Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಹಿಂದುಗಳೇ ಹೇಡಿಗಳಾಗಿರುವಾಗ ಅನ್ಯರನ್ನು ದೂರಿ ಫಲವೇನು?

ಹಿಂದುಗಳೇ ಹೇಡಿಗಳಾಗಿರುವಾಗ ಅನ್ಯರನ್ನು ದೂರಿ ಫಲವೇನು?

ಅದನ್ನು Brain Drain ಅಥವಾ ಪ್ರತಿಭಾ ಪಲಾಯನ ಎಂದು ಕರೆದಿದ್ದೂ ಇದೆ, ಅದರ ವಿರುದ್ಧ ದೊಡ್ಡ ಗುಲ್ಲೆಬ್ಬಿಸಿದ್ದೂ ಇದೆ, ಅದೇ ಈ ದೇಶದ ಹಿಂದುಳಿಯುವಿಕೆಗೆ ಕಾರಣವೆಂದು ಗೂಬೆ ಕೂರಿಸಿದ್ದೂ ಇದೆ. ಆದರೇನಂತೆ 1970, 80, 90ರ ದಶಕದಲ್ಲಿ ಭವ್ಯ ಭವಿಷ್ಯದ ಕನಸು ಕಟ್ಟಿಕೊಂಡು, ಹೊಸ ಉದ್ಯೋಗಾವಕಾಶಗಳನ್ನು ಅರಸಿಕೊಂಡು, ತಮ್ಮ ಪ್ರತಿಭೆಗೆ ಭಾರತದಲ್ಲಿ ಸೂಕ್ತ ವೇದಿಕೆ, ಅವಕಾಶದ ಕೊರತೆಯಿದೆಯೆಂದುಕೊಂಡು, ಮೀಸಲಾತಿ ನೀತಿಯ ಉರುಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ನಮ್ಮ ಎಂಜಿನಿಯರ್್ಗಳು, ಡಾಕ್ಟರ್್ಗಳು, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಹೊತ್ತವರು ವಿದೇಶಗಳಿಗೆ ಸಾಗಿದರು. ಅಲ್ಲಿ ಯಶಸ್ಸನ್ನೂ ಕಂಡರು, ಅಲ್ಲಿಯೇ ತಳವೂರುವ ಯೋಚನೆಯನ್ನೂ ಮಾಡಿದರು.

ಆದರೂ…

ಏನನ್ನೋ ಕಳೆದುಕೊಂಡ, ಯಾವುದರಿಂದಲೋ ದೂರವಾದ ಖಾಲಿ ಖಾಲಿ ಭಾವ, ಅನಾಥಪ್ರಜ್ಞೆ ಆ ಭಾರತೀಯರನ್ನು ಕಾಡಿದ್ದಿದೆ. ಆಗ ಕೇಳಿಬಂದಿದ್ದೇ ಈ ಮಾತು-You can take the Indian out of India but you can’t take India out of the Indian! ಅಲ್ಲಿನ ನಾಗರೀಕತ್ವ ಪಡೆದು, ಅಲ್ಲಿಯೇ ಶಾಶ್ವತವಾಗಿ ತಳವೂರಿದವರೂ ಇಂದಿಗೂ ಪ್ರತಿವರ್ಷ ರಜೆ ಬಂತೆಂದರೆ ಸಂಸಾರ ಸಮೇತ ಭಾರತಕ್ಕೆ ಬಂದು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈ ಭಾರತ ಎಂಬುದೇ ಒಂದು Binding force. ಪ್ರಸ್ತುತ ಅಂತರಿಕ್ಷದಲ್ಲಿರುವ ಸುನೀತಾ ವಿಲಿಯಮ್ಸ್ ಮೊನ್ನೆ ಆಗಸ್ಟ್ 15ರಂದು ಆಗಸದಿಂದಲೇ ನಮಗೆಲ್ಲ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. ಬಾಹ್ಯಾಕಾಶ ನೌಕೆಯೊಳಗೇ ತ್ರಿವರ್ಣ ಧ್ವಜವನ್ನು ಏರಿಸಿ, ‘ನಿಮಗೆಲ್ಲ ತಿಳಿದಿರುವಂತೆ ನಾನು ಅರೆ ಭಾರತೀಯಳು, ನನ್ನ ತಂದೆ ಗುಜರಾತಿ. ಹಾಗಾಗಿ ಭಾರತದ ಸಂಸ್ಕೃತಿ, ಸಂಸ್ಕಾರಗಳು ನನಗೆ ಪರಿಚಿತ. ನಾನೂ ಭಾರತದ ಒಂದು ಭಾಗವೆನ್ನಲು ಹೆಮ್ಮೆಯೆನಿಸುತ್ತಿದೆ’ ಎಂದರು!

ಆದರೆ…

ಆಕೆ ತಾನು ಯಾವ ದೇಶದ ಭಾಗವೆನ್ನಲು ಹೆಮ್ಮೆಯಾಗುತ್ತಿದೆ ಎಂದರೋ ಆ ಭಾರತ ‘ಭಾರತ’ವಾಗಿ ಉಳಿದುಕೊಂಡೀತೆ?! ಇನ್ನು ಕೆಲವೇ ದಶಕಗಳಲ್ಲಿ ಮತ್ತೆ ಭಾಗ ಭಾಗವಾಗಿ ಹೋಗದೇ ಉಳಿದೀತೆ? ಇಷ್ಟಕ್ಕೂ ಭಾರತದಲ್ಲಿ ಇಂದು ಯಾವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ? ಈ ದೇಶ ಯಾವ ಧರ್ಮಾಂಧರ ಕೂಪಕ್ಕೆ ಬೀಳುತ್ತಿದೆ? ಮುಂದೊಂದು ದಿನ Indianness, Indian ethos ಕಥೆ ಬಿಡಿ, ‘ಒಬ್ಬ ಭಾರತೀಯನನ್ನು ಭಾರತದಿಂದ ಬೇರ್ಪಡಿಸಬಹುದು, ಆದರೆ ಭಾರತವನ್ನು ಭಾರತೀಯನಿಂದ ಬೇರ್ಪಡಿಸಲು ಸಾಧ್ಯವಿಲ್ಲ’ ಎಂಬ ಮಾತನ್ನೂ ಬಿಡಿ, ಹಿಂದೂ ರಾಷ್ಟ್ರದ ಕನಸನ್ನಂತೂ ಬಿಟ್ಟೇ ಬಿಡಿ, ಈ ದೇಶ ಕನಿಷ್ಠ ಭಾರತವಾಗಿ ಉಳಿದುಕೊಳ್ಳುವುದೇ? ಇಂದು ಭಾರತದ ಅಸ್ತಿತ್ವಕ್ಕೇ ಅಪಾಯ ಎದುರಾಗುತ್ತಿಲ್ಲವೆ? ಯಾರಿಂದ ಆ ಗಂಡಾಂತರ ಸೃಷ್ಟಿಯಾಗುತ್ತಿದೆ? ಇಲ್ಲಿ ಯಾರನ್ನು ದೂರಬೇಕು?

ನಿಮಗೆ ಮೀರ್ ಜಾಫರ್, ಮೀರ್ ಸಾದಿಕ್ ಖಂಡಿತ ಗೊತ್ತಿರುತ್ತಾರೆ, ಅಲ್ವಾ? ಮೀರ್ ಸಾದಿಕ್, ಟಿಪ್ಪು ಸುಲ್ತಾನನ ಸಂಪುಟದಲ್ಲಿ ಮಂತ್ರಿಯಾಗಿದ್ದ. ಬ್ರಿಟಿಷರ ಜತೆ ಗೌಪ್ಯವಾಗಿ ಕೈಜೋಡಿಸಿದ ಇವನು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ವೇಳೆ ಸುಂಕ ಸಂಗ್ರಹಿಸುವ ನೆಪದಲ್ಲಿ ಟಿಪ್ಪು ಸೇನೆಯನ್ನು ರಣರಂಗದಿಂದ ಹಿಂದಕ್ಕೆ ಕರೆಯಿಸಿದ. ಆ ಮೂಲಕ ಬ್ರಿಟಿಷ್ ಸೇನೆ ಟಿಪ್ಪುವಿನ ಸಾಮ್ರಾಜ್ಯದೊಳಕ್ಕೆ ಲಗ್ಗೆ ಹಾಕಲು, ಟಿಪ್ಪು ಸೋಲಲು, ಮೈಸೂರು ಸಾಮ್ರಾಜ್ಯ ಬ್ರಿಟಿಷರ ವಶವಾಗಲು ಕಾರಣನಾದ. ಇವನೊಬ್ಬ Betrayer. ಇನ್ನು ಪ್ಲಾಸಿ ಕದನದ ವೇಳೆ ಸಿರಾಜುದ್ದೀನ್ ದೌಲ್್ಗೆ ದ್ರೋಹ ಮಾಡಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಅಡಿಗಲ್ಲು ಇಡಲು ಕಾರಣನಾದ ಮೀರ್ ಜಾಫರ್ ಒಬ್ಬ Traitor. ಅಂದು ಅಂಗ್ಲರ ಆಮಿಷಕ್ಕೊಳಗಾಗಿ ಮುಸಲ್ಮಾನರು ಮುಸಲ್ಮಾನ ದೊರೆಗಳಿಗೇ ಮೋಸವೆಸಗಿದ ಕಾರಣ ಮುಸ್ಲಿಂ ಚಕ್ರಾಧಿಪತ್ಯ ಪತನವಾಗಿ ಬ್ರಿಟಿಷರು ಚುಕ್ಕಾಣಿ ಹಿಡಿದರು. ಆದರೆ ಇಂದು ನಮ್ಮ ನಡುವೆಯೇ ಇರುವ ಅಂತಹ Betrayer, Traitorಗಳಾರು? ವೋಟಿನ ಆಸೆಗಾಗಿ ಭಾರತ ಮತ್ತೆ ವಿಘಟನೆಯಾಗುವಂಥ ಅಪಾಯಕ್ಕೆ ತಳ್ಳುತ್ತಿರುವವರಾರು? ಅಸ್ಸಾಂ ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಬದ್ರುದ್ದೀನ್ ಅಜ್ಮಲ್, ಸಂಸತ್ತಿನಲ್ಲಿ ದೇಶದ್ರೋಹಿ ಭಾಷಣ ಮಾಡಿದ ಅಸಾದುದ್ದೀನ್್ರಂಥ ವಿಚ್ಛಿದ್ರಕಾರಕ, ವಿಘಟನಾತ್ಮಕ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿರುವ, ಬೆಳೆಸುತ್ತಿರುವ, ಅವರ ಜತೆ ಕೈಜೋಡಿಸುತ್ತಿರುವ ಮೋಸಗಾರರು, ದ್ರೋಹಿಗಳು ಯಾರು ಗೊತ್ತಾ?

ಆಗಸ್ಟ್ 21, ಆಝಾದ್ ಮೈದಾನ, ಮುಂಬೈ

ಆಗಸ್ಟ್ 11ರಂದು ಅಝಾದ್ ಮೈದಾನದಲ್ಲಿ ಮುಸಲ್ಮಾನರು ನಡೆಸಿದ ಗಲಭೆಯನ್ನು ಪ್ರತಿಭಟಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS)ಮುಖ್ಯಸ್ಥ ರಾಜ್ ಠಾಕ್ರೆ ಅದೇ ಸ್ಥಳದಲ್ಲಿ 21ರಂದು ರ್ಯಾಲಿ ನಡೆಸಿದರು. ಜನ ಸಮ್ಮೋಹನಕ್ಕೊಳಗಾಗುವಂಥ ಭಾಷಣ ಮಾಡಿದ ಅವರು, ಪೊಲೀಸರು ಹಾಗೂ ಮಾಧ್ಯಮದವರ ಮೇಲೆ ಗಲಭೆಕೋರರು ನಡೆಸಿದ ದೌರ್ಜನ್ಯವನ್ನು ಟೀಕಿಸಿದರು. ಅದರಲ್ಲೂ ಗಾಯಗೊಂಡಿರುವ 58 ಪೊಲೀಸರ, ಹಲ್ಲೆಗೊಳಗಾಗಿರುವ ಮೂವರು ಮಹಿಳಾ ಕಾನ್ಸ್್ಟೇಬಲ್್ಗಳ ಪರ ಧ್ವನಿಯೆತ್ತಿದರು, ಗಲಭೆಕೋರರಿಗೆ ಎಚ್ಚರಿಕೆ ನೀಡಿದರು. ಇದನ್ನೆಲ್ಲ ಆಲಿಸುತ್ತಿದ್ದ ಕಾನ್ಸ್್ಟೇಬಲ್ ಪ್ರಮೋದ್ ತಾವ್ಡೆ, 20 ನಿಮಿಷಗಳ ಭಾಷಣ ಮುಗಿಯುತ್ತಿದ್ದಂತೆಯೇ ವೇದಿಕೆಯೇರಿ ರಾಜ್ ಠಾಕ್ರೆಗೆ ಹಳದಿ ಗುಲಾಬಿ ಹೂ ನೀಡಿ ಅಭಿನಂದಿಸಿದರು. ಇಡೀ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ ಠಾಕ್ರೆಗೆ ವೃತ್ತಿ ನಿಯಮ ಉಲ್ಲಂಘಿಸಿ ಸೆಲ್ಯೂಟ್ ಮಾಡಿ ಕೆಳಗಿಳಿದರು.

ಏಕೆ ಗೊತ್ತಾ?

ಆಗಸ್ಟ್ 11ರಂದು ಗಲಭೆ ನಡೆದಾಗಲೂ ಪ್ರಮೋದ್ ತಾವ್ಡೆ ಆಝಾದ್ ಮೈದಾನದ ಬಳಿ ಭದ್ರತಾ ಜವಾಬ್ದಾರಿಯಲ್ಲಿದ್ದರು. ಗಲಭೆಕೋರರ ಆಕ್ರಮಣದ ಹೊರತಾಗಿಯೂ ಜೀವದ ಹಂಗುತೊರೆದು ಕರ್ತವ್ಯ ಪಾಲಿಸಿದರು. ಅಷ್ಟೇ ಅಲ್ಲ, ಇಬ್ಬರು ದೇಶದ್ರೋಹಿಗಳನ್ನು ಹಿಡಿದು ತಂದರು. ಅದನ್ನು ಮುಂಬೈ ಪೊಲೀಸ್ ಕಮೀಷನರ್ ಅರೂಪ್ ಪಟ್ನಾಯಕ್ ಮುಂದೆ ಹೇಳಿದಾಗ ಅವರೇನೆಂದರು ಗೊತ್ತೆ? ಸುಭಾಶ್ಚಂದ್ರ ಬೋಸ್್ರಂಥ ಕನ್ನಡಕ ಹಾಕಿದ್ದ ತಾವ್ಡೆಯನ್ನು ‘ನೇತಾಜಿ ಸುಭಾಶ್ಚಂದ್ರ ಬೋಸ್್ನಂತೆ ಕಾಣುತ್ತೀಯಾ ಅಂತ ಬಹಳ ಶಾಣ್ಯಾನಂತೆ ವರ್ತಿಸಬೇಡ’ ಎಂದು ಗೇಲಿ ಮಾಡಿದರು! ಅಷ್ಟು ಮಾತ್ರವಲ್ಲ, ಗಲಭೆಕೋರರನ್ನು ಹಿಡಿದ ಡಿಸಿಪಿಯೊಬ್ಬರನ್ನು ಸಾರ್ವಜನಿಕವಾಗಿ ‘ಬ್ಯಾಸ್ಟರ್ಡ್್’ ಎಂದು ಹೀನಾತಿಹೀನ ಶಬ್ದದಲ್ಲಿ ನಿಂದಿಸಿದ್ದಲ್ಲದೆ ಬಂಧಿತರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ ಈ ಮಹಾನುಭಾವ ಪಟ್ನಾಯಕ್. ಇದಕ್ಕಿಂತ ಆಘಾತಕಾರಿ ಮಾತುಂಟೆ? ಅಮರ್ ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದ, ದ್ವಂಸ ಮಾಡಿದ ಗಲಭೆಕೋರರಲ್ಲಿ ಇಬ್ಬರು ದೇಶದ್ರೋಹಿಗಳನ್ನು ಹಿಡಿದು ತಂದವನಿಗೆ ಮೆಚ್ಚುಗೆಯ ಮಾತನಾಡಿ ಪ್ರೋತ್ಸಾಹಿಸುವ ಬದಲು ಅವಮಾನ ಮಾಡುತ್ತಾರಲ್ಲಾ ಇವರು ನಿಜವಾದ ದೇಶದ್ರೋಹಿಗಳಲ್ಲವೆ? ಇಂಥವರು ಪೊಲೀಸ್ ಇಲಾಖೆಯ ಚುಕ್ಕಾಣಿ ಹಿಡಿದರೆ ಇಲಾಖೆಯ ಆತ್ಮಸ್ಥೈರ್ಯ ಎಲ್ಲಿಗೆ ಇಳಿದೀತು? ಅಜ್ಮಲ್, ಓವೈಸಿಗಳಿಗಿಂತ ಆರ್.ಆರ್. ಪಾಟೀಲ್್ರಂತಹ ಗೃಹ ಸಚಿವ, ಅವರ ನಿಯಂತ್ರಣದಲ್ಲಿರುವ ಅರೂಪ್ ಪಟ್ನಾಯಕ್್ರಂಥ ಹಿಂದೂಗಳೇ ಗಂಡಾಂತರಕಾರಿಯಲ್ಲವೆ? ಒಂದೆಡೆ ಸಂಸದ ರಾಜೀವ್ ಚಂದ್ರಶೇಖರ್ ಅಮರ್ ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದವರನ್ನು ಗುರುತುಹಚ್ಚಿಕೊಟ್ಟವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರೆ, ಮತ್ತೊಂದೆಡೆ ಪೃಥ್ವಿರಾಜ್ ಚವಾಣ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೊಲೀಸರು ಬಂಧಿಸಿದವರನ್ನೂ ಬಿಡುಗಡೆ ಮಾಡಿದ್ದಾರೆ! ಈಗ ಹೇಳಿ, ನಿಜವಾದ ದೇಶದ್ರೋಹಿಗಳು, ದೇಶದ್ರೋಹಿಗಳನ್ನು ಪೋಷಿಸುತ್ತಿರುವವರು ಯಾರು? ಮತಬ್ಯಾಂಕ್ ರಾಜಕಾರಣ ಮಾಡುವ ಇವರು ಹಿಂದು ಮೀರ್ ಸಾದಿಕ್, ಮೀರ್ ಜಾಫರ್್ಗಳಲ್ಲದೇ ಮತ್ತೇನು?

ಇನ್ನು ಅಸಾದುದ್ದೀನ್ ಓವೈಸಿ!

ಒಂದು ವೇಳೆ ಬಾಂಗ್ಲಾ ಮುಸ್ಲಿಮರನ್ನು ವಾಪಸ್ ಕಳುಹಿಸಿದರೆ ಮುಸಲ್ಮಾನ ಯುವಕರ ಮೂಲಭೂತೀಕರಣಕ್ಕೆ ಸಿದ್ಧರಾಗಿ ಎಂದು ಆತ ಆಗಸ್ಟ್ 8ರಂದು ಸಂಸತ್ತಿನಲ್ಲಿ ಇಡೀ ದೇಶಕ್ಕೇ ಧಮಕಿ ಹಾಕುತ್ತಿದ್ದರೆ, ದೇಶದ್ರೋಹಿ ಮಾತುಗಳನ್ನಾಡುತ್ತಿದ್ದರೆ ಹಿಂದು ಸಂಸದರು ಏಕೆ ತುಟಿ ಬಿಚ್ಚದೆ ಕುಳಿತು ಕೊಂಡಿದ್ದರು? ಇಂತಹ ವ್ಯಕ್ತಿಯ ಬೆಂಬಲ ಪಡೆದು ಆಂಧ್ರದಲ್ಲಿ ಹಾಗೂ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್್ಗೆ ನಾಚಿಕೆಯಾಗುವುದಿಲ್ಲವೆ? ಈ ಅಸಾದುದ್ದೀನ್ ಹಾಗೂ ಆತನ ಅಖಿಲ ಭಾರತ ಮಜ್ಲೀಸ್ ಇತ್ತೆಹುದಾಲ್ ಮುಸ್ಲಿಮೀನ್ (AIMIM) ಪಕ್ಷದ ಹಿನ್ನೆಲೆ ಕಾಂಗ್ರೆಸ್್ಗೆ ಗೊತ್ತಿಲ್ಲವೇನು? 1947ರಲ್ಲಿ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಈ ಪಕ್ಷ ಮಜ್ಲೀಸ್ ಇತ್ತೆಹುದಾಲ್ ಮುಸ್ಲಿಮೀನ್ (MIM)ಆಗಿತ್ತು. ಹೈದರಾಬಾದ್ ನಿಜಾಮ ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದಾಗ ಆತನನ್ನು ಬಗ್ಗು ಬಡಿಯಲು ಸರ್ದಾರ್ ಪಟೇಲ್ ಸೇನೆಯನ್ನು ಕಳುಹಿಸಿದರು. ಅಂದು ಇಂಡಿಯನ್ ಆರ್ಮಿ ವಿರುದ್ಧ ಹೋರಾಡಲು ‘ರಝಾಕರ್ ಆರ್ಮಿ’ಯನ್ನು ಕಟ್ಟಿದ್ದೇ ಈ MIM! ಕೊನೆಗೂ ನಿಜಾಮ ಸೋತು ಹೈದರಾಬಾದ್ ಭಾರತದೊಂದಿಗೆ ವಿಲೀನವಾಯಿತು. ಅದರ ಬೆನ್ನಲ್ಲೇ MIM ಮೇಲೆ ನಿಷೇಧ ಹೇರಲಾಯಿತು. 1957ರ ನಂತರ ಅದೇ MIM ಭಾರತಕ್ಕೆ ತನ್ನ ಬದ್ಧತೆ ವ್ಯಕ್ತಪಡಿಸುವ ಸೋಗಿನಲ್ಲಿ ‘ಆಲ್ ಇಂಡಿಯಾ’ ಸೇರಿಸಿಕೊಂಡು AIMIM ಆಯಿತು. ಅಸಾದುದ್ದೀನನ ಅಜ್ಜ ಮೌಲಾನ ಅಬ್ದುಲ್ ವಹಿದ್ ಓವೈಸಿ AIMIM ನನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಹೈದರಾಬಾದಿ ಮುಸ್ಲಿಮರನ್ನು ಮತಬ್ಯಾಂಕ್ ಮಾಡಿಕೊಂಡರು. ನಂತರ ಅಸಾದುದ್ದೀನನ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ ಹಿಡಿತಕ್ಕೆ ಬಂತು. ಈಗ ಅಸಾದುದ್ದೀನ್ ಹಾಗೂ ಆತನ ತಮ್ಮ ಅಕ್ಬರುದ್ದೀನ್ ಅದರ ಚುಕ್ಕಾಣಿ ಹಿಡಿದ್ದಾರೆ ಎಂಬುದನ್ನು ಬ್ಲಾಗರ್ ಪಿಯುಶ್ ‘ಥಿಂಕರ್ಸ್್ಪ್ಯಾಡ್್’ನಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಹೀಗೆ ಹುಟ್ಟಿನ ಮೂಲದಲ್ಲೇ ದೇಶದ್ರೋಹ ಇಟ್ಟುಕೊಂಡಿರುವ ಓವೈಸಿಗಳಿಂದ ದ್ರೋಹವಲ್ಲದೆ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಇದೆಲ್ಲಾ ಗೊತ್ತಿದ್ದೂ ಅಸಾದುದ್ದೀನನನ್ನು ಭದ್ರತಾ ಖಾತೆ ಮೇಲಿನ ಸಂಸತ್ತಿನ ಸ್ಥಾಯಿ ಸಮಿತಿ ಸದಸ್ಯನನ್ನಾಗಿ ಮಾಡಿದ್ದಾರಲ್ಲಾ ಈ ಕಾಂಗ್ರೆಸ್ಸಿಗರು ಇದಕ್ಕೇನನ್ನುತ್ತೀರಿ? ಯುಪಿಎ ಸರ್ಕಾರವನ್ನು ಅಕ್ರಮ ಶಿಶು ಎಂದು ಆಡ್ವಾಣಿ ಕರೆದಾಗ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಮಾಡಿದ ಕಾಂಗ್ರೆಸ್ಸಿಗರು ಹಾಗೂ ದೇಶಪ್ರೇಮವನ್ನು ಗುತ್ತಿಗೆ ಪಡೆದಿರುವ ಬಿಜೆಪಿಯವರು ಅಸಾದುದ್ದೀನ್ ಓವೈಸಿ ಸಂಸತ್ತಿನೊಳಗೆ ದೇಶದ್ರೋಹಿ ಹೇಳಿಕೆ ನೀಡಿದ್ದಕ್ಕೆ ಕ್ಷಮೆಯಾಚಿಸುವಂತೆ ಏಕೆ ಒತ್ತಾಯಿಸಲಿಲ್ಲ?

ನಮ್ಮ ನಾಯಕರ Moral cowardiceಗೆ ಏನನ್ನಬೇಕು?

My own experience but confirms the opinion that the Musalman as a rule is a bully, and the Hindu as rule is a coward ಎಂದಿದ್ದರು ಮಹಾತ್ಮ ಗಾಂಧೀಜಿ!! ಹಿಂದುಗಳ ಹೇಡಿತನಕ್ಕೆ ಮುಸಲ್ಮಾನರನ್ನು ದೂರಿ ಫಲವೇನು? ಅಸಾದುದ್ದೀನ್, ಅಜ್ಮಲ್್ನಂತವರನ್ನು ಬೆಳೆಯಲು ಬಿಟ್ಟಿರುವವರಾರು? 2010ರಲ್ಲಿ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪು ಕೊಟ್ಟಾಗ ಅಸಾದುದ್ದೀನನ ತಮ್ಮ ಅಕ್ಬರುದ್ದೀನ್ ‘ರಾಮನಿಗೆ ಜನ್ಮ ನೀಡುವ ಮೊದಲು ಕೌಸಲ್ಯೆ ಎಲ್ಲೆಲ್ಲಿ ಮಲಗಿ ಬಂದಿದ್ದಳು?’ ಎಂದು ಮುಸ್ಲಿಮರನ್ನುದ್ದೇಶಿಸಿ ಅತ್ಯಂತ ಪ್ರಚೋದನಾಕಾರಿ ಭಾಷಣ ಮಾಡಿದ್ದ. ಇದೇ ಮಾತನ್ನು ಹಿಂದುವೊಬ್ಬ ಅವರ ಧರ್ಮದ ಪೂಜನೀಯರ ಬಗ್ಗೆ ಹೇಳಿದ್ದರೆ ಮುಸಲ್ಮಾನರು ಜೀವಸಹಿತ ಬಿಡುತ್ತಿದ್ದರೆ? ರಾಮಸೇತು ನಾಶದ ವಿವಾದವೆದ್ದಾಗ ‘ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಿಂದ ಡಿಗ್ರಿ ಪಡೆದಿದ್ದ? ಎಂದು ಕರುಣಾನಿಧಿ ಕೇಳಿದಾಗಲೂ ಹಿಂದುಗಳು ಸಿಡಿದೇಳಲಿಲ್ಲ. ಕನಿಷ್ಠ ಜಕಣಾಚಾರಿ ಯಾವ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ಕಲಿತಿದ್ದ ಎಂದು ಕೇಳುವ ಧೈರ್ಯವನ್ನೂ ತೋರಲಿಲ್ಲ. ಭಯೋತ್ಪಾದನೆಗಿಂತ ಹಿಂದು ಮೂಲಭೂತವಾದವೇ ಹೆಚ್ಚು ಅಪಾಯಕಾರಿ ಎಂದು ರಾಹುಲ್ ಗಾಂಧಿ ಅಮೆರಿಕನ್ನರಿಗೆ ಹೇಳಿರುವುದು ವಿಕಿಲೀಕ್ಸ್್ನಿಂದ ಹೊರಬಿದ್ದಾಗಲೂ ಹಿಂದುಗಳು ನಿದ್ರೆಯಿಂದೇಳಲಿಲ್ಲ. ಮಾನವತಾವಾದಿ ಗಾಂಧೀಜಿಯವರೇ, ಈ ಜಗತ್ತಿನಲ್ಲಿ ದುರ್ಬಲರಿಗೆ ಜಾಗವಿಲ್ಲ, The world has no place for the weakಎಂದಿದ್ದರು! ಅಂತಹ ಗ್ರೀಕ್ ನಾಗರಿಕತೆಯೇ ಉಳಿಯಲಿಲ್ಲ, ಇತಿಹಾಸ ಪ್ರಸಿದ್ಧ ರೋಮನ್ ಸಾಮ್ರಾಜ್ಯವೂ ಉಳಿಯಲಿಲ್ಲ. ಇನ್ನು ಭಾರತದ ಕಥೆ ಭಿನ್ನವಾದೀತೆ? ಹೀಗೆಯೇ ಕುಳಿತರೆ, Gone to the dogs ಅಂತಾರಲ್ಲ ಹಾಗೆ, ಈ ದೇಶ, ಧರ್ಮ ನಾಯಿ, ನರಿ ಪಾಲಾಗುವುದರಲ್ಲಿ ಯಾವ ಸಂಶಯವೂ ಇಲ್ಲ, ಅಲ್ವಾ?!

71 Responses to “ಹಿಂದುಗಳೇ ಹೇಡಿಗಳಾಗಿರುವಾಗ ಅನ್ಯರನ್ನು ದೂರಿ ಫಲವೇನು?”

 1. ಅಕ್ಷಯರಾಮ ಕಾವಿನಮೂಲೆ says:

  ಪ್ರತಾಪಣ್ಣಾ ನಾನೇನು ನಿಮ್ಮ ವಿರೋಧಿ ಅಲ್ಲ…… so called ಬುದ್ಧಿ ಜೀವಿಯಂತೂ ಅಲ್ಲವೇ ಅಲ್ಲ…… ಅಂದ ಕಾಲತ್ತಿಲ್ ನಿಮ್ಮ ಅಭಿಮಾನಿ ಆಗಿದ್ದವನೆ……. ಈಗಲೂ ನಿಮ್ಮ “ಪ್ರತಾಪಶಾಲಿ” ಲೇಖನಗಳನ್ನು ಓದುತ್ತಾ ಇದ್ದೇನೆ…… ಆದರೂ ಕೇಳಬೇಕೆನಿಸಿತು, “ಪ್ರತಾಪ್ ಸಿಂಹ ನೀವು ಹಿಂದೂ ಆಲ್ವಾ ???? ನೀವು ಹಿಂದೂ ಆಗಿದ್ರೆ ನೀವೂ ಕೂಡಾ ಹೇಡಿ ಅಂತ ಒಪ್ಪಿಕೊಂಡ ಹಾಗೆ ಆಯ್ತಲ್ಲಾ ??????? ಒಂದು ವೇಳೆ ನೀವು ಹೇಡಿ ಅಲ್ಲದೆ ಹೋದಲ್ಲಿ ಕತ್ತಿ ಹಿಡಿದು ಮುಸ್ಲಿಮರನ್ನು ಸಿಗಿದು ಹಾಕಲು ಸಿದ್ದರಿದ್ದೀರಾ ?????”
  ಮುಸ್ಲಿಂ ರಾಜರ ದಬ್ಬಾಳಿಕೆಯ ವಿರುದ್ಧ ಹೋರಾಡಿದ ಶಿವಾಜಿ, ರಾಣಾ ಪ್ರತಾಪ್, ಪೃಥ್ವಿರಾಜ್, ವಿಜಯನಗರದ ಅರಸರು, ಇನ್ನೂ ಹಲವು ಅರಸರೆಲ್ಲಾ ಹಿಂದೂಗಳಲ್ಲವೇ ??? ಅವರೆಲ್ಲಾ ಹೇಡಿಗಳೆಂದು ಫರ್ಮಾನು ಕೊಡಿಸಿಬಿಟ್ರಾ ??????? ಬ್ರಿಟಿಷರ ವಿರುದ್ದ ಬಂದೂಕೆತ್ತಿದ ಸುಭಾಶ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್ ಇತ್ಯಾದಿ ಕ್ರಾಂತಿಕಾರಿಗಳೂ ಹೇಡಿಗಳೇ ???? ಸಾವರ್ಕರ್, ಘೋಡ್ಸೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ???????
  ಹಿಂದೂಗಳು ಹೇಡಿಗಳಲ್ಲ ಆದರೆ ಅಸಹಾಯಕರು 🙁 ಕಾನೂನನ್ನು ಕೈಗೆತ್ತಿಕೊಳ್ಳಬಾರದಲ್ಲಾ ನಮ್ಮ ಘನ ಭಾರತದಲ್ಲಿ ????? ನಮ್ಮದೆನಿದ್ರೂ ಮೂಕ ಪ್ರತಿಭಟನೆ ಅಷ್ಟೇ 🙁 ನರ ಸತ್ತ ಸರಕಾರ, ಹಿಜಡಾ ಮಾಧ್ಯಮಗಳು, ಕೈ ಕಟ್ಟಿ ಹಾಕಲ್ಪಟ್ಟ ಪೋಲಿಸ್ ವ್ಯವಸ್ತೆ, ಇವುಗಳ ಮಧ್ಯೆ ನಾವು ನಮ್ಮ ಆಕ್ರೋಶವನ್ನು, ಕೋಪವನ್ನು ಹೇಗೆ ವ್ಯಕ್ತಪಡಿಸಲು ಸಾಧ್ಯ ????? ಫೇಸ್ ಬುಕ್, ಟ್ವಿಟರ್ ಗಳಲ್ಲಿ ಆಕ್ರೋಶ ತೋರ್ಸಿದ್ರೂ ನಮ್ಮ ಸರ್ಕಾರ ಬ್ಲಾಕ್ ಮಾಡುತ್ತಲ್ಲಾ ??? ಏನು ಮಾಡಬೇಕು ಅಂತ ಸ್ವಲ್ಪ ಹೇಳಿಕೊಡಿ ಸ್ವಾಮೀ…… ನನಗೂ ಒಮ್ಮೊಮ್ಮೆ ಬಾಂಬ್ ಹಾಕ್ಬೇಕು ಅಂತ ಅನ್ನಿಸ್ತದೆ ಆದ್ರೆ ಹಾಕೊದಿಕ್ಕಾಗುತ್ತಾ ಹೇಳಿ ??????? ನೀವು ಯಾವತ್ತಾದರೂ ಬಾಂಬ್ ಹಾಕೋದಿಕ್ಕೆ ಹೋಗುವಾಗ ನನ್ನನ್ನೂ ಕರೀರಿ…. ಪ್ಲೀಸ್…….
  ನಿಮ್ಮ ಈ ಲೇಖನ ಓದಿ ಯಾವೊಬ್ಬ ಹಿಂದುವೂ ಆಕ್ರೋಶ ವ್ಯಕ್ತ ಪಡಿಸಲಿಲ್ಲ ಅಂದ ಮೇಲೆ ಸ್ವಲ್ಪ ಸಂಶಯ ಬರ್ತಾ ಇದೆ…. ಹಿಂದೂಗಳಲ್ಲಿ ಹೇಡಿಗಳ ಸಂಖ್ಯೆ ಜಾಸ್ತಿ ಆಗಿರಲೂಬಹುದು…….
  ಅಂದ ಹಾಗೆ ಇನ್ನೊಂದು ವಿಷಯ ನಿಮ್ಮತ್ರ ಕೇಳಬೇಕೆಂದಿದ್ದೆ…… ನಿಮ್ಮ “ಕೊಳಗೆರೆ ನಿರ್ಮೂಲನಾ ಚಳುವಳಿ” ಎಲ್ಲಿಯವರೆಗೆ ಬಂತು ????? ಅಂದೊಮ್ಮೆ ನಾವು ಎಲ್ಲರೂ ಸೇರಿ ಹಾವು ಹೊಡೆಯಲು ಹೊರಟೆವು, ಆದ್ರೆ ನಾಯಿ ಬಾಲ ಡೊಂಕು ಅಂತ ಕೊಳಗೆರೆ ಪ್ರೂವ್ ಮಾಡಿಬಿಟ್ಟ….. “ಅಬ್ಬರಿಸಿ ಬೊಬ್ಬಿರಿದರೆ ಇಲ್ಯಾರಿಗೂ ಭಯವಿಲ್ಲ” ಅಂತ ಮತ್ತೆ ಕೆಸರು ತಿಂತಾ ಇದ್ದಾನೆ…… ನಮ್ಮ ವಿ. ಭಟ್ರೂ ಸುಮ್ಮನೆ ಇದ್ದಾರೆ…… ರಾಘವೇಶ್ವರ ಭಾರತಿ ಸ್ವಾಮಿಗಳ ಜೊತೆ ವಿ. ಭಟ್ರ ಹೆಸರು ಸೇರಿಸಿ ಅವನು ಬಾಯಿಗೆ ಬಂದ ಹಾಗೆಲ್ಲಾ ಹೇತು ಹಾಕುತ್ತಿದ್ದಾನೆ….. ನೀವು ಯಾಕೆ ಬಡಿಗೆ ಹಿಡಿದು ಹೊರಟಿಲ್ಲ ?????????? ನಮಗೂ ಆಕ್ರೋಶ, ರೋಷ ಇದೆ ಅಣ್ಣಾ ಆದ್ರೆ ಏನೂ ಮಾಡೋದಿಕ್ಕೆ ಆಗದ ಪರಿಸ್ಥಿತಿ 🙁 ಎಲ್ಲಾ ನಾವು ಪಡ್ಕೊಂಡು ಬಂದದ್ದು ಆಲ್ವಾ ???? ಏನು ಹೇಳ್ತೀರಾ ?????

 2. puneetha says:

  Thanks prathap sir….To this meaning full article…this is the right time to aware our great religion ………once again thank you sir….

 3. Swathi bn says:

  Pratap anna. . .
  ivattina article 100% satya. Indina namma deshada paristitige nammavare kaarana agiddare.hedigalante ellavannu mounavagi sweekarisuttiddeve.matte desha bhagavago ella lakshana kuda namma munde ide. Navu namma deshavanna ulisikkollabeku.AKHNDA Bhaarata namge beku.
  article maatra heart touching. Keep it up

 4. mohammed Nasir says:

  ಪ್ರಿಯ ಮಿತ್ರರೇ,
  ಪ್ರತಾಪ್ ರವರ ಈ ಲೇಖನದ ಶೀರ್ಷಿಕೆ ಹಾಗು ಅದರ ವಿವರಣೆ ಸರಿ ಅಂತ ನಮಗೆ ಅನಿಸಬಹುದು. ನೀವೇ ಯೋಚಿಸಿ “ಹಿಂದೂ” ಅಂದರೆ ಯಾರು ? ಆರ್ಯ ಮತ್ತು ವೈಷ್ಣವ ಸಮಾಜದವರು ಹಿಂದೂಗಳೇ ? ಅಥವಾ ಎಲ್ಲ ಮೂರ್ತಿ ಪೂಜಕರು ಹಿಂದುಗಳೇ ?
  ನಮ್ಮನ್ನು ಆಳುತಿರುವ ಈ ರಾಜಕಾರಣಿಗಳು ಈ ಮೇಲಿನ ಪ್ರಶ್ನೆಗಳನ್ನೇ ತಮ್ಮ ರಾಜಕೀಯ ದುರುದ್ದೇಶಕ್ಕೆ ಉಪಯೋಗಿಸಿಕೊಳ್ತಾ ಇರೋದು. ನಿಜವಾಗಿಯೂ ನಾವು ನಮ್ಮ ಅಖಂಡ ಭಾರತದ ಎಲ್ಲಾ ಜಾತಿ ಮತ್ತು ಪಂಗಡಗಳನ್ನೂ ಪರಸ್ಪರ ಸ್ವಿಕರಿಸಿ, ಸಮಾನತೆ ಬೆಲ್ಲಸ್ತಿದ್ರೆ ಇಂದು ಎಲ್ಲ ಹಿಂದುಳಿದ ಜಾತಿ/ ಜನಾಂಗದವರು “ಹಿಂದೂ” ಅನ್ನೋ ಪದದ ಜೊತೆ ತಮ್ಮ ಅಸ್ತಿತ್ವನ ನೋಡ್ತಾಯಿದ್ರು. ಆದರೆ ಹಾಹ್ಗತಾಯಿಲ್ಲ. ಕೇವಲ ಮೇಲ್ಜಾತಿಯಾ ಜನ ತಮ್ಮ ಸ್ವಪ್ರತಿಷ್ಟೆ ಮತ್ತು ಸ್ವಹಿತಕ್ಕೆ ಮಾತ್ರ “ಹಿಂದೂ” ಪದವನ್ನು ಬಳಸಿ ಆಮೇಲೆ ಅದೇ ಜನನ ಶೋಷಣೆ ಮಾಡಿದ್ರಿಂದಲೇ ಈಗ “ಹಿಂದೂ” ಅನ್ನೋ ಪದದ ಅರ್ಥ ಕೇಳೋ ಪರಸ್ತಿಥಿ ಬಂದಿದೆ. ಇಲ್ಲಿ ಯಾರು ಹೇಡಿಗಳು ಅನ್ನೋ ಸರಿಯಾದ ಅರ್ಥನೆ ಸಿಗತಾ ಇಲ್ಲ.
  ನಮ್ಮ ದೇಶದ ಏಕತೆ ಮತ್ತು ಸಂಸ್ಕೃತಿನ ನಾವೆಲ್ಲಾ ಕುಡಿ ಉಳಿಸಬೇಕಾಗಿದೆ. ಕೇವಲ ಉದ್ರಿಕ್ತ ಹೇಳಿಕೆ ಮತ್ತು ಅನ್ನ್ಯ ಕೋಮಿನ ಬಗ್ಗೆ ದ್ವೇಷ ಬೆಳೆಸೋದ್ರಿಂದ ಏನು ಪ್ರಯೋಜನ ಎಲ್ಲ, ಅದು ನಿಮಗೂ ತಿಳಿದಿರುವ ವಿಚಾರಏನಲ್ಲ. ನಮ್ಮ ದೇಶ ಮತ್ತು ಅದರ ಏಕತೆನ ಉಳಿಸಿ, ಬೆಳಸಬೇಕು ಅಂದರೆ ನಾವು ನಮ್ಮ ಧರ್ಮ ಅದರ ತತ್ವಗಳನ್ನೂ ಅರ್ಥಮಾಡಿಕೊಂಡು ಆಚರಣೆ ರೂಪದಲ್ಲಿ ಅದನ್ನ ಸರಿಯಾಗಿ ಪಾಲಿಸಿದರೆ. ಮುದೊಂದು ದಿನ ಭವ್ಯ ಭಾರತದ ಏಕತೆ ಬಗ್ಗೆ ಇಡಿ ಜಗವೇ ಹೊಗಳೋ ದಿನ ಬಂದೆ ಬರುತ್ತೆ.
  ನಾವು ನಮ್ಮ ಧರ್ಮ ಮತ್ತು ಜಾತಿನ ರಾಜಕೀಯದಿಂದ ದೂರ ಇಡಬೇಕು. ಹಾಗು ಸರಿಯಾದ ವೆಕ್ತಿನ ಆರಿಸಿದರೆ ಒಳ್ಳೆ ಭವಿಷ್ಯ ಸಿಗುತ್ತೆ.

  ಯೋಚಿಸಿ ………………………………….!

 5. sriprakash says:

  nice article……ee halka deshadrohi soole makkalu

 6. Hemant says:

  Correct. Brave article. like this.

 7. sriram v dongre says:

  Namaste,
  I will salute u, this is wat i felt after reading this. thank u

 8. ಖಂಡಿತವಾಗಿ ಇದರ ಹಿಂದೆ ಹಿಂದುಗಳ ಅತಿಯಾದ ಪರ ಧರ್ಮ ಸಹಿಷ್ಣುತೆ ಹಾಗೂ ಶಾಂತ ಸ್ವಭಾವವೇ ಕಾರಣ.
  ಒಂದು ಕಡೆ ಕ್ರಿಸ್ಟಿಯನ್ನರು ಬೈಬಲ್ ಹಿಡಿದು ಮತಾಂತರ ಮಾಡುತ್ತಿದ್ದರೆ ಮೊತ್ತೊಂದೆಡೆ ಮುಸಲ್ಮಾನರು ಖಡ್ಗ ಹಿಡಿದು ಇಸ್ಲಾಮ್ ಮೂಲಭೂತೀಕರಣ ನಡೆಸುತ್ತಿದ್ದಾರೆ.
  ಸರ್ಕಾರ ಮಾತ್ರ ಅವರಿಗೆ ಸಹಾಯ ಹಾಗೂ ಸಹಕಾರ ಕೊಡುವುದನ್ನು ಹೊರತುಪಡಿಸಿದರೆ ಮತ್ತ್ಯಾವ ಕ್ರಮವನ್ನು ಕೈಗೊಂಡಂತಿಲ್ಲ.
  ನಮ್ಮ ದೇಶದಲ್ಲಿ ಯಾರು ಬೇಕಾದರೂ ದೇಶವಿರೋಧಿ ಹೇಳಿಕೆ ನೀಡಬಹುದು ಅವರಿಗೆ ಯಾವುದೇ ತೊಂದರೆ ಇರುವುದಿಲ್ಲ, ಇದುವರೆಗೂ ದೇಶದೋಹಿಗಳಿಗೆ ಹಾಗೂ ಭಯೋತ್ಪಾದಕರಿಗೆ ಯಾತಕ್ಕಾಗಿ ಗಲ್ಲು ಶಿಕ್ಷೆ ಜಾರಿಯಾಗಿಲ್ಲ?
  ಪರಿಹಾರ ಒಂದೇ : ದೇಶದ ಎಲ್ಲಾ ಹಿಂದುಗಳು ಮೈಚಳಿ ಬಿಟ್ಟು ದೇಶದ್ರೋಹಿಗಳ ಹಾಗೂ ಭಯೋತ್ಪಾದಕರ ವಿರುದ್ದ ಹೋರಾಡಬೇಕು…..

 9. chandrashekar.hc says:

  NICE ARTICLE…..

 10. mithun says:

  Indian mujaideen ….has insulted our Hindu gods……saying your 33crore gods will not save you from getting killed….also sharia hind has told that their main aim is to islamise India…..in 20 years India will be Islamic state….only god can save us

 11. Nithin says:

  Pratap,
  You are amazing… I wish every Indian shd read your articals.

 12. SUNIL KUMAR DP says:

  Dear Prathap,

  neevu helo prathi mathinallu artha ide adare ondu nimma gamanadallirali, hindugalalli hedigalirabahudu hagantha yella hindugalu hedigalalla,nammantha koti koti yuvakarige ”nanna dhesha haagu dharmakkagi yenannadaru volleyadanna madbeku” anno hambala ide haage namma bharatha dheshadalle iddu namma desha matthu dharmada virudda mathado thayi ganda makkalanna kondhu deshadinda hora hakbeku annovastu rosha nammallu ide adare nammantha yuvakaranna sanghatisi munnadesuvantha niswartha nayakathwa bekide aste prathap,nimma prathiyondu article odhovagalu nannantha saavira saavira yuvakaru kushipattadide karana nimma baravanige mukantharanadru bahusankythara para mathado dhairya madidralla antha,nimma margadharshana haagu nimmanthavara nayakathwada neeriksheyondige…………

  Sunil Kumar DP

 13. balrajmk says:

  Hi Pratap,

  Winston Churchill X Pri minister of Britten, His argument against granting India freedom…: He wrote this 64 years ago !

  “Power will go to the hands of rascals, rogues, freebooters; all Indian leaders will be of low calibre & men of straw. They will have sweet tongues & silly hearts. They will fight amongst themselves for power & India will be lost in political squabbles. A day would come when even air & water would be taxed in India.

  We have proved his words…We need to make a sound/blast to def’s and dumb’s to listen us and understand us…..

  Regards,
  Balraj.M.K
  Bangalore

 14. kiran says:

  ಹಾಯ್ ಪ್ರತಾಪ್,

  ನನಗ್ಯಾಕೊ …. ನಮ್ಮ ರಾಜಕಾರಣಿಗಳು, ನಮ್ಮ ಬುದ್ದಿ, ನಮ್ಮ ಸ್ವಾರ್ಥ, ನಮ್ಮ ಮೀಡಿಯಾ, ದರಿದ್ರ ಬುದ್ದಿಜೀವಿಗಳು, ಹುಚ್ಚರ ಹಾಗೆ ಮಾಡಿರೋ ನೂರಾರು ರೂಲ್ಸುಗಳನ್ನೆಲ್ಲಾ ನೋಡಿದ್ರೆ ನಮ್ಮ ಭಾರತ ನಿಜವಾಗ್ಲು ಬದಲಾಗಲ್ಲ ಅನ್ಸುತ್ತೆ ….

 15. Rajkumar .M says:

  Good Morning Pratap Sir,

  Edu vandu valleya article, ee nimma article odida nantara hindugalu jagrutaragabeku, aadare illi hindugalu jagrutaraguva yava lakshanagalu
  kanuttilla, hige aadare hindu dharmada bhavishyattina bagge chinte kadutte, hindugalige samartha nayakaru beku, eega iruva nayakaru rajkiya labhakkagi
  hindu dharmavannu upayogisuttiddare vinaha dharma bhalistagollalu shrama
  paduttilla.

  ONCE AGAIN THANKS FOR THE ARTICLE SIR

 16. Raghu.L says:

  superb article sir..

 17. gururaj kodkani says:

  ಸರಿಯಾಗಿ ಹೇಳಿದ್ದೀರಿ ಪ್ರತಾಪ್,ಈ ದುರ೦ತಮಯ ಬೆಳವಣಿಗೆಗೆ ಹಿ೦ದೂಗಳ ಪುಕ್ಕಲುತನ ,ನಿರ್ಲಿಪ್ತ ಭಾವವೇ ಕಾರಣ.ಯೋಚಿಸಿ ನೊಡಿ,ಮೂಲತ: ಕಾ೦ಗ್ರೆಸ್ಸ್ ಎನ್ನುವುದು ಅಲ್ಪ ಸ೦ಖ್ಯಾತ ಕೃಪಾಪೋಷಿತ ಅಥವಾ ಸ೦ರಕ್ಷಣಾ ನಾಟಕ ಮ೦ಡಳಿ.ಆದರೆ ಬಹುತೇಕ ಕಾ೦ಗ್ರೆಸ್ಸಿಗರು ಹಿ೦ದೂಗಳಲ್ಲವೇ..?ಬಿಡಿ ಅವರಿಗೆ ಧರ್ಮಾಭಿಮಾನವಿಲ್ಲವೆ೦ದುಕೊಳ್ಳೋಣ ,ಕನಿಷ್ಟ ರಾಷ್ಟ್ರ ಪ್ರೇಮವೂ ಇಲ್ಲವೇ ..? ಪರಿಸ್ಥಿತಿ ಹೇಗಿದೆಯೆ೦ದರೇ , ಇ೦ಥಹ ಲೇಖನಗಳ ಮೂಲಕ ಸತ್ಯವನ್ನು ಹೇಳುವ ನಿಮ್ಮ೦ತಹ ಲೇಖಕರನ್ನೇ ಕೋಮುವಾದಿ ಎ೦ದು ಪಟ್ಟಕಟ್ಟಿಬಿಡುತ್ತಾರೆ.ದುರಾದೃಷ್ಟಾವಶಾತ ಹಾಗೆ ಪಟ್ಟಾಕಟ್ಟುವವರಲ್ಲಿ ಬಹುತೇಕರು ಹಿ೦ದುಗಳೇ

 18. imran pasha says:

  sir neevhelodu bahupaalu nija
  yella nimmantaha chintakaru bahushaha idereeti yochne madabahudeno adare bari yochane madodrinda yenu phala intahaddanna naavugale odabeku vinaha aa paapigala kaige idu talupode illla yellaru bari yochnemadkonde kunthkondire a baddi maklu nammanna innu shoshane madtirtare idannella sahiskondu sumne kunthkobeka?
  election timalli pata kalisoke obra, ibra yelluru haage idare yestu anta system change madoke horata madkond kuntirbeku heli tipparlaaga hakidru yaavobba mantrinu horata nadiyo jaagakke barolla nervagi uttarakodalla, uttarapadkondu nodlilve manamohana sahebru hege mukha muchkond odadtidare anta

  bari 4 kade bhashana madidre 4 articles baredren bantu nijvaglu nimage deshabhimana annodidre nammelarigu janma kottu saakta iro taayi mele anukampa annodidre aa baddi maklu jaaga hidkondu meritidaralla avarajagakke hogi nammanimmellara bayakeyente deshana munnedesi please ——– imran pasha, doddabasthi

 19. imran pasha says:

  ಸಿರ್ ನೀವ್ಹೆಲೊದೆನೊ ನಿಜಾನೆ
  ಯೆಲ್ಲ ನಿಮ್ಮಂತಹ ಚಿಂತಕರು ಬಹುಶಹ ಇದೆರೀತಿ ಯೊಚ್ನೆ ಮಡಬಹುದೆನೊ ಅದರೆ ಬರಿ ಯೊಚನೆ ಮಡೊದ್ರಿಂದ ಎನ್ ಫಲ ಇಂತಹದ್ದನ್ನ ನಾವುಗಳೆ ಓದಬೆಕು ವಿನಹ ಆ ಪಾಪಿಗಳ ಕೈಗೆ ಇದು ತಲುಪೊದೆ ಇಲ್ಲ ಯೆಲ್ಲರೂ ಬರಿ ಯೊಚ್ನೆಮಡ್ಕೊಂಡೇ ಕೂತಿದ್ರೆ ಆ ಬದ್ದಿ ಮಕ್ಳು ನಮ್ಮನ್ನ ಇನ್ನು ಶೊಷಣೆ ಮಡ್ತಿರ್ತಾರೆ ಇದನ್ನೆಲ್ಲ ಸಹಿಸ್ಕೊಂಡು ಸುಮ್ನೆ ಕೂತಿರ್ಬೆಕಾ
  ಎಲಕ್ಶನ್ ಟೈಮಲ್ಲಿ ಪಾಠ ಕಲಿಸೊಕೆ ಒಬ್ರಾ, ಇಬ್ರಾ ಯೆಲ್ಲಾರು ಹಾಗೆ ಇದಾರೆ ಯೆಶ್ಟು ಅಂತ ಸಿಸ್ಟಮ್ ಚೇಂಜ್ ಮಡೊಕೆ ಹೊರಟ ಮಡ್ಕೊಂಡು ಕುನ್ತಿರ್ಬೆಕು ಹೇಲಿ ತಿಪ್ಪರ್ಲಾಗ ಹಕಿದ್ರು ಯಾವೊಬ್ಬ ಮನಿಶ್ಟ್ರುನು ಹೊರಟ ನಡಿಯೊ ಜಾಗಕ್ಕೆ ಬರೊಲ್ಲ ನೆರ್ವಗಿ ಉತ್ತರಕೊಡಲ್ಲ, ಉತ್ತರ ಪಡ್ಕೊನ್ದು ನೊಡ್ಲಿಲ್ವೆ ಮನಮೊಹನ ಸಹೆಬ್ರು ಹೆಗೆ ಮುಖ ಮುಚ್ಕೊನ್ಡ್ ಒಡದ್ತಿದರೆ ಅಂತ

  ಬರಿ ೪ ಕಡೆ ಭಾಷಣ ಮಾದಿದ್ರೆ ೪ ಅರ್ಟಿಕಲ್ಸ್ ಬರೆದ್ರೆನ್ ಬನ್ತು ನಿಜ್ವಗ್ಲು ನಿಮಗೆ ದೆಶಭಿಮನ ಅನ್ನೊದಿದ್ರೆ ನಮ್ಮೆಲರಿಗು ಜನ್ಮ ಕೊಟ್ಟು ಸಾಕ್ತ ಇರೊ ತಾಯಿ ಮೇಲೆ ಅನುಕಂಪ ಅನ್ನೊದಿದ್ರೆ ಆ ಬಡ್ಡಿ ಮಕ್ಳು ಜಾಗ ಹಿದ್ಕೊನ್ದು ಮೆರಿತಾ ಇದಾರಲ್ಲ ಅವರಜಾಗಕ್ಕೆ ಹೊಗಿ ನಮ್ಮನಿಮ್ಮೆಲ್ಲರ ಬಯಕೆಯೆಂತೆ ದೇಶನ ಮುನ್ನೆಡೆಸಿ ಪ್ಲೀಸ್ ——– ಇಮ್ರಾನ್ ಪಾಶಾ, ದೊಡ್ಡಬಸ್ತಿ

 20. Pradeep says:

  Ovaisi anthaha muslimarige deshakintha dharmave doddadu…desha drohi chinthanegalindale ivru avara dharma mattu desha eradannu haalu maadtha iddare…

 21. naveen says:

  Dear Pratap Sir,

  Hindugallali manege 1 or 2 makalu eruthare aduke avaragali avara makallagali dhairya madalla… Mathu namma Hindugalige Dharmada mele nishtenuilla deshada mele bhaktinu illa.

 22. Vithal Navade says:

  Pratapji,

  It is unfortunetely true, every Hindu should think on this. I didn’t understand why the BJP ministers tied their lips during the speach of Assadudin, are they forgotten their values and responsibilty. Really shame on them and shame on every Hindu, for being deaf & damb on such speach and act.

  we whole heartedly appriciate your sincer effort for awaking us against such activity.

  Thanks once again.

  Vithal Navade

 23. Harish says:

  Hi Mr Pratap,

  Good article… we should learn from our History about Betrayer and Traitor those who are all surrounded us now also…. my dear sleeping Bharatiyaree…. please united, dont see any cast within you and fight for our gifted Hindustan.

 24. Praveen Nagarle says:

  Problem with India is most of the people are selfish. Its not just problem with corrupt politicians but also the common people. People look for short term benefit and never care for country or ethics.

  There is a popular saying

  ” Ondu desha halagokke ketta jana karana all, olle janara mounave karana ”

  In India around 20% are corrupt the other 80% never speaks. Its easy to punish the corrupt 20% people if 80% people get together.

  The silence of this 80% people is making India to be a unsafe place to live and taking the country backwards.

  Wake up guys else there will not be a peaceful and safe India for our next generations.

  -Praveen

 25. Vishwanath S Patil says:

  Dear Pratap Anna after reading your article, i surfed you tube for Asaduddin speech i found the image that you posted in your article. But that speech was about Dantewad incident. He might have spoken about Bangla intruders in other speech but not in the speech which that image in your article is indicating. Pls i beg be precise to your words bcoz your words are a thousand men deeds. And also pls show us where that guy made such disrespectful speech in parliment. Not only Hindus but every Bharatiya (Indian) should be against such obnoxious statements. And also show the path for a commoner Bharatiya what to do when such blunders are made by our elder Bharatiya’s

 26. Thejaswi says:

  I liked the heading… didn’t read the content.. true… will read when I get the time

 27. Akhila says:

  Dear Sir,
  I am proud to be Kannadiga, read the article about the cowerdness of Hindus.
  We want leave this country for dogs & foxen, the problem here is belling the cat.
  Let we (I) become Tiger.
  I will say why to wait for someonoe to do. Why not You(I).

 28. praveen says:

  Sir, what u r saying, has long been analysed by other hindu saints also. Even great Swami Vivekananda had done great study of Islam at a time when internet was not there. And he has clearly written in his writings about Islam and a threat it poses to Hinduism as dharma and as nation. But he could not do much ,because the very religion of hinduism is not organised and tolerance is ints blood. But now times have changed, and evern western world is now exposing relentlessly Islam , about its nature as more of a idoelogy of supremacy and as tribal cult. Indian problem is, the so called poitical leaders ,whithout any idea of ideology of islam are ,saying hindu muslim bhai bhai from last 65 years , and our hindu religious leaders are saying these shit from thousand years. But I hope sooner than later, we hindus ,realise and organise into one mighty force and install a hindu rashtra.

 29. PRASAD says:

  Really we should something sir, otherwise india will get split into different muslim countries in the near future where their job will be to terrorize the world with grenades and bombs,harrassing common people, women, growing cocaine, opium, spreading jihadisam. INCREASING MUSLIM population is the main concern . Nobaody can change their minds. It has got worst things in it to change others into their religion or otherwise killing them if they dont accept it. So by coming 30 years india will be a muslim country , as hindu’s pop growth rate is very low and muslim has the thrice the fertility rate of hindu . So our next genertaion will suffer a lot infront of muslim majority so we should do something .

 30. vincy says:

  Interesting.But not a solution.You cannot change the past.Muslims are part of the population.Punish the guilty and rest will follow.The main problem is you punish the innocent and there you make mistake.

 31. Aaryadev says:

  very true sir. eye opening article

 32. Parimal says:

  Hi Pratap,

  This article make me to wake up. But you are missing one important point. What is the action plan that is required to control the Muslims and their blend religion?
  Can you write a article on this?

 33. Reddi says:

  Nice one, Every should think about Nation and its safety.

 34. Reddi says:

  Nice one, Every Indian should think about Nation and its safety.

 35. Super article sir
  Bengalooru Hubballiyalli banditharada ugrara hitlist visweshwar bhat V.Bhat v.sankeswar mattu nimma hesariddudu nodi manasige tumba novayitu.
  Sada hindu dharmada mele mugibeeluva nakali jatyateetavaadigale buddijeevigale komu souharda vedhike janagald eega yelli sattu hogiddiri.Dehliyalli Soniya gandhi kemmidaga deshadellade bala alladisuva congresigare
  Mumbainalli nadeda
  ghatane,Bengalooru Hubliyalli banditarada ugrara bayinda banda satya visayavannu nodidameladaru omme aatmavalokana madikolli

 36. raghavvk says:

  Ramesh.na Madhuve aaglilvalla boss… Paapa madhuve pllan maad.dhora kathe govinda…

 37. PRASAD says:

  The whole System has corrupted 🙁 … We need a efficient leader to overcome this..
  I don’t know why Indian Muslims supporting to other countries.. even though Indian Muslims don’t have single pinch of respect over there..
  In Arab have only respect for Shaks and Pattans.. They Treat Indian Muslims more worst than a dustbin.. They just use them.
  In Pakistan Indian Muslims are called by Muharji…
  In bangla many Indian Muslims are Killed by them.. Still our Indian Muslims are Supporting to other countries…
  Incredible India…

 38. Ramesh says:

  Dear Sir, Your opinion is 300% true. But Indian medias also contributing to increase communal clash and terrorism. When that bastard MP gave that speech in parliament why our medias were silent? When the Mangalore attack happened, it became national news. But his speech? When the bastard guys pushed an innocent girl from train in mandya why that not became an issue? Only because hindus are coward no. You are a Deputy editor of a news paper. If you are true just think honestly about it. We can only appreciate your articles but you can do aware the people by media.

 39. Shashank Rao says:

  nice article sir……….

 40. DATTU PUJAR PSD says:

  channagide gurugale nimm mele ugraru dali maduttarendu keli tumba novayitu ivattigu nivillad vijay karnataka nanu nodilla kannada prabha dallin yella nimm cutingalannu nanu sekarisiddini igntu nanage avu printebel document nalli siguttive nimm i vaard kannada pabhada ankanvu channagide shanivarvannu nanu Hanumantanigintlu hechu nimm dyanvanne maduttene. yav vishay hego yeno yendu yene irali nimm meliruv nannant abhimani odugar priti inda nimage band kantaka duragide. kshamisi nanage olley English baralla aa bhashey balasi nanna bhavanegalnnu nanu helalu aaguvudilla adakke i riti barediddene “PHRATAP ANNA NIVU YENU CHINTISA BEDI NIMMANNE ARADISUV NIMMA BARAHAVANNE NIRIKSHISUV NOORARU ABHIMANIGAL PREETI MATTU NOORARU HIRIYAR AASHIRVAD NIMM MELIDE” DEVARU NIMAGE INNU HECHU AYASHU KODLI YENDU BEDIKOLLUTTENE

  NAMSHKAR

 41. Nirmith Gooli says:

  Pratapji nivu baredhiruvudhu aksharashaha nija:(

 42. VIJAYANARAYAN says:

  DEAR PRATAP,

  VERY HAPPY THAT YOU ARE CARRYING THE SAME SPIRIT AFTER THE THREAT FROM
  SHAITHANS, YOU ARE THE REAL HERO…YOU ARE PROVING THAT YOU HAVE GOT A “REAL PRATAP” TO FIGHT AGANST ANTI NATIONAL ELEMENTS.

  WE ARE ALWAYS THERE FOR YOU AND YOUR FAMILY TO HELP UP TO ANY EXTENT…

  THANKS FOR SUCH A MODEL …….

  I CAN FEEL ALL THE AGONY, STRUGGLE, DISTURBANCE THAT YOU AND YOUR FAMILY FEELING… ITS VERY DIFFICULT TO BE ‘A PRATAP’ AT ACTUAL CIRCUMSTANCES…

  WE PRAY FOR YOU AND FOR YOUR FAMILY

 43. jeetu says:

  This rahul gandhi has Italy to runaway and these f@$%ing musalmaans have pakistan to run away,But Hindus has no option to run away ,so this is the time hindus should get out of sleep and think about our childrens,grandchildrens future in india.

 44. prakashgowda says:

  Will join you soon Pratap . Be careful . we all love you .
  We will fight . We will fight intelligently not on streets bcoz hindus are in minority on Indian streets . hats off to your courage . You know what hindus like you are braver than osama , osama had crores of muslims to protect him . when Hindus fight for hindutva they are all alone . Hindus are hypocrites , fools and stupid and selfish but hindu land is not .

 45. prakashgowda says:

  with above comment I am not equating you to osama . Ideallogically you are sacred than any nobel peace award winner on this planet , I am just talking about bravery part

 46. Krishna says:

  Sir this is a brilliant article by you. Today all are just focussing on vote banks. Today if you are pro hindu you are targeted as communal and if you are pro muslim you are secular.

 47. Manjunath Hegde says:

  It is Truth… You are telling Truth.. That’s why those terrorists made an operation on YOU…..

 48. vikasraj says:

  pratap sir nana prakara namma hindu janate hatira ondu agi eruva estane ella ondu hindu enondu hindu ge hate madtane example modalina kaladali navu hindu galu 2 cast agi edevu vishnava matu jeshtas (shivu bhakth and vishnu bhakth) lingaytri ge vishnu ge baidre khushi agta ettu mate vishnu bhakt ge shivu na baidre e parampare eglu ede nana tumba hindu friends edare avru edan yalla matu adtare … hege edre hindu samaj mude baralu hege sadya….