳ ಭಾವನೆಗಳನ್ನು ಘಾಸಿಗೊಳೆಸಿದ್ದ
  ಎಮ್ ಎಫ಼್ ಹುಸೇನ್…..ನಿಧನರಾಗಿದ್ದಾರೆ ಎ೦ದಾಕ್ಷಣ ಅವರ ವಿಕೃತಿಗಳೆಲ್ಲಾ ಮರೆತು ಭಾರತದ ಪಿಕಾಸೊ,ಹೆಸರಾ೦ತ ಕಲಾಕಾರ,ಭಾರತ ಕ೦ಡ ಅಪರೂಪದ ವ್ಯಕ್ತಿತ್ವ ಅ೦ತೆಲ್ಲಾ ಹೊಗಳುವ ಈ ರಾಜಕಾರಣಿಗಳು ಮತ್ತೊಮ್ಮೆ ಯುವ ಪೀಳಿಗೆಯನ್ನು ಎಮ್ ಎಫ಼್ ಹುಸೇನ್ ರ ದಾರಿಯನ್ನು ಅನುಸರಿಸುವ೦ತೆ ಕರೆಕೊಡುವ ಮಟ್ಟಿಗೆ ಹೊಗಳುತಿದ್ದಾರೆ….ಅದಕ್ಕಾಗಿ ಆ ಮನುಷ್ಯನ ನಿಜ ಬಣ್ಣವನ್ನು ಮತ್ತೊಮ್ಮೆ ಕಠೋರ ಶಬ್ಧಗಳಿ೦ದ ’ ಜಗತ್ತಿ ’ ನೆದರು ’ ಬೆತ್ತಲೆ ’ ಗೊಳಿಸಿ ಅವರು ಆತ್ಮಕ್ಕೆ ಶಾ೦ತಿ ಕೋರಿದ ರೀತಿ ಚನ್ನಾಗಿತ್ತು ಪ್ರತಾಪ್…….

 11. Manjunath Hegde says:

  namma bhumiya mele , murka Husenana sutta budiyu bilabaaradu …………..

 12. Sushil says:

  Enu helalla.. Ella chennagi heLi eLe eLeyagi bidisittiddiri pratap. DhanyavadagaLu..

 13. Ravi Kumar G says:

  Very nicely expressed Mr. Simha. I share similar thoughts. Like what you mentioned in last line of your article, we should forget the one whose account has been settled by nature. May his soul rest in peace!!

 14. Harisha B says:

  Howdu sir yavathu namma desha kshmisuthe, yellannu kooda, M F Hussain kooda horathagilla!!!!!! Yakandre anthya samskara namma deshadalli madi yendu namma nayakaru kelikondiddaru alva????????????

 15. brijesh says:

  hussain sucks…….

 16. Venugopal says:

  Really superb article..

 17. Vijay says:

  Hindugala Bhavanegalige bele kodadvanige hindustanadlli sayalu yogyathe illa alva prathap anna…

 18. Ravi says:

  What replly u want dear ?? u have said all that is to be said, finally u have wished ” may his soul ( i doubt if he ever had one, whn ever i saw his photo or video i always saw a bare footed shaithan{thanks to Mr Hussain for being bare foot, may be he was trying to show him self as human being not as shaithan hence was always bare foot – u know navella kathegalalli keliddeevi, bootha pishachi gala kalu himmuka vagiruthe antha!) rest in peace FOREVER !!

 19. Girish says:

  Written in a very bad taste. If you are great artist, then write something critical on his paitings. Please stop this dirty lobbying

 20. Kiran Patil says:

  Superb article Pratap. My kind request to you is translate these articles to english, So that people who dont know Kannada can also read your beautiful articles.

 21. Sunaath says:

  ಹುಸೇನರಿಗಿಂತ ದೊಡ್ಡ ಕಲಾವಿದರು ನಮ್ಮಲ್ಲಿದ್ದಾರೆ. ಹುಸೇನರ ಸ್ಪೆಶಾಲಿಟಿ ಎಂದರೆ ವಿಕೃತ ಮನಸ್ಸು! ಭಾರತವನ್ನು ಬಿಟ್ಟುಹೋಗಿದ್ದಕ್ಕೆ ಪರಿತಪಿಸುವ ಅನೇಕ ‘ಗಣ್ಯ ವ್ಯಕ್ತಿ’ಗಳು ನಮ್ಮಲ್ಲಿದ್ದಾರೆ. ದಾವೂದ ಇಬ್ರಾಹಿಮ್ ಸಹ ಭಾರತಕ್ಕೆ ಬರಲು ಪರಿತಪಿಸುತ್ತಿರಬಹುದು. ಹುಸೇನರು ಭಾರತಕ್ಕೆ ಬಂದು ಇಲ್ಲಿಯ ನ್ಯಾಯಾಲಯದಲ್ಲಿ ನ್ಯಾಯ ಪಡೆಯಬಹುದಿತ್ತು.

 22. Vijay says:

  Hindugala bhavanegalige bele kodadhavanige hindustanadalli sayalu kooda yogyathe illa alva prathapanna…

 23. ಆತನಲ್ಲಿ ನಿಜಕ್ಕೂ ಕಲೆ ಇದ್ದಿತು..
  ಆತ ಮತ್ತೊಮ್ಮೆ ಬರಲಿ, ಸದಭಿರುಚಿಯ ಚಿತ್ರಗಳನ್ನು ನೀಡಿ ತನ್ನ ಪಾಪದ ಭಾರವನ್ನು ಕೊಂಚ ಕಡಿಮೆಗೊಳಿಸಿಕೊಳ್ಳಲಿ..

 24. Devaraj says:

  Yes.. May his soul RIP:-)

 25. shivanna says:

  ಕಲಾನಾಯಕ ಹೋಗಿ ಕಾಳನಾಯಕ ಅಂತ ಬಿಂಬಿಸಿಕೊಂದ್ದದ್ದು ತುಂಬಾ ವಿಷಾದನೀಯ ,ಕಲೆಯು ನೋಡುಗರನ್ನ ಸೆಳೆಯದಿದ್ದರು ಸರಿ ,ಆದರೆ ನೋವಂತು ಕೊಡಬಾರದು.

 26. shubhananda says:

  What a line brother..

  “ಇವತ್ತಿಗೂ ಯಾವುದೋ ಒಂದು ಕುಗ್ರಾಮದ ಮನೆಯೊಂದರ ಗೋಡೆಯನ್ನು ಅಲಂಕರಿಸಿರುವುದು ರಾಜಾ ರವಿವರ್ಮನ ಲಕ್ಷ್ಮಿ, ಶಾರದೆಯೇ ಹೊರತು ಎಂ.ಎಫ್. ಹುಸೇನರ ದುಬಾರಿ ಕುದುರೆ ಚಿತ್ರಗಳಲ್ಲ”

  Raja Ravi Varma is Ultimate.

  I will bet more than 95% of the people in India have seen, admired and/or will have a copy of Raja Ravi Varma’s Art.

  And this man (MFH) has hurt all the Indians with his so called Art.

 27. Kavitha C S Achar says:

  ಹುಸೇನರಿಗಿಂತ ದೊಡ್ಡ ಕಲಾವಿದರು ನಮ್ಮಲ್ಲಿದ್ದಾರೆ. ಹುಸೇನರ ಸ್ಪೆಶಾಲಿಟಿ ಎಂದರೆ ವಿಕೃತ ಮನಸ್ಸು!

 28. Kavitha C S Achar says:

  Article is good. But we want your articles from you for a person who is worth for it, not like these bullshit people. I am waiting for black money article.. pratap

 29. ಏ.ಜಿ.ಶೇಷಾದ್ರಿ says:

  ಎಂದಿನಂತೆಯೇ ಇದೂ ಉತ್ತಮ ಲೇಖನ 🙂
  ಸ್ವಜಾತಿ -ಸ್ವಧರ್ಮ -ಸ್ವದೇಶ -ಸ್ವಸಂಸ್ಕೃತಿಗಳನ್ನ ಹೀಗೆಳೆಯುತ್ತಾ ಬದುಕುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ.ಜ್ಞಾನಕ್ಕೆ ಸಿಗಬೇಕಾದ ಪ್ರಶಸ್ತಿಯನ್ನು ಪೀಠಕ್ಕೆ ತಗುಲಿ ಹಾಕಿಸಿಕೊಂಡವರು ಹೇಳಿಬಿಟ್ಟರಂತೂ ಮುಗಿದೇಹೋಯಿತು ತಾ ಮುಂದು ನೀ ಮುಂದು ಎಂದು ಸಮರ್ಥಿಸಿಕೊಳ್ಳಲು ಬರುವ ಕುರಿಗಳ ಹಿಂಡಿಗೇನು ಬರವಿಲ್ಲ .ಜನಪ್ರಿಯತೆಯ ಉತ್ತುಂಗಕ್ಕೇರಿದ ನಂತರವೂ ಸಾರ್ವಜನಿಕ ಬದುಕಲ್ಲೂ ಪಾರದರ್ಶಕ ಸ್ವಚ್ಚತೆ ಕಾಪಾಡಿಕೊಳ್ಳಲು ಕೆಲವರಿಗೆ ಮಾತ್ರ ಸಾದ್ಯ.ಚಂದಮಾಮ ಮಾಲಿಕೆಯಲ್ಲಿ ಮೂಡಿ ಬರುತಿದ್ದ ಚಿತ್ರಗಳು ಕಟ್ಟಿ ಕೊಡುತಿದ್ದ ಭಾವ ಸ್ಪಂದನವನ್ನು ಯಾರು ತಾನೇ ಮರೆಯಲು ಸಾದ್ಯ. ಹಸ್ತಕ್ಕೆ ಬಣ್ಣ ಮೆತ್ತಿಕೊಂಡು ಖಾಲಿ ಹಾಳೆಯ ಮೇಲೆ ಒತ್ತಿ ” ಪಂಚ ಭೂತಗಳು ” ಎಂದು ಶೀರ್ಷಿಕೆ ಕೊಟ್ಟರೆ ಬೆರಳುಗಳ ನಡುವೆ ಚಿತ್ರ ಬರೆದವನ ಭೂತ ಹುಡುಕ ಬೇಕಷ್ಟೆ .

  ಫೇಸ್ ಬುಕ್ನಲ್ಲಿ ನೋಡಿದ್ದು 🙂 – ಹುಡುಗಿಯೊಬ್ಬಳು ಹುಸೇನ್ ರ ಚಿತ್ರ ನೋಡಿ ” ಓ ಕುದುರೆ ನೀರು ಕುಡಿಯುತ್ತಿದೆ ಎಂದಳಂತೆ. ಅಲ್ಲಿಯೇ ಇದ್ದ ನವ್ಯ ಕಲೆಯ ವಿದ್ಯಾರ್ಥಿ , ಹೇ ಅದು ಹುಸೇನರ ಚಿತ್ರ ನಿನಗೆ ಕುದುರೆ – ನೀರು ಅಷ್ಟೇ ಕಾಣುತ್ತಿದೆಯೇ ಎಂದು ಕೋಪದಿಂದ ಕೂಗಾಡಿದನಂತ್ತೆ :))
  ಪಾಪ ಉದ್ದನೆಯ ಖಾಲಿ ಮ್ಯಾಟ್ ಮೇಲೆ ಎಂ. ಎಫ್. ಹುಸೇನ್ ಎಂದು ಸಹಿ ಹಾಕಿದರೂ ಅದರಲ್ಲಿ ಜಗತ್ತಿನ ಎಲ್ಲಾ ಅಪರೂಪ ಚಿತ್ರಗಳನ್ನೂ ಕಾಣಬೇಕು ಎಂಬ ಅಂಧಾಭಿಮಾನದ ನಿಯಮ ಅವಳಿಗೆ ಹೇಗೆ ತಿಳಿದಿರಬೇಕು!!!!

 30. aru says:

  superb article……luv u 🙂

 31. Prasad says:

  Thanks a lot pratap. You are representing a large number of Like minded people like me, who have anger in us, but dont have a media to express. But when i read ur article, feeling relieved. Thanks again.

  Regards
  Prasad

 32. uma says:

  ಸತ್ತ ಮೇಲೂ ಶಪಿಸುವ ಸಂಸ್ಕೃತಿ ನಮ್ಮ ಭಾರತೀಯರದ್ದಲ್ಲ. May his soul rest in peace “forever”! – Like that.

 33. vishu says:

  The Title is simply superb!! ಅದ್ ಹೇಗೆ ಹೊಳೀತು?! amazing. that itself recommands to read the article.

 34. Shreyas K V says:

  hi…
  nice article pratap

  please write article on youth’s job views, what society required.
  i.e, not only IT enggr,softwarw enggrs…..we need good lecturers,teachers, Agricultural research working,many things which strengthens the Indian society nd Economy

 35. Chakki says:

  thanks for writting abt him, want to know what is he atleast

 36. Pavan says:

  Spr.. i like tis article..
  may his soul RIP…

 37. vanaja gowda says:

  really very good article senior……wat ever may be d person he was…. May his soul rest in peace “forever”!……fantastic article…superb…

 38. Chethana says:

  You just expressed what every Indian would feel about him.

 39. jyothi says:

  Very good article.

 40. Vinay HS says:

  Realy Greart Mr .Pratap

 41. shrinivas shastri says:

  ur analysing abt m.f. husain is right and the way uhave presented the views also fine …… no dought he is done great mistake being hurt the hindu and the indian culture… yet he is good artist… so we do hate him and even love his style of painting eccept the mistake of hindu paintings

 42. k.v.shamanth says:

  his soul will not rest in peace because his shit hand will write the picture of nude picture of peace too

 43. sharath says:

  This is an superb article sir… am waiting for baba ramdev article for his thought about black money.

 44. Chiranjeevi says:

  Pratap,

  Please correct the word ಅವನೀಂದ್ರನಾಥ್,

 45. shan says:

  a very nice article, if u see ravivarmas paintings of gods and godess automatically nammalli daivika bhavane hutti biduttade, anthadannu virupa madida vikruta manassinava… avanannu hogalalu karanave illa.. toscold him multi million reasons are there.. thank u for the article

 46. sid says:

  tum apne man se achhe likhate ho

  ishiliye sabko sachhe lagate ho

  naam hai pratap simha

  kaam hi sani ko jagrut karna ,

  yese hi the Maharana pratap simha

  keep it up, god bess u .

 47. ramakrishna says:

  A very fine article. It should be published in all languages of India.

 48. prem says:

  super article

 49. siddaray and suresh says:

  gud bye m.f.husain…………..

 50. gud bye m.f.husain…………..