Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮಾಡಿದರೆ ಇರಾನ್ ಮೇಲೆ ಯುದ್ಧ, ಶುರುವಾಗಲಿದೆಯೇ 3ನೇ ಮಹಾಯುದ್ಧ?

ಮಾಡಿದರೆ ಇರಾನ್ ಮೇಲೆ ಯುದ್ಧ, ಶುರುವಾಗಲಿದೆಯೇ 3ನೇ ಮಹಾಯುದ್ಧ?

ಅಣುಬಾಂಬ್ ತಯಾರಿಸಲು ಅತ್ಯಗತ್ಯವಾದ ಯುರೇನಿಯಂ ಸಂಸ್ಕರಣೆಯ ತಂತ್ರಜ್ಞಾನವನ್ನು ತಾನು ಅಭಿವೃದ್ಧಿಪಡಿಸಿ, ಕಾರ್ಯಾರಂಭಗೊಳಿಸಿದ್ದೇನೆ ಎಂದು ಬುಧವಾರ ಇರಾನ್ ಘೂಷಣೆ ಮಾಡುವುದರೊಂದಿಗೆ ಇಂಥದ್ದೊಂದು ಆತಂಕ ಜಗತ್ತನ್ನು ಆವರಿಸಲಾರಂಭಿಸಿದೆ. ಒಂದು ರೀತಿಯ ಭಯ, ಯುದ್ಧದಿಂದಾಗಬಹುದಾದ ದುಷ್ಪರಿಣಾಮಗಳು ಜಗತ್ತನ್ನು ಕಾಡಹತ್ತಿವೆ. ಅಗ್ಗದ ತೈಲಕ್ಕಾಗಿ ಯಾರ ಜತೆಯೂ ಮಲಗಲು ಸಿದ್ಧವಾಗಿರುವ ಚೀನಾ ಇರಾನ್ ಪರ ನಿಲ್ಲುವ ಮೂಲಕ ಯುದ್ಧದ ಭಯವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಮಧ್ಯೆ, ಅಣುಚಾಲಿತ ಯುದ್ಧನೌಕೆ ಯುಎಸ್್ಎಸ್ ಅಬ್ರಹಾಂ ಲಿಂಕನ್ ಅನ್ನು ಹಾರ್ಮುಝ್ ಕೊಲ್ಲಿಗೆ ಕಳುಹಿಸಿದ ಅಮೆರಿಕ ಇರಾನ್್ನ ಬಾಗಿಲ ಬಳಿಗೆ ಬಂದುನಿಂತಿದೆ. ಅದರ ಬೆನ್ನಲ್ಲೇ ಇರಾನ್ ಮೇಲೆ ದಾಳಿ ಮಾಡುವುದಾಗಿ ಇಸ್ರೇಲ್ ಕೂಡ ಬೆದರಿಕೆ ಹಾಕಿದೆ. ಅದಕ್ಕೆ ಪ್ರತಿಯಾಗಿ ಜಗತ್ತಿನ ಶೇ.20ರಷ್ಟು ತೈಲ ಪೂರೈಕೆಯಾಗುವ ಪ್ರಮುಖ ಮಾರ್ಗವಾದ ಹಾರ್ಮುಝ್ ಕೊಲ್ಲಿಯನ್ನೇ ತಾನು ಮುಚ್ಚುವುದಾಗಿ ಇರಾನ್ ಕೂಡ ಬೆದರಿಕೆ ಹಾಕಿದೆ. ತನ್ನ ಮೇಲೆ ದಾಳಿ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದೂ ಧಮಕಿ ಹಾಕಿದೆ!

ಇದೆಲ್ಲ Sabre rattling ಅಥವಾ ಹುಸಿ ಘರ್ಜನೆ ಇರಬಹುದಾ? ಅಥವಾ ಮೂರನೇ ಮಹಾಯುದ್ಧಕ್ಕೆ ದಾರಿಮಾಡಿಕೊಡುವಂಥ ಸಂಘರ್ಷ ನಿಜಕ್ಕೂ ರೂಪುಗೊಳ್ಳುತ್ತಿದೆಯೇ?!

ಇಸ್ರೇಲ್್ನ ಕಳೆದ 60 ವರ್ಷಗಳ ಇತಿಹಾಸವನ್ನು ಗಮನಿಸಿದರೆ ಅದು ಬಹಳಷ್ಟನ್ನು ಹೇಳದೇ ಮಾಡಿದೆ, ಹೇಳಿದ್ದನ್ನಂತೂ ಮಾಡಿಯೇ ತೀರಿದೆ. ಅದರ ಗುಪ್ತಚರ ಸಂಸ್ಥೆ ಮೊಸಾದ್ ಎಷ್ಟು ಬಲಿಷ್ಠವೆಂದರೆ 1972ರ ಮ್ಯೂನಿಕ್ ಒಲಿಂಪಿಕ್ಸ್್ನಲ್ಲಿ ಇಸ್ರೇಲಿ ಕ್ರೀಡಾ ತಂಡವನ್ನು ಅಪಹರಿಸಿ ಹತ್ಯೆಗೈದ ಪ್ಯಾಲೆಸ್ತೀನಿ ಭಯೋತ್ಪಾದಕರು ಹಾಗೂ ಅವರಿಗೆ ಕುಮ್ಮಕ್ಕು ನೀಡಿದವರೆಲ್ಲರನ್ನೂ ಜಗತ್ತಿನ ಮೂಲೆ ಮೂಲೆಗೆ ಹೋಗಿ ಹೆಕ್ಕಿ ಕೊಂದ ಇತಿಹಾಸ ಹೊಂದಿದೆ. ಹಾಗಿದ್ದರೂ ಬೆಂಕಿಯೊಡನೆ ಸರಸವಾಡಲು ಇರಾನ್ ಹೊರಟಿರುವುದೇಕೆ? ಅಣುಬಾಂಬ್ ಹೊಂದಲೇಬೇಕೆಂಬ ಹತಾಶೆ ಇರಾನ್್ಗೆ ಆರಂಭವಾಗಿದ್ದಾದರೂ ಏಕೆ? ಇರಾನ್ ಅಣ್ವಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಿದರೆ ಅದರಿಂದ ಇಸ್ರೇಲ್್ಗೆ ಮಾತ್ರ ಅಪಾಯವೇ? ಅಣು ತಂತ್ರಜ್ಞಾನವನ್ನು ತಾನು ಕರಗತ ಮಾಡಿಕೊಂಡಿರುವುದಾಗಿ ಇರಾನ್ ಘೋಷಣೆ ಮಾಡಿದ ಮರುಕ್ಷಣವೇ ತಾನೂ ಅಣುತಂತ್ರಜ್ಞಾನವನ್ನು ಶೀಘ್ರದಲ್ಲೇ ಹೊಂದುವುದಾಗಿ ಸೌದಿ ಅರೇಬಿಯಾ ಹೇಳಿದ್ದಾದರೂ ಯಾಕಾಗಿ?

ಒಂದು ಕಾಲದಲ್ಲಿ ಪರ್ಷಿಯಾವಾಗಿದ್ದ ಇರಾನ್್ಗೆ ಭವ್ಯ ಇತಿಹಾಸವಿದೆ. ಆ ಕಾಲದಿಂದಲೂ ಮಧ್ಯಪ್ರಾಚ್ಯ ಹಾಗೂ ಅರಬ್ ರಾಷ್ಟ್ರಗಳಲ್ಲೇ ಅತ್ಯಂತ ಶ್ರೀಮಂತ ಪರಂಪರೆ, ಸಂಸ್ಕೃತಿ, ನಾಗರಿಕತೆಯನ್ನು ಹೊಂದಿದ್ದಂಥ ರಾಷ್ಟ್ರ ಇರಾನ್. ಇಂದಿಗೂ ಜಗತ್ತಿನ 18ನೇ ಅತಿದೊಡ್ಡ ರಾಷ್ಟ್ರವದು. ನಮ್ಮಂತೆಯೇ ಅಲ್ಲೂ ಖ್ಯಾತನಾಮ ರಾಜವಂಶಗಳಿದ್ದವು. ಹಾಗಾಗಿ ಇರಾನ್್ಗೆ ಒಂದು ರೀತಿಯಲ್ಲಿ ತಾನೇ ಮೇಲು, ಶ್ರೇಷ್ಠ ಎಂಬ ಭಾವನೆ ಇದೆ. ಜತೆಗೆ ಇರಾನ್ ಶಿಯಾ ಮುಸ್ಲಿಮರಿಂದ ಕೂಡಿರುವ ರಾಷ್ಟ್ರ. ಈ ಶಿಯಾ ಮತ್ತು ಸುನ್ನಿ ಮುಸ್ಲಿಮರ ನಡುವೆಯೇ ತೀವ್ರ ಒಡಕು, ಮೇಲಾಟ, ಮತ್ಸರ, ಈರ್ಷೆ ಎಲ್ಲವೂ ಇವೆ. ಎಂಟು ಕೋಟಿ ಮುಸ್ಲಿಮರಿಂದ ಕೂಡಿರುವ ತನಗಿಂತ ಸುನ್ನಿ ಮುಸ್ಲಿಮರ ಸೌದಿ ಅರೇಬಿಯಾವೇ ಅತಿ ಹೆಚ್ಚು ಮನ್ನಣೆಗೆ ಭಾಜನವಾಗಿದೆ ಎಂಬ ಅಂಶ ಇರಾನ್ ಅನ್ನು ಕುಪಿತಗೊಳಿಸಿರುವುದೂ ನಿಜ. ಅರಬ್ ಮತ್ತು ಮಧ್ಯಪ್ರಾಚ್ಯದಲ್ಲಿ ತಾನೇ ವಿವಾದಾತೀತ ಹಾಗೂ ಏಕಮಾತ್ರ ನಾಯಕನಾಗಬೇಕೆಂಬ ಇರಾನ್ ಹಂಬಲ 1981ರಲ್ಲೇ ಬಹಿರಂಗವಾಗಿತ್ತು. 1981, ಜೂನ್ 7ರಂದು ಇರಾಕ್್ನ ಅಣುಸ್ಥಾವರದ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಇರಾನ್ ಗೌಪ್ಯವಾಗಿ ಎಲ್ಲ ಸಹಕಾರವನ್ನೂ ನೀಡಿತ್ತು. ತದನಂತರ ಇರಾಕ್ ಮೇಲೆ ಯುದ್ಧವನ್ನೂ ನಡೆಸಿತ್ತು. ಇರಾಕ್ ಪತನದ ನಂತರ ಪ್ರಮುಖ ಪ್ರತಿಸ್ಪರ್ಧಿಯೊಬ್ಬ ಇಲ್ಲವಾದ, ಉಳಿದಿರುವುದು ಸೌದಿಯೊಂದೇ ಎನ್ನುವಷ್ಟರಲ್ಲಿ ಇಡೀ ಇಸ್ಲಾಮಿಕ್ ರಾಷ್ಟ್ರಗಳ ತಾಕತ್ತನ್ನೇ ಅಣಕಿಸಲಾರಂಭಿಸಿತ್ತು ಇಸ್ರೇಲ್! ಒಂದೆಡೆ 2005ರಲ್ಲಿ ಮೊಹಮದ್ ಅಹ್ಮದಿನೆಜಾದ್ ಅಧ್ಯಕ್ಷರಾದ ಮೇಲಂತೂ ತಾನೇ ಶ್ರೇಷ್ಠ, ತಾನೇ ನಾಯಕನೆಂದು ಸಾಬೀತುಪಡಿಸಬೇಕೆಂಬ ಇರಾನ್ ಹತಾಶೆ ಇನ್ನಷ್ಟು ಹೆಚ್ಚಾಗತೊಡಗಿದರೆ, ಇನ್ನೊಂದೆಡೆ ಮುಸ್ಲಿಂ ರಾಷ್ಟ್ರಗಳೆಲ್ಲರ ಸಾಮಾನ್ಯ ವೈರಿಯಾದ ಇಸ್ರೇಲ್ ಅನ್ನು ಹಣಿಯುವುದು ಹೇಗೆ ಎಂಬ ಚಿಂತೆಯೂ ಆರಂಭವಾಗಿತ್ತು.

ಏಕೆಂದರೆ….

ಇಸ್ರೇಲನ್ನು ಮಟ್ಟಹಾಕದ ಹೊರತು ಮಧ್ಯಪ್ರಾಚ್ಯ ಮತ್ತು ಅರಬ್್ನ  ನಾಯಕನೆನಿಸಿಕೊಳ್ಳಲು ಯಾವ ಮುಸ್ಲಿಂ ರಾಷ್ಟ್ರಗಳಿಗೂ ಸಾಧ್ಯವಿಲ್ಲ. ಆದರೆ, ಮಿಲಿಟರಿ ತಂತ್ರಜ್ಞಾನದ ವಿಷಯದಲ್ಲಿ ಇಸ್ರೇಲನ್ನು ಮೀರಿಸಲು ಅರಬ್ ರಾಷ್ಟ್ರಗಳೇಕೆ ಐರೋಪ್ಯ ರಾಷ್ಟ್ರಗಳಿಗೇ ಸಾಧ್ಯವಿಲ್ಲ. ಹಾಗಿರುವಾಗ ಉಂಡು ಮಲಗುವುದು ಮಕ್ಕಳು ಮಾಡುವುದರಲ್ಲಷ್ಟೇ ನಿಸ್ಸೀಮರಾಗಿರುವ ಅರಬ್ ರಾಷ್ಟ್ರಗಳಿಂದ ಇಸ್ರೇಲನ್ನು ಹಿಂದಿಕ್ಕಲು ಸಾಧ್ಯವೆ? ಆಗ ಕಂಡಿದ್ದು ಒಂದೇ ಮಾರ್ಗ-ಅಣ್ವಸ್ತ್ರ ಅಭಿವೃದ್ಧಿ!! ಪಾಕಿಸ್ತಾನದ ಅಣ್ವಸ್ತ್ರ ಜನಕ ಅಬ್ದುಲ್ ಖಾದಿರ್ ಖಾನ್್ರಂಥ ವ್ಯಾಪಾರಿಗಳು, ಉತ್ತರ ಕೊರಿಯಾದಂಥ ರೋಗಿಷ್ಠ ಮನಸ್ಥಿತಿಯ ರಾಷ್ಟ್ರಗಳ ಸಹಾಯದಿಂದ ಇರಾನ್ ತನ್ನ ಹತಾಶೆಯನ್ನು ತಣಿಸಿಕೊಳ್ಳುತ್ತಿರುವ ಸಂಕೇತವೇ ಬುಧವಾರ ಮಾಡಿರುವ ಘೋಷಣೆ. ಆತಂಕದ ಸಂಗತಿಯೇನೆಂದರೆ ಇದು ಮಧ್ಯಪ್ರಾಚ್ಯ ಹಾಗೂ ಅರಬ್ ರಾಷ್ಟ್ರಗಳ ಕಚ್ಚಾಟ, ಮೇಲಾಟವಾಗಿ ಮಾತ್ರ ಉಳಿದಿಲ್ಲ. ಇಸ್ರೇಲ್ ಏನಾದರೂ ಇರಾನ್ ಮೇಲೆ ದಾಳಿ ಮಾಡಿದರೆ, ಹಾರ್ಮುಝ್ ಕೊಲ್ಲಿಯನ್ನು ಮುಚ್ಚುವಲ್ಲಿ ಇರಾನ್ ಸಫಲವಾದರೆ ಅದರ ದುಷ್ಟರಿಣಾಮ ಇಡೀ ಜಗತ್ತಿನ ಮೇಲಾಗುತ್ತದೆ. ಅಣು ಯೋಜನೆಯ ಘೋಷಣೆಯ ಬೆನ್ನಲ್ಲೇ ಗ್ರೀಸ್, ಇಟಲಿ, ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಮತ್ತು ನೆದರ್್ಲ್ಯಾಂಡ್ ಮುಂತಾದ 6 ಐರೋಪ್ಯ ರಾಷ್ಟ್ರಗಳಿಗೆ ತೈಲರಫ್ತು ಮಾಡುವುದನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಇರಾನ್ ನಿಲ್ಲಿಸಿದೆ ಎಂದು ಅಲ್ಲಿನ ಸರ್ಕಾರಿ ಚಾನೆಲ್ ಹುಸಿ ಸುದ್ದಿ ಬಿತ್ತರಿಸಿದ್ದೇ ತೈಲ ಬೆಲೆ ಬ್ಯಾರಲ್್ಗೆ 120 ಡಾಲರ್್ಗೇರುವಂತೆ ಮಾಡಿದೆ. ಇನ್ನು ನಿಜಕ್ಕೂ ನಿಲ್ಲಿಸಿದ್ದೇ ಆದರೆ ಗತಿಯೇನು?

1973ರ ಯೋವ್ ಕಿಪ್ಪರ್ ವಾರ್ ನೆನಪಿದೆಯೇ?

ಅಂದು ಅರಬ್ ರಾಷ್ಟ್ರಗಳು ತೈಲವನ್ನೇ ಒಂದು ಅಸ್ತ್ರವಾಗಿ ಬಳಸಿದ್ದವು. ಯಹೂದಿಗಳಿಗೆ ಅತ್ಯಂತ ಪವಿತ್ರ ದಿನವಾದ ‘ಯೋವ್ ಕಿಪ್ಪರ್್’ನಂದು ಈಜಿಪ್ಟ್ ಹಾಗೂ ಸಿರಿಯಾ ನೇತೃತ್ವದಲ್ಲಿ ಮುಸ್ಲಿಂ ರಾಷ್ಟ್ರಗಳು ಇಸ್ರೇಲಿನ ಮೇಲೆ ಮುಗಿಬಿದ್ದಿದ್ದವು. ಆಗ ಅಮೆರಿಕ ಇಸ್ರೇಲಿನ ಪರವಹಿಸಿದರೆ, ಸೋವಿಯತ್ ರಷ್ಯಾ ಅರಬ್ ರಾಷ್ಟ್ರಗಳ ಬೆನ್ನಿಗೆ ನಿಂತಿತು. ಮುಸ್ಲಿಂ ರಾಷ್ಟ್ರಗಳಿಗೆ ಪ್ರಾರಂಭಿಕ ಯಶಸ್ಸು ದೊರೆತರೂ ಸಿರಿಯಾ ರಾಜಧಾನಿ ಡಮಾಸ್ಕಸ್್ಗೆ 40 ಕಿ.ಮೀ. ಹಾಗೂ ಈಜಿಪ್ಟ್ ರಾಜಧಾನಿ ಕೈರೋಗೆ 101 ಕಿ.ಮೀ. ಸಮೀಪದವರೆಗೂ ತಲುಪಿದ ಇಸ್ರೇಲಿ ಪಡೆಗಳು 4ನೇ ಅರಬ್-ಇಸ್ರೇಲ್ ಯುದ್ಧದಲ್ಲೂ ಮುಸ್ಲಿಂ ರಾಷ್ಟ್ರಗಳಿಗೆ ಮುಖಭಂಗ ಮಾಡಿದವು. ಆಗ ಇಸ್ರೇಲ್ ಹಿಂದೆ ಸರಿಯುವಂತೆ ಮಾಡಲು ಹೆಚ್ಚೂಕಡಿಮೆ ಮುಸ್ಲಿಂ ರಾಷ್ಟ್ರಗಳಿಂದಲೇ ಕೂಡಿರುವ OPEC (ತೈಲ ರಫ್ತು ರಾಷ್ಟ್ರಗಳ ಸಂಘಟನೆ), ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕಕ್ಕೆ ತೈಲ ರಫ್ತನ್ನು ನಿಲ್ಲಿಸಿದವು. ನಮ್ಮ ಮುಂಬೈನಲ್ಲಿ ಇಸ್ರೇಲ್್ನ ರಾಯಭಾರ ಕಚೇರಿ ಇದೆ ಎಂಬ ಕಾರಣಕ್ಕೆ ಭಾರತವನ್ನೂ ನಿಷೇಧಿತ ರಾಷ್ಟ್ರಗಳ ಪಟ್ಟಿಗೆ ಸೇರಿಸಿದ್ದರಿಂದ ನಾವೂ ತೀವ್ರ ತೈಲ ಕೊರತೆ ಎದುರಿಸಬೇಕಾಯಿತು. ಆಗ ಭಾರತ ಸರ್ಕಾರಕ್ಕೆ ತೈಲ ವಿಷಯಗಳಲ್ಲಿ ಸಲಹೆಗಾರರಾಗಿದ್ದ ಪ್ರಕಾಶ್ ಶಾ, ನಮ್ಮ ದೇಶ ಅನುಭವಿಸಿದ ಕಷ್ಟಗಳ ಬಗ್ಗೆ ‘ದಿ ಹಿಂದು’ನಲ್ಲಿ ಬೆಳಕು ಚೆಲ್ಲಿದ್ದಾರೆ. ಆ ಘಟನೆ ಜಾಗತಿಕ ಹಣದುಬ್ಬರಕ್ಕೆ ಕಾರಣವಾಗಿತ್ತು. ಆ ಘಟನೆಯ ನಂತರ ಅಮೆರಿಕ ಕೂಡ ಎಚ್ಚೆತ್ತುಕೊಂಡಿತು. ಅದರ ಅಪ್ತಮಿತ್ರ ಸೌದಿ ಅರೇಬಿಯಾ ಹಾಗೂ OPEC ನಲ್ಲಿನ ಅದರ ಮಿತ್ರರಾಷ್ಟ್ರಗಳು ಮುಂದೆಂದೂ ತೈಲವನ್ನು ಅಸ್ತ್ರವಾಗಿ ಬಳಸಿಕೊಳ್ಳದಂತೆ ಮಾಡಿತು. 2009ರಲ್ಲಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಸತತವಾಗಿ ದಾಳಿ ಮಾಡುತ್ತಿದ್ದ ಸಂದರ್ಭದಲ್ಲೂ ತೈಲ  ಅಸ್ತ್ರದ ಬಗ್ಗೆ ಮಾತು ಬಂದಾಗ ‘ಘ್ಟ್ಡ ್ಛಛಟಿಟ್ಟಿಡಿ ್ಠಜಢಜ್ಠಡಜ ಛ ್ಛ್ಟಟಿಜಿಟ್ಝ್ಛಡಿ ಛಿಣ ್ಡಡ್ಝಟ್ಜಿ ್ಟ್ಝಟ’ ಎಂದಿದ್ದರು ಸೌದಿ ವಿದೇಶಾಂಗ ಸಚಿವ!

ಅಷ್ಟೇಕೆ, ಇರಾನ್ ಅಣ್ವಸ್ತ್ರ ಹೊಂದುವುದು ಅರಬ್ (ಮುಸ್ಲಿಂ) ರಾಷ್ಟ್ರಗಳಿಗೇ ಬೇಕಿಲ್ಲ!!

ಆದ್ದರಿಂದ ಇಸ್ರೇಲ್ ಆಗಲಿ, ಅಮೆರಿಕವಾಗಲಿ ಅಥವಾ ಜಗತ್ತಿನ ಇತರ ಪ್ರಮುಖಶಕ್ತಿಗಳಾಗಲಿ ಬಳಸಿಕೊಳ್ಳಬೇಕಾಗಿರುವುದೂ ಇದೇ ದೌರ್ಬಲ್ಯವನ್ನು! ಇರಾನಿನ ಎದುರಾಳಿಯೂ ಆಗಿರುವ ಸೌದಿ ಅರೇಬಿಯಾವನ್ನು ಬಳಸಿಕೊಂಡು ಇರಾನಿನ ಬ್ಲಾಕ್್ಮೇಲ್ ತಂತ್ರವನ್ನು ಮಟ್ಟಹಾಕಬೇಕು. ಇಷ್ಟಕ್ಕೂ ಮುಸ್ಲಿಂ ರಾಷ್ಟ್ರಗಳು ಒಂದಾದರೆ ಜಗತ್ತಿನ ನಿದ್ದೆಕೆಡಿಸುತ್ತವೆ, ಅವು ಕಚ್ಚಾಡಿಕೊಂಡಿದ್ದರೇ ಉಳಿದವರಿಗೆ ನೆಮ್ಮದಿ. ಹಾಗಾಗಿ “We don’t want to see one more nuclear power in this part of the world’ ಎಂದು ಬಾಯಲ್ಲಷ್ಟೇ ಹೇಳುತ್ತಾ ಕಾಂಪೌಂಡ್ ಮೇಲೆ ಕುಳಿತ ಬೆಕ್ಕಿನಂತೆ ಭಾರತ ವರ್ತಿಸಬಾರದು. ಒಂದು ವೇಳೆ ಇರಾನ್್ನ ‘ಶಿಯಾ ಬಾಂಬಿ’ಗೆ ಪ್ರತಿಯಾಗಿ ಸೌದಿ ‘ಸುನ್ನಿ ಬಾಂಬ್್’ ತಯಾರಿಸಲು ಮುಂದಾದರೆ ಅದು ಮುಖ ಮಾಡುವುದು ಪಾಕಿಸ್ತಾನದತ್ತ. ಆಗ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರಗಳ ನೇತಾರನಾಗಿ ಬಿಡುತ್ತದೆ. ಅದು ಖಂಡಿತ ಭಾರತಕ್ಕೆ ಒಳ್ಳೆಯ ಬೆಳವಣಿಗೆಯಾಗುವುದಿಲ್ಲ. ಇದೆಲ್ಲದರ ಹೊರತಾಗಿ ಯೋಚಿಸಿದರೂ, ಇರಾನ್ ಶಾಂತಿಯುತ ಉದ್ದೇಶಕ್ಕಾಗಿ ಅಣುತಂತ್ರಜ್ಞಾನವನ್ನು ಹೊಂದಿದ್ದೇ ಆಗಿದ್ದರೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ, ಇಸ್ರೇಲನ್ನು ಜಗತ್ತಿನ ಭೂಪಟದಿಂದ ಅಳಿಸಿಹಾಕುವುದೇ ನಮ್ಮ ಉದ್ದೇಶ ಎಂದು ಇರಾನ್ ಅಧ್ಯಕ್ಷ ಅಹ್ಮದಿನೆಜಾದ್ ಸಾಕಷ್ಟು ಬಾರಿ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಈ ನಡುವೆ ಫೆಬ್ರವರಿ 6ರಂದು ‘ಇಸ್ರೇಲ್ ಎಂಬುದೊಂದು ಕ್ಯಾನ್ಸರ್್ಕಾರಕ ಗಡ್ಡೆ, ಅದನ್ನು ಕತ್ತರಿಸಬೇಕು ಹಾಗೂ ಕತ್ತರಿಸಲಾಗುವುದು’ ಎಂದು ಇರಾನಿನ ಅತ್ಯುನ್ನತ ಧಾರ್ಮಿಕ ನಾಯಕ ಆಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? ಭಾರತದಲ್ಲಿ ಮೊನ್ನೆ ನಡೆದ ದಾಳಿಯ ಹಿಂದೆಯೂ ಇರಾನಿನ ಕೈವಾಡವಿರುವ ಬಗ್ಗೆ ಬಲವಾದ ಸಂದೇಹಗಳಿವೆ. ಸುಮಾರು 40ಕ್ಕೂ ಹೆಚ್ಚು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ, ಸಹಾಯ ನೀಡುತ್ತಿರುವ ಇರಾನಿನಿಂದ ಭಾರತಕ್ಕೆ ಅಪಾಯವೇ ಹೊರತು ಲಾಭವೇನಿಲ್ಲ.

ಅದಿರಲಿ, ಒಂದು ವೇಳೆ ಇಸ್ರೇಲ್ ಇರಾನ್ ಮೇಲೆ ‘ಪ್ರಿಎಮ್ಟೀವ್್ಸ್ಟ್ರೈಕ್್’ ಮಾಡಿದರೆ ಅದು ಮೂರನೇ ಮಹಾಯುದ್ಧಕ್ಕೆ ದಾರಿಮಾಡಿ ಕೊಡುವುದೇ?

ಬಹಳಷ್ಟು ವಿಶ್ಲೇಷಕರು ಇರಾನ್್ನ ಧೋರಣೆಯನ್ನು ಅಮೆರಿಕಕ್ಕೆ ಸಡ್ಡುಹೊಡೆದಿರುವ ಉತ್ತರ ಕೊರಿಯಾಕ್ಕೆ ಹೋಲಿಸುತ್ತಿದ್ದಾರೆ. ಆದರೆ ಉತ್ತರ ಕೊರಿಯಾಕ್ಕೂ ಇರಾನ್್ಗೂ ಬಹಳ ವ್ಯತ್ಯಾಸವಿದೆ. ಉತ್ತರ ಕೊರಿಯಾ ಬಳಿ ಅಣ್ವಸ್ತ್ರಗಳು ಮಾತ್ರವಲ್ಲ, ಅಮೆರಿಕದ ಗಡಿ ತಲುಪುವ ಖಂಡಾಂತರ ಕ್ಷಿಪಣಿಗಳೂ ಇವೆ. ಜತೆಗೆ ಅಕ್ಕಪಕ್ಕದಲ್ಲಿ ಅಮೆರಿಕದ ಪರಮಾಪ್ತ ರಾಷ್ಟ್ರಗಳಾದ ಜಪಾನ್ ಹಾಗೂ ದಕ್ಷಿಣ ಕೊರಿಯಾಗಳೂ ಇವೆ. ಅಲ್ಲಿ ಅಮೆರಿಕದ ಸೇನಾ ನೆಲೆಗಳೂ ಇವೆ. ಒಂದು ವೇಳೆ ಅಮೆರಿಕವೇನಾದರೂ ಉತ್ತರ ಕೊರಿಯಾ ಮೇಲೆ ದಾಳಿ ಮಾಡಿದರೆ, ಅದು ದಕ್ಷಿಣ ಕೊರಿಯಾ ಹಾಗೂ ಜಪಾನ್ ಮೇಲೆ ದಾಳಿ ಮಾಡುತ್ತದೆ. ಅದರಿಂದ ಬಹುಪಾಲು ನಷ್ಟ ಅನುಭವಿಸುವುದು ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳೇ. ಆದರೆ ಇರಾನ್ ಏಕೆ ಜಗತ್ತಿನ ಯಾವ ಇಸ್ಲಾಮಿಕ್ ರಾಷ್ಟ್ರಗಳ ಬಳಿಯೂ ಅಮೆರಿಕಕ್ಕೆ ದಿಗಿಲು ಮೂಡಿಸುವಂಥ ಖಂಡಾಂತರ ಕ್ಷಿಪಣಿಗಳಿಲ್ಲ. ಒಂದು ವೇಳೆ ಇಸ್ರೇಲ್ ದಾಳಿ ಮಾಡಿದರೆ ಇರಾನ್ ಪ್ರತಿದಾಳಿ ಮಾಡಲು ಅದರ ನೆರೆಯಲ್ಲಿ ಇರುವುವೆಲ್ಲ ಮುಸ್ಲಿಂ ರಾಷ್ಟ್ರಗಳೇ! ಅವುಗಳ ಮೇಲಂತೂ ದಾಳಿ ಮಾಡುವುದಕ್ಕಾಗುವುದಿಲ್ಲ. ಇಸ್ರೇಲ್ ಮೇಲೆ ದಾಳಿ ಮಾಡಬೇಕೆಂದರೂ ಇರಾಕ್ ಮತ್ತು ಜೋರ್ಡಾನ್ ಅನ್ನು ದಾಟಿ ಬರಬೇಕಾಗುತ್ತದೆ. ಇರಾಕ್್ನಲ್ಲೂ ಅಮೆರಿಕದ ಪಡೆಗಳಿವೆ, ಇರಾನಿನ ಮತ್ತೊಂದು ನೆರೆಯ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲೂ ಅಮೆರಿಕದ ಸೇನೆಯಿದೆ. ಹಾರ್ಮುಝ್ ಕೊಲ್ಲಿಯಲ್ಲಂತೂ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್್ನ ಯುದ್ಧನೌಕೆಗಳಿವೆ. ಹಾಗಾಗಿ ಇರಾನ್ ಎಷ್ಟೇ ಪೌರುಷದ ಮಾತನಾಡಿದರೂ ಅದು ಬರೀ ಋಛಟಡಜ ಛ್ಠಿಛಢಛಜ್ಟ  ಆಗಿ ಬಿಡುತ್ತದೆ. ಇನ್ನು ಚೀನಾ ಇರಾನ್ ಪರ ನಿಂತಿದ್ದರೂ ಅದು ಇರಾನಿನ ತೈಲವನ್ನು ದೋಚುವ ದೂರ್ತ ಉದ್ದೇಶದಿಂದಲೇ ಹೊರತು, ಬೇರೆ ಯಾವ ಕಾರಣಕ್ಕೂ ಅಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾನು ಹೊಂದಿರುವ ವಿಟೋ ಅಧಿಕಾರವನ್ನು ಚೀನಾ ಅಮೆರಿಕದ ವಿರುದ್ಧ ಪ್ರಯೋಗಿಸುತ್ತದೆ ಎಂಬ ಮಾತಿನಲ್ಲೂ ಹುರುಳಿಲ್ಲ. ಏಕೆಂದರೆ 2003ರಲ್ಲಿ ಇರಾಕ್ ಮೇಲೆ ದಾಳಿ ಮಾಡುವಾಗ ಅಮೆರಿಕ ವಿಶ್ವಸಂಸ್ಥೆಯ ಅಪ್ಪಣೆ ಪಡೆದುಕೊಂಡಿತ್ತೆ? ಅಂದು ಪ್ರಾನ್ಸ್, ಇಟಲಿ, ಜರ್ಮನಿಗಳಂಥ ಅಮೆರಿಕದ ಮಿತ್ರ ರಾಷ್ಟ್ರಗಳೇ ವಿರೋಧ ವ್ಯಕ್ತಪಡಿಸಿದರೂ ಅಮೆರಿಕ ಲೆಕ್ಕಿಸಿರಲಿಲ್ಲ. ಇನ್ನು ಪಾಕೆಟ್ ಕಾರ್ಟೂನ್್ಗಳಂತಿರುವ ಚೀನಾಕ್ಕೆ ಅಮೆರಿಕ ಸೊಪ್ಪು ಹಾಕೀತೆ? ಹಾಗಿರುವಾಗ ಮೂರನೇ ಮಹಾಯುದ್ಧಕ್ಕೆ ದಾರಿಯಾಗುವ ಯಾವ ಲಕ್ಷಣಗಳೂ ಇಲ್ಲ. ಆದರೂ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯೇನೆಂದರೆ-ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸಿದ್ಧಗೊಂಡೀತೆ, ಅಮೆರಿಕ ಮುಂದಾಗದಿದ್ದರೂ ಇಸ್ರೇಲ್ ಸುಖಾಸುಮ್ಮನೆ ಕುಳಿತೀತೆ?

21 Responses to “ಮಾಡಿದರೆ ಇರಾನ್ ಮೇಲೆ ಯುದ್ಧ, ಶುರುವಾಗಲಿದೆಯೇ 3ನೇ ಮಹಾಯುದ್ಧ?”

 1. avinash says:

  hmmmm good one sir… neev heartly ollevro kettovro nang gothilla… but nim articles sakath effective aag iruthe…. present india li youths hegidare??? heg irbeku antha 1 article bariri… yaavdaru saturdy kannada prabha li baruthe antha wait maadthirthini……
  JAI HIND

 2. Kodanda Rao says:

  super sir

 3. Haleshappa s says:

  Dear sir your article is really good. I am requesting you to write some articles against the Burka system of muslim religion. It is very worst system in the civil society. Pls do that by giving first preferance pls.

 4. Guru says:

  Come on dude ,

  Stop this right wing propaganda ! There is always the other side of the story .. Try to raise awareness by writing about issues which matter to us the most !! Evolve man .. If our journalists , leaders won’t give us the right picture who else would ? Do not copy stuff from new york times or some foreign media , be original .. Put your talent for some good use . God bless us, god bless us Indians ..

 5. Pradeep says:

  Dear Sir

  Thanks for your beautiful article about this countries,, Can u
  Plz wright some thing about our karnataka politicians .

 6. Guru says:

  I want to make one thing clear, I am not against you, I admire your writing style but somehow not aligned to the content you produce. The thing is we see all the happenings in middle east through a prism constituted by western media. We adore Israel but why don’t we see the atrocities it has performed on the Palestinian population. Thousands have been killed and are being killed til date, how does a single Israeli life is more important than a palastanian life ? Iran says it wants to push Israelis off to the sea, but who provoked them first ? Its a well known fact that jewesh lobby is one of the most notorious lobbies USA has , all the adventures of israel are heroics just because west supports it in UN.
  India is not china, we still do not have the power to dictate terms in the world stage. We need Israel and Iran both for different reasons.
  Go through this link , http://globalpublicsquare.blogs.cnn.com/2012/02/19/zakaria-israel-dont-strike-iran/

 7. Guru says:

  If you wish you may block my above comment, I wanted to have an healthy argument over the issue.I do not know your mail id so I am using this platform. I rarely read articles which really matter to us , people in some parts of karnataka die because of malnutrition , not a single kannada daily has written about it.
  You have aggressive writing style which influences many people, its heartening to see. But most of the people who comment on your blogs hate certain community for some reason which they have not understood. One of the guy says write about burkhas,agreed burkhas are bad, but do we treat our women with respect ? We still have child marriages, all kinds of sexual harassment committed on women and what not. People do not ponder , everybody wants to show their aggression . People who comment on these posts are the cream of India, few fortunate who could complete graduation and have a decent job and all the access to whats happening around the world. If they spread hatred and do not understand the core problems what is stopping India’s growth who else would ?

 8. Krishna Upadhya says:

  Guru,

  What type of ‘right’ propaganda you have found in the article?

  First check out Iran’s religious leader ayatulla khameneni’s view on kashmir and hindus in particular. Iran even though a shia majority country, its view on non muslims is as per quran. Once if Iran acquires full fledged nuclear bombs, the present target may be Israel, next it would be India. Down with all these ‘Dharmaandha’s.

 9. Raghu says:

  Nice article sir……

 10. sudhakar says:

  Nice.. plz discuss about today’s education system… plz… thanks for publishing

 11. krishna g says:

  u r article is more informetive pls contu

 12. prashanth says:

  Nice article sir, naavu yaavaga Israel thara aagodu ?

 13. prashant says:

  informative

 14. pooja says:

  Dear Pratap Sir, Why can’t You be the Leader of our Society?

 15. rajath says:

  http://timesofindia.indiatimes.com/home/opinion/edit-page/Family-moon-grassroots-stars/articleshow/12023231.cms

  check this out bro… btw your website has a ‘your views’ tab, but doesnt hold anything using which i can connect to you.. no offenses bro… jst want the website to be more rich, easy to access and connect to…

 16. guru says:

  @Krishna Upadhya,

  Just try to gauge who has caused more damage to the peace of this world , the west or Middle east !! I agree Iran has issued hate speeches against non-muslims but has it done anything against them unless provoked ?
  I would be glad to be called as a “Dharmandha” for identifying myself with few who do not believe in cast system and elitism. If the Dharma what we speak about would have cared for the lowest strata of this society , the situation in India would have been completely different !

 17. shiva sidvir says:

  nice article about reality.

 18. Lokesh shetty says:

  Dear pratap sir,
  All of ur articles are so good,………………..

 19. Santhosh says:

  @ Guru

  What is right wing propaganda ?
  What is the other side of the story ?
  What is it that is copied from New York Times or foreign media ? Any proofs ?

  Regarding atrocities it has performed on the Palestinian population, do u expect it to be like India and be impotent when their people are attacked ? What can India do when terrorists supported by ISI kill Indians? Is this correct ? Should Israel be the same ?

  Jewesh lobby is one of the most notorious lobbies USA has , all the adventures of israel are heroics just because west supports it in UN – how can they lobby when others cant ? Do u think they reached there without hardwork ? Why couldnt others when they could ? Answer these or accept ur statement isnt true.

  If some fan says something hatred, is it writers fault ?

  So what is it exactly that u r expecting ? Should Pratap stop writing such articles ? Why ?

 20. Manjushree says:

  brother, your article is so nice. and it implies that INDIA should be alert at every time as like Isreal.