Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ವಿವಾದ ಸೃಷ್ಟಿಸುವುದೇ ಇವರುಗಳ ಜಾಯಮಾನವೇ?

ವಿವಾದ ಸೃಷ್ಟಿಸುವುದೇ ಇವರುಗಳ ಜಾಯಮಾನವೇ?


ಇದೇನಿದು ಸ್ವಾಮಿ? ಇದೆಂಥಾ ಜಾಡ್ಯ?

ಅಲ್ಲಾ, ಪುರಸ್ಕಾರ ಬಂದ ಕೂಡಲೇ ಒಬ್ಬ ವ್ಯಕ್ತಿ ಆ್ಯಕ್ಟಿವಿಸ್ಟ್ ಅಥವಾ ಚಳವಳಿಕಾರನಾಗಿ ಪರಿವರ್ತನೆಯಾಗಬೇಕು ಎಂಬ ನಿಯಮವೇನಾದರೂ ಇದೆಯೇ? ಅಥವಾ ಪುರಸ್ಕಾರವೆಂಬುದು ತಮಗೆ ಸಂಬಂಧಪಡಲಿ, ಬಿಡಲಿ ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಅರ್ಹತೆ ತಂದುಕೊಡುವ ಸ್ಥಾನಮಾನವೇ? ಅಥವಾ ಬಾಯಿಗೆ ಬಂದಂತೆ ಮಾತನಾಡುವ, ಅನ್ಯರ ಬಗ್ಗೆ ಹಗುರವಾಗಿ ಹೇಳಿಕೆ ಕೊಡುವ ಅಧಿಕಾರವೇ?

ನೃಪತುಂಗ ಸಾಹಿತ್ಯ ಪ್ರಶಸ್ತಿ ವಿಜೇತರಾದ ಡಾ. ಎಂ.ಎಂ. ಕಲಬುರ್ಗಿಯವರನ್ನು ನೋಡಿದರೆ ಹಾಗನಿಸುತ್ತಿಲ್ಲವೇ?

“ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾದ ನಂತರ ನೀಡಿದ ಸಂದರ್ಶನದಲ್ಲಿ ‘ಕರ್ನಾಟಕದಲ್ಲಿ ಧರ್ಮ ಬರುವುದಕ್ಕಿಂತ ಮೊದಲು ಜಾತಿ ಗಳಿದ್ದವು’ ಎಂದುಬಿಟ್ಟರು ಕಲಬುರ್ಗಿ! ಒಬ್ಬ ಒಳ್ಳೆಯ ಸಂಶೋಧಕರೆನಿಸಿಕೊಂಡವರು ಯಾವ ದೃಷ್ಟಿ, ಆಧಾರ, ಹಿನ್ನೆಲೆಯಿಟ್ಟುಕೊಂಡು ಕರ್ನಾಟಕದಲ್ಲಿ ಧರ್ಮ ಬರುವುದಕ್ಕಿಂತ ಮೊದಲು ಜಾತಿಗಳಿದ್ದವು ಎಂದು ಹೇಳಿಕೆ ಕೊಟ್ಟರು? ಇಂತಹ ಬಾಲಿಶ ಹೇಳಿಕೆಯನ್ನು ಕಂಡು ಕುಪಿತರಾದ ನಾಡಿನ ಬಹುದೊಡ್ಡ ವಿದ್ವಾಂಸರಾದ ಕೆ.ಎಸ್. ನಾರಾಯಣಾಚಾರ್ಯರು, “ಧರ್ಮ ಎಷ್ಟು ಸನಾತನವಾದುದು, ಧರ್ಮ ಅಂದರೇನು, ಧರ್ಮದ ಅರ್ಥ ಮತ್ತು ಪರಿಧಿಗಳಾವುವು, ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ಧರ್ಮ, ಅಲ್ಲೂ ಪುರುಷ ಧರ್ಮ, ಸ್ತ್ರೀಧರ್ಮಗಳೆಂಬುದಿವೆ’ ಎಂದು ವಿವರಿಸಿ ಲೇಖನವನ್ನೇ ಬರೆದು ಕಲಬುರ್ಗಿಯವರಿಗೆ ಚೆನ್ನಾಗಿಯೇ ಬಿಸಿಮುಟ್ಟಿಸಿದರು, ಅವರ ಅಪ್ರಬುದ್ಧತೆಯನ್ನು ಎತ್ತಿತೋರಿದರು.

ಇಷ್ಟಾಗಿಯೂ ಕಲಬುರ್ಗಿಯವರು ಮಾತ್ರ ಬುದ್ಧಿಕಲಿತಂತಿಲ್ಲ!

ನವೆಂಬರ್ 11ರಿಂದ 13ರವರೆಗೂ ಮೂಡಬಿದ್ರೆಯಲ್ಲಿ ನಡೆದ “ಆಳ್ವಾಸ್ ನುಡಿಸಿರಿ’ಯಿಂದ ಆರಂಭಿಸಿ ನೃಪತುಂಗ ಪ್ರಶಸ್ತಿ ಪಡೆಯುವ ದಿನ ಸೇರಿದಂತೆ ಓತಪ್ರೋತವಾಗಿ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಈ ಹೇಳಿಕೆ ನೀಡುವ ಖಯಾಲಿ ಅವರಿಗೆ ಅಂಟಿಕೊಂಡಿದ್ದಾದರೂ ಏಕೆ? ಯಾವ ಉದ್ದೇಶಕ್ಕಾಗಿ? ಅದಿರಲಿ, ಅವರ ಹೇಳಿಕೆಗಳಲ್ಲಿ ಇರುವ ಹುರುಳಾದರೂ ಏನು?

1. ಕೃಷ್ಣದೇವರಾಯ ಒಬ್ಬ ಕನ್ನಡ ವಿರೋಧಿಯಾಗಿದ್ದ. ಆತನ ತಂದೆ ನರಸ ನಾಯಕ ಕರ್ನಾಟಕದವನೇ ಆದರೂ ತಾಯಿ ತೆಲುಗು ಮೂಲದವಳು. ಆತ ತೆಲುಗಿನವರಿಗೇ ತನ್ನ ಆಸ್ಥಾನದಲ್ಲಿ ಹೆಚ್ಚಿನ ಆದ್ಯತೆ ಕೊಟ್ಟಿದ್ದ.

2. ಇತಿಹಾಸದಲ್ಲಿ ಮತ್ತು ಆಗಿನ ಸಾಹಿತ್ಯದಲ್ಲಿ ಶೈವ ಧರ್ಮದವರು ಇತರ ಧರ್ಮದವರನ್ನು ನಾಶಮಾಡುವ ಮೂಲಕ ತಮ್ಮ ಧರ್ಮ ಬೆಳೆಸಿದರು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಣ್ಣಿಗೇರಿ ಬುರುಡೆಗಳು ಶೈವ ಧರ್ಮದ ಪಡೆ ಮಾಡಿರುವ ಮಾರಣಹೋಮದ ಸಂಕೇತ.

3. ಉಪವಾಸ ಸತ್ಯಾಗ್ರಹ ಪ್ರಹಸನವಾಗಿದೆ, ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ರಾಮಸೇನೆ, ಬಜರಂಗದಳಗಳೆಂಬ ಕಾದಾಟ ಹುಟ್ಟುಹಾಕಿದೆ.

4. ಇಂದು ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯ ಹೆಚ್ಚಲು ಮೈಸೂರು ಅರಸರ ಮೂರ್ಖತನವೇ ಕಾರಣ. ಅವರ ಆಸ್ಥಾನದಲ್ಲಿ ಹೆಚ್ಚಿನ ದಿವಾನರು ತಮಿಳರೇ ಆಗಿದ್ದರು. ಇದೇ ತಮಿಳರ ಪ್ರಾಬಲ್ಯ ಹೆಚ್ಚಲು ಕಾರಣ!

5. ಶಾಲೆಗಳು ಮುಚ್ಚಲು ಸರ್ಕಾರ ಹಾಗೂ ಶಿಕ್ಷಕರೇ ಕಾರಣ. ಸ್ನಾತಕ, ಸ್ನಾತಕೋತ್ತರ ಶಿಕ್ಷಣದ ಸಂದರ್ಭದಲ್ಲಿ ಪಗಾರಕ್ಕಾಗಿ ಬರುವ ಶಿಕ್ಷಕರು ಹಾಗೂ ಪ್ರಮಾಣ ಪತ್ರಗಳಿಗಾಗಿ ಬರುವ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಪಗಾರ ಹೆಚ್ಚಳದಿಂದ ಶಿಕ್ಷಕರು ಸೋಮಾರಿಗಳಾಗಿದ್ದಾರೆ, ವಿಫುಲ ಅನುದಾನದಿಂದ ಭ್ರಷ್ಟರಾಗುತ್ತಿದ್ದಾರೆ!

ಇವೆಂಥ ಮಾತುಗಳು ಸ್ವಾಮಿ?

ಒಬ್ಬ ಸಂಶೋಧಕರೆಂಬ ಕಾರಣಕ್ಕೆ ಏನು ಬೇಕಾದರೂ ಮಾತನಾಡ ಬಹುದಾ? ‘ಕೃಷ್ಣದೇವರಾಯ ಒಬ್ಬ ಕನ್ನಡ ವಿರೋಧಿಯಾಗಿದ್ದ. ಆತನ ತಂದೆ ನರಸ ನಾಯಕ ಕರ್ನಾಟಕದವನೇ ಆದರೂ ತಾಯಿ ತೆಲುಗು ಮೂಲದವಳು. ಆತ ತೆಲುಗಿನವರಿಗೇ ತನ್ನ ಆಸ್ಥಾನದಲ್ಲಿ ಹೆಚ್ಚಿನ ಆದ್ಯತೆ ಕೊಟ್ಟಿದ್ದ’ ಎಂದು ಹೇಳಿಕೆ ಕೊಡುವ ಕಲಬುರ್ಗಿಯವರಿಗೆ ಕನ್ನಡಿಗರ ಮೇಲೆ ಪರ್ಷಿಯನ್ ಭಾಷೆಯನ್ನು ಹೇರಿದ್ದ ಟಿಪ್ಪುಸುಲ್ತಾನ ಏಕೆ ಕನ್ನಡ ವಿರೋಧಿಯಾಗಿ ಕಾಣಿಸುವುದಿಲ್ಲ? ‘ಅಮುಕ್ತ ಮೌಲ್ಯದ’ವನ್ನು ತೆಲುಗಿನಲ್ಲಿ ಬರೆದಿರುವುದು ಕೃಷ್ಣದೇವರಾಯನ ತೆಲುಗು ಪಕ್ಷಪಾತವನ್ನು ತೋರುತ್ತದೆ ಎನ್ನುವುದಾದರೆ ಪರ್ಷಿಯನ್ ಅನ್ನು ಆಡಳಿತ ಭಾಷೆಯಾಗಿ ಮಾಡಿದ್ದ ಟಿಪ್ಪುಸುಲ್ತಾನನೇನು ಕನ್ನಡಪ್ರೇಮಿಯಾಗಿದ್ದನೇ? ಈ ಕಲಬುರ್ಗಿಯವರ ದೊಡ್ಡ ದೌರ್ಬಲ್ಯವೆಂದರೆ ತಮ್ಮೊಳಗಿರುವ ಕಲ್ಪನೆ, ಊಹೆಗಳಿಗೆ ವಿಚಿತ್ರ ಚಿತ್ರಣಗಳನ್ನು ಕೊಡುತ್ತಾರೆ. ಅವರ ‘ಕನ್ನಡ ಅರಸರ, ಅಕನ್ನಡ ಪ್ರಜ್ಞೆ’ ಎಂಬ ಪುಸ್ತಕವನ್ನು ಓದಿದರೆ ಅವರ ನಿಜವಾದ ಧೋರಣೆ ಅರ್ಥವಾಗುತ್ತದೆ. ಹೊಯ್ಸಳ ದೊರೆ ವಿಷ್ಣುವರ್ಧನನ ಎರಡನೇ ಹೆಂಡತಿ ತಮಿಳಿನವಳು, ಆಚಾರ್ಯತ್ರಯರಲ್ಲಿ ಒಬ್ಬರಾದ ರಾಮಾನುಜಾಚಾರ್ಯರಿಂದಾಗಿ ಅವನು ತಮಿಳಿನತ್ತ ವಾಲಿದ, ಶ್ರವಣಬೆಳಗೊಳದ ಬಾಹುಬಲಿಯ ಪಾದದ ಕೆಳಗೆ ಮರಾಠಿ ಅಕ್ಷರಗಳಿದ್ದು ಅದು ಆ ರಾಜರ ಕನ್ನಡ ವಿರೋಧಿ ನಿಲುವನ್ನು ತೋರ್ಪಡಿಸುತ್ತದೆ ಎಂದೆಲ್ಲ ವಾದಸರಣಿಯನ್ನು ಮುಂದಿಡುತ್ತಾರೆ. ನೀವೇ ಹೇಳಿ, ಇಂದು ಕಾಣುವ ಭಾಷಾ ವೈಷಮ್ಯ, ಪ್ರಾದೇಶಿಕತೆಗಳು ಆ ಕಾಲದಲ್ಲಿದ್ದವೆ? ಇತಿಹಾಸದ ಯಾವ ಕಾಲಘಟ್ಟದಲ್ಲಿ ಅಂತಹ ವೈಷಮ್ಯಗಳು ಇದ್ದವು ಎಂಬುದಕ್ಕೆ ಆಧಾರ ಕೊಡಲಿ ನೋಡೋಣ? ಇದ್ದ ನಂಬಿಕೆಗಳನ್ನು ಒಡೆಯುವುದೇ ದೊಡ್ಡ ಸಂಶೋಧನೆಯೇ? ಅಥವಾ ಸಂಶೋಧಕರೆನಿಸಿಕೊಳ್ಳಬೇಕಾದರೆ ಜನರ ನಂಬಿಕೆಗಳನ್ನು ಒಡೆಯಲೇಬೇಕೆ?

ಕಲಬುರ್ಗಿಯವರ ಮತ್ತೊಂದು ಸಮಸ್ಯೆಯೆಂದರೆ ಪೂರ್ವಗ್ರಹಗಳನ್ನಿಟ್ಟುಕೊಂಡೇ ಮಾತನಾಡುತ್ತಾರೆ. ಇಲ್ಲವಾದರೆ ‘ಅಣ್ಣಿಗೇರಿ ಬುರುಡೆಗಳು ಶೈವ ಧರ್ಮದ ಪಡೆ ಮಾಡಿರುವ ಮಾರಣಹೋಮದ ಸಂಕೇತ’ವೆಂದು ಸತ್ಯಾಸತ್ಯತೆ ನಿರ್ಧಾರವಾಗುವ ಮೊದಲೇ ಹೇಳಿಕೆ ನೀಡುವ, ಜನರನ್ನು ದಾರಿತಪ್ಪಿಸುವ ಅಗತ್ಯವೇನಿತ್ತು? ‘ಕಾಶಿ’ ಎಂಬ ಪದವನ್ನು ಕೇಳಿದರೇ ಮೈಪರಚಿಕೊಳ್ಳುವ ಇವರಿಗೆ ಬ್ರಾಹ್ಮಣರ ಬಗ್ಗೆ ಅಪಥ್ಯವಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದರೆ ತಮ್ಮ ಒಡಲೊಳಗಿರುವ ಬ್ರಹ್ಮ, ಬ್ರಾಹ್ಮಣ ವಿರೋಧಿ ಧೋರಣೆಯನ್ನು ಎಲ್ಲ ಅನಿಷ್ಠ, ್ನಕಂಟಕ, ದುರಾಚಾರಗಳಿಗೂ ಕಾರಣವಾಗಿ ಕೊಡುವು ದೇಕೆ? ಇವತ್ತು ಕರ್ನಾಟಕದಲ್ಲಿ ಇರುವುದು ಲಿಂಗಾಯತರು ಮತ್ತು ಒಕ್ಕಲಿಗರ ಪ್ರಾಬಲ್ಯವಷ್ಟೇ. ಕೃಷಿಭೂಮಿಯಲ್ಲಿ ಹೆಚ್ಚಿನ ಭಾಗ ಇವೆರಡು ಸಮುದಾಯಗಳ ಕೈಯಲ್ಲೇ ಇದೆ. ದಲಿತರು ಅತಿ ಹೆಚ್ಚು ಶೋಷಣೆಗೊಳಗಾಗಿರುವುದು ಈ ಸಮುದಾಯಗಳಿಂದಲೇ ಹೊರತು ಬ್ರಾಹ್ಮಣರ ಜಾತಿವಾದದಿಂದಲ್ಲ.

ಶೈವರ ಮಾರಣಹೋಮದ ಬಗ್ಗೆ ಊಹೆ ಮಾಡಿಕೊಂಡು ಹಳೆಯದ್ದನ್ನು ಕೆದಕುವ ಇವರು ಲಿಂಗಾಯತರು, ಒಕ್ಕಲಿಗರಿಂದ ದಲಿತರ ಮೇಲಾದ ದೌರ್ಜನ್ಯದ ಬಗ್ಗೆ ಎಂದಾದರೂ ಗಟ್ಟಿಯಾಗಿ ಧ್ವನಿಯೆತ್ತಿದ್ದಾರಾ? ಅದಿರಲಿ, ಇವರೆಂದೂ ಜಾತಿ ವಾದ ಮಾಡಿಲ್ಲವೇ? ಕರ್ನಾಟಕ ‘ಯುನಿವರ್ಸಿಟಿ’ಗೆ ‘ಅಯ್ನೋರುಸಿಟಿ’ ಎಂಬ ಆರೋಪವಿದ್ದು, ಕಲಬುರ್ಗಿಯವರಂಥವರಿಂದಲೇ ಅಂಥದ್ದೊಂದು ಹಣೆಪಟ್ಟಿ ಬಂದಿರುವುದು ಸುಳ್ಳಾ? ಕಂಬಾರರ ಸಂಗ್ಯಾಬಾಳ್ಯಕ್ಕೆ ವಿರುದ್ಧವಾಗಿ ‘ಖರೆ ಖರೆ ಸಂಗ್ಯಾಬಾಳ್ಯ’ ಬರೆದಾಗ ಕಲಬುರ್ಗಿಯವರಲ್ಲಿ ಜಾಗೃತವಾಗಿದ್ದು ಜಾತಿಬುದ್ಧಿಯೇ ಅಲ್ಲವೆ? ಇನ್ನು ದಕ್ಷಿಣ ಕನ್ನಡದ ನೆಲದಲ್ಲಿ ನಿಂತು ‘ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ರಾಮಸೇನೆ, ಬಜರಂಗದಳಗಳೆಂಬ ಕಾದಾಟ ಹುಟ್ಟುಹಾಕಿದೆ’ ಎನ್ನುತ್ತಾರೆ. ಇವರಿಗೆ ಬರೀ ರಾಮಸೇನೆ, ಬಜರಂಗದಳಗಳೇ ಏಕೆ ಕಾಣುತ್ತಿವೆ? ದಕ್ಷಿಣ ಕನ್ನಡದಲ್ಲಿ ಮುಸಲ್ಮಾನರ ಕೆಎಫ್್ಡಿ, ಕ್ರೈಸ್ತರ ಸ್ಯಾಕ್ (ಸೋಷಿಯಲ್ ಆ್ಯಕ್ಷನ್ ಕಮಿಟಿ) ಎಂಬ ಹೆಸರಿನಲ್ಲಿ ‘ನೈತಿಕ ಪೊಲೀಸ’ನ ಕೆಲಸ ಮಾಡುತ್ತಿರುವ ಸಂಘಟನೆಗಳೂ ಇವೆ. ಕೆಎಫ್್ಡಿಯಂತೂ ಎಂಥ ಸಮಾಜವಿರೋಧಿ ಕೆಲಸದಲ್ಲಿ ತೊಡಗಿದೆ ಎಂಬುದು ಮೈಸೂರು ವಿದ್ಯಾರ್ಥಿಗಳ ಹತ್ಯಾಕಾಂಡದಿಂದ ಜಗಜ್ಜಾಹೀರಾಗಿದೆ. ಇಷ್ಟಾಗಿಯೂ ಕಲಬುರ್ಗಿಯವರ ‘ಸಂಶೋಧಕ’ ಕಣ್ಣಿಗೆ ಇವೇಕೆ ಬೀಳಲಿಲ್ಲ?

ಇಷ್ಟಾಗಿಯೂ ಇವರು ತಮ್ಮ ಜ್ಞಾನವನ್ನು, ಅಧ್ಯಯನವನ್ನು ವಿಷ ಬಿತ್ತಲು, ಜೊಳ್ಳು ಹರಡಲು ಬಳಸುತ್ತಿರುವುದೇಕೆ?

‘ಕರ್ನಾಟಕದಲ್ಲಿ ತಮಿಳರ ಪ್ರಾಬಲ್ಯ ಹೆಚ್ಚಲು ಮೈಸೂರು ಅರಸರ ಮೂರ್ಖತನವೇ ಕಾರಣ’ ಎಂದು ಬಡಬಡಾಯಿಸಿರುವ ಇವರ ಮಾತಿನಲ್ಲಿ ಹುರುಳೆಷ್ಟಿದೆ? ಕರ್ನಾಟಕದಲ್ಲಿ ಕನ್ನಡಿಗರು ಮಾತ್ರವೇ ಇರಬೇಕೆ? ಕರ್ನಾಟಕದ ಉದ್ಧಾರಕ್ಕೆ ಕೊಡುಗೆ ಕೊಟ್ಟವರು ಕನ್ನಡಿಗರು ಮಾತ್ರವೇ? ‘ನನ್ನನ್ನು ನೃಪತುಂಗ ಆವರಿಸಿಕೊಂಡಿದ್ದಾನೆ. ನನ್ನ ಮಗನಿಗೆ ಶ್ರೀವರ್ಷ ಎಂದೂ, ಮೊಮ್ಮಗನಿಗೆ ಅಮೋಘವರ್ಷ ಎಂದೂ ಹೆಸರಿಟ್ಟಿದ್ದೇನೆ, ನಾನು ಪಿಎಚ್್ಡಿಗಾಗಿ ಸಂಶೋಧನೆ ಮಾಡಿರುವುದೂ ನೃಪತುಂಗನನ್ನೇ’ ಎನ್ನುತ್ತಾರೆ. ಆದರೆ ಇವರನ್ನು ಯಾವ ವ್ಯಕ್ತಿ ಆವರಿಸಿದ್ದಾನೋ ಆ ನೃಪತುಂಗನೇ “ಕಾವೇರಿಯಿಂದಂ ಆ ಗೋದಾವರಿ ವರಂ’ ಎಂದು ್ನಕರ್ನಾಟಕದ ಉದ್ದಗಲವನ್ನು ವರ್ಣಿಸಿದ್ದಾನೆ. ನೃಪತುಂಗ ಹೇಳಿದ ಪ್ರಕಾರ ಗಡಿರೇಖೆ ರಚಿಸಿದರೆ ಈಗಿರುವ ಹಲವಾರು ಭಾಗಗಳು ನಮ್ಮ ರಾಜ್ಯಕ್ಕೆ ಸೇರುವುದಿಲ್ಲ!

ಒಂದು ಕಾಲದಲ್ಲಿ ನಮ್ಮ ರಾಜಧಾನಿ ಬೆಂಗಳೂರು ಕೂಡ ತಮಿಳು ವಂಶಾಡಳಿತಗಳಾದ ಚೋಳರು ಮತ್ತು ಪಲ್ಲವರ ಪ್ರಭಾವಲಯಕ್ಕೆ ಸೇರಿತ್ತು. ಹಾಗಂತ ಬೆಂಗಳೂರನ್ನು ತಮಿಳರು ತಮ್ಮದೆಂದು ಈಗ ಪ್ರತಿಪಾದಿ ಸಲು ಬಂದರೆ ಸುಮ್ಮನಿರುತ್ತೇವೆಯೇ? ಒಂದಂತೂ ನಿಜ, ಆ ಕಾಲದಲ್ಲಿ ನಿಮ್ಮಂತೆಭಾಷಾ ಸಂಕುಚಿತತೆ ಇರಲಿಲ್ಲ. ಒಂದು ರಾಜ್ಯ, ಮತ್ತೊಂದು ರಾಜ್ಯದ ಹತ್ತಿರದ ಭಾಗಗಳು ಸ್ವಾಭಾವಿಕವಾಗಿಯೇ ಬೆರೆತಿರುತ್ತಿದ್ದವು, ಭಾಷಾ ಭೇದವೂ ಇರಲಿಲ್ಲ. ಬ್ರಿಟಿಷರು ಬಂದ ಮೇಲಷ್ಟೇ ಈ ರೀತಿಯ ವಿಭಜನೆ ಆರಂಭವಾಯಿತು.

ಮೈಸೂರಿನ ಒಡೆಯರು ತಮಿಳಿನವರನ್ನೇ ಹೆಚ್ಚಾಗಿ ದಿವಾನರಾಗಿ ನೇಮಕ ಮಾಡಲು ಕಾರಣವೂ ಇತ್ತು. ಮದ್ರಾಸ್ ರಾಜ್ಯ ಬ್ರಿಟಿಷರ ನೇರ ಹಿಡಿತದಲ್ಲಿತ್ತು. ಒಡೆಯರೂ ಬ್ರಿಟಷರಿಗೆ ಅಧೀನರಾಗಿದ್ದರಿಂದ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸುವ ಯೋಗ್ಯ ವ್ಯಕ್ತಿಗಳು ಹೆಚ್ಚಾಗಿ ಮದ್ರಾಸ್್ನಲ್ಲೇ ಇದ್ದಿದ್ದರಿಂದ ದಿವಾನರಾಗಿ ಅಲ್ಲಿಯವರನ್ನೇ ನೇಮಕ ಮಾಡುತ್ತಿದ್ದರು. ಅಂದಮಾತ್ರಕ್ಕೆ ಅವರು ಕನ್ನಡನಾಡಿನ ಅಭಿವೃದ್ಧಿಗಾಗಿ ಶ್ರಮಿಸಲಿಲ್ಲವೆ? ದಿವಾನ್ ರಂಗಾಚಾರ್ಲು, ಶಿಂಶಾದಲ್ಲಿ ವಿದ್ಯುತ್ ಜನರೇಟ್ ಮಾಡಿದ ದಿವಾನ್ ಶೇಷಾದ್ರಿ ಅಯ್ಯರ್ ಕನ್ನಡದ ಕೆಲಸ ಮಾಡಲಿಲ್ಲವೆ? ನಿಮ್ಮ ಸಾಹಿತ್ಯ ಕ್ಷೇತ್ರವನ್ನೇ ತೆಗೆದುಕೊಳ್ಳಿ, ಜಿ.ಪಿ. ರಾಜರತ್ನಂ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಟಿ.ಪಿ. ಕೈಲಾಸಂ, ಪುತಿನ, ಡಿವಿಜಿ ಇವರೆಲ್ಲ ತಮಿಳರೇ ಅಲ್ಲವೆ? ಇವರು ಕನ್ನಡದ ಸೇವೆ ಮಾಡಲಿಲ್ಲವೆ? ಮಾಸ್ತಿ ಜ್ಞಾನಪೀಠ ತಂದುಕೊಡಲಿಲ್ಲವೆ? ತಮಿಳಿಗರಾದ ಆರ್. ನರಸಿಂಹಾಚಾರ್ಯರು ಕನ್ನಡದ ಶಾಸನಗಳು ಓದಿ ಕನ್ನಡದ ಕವಿಚರಿತ್ರೆಯನ್ನು ಬರೆದರು, ಕನ್ನಡ ಪ್ರಾಚೀನ ಕಾವ್ಯಗಳನ್ನು ಹಸ್ತಪ್ರತಿಯಿಂದ ಮುದ್ರಣಕ್ಕೆ ತಂದ ಮೊದಲ ವ್ಯಕ್ತಿ ಎಸ್.ಜಿ. ನರಸಿಂಹಾಚಾರ್ಯರೂ ತಮಿಳರೇ. ಕನ್ನಡದ ಮಹಾಪಂಡಿತರೆಂದು ಹೆಸರಾಗಿದ್ದ ಡಿ.ಎಲ್. ನರಸಿಂಹಾಚಾರ್ ಕೂಡ ತಮಿಳರೇ. ಗ್ರೀಕ್್ನಿಂದ ಕನ್ನಡಕ್ಕೆ ಅನುವಾದ ಮಾಡಿಕೊಟ್ಟ ಕೆ.ವಿ. ರಾಘವಾಚಾರ್, ಎಲ್ಲ ಪ್ರಾಚೀನ ಕಾವ್ಯಗಳನ್ನು ಓದಿ ‘ಅಕಾರಾದಿ’ (ಇಂಡೆಕ್ಸ್) ಹಾಕಿಕೊಟ್ಟ ಎನ್. ಅನಂತರಂಗಾಚಾರ್ ತಮಿಳರೇ. ಹಾಗಿರುವಾಗ ನಿಮ್ಮಲ್ಲಿ ಮನೆಮಾಡಿರುವ ಸಂಕುಚಿತ ಮನಸ್ಥಿತಿಯನ್ನು ಏಕೆ ನಾಡಿನುದ್ದಕ್ಕೂ ಹರಡಲು ಪ್ರಯತ್ನಿಸುತ್ತಿದ್ದೀರಿ?

ಕನ್ನಡದವರು ಬಂಗಾಳ, ನೇಪಾಳ, ಗುಜರಾತ್್ಗೆ ಹೋಗಿ ಆಳಿದರು, ಇಂಥ ಸಾಧನೆ ಮಾಡಿದರು ಎಂದು ಹೆಮ್ಮೆಪಟ್ಟುಕೊಳ್ಳುತ್ತೇವೆ. ಕಾಸರಗೋಡು ಜಿಲ್ಲೆಯ ಶಾಸಕ ಚೆರ್ಕಳ ಅಬ್ದುಲ್ಲಾ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆಂದು ಬಾಯಿಚಪ್ಪರಿಸುತ್ತೇವೆ. ಆದರೆ ಬೇರೆಯವರು ಇಲ್ಲಿಗೆ ಬಂದರೆ ಹೊಟ್ಟೆ ಉರಿಮಾಡಿಕೊಳ್ಳುವ ದ್ವಂದ್ವವೇಕೆ? ಕರ್ನಾಟಕ ವಿಧಾನಸಭೆಯಲ್ಲಿ ಯಾರಾದರೂ ತಮಿಳು, ತೆಲುಗಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ ಅವರ ಗತಿಯೇನಾಗುತ್ತಿತ್ತು? ನೇಪಾಳದ ಪಶುಪತಿನಾಥನಿಗೆ ಕನ್ನಡದ ಅರ್ಚಕರಿದ್ದಾರೆ, ಉತ್ತರಭಾರತದ ಕೇದಾರರೇಶ್ವನ ಅರ್ಚಕರು ನಮ್ಮ ವೀರಶೈವರು. ಕನ್ನಡದ ರಾಜಮನೆತನಗಳಾದ ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟ, ಗಂಗ, ವಿಜಯನಗರದ ಅರಸರು ತಮಿಳುನಾಡು, ಗುಜರಾತ್, ಬಿಹಾರ, ರಾಜಸ್ಥಾನ ಸೇರಿದಂತೆ ಭಾರತದ ಹಲವು ಕಡೆಗಳನ್ನು ವ್ಯಾಪಿಸಿ ಆಳಿದರು. ಇದನ್ನೆಲ್ಲ ನೆನೆಸಿಕೊಂಡು ಹೆಮ್ಮೆಪಡುವ ನಾವು, ನಮ್ಮಲ್ಲಿಗೆ ಅನ್ಯರು ಬಂದರು ಎಂದೇಕೆ ಕೋಪಿಸಿಕೊಳ್ಳಬೇಕು? ಜಯಲಲಿತಾ, ರಜನೀಕಾಂತ್, ಅರ್ಜುನ್ ಸರ್ಜಾ, ಕೋಕಿಲಾ ಮೋಹನ್್ರನ್ನು ತಮಿಳು ಚಿತ್ರರಂಗ ಆದರಿಸಿಲ್ಲವೆ?

ಗುರುದತ್, ಐಶ್ವರ್ಯ ರೈ, ಸಂದೀಪ್ ಚೌಟಾ, ಸೌಂದರ್ಯ ಇವರನ್ನು ಅನ್ಯರು ಒಪ್ಪಿಕೊಳ್ಳಲಿಲ್ಲವೆ? ವಿಶ್ವೇಶ್ವರಯ್ಯ ತೆಲುಗು ಭಾಷಿಕರಲ್ಲವೆ? ಇದನ್ನು ಬಿಟ್ಟು ತಮಿಳರ ಬಗ್ಗೆ ಅತಾರ್ಕಿಕವಾಗಿ ದ್ವೇಷಕಾರುತ್ತೀರಲ್ಲಾ ಕಲಬುರ್ಗಿಯವರೇ, ಇದು ಸತ್ಯಕ್ಕೆ ಮಾಡುವ ಅಪಚಾರ, ಅತ್ಯಾಚಾರವಲ್ಲವೆ? ನಿಮ್ಮಂಥವರಿಂದಾಗಿಯೇ ಅಲ್ಲವೇ ಇವತ್ತು ಕನ್ನಡದ ಬಗ್ಗೆ ಮಾತನಾಡುವುದು ಉದಾರತೆ, ರಾಷ್ಟ್ರೀಯತೆ ಬಗ್ಗೆ ಮಾತನಾಡುವುದು ಸಂಕುಚಿತತೆಯಾಗಿ ಪರಿಣಮಿಸಿರುವುದು?

ಈ ಮಧ್ಯೆ ಶಿಕ್ಷಕರ ಬಗ್ಗೆಯೂ ಏಕೆ ಹಗುರವಾಗಿ ಮಾತನಾಡಿದ್ದೀರಿ? ‘ಸ್ನಾತಕ, ಸ್ನಾತಕೋತ್ತರ ಶಿಕ್ಷಣದ ಸಂದರ್ಭದಲ್ಲಿ ಪಗಾರಕ್ಕಾಗಿ ಬರುವ ಶಿಕ್ಷಕರು ಹಾಗೂ ಪ್ರಮಾಣಪತ್ರಗಳಿಗಾಗಿ ಬರುವ ವಿದ್ಯಾರ್ಥಿಗಳು ಹೆಚ್ಚಾಗುತ್ತಿದ್ದಾರೆ. ಪಗಾರ ಹೆಚ್ಚಳದಿಂದ ಶಿಕ್ಷಕರು ಸೋಮಾರಿಗಳಾಗಿದ್ದಾರೆ, ವಿಫುಲ ಅನುದಾನದಿಂದ ಭ್ರಷ್ಟರಾಗುತ್ತಿದ್ದಾರೆ’- ಇದೆಂಥ ಮಾತು ಸ್ವಾಮಿ? ಏಕೆ ಸಾರಾಸಗಟಾಗಿ ಇಡೀ ಶಿಕ್ಷಕವೃಂದವನ್ನೇ ದುಡ್ಡಿನ ಬಗ್ಗೆಯಷ್ಟೇ ಹಪಾಹಪಿ ಇಟ್ಟುಕೊಂಡಿರುವವರು ಎಂಬಂತೆ ದೂರುತ್ತಿದ್ದೀರಿ? ಸ್ನಾತಕ, ಸ್ನಾತಕೋತ್ತರ ಶಿಕ್ಷಕರ ಸಂಬಳ ನಿಮ್ಮ ಕಣ್ಣನ್ನು ಕುಕ್ಕುತ್ತಿರುವುದೇ ಆದರೇ ಶಾಲಾ ಶಿಕ್ಷಕರು ಕತ್ತೆಗಳಂತೆ ದುಡಿಯುತ್ತಿದ್ದಾರಲ್ಲಾ ಅವರಿಗೂ ಯೋಗ್ಯ ಸಂಬಳ ಕೊಡಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಬಹುದಿತ್ತಲ್ಲವೆ? ಅಸೂಯೆ, ಅಸಮಾಧಾನ ವ್ಯಕ್ತಪಡಿಸುವುದೇ ನಿಮ್ಮ ಉದ್ಯೋಗವೇ? ಸ್ನಾತಕ, ಸ್ನಾತಕೋತ್ತರ ಶಿಕ್ಷಕರ ಸಂಬಳ ಹೆಚ್ಚಾಗಿ ವರ್ಷ ಕಳೆದಿದೆಯಷ್ಟೇ. ಇಷ್ಟು ವರ್ಷ ಅವರು ದುಡಿದೇ ಇಲ್ಲವೆ? ಸಂಬಳ ಹೆಚ್ಚು ಮಾಡಿದ ಮಾತ್ರಕ್ಕೇ ಸೋಮಾರಿಗಳಾಗುತ್ತಾರೆಂದೇಕೆ ಭಾವಿಸಬೇಕು? ನಿಮ್ಮ ಪ್ರಕಾರ ಸ್ನಾತಕ, ಸ್ನಾತಕೋತ್ತರ ಶಿಕ್ಷಕರು ಜೀವಮಾನವಿಡೀ ಯೋಗ್ಯ ಪ್ರತಿಫಲವಿಲ್ಲದೆ ದುಡಿಯಬೇಕಿತ್ತೇ? ಕಲಬುರ್ಗಿಯವರೇ, ನೀವು ಜನರಿಗೆ ಹೆಚ್ಚಾಗಿ ಪರಿಚಿತವಾಗಿದ್ದು ಹಾಗೂ ಪರಿಚಿತರಾಗುತ್ತಿರುವುದು ಪತ್ರಿಕಾ ವರದಿ ಮತ್ತು ಹೇಳಿಕೆಗಳ ಮೂಲಕವೇ ಹೊರತು ಕೃತಿಗಳಿಂದಲ್ಲ. ನಿಮಗಿಂತ ಒಬ್ಬ ಶಿಕ್ಷಕನೇ ಶಾಲಾ ಮಕ್ಕಳನ್ನು ಹೆಚ್ಚು ಪ್ರಭಾವಿಸುತ್ತಾನೆ ನೆನಪಿಟ್ಟುಕೊಳ್ಳಿ.

ಅದಿರಲಿ, ವಿವಾದಗಳನ್ನು ಸೃಷ್ಟಿಸುವುದೇ ಇವರುಗಳ ಜಾಯಮಾನವೇ?

32 Responses to “ವಿವಾದ ಸೃಷ್ಟಿಸುವುದೇ ಇವರುಗಳ ಜಾಯಮಾನವೇ?”

  1. m p manju says:

    fantastic. we require such article today, because many Kannada writers are there in Karnataka who wants the publicity by their statements not by there knowledge.
    hats of to u PRATAP SIR.

  2. Kailasa says:

    Absolutely correct.

  3. paresh says:

    good article

  4. nice article. ಈ ಲೇಖನಕ್ಕೆ ಕಲಬುರ್ಗಿಯವರ ಪ್ರತಿಕ್ರಿಯೆ ಏನು ಬರುತ್ತದೆ ಎಂಬುದನ್ನು ಕಾದು ನೋಡೋಣ. ಆದರೆ ಒಂದು ಮಾತು: ‘ದಲಿತರ ಮೇಲೆ ಕೇವಲ ಲಿಂಗಾಯತರು, ಒಕ್ಕಲಿಗರಷ್ಟೇ ದೌರ್ಜನ್ಯ ನಡೆಸಿದ್ದಾರೆ ಬ್ರಾಹ್ಮಣರು ನಡೆಸಿಲ್ಲ” ಎಂಬ ಮಾತು ಒಪ್ಪತಕ್ಕ ಸಂಗತಿಯಲ್ಲ. ಈ ವಿಷಯವಾಗಿ ಮತ್ತೊಮ್ಮೆ ವಿಚಾರ ಮಾಡಿ ಲೇಖನ ಬರೆಯುವುದು ಒಳಿತು.

  5. Krishnaprasad says:

    Well written

  6. ಕಲ್ಬುರ್ಗಿ ರವರ ಬಗ್ಗೆ ಬರಹ ಚನ್ನಾಗಿ ವಿಮರ್ಶೆ ಮಾಡಿದ್ದಿರಿ.
    ತಮಗೆ ಪ್ರಶಶ್ತಿ ಬಂದಾಗ ತಾವು ಏನು ಹೇಳಿದರು….. ಅದೇ
    ಸರಿ ಎನ್ನುವಾ ಮನೋಭಾವ ಕೆಲವರಲ್ಲಿ ಬರುತ್ತದೆ. ಯೆನ್ನುವುದ್ದಕೆ
    ಇದಂದು ಉದಾಹರಣೆ.

  7. Lingaraja says:

    Pratap,

    You are absolutely right. Kalburgi is trying to bring himself in Media. Such things are already done by several writers who won Padmashree and Padmabhooshan. They should think before inking.

    Regards,
    Lingaraja

  8. fakkeeragouda says:

    Brother, it’s real.

  9. Super article sir. Swa prathiste,bitti prachara sigutte antha vedikeyalli bayige bandanthe mathaduvude kalburgiyavara huttuguna. Jathi jathigala madye vadedu hogiruva hindu samajada madye visha beeja bittuvude evara huttuguna. Hindu Dharma jathi bhasegala bagge mathaduva evaru KFD PFI love zihad hesarinalli nedeyuva eslam bhayotpadane, Newlife hesarinalli nedeyuva hindugala matantara evara kannige kanuvudillave. Enthavarindale namma rajyakke ketta hesaru bandiruvudu.

  10. GURU RAYABAG says:

    Dear Pratap sir, its a simply superb article. You have analysed things very well. As you have mentioned in the article, earlier we could n’t find any controversies on language but, now it has grown and growing lot… Nobody is ready to proud about the national language i.e. HINDI. Everybody is murmuring about regional language, I meant that to respect the every language and cultures and states bcz, its a one country but, many worlds.

  11. Pratap,

    At the time of 500 th year celebration of Sri Krishna Devaraya he has attempted to tell the same misguiding judgements, but still v remember him as a retired VC of Kannada VV..

  12. Venky says:

    Hi Pratap,

    Thanks for another nice article on menace of rusted minds.

    I specially liked that article for beautifully articulated step by step.

    While reading, whenever minute doubt arised its been nicely cleared with presenting the facts.

    Such good articles, at leat controls the dirty minded people if not put fullstop.

    Thanks once again for talking boldly.

    Regards
    Venkatesh

  13. Yuvaraj says:

    ಹಲೋ ಪ್ರತಾಪ್,
    ಲೇಖನ ತುಂಬಾ ಚೆನ್ನಾಗಿ ಬಂದಿದೆ. ಇದ್ದದ್ದನ್ನು ಇದ್ದಂಗೇ ಹೇಳಿದ್ದೀರಿ…
    ನಮ್ಮಲ್ಲಿ ಪ್ರಸಿದ್ಧಿಗೆ ಬಂದವರಲ್ಲಿ ಕೆಲವರಿಗೆ ಚಟವಾಗಿಬಿಟ್ಟಿದೆ, ತಮಗೆ ಇಷ್ಟ ಬಂದಹಾಗೆ ಬರೆಯುವುದು…ಹೇಗಿದ್ದರೂ
    ಮುಂದಿನ ಪೀಳಿಗೆಗೆ ಸತ್ಯ ಗೊತ್ತಾಗುವುದಿಲ್ಲವಲ್ಲ….ಹಾಗೆ ನೋಡಿದರೆ ಎಸ್ ಎಲ್ ಭೈರಪ್ಪನವರ ಆವರಣ ಒಂದು ರೀತಿಯ
    Great Epic ಎಂದರೆ ತಪ್ಪಾಗಲಾರದು.

    ಧನ್ಯವಾದಗಳೊಂದಿಗೆ,
    ಯುವರಾಜ್
    ಮೆಲ್ಬೋರ್ನ್

  14. ರವಿ ಆರ್. ಗೌಡ, ಸಕಲೇಶಪುರ says:

    ಪ್ರತಾಪ್ ರವರೇ,

    ನಿಮ್ಮ ಪ್ರತಿಯೊಂದು ಲೇಖನಗಳಲ್ಲಿ ತರ್ಕವನ್ನು ಮಂಡಿಸುವ ರೀತಿ ಹಾಗೂ ಅದಕ್ಕೆ ಪೂರಕವಾಗಿ ದಾಖಲೆಗಳನ್ನು ಒದಗಿಸಿ ಪುಷ್ಟೀಕರಣ ನೀಡುವ ಶೈಲಿ ಇಷ್ಟವಾಗುವಂತಹದ್ದು. ನಿಮ್ಮ ಈ ಲೇಖನದಲ್ಲಿ ಕಲಬುರ್ಗಿಯವರ ಹೇಳಿಕೆಗಳಿಗೆ ಉತ್ತರವಾಗಿ ಕನ್ನಡಿಗರಂತೆ ಹ್ರುದಯ ವೈಶಾಲ್ಯತೆ ಮೆರೆದಿರುವುದು ಅಷ್ಟೇನು ಇಷ್ಟವಾಗಲಿಲ್ಲ. ತಮಿಳರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ ಹಾಗೆಯೇ ಕನ್ನಡಿಗರೂ ತಮಿಳು ಸಾಹಿತ್ಯ ಹಾಗೂ ಅನೇಕ ಕ್ಷೇತ್ರಗಳಿಗೆ ತಮ್ಮ ಕೊಡುಗೆ ನೀಡಿರುವುದು ಖರೆ. ಅಷ್ಟಕ್ಕೇ ತಮಿಳರು ಕನ್ನಡಕ್ಕೆ ಶ್ರೆಷ್ಟ ಕೊಡುಗೆ ನೀಡಿದ್ದಾರೆ ಎಂಬುವುದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಶೇಖಡಾ 90 ರಷ್ಟು ಮುಸ್ಲಿಮ್ಮರು ಧರ್ಮಾಂಧರಾಗಿರುವಂತೆ ಶೇಖಡಾ 90 ರಷ್ಟು ತಮಿಳಿಯನ್ನರು ಭಾಷಾಂಧರಾಗಿದ್ದಾರೆ ಎಂಬುವುದು ಕಟು ಸತ್ಯ.

    ಡಾ. ಬಿ.ಜಿ.ಎಲ್ ಸ್ವಾಮಿ ಯವರು ಮದರಾಸಿನಲ್ಲಿ ಪ್ರೆಸಿಡೆನ್ಸಿ ಮಹಾವಿದ್ಯಾಲಯದಲ್ಲಿ ಬಾಟನಿಯ ಪ್ರಾಧ್ಯಾಪಕರಾಗಿ ಕೆಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಅಲ್ಲಿ ನಡೆದ ಅವರ ತಮಿಳಿಗರೊಡನೆ ತಮಿಳಿನ ಬಗ್ಗೆ ಆದಂತಹ ಅನುಭವದ ಸಂಗ್ರಹ “ತಮಿಳು ತಲೆಗಳ ನಡುವೆ” ಬಹಳ ರಸವತ್ತಾಗಿ ಚಿತ್ರಿಸಿದ್ದಾರೆ. ಸ್ವಾಮಿಯವರ ಮನೆ ಮಾತು ತಮಿಳು. ಆದರೂ ತಮ್ಮನ್ನು ತಾವು ಕನ್ನಡಿಗರೆಂದು ಕಂಡುಕೊಳ್ಳುತ್ತಿದ್ದರು. ಇದು ತಮಿಳರ ತಮ್ಮ ಭಾಷೆಯ ಬಗೆಗಿನ ವಿಚಾರದ ಸ್ಠೂಲ ಪರಿಚಯವನ್ನು ಒಳಗೊಂಡಿದೆ. ಇದು ತಮಿಳರ ಮನಸ್ಠಿತಿಗೆ ಹಿಡಿದ ಕನ್ನಡಿಯಂತಿದೆ. ಹಾಗೆಯೇ ನಮ್ಮ ದಿನನಿತ್ಯದ ಬದುಕಿನಲ್ಲಿ ತಮಿಳರೊಂದಿಗಿನ ಒಡನಾಟದಿಂದ ಆಗುವ ಅನುಭವಗಳಿಗೆ “ತಮಿಳು ತಲೆಗಳ ನಡುವೆ” ಸಂಪೂರ್ಣ ಹೋಲಿಕೆಯಾಗುತ್ತದೆ.

  15. manjunatha says:

    article tumba chennagide. Kalburgiyantahavaru artha madikollabekaste.

    pragatipararu andre yaru gotta ?
    2+2 = 4 andre, yake 5 agabaradu. idu meljatiyavara davrjanya antare.

    naavu sari andre avaru tappu antare, naavu havdu tappu andre adu hyage ? antare.

    huccara sante alva ?

  16. Ravi Vakkalar says:

    Dear PS Sir,
    Whatever you mentioned in the article in my opinion its half truth. If you consider the contribution of other state/language people I agree with you. But that was the past. If you ask any of your friend or other people who are working in the IT company you will get to know how narrow minded people these Tamilians are. In one world they are “Bhashandaru”. I dont have any idea about what Mr.Kalburgi spoke. But whatever you mentioned about Tamil people it does not hold good for today’s Karnataka.

  17. Aravind says:

    Pratap , Mr.Kalburgi’s life time aim is to malign Jangamas ( Panch Peetha ) not Brahmins as per my obvervation , he has already succeeded in achieving a big rift between the names of Veerashaiva and Lingayaths.

  18. amruth says:

    Hi Pratap,

    I disagree with your critics about Dr. Kaluburgi’s statement’s. I never read about any of his articles or books. U too should have analyzed in a broader way and then written an article on this. Have you observed the teachers who got appointed form past 10 years. Just visit any of the village schools far away from cities. Their quality of teaching is very poor(not all may 5% are better). Their attitude is not good. They are not qualified for the degree’s they have got. Even my dad is a teacher. Just go to any school belongs to far away school and check what they are learning(Govt Schools). I also studied in kannada medium till 10th. I had also seen many teachers. But at that time the ration between qualified and not qualified teachers was very less. It might be like 60:40. Now it had become worse. Have you checked, any teacher who is upgrading is standards time to time?.

    I agree the words of Dr. Kaluburgi(not all), I am not a fan of him or belong to so called left and right of kannada writers. Always analyze the things positively and in a broader way. The fire which, you had earlier is not visible in you now a days. You are getting biased these days. There are many things you may be knowing. Use you skills to guide people but not in the other way.

    Please look at the things in a broader way, These kind of critics does not suite you. You have the skills of motivating people with your words. Please use it efficiently and in better way.

    Regards,

    Amruth

  19. Srinivasa S S says:

    Very Good article. We Kannadigas, should not live in a shell presuming that everything is right from our side.

    The way we pin point other’s mistakes, we should also start acknowledging our mistakes in the recent History.

    * In 1991 Cauvery riot is one such thing. This has degraded the reputation of Kannadigas outside especially in Tamilnadu. We looted/killed/raped Tamils staying in Karnataka. I know it is done by few local rowdies. But, what we did we do to prevent such incidents ? Nothing… It is very shameful incident in the recent History.

    * We should stop following the double-standards. One way we do claim Hosur/Hogenekal from Tamil Nadu, Kasargudu from Kerala. But, we are not ready to handover Belgaum to Maharashtra.

    By having said that, we ‘should’ continue to fight for the rights of the Kannadigas staying in other states. At the same time we should provide the friendly environment to non-kannadigas in karnataka.

    Regards,
    Srinivasa S S

  20. i am not felling good about this article…dear sir ,you lot of changed after coming to the kannada prabha….and we don’t except these type of article from you….

    whatever you say about tamilians i won’t agree with that points..tamilians are always sadist and tamil sucks…i hate them alwayas

    me and my friends following you since 6years…we expecting lot courage from you

    RAGHU

  21. LOHIT B KUMBAR says:

    nice article sir….

  22. vishwanatha says:

    Dear tiger sir,

    You have mention good thing about state and language issue.We should appreciate and respect our legend people in whole nation not a part wise.
    you have given good reply.

    Regards,

    Vishwanatha.M

  23. Santhosh says:

    Pratap,

    tumba olle article… aadre shoshane annodu vokkaligarinda athava lingayitharinda anodo sari alla yaakendare shoshane maadovru manushyare alla…..

  24. Raju.N says:

    Nice article …..

  25. vishwanatha says:

    Dear tiger sir,
    You have mention good thing about state and language issue.We should appreciate and respect our legend people in whole nation not a part wise.
    you have given good reply.
    Regards,
    Vishwanatha.M

  26. ತಮ್ಮ ಲೇಖನದ ಮೂಲಕ ಅದ್ಬುತವಾದ ಪ್ರತಿಕ್ರಿಯೆಯನ್ನು ನೀಡಿದ್ದೀರಿ!!
    ಲೇಖನ ವಿಮರ್ಶಾತ್ಮಕವಾಗಿ ಚೆನ್ನಾಗಿ ಮೂಡಿಬಂದಿದೆ.
    ಧನ್ಯವಾದಗಳು.
    ಗಜೇಂದ್ರಕುಮಾರ.ಎಂ

  27. shakthi prasad says:

    i support the guruprasad hattigowdar’s comment,pratap sir your opinion on lingayats and okkaligas as largest land owners, and these land owners are exploiting lower castes is unacceptable, once you have to visit and see the today farmers how they work. Its not bcoz of kooli people they are growing these food grains its with thier own effort. you have to remind one kannada proverb thanu madiddu uttama, maga madiddu madhyama, aalu madiddu halu. so respect their hard work atleast . apart from this your articl eis good but think fro the kalburgi sir side you willl understand his feelings.

  28. karthik says:

    good article…he pratap….congrats …Kannada prabha have more hit ratio..i mean more number of people read it than other news papers ….see this link 4196 hits http://www.my-kannada.com/dir/News/Newspapers/

  29. Rohan patil from Pune says:

    Sir how you collect all this matr , really you are very hard worker… take care sis

  30. Sir how you collect all this matr , really you are very hard worker… take care sir

  31. saahasa says:

    Your analysis of Kalburgi’s modernised divisive mindset is perfect in content and context as well. Your point on Tipu’s persianization and Islamization courageously hits the bull’s eye and is challenging to all government sponsored ANTI-HINDU _meaning Anti-India- Islamists and pseudi-secularists. Thank you for helping our vision straight.

  32. ಇಂದೂಧರ says:

    ನೇವು ಬರೆದ ಲೇಖನ ಪರವಾಗಿಲ್ಲ.ಈ ರೀತಿ ಬರೆಯೋದಕ್ಕೆ ಮೊದಲು ಅಂದರೆ ಜಾತಿವಾದ, ದೌರ್ಜನ್ಯ ಕೇವಲ ಲಿಂಗಾಯತರು ಮತ್ತು ಒಕ್ಕಲಿಗರಿಂದ ಅನ್ನು ತಮ್ಮ ವಾದ ನನಗೇನು ಸರಿ ಸನ್ನಿಸಲಿಲ್ಲ. ಏಕೆಂದರೆ ನೀವು ಒಂದು ಸಾರಿ ‘ಗುಲಾಮಗಿರಿ’ ಅನ್ಣೊ ಒಂದು ಪುಸ್ತಕ ಇದೆ ಬಹುಶ ತಾವು ಅದನ್ನು ಓದಿರಬಹುದು. ಆದರಲ್ಲಿ ಜ್ಯೋತಿಬಾ ಫುಲೆ ಹೇಳಿದಂತೆ ಜಾತಿಹುಟ್ಟಿದ್ದು ಇತರೇ ಜನರ ಮೇಲೆ ದೌರ್ಜನ್ಯಮಾಡಿದ್ದು ಬ್ರಾಹ್ಮಣರಿಂದ ಅನ್ನೋದು ತುಂಬಾ ಚರ್ಚೆ ಮಾಡಿದ್ದಾರೆ. ಆದರೆ ತಾವು ಕೇವಲ ಲಿಂಗಾಯತರು ಹಾಗೂ ಒಕ್ಕಲಿಗರಿಂದ ದೌರ್ಜನ್ಯವಾಯಿತು ಅನ್ನೋ ನಿಮ್ಮ ಕಲಪೋಲ ಕಲ್ಪಿತ ವಾದ ಸರಿ ಅಲ್ಲ.