*/
Date : 25-02-2017 | no Comment. | Read More
ಈ ಸ್ಫುರದ್ರೂಪಿಯನ್ನು ಕಾಲೇಜಿನ ಕಾಮನೆಗಿಂತ ಕೇಶವ ಬಲರಾಮನೇ ಹೆಚ್ಚು ಆಕರ್ಷಿಸಿದ ! ಮಂಗಳವಾರ ಸಂಜೆಯವರೆಗೂ ಮೈಸೂರಿನಲ್ಲಿದ್ದು, ಅಂತ್ಯಸಂಸ್ಕಾರ ಮುಗಿಸಿ ಬೆಂಗಳೂರಿಗೆ ತೆರಳಿದ ಆರೆಸ್ಸೆಸ್ನ ಅಖಿಲ ಭಾರತ ಸಹ ಬೌದ್ಧಿಕ್ ಪ್ರಮುಖ್ ಮುಕುಂದರಿಂದ ರಾತ್ರಿ ಕರೆಬಂತು. ನನಗೆ ಸಮಾಧಾನದ ಒಂದೆರಡು ಮಾತನಾಡಲು ಕರೆ ಮಾಡಿದ್ದ ಅವರ ಧ್ವನಿಯಲ್ಲೇ ನೋವು, ಸಂಕಟ, ಒಂಥರಾ ಅನಾಥ ಪ್ರಜ್ಞೆ ವ್ಯಕ್ತವಾಗುತ್ತಿತ್ತು. ಜಯದೇವರು 45 ದಿನಗಳ ಹಿಂದೆ ಆಸ್ಪತ್ರೆ ಸೇರಿದಾಗಲೇ ಮುಕುಂದರಿಗೆ ಸಂಕಟ ಶುರುವಾಗಿತ್ತು. ಅಂದಮಾತ್ರಕ್ಕೆ ಜಯದೇವರು ಅಕಾಲಿಕವಾಗಿ ದೂರವಾದರು ಎಂದಲ್ಲ. ಎಂಬತ್ಮೂರು ವರ್ಷದ […]
Date : 23-02-2017 | no Comment. | Read More
ದಿನೇಶ್ ಗುಂಡೂರಾವ್ ಅವರೇ, ಸಿಕ್ಕ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕಿದ್ದು ನಿಮ್ಮ ಇಂದಿರಾ ಗಾಂಧಿ! ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ, ಅಭಿಪ್ರಾಯಭೇದ, ಟೀಕೆ-ಟಿಪ್ಪಣಿಗಳು ಸಹಜ ಹಾಗೂ ಸಹ್ಯ ಕೂಡ ಹೌದು. ಆದರೆ ಮಾತುಗಳು ಅಥವಾ ಟೀಕೆ ಎಲ್ಲೆ ಮೀರಿದಾಗ ಅಸಹ್ಯವೆನಿಸಿಬಿಡುತ್ತದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು, ತಮ್ಮ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಳ್ಳಲೇಬೇಕು. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಮಾಮೂಲು. ಆದರೆ ತಮ್ಮ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರ ಬಾಯಿಂದ […]
Date : 18-02-2017 | no Comment. | Read More
ಖರ್ಗೆ ಸಾಹೇಬ್ರೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ನ ಎಷ್ಟು ನಾಯಿಗಳು ಸತ್ತಿದ್ದವು? ದಯವಿಟ್ಟು ಕ್ಷಮಿಸಿ, ಸಭ್ಯತೆಯ ಗೆರೆ ಮೀರಿ ಹೀಗೆ ಪ್ರಶ್ನಿಸುತ್ತಿರುವುದಕ್ಕೆ. ಮನಸ್ಸು ಒಲ್ಲೆ ಎನ್ನುತ್ತಿದ್ದರೂ ಏಕೆ ಹೀಗೆ ಕೇಳಬೇಕಾಗಿದೆಯೆಂದರೆ ನಮ್ಮ ಮಹಾನ್ ನೇತಾರ ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂಬ ಅವಿವೇಕದ ಹೇಳಿಕೆಯನ್ನು ಆಗಾಗ್ಗೆ ಕೊಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಅರ್ಥವಾಗುವುದು ಇದೇ ಭಾಷೆ! ಸಾಮಾನ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರು ಮಾತಿಗೆ ನಿಂತರೆ ಅದು ಲೋಕಸಭೆ […]
Date : 13-02-2017 | no Comment. | Read More