Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಪತ್ರಿಕೋದ್ಯಮದ ನೈತಿಕತೆಯ ‘ಬರ್ಖಾ’ಸ್ತುದಾರರು!

ಪತ್ರಿಕೋದ್ಯಮದ ನೈತಿಕತೆಯ ‘ಬರ್ಖಾ’ಸ್ತುದಾರರು!

PAWN is GONE!

ನವೆಂಬರ್ 15ರಂದು ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ಎ. ರಾಜಾ ರಾಜೀನಾಮೆ ನೀಡಿದ ಬಳಿಕ ಇಂಥದ್ದೊಂದು ಅರ್ಥಪೂರ್ಣ ಶೀರ್ಷಿಕೆಯಡಿ ಕವರ್ ಸ್ಟೋರಿ ಪ್ರಕಟಿಸಿದ ‘ಗವರ್ನೆನ್ಸ್ ನೌ’ ಮ್ಯಾಗಝಿನ್, “But will we get to know the real ‘rajas’ of telecom scam?” ಎಂಬ ಇನ್ನೂ ಗಮನಾರ್ಹ ಪ್ರಶ್ನೆಯನ್ನೆತ್ತಿತು. ಅದರ ಬೆನ್ನಲ್ಲೇ ‘ಓಪನ್ ಮ್ಯಾಗಝಿನ್’ನ ಮನು ಜೋಸೆಫ್ ಹಾಗೂ ‘ಔಟ್‌ಲುಕ್’ ಪತ್ರಿಕೆಯ ಸಂಪಾದಕರಾದ ಹೆಮ್ಮೆಯ ಕನ್ನಡಿಗ ಕೃಷ್ಣಪ್ರಸಾದ್ ತಮ್ಮ ವಾರಪತ್ರಿಕೆಗಳಲ್ಲಿ ಹೊರಹಾಕಿದ ಅಂಶಗಳು ಮಾಧ್ಯಮಗಳೇ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದವು! 2008-09ರಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ದೂರಸಂಪರ್ಕ ಖಾತೆ ಸಚಿವ ಎ. ರಾಜಾ ಸೇರಿದಂತೆ ಈ ದೇಶದ ಕೆಲವು ಪ್ರಭಾವಿ ವ್ಯಕ್ತಿಗಳ ಫೋನ್ ಕರೆಗಳನ್ನು ಗೌಪ್ಯವಾಗಿ ರೆಕಾರ್ಡ್ ಮಾಡಿತ್ತು. ಅದನ್ನು ಈ ಎರಡೂ ಮ್ಯಾಗಝಿನ್‌ಗಳು ಹಸಿಹಸಿಯಾಗಿ ತೆರೆದಿಟ್ಟಿವೆ. ಸುಮಾರು 30ಕ್ಕೂ ಹೆಚ್ಚು ಪತ್ರಕರ್ತರು ಅದರಲ್ಲಿದ್ದಾರೆ. ಅದರಲ್ಲೂ “ಪದ್ಮಶ್ರೀ” ‘ಬುರ್ಖಾ’, ಅಲ್ಲಲ್ಲ ಬರ್ಖಾ ದತ್ ಹಾಗೂ ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ಮಾಜಿ ಸಂಪಾದಕ ಹಾಗೂ ಹಾಲಿ ಸಂಪಾದಕೀಯ ಸಲಹೆಗಾರ-ಅಂಕಣಕಾರ ವೀರ್ ಸಾಂಘ್ವಿಯೆಂಬ ಪತ್ರಿಕೋದ್ಯಮದ ಮೇರು ತಾರೆಗಳು ಕಳಂಕಿತ ರಾಜಾ ಅವರನ್ನು ಟೆಲಿಕಾಂ ಮಿನಿಸ್ಟರ್ ಮಾಡಲು ನಡೆದ ಲಾಬಿಯಲ್ಲಿ ಹೇಗೆ ಭಾಗಿಯಾಗಿದ್ದರು ಎಂಬುದು ಖುಲ್ಲಂಖುಲ್ಲಾ ಆಗಿದೆ!! ರತನ್ ಟಾಟಾ ಹಾಗೂ ಮುಕೇಶ್ ಅಂಬಾನಿ ಪರ ಸಾರ್ವಜನಿಕ ಸಂಪರ್ಕಾಧಿಕಾರಿ ನೀರಾ ರಾಡಿಯಾ ಸುತ್ತ ಸುತ್ತಿರುವ ಈ ಹಗರಣ ಪತ್ರಿಕೋದ್ಯಮದ ರಾಡಿಯನ್ನು ಹೊರ ಹಾಕಿದೆ. ನಮ್ಮ ಭಾರತೀಯ ಪತ್ರಿಕೋದ್ಯಮ ಎಂತಹ ಸ್ಥಿತಿಗೆ ತಲುಪಿತು ಸ್ವಾಮಿ?

“The lobbyist-journalist-politician scandal has dynamited the Potemkin village that is Indian journalism. What has looked to us to be healthy and vigorous is, in fact, rotten!”

ಹಾಗಂತ ಅಮೆರಿಕದ ‘ದಿ ಡೈಲಿ ಬೀಸ್ಟ್’ ವೆಬ್‌ಸೈಟ್ ಭಾರತೀಯ ಪತ್ರಿಕೋದ್ಯಮವನ್ನೇ ಹೀಗಳೆದಿದೆ. ಇತ್ತ ‘ಟ್ವಿಟ್ಟರ್ ಡಾಟ್‌ಕಾಂ’ನೊಳಕ್ಕೆ ಒಮ್ಮೆ ಇಣುಕಿದರೆ ಬರ್ಖಾ ಹಾಗೂ ವೀರ್ ಸಾಂಘ್ವಿಯವರನ್ನು ಬೀದಿ ನಾಯಿಗಳಂತೆ ಅಟ್ಟಾಡಿಸಿಕೊಂಡು ಹೊಡೆಯುತ್ತಿರುವುದು ಕಾಣುತ್ತದೆ. ಪ್ರಸ್ತುತ ಕೇಳಿಬಂದಿರುವ ಆರೋಪದ ಬಗ್ಗೆ ಪ್ರಶ್ನೆ ಕೇಳಿದರೆ ಬರ್ಖಾ ಅವರಿಂದ ಬರೀ ‘Smileys’ ಬರುತ್ತಿದ್ದನ್ನು ಕಂಡು ಕುಪಿತರಾದ ಜನ, ಆಕೆಯ Smileyಗಳನ್ನು 14 ವರ್ಷದ ಬಾಲಕಿ ರುಚಿಕಾ ಮೇಲೆ ಲೈಂಗಿಕ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣರಾದ ಹಾಗೂ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಹರಿಯಾಣಾದ ಮಾಜಿ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ.ಎಸ್. ರಾಥೋಡ್ ವಿಚಾರಣೆ ಸಲುವಾಗಿ ಕೋರ್ಟ್‌ಗೆ ಆಗಮಿಸುವಾಗ ಎದುರಾಗುವ ಮಾಧ್ಯಮಗಳಿಗೆ ಕೊಡುತ್ತಿದ್ದ ಲಜ್ಜೆಗೆಟ್ಟ ಸ್ಮೈಲ್‌ಗೆ ಹೋಲಿಸುತ್ತಿದ್ದಾರೆ! ಆಕೆ ಪ್ರತಿದಿನ ರಾತ್ರಿ ೯ ಗಂಟೆಗೆ ಎನ್‌ಡಿಟಿವಿಯಲ್ಲಿ ನಡೆಸಿ ಕೊಡುವ ‘The buck stops here’ ಕಾರ್ಯಕ್ರಮವನ್ನು “Bakhwas starts here” ಎಂದು ತಪರಾಕಿ ನೀಡುತ್ತಿದ್ದಾರೆ.

ಇಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದಾದರೂ ಏಕೆ?

ಮಂಗಳೂರಿನ ಪಬ್ ಗಲಾಟೆಯಾದಾಗ Are we a banana republic?  ಎಂದು ಗದ್ಗದಿತರಾಗಿ ಕೇಳುತ್ತಿದ್ದ ಬರ್ಖಾ ದತ್ ಇನ್ನು ಮುಂದೆ ಯಾವ ಮುಖ ಇಟ್ಟುಕೊಂಡು ನೈತಿಕತೆಯ ಪ್ರಶ್ನೆಗಳನ್ನು ಕೇಳುತ್ತಾರೆ? ಇಷ್ಟಾಗಿಯೂ ಕ್ಷಮೆಯಾಚಿಸುವ ಬದಲು ತನ್ನನ್ನು ಸಮರ್ಥಿಸಿಕೊಳ್ಳಲು ಮುಂದಾದರು ಬರ್ಖಾ ದತ್. ಆ ಸಲುವಾಗಿ ನವೆಂಬರ್ ೩೦ರಂದು ರಾತ್ರಿ 10 ಗಂಟೆಗೆ ಎನ್‌ಡಿಟಿವಿಯಲ್ಲಿ ಕಾರ್ಯಕ್ರಮವೊಂದು ಪ್ರಸಾರವಾಯಿತು. ಟೈಮ್ಸ್ ಆಫ್ ಇಂಡಿಯಾದ ಮಾಜಿ ಸಂಪಾದಕರಾದ ದಿಲೀಪ್ ಪಡ್‌ಗಾಂವ್‌ಕರ್, ಸಂಜಯ್ ಬಾರು, ಸ್ವಪನ್ ದಾಸ್‌ಗುಪ್ತಾ ಅವರನ್ನು ಒಳಗೊಂಡಿದ್ದ ಚರ್ಚಾ ಕಾರ್ಯಕ್ರಮಕ್ಕೆ ‘ಓಪನ್ ಮ್ಯಾಗಝಿನ್’ನ ಸಂಪಾದಕ ಮನು ಜೋಸೆಫ್ ಅವರನ್ನೂ ಆಹ್ವಾನಿಸಲಾಗಿತ್ತು. ಚರ್ಚೆಯ ಹೆಸರಿನಲ್ಲಿ ಖೆಡ್ಡಾಕ್ಕೆ ಕೆಡವಿ ಪೌರುಷ ಮೆರೆಯುವ ಬರ್ಖಾ ಅವರ ಹುನ್ನಾರವನ್ನು ಅರಿತ ಮನು ಜೋಸೆಫ್, ‘ನಾನು ಕಾರ್ಯಕ್ರಮಕ್ಕೆ ಬರಬೇಕಾದರೆ ಅದು ನೇರ ಪ್ರಸಾರವಾಗಿರಬೇಕು, ಯಾವುದಕ್ಕೂ ಕತ್ತರಿಹಾಕಬಾರದು’ ಎಂಬ ಪೂರ್ವ ಷರತ್ತು ಹಾಕಿದರು. ಅದಕ್ಕೆ ಒಪ್ಪಿಕೊಂಡ ಎನ್‌ಡಿಟಿವಿ, ಕಾರ್ಯಕ್ರಮದ ಆರಂಭದಲ್ಲಿಯೇ “This programme is UN-EDITED” ಎಂಬ ಸೂಚನೆಯನ್ನೂ ಹಾಕಿತು. ಆದರೆ “ಎ. ರಾಜಾ ಅವರನ್ನು  ಟೆಲಿಕಾಂ ಮಂತ್ರಿಯನ್ನಾಗಿ ಮಾಡುವಂತೆ ಕಾಂಗ್ರೆಸ್‌ನ ಮನವೊಲಿಸು ಎಂದು ನೀರಾ ರಾಡಿಯಾ ನಿನ್ನಲ್ಲೇ ಏಕೆ ಮನವಿ ಮಾಡಿಕೊಂಡಳು? ಅದರರ್ಥವೇನು? ಎಂಬ ಮನು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವ ಬದಲು ‘ನನ್ನ ಪ್ರತಿಕ್ರಿಯೆ ಪಡೆಯದೇ ಹೇಗೆ ಟೇಪ್‌ಗಳನ್ನು ಪ್ರಕಟ ಮಾಡಿದೆ?’ ಎಂಬ ನೈತಿಕ ಪ್ರಶ್ನೆಯನ್ನೇ ವೀಕ್ಷಕರಿಗೇ ಕಿರಿಕಿರಿಯಾಗುವಷ್ಟು ಬಾರಿ ಪುನರಾವರ್ತನೆ ಮಾಡಿದ ಬರ್ಖಾ ಜಾಣತನ ಮೆರೆಯಲು ಯತ್ನಿಸಿದರು. ನಾವಾಗಿದ್ದರೆ ಇಂತಹ raw material (ಕಚ್ಚಾ) ಅನ್ನು ಪ್ರಸಾರ ಮಾಡುತ್ತಿರಲಿಲ್ಲ ಎಂದು ತೇಪೆಹಾಕಲು ಯತ್ನಿಸಿದರು. ಹೀಗೆಲ್ಲಾ ಬೋಧನೆ ನೀಡಿದ ಎನ್‌ಡಿಟಿವಿ ಹಾಗೂ ಬರ್ಖಾ ದತ್ ಅವರಿಗೆ ತೆಹೆಲ್ಕಾ ಟೇಪ್‌ಗಳನ್ನು ಪ್ರಸಾರ ಮಾಡುವಾಗ ಅವು ಏಕೆ ಕಚ್ಚಾ ಎನಿಸಲಿಲ್ಲ? ಬಂಗಾರು ಲಕ್ಷ್ಮಣ್ 1 ಲಕ್ಷ ದೇಣಿಗೆ ಪಡೆಯುತ್ತಿದ್ದ ಟೇಪ್‌ಗಳು ಕಚ್ಚಾ ಆಗಿರಲಿಲ್ಲವೇ? ಮೊನ್ನೆ ಡಿಸೆಂಬರ್ 1ರಂದು ರಾತ್ರಿ 9 ಗಂಟೆಗೆ ‘The buck stops here’ ಕಾರ್ಯಕ್ರಮದಲ್ಲಿ ‘Wikileaks story’ ಮೇಲೆ ದೊಡ್ಡ ಚರ್ಚೆ ನಡೆಸಿಕೊಟ್ಟ ಬರ್ಖಾಗೆ ‘ವಿಕಿಲೀಕ್ಸ್’ ಕೂಡ ಸಾಬೀತಾಗಿಲ್ಲದ ಮಾಹಿತಿ ಎಂಬ ವಾಸ್ತವ ತಿಳಿದಿರಲಿಲ್ಲವೆ?

ಇನ್ನು ಬಹಳ ನಗು ತರುವ ಸಂಗತಿ ಗೊತ್ತೆ?!

ರಾಷ್ಟ್ರದ ಮುಂದೆ ನಿಜಬಣ್ಣ ಬಯಲಾಗಿದ್ದರೂ, “It was a innocent mistake. I was gullible, I may have been innocent, I made an error of judgement. I am sorry for that but that’s all, I’m not apologising for anything else” ಎಂದು ಬರ್ಖಾ ತಿಪ್ಪೆಸಾರಿಸಲು ಯತ್ನಿಸಿದರು. ಅಹಾ, ಎನ್‌ಡಿಟಿವಿಯ ಸಮೂಹ ಸಂಪಾದಕಿ, ಪದ್ಮಶ್ರೀ ಸಮ್ಮಾನಿತೆ ಅಮಾಯಕಿ ಅಂತೆ ನೋಡಿ?! ಆಕೆಯದ್ದು ಅರಿಯದೇ ಮಾಡಿದ ತಪ್ಪಂತೆ!! 2009ರಲ್ಲಿ ನೀರಾ ರಾಡಿಯಾ ಮಾಡಿದ ಕರೆಯ ಹಿಂದಿರುವ ಉದ್ದೇಶವನ್ನು ಸುದ್ದಿ ಮಾಡದೇ ಇದ್ದಿದ್ದು Error of judgement  ಎನ್ನುವುದಾದರೆ 2010ರಲ್ಲಿ ಎ. ರಾಜಾ ಹಗರಣ ಮತ್ತೆ ಬೆಳಕಿಗೆ ಬಂದಾಗ ಏಕೆ ಸುದ್ದಿ ಮಾಡಲಿಲ್ಲ? ರಾಡಿಯಾ ಟೇಪ್ ಪ್ರಕರಣ ಬೆಳಕಿಗೆ ಬಂದು ೩ ತಿಂಗಳಾಗುತ್ತಾ ಬಂದಿದ್ದರೂ ಎನ್‌ಡಿಟಿವಿ ಏಕೆ ಇದುವರೆಗೂ ಒಂದೇ ಒಂದು ಸಣ್ಣ ಸುದ್ದಿಯನ್ನೂ ಪ್ರಕಟಿಸಿಲ್ಲ? ನೈತಿಕ ಪೊಲೀಸನಂತೆ ಎಲ್ಲ ವಿಷಯಗಳ ಬಗ್ಗೆಯೂ ತೀರ್ಪು ಕೊಡಲು ಆಗಮಿಸುವ ಎನ್‌ಡಿಟಿವಿ ಸ್ಥಾಪಕ, ಮಾಲೀಕ ಪ್ರಣಯರಾಯ್ ಎಲ್ಲಿ ಹೋಗಿದ್ದಾರೆ? ಟೇಪ್‌ಗಳು ಸುಳ್ಳು ಎಂದು ಸಾಬೀತು ಮಾಡು, ಈ ಕ್ಷಣವೇ ನನ್ನ ವೃತ್ತಿ ಬಿಡುತ್ತೇನೆ ಎಂದು ಮನು ಜೋಸೆಫ್ ಸವಾಲು ಹಾಕಿದಾಗ ಅದನ್ನು ಸ್ವೀಕರಿಸದೇ ವಿಷಯಾಂತರ ಮಾಡಲು ಪ್ರಯತ್ನಿಸಿದ ಬರ್ಖಾ ಹಾಗೂ ಸಾಂಘ್ವಿಎಷ್ಟೇ ಬಡಬಡಾಯಿಸಿದರೂ ರಾಷ್ಟ್ರದ ಮುಂದೆ ಬೆತ್ತಲಾಗಿ ನಿಂತಿರುವುದಂತೂ ಸತ್ಯ. ಸೈದ್ಧಾಂತಿಕ ನಿಲುವುಗಳೇನೇ ಇದ್ದರೂ ‘ದಿ ಹಿಂದೂ’ ಪತ್ರಿಕೆಯ ಸಂಪಾದಕರಾದ ಎನ್. ರಾಮ್ ಅವರನ್ನು ಮೆಚ್ಚಲೇಬೇಕು. ಬರ್ಖಾ, ಸಾಂಘ್ವಿ ಮಾಡಿದ್ದನ್ನು ಯಾರಾದರೂ ಕಟು ವಾಕ್ಯಗಳಿಂದ ಖಂಡಿಸುವ ಧೈರ್ಯ ತೋರಿದ್ದರೆ ಅದು ರಾಮ್ ಮಾತ್ರ. ಒಂದು ವೇಳೆ, ಈ ಬರ್ಖಾ ದತ್, ವೀರ್ ಸಾಂಘ್ವಿ ಅವರೇನಾದರೂ ನ್ಯೂಯಾರ್ಕ್ ಟೈಮ್ಸ್, ಬಿಬಿಸಿ ಅಥವಾ ಫೈನಾನ್ಷಿಯಲ್ ಟೈಮ್ಸ್‌ನಲ್ಲಿದ್ದಿದ್ದರೆ ಐದು ನಿಮಿಷವೂ ಉದ್ಯೋಗದಲ್ಲಿರುತ್ತಿರಲಿಲ್ಲ ಎಂದಿದ್ದಾರೆ ಎನ್. ರಾಮ್. ಅದಿರಲಿ, ಮುಂಬೈ ದಾಳಿಯ ಸಂದರ್ಭದಲ್ಲಿ ಒಬ್ಬ ಸಾಮಾನ್ಯ ಬ್ಲಾಗರ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದ ಬರ್ಖಾ, ಎನ್. ರಾಮ್‌ಗೆ ಅಂತಹದ್ದೇ ನೋಟಿಸ್ ಕಳುಹಿಸುವ ತಾಕತ್ತು ತೋರಿಯಾರೆ? ಇತ್ತ ಮತ್ತೊಬ್ಬ ಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು, “ವೀರ್ ಹಾಗೂ ಬರ್ಖಾ ಕೇವಲ ವ್ಯಕ್ತಿಗಳಲ್ಲ. ಒಬ್ಬರು ಹಿಂದುಸ್ತಾನ್ ಟೈಮ್ಸ್‌ನ ಸಂಪಾದಕೀಯ ಸಲಹಾ ನಿರ್ದೇಶಕರು, ಇನ್ನೊಬ್ಬರು ಎನ್‌ಡಿಟಿವಿಯ ಸಮೂಹ ಸಂಪಾದಕರು. ಇದು ಅವರು ಕೆಲಸ ಮಾಡುತ್ತಿರುವ ಸಂಸ್ಥೆಗೆ ಕುತ್ತು ತಂದಂತಲ್ಲವೇ?” ಎಂದು ಪತ್ರಿಕೋದ್ಯಮದ ಸಾಕ್ಷಿಪ್ರeಯಂತಿರುವ ಅರುಣ್ ಶೌರಿಯವರನ್ನು ಕೇಳಿದಾಗ, “ಇಂಥ ಸಂಸ್ಥೆಗಳ ಒಟ್ಟಾರೆ ರೆಕಾರ್ಡ್ ಏನು ಅನ್ನೋದು ಈ ಹಿಂದೆಯೂ ಬಯಲಿಗೆ ಬಂದಿದೆ. ಇದು ಮೊದಲ ಸಲವಲ್ಲ. ಒಟ್ಟಾರೆಯಾಗಿ ಈ ವಿದ್ಯಮಾನ ಮಾಧ್ಯಮದ ಬಗೆಗಿನ ಸಂದೇಹಗಳನ್ನು ಬಲಗೊಳಿಸುತ್ತಿದೆ” ಎಂದಿದ್ದಾರೆ. ಹೌದು, NDTVಯವರು ತಾವೆಷ್ಟೇ ಸಾಚಾಗಳು ಎಂದು ಬಿಂಬಿಸಿಕೊಳ್ಳಲು ಹೊರಟರೂ ಅದನ್ನು Nehru Dynasty TV ಎಂದು ಜನ ಕರೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ!

ಇಂತಹ ಖ್ಯಾತನಾಮರೇ ಹೀಗೆಲ್ಲ ರಾಡಿಯಲ್ಲಿ ಬಿದ್ದರೆ ಪತ್ರಿಕೋದ್ಯಮಕ್ಕೆ ಯಾರು ಬೆಲೆಕೊಡುತ್ತಾರೆ? ಎಂದು ಥಾಪರ್ ಕೇಳಿದ್ದಕ್ಕೆ, “ನಮ್ಮನ್ನೇ ಸೀಳುನೋಟಕ್ಕೆ ಒಳಪಡಿಸಿಕೊಳ್ಳಬೇಕಿದೆ. ಬೇರೆಯವರ ಹಗರಣಗಳನ್ನು ಹೇಗೆ ಆಧಾರಸಹಿತ ಬಯಲಿಗೆಳೆ ಯಲು ಧಾವಿಸುತ್ತವೆಯೋ ಅದೇ ಧೋರಣೆಯನ್ನು ಮಾಧ್ಯಮದ ವಿಷಯದಲ್ಲೂ ರೂಢಿಸಿಕೊಳ್ಳಬೇಕು. ನಮ್ಮ ಪರಿಶೀಲನೆ ಹೊಣೆ ನಮಗೇ ಇರದಿದ್ದರೆ ಆ ಜವಾಬ್ದಾರಿ ಇನ್ಯಾರಿಗೋ ಹೋಗಿ ಮತ್ತೆ ಸಮಸ್ಯೆಗಳು ಉದ್ಭವವಾಗುತ್ತವೆ. ಈ ಕೆಲಸಕ್ಕೆ ಮತ್ತೊಂದು ಕೌನ್ಸಿಲ್ ಸ್ಥಾಪಿಸುವುದಲ್ಲ. ಬದಲಿಗೆ ಒಬ್ಬರು ಇನ್ನೊಬ್ಬರನ್ನು ಪ್ರಶ್ನಿಸುವ ಸ್ವತಂತ್ರ ಬರವಣಿಗೆ ರೂಡಿಸಿಕೊಂಡು ಈ ಕಾರ್‍ಯವಾಗಬೇಕಿದೆ” ಎಂದಿದ್ದಾರೆ ಶೌರಿ. ಇದು ಎಲ್ಲರೂ ಒಪ್ಪುವಂಥ ಮಾತು ಅಲ್ಲವೆ? 1.7 ಲಕ್ಷ ಕೋಟಿ 2ಜಿ ಸೆಕ್ಟ್ರಮ್ ಹಗರಣದಲ್ಲಿ ಪತ್ರಕರ್ತರ ಹೆಸರು ಕೇಳಿ ಬರುತ್ತಿದೆಯೆಂದರೆ ಅಶೋಕ್ ಚವಾಣ್, ಯಡಿಯೂರಪ್ಪ ಮುಂತಾದವರನ್ನು ಪ್ರಶ್ನಿಸಲು ಮಾಧ್ಯಮಗಳಿಗೆ ಯಾವ ನೈತಿಕ ಹಕ್ಕು ಉಳಿಯುತ್ತದೆ? BarkhaGate, MediaMafia, Media Scam, Firebarkha ಇನ್ನು ಮುಂತಾದ ಟಾಪಿಕ್‌ಗಳು ಟ್ವಿಟ್ಟರ್‌ನಲ್ಲಿ ಪ್ರಾರಂಭವಾಗುವುದಕ್ಕೆ ಅವಕಾಶ ಕೊಟ್ಟವರಾರು?

ಒಟ್ಟಾರೆಯಾಗಿ, ಇಡೀ ಮಾಧ್ಯಮಗಳಿಗೆ ಇದು Wake-up call, ಎಚ್ಚರಿಕೆಯ ಗಂಟೆ ಆಗಬೇಕು.

ಇಷ್ಟಕ್ಕೂ ಸಿಕ್ಕಿಬಿದ್ದಿರುವುದು ಬರ್ಖಾ, ಸಾಂಘ್ವಿ ಹಾಗೂ ಒಟ್ಟು 30 ಪತ್ರಕರ್ತರು ಮಾತ್ರ, ಬೀಳದವರು?! ಒಬ್ಬಳು ಸಾರ್ವಜನಿಕ ಸಂಪರ್ಕಾಧಿಕಾರಿ ಒಂದು ದೊಡ್ಡ ಪತ್ರಿಕೆಯ ಸಂಪಾದಕೀಯ ಸಲಹೆಗಾರ ಹಾಗೂ ದೇಶದ ಮೊಟ್ಟಮೊದಲ ಇಂಗ್ಲಿಷ್ ಚಾನೆಲ್‌ನ ಸಮೂಹ ಸಂಪಾದಕಿಯನ್ನು ಡಿಎಂಕೆ-ಕಾಂಗ್ರೆಸ್ ನಡುವೆ ಪೋಸ್ಟ್ ಮನ್ ಕೆಲಸ ಮಾಡುವಂತೆ, ಲಾಬಿ ಮಾಡುವಂತೆ ನೇರವಾಗಿ ಕೇಳಿಕೊಳ್ಳುತ್ತಾರೆಂದರೆ ಪತ್ರಿಕೋದ್ಯಮದ ಸಾರಥಿಗಳಾಗಿರುವ ಸಂಪಾದಕರ ಸ್ಥಾನ ಯಾವ ಮಟ್ಟಕ್ಕಿಳಿದಿದೆ ಹಾಗೂ ಇಳಿಸಿಕೊಂಡಿದ್ದಾರೆ ಎಂಬುದನ್ನು ಗಮನಿಸಿ. “ಪಿಆರ್‌ಒಗಳನ್ನು ಎಡಿಟೋರಿಯಲ್ ಡೆಸ್ಕ್‌ವರೆಗೂ ಬಿಟ್ಟುಕೊಡುವುದೇ ಅಪರಾಧ” ಎಂಬ ದಿಲೀಪ್ ಪಡಗಾಂವ್‌ಕರ್ ಮಾತಲ್ಲಿ ಸಮಸ್ಯೆಯ ಗಾಂಭೀರ್ಯ ಅಡಗಿದೆ. ಖಂಡಿತ ಮೀಡಿಯಾ ಇವತ್ತು ಮಿಶನ್ ಆಗಿ ಉಳಿದಿಲ್ಲ, ಪ್ರೊಫೆಶನ್ ಆಗಿ ಎಷ್ಟೋ ವರ್ಷಗಳಾಗಿವೆ. ಮೊದಲೆಲ್ಲ ಸಾಮಾಜಿಕ ಕಳಕಳಿ, ಕಾಳಜಿ ಹೊಂದಿರುವ ಕಮಿಟೆಡ್ ವ್ಯಕ್ತಿಗಳು ಅಥವಾ ಪ್ರಾಮಾಣಿಕ ವ್ಯಕ್ತಿಗಳಿಂದ ಕೂಡಿರುವ ಟ್ರಸ್ಟ್‌ಗಳು ಪತ್ರಿಕೆ, ವಾರಪತ್ರಿಕೆ ಅಥವಾ ಇನ್ನಿತರ ನಿಯತಕಾಲಿಕಗಳನ್ನು ನಡೆಸುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ.  ಜಾಹೀರಾತು ಸುದ್ದಿಯನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದಿದೆ. ಪತ್ರಿಕೋದ್ಯಮ ಕೂಡ ಒಂದು ಲುಕ್ರೇಟಿವ್ ಸೆಕ್ಟರ್ ಹಾಗೂ ಪ್ರೊಫೆಶನ್. ಭಾರತದ ವಿಷಯದಲ್ಲಂತೂ ಇದು ಅಕ್ಷರಶಃ ಸತ್ಯ. ೨೦೦೮ರಲ್ಲಿ ಕಂಡುಬಂದ ಆರ್ಥಿಕ ಹಿನ್ನಡೆ(ರಿಸೇಶನ್) ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಾಧ್ಯಮಗಳನ್ನೂ ಬಿಡಲಿಲ್ಲ. ಅಂತಹ ಜಗದ್ವಿಖ್ಯಾತ ‘ವಾಲ್‌ಸ್ಟ್ರೀಟ್ ಜರ್ನಲ್’ ತನ್ನನ್ನು ಮಾರಾಟಕ್ಕಿಟ್ಟುಕೊಂಡಿತು. ಆದರೆ ಭಾರತದಲ್ಲಿ ಒಂದು ಸಣ್ಣ ಪತ್ರಿಕೆಗೂ ಮುಚ್ಚಿಹೋಗುವ ಸ್ಥಿತಿ ಎದುರಾಗಲಿಲ್ಲ. ನಮ್ಮಲ್ಲಿ ಕೆಳಮಟ್ಟದ ಭಾಷೆ ಬಳಸುವ ಒಂದು ಕಳಪೆ ಟ್ಯಾಬ್ಲಾಯ್ಡ್ ಆರಂಭಿಸಿದರೂ ಕಾಸುಮಾಡಬಹುದು. ರಾಜಕಾರಣಿಗಳ ಜತೆಯಲ್ಲಿ ಓಡಾಡುವುದೇ ಒಂದು ದೊಡ್ಡ ಬಲಾಬಲ ಪ್ರದರ್ಶನವಿದ್ದಂತೆ ಎಂದಂದುಕೊಂಡಿರುವ ಪತ್ರಕರ್ತ ರನ್ನು ಕಾಣಬಹುದು.

ನಿಜ, ಪತ್ರಿಕೋದ್ಯಮ ಇಂದು ತೀವ್ರವಾಗಿ ಸ್ಪರ್ಧಾತ್ಮಕವಾಗಿದೆ. ಬ್ರೇಕಿಂಗ್ ನ್ಯೂಸ್‌ಗಳಿಗಾಗಿ ಎಡತಾಕುವ ಪತ್ರಕರ್ತರಿಗೆ Contactಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯ. ಅದಕ್ಕೆಂದೇ ತರಬೇತಿ ಪಡೆದಿರುತ್ತಾರೆ. ಸುದ್ದಿಯ, ಘೋಷಣೆಯ, ರಾಜಕೀಯ ಹೇಳಿಕೆಗಳ ಹಿಂದೆ ನಡೆಯುವ ಕಸರತ್ತು ಅದರ ಅಸಲಿಯತ್ತು ತಿಳಿಯಲು ಈ Contactದಾರರು ಬೇಕೇಬೇಕು. ಆದರೆ ಇಂತಹ Contactದಾರರು ಪತ್ರಕರ್ತರನ್ನು Self-Contactನಲ್ಲಿಟ್ಟುಕೊಳ್ಳಲು ನಡೆಸುವ ಹವಣಿಕೆಯನ್ನು ಮೆಟ್ಟಿ ನಿಲ್ಲಲು ಪತ್ರಕರ್ತರಿಗೆ Ethics ಇರಬೇಕು. ಇಲ್ಲದಿದ್ದರೆ ಇಡೀ ವ್ಯವಸ್ಥೆ ರಾಡಿಯಾಗುತ್ತದೆ. 1990ರ ದಶಕದಲ್ಲಿ ಭಾರತ ಆರ್ಥಿಕತೆಯ ಬಾಗಿಲು ಜಾಗತೀಕರಣಕ್ಕೆ ತೆರೆದುಕೊಂಡ ಬೆನ್ನಲ್ಲೇ Corporate Journalism ಶುರುವಿಟ್ಟುಕೊಂಡಿದೆ. ಅದು ಮುಂದೆ Corporate Journalism ಆಗಿ ಪತ್ರಕರ್ತರನ್ನು Corrupt  ಮಾಡಿದೆ.

ಝೋಲೋವಾಲಾ!

ಮೊದಲೆಲ್ಲ ಪತ್ರಕರ್ತರನ್ನು ಕರೆಯುತ್ತಿದ್ದುದೇ ಹೀಗೆ. ಕುರ್ತಾ ಪೈಜಾಮ ಹಾಕಿಕೊಂಡು, ಹೆಗಲಿಗೆ ಜೋಳಿಗೆ ನೇತು ಹಾಕಿ ಕೊಂಡು ಹೋಗುತ್ತಿದ್ದ ವ್ಯಕ್ತಿ ಪತ್ರಕರ್ತನಾಗಿರುತ್ತಿದ್ದ. ಊಟಕ್ಕೆ ಏನು ಮಾಡುತ್ತೀಯಾ ಎಂದು ಕೇಳುವಂತಹ ಪರಿಸ್ಥಿತಿ ಇದ್ದಿದ್ದು ನಿಜ. ಇವತ್ತು ಪತ್ರಕರ್ತರ ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾ ರಿಸಿರುವುದು ಒಳ್ಳೆಯ ಲಕ್ಷಣವೇ ಆಗಿದ್ದರೂ ಅವರ ಪ್ರಾಮಾಣಿಕತೆ ಹಾಗೂ ಸಮಗ್ರತೆಯ ಬಗ್ಗೆಯೇ ಅನುಮಾನ, ಸಂಶಯ ಆರಂಭವಾಗಿರುವುದು ಮಾತ್ರ ದುರದೃಷ್ಟಕರ. Lobbying  ಖಂಡಿತ ಕೆಟ್ಟ  ವಿಷಯವಲ್ಲ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅದೂ ಕೂಡ ಒಂದು ಒಳ್ಳೆಯ ವೃತ್ತಿ. Lobbying  ಅಂದರೆ High lighting the positive side and influencing the policy makers. ದುರದೃಷ್ಟವಶಾತ್, ಪತ್ರಕರ್ತರಲ್ಲಿ ಒಂದು ವರ್ಗ ದಲ್ಲಾಳಿಗಳಾಗುತ್ತಿದ್ದಾರೆ. ಈ ವಿಷಯವಾಗಿ ‘ಔಟ್‌ಲುಕ್’ ನಲ್ಲಿ ಪ್ರಕಟವಾಗಿರುವ ಅಂಕಣವೊಂದರಲ್ಲಿ ಪತ್ರಿಕೋದ್ಯಮದ ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಲೇಬೇಕಾದ ಮಾರ್ಷಲ್ ಮ್ಯಾಕ್‌ಲುಹಾನ್‌ನ “The Medium Is The Message” ಥಿಯರಿಯನ್ನು “The Media Is The Message” ಎಂದು ಬಹಳ ಸೊಗಸಾಗಿ ಅಣಕಿಸಲಾಗಿದೆ. ಒಂದಂತೂ ನಿಜ, ರಾಜಕಾರಣಿಗಳಿಂದ ಲಾಭ, ಅನುಕೂಲ ಪಡೆದರೆ ಅವರು ತಪ್ಪೆಸಗಿದಾಗ ಬರೆಯುವ ನೈತಿಕ ಹಕ್ಕೇ ಪತ್ರಕರ್ತನಿಗೆ ಇಲ್ಲದಂತಾಗುತ್ತದೆ. ಪತ್ರಕರ್ತರೂ ಕೂಡ ತಮ್ಮ ಆದಾಯ, ಆಸ್ತಿ-ಪಾಸ್ತಿ ಹಾಗೂ ಅದರ ‘ಮೂಲ’ವನ್ನು ಬಹಿರಂಗ ಮಾಡುವ ನಿಟ್ಟಿನಲ್ಲಿ ಯೋಚಿಸುವುದೊಳಿತು.

ಅಷ್ಟಕ್ಕೂ ಎಲ್ಲರಿಂದಲೂ ಹೊಣೆಗಾರಿಕೆ ಕೇಳುವ ಮಾಧ್ಯಮ, ತನ್ನ ಹೊಣೆಗಾರಿಕೆಯನ್ನು ಅರಿಯದೇ ಹೋದರೆ ಜನರಿಂದ ಥೂ, ಛೀ ಅನ್ನಿಸಿಕೊಳ್ಳುವ ಕಾಲ ದೂರವಿಲ್ಲ.

27 Responses to “ಪತ್ರಿಕೋದ್ಯಮದ ನೈತಿಕತೆಯ ‘ಬರ್ಖಾ’ಸ್ತುದಾರರು!”

 1. A common man has lost his faith in the media after this incident. Now, they’re skeptic and they won’t trust us anymore. God save media ! God save us

 2. thomas says:

  good article by pratap. but why did you leave other journalists of english media like vir sangvvi , rajdeep sardesai , sagarika ghose ,karan thapar, n.ram ? expose them also.
  you need to do sting operation on these people and expose their connections and illegal wealth.

 3. shivaraj says:

  awesome..

 4. Bhargav GN says:

  olle lekhana Prathap Sir..

  Barkha, Sanghvi, Sardesai ella Cong Agents!!

  hange N Ram mattu THE HINDU kooda CPM, China agent!!

 5. girish holla says:

  ಪತ್ರಿಕೊಧ್ಯಮದ ನೈತಿಕತೆಯನ್ನು ಅನಾವರಣಗೊಳಿಸುವ ಈ ಲೇಖನವನ್ನು ನೋಡಿ ಬಹಳ ಸ೦ತೋಷವಾಯಿತು ..ಪತ್ರಿಕೊಧ್ಯಮ ಕೇವಲ ಜಹೀರತಿಗಾಗಿ ಇರುವ೦ತದ್ದಲ್ಲ ಪತ್ರಿಕೆ ಹಾಗೂ ಮಾಧ್ಯಮಗಳಿಗೆ ಸಮಾಜದ ಮೇಲೆ ನೈತಿಕ ಹೊಣೆ ಇದೆ ಹಾಗೂ ಪತ್ರಿಕೊಧ್ಯಮ ವ್ಯಕ್ತಿ ನಿಷ್ಟವಾದುದಲ್ಲ ಅದು ಸತ್ಯ ನಿಷ್ಟವಾದುದು ಎ೦ದು ಬಿ೦ಬಿಸುವಲ್ಲಿ ತಾವು ಯಶಸ್ವಿಯಗಿದ್ದೀರಿ …. ಇದೇ ರೀತಿಯ ಸಮಜದಲ್ಲಿ ಜಗೃತಿ ಮೂಡಿಸುವ೦ತಹ , ತಮ್ಮ ಜವಾಬ್ದಾರಿಯನ್ನು ಮನಗಾಣಿಸುವ೦ತಹ ಇನ್ನೂ ಹೆಚ್ಚಿನ ಲೇಖನಗಳನ್ನು ಬರೆಯುವ೦ತಗಾಲಿ ಎ೦ದು ಆಶಿಸುತ್ತೇನೆ….

 6. Swaroop says:

  This is slowly being seen in TV-9 and other Kannada news channels too…
  Hope Pratap makes an attempt sometime to bring out the nuisance those channels are promoting and help us understand better about those things.
  I have always found one thing that whatever we know a bit is made full by Pratap through his articles.

 7. shastri says:

  Good article, though little delayed.
  Thank you.

 8. ಕುಮಾರ says:

  ಬರ್ಖಾನ ಬುರ್ಖಾ ತೆಗೆದು ತೋರಿಸಿದ್ದಕ್ಕೆ ಧನ್ಯವಾದಗಳು!!
  ಈ ಮಹಾ ತಾಯಿಯಿಂದಲೇ ಅಲ್ಲವೆ ಪಿಂಕ ಚೆಡ್ಡಿ ಗಳು ಫೇಮಸ್ಸಾಗಿದ್ದು?
  ನಮ್ಮ ಕರ್ನಾಟಕದ ಮಾನ ಹರಾಜು ಮಾಡಿದವಳು (ಮಂಗಳೂರು ಪಬ್), ಅವಳು ನಿಜವಾಗಿ ಒಬ್ಬ ಒಳ್ಳೆಯ ಪತ್ರಕರ್ತಳಾಗಿದ್ದರೆ “ಪದ್ಮಶ್ರೀ” ಯನ್ನು ವಾಪಸ್ಸು ಕೊಟ್ಟು ಅದರ ಘನತೆಯನ್ನು ಹೆಚ್ಚಿಸಬೇಕಾಗಿ ಕೋರುತ್ತೇನೆ

 9. murali says:

  dear prathap.wow good one. when delhi comissioner arrested this very own ndtv let wife and daughters tu take country for a ride taking there interviews for hours after he punished they not even had a courtcy to say sorry tu nation for broadcasting such a lie.shame on them.

 10. satish says:

  what morality you have to comment on other journalists? you got a bda site and one more in mysore!

 11. ಮೋಹನ says:

  ಭಟ್ಟರ ಜೊತೆಯಲ್ಲೆ ನೀವು ವಿ.ಕ ಬಿಡ್ತೀರಾ? ಪ್ರತಾಪ್?

  ಆದ್ರೂ ಭಟ್ಟರಿಲ್ಲದ ವಿಕ ತುಂಬಾ ವೀಕ್

 12. Prasad says:

  hi pratap,
  i read an article about you in Hi bangalore. I dont want to know about anything on the ‘site’ issue, mentioned in that. but my concern is the Ravi Belegare’s grudge on you. I dont want to know anything on your personal, what i/we expect is what you are contributing to the world. I respect you for your unbiased views on the Issues you talk about. Especially, these days, anybody who raise voice for Hindus will be treated as criminals, this is the fate of india. The reason being, they can dig only hindus, as we doesnt respond violently as done for Kannada prabha, few months back.
  At this point of time, i want to suggest you to stay cool, handle the situation properly with confidence, continue your work the same way you are carried till now. There are only few ppl who believe the facts published in Hi bangalore, most of the ppl knows about its editor’s quality.
  I also want to thank you for being the only person who is raising voice for Hinduism, atleast from karnataka, and reaching more ppl through your articles.
  Keep the same spirit

  Regards
  Prasad

 13. ತುಂಬಾ ಚೆನ್ನಾಗಿದೆ. ವಿ ಕ ಬಿಡುವುದು ಒಳ್ಳೆಯ ಸಂಗತಿ. ಭಟ್ರು, ನಿಮ್ಮಿಂದಾಗಿ ಟೈಮ್ಸ್ ಗ್ರೂಪ್ ಗೆ ಸುಮ್ನೆ ತೊಂದರೆ ಬೇಡ. “ಜನಶ್ರೀ” ಸೇರ್ತಾ ಇದ್ದೀರಾ? ಬೇಡ ಕಾಣತ್ತೆ. ರಾಷ್ಟ್ರೀಯ ಮಟ್ಟದಲ್ಲಿ ಏನಾದರೂ ಶುರು ಮಾಡಿ ದಯವಿಟ್ಟು. ಬರ್ಖ, ವೀರ್ ಅಂಥವರಿಂದಾಗಿ ಮಾಧ್ಯಮ ಇಂದು ಗಬ್ಬೆದ್ದು ಹೋಗಿದೆ.

 14. bhaskara says:

  ravi belegere is one of the lustur means “thale hiduka”
  one of the bitch don’t worry go ahead
  yours
  K.bhaskara Mandya

 15. devaraj says:

  Hi Prathap,

  it’s really sad, that both (namma bhattru) of you are no longer with vijaya karnataka, any way it is really a loss for the paper not for us! we know that you won’t giveup so easyly; we are with you people always. BEST OF LUCK and do not forget we will be waiting for your big return……..

  (why can’t you people start a new kannada paper)

 16. SANTOSH JIGALIKOPPA says:

  £ÀªÀÄä £ÉaÑ£À ¥ÀævÁ¥À CtÚ¤UÉ £À£Àß £ÀªÀĸÁÌgÀUÀ¼ÀÄ.
  ¤ÃªÀÅ «.PÀ. ©nÖzÀÄÝ AiÀiÁPÉ? CAvÁ PÉüÀĪÀµÀÄÖ zÉÆqÀتÀ£ÀÆß £Á£À®è. ¤ªÀÄä CAPÀtªÀ£ÀÄß NzÀÄvÁÛ ¨É¼ÉzÀ ºÀÄqÀÄUÀ £Á£ÀÄ. ¤ªÀÄä ¯ÉÃR£ÀPÉÌ ªÀÄ£À¸ÉÆÃvÀÄ FUÀ £Á£ÀÄ ¸ÀºÀ M§â ¥ÀvÀæPÀvÀð£ÁUÀ¨ÉÃPÉAzÀÄ PÀ£ÁðlPÀ «±Àé«zÁå®AiÀÄzÀ°è ¥ÀwæPÉÆÃzÀåªÀÄ C¨sÁå¸À ªÀiÁqÀÄwÛzÉÝãÉ. ¤ªÀÄä ¯ÉÃR£ÀUÀ¼ÀÄ DzÀµÀÆÖ ¨ÉÃUÀ J°èAiÀiÁzÀgÀÆ ¥ÁægÀA¨sªÁUÀ°À. ¥ÁægÀA¨sÀªÁzÀgÉ £ÀªÀÄäAvÀºÀ AiÀÄĪÀPÀjUÉ DzÀµÀÆÖ ¸ÀAvÉÆõÀ ªÀÄvÁåjUÀÆ DUÀ®è ¥ÀævÁ¥ï CtÚ.

 17. naveen says:

  sir neevu thumba disappoint madudri, nanage saturday paper nodi , ivathu bere dina andu konde ,sir namge oota(food) illa andre parvagila adre bethle jaguthu, vb bhat avara lakana galu beku,navu paper tharisudu only looking through vb bhat ,but all the people who is responsible to lift the vijaya paper has been resigned so sad ,waiting for som good news from vb bhat and u and u r whole family (past vijaya karnataka) best wishes for all people who dedicate for vijaya karnataka

 18. Narayan says:

  @Santosh

  ಯುನಿಕೋಡ್‌ ಕನ್ನಡ ಫಾಂಟ್‌ ಬಳಸಿ, ಆಗ ನಿಮ್ಮ ಅಭಿಪ್ರಾಯಗಳನ್ನು ಓದಬಹುದಾಗಿದೆ.

  ಬರ್ಖಾ, ರವಿ ಬೆಳಗೆರೆ ಇತ್ಯಾದಿ ಪತ್ರಕರ್ತರಿಂದ ಮಾಧ್ಯಮ ಕ್ಷೇತ್ರವೆಂಬ ಕೆರೆಯ ತಿಳಿ ನೀರು ರಾಡಿಯಾಗಿದೆ.

 19. Veena Yalamalli says:

  I am very happy to read this from China.
  Wish you a very happy married life.

  Of late we were not liking VK since it was tending towards partial journalism.
  In fact we were doubting even Mr,Vishweshwar Bhat, But now we realise the situation.

  We will read you wherever you are.Please go ahead and continue your unique and great work.

  Thanks

 20. Bharath Naik J C says:

  Sir i m one of ur fan n read many of ur books, and as well i liked the ravibelagare’s books and his magazine O manase, and recently i read abt u in Hi Bangalore i felt bad but later I read in “DUNIYA” paper abt u n feeling very happy,,, Ya wt all said in Belagere’s paper i felt almost 90% lie in tat,,,
  1. he printed as Right leg instead of Left and noted tat artificial leg cant b inserted n all but real thing seen in Duniya paper…
  2.First of all thr is no benefit frm saying cousin so tat v get site n all tats foolishness….
  like this many things were wrong, so v felt happy and v want u to continue as it is and and IF u personally open any weekly paper v all thr to support u with anyone being partner plz start it sir, v all looking for it…. And we r very happy tat u married To Arpitha mam at tat sitution tats very happy thing ang thr is a lot to understand frm tat to all,,, Wish all the best for ur carrer nad also to Persoanl life,,,,,,, Take care sir….. V ur fans always wit u

 21. Karthik says:

  My colleague is a Maharashtrian and he said that there was an article in a Marathi paper about Barkha in 26/11 site. We appreciate if you can translate it in Kannada. In the disaster site, as there were so many journalists and cameramen, Dal and Rice were served as quick food. She is such an arrogant person that she threw away Dal/Rice served to her. I am sure what we have heard in tapes is just tip of an iceberg. Why would Congress give her the Padmashree award for covering Tsunami in 2004. Is she the only one doing it; what a joke it is!!!

 22. girish says:

  Pratap, you wrote about media lobby. But it is an irony that you are being accused of gaining a plot of land unethically. at the same time vishweshwar bhat has allegedly got a home worth 4 crores. these 2 allegations are very serious. You need to give clarification..

 23. chethan(coorg;somwarpet) says:

  Govinda.. Govindaaa

 24. @Santosh ಯುನಿಕೋಡ್‌ ಕನ್ನಡ ಫಾಂಟ್‌ ಬಳಸಿ, ಆಗ ನಿಮ್ಮ ಅಭಿಪ್ರಾಯಗಳನ್ನು ಓದಬಹುದಾಗಿದೆ. ಬರ್ಖಾ, ರವಿ ಬೆಳಗೆರೆ ಇತ್ಯಾದಿ ಪತ್ರಕರ್ತರಿಂದ ಮಾಧ್ಯಮ ಕ್ಷೇತ್ರವೆಂಬ ಕೆರೆಯ ತಿಳಿ ನೀರು ರಾಡಿಯಾಗಿದೆ.

 25. dattu says:

  prathap sir
  nanu keliddu satyana nivu vijay karnataka bittiddira?
  nanage gottiralilla plz bereyenadru vara ptrike yannu aranmba madi
  nanatu ondu varushdinda v.k nodilla nimma sait nalle ododu adre nanage
  nimma vagge helidavaru v.k ylle nirishsista eratare plzyendru madi varpatrike
  masa ptrike.

 26. K Suresh Nayak says:

  Dear Pratap Simha

  Some People were shouting at the top of the voice in Prime time TV “WE THE PEOPLE”. Now The time has come for them to say “WE ARE THE PEOPLE’ behind the most corrupt scam of the century – 2G spectrum !!!!!

 27. parashurama karnam says:

  sir
  This article very nice.
  parashurama karnam
  Dept of journalism and mass communication
  Gulbarga university
  Gulbarga.