Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಪ್ರತಿ ಭಾರತೀಯ ಹೆಮ್ಮೆಪಡುವಂತೆ ಮಾಡಿದ ಭುಟಿಯಾ!

ಪ್ರತಿ ಭಾರತೀಯ ಹೆಮ್ಮೆಪಡುವಂತೆ ಮಾಡಿದ ಭುಟಿಯಾ!


God’s gift to Indian football!!

ಹಾಗಂತ ಮೂರು ಬಾರಿ ವರ್ಷದ ಭಾರತೀಯ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಐ.ಎಂ. ವಿಜಯನ್ ಅವರೇ ಹೇಳಿದ್ದರು. ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಬೈಚುಂಗ್ ಭುಟಿಯಾ ಸ್ಥಾನವೆಂಥದ್ದು ಎಂಬುದನ್ನು ವಿಜಯನ್ ಮಾತುಗಳಿಂತ ಚೆನ್ನಾಗಿ ಹಿಡಿದಿಡಲು ಸಾಧ್ಯವೇ ಇಲ್ಲ. ಇವತ್ತಿಗೂ ಫುಟ್ಬಾಲ್ ಬಗ್ಗೆ ನಮ್ಮಲ್ಲಿ ಕೆಲವೊಂದು ಮಿಥ್ಯೆಗಳಿವೆ. ಬಹಳ ದೈತ್ಯ, ದೃಢಕಾಯದವರು ಮಾತ್ರ ಆಡಬಹುದಾದ ಆಟವದು, ನಮ್ಮ ಭಾರತೀಯರ ಕೈಯಿಂದಾಗದು, ನಮ್ಮವರು ಬಹುಬೇಗ ಬಳಲುತ್ತಾರೆ, ಕಾಲಿಗೆ ಫೆವಿಕಾಲ್ ಅಂಟಿಸಿಕೊಂಡೂ (ಫುಟ್್ವರ್ಕ್ ಇಲ್ಲದೆಯೂ) ಕ್ರಿಕೆಟ್ ಆಡಬಹುದು, ಆದರೆ ಫುಟ್ಬಾಲ್್ನಲ್ಲಿ ಕಾಲು ನಿಂತಲ್ಲಿ ನಿಲ್ಲುವಂತಿಲ್ಲ, ಸೋಮಾರಿಗಳಾದ ನಮ್ಮವರಿಂದ ಅದೆಲ್ಲಾ ಆಗದು. ಈ ರೀತಿಯ ಮಾತುಗಳನ್ನು ನೀವೂ ಕೇಳಿರಬಹುದು. ಇವತ್ತು ನಮಗಿಂತ ದುರ್ಬಲಕಾಯದವರಾದ, ಕುಳ್ಳರಾದ ಜಪಾನಿಯರು, ಕೊರಿಯನ್ನರು, ಚೀನಿಯರು ವಿಶ್ವಮಟ್ಟದಲ್ಲಿ ಫುಟ್ಬಾಲ್್ನಲ್ಲಿ ಹೆಸರು ಗಳಿಸುವ ಮೂಲಕ ಕಾಯಕ್ಕೂ ಕಾಲ್ಚಳಕಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಅಂದಮಾತ್ರಕ್ಕೆ ಈ ಸತ್ಯವನ್ನು ನಮ್ಮವರ್ಯಾರೂ ಇದುವರೆಗೂ ಅರ್ಥಮಾಡಿಕೊಂಡಿರಲೇ ಇಲ್ಲ ಎಂದು ಭಾವಿಸಬೇಡಿ. ಸ್ವಾಮಿ ವಿವೇಕಾನಂದರು 110 ವರ್ಷಗಳ ಹಿಂದೆಯೇ ಹೇಳಿದ್ದರು ಎಂದರೆ ನಂಬುತ್ತೀರಾ?

“You will be nearer to heaven through football than through the study of the Gita’!

ಪರಾಕ್ರಮದ ಸಂಕೇತವೇ ಶಕ್ತಿ

ಜೀವನದ ಧ್ಯೋತಕವೇ ಶಕ್ತಿ

ಭರವಸೆಯ ಕುರುಹೇ ಶಕ್ತಿ

ಆರೋಗ್ಯದ ಲಕ್ಷಣವೇ ಶಕ್ತಿ

ಆದ್ದರಿಂದ ಶಕ್ತಿವಂತರಾಗಿ ನನ್ನ ಯುವಮಿತ್ರರೇ ಎನ್ನುತ್ತಿದ್ದ ವಿವೇಕಾನಂದರು, “First of all, our young men must be strong. Religion will come afterwards. Be strong, my young friends; that is my advice to you. You will be nearer to heaven through football than through the study of the Gita. These are bold words; but I have to say them, for I love you. I know where the shoe pinches. I have gained a little experience. You will understand the Gita better with your biceps, your muscles, a little stronger. You will understand the mighty genius and the mighty strenght of Krishna better with a little of strong blood in you’. ಅಂದರೆ ಪ್ರಪ್ರಥಮವಾಗಿ ನಮ್ಮ ಯುವಜನರು ಬಲಾಢ್ಯರಾಗಬೇಕು, ಧರ್ಮವೆಲ್ಲ ಆಮೇಲೆ ಬರುವುದು. ಓ ನನ್ನ ಯುವಮಿತ್ರರೇ ಬಲಾಢ್ಯರಾಗಿ. ಇದೇ ನಿಮಗೆ ನನ್ನ ಬುದ್ಧಿವಾದ. ನೀವು ಭಗವದ್ಗೀತೆಯನ್ನು ಓದುವುದಕ್ಕಿಂತಲೂ ಫುಟ್ಬಾಲ್ ಆಡುವುದರ ಮೂಲಕ ದೇವರಿಗೆ ಹೆಚ್ಚು ಹತ್ತಿರವಾಗುತ್ತೀರಿ. ಇವೆಲ್ಲ ಸ್ವಲ್ಪ ಜೋರಿನ ಶಬ್ದಗಳು. ಆದರೆ ಅವನ್ನೇ ನಾನು ನಿಮಗೆ ಹೇಳಬೇಕಾಗಿದೆ. ಏಕೆಂದರೆ ನಿಮ್ಮನ್ನು ನಾನು ಪ್ರೀತಿಸುತ್ತೇನೆ. ನಿಮ್ಮ ಮಾಂಸಖಂಡಗಳನ್ನು, ನಿಮ್ಮ ರಟ್ಟೆಗಳನ್ನು ಒಂದಿಷ್ಟು ಗಟ್ಟಿಮಾಡಿಕೊಳ್ಳುವುದರ ಮೂಲಕ ನೀವು ಭಗವದ್ಗೀತೆಯನ್ನು ಇನ್ನೂ ಚೆನ್ನಾಗಿ ಆರ್ಥೈಸಿಕೊಳ್ಳಬಲ್ಲಿರಿ. ನಿಮ್ಮ ಧಮನಿ ಧಮನಿಗಳಲ್ಲಿ ಸ್ವಲ್ಪ ಗಟ್ಟಿ ರಕ್ತ ಹರಿದಾಡುತ್ತಿದ್ದರೆ ಮಾತ್ರ ಕೃಷ್ಣನ ಪ್ರತಿಭೆಯನ್ನು, ಬಲವನ್ನು ಅರಿತುಕೊಳ್ಳಬಲ್ಲಿರಿ. ನಿಮ್ಮ ಕಾಲಮೇಲೆ ನೀವು ನಿಲ್ಲಲು ಸಮರ್ಥರಾದಾಗ ನಿಮ್ಮಲ್ಲಿ ಪೌರುಷವಿದೆ ಎಂದು ನಿಮಗೆ ಅನ್ನಿಸಿದಾಗ ಮಾತ್ರವೇ ನೀವು ಉಪನಿಷತ್ತನ್ನು, ಆತ್ಮದ ವೈಭವವನ್ನು ಅರ್ಥಮಾಡಿಕೊಳ್ಳಬಲ್ಲಿರಿ. ಫುಟ್ಬಾಲ್ ವಿಷಯದಲ್ಲಿ ವಿವೇಕಾನಂದರ ಮಾತುಗಳನ್ನು ಐದಡಿ ಎಂಟು ಅಂಗುಲ ಎತ್ತರದ ಬೈಚುಂಗ್ ಭುಟಿಯಾನಷ್ಟು ಚೆನ್ನಾಗಿ ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಕ್ರಿಕೆಟ್ ಬಿಟ್ಟರೆ ಬೇರೆ ಕ್ರೀಡೆಗಳೇ ಇಲ್ಲ ಎಂಬಂತೆ ವರ್ತಿಸುವ ರಾಷ್ಟ್ರದಲ್ಲಿ ಜನಿಸಿದರೂ ಭುಟಿಯಾನೆಂದೂ ಫುಟ್ಬಾಲ್ ಮೇಲಿನ ತನ್ನ ಆಸಕ್ತಿ, ಪ್ರೀತಿಯನ್ನು ಕಳೆದುಕೊಂಡವನಲ್ಲ. ಭಾರತೀಯ ಕ್ರಿಕೆಟ್್ಗೆ ಸಚಿನ್ ತೆಂಡೂಲ್ಕರ್ ಹೇಗೋ ಭಾರತೀಯ ಫುಟ್ಬಾಲ್್ಗೆ ಭುಟಿಯಾನೂ ಹಾಗೆಯೇ.

ನೆವಿಲ್ಲೆ ಡಿ ಡಿಸೋಝಾ

ಛುನಿ ಗೋಸ್ವಾಮಿ

ಐ.ಎಂ. ವಿಜಯನ್

ಪೀಟರ್ ತ್ಯಾಗರಾಜ್

ಮುಂತಾದವರು ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದರೂ ಭುಟಿಯಾನಂತೆ”ಫ್ಯಾನ್ ಫಾಲೋಯಿಂಗ್್’ ಗಳಿಸಲು ಇವರಿಂದಾಗಲಿಲ್ಲ. ಏಕಾಂಗಿಯಾಗಿ ಆತ ಭಾರತೀಯ ಫುಟ್ಬಾಲ್್ಗೆ ಗೌರವ ತಂದುಕೊಡಲು ಪ್ರಯತ್ನಿಸಿದ ರೀತಿಯಿದೆಯಲ್ಲಾ ಅದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಿಮಗೆ ಗೊತ್ತಾ ಎಫ್್ಎ ಕಪ್, ಸ್ಕಾಟಿಶ್ ಕಪ್ ನಂತರ ವಿಶ್ವದ ಮೂರನೇ ಅತ್ಯಂತ ಹಳೆಯ ಫುಟ್ಬಾಲ್ ಪಂದ್ಯಾವಳಿ ನಮ್ಮ ಡ್ಯುರಾಂಡ್ ಕಪ್! 1890ರ ಸುಮಾರಿಗೆ ಕಲ್ಕತ್ತಾ ಎಫ್್ಸಿ, ಸೋವಾಬಝಾರ್, ಮೋಹನ್ ಬಗಾನ್ ಹಾಗೂ ಆರ್ಯನ್ ಕ್ಲಬ್ ಮುಂತಾದುವುಗಳು ಸ್ಥಾಪನೆಯಾದವು. ಈಸ್ಟ್ ಇಂಡಿಯಾ ಕಂಪನಿಯ ರಾಜಧಾನಿಯಾಗಿದ್ದ ಕಲ್ಕತ್ತಾ ಭಾರತೀಯ ಫುಟ್ಬಾಲ್್ನ ಮುಖ್ಯ ಕೇಂದ್ರವಾಗತೊಡಗಿತು. ಗ್ಲಾಡ್್ಸ್ಟೋನ್ ಕಪ್, ಟ್ರೇಡರ್ಸ್ ಕಪ್, ಕೂಚ್್ಬಿಹಾರ್ ಕಪ್್ಗಳೂ ಅದೇ ವೇಳೆಗೆ ಪ್ರಾರಂಭವಾದವು. ಮೊದಮೊದಲು ಸೇನೆಯ ವಿವಿಧ ತಂಡಗಳ ನಡುವೆ ಪಂದ್ಯಗಳು ನಡೆಯುತ್ತಿದ್ದವು. ಕೊನೆಗೆ ಬ್ರಿಟಿಷರು ಹಾಗೂ ಸ್ಥಳೀಯ ಭಾರತೀಯರ ನಡುವೆ ಪಂದ್ಯಗಳು ಆರಂಭವಾದವು. 1889ರಲ್ಲಿ ಮೋಹನ್ ಬಗಾನ್ ಸ್ಪೋರ್ಟ್ಸ್ ಕ್ಲಬ್ ಆರಂಭವಾಯಿತು. 1911ರಲ್ಲಿ ಐಎಫ್್ಎ ಶೀಲ್ಡ್ ಗೆದ್ದ ಅದು ಮೊಟ್ಟಮೊದಲು ಭಾರತೀಯ ತಂಡವೆನಿಸಿತು. ಇಂದು ಈಸ್ಟ್ ಬೆಂಗಾಲ್ ಎಂದು ಯಾವ ಕ್ಲಬ್ಬನ್ನು ಕರೆಯುತ್ತೇವೋ ಅದು ಮತ್ತಾವುದೂ ಅಲ್ಲ”ಮೋಹನ್ ಬಗಾನ್ ಸ್ಪೋರ್ಟ್ಸ್ ಕ್ಲಬ್್’. 1976, ಡಿಸೆಂಬರ್ 15ರಂದು ಸಿಕ್ಕಿಂನಲ್ಲಿ ಜನಿಸಿದ ಭುಟಿಯಾನ ಪ್ರತಿಭೆಯನ್ನು ಗುರುತಿಸಿ 16ನೇ ವರ್ಷಕ್ಕೇ ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದೂ ಕೂಡ ಇದೇ ಈಸ್ಟ್ ಬೆಂಗಾಲ್. 1995ರಲ್ಲಿ ಉಜ್ಬೇಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಪುಟ್ಬಾಲ್್ಗೆ ಪದಾರ್ಪಣೆ ಮಾಡಿದ ಭುಟಿಯಾ ಆ ಪಂದ್ಯದಲ್ಲಿ ದಾಖಲಾದ ಏಕೈಕ ಗೋಲನ್ನು ಗಳಿಸುವ ಮೂಲಕ ಹಾಗೆ ಗೋಲು ಗಳಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾದ. ಹದಿನಾರು ವರ್ಷಗಳ ಆತನ ಫುಟ್ಬಾಲ್ ಪರ್ವ ಹೀಗೆ ಅಮೋಘವಾಗಿ ಆರಂಭವಾಯಿತು. 1999ರಲ್ಲಿ ಇಂಗ್ಲೆಂಡ್್ನ ಎರಡನೇ ಡಿವಿಜನ್ ಕ್ಲಬ್”ಬರಿ ಎಫ್್ಸಿ’ ಜತೆ 3 ವರ್ಷಗಳ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಯುರೋಪ್್ನಲ್ಲಿ ವೃತ್ತಿಪರ ಅಂತಾರಾಷ್ಟ್ರೀಯ ಫುಟ್ಬಾಲ್ ಆಡಿದ ಮೊದಲ ಭಾರತೀಯನೆನಿಸಿದ. 2000, ಏಪ್ರಿಲ್ 15ರಂದು ಇಂಗ್ಲಿಷ್ ಲೀಗ್್ನ ಚೆಸ್ಟರ್್ಫೀಲ್ಡ್ ವಿರುದ್ಧ ಮೊದಲ ಗೋಲು ದಾಖಲಿಸಿದರೂ ಮಂಡಿನೋವಿನಿಂದ ಯುರೋಪ್್ನಿಂದಲೇ ವಾಪಸ್ಸಾಗಬೇಕಾಯಿತು.

19ನೇ ಶತಮಾನದ ಉತ್ತರಾರ್ಧದಲ್ಲಿ ನಮ್ಮ ದೇಶಕ್ಕೆ ಮೊದಲು ಫುಟ್ಬಾಲನ್ನು ಪರಿಚಯಿಸಿದವರು ಬ್ರಿಟಿಷ್ ಸೈನಿಕರು. ಐಟಿಜಿಛ್ಛಡಿ, ಹಾಕಿಯನ್ನು ನಮಗೆ ಪರಿಚಯಿಸಿದವರೂ ಬ್ರಿಟಿಷರೇ! ಹಾಕಿಯಲ್ಲಿ ಬಹುಬೇಗ ಪರಿಣತಿ ಸಾಧಿಸಿದ ಭಾರತ ಜಗದೇಕವೀರನೆನಿಸಿದರೂ ಫುಟ್ಬಾಲ್ ಮಾತ್ರ”ಕುಂಟು’ತ್ತಲೇ ಸಾಗಿತು. 1970ರ ಏಷ್ಯನ್್ನಲ್ಲಿ ಕಂಚಿನ ಪದಕ ಪಡೆದಿದ್ದೇ ನಮ್ಮ ದೊಡ್ಡ ಸಾಧನೆಯಾಗಿತ್ತು. ಇತ್ತ ಯುರೋಪ್್ನಿಂದ ವಾಪಸ್ಸಾದ ಭುಟಿಯಾ ಭಾರತೀಯ ತಂಡದ ನಾಯಕನಾದ. 2002ರಲ್ಲಿ ವಿಯೆಟ್ನಾಂನಲ್ಲಿ ನಡೆದ ಎಲ್್ಜಿ ಕಪ್ ಫೈನಲ್್ನಲ್ಲಿ ವಿಯೆಟ್ನಾಂ ವಿರುದ್ಧ ಮುಖಾಮುಖಿಯಾಗಿದ್ದು ಭಾರತ. ಅಂತಾರಾಷ್ಟ್ರೀಯ ಫುಟ್ಬಾಲ್್ನಲ್ಲಿ ಸಾಕಷ್ಟು ಮುಂದಿದ್ದ ಹಾಗೂ ತವರಿನ ಅನುಕೂಲ ಹೊಂದಿದ್ದ ವಿಯೆಟ್ನಾಂ ಗೆಲ್ಲುವುದು ಪೂರ್ವನಿರ್ಧರಿತ ಎನ್ನುವಂತಾಗಿತ್ತು.

ಆದರೆ…

ಪಂದ್ಯದ ಮೊದಲಾರ್ಧ ಹಾಗೂ ದ್ವಿತಿಯಾರ್ಥ ಎರಡಲ್ಲೂ ತಲಾ ಒಂದೊಂದು ಗೋಲು ದಾಖಲಿಸಿದ ನಾಯಕ ಬೈಚುಂಗ್ ಭುಟಿಯಾ ಅನಿರೀಕ್ಷಿತವೆನಿಸಿದರೂ ಅರ್ಹ ಗೆಲುವು ತಂದುಕೊಟ್ಟ. ಭಾರತ ಒಂದು ಪ್ರಮುಖ ಕಪ್ಪನ್ನು ಗೆದ್ದಿದ್ದು ಅದೇ ಮೊದಲು. ಭುಟಿಯಾನ ಹೆಸರು ಪ್ರಜ್ವಲಿಸತೊಡಗಿತು. ಭಾರತೀಯ ಫುಟ್ಬಾಲ್್ಗೂ ಭವಿಷ್ಯವಿದೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಿತು. ಅವನ ಏಜ್ಠ್ಟ್ಝಡಟನಲ್ಲಿ ನಾವೂ ಹೊಸ ಕನಸು ಕಾಣತೊಡಗಿದೆವು. 1990ರ ದಶಕದಲ್ಲಿ ಸಚಿನ್ ತೆಂಡೂಲ್ಕರ್, ಪಿಟಿ ಉಷಾ ಹೇಗೆ ಹೊಸ ಹೀರೋಗಳಾಗಿ ಹೊರಹೊಮ್ಮಿದರೋ, ಹೇಗೆ ನಮಗೆ ಹೊಸ ಭರವಸೆಯಾಗಿ ಕಂಡರೋ 2000ನೇ ದಶಕದಲ್ಲಿ ಭಾರತೀಯ ಫುಟ್ಬಾಲ್ ಬಗ್ಗೆ ಹೊರಹೊಮ್ಮಲಾರಂಭಿಸಿದ ಭರವಸೆಗೆ ಮೂಲ ಕಾರಣ ಭುಟಿಯಾನಾಗಿದ್ದ. ಜಿಂಬಾಬ್ವೆ, ಮಲೇಷಿಯಾ, ಇರಾನ್್ಗಳಂಥ ಬಲಿಷ್ಠ ತಂಡಗಳಿದ್ದ ಆಫ್ರೋ-ಏಷ್ಯನ್ ಗೇಮ್ಸ್್ನಲ್ಲಿ ಭಾರತಕ್ಕೆ 2ನೇ ಸ್ಥಾನ ದಕ್ಕಿದ್ದೂ ಭುಟಿಯಾ ಬಾರಿಸಿದ ಎರಡು ಗೋಲುಗಳಿಂದಾಗಿ. 2008ರ ಎಎಫ್್ಸಿ ಚಾಲೆಂಜ್ ಕಪ್್ನ ಸೆಮಿಫೈನಲ್್ನಲ್ಲಿ 2-1ರಿಂದ ತುರ್ಕಿಮೆನಿಸ್ತಾನ್ ವಿರುದ್ಧ ಜಯಗಳಿಸಿದಾಗಲೂ ಎರಡೂ ಗೋಲು ಹೊಡೆದಿದ್ದು ಭುಟಿಯಾನೇ. 2009ರಲ್ಲಿ ಭಾರತ ನೆಹರು ಕಪ್ ಗೆದ್ದಾಗಲೂ ಸರಣಿಯ ಅತ್ಯುತ್ತಮ ಆಟಗಾರನೆನಿಸಿದ್ದು ಭುಟಿಯಾ. ಇಂಗ್ಲಿಷ್ ಪ್ರೀಮಿಯರ್ ಲೀಗ್, ಡಚ್ ಲೀಗ್, ಲಾ ಲಿಗಾ ಅಥವಾ ಉಳಿದೆಲ್ಲ ಯುರೋಪಿಯನ್ ಲೀಗ್್ಗಳು ಇವುಗಳನ್ನೆಲ್ಲ ಇಂದು ಟೀವಿ ಪರದೆ ಮೇಲೆ ಲೈವ್ ಆಗಿ ನೋಡುತ್ತಿರುವ, ಸ್ಟಾರ್ ಸ್ಪೋರ್ಟ್ಸ್ ಟೆನ್್ಸ್ಪೋರ್ಟ್ಸ್ ನೋಡುತ್ತಾ ಬೆಳೆದ ಈಗಿನ ನಮ್ಮ ತಲೆಮಾರಿಗೆ ಭುಟಿಯಾ ಒಬ್ಬ ಸಾಮಾನ್ಯ ಆಟಗಾರನಂತೆ ಭಾಸವಾದರೂ ಆಶ್ಚರ್ಯವಿಲ್ಲ. ಆದರೆ ಭಾರತೀಯರು ವಿಶ್ವದರ್ಜೆಯ ಫುಟ್ಬಾಲ್ ಆಡಬಹುದು ಎಂದು ತೋರಿಸಿದ ಮೊದಲ ವ್ಯಕ್ತಿ ಬೈಚುಂಗ್ ಭುಟಿಯಾ! ಇವತ್ತು ವೀಕ್ಷಕರ ಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಕ್ರಿಕೆಟ್್ಗೆ ಫುಟ್ಬಾಲ್ ತೀವ್ರ ಪೈಪೋಟಿ ನೀಡುತ್ತಿದೆ. ಇದರ ಹೆಚ್ಚಿನ ಶ್ರೇಯಸ್ಸು ಸಲ್ಲಬೇಕಾಗಿದ್ದೂ ಭುಟಿಯಾನಿಗೇ.

2012, ಜನವರಿ 10.

ನಮ್ಮ ರಾಜಧಾನಿ ದೆಹಲಿಯ ನೆಹರು ಕ್ರೀಡಾಂಗಣದಲ್ಲಿ ರೆಫರಿ ಅಂತಿಮ ಸೀಟಿ ಊದಿದಾಗ ಜರ್ಮನಿಯ ಬಾಯರ್ನ್ ಮ್ಯೂನಿಚ್ ತಂಡಕ್ಕೆ ಅದು ಮತ್ತೊಂದು ಪ್ರದರ್ಶನ ಪಂದ್ಯವಾಗಿತ್ತಷ್ಟೇ. ಆದರೆ ಭಾರತೀಯ ಫುಟ್ಬಾಲ್ ಪ್ರೇಮಿಗಳ ಪಾಲಿಗೆ ಅದೊಂದು ಭಾವನಾತ್ಮಕ ಕ್ಷಣ, ತನ್ನ ಹೀರೋ ಕ್ರೀಡಾ ಬದುಕಿಗೆ ಕೊನೆ ಹೇಳುತ್ತಿದ್ದ ಅಂತಿಮ ಘಳಿಗೆ, ತನ್ನ ಹೀರೋಗೆ ಕೊನೆಯ ಭಾರಿ ಎದ್ದು ನಿಂತು ಚಪ್ಪಾಳೆ ಹೊಡೆಯುವ ಅವಕಾಶವಾಗಿತ್ತು. ಭಾರತೀಯ ಪುಟ್ಬಾಲನ್ನು ಗೌರವಯುತ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಹದಿನಾರು ವರ್ಷ ಶ್ರಮಿಸಿದ ಬೈಚುಂಗ್ ಭುಟಿಯಾ ಕಳೆದ ಮಂಗಳವಾರ ಕ್ರೀಡಾ ಬದುಕಿಗೆ ವಿದಾಯ ಹೇಳಿದ ಕ್ಷಣದಲ್ಲಿ ಅವರ ಸಾಧನೆ ನೆನಪಾಯಿತು.

13 Responses to “ಪ್ರತಿ ಭಾರತೀಯ ಹೆಮ್ಮೆಪಡುವಂತೆ ಮಾಡಿದ ಭುಟಿಯಾ!”

  1. VIVEK says:

    ALL MEDIAS covering when SACHIN doing century, THEY don’t want to expose who really contribute to INDIA and thank you sir giving wonderfull artical about BUTIYA

  2. vijay says:

    butiful

  3. dr.aravind says:

    in india most us prefer to watch the international club matches… though its a competition 2 cric

  4. Nithin Kanoji says:

    Thank u ,,,

  5. bsvrj says:

    Nice 1…….let’s hope that India will qualify for FIFA world cup ut leat this time………….. thanq

  6. Keshav says:

    Hi Pratap,

    Good one..,

    In Prajavani newspaper on 16th Jan, they printed an false (dirty) article on Poojya Swami Vivikananda. So all Indians are must protest aganest this article.
    So please worote an article and publish your Kannada prabha. Please…..,

  7. Super article sir.Baichung Bhutia is the golden star of Indian football.whenever type of player like David beckham,Leonell messi,micle ballak,c.ronoldo were not ready in India its not possible to India for playing world cup.we have 110 cro people this is very shame on our part.govt must be support on that. Thanks U sir for giving this wonderfull article.

  8. chetan says:

    awesome sir

  9. Dr.Ashok.M.L says:

    sir, neevu tumba chenngi compile madtire. vishayavannu chennagi manadattu madtiri yavudakku comprmise agade dittavagi baritiri u r great keep it up have a nice future

  10. Anil kumar says:

    Real hero of india….

  11. Shantkumar n k says:

    Bhutiya is Great
    I like u Bhutiya..

  12. samanth says:

    thak u sir