Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮಠ-ಮಾನ್ಯಗಳ ನಾಡಲ್ಲಿ ಅತಿಮಾನ್ಯ ಈ ಹಿರೇಮಠ!

ಮಠ-ಮಾನ್ಯಗಳ ನಾಡಲ್ಲಿ ಅತಿಮಾನ್ಯ ಈ ಹಿರೇಮಠ!

ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ Barmy Army, ಅದಕ್ಕೆ ಪ್ರತಿಯಾಗಿ ಬ್ರಿಟನ್್ನಲ್ಲಿ ನೆಲಸಿರುವ ಭಾರತ ಸಂಜಾತರು ಆರಂಭಿಸಿದ – Bharath Armyಗಳನ್ನು ಕೇಳಿದ್ದೇವೆ, ಆದರೆ ಇದ್ಯಾವುದೀ ಹೊಸ ಆರ್ಮಿ ಎನ್ನುತ್ತೀರಾ? ಹಲವಾರು ರಾಜಕೀಯ ವಿಪ್ಲವಗಳನ್ನು ಕಂಡ 1990ರ ದಶಕಕ್ಕೆ ಸಾಕ್ಷೀಭೂತರಾದ ಯಾರೊಬ್ಬರನ್ನು ಕೇಳಿದರೂ ಆ ವ್ಯಕ್ತಿ ಯಾರು ಎಂದು ತಟ್ಟನೆ ಉತ್ತರಿಸಿ ಬಿಡುತ್ತಾರೆ. ಖಂಡಿತ ಅವರನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯೇ ಇಲ್ಲ.

ಗೋವಿಂದ ರಾವ್ ಖೈರ್ನಾರ್!

ಅದು ದಾವೂದ್ ಇಬ್ರಾಹಿಂ ಭೂಗತ ಜಗತ್ತನ್ನು ಆಳುತ್ತಿದ್ದ ಕಾಲ. ಮೂನ್ನೂರಕ್ಕೂ ಅಧಿಕ ಜನರನ್ನು ಆಹುತಿ ತೆಗೆದುಕೊಂಡ 1993ರ ಮುಂಬೈ ಸರಣಿ ಸ್ಫೋಟದ ಮುಖ್ಯ ಪಿತೂರಿಯನ್ನು ಆತ ರೂಪಿಸಿದ್ದ ದಿನಗಳು. ಆತನ ಹೆಸರನ್ನು ಹೇಳಿದರೆ ಮೈನಡುಕವುಂಟಾಗುವಂಥ ಸಮಯವದು. ಹಾಗೆ ದಾವೂದ್ ಅಟ್ಟಹಾಸ ಅತಿರೇಕಕ್ಕೇರಿದ್ದ ಕಾಲದಲ್ಲಿ ಆತನ ತಾಕತ್ತಿಗೆ ಏಕಾಂಗಿಯಾಗಿ ಸವಾಲು ಎಸೆದ, ಆತನನ್ನು ನಿದ್ದೆಗೆಡಿಸಿದ ಯಾವನಾದರೂ ಗಂಡುಮಗನಿದ್ದರೆ ಆತನೇ ಖೈರ್ನಾರ್. ಬೃಹನ್ ಮುಂಬೈ ಕಾರ್ಪೋರೇಷನ್್ನ (ಇಂಈ) ಡೆಪ್ಯೂಟಿ ಕಮಿಷನರ್ ಆಗಿದ್ದ ಖೈರ್ನಾರ್ ಎಂತಹ ಕೆಲಸಕ್ಕೆ ಕೈಹಾಕಿದರೆಂದರೆ ದುಬೈನಲ್ಲಿದ್ದುಕೊಂಡು ಮುಂಬೈಯನ್ನಾಳುತ್ತಿದ್ದ ದಾವೂದನ ಸಾಮ್ರಾಜ್ಯವನ್ನೇ ನೆಲಸಮ ಮಾಡಲು ಹೊರಟರು. ಚಿನ್ನ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ ದಾವೂದ್ ಇಬ್ರಾಹಿಂ, ಆ ದಂಧೆಯನ್ನು ಬಿಟ್ಟು ರಿಯಲ್ ಎಸ್ಟೇಟ್್ಗೆ ಕೈಹಾಕಿದ್ದ. ದಕ್ಷಿಣ ಮುಂಬೈನಲ್ಲಿ ಯಾವುದೇ ಹಳೆಯ ಕಟ್ಟಡ, ಮನೆಗಳಿರಲಿ, ವಿಸ್ತಾರವಾದ ನಿವೇಶನಗಳಿರಲಿ ಮಾಲೀಕರ ಹಣೆಗೆ ಪಿಸ್ತೂಲನ್ನಿಟ್ಟು ಬೆದರಿಸಿ ಮನಸ್ಸಿಗೆ ಬಂದ ಬೆಲೆಗೆ ಖರೀದಿ ಮಾಡುತ್ತಿದ್ದ. ಅವುಗಳ ಬೆಲೆ 10 ಸಾವಿರ ಕೋಟಿಯನ್ನು ಮೀರಿತು. ಮುಂಬೈನಲ್ಲೇ ಇದ್ದ ತನ್ನ ಸಹೋದರರು, ಭಟ್ಟಂಗಿಗಳು, ಡಿ ಕಂಪನಿಯ ಹಂತಕರ ಹೆಸರಿನಲ್ಲಿ ದಕ್ಷಿಣ ಮುಂಬೈವೊಂದರಲ್ಲೇ ದಾವೂದ್ ಮಾಡಿದ ಬೇನಾಮಿ ಆಸ್ತಿಗಳ ಸಂಖ್ಯೆ 1087.  ಆವುಗಳನ್ನೆಲ್ಲ ಖೈರ್ನಾರ್ ಪಟ್ಟಿ ಮಾಡಿದರು. 29 ಕಟ್ಟಡಗಳನ್ನು ನೆಲಸಮ ಮಾಡಿಯೂ ಬಿಟ್ಟರು. ‘<font face=”arial narrow”><small>Demolition man</small></font>ಿ’ ಎಂಬ ಹೆಸರು ಬಂದಿದ್ದೇ ಆಗ!

ಆದರೆ… ದಾವೂದನ ಹೆಸರು ಕೇಳಿದರೇ ಹೃದಯಾಘಾತಕ್ಕೊಳಗಾಗುವಂಥ ಕಾಲದಲ್ಲಿ ಗುಂಡಿಗೆ ತೋರಿದ್ದ ಖೈರ್ನಾರ್್ಗೆ ದೊರೆತ ಪ್ರತಿಫಲವೇನು ಗೊತ್ತೆ? ಮಹಾರಾಷ್ಟ್ರದ ಆಗಿನ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಎಂಬ ಹುಟ್ಟಾ ಭ್ರಷ್ಟ ಮನುಷ್ಯ ಖೈರ್ನಾರ್ ಅವರನ್ನೇ ಅಮಾನತ್ತು ಮಾಡಿದರು. ಅಧಿಕಾರದ ವ್ಯಾಪ್ತಿ ಮೀರಿದ್ದಾರೆಂದು ಶಿಕ್ಷಿಸಲು ಮುಂದಾದರು. ನ್ಯಾಯಾಂಗ ತನಿಖೆಗೆ ಆದೇಶ ನೀಡಿದರು. ಅಲ್ಲಿಂದ ಮುಂದೆ ಖೈರ್ನಾರ್ ಬದುಕು ನರಕಸದೃಶವಾಯಿತು. ಒಂದೆಡೆ ದಾವೂದನ ಕೋಪಕ್ಕೆ ತುತ್ತಾಗಿದ್ದರು, ಇನ್ನೊಂದೆಡೆ ಕಾಯಬೇಕಾದ ಸರ್ಕಾರವೇ ನಾಶಕ್ಕೆ ನಿಂತಿತ್ತು. ಯಾವ ಕ್ಷಣದಲ್ಲೂ ದಾವೂದ್ ಗುಂಪಿನ ಹಂತಕರ ಗುಂಡುಗಳು ಖೈರ್ನಾರ್ ಎದೆಯನ್ನು ಸೀಳಬಹುದು ಎಂಬ ಆತಂಕ ಸೃಷ್ಟಿಯಾಯಿತು. ಹದಿನೈದು ವರ್ಷಗಳಿಂದ ವಾಸವಾಗಿದ್ದ ಮನೆಯಿಂದಲೂ ಸರ್ಕಾರ ಅವರನ್ನು ಹೊರಹಾಕಿತು. 1974ರಲ್ಲಿ ಬೃಹನ್ ಮುಂಬೈ ಕಾರ್ಪೋರೇಷನ್ ಲೆಕ್ಕಿಗನಾಗಿ ಸೇರಿಕೊಂಡು ತನ್ನ ಕಾರ್ಯದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಡೆಪ್ಯೂಟಿ ಕಮಿಷನರ್ ಹುದ್ದೆಗೇರಿದ್ದ, 1985ರಲ್ಲಿ ವಾರ್ಡ್ ಅಧಿಕಾರಿಯಾಗಿದ್ದಾಗ ಆಗಿನ ಮುಖ್ಯಮಂತ್ರಿ ವಸಂತ್ ದಾದಾ ಪಾಟೀಲ್ ಅವರ ಪುತ್ರ ಚಂದ್ರಕಾಂತ್ ನಡೆಸುತ್ತಿದ್ದ ‘ಖಡಿಜಠ ಐಟಿ’ ಹೊಟೇಲ್ ಅನ್ನು ಅಕ್ರಮ ಕಟ್ಟಡವೆಂಬ ಕಾರಣಕ್ಕೆ ನೆಲಸಮ ಮಾಡಿದ್ದ ಖೈರ್ನಾರ್ ಅವರನ್ನು ದಾವೂದನ ಅಪಾಯಕ್ಕೆ ದೂಡುವ ಮೂಲಕ ಶರದ್ ಪವಾರ್ ಸರ್ಕಾರ ಅಕ್ಷರಶಃ ಕೊಲ್ಲಲು ಮುಂದಾಯಿತು. 1995ರ ವಿಧಾನಸಭೆ ಚುನಾವಣೆಯಲ್ಲಿ ಖೈರ್ನಾರ್ ಅವರನ್ನು ನಡೆಸಿಕೊಂಡ ರೀತಿಯನ್ನೇ ಪ್ರಚಾರಾಂದೋಲನದ ಮುಖ್ಯ ವಿಷಯವಾಗಿಟ್ಟು ಕಣಕ್ಕಿಳಿಸಿದ ಬಿಜೆಪಿ-ಶಿವಸೇನೆ ಕಾಂಗ್ರೆಸ್ಸನ್ನು ಧೂಳಿಪಟ ಮಾಡಿದವು. ಆದರೇನಂತೆ ಖೈರ್ನಾರ್್ಗೆ ಸರಿಯಾದ ನ್ಯಾಯ ಸಿಗಲಿಲ್ಲ. 1997ರಲ್ಲಿ ಬಿಎಂಸಿ ವಿರುದ್ಧ ಕೇಸು ಗೆದ್ದರೂ ಖೈರ್ನಾರ್ ಅವರನ್ನು ಮತ್ತೆ ಡೆಪ್ಯೂಟಿ ಕಮಿಷನರ್ ಸ್ಥಾನಕ್ಕೆ ನೇಮಕ ಮಾಡಿದ್ದು ಮಾತ್ರ 2000ದಲ್ಲಿ! ಆ ವೇಳೆಗಾಗಲೇ ಖೈರ್ನಾರ್ ನಿವೃತ್ತಿಯ ಅಂಚಿಗೆ ಬಂದಿದ್ದರು. ಆದರೂ ಇಚ್ಛಾಶಕ್ಕಿ ಮಾತ್ರ ಕುಂದಿರಲಿಲ್ಲ. 2002ರವರೆಗೂ ಹುದ್ದೆಯಲ್ಲಿದ್ದ ಅವರು,Step In ಎಂಬ ಹೆಸರಿಗೆ ತಕ್ಕಂತೆ ಭೂ  ಮಾಫಿಯಾ ಹಾಗೂ ಭೂ ಒತ್ತುವರಿ ಮಾಡುವವರ ವಿರುದ್ಧ ಸಮರ ಸಾರಿದರು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಒತ್ತುವರಿಯಿಂದ ತೆರವುಗೊಳಿಸಿದರು.

he Lonely Fighter

ಇದು 1995ರಲ್ಲಿ ಅಮಾನತ್ತುಗೊಂಡಿದ್ದಾಗ ಖೈರ್ನಾರ್ ಮರಾಠಿಯಲ್ಲಿ ಬರೆದಿದ್ದ ತಮ್ಮ ಅತ್ಮಚರಿತ್ರೆಯ ಹೆಸರು. ಅವರು ಪ್ರಸಿದ್ಧರಾಗಿದ್ದೂ One-man demolition army ಎಂದೇ. ಒಂದು ವ್ಯವಸ್ಥೆ ಕುಸಿದಿರುವಾಗ, ಒಂದು ಸರ್ಕಾರವೇ ಮಾಫಿಯಾದ ಜತೆ ಕೈಜೋಡಿಸಿರುವಾಗಲೂ ಒಬ್ಬ ವ್ಯಕ್ತಿಯ ಇಚ್ಛಾಶಕ್ತಿ ಏನೆಲ್ಲ ಮಾಡಿಬಿಡಬಹುದು, ಸಮಾಜಕ್ಕೆ ಎಂತಹ ಮಾದರಿ ಹಾಕಿಕೊಡಬಹುದು ಎಂಬುದಕ್ಕೆ ಖೈರ್ನಾರ್ ಅವರೇ ಸಾಕ್ಷಿ. ಈ ಖೈರ್ನಾರ್ ಹೆಸರು ಮನೆಮಾತಾದ ಸಂದರ್ಭದಲ್ಲೇ ನಮ್ಮ ಕರ್ನಾಟಕದ ವ್ಯಕ್ತಿಯೊಬ್ಬರೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು.

ಅವರೇ ಜಯಂತ್ ತಿನೈಕರ್!

ಬೆಳಗಾವಿ ಜಿಲ್ಲೆಯ ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ತಿನೈಕರ್ ಕ್ಯಾಂಟೀನ್ ನಡೆಸುತ್ತಾರೆ. ಅಬ್ದುಲ್ ಕರೀಂ ಲಾಲಾ ತೆಲಗಿ ಅಲ್ಲೇ ಫುಟ್ಪಾತ್ ಮೇಲೆ ಹಣ್ಣು ವ್ಯಾಪಾರ ಮಾಡುತ್ತಿದ್ದ. ಐವತ್ತು-ನೂರು ರೂಪಾಯಿ ಸಾಲ ಕೇಳಿಕೊಂಡು ತಿನೈಕರ್ ಬಳಿಗೇ ಬರುತ್ತಿದ್ದ. ಇಂತಹ ವ್ಯಕ್ತಿ ಇದ್ದಕ್ಕಿದ್ದಂತೆಯೇ ಮುಂಬೈಗೆ ಹೋದ, ಮೂರ್ನಾಲ್ಕು ವರ್ಷಗಳಲ್ಲೇ ಖಾನಾಪುರದಲ್ಲಿ 6 ಲಕ್ಷ ಬೆಲೆಯ ಆಸ್ತಿ ಖರೀದಿಗೆ ಮುಂದಾದ. ಅಷ್ಟೇ ಅಲ್ಲ, ಕಂಡ ಕಂಡ ಆಸ್ತಿ-ನಿವೇಶನಗಳನ್ನು ಖರೀದಿ ಮಾಡಲಾರಂಭಿಸಿದ. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ತಿನೈಕರ್ ವಿಚಾರಿಸಿದಾಗ ತೆಲಗಿ ಮುಂಬೈನಲ್ಲಿ ನಕಲಿ ಛಾಪ ಕಾಗದ ಮಾರುತ್ತಿದ್ದಾನೆ ಎಂದು ಸ್ನೇಹಿತರೊಬ್ಬರು ಹೇಳಿದರು. ಆ ದೇಶದ್ರೋಹಿ ಕೆಲಸಕ್ಕೆ ತಡೆಹಾಕಬೇಕೆಂದು ತಿನೈಕರ್ ಕೂಡ ಬೆನ್ನುಬಿದ್ದರು. ಮುಂಬೈಗೆ ತೆರಳಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದರು. ಆದರೆ ಪ್ರಾರಂಭದಲ್ಲಿ ಅದಕ್ಕೆ ಯಾವ ಸ್ಪಂದನೆಯೂ ಸಿಗಲಿಲ್ಲ. ಮತ್ತೆ ವಿಚಾರಿಸಿದಾಗ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. 1998ರಲ್ಲಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್್ಗೆ ದೂರಿ ಪತ್ರ ಬರೆದರು. ರಾಷ್ಟ್ರಪತಿ ಭವನದಿಂದ ಪ್ರತಿಕ್ರಿಯೆಯೂ ಬಂತು. ನಿಮ್ಮ ದೂರನ್ನು ರೈಲ್ವೆ ಇಲಾಖೆಗೆ ಕಳುಹಿಸಿದ್ದೇವೆ ಎಂದು ಅದರಲ್ಲಿ ತಿಳಿಸಲಾಗಿತ್ತು! ಅಲ್ಲಾ, ನಕಲಿ ಛಾಪಾ ಕಾಗದ ಹಗರಣಕ್ಕೂ ರೈಲ್ವೆ ಇಲಾಖೆಗೂ ಏನು ಸಂಬಂಧ? ಎಲ್ಲ ಹಂತಗಳಲ್ಲೂ ತಿನೈಕರ್್ಗೆ ಅಡಚಣೆ, ನಿರಾಸೆ ಎದುರಾದವು.

ಆದರೆ ತಿನೈಕರ್ ಬಯಲು ಮಾಡ ಹೊರಟಿದ್ದು ಇಡೀ ದೇಶವೇ ದಿಗ್ಭ್ರಮೆಗೀಡಾಗುವಂಥ ಹಗರಣವಾಗಿತ್ತು!

ಕೊನೆಗೂ 2000, ಆಗಸ್ಟ್ 19ರಂದು ಬೆಂಗಳೂರು ಪೊಲೀಸರು ಬದ್ರುದ್ದೀನ್ ಹಾಗೂ 13 ಜನರನ್ನು ಬಂಧಿಸಿದರು. 12 ಕೋಟಿ ಮೌಲ್ಯದ ನಕಲಿ ಸ್ಟ್ಯಾಂಪ್ ಪೇಪರ್ ಸಿಕ್ಕಿತು. ಆ ಘಟನೆ ತಿನೈಕರ್್ಗೆ ಮತ್ತಷ್ಟು ಅತ್ಮಬಲ ತಂದುಕೊಟ್ಟಿತು. ಇಡೀ ಹಗರಣದ ಮುಖ್ಯ ಪಿತೂರಿದಾರ ತೆಲಗಿಯನ್ನು ಪೊಲೀಸರಿಗೆ ಹಿಡಿದುಕೊಡಬೇಕೆಂಬ ಛಲವುಂಟಾಯಿತು. ಅದೇ ವೇಳೆಗೆ ಖಾನಾಪುರದಿಂದ ಅಜ್ಮೇರ್ ದರ್ಗಾಕ್ಕೆ ಯಾತ್ರೆಯೊಂದು ಹೊರಟಿತ್ತು. ಅದನ್ನು ಕರೀಂ ಲಾಲಾ ತೆಲಗಿಯೇ ಆಯೋಜಿಸಿದ್ದಾನೆ ಎಂದು ತಿಳಿಯಿತು. ಉಪಾಯವೊಂದನ್ನು ಮಾಡಿದ ತಿನೈಕರ್ ಆ ಯಾತ್ರೆಗೆ ತಮ್ಮ ವ್ಯಕ್ತಿಗಳನ್ನೂ ಕಳುಹಿಸಿಕೊಟ್ಟರು. ಅವರು ಅಜ್ಮೇರ್ ಯಾತ್ರೆಗೆ ತೆಲಗಿ ಕೂಡ ಬಂದಿದ್ದಾನೆಂಬ ವಿಷಯವನ್ನು ತಿಳಿಸಿದರು. ಜಯಂತ್ ತಿನೈಕರ್ ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿದರು. 2001, ನವೆಂಬರ್ 7ರಂದು ಯಾತ್ರೆಯಲ್ಲಿದ್ದ ತೆಲಗಿಯನ್ನು ಬಂಧಿಸಲಾಯಿತು. ಸತ್ಯ ತೆರೆದುಕೊಳ್ಳುತ್ತಾ ಹೋಯಿತು. ಆತನ ಕಬಂಧ ಬಾಹುಗಳು 13 ರಾಜ್ಯಗಳಿಗೆ ಹರಡಿತ್ತು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳೇ ಅದರಲ್ಲಿ ಭಾಗಿಯಾಗಿದ್ದರು. ಆ ಜಾಲ 172 ಕಚೇರಿಗಳನ್ನು ಹೊಂದಿತ್ತು, 1000 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರು, 18 ನಗರಗಳಲ್ಲಿ 123 ಬ್ಯಾಂಕ್ ಖಾತೆ ಹೊಂದಿದ್ದವು. ಒಂದು ತಿಂಗಳ ವಹಿವಾಟು 172 ಕೋಟಿಯಾಗಿತ್ತು. ಒಟ್ಟು 320 ಶತಕೋಟಿ ಬೊಕ್ಕಸಕ್ಕೆ ನಷ್ಟವಾಗಿತ್ತು. ಅಂದು ಜೀವವನ್ನೇ ಅಪಾಯಕ್ಕೆ ಒಡ್ಡಿ ಇಂತಹ ಹಗರಣವನ್ನು ಬಯಲಿಗೆಳೆದಿದ್ದಕ್ಕಾಗಿ ತಿನೈಕರ್್ಗೆ ಸರ್ಕಾರ ಕೊಟ್ಟ ಬಳುವಳಿ ಏನು ಅಂದುಕೊಂಡಿರಿ?

2 ಸಾವಿರ ಚೆಕ್!

ಅದನ್ನು ಅಷ್ಟೇ ಗೌರವದಿಂದ ವಾಪಸ್ ಕಳುಹಿಸಿದ ತಿನೈಕರ್, ತಾವು ಮಾಡಿದ ಕಾರ್ಯದಲ್ಲೇ ತೃಪ್ತಿಪಟ್ಟುಕೊಂಡು, ಸಮಾಜ-ಸರ್ಕಾರಕ್ಕೆ ಸೇವೆ ಮಾಡಿದ ಧನ್ಯತೆಯಲ್ಲಿ ಇಂದು ಬದುಕು ನಡೆಸುತ್ತಿದ್ದಾರೆ.

ಇವರಿಬ್ಬರನ್ನು ಇಲ್ಲಿ ನೆನಪಿಸಿಕೊಳ್ಳಲು, ಇವರಿಬ್ಬರ ಕಥೆ ಹೇಳಲು ಮುಖ್ಯಕಾರಣ ಇವರಷ್ಟೇ ಗುಂಡಿಗೆ, ಇಚ್ಛಾಶಕ್ತಿ ಹೊಂದಿರುವ, ಒಂದು ಕೈ ಮೇಲು ಎನ್ನಬಹುದಾದ ನಮ್ಮ ಸಂಗಯ್ಯ ರಾಚಯ್ಯ ಹಿರೇಮಠ್!

ಬಹುಶಃ ಎಸ್.ಆರ್. ಹಿರೇಮಠ್ ಎಂದರೇ ಬಹುಬೇಗ ಅರ್ಥವಾಗಬಹುದು. ಇವತ್ತು ಜನಾರ್ದನ ರೆಡ್ಡಿ ಜೈಲು ಸೇರಿದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಿವಾಸಗಳ ಮೇಲೆ ಸಿಬಿಐ ದಾಳಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದರೆ ಅದರ ಬಹುಪಾಲು ಹೆಗ್ಗಳಿಕೆ ಸಲ್ಲಬೇಕಾಗಿರುವುದು ಹಿರೇಮಠ್ ಅವರಿಗೆ. ಒಂದು ಲೋಕಾಯುಕ್ತ ಸಂಸ್ಥೆಗೆ, ಆಳುವ ಸರ್ಕಾರಕ್ಕೆ ಆಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಇಂದು ರೆಡ್ಡಿ ಸಾಮ್ರಾಜ್ಯ ಪತನದ ಹಂತಕ್ಕೆ ಬಂದಿದ್ದರೆ ಅದಕ್ಕೆ ಪ್ರಮುಖ ಕಾರಣವೇ ಹಿರೇಮಠ್. ಮೂರ್ನಾಲ್ಕು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯನ್ನು ಒಮ್ಮೆ ಅವಲೋಕನ ಮಾಡಿ. ಗಣಿ ಲೂಟಿ, ಗಣಿ ಹಗರಣದ ಬಗ್ಗೆ ರಾಜಕೀಯ ಪಕ್ಷಗಳಿಂದ ಆರೋಪ-ಪ್ರತ್ಯಾರೋಪ, ಪತ್ರಿಕೆಗಳಲ್ಲಿ ಸಣ್ಣಪುಟ್ಟ ವರದಿಗಳಷ್ಟೇ ಕಾಣಸಿಗುತ್ತಿದ್ದವು. ಒಂದು ಗಟ್ಟಿ ಧ್ವನಿ ಯಾರಿಂದಲೂ ಕೇಳಿಬರುತ್ತಿರಲಿಲ್ಲ. ಗಣಿ ಧೂಳು ಬಿಜೆಪಿಗಿಂತಲೂ ಮೊದಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ಮೆತ್ತಿಕೊಂಡಿತ್ತು. ಈ ಪಕ್ಷಗಳಿಗೆ ಗಣಿ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇರಲಿಲ್ಲ. ಇತ್ತ ಜನಾರ್ದನ ರೆಡ್ಡಿಯ ಲೂಟಿಯನ್ನು ಖಂಡಿಸಿ ಬರೆಯುವ ಒಬ್ಬನೇ ಒಬ್ಬ ಪತ್ರಕರ್ತನೂ ಇರಲಿಲ್ಲ. ಅದರಲ್ಲೂ ಬಳ್ಳಾರಿ ಮೂಲದ ಟ್ಯಾಬ್ಲಾಯ್ಡ್ ಪತ್ರಕರ್ತನೊಬ್ಬನಂತೂ ಹಾಯ್ ಹಾಯ್ ಎಂದು ರೆಡ್ಡಿಗಳ ಏಜೆಂಟ್ ಆಗಿಬಿಟ್ಟಿದ್ದ. ಇಂತಹ ಪರಿಸ್ಥಿತಿ ರೆಡ್ಡಿಗೆ ಕಾನೂನು ಹೋರಾಟದ ಮೂಲಕ ಪಾಠ ಕಲಿಸಲು ಹೊರಟವರು ಹಿರೇಮಠ್. 2009ರಲ್ಲಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಮೂಲಕ ಸುಪ್ರೀಂ ಕೋರ್ಟ್್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಕಿಐಔ) ಸಲ್ಲಿಸಿದರು. ಅದು 1274 ಪುಟಗಳಷ್ಟು ದಾಖಲೆ, ಪುರಾವೆಗಳನ್ನು ಹೊಂದಿತ್ತು. ಹೀಗೆ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಮುಂದಾದರೂ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳೇ ಮೈನಿಂಗ್ ಮಾಫಿಯಾ ಜತೆ ಕೈಜೋಡಿಸಿದ್ದರಿಂದ ಹಿರೇಮಠರ ಪ್ರಯತ್ನಕ್ಕೆ ಮೊದಮೊದಲಿಗೆ ಯಾವ ಫಲವೂ ದೊರೆಯಲಿಲ್ಲ. ಕೊನೆಗೆ ಕಿಐಔ ಬಗ್ಗೆ ಕ್ರಮಕ್ಕೆ ಮುಂದಾದ ಸುಪ್ರೀಂಕೋರ್ಟ್ ‘ಕೇಂದ್ರ ಉನ್ನತಾಧಿಕಾರ ಸಮಿತಿ’ (ಈಊಈ)ಯನ್ನು ರಚಿಸಿ ವಸ್ತುಸ್ಥಿತಿಯ ಪರಾಮರ್ಶೆ ಹಾಗೂ ಸಾಕ್ಷ್ಯಗಳ ಸಂಗ್ರಹಣೆಗೆ ಆದೇಶ ನೀಡಿತು. ಆದರೇನಂತೆ ಭ್ರಷ್ಟರ ಸಾಲಿಗೆ ಸೇರಿರುವ ಕೆ.ಜಿ. ಬಾಲಕೃಷ್ಣನ್ ಸುಪ್ರೀಂ ಕೋರ್ಟ್್ನ ಮುಖ್ಯನ್ಯಾಯಾಧೀಶರಾಗಿರುವವರೆಗೂ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂದು ಹಿರೇಮಠರಿಗೆ ತಿಳಿಯಿತು. ಬಾಲಕೃಷ್ಣನ್ ನಿವೃತ್ತರಾಗುವವರೆಗೂ ಕಾದು, ಕಪಾಡಿಯಾ ಅವರು ಮುಖ್ಯ ನ್ಯಾಯಮೂರ್ತಿಗಳಾದ ಕೂಡಲೇ ಪ್ರಕರಣವನ್ನು ಸುಪ್ರೀಂ ಕೋರ್ಟ್್ನ ಹಸಿರು ಪೀಠದೆದುರು ತಂದರು. ರೆಡ್ಡಿಗೆ ನೀಡಿರುವ ಮೈನಿಂಗ್ ಪರವಾನಗಿಯನ್ನು ರದ್ದುಮಾಡಬೇಕೆಂದು ಕೋರಿ 499 ಪುಟಗಳ ಕಾರಣಸಹಿತ ಮನವಿಯನ್ನು ಇಟ್ಟರು. ಕರ್ನಾಟಕ-ಆಂಧ್ರ ಗಡಿ ಕುರುಹು ನಾಶ, ಸುಗ್ಗುಲಮ್ಮ ದೇವಾಲಯದ ನಾಶಗಳನ್ನು ಪುರಾವೆ ಸಮೇತ ತೋರಿಸಿದರು. ಕೇಂದ್ರ ಉನ್ನತಾಧಿಕಾರ ಸಮಿತಿ ಕೂಡ ಹಿರೇಮಠರು ಕೊಟ್ಟ ಸಾಕ್ಷ್ಯಗಳಿಗೆ ತಲೆದೂಗಿ ಪರವಾನಗಿ ರದ್ದಿಗೆ ಶಿಫಾರಸು ಮಾಡಿತು. ಜನಾರ್ದನ ರೆಡ್ಡಿಯ ಗ್ರಹಚಾರ ಕೆಡಲು ಆರಂಭವಾಗಿದ್ದೇ ಅಲ್ಲಿಂದ. ಲೈಸನ್ಸ್ ರದ್ದಾಯಿತು, ಸಿಬಿಐ ಬೆನ್ನು ಬಿತ್ತು, ರೆಡ್ಡಿ ಚಂಚಲಗುಡ ಜೈಲು ಸೇರಿದರು.

ಹಾಗಂತ ಹಿರೇಮಠರು ಯಡಿಯೂರಪ್ಪನವರನ್ನೂ ಬಿಡಲಿಲ್ಲ. ಲೋಕಾಯುಕ್ತ ನ್ಯಾಯಾಲಯದ ಎದುರು ದಾಖಲಿಸಲಾಗಿದ್ದ ಎಫ್್ಐಆರ್್ಗಳನ್ನು ರಾಜ್ಯ ಹೈಕೋರ್ಟ್್ನಲ್ಲಿ ಬರ್ಖಾಸ್ತುಗೊಳಿಸುವಲ್ಲಿ ಯಡ್ಡಿ ಯಶಸ್ವಿಯಾದರೂ ಹಿರೇಮಠರು ಆ ವೇಳೆಗಾಗಲೇ ಚುನಾವಣಾ ಆಯೋಗ, ಕೇಂದ್ರ ಉನ್ನತಾಧಿಕಾರ ಸಮಿತಿ ಹಾಗೂ ಸುಪ್ರೀಂ ಕೋರ್ಟ್್ನ ಕದ ತಟ್ಟಿದ್ದರು. ಇವತ್ತು ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಬಿಐ ದಾಳಿಗೆ ಗುರಿಯಾದ ಮೊದಲ ಮುಖ್ಯಮಂತ್ರಿಯೆಂಬ ಅಪಖ್ಯಾತಿಗೆ ಯಡ್ಡಿ ಗುರಿಯಾಗಿದ್ದರೆ, ಅವರು ಮತ್ತೆ ಜೈಲು ಸೇರಿದರೆ ಅದರ ಹಿಂದೆ ಹಿರೇಮಠರ ಶ್ರಮ, ಸತತ ಪ್ರಯತ್ನವಿದೆ. ಇರುವ ಕಾನೂನು, ನ್ಯಾಯ ವ್ಯವಸ್ಥೆಯನ್ನು ಇಟ್ಟುಕೊಂಡು ಬದಲಾವಣೆಯನ್ನು ತರಬಹುದು ಎಂಬುದನ್ನು ಹಿರೇಮಠರು ಸಾಬೀತು ಮಾಡುತ್ತಿದ್ದಾರೆ, ಭ್ರಷ್ಟರ ಮುಖದಲ್ಲಿ ಆತಂಕದ ಗೆರೆಗಳನ್ನು ಮೂಡಿಸುತ್ತಿದ್ದಾರೆ.

ಈ ಹಿರೇಮಠರು ಸಾಮಾನ್ಯ ವ್ಯಕ್ತಿ ಅಂದುಕೊಳ್ಳಬೇಡಿ.

1944ರಲ್ಲಿ ಧಾರವಾಡದ ಬೆಳವಂಕಿಯಲ್ಲಿ ಜನಿಸಿದ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ. ಉನ್ನತ ವ್ಯಾಸಂಗಕ್ಕೆಂದು ಅಮೆರಿಕಕ್ಕೆ ತೆರಳಿ 1969ರಲ್ಲಿ ಎಂಎಸ್ ಪೂರೈಸಿದರು. ಅದು ಸಾಲದೆಂಬಂತೆ ಅಮೆರಿಕದಲ್ಲೇ ಎಂಬಿಎ ಮಾಡಿದರು. ಸುಮಾರು 10 ವರ್ಷಗಳ ಕಾಲ ಅಮೆರಿಕದಲ್ಲಿ ಸೇವೆ ಸಲ್ಲಿಸಿದ ಅವರು, ತಾಯ್ನಾಡಿಗೆ ಮರಳಿ 1984ರಲ್ಲಿ ಧಾರವಾಡದಲ್ಲಿ “ಸಮಾಜ ಪರಿವರ್ತನಾ ಸಮುದಾಯ” ಎಂಬ ಸಂಘಟನೆಯನ್ನು ಆರಂಭಿಸಿದರು. ಆದರ ಮೂಲಕ ಪರಿಸರ, ಪಂಚಾಯತ್ ರಾಜ್ ಸಂಬಂಧಿ ಹೋರಾಟಗಳನ್ನು ನಡೆಸಿದರು. ಅದಕ್ಕೆ ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರವೂ ದೊರೆಯಿತು. ನಂತರ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದರು. ಇವತ್ತು ಮೈನಿಂಗ್ ಮೇಲೆ ನಿಷೇಧ ಹೇರಿದ್ದರೆ, ಅಕ್ರಮ ಗಣಿಗಾರಿಕೆ ನಿಂತಿದ್ದರೆ, ಗಣಿ ದುಡ್ಡು ರಾಜಕಾರಣ ಹಾಗೂ ಸರ್ಕಾರದ ಮೇಲೆ ಸವಾರಿ ಮಾಡುವುದು ನಿಯಂತ್ರಣವಾಗುತ್ತಿದ್ದರೆ, ಚಿತ್ರದುರ್ಗ-ತುಮಕೂರುಗಳೂ ಬಳ್ಳಾರಿಯಂತಾಗುವುದಕ್ಕೆ ಕಡಿವಾಣ ಬಿದ್ದಿದ್ದರೆ ಅದಕ್ಕೆ ಎಸ್.ಆರ್. ಹಿರೇಮಠರು ಕಾರಣ. ಉತ್ತರ ಕರ್ನಾಟಕವನ್ನು ‘ಗಂಡುಮೆಟ್ಟಿದ ನಾಡು’ ಎನ್ನುತ್ತಾರೆ. ಅಂತಹ ನಾಡಿನಲ್ಲಿ ಹುಟ್ಟಿರುವ ಗಂಡುಮಗ ಹಿರೇಮಠ. ಇಂದು ನಮ್ಮ ಮಠಮಾನ್ಯಗಳು, ಸ್ವಾಮೀಜಿಗಳು ಭ್ರಷ್ಟರಾಜಕಾರಣಿಗಳ ಜತೆ ಕೈಜೋಡಿಸಿರುವುದನ್ನು ಕಾಣುತ್ತಿದ್ದೇವೆ. ಶಮಂತಕ ಮಣಿಯನ್ನು ಕದ್ದ ಆರೋಪ ಬಂದಾಗ ಅದನ್ನು ತಂದೊಪ್ಪಿಸುವವರೆಗೂ ರಾಜ್ಯ ಪ್ರವೇಶ ಮಾಡುವುದಿಲ್ಲ ಎಂದು ಶಪಥ ಮಾಡಿದ, ತಂದೊಪ್ಪಿಸಿ ಕಳಂಕ ನಿವಾರಣೆ ಮಾಡಿಕೊಂಡ ಶ್ರೀಕೃಷ್ಣನ ಪದತಲದಲ್ಲಿ ಕುಳಿತು ಭ್ರಷ್ಟಾಚಾರ ಆರೋಪ ಹೊತ್ತ ವ್ಯಕ್ತಿಗೆ ಮತ್ತೆ ಗದ್ದುಗೆ ಕೊಡಬೇಕೆಂದು ಪ್ರತಿಪಾದಿಸುತ್ತಿರುವ, ಭ್ರಷ್ಟರ ವಕಾಲತ್ತು ವಹಿಸುವ, ಸುಪ್ರೀಂ ಕೋರ್ಟ್್ನಿಂದಲೇ ಕಳಂಕಿತಳೆನಿಸಿಕೊಂಡಿರುವ ರಾಡಿಯಾಳಿಂದ 2 ಕೋಟಿ ಪಡೆದುಕೊಂಡ ಸ್ವಾಮಿಗಳು ನಮ್ಮ ನಡುವೆ ಇರುವ ಈ ಸಂದರ್ಭದಲ್ಲಿ ಸಮಾಜಕಾರ್ಯ ಮಾಡಬೇಕಾದ, ಸಮಾಜದ ಸಾಕ್ಷಿಪ್ರಜ್ಞೆಯನ್ನು ಎತ್ತಿಹಿಡಿಯಬೇಕಾದ ಮಠಗಳ ಕೆಲಸವನ್ನು ಹಿರೇಮಠರು ಮಾಡುತ್ತಿದ್ದಾರೆ. ನಮ್ಮ ಸಮಾಜ ನಿಜಕ್ಕೂ ಗುರುವಂದನೆ ಮಾಡಬೇಕಿರುವುದು ಖೈರ್ನಾರ್, ತಿನೈಕರ್ ಹಾಗೂ ಹಿರೇಮಠರಿಗೆ ಹೊರತು ಗಣಿ ಧೂಳು ಅಂಟಿರುವ ರಾಜಕಾರಣಿಗಳ ಕೈಯಿಂದ ಪಾದದ ಧೂಳು ತೊಳೆಸಿಕೊಳ್ಳುವ ಸ್ವಾಮೀಜಿಗಳಿಗಲ್ಲ! ಇಷ್ಟಕ್ಕೂ ಆ ಮಠ, ಈ ಮಠ ಏಕೆ, ಹಿರೇಮಠ ಇರುವಾಗ?

64 Responses to “ಮಠ-ಮಾನ್ಯಗಳ ನಾಡಲ್ಲಿ ಅತಿಮಾನ್ಯ ಈ ಹಿರೇಮಠ!”

 1. ಸದಾಶಿವ ಮಠಪತಿ says:

  ಎಸ್‌. ಆರ್‌. ಹಿರೇಮಠ ಅವರಿಗೆ ನನ್ನ ಅಭೀನಂದನೆಗಳು .
  ಮಾನ್ಯರೇ ತಾವು ಮಾಡುವ ಕೆಲಸವನ್ನು ಹೊಗಳುವಷ್ಟು ದೊಡ್ಡವನಂತು ನಾನಲ್ಲ. ಆದರೆ ತಾವು ಮಾಡುವ ಕೆಲಸ ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ. ಅವರಲ್ಲಿ ಉತ್ಸಾಹ ತುಂಬಿ ತಮ್ಮಂತೆ ಹೋರಾಡುವ ಕೆಚ್ಚು ತುಂಬುತ್ತಿದೆ.
  ನಮ್ಮ ಸಮಾಜದಲ್ಲಿ ಗೋಮುಖವ್ಯಾಘ್ರಗಳು ಬಹಳಷ್ಟು ಜನ ಇದ್ದಾರೆ. ಅಂತವರನ್ನು ಮಟ್ಟಿ ಹಾಕಲು ಖೈರ್ನಾರ್‌, ತಿನೈಕರ್‌ ಹಾಗೂ ಹಿರೇಮಠ ರವರಂತಹ ಜನರು ಇನ್ನೂ ಹೆಚ್ಚು ಹೆಚ್ಚು ಮುಂದೆ ಬರಬೇಕಿದೆ.

 2. Prashant M B says:

  Ellakkinta Dodda Matha “HIREMATHA”. We all should stand by him and support his cause, so that he should feel more strong to fight against corruption.

 3. Sumanth says:

  Good article. In the wake of murder of honest officers like Mahantesh, we need news like these to boost up morale of commoners.

 4. N.MGURURAJ says:

  Our hopes live only because of such great people. What a revelation indeed! What a contribution to the well being of society. We have vicious persons like Sharad Pawar all around us and it is only these people who bring the balance. Otherwise, these dirty politicians would have sold our country to Dawood Ibrahim. What a contrast in our society! In-spite of their misdeeds it is a pity that the masses bring them back with thumping majority. This is the irony.

 5. Vijay says:

  ಒಬ್ಬ ಸಮಾಜ ದ್ರೋಹಿನ , ಸಮಜದ್ರೋಹಿ ಅಂತ prove ಮಾಡೋಕೆ ಹಿರೇಮಠ ರಂಥವರಿಗೆ ಇಷ್ಟು challenging ಆಗಿರುವಾಗ , ಜನಸಾಮಾನ್ಯರಾದ ಮತ್ತು ರಾಜಕೀಯದ ಒಳ ಹೊರಗೂ ಗೊತ್ತಿಲ್ಲದ್ದ ನಮ್ಮಂಥವರಿಂದ ಇದೆಲ್ಲ ಸಾದ್ಯಾನ ಗುರು.. ?

 6. Vijay says:

  Dear Pratap,

  Sorry to say
  Appreciate you for praising Hiremath, but dont comment on Shri Shri Pejawar Swamji, such comments not suits to your articales.

 7. Maheshkumar says:

  We all Karnataka people need support him for doing good job,

 8. Roopesh says:

  awesome info… really inspiring to here the works done by ppl like Hirematt. thank you we salute you sir.

 9. sri harsha says:

  this was posted in my frd facebook wall
  ಬ್ರಾಹ್ಮಣ ಮಿತ್ರರೇ,
  ಮನುಷ್ಯ ಸಂಘಜೀವಿ.. ಬೇರೆ ಸಮಾಜದ ಸಹಕಾರ ಇಲ್ಲದೆ ನಾವು ನಮ್ಮ ಮನೆಯ ಹೊಸಿಲಿನ ಹೊರಗೆ ಉಸಿರಾಡುವುದಕ್ಕೂ ಸಾಧ್ಯವಿಲ್ಲ. ನಮ್ಮ ಜನಿವಾರ, ನಮ್ಮ ಸಂಧ್ಯಾವಂದನೆ, ನಮ್ಮ ಅನುಷ್ಥಾನ, ಇದೆಲ್ಲ ನಮ್ಮ ನಮ್ಮ ಖಾಸಗಿ ವಿಷಯ. ಮನೆಯ ಹೊರಗೆ ನಾವು ಕೇವಲ ಒಬ್ಬ ಮನುಷ್ಯರಷ್ಟೇ!!! ಇಷ್ಟಕ್ಕೂ ನಾವ್ಯಾರು ಕರ್ಮಠ ಬ್ರಾಹ್ಮಣರಾಗಿ ಉಳಿದಿದ್ದೇವೆ?? ಪೇಜಾವರ ಮಥಾಧೀಷರನ್ನು ಎಂದೆಂದು ಬ್ರಾಹ್ಮಣ ಸಮುದಾಯದ ಮುಖವಾಣಿಯಂತೆ ಪರಿಗಣಿಸಬೇಡಿ. ದಯವಿಟ್ಟು ಅವರ ಸೋಗಲಾಡಿತನವನ್ನು ಅರ್ಥಮಾಡಿಕೊಳ್ಳಿ. ಗುರುಗಳ ಸ್ಥಾನದಲ್ಲಿದ್ದವರು ಜಾತಿಯನ್ನು ಮೀರಬೇಕು, ಅದಿಲ್ಲದಿದ್ದರೆ ಅವರಿಗೂ ನಮಗೂ ಏನು ವ್ಯತ್ಯಾಸ?
  ಈ ಒಂದು ಘಟನೆ ದಯವಿಟ್ಟು ಓದಿ.

  ಬಹುಶ ಪೇಜಾವರ ಶ್ರಿಗಳಷ್ಟು ದ್ವಿಮುಖ ವ್ಯಕ್ತಿತ್ವದ ಗುರುಗಳನ್ನು ನಮ್ಮ ಸಮಾಜ ನೋಡಿರಲಿಕ್ಕಿಲ್ಲ.
  ೨೦೧೦ರಲ್ಲಿ ಸ್ವಾಮಿಜಿಗಳ ಚಾತುರ್ಮಾಸ್ಯ ಮೈಸೂರಿನಲ್ಲಿ ನಡೆಯುತ್ತಿತ್ತು. ಪ್ರತಿದಿನ ಪಂಡಿತರಿಂದ ಪ್ರವಚನ. ಅದಾದ ಮೇಲೆ ಗುರುಗಳಿಂದ ಭಾಗವತ ಪ್ರವಚನ ಇತ್ತು. ನಾನು ಪ್ರತಿದಿನ ಅಲ್ಲಿಗೆ ಹೋಗುತ್ತಿದ್ದೆ. ಒಂದು ಸಂಜೆ ಧಾರವಾಡದ ವಿಧ್ವಾಮ್ಸರೊಬ್ಬರು ಹರಿಸರ್ವೊತ್ತಮರ್ತ್ವವನ್ನು ಹೇಳುವ ಭರದಲ್ಲಿ ಪರಮೆಶ್ವರನಾದ ಶಿವನನ್ನು ಕಾಮುಕ, ಹೆಣ್ಣುಬಾಕ, ಮೋಹಿನಿಯನ್ನು ಕಂಡು ಜೊಲ್ಲು ಸುರಿಸುತ್ತಾ ಓದಿ ಬಂದ ಪೋಲಿ, ವಿಷ ಕುಡಿದು ಸಾಯುವ ಹಂತಕ್ಕೆ ಬಂದಾಗ ಹರಿ ಬಂದು ಅವನ ಕೊರಳನ್ನು ಒತ್ತಿ ವಿಷವನ್ನು ತಡೆದ, ಹೀಗೆಲ್ಲ ವರ್ಣಿಸುತ್ತಿದ್ದರು. ಮಾನ್ಯ ಶ್ರೀಗಳು ಕೇಳಿ ನಗುತ್ತೀದ್ದರು. ಅದಾದ ಮೇಲೆ ಅವರು ತಮ್ಮ ಪ್ರವಚನದಲ್ಲಿ , ಹಿಂದೆ ವಿದ್ವಾಂಸರು ಹೇಳಿರುವುದರಲ್ಲಿ ಏನು ಉತ್ಪ್ರೇಕ್ಷೆ ಇಲ್ಲ.. ಭಾಗವತದಲ್ಲಿ ಈ ಘಟನೆ ಬಂದಿದೆ ಎಂದು ಸಮರ್ಥಿಸಿಕೊಂಡರು.
  ತಾವು ಆರಾಧಿಸುವ ಹರಿಯನ್ನು ಬಿಟ್ಟು ಬೇರೆಲ್ಲಾ ದೇವರುಗಳನ್ನು ಇಷ್ಟು ಹಿನಾಯವಾಗಿ ಕಾಣುವ, ಬೇರೆ ಮಠದ “ಬ್ರಾಹ್ಮಣರನ್ನು” ನೀಚರೆಮ್ದು ಗುರುತಿಸುವ ಇಂಥ ಸ್ವಾಮೀಜಿ ಕೇವಲ ಪ್ರಚಾರಕ್ಕಾಗಿ ಹರಿಜನ ಕೇರಿಯಲ್ಲಿ ಓಡಾಡುವುದು, ಪಾದಪುಜೆ ಮಾಡಿಸಿಕೊಳ್ಳುವುದು, ಇದೆಲ್ಲಾ ನಾಟಕ ಯಾಕೆ?? ಇವರ ಪ್ರಕಾರ ಬ್ರಾಹ್ಮನರೆಮ್ದರೆ ಕೇವಲ ಮಾಧ್ವರು!!!, ಬೇರೆ ಬ್ರಾಹ್ಮಣರನ್ನೇ ಒಪ್ಪದ ಇವರು ಸಮಾನತೆಯ ಬಗ್ಗೆ ಮಾತನಾಡುತ್ತಾರೆ.. ಅವರ ವಯಸ್ಸಿಗೆ ಮರ್ಯಾದೆ ಬೇಡವೇ? ಅವರ ತಪಸ್ಸು ಎಲ್ಲಿ ಹೋಯಿತು???

 10. sachin hallikeri says:

  Hats off and respectfull salute to Sri khairnar , sri Thinekar, Sri Hiremat. Thank you Prathap for writing a very good article on people who really served our country and humanity. Thanks alot everyone must read this truth and must support these great
  personalities.

 11. Anvesha Amaravati says:

  Hiremath sir is the role model for todays younger generations. Hats off to you sir

 12. Mahesh Patil says:

  Pratap bhai..,
  Great article..!!
  Now onwards i’m ur fan sir ( ಎಸ್.ಆರ್. ಹಿರೇಮಠ್ ).
  And one more thing pratapji.., I’m excepting you to write one article on Benefits and drawbacks of RTE act..!! I hope you consider my request.. 🙂

 13. sandesh jain says:

  These informations are very touching and i can say this may not show any impacts on a short term , but I strongly believe your works are showing a path and creating awareness among the youngsters of this country. Please give us such informations in coming days too.

  thanks alot

 14. lewis says:

  ಈ ಭ್ರಷ್ಟ ಸರಕಾರದ ಅವದಿಯಲ್ಲಿ ಹಿರೇಮಠರನ್ನು ಅವರ ಪ್ರಾಮಾಣಿಕತೆಯೇ ಕಾಯಬೇಕು…ಲಕ್ಷಾ೦ತರ ಜನರ ಆಶೀರ್ವಾದ ಮತ್ತು ಪ್ರಾರ್ಥನೆ ಅವರನ್ನು ಕಾಪಾಡಲಿ……ಕರ್ನಾಟಕದಲ್ಲಿ ಲೋಕಾಯುಕ್ತರ ಅನುಪ ಸ್ಥಿತಿಯಲ್ಲಿ ಹ೦ಗಾಮಿ ಲೋಕಾಯುಕ್ತರ೦ತೆ ಕಾರ್ಯ ನಿರ್ವಹಿಸುತ್ತಿರುವ ಹೋ೦ ಮಿನಿಸ್ಟರ್ ಅಶೋಕ್ ಎಲ್ಲಾ ಕೇಸ್ ಗಳಿಗೆ ಬಿ-ರಿಪೋರ್ಟ್ ಹಾಕಿಸಿ ಎಲ್ಲಾ ರಾಜಕೀಯ ಪಕ್ಷಗಳ ದುರೀಣರನ್ನು ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ…..ಈ ಬಗ್ಗೆ ನಿಮ್ಮ ಮತ್ತು ಮೀಡಿಯಾ ಗಮನವನ್ನು ಸೆಳೆಯಲು ಈ ಪತ್ರ…

 15. vijay kulkarni says:

  Dear Patap Simha,

  I am with you and we have to solute Khairnar, Tinaikar and Hiremath Ajja, Please take this cause to be a national level cause and the society to realize to protect these invaluable diamonds of India and get them the gratification for their worthy efforts.

  At the same time i would like to propose that such people should represent the us in rajya sabha and can justify much more than Sachin Tendulkar or Rekha(Media coverage of Rekha-Jaya rivalry, such a waste of print and elctricity space).

  Thank you.

 16. Prasad says:

  Sir , I am ur huge fan sir, I read all our articles which r published in ur news paper. This article is also 1 of them. But the sad thing is the fighters who fight for the truth or who fight against the corruption has got life threats.

 17. Vinay Kumar says:

  Hi Pratap,

  Firstly, I need to say this is one of the good articles. Honestly, I didn’t knew about Khyrnaar, Thinykar and Hiremath, the three great persons. Thanks to you for such a good article. Really impressive…

  Vinay

 18. Marutheesh S says:

  Brashta Raaja kaaranigala chali bidisuttiruva Hiremata re, Nimage namma manadaalada abhinandane..

 19. joshi says:

  pratap,
  I am very good fan of your style of writing
  I like the way you try letting people know of whats happening around

  but i do not know why you are so attacky about Pejavar shri

  and your writings always pointing towards brahmins

  Regards
  Joshi

 20. Baswaraj BN Bidar. says:

  Sir ur columns are really educative and inspirable…we pray to proceed ur great work of inspiring the youth by BETTALE PRAPANCHA….Thank you sir.

 21. Pradeep.R says:

  Good….informative article….

  thnx…

  –PdP–

 22. vithoba m choudki says:

  excellent and factual….

 23. ravi.. says:

  Ur rit…!!!

 24. Santhosh Gowda says:

  good message for young people pratapji.

 25. Yuvaraj says:

  Worth reading the article…they are real heroes. Good on him.

 26. nithin vp says:

  INDIA need some more people’s to clean corruption…… sir your writting is fantastic…..

 27. Mohan Kumar DN says:

  He has done very good job..Hats off Hiremat Sir.

 28. Useful information good article.


  Manjunatha N
  Bangalore

 29. Kiran says:

  HI SIR,
  What you written above of Herematt has right, but why only targeting Yadi, why not Kumarswamy & team and Congre & team. The congres man are rulling state from long years. Please reply

 30. prashanth says:

  Speechless!!!

 31. rAju says:

  ನಿಜಕ್ಕೂ ಒಳ್ಳೇಯ ಲೇಖನ

 32. malli says:

  still we are having hope only due to this type of roll models are with us thanks for nice information

 33. Arjun says:

  Wonderful article..

 34. krishna says:

  tumbha thanks,halavaru vishayagalannu tilisiddiri

 35. Rakesh Kumar says:

  i dont know how to support Hiremath???

 36. lohit kumbar says:

  aa matha ,ee matha yaake hiremath ok….

  super article…

 37. gururaj kodkani says:

  ಕೊನೆಯ ಸಾಲುಗಳು ಅದ್ಭುತ ಪ್ರತಾಪ್.ನಿಜಕ್ಕೂ ಸ್ವಾಮಿಜಿಯೊಬ್ಬರು ಸಹಭೋಜನದ ಬಗ್ಗೆ,ಅ೦ತರ್ಜಾತಿಯ ವಿವಾಹದ ಬಗ್ಗೆ ತಪ್ಪಾಗಿ ಮಾತನಾಡಿದ್ದನ್ನೂ ಕೂಡ ಕೆಲವರು ಸಮರ್ಥಿಸುತ್ತಿದ್ದಾರೆ.ಸಮಾಜದಲ್ಲಿ,ಜನ ಮಾನಸದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಸ್ವಾಮಿಗಳೊಬ್ಬರು ಈ ರೀತಿ ಮಾತನಾಡುವುದರಿ೦ದ ಸಮಾಜದಲ್ಲಿನ ಜಾತಿ ಸಮಸ್ಯೆಗೆ ಇನ್ನಷ್ಟು ತುಪ್ಪ ಸುರಿದ೦ತಾಗುವುದಿಲ್ಲವೇ..? ಎ೦ಬುದನ್ನು ನಾವು ಮರೆಯಬಾರದು.ಹೆ೦ಡತಿಯನ್ನು ಬಡಿದು ಅದನ್ನು ಸಮರ್ಥಿಸಿಕೊಳ್ಳುವ ನಾಯಕ ನಟನಿಗೂ,ಈ ಸ್ವಾಮಿಗಳಿಗೂ ಎಷ್ಟು ಮಹಾ ವ್ಯತ್ಯಾಸ .ಅದ್ಭುತ ಲೇಖನ

 38. padmanabha says:

  YOU SAID IT

 39. Anil says:

  NICE ARTICLE……

  PRATHAP JI

 40. Mallanagouda says:

  I like your articles very much.. Your article on “Paa” was ultimately superb.. Thumba Dhanyvadagalu..

 41. SUREKHA 'N' SOUMYA says:

  Wah! superb!! Hat’s offf to THE MAN!

 42. Hai, sir im rajesh nayak g r from gundlupet, nim article tumba chennagiruthe, but ethechege simha yako sariyagi garjisuthilla, vijaya karnataka dalli idda simhagu egiruva simhagu tumbane vyathyasavidhe simha modhalina tharane garjisidhare vodugarigu kushiyaguthade

 43. neelakantha says:

  It is a good artical focusing on our corrupt politicians and good works against corruption by Khairnar,TInaikar,and our pride B.S.Hiremath.

 44. coorg says:

  Hats of to Heeremat. I have read about you and your effort to stop corruption.

 45. siddesh says:

  Really right sir,
  (Swamijis need to understand this open truth

 46. premakumara says:

  sir its ok i working in hiriyur, chitradurga distict 2007to 2008 its peek time of maining who is the cm of this time

 47. SANDEEP says:

  So good article sir,many people dont know about these persons.but ur doing wonderful job by writing abt these good persons and their contrribution to the nation.every polition should read this article.

 48. girish says:

  Alla pratap sir, en idu en nadita idae illi . BSY cm agiddaga mining stop agiddu stop madiddu avarae. now avrannae jail gae agta iderae. HDK and dharam and SM krishna kaaladalli agidda mining gae ” tadae ” , first evara investigation madodu bittu , BSY investigation madta iderae obba CM na ilsokae madida tantra.
  Idakkae hiremath avru ondu banaa aste.
  Today news en andrae BSY maelae bhadra meldandae “RE-Investigation “. idu comedy ansta ilva sir nimgae. ‘sanmanya pramanika’ hegde avru mining report submit madokae 1 hour modalu , namma the great advaniji BSY resignation kodu andru. BSY against enta kuntantra nadididae nodi, advani hagae gotaytu report submit madoku munche BSY involve anta .
  hiremath olle kelsa madirbaudu rajyada sampattu ulsidrae but shikshe yallargu agli annodu nanna opinion . BSY obbaranne tappitasta anta bibisodu baeda pls.

  BUt finally hiremath avru mining nalli yalla CM galigu shikshae adre ok .Hiremath is hero .otherwise e mata duplicate mata.

 49. ಶರತ್ says:

  ಪ್ರತಾಪ ಸಿಂಹರೆ, ಬಹಳಷ್ಟು ದಿನಗಳಿಂದ ನಿಮ್ಮ ಲೇಖನಗಳನ್ನೂ ನಾನು ಓದುತ್ತಾಬಂದಿದ್ದೇನೆ. ನೀವು ಪ್ರತಿಪಾದಿಸುವ ರಾಷ್ಟ್ರೀಯತೆ, ಹಿಂದುತ್ವ ಸಿದ್ದಾಂತವನ್ನೂ ನಾನು ಒಪ್ಪುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಲಿಂಗಾಯತ ವಿರೋಧಿಯಾಗಿ ಮಾರ್ಪಡುತ್ತಿದ್ದಿರೆಂದು ನಮಗೆ ಅನ್ನಿಸುತ್ತಿದೆ. ನಿಮ್ಮ “ಲಿಂಗಾಯತ ವಿರೋಧಿ ಧೋರಣೆ”ಗೆ ಧಿಕ್ಕಾರ.

 50. vijayanarayan says:

  hats off hiremath and to you too……..
  keep the guts up dear pratap.