Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇವರಿಬ್ಬರಲ್ಲಿ ‘ಸಕಾಲ’ಗುಣ ಸಂಪನ್ನರಾರು?

ಇವರಿಬ್ಬರಲ್ಲಿ ‘ಸಕಾಲ’ಗುಣ ಸಂಪನ್ನರಾರು?

ಅಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದರು. ಸ್ವಂತ ಪಕ್ಷದ ನಾಯಕರು, ಮಂತ್ರಿವರ್ಯರಿಗಿಂತ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರ ಮೇಲೆಯೇ ಹೆಚ್ಚು ವಿಶ್ವಾಸ, ನಂಬುಗೆ ತೋರಿಸಿಬಿಟ್ಟರು. ಅದು 1994. ವಿಶ್ವಸಂಸ್ಥೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾರತ ವಿರೋಧಿ ಗೊತ್ತುವಳಿಯೊಂದನ್ನು ಹೊರಡಿಸಲು ಭೂಮಿಕೆ ಸಿದ್ಧಗೊಳ್ಳುತ್ತಿತ್ತು. ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಜಿನೀವಾದಲ್ಲಿ ನಡೆಯಲಿದ್ದ ವಿಶ್ವಸಂಸ್ಥೆಯ ಶೃಂಗದಲ್ಲಿ ಭಾರತವನ್ನು ಖಂಡಿಸಿ ಗೊತ್ತುವಳಿಯೊಂದನ್ನು ಮಂಡಿಸಲು ನಮ್ಮ ಬದ್ಧ ವಿರೋಧಿ ಪಾಕಿಸ್ತಾನ ಮುಂದಾಗಿತ್ತು. ಅದಕ್ಕೆ ಮುಖ್ಯವಾಗಿ ಮುಸ್ಲಿಂ ರಾಷ್ಟ್ರಗಳಿಂದಲೇ ಕೂಡಿರುವ 51 ಸದಸ್ಯ ರಾಷ್ಟ್ರಗಳ ‘ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕಾನ್ಫೆರೆನ್ಸ್್’ (OIC) ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ ಕಾರಣ ಭಾರತಕ್ಕೆ ಮುಖಭಂಗವಾಗುವ ಎಲ್ಲ ಸಂಕೇತಗಳೂ ದೊರೆತವು. ಅದನ್ನು ನಿಶ್ಫಲಗೊಳಿಸಲು ಮುಂದಾದ ಪ್ರಧಾನಿ ನರಸಿಂಹರಾವ್ ಅವರಿಗೆ ಕಂಡ ಸೂಕ್ತ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ. ಅಟಲ್ ನೇತೃತ್ವದಲ್ಲಿ ವಿಶ್ವಸಂಸ್ಥೆಗೆ ಸಾಗಿದ ಫಾರೂಕ್ ಅಬ್ದುಲ್ಲಾ, ವಿದೇಶಾಂಗ ಸಚಿವ ದಿನೇಶ್ ಸಿಂಗ್ ಒಳಗೊಂಡ ನಿಯೋಗ ಅಂದು ಸಂಭವನೀಯ ಮುಖಭಂಗದಿಂದ ಭಾರತವನ್ನು ಪಾರುಮಾಡಿತು.

C cohesiveness ಹೊಂದಾಣಿಕೆಯೆಂಬುದು ಎಲ್ಲ ಕ್ಷೇತ್ರಗಳಲ್ಲೂ ಇರಬೇಕಾಗುತ್ತದೆ, ಅದರಲ್ಲೂ ಬಹುಪಕ್ಷೀಯ ರಾಜಕಾರಣದಲ್ಲಂತೂ ತೀರಾ ಅಗತ್ಯವೆನಿಸುತ್ತದೆ. ಇಲ್ಲಿ ಮತ್ತೊಂದು ಘಟನೆ ನೆನಪಾಗುತ್ತಿದೆ. 1995ರಲ್ಲೇ ಭಾರತ ಪೋಖ್ರಾನ್್ನಲ್ಲಿ ಎರಡನೇ ಅಣು ಪರೀಕ್ಷೆಯನ್ನು ನಡೆಸಬೇಕಿತ್ತು. ಆದರೆ ಅದರ ತಯಾರಿ ಅಮೆರಿಕದ ಉಪಗ್ರಹಗಳ ಕಣ್ಣಿಗೆ ಬಿದ್ದು, ಅಂತಾರಾಷ್ಟ್ರೀಯ ಒತ್ತಡಕ್ಕೆ ನರಸಿಂಹರಾವ್ ಮಣಿದ ಕಾರಣ ಪರೀಕ್ಷೆ ನಿಂತುಹೋಯಿತು. 1996ರಲ್ಲಿ ಅಟಲ್ ಬಿಹಾರಿಯವರ ಅಲ್ಪಾವಧಿ ಸರ್ಕಾರ ಅಧಿಕಾರಕ್ಕೆ ಬಂತು. ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ ಕೊಡದಿದ್ದರೇನು, ಅಂದು ವಾಜಪೇಯಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ಮಾಜಿ ಪ್ರಧಾನಿ ನರಸಿಂಹರಾವ್ ಗೌಪ್ಯ ಚೀಟಿಯೊಂದನ್ನು ಕಳುಹಿಸಿದರು. ಅದರಲ್ಲಿ ‘ಒ್ಡಡಡಿ ್ಜ್ಟ ಛಟಿಜ ಛಿಟಛಡಡಿ’ ಎಂದು ಬರೆದಿದ್ದರು. ಅಂದರೆ ಅಣುಪರೀಕ್ಷೆಗೆ ಎಲ್ಲವೂ ಸಿದ್ಧವಾಗಿದೆ, ಕೂಡಲೇ ಮಾಡಿ ಮುಗಿಸಿಬಿಡಿ ಎಂದು ಕಿವಿಮಾತು ಹೇಳಿದ್ದರು. ಇದು ಒಬ್ಬ ರಾಷ್ಟ್ರವಾದಿ, ಮುತ್ಸದ್ದಿ ಹಾಗೂ ಒಳ್ಳೆಯ ರಾಜಕಾರಣಿಯಲ್ಲಿ ಕಾಣಬಹುದಾದ ಗುಣ. ಅಟಲ್ ಸರ್ಕಾರ 13 ದಿನಗಳಲ್ಲೇ ಉರುಳಿದರೂ 1998ರಲ್ಲಿ ಅಟಲ್, ರಾವ್ ಆಸೆಯನ್ನು ಈಡೇರಿಸಿದರು. 1995ರಲ್ಲಿ ಎಲ್ಲವೂ ಸಿದ್ಧವಾಗಿತ್ತು, ಸ್ಫೋಟಿಸುವುದೊಂದನ್ನು ಬಿಟ್ಟು. ಆದರೂ ಎಲ್ಲ ಹೆಗ್ಗಳಿಕೆ ವಾಜಪೇಯಿಯವರಿಗೆ ದೊರೆಯುತ್ತದೆ ಎಂಬ ಈರ್ಷೆ ಬೆಳೆಸಿಕೊಳ್ಳದೆ, ರಾವ್ ರಾಷ್ಟ್ರಹಿತ ನೋಡಿದ್ದರು. ಈ ವಿಷಯವನ್ನು 2004ರಲ್ಲಿ ರಾವ್ ತೀರಿಕೊಂಡಾಗ ಸ್ವತಃ ವಾಜಪೇಯಿಯವರೇ ರಾಷ್ಟ್ರದ ಜನಕ್ಕೆ ತಿಳಿಸಿದರು. ಅದರ ಹೆಗ್ಗಳಿಕೆಯನ್ನು ರಾವ್್ಗೇ ನೀಡಿದರು. ರಾಜಕಾರಣದಲ್ಲಿ ಈ ರೀತಿಯ ಝಛ್ಟಜಡ್ಝಢಜಟಿಜಡಡ ಬೇಕೇ ಬೇಕು. ಆದರೆ ಅಂತಹ ಹೊಂದಾಣಿಕೆಯನ್ನು ತರುವ ಕಟ್ಡಿಡ, ಹೊಣೆಗಾರಿಕೆ ಯಾವತ್ತೂ ಅಧಿಕಾರದ ಚುಕ್ಕಾಣಿ ಹಿಡಿದವರ ಮೇಲಿರುತ್ತದೆ.

ಎಲ್ಲ ಅನಿಷ್ಟಗಳಿಗೂ ವಿರೋಧಿಗಳು ಹಾಗೂ ವಿರೋಧ ಪಕ್ಷದವರೇ ಕಾರಣ ಎಂದು ದೂರುತ್ತಿರುವ ಡಾ. ಬಿ.ಎಸ್. ಯಡಿಯೂರಪ್ಪನವರು ಎಂದಾದರೂ ಇಂತಹ ಗುಣವನ್ನು, ಹೃದಯ ವೈಶಾಲ್ಯತೆಯನ್ನು ತೋರಿದ್ದರೇ ಹೇಳಿ?

ದರ್ಪ, ಹೊಣೆಗೇಡಿ ಮಾತುಗಳು, ಮೈಮೇಲೆ ಏರಿ ಹೋಗುವುದು, ಸ್ವಪಕ್ಷದ ಶಾಸಕರನ್ನೇ ಕಾಲ ಕಸದಂತೆ ಕಾಣುವುದು, ಸ್ವಜಾತಿಯ ಭಟ್ಟಂಗಿಗಳ ಕೂಟ ರಚನೆ, ಆಡಳಿತದ ಎಲ್ಲ ಹಂತಗಳಲ್ಲೂ ‘ವಸೂಲಿ’ ರಾಜಕಾರಣ, ಎಲ್ಲ ವ್ಯವಸ್ಥೆಗಳಿಗೂ ಸ್ವಜಾತಿಯವರ ಪ್ರತಿಷ್ಠಾಪನೆ ಇವುಗಳನ್ನು ಬಿಟ್ಟರೆ ಯಡಿಯೂರಪ್ಪ ಮಾಡಿದ್ದೇನು? ಇಂತಹ ವ್ಯಕ್ತಿ ಇತ್ತೀಚೆಗೆ, ‘ಸದಾನಂದಗೌಡರ ಆಡಳಿತ ಬಿಜೆಪಿ-ಕಾಂಗ್ರೆಸ್ ಜೆಡಿಎಸ್ ಒಟ್ಟು ಸೇರಿ ನಡೆಸುತ್ತಿರುವ ಸರ್ಕಾರ’ ಎಂದು ಟೀಕೆ ಮಾಡಿದ್ದಾರಲ್ಲಾ, ಏಕಾಗಿ? ಅದಿರಲಿ, ಯಡಿಯೂರಪ್ಪನವರ ಆರೋಪದಲ್ಲಿ ಹುರುಳೇನಾದರೂ ಇದೆಯೆ? ಹೌದು, ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ಕಂಡುಬರುತ್ತಿದ್ದ ವಿರೋಧಪಕ್ಷಗಳ ಗದ್ದಲ್ಲ ಈಗ ತಣ್ಣಗಾಗಿರುವುದೇಕೆ? ಯಡ್ಡಿ ಅಧಿಕಾರಾವಧಿಯಲ್ಲಿ ಒಮ್ಮೆಯೂ ಗಲಾಟೆ, ಗೊಂದಲ, ಕ್ಷೋಬೆಯಿಲ್ಲದೆ ನಡೆಯದ ಅಧಿವೇಶನಗಳು ಕಳೆದ 7 ತಿಂಗಳಲ್ಲಿ ಅತ್ಯಂತ ಯಶಸ್ವಿಯಾಗಿ, ಸುಸೂತ್ರವಾಗಿ ನಡೆಯುತ್ತಿರುವುದೇಕೆ?

ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಬಿಎಸ್. ಯಡಿಯೂರಪ್ಪ ಹಾಗೂ ಡಿ.ವಿ. ಸದಾನಂದಗೌಡ ಇವರಿಬ್ಬರ ವ್ಯಕ್ತಿತ್ವ, ಮನಸ್ಥಿತಿ, ಯೋಗ್ಯಾಯೋಗ್ಯತೆಗಳನ್ನು ಅಳೆದು ತೂಗಲು, ಇಬ್ಬರಲ್ಲಿ ಯಾರು ‘ಸಕಾಲ’ಗುಣ ಸಂಪನ್ನರು ಎಂದು ತಿಳಿದುಕೊಳ್ಳಲು ಇದು ಸೂಕ್ತಕಾಲವೆನಿಸುತ್ತದಲ್ಲವೆ?

ಇವತ್ತು ಕರ್ನಾಟಕ ರಾಜಕಾರಣ ಈ ಮಟ್ಟಕ್ಕಿಳಿದಿದ್ದರೆ, ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದ್ದರೆ, ಕರ್ನಾಟಕ ಕೆಟ್ಟ ಕಾರಣಕ್ಕಾಗಿ ಇಂದು ಸುದ್ದಿಯಾಗುತ್ತಿದ್ದರೆ ಅದರ ಬಹುಪಾಲು ಹೊಣೆಯನ್ನು ಯಡಿಯೂರಪ್ಪನವರೇ ಹೊರಬೇಕು, ಅದಕ್ಕೆ ಯಡಿಯೂರಪ್ಪನವರಲ್ಲಿರುವ ವಿವೇಕರಹಿತ ದರ್ಪ, ಅಸಹನೆಯೇ ಕಾರಣ. 2008, ಮೇ 28ರಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅಧಿಕಾರದಿಂದ ಕೆಳಗಿಳಿಯುವವರೆಗೂ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಿ. ಮೋದಿ ಮಾದರಿ ಸರ್ಕಾರ ನೀಡುವುದಾಗಿ ಹೇಳುತ್ತಾ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಮಾಡಿದ ಮೊದಲ ತಪ್ಪೆಂದರೆ ಬಳ್ಳಾರಿ ಗಣಿ ಕಳ್ಳರ ದುಡ್ಡಿನ ಮದವನ್ನು ದುಡ್ಡಿನಿಂದಲೇ ಮಟ್ಟಹಾಕಲು ಹೊರಟರು. ಅವರು ಅದಿರು ಲೂಟಿ ಮಾಡಿದರೆ ಇವರು ವರ್ಗಾವಣೆ, ಅಧಿಕಾರಿಗಳಿಂದ ಸುಲಿಗೆ, ಡಿನೋಟಿಫಿಕೇಷನ್ ಮೂಲಕ ಶ್ರೀಮಂತರಾಗಲು ಹೊರಟರು. ಪ್ರಾಮಾಣಿಕತೆಯೇ ಒಂದು ಪ್ರಬಲ ಅಸ್ತ್ರ, ಪ್ರಾಮಾಣಿಕತೆ ಬಹುದೊಡ್ಡ ಶಕ್ತಿಯನ್ನು ತಂದುಕೊಡುತ್ತದೆ ಎಂಬುದು ಯಡಿಯೂರಪ್ಪನವರಿಗೆ ಅರ್ಥವಾಗಲಿಲ್ಲ. ಯಾವಾಗ ದುಡ್ಡಿನ ಹಿಂದೆ ಹೊರಟರೋ ಅಂದಿನಿಂದಲೇ ಅವರ ವ್ಯಕ್ತಿತ್ವದ ಹೊಳಪು ಮಾಸತೊಡಗಿತು, ಮುಖ್ಯಮಂತ್ರಿ ಸ್ಥಾನದ ಘನತೆ ಕುಗ್ಗತೊಡಗಿತು. ಅದರಿಂದ ಬಳ್ಳಾರಿ ರೆಡ್ಡಿಗಳ ಸೊಕ್ಕು ಹೆಚ್ಚಾಯಿತೇ ಹೊರತು ಯಡಿಯೂರಪ್ಪನವರು ಬಲಿಷ್ಠರಾಗಲಿಲ್ಲ. 6 ತಿಂಗಳಲ್ಲೇ ಯಡ್ಡಿ ಮಂಡಿಯೂರುವಂತೆ ಮಾಡಿದರು ರೆಡ್ಡಿಗಳು. ಇಂಧನ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪನವರ ಖಾತೆಯಲ್ಲಿ ಕೈಯಾಡಿಸಲು ಹೋದ ಕಾರಣ ಯಡ್ಡಿ-ಈಶು ನಡುವೆ ವರ್ಷ ತುಂಬುವಷ್ಟರಲ್ಲಿ ‘ಮಾಮೂಲಿ’ ಗಲಾಟೆ ಆರಂಭವಾಯಿತು. ಇನ್ನಾರು ತಿಂಗಳಲ್ಲಿ ರೆಡ್ಡಿಗಳು ಮತ್ತೆ ಯೆಡ್ಡಿ ಮುಖಭಂಗ ಮಾಡಿದರು. ಅಲ್ಲಿಗೆ ಹನಿಮೂನ್ ಅವಧಿ ಮುಗಿದು, ವಿರೋಧ ಪಕ್ಷಗಳು ಕಾರ್ಯಪ್ರವೃತ್ತಗೊಂಡವು. ಹಗರಣಗಳು ಯಡ್ಡಿ ಕುತ್ತಿಗೆಯನ್ನು ಸುತ್ತಿಕೊಳ್ಳಲಾರಂಭಿಸಿದವು. ಸದನದಲ್ಲಿ ಕೋಲಾಹಲ ಆರಂಭವಾಯಿತು. ಸುಮಾರು 25 ವರ್ಷ ವಿರೋಧ ಪಕ್ಷದಲ್ಲಿದ್ದರೂ, ವಿರೋಧ ಪಕ್ಷದ ನಾಯಕನಾಗಿದ್ದರು, ತಾವು ವಿರೋಧ ಪಕ್ಷದ ನಾಯಕನಾಗಿದ್ದಾಗ ಬಾಯಿಗೆ ಬಂದಂತೆ ಆರೋಪ ಮಾಡಿದ್ದರೂ ಮುಖ್ಯಮಂತ್ರಿಯಾದ ಕೂಡಲೇ ಯಡ್ಡಿ ವಿರೋಧ ಪಕ್ಷಗಳ ಬಗ್ಗೆ ಕೆಟ್ಟ ಅಸಹನೆ ಬೆಳೆಸಿಕೊಂಡರು. ಪ್ರತಿಪಕ್ಷಗಳು ಕೊಡುವ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯಿಸಲಾರಂಭಿಸಿದರು. ನನಗೆ 5 ವರ್ಷಗಳಿಗಾಗಿ ಜನಾದೇಶ ದೊರೆತಿದೆ, ಅಲ್ಲಿವರೆಗೂ ಪ್ರತಿಪಕ್ಷಗಳು ಬಾಯಿಗೆ ಬೀಗ ಹಾಕಿಕೊಂಡು ಕುಳಿತುಕೊಳ್ಳಬೇಕು ಎಂಬಂತೆ ವರ್ತಿಸಲಾರಂಭಿಸಿದರು. ಒಂದು ಸಣ್ಣ ಆರೋಪ ಮಾಡಿದರೂ ಅದಕ್ಕೆ ಉಗ್ರವಾಗಿ ಉತ್ತರಿಸಲು, ಪ್ರತಿಪಕ್ಷಗಳು ಮಾಡಿದ್ದ ಭ್ರಷ್ಟಾಚಾರದತ್ತ ಕೈತೋರಲು ಆರಂಭಿಸಿದರು. ಇದರಿಂದ ಪರಿಸ್ಥಿತಿ, ವೈಯಕ್ತಿಕ ಸಂಬಂಧಗಳು ಹಳಸಿ, ಸಂಘರ್ಷಕ್ಕೆ ಎಡೆಮಾಡಿಕೊಟ್ಟವು. ಒಮ್ಮೆ ಸೋನಿಯಾ ಗಾಂಧಿಯವರು ವಾಜಪೇಯಿಯವರನ್ನು ‘ಗದ್ದಾರ್್’ (ದೇಶದ್ರೋಹಿ) ಎಂದು ಕರೆದಾಗ, ‘ಕೆಲವೊಂದು ಪದಗಳು ಶಬ್ದಕೋಶದಲ್ಲಿದ್ದರೇ ಚೆನ್ನ’ ಎಂದು ಅಟಲ್ ಪ್ರತಿಕ್ರಿಯೆ ನೀಡಿದ್ದರು. ಇಂಥ ಮೇಲ್ಪಂಕ್ತಿಯನ್ನು ಅನುಸರಿಸುವುದು ಬಿಟ್ಟು ಯಡಿಯೂರಪ್ಪನವರು ಕೆಸರೆರಚಾಟ ಆರಂಭಿಸಿದರು. ಆಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರೂ ಸಿಟ್ಟಿಗೆದ್ದರು. ಭ್ರಷ್ಟಾಚಾರ ಮಾಡುತ್ತಿರುವುದಲ್ಲದೆ ಸುಭಗರಂತೆ ವರ್ತಿಸುತ್ತಿದ್ದ ಯಡ್ಡಿಯನ್ನು ತರಾಟೆಗೆ ತೆಗೆದುಕೊಂಡರು. 2010ರಲ್ಲಿ ನಡೆದ ಅಧಿವೇಶನವೊಂದರಲ್ಲಿ ಯಡಿಯೂರಪ್ಪನವರು ಎಷ್ಟು ವಿಚಿತ್ರವಾಗಿ, ಹುಂಬರಂತೆ ವರ್ತಿಸಿದರೆಂದರೆ ಸಿದ್ದರಾಮಯ್ಯನವರ ಮೇಲೆ ತೋಳೇರೆಸಿಕೊಂಡು ಹೋಗಿದ್ದರು. ಅದಕ್ಕೆ ಪ್ರತಿಯಾಗಿ ಸಿದ್ದು ತೊಡೆತಟ್ಟಿ ಕುಸ್ತಿಗೆ ಕರೆದಾಗ ಯಡ್ಡಿ ಉತ್ತರಕುಮಾರನಂತೆಆಸನಕ್ಕೆ ಮರಳಿದ್ದರು. ಮೈಮೇಲೆ ಗಣಬಂದಂತೆ ವರ್ತಿಸುವುದು, ಎಗರಿ ಹೋಗುವುದು, ದೇವೇಗೌಡರಿಗಿಂತ ಹೊಲಸು ಜಾತಿ ರಾಜಕಾರಣ ಇಂತಹ ಧೋರಣೆ, ಮನಸ್ಥಿತಿಗಳು ಯಡ್ಡಿ ಗಾದಿಗೆ ಮುಳುವಾದರೆ ದುಡ್ಡಿನ ಹಪಾಹಪಿ ಅವರ ಘನತೆ, ಗದ್ದುಗೆಯನ್ನು ಹಗುರವಾಗಿಸಿದವು. ‘ನನಗೆ ಅಧಿಕಾರ ನಡೆಸಲು ಬಿಡಲಿಲ್ಲ’ ಎಂದು ಈಗ ಪ್ರತಿಪಕ್ಷಗಳನ್ನು ದೂರುತ್ತಿರುವ, ಹಲುಬುತ್ತಿರುವ ಯಡ್ಡಿ, ಪ್ರತಿಪಕ್ಷಗಳನ್ನು, ಸ್ವಪಕ್ಷದವರನ್ನು ಯಾವ ರೀತಿ ನಡೆಸಿಕೊಂಡರೆಂಬುದನ್ನು ಮೊದಲು ಯೋಚಿಸಬೇಕಲ್ಲವೆ? ಪ್ರತಿಪಕ್ಷಗಳ ಕೆಲಸವೇ ತಪ್ಪು ಹುಡುಕುವುದು, ಆ ಮೂಲಕ ಸರ್ಕಾರವನ್ನು ಹದ್ದುಬಸ್ತಿನಲ್ಲಿಡುವುದು. ಅದರ ಬಗ್ಗೆ ಅಸಹನೆ ಬೆಳೆಸಿಕೊಂಡರೆ ಗತಿಯೇನು? ನೀವೇನೇ ಹೇಳಿ, ಉಪಮುಖ್ಯಮಂತ್ರಿಯಾಗಿದ್ದ, ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯನವರು ಒಬ್ಬ ಒಳ್ಳೆಯ ಆಡಳಿತಗಾರ, ದೂರದೃಷ್ಟಿ ಹೊಂದಿರುವ ವ್ಯಕ್ತಿ. ಯಡಿಯೂರಪ್ಪನವರು 4 ಬಜೆಟ್ ಮಂಡಿಸಿದ್ದರೂ ‘ಮಿಗತೆ'(ಸರ್ಪ್ಲಸ್) ಬಜೆಟ್ ಮಂಡಿಸಿದ ವ್ಯಕ್ತಿ ಸಿದ್ದು. ಇಂತಹ ಸಿದ್ದರಾಮಯ್ಯನವರ ವಿರುದ್ಧ ಆ ಸಿದ್ಧಲಿಂಗಸ್ವಾಮಿಯೆಂಬ ಯಕಶ್ಚಿತ್ ವ್ಯಕ್ತಿಯನ್ನು ಛೂ ಬಿಟ್ಟು, ಇಲ್ಲಸಲ್ಲದ ಹೇಳಿಕೆ ಕೊಡಿಸಿ, ಸಿದ್ದು ಅವರ ಅವಹೇಳನಕ್ಕೆ ಪ್ರಯತ್ನಿಸಿದ ಯಡ್ಡಿಗೆ ಪ್ರತಿಪಕ್ಷಗಳು ಯಾವ ಮರ್ಯಾದೆ ತಾನೇ ಕೊಡುತ್ತವೆ?

ಇಂತಹ ಯಡ್ಡಿಗೂ ಸದಾನಂದಗೌಡರಿಗೂ ಇರುವ ವ್ಯತ್ಯಾಸವೇನು ಗೊತ್ತೆ?

ಇಂದು ಯಡ್ಡಿ ಹೇಳಿದ ಕೂಡಲೇ ಕುರ್ಚಿ ಬಿಟ್ಟುಕೊಟ್ಟಿಲ್ಲದಿದ್ದರೂ ಸದಾನಂದಗೌಡರು ಅಧಿಕಾರದ ಹಪಾಹಪಿ ಹೊಂದಿರುವ ವ್ಯಕ್ತಿಯಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಾಗ ಕೆಎಂಎಫ್ ಅಧ್ಯಕ್ಷ ಸ್ಥಾನ ಅವರಿಗೆ ಸಿಗುತ್ತದೆಂಬ ನಿರೀಕ್ಷೆ ಇತ್ತು. ಆದರೆ ಸೋಮಶೇಖರ ರೆಡ್ಡಿ ಬಿಟ್ಟುಕೊಡಲಿಲ್ಲ. ಹಾಗಂತ ಸದಾನಂದಗೌಡರು ಯಡ್ಡಿಯಂತೆ ಕ್ಯಾತೆ ತೆಗೆಯಲ್ಲ. ಹಾಗಂತ ಸದಾನಂದ ಗೌಡರು ಒಬ್ಬ ದೊಡ್ಡ ನಾಯಕ, ವರ್ಚಸ್ವಿ ನೇತಾರ ಎಂದು ಹೇಳುತ್ತಿಲ್ಲ. ಯಡ್ಡಿ ಇತ್ತೀಚೆಗೆ ಅವರನ್ನು ಪದಚ್ಯುತಗೊಳಿಸಲು ಮುಂದಾದಾಗ ಒಕ್ಕಲಿಗ ಸಂಘದ ಗೋಸುಂಬೆಗಳು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರೂ ಸದಾನಂದಗೌಡರು ಪ್ರಭಾವಿ ಒಕ್ಕಲಿಗ ನಾಯಕ ಖಂಡಿತ ಅಲ್ಲ, ಅವರಿಗೆ ಜಾತಿ ಬೆಂಬಲವೂ ಇಲ್ಲ. ಆದರೆ ಸದಾನಂದಗೌಡರು ಒಬ್ಬ ಒಳ್ಳೆಯ ವ್ಯಕ್ತಿ. ‘ಅವರು ಎಮ್ಮೆಲ್ಲೆ ಆಗುವಾಗ ಹೇಗಿದ್ದರೋ ಮುಖ್ಯಮಂತ್ರಿಯಾದಾಗಲೂ ಹಾಗೆಯೇ ಇದ್ದಾರೆ. ಸ್ವಲ್ಪ ಕೂಡ ಬದಲಾಗಿಲ್ಲ’ ಎಂದು ಪುತ್ತೂರಿನಲ್ಲಿರುವ ಅವರ ವೈಯಕ್ತಿಕ ದಂತವೈದ್ಯರಾದ ಶ್ರೀಕೃಷ್ಣ ಭಟ್ ಹಾಗೂ ಅವರ ಪತ್ನಿ ಲಲಿತಾ ಭಟ್ಟರು ಹೇಳುತ್ತಾರೆ. ಇದು ಖಂಡಿತ ಉತ್ಪ್ರೇಕ್ಷೆಯ ಮಾತಲ್ಲ. ಅವರ ದೊಡ್ಡ ಸಾಮರ್ಥ್ಯವೆಂದರೆ ನಡೆದುಬಂದ ಹಾದಿಯನ್ನು ಮರೆಯದೇ ಇರುವುದು ಹಾಗೂ ಖಜ್ಛಜಠಡ್ಝಿಢಜ ಟ್ಝಟಿಜಡಜಡಿ, ಸ್ವೀಕರಿಸುವ ಮನೋಭಾವ. ಏಪ್ರಿಲ್ 1ರಂದು ಜಾರಿಗೆ ಬಂದ ‘ಸಕಾಲ’ ಯೋಜನೆಯನ್ನೇ ತೆಗೆದುಕೊಳ್ಳಿ. ಇಂಥದ್ದೊಂದು ಯೋಜನೆಯನ್ನು ಜಾರಿಗೆ ತಂದು, ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಪ್ರಸ್ತಾವವನ್ನು ಕಾನೂನು ಸಚಿವ ಸುರೇಶ್ ಕುಮಾರ್ ಮುಂದಿಟ್ಟಾಗ ಸದಾನಂದಗೌಡರು ಆಸಕ್ತಿ ತೋರಿದ್ದು ಮಾತ್ರವಲ್ಲ, ಕಾರ್ಯಪ್ರವೃತ್ತರಾಗುವುದಕ್ಕೆ ಹಸಿರು ನಿಶಾನೆಯನ್ನೂ ತೋರಿದರು. ಈ ‘ಸಕಾಲ’ ಮತ್ತೀನ್ನೇನೂ ಅಲ್ಲ, ಅಣ್ಣಾ ಹಜಾರೆ ಜಾರಿಗೆ ತರಬೇಕೆಂದು ಒತ್ತಾಯಿಸುತ್ತರುವ ‘ಸಿಟಿಝೆನ್ಸ್ ಚಾರ್ಟರ್್’. ಸುರೇಶ್ ಕುಮಾರ್ ಬಹಳ ಶ್ರಮಪಟ್ಟು ಇಡೀ ಯೋಜನೆಯನ್ನು ಸಿದ್ದಪಡಿಸಿದರು, ಸದಾನಂದಗೌಡರು ಜಾರಿಗೆ ತಂದಿದ್ದಾರೆ. ಇದರಿಂದಾಗಿ 120ಕ್ಕೂ ಹೆಚ್ಚು ಸೇವೆಗಳು ಜನರಿಗೆ ನಿರ್ದಿಷ್ಟ ಕಾಲಾವಧಿಯಲ್ಲಿ, ಲಂಚದ ಹಾವಳಿಯಿಲ್ಲದೆ ದೊರೆಯುತ್ತವೆ. ಸದಾನಂದಗೌಡರು ಅಧಿಕಾರಕ್ಕೆ ಬಂದು 7 ತಿಂಗಳಲ್ಲಿ ಇಂಥ ಅದ್ಭುತ ಯೋಜನೆಯನ್ನು ಜಾರಿಗೆ ತಂದರು. ಯಡ್ಡಿಯ ಮೂರೂವರೇ ವರ್ಷದ ಆಡಳಿತದಲ್ಲಿ ಇಂಥ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದ ಒಂದು ಉದಾಹರಣೆ ಕೊಡಿ ನೋಡೋಣ? ಇದೇ ಯೋಜನೆಯ ಪ್ರಸ್ತಾವವನ್ನಿಟ್ಟುಕೊಂಡು ಯಡ್ಡಿ ಬಳಿಗೆ ಹೋಗಿದ್ದರೆ ಬಹುಶಃ ತನಗೆಷ್ಟು ಬರುತ್ತದೆ ಎಂದು ಕೇಳುತ್ತಿದ್ದರೇನೋ! ಇಂತಹವುಗಳನ್ನು ಚರ್ಚಿಸಲು ಯಡ್ಡಿಗೆ ವ್ಯವಧಾನವಾದರೂ ಯಾವಾಗ ಇತ್ತು ಹೇಳಿ?

ಸದಾನಂದಗೌಡರಲ್ಲಿ ಆಡಳಿತದ ಅನುಭವ ಖಂಡಿತ ಇಲ್ಲ. ಹಾಗಾಗಿ ಅವರಲ್ಲಿ ದೂರದೃಷ್ಟಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಏನಾದರೂ ಬದಲಾವಣೆ ತರಬೇಕೆಂಬ, ಒಳ್ಳೆಯದೇನಾದರೂ ಮಾಡಬೇಕೆಂಬ ಮನಸ್ಥಿತಿಯಂತೂ ಇದೆ. ಆಡಳಿತ ಪಕ್ಷದ ಪ್ರಾಮಾಣಿಕತೆಯ ಬಗ್ಗೆಯೇ ಜನರಲ್ಲಿ ಅನುಮಾನಗಳು ಮೂಡಿವೆ ಎಂಬ ಕಾರಣಕ್ಕೆ ವಿಧಾನಸೌಧದ ಚಟುವಟಿಕೆಯ ನೇರ ಪ್ರಸಾರ ಆರಂಭಿಸಿದರು. ಅವರಲ್ಲಿ ಎದ್ದು ಕಾಣುವ ಮತ್ತೊಂದು ಗುಣವೆಂದರೆ ಸಾರ್ವಜನಿಕ ಸಂಪರ್ಕ ಕಲೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಹೇಗೆ ತಮ್ಮ ವರ್ತನೆಯಿಂದ ಜನರಿಗೆ ಆಪ್ತರಾಗಿದ್ದರೋ ಸದಾನಂದಗೌಡರನ್ನು ಕಂಡರೂ ಅದೇ ತೆರನಾದ ವಿಶ್ವಾಸ, ಭರವಸೆ ಮೂಡುತ್ತದೆ. ಅವರ ವರ್ತನೆಯನ್ನು ನೋಡಿದರೇ ಅಪ್ರೋಚೆಬಲ್ ಎನಿಸುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ, ಉರಿಪಿಂಡದಂತೆ ಯಡ್ಡಿ ವರ್ತಿಸುತ್ತಿದ್ದರು. ಕಳೆದ 2 ಅಧಿವೇಶನಗಳನ್ನೇ ತೆಗೆದುಕೊಳ್ಳಿ, ಪ್ರತಿಪಕ್ಷಗಳು ಎರಗಿ ಬಂದಾಗಲೆಲ್ಲ ಮುಖ್ಯಮಂತ್ರಿ ಸದಾನಂದಗೌಡರು ಯಡ್ಡಿಯಂತೆ ಪ್ರತಿದಾಳಿ ಮಾಡುವ ಬದಲು, ‘ಹಳೆಯದ್ದೆಲ್ಲ ಬಿಟ್ಟು ಬಿಡಿ, ನಾವು ಒಟ್ಟು ಸೇರಿ ಒಳ್ಳೆಯ ಕೆಲಸ ಮಾಡೋಣ’ ಎನ್ನುವ ಮೂಲಕ ತಣ್ಣಗಾಗಿಸುತ್ತಾರೆ. ಅಟಲ್್ಜಿಯವರಲ್ಲೂ ಇದೇ ಗುಣವಿತ್ತು. ಹಾಗಾಗಿ ಆಡಳಿತ ಸುಸೂತ್ರವಾಗಿ ನಡೆಯುತ್ತಿದೆಯೇ ಹೊರತು ಜೆಡಿಎಸ್, ಕಾಂಗ್ರೆಸ್ ಮೃದು ಧೋರಣೆ ತೋರಿವೆ ಎಂಬುದು ಸುಳ್ಳು. ಇಷ್ಟಕ್ಕೂ ಯಡಿಯೂರಪ್ಪನವರು ಇರುವಾಗ ಸದಾನಂದಗೌಡರಿಗೆ ವಿರೋಧ ಪಕ್ಷಗಳೇಕೆ ಬೇಕು? ಒಳ್ಳೆಯದನ್ನು ಮಾಡುವುದಕಾಗುತ್ತದೋ ಇಲ್ಲವೋ, ಆದರೆ ಎ್ಟ್ಟಜ ಐಟಿಡಿಜಟಿಡ್ಝ್ಟಿಟಿಡ ಇರಬೇಕು. ಅದು ಸದಾನಂದಗೌಡರಲ್ಲಿ ಕಾಣುತ್ತದೆ.

ಇದೇನೇ ಇದ್ದರೂ, ಎಲ್ಲ ದೌರ್ಬಲ್ಯಗಳ ನಡುವೆಯೂ ಯಡಿಯೂರಪ್ಪನವರು ಒಬ್ಬ ಪ್ರಭಾವಿ ನಾಯಕ, ಮಾಸ್ ಲೀಡರ್. ಸದ್ಗುಣಗಳು ಎಷ್ಟೇ ಇದ್ದರೂ ಸದಾನಂದಗೌಡರಿಗೆ ಪಕ್ಷಕ್ಕೆ ವೋಟು ತಂದುಕೊಡುವ ಸಾಮರ್ಥ್ಯವಿಲ್ಲ. ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಹಾಸನದ ಗೌಡರು ಚುನಾವಣೆಯಲ್ಲಿ ಕೃಷ್ಣ ಅಥವಾ ದೇವೇಗೌಡರಿಗೆ ವೋಟು ಹಾಕುತ್ತಾರೆಯೇ ಹೊರತು ಸದಾನಂದಗೌಡರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳುವುದಿಲ್ಲ. ಆದರೆ ವರ್ಚಸ್ಸು, ಬೆನ್ನಿಗೆ ಜಾತಿ ಬೆಂಬಲ ಇಟ್ಟುಕೊಂಡಿರುವ ಯಡಿಯೂರಪ್ಪನವರಿಗಷ್ಟೇ ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ಇದೆ. ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ವಾಪಸ್ಸಾಗುವುದು ಒಳಿತು.ಆದರೆ ಅದಕ್ಕಾಗಿ ಅವರು ಹಿಡಿದಿರುವ ಮಾರ್ಗ ಮಾತ್ರ ಹೇಸಿಗೆ ಹುಟ್ಟಿಸುತ್ತಿದೆ. ‘ನಾನು ಅಧಿಕಾರದಲ್ಲಿದ್ದಾಗ ಮಳೆ ಚೆನ್ನಾಗಿ ಆಗುತ್ತಿತ್ತು, ನಾನಿಲ್ಲದ ಕಾರಣ ಬರ ಎದುರಾಗಿದೆ’ ಎಂಬ ಚಿಲ್ಲರೆ ಮಾತುಗಳನ್ನು, ಸಣ್ಣತನವನ್ನು  ಬಿಡಬೇಕು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ 2001ರಿಂದ 2003ರವರೆಗೂ ಸತತ 3 ವರ್ಷ ಬರಗಾಲ ಎದುರಾಗಿತ್ತು. ಇತ್ತ ರಾಜ್ಯದಲ್ಲೂ ಬರ ಎದುರಾಗಿತ್ತು. ಅವುಗಳ ನಡುವೆಯೂ ಕೇಂದ್ರದಲ್ಲಿ ವಾಜಪೇಯಿ ಒಳ್ಳೆಯ ಕೆಲಸ ಮಾಡಿದರು, ನಮ್ಮ ರಾಜ್ಯದಲ್ಲೂ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ವಿತ್ತೀಯ ಹೊಣೆಗಾರಿಕೆ ಕಾಯಿದೆ, ಕರ್ನಾಟಕ ಬೆವರೇಜಸ್ ಕಾರ್ಪೊರೇಶನ್, ಭೂಮಿ ಯೋಜನೆ, ಐಟಿಗೆ ಉತ್ತೇಜನದಂಥ ಅದ್ಭುತ ಕೆಲಸ ಮಾಡಿದ್ದರು. 2004ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರಾದ್ಯಂತ ಒಳ್ಳೆಯ ಮಳೆಯಾಗುತ್ತಿದೆ. ಅಂದಮಾತ್ರಕ್ಕೆ ಕಾಂಗ್ರೆಸ್ ಒಳ್ಳೆಯ ಆಡಳಿತ ನೀಡುತ್ತಿದೆ ಎನ್ನಲು ಸಾಧ್ಯವೇ? ಇನ್ನು ಈ ಆಣೆ, ಪ್ರಮಾಣ, ವಾಗ್ದಾನದ ಕಥೆಯನ್ನು ಯಡ್ಡಿ ಮೊದಲು ನಿಲ್ಲಿಸಬೇಕು. ರೈತನ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದು ರೈತರ ಮೇಲೆ ಗೋಲಿಬಾರ್ ಮಾಡಿಸಿದ ಯಡಿಯೂರಪ್ಪನವರು ಆಣೆಗೆ ಎಷ್ಟು ಬೆಲೆ ಕೊಡುತ್ತಾರೆ ಎಂಬುದು ನಮಗೆ ಗೊತ್ತಿಲ್ಲವೇ? ಇಷ್ಟಾಗಿಯೂ,  ತಮ್ಮ ದಾಹ ತೀರಿಸಿಕೊಳ್ಳವುದಕ್ಕಲ್ಲ, ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಕಾರಣಕ್ಕೆ ಅಧಿಕಾರ ಬೇಕು ಎಂಬ ಭಾವನೆಯನ್ನು ಯಡ್ಡಿ ಮೂಡಿಸಬೇಕು. ಸದಾನಂದಗೌಡರನ್ನು ಸಾರ್ವಜನಿಕವಾಗಿ ಹೀಗಳೆಯುವುದು, ಟೀಕಿಸುವುದನ್ನು ಬಿಟ್ಟು ಅವರಲ್ಲಿರುವ ಜನಪರ ಕಾಳಜಿಯನ್ನು ರೂಢಿಸಿಕೊಳ್ಳಬೇಕು. ಏನಂತೀರಿ?

52 Responses to “ಇವರಿಬ್ಬರಲ್ಲಿ ‘ಸಕಾಲ’ಗುಣ ಸಂಪನ್ನರಾರು?”

  1. Santhosh says:

    ” ಆದರೆ ವರ್ಚಸ್ಸು, ಬೆನ್ನಿಗೆ ಜಾತಿ ಬೆಂಬಲ ಇಟ್ಟುಕೊಂಡಿರುವ ಯಡಿಯೂರಪ್ಪನವರಿಗಷ್ಟೇ ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ಇದೆ. ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ವಾಪಸ್ಸಾಗುವುದು ಒಳಿತು.” — I dont understand what it means, just b’cos he has Caste support can he become the CM with any number of corruption charges ?? If BJP wants to come to power, that should be independent of Yeddi’s shadow. This is the worst government, that Karnataka has ever witnessed. It’s better if karnataka goes for president rule,than having yedyurappa as again CM.

  2. Yashukumar.C.K says:

    Sir ,Please pass this to all

  3. Nithin Kanoji says:

    Nice..

  4. mathadaara says:

    I dont think Sada is good, looks like he is a crook. The Gang of Ananthi,Santhosh Hegde and Bramana sanga in BJP hatched the conspiracy to oust Yaddi.

    I bet without Yeddi BJP will not win more than 25 seats in coming elections.
    He did many works such as free bicycle, bhagya jothi, arunodaya ,free education to girl child and massive money to developmental work ( iam saw in my taluk the work is done was like never before ).

    Yeddi have had many compulsions when he assumed power with 110 seats and may be he was too scared to tame reddy brothers by which BJP lost all its image.

    Pratap, I am your ardent fan but before writing such article , you should tour across the state and discuss with common people then you will understand why yeddi is required to BJP who is better than faceless/leader less congress, corrupt father/son and cast promoter Gowda and kumara .

    Yours
    Ram Narayan

  5. mathadaara says:

    Talk to Gov officials how silently Sada is transferring able and strict officers to nonsense positions on behest of Devegowda . Is this a JDS Gov ruled by Sadananda ..better he join JDS officially

  6. k.raya says:

    if possible send this article to yeddi

  7. Super article sir.jailu vasa madi banda nantara yadiyurapparavarige buddi bramane aada hage kanisutte.yadiyurappanavaru tamma prathisthige tave masi badidukollutiddare. Kaleda 3 varsadinda yadiyurappa mattu kela sachivarinda paksakke aada damage ge patch work aagiddu sadananda gowdara 6 tingala aadalitha. Yadiyurappanavaru ennadaru jaati rajakarana asooye bittu sadananda gowdarige aadalithadalli sahakara kodabeku.

  8. Dhananjay says:

    Very Nice Article.

  9. M S Neginal says:

    ನಿಮ್ಮ ಈ ಲೇಖನ ಓದಿದ ಮೇಲೆಯಾದರು ಇಬ್ಬರು ಬದಲಾದರೆ ಈ ರಾಜ್ಯಕ್ಕೆ ಒಳ್ಳೆಯದು.

  10. Karthik Hiremath says:

    Superb article Pratap anna. YOU have mentioned very true points.. Government is doing good after Sadanandgowda Became CM.. I am Expecting a book Regarding nitish Kumar from you..

  11. manju says:

    yeddi has human instincts like any other. He should not be called as leader at all

  12. Mohan says:

    ಸಂಪೂರ್ಣವಾಗಿ ಪರಿಪೂರ್ಣ ಪದಗಳು

  13. Mohan says:

    ಸಂಪೂರ್ಣವಾಗಿ ಪರಿಪೂರ್ಣ ಪದಗಳು…………:-))

  14. Manjunatha.G.S Kolar says:

    We cannot compare two people but we can compare their Character, in this way this article is nice….

  15. Rajath says:

    Lekhana tumba chennaagide.

    Aadare Yediyoorappanavarige ee lekhana talupuvude.??

  16. muthu raj says:

    literaly true.

  17. Dharmasthala Manjunatha says:

    Congress is pushing BSY to a tight spot to garner maximum benefit.
    The strategy is to create a hopeless situation for BSY and at the end moment congress wants to save him from CBI enquiry and make a deal with him to split BJP. If that happens, that will be the last nail on Karnataka BJP’s coffin.
    BJP central leadership is still doing useless discussions with there outdated leaders.

    Former future primeminister had a oneline agenda of installing A.Kumar in Karnataka hot seat.
    Even in lokayuktha report total value of BSY scams doesn’t crosses rupees 20 crore mark.If we compare this with current scams of India, I really pity BSY for his current status in BJP.The same former future PM of India waits hours to see Jaya amma of TN.Everbody knows corruption charges on Jayalalitha and but none of the BJP central leaders are not ashamed to pose with Jaya.This shows the double standards of BJP and RSS top brass.

    Both BSY and Devegowda did a great mistake by without pestering media during there hey days. Both miserably failed to cultivate media for there advantage.This is also because media is controlled by people like Bhatta, Sharma,Sardesai,Roy,Gupta, Pai etc… But SMK got master of arts in handling media. He knows how to make media dance as per his tunes.

    Former Future PM did a great mistake by sidelining Madanlal Khurana, Kalyan singh, Umabharati and now he is doing same with BSY.
    Unlike Atalji ,this man cannot win elections and even his own seat if Narendra Modi doesn’t cooperates.
    He tried to suppress Modi but yielded no result.

    Maintaining support of 70 MLA’s after loosing CM post is not a joke. If we observe the history of karnataka politics from likes of Nijalingappa, Devraj urs, Veerendra Patil, Hegde, Bangarappa, Devegowda all have lost faith of MLA’s once they were out of power.
    This clearly shows that BSY is not a just another leader but a commonder who can bring votes to his supporters and party.

    At first, Devegowda and Kumaraswamy betrayed BSY.
    Now there is a feeling that Sadananda Gowda and BJP are following the foot steps of Devegowda and HDK.
    Everybody knows the status of JD(S) in karnataka after there betrayal act on BSY.
    In the same way, whole world will see the fate of BJP and Sadananda betrayal gowda in the next elections.
    Currently, All decisions of Sadanandagowda is taken by Devegowda and supported by Siddaramaiah. So in simple terms, we have BJP-JDS-Congress coalition government. One point agenda of JDS and Congress is to avoid BSY from becoming CM, doing so they want to avoid consolidation of votes behind BSY for next elections.

    There is clear indication that,BSY to dump BJP and form a regional party and make alliance with congress during elections. The deadly combination of Lingayats, Muslims and OBC’s to garauntee atleast 160 seats in elections.
    Sonia Gandhi’s planned visit to Siddaganga Mutt at the end of April is the first step in this regard.
    If this plan becomes successful, BJP’s Hindu Government in South will become history forever.

    As a part of the larger plan BSY’s daughter is joining congress on April 28th.
    Somanna and Kore are acting as facilitators for this entire plan.

    Becoming a mascot of any religion or community or a brand is not a small thing.
    It requires lot of patience and attitude to win over minds of that particular community.
    Some of the great examples are Mulayam for Muslims, Modi for Hindu pride, Balasaheb for Marathi pride, Devegowda for vokkaligas, Siddaramaiah for Kurubas,
    Bangarappa for Edigas, YSR for Reddys and BSY for Lingayats.

    Sadananda gowda cannot defect vokkaliga voters away from Devegowda, Eshwarappa will never succeed to defect Kuruba voters from Siddaramaiah,similarly nobody can replace BSY for Lingayats.

  18. RK says:

    Hi,
    It is very good article… Yes we all agree that a leader is called a leader if he has listening power, provide friendly environment so that either other politicians or public can approach…

    I pray and wish everything goes smooth and all goes well soon

    Regards,
    Raghavendra Kodandarama

  19. Devaraj says:

    good message for kannadigarigagi..

  20. Nagesh D says:

    very nice sir…

  21. deepak says:

    super article…. people should get matured…..people in karnataka should stop promoting caste based politics….i dont find a single true leader like modi neihter in ruling or in opposition…

  22. deepak says:

    even though we pay highest tax in karnataka, all the money goes in to the pockets of bloody politicians….

    people should support strong jan lokpal bill… then only we can root out corruption and india can develop…. otherwise only politicians can develop from our money….

  23. Raju G says:

    Pratap, you have brought out an excellent article by giving examples of Vajpayee and Narsimha Rao…
    1. Yeddyurappa forgot his past on May 28th 2008 itself! He himself doesn’t know his own party’s & India’s till date best PM Vajpayee sir is. He could have just followed his ways to handle things & could have given good governance.
    2. Completely agree about Sadananda Gowda. We have little luck going our way! Atleast till next elections we have a CM who is not Yeddyurappa! and he is trying to give a good governance.
    3. I hope that Yeddy would have read this article and realized what he has done to state & to the mandate people have given him.

    Thanks for this article! One more request, I am very keen to see your next article on “Bheema Theeradalli !!”. All the best!

  24. jagadish says:

    Yeddi ll be suitable to sit in opposition leader place…

  25. Shantkumar n k says:

    Nice rightting sir

  26. Mallanagouda says:

    Hi Sir,

    I am a favourite fan of u I will cal u , u r a “Social Teacher”, u will give more information of social activities good thinker, good journalist. All r appreciate you.
    Thank u sir.

  27. santhosh says:

    it is very nice article . i wish yeddi could have read this article and try to change himselp. he is the worst CM as karnataka ever seen.

  28. Balakrishna says:

    PRATHAP olleya mathu $ olleya salahe

  29. Mithun says:

    Very nice article Sir :).

  30. anvith says:

    sir you are right but Dr.Yediyurappa needs some maturity sometimes i feel he behaves like a kid its high time that b.j.p leaders show some maturity b.j.p government is better but its left to its leaders to make it best.I hope you like my analysis if possible please comment on my analysis

  31. Anupama says:

    Well said. BJPYalliruva ellaru ottagi deshada hitakke dudidare janagalu adikara koduttare.. illa andare ide modalu ide kone aguttade BJP ya adikara Karnatakadalli

  32. jp giliyar says:

    superb prathap………yeddi reddi jagala karnataka badavaithu………

  33. Dr Shailesh Bhagavath says:

    ಅದ್ಭುತ ಲೇಖನ!!! ಯಡಿಯೂರಪ್ಪ ಇದನ್ನು ಒಮ್ಮೆ ಮುಕ್ತ ಮನಸ್ಸಿನಿಂದ ಓದಿದ್ರೆ ಕರ್ನಾಟಕಕ್ಕೆ ಹಿಡಿದಿರೋ ಅರ್ಧ ಪೀಡೆ ತೊಲಗಿದ ಹಾಗೆ…

  34. Dr Shailesh Bhagavath says:

    btw.. i’m really unaware abt ಭೀಮಾ ತೀರದಲ್ಲಿ controversy… can any 1 tel me abt dis… coz m stayin away frm karnataka since last 5-6 mnths n no kannada channels available here..!!!

  35. ನಂದಕುಮಾರ್ ಪುತ್ತೂರು. says:

    ಪ್ರತಾಪ್ ಅವರೇ..

    ಈ ಅಂಕಣವು ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಸಾಮ್ಯತೆಯನ್ನು ತೋರಿಸಿಕೊಟ್ಟಿದೇನೋ..ನಿಜವೇ, ಆದರೆ ಒಂದೆಡೆ ನೀವು “ಇವತ್ತು ಕರ್ನಾಟಕ ರಾಜಕಾರಣ ಈ ಮಟ್ಟಕ್ಕಿಳಿದಿದ್ದರೆ, ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದ್ದರೆ, ಕರ್ನಾಟಕ ಕೆಟ್ಟ ಕಾರಣಕ್ಕಾಗಿ ಇಂದು ಸುದ್ದಿಯಾಗುತ್ತಿದ್ದರೆ ಅದರ ಬಹುಪಾಲು ಹೊಣೆಯನ್ನು ಯಡಿಯೂರಪ್ಪನವರೇ ಹೊರಬೇಕು”ಎಂದಿದ್ದೀರಿ,ಅದು ನಿಜಾನೇ. ಇನ್ನೊಂದೆಡೆ “ಯಡಿಯೂರಪ್ಪನವರಿಗಷ್ಟೇ ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ಇದೆ.ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ವಾಪಸ್ಸಾಗುವುದು ಒಳಿತು.” ಎಂದಿದ್ದೀರಲ್ಲ..ಏನಿದರ ಮರ್ಮ..? ಬಿಜೆಪಿ ಪಕ್ಷ ಕ್ಕೆ ಅಂತ ದುರ್ಗತಿಯೇ..? ನಾಯಕನಿಲ್ಲದೇ ಅಥವಾ ನಾಯಕನ ತಯಾರಿಕೆಗೆ ದರಿದ್ರವೇ.ಪಕ್ಷದಲ್ಲಿ ..? ಯಡಿಯೂರಪ್ಪನವರಿಗೆ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯ ಇದ್ದರೆ ರೆಡ್ಡಿ ಬ್ರದರ್ಸ್ ಗಳಿಗೆ ಓಟು ತಂದು ಕೊಡುವ ತಾಕತ್ತು ಇತ್ತು ಅದನ್ನು “ತೋರಿಸಿಯೂ ಕೊಟ್ಟರು”. ಹಾಗಾದರೆ ಮುಂದೆ ಅವರೂ ಕೂಡ ಮುಖ್ಯಮಂತ್ರಿ ಯಾಗಬಹುದಲ್ಲವೇ..? ಸದಾನಂದ ಗೌಡರು ಸ್ವಚ್ಛ ರಾಜಕಾರಣ ಮಾಡುತ್ತಿದ್ದಾರೆ ಅಂತಹವರ ಅಗತ್ಯ ನಮ್ಮ ರಾಜ್ಯಕ್ಕಿಲ್ಲವೇ..? ಇವರ ಉತ್ತಮ ಆಡಳಿತ ಜನರ ಬಳಿ ತಲುಪಿಸಿ ಮತಗಳಾಗಿ ಪರಿವರ್ತಿಸುವಲ್ಲಿ ಬಹು ದೊಡ್ಡ ಸವಾಲು ಅವರಿಗೆ ಇದೆ ನಿಜವೇ..ಅಂದ ಮಾತ್ರಕ್ಕೆ ಯಡಿಯೂರಪ್ಪ ಹಾಗೂ ಅಂತಹವರನ್ನು ಮುಖ್ಯಮಂತ್ರಿ ಯಾನ್ನಗಿಸುವ ಸನ್ನಿವೇಶ ಬಿಜೆಪಿಗೂ ಮತ್ತು ರಾಜ್ಯದ ಜನತೆಗೂ ಬಾರದಿರಲಿ. ಬಿಜೆಪಿಗೆ ನಿಜವಾಗಿಯೂ ಯಡಿಯೂರಪ್ಪನವರ ಅಗತ್ಯತೆ ನೀವು ಹೇಳುವಷ್ಟರ ಮಟ್ಟಿಗೆ ಇರಬಾರದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಇದು ಒಳಿತಲ್ಲವೇ.ಅಲ್ಲ..! ಒಂದು ವೇಳೆ ಇದೆ ಎಂದಾದರೆ “ಪಳೆಯುಳಿಕೆ ಶಾಸ್ತ್ರದ ಅರ್ಕಿಯಾಪ್ಟರಿಕ್ಸ್”ನಂತೆ ಬಿಜೆಪಿ ಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಒಳಿತು ಎಂದೆನಿಸುವುದಿಲ್ಲವೇ..? ..?ಏನಂತೀರಿ ಪ್ರತಾಪ್ ಅವರೇ..?
    -ನಂದಕುಮಾರ್ ಪುತ್ತೂರು.
    ಸೌದಿ ಅರೇಬಿಯಾ.

  36. Agree with following some points appeared in your article…Very well analyzed

    1. ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ಕಂಡುಬರುತ್ತಿದ್ದ ವಿರೋಧಪಕ್ಷಗಳ ಗದ್ದಲ್ಲ ಈಗ ತಣ್ಣಗಾಗಿರುವುದೇಕೆ?
    2. ಸದ್ಗುಣಗಳು ಎಷ್ಟೇ ಇದ್ದರೂ ಸದಾನಂದಗೌಡರಿಗೆ ಪಕ್ಷಕ್ಕೆ ವೋಟು ತಂದುಕೊಡುವ ಸಾಮರ್ಥ್ಯವಿಲ್ಲ.
    3. ಎಲ್ಲ ದೌರ್ಬಲ್ಯಗಳ ನಡುವೆಯೂ ಯಡಿಯೂರಪ್ಪನವರು ಒಬ್ಬ ಪ್ರಭಾವಿ ನಾಯಕ, ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ಇದೆ.
    4. ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ವಾಪಸ್ಸಾಗುವುದು ಒಳಿತು.
    5. ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಕಾರಣಕ್ಕೆ ಅಧಿಕಾರ ಬೇಕು ಎಂಬ ಭಾವನೆಯನ್ನು ಯಡ್ಡಿ ಮೂಡಿಸಬೇಕು.

  37. vidya kiran says:

    good one sir. write something about ravi belegere and his political views.. thank you sir.

  38. padmanabha says:

    100% correct

  39. Lakshmi Bhat says:

    pratap nivu pratiyondu vishayavannu vishleshisi janara mundiduva nimma baravanigeya shyli mechuvantaddu.

  40. NARENDRA says:

    very good article. everyone should learn that attitude from attalji….

  41. lohit kumbar says:

    good article….

    we r fed up with dirty politics of karnataka…
    Let BJP central leaders through out YADDY from the BJP and save some image ATAL JI AND ADVANI JI…

    we need peacefull and effective government…

    thanks for good article prathap….

  42. ಸಾರ್,

    ಪೋಲಿಟಿಶನ್ಸ್ ಅದವರು ಅವರಿಗೆ ಒ೦ದು ಜವಾಬ್ದಾರಿ ಇರುತ್ತೆ, ಅದನ್ನು ಬಿಟ್ಟು ಇವರೆಲ್ಲಾ ಸ್ವಾರ್ಥಕ್ಕೆ ರಾಜಕಿಯ ಬಳಸಿಕೊಳ್ಳುತ್ತಾರೆ. ಜಾತಿ ರಾಜಕೀಯ, ಬ್ರಷ್ಟಾಚಾರ, ಕಾಲು ಎಳೆಯುವುದು ಬರೀ ಇದೆ ಇವರ ಸಾಧನೆ. ಒಬ್ಬ ಒಳ್ಳೆಯ ವ್ಯಕ್ತಿ ಅಧಿಕಾರಕ್ಕೆ ಬ೦ದ ಅ೦ತಾ ಇದ್ದರೆ ಅಲ್ಲಿ ಅವ್ರು ತಮ್ಮ ವರಸೆ ತೋರಿಸಿತಾರೆ, ಜನರು ಅಷ್ಟೆ ಒಟು ಕೊಡಿ ಅ೦ತ ಬ೦ದರೆ ದುಡ್ಡು ಕೇಳುತಾರೆ. ಇರೋ ವ್ಯವಸ್ಥೆ ಶಫಿಸಿ ಸುಮ್ಮನಾಗಬೇಕು ಗೋತ್ತಿಲ್ಲ. ನಮ್ಮನ್ನು ಚಿ೦ತನಗೆ ಹಚ್ಚಿದಕ್ಕೆ ತಮಗೆ ದನ್ಯವಾದಗಳು.

  43. ನಂದಕುಮಾರ್ ಪುತ್ತೂರು. says:

    ಪ್ರತಾಪ್ ಅವರೇ..
    ಈ ಅಂಕಣವು ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಸಾಮ್ಯತೆಯನ್ನು ತೋರಿಸಿಕೊಟ್ಟಿದೇನೋ..ನಿಜವೇ, ಆದರೆ ಒಂದೆಡೆ ನೀವು “ಇವತ್ತು ಕರ್ನಾಟಕ ರಾಜಕಾರಣ ಈ ಮಟ್ಟಕ್ಕಿಳಿದಿದ್ದರೆ, ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದ್ದರೆ, ಕರ್ನಾಟಕ ಕೆಟ್ಟ ಕಾರಣಕ್ಕಾಗಿ ಇಂದು ಸುದ್ದಿಯಾಗುತ್ತಿದ್ದರೆ ಅದರ ಬಹುಪಾಲು ಹೊಣೆಯನ್ನು ಯಡಿಯೂರಪ್ಪನವರೇ ಹೊರಬೇಕು”ಎಂದಿದ್ದೀರಿ,ಅದು ನಿಜಾನೇ. ಇನ್ನೊಂದೆಡೆ “ಯಡಿಯೂರಪ್ಪನವರಿಗಷ್ಟೇ ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ಇದೆ.ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ವಾಪಸ್ಸಾಗುವುದು ಒಳಿತು.” ಎಂದಿದ್ದೀರಲ್ಲ..ಏನಿದರ ಮರ್ಮ.?ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇಂತಹ ದುರ್ಗತಿಯೇ..? ನಾಯಕನಿಲ್ಲದೇ ಅಥವಾ ನಾಯಕನ ತಯಾರಿಕೆಗೆ ದರಿದ್ರವೇ.ಪಕ್ಷದಲ್ಲಿ ..? ಯಡಿಯೂರಪ್ಪನವರಿಗೆ ಪಕ್ಷವನ್ನು ಗೆಲ್ಲಿಸುವ ಸಾಮರ್ಥ್ಯ ಇದ್ದರೆ, “ರೆಡ್ಡಿ ಬ್ರದರ್ಸ್” ಗಳಿಗೆ ಓಟು ತಂದು ಕೊಡುವ ತಾಕತ್ತು ಇತ್ತು ಅದನ್ನು ತೋರಿಸಿಯೂ ಕೊಟ್ಟರು. ಹಾಗಾದರೆ ಮುಂದೆ ಅವರೂ ಕೂಡ ಮುಖ್ಯಮಂತ್ರಿ ಯಾಗಬಹುದಲ್ಲವೇ..? ಸದಾನಂದ ಗೌಡರು ಸ್ವಚ್ಛ ರಾಜಕಾರಣ ಮಾಡುತ್ತಿದ್ದಾರೆ, ಅಂತಹವರ ಅಗತ್ಯ ನಮ್ಮ ರಾಜ್ಯಕ್ಕಿಲ್ಲವೇ…? ಇವರ ಉತ್ತಮ ಆಡಳಿತ ಜನರ ಬಳಿ ತಲುಪಿ ಮತಗಳಾಗಿ ಪರಿವರ್ತಿಸುವಲ್ಲಿ ಬಹು ದೊಡ್ಡ ಸವಾಲು ಇವರ ಮುಂದೆ ಇದೆ ನಿಜವೇ..ಅಂದ ಮಾತ್ರಕ್ಕೆ ಯಡಿಯೂರಪ್ಪನಂತವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿಸುವ ದುಸ್ಥಿತಿ ಬಿಜೆಪಿಗೂ ಮತ್ತು ರಾಜ್ಯದ ಜನತೆಗೂ ಬಾರದಿರಲಿ .ಬಿಜೆಪಿಗೆ ನಿಜವಾಗಿಯೂ ಯಡಿಯೂರಪ್ಪನವರ ಅಗತ್ಯತೆ ನೀವು ಹೇಳುವಷ್ಟರ ಮಟ್ಟಿಗೆ ಇರಬಾರದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಇದು ಒಳಿತಲ್ಲವೇ.ಅಲ್ಲ..! ಒಂದು ವೇಳೆ ಇದೆ ಎಂದಾದರೆ “ಪಳೆಯುಳಿಕೆ ಶಾಸ್ತ್ರದ ಅರ್ಕಿಯಾಪ್ಟರಿಕ್ಸ್”ನಂತೆ ಬಿಜೆಪಿ ಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಒಳಿತು ಎಂದೆನಿಸುವುದಿಲ್ಲವೇ..? ..?ಏನಂತೀರಿ ಪ್ರತಾಪ್ ಅವರೇ..?

    ನಂದಕುಮಾರ್ ಪುತ್ತೂರು.

  44. Malappa S N says:

    ಈ ಬಿಜೆಪ ಸರ್ಕಾರ್ ಬಂದು ನೆಮ್ಮದಿ ಮಾಡಿ ಕೊಳ್ಳೆ ಓಡಿತ ಎದ್ದರೆ.

  45. chetan kumar says:

    yesterday i posted one on saying its not appearing

  46. Chandrashekar says:

    BJP can survive only from yeddurappa, Only Yeddurappa has guts to speak about devegowda and sons.
    Yeddurappa did improve karnataka a lot.
    But he should surely read this eye opening article.

  47. Prakash.k mathihalli says:

    ಇದೇನೇ ಇದ್ದರೂ, ಯಡಿಯೂರಪ್ಪನವರು ಒಬ್ಬ ಪ್ರಭಾವಿ ನಾಯಕ, ಮಾಸ್ ಲೀಡರ್. ಸದ್ಗುಣಗಳು ಎಷ್ಟೇ ಇದ್ದರೂ ಸದಾನಂದಗೌಡರಿಗೆ ಪಕ್ಷಕ್ಕೆ ವೋಟು ತಂದುಕೊಡುವ ಸಾಮರ್ಥ್ಯವಿಲ್ಲ.
    Pratap,
    I am your ardent fan but before writing such article , you should tour across the state and discuss with common people then you will understand why yeddi is required to BJP who is better than faceless/leader less congress, corrupt father/son and cast promoter Gowda and kumara
    ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ವಾಪಸ್ಸಾಗುವುದು ಒಳಿತು .

  48. chetan kumar says:

    NALAYA SUVARNA NEWS, biaSED NEWS CHANNEL , BELONGS TO RSS PROMOTING BAHMISIN IN KARNATAKA SUPPORTING NALAYA POLITICIAN Mr.ANANTH KUMAR

    ALL YOUR NEWS ARE BIASED

  49. Nice and timely article!!

  50. sharath says:

    No one can replace BSY. He is still a mass leader. Without his presence, BJP will limit to 25 to 30 seats. Without BSY, BJP is just a Bramhana Janatha Party.