Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಂಗ್ಲೆಂಡ್್ನಲ್ಲಿ ‘ಜಂಟಲ್್ಮನ್ಸ್್’, ಭಾರತದಲ್ಲಿ ‘ಬ್ಯುಸಿನೆಸ್್ಮನ್ಸ್್’ ಗೇಮ್!

ಇಂಗ್ಲೆಂಡ್್ನಲ್ಲಿ ‘ಜಂಟಲ್್ಮನ್ಸ್್’, ಭಾರತದಲ್ಲಿ ‘ಬ್ಯುಸಿನೆಸ್್ಮನ್ಸ್್’ ಗೇಮ್!

ಕಳೆದ ನವೆಂಬರ್್ನಲ್ಲಿ ಹೊಸದಿಲ್ಲಿಗೆ ಹೋಗಿದ್ದಾಗ ಖ್ಯಾತ ಇಂಗ್ಲಿಷ್ ವಾರಪತ್ರಿಕೆ ಔಟ್್ಲುಕ್್ನ ಪ್ರಧಾನ ಸಂಪಾದಕರಾಗಿರುವ ಹೆಮ್ಮೆಯ ಕನ್ನಡಿಗ ಕೃಷ್ಣಪ್ರಸಾದ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಮಾತಿನ ಮಧ್ಯೆ  ಕೃಷ್ಣಪ್ರಸಾದ್ ಕೇಳಿದರು, ‘ನಿನಗೆ ಹೊಸ ಜೋಕು ಗೊತ್ತಾ, ಸಚಿನ್ ತೆಂಡೂಲ್ಕರ್, ಲಾಲ್್ಕೃಷ್ಣ ಆಡ್ವಾಣಿ ಹಾಗೂ ಪೆಟ್ರೋಲ್ ನಡುವೆ ಯಾರು ಮೊದಲು ಸೆಂಚುರಿ ಹೊಡೆಯುತ್ತಾರೆ?!’

-ಪೆಟ್ರೋಲ್!

ಅಂಥದ್ದೊಂದು ಜೋಕು ಹುಟ್ಟುವುದಕ್ಕೆ ಕಾರಣವಾದರೂ ಏನಿತ್ತು? ಒಂದೆಡೆ ಇಂಗ್ಲೆಂಡ್್ನಲ್ಲಿ ಆಡಿದ ನಾಲ್ಕೂ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಭಾರತ ಹೀನಾಯವಾಗಿ ಸೋತಿದ್ದು ಮಾತ್ರವಲ್ಲ, ಸಚಿನ್ ತೆಂಡೂಲ್ಕರ್ ಕೂಡ ಬಹುನಿರೀಕ್ಷಿತ 100ನೇ ಸೆಂಚುರಿ ಹೊಡೆಯುವಲ್ಲಿ ವಿಫಲರಾಗಿದ್ದರು. ಪರ್ವಾಗಿಲ್ಲ ಬಿಡಿ, ನವೆಂಬರ್ 6ರಿಂದ ಆರಂಭವಾಗಲಿರುವ ವೆಸ್ಟ್್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಾದರೂ 100ನೇ ಶತಕ ಬರುತ್ತದೆ ಎಂದು ಜನರೂ ಸುಮ್ಮನಾದರು, ಮಾಧ್ಯಮಗಳೂ ಹಾಗೇ ಬರೆದವು. ಆದರೆ ರಾಜಧಾನಿ ದಿಲ್ಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯವನ್ನು ಭಾರತ ಗೆದ್ದುಕೊಂಡರೂ ಎಲ್ಲರ ನಿರೀಕ್ಷೆಯ ಸಚಿನ್ ಸೆಂಚುರಿ ಮಾತ್ರ ಬರಲಿಲ್ಲ. ಕೋಲ್ಕತಾದಲ್ಲಿ 1 ಲಕ್ಷ ಜನರ ಮುಂದೆ ಸಚಿನ್ ಸೆಂಚುರಿ ಹೊಡೆಯುತ್ತಾನೆ ಎಂದು ಜನ ತಮ್ಮನ್ನು ತಾವೇ ಸಮಾಧಾನ ಮಾಡಿಕೊಂಡರು. ಅಲ್ಲೂ ನಿರಾಸೆಯೇ ಕಾದಿತ್ತು. ಮುಂದಿನ ಟೆಸ್ಟ್ ಮುಂಬೈನಲ್ಲಿ. ತವರಿನಲ್ಲಿ ಸಚಿನ್ ಸೆಂಚುರಿ ಹೊಡೆಯುವುದು ನಿಶ್ಚಿತ ಎಂದು ಪತ್ರಿಕೆಗಳು ಮತ್ತೆ ಜನರ ನಿರೀಕ್ಷೆಗಳನ್ನು ಉಬ್ಬಿಸಿದವು. ಊಹೂಂ ಅಲ್ಲೂ ಬರಲಿಲ್ಲ. ಇನ್ನೊಂದೆಡೆ ಸಚಿನ್್ಗಿಂತ ಪೆಟ್ರೋಲೇ ಮೊದಲು ಸೆಂಚುರಿ ಹೊಡೆದು ಬಿಡುತ್ತದೆ ಎಂಬ ಭಾವನೆ ರಾಷ್ಟ್ರಾದ್ಯಂತ ವ್ಯಾಪಿಸಿತು. ಇಷ್ಟಾಗಿಯೂ ನಮ್ಮ ಮಾಧ್ಯಮಗಳು ಹೊಸ ಹೊಸ ಥಿಯರಿಗಳನ್ನು ಹುಟ್ಟುಹಾಕಲು ಆರಂಭಿಸಿದವು. ಇಲ್ಲಾ ಇಲ್ಲಾ, ಹಾಗಲ್ಲ… ತಮ್ಮ 100ನೇ ಶತಕ ದಾಖಲಿಸಲು ತೆಂಡೂಲ್ಕರ್ ಒಂದು ವಿಶೇಷ ಹಾಗೂ ಪ್ರತಿಷ್ಠಿತ ಸ್ಥಳವನ್ನು ಹುಡುಕುತ್ತಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದಲ್ಲೇ 100 ಶತಕ ಬಾರಿಸುತ್ತಾರೆ ಎಂದು ಬರೆದವು. ನಾವೂ ಅದನ್ನೇ ನಂಬಿ ಕುಳಿತೆವು. 2011, ಡಿಸೆಂಬರ್ 26ರಂದು ಮೆಲ್ಬೋರ್ನ್್ನಲ್ಲಿ ಮೊದಲ ಟೆಸ್ಟ್ ಆರಂಭವಾಯಿತು, ನಾಲ್ಕೇ ದಿನಗಳಲ್ಲಿ ಮುಗಿದೂ ಹೋಯಿತು, ಸಚಿನ್ ಮಾತ್ರ ಸೆಂಚುರಿ ಹೊಡೆಯಲಿಲ್ಲ. 2012ರಲ್ಲಿ ಖಂಡಿತ ಸಚಿನ್ ಸೆಂಚುರಿ ಹೊಡೆದೇ ಹೊಡೆಯುತ್ತಾರೆ. ಕಳೆದ 3 ವರ್ಷಗಳಿಂದ ವರ್ಷದ ಮೊದಲ ಟೆಸ್ಟ್್ನಲ್ಲಿ ಸಚಿನ್ ಸೆಂಚುರಿ ದಾಖಲಿಸಿದ್ದಾರೆ. ಈ ಬಾರಿಯೂ ಅದೇ ಪುನರಾವರ್ತನೆಯಾಗುತ್ತದೆ. ಬಹಳ ವಿಶೇಷವೆಂದರೆ ಸಿಡ್ನಿಯಲ್ಲಿ 100ನೇ ಟೆಸ್ಟ್ ಜರುಗುತ್ತಿದ್ದು ಅಲ್ಲಿಯೇ ಸಚಿನ್ 100ನೇ ಸೆಂಚುರಿ ಬರುತ್ತದೆ ಎಂದರು. ಮತ್ತದೇ ಹಳೇ ಕಥೆ. ಪರ್ತ್್ನಲ್ಲಂತೂ ಮೂರೇ ದಿನಗಳಲ್ಲಿ ಪಂದ್ಯ ಮುಗಿಯಿತು.

ಆಗ…

ಮಾಧ್ಯಮಗಳು ಸಚಿನ್ ಸೆಂಚುರಿ ಕಥೆ ಬಿಟ್ಟು ಭಾರತದ ವ್ಯಥೆ ಬಗ್ಗೆ ಚಿಂತಿಸಲಾರಂಭಿಸಿದವು. ವಿದೇಶದಲ್ಲಿ ಅನುಭವಿಸಿದ ಸತತ 7ನೇ ಟೆಸ್ಟ್ ಸೋಲು ಸೆಂಚುರಿ ಚರ್ಚೆಯನ್ನು ಬೇರೆಡೆಗೆ ಕೊಂಡೊಯ್ಯಿತು. ಜನರೂ ಬೇಸತ್ತರು. ಸಾಮಾಜಿಕ ತಾಣಗಳಲ್ಲಿ ಟೀಕಾಪ್ರಹಾರ ಆರಂಭವಾಯಿತು. ಅಣ್ಣಾ ಸಚಿನ್ ಬಗ್ಗೆ ಒಂದು ನಕಲಿ ‘ಸ್ಟೇಟಸ್್’ ಫೇಸ್ ಬುಕ್್ನಲ್ಲಿ ಸೃಷ್ಟಿಯಾಯಿತು. ಅದು ಬಹಳ ಮಜಬೂತಾಗಿತ್ತು. ಏನು ಗೊತ್ತಾ?

ಸಚಿನ್ ತೆಂಡೂಲ್ಕರ್: Wants to get the Monkey off my back….but India winning in Adelaide is my first priority!!

ಎಂ.ಎಸ್.ಧೋನಿ: Well, Of course you do…

ಯುವರಾಜ್ ಸಿಂಗ್: Paaji… the Monkey has turned into a Gorilla now!!

ಸೈಮಂಡ್ಸ್:Sach, did you just say Monkey?!

ಹರ್್ಭಜನ್ ಸಿಂಗ್: @Symmo, Don’t take it personally dude, he is referring to his 100th ton!!

ರವಿ ಶಾಸ್ತ್ರಿ: Play your natural game Sachin, Coz that’s what the doctor orders

ಅರಿಂದಮ್ ಚೌಧರಿ: You need to rediscover the diamond in you Sachin. Come to IIPM for help asap!

ಅರ್ಜುನ್ ತೆಂಡೂಲ್ಕರ್: Hey dad, I am having a seminar in school on how to score 100 in exams. Should I book your seat too?

ಡೆಟ್ಟಾಲ್ ಸಾಬೂನು: Sachin, would you like to be our brand amassador? We also kill 99% bacteria! Lol!!

ನೀವೇ ಯೋಚನೆ ಮಾಡಿ, ಸಚಿನ್ ತೆಂಡೂಲ್ಕರ್ ಹೊಡೆಯಲಿರುವ ಆ ಒಂದು ಸೆಂಚುರಿಗಾಗಿ ಕಳೆದ 10 ತಿಂಗಳಲ್ಲಿ ಪತ್ರಿಕೆಗಳ ಎಷ್ಟು ಪುಟಗಳು ನಾಶವಾಗಿರಬಹುದು, ಎಷ್ಟು ಟನ್ ನ್ಯೂಸ್್ಪ್ರಿಂಟ್ ರದ್ದಿಗೆ ಸೇರಿರಬಹುದು? ಎಷ್ಟು ಮಂದಿ ವೀಕ್ಷಕ ವಿವರಣೆಕಾರರ ಗಂಟಲು ಒಣಗಿರಬಹುದು, ಅದನ್ನು ಕೇಳಿ ಎಷ್ಟು ಜನರ ಕಿವಿ- ಓದಿ ಕಣ್ಣು ಹಾಳಾಗಿರಬಹುದು? ಖಂಡಿತ ಸಚಿನ್ 100ನೇ ಸೆಂಚುರಿ ಹೊಡೆಯುವುದು ನಮ್ಮೆಲ್ಲರಿಗೂ ಹೆಮ್ಮೆ ತರುವ, ಕೋಡು ಮೂಡಿಸುವ ಸಂಗತಿಯೇ. ಆದರೆ ವ್ಯಕ್ತಿ ಆರಾಧನೆ, ವ್ಯಕ್ತಿ ಕೇಂದ್ರಿತ Obsessionನಿಂದ ನಾವು, ನಮ್ಮ ಮಾಧ್ಯಮಗಳು ಹೊರಬರಲು ಸತತ 8 ಸೋಲುಗಳು ಬೇಕಾದವೇ? ಸಚಿನ್ ಸೆಂಚುರಿ ಭಜನೆಯ ನಡುವೆಯೇ ರಾಹುಲ್ ದ್ರಾವಿಡ್ ಕ್ರಿಕೆಟ್ ಟೆಸ್ಟ್್ನಲ್ಲಿ 13 ಸಾವಿರ ರನ್ ಗಡಿ ದಾಟಿದರು. ಆದರೂ ಅದು ದೊಡ್ಡ ಸುದ್ದಿಯಾಗಲಿಲ್ಲವೇಕೆ? ಏಕಿಂಥ ತಾರತಮ್ಯ? ಸಚಿನ್ ತೆಂಡೂಲ್ಕರ್ ಆಡಿರುವ 188 ಟೆಸ್ಟ್್ಗಳಲ್ಲಿ ಎಷ್ಟು ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ ಎಂದು ನೆನಪುಮಾಡಿಕೊಳ್ಳಿ? ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಾಗ ಅದರಲ್ಲಿ ಪ್ರಮುಖಪಾತ್ರ ವಹಿಸಿದ್ದು ಬಿಟ್ಟರೆ ತೆಂಡೂಲ್ಕರ್ ಬಗ್ಗೆ ನಾವೇನಾದರೂ ಹೆಮ್ಮೆಪಟ್ಟುಕೊಳ್ಳುವಂಥದ್ದೇನಾದರೂ ಇದ್ದರೆ ಅವರ ವೈಯಕ್ತಿಕ ದಾಖಲೆಗಳಷ್ಟೇ. ಆದರೆ, ಎಲೆಮರೆಯ ಕಾಯಿಯಂತೆಯೇ ಬಹುಕಾಲ ಉಳಿದ ರಾಹುಲ್ ದ್ರಾವಿಡ್ ತಂದು ಕೊಟ್ಟ ಗೆಲುವುಗಳ ಬಗ್ಗೆ ಒಮ್ಮೆಯಾದರೂ ಯೋಚಿಸಿದ್ದೀರಾ? ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಅನುಭವಿಸಿದ ಮುಖಭಂಗದ ನಂತರವೂ ನಾವು ನಡೆದುಕೊಳ್ಳುತ್ತಿರುವ ರೀತಿ, ತೋರುತ್ತಿರುವ ಧೋರಣೆಯಾದರೂ ಯಾವುದು? ಲಕ್ಷ್ಮಣ್, ದ್ರಾವಿಡ್ ನಿವೃತ್ತಿಯಾಗಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆಯೇ ಹೊರತು ಸಚಿನ್ ಕೂಡ ನಿವೃತ್ತಿ ಬಗ್ಗೆ ಯೋಚಿಸಬೇಕೆಂದು ಏಕೆ ಹೇಳುತ್ತಿಲ್ಲ? ಲಕ್ಷ್ಮಣ್ -ದ್ರಾವಿಡ್್ಗೊಂದು ನ್ಯಾಯ, ಸಚಿನ್್ಗೊಂದು ನ್ಯಾಯವೇ? ನಾವೆಲ್ಲ ಆರಾಧಿಸುವ ಸಚಿನ್ ತೆಂಡೂಲ್ಕರ್ ಈಗ್ಗೆ ಆರೆಂಟು ತಿಂಗಳುಗಳ ಹಿಂದೆ ನಡೆದುಕೊಂಡಿದ್ದಾದರೂ ಹೇಗೆ? ಏಪ್ರಿಲ್-ಮೇನಲ್ಲಿ ನಡೆದ ಐಪಿಎಲ್್ನಲ್ಲಿ ಆಡಿದ ಸಚಿನ್, ಅದರ ಬೆನ್ನಲೇ ವೆಸ್ಟ್್ಇಂಡೀಸ್್ನಲ್ಲಿ ಆರಂಭವಾದ ಟೆಸ್ಟ್ ಸರಣಿಗೆ ಚಕ್ಕರ್ ಹೊಡೆದು ವಿಶ್ರಾಂತಿ ಪಡೆದರು. ಅವತ್ತು ರಾಹುಲ್ ದ್ರಾವಿಡ್ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು 2 ಸೆಂಚುರಿ ಹೊಡೆದು ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತವನ್ನು ಗೆಲ್ಲಿಸದಿದ್ದರೆ ಅದೇ ಸರಣಿ ಸೋತು ನಂಬರ್-1 ಪಟ್ಟ ಕಳೆದುಕೊಂಡಿರುತ್ತಿದ್ದೆವು. ರಿಕಿ ಪಾಂಟಿಂಗ್, ಮೈಕೆಲ್ ಕ್ಲಾರ್ಕ್ ದುಡ್ಡು ತಂದುಕೊಡುವ ಐಪಿಎಲ್್ಗೆ ಬದಲಾಗಿ ದೇಶಕ್ಕಾಗಿ ಆಡುವ ಟೆಸ್ಟ್ ಸರಣಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂತಹ ನಡತೆಯನ್ನು ತೆಂಡೂಲ್ಕರ್್ರಿಂದ ಕಾಣಲು ಸಾಧ್ಯವೆ? ಬಾಂಗ್ಲಾದೇಶ ಅಥವಾ ಕೀನ್ಯಾ ಅಥವಾ ಐರ್ಲೆಂಡ್ ಮೇಲೆ ಒಂದು ಸರಣಿಯನ್ನು ಏರ್ಪಡಿಸಿ, ತೆಂಡೂಲ್ಕರ್ ಆದಷ್ಟು ಬೇಗನೆ 100ನೇ ಬಾರಿ ಆಗಸದತ್ತ ಬ್ಯಾಟು ಎತ್ತುವಂತೆ ಮಾಡುವುದೊಳಿತು. ಇಷ್ಟಕ್ಕೂ ಕಪಿಲ್ 434 ವಿಕೆಟ್ ತೆಗೆಯುವ ಸಲುವಾಗಿ ಜಾವಗಲ್ ಶ್ರೀನಾಥ್ ಕ್ರೀಡಾ ಬದುಕಿನ ಅತ್ಯಮೂಲ್ಯ ಎರಡು ವರ್ಷಗಳು ಹಾಳಾದವು. ಸಚಿನ್ 100ನೇ ಸೆಂಚುರಿ ಹೊಡೆದು ನಿವೃತ್ತಿ ತೆಗೆದುಕೊಂಡರೆ ಯುವ ಆಟಗಾರನೊಬ್ಬನಿಗೆ ಅವಕಾಶವಾದರೂ ದೊರೆಯುತ್ತದೆ ಅಲ್ಲವೆ?

ಅಂದಮಾತ್ರಕ್ಕೆ, ಸಚಿನ್್ರನ್ನು ತೆಗಳುವುದು ಇಲ್ಲಿನ ಉದ್ದೇಶವಲ್ಲ.

ಆಟಗಾರರು ಸ್ವಾರ್ಥಪರರಾದರೆ ಹಾಗೂ ದೇಶವಾಸಿಗಳು ತಂಡಕ್ಕಿಂತ ಆಟಗಾರರ ವೈಯಕ್ತಿಕ ದಾಖಲೆಗಳ ಬಗ್ಗೆಯೇ ಉನ್ಮಾದ ಬೆಳೆಸಿಕೊಂಡರೆ ತಂಡ ಗೆಲ್ಲುವುದಾದರೂ ಹೇಗೆ? ಇತ್ತೀಚೆಗೆ ನಡೆದ ಸಿಡ್ನಿ ಪಂದ್ಯವನ್ನೇ ತೆಗೆದುಕೊಳ್ಳಿ. ಒಂದು ವೇಳೆ, ಮೈಕೆಲ್ ಕ್ಲಾರ್ಕ್ ಬದಲು ತೆಂಡೂಲ್ಕರ್ ಆಸ್ಟ್ರೇಲಿಯಾದ ನಾಯಕರಾಗಿದ್ದರೆ ತಾವು 325 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುತ್ತಿದ್ದರೆ? ಆ ಪಂದ್ಯ ನಾಲ್ಕೇ ದಿನಗಳಲ್ಲಿ ಮುಗಿದು ಹೋಯಿತು, ಪಿಚ್ ನಿರ್ಜೀವವಾಗಿತ್ತು, ಕ್ಲಾರ್ಕ್ ಮನಸ್ಸು ಮಾಡಿದ್ದರೆ 400 ರನ್ ಹೊಡೆದು ಲಾರಾನ ದಾಖಲೆ ಮುರಿಯಬಹುದಿತ್ತು. ಆದರೆ ಅವರು ತಂಡದ ಗೆಲುವಿನ ಬಗ್ಗೆ ಯೋಚಿಸಿದರು. ತೆಂಡೂಲ್ಕರ್ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಮಾತು ಹಾಗಿರಲಿ, ಒಂದು ವೇಳೆ ಅವರೇ ಮಾಡಿದ್ದರೂ ಮಹಾನ್ ದೇಶವಾಸಿಗಳಾದ ನಾವೇ 400 ರನ್ ಹೊಡೆಯಬೇಕಿತ್ತು ಎಂದು ಟೀಕಿಸುತ್ತಿದ್ದೆವು. ಇಷ್ಟಕ್ಕೂ ಪಾಕಿಸ್ತಾನದಲ್ಲಿ ತೆಂಡೂಲ್ಕರ್ 194 ರನ್ ಗಳಿಸಿದಾಗ ನಾಯಕ ರಾಹುಲ್ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಪಂದ್ಯ ಗೆದ್ದರೂ ನಮ್ಮ ಜನ ದ್ರಾವಿಡ್್ರನ್ನೇ ಟೀಕಿಸಿದ್ದರು! ಇಂಥ ಧೋರಣೆಯನ್ನು ಬಿಡದೆ, ತಂಡದ ಗೆಲುವಿಗೆ ಮೊದಲ ಆದ್ಯತೆ ಕೊಡದೆ ಹೋದರೆ ಭಾರತಕ್ಕೆ ಯಾವ ಭವಿಷ್ಯ ಉಳಿದೀತು?

ಸೌರವ್ ಗಂಗೂಲಿ ನಾಯಕರಾದ ನಂತರ ನಮ್ಮ ಭಾರತೀಯ ಕ್ರಿಕೆಟ್್ಗೆ ಕಾಯಕಲ್ಪ ಸಿಕ್ಕಿತು, ಕೊನೆಗೂ ನಮ್ಮ ಆತ್ಮಸ್ಥೈರ್ಯವನ್ನು ಎತ್ತಿಹಿಡಿಯುವ ನಾಯಕ ಸಿಕ್ಕಿದ ಎಂದು ಬೀಗಿದ್ದೆವು. ತದನಂತರ ನಾಯಕರಾದ ದ್ರಾವಿಡ್, ಕುಂಬ್ಳೆ ಕಾಲದಲ್ಲೂ ನಮ್ಮ ಸಾಧನೆ ಮೇಲ್ಮುಖವಾಗಿಯೇ ಸಾಗಿ ಧೋನಿ ಕಾಲದಲ್ಲಿ ಟೆಸ್ಟ್್ನಲ್ಲಿ ನಂ-1 ಸ್ಥಾನಕ್ಕೇರುವುದರೊಂದಿಗೆ ಪರ್ಯಾವಸಾನಗೊಂಡಿತು. ಆದರೆ ಕಳೆದ 8 ನೇರ ಸೋಲುಗಳನ್ನು ನೋಡಿದರೆ ಅಜರುದ್ದೀನ್, ತೆಂಡೂಲ್ಕರ್ ಕ್ಯಾಪ್ಟನ್್ಗಳಾಗಿದ್ದಾಗ ವಿದೇಶ ಪ್ರವಾಸ ಕೈಗೊಂಡು ವೈಟ್್ವಾಶ್್ನೊಂದಿಗೆ ಹಿಂದಿರುಗುತ್ತಿದ್ದ ದಿನಗಳು ಮರುಕಳಿಸುತ್ತಿವೆ ಎಂದೆನಿಸುತ್ತಿದೆ. 1998ರಲ್ಲಿ ತೆಂಡೂಲ್ಕರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾದಲ್ಲಿ 4-0 ಅಂತರದಿಂದ ಸೋತಿದ್ದು ಬಿಟ್ಟರೆ, ಯಾವತ್ತೂ ಈ ರೀತಿಯ ವೈಟ್್ವಾಶ್ ಆಗಿರಲಿಲ್ಲ. ಈಗ ನಮ್ಮ ತಂಡಕ್ಕೇನಾಗಿದೆ? ಆತ್ಮಸ್ಥೆರ್ಯ ಉಡುಗಿರುವ ಕಾಲದಲ್ಲಿ ಧೋನಿ ನೀಡುತ್ತಿರುವ ಹೇಳಿಕೆಯಾದರೂ ಹೇಗಿದೆ? 2003ರ ಆಸ್ಟ್ರೇಲಿಯಾ ಸರಣಿಯ ಮೊದಲ ಟೆಸ್ಟ್್ನಲ್ಲಿ ಸಚಿನ್ ಸೊನ್ನೆಗೆ, ದ್ರಾವಿಡ್ 1 ರನ್್ಗೆ ಔಟಾಗುವುದರೊಂದಿಗೆ ಭಾರತ ಬಹುಬೇಗನೆ 4 ವಿಕೆಟ್ ಕಳೆದುಕೊಂಡಾಗ ಬ್ಯಾಟಿಂಗ್್ಗೆ ಬಂದು 144 ರನ್ ಬಾರಿಸಿದ ಸೌರವ್ ಗಂಗೂಲಿ ಇಡೀ ತಂಡಕ್ಕೆ ಪ್ರೇರಣೆ ನೀಡಿದ್ದರು. ಆದರೆ, ಅದೇ ಆಸ್ಟ್ರೇಲಿಯಾದಲ್ಲಿ 4 ಟೆಸ್ಟ್ ಸೋತ ಕೂಡಲೇ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು?- ‘ನನಗಿಂತ ಒಳ್ಳೆಯ ನಾಯಕನಿದ್ದರೆ ಕಫ್ತಾನಗಿರಿ ಬಿಟ್ಟುಕೊಡುತ್ತೇನೆ’. ಇದು ಒಬ್ಬ ನಾಯಕನಾದವನು ಹೇಳುವ ಮಾತೇ? “Sourav Ganguly is the Best captain of Indian Cricket Team and Dhoni is the captain of Best Indian cricket Teamಎಂಬ ಮಾತು ಖಂಡಿತ ನಿಜ. ಇಷ್ಟಕ್ಕೂ ಗಂಗೂಲಿ ತಂಡಕ್ಕೆ ಯಾವ ಒಂದು ಆ್ಯಟಿಟ್ಯೂಡ್ ತಂದು ಕೊಟ್ಟರು, ಈಗಿನವರು ತೋರುತ್ತಿರುವ ಆ್ಯಟಿಟ್ಯೂಡ್ ಯಾವುದು? ಆಸ್ಟ್ರೇಲಿಯಾದವರು ಆ ಗ್ರೀನ್ ಕ್ಯಾಪ್ ಸಿಕ್ಕ ದಿನ ತಮ್ಮ ಕ್ರೀಡಾ ಜೀವನಕ್ಕೆ ಹೊಸ ಅರ್ಥ ಬರುತ್ತದೆ ಎಂಬಂತೆ ಭಾವಿಸಿದರೆ, ಎರ್ರಾಬಿರ್ರಿ ಹೊಡಿ, ಒಳ್ಳೆಯ ಹಣಕ್ಕೆ ಹರಾಜಾಗು ಎಂಬ ಮನಸ್ಥಿತಿ ನಮ್ಮ ಯುವ ಆಟಗಾರರಲ್ಲಿ ಬಂದುಬಿಟ್ಟಿದೆ. ಐಪಿಎಲ್ ಬಂದ ನಂತರವಂತೂ ನಮ್ಮ ಆಟಗಾರರಲ್ಲಿ ಇಂಟರ್್ನ್ಯಾಷನಲ್ ಡೆಬ್ಯೂ, ನೀಲಿ ಜರ್ಸಿ ಬಗ್ಗೆ ಮೋಹವೇ ಇಲ್ಲದಾಗಿ ಬಿಟ್ಟಿದೆ. ಎಲ್ಲ ದುಡ್ಡಿನ ಮಹಿಮೆ. ಒಂದು ಐಪಿಎಲ್್ನಲ್ಲಿ ಆಡುವುದು 100 ಏಕದಿನ ಪಂದ್ಯವಾಡುವುದಕ್ಕೆ ಸಮ. ಅಷ್ಟು ಹಣ ದೊರೆತು ಬಿಡುತ್ತದೆ. ಹಾಗಿರುವಾಗ ಯಾರು ರಣಜಿ, ದುಲೀಪ್ ಟ್ರೋಫಿ ಪಂದ್ಯಗಳನ್ನಾಡುತ್ತಾರೆ? ಐಪಿಎಲ್್ನಲ್ಲಿ ಒಳ್ಳೆಯ ಕಾಸು ಸಿಗುವಾಗ ಹತ್ತಿಪ್ಪತ್ತು ಸಾವಿರ ಸಿಗುವ ರಣಜಿ ಯಾರಿಗೆ ಬೇಕು? ಖ್ಯಾತ ಕ್ರೀಡಾ ಬರಹಗಾರ ನಿರ್ಮಲ್ ಶೇಖರ್ ಇತ್ತೀಚೆಗೆ ಬರೆದಿರುವ ಅಂಕಣದಲ್ಲಿ ಬಿಸಿಸಿಐ ಹಾಗೂ ನಮ್ಮ ಒಟ್ಟಾರೆ ಮನಸ್ಥಿತಿಯನ್ನು ಹೀಗೆ ವರ್ಣಿಸಿದ್ದಾರೆ- “ಟೆಸ್ಟ್್ನಲ್ಲಿ 11,947 ರನ್ ಗಳಿಸಿರುವ ಜಾಕ್ ಕಾಲಿಸ್್ಗೆ ಐಪಿಎಲ್್ನಲ್ಲಿ ಒಂದು ಕೋಟಿ ಕೊಟ್ಟರೆ ರಾಬಿನ್ ಉತ್ತಪ್ಪನಂಥ ಕೊಲ್ಟೆಗಳು 9 ಕೋಟಿಗೆ ಸೇಲಾಗುತ್ತಾರೆ.  Value. Value. Value. What do we value these days? And how do we value them?’

ಹೌದು, ನಾವು ಬೆಲೆ ಕೊಡುತ್ತಿರುವುದಾದರೂ ಯಾವುದಕ್ಕೆ?

ಬಿಸಿಸಿಐ ಬಳಿ ಎಷ್ಟು ಹಣವಿದೆಯೆಂದರೆ ನಮ್ಮ ದೇಶದಲ್ಲೇ ವಿದೇಶಿ ಪಿಚ್್ಗಳನ್ನು ರೂಪಿಸಿ ಬಿಡಬಹುದು, ನಮ್ಮ ಆಟಗಾರರನ್ನು ಎಲ್ಲ ವಾತಾವರಣವನ್ನೂ ಎದುರಿಸಲು ಸಿದ್ಧಪಡಿಸಬಹುದು. ಹುಲ್ಲೇ ಹುಟ್ಟದ ದುಬೈನಲ್ಲಿ ಹಸಿರು ಕ್ರೀಡಾಂಗಣವನ್ನು ರೂಪಿಸಿಲ್ಲವೆ? ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಆಟಗಾರರು ಸ್ಲೈಡಿಂಗ್ ಮಾಡಿಕೊಂಡೆ ಬಾಲ್ ತಡೆಯುತ್ತಾರೆ, ಆದರೆ ನಮ್ಮವರು? ಐಪಿಎಲ್ ಆರಂಭಿಸಿ 30 ಯಾರ್ಡ್ ಸರ್ಕಲ್್ಗಳನ್ನೂ ಕಡಿಮೆ ಮಾಡಿ, ಫೋರ್, ಸಿಕ್ಸ್್ಗಳನ್ನು ಮ್ಯಾನ್ಯುಫ್ಯಾಕ್ಚರ್ ಮಾಡಿ, ಎಲ್ಲ ಫ್ಲಾಟ್್ಟ್ರ್ಯಾಕ್ ಮಾಡಿ ಓವರ್್ಗೆ ಸರಾಸರಿ 6 ರನ್ ಕೊಟ್ಟರೂ, ‘ವೆರಿ ಎಕಾನಾಮಿಕಲ್್’ ಎನ್ನುತ್ತಾರೆ! ಹೌದು. ನಾವು ರಾಹುಲ್ ದ್ರಾವಿಡ್, ತೆಂಡೂಲ್ಕರ್, ಲಕ್ಷ್ಮಣ್, ಸೆಹವಾಗ್್ರನ್ನು ತಯಾರು ಮಾಡಿದ್ದೇವೆ. ಆದರೆ ಅವರ ಪರಂಪರೆಯನ್ನು ಮುಂದುವರಿಸುವಂಥ ಉತ್ತರಾಧಿಕಾರಿಗಳನ್ನೇಕೆ ತಯಾರು ಮಾಡಲಾಗುತ್ತಿಲ್ಲವೆಂದರೆ ಇದೇ ಕಾರಣಕ್ಕಾಗಿ. ಆ ಶರದ್ ಪವಾರ್ ಕೃಷಿ ಸಚಿವರಾಗಿ ನಮ್ಮ ದೇಶದ ಅಗ್ರಿಕಲ್ಚರ್ ಅನ್ನೂ ಹಾಳುಗೆಡವಿದರು, ಜತೆಗೆ ಬಿಸಿಸಿಐ ಅಧ್ಯಕ್ಷರಾಗಿ ಕ್ರಿಕೆಟ್್ನ ನಾಶಕ್ಕೂ ಕೈಹಾಕಿದರು ಎಂದನಿಸುತ್ತದೆ. ಈ ಮಧ್ಯೆ, ಹೀನಾಯ ಸೋಲುಗಳ ನಡುವೆಯೂ ‘We are still World Champions” ಎಂದು ಸೆಹವಾಗ್ ಹೇಳಿದ್ದಾರೆ. 2015ರವರೆಗೂ ಹಾಗೆ ಹೇಳಿಕೊಳ್ಳಲು ಅಡ್ಡಿಯಿಲ್ಲ, ಆದರೆ, ತಲೆಯಲ್ಲಿ ಬುದ್ಧಿಯಿದ್ದವರು ಹಾಗೆ ಹೇಳಲ್ಲ.

ದುರದೃಷ್ಟವಶಾತ್ ಇಂಗ್ಲೆಂಡ್್ನಲ್ಲಿ “ಜಂಟಲ್್ಮನ್ಸ್್” ಎನಿಸಿದ್ದ ಕ್ರಿಕೆಟ್ ಭಾರತದಲ್ಲಿ “ಬ್ಯುಸಿನೆಸ್್ಮನ್ಸ್್” ಆಟವಾಗಿ ಪರಿಣಮಿಸಿದೆ!

 

 

– ಪ್ರತಾಪ್ ಸಿಂಹ

34 Responses to “ಇಂಗ್ಲೆಂಡ್್ನಲ್ಲಿ ‘ಜಂಟಲ್್ಮನ್ಸ್್’, ಭಾರತದಲ್ಲಿ ‘ಬ್ಯುಸಿನೆಸ್್ಮನ್ಸ್್’ ಗೇಮ್!”

 1. Nithin Kanoji says:

  Nice……….

 2. Keerthinath says:

  Excellent article.. Awesome..Specially..
  “Sourav Ganguly is the Best captain of Indian Cricket Team and Dhoni is the captain of Best Indian cricket Team.. these lines..
  thanks for giving wonderful articles…

 3. sushanth b k says:

  nice article pratapj…..!

 4. Lalithachoudhary says:

  1 ಸೆಂಚುರಿ ಹೋಡಿಬೇಕಾದ್ರೂನು ತುಂಬಾ ಕಷ್ಟ ಇದೆ ಆ ಕಷ್ಟ ಪಾಪ ಆಡೋವ್ರ್ ಗೆನೆ ಗೋತ್ತಾಗೊದು.ಅದೃಷ್ಟ ಯಾವಗಲು ಒಂದೇ ತರಹ ಇರೋಲ್ಲಾ ಅಲ್ವಾ. ನಿವೃತ್ತಿ ತೆಗೆದುಕೋಂಡರೆ ಯುವ ಆಟ ಗಾರರಿಗೆ ಅವಕಾಶ ಸಿಗುತ್ತೆ. ಆದ್ರೇ ಏನೇ ಆದ್ರು ಕ್ರಿಕೆಟ್ ನಲ್ಲಿ ಸಚಿನ್ ಮಾಡಿರುವ ಸಾಧನೆ ಆಪಾರ ಅದಕ್ಕೆ ಅಲ್ಲವೇ ಅವರು ಕ್ರಿಕೆಟ್ ದೇವ್ರು ಆಗಿರೋದು ಬೇರೆ ದೇಶದ ಕ್ರಿಕೆಟ್ ಆಟಗಾರರು ದೇಶಕ್ಕೂಸ್ಕರ ಆಡ್ತಾರೆ ಅನ್ನೊದು ನಿಜ ಹಾಗೇಯೆ ನಮ್ಮ ದೇಶದಲ್ಲಿ ಚನ್ನಾಗಿ ದುಡ್ಡು ಮಾಡಿದ್ ಮೇಲೆ ದೇಶಾನ ಮರಿತಾರೆ ಅನ್ನೊದು ನಿಜನೇ. ಸಚಿನ್ ಮತ್ತೆ ಸೆಂಚುರಿ ಹೋಡ್*ದ್ರೇ ಹೋಗಳುತ್ತಾರೆ ಇಲ್ಲಾ ಅಂದ್ರೇ ಬೈತಾರೆ ಇದು ಸಾಮಾನ್ಯ ಆಗಿದೆ ನಮ್ಮ ದೇಶದಲ್ಲಿ. ಎರಡು ವರ್ಷಗಳ ಹಿಂದೆ ನೀವು ೧ ಸಂಪಾದಕೀಯ ಬರೆದಿದ್ದ್*ರೀ ಸಚಿನ್ ಸೆಹ್ವಾಗ್ ಬಗ್ಗೆ ಚನ್ನಾಗಿತ್ತು. ೨ ವರ್ಷದಲ್ಲಿ ಇಷ್ಟೆಲ್ಲಾ ಬದಲಾವಣೆ ಆಗಿದ್ದಾರೆ ಅಂದ್ರೇ ಅದು ಐಪಿಎಲ್ ಪ್ರಭಾವಾನೇ.

 5. sadanand says:

  i like ur articles. but todays article was hopeless. . .
  u have enough things discuss. . . .
  every one one r good in their view. . . .
  sachin is always sachin. . . .
  ricky and clarke will not play t20 for their country . . .also. …

  dodda shyana agabyada. . . ni comment madidda odabitra ellaru accept madabek anta rule illa. . .
  sachin bagge comment madaku ni 1%layakku illa.. . ..
  sachin is the proud of country. . .
  so plz stop commenting on him. . . focus on other things. ..
  otherwise u wil also listed to other hopeless journalist in my view

  ur’s article fan [not todays]

 6. Vamshi anand says:

  Pratap u r cent percent right… Ella vishayaanu adbhutavaagi baritira.. I like ur writing so much.

 7. Prabhuling says:

  Well said Pratapji,Well said…….truth

 8. jagadeesh says:

  it is a fact no body can denay this and media people should under stand and they should act with more responsibility taking real issues and causes

 9. Raghu says:

  Very Good Article Pratap Sir…… Ee IPL bande namma cricket ee mattige halagiruvudu…. First we have to stop this IPL…… Evarigella deshakkinta Dudde hecchagide…. BCCI kuda duddu maduvudaralli nirathavagide….

 10. shashank Rao says:

  Sir very very very nice article……,,,,&&& its 100% correct….

 11. sachin says:

  sir i’m disapointed

 12. Kiran says:

  I really dont agree with your argument . Try to be stick to one statement always.
  just go back to your older articles . you yourself praised sachin like hell and now dont talk diplomatically ok.

  you that fool ravi belegere all belongs to one pond

  nonsense

 13. ಉಪಯುಕ್ತ ಮಾಹಿತಿ,
  ಧನ್ಯವಾದಗಳು!!

 14. Super article sir. Sachin is no.1 cricketr by his records &character.If sachin would like to save his greatness it is better to give resign &give chance to young player

 15. Anil kumar says:

  Howdu anna…. Dravid este tyaga madidru… Elemarikayiyagi ulkobittiddare. Modalu madyamadavarige buddi helbeku. Matchgalu shuru agbeku annovastaralle… Sachin bagge mathanadutthare orathu bereyavara bagge swalpanu helo ude illa… Thanks anna intha olle article kottiddakke

 16. murali says:

  its realy true prathap….good column

 17. B N Yalamalli says:

  Great, Pratap.

  Indians and hence Indian Media are worshippers of individuals. They move up and down disproportionately with the performances of the team and individuals.

  The sponsoring brands have created unnecessary hype around the game and certain players.

  Politics and money making has entered every field in India. Game has lost its real spirit.

  Like Nehru and Lata Mangeshkar, Tendulkar wants to continue indefinitely and hence plays on and off at will.

  100th 100 and Bharat Ratna are waiting for him. And 100s of fit and bubbling youngsters are waiting for getting a chance. On their behalf we have to wish him to get his century fast and retire once for all.

 18. shrinivas says:

  super…………… true worlds.

 19. Harsha Sarnad says:

  sir Very Good Artical,sir u will focus many think…..

 20. Mahantesh Biswagar says:

  actual truth……..truth is always bitter

 21. anil balgi says:

  satya thumbha kahi andre iidhena………..

 22. Prashant Telaginamani says:

  Very nice articles. It has very true words, i wish to read all cricketers and board of Cricket association.

 23. Neel says:

  Don’t know sir, yaavag ee jana udhdhar aagthare antha, naanu nannadu annodu bittu naavu nammadu annovarege namma country developed country aagodu swalp kanasina maathe sir, sir thank u for such good articles…..

 24. pramod says:

  Rahul Dravid—Great Cricketer born at Wrong Time….

 25. chethan says:

  It was a superb article,…. this article made every one about the Indian cricket team…….

 26. chethan says:

  It was a superb article,.

 27. chethan says:

  It was a superb article,…..this article made everyone to know about our cricket team….

 28. Jayaram says:

  Very nice article sir…

 29. krishna says:

  barathada evagina paristithi

 30. poornima says:

  surely we r miossing a great leader like Sourav Ganguly., who can lead & inspire our team.. 🙁 we miss him.. 🙁

 31. ravi says:

  nice sir..

 32. very nice sir……………..

 33. Gajanana Sharma says:

  Superb article sir…!!!

 34. sridhar says:

  superb…..