Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕನ್ನಡ ಕುಲಕೋಟಿ ಹೆಸರಲ್ಲಿ ವ್ಯಯವಾಗುತ್ತಿದೆ 37 ಕೋಟಿ!

ಕನ್ನಡ ಕುಲಕೋಟಿ ಹೆಸರಲ್ಲಿ ವ್ಯಯವಾಗುತ್ತಿದೆ 37 ಕೋಟಿ!

ಇಪ್ಪತ್ತೈದು ವರ್ಷಗಳಷ್ಟು ಸುದೀರ್ಘ ಕಾಲದ ನಂತರ ‘ವಿಶ್ವ ಕನ್ನಡ ಸಮ್ಮೇಳನ’ವನ್ನು ಆಯೋಜಿಸಿದ್ದಾದರೂ ಏಕೆ? ಸಾಮಾನ್ಯವಾಗಿ ಇಂಥದ್ದೊಂದು ಸಮ್ಮೇಳನವನ್ನು ಏಕಾಗಿ ಆಯೋಜಿಸುತ್ತಾರೆ? ಅದರ ಆಶಯವಾದರೂ ಏನು ಹಾಗೂ ಏನಿರಬೇಕು? ಏತಕ್ಕಾಗಿ ಇಷ್ಟು ವರ್ಷಗಳ ಅಂತರದ ನಂತರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ? ಇಷ್ಟೊಂದು ಪ್ರಮಾಣದಲ್ಲಿ ಹಣ ವ್ಯಯ ಮಾಡಿ ಸಮ್ಮೇಳನವನ್ನು ನಡೆಸುವ ಜರೂರತ್ತಾದರೂ ಏನಿತ್ತು? ಜನರ ನಿರೀಕ್ಷೆಗಳು ಏನಿವೆ? ಇಂತಹ ಸಮ್ಮೇಳನಗಳು ಯಾವಾಗ ಸಾರ್ಥಕತೆ ಕಾಣುತ್ತವೆ?

ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ‘ವಿಶ್ವ ಕನ್ನಡ ಸಮ್ಮೇಳನ’ ಆಹ್ವಾನ ಪತ್ರಿಕೆಯನ್ನು ನೋಡಿದ ನಂತರವಂತೂ ಈ ಪ್ರಶ್ನೆಗಳು ಇನ್ನೂ ಬಲವಾಗಿ ಕಾಡುತ್ತಿವೆ!

ಸಮ್ಮೇಳನದ ಉದ್ಘಾಟನೆಗೆ ಇನ್ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರ ಹೆಸರನ್ನು ಆಖೈರು ಮಾಡಿದಾಗ, ಸಾಹಿತಿಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ತನ್ನ ಅಯ್ಕೆಯನ್ನು ಬದಲಿಸದೇ ಹೋದಾಗ ಸಮ್ಮೇಳನದ ಬಗ್ಗೆ ಒಂದಿಷ್ಟು ನಿರೀಕ್ಷೆ, ಸದಭಿಪ್ರಾಯ ಮೂಡಿದ್ದು ಹೌದು.

ಆದರೆ…

ಆಹ್ವಾನ ಪತ್ರಿಕೆ, ಆಹ್ವಾನಿತರ ಹೆಸರು ಹಾಗೂ ಕಾರ್ಯಕ್ರಮಗಳ ಪಟ್ಟಿಯನ್ನು ನೋಡಿದಾಗ ನಿಜಕ್ಕೂ ದಿಗ್ಭ್ರಮೆಯುಂಟಾಗುವಂತಿತ್ತು. ನಾವು ಯಾವುದು ಅಗಬಾರದು ಅಂದುಕೊಂಡಿದ್ದೆವೋ ಅದೇ ನಡೆಯುತ್ತಿದೆ. ಬ್ರಿಟನ್ನಿನಲ್ಲಿ ಮೇಯರ್ ಅಗಿರುವ ಡಾ. ನೀರಜ್ ಪಾಟೀಲ್, ಅಮರನಾಥ್ ಗೌಡ, ಕ್ಯಾಪ್ಟನ್ ಗೋಪಿನಾಥ್, ಮೋಹನ್ ದಾಸ್ ಪೈ, ನಾರಾಯಣಮೂರ್ತಿ ಇಂತಹ ಕೆಲವೇ ಕೆಲವು ಹೆಸರುಗಳನ್ನು ಬಿಟ್ಟು ಉಳಿದ ಎಲ್ಲರ ಹೆಸರನ್ನೂ ವರ್ಷಕ್ಕೊಮ್ಮೆ ನಡೆಯುವ ಒಂದಿಲ್ಲೊಂದು ಸಾಹಿತ್ಯ ಸಮ್ಮೇಳನಗಳ ಪಟ್ಟಿಯಲ್ಲಿ ನೋಡಿರುತ್ತೀರಿ. ಅಷ್ಟರಮಟ್ಟಿಗೆ ಇದು ಮತ್ತೊಂದು ಕನ್ನಡ ಸಾಹಿತ್ಯ ಸಮ್ಮೇಳನವೆನಿಸುತ್ತಿದೆ. ಅಷ್ಟು ಮಾತ್ರವಲ್ಲ, ಸಮ್ಮೇಳನದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಹೆಚ್ಚಿನವು ಕನ್ನಡ ಹಾಗೂ ಸಂಸ್ಕೃತಿಗೆ ಸಂಬಂಧಿಸಿವೆ. ಸಾಂಸ್ಕೃತಿಕ ಕರ್ನಾಟಕ: ಒಂದು ಅವಲೋಕನ , ಕನ್ನಡ ಪುಸ್ತಕೋದ್ಯಮ, ಕೃಷಿ-ಸಾಧನೆ-ಸವಾಲು ಗೋಷ್ಠಿ, ದೇಸಿ ಚಿಂತನೆ , ಕನ್ನಡ ಭಾಷಾ ಬಳಕೆ, ದಲಿತ ಸಂಸ್ಕೃತಿಯ ಅನನ್ಯತೆ ಇಂತಹ ವಿಷಯಗಳು ವಿಶ್ವ ಕನ್ನಡ ಸಮ್ಮೇಳನದಲ್ಲಿ ಚರ್ಚೆಯಾಗಬೇಕಾದ ಸಬ್ಜೆಕ್ಟ್್ಗಳೇ? ಇದರ ಮಧ್ಯೆ ಸಿರಿಗನ್ನಡ ಕವಿಗೋಷ್ಠಿ, ಬಹುಭಾಷಾ ಕವಿಗೋಷ್ಠಿ, ಜಾನಪದ ನೃತ್ಯ, ಸುಗಮ ಸಂಗೀತ, ವೀರಗಾಸೆ, ಸಾಮೂಹಿಕ ಯೋಗ, ಯುಗಳ ನೃತ್ಯ, ನೃತ್ಯ ರೂಪಕ, ಗಿಟಾರ್ ವಾದನ, ಕೀಬೋರ್ಡ್, ವಾದ್ಯಸಂಗೀತ, ಸಂಗೀತ ಸಂಜೆ, ಸಮೂಹ ಗಾಯನ, ಶಾಸ್ತ್ರೀಯ ನೃತ್ಯ, ವಚನ ಗಾಯನ, ದಾಸರ ಪದ, ಗಝಲ್, ಯಕ್ಷಗಾನ, ಡೊಳ್ಳು ಕುಣಿತ, ಶೋಬಾನೆ ಪದ, ಕೊಳಲು ವಾದನ, ನೃತ್ಯ ವೈವಿಧ್ಯ, ಹರಿಕಥೆ… ಇವುಗಳನ್ನೆಲ್ಲ ನೋಡಿದರೆ ಇದೇನು ಸಾಹಿತ್ಯ ಹಾಗೂ ಸಾಂಸ್ಕೃತಿಕ ಮೇಳ, ಜಾತ್ರೆ ಅಥವಾ ಜನರನ್ನು ರಂಜಿಸಲು ಅಯೋಜನೆಯಾಗಿರುವ ಕಾರ್ಯಕ್ರಮವೋ ಎಂಬ ಅನುಮಾನ ಕಾಡುತ್ತಿದೆ. ಇಷ್ಟಕ್ಕೂ ವರ್ಷಕ್ಕೊಮ್ಮೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ವಿಶ್ವಕನ್ನಡ ಸಮ್ಮೇಳನಕ್ಕೂ ಯಾವ ವ್ಯತ್ಯಾಸ ಕಾಣುತ್ತಿದೆ? ಸಾಹಿತ್ಯ ಸಮ್ಮೇಳನಕ್ಕೆ ಸರಕಾರ 1 ಕೋಟಿ ರೂ. ನೀಡುತ್ತದೆ. ಈಗ 37 ಕೋಟಿ ಚೆಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಸಲು ಸರಕಾರವೇ ಹೊರಟಿದೆ. ಸಾಹಿತ್ಯ ಸಮ್ಮೇಳನದಂತೆಯೇ ಇಲ್ಲೂ ಯಥಾ ಕಾರ್ಯಕ್ರಮಗಳು ಜರುಗುತ್ತವೆ. ಗೋಷ್ಠಿಗಳು ನಡೆಯುತ್ತವೆ, ಅ.ರಾ. ಮಿತ್ರ, ಕೃಷ್ಣೇಗೌಡ, ರಿಚರ್ಡ್ ಲೂಯಿಸ್ ಮುಂತಾದವರು ನಮ್ಮನ್ನು ನಗಿಸಿ, ಕಪ್ಪಣ್ಣ ಮತ್ತಿತರರು ನಟಿಸಿ ಹೋಗುತ್ತಾರೆ, ಒಂದಷ್ಟು ಸಾವಿರ ಜನರಿಗೆ ಸರಕಾರದ ಖರ್ಚಿನಲ್ಲಿ ಊಟ ಬಡಿಸುತ್ತಾರೆ ಅಷ್ಟೇ.

ಒಂದು ವೇಳೆ, ಸರಕಾರದ ಉದ್ದೇಶ ಇಷ್ಟೇ ಆಗಿದೆ ಎಂದಾಗಿದ್ದರೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ತಿಂಗಳು ತುಂಬುವಷ್ಟರಲ್ಲಿ 37 ಕೋಟಿ ಸುರಿದು ಮತ್ತೊಂದು ಸಾಹಿತಿ, ಕಲಾವಿದರ ಕಮ್ಮಟ ನಡೆಸುವ ಅಗತ್ಯವೇನಿತ್ತು? ಖಂಡಿತ ಸಾಹಿತಿಗಳು, ಕಲಾವಿದರು ಇವರ ಬಗ್ಗೆ ನಮ್ಮೆಲ್ಲರಿಗೂ ಗೌರವ, ಪ್ರೀತಿ, ಆದರ ಎಲ್ಲವೂ ಇವೆ. ಅದರೆ ಮೊನ್ನೆಯಷ್ಟೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಿ. ವೆಂಕಟಸುಬ್ಬಯ್ಯ, ನಿಸಾರ್ ಅಹಮದ್, ದೇಜಗೌ, ಪಾಟೀಲ ಪುಟ್ಟಪ್ಪ, ಹಂ.ಪ. ನಾಗರಾಜಯ್ಯ, ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಏಣಗಿ ಬಾಳಪ್ಪ, ಜಯಶೀಲರಾವ್ ಅವರಿಂದಲೇ ಮಾತಾಡಿಸಿ, ಭಾಷಣ ಮಾಡಿಸಿ ಸಮ್ಮೇಳನ ಮುಗಿಯಿತು, ಯಶಸ್ವಿಯಾಯಿತು ಎಂದು ಸರ್ಕಾರ ಬೀಗುವುದೇ ಆಗಿದ್ದರೆ ಜನ ಸಾಮಾನ್ಯರ 37 ಕೋಟಿ ತೆರಿಗೆ ಹಣವನ್ನು ಪೋಲು ಮಾಡಲು ಹೊರಟಿದ್ದು ಎಷ್ಟರಮಟ್ಟಿಗೆ ಸರಿ? ಯಾವ ಪುರುಷಾರ್ಥಕ್ಕಾಗಿ? “ಕನ್ನಡ ಪ್ರಪಂಚವೆಂಬುದು ಬಹಳಷ್ಟು ಕ್ಷೇತ್ರಗಳ ಪ್ರತಿಭೆಗಳಿಂದ ಕೂಡಿದೆ. ವಿಜ್ಞಾನಿಗಳು, ವಾಸ್ತುಶಿಲ್ಪಿಗಳು, ಎಂಜಿನಿಯರ್್ಗಳು, ಬಂಡವಾಳ ಹೂಡಿಕೆದಾರರು, ಕ್ರೀಡಾಪಟುಗಳು, ಅಧಿಕಾರಶಾಹಿಗಳು ಹೀಗೆ ಹತ್ತು ಹಲವರು ಕರ್ನಾಟಕವನ್ನು ರೂಪಿಸಿದ್ದಾರೆ. ಸಮ್ಮೇಳನದ ಅಮಂತ್ರಣ ಪತ್ರವನ್ನು ನೋಡಿದರೆ ಹೆಚ್ಚಿನವರು ಸಾಹಿತ್ಯ ಕ್ಷೇತ್ರದವರಾಗಿದ್ದರೆ, ಉಳಿದವರ ಸಂಖ್ಯೆ ಅತಿ ಕಡಿಮೆ. ನೀರಜ್ ಪಾಟೀಲ್, ಕ್ಯಾಪ್ಟನ್ ಗೋಪಿನಾಥರಂಥ ಕೆಲವರಿದ್ದರೂ ಸಾಹಿತ್ಯೇತರ ಕ್ಷೇತ್ರದವರ ಪಾತ್ರ ಕೇವಲ ಉದ್ಘಾಟನೆ ಹಾಗೂ ಅಧ್ಯಕ್ಷತೆಗೆ ಸೀಮಿತವಾಗಿದ್ದು, ವಿಚಾರ ಮಂಡಿಸುವವರು ಬರಹಗಾರರಾಗಿದ್ದಾರೆ” ಎಂದು ಇಂಗ್ಲಿಷ್ ಪತ್ರಿಕೆ ‘ಡೆಕ್ಕನ್್ಹೆರಾಲ್ಡ್್’ನ ವಿಶೇಷ ವರದಿಯೊಂದರಲ್ಲಿ ಮಾಡಿರುವ ಟೀಕೆ ನಿಜಕ್ಕೂ ಗಮನಾರ್ಹ.

ಹಾಗಾದರೆ 3 ವರ್ಷಗಳಿಂದಲೂ ವಿಶ್ವಕನ್ನಡ ಸಮ್ಮೇಳನಕ್ಕೆ ತಯಾರಿ ಮಾಡುತ್ತಿದ್ದ ಸರಕಾರ ಏನು ಮಾಡಬಹುದಿತ್ತು?

1915, ಜನವರಿ 9. ಅದು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಚಳವಳಿಗೆ ಧುಮುಕಲು ದಕ್ಷಿಣ ಆಫ್ರಿಕಾದಿಂದ ಸ್ವದೇಶಕ್ಕೆ ಮರಳಿದ ದಿನ. ಅದನ್ನು ಗಮನದಲ್ಲಿಟ್ಟುಕೊಂಡು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು 2003ರಲ್ಲಿ ಜನವರಿ 9ನ್ನು ‘ಪ್ರವಾಸಿ ಭಾರತೀಯ ದಿವಸ್್’ ಆಗಿ ಆಚರಿಸಲು ಮುಂದಾದರು. ಜಗತ್ತಿನ ವಿವಿಧ ದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ, ಅಲ್ಲೇ ಹಣ, ಖ್ಯಾತಿ ಗಳಿಸಿರುವ ಭಾರತೀಯ ಮೂಲದವರನ್ನು ವರ್ಷಕ್ಕೊಮ್ಮೆ ಸ್ವದೇಶಕ್ಕೆ ಕರೆಸಿ ಸಮ್ಮಾನಿಸುವ, ಆ ಮೂಲಕ ತಾಯ್ನಾಡ ಜತೆ ಮತ್ತೆ ಬೆಸೆಯುವ, ಚಿಗುರಿಗೆ ಮೂಲ ಬೇರಿನ ಜತೆ ಸಂಪರ್ಕ ಕಲ್ಪಿಸುವ ಮಹತ್ತರ ಕಾಯಕಕ್ಕೆ ಕೈಹಾಕಿದರು. ಸಾಧಕರಿಗೆ ವರ್ಷದ ವ್ಯಕ್ತಿ, ಇನ್ನಿತರ ಗೌರವಗಳನ್ನು ನೀಡುವ ಸಂಪ್ರದಾಯ ಆರಂಭಿಸಿದರು. ತಾಯ್ನಾಡಿನಲ್ಲಿ ಬಂಡವಾಳ ಹೂಡುವಂತೆ ಪ್ರೇರೇಪಿಸಿದರು. ದ್ವಿಪೌರತ್ವ ನೀಡುವ ಕಲ್ಪನೆ ಮೊಳಕೆಯೊಡೆದಿದ್ದೂ ಹೀಗೆಯೇ. 2003ರಿಂದ ಇದುವರೆಗೂ ಪ್ರತಿವರ್ಷವೂ ಜನವರಿ 9ರಂದು ಪ್ರವಾಸಿ ಭಾರತೀಯ ದಿವಸ ಆಚರಣೆಯಾಗುತ್ತಾ ಬಂದಿದೆ. ಈ ದೇಶ ಬಿಟ್ಟು ಹೋದವರನ್ನು ಮತ್ತೆ ತಾಯ್ನಾಡಿನ ಸಂಪರ್ಕಕ್ಕೆ ತರುವ, ಭಾರತೀಯತೆ(ಇಂಡಿಯನ್ನೆಸ್) ಎಂಬ ಭಾವನಾತ್ಮಕ ಬೆಸುಗೆಯ ಮೂಲಕ ಒಂದು ಮಾಡುವ ಕೆಲಸ ನಡೆಯುತ್ತಿದೆ. ಡಾ. ಬಿ.ಎಸ್. ಯಡಿಯೂರಪ್ಪನವರ ಸರಕಾರ ‘ವಿಶ್ವ ಕನ್ನಡ ಸಮ್ಮೇಳನ’ ನಡೆಸಲು ಮುಂದಾದಾಗಲೂ ಇಂಥದ್ದೇ ನಿರೀಕ್ಷೆಗಳೆದ್ದಿದ್ದವು.

ಕನ್ನಡತನ!

ಇಂಡಿಯನ್ನೆಸ್್ನಂತೆಯೇ ಕನ್ನಡತನ ಎಂಬುದೂ ಇದೆ. ಒಕ್ಕಲು, ಉದ್ಯ,ಮ, ವಿಜ್ಞಾನದಿಂದ ಶಿಕ್ಷಣ, ಸಂಗೀತ, ಸಾಹಿತ್ಯ ಎಲ್ಲವೂ ಸೇರಿಯೇ ಕನ್ನಡತನವಾಗುವುದು. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರ ವಿಶ್ವದಾದ್ಯಂತ ಇರುವ ಕನ್ನಡಿಗರನ್ನೆಲ್ಲ ‘ಹೋಮ್್ಕಮಿಂಗ್್’ನಂತೆ ಒಂದೆಡೆ ಸೇರಿಸುವ, ಒಂದೇ ವೇದಿಕೆಗೆ ತರುವ, ಸಾಧಕರನ್ನು ಸನ್ಮಾನಿಸುವ, ನಾವೆಲ್ಲ ಒಂದೇ ಮತ್ತು ಒಂದಾಗಬೇಕು, ಪರಸ್ಪರರ ಏಳಿಗೆಗೆ ಶ್ರಮಿಸಬೇಕೆಂಬ ಒತ್ತಾಸೆಯ ಮೂಲಕ ಕನ್ನಡತನವನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತದೆ ಎಂದು ಭಾವಿಸಲಾಗಿತ್ತು. ಹಾಗಾಗಿ ಅಥ್ಲೀಟ್ ಅಶ್ವಿನಿ ಅಕ್ಕುಂಜೆ, ಯಾರ ಹಂಗಿಲ್ಲದೆ ನುಡಿಸಿರಿಯಂಥ ಕನ್ನಡದ ಸೇವೆ ಮಾಡುತ್ತಾ ಬರುತ್ತಿರುವ ಮೂಡಬಿದ್ರೆಯ ಡಾ. ಮೋಹನ್ ಆಳ್ವ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಸಾಧಕರನ್ನು ಕರೆದು ಸಮ್ಮಾನಿಸಬಹುದಿತ್ತು. ನಾವೆಷ್ಟೇ ಸಾಧನೆಗೈದರೂ ತವರಿನಲ್ಲಿ ತಮಗೆ ಮಾನ್ಯತೆ, ಆದರ ದೊರೆತಿಲ್ಲ ಎಂಬ ಕೊರಗನ್ನು ದೂರಮಾಡಬಹುದಿತ್ತು.

ಆ್ಯಸ್ಟ್ರೋಫಿಸಿಕ್ಸ್್ನಲ್ಲಿ ಜಗದ್ವಿಖ್ಯಾತಿ ಗಳಿಸಿರುವ, ಅಮೆರಿಕ ಅಧ್ಯಕ್ಷ ಒಬಾಮ ಅವರ ಸಲಹೆಗಾರರಲ್ಲಿ ಒಬ್ಬರಾಗಿರುವ, ಮುಂದೊಂದು ದಿನ ನೊಬೆಲ್ ಗಳಿಸುವ ಎಲ್ಲ ಸಾಧ್ಯತೆಯನ್ನೂ ಹೊಂದಿರುವ ವಿಜ್ಞಾನಿ ಹಾಗೂ ಹೆಮ್ಮೆಯ ಕನ್ನಡಿಗ ಶ್ರೀನಿವಾಸ ಕುಲಕರ್ಣಿ, ಅಮೆರಿಕದಲ್ಲೇ ಇರುವ ಮತ್ತೊಬ್ಬ ಖ್ಯಾತ ಸಂಶೋಧಕ, ವಿಜ್ಞಾನಿ ನಾರಾಯಣ ಸದಾಶಿವ ಹೊಸಮನೆ, ಚಂದ್ರಯಾನ ಯೋಜನೆಯಲ್ಲಿರುವ ಹಾಗೂ ಟೆಲಿಮೆಟ್ರಿ ರೂಪಿಸಿರುವ ಡಾ. ಎಸ್.ಕೆ. ಶಿವಕುಮಾರ್, ಇಸ್ರೋ ಅಧ್ಯಕ್ಷರಾಗಿದ್ದ ಪ್ರೊ. ಯು.ಆರ್. ರಾವ್, ರೊದ್ಧಂ ನರಸಿಂಹ, ಸಿಎನ್್ಆರ್ ರಾವ್ ಮುಂತಾದವರನ್ನು ಕರೆಸಿ, ಇಂಥವರಿಗೆ ಜನ್ಮ ನೀಡಿದ ನಾಡು ನಮ್ಮದು ಎಂಬುದನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಡುವ, ನಮ್ಮ ಮುಂದಿನ ತಲೆಮಾರಿಗೆ ಪ್ರೇರಣೆಯಾಗಿಸುವ ಕೆಲಸ ಮಾಡಬಹುದಿತ್ತು.

ಇಷ್ಟಕ್ಕೂ 1985ರಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ಇದ್ದ ಸನ್ನಿವೇಶಕ್ಕೂ ಈಗ ಸೃಷ್ಟಿಯಾಗಿರುವ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆ. ಈಗ ಕನ್ನಡ ಎಂದರೆ ಬರೀ ಭಾಷೆಯ ವಿಚಾರವಾಗಿ ಉಳಿದಿಲ್ಲ. ಕನ್ನಡಿಗರ ಅಸ್ತಿತ್ವಕ್ಕೇ ಕುತ್ತು ಎದುರಾಗಿದೆ. ಅಂದರೆ ಲೈವ್ಲಿಹುಡ್ ಯಾವಾಗಲೂ ಒಂದು ಬಹುಮುಖ್ಯ ಪ್ರಶ್ನೆ. ಕನ್ನಡ ಉಳಿಯಬೇಕು ಅಂದರೆ ಕನ್ನಡಿಗರು ಉಳಿಯಬೇಕು. ಬೆಂಗಳೂರಿನಲ್ಲಿ ಭಾಷೆಯ ತೊಡಕಿನಿಂದಾಗಿ ಒಬ್ಬ ಸೆಕ್ಯುರಿಟಿಯ ಕೆಲಸವೂ ಅನ್ಯ ರಾಜ್ಯದವರ ಪಾಲಾಗುತ್ತಿದೆ. ಇಂತಹ ಸಮಸ್ಯೆಗೆ ಸಾಹಿತಿಗಳಿಂದ ಪರಿಹಾರ ಸಿಗಲು ಸಾಧ್ಯವೆ? ನಾರಾಯಣಮೂರ್ತಿಯವರಿಂದ ಸಾಂಕೇತಿಕವಾಗಿ ಸಮ್ಮೇಳನದ ಉದ್ಘಾಟನೆ ಮಾಡಿಸಿದರೆ ಸಾಕೇ? ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ, ಸಿಂಹಪಾಲು ಪಡೆದುಕೊಳ್ಳಲು ಈ ವೇದಿಕೆಯನ್ನು ಬಳಸಿಕೊಳ್ಳಬಹುದಿತ್ತು. ಹಾಗಾಗಬೇಕಾದರೆ ಒಟ್ಟಾರೆಯಾಗಿ ಇಂಡಸ್ಟ್ರಿಯನ್ನೂ ಭಾಗಿಯಾಗಿಸಿಕೊಳ್ಳಬೇಕಿತ್ತು. ಇವತ್ತು ಸವಾಲು ಎದುರಾಗಿರುವುದು ಕನ್ನಡ ಭಾಷೆಗಲ್ಲ, ಕನ್ನಡಿಗನಿಗೆ. ಇಂತಹ ಸನ್ನಿವೇಶದಲ್ಲಿ ಸಾಹಿತ್ಯ, ಭಾಷಾ ಗೋಷ್ಠಿಗಳನ್ನೇ ಮಾಡಿಕೊಂಡು ಕೂರಬೇಕೇ ಅಥವಾ ಆಂಥ್ರಪ್ರೆನರ್್ಗಳನ್ನು ಕರೆಸಿ, ಕನ್ನಡಿಗರಿಗೆ ಉದ್ಯೋಗ ಸೃಷ್ಟಿ ಮಾಡುವ ಬಗೆ ಹೇಗೆ ಎಂದು ಕೇಳಬೇಕಿತ್ತೆ? ಈ ರೀತಿಯ ಸಮಸ್ಯೆಗಳಿಗೆ ಅಮೆರಿಕದಲ್ಲಿರುವ ಸಾಫ್ಟ್್ವೇರ್ ಉದ್ಯಮಿ ಗುರುರಾಜ್ ದೇಶಪಾಂಡೆ, ಕ್ಯಾಪ್ಟನ್ ಗೋಪಿನಾಥ್, ನಾರಾಯಣಮೂರ್ತಿ, ಕೆಫೆ ಕಾಫಿ ಡೇ ಖ್ಯಾತಿಯ ಚಿಕ್ಕಮಗಳೂರಿನ ವಿ.ಜಿ. ಸಿದ್ಧಾರ್ಥ, ವಿಶ್ವದ ಅತ್ಯಂತ ಕಿರಿಯ ಸಿಇಓ ಎನಿಸಿದ್ದ ಸುಹಾಸ್ ಗೋಪಿನಾಥ್ ಅವರಲ್ಲಿ ಪರಿಹಾರ ಕೇಳಬೇಕೋ ಅಥವಾ ಅದೇ ಹಂಪಾನಾ, ಅದೇ ಅನಂತಮೂರ್ತಿ, ಬರಗೂರು, ಬಾಳಪ್ಪ, ನಿಸಾರ್ ಅಹ್ಮದ್ ಭಾಷಣ, ಬೊಬ್ಬೆಗಳಲ್ಲಿ ಪರಿಹಾರ ಹುಡುಕಬೇಕೋ? ವಿಶ್ವ ಎಷ್ಟೊಂದು ವಿಶಾಲವಾಗಿದೆ ಎಂದು ಸರ್ಕಾರಕ್ಕೆ ಗೊತ್ತಾಗುವುದು ಯಾವಾಗ? ಈ ಮೂರು ದಿನಗಳಲ್ಲಿ ಇವರೇನು ಮಾಡಿಯಾರು, ಏನು ಸಾಧಿಸಿಯಾರು? ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಧ್ಯಮವಾಗಬೇಕು ಎಂದು ಭುವನೇಶ್ವರಿಯೇ ಮೈಮೇಲೆ ಬಂದಂತೆ ಮಾತನಾಡುತ್ತಾರೆ. ಈ ಬಗ್ಗೆ ಒಂದು ನಿರ್ಣಯ, ಗೊತ್ತುವಳಿಯನ್ನೂ ಹೊರಡಿಸಬಹುದು. ಜತೆಗೆ ಅದೇ ರಾಗ, ಬೆಳಗಾವಿ, ಕಾಸರಗೋಡು ಬಗ್ಗೆ ಬೊಬ್ಬೆ. ಜನರ ಭಾವನೆಗಳನ್ನು ಕೆರಳಿಸುವ ಮಾಮೂಲಿ ಭಾಷಣ. ಕಾಸರಗೋಡು ಮುಂದೆಂದೂ ಕರ್ನಾಟಕದ ಭಾಗವಾಗುವುದಿಲ್ಲ, ಬೆಳಗಾವಿ ಎಂದೆಂದಿಗೂ ಕರ್ನಾಟಕದ ಕೈಬಿಟ್ಟು ಹೋಗುವುದಿಲ್ಲ ಎಂದು ಗೊತ್ತಿದ್ದರೂ ಮತ್ತದೇ ಚೀರಾಟ. ಬಿಜೆಪಿಗೆ ಯಾರು ಫಂಡ್ ಕೊಡುತ್ತಿದ್ದಾರೋ ಅವರಿಗೆ ಲಾಭದಾಯಕ ಕಾಂಟ್ರ್ಯಾಕ್ಟ್ ದೊರೆತಿದ್ದಷ್ಟೇ ಈ ಮೇಳದ ಹೆಗ್ಗಳಿಕೆ. ಇದೇನೇ ಇರಲಿ, ಈ ಸಮ್ಮೇಳನದ ಉದ್ದೇಶ ಕನ್ನಡದ ಹಿತಾಸಕ್ತಿಗೆ ಇಂಬು ಕೊಡುವುದಾಗಿದ್ದರೆ, ಜಗತ್ತಿನ ಮೂಲೆ ಮೂಲೆಗಳಿಗೂ ವಿಸ್ತರಿಸಿರುವ ಕನ್ನಡಿಗರ ಅತ್ಮಸ್ಥೈರ್ಯವನ್ನು ಹೆಚ್ಚಿಸುವ ಗುರಿ ಹೊಂದಿದ್ದರೆ, ಕನ್ನಡಿಗರಿಗೆ ಬದುಕು ಕಟ್ಟಿಕೊಡುವ ಉದ್ದೇಶ ಇಟ್ಟುಕೊಂಡಿದ್ದಿದ್ದರೆ ಮೆಚ್ಚಬಹುದಿತ್ತು.

ಆದರೆ ಆಗುತ್ತಿರುವುದೇನು?

ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ವಿಜಾಪುರ ನವರಸ ಉತ್ಸವ, ಐಹೊಳೆ-ಪಟ್ಟದಕಲ್ಲು ಉತ್ಸವ, ಬನವಾಸಿ ಕದಂಬ ಉತ್ಸವ, ಕರಾವಳಿ ಉತ್ಸವ ಇವುಗಳ ಜೊತೆಗೆ ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟಗಳಲ್ಲಿ ವರ್ಷವೂ ಉತ್ಸವ, ಸಾಹಿತ್ಯ ಸಮ್ಮೇಳನಗಳು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಖರ್ಚಿನಲ್ಲಿ ನಡೆಯುತ್ತವೆ. ಆ ಸಂದರ್ಭದಲ್ಲಿ ವಿಚಾರ ಸಂಕಿರಣಗಳು, ಗೋಷ್ಠಿಗಳದ್ದೇ ಪ್ರಧಾನ ಪಾತ್ರವಾಗಿರುತ್ತದೆ. ಹಾಗಿರುವಾಗ ಮತ್ತೊಂದು ಭಾಷಾಮೇಳವನ್ನು ಮಾಡುವ ಅಗತ್ಯವಿತ್ತೇ? ಕನ್ನಡ ಕುಲಕೋಟಿಯ ಹೆಸರಿನಲ್ಲಿ ಪೋಲಾಗುತ್ತಿದೆಯಲ್ಲ ಆ ಕೋಟಿ ಕೋಟಿ ಯಾರ ಗಂಟು?

31 Responses to “ಕನ್ನಡ ಕುಲಕೋಟಿ ಹೆಸರಲ್ಲಿ ವ್ಯಯವಾಗುತ್ತಿದೆ 37 ಕೋಟಿ!”

 1. kavyashree bhat k says:

  it’s nice

 2. manju says:

  really this is great article

 3. Ifully endorse what has been stated herein… The state Govt. has miserably failed in providing houses for the floodhit people of Uttara karnataka even after sufficiently long period… what steps are being initiated in making Kannadas presence being felt in the state capital?The money thus wasted goes into the pocket of various rich class of contractors who sieze the opportunity. At the end of the day if one takes stock of things its the same old adage: Yaraddo duddu…Ellammana Jatre!

 4. Raveesh Bhat says:

  Gr8 article. Hope people in power read this and change themselves a little.

 5. varthi says:

  smmamelana kevala tv channel galige news ayitu shahtigalige hagu gannya vekthigalige belgaum trip ayitu.adakke helodu Yaraddo duddu…Ellammana Jatre
  result is BIG ZERO……….

 6. varthi says:

  NEVU BARIDIRO ARTICLE 100% CORRECT AND PARTHIOBBRU THINK MADABEKU

 7. sharan.gurikar says:

  However we have to develop our kannad in B’lore and Blgum like this area.can you suggest how we develop our kannad without money and without like this fuction

 8. Vidwath says:

  Modhalu karnataada sutha beeli haakisbeku. . Yediyurappanavara kela cabinet ministersu Andhra pradesha karnataka ondhu madiddare!!
  Haage Belgaumigu saha

 9. sharath says:

  Hi, I saw ur article 2day and read it. If u r really concerned about issue, u would have shared ur ideas with CM r any other authorities while they were planning to organize that event. But I know that you have not done it. U r simply blaming Govt. and thereby targeting CM. Don’t think that by blaming politicians u can become a great personality. U r simply misleading the people of Karnataka.

  Our CM BSY is a very good man when compare to HDK and others. At least he has patience to listen someones voice and pain. So no other good alternatives for BSY in Karnataka, today(u knew it). But u and ur editor r trying to pull him down the Chair. If u get succeed in it, think that u hav cheated entire Karnataka and also yourself.

 10. ajay kumar says:

  good artilcle ….

 11. sriram says:

  yaaradu duddu yallamma na jaatre namagella katri……..kannda janakoti eli eddeli

 12. Satish Shet says:

  ತುಂಬ ಅರ್ಥ ಗರ್ಭಿಥ ಮಾತು !! ಕನ್ನಡ ಅಂದ್ರೆ ಸಾಹಿತಿಗಳು ಮಾತ್ರ ಅಲ್ಲ

 13. B N Yalamalli says:

  With due respect to Pratap Simha ( normally we enjoy all his postings),this article seems to be hurriedly written just after deciding a stand point. It does not come strongly from within, like his other postings.

  There is a futile attempt to search his undue expectations. Tell me, which party government in India, with politics and survival as its main agenda, can organise a better social event.

  Any organising body would have commited similar, if not the same, flaws.
  The list of invitees to be honoured will be endless ans can not have universal appeal.

  The main point is whether the political governments should directly involve and plan such events or should leave it to the experts/ expert bodies in literature, art, industry etc. With the direct involvement of the government, there will be huge funds and undue wastages.

 14. Raghavendra says:

  This is realy very important point. Each citizen of karnataka should think about it. Government is unnecessarily wasting our money. 37 Crore may be utilized to help poor people.

 15. Sunaath says:

  ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಅತ್ಯಂತ ದಕ್ಷತೆಯಿಂದ ಜರುಗಿಸಲಾಯಿತು ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಅಷ್ಟರ ಮಟ್ಟಿಗೆ, ಆಯೋಜಕರಿಗೆ ಹಾಗು ಸಂಯೋಜಕರಿಗೆ ಅಭಿನಂದನೆಗಳು. ಆದರೆ ಸಮ್ಮೇಳನದ ಪ್ರಯೋಜನವೇನು ಎಂದು ಕೇಳಿದಾಗ ಅದಕ್ಕೆ ಉತ್ತರವಿಲ್ಲದಂತಾಗುತ್ತದೆ. ಈ ದಿಸೆಯಲ್ಲಿ ನೀವು ಬರೆದದ್ದು ಸರಿಯಾಗಿಯೇ ಇದೆ.

 16. Shrinivas says:

  Dear Pratap,
  Its very prolific, I wonder it is published before Sammelana, this could have been very good debate material as your other article about NRN’s invitation, neverthless, hope this gets published in daily

 17. Shashi says:

  Namaste Sir….

  I along with my roommate, we read this article. Both of us thought it would hav been better if u hav suggested this prior to Vishwa kannada Sammelana

  37crores is not small money which can be discarded but atleast u would have SUGGESTED UR IDEA in SOFT WORDS.

  Under the leadership of PRABHAKAR KORE, lot of people hav worked wholeheartedly to make this successful. They may have done mistake but THESE ORGANISERS have done GREAT CONTRIBUTION to society & becuase of their efforts this sammelana didnt had any problems like Sahitya Sammelanas.

  Thats what my thoughts,sir.

 18. Satyarthi says:

  Really good thinking. We were expecting the same thing. The blind movements of our Saahitiis will not take us anywhere. We should open ourselves to the vast world of course with the conciousness of Nation and Culture. Thank you for writing after long time, people like you only think these things. Really thanks.

 19. raksha v says:

  great thinking… good job pratap.keep it up

 20. Aishwarya says:

  ondu vishayada bagegina vivida aayamagalanu paribhaavisuva pari nanage mechchugeyayitu simha ravare..

 21. vijayachandrashekhar says:

  olleya baraha. yochane madabekadantaha vishaya ” VISHWA KANNADA SAMMELANA”.

 22. Abhijeet says:

  bt sir some positive points also there doing this festival….we will showed how big force with us. and …MES also seen us quietly in sammelan……

 23. Vishnuvrath,kolar says:

  Har har mahadev;pratap,i,am really very proud of you;nothing will happen just by writing,do some practical;9880497658

 24. Sangamesh says:

  Pratap, I like the fact that you presented a valuable article. But at the same time, you need to appreciate that this entire festival wasn’t a waster as such. Yeah, it could have been more diversified. But why didnt you take the initiative and advice the government or the organisers well in advance? There is no point in cribbing now. Money is already spent. If you had adviced them a few months back, we would have got more buck for every Rupee spent.

 25. pradeep says:

  Pratap, The article is very good.. the sad fact is that this doesn’t reach out to our so called big people, politicians(Budhdi Jeevigalu..!!).
  Even the government is super blind that, they don’t even know why are they conducting this programs and what will be the outcome and who is going to get benefited out of it. Simply spending crore’s of rupees on a similar program which was happened 1 month back. Instead they could have used that money on infrastructure development and so on.
  I wish your message reaches out everyone out there who are responsible in government.

 26. santu says:

  ನೀವು ಬರೆದದ್ದು ಸರಿಯಾಗಿಯೇ ಇದೆ.

 27. B N Yalamalli says:

  We await an article on Shri Devegowda family, his son Kumarswamy’s jealousey on Mr.Yediyurappa’s continuation beyond a period for which he himself ruled.

 28. gowda says:

  it is wrong massage go to people. This type of articles could not write again. Its hurt of karnataka and kannadigas. If any in this type summit have more expencive, yes. But all of world kannadigas goes together. and share veries things. So dont write again kannadigas.
  Thankyou

 29. SURESHA says:

  Hi,
  Good Theoratically

  Sometimes these functions are required to make kannadigas united.
  This is a great success because it is held at BELGAUM

  Border peoples required these type of initiations.

  Spending money in this way better compared to POLITICIANS ARE EATING THEMSELVES.

  We are with you. If you need any support, we are there with u.

  Suresh – Bellary

 30. Veeresh says:

  ನೀವು ಹೇಳುವುದು ಸರಿಯಾಗಿಯೇ ಇದೆ. ಆದ್ರೆ ಇದನ್ನೆಲ್ಲಾ ಕೆಳೋರು ಯಾರು. ಅವರಿಗೆಲ್ಲಾ ಗೊತ್ತಗುವುದು ಯಾವಾಗ.

 31. PRAKASH says:

  SIR REALLY THIS ARTICLE IS SAYS FACT AND SUGGESTION TO GOVT TO REQUESTING THROUGH THIS ARTICLE PLEASE UTILIZE ALL TYPE OF PEOPLES MONEY IN NEEDFUL WORKS IN FUTURE.