Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕುಮಾರಿ ಸೌಜನ್ಯಾಳ ಅಮಾನುಷ ಕೊಲೆಗೆ ನ್ಯಾಯ ಸಿಗಲೇಬೇಕು, ಆದರೆ..?

ಕುಮಾರಿ ಸೌಜನ್ಯಾಳ ಅಮಾನುಷ ಕೊಲೆಗೆ ನ್ಯಾಯ ಸಿಗಲೇಬೇಕು, ಆದರೆ..?

Justice For Kumari Sowjanya!

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ಕುಮಾರಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಂದಿಗೂ ಜೀವಂತವಿದ್ದರೆ, ಮತ್ತೆ ಸುದ್ದಿಗೆ ಗ್ರಾಸವಾಗಿ ಸಿಐಡಿ ತನಿಖೆ ಚುರುಕುಗೊಂಡಿದ್ದರೆ ಅದಕ್ಕೆ ಮೂಲ ಕಾರಣ ಈ ಮೇಲಿನ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಸತತವಾಗಿ ನಡೆದ ಹೋರಾಟ. ಇವತ್ತು ಒಂದಿಷ್ಟು ಜನರು ಮುಂದೆ ಬಂದು ಟಿವಿ ಮಾಧ್ಯಮದ ಎದುರು ಧ್ವನಿಯೆತ್ತಿರಬಹುದು, ಆದರೆ ಪ್ರಕರಣವನ್ನು ಜೀವಂತವಾಗಿಟ್ಟಿದ್ದು ಮಾತ್ರ ಫೇಸ್‌ಬುಕ್ ಆ್ಯಕ್ಟಿವಿಸ್ಟ್‌ಗಳು ಅಥವಾ ಚಳವಳಿಕಾರರು/ಹೋರಾಟಗಾರರು ಎಂದರೆ ತಪ್ಪಾಗಲಾರದು. ಕಳೆದ ವರ್ಷ ದಕ್ಷಿಣ ಕನ್ನಡ ಬಿಜೆಪಿಯ ಕೆಲವು ರೋಗಗ್ರಸ್ಥ ಮನಸ್ಸುಗಳು ಕುಂದಾಪುರದ ವಾಜಪೇಯಿ ಎಂದೇ ಹೆಸರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನನೋಯಿಸಿ ಪಕ್ಷ ತೊರೆಯುವಂತೆ ಮಾಡಿದಾಗಲೂ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆ ಆಕ್ರೋಶ ಹೋರಾಟದ ರೂಪ ಪಡೆಯುವುದಕ್ಕೂ, 2013ರ ಚುನಾವಣೆಯಲ್ಲಿ ಶ್ರೀನಿವಾಸ ಶೆಟ್ಟಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಅಭೂತಪೂರ್ವ ಗೆಲುವು ಸಾಧಿಸುವುದಕ್ಕೂ ಪರೋಕ್ಷವಾಗಿ ಕಾರಣವಾಗಿತ್ತು. ಹಾಗೆಯೇ ಸೌಜನ್ಯಾ ಕೊಲೆಯಾದ ನಂತರ ಸತತ ಒಂದು ವರ್ಷದಿಂದ ಫೇಸ್‌ಬುಕ್ ಆ್ಯಕ್ಟಿವಿಸ್ಟ್‌ಗಳು ಹೋರಾಟ ನಡೆಸುತ್ತಾ ಬಂದಿದ್ದಾರೆ.

Hats off to you guys!

ಅದರ ಬಗ್ಗೆ ಅನುಮಾನವೇ ಬೇಡ, ಹೀಗೆಂದರೆ ಖಂಡಿತ ಅತಿಶಯೋಕ್ತಿಯೂ ಆಗುವುದಿಲ್ಲ. ಒಂದು ಸಮಾಜ ತನ್ನ ಭಾಗವಾದ ಒಂದು ಕುಟುಂಬದ ನೋವಿಗೆ ಈ ಪರಿ ಸ್ಪಂದಿಸುತ್ತದೆ ಎಂದರೆ, ಆ ಘಟನೆ ಯುವ ಜನತೆಯ ಆತ್ಮಸಾಕ್ಷಿಯನ್ನು ಈ ರೀತಿ ಬಡಿದೆಬ್ಬಿಸುತ್ತದೆ ಎಂದರೆ ಅದು ಖಂಡಿತ ಒಳ್ಳೆಯ ಸಂಕೇತವೇ. ಸಮಾಜವೇ ಈ ಮಟ್ಟಕ್ಕೆ ಸಿಡಿದೇಳುತ್ತದೆ ಎಂದರೆ ಇನ್ನು ಹೆತ್ತು, ಹೊತ್ತು 17 ವರ್ಷ ಸಾಕಿ ಸಲುಹಿದ ಆ ಬಡ ಅಪ್ಪ-ಅಮ್ಮನ ನೋವು, ವೇದನೆಯ ತೀವ್ರತೆ ಎಷ್ಟಿರಬಹುದು? ಟಿವಿಯಲ್ಲಿ ಅವರು ಹೇಳುತ್ತಿರುವುದನ್ನು, ನಮ್ಮ ಮಗುವಿಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿರುವುದನ್ನು ನೋಡಿದಾಗಲಂತೂ ಕರುಳು ಹಿಂಡಿದಂಥ ಅನುಭವ ವೀಕ್ಷಕರಿಗಾಗುತ್ತಿತ್ತು. ಇನ್ನು ಆ ಅಪ್ಪ-ಅಮ್ಮನಿಗೆ ತಮ್ಮ ಮಗುವನ್ನು ಕಳೆದುಕೊಂಡ ನೋವು ಒಂದು ಕಡೆಯಾದರೆ, ವರ್ಷ ತುಂಬಿದರೂ ನ್ಯಾಯ ಸಿಗಲಿಲ್ಲವಲ್ಲಾ ಎಂಬ ಹತಾಶೆ ಇನ್ನೊಂದು ಕಡೆ. ಅವುಗಳ ಜತೆಗೆ ಸ್ಥಳೀಯ ಪೊಲೀಸರ ನಿಷ್ಕ್ರಿಯತೆ ಕಳೆದ ಒಂದು ವರ್ಷದಲ್ಲಿ ಪ್ರಕರಣದ ಬಗ್ಗೆ ಏನೆಲ್ಲಾ ಅನುಮಾನಗಳನ್ನು ಸೃಷ್ಟಿಸಿತು. ಯಾರೋ ಪ್ರಭಾವಿ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ, ಆ ಕಾರಣದಿಂದಲೇ ನ್ಯಾಯಸಮ್ಮತ ತನಿಖೆಯಾಗಿಲ್ಲ, ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂಬ ಗಾಳಿ ಸುದ್ದಿ, ಕಿವಿಮಾತುಗಳು ಜತೆಗೂಡಿ ಸೌಜನ್ಯಾಳ ಅಪ್ಪ-ಅಮ್ಮನ ಮಾನಸಿಕ ನೆಮ್ಮದಿಯನ್ನು ಶಾಶ್ವತವಾಗಿ ಹಾಳು ಮಾಡಿದ್ದು ಮಾತ್ರವಲ್ಲ, ಸಮಾಜ ಕೂಡ ವ್ಯವಸ್ಥೆಯ ಮೇಲೆ ಅಪನಂಬಿಕೆ ಬೆಳೆಸಿಕೊಳ್ಳುವಂತಾಯಿತು. ಇದರ ಪರಿಣಾಮವಾಗಿ ಈಗ ಎದ್ದಿರುವ ಹಾಲಿ ಆಕ್ರೋಶ ಖಂಡಿತ ಒಪ್ಪುವಂಥದ್ದೇ. ಇವತ್ತು ಸೌಜನ್ಯಾಳನ್ನು ಆಕೆಯ ಅಪ್ಪ-ಅಮ್ಮ ಕಳೆದುಕೊಂಡಿರಬಹುದು, ಆದರೆ ಇಂಥ ಘಟನೆಗಳು ಸಮಾಜದಲ್ಲಿ ಹೆಣ್ಣು ಹೆತ್ತವರನ್ನೆಲ್ಲ ಆತಂಕದ ಕೂಪಕ್ಕೆ ದೂಡಿ ಬಿಡುವ ಅಪಾಯವೂ ಇದೆ. ಹಾಗಾಗಿ ಸೌಜನ್ಯಾ ಕೊಲೆಯ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲೇಬೇಕು ಹಾಗೂ ಅಂಥ ಘಟನೆಗಳು ಮರುಕಳಿಸದಂತೆ ವ್ಯವಸ್ಥೆ ಮತ್ತು ಸಮಾಜ ಎರಡೂ ನಿಗಾವಹಿಸಬೇಕು. ಈ ಕಾರಣಕ್ಕಾಗಿ ಸೌಜನ್ಯಾ ಪ್ರಕರಣ ಮತ್ತೆ ಸುದ್ದಿಯಾಗಿದ್ದು ಒಳ್ಳೆಯದೇ.

ಆದರೆ…

ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಹೋರಾಟ/ಚರ್ಚೆ ಧರ್ಮಸ್ಥಳವೆಂಬ ಶ್ರೀಕ್ಷೇತ್ರದ ಮೇಲಿನ ವಿಶ್ವಾಸವನ್ನೇ ಹೊಡೆದು ಹಾಕುವ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವೈಯಕ್ತಿಕ ತೇಜೋವಧೆ ಮಾಡುವ ಪ್ರಯತ್ನದ ರೂಪ, ಸಾಕ್ಷ್ಯರಹಿತ ಆರೋಪದ ಅಂಗವಾಗಿದ್ದು ಮಾತ್ರ ಸೌಜನ್ಯಾಳ ಕೊಲೆಯಷ್ಟೇ ದುರದೃಷ್ಟಕರ. ಕೆಟ್ಟದ್ದನ್ನು ಮಾತ್ರ ಅನುಮಾನಿಸದೆ, ಪರಾಮರ್ಶಿಸದೆ, ಅಳುಕದೆ, ಎರಡನೇ ಬಾರಿ ಯೋಚನೆ ಮಾಡದೆ ಯಥಾವತ್ತಾಗಿ ತೆಗೆದುಕೊಳ್ಳುವ ಸಮಾಜದ ಮಧ್ಯೆ ಇವತ್ತು ನಾವಿದ್ದೇವೆ. ನೀವು ಯಾರ ಬಳಿಯಲ್ಲಾದರೂ “ಸಿದ್ರಾಮಣ್ಣ ತುಂಬಾ ಒಳ್ಳೆಯವರು” ಅಂಥ ಹೇಳಿ, “ಇಲ್ಲಾ ಮಾರಾಯ, ಅವನು ಸರಿ ಇಲ್ಲ, ಕಳ್ಳ ಅಂಥ ಯಂಕಣ್ಣ ಹೇಳ್ತಿದ್ದ” ಎಂಬ ಮಾರುತ್ತರ ಬರುತ್ತದೆ. ಅದೇ “ಸಿದ್ರಾಮಣ್ಣ ಸರಿ ಇಲ್ವಂತೆ, ದುಡ್ ತಿನ್ತಾರಂತೆ” ಅನ್ನಿ, “ಹೌದು, ಸೀನಣ್ಣ ಅವತ್ತೇ ಹೇಳಿದ್ದ” ಎಂಬ ಉತ್ತರ ಬರುತ್ತದೆ. ನಮ್ಮ ಜನರ ಮನಸ್ಥಿತಿಯೇ ಅಂಥದ್ದು. ಕೆಟ್ಟದ್ದಕ್ಕೆ ಬೇಗ ಸಹಮತ ವ್ಯಕ್ತಪಡಿಸಿ ಬಿಡುತ್ತಾರೆ. ಹಾಗಾಗಿ ಇವತ್ತು ಸಮಾಜದಲ್ಲಿ ದೊಡ್ಡ ಮಟ್ಟಕ್ಕೇರಿದ್ದವರ ಬಗ್ಗೆ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದವರ ಬಗ್ಗೆ ಬಹಳ ಸಲೀಸಾಗಿ ಕೆಟ್ಟದ್ದನ್ನು ಹೇಳಿ, ಅಹುದಹುದೆಂದು ತಲೆಯಾಡಿಸುವಂತೆ ಮಾಡಿಬಿಡಬಹುದು. ಬಹಳ ಬೇಸರದ ಸಂಗತಿಯೆಂದರೆ ನಮ್ಮ ಸಮಾಜದ, ಜನರ ಇಂಥ ದೌರ್ಬಲ್ಯವನ್ನು ಕೆಲವರು ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರ ಬದ್ನಾಮಿ ಮಾಡಲು ಬಳಸಿಕೊಂಡರು ಎಂದನಿಸುವುದಿಲ್ಲವೇ? ಇಷ್ಟಕ್ಕೂ  ವೀರೇಂದ್ರ ಹೆಗ್ಗಡೆಯವರು ಪತ್ರಿಕಾಗೋಷ್ಠಿ ನಡೆಸಿ ಸೌಜನ್ಯಾ ಪ್ರಕರಣ ನಡೆದಾಗ ತಮ್ಮ ಸಹೋದರನ ಪುತ್ರ ದೇಶದಲ್ಲೇ ಇರಲಿಲ್ಲ ಎಂಬುದನ್ನು ಸೂಕ್ತ ದಾಖಲೆಗಳೊಂದಿಗೆ ನಿರೂಪಿಸುವವರೆಗೂ ನಿಶ್ಚಲ್ ಹಾಗೂ ಕುಟುಂಬ ವರ್ಗವನ್ನು ಕಟಕಟೆ ಹಾಗೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರಲಿಲ್ಲವೇ? ನಮ್ಮ ಸಮಾಜ ಹೇಗಿದೆಯೆಂದರೆ ಆರೋಪ ಮಾಡುವವರಿಗೆ ಸಾಕ್ಷ್ಯ ನೀಡುವ ಜವಾಬ್ದಾರಿಯೂ ಇರುವುದಿಲ್ಲ, ಕೇಳಿಸಿಕೊಳ್ಳುವವರು ಆಧಾರವನ್ನೂ ಕೇಳುವುದಿಲ್ಲ. ಸತ್ಯದ ಸರಳ ಸಾದರಕ್ಕಿಂತ Conspiracy Theoryಗಳು ಯಾವತ್ತೂ ರೋಚಕವಾಗಿರುತ್ತವೆ, ಖುಷಿ ಕೊಡುತ್ತವೆ. ಪತ್ರಿಕಾಗೋಷ್ಠಿಯ ನಂತರ ಮತ್ತೆ ನಡೆದ ಟಿವಿ ಚರ್ಚೆಯಲ್ಲಿ ಕಾಂಗ್ರೆಸ್ ನೇತಾರ ಹಾಗೂ ಮಾಜಿ ಸಚಿವರಾದ ಬಿ.ಎಲ್. ಶಂಕರ್ ಬಹಳ ಸ್ಫುಟವಾಗಿ ಇದನ್ನು ಎತ್ತಿ ತೋರಿಸಿದರು, ಅರ್ಥಗರ್ಭಿತವಾಗಿ ಮಾತನಾಡಿದರು. ಆ ಚರ್ಚೆಯಲ್ಲಿ ಭಾಗವಹಿಸಿದ್ದ ಸೌಜನ್ಯಾಳ ತಂದೆ-ತಾಯಿ-ಮಾವನನ್ನು ಪಾಟೀ ಸವಾಲಿಗೆ ಒಳಪಡಿಸಿದಾಗ ‘ನಮಗೆ ಶ್ರೀಕ್ಷೇತ್ರದ ಮೇಲಾಗಲಿ, ವೀರೇಂದ್ರ ಹೆಗ್ಗಡೆಯವರ ಮೇಲಾಗಲಿ ಯಾವುದೇ ಅನ್ಯಥಾ ಭಾವನೆಯಿಲ್ಲ. ಹೆಗ್ಗಡೆಯವರು ಹೇಳಿದ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದು, ಖುದ್ದು ಹೆಗ್ಗಡೆಯವರೇ ನಮ್ಮೆದುರಲ್ಲೇ ಗೃಹ ಸಚಿವರಿಗೆ ಕರೆ ಮಾಡಿ ತನಿಖೆಗೆ ಆಗ್ರಹಿಸಿದರು’ ಎಂದರು. ಇನ್ನೂ ಗಮನಾರ್ಹ ಅಂಶವೆಂದರೆ ‘ಧರ್ಮಸ್ಥಳಕ್ಕೆ ಸೇರಿದವರೇ ಇದನ್ನು ಮಾಡಿಸಿದ್ದಾರೆ ಎಂದು ಕೆಲವರು ನಮಗೆ ಹೇಳಿಕೊಟ್ಟರು’ ಎಂಬ ಮಾತು ಸೌಜನ್ಯಾಳ ತಾಯಿಯ ಬಾಯಿಂದಲೇ ಹೊರಬಂತು!!

ಇದು ಏನನ್ನು ಸೂಚಿಸುತ್ತದೆ ಹೇಳಿ?

ಒಬ್ಬ ಸಾಮಾನ್ಯ ವ್ಯಕ್ತಿಗೇ ಮಿತ್ರ ಹಾಗೂ ಶತ್ರುಗಳಿರುತ್ತಾರೆ. ಹಾಗಿರುವಾಗ ಧರ್ಮಸ್ಥಳದಂಥ ಬೃಹತ್ ಕ್ಷೇತ್ರವನ್ನು ನಿಭಾಯಿಸುತ್ತಿರುವವರ ಬಗ್ಗೆಯೂ ಅಸಮಾಧಾನ ಹೊಂದಿರುವವರು ಖಂಡಿತ ಇರುತ್ತಾರೆ. ಅಂಥವರು ಸೌಜನ್ಯಾ ಪ್ರಕರಣವನ್ನು ತಮ್ಮ ವೈಯಕ್ತಿಕ ದ್ವೇಷಕ್ಕೆ ಪ್ರತೀಕಾರ ತೆಗೆದುಕೊಳ್ಳಲು, ಕೋಪ-ತಾಪಗಳನ್ನು ಹೊರಹಾಕಲು, ವೀರೇಂದ್ರ ಹೆಗ್ಗಡೆಯವರ ಹಾಗೂ ಶ್ರೀಕ್ಷೇತ್ರದ ಚಾರಿತ್ರ್ಯವಧೆ ಮಾಡಲು ಬಳಸಿಕೊಂಡರು ಎಂಬುದು ಸೌಜನ್ಯಾಳ ತಾಯಿಯ ಮಾತಿನಿಂದ ಪರೋಕ್ಷವಾಗಿ ಸ್ಪಷ್ಟವಾಗಲಿಲ್ಲವೇ? “ಧರ್ಮಸ್ಥಳದ ಬಗ್ಗೆ ನಮಗೆ ಯಾವ ಅನುಮಾನಗಳೂ ಇಲ್ಲ, ಶ್ರೀಕ್ಷೇತ್ರದ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಾವು ಸಹಿಸುವುದಿಲ್ಲ” ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸೌಜನ್ಯಾಳ ಮಾವ ವಿಠ್ಠಲ ಗೌಡ ಕೂಡ ಹೇಳಿದರು. ಆದರೆ, ಪ್ರಾರಂಭದ ಚರ್ಚೆಯಲ್ಲಿ ಪಾಲ್ಗೊಂಡಿದ್ದವರು ಮಾಡಿದ್ದು ಧರ್ಮಸ್ಥಳದ ತೇಜೋವಧೆಯನ್ನೇ ಅಲ್ಲವೇ? ಇನ್ನು ನಿಶ್ಚಲ್ ಹಾಗೂ ಕುಟುಂಬ ವರ್ಗದ ಮೇಲೆ ಅನುಮಾನ ಬರುವಂತೆ ಆರಂಭದಲ್ಲಿ ಹೇಳಿದವರು ಹೆಗ್ಗಡೆಯವರು ಬಿಡುಗಡೆ ಮಾಡಿದ ದಾಖಲೆ ಹೇಳುತ್ತಿರುವ ಸತ್ಯಕ್ಕೆ ಯಾವ ಉತ್ತರ ಕೊಡಬಲ್ಲರು? ಅದಿರಲಿ, ಧರ್ಮಸ್ಥಳದವರು ರಕ್ಷಿಸುತ್ತಿದ್ದಾರೆ ಎಂದು ಟೀಕಾಕಾರರು ಬೊಟ್ಟುಮಾಡುತ್ತಿರುವ ಧೀರಜ್ ಕೆಲ್ಲಾ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಯಾರೆಂದುಕೊಂಡಿರಿ? ಧೀರಜ್ ಧರ್ಮಸ್ಥಳದ ಉದ್ಯೋಗಿಯೊಬ್ಬರ ಮಗನಾಗಿದ್ದರೆ, ಉದಯ್ ಜೈನ್ ಆಟೋ ಚಾಲಕ. ಮಲ್ಲಿಕ್ ಜೈನ್ ಧರ್ಮಸ್ಥಳದ ಒಬ್ಬ ಸಣ್ಣ ಉದ್ಯೋಗಿಯಷ್ಟೆ. ಧರ್ಮಸ್ಥಳದ ಪ್ರತಿಷ್ಠೆಯನ್ನು ಅಪಾಯಕ್ಕೆ ತಳ್ಳಿ ಇವರನ್ನು ರಕ್ಷಿಸುವ ಮೂರ್ಖ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಖಂಡಿತ ಈ ಮೂವರ ಬಗ್ಗೆ ಸ್ಥಳೀಯರಲ್ಲಿ ಫಟಿಂಗರೆಂಬ ಭಾವನೆ ಇದೆ.  ಹಾಗಾಗಿ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಯಿತು. ಹಾಗಂತ ಅವರ ಮೇಲಿನ ಅನುಮಾನಕ್ಕೆ ಹೆಗ್ಗಡೆಯವರನ್ನು ಕಟಕಟೆಗೆ ತಂದು ನಿಲ್ಲಿಸುವುದು ಎಷ್ಟು ಸರಿ? ತಪ್ಪಿತಸ್ಥರು ಯಾರೇ ಇದ್ದರೂ ಪತ್ತೆಹಚ್ಚಿ ಶಿಕ್ಷಿಸಬೇಕೆಂದು ತಮ್ಮ ಎದುರೇ ಗೃಹ ಸಚಿವರಿಗೆ ಹೆಗ್ಗಡೆಯವರು ಕರೆ ಮಾಡಿ ಒತ್ತಾಯಿಸಿದ್ದಾರೆಂದು ಸೌಜನ್ಯಾಳ ಪೋಷಕರೇ ಒಪ್ಪಿಕೊಂಡಿದ್ದರೂ ಚಾರಿತ್ರ್ಯ ವಧೆ ಮಾಡುವ ಪ್ರಯತ್ನವೇಕೆ? ಇನ್ನು ಮಾನಸಿಕ ಅಸ್ವಸ್ಥನಂತೆ ಕಾಣುವ ಆರೋಪಿ ಸಂತೋಷ್ ರಾವ್‌ನನ್ನು ಅಮಾಯಕನೆಂದು ಟೀಕಾಕಾರರು ಯಾವ ಆಧಾರದ ಮೇಲೆ ಸರ್ಟಿಫಿಕೆಟ್ ಕೊಡುತ್ತಿದ್ದಾರೆ? ಆತ ಉಮೇಶ್ ರೆಡ್ಡಿ, ಜೈ ಶಂಕರ್‌ನಂಥ ಮಾನಸಿಕ ರೋಗಿಯೂ ಆಗಿರಬಹುದಲ್ಲವೇ?

ಹಾಗಂತ…

ಶ್ರೀಕ್ಷೇತ್ರದಲ್ಲಿ ನಡೆಯುವುದೆಲ್ಲ ಧರ್ಮಕಾರ್ಯವೇ, ಅಲ್ಲಿ ಯಾವ ಲೋಪಗಳೂ ಇಲ್ಲ ಎಂದು ಖಂಡಿತ ಹೇಳುತ್ತಿಲ್ಲ. ದೇಶದ ಎಲ್ಲಡೆ ಇರುವಂತೆ ಬೆಳ್ತಂಗಡಿ ತಾಲೂಕಿನಲ್ಲೂ ರಿಯಲ್ ಎಸ್ಟೇಟ್ ಮಾಫಿಯಾ ಇದೆ. ಧರ್ಮಸ್ಥಳಕ್ಕೆ ಸೇರಿದ ಕೆಲವರು ಈ ವಿಷಯದಲ್ಲಿ ಅತಿರೇಕ ಎಸಗಿರುವುದು ಖಂಡಿತ ಸುಳ್ಳಲ್ಲ. ಧರ್ಮಸ್ಥಳ ಮಾಡುವ ಒಳ್ಳೆಯ ಕಾರ್ಯಗಳ ಕೀರ್ತಿಯೆಲ್ಲ ಹೆಗ್ಗಡೆಯವರಿಗೆ ಇಡಿಯಾಗಿ ಸಲ್ಲುವಂತೆ, ಕ್ಷೇತ್ರಕ್ಕೆ ಸೇರಿದವರ ಅತಿರೇಕಗಳಿಂದ ಬರುವ ಅಪಕೀರ್ತಿಯನ್ನೂ ಸ್ವೀಕರಿಸಬೇಕಾಗುತ್ತದೆ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಬೆಳ್ತಂಗಡಿ ತಾಲೂಕಿನ ಸ್ಥಳೀಯರ ಸೂಕ್ಷ್ಮಭಾವನೆಗಳ ಬಗ್ಗೆಯೂ ಎಚ್ಚರಿಕೆಯಿಂದಿರಬೇಕಾಗುತ್ತದೆ. ಇನ್ನು ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಲೋಪವಿದೆ ಎಂಬ ಆರೋಪ ತೆಗೆದುಕೊಳ್ಳಿ. ಇವತ್ತು ಯಾವ ಯೋಜನೆ, ವ್ಯವಸ್ಥೆಯಲ್ಲಿ ಲೋಪವಿಲ್ಲ ಹೇಳಿ? ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಜಿಗೆ ಒಂದು ರುಪಾಯಿಯಂತೆ ಕೊಟ್ಟ 30 ಕೆ.ಜಿ. ಅಕ್ಕಿ ಕಾಳಸಂತೆಗೆ ಬರುತ್ತಿಲ್ಲವೆ? ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆಯಲ್ಲೇ ಎಲ್ಲಿಲ್ಲದ ಭ್ರಷ್ಟಾಚಾರ ನಡೆದಿದೆ. 200 ಚಿಲ್ಲರೆ ವರ್ಷಗಳ ಇತಿಹಾಸ ಹೊಂದಿರುವ ಅಮೆರಿಕದ ಪ್ರಜಾಪ್ರಭುತ್ವ, ಐದಾರು ಶತಮಾನಗಳ ಇತಿಹಾಸ ಹೊಂದಿರುವ ಬ್ರಿಟನ್ ಹಾಗೂ 66 ವರ್ಷಗಳಿಂದಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಲೋಪಗಳಿರುವಂತೆ ಧರ್ಮಸ್ಥಳವೂ ಕೆಲವು ಲೋಪಗಳಿಂದ ಹೊರತಾಗಿಲ್ಲ. ಒಂದು ವ್ಯವಸ್ಥೆಯೆಂದರೆ, ಅದರಲ್ಲಿ ಎಲ್ಲ ಥರದ ಜನರೂ ಇರುತ್ತಾರೆ, ಎಲ್ಲ ರೀತಿಯ ದೌರ್ಜನ್ಯಗಳೂ ನಡೆಯುತ್ತವೆ. ಹಾಗಂತ ಹೆಗ್ಗಡೆಯವರು ಪ್ರತಿಯೊಂದು ವಿಚಾರಗಳ ಮೇಲೂ ಖುದ್ದು ನಿಗಾ ಇಡಲು ಸಾಧ್ಯವೆ? ಪ್ರತಿಯೊಂದು ಲೋಪಗಳಿಗೂ ಹೆಗ್ಗಡೆಯವರನ್ನೇ ದೂಷಿಸುವುದು ಅಥವಾ ಕೆಲವೊಂದಿಷ್ಟು ಲೋಪಗಳಿಗಾಗಿ ಇಡೀ ವ್ಯವಸ್ಥೆಯನ್ನೇ ಸಾರಾಸಗಟಾಗಿ ದೂರುವುದು ಸರಿಯೇ? ಎಷ್ಟೋ ಜನ ಮಾಡಬಾರದ ಕೆಲಸ ಮಾಡಿ ಕೊನೆಗೆ ಹೆಗ್ಗಡೆಯವರ ಪಾದಕ್ಕೆ ಬಿದ್ದು ತಪ್ಪಾಯಿತು ಎಂದು ಕೇಳಿಕೊಂಡಿದ್ದಿದೆ. ಇನ್ನು ಮುಂದೆ ಹಾಗೆ ಮಾಡಬೇಡ ಎಂದು ಹೆಗ್ಗಡೆಯವರು ಹಸುವಿನಂತೆ ಕ್ಷಮಿಸಿದ್ದು, ಅದರಿಂದಾಗಿ ಹೆಗ್ಗಡೆಯವರ ಬಗ್ಗೆ ಕೆಲವರು ಅನ್ಯಥಾ ಭಾವಿಸುವಂತಾಗಿದ್ದೂ ಇದೆ.

ಇನ್ನೊಂದು ಸಂಗತಿ ಇದೆ, ಶ್ರೀಕ್ಷೇತ್ರದಂಥ ಬೃಹತ್ ವ್ಯವಸ್ಥೆಯೊಳಗೆ ನಡೆಯುವ ಎಷ್ಟೋ ವಿಚಾರಗಳು ಹೆಗ್ಗಡೆಯವರನ್ನು ತಲುಪುವುದಿಲ್ಲ ಹಾಗೂ ತಲುಪುವಾಗ ಅದು ಬೇರೆಯದೇ ರೂಪ ಪಡೆದಿರುತ್ತವೆ. ತಮಗೆ ತಲುಪಿದ್ದು ವಾಸ್ತವ ಸಂಗತಿಯೇ ಅಲ್ಲವೇ ಎಂದು ಖಚಿತಪಡಿಸಿಕೊಳ್ಳಲು ಹೆಗ್ಗಡೆಯವರ ಸ್ಥಾನದಲ್ಲಿ ಕುಳಿತಿರುವ ಯಾವ ವ್ಯಕ್ತಿಗೂ ಸಾಧ್ಯವಿಲ್ಲ. ಆದರೆ ಅನ್ಯಾಯಕ್ಕೊಳಗಾದವರು ಗಮನಕ್ಕೆ ತಂದಾಗ ಅದಕ್ಕೆ ಹೆಗ್ಗಡೆಯವರು ಸ್ಪಂದಿಸಿ, ತಪ್ಪಿಸಿದ ಅಗಣಿತ ಉದಾಹರಣೆಗಳು ಧರ್ಮಸ್ಥಳದಲ್ಲಿವೆ. ಹೆಗ್ಗಡೆಯವರು ಸಮಾಜ, ಜನರ ಬಗ್ಗೆ ತುಂಬಾ Compassion, ಅನುಕಂಪ, ಕಳಕಳಿ ಇಟ್ಟುಕೊಂಡಿರುವ ವ್ಯಕ್ತಿ. ಗ್ರಾಮಾಭಿವೃದ್ಧಿ ಯೋಜನೆಯಡಿ ಕೊಡುತ್ತಿರುವ ಸಾಲಕ್ಕೆ ವಿಪರೀತ ಬಡ್ಡಿ ಹಾಕಲಾಗುತ್ತಿದೆ ಎಂಬ ಅಂಶವನ್ನು ಟೀಕೆಯ ಅಸ್ತ್ರವಾಗಿಸಿಕೊಳ್ಳುವ ಬದಲು ಹೆಗ್ಗಡೆಯವರ ಗಮನಕ್ಕೆ ತಂದಿದ್ದರೆ ಈ ವೇಳೆಗಾಗಲೇ ಲೋಪವಿದ್ದರೆ ಸರಿಯಾಗಿರುತ್ತಿತ್ತು. ಇವತ್ತು ಧರ್ಮಸ್ಥಳಕ್ಕೆ ಯಾರೇ ಬರಲಿ, ಮಂಜುನಾಥನ ದರ್ಶನದ ಜತೆಗೆ ಹೆಗ್ಗಡೆಯವರನ್ನು ಭೇಟಿಯಾಗುವುದಕ್ಕೂ ಬಯಸುತ್ತಾರೆ. ನಮ್ಮ ಮುಖ್ಯಮಂತ್ರಿಗಳು ಜನತಾದರ್ಶನ ಮಾಡದೇ ಇರಬಹುದು, ಹೆಗ್ಗಡೆಯವರು ಜನತಾದರ್ಶನವನ್ನು ಶಿಸ್ತು, ಶ್ರದ್ಧೆಯಿಂದ ಮಾಡುತ್ತಾರೆ. ಅಪ್ಪ-ಮಕ್ಕಳ ನಡುವೆ ನಡೆಯುವ ವಿವಾದಗಳನ್ನು ಅವರ ಮುಂದೆ ಹೇಳಿಕೊಳ್ಳುತ್ತಾರೆ ಹಾಗೂ ಹೆಗ್ಗಡೆಯವರು ಸ್ಪಂದಿಸುತ್ತಾರೆ. ಹಾಗಿರುವಾಗ ಶ್ರೀಕ್ಷೇತ್ರದ ಯಾವುದೋ ವ್ಯಕ್ತಿಗಳಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೇಕೆ ಹೆಗ್ಗಡೆಯವರ ಬಳಿ ಹೇಳಿಕೊಳ್ಳಬಾರದು? ಹಾಗೆ ಹೇಳಿಕೊಂಡರೂ ತೊಂದರೆ ತಪ್ಪಲಿಲ್ಲ ಎನ್ನುವ ಏಕೈಕ ಉದಾಹರಣೆಯನ್ನು ಟೀಕಾಕಾರರು ಕೊಡಬಲ್ಲರೇ? ಒಂದು ಲೋಪವನ್ನು ಎತ್ತಿತೋರುವ ಮೊದಲು ಆ ವ್ಯಕ್ತಿಯಿಂದ ಸಮಾಜಕ್ಕೆ ಆಗುತ್ತಿರುವ ಲಾಭವನ್ನು ಅಳೆದು ತೂಗಬೇಕು.

ವೀರೇಂದ್ರ ಹೆಗ್ಗಡೆಯವರು ಜನಿಸಿದ್ದು 1948, ನವೆಂಬರ್ 25ರಂದು. ಧರ್ಮಸ್ಥಳದ ಚುಕ್ಕಾಣಿ ಹಿಡಿದಿದ್ದು 1968ರಲ್ಲಿ. ತಂದೆ ರತ್ನವರ್ಮ ಹೆಗ್ಗಡೆಯವರ ಅಕಾಲಿಕ ನಿಧನ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಅತಿ ಭಾರವಾದ ಜವಾಬ್ದಾರಿಯನ್ನು ಹೆಗಲಿಗೆ ಹಾಕಿತು. ಒಬ್ಬ ವ್ಯಕ್ತಿಯ ನಿಜವಾದ ಗುಣವನ್ನು ಅರಿಯಬೇಕಾದರೆ ಆತನಿಗೆ ಅಧಿಕಾರ ಕೊಟ್ಟು ನೋಡಬೇಕು ಎಂಬ ಮಾತಿದೆ. ಚುನಾವಣೆಗೆ ಮೊದಲು ನಮ್ಮ ಕೈ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಮೇಲೆ ನಮ್ಮ ವಿಶ್ವಾಸವನ್ನು ಶೇಕ್ ಮಾಡುವ ರಾಜಕಾರಣಿಗಳನ್ನು ನೋಡಿರುವ ನಮಗೆ ಅಧಿಕಾರದಿಂದ ಬರುವ ಮದದ ಪರಿಚಯ ಚೆನ್ನಾಗಿಯೇ ಆಗಿದೆ. ಹಾಗಿರುವಾಗ ಇಪ್ಪತ್ತರ ಕಿರಿ ವಯಸ್ಸಿನಲ್ಲಿ ಪಟ್ಟಕ್ಕೇರಿದ ಹೆಗ್ಗಡೆಯವರೂ ತಪ್ಪೆಸಗಬಹುದಾದ, ದರ್ಪದಲ್ಲಿ ಅಚಾತುರ್ಯಗಳಿಗೆ ಅವಕಾಶವೀಯಬಹುದಾದ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಹಾಗಾಗಲಿಲ್ಲ.

ಅದಕ್ಕೆ ಬಹುಶಃ ರತ್ನವರ್ಮ ಹೆಗ್ಗಡೆಯವರೇ ಕಾರಣವಿದ್ದಿರಬಹುದು.

ಯಾವುದಾದರೂ ಹುಡುಗನಿಗೆ ಅಪ್ಪ-ಅಮ್ಮ ಯಾರೂ ಇಲ್ಲ, ಇದ್ದರೂ ತಿನ್ನುವುದಕ್ಕೇ ಗತಿಯಿಲ್ಲ ಎಂದಾಗಿದ್ದರೆ ಆತನನ್ನು ಸಿದ್ಧಗಂಗಾ ಮಠಕ್ಕೆ ಬಿಟ್ಟು ಬನ್ನಿ, ಶ್ರೀ ಶಿವಕುಮಾರ ಸ್ವಾಮೀಜಿಗಳ ಸುಪರ್ದಿಗೆ ವಹಿಸಿ ಬಿಡಿ ಉದ್ಧಾರವಾಗುತ್ತಾನೆ ಎನ್ನುವುದನ್ನು ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಕಾಣಬಹುದು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಉಚಿತ ಅನ್ನ ಹಾಗೂ ಅಕ್ಷರ ದಾಸೋಹವೆಂದ ಕೂಡಲೇ ನೆನಪಿಗೆ ಬರುತ್ತಿದ್ದುದು ಉಜಿರೆಯ ರತ್ನಮಾನಸ ಹಾಗೂ ಸಿದ್ಧವನ ಗುರುಕುಲ. ಎಷ್ಟೋ ಬಡಮಕ್ಕಳು ಬರಿಗೈಲಿ ಬಂದು ಪದವಿ ಸರ್ಟಿಫಿಕೆಟ್‌ನೊಂದಿಗೆ ಇಲ್ಲಿಂದ ಹೊರ ಹೋಗಿದ್ದಾರೆ. ಇವು ರತ್ನವರ್ಮ ಹೆಗ್ಗಡೆಯವರು ಬಡಮಕ್ಕಳಿಗಾಗಿಯೇ ಕಟ್ಟಿಸಿದ ಗಂಜಿಕೇಂದ್ರವೆಂದರೂ ತಪ್ಪಾಗದು. ಬಹಳ ಇತ್ತೀಚಿನವರೆಗೂ ಒಂದೇ ಪ್ಯಾಂಟು ವಾರದ 6 ದಿನವೂ ಕಾಲೇಜಿನ ಬೇರೆ ಬೇರೆ ಕ್ಲಾಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೆಂದರೆ ಅದು ಸಿದ್ಧವನದ ಯಾವುದೋ ಒಬ್ಬ ವಿದ್ಯಾರ್ಥಿಯದ್ದು, ಉಳಿದವರು ಸರದಿಯ ಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂದು ಆಡಿಕೊಳ್ಳುವ ಸನ್ನಿವೇಶವಿತ್ತು. ಅಂಥ ಬಡ ಹಿನ್ನೆಲೆಯಿಂದ ಬಂದವರೇ ಸಿದ್ಧವನದಲ್ಲಿರುತ್ತಿದ್ದರು. ತನ್ನ ಮಗನಿಗೂ ಪರಿಸ್ಥಿತಿಯ ಪರಿಚಯವಾಗಬೇಕು, ಬಡವರ ನೋವು ಅರ್ಥವಾಗಬೇಕು, ಕಷ್ಟದಲ್ಲಿ ಜೀವನ ನಡೆಸುವುದು, ಕಷ್ಟಗಳ ನಡುವೆಯೂ ಕಲಿತು ಮೇಲೆ ಬರುವುದನ್ನು ಕಲಿಸಬೇಕು ಎಂಬ ಆಶಯದಿಂದ ರತ್ನವರ್ಮ ಹೆಗ್ಗಡೆಯವರು ವೀರೇಂದ್ರ ಹೆಗ್ಗಡೆಯವರನ್ನೂ ಸಿದ್ಧವನಕ್ಕೆ ಸೇರಿಸಿದ್ದರು. ಹಾಗೆ ಸೇರಿಸಿದ ಕಾರಣದಿಂದಲೋ ಏನೋ ಹೆಗ್ಗಡೆಯವರು ಒಬ್ಬ ಟಿಪಿಕಲ್ ಸ್ವಾಮಿ ಅಥವಾ ಧರ್ಮಾಧಿಕಾರಿಯಾಗುವ ಬದಲು ಪಟ್ಟಕ್ಕೇರಿದ ಮೇಲೆ ಅವರಲ್ಲಿ ಸಮಾಜ ಸುಧಾರಣೆಯ ತುಡಿತ ಕಾಣತೊಡಗಿತು. ಹಾಗಾಗಿಯೇ 1995ರಲ್ಲಿ ಬೆಳ್ತಂಗಡಿ ತಾಲೂಕಿನಿಂದ ಮದ್ಯಪಾನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಹೆಗ್ಗಡೆಯವರು ಮುಂದಾದರು. ‘ಕಳಿ, ಗಂಗಸರ ಬುಡ್ಕ, ತೆಳಿಗಂಜಿ ಪರ್ಕ’ (ಹೆಂಡ, ಸಾರಾಯಿ ಬಿಡೋಣ: ತಿಳಿ ಗಂಜಿ ಕುಡಿಯೋಣ) ಎಂಬ ಅವರ ಸ್ಲೋಗನ್‌ಗಳು ಭಿತ್ತಿಪತ್ರಗಳಿಗೆ ಸೀಮಿತವಾಗಲಿಲ್ಲ. ಮನೆ ಮನೆಗಳಿಗೆ ಹೋಗಿ ಮದ್ಯವ್ಯಸನಿ ಕುಟುಂಬಗಳ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಆರಂಭಿಸಿದರು. ಮೊದಲು ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ನಂತರ ಮದ್ಯಪಾನ ನಿಲ್ಲಿಸಿ ಎಂದು ತಿಳಿಹೇಳುವ ಕೆಲಸ ಮಾಡಿದರು. ಸಾಮಾನ್ಯವಾಗಿ ಮದ್ಯಪಾನ ವ್ಯಸನಗಳು ಕಾಡುವುದು ಸಣ್ಣ ಹಾಗೂ ಅರೆ ಕೃಷಿಕರು, ಭೂರಹಿತ ಕಾರ್ಮಿಕರನ್ನೇ. ಹಾಗಾಗಿ ಇಂಥ ದುರ್ಬಲ ವರ್ಗಗಳ ಶ್ರೇಯೋಭಿವೃದ್ಧಿಗಾಗಿ 1996ರಲ್ಲಿ ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ’ (SKDRDP)ಯನ್ನು ಆರಂಭಿಸಿದರು. ‘ಪ್ರಗತಿ ನಿಧಿ’ ಎಂಬ ಕಾರ್ಯಕ್ರಮದಡಿ ಕೃಷಿಕರು ಹಾಗೂ ಅಗತ್ಯವಿರುವವರಿಗೆ ಯಾವುದೇ ತಲೆನೋವು ಕೊಡದೆ ಸಾಲ ನೀಡಲು ಆರಂಭಿಸಿದರು. ‘ಸ್ವ-ಸಹಾಯ’ ಗುಂಪುಗಳನ್ನು ಆರಂಭಿಸಿ ಅಂಥ ಗುಂಪುಗಳೂ ಸಾಲ ಪಡೆದುಕೊಳ್ಳಬಹುದಾದ ಅವಕಾಶ ಕಲ್ಪಿಸಿದರು. ಈ ಯೋಜನೆ ಹಾಗೂ ಸ್ವ-ಸಹಾಯ ಪದ್ಧತಿಯಿಂದಾಗಿ ಎಷ್ಟೋ ಬಡವರು ಸ್ವಂತ ಗೂಡು ಕಟ್ಟಿಕೊಂಡಿದ್ದಾರೆ, ಅವರ ಮಕ್ಕಳು ಶಾಲೆಯ ಮುಖ ನೋಡುತ್ತಿದ್ದಾರೆ, ಕುಡಿತ ಬಿಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಟೀಕಿಸುವವರು ಈ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಸೌಜನ್ಯಾಳಿಗೆ ನ್ಯಾಯ ಕೊಡಿಸುವ ಆವೇಶದಲ್ಲಿ ಆ ಪ್ರಕರಣವನ್ನು ಶ್ರೀಕ್ಷೇತ್ರ ಹಾಗೂ ಅದರ ಧರ್ಮಾಧಿಕಾರಿಯವರ ತೇಜೋವಧೆ ಮಾಡುವ ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಬೇಡ. ಅಸಾರಾಮ್ ಬಾಪು, ನಿತ್ಯಾನಂದನಂಥವರು ಜನರ ವಿಶ್ವಾಸ, ನಂಬಿಕೆಗೆ ಖಂಡಿತ ಕೊಡಲಿ ಏಟು ಹಾಕಿದ್ದಾರೆ. ಹಾಗಂತ ಎಲ್ಲರನ್ನೂ ಅಪನಂಬಿಕೆಯಿಂದ ನೋಡುವುದು, ಆ ಮೂಲಕ ಜನರ ನಂಬಿಕೆ, ವಿಶ್ವಾಸವನ್ನೇ ಹಾಳುಗೆಡವುದು ಇಂಥ ಪ್ರಯತ್ನಗಳಿಂದಾಗಿ ಹಿನ್ನಡೆಯಾಗುವುದು ಹಿಂದು ಧರ್ಮಕ್ಕೇ ಎಂಬುದನ್ನು ಭಗವಾಧ್ವಜ ಹಿಡಿದು ಬೀದಿಗಿಳಿದಿದ್ದವರು ಅರ್ಥಮಾಡಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಅಲ್ಪಸಂಖ್ಯಾತ ಕೋಮಿಗೆ ಸೇರಿದ ಕೆ.ಜೆ. ಜಾರ್ಜ್ ಗೃಹ ಸಚಿವರಾಗಿದ್ದಾರೆ. ಖಂಡಿತ ಅವರ ಬಳಿ ನಿಷ್ಪಕ್ಷಪಾತ ತನಿಖೆ, ನ್ಯಾಯ ಕೇಳೋಣ. ಹಾಲಿ ಸಿಐಡಿ ತನಿಖೆಯ ಪ್ರಾರಂಭಿಕ ಸಂಕೇತಗಳು ಸಂತೋಷ್ ರಾವ್‌ನತ್ತಲೇ ಬೆರಳು ತೋರುತ್ತಿವೆ. ವರದಿ ಹೊರಬಿದ್ದ ನಂತರವೂ ಅನುಮಾನವಿದ್ದರೆ ಸಿಬಿಐ ತನಿಖೆಗೆ ಒತ್ತಾಯಿಸೋಣ. ಎಷ್ಟೋ ಸಲ ಮಕ್ಕಳು ಮಾಡಿದ ತಪ್ಪಿಗೆ ಅಪ್ಪ-ಅಮ್ಮ ತಲೆ ಕೊಡಬೇಕಾಗುತ್ತದೆ. ಒಂದು ವೇಳೆ ನಿಶ್ಚಲ್ ತಪ್ಪಿತಸ್ಥನೆಂದು ಸಾಬೀತಾದರೆ ಧರ್ಮಸ್ಥಳದಿಂದ ಹೊಣೆಗಾರಿಕೆ ಕೇಳೋಣ. ಆದರೆ ಈಗ್ಗೆ ಹದಿನೈದು ದಿನಗಳ ಹಿಂದಷ್ಟೇ ಬೀದರ್‌ನ ಬಿಜೆಪಿ ಕಾರ್ಯದರ್ಶಿ ಬಾಬುವಾಲಿಯನ್ನು ಬೆಳಗ್ಗಿನಿಂದ ಸಂಜೆಯವರೆಗೂ ಬದ್ನಾಮಿ ಮಾಡಿದ ಮಾಧ್ಯಮಗಳು ಮರುದಿನ ಸಣ್ಣ ಕ್ಷಮೆ ಕೇಳಿದ ಘಟನೆಯನ್ನು ಮರೆಯಬೇಡಿ. ಹಾಗಾಗಿ ಆಧಾರ ರಹಿತ ಆರೋಪಗಳ ಮೂಲಕ ಶ್ರೀಕ್ಷೇತ್ರದ ಮೇಲಿನ ನಂಬಿಕೆ, ವಿಶ್ವಾಸ ಒಡೆಯುವುದು ಬೇಡ.

ಅಂಥ ದೇದೀಪ್ಯಮಾನನಾದ ಸೂರ್ಯನಿಗೇ ಗ್ರಹಣ ಹಿಡಿಯುತ್ತದೆ. ಇನ್ನು ಸಾಮಾನ್ಯ ಮನುಷ್ಯರು ಯಾವ ಲೆಕ್ಕ? ಹಾಗಾಗಿ ಶ್ರೀ ವೀರೇಂದ್ರ ಹೆಗ್ಗಡೆಯವರು ಈ ಘಟನೆಯಿಂದ ಅಧೀರರಾಗದೆ, ಆದರೆ ಮುಂದೆ ಎಚ್ಚರಿಕೆಯಿಂದ ತಮ್ಮ ಸಮಾಜಸೇವೆಯನ್ನು ಎಂದಿನಂತೆ ಮುಂದುವರಿಸಿ ಕೊಂಡು ಹೋಗುವಂತಾಗಲಿ.

62 Responses to “ಕುಮಾರಿ ಸೌಜನ್ಯಾಳ ಅಮಾನುಷ ಕೊಲೆಗೆ ನ್ಯಾಯ ಸಿಗಲೇಬೇಕು, ಆದರೆ..?”

  1. rameshkumar says:

    dont stop when u loose we,r with u

  2. Ananth Hegde says:

    Good article!

  3. madhusudana y n says:

    As said by someone on news channel, I wish people who allege someone, should show some sort of proof for their allegation. But people who are alleging, are alleging based on ‘anthe-kanthe’s.
    In the same way, if there is an allegation on someone, the rest of the people should let the investigation take place. But people who are supporting alleged person, are claiming with no proof that the hegde is innocent. It is understandable that it hurts you if your closed one’s are alleged for murder. But that doesn’t mean you give judgement by yourself that he is innocent. Let the law take action.

    Btw, your article also should have done certain background investigation for the possible reasons why so many murders(i heard 450) happened in dharmastala, without culprit being found ???

    Hegde is known as dharmadhikaari, and almost like the supreme for dharmastala. What is the action he has taken for the welfare of innocents girls who are getting killed mysteriously ?

  4. Kiran says:

    sir… howdu sir, elli olledu irutto alli kettuddu iratte.. saakshi (proof) ilde obrunna dushane maadodu , avr tejo vadhe maadodu khandita tappu.. ivattin media davr bagge namigantu nambike annode hortogide, moor kotre sose kade, aar kotre atte kade anno taradoru.. nijaamsha irodna helode illa, adbittu bed’de iro bogas ella heltare.. saaladakke dudd iddorella(politians) avrde ondhu channel anta maadkondu, swanta battangi tana maadta idare.. avr tappugalna media davaru torsodu bittu avre great anno tara advtmnt kodatare. ivugalige THE END annode ilwa ??

  5. Suresh kumar says:

    Whatever may come the people of the nation are with the great man his holiness Dr Veerendra Heggade….Namo Manjunatha.

  6. basava ratkal says:

    s pratap sir ur rit…

  7. rakesh poojary says:

    dear all…

    my question is if hegde is innocent…or he dont have aware of rape in dharmastala.. then what do u mean by Dharmadhikari?
    since 20 yrs nearly more than 100 fir registerd as rape and murder. if hegde is failed to trace out this issue then he dnt have right to continue his post. he dont have righr to give judgemnt to others claim. fist he have ro clean his area….

  8. Mahantesh Vakkund says:

    Good One ,,,,
    Kaal kaalakke namm janarannu heege eccharisadiddalli nammavarella swabhimaana hagu swa pradne maretu tamma budakke taave kodali etu hodakollodu nischita,,,,

  9. manju says:

    Hi,
    Pratap , we need more people like you in our country . The thoughts which you put in our minds is just amazing.I’m following you and your articles since i was in 9th-10th standard. Currently Im a software engineer and the articles which you have written believe it or not has a tremendous effect on me, what i am and what i do..!! Hats off.!! 🙂

  10. ಹಿಂದೂ ಧರ್ಮ ಮುಕ್ಕಾಲುಭಾಗ ಹಾಳಾಗತ್ತಿರುವದು ಹಿಂದೂ ಧರ್ಮದ ಗಂಧ ಅರಿಯದ ಹಿಂದೂಗಳಿಂದಲೇ.ಚರ್ಚಮೇಲೆ ಅಥವಾ ಮಸೀದೆಮೇಲೆ ಇಂಥಹ ಮಸಿ ಹಚ್ಚಾಕ ಯಾರ ಹತ್ತಿರ ಧೈರ್ಯ ಇದೆ ಹೇಳಿ ಕಾರಣ ಆ ಧರ್ಮದಲಿರುವ ಒಗ್ಗಟ್ಟು.ಅಂಥಹ ಗಟ್ಟಿತನ ಇರದ ಧರ್ಮ ಹಿಂದೂ ಧರ್ಮ ಎಂದರೆ ತಪ್ಪಾಗಲಾರದು ಕಾರಣ ಮನೆ ಬೆಂಕಿ ಆರಿದಮ್ಯಾಗ ಹೊರಗ ಬರು ಜನ ಹಿಂದೂಗಳು.

    ಚೀನಾ ದೇಶ್ಯಾನ ಇಡೀ ಜಗತ್ ನಂಬುವದಿಲ್ ಅಂದಮ್ಯಾಗ ಆ ದೇಶದ ನಿಯಮನ ಚೆಂದೆಂದು ಹೋರಾಡುವವರು ಹಿಂದೂಗಳೇ ಅಲ್ಲ. ವಾಸ್ತವ ಹೀಗಿರುವಾಗ ಪವಿತ್ರವಾದ ಜಾಗದಾಗ ಕಸ ಚೆಲ್ಲಿ ಕೈತೊಳ್ಕೋನಾಕ ಹೊಂಟವರ ಬಂಡ ಬಾಯಿ ನಂಬವದಿರಲಿ ಮುಚ್ಚವದು ಆ ದೇವರಿಗೂ ಅಸಾದ್ಯ.

    ಕಾಂಗ್ರೆಸ್ ಗಿಡದ ಕಸ ಸುಟ್ಟಾಗ ಬರವಂತಹ ಹೊಗೆ ಕೆಂಡ ಇಲ್ಲದ ಬೂದಿಯಂತೆ ಅಂದ್ರೆ ಸುಳ್ಳಿನ ಹೊಗೆ ಗಾಳ್ಯಗ ಬೇಗ ಹರಡಿಬಿಡುವದು. ಸತ್ಯ ಕೆಂಡದಾಗ ಕೈ ಇಟ್ಟಮ್ಯಾಗ ಗೊತ್ತಾಗುವದು.

    ಸತ್ಯವಾದ ದೇಗುಲದಮ್ಯಾಗ ಗೂಬಿಕುಂದರ್ಸಾಕ ಹೊಂಟವರ ಮನೆಮ್ಯಾಗ ಗೂಬಿ ಬಂದು ಕೂಗಿದರ ಎಲ್ಲರದೂ ಅಂತ್ಯ.
    ಸುಳ್ಳು ಆಪಾದನೆ ಮಾಡುವವರು ಸ್ವತಃ ಗೂಬಿ ಕರೆಯಾಕತ್ತಾರಂದ್ರ ಅವರ ಅವದಿ ಮುಗ್ಯಾಕ ಬಂದೈತೀ ಅಂತ.

    ಹಿಂದೂ ಧರ್ಮ ಆಲದ ಮರದಂಗ್ಹ ಹಿಂಗ್ಹಾಗಿ ಮರದ ಬಡ್ಡಿ ಅಗಿಯುವದು ಕಡಲೆ ತಿಂದಷ್ಟು ಸುಲಭವಲ್ಲ.ಒಂದು ಟೊಂಗಿ ಕಟ್ಟಮಾಡುವದರ ಒಳಗ ಮತ್ತೊಂದು ಚಿಗಿಯುತ್ತಿರತ್ತ. ಭಯಬೇಡಿ ಏನೂ ಆಗದು ಪವಿತ್ರ ಧರ್ಮಸ್ಥಳಕ್ಕೆ ಮತ್ತು ಧರ್ಮಾದೀಕಾರಿಗಳಿಗೂ.

    ಬುದ್ದು.

  11. jp says:

    hello sir,

    very good article… i ws expecting this article from u.

    Jp
    Engineer
    S.v. Gurukula old student

  12. sunil says:

    kanare kandaru parambarisi nodu…………………………………………………………………………….

  13. venkat says:

    super……………….!ಹೆಗ್ಗಡೆ is great person

  14. Deepak says:

    hi sir
    u have done a great job,got to know about so many things which i haven’t aware of.you have your own rights to talk and even me also have the same.but in your article ಕುಮಾರಿ ಸೌಜನ್ಯಾಳ ಅಮಾನುಷ ಕೊಲೆಗೆ ನ್ಯಾಯ ಸಿಗಲೇಬೇಕು, ಆದರೆ..,you are giving hype to dr.verebdra heggade,he is just a ordinary human being with a title card of ”dharmasthala dharmadhikari” he might have done so many good things and it doesn’t mean that he or his family will not commit to any mistakes.Truth can’t be hidden for too long.it may comes for/against hegde ji.whatever it may be justice should be done for sowjany’s family.better you change your article name because i personally feels it doesn’t suits….

  15. ranjitha says:

    thumba arthavathadha baraha

  16. Sudhindra says:

    Good to see your valuable comments on the article… but people are taking in to another route that is hurting a lot ……it’s unfortunate…

  17. Vivek Achar says:

    Nice one…

    Please give facbook liking option on your website. So that such articles can be shared with FB community easily rather than copy the URL and paste.

  18. anvith n kulkarni says:

    its just the hatred that is playing in the minds of few activists but in our country everything takes form of complicated controversy common man is losing his conscience rapidly and also fore thinking ability before accusing somebody every step a movement takes it must be re thought before moving forward hope people understand this

  19. harishkumar madhyastha says:

    Yes, It is utter non sense to link Shri Dharmadhikari to this rape and murder case. Those ಧೀರಜ್ ಕೆಲ್ಲಾ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ may belongs to Jain community in which Dharmadhikari also belongs to Jain community. Is is fare to conect two persons who belobgs to same community. It is like connceting orange and apple. Utter shameless.
    However, dharmasthala is dharmasthala. Epitome of Seva.

  20. prashanth says:

    ಲೇಖನ ಸೌಜನ್ಯ ಹಾಗು ಹೆಗ್ಗಡೆಯವರ ಬಗ್ಗೆ ಅಳೆದು ತೂಗಿ ಬರೆದಂತಿದೆ. ಸೌಜನ್ಯ ಪ್ರಕರಣದಲ್ಲಿ ಆರೋಪಿ ಸಂತೋಷ್ ಆಗಲಿ ಅಥವಾ ಇನ್ನಾರೇ ಆಗಿದ್ದರೂ ಆಕೆ ಸಾಯುವಾಗ ಅನುಭವಿಸಿದ ಹಾಗು ಆಕೆಯ ಕುಟುಂಬ ಈಗ ಅನುಭವಿಸುತ್ತಿರುವ ನೊವು ಎಳ್ಳಷ್ಟೂ ಕಡಿಮೆಯಾಗುವುದಿಲ್ಲ. ಸೌಜನ್ಯಳ ಸಾವು ಅನುಮಾನ ತರಿಸುವ ರೀತಿಯಲ್ಲಿದ್ದದ್ದಕ್ಕೇನೋ ಬಹುಷಃ ಅದು ಹೆಗ್ಗಡೆಯವರ ಕುಟುಂಬ ಸದಸ್ಯರಿಗೆ ತಳುಕು ಹಾಕುವಂತಾಗಿದೆ. ಹೆಗ್ಗಡೆಯವರಲ್ಲಿ ರಾಜ್ಯದ ಜನತೆ ದೈವ ಭಾವನೆಯನ್ನೊಂದಿರುವುದರಲ್ಲಿ ಎರಡು ಮಾತಿಲ್ಲ. ಆದರೂ ಸೌಜನ್ಯಳಿಗಾಗಿ ಹೆಗ್ಗಡೆಯವರು ಈ ನೋವನ್ನು ಸಹಿಸಿಕೊಂಡು ತನಿಖೆಗೆ ಸಹಕರಿಸಲಿ. ಆದರೆ ತನಿಖಾ ವರದಿ ಬರುವ ಮುಂಚೆಯೇ ಹೆಗ್ಗಡೆಯವರಿಗೆ ಅವಮಾನವಾಗಿದೆ ಎಂದು ವಾದ ಬೆಳೆಸುವ, ಹೋರಾಟಕ್ಕಿಳಿಯುವ ಮಂದಿ ಸೌಜನ್ಯ ಸಾವು ಇಡೀ ಧರ್ಮಸ್ಥಳಕ್ಕೆ ಆದ ಅವಮಾನ ಎಂದು ತಿಳಿದು ಉನ್ನತ ಮಟ್ಟದ ತನಿಖೆ ಆಗುವವರೆಗೂ ಕಾಯಬೇಕು. ತನಿಖೆಯಲ್ಲಿ ಹೆಗ್ಗಡೆ ಕುಟುಂಬಸ್ಥರ ತಪ್ಪಿಲ್ಲದಿದ್ದರೆ ಇದನ್ನು ಹಬ್ಬಿಸಿದವರಿಗೂ ಶಿಕ್ಷೆಯಾಗಲಿ.

  21. Girish says:

    Very very careful words thank u

  22. Adiga says:

    HI Prathap,
    I totally agree with you . Some people want to shake the people trust on Dhrmastala, for that they are using Sauganyas name. whole Hinduism stands on trust, if u shake that trust its easy to brake the Hindu dharma . Darmastala is pilot project for them.
    But people who want to brake Hindu Dharma they dont know that ,this Dharma is not only a dharam its way of life, how can you shake any one way of life?

    Regards
    Adiga

  23. NAGARAJ SINDAGERI says:

    super article sir….

  24. suvarna says:

    ಅರ್ಥಗರ್ಭಿತ ಲೇಖನ

  25. Prathap says:

    Sir virendra hegadyavare nayya sigbekanta heluva nivu horatake bandu sowjanya sistrge nayya siguvahage madi bani.nivu horatake bandare horatake ondu sakthi bandahage

  26. sathish andinje says:

    balanced article.

  27. Prathap says:

    Tappu yar madidaru gotila .tapu yare madidaru yelarigu onde nayya aglebeku badavane agali sirivantane agali tapu tappe. Ondu tahi ondu makkalanu sakudake yestu kasta padtale yestu novana anubavisatale .ega a tahi ge a novige bele yelide .kanniralle jivana nedesutiro aa sowjanya sistrna tahiya horatake nayya sigali.

  28. Ajay Kumar G says:

    Hello Pratap,

    I completely agree with you. The thing is the society jumps into conclusion very soon because of the happenings around us.

    Take an example of Swamiji. Before, when I was a small kid (now I am 23), I used to hear my parents and others speaking of many swamijis and they used to treat them as gods. Because of the news related to one or two Swamijis involving in “Samaja Ghatuka Kriya”, people are losing faith in all the swamijis.

    In a similar way, even though certain people will be knowing that their deeds are wrong, they do it because of some pressures. For example, during elections, the voter will be knowing that the person who is contesting is not the eligible candidate, still because of his personal problems or for the greed of some worldly pleasures, they vote the wrong candidate. At that moment, they may feel that they are profited by this, but, people are forgetting that in long run, they are not really in profit but in loss.

    I hope that every person should be a true patriot first. And humanity should be his principle of life. Then this country and by large this world shall prosper and peace is established automatically. This is just my opinion.

  29. yathish says:

    ನಿಮ್ಮ ಲೇಖನ ಓದಿದ ಮೇಲೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದಂತಾಗಿದೆ. ಪ್ರತಾಪರೆ ನೀವು ಬರೆದಿರುವ ಪ್ರತಿಯೊಂದು ವಾಕ್ಯವನ್ನು ಜನ ಓದಬೇಕು. ಹೋರಾಟದ ಗುಂಗಿನಲ್ಲಿರುವ ಜನರನ್ನು ಯಾವುದೋ ಅದೃಶ್ಯ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಂತು ಸತ್ಯ

  30. harish says:

    very nice artical…

  31. praveen says:

    pakkad manege benki biddag arisodu bittu adar pakkad mane docho kelasa madtidare tikakararu.ivaru samajakke kalanka .thank you pratap anna .

  32. Guest says:

    Obviously you have the knack of mending the facts to suit your argument. Even though you have strongly pitched for VH, you do not have any facts to back it up. You have written a lot about Hegde and SDM as if public is ignorant about them, but how does it prove Nischal is innocent ?

    Your only argument is, Hegde showed some papers proving his relative was not in town on that day !
    Well isn’t it a classic technique used by all rich and powerful ? We have grown up reading and watching movies which have again and again used this ploy to prove someone innocent ?
    Have you seen those documents? You go on lengths to prove Tippu sultan indeed massacred and converted loads of Hindus to Islam, have you investigated more than what you saw on Television in Saujanya’s case?

    However great Veerendra Hegde could be, those qualities can not pass on to his nephew! Doesn’t it indirectly pass on the undue goodwill ,VH has gathered over the years, to his nephew ?

    Well it might be the case, you have to return some favors to Veerendra Hegde or your effort will be appreciated by him in some way !

    P S:- expecting some nasty comments from ignorant followers of yours

  33. Mallinath says:

    Excellent article by u, go ahead, wish u a bright future

  34. UMESH says:

    Vegy Good Article

  35. Marulu Siddesha says:

    Pratap, i expected your article on this. The Guilty should be punished. You’ve written in every aspects and anti-hindu elements are making these kind of allegations on Dharmastala and SKDRDP as well as Shree Virendra Hegde. The great medias also misleading the society.I hope truth will come out. But i do believe in Dharmastala and Hegade.

  36. guna says:

    100% incorrect. nimma baraha satyakke dooravaddu

  37. GANESH says:

    ಜೈ ಪ್ರತಾಪ್ ಸಿಂಹರವರೇ…

    ಚಿಕ್ಕ ವಯಸ್ಸಿನಿಂದಲೇ ನಿಮ್ಮ ಲೇಖನವನ್ನು ಓದುವುದೆಂದರೆ ನನಗೆ ಎಲ್ಲಿಲ್ಲಾದ ಆಸಕ್ತಿ,ಸಾಲದೆಂಬುದಕ್ಕೆ ನಿಮ್ಮ ಪುಸ್ತಕವನ್ನು ಬರೀ ಲೈಬ್ರೇರಿ ಅಥವಾ ಪೇಪರ್ ನಲ್ಲಿ ಮಾತ್ರ ಓದಿ ಸಾಕಾಗದೇ ನಿಮ್ಮ ಲೇಖನದ ಕೆಲವೊಂದು ಪುಸ್ತಕವನ್ನು ಖರೀದಿ ಮಾಡಿ ಓದುತ್ತಿದ್ದೇನೆ ಯಾಕೆಂದರೆ ನಿಮ್ಮ ಲೇಕನದಲ್ಲಿ ಏನೋ ಸಿಗುತ್ತೆ ಅನ್ನೋ ಉದ್ದೇಶದಿಂದ BUT ಇವತ್ತು ನಿಮ್ಮ ಲೇಖನ ಓದಿ ನಿಜವಾಗಿಯೂ ತುಂಬಾನೆ ನಿರಾಶೆ ಆಗುತ್ತಿದೆ! ಒಬ್ಬ ಸಾಹಿತಿಗೆ ಸಾಹಿತ್ಯವನ್ನು ರಚಿಸಿ ಗೊತ್ತಿದೇ ಹೊರತು ತನ್ನ ನಿಜ ಜೀವನದಲ್ಲಿ ಅಳವಡಿಸಿ ಅಥವಾ ಅನುಭವಿಸಿ ಗೊತ್ತಿಲ್ಲ! ಇಷ್ಟಕ್ಕು ಸೌಜನ್ಯ ಪ್ರಕರಣದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವಿರೇಂದ್ರ ಹೆಗ್ಗಡೆಯವರಕುಟುಂಬ ತಪ್ಪಿತಸ್ಥರಲ್ಲ ಅಂಥಾ ಹೇಳೊಕೆ ನಾವ್ಯಾರು?ಧರ್ಮಸ್ಥಳದ ಒಳ್ಲೇಯ ಕಾರ್ಯಕ್ರಮವನ್ನು ಮಾತ್ರ ನಾವು ನೋಡುತ್ತೇವೆ ವಿನ: ನಡೆಯುವ ಯಾವುದೇ ದೌರ್ಜನ್ಯ ಅಥವಾ ಅನ್ಯಾಯದ ಬಗ್ಗೆ ಯಾರು ಮಾತನಾಡಲ್ಲ ಯಾಕೆಂದರೆ ನಾವು ಎಷ್ಟಾದರೂ ಬೇರೆಕಡೆ ಇರುವವರು,ನಿಜವಾದ ನೋವು ಇರೋದು ಅಲ್ಲಿನ ವಾಸಿಗಳಿಗೆ ಮಾತ್ರ ಗೊತ್ತಿರದೋ..So ದಯವಿಟ್ಟು ಜನರು ಹೋರಾಟ ಮಾಡುತ್ತಿದ್ದಾರೆ ನ್ಯಾಯ ಯಾವ ರೀತಿ ಇರುತ್ತೆ ಅನ್ನೊದನ್ನ ಕಾದು ನೋಡೋಣ ನಿಮ್ಮಂತವರ ಪ್ರಭಾವ ಬೀಳುವ ಲೇಖನಗಾರರು ಈ ರೀತಿ Suddenly Decission ಕೊಡುತ್ತಿದ್ದಿರಿ ಅಂದ್ರೆ ನಿಜಕ್ಕೂ ಇದು ತುಂಬಾ ಬೇಜಾರದ ಸಂಗಾತಿ.

  38. Anil kumar...... says:

    Prathap sir bahala uttama lekana hindu mata,devastaanagala virudda nadeyuttiruva shadyantrada ondu baaga dharmastalada viruddada aaropa

  39. Anil kumar...... says:

    Prathap sir bahala uttama lekana hindu mata,devastaanagala virudda nadeyuttiruva shadyantrada ondu baaga dharmastalada viruddada aaropa…….

  40. Anil kumar...... says:

    Prathap sir bahala uttama lekana hindu mata,devastaanagala virudda nadeyuttiruva shadyantrada ondu baaga dharmastalada viruddada aaropa…….aadre nammavare virodigalondige serkondirodu maatra viparyaasa

  41. niranjan adiga says:

    sir, nimma artivle noodidmele samaadhana aayutu.

  42. anantha padmanabha kadiri says:

    VERY GOOD ARTICLE. I APPRECIATE YOUR CONCERN AND WAY OF THINKING.
    I EXPECT MANY MORE ARTICLES FROM YOU

  43. prashanth says:

    ಸೌಜನ್ಯಯುತ

  44. Neelesh Patil says:

    ಪ್ರತಾಪ್ ನಾನು ನಿಮ್ಮಾ ಅಭಿಮಾನಿ, ಟ್ವಿಟ್ಟರ್ ನಲ್ಲಿ ಕೂಡ ನಾನು ನಿಮ್ಮನ್ನಾ follow ಮಾಡ್ತೀನಿ.

    Hats ಆಫ್ ಕಣ್ರೀ ನಿಮ್ಮಾ ಇ artcle ತುಂಬಾ correct ಆಗಿದೆ.

  45. MANOJ KUMAR says:

    ಪ್ರತಾಪ ಸಿಂಹ ರಿಗೆ,
    ಬೆಳ್ಳಗೆ ಕಾಣೋದೆಲ್ಲ ಹಾಲು ಅಂತ ತಿಳಿಯೋದು ಮೂರ್ಖತನ ಹಾಲು ಆದ್ರೆ ಒಳ್ಳೆಯದು ಆದ್ರೆ ಅದು ಸುಣ್ಣನೂ ಆಗಬಹುದು ಅಲ್ವೆ… ಲೇಖನದಲ್ಲಿ ತಪ್ಪು ಮಾಡಿದವರನ್ನು ಹೆಗ್ಗಡೆಯವರು ಪಶುವಿನಂತೆ ಕ್ಷಮಿಸುತ್ತಾರೆ ಅಂತ ನಿಮಗೆ ಹೇಲಿದವರು ಯಾರು ರೀ… ಅಲ್ಲಿನ ಪರಿಸ್ಥಿತಿಯ ಆಳ ಅರಿವಿಲ್ಲದೆ ನನಗೂ ಮಾತಾಡೋಕೆ ಆಗಲ್ಲ ಹೇಗೆ ನಿಮಗೂ ಸಹ… ಇಸ್ಟಕ್ಕೂ ತಮ್ಮದೇ ಕಾಲೇಜಿನ ಹೆಣ್ಣುಮಗಳ ಮೇಲೆ ಈ ರೀತಿ ಘ್ಹೋರ ದೌರ್ಜನ್ಯ ಆಗಿ ಒಂದು ವರ್ಷಆದ್ರೂ ಸುಮ್ಮನೆ ಇದ್ರಲ್ಲ ಬೇಗ ತನಿಕೆ ಮಾಡಿ ಅಂತ ಪ್ರಭಾವಿಗಳಾದ ಇವರು ಸರಕಾರವನ್ನು ಒತ್ತಾಯ ಮಾಡಬಹುದಿತ್ತಲ್ವೆ… ತಮ್ಮದೇ ಊರಿನ ಹೆಣ್ಣೂಮಗಳಿಗೆ ಈ ತರದ ಅನ್ಯಾಯವಾದಾಗ್ಲೂ ನೆಡೇದಾಡೋ ದೇವ್ರು ಮಾತಾಡದ ಕಲ್ಲಿನ ದೇವ್ರಾದ್ರಲ್ಲ ಯಾಕೆ ಅಂತ ಅನುಮಾನ ಒಬ್ಬ ಸಣ್ಣ ಮಗುವಿಗಾದ್ರು ಬರುತ್ತೆ ಮತ್ತೆ ಕೇಳೇ ಕೇಳ್ತಾರೆ ಮಿಸ್ಟರ್ ಪ್ರತಾಪ ಸಿಂಹ ರವರೆ!! ಇದ್ರಲ್ಲಿ ಕೇಳ್ತಾಇರೋರ ತಪ್ಪು ತಂತ ನಮ್ಮಂತವರು ನಿಮ್ಮಂತವರು ಸರ್ಟಿಇಕೇಟ್ ಕೊಡೋಕೆ ಆಗಲ್ಲ…

  46. CanIDo says:

    Hi Prathap,

    Yes, the points you discussed are so relevant to each of us, and should always judge by the history not by incident was really good. No one is above law, so wait for results as its going to other higher investigation agency.

    Nice facts provided to reader.
    -Vasantha

  47. Jayalaxmi Patil says:

    ಸಮತೂಕದ, ಸಂದರ್ಭೋಚಿತ ಬರಹ.
    ” ನಮ್ಮ ಸಮಾಜ ಹೇಗಿದೆಯೆಂದರೆ ಆರೋಪ ಮಾಡುವವರಿಗೆ ಸಾಕ್ಷ್ಯ ನೀಡುವ ಜವಾಬ್ದಾರಿಯೂ ಇರುವುದಿಲ್ಲ, ಕೇಳಿಸಿಕೊಳ್ಳುವವರು ಆಧಾರವನ್ನೂ ಕೇಳುವುದಿಲ್ಲ. ಸತ್ಯದ ಸರಳ ಸಾದರಕ್ಕಿಂತ Conspiracy Theoryಗಳು ಯಾವತ್ತೂ ರೋಚಕವಾಗಿರುತ್ತವೆ, ಖುಷಿ ಕೊಡುತ್ತವೆ.”
    ಎನ್ನುವ ನಿಮ್ಮ ಮಾತುಗಳು ಅಕ್ಷರಶಃ ಸತ್ಯ!

  48. Rekha says:

    ಲೇಖನ ಚೆನ್ನಾಗಿದೆ. ಇದರಿಂದ ಶ್ಲಾಘನೆ ಪಡಿತೀರ ಅನ್ತಾ ಇರೊರಿಗೆ ಒಂದು ಮಾತು…ಈ ಲೇಖನದಿಂದ ಸತ್ಯ ಸಾಬೀತಾಗಲ್ಲ, ತನಿಖೆಯೊಂದಿಗೆ ಸೌಜನ್ಯಳಿಗೆ ನ್ಯಾಯ ಸಿಗಲಿ ಅನ್ನೊದೇ ಇದರ ಉದ್ದೇಶ. ಸಹನೆಯಿಂದ ಕಾಯೊಣ.