Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮಲಾಲಾ ಪ್ರಕರಣದಲ್ಲಿ ಭಾರತದ ಮತಾಂಧರಿಗೂ ಒಂದು ಮೆಸೇಜ್ ಇದೆಯಲ್ಲವೆ?

ಮಲಾಲಾ ಪ್ರಕರಣದಲ್ಲಿ ಭಾರತದ ಮತಾಂಧರಿಗೂ ಒಂದು ಮೆಸೇಜ್ ಇದೆಯಲ್ಲವೆ?

ಮೊದಲಿಗೆ ರಿಮ್ಷಾ ಮಸೀಹ

ಈಗ ಮಲಾಲಾ ಯುಸಫ್್ಜಾಯಿ

ಇವರಿಬ್ಬರೂ 14 ವರ್ಷದ ಬಾಲಕಿಯರೇ. ಮೊದಲನೆಯವಳು ಧರ್ಮನಿಂದನೆ ನೆಪದಲ್ಲಿ ಅನ್ಯಧರ್ಮಿಯರನ್ನು ಹೊಸಕಿ ಹಾಕುತ್ತಿರುವ ಪಾಕಿಸ್ತಾನದ ಮತಾಂಧ ಮುಖವನ್ನು ಜಗತ್ತಿಗೆ ಪರಿಚಯಿಸಿದರೆ, ಎರಡನೆಯವಳು ಪಾಕಿಸ್ತಾನಿಯರಿಗೇ ಧರ್ಮವನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿರುವ ಸ್ವಧರ್ಮೀಯರ ಕರಾಳ ಮುಖವನ್ನು ಪರಿಚಯಿಸಿದ್ದಾಳೆ. ಈಗಾಗಲೇ ನಿಮಗೆ ತಿಳಿದಿರುವಂತೆ ಇಂಗ್ಲೆಂಡ್್ನ ಬರ್ಮಿಂಗ್ ಹ್ಯಾಮ್ ಕ್ವೀನ್ ಎಲಿಝಬೆತ್ ಆಸ್ಪತ್ರೆಯಲ್ಲಿ ಮಲಾಲಾ ಜೀವನ್ಮರಣದ ನಡುವೆ ಹೋರಾಡುತ್ತಿದ್ದರೆ, ಇತ್ತ ಸೆಪ್ಟೆಂಬರ್ 8ರಂದು ಬಿಡುಗಡೆಯಾಗಿರುವ ರಿಮ್ಷಾ ಮಸೀಹ ಹತ್ಯೆಯಿಂದ ಬಚಾವಾಗಿದ್ದರೂ ಯಾವ ಕ್ಷಣದಲ್ಲೂ ತಲೆಗೆ ಗುಂಡು ಬೀಳಬಹುದೆಂಬ ಭಯದಲ್ಲಿ ಬದುಕುತ್ತಿದ್ದಾಳೆ. ಸಿಎನ್್ಎನ್್ಗೆ ನೀಡಿರುವ ಸಂದರ್ಶನದಲ್ಲಿ “Im scared”, ನಮ್ಮನ್ನು ಯಾರು ಯಾವ ಕ್ಷಣದಲ್ಲಿ ಬೇಕಾದರೂ ಕೊಲ್ಲಬಹುದು ಎಂದಿದ್ದಾಳೆ.ಖ್ಯಾತ ಕ್ರಿಕೆಟ್ ತಾರೆ ಇಮ್ರಾನ್್ಖಾನ್ ರಿಮ್ಷಾಳ ಬಂಧನವನ್ನು “Shamefull” ಎಂದಿದ್ದಾರೆ.

ಕಳೆದ ಎರಡೂವರೆ ತಿಂಗಳಿನಿಂದ ಪಾಕಿಸ್ತಾನದಲ್ಲಿ ನಡೆಯಬಾರದ್ದೆಲ್ಲ ನಡೆಯುತ್ತಿದೆ!

ರಿಮ್ಷಾ ಮಸೀಹಳ ವಯಸ್ಸನ್ನು ಇಂತಿಷ್ಟೇ ಎಂದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. 11ರಿಂದ 14 ವರ್ಷ ಎಂದು ಕೆಲವು ವರದಿಗಳು ಹೇಳಿದರೆ, ವೈದ್ಯರು ಹದಿನಾಲ್ಕೇ ಇರಬಹುದು ಎಂದಿದ್ದಾರೆ. ಅವಳೊಬ್ಬಳು ಅನಕ್ಷರಸ್ಥ ಬಾಲಕಿ ಎಂಬುದು ಈ ಗೊಂದಲದಿಂದಲೇ ಗೊತ್ತಾಗುತ್ತದೆ, ಅಲ್ಲವೆ? ಅವಳು ಪಾಕಿಸ್ತಾನದ ಮೆಹರ್್ಜಾಫರ್ ಎಂಬ ಸ್ಥಳದವಳು, ಧರ್ಮದಿಂದ ಕ್ರೈಸ್ತಳು. ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇ. 4ರಷ್ಟಿರುವ ಕ್ರೈಸ್ತರು ಅಲ್ಲಲ್ಲಿ ನೆಲೆಗೊಂಡಿದ್ದಾರೆ. ಹೆಚ್ಚಿನವರು ಕೂಲಿ ಕೆಲಸ ಮಾಡುತ್ತಾರೆ, ಶಾಲೆಯ ಮೆಟ್ಟಿಲೇರುವುದೇ ವಿರಳ. ರಿಮ್ಷಾ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಅನಕ್ಷರಸ್ಥೆ, ಜತೆಗೆ ಖಿನ್ನತೆಯಂಥ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಕಳೆದ ಆಗಸ್ಟ್ 16ರಂದು ಅದೆಲ್ಲಿಂದ ಆಗಮಿಸಿದರೋ ಗೊತ್ತಿಲ್ಲ, ಸ್ಥಳೀಯ ಇಮಾಮನ ನೇತೃತ್ವದಲ್ಲಿ ಮುಸಲ್ಮಾನರು ಈ ಕ್ರೈಸ್ತ ಕೇರಿಯನ್ನು ಸುತ್ತುವರಿದರು, ರಿಮ್ಷಾಳನ್ನು ಥಳಿಸತೊಡಗಿದರು. ಅಪಾಯ ಅರಿತು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಿಮ್ಷಾಳನ್ನು ಬಂಧಿಸಿ, ಸೆರೆಮನೆಗೆ ಹಾಕಿದರು. ಒಂದು ವೇಳೆ, ಹಾಗೆ ಮಾಡದಿದ್ದರೆ ಬಹುಶಃ ಈ ವೇಳೆಗೆ ರಿಮ್ಷಾ ದುರ್ಮರಣಕ್ಕೀಡಾಗಿ ಎರಡು ತಿಂಗಳೇ ಕಳೆದಿರುತ್ತಿದ್ದವು. ಇಷ್ಟಕ್ಕೂ ಆಕೆ ಮಾಡಿದ ಮಹಾಪರಾಧವಾದರೂ ಏನು?

ಇಸ್ಲಾಂ ಧರ್ಮನಿಂದನೆ?!

ಪವಿತ್ರ ಕುರಾನ್್ನ ಹಾಳೆಗಳನ್ನು ಹರಿದು ಸುಡುತ್ತಿದ್ದಾಳೆ ಎಂದು ಆಕೆಯನ್ನೇ ಸುಡಲು ಜನ ಬಂದಿದ್ದರು. ಹಾಗಂತ ಪಾಕಿಸ್ತಾನದ ಮುಸ್ಲಿಮರೆಲ್ಲ ಮತಾಂಧರು, ಧರ್ಮಾಂಧರು, ಅನ್ಯಧರ್ಮದ ಬಗ್ಗೆ ಅಸಹನೆಯುಳ್ಳವರು ಎಂದಲ್ಲ. ‘ಆ ಮಗುವನ್ನು ಪಾಲನೆ ಪೋಷಣೆ ಮಾಡುವ ಬದಲು ಕೌರ್ಯಕ್ಕೆ ಈಡುಮಾಡುತ್ತಿದ್ದಾರಲ್ಲಾ, ನಾಚಿಕೆಗೇಡು’ ಎಂದು ಇಮ್ರಾನ್್ಖಾನ್ ಅಬ್ಬರಿಸಿದರು. ಸ್ಥಳೀಯ ಮಸೀದಿಯ ಮೌಲ್ವಿ ಜುಬೇರ್ ಹಾಗೂ ಇನ್ನಿಬ್ಬರು ನಿಜಕ್ಕೂ ನಡೆದಿದ್ದೇನು ಎಂಬುದನ್ನು ಪೊಲೀಸರಿಗೆ ತಿಳಿಸಲು ಮುಂದೆ ಬಂದರು, ನಿಜವಾದ ಅಪರಾಧಿ ಇಮಾಮ್ ಹಫೀಝ ಮೊಹಮದ್ ಖಾಲಿಚ್ ಚಿಸ್ತಿ ಎಂದರು. ಕುರಾನ್್ನ ಹಾಳೆಗಳನ್ನು ಹರಿದು ರಿಮ್ಷಾಳ ಬ್ಯಾಗಿನೊಳಗೆ ಇರಿಸಿದ್ದೇ ಚಿಸ್ತಿ ಎಂದು ಸಾಕ್ಷ್ಯ ಹೇಳಿದರು. ಪೊಲೀಸರು ಚಿಸ್ತಿಯನ್ನು ಜೈಲಿಗೆ ದಬ್ಬಿದರು. ಕೊನೆಗೆ ಸೆಪ್ಟೆಂಬರ್ 8ರಂದು ರಿಮ್ಷಾಳನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ. ಇದುವರೆಗೂ ಸುಮಾರು 1400 ಧರ್ಮನಿಂದನೆ ಪ್ರಕರಣಗಳು ಪಾಕಿಸ್ತಾನದಲ್ಲಿ ದಾಖಲಾಗಿವೆ. ಮಾನವ ಹಕ್ಕುಗಳ ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ 15 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. 52 ಜನರನ್ನು ಜನರೇ ಬಡಿದು ಸಾಯಿಸಿದ್ದಾರೆ. ಹಾಗಾಗಿಯೇ ಪೊಲೀಸರು ರಿಮ್ಷಾ ಹಾಗೂ ಆಕೆಯ ಕುಟುಂಬವನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಮತಾಂಧರು ಆಕೆಯನ್ನು ಉಳಿಸುವುದಿಲ್ಲ ಎಂದು ಅವರಿಗೂ ಗೊತ್ತು.

ಇಮಾಮ್ ಹಫೀಜ್ ಮೊಹಮದ್ ಖಾಲಿದ್ ಚಿಸ್ತಿ ಇಷ್ಟೆಲ್ಲಾ ಬಹಾನಾ ಕಟ್ಟಿ ರಿಮ್ಷಾಳನ್ನು ಕೊಲ್ಲಲು ಬಂದಿದ್ದೇಕೆ ಗೊತ್ತೆ?

ಸ್ಥಳೀಯ ಕ್ರೈಸ್ತರನ್ನು ಬೆದರಿಸಿ ಓಡಿಸಿ, ಅವರ ಆಸ್ತಿ ಲಪಟಾಯಿಸಲು! ಆಸ್ತಿ ಕಬಳಿಸುವುದಕ್ಕೋಸ್ಕರ ಪವಿತ್ರ ಧರ್ಮಗ್ರಂಥದ ಹಾಳೆಯನ್ನೇ ಹರಿಯುವ ಇಂತಹ ಕುತ್ಸಿತ ಮನಸ್ಸುಗಳೇ ಸ್ವಧರ್ಮೀಯಳಾದ ಮಲಾಲಾ ಯುಸಫ್್ಜಾಯಿಯನ್ನೂ ಬಿಟ್ಟಿಲ್ಲ! ಅದಿರಲಿ, ರಿಮ್ಷಾ ಅನಕ್ಷರಸ್ಥಳು, ಓದುವುದಕ್ಕೇ ಬರುವುದಿಲ್ಲ ಎಂದ ಮೇಲೆ ಅದು ಧರ್ಮಗ್ರಂಥವೋ ಅಲ್ಲವೋ ಎಂಬುದಾದರೂ ಹೇಗೆ ಗೊತ್ತಾದೀತು?! ಹಾಗಿರುವಾಗ ಅದು ಧರ್ಮನಿಂದನೆ ಹೇಗಾಗುತ್ತದೆ? ಇನ್ನು ಮಲಾಲಾಳಿಗೆ ಗುಂಡಿಕ್ಕಿರುವ ಮತಾಂಧರನ್ನು ತೆಗೆದುಕೊಳ್ಳಿ, ಪಾಕಿಸ್ತಾನದ ಸ್ವಾತ್್ನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಬಾರದು ಎಂದು ಶಾಲೆಗಳನ್ನು ಮುಚ್ಚಿಸಲು ಪ್ರಯತ್ನಿಸುತ್ತಿರುವ ಇವರು ಯಾರಿಗೆ ಅಪಚಾರವೆಸಗುತ್ತಿದ್ದಾರೆ? ಯಾರಿಗೆ ಅನ್ಯಾಯ ಮಾಡುತ್ತಿದ್ದಾರೆ? ಇಂಟರ್್ನೆಟ್್ನಲ್ಲಿ ‘“Jahalat” ಪದವನ್ನು ಹಾಕಿ ಸರ್ಚ್್ಗೆ ಕೊಡಿ… ಜಹಾಲತ್ ಎಂದರೆ ಇಸ್ಲಾಂ ಬರುವುದಕ್ಕೆ ಮುನ್ನ ಅರೇಬಿಯಾದಲ್ಲಿ ಇದ್ದ ಪರಿಸ್ಥಿತಿ. ಆಗ ಅರೇಬಿಯಾದಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಮರಳಲ್ಲಿ ಹೂತು ಹಾಕುತ್ತಿದ್ದರು. ಅದನ್ನು ನಿಲ್ಲಿಸಿದ್ದು, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದು ಮೊದಲು ಹೇಳಿದ್ದೇ ಪ್ರವಾದಿಯವರು. ಆದರೆ ಇಂದು ಧರ್ಮವನ್ನೇ ಒತ್ತೆಯಾಗಿ ಇಟ್ಟುಕೊಂಡಿರುವ ತಾಲಿಬಾನಿ ಮನಸ್ಥಿತಿಗಳು ಮಾಡುತ್ತಿರುವುದೇನು? ರಿಮ್ಷಾಳಂಥ ಬಾಲಕಿಯನ್ನು ಸುಡಲು ಹೊರಡುವುದು, ಮಲಾಲಾಳಂಥ ಬಾಲಕಿಗೆ ಗುಂಡಿಕ್ಕುವುದು ಯಾವ ಧರ್ಮಕಾರ್ಯ? ಆ ದೇವರೇ ದಯಾಮಯಿಯಾಗಿರುವಾಗ ಧರ್ಮದ ಏಜೆಂಟರೇಕೆ ಇಷ್ಟು ಕ್ರೂರಿಗಳಾಗುತ್ತಿದ್ದಾರೆ?

1947ರಲ್ಲಿ ಧರ್ಮದ ಆಧಾರದ ಮೇಲೆ ಪ್ರತ್ಯೇಕ ರಾಷ್ಟ್ರವನ್ನು ಪಡೆದಾಗ ಮಹಮ್ಮದ್ ಅಲಿ ಜಿನ್ನಾ ಕಂಡಿದ್ದು ಒಂದು ಮಾಡರ್ನ್ ಇಸ್ಲಾಮಿಕ್ ರಾಷ್ಟ್ರವನ್ನು ಕಟ್ಟುವ ಕನಸೇ ಹೊರತು ಮುಸ್ಲಿಮರ ರಕ್ತವನ್ನೇ ಹಿಂಡುವ ಧರ್ಮಾಂಧರ ಕೂಪವನ್ನಲ್ಲ. ದುರದೃಷ್ಟವಶಾತ್, ಜಿನ್ನಾ ತೀರಿಕೊಂಡ ಮೇಲೆ ಪಾಕಿಸ್ತಾನ ಆಗಿದ್ದೇನು? ಭಾರತದಲ್ಲಿ ನಾವು ಕೆಲ ಮುಸಲ್ಮಾನರ ಮೂಲಭೂತವಾದದ ಬಗ್ಗೆ ದೂರುತ್ತೇವೆ. ಆದರೆ ಅವರನ್ನು ನಾವು ಕೇಳುವುದೇನೆಂದರೆ, ಧರ್ಮದ ಆಧಾರದ ಮೇಲೆ ದೇಶ ಒಡೆದು ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರ ರಚಿಸಿಕೊಂಡ ಪಾಕಿಸ್ತಾನಿಯರೇನು ಇಂದು ನೆಮ್ಮದಿಯಾಗಿದ್ದಾರೆಯೇ?! 2012ರಲ್ಲಿ ಮುಸ್ಲಿಮರೇ ಆಗಿದ್ದರೂ 400ಕ್ಕೂ ಹೆಚ್ಚು ಶಿಯಾಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ! ಬಸ್್ಗಳನ್ನು ನಿಲ್ಲಿಸಿ ಶಿಯಾಗಳನ್ನು ಪ್ರತ್ಯೇಕಿಸಿ ಕೊಲ್ಲುವ ಘಟನೆಗಳು, ಶಿಯಾ ಮಸೀದಿಗಳ ಮುಂದೆ ಶುಕ್ರವಾರವೇ ಮಾರಣಹೋಮ ಮಾಡುವಂಥ ಘಟನೆಗಳು ವಾರಕ್ಕೊಂದಾದರೂ ಪಾಕಿಸ್ತಾನದಲ್ಲಿ ಸಂಭವಿಸುತ್ತವೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ. 5.25ರಷ್ಟಿರುವ ಶಿಯಾಗಳನ್ನು ಕಂಡರೆ 70 ಪರ್ಸೆಂಟ್ ಇರುವ ಸುನ್ನಿಗಳು ಸಿಡಿಮಿಡಿಗೊಳ್ಳುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದು ಸಂಧಾನ ಮಾಡುವವರೆಗೂ ಪ್ರತಿವರ್ಷ ಮೊಹರಂ ಸಂದರ್ಭದಲ್ಲಿ ನಮ್ಮ ಉತ್ತರ ಪ್ರದೇಶದಲ್ಲೂ ಶಿಯಾ-ಸುನ್ನಿಗಳು ಬಡಿದಾಡುತ್ತಿದ್ದರು. ಇನ್ನು 1974ರಲ್ಲಿ ಪಾಕಿಸ್ತಾನದ ಸಂಸತ್ತಿನಲ್ಲೇ ಅಹ್ಮದಿಗಳನ್ನು ಮುಸ್ಲಿಮರಲ್ಲ ಎಂಬ ನಿರ್ಣಯ ಅಂಗೀಕಾರ ಮಾಡಲಾಗಿತ್ತು! 1947ರ ದೇಶ ವಿಭಜನೆಯ ನಂತರ ಪ್ರತ್ಯೇಕ ರಾಷ್ಟ್ರದ ಕನಸು ಹೊತ್ತು ಭಾರತ, ಬರ್ಮಾ, ಬಾಂಗ್ಲಾದಿಂದ ಪಾಕಿಸ್ತಾನಕ್ಕೆ ಹೋದ ಮುಸ್ಲಿಮರು ಏನಾದರು? ಇಂದಿಗೂ (ಮೊಹಾಜಿರ್) ವಲಸಿಗರುಗಳೆನಿಸಿಕೊಳ್ಳುತ್ತಿದ್ದಾರೆ, ಹತ್ಯೆಗೀಡಾಗುತ್ತಿದ್ದಾರೆ.

ಹಾಗಿರುವಾಗ…

ಪ್ರೇರಣೆಗಾಗಿ ಪಾಕಿಸ್ತಾನದತ್ತ ಮುಖ ಮಾಡುವ, ನೋಡುವ ಭಾರತದಲ್ಲಿರುವ ಮತಾಂಧ ಮನಸ್ಸುಗಳ ಮೂರ್ಖತನಕ್ಕೆ ಏನನ್ನಬೇಕು? ಒಂದು ಕಾಲದಲ್ಲಿ ನಿತ್ಯವೂ ಹೊತ್ತಿ ಉರಿಯುತ್ತಿದ್ದ ಕಾಶ್ಮೀರದ ಮುಸಲ್ಮಾನರಿಗೂ ಪಾಕಿಸ್ತಾನದ ಜತೆ ಸೇರ್ಪಡೆಯಾದರೆ ಯಾವ ಗತಿ ಎದುರಾಗುತ್ತದೆ ಎಂದು ಗೊತ್ತಾಗಿ ತಣ್ಣಗಾಗಿದ್ದಾರೆ, ಭಯೋತ್ಪಾದನೆಯಿಂದ ಮುಕ್ತಿ ಪಡೆದು ಭಾರತದ ಜತೆ ನೆಮ್ಮದಿಯ ಬದುಕು ನಡೆಸುವ ಮನಸ್ಸು ಮಾಡಿದ್ದಾರೆ, ನಮ್ಮ ಸೇನೆ ಪ್ರೋತ್ಸಾಹಿಸುತ್ತಿರುವ ವಿಲೇಜ್ ಆರ್ಮ್್ಗಳನ್ನು ಸೇರಿ ಭಯೋತ್ಪಾದಕರನ್ನು ತಾವೇ ಮೆಟ್ಟಲು ಹೊರಟಿದ್ದಾರೆ. ಅತ್ತ ಮಲಾಲಾ ಪ್ರಕರಣ ಕೂಡ ಇಡೀ ಪಾಕಿಸ್ತಾನ ಏಕರೀತಿಯಲ್ಲಿ ಚಿಂತಿಸುವಂತೆ ಮಾಡಿದೆ. It has stirred the whole nation. ಎಲ್ಲ ಉದಾರ ಮನಸ್ಸುಗಳೂ ಒಂದಾಗಿವೆ, ಮಾನವೀಯತೆ ಮೇಲುಗೈ ಪಡೆಯುತ್ತಿದೆ. ಒಬ್ಬ ಪುಟ್ಟ ಬಾಲಕಿಗೆ ಅಂಜುವಷ್ಟು ಪುಕ್ಕಲರೇ ಈ ಮತಾಂಧರು? ಇಂಥವರಿಂದ ಪ್ರಚೋದನೆ ಪಡೆಯುತ್ತಿರುವ ಭಾರತದ ಮೂಲಭೂತವಾದಿ ಮನಸ್ಸುಗಳಿಗೂ ಮಲಾಲಾ ಪ್ರಕರಣದಲ್ಲಿ ಒಂದು ಮೆಸೇಜ್, ಸಂದೇಶ ಇದೆಯಲ್ಲವೆ?!

9 Responses to “ಮಲಾಲಾ ಪ್ರಕರಣದಲ್ಲಿ ಭಾರತದ ಮತಾಂಧರಿಗೂ ಒಂದು ಮೆಸೇಜ್ ಇದೆಯಲ್ಲವೆ?”

  1. Aravind says:

    darkness is scared of light!

  2. MOhammed NAsir says:

    ಪ್ರಿಯ ಮಿತ್ರರೇ ,

    ಸಹೋದರಿ ಮಲಾಲಾ ಜೀವನದಲ್ಲಿ ನಡೆದ ಘಟನೆ ನಿಜವಾಗಿಯೂ ಇಸ್ಲಾಂನ ತತ್ವಗಳ ವಿರುದ್ದವಗಿದೆ . ಪವಿತ್ರ ಕುರನ್ ನ Chaptar :05 Vers :32 ನಲ್ಲಿ ಅಲ್ಲ್ಹಾನ ಆದೇಶವಿದೆ “ಯಾರಾದರು ಒಬ್ಬ ಅಮಾಯಕ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವ ಕುಲವನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೋಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ “. ಯಾಕೆ ನಮ್ಮ ಈ ಕ್ರೋರಿ ಮತಾಂಧ ಸೋದರರಿಗೆ ಈ ಮೇಲಿನ ಆದೇಶ್ ಓದಿಲ್ವೋ ಅಥವಾ ಗೊತ್ತಿದು ತಪ್ಪು ಮಾಡತಾಯಿದರೆಯೋ ಗೊತ್ತಿಲ್ಲ . ಇಸ್ಲಾಂ ಧರ್ಮ ಹಾಗು ಪವಿತ್ರ ಕುರನ್ ನಲ್ಲಿ ಯಲ್ಲೂ ಅಮಾಯಕರನ್ನು ಕೊಲ್ಲಲು ಆದೇಶಿಸಿಲ್ಲ . ದಯೇ ಹಾಗೂ ಕರುಣೆನ ಪ್ರತಿಪದಿಸಿದೆ . ಪ್ರವಾದಿ ಮೊಹಮ್ಮದ್ (PBUH) ಅವರು ಜಹಲಾತ್ ನಲ್ಲಿ ಇದ್ದ ಅರಬರಿಗೆ ಹಾಗು ಇಡಿ ವಿಶ್ವಕ್ಕೆ ಮಾರ್ಗದರ್ಶನ ನೀಡಿ, ಕುರನ್ ಮತ್ತು ಅವರ ಹದಿಸ್ ನ ಪಾಲಿಸುವಂತೆ ಹೇಳಿದರು.
    ನಾನು ನನ್ನ ಮುಸ್ಲಿಂ ಮಿತ್ರರಲ್ಲಿ ವಿನಂತಿಸುವದೆಂದರೆ, ನಿಜವಾಗಿಯೂ ನಾವು ನಮ್ಮ ಧರ್ಮದ್ದ ಆದೇಶ್ ಹಾಗು ಪ್ರವಾದಿ ಮೋಹಮ್ಮೆದ್ರ ಜೀವನದ ಅನುಕರಣೆ ನಾವುಗಳು ಮಾಡ್ತಾ ಇದೇವ ? ನಾವು ಇನ್ನೊಂದು ಧರ್ಮನ ಕೀಳಾಗಿ ನೋಡೋದಾಗಲಿ , ಹಿಂಸಿಸುವದಗಲಿ ಸರಿ ಅಲ್ಲಾ. ಇಂದು ಬರಿ ಮಲಾಲಾಳ ಒಬ್ಬಳ ಪರಿಸ್ತಿತಿ ಹೀಗಿಲ್ಲ ,ನಮ್ಮ ಸನಿಹ ಇರುವ ಕುಟುಂಬಗಳ ಪರಿಸ್ತಿತಿನು ಅದೇಥರ ಇದೆ. ಯೋಚಿಸಿ ಮತ್ತು ಸಮಾಜ ಏಳಿಗೆಗೆ ಪ್ರಯತ್ನಿಸಿ.

    ಕೇವಲ ಹೆಸರಿಂದ ಮುಸ್ಲಿಂ ಅನ್ನೋದಗಲಿ ಅಥವಾ ಮತಾಂಧತೆಯ ಅತಿರೆಕತನ ದಿಂದ ವರ್ತಿಸುವದಗಲಿ, ನೀವು ಶ್ರೇಷ್ಟರು ಅಂತಾ ಬಿಂಬಿಸುವುದು ತಪ್ಪು ಹಾಗು ಸತ್ಯ ಮತ್ತು ಕುರನ್ ಗೆ ದೂರವಾದುದು, So, In future we are allowing and entertaining such stupid thinks which happened with Sister MALALA. Every one having rights of Education and living Life.

    ” ಬದುಕಿ ಮಾನವಿಯತಯಿಂದ “

  3. MOhammed NAsir says:

    ಪ್ರಿಯ ಮಿತ್ರರೇ ,

    ಸಹೋದರಿ ಮಲಾಲಾ ಜೀವನದಲ್ಲಿ ನಡೆದ ಘಟನೆ ನಿಜವಾಗಿಯೂ ಇಸ್ಲಾಂನ ತತ್ವಗಳ ವಿರುದ್ದವಗಿದೆ . ಪವಿತ್ರ ಕುರನ್ ನ Chaptar :05 Vers :32 ನಲ್ಲಿ ಅಲ್ಲ್ಹಾನ ಆದೇಶವಿದೆ “ಯಾರಾದರು ಒಬ್ಬ ಅಮಾಯಕ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವ ಕುಲವನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೋಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ “. ಯಾಕೆ ನಮ್ಮ ಈ ಕ್ರೋರಿ ಮತಾಂಧ ಸೋದರರಿಗೆ ಈ ಮೇಲಿನ ಆದೇಶ್ ಓದಿಲ್ವೋ ಅಥವಾ ಗೊತ್ತಿದು ತಪ್ಪು ಮಾಡತಾಯಿದರೆಯೋ ಗೊತ್ತಿಲ್ಲ . ಇಸ್ಲಾಂ ಧರ್ಮ ಹಾಗು ಪವಿತ್ರ ಕುರನ್ ನಲ್ಲಿ ಯಲ್ಲೂ ಅಮಾಯಕರನ್ನು ಕೊಲ್ಲಲು ಆದೇಶಿಸಿಲ್ಲ . ದಯೇ ಹಾಗೂ ಕರುಣೆನ ಪ್ರತಿಪದಿಸಿದೆ . ಪ್ರವಾದಿ ಮೊಹಮ್ಮದ್ (PBUH) ಅವರು ಜಹಲಾತ್ ನಲ್ಲಿ ಇದ್ದ ಅರಬರಿಗೆ ಹಾಗು ಇಡಿ ವಿಶ್ವಕ್ಕೆ ಮಾರ್ಗದರ್ಶನ ನೀಡಿ, ಕುರನ್ ಮತ್ತು ಅವರ ಹದಿಸ್ ನ ಪಾಲಿಸುವಂತೆ ಹೇಳಿದರು.
    ನಾನು ನನ್ನ ಮುಸ್ಲಿಂ ಮಿತ್ರರಲ್ಲಿ ವಿನಂತಿಸುವದೆಂದರೆ, ನಿಜವಾಗಿಯೂ ನಾವು ನಮ್ಮ ಧರ್ಮದ್ದ ಆದೇಶ್ ಹಾಗು ಪ್ರವಾದಿ ಮೋಹಮ್ಮೆದ್ರ ಜೀವನದ ಅನುಕರಣೆ ನಾವುಗಳು ಮಾಡ್ತಾ ಇದೇವ ? ನಾವು ಇನ್ನೊಂದು ಧರ್ಮನ ಕೀಳಾಗಿ ನೋಡೋದಾಗಲಿ , ಹಿಂಸಿಸುವದಗಲಿ ಸರಿ ಅಲ್ಲಾ. ಇಂದು ಬರಿ ಮಲಾಲಾಳ ಒಬ್ಬಳ ಪರಿಸ್ತಿತಿ ಹೀಗಿಲ್ಲ ,ನಮ್ಮ ಸನಿಹ ಇರುವ ಕುಟುಂಬಗಳ ಪರಿಸ್ತಿತಿನು ಅದೇಥರ ಇದೆ. ಯೋಚಿಸಿ ಮತ್ತು ಸಮಾಜ ಏಳಿಗೆಗೆ ಪ್ರಯತ್ನಿಸಿ.

    ಕೇವಲ ಹೆಸರಿಂದ ಮುಸ್ಲಿಂ ಅನ್ನೋದಗಲಿ ಅಥವಾ ಮತಾಂಧತೆಯ ಅತಿರೆಕತನ ದಿಂದ ವರ್ತಿಸುವದಗಲಿ, ನೀವು ಶ್ರೇಷ್ಟರು ಅಂತಾ ಬಿಂಬಿಸುವುದು ತಪ್ಪು ಹಾಗು ಸತ್ಯ ಮತ್ತು ಕುರನ್ ಗೆ ದೂರವಾದುದು, So, In future we are not allowing and entertaining such stupid thinks which happened with Sister MALALA. Every one having rights of Education and living Life.

    ” ಬದುಕಿ ಮಾನವಿಯತಯಿಂದ “

  4. MOhammed NAsir says:

    Dear Pratap.
    Please don’t post my first comment to web,Its having some spell mistake. I’m regrate for the above.

  5. gururaj kodkani says:

    ಒಳ್ಳೆಯ ಲೇಖನ ಪ್ರತಾಪ್ ನಿಜವಾಗಿಯೂ ಇಸ್ಲಾ೦ ನಲ್ಲಿರುವುದೇನು ಎನ್ನುವುದನ್ನು ತಿಳಿದುಕೊಳ್ಳಬೇಕೆ೦ದರೇ ಅ೦ತರ್ಜಾಲದ ತಾಣವಾದ http://www.faithfreedom.orgಗೆ ಭೇಟಿ ಕೊಟ್ಟು ನೋಡಿ.ಅಲಿ ಸಿನ್ಹಾ ಎ೦ಬ ಗುಪ್ತ ವ್ಯಕ್ತಿಯೊಬ್ಬ ಇಸ್ಲಾ೦ನ ಕ್ರೂರತೆಗಳನ್ನು ಹೇಗೆ ಬಯಲಿಗೆಳೆಯುತ್ತಿದ್ದಾನೆ ಎ೦ಬುದು ಗೊತ್ತಾಗುತ್ತದೆ

  6. Raleev says:

    Nice one Pratap

  7. akshay says:

    superb article sir…….

  8. Anand says:

    Nice Article.

  9. U R Great sinha ji,