Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಎಂಥಾ ನಿರ್ವೀರ್ಯರ ಕೈಲಿ ವೀರ, ಪರಮವೀರಚಕ್ರ ಪಡೆಯಬೇಕಾಗಿದೆ ನೋಡಿ?!

ಎಂಥಾ ನಿರ್ವೀರ್ಯರ ಕೈಲಿ ವೀರ, ಪರಮವೀರಚಕ್ರ ಪಡೆಯಬೇಕಾಗಿದೆ ನೋಡಿ?!


ಈ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯೇನಾದರೂ ಇದೆಯೇ? ಇನ್ನೆಷ್ಟು ವರ್ಷ ಇದೇ ರೀತಿ ಸುಳ್ಳು ಹೇಳಿಕೊಂಡು, ಜನರನ್ನು ದಾರಿ ತಪ್ಪಿಸಿಕೊಂಡು ದೇಶವಾಳುತ್ತಾರೆ? ಹೇಗೆ ಬೇಕಾದರೂ ಹೊರಳುವ ಇವರ ನಾಲಗೆಯನ್ನು ನೆಚ್ಚಿಕೊಂಡು ಎಷ್ಟು ದಿನ ಅಂತ ಜನರೂ ಕುಳಿತುಕೊಳ್ಳಬೇಕು? ಮೊನ್ನೆ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಗೆ 10 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ನಡೆದ ಹುತಾತ್ಮರ ಸ್ಮರಣೆ ಸಮಾರಂಭದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಆಡಿರುವ ಮಾತುಗಳಾದರೂ ಎಂಥವು?”ಅಫ್ಜಲ್ ಗುರುವಿನದ್ದೂ ಸೇರಿದಂತೆ 20 ಕ್ಷಮಾದಾನ ಅರ್ಜಿಗಳು ರಾಷ್ಟ್ರಪತಿ ಮುಂದಿವೆ. ಅವರಿಗೆ ನಾವು ಗಡುವನ್ನು ಹಾಕಲು ಸಾಧ್ಯವಿಲ್ಲ. ಅಲ್ಲದೆ ಸಂವಿಧಾನದ 72ನೇ ವಿಧಿ ಕಾಲಮಿತಿಯನ್ನು ಹಾಕಿಲ್ಲ’ ಎಂದು ಗೃಹ ಖಾತೆ ರಾಜ್ಯ ಸಚಿವ ಮುಲ್ಲಪಲ್ಲಿ ರಾಮಚಂದ್ರನ್ ಹೇಳಿದ್ದಾರೆ. ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರದ್ದೂ ಇದೇ ವರಾತ. ಇವರುಗಳ ಮಾತಿನ ಅರ್ಥವೇನು? ಅಫ್ಜಲ್ ಗುರುವೇನು ಸಾಮಾನ್ಯ ಕ್ರಿಮಿನಲ್ಲಾ? ಅವನು ಎಸಗಿದ್ದೇನು ಕಡಿಮೆ ದ್ರೋಹವೇ? ಆತನಿಗೂ ಹಾಗೂ ಇತರ ಅಪರಾಧಗಳನ್ನೆಸಗಿ ಕ್ಷಮಾದಾನಕ್ಕೆ ಅರ್ಜಿ ಹಾಕಿದವರಿಗೂ ವ್ಯತ್ಯಾಸವಿಲ್ಲವೆ? ಅದಿರಲಿ, ಒಂದು ಕ್ಷಮಾದಾನ ಅರ್ಜಿಯನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಲು ಎಷ್ಟು ಸಮಯ ಬೇಕು? ರಾಷ್ಟ್ರಪತಿ ಯಾರನ್ನು ಬೇಕಾದರೂ ಸಮನ್ ಮಾಡಿ ಕಾನೂನು ಸಲಹೆ ಪಡೆದುಕೊಳ್ಳಬಹುದು, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯನ್ನೇ ಕರೆದು ಸಲಹೆ ಕೇಳಬಹುದಾದ ವಿಶೇಷಾಧಿಕಾರ ಹೊಂದಿದ್ದಾರೆ. ಇಷ್ಟಾಗಿಯೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಏಕೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ? ಇಷ್ಟಕ್ಕೂ ರಾಷ್ಟ್ರಪತಿ ಭವನದೊಳಗೆ ಕುಳಿತು ಪ್ರತಿಭಾ ಪಾಟೀಲ್ ಮಾಡುತ್ತಿರುವ ಘನ ಕಾರ್ಯವಾದರೂ ಏನು? ಅಂತಹ ಕಾರ್ಯದೊತ್ತಡವಾದರೂ ಏನಿದೆ? ಅಫ್ಜಲ್ ಗುರುವಿನ ಅರ್ಜಿಯನ್ನು ಪರಾಮರ್ಶಿಸಲೂ ಸಮಯವಿಲ್ಲದ ಯಾವ ಮಹತ್ಕಾರ್ಯದಲ್ಲಿ ಅವರು ತೊಡಗಿದ್ದಾರೆ? 2006ರಿಂದಲೂ ಕೊಳೆಯುತ್ತಾ ಕುಳಿತಿರುವ ಕ್ಷಮಾದಾನ ಮನವಿಯನ್ನು ತಿರಸ್ಕರಿಸಲು ಇನ್ನೆಷ್ಟು ವರ್ಷಗಳು ಬೇಕು? ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯುವಂತೆ ಕೋರಿದಾಗ ಸಂವಿಧಾನದ 356ನೇ ವಿಧಿಯಂತೆ ರಾಷ್ಟ್ರಪತಿ ಆಡಳಿತ ಹೇರುವಾಗ ತೋರುವ ಆತುರ ದೇಶದ್ರೋಹಿಯನ್ನು ಗಲ್ಲಿಗೆ ಹಾಕುವಾಗ ಏಕೆ ಕಾಣುವುದಿಲ್ಲ? ಇಂತಿಷ್ಟೇ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಯಾವ ಗಡುವೂ ಇಲ್ಲ ಎನ್ನುವುದಾದರೆ ವಿಳಂಬಕ್ಕೆ ಹೆಸರಾದ ನಮ್ಮ ನ್ಯಾಯಾಲಯಗಳೂ ಇದೇ ಧೋರಣೆ ತೋರಬಹುದಿತ್ತಲ್ಲವೆ?

ಇಷ್ಟಾಗಿಯೂ ನಮ್ಮ ನ್ಯಾಯಾಲಯಗಳು ಯಾವ ರೀತಿ ನಡೆದುಕೊಂಡವು?

ನಮ್ಮ ಸಂಸತ್ತಿನ ಮೇಲೆ ದಾಳಿ ನಡೆದಿದ್ದು 2001, ಡಿಸೆಂಬರ್ 13ರಂದು. 2002, ಅಕ್ಟೋಬರ್ 26ರಂದು ರಾಷ್ಟ್ರಪತಿ ಅಬ್ದುಲ್ ಕಲಾಂ ಸಂಸತ್ ದಾಳಿಯಲ್ಲಿ ಮಡಿದ ಐವರು ಸೈನಿಕರಿಗೆ ಕೀರ್ತಿ ಚಕ್ರ ಹಾಗೂ ಇಬ್ಬರಿಗೆ ಅಶೋಕ ಚಕ್ರ ನೀಡಿ ಗೌರವಿಸಿದರು. ಅದೇ ವರ್ಷ ದಿಲ್ಲಿಯ ನ್ಯಾಯಾಲಯ ಮುಖ್ಯ ಪಿತೂರಿದಾರ ಹಾಗೂ ಕಾಶ್ಮೀರಿ ಭಯೋತ್ಪಾದಕ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿತು. ಅದರ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು 2003ರಲ್ಲಿ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿಯಿತು. ಆನಂತರ ಸುಪ್ರೀಂ ಕೋರ್ಟ್ ಮೊರೆಹೋಗಲಾಯಿತು. ಆದರೆ 2004ರಲ್ಲಿ ಅಫ್ಜಲ್್ನ ಮೇಲ್ಮನವಿಯನ್ನು ತಿರಸ್ಕಾರ ಮಾಡಿದ ಸುಪ್ರೀಂಕೋರ್ಟ್ ಆತನನ್ನು ಗಲ್ಲಿಗೇರಿಸುವ ದಿನಾಂಕವನ್ನು 2006, ಅಕ್ಟೋಬರ್ 20 ಎಂದು ನಿಗದಿ ಮಾಡಿತು. ತನ್ನ ತೀರ್ಪನ್ನು ಮರುಪಶೀಲಿಸುವಂತೆ, ಕ್ಷಮಾದಾನ ಕೊಡುವಂತೆ ಸಲ್ಲಿಸಿದ ಅರ್ಜಿಯನ್ನೂ ತಿರಸ್ಕಾರ ಮಾಡಿತು. ಪ್ರತಿಸಾರಿಯೂ ನಾವು ನ್ಯಾಯಾಲಯಗಳನ್ನು ದೂರುತ್ತೇವೆ. ಆದರೆ ಅಫ್ಜಲ್ ಗುರುವಿನ ವಿಚಾರದಲ್ಲಿ ನಮ್ಮ ನ್ಯಾಯಾಲಯಗಳು ತೋರಿದ ಸಂವೇದನೆ ಆಳುವ ಪ್ರಭುಗಳಲ್ಲಿ ಏಕೆ ಕಾಣುತ್ತಿಲ್ಲ? ಅಫ್ಜಲ್ ಹಾಗೂ ಕಸಬ್ ವಿಚಾರಗಳಲ್ಲಿ ಜನರ ಭಾವನೆಗಳನ್ನು ಅರ್ಥಮಾಡಿಕೊಂಡ ನ್ಯಾಯಾಲಯಗಳು ತ್ವರಿತವಾಗಿ ಪರಾಮರ್ಶಿಸಿ ತೀರ್ಪು ಕೊಟ್ಟರೂ ಸರ್ಕಾರವೇಕೆ ನಿದ್ರಿಸುತ್ತಿದೆ? ಇಂತಹ ದೂರ್ತ ಉದ್ದೇಶವನ್ನರಿತ ಹುತಾತ್ಮರ ಕುಟುಂಬವರ್ಗದವರು,”2006, ಡಿಸೆಂಬರ್ 13ರೊಳಗೆ ಅಫ್ಜಲ್್ನನ್ನು ಗಲ್ಲಿಗೇರಿಸದಿದ್ದರೆ ಶೌರ್ಯ ಪದಕಗಳನ್ನು ಹಿಂದಿರುಗಿಸುತ್ತೇವೆ’ ಎಂದು ಬೆದರಿಕೆ ಹಾಕಿದರು. ಅವರ ಬೆದರಿಕೆಗಾಗಲಿ, ನೋವಿಗಾಗಲಿ ಸರ್ಕಾರ ಸೊಪ್ಪುಹಾಕಲಿಲ್ಲ. ಸರ್ಕಾರಕ್ಕೆ ನಾಚಿಕೆಯಿಲ್ಲದಿದ್ದರೇನಂತೆ, ಹುತಾತ್ಮರ ಕುಟುಂಬದವರು 2006 ಡಿಸೆಂಬರ್ 13ರಂದು ರಾಷ್ಟ್ರಪತಿಯನ್ನು ಭೇಟಿಯಾಗಿ ಮಾತಿನಂತೆ ಪದಕಗಳನ್ನು ಹಿಂದಿರುಗಿಸಿದರು.”ಈ ಪದಕಗಳನ್ನು ರಾಷ್ಟ್ರೀಯ ಮ್ಯೂಸಿಯಂನಲ್ಲಿಡಿ, ಅಫ್ಜಲ್್ನನ್ನು ಗಲ್ಲಿಗೇರಿಸದ ಹೊರತು ಅವುಗಳಿಗೆ ಯಾವ ಬೆಲೆಯೂ ಇಲ್ಲ’ ಎಂದು ನೋವಿನಿಂದ ಹೇಳಿದರು. ಆ ನೋವು ನಾಚಿಕೆಗೇಡಿ ಕಾಂಗ್ರೆಸ್್ಗೇಕೆ ಅರ್ಥವಾಗುವುದಿಲ್ಲ?

2009ರಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನಿ ಕನಸು ಹೊತ್ತ ರಾಹುಲ್ ಕೊಟ್ಟ ಹೇಳಿಕೆಯಾದರೂ ಎಂಥದ್ದು? ಪಂಜಾಬ್್ನ ಹೋಶಿಯಾರ್್ಪುರದಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ,”ಅಫ್ಜಲ್ ಗುರುವನ್ನು ಆತನ ಸರದಿ ಬಂದಾಗ ಗಲ್ಲಿಗೇರಿಸಲಾಗುತ್ತದೆ. ಸರದಿಯಲ್ಲಿ ಆತನ ಹೆಸರು 24ನೆಯದ್ದು. ಅದನ್ನು ಮೀರಿ ಆತನನ್ನು ಕೂಡಲೇ ಗಲ್ಲಿಗೆ ಹಾಕಲು ಸಾಧ್ಯವಿಲ್ಲ’ ಎಂದರು! ಅಂದರೇನು? 2004ರಲ್ಲಿ ಧನಂಜಯ್ ಚಟರ್ಜಿಯನ್ನು ಗಲ್ಲಿಗೆ ಹಾಕಿದ ನಂತರ ಇದುವರೆಗೂ ಯಾರನ್ನಾದರೂ ಗಲ್ಲಿಗೆ ಕಳುಹಿಸಿದ್ದಾರಾ? ಕಳೆದ 7 ವರ್ಷಗಳಲ್ಲಿ ಒಬ್ಬನೇ ಒಬ್ಬ ಕೈದಿಯನ್ನೂ ಗಲ್ಲಿಗೆ ಹಾಕಿಲ್ಲವೇಕೆ? ಹಾಗಿರುವಾಗ 24ನೇ ನಂಬರ್ ಬರುವುದು ಯಾವಾಗ? ಅಫ್ಜಲ್ ಗುರುವನ್ನು ಫಾಸಿಗೆ ಕಳುಹಿಸುವುದಾದರೂ ಎಂದು? ಅಲ್ಲಾ, ಸರದಿಯ ಆಧಾರದ ಮೇಲಷ್ಟೇ ಗಲ್ಲಿಗೇರಿಸಲು ಸಾಧ್ಯ ಎನ್ನುತ್ತಿದ್ದರಲ್ಲಾ ಇವರಿಗೆ 1978ರ ರಂಗ-ಬಿಲ್ಲ ಪ್ರಕರಣ ನೆನಪಿದೆಯೇ? ಗೀತಾ ಹಾಗೂ ಸಂಜಯ್ ಚೋಪ್ರಾ ಎಂಬ ಇಬ್ಬರು ಅಪ್ರಾಪ್ತ ಅಕ್ಕ-ತಮ್ಮನನ್ನು ಕಗ್ಗೊಲೆಗೈದ ರಂಗ-ಬಿಲ್ಲ ಎಂಬ ಕುಖ್ಯಾತ ಕ್ರಿಮಿನಲ್್ಗಳನ್ನು ಕೂಡಲೇ ಗಲ್ಲಿಗೆ ಹಾಕಬೇಕೆಂದು ರಾಜಧಾನಿ ದಿಲ್ಲಿಯ ವಿದ್ಯಾರ್ಥಿಗಳು ಬೀದಿಗಿಳಿದರು. ಸಾರ್ವಜನಿಕ ಒತ್ತಡಕ್ಕೆ ಬೆದರಿದ ಸರ್ಕಾರ ಸಾಕ್ಷ್ಯವನ್ನು ಕಲೆಹಾಕಿ ಶೀಘ್ರ ಶಿಕ್ಷೆ ನಿಗದಿಯಾಗುವಂತೆ ಮಾಡಿದ್ದಲ್ಲದೆ 1982ರಲ್ಲಿ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಿತು! ಅವತ್ತು ಸರದಿಯ ಮಾತೇಕೆ ಕೇಳಿಬಂದಿರಲಿಲ್ಲ? ಕೇವಲ 4 ವರ್ಷಗಳಲ್ಲಿ ತೀರ್ಪು ಹೊರಬಿದ್ದು ಶಿಕ್ಷೆ ಜಾರಿ ಮಾಡಬಹುದಾದರೆ ಅಫ್ಜಲ್್ನಂಥ ದೇಶದ್ರೋಹಿಯನ್ನು ಫಾಸಿಗೆ ಕಳುಹಿಸಲು ಸರ್ಕಾರಕ್ಕೇನು ದಾಡಿ? ಕಳೆದ 7 ವರ್ಷಗಳಿಂದ ಅವನನ್ನು ಪೋಷಣೆ ಮಾಡುತ್ತಿರುವುದಾದರೂ ಯಾವ ಉದ್ದೇಶ ಸಾಧನೆಗಾಗಿ?

ಇಷ್ಟಕ್ಕೂ ಅಫ್ಜಲ್್ನನ್ನು ಗಲ್ಲಿಗೇರಿಸುವ ಉದ್ದೇಶವಾದರೂ ಸರ್ಕಾರಕ್ಕಿದೆ ಎಂದುಕೊಂಡಿದ್ದೀರಾ?

ಹುತಾತ್ಮರ ಕುಟುಂಬದವರು ಶೌರ್ಯ ಪದಕಗಳನ್ನು ಹಿಂದಿರುಗಿಸಿದಾಗ ಕಾಂಗ್ರೆಸ್ ನಾಯಕರು ಹೇಳಿದ್ದೇನು ಗೊತ್ತೆ?”ಆತನ ಕ್ಷಮಾದಾನದ ಅರ್ಜಿ ರಾಷ್ಟ್ರಪತಿ ಮುಂದಿದೆ. ರಾಷ್ಟ್ರಪತಿ ನಿರ್ಧಾರ ತೆಗೆದುಕೊಳ್ಳದೇ ನಾವೇನು ಮಾಡುವುದಕ್ಕಾಗುವುದಿಲ್ಲ’ ಎಂದಿತು ಯುಪಿಎ ಸರ್ಕಾರ. ರಾಷ್ಟ್ರಪತಿ ಅಬ್ದುಲ್ ಕಲಾಂ ಜನರ ಕಣ್ಣೆದುರು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಬೇಕಾಯಿತು. ಒಬ್ಬ ರಾಷ್ಟ್ರಪತಿಯಾದವರು ರಾಜಕೀಯಕ್ಕೆ ಸಂಬಂಧಿಸಿದ ಮಾತು, ವಿವಾದಗಳಿಗೆ ಪ್ರತಿಕ್ರಿಯಿಸದೇ ಇರುವುದು ನಮ್ಮಲ್ಲಿ ಒಂದು ರೀತಿಯ ಸಂಪ್ರದಾಯ. ಹಾಗಾಗಿ 2007ರಲ್ಲಿ ತಮ್ಮ ಕಾರ್ಯಾವಧಿ ಮುಗಿಯುವವರೆಗೂ ಕಲಾಂ ಕಾಯಬೇಕಾಯಿತು. ಅವಧಿ ಮುಗಿದ ನಂತರ ಕಲಾಂ ನೀಡಿದ ಹೇಳಿಕೆ ಕಾಂಗ್ರೆಸ್್ನ ನಿಜಬಣ್ಣವನ್ನು ಬಯಲು ಮಾಡಿತು.”ಅಫ್ಜಲ್್ನ ಕ್ಷಮಾದಾನ ಅರ್ಜಿ ಗೃಹಖಾತೆಯನ್ನು ದಾಟಿ ರಾಷ್ಟ್ರಪತಿ ಭವನಕ್ಕೆ ಬರಲೇ ಇಲ್ಲ, ಹಾಗಿರುವಾಗ ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ?’ ಎಂದರು ಕಲಾಂ! ಇದು ಕಾಂಗ್ರೆಸ್್ನ ನಿಜವಾದ ರೂಪ. ಇಂತಹ ಕಾಂಗ್ರೆಸ್ ಈಗ ಹೊಸರಾಗ ಹಾಡುತ್ತಿದೆ. ಅಂದು ಗಲ್ಲಿಗೇರುವವರ ಸರದಿಯಲ್ಲಿ ಅಫ್ಜಲ್ 24ನೇ ಸ್ಥಾನದಲ್ಲಿದ್ದಾನೆ ಎಂದು ರಾಹುಲ್ ಗಾಂಧಿ ಹೇಳಿದರೆ, ಇಂದು ಕ್ಷಮಾದಾನದ 20 ಅರ್ಜಿಗಳು ರಾಷ್ಟ್ರಪತಿ ಮುಂದಿವೆ, ಹಾಗಂತ ರಾಷ್ಟ್ರಪತಿಗೆ ನಾವು ಗಡುವು ಹಾಕುವುದಕ್ಕಾಗುವುದಿಲ್ಲ ಎಂದು ಹೇಳಿಕೆ ಕೊಟ್ಟಿದೆ! ಇದು ಏನನ್ನು ಸೂಚಿಸುತ್ತದೆ? ಬಹುಶಃ ಕಂದಾಹಾರ್, ರುಬಿಯಾ ಭಾನು ಅಪಹರಣದಂಥ ಪ್ರಕರಣಗಳು ಸಂಭವಿಸಲಿ, ಅಫ್ಜಲ್, ಕಸಬ್್ನನ್ನು ಬಿಡುಗಡೆ ಮಾಡೋಣ, ಅಲ್ಪಸಂಖ್ಯಾತರನ್ನು ಖುಷಿಪಡಿಸೋಣ ಎಂದು ಸರ್ಕಾರ ಭಾವಿಸಿದಂತಿಲ್ಲವೆ? ಅಫ್ಜಲ್ ಗುರು ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದು ಅಕ್ಟೋಬರ್ 3, 2006ರಂದು. 2011 ಫೆಬ್ರವರಿಯಲ್ಲಿ ನಡೆಯುತ್ತಿದ್ದ ಅಧಿವೇಶನದ ವೇಳೆ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗೆ ಇನ್ನೂ ಕಳುಹಿಸಿಲ್ಲ ಎಂದು ಗೃಹಸಚಿವ ಪಿ.ಚಿದಂಬರಂ ಸಂಸತ್ತಿನಲ್ಲಿ ಹೇಳಿಕೆ ನೀಡುತ್ತಾರೆ!

ಇದು ಏನನ್ನು ಸೂಚಿಸುತ್ತದೆ?

ಅಫ್ಜಲ್್ಗುರುವನ್ನು ಜೈಲಲ್ಲೇ ಇಟ್ಟುಕೊಂಡು ಇನ್ನೆಷ್ಟು ವರ್ಷ ಹುತಾತ್ಮರಿಗೆ ಅಗೌರವ ತೋರಲು ಕಾಂಗ್ರೆಸ್ ಹವಣಿಸುತ್ತಿದೆ? ಇದನ್ನೆಲ್ಲಾ ನೋಡಿದಾಗ ಅಂದು ಪೋಲಿಸರು ಭಯೋತ್ಪಾದಕರ ಗುಂಡಿಗೆ ತಮ್ಮ ಎದೆಕೊಡುವ ಬದಲು ಸಂಸತ್ತಿನೊಳಕ್ಕೆ ಬಿಟ್ಟಿದ್ದರೇ ಚೆನ್ನಾಗಿರುತ್ತಿತ್ತೇನೋ? ಕನಿಷ್ಠ ಆ ಮಟ್ಟಿಗಾದರೂ ನಮ್ಮ ಸಂಸತ್ತಿನಲ್ಲಿರುವ ಹೇಡಿಗಳು, ದೇಶದ್ರೋಹಿಗಳು, ದೇಶವಾಸಿಗಳ ಬಗ್ಗೆ ಸಂವೇದನೆ ಇಲ್ಲದವರು ಸತ್ತಿರುತ್ತಿದ್ದರು ಎಂದನಿಸುವುದಿಲ್ಲವೆ? ಗನ್ನರ್ ಮಿರ್ದಾಲ್ ಅದ್ಯಾವ ಕ್ಷಣದಲ್ಲಿ ತನ್ನ”ಏಷ್ಯನ್ ಡ್ರಾಮಾ’ದಲ್ಲಿ ಭಾರತವನ್ನು”ಸಾಫ್ಟ್ ಸ್ಟೇಟ್್’ ಎಂದು ಬರೆದರೋ ಗೊತ್ತಿಲ್ಲ, ನಮ್ಮನ್ನಾಳುವವರು ಈ ದೇಶವನ್ನು ನಿರ್ವೀರ್ಯರ ನಾಡಾಗಿ ಮಾಡಲು ಹೊರಟಿರುವುದಂತೂ ನಿಜ. 2008, ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆದ ನಂತರ, ದಾವೂದ್ ಸೇರಿದಂತೆ 50 ಭಯೋತ್ಪಾದಕರನ್ನು ಹಸ್ತಾಂತರ ಮಾಡಿ ಪಾಕಿಸ್ತಾನದ ಮೇಲೆ ಯುಪಿಎ ಸರ್ಕಾರ ಒತ್ತಡ ಹೇರಿದ ಸಂದರ್ಭದಲ್ಲಿ ಒಂದು ಎಸ್ಸೆಮ್ಮೆಸ್ ಬಹಳ ಹರಿದಾಡುತ್ತಿತ್ತು-“ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕಳುಹಿಸಿದರೆ ಜೈಲಿನಲ್ಲಿ ಸುರಕ್ಷಿತವಾಗಿಡುತ್ತಾರೆ, ಕೈಗೊಂದು ಮೊಬೈಲ್ ಕೊಟ್ಟು ತನ್ನ ದಂಧೆಯನ್ನು ನಿರಾತಂಕವಾಗಿ ಮುಂದುವರಿಸಲು ಅವಕಾಶ ಮಾಡಿಕೊಡುತ್ತಾರೆ. ಆದರೆ ನಮ್ಮ ಪಾಕಿಸ್ತಾನದಲ್ಲಿ ಯಾವ ಕ್ಷಣದಲ್ಲಿ ಬಾಂಬ್ ಸಿಡಿಯುತ್ತದೆಯೋ ಎಂಬ ಭಯದಲ್ಲೇ ಬದುಕು ನಡೆಸಬೇಕಾಗುತ್ತದೆ, ಯಾವ ಕ್ಷಣದಲ್ಲೂ ಸತ್ತುಬಿಡಬಹುದು. ಅವನನ್ನು ಭಾರತಕ್ಕೆ ಕಳುಹಿಸಿದರೇ ಅಪಾಯ ಎಂಬ ಕಾರಣ ಪಾಕಿಸ್ತಾನ ದಾವೂದ್್ನನ್ನು ಹಸ್ತಾಂತರ ಮಾಡುತ್ತಿಲ್ಲ’! ಇದೊಂದು ಜೋಕಾದರೂ ಬಹಳ ಮಾರ್ಮಿಕವಾಗಿದೆ, ಭಾರತದ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ ಎನಿಸುತ್ತಿಲ್ಲವೆ? ಒಸಾಮನನ್ನು ಹಿಡಿದು ಅಮೆರಿಕ ಏನು ಮಾಡಿತು? ಸಾಯಿಸಿ ಸಮುದ್ರಕ್ಕೆಸೆದು ಬಂತು. ಅದೂ ಜಗತ್ತಿನ ಕಟ್ಟರ್್ಪಂಥೀಯ ಮುಸ್ಲಿಮರೆಲ್ಲರ ಆರಾಧ್ಯ ದೈವ ಒಸಾಮಾನ ಹೆಣವನ್ನು. ಅಂತಹ ತಾಕತ್ತು ನಮ್ಮ ನಾಯಕರಲ್ಲಿ ಕಾಣುವುದು ಯಾವಾಗ? ಇಷ್ಟಕ್ಕೂ ಪೋರ್ಚುಗಲ್್ನಿಂದ ಹಿಡಿದು ತರಲಾದ ಅಬು ಸಲೇಂ ಏನಾಗಿದ್ದಾನೆ? ತಿಂದುಂಡುಕೊಂಡು ಆರಾಮವಾಗಿಲ್ಲವೆ? ಕಸಬ್್ಗೆ ಗಲ್ಲು ಶಿಕ್ಷೆ ವಿಧಿಸಿದ ನಂತರವೂ ಮಹಾರಾಷ್ಟ್ರ ಸರ್ಕಾರ 45 ಕೋಟಿ ರೂ ಖರ್ಚು ಮಾಡಿ ಅವನ ಯೋಗಕ್ಷೇವು ನೋಡಿಕೊಳ್ಳುತ್ತಿದೆಯೆಂದರೆ ಭಯೋತ್ಪಾದಕರಿಗೆ ಭಾರತಕ್ಕಿಂತ ಸುರಕ್ಷಿತ ರಾಷ್ಟ್ರ ಯಾವುದಿದೆ? ಪಾಕಿಸ್ತಾನಕ್ಕೆ 50 ಜನ”ಮೋಸ್ಟ್ ವಾಂಟೆಡ್್’ ಭಯೋತ್ಪಾದಕರ ಪಟ್ಟಿಕೊಟ್ಟು ಹಸ್ತಾಂತರ ಮಾಡಿ ಎಂದು ಗೋಗರೆಯುತ್ತಿರುವುದು ಯಾವ ಪುರುಷಾರ್ಥಕ್ಕೆ? ಕೈಯಲ್ಲಿರುವ ಕಸಬ್, ಅಫ್ಜಲ್್ನನ್ನೇ ಗಲ್ಲಿಗೆ ಹಾಕುವ ತಾಕತ್ತಿಲ್ಲದಿರುವಾಗ, ಇನ್ನೂ 50 ಭಯೋತ್ಪಾದಕರನ್ನು ಹಸ್ತಾಂತರ ಮಾಡಿ ಎನ್ನುತ್ತಿರುವುದೇಕೆ? ನಮ್ಮ ಹಸುಗಳನ್ನು ಕಡಿದು ಬೀಫ್ ಬಿರ್ಯಾನಿ ಮಾಡಿ ತಿನ್ನಿಸುವುದಕ್ಕಾ?

ಇವತ್ತು ಅಫ್ಜಲ್ ಗುರುನಂಥ ಒಬ್ಬ ದೇಶದ್ರೋಹಿಗೆ ಶಿಕ್ಷೆ ನೀಡುವಾಗಲೂ ಮುಸ್ಲಿಮರು ಎಲ್ಲಿ ಮುನಿಸಿಕೊಳ್ಳುತ್ತಾರೋ, ಅವರ ಮತಗಳು ಕೈತಪ್ಪಿ ಹೋಗುತ್ತವೋ ಎಂಬ ಅಳುಕು, ಆತಂಕ ಇಟ್ಟುಕೊಳ್ಳಬೇಕಾಗಿ ಬಂದಿದೆಯೆಂದರೆ ಈ ದೇಶಕ್ಕೆ ಯಾವ ಭವಿಷ್ಯವಿದೆ? ಎಂಥವರು ನಮ್ಮನ್ನಾಳುತ್ತಿದ್ದಾರೆ ಹೇಳಿ? ಎಂತಹ ನಿರ್ವೀರ್ಯರ ಕೈಲಿ ನಮ್ಮ ಸೈನಿಕರು ವೀರ, ಪರಮವೀರ, ಅಶೋಕಚಕ್ರ, ಕೀರ್ತಿಚಕ್ರ ಪಡೆಯಬೇಕಾಗಿದೆ ಯೋಚಿಸಿ? ಮುಂದಿನ ವರ್ಷ ಡಿಸೆಂಬರ್ 13 ಬಂದಾಗಲೂ ಅಫ್ಜಲ್ ಆರಾಮವಾಗಿ ಇರುತ್ತಾನೆ, ಇದೇ ಚರ್ಚೆ ನಡೆಯುತ್ತಿರುತ್ತದೆ ನೋಡಿ!

62 Responses to “ಎಂಥಾ ನಿರ್ವೀರ್ಯರ ಕೈಲಿ ವೀರ, ಪರಮವೀರಚಕ್ರ ಪಡೆಯಬೇಕಾಗಿದೆ ನೋಡಿ?!”

  1. manjesh says:

    namma sarakarawannu nodidare nachike annuwa padakke nachike aguwanthide…. chi chi…..

  2. sriramvdongre says:

    nice article

  3. Shivappa says:

    These so called secularist will be assassinated by terrorist!!! and we will pray for the that. “Oh my lord please arrange somebody to assassinate so called secularist”

  4. sanjay says:

    200% right…. love uuuuuuuuuuuu… i lyk ur most of d articles….

  5. ಶ್ರೀಕಾಂತ್ says:

    ಸರ್ಕಾರಕ್ಕೆ ಮುಸ್ಲಿಂ ವೋಟು ಬ್ಯಾಂಕ್ ಮೇಲೆ ಆಸೆ ಅದಕ್ಕೆ ಅವರು _______? ತಿಂದು ಆರಾಮಾಗಿದ್ದು ಭಯೋತ್ಪಾದಕರನ್ನು ಗಲ್ಲಿಗೆರಿಸುವುದಿಲ್ಲ … ಆದರೆ ಪ್ರತಿಪಕ್ಷಗಳು ಮೀಡಿಯಾ ತಮ್ಮಷ್ಟಕ್ಕೆ ತಾವೇ ಬುದ್ದಿ ಜೀವಿಗಳು ಅಂತಾ ಸಮಾಜದಲ್ಲಿ ತಿರುಗೋ _____? ಗಳು _________? ತಿನ್ನುತ್ತಿದ್ದಾರ… ಕೇವಲ ನವಂಬರ್ ೨೬ ಡಿಸೆಂಬರ್ ೧೩ ಬಂದರೆ ಮಾತ್ರ ಭಯೋತ್ಪಾದನೆ ಭಯೋತ್ಪಾದಕರು ನೆನಪಿಗೆ ಬರುತ್ತಾರ …. ಇವರಿಗೂ ಜವಾಬ್ದಾರಿ ಇಲ್ಲ… ಅಷ್ಟೇ ಯಾಕೆ ನಮ್ಮ ಜನಕ್ಕಾದ್ರು ಬುದ್ದಿ ಇದೆಯೋ ,ಅದು ಇಲ್ಲ… ಈ ರಾಜಕಾರಿಣಿಗಳು ಕೈಗೆ ಸಿಗೋದೆ ಚುನಾವಣೆ ಬಂದಾಗ, ಆಗ ಕೆಲಸಕ್ಕೆ ಬಾರದ ಈ ದರಿದ್ರ ‘ಜನ'(ಧನ) ಪ್ರತಿನಿದಿ(ಪಿಶಾಚಿ)ಗಳ ಚಿತಾವಣೆ ಮಾಡಿ ಚಿತಾಭಸ್ಮ ಗಂಗೆಯಲ್ಲಿ ಬಿಟ್ಟಿದಿದ್ರೆ ಇಂದು ನಾವು ಈ ರೀತಿ ಮಾತೋಡೋ ಅವಶ್ಯಕತೆನೇ ಇರಲಿಲ್ಲ …. ಯಾವಾಗ ನಾವು ನಮ್ಮ ಹಕ್ಕನ್ನ ಸರಿಯಾಗಿ ಬಳಸ್ತೀವೋ ನಮ್ಮ ಸೋಮಾರಿತನ ಹೊಣೆಗೇಡಿತನವನ್ನು ಬಿಡುತ್ತೇವೋ ಅಂದು ಇಂತಾ ಎಲ್ಲ ಅಕ್ರಮ ವಂಚನೆ ಹೊಣೆಗೇಡಿತನ ಎಲ್ಲಾ ನಿರ್ನಾಮ ಆಗುತ್ತದೆ ಆಲ್ಲೀವರೆಗೂ ಏನು ಆಗೋಲ್ಲ … ನೀವು ಈ ರೀತಿಯ articles ಬರೀತಾನೆ ಇರ್ತೀರ ನಾವು ಅದಕ್ಕೆ ನಮಗೆ ಇಷ್ಟ ಬಂದ ರೀತಿಯಲ್ಲಿ comment ಮಾಡ್ತಾನೆ ಇರ್ತೀವಿ… no change in this unless we change ourselves

  6. manjunath says:

    nijavaglu namardharu,naachigeyaagabeku

  7. Deepak says:

    Pratap,

    It is easy to take out our anger and frustration for the Dec 13th attack, by hanging the guy who our agencies blame as the culprit/mastermind. But give it another thought, when the incident happened, Afzal Guru was in prison and he is blamed of conspiring and masterminding the attack. The Supreme court ruling also noted that there were discrepancies in the prosecution’s arguments while passing it’s judgement. The prosecution was not able to decisively prove that Afzal was the mastermind behind the attacks. That is the reason why the President’s office is taking it’s time to pass it’s decision on the mercy plea. Killing Afzal will only give a sadistic satisfaction to the conscience of the nation, exactly the type of pleasure these guys derive from killing innocents. I agree he is not innocent and doesn’t deserve mercy, but truly hanging him FOR the Parliament attack is actually a grey area, while no one would argue against charging him for sedition. It is comparable to hanging Bhagat Singh for killing a police officer, while the actual reason was the Parliament bombing. That is the real dilemma. Coming to Kasab’s case, the courts are hearing the case and the law will follow it’s course. Infact, I’m sure that you’d agree that the fact that he got a sentence so early from the session’s court is fast, considered the pace of criminal cases in our country. We should not allow our animal instincts to guide our judgement in Kasab’s case. I’d call the decision makers as hijdas or namards, if they delayed the mercy plea from Kasab for so long (in light of irrefutable evidence), but I would also think twice before deciding on Afzal Guru.

    I know there will be many comments condemning my views, but I am a proud Indian, who is guaranteed a right to express my opinions without fear of retribution. Any sane Indian condemning my views is welcome do so without resorting to personal attacks.

    -Deepak Gowda

  8. Srinivas says:

    Excellent depiction of the current vexatious politics!!!

  9. Ranganath says:

    Recently I attended the megha fight talk show, here are my observations.

    Politicians or people of India should not tolerate any one or anything that is concerning the integrity and security of the nation. But the sad part is we are divided in terms of caste, region, religion, party, etc. It is really bad.

    Spiritually they say that what you see around you is mahye.

    I realized it by attending the meghafight by suvarna channel. The politicians were at their best in showing their honesty to their party leaders and party. I think some of the politicians had ensured that their cohorts are present in full strength. You can understand the maturity of the audience present. And the debate always sidetracked from the actual topic, should clemency be given to Afzal Guru. No one spoke with jingoism and objectively. Always it was an attack towards one party or person. Overall it was a very sad affair. Funniest part is that the politicians behaved as if it is a daily business of self promotion/advertising themselves in front of the camera and pseudo audience.
    Nice experience

  10. Super article sir. Bhayotpadakarige Bharatakintha surakshita jaga bere yava desha ella.Ajmal kasab Afzal guru etare bhayotpadakara visayadalli edu nijavagide. Zihad gagi prana bittare swarga siguttade.swargadalli namage yenu bekadaru siguttade namagagi alli 60 hudugiyaru kayuttiruttare yemba kanasannu kanda bhayotpadakarige bharatada jailnalli adu nanasagide. Kendra sarakara ugrara yella asegalannu ederiside ennu 60 hudugiyarannu supply maduvudu matra baki ede. Ugraru kelidare adannu pooraisalu kendra sarakara tudigalalli ninthide. ugrara poshanege antha pratyeka Budget mandisidare aascharya padabekagilla. Deshada janagala jeevakintha alpasankyatara voat mukyavagide kendra sarakarakke. Yestadaru yudda geddu deshada gadi bagavannu vyrigalige bittu kottu mattu chaina yuddadalli vyrigalodane horadalu bandooku ellade himadalli nedeyalu shoo ellade nadu yudda boomiyalli yodharu pranabiduvanthe madi deshada mana halumadida Neharu Indira gandhi vamsadavarallave evaru.

  11. sir it is brilliant article congress is unfit and same on to the Rahul Gandhi dis is not rule govt.congress is rule only the muslim peoples

  12. manjunath.k says:

    namma parliment mele inoame daali agbeku…..

  13. Vaman B Gudi says:

    Really a shame! hopeless congress.

  14. ts bhat says:

    It is the real truth you said sir. But the days will come soon, the medals should be returned to the brave soldiers by the President it self.

  15. Raghu says:

    Very good article pratap sir…… Even i also don’t understand why we are still keeping those two basteds (Afjal and Kasab) with us. Avarige kshamadana bere….. Avaru kshamege arhare….? It’s a big joke…. Namma sainikara thyaga balidanagalige yavude bele illave….. Ivarigella deshkkintha votee mukhyavagide…. Shame on you UPA government and Ms.President….. Wake up India Wake up…. Otherwise even god also can’t save India….

  16. mayur shah says:

    What else we can accept from this congress and so called Gandhi’s (soniya & rahul)!!!

    Today am feeling sorry for our brave soliders!!!

  17. Ravi Vakkalar says:

    Another super article Sir 🙂

  18. Pandurang says:

    ನಿಜ ಪ್ರತಾಪ್, ಮುಂದಿನ december ೧೩ ಬಂದರೂ ಆಫ್ಜ್ಯಲ್ ಗುರು ಆರಾಮಾಗೇ ಇರ್ತಾನೆ ಮತ್ತು ನಾವು ಹೀಗೆ ಚರ್ಚೆ ಮಾಡುತ್ತಲೇ ಇರುತ್ತೇವೆ. ನೀವು ಹೇಳಿದ ಹಾಗೆ ಅಂದು ಪೊಲೀಸರು ಮತ್ತು ಸೈನಿಕರು ಉಗ್ರರನ್ನು ತಡೆಯದೆ ಸಂಸತ್ತಿನ ಒಳಗೆ ಬಿಡಬೇಕಾಗಿತ್ತು.ಕನಿಷ್ಠ ಪಕ್ಷ ಇಂಥ ಹೇಡಿಗಳನ್ನು ಸಹಿಸಿಕೊಳ್ಳೋ ದೌರ್ಭಾಗ್ಯವಾದರೂ ತಪ್ಪುತ್ತಿತ್ತು. ಇವರಿಗೆ ನಿಜವಾಗ್ಲೂ ಮಾನ ಮರ್ಯಾದೆ ಇದೆಯಾ ಅಥವಾ ಇಂಥವರನ್ನು ಆರಿಸಿ ಕಳಿಸುವ ನಮಗೇ ಅವು ಇಲ್ವಾ?

  19. MANOJ says:

    its really a good article but based on emotions but failed to find the fact that everyone has has to ‘FOLLOW ONE CONSTITUTION…..’ & India a peace loving but strong defence country…

  20. Basavaraj Watawati says:

    Hello Sir,
    Really good article.
    As recently you are not published any books(Collection of Articals)
    As I am your Fan. I have all your books ie; collection of Bettale Jagattu(All 10 Books). Recently your not publishing any books. So please atleast twit in this site when u publish next book.

  21. leela kakathkar says:

    abba entha hedigalu !!!! Baratha deshavannu devare kaapadabeku ee paapigalinda!!!!!

  22. Chinmay Hegde says:

    I fully agree with Mr.Deepak Gouda…We cant take law into our hands and cross our limits. Or in other words we cant act like a terrorist with terrorists! I am not saying that we should not hang them or they are good people. But there is law and order to punish them and if you want it or not, as a citizan of india you should follow it. And regarding the political parties I dont think that any of the political parties are good and work for the true development of the country. And if you want to blame the corrupted congress, then you should also think about the other party which wants to establish ‘its own ‘hinduism’ ‘ in the country. I think if BJP,i mean modi(!) start to ‘rule’ tomorrow then there will be another kind of terrorism in the nation!!! I really dont know who will save this country from the ‘corrupted congress’,’fundamentalist BJP’,and the bloody terrorists:(

  23. Chinmay says:

    I agree with Mr.Deepak Gouda…We cant take law into our hands and cross our limits. Or in other words we cant act like a terrorist with terrorists! I am not saying that we should not hang them or they are good people. But there is law and order to punish them and if you want it or not, as a citizan of india you should follow it. And regarding the political parties I dont think that any of the political parties are good and work for the true development of the country. And if you want to blame the corrupted congress, then you should also think about the other party which wants to establish ‘its own ‘hinduism’ ‘ in the country. I think if BJP,i mean modi(!) start to ‘rule’ tomorrow then there will be another kind of terrorism in the nation!!! I really dont know who will save this country from the ‘corrupted congress’,’fundamentalist BJP’,and the bloody terrorists:(

  24. shreepada says:

    ನಿಜ. ಆದರೆ ಇದರಲ್ಲಿ ವಿರೋಧ ಪಕ್ಶಗಳ ಕಾಣಿಕೆ ಜಾಸ್ತಿ. ಬಿ.ಜೆ.ಪಿ ಬಿಡಿ, ಉಳಿದವರು ಯಾರೂ ಇದನ್ನ ಕೇಳದಿದ್ದಾದ್ದು ????

  25. aji says:

    neenu obba komuvadi

  26. madhu says:

    ಆಫ್ಜ್ಯಲ್ ಗುರು , ಆ ಹೆಸರು ಕೇಳಿದರೆ ಭಯಂಕರ ಸಿಟ್ಟು ಬರುತ್ತೆ , ಹಾಗಿದ್ದು ನಮ್ಮ ಸಂಸದರು ಹೇಗೆ ಅರಾಮವಗಿದ್ದಾರೆ ನಾಚಿಕೆಗೇಡು? ಇನ್ನಾದರೂ ಜನ ಸಿಡಿದೇಳದಿದ್ದರೆ ಕಾಂಗ್ರೆಸಿಗರು ವಿಶ್ವದಲ್ಲಿ ಇನ್ನು ಹತ್ತಾರು ಮುಸ್ಲಿಮ್ ಉಗ್ರಗಾಮಿಗಳನ್ನು ಸಾಕುವ ನಂಬರ್ ಒನ್ contract ಪಡೆಯುವದರಲ್ಲಿ ಸಂಶಯವಿಲ್ಲ . ಈ ವೋಟು ಬ್ಯಾಂಕ್ ರಾಜಕೀಯ ಮಾಡುವುದರಲ್ಲಿ , ಮುಸ್ಲಿಮರನ್ನು ಓಲ್ಯ್ಸಸುವುದರಲ್ಲಿ ಕಾಂಗ್ರೆಸಿಗರು ಮುಂದಿದ್ದಾರೆ ?????????? ಇವರಿಂದ ಬಿಡುಗಡೆಯ ಭಾಗ್ಯ ನಮ್ಮ ಭಾರತೀಯರಿಗೆ ಯಾವಾಗ ??

  27. wowwwwwwwwwwwwwwwwwwwwwwwwwwwwwwwwwwwwwwwwwww

  28. Pavithra says:

    Yavaga, enu madidare idarinda mukthi namage?

  29. sandeep says:

    idelladakku uttara vonde adu namma mata .nice article

  30. B M Gaonkar says:

    Pratap avre Nimma Nudiyalli Satya Ide Nija…..Aadre kevala Aaluva pakshya idakke hone yalla Virrodh paksha Kuda…..Namma Deshada duradrasta Andre Andu namma Hiriyaru Swatanryakkagi Horadidare INDU Adikarakkagi Horadutta Iddare……Inta Vishaya Samsattinalli Pratidwnisasde Iruvadakke Namma deshada lajje Getta Yella Rajakaranigale karana Hortu Kevala Ondu pakshya Alla…..Tavu BJP hagu RSS Bagge Mradu Dhorane Hondiruvadu Yellarigu Tilid Vishatya AA Karanakke dayavittu Purvagraha Piditaragi Aapadisbedi…..Dosha Obbaradalla sampoorna Vyavsteyaddu…..tavu Omme Ashpakulla Avara Bagge Baredaga…’GANDHI YEMBA MAHATMA’ yendu keelagi barediddiri Swami Gandhi Yemba Mahan Chetanada bagge Matanduvaga Swalpa Yochisi karana aa arhate Nanagu hagu Nimagu ILLA……Nimma baravanige Chennagide Kevala Hesaru galikeya Uddeshadinda GANDHI Bagge Salllada matu Beda….Yuvajana Nimma baravanige Mechhide Adikke balisha pada balike Munna Omme yochisi…..

  31. nijvagi helbekadre Afjal guruvige Paramveer chakra prashasti nedittare yeno anisutte

  32. KUMAR.S.MANGALORE says:

    yellaru kallare agiruvaga,namma deshavannu yaaru rakshane madbeku heli,

    ellO obba VAJEPEYIJI,ABDULKALAMJI ,MODJI
    AVARU MATHRA NAMMA DESHAVANNU GANDHIJI YAVARU KANASU KANDA RAMARAJYA KADEGE THEGEDUKONDU HOGAL SADYA.

    OBBA DESHADRIHIGE PASI SHIKSHE KODALU AGADA SARKARA IDRENU ILLADIDRENU?

  33. Lokesh D says:

    To Central Govt of India (or Sonia Gandhi),

    Please do send Kasab and Afzal back to their home. And save people’s money that Govt is spending on these two Chief Guests of Congress. As every one knows, We Indians will forget everything and forgive everyone.

    Atleast help Indians in this way and save money for our future Terrorists (Your Future Guests).

    Sincerely,
    Great Indians

  34. Tilak says:

    Nam Constitution nalli madiro loop galanna, egha ee blady politicians use madkothidaraste. Edhanella janarge thilisbekandre, media correct root nalli kelsa madbeku. Publics ge, politicians, actors, oota thindi madi malgo subjectgalna bittu, inthadru kade concentrate madok helbeku.

    Any how, it is a good effor from your end Mr Pratap….All the best

  35. SUBRAHMANYA says:

    @Deepak Gowda..
    Your comment had a new thought.. But how can you even compare Bhagat Singh with Afzal.. ?!! There are large differences in Bhagat’s and afzals objectives.. Bhagat fought to free his own nation….
    How an INDIAN can’t have any emotions while talking about India or about the jawans or the police…. ??

  36. sidigiri satigoudar says:

    realy hopless congress one day to remove congress party name

  37. Hemanth Gowda says:

    beautyful article & real fact

  38. Varun.Naikar says:

    None of the three court judgements sentencing Mohammad Afzal to death have accused him-leave alone found him guilty-of killing anybody, of being directly involved in the attack on Parliament or indeed of being anywhere near the Parliament building on December 13, 2001. Even the police chargesheet clearly states that at the time of the attack, Afzal was elsewhere. The Supreme Court judgement explicitly says there was no direct evidence against him, nor any evidence that he was a member of a terrorist organisation. Sir, Can you cite a source for the outlandish assertion??
    Don’t be prejudiced, ‘Kasab’s’ case is completely different, he is directly involved,no doubt… but to hang ‘Afzal Guru’ without knowing what really happened is a misdeed that will not easily be forgotten. Which shows weakening fabric of our democracy…

  39. Mangala C R says:

    ಇಂಥಹ ನಾಚಿಕೆಗೇಡಿನ ಆಡಳಿತಗಾರರು ನಮಗೆ ಬೇಕಾ…….?

  40. Ravishankar says:

    It is a biased article. Killers of our prime minister Rajiv Gandhi are still waiting for the death. Why Afjal guru has to be hanged first? Only because he belongs wrong community in India? He is treated as a fredom fighter in entire Kasmir and few days back Kasmir assembly wasgoing to pass the resolution that “not to hand Afjal” on the same lines Tamilnadu Assembly did for Rajiv Gandhi killers. Central Govt is following weight and watch policy in respect of Kashir problem on the issue of hanging of Afjal

  41. Venky says:

    ಹಾಯ್ ಪ್ರತಾಪ್,
    ಮಾಮೂಲಿನಂತೆ ಬರೀ super Article ಅ೦ತ ಹೇಳಿ ಮುಗಿಸಿದರೆ ನಿಮ್ಮ ಈ ಅತ್ಯುತ್ತಮ ಲೇಖನಕ್ಕೆ ಪ್ರತಿಕ್ರಿಯೆ ಸಲ್ಲಿಸಿದಂತೆ ಆಗುವುದಿಲ್ಲ ಅಂದುಕೊಳ್ಳುತ್ತಾ, ನನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದೇನೆ.
    ನನಗೆ ಮೊಟ್ಟ ಮೊದಲು ಪ್ರಶ್ನೆ ಏಳುವುದು ಇಂಥಾ ಗಬ್ಬೆದ್ದು ಹೋದ ಪರಿಸ್ತಿತಿಯಲ್ಲೂ, ಪುಕಲಾಟಿಗಳಿಂದ ತುಂಬಿ ಹೋಗಿರುವ ನಮ್ಮ ಸುತ್ತಲ ಜಗತ್ತಿನಲ್ಲಿ ಆಗಾಗ್ಗೆ ಗುಡುಗುವ ಧೈರ್ಯವಂತ ಪತ್ರಕರ್ತರೂ ಇದ್ದಾರ? ಅನ್ನುವುದು. ಅದಕ್ಕೆ ನಿಮಗೆ ಮೊದಲ ಸಲ್ಯೂಟ್. ಎರಡನೆಯದಾಗಿ, ಇಂಥಾ ಸತ್ಯ ನಿಷ್ಠ ನೇರ ಲೇಖನವನ್ನು ಧೈರ್ಯವಾಗಿ ಕನ್ನಡಪ್ರಭದಲ್ಲಿ ಪ್ರಕಟಿಸಿದ್ದಕ್ಕಾಗಿ ವಿಶ್ವೇಶ್ವರ ಭಟ್ಟರನ್ನು ಮನಸಾರೆ ಅಭಿನಂದಿಸುತ್ತೇನೆ. ಈ ಲೇಖನದಲ್ಲಿ ಯಾವ ವಾಕ್ಯವೂ ಕೃತಕ ಎನ್ನಿಸುವುದಿಲ್ಲ.
    ನಮ್ಮ ದೇಶದಲ್ಲಿ ಎರೆಡು ಮುಖ್ಯವಾದ ಹುದ್ದೆಗಳಿವೆ (ನಾನು ಹೇಳುವ ವಿಷಯಕ್ಕೆ ಸಂಬಂದಪಟ್ಟಂತೆ). ರಾಷ್ಟ್ರಪತಿ ಹುದ್ದೆ ಮತ್ತು ರಾಜ್ಯಪಾಲ ಹುದ್ದೆ. ಈ ಎರೆಡೂ ನೇರವಾಗಿ ಸಾಮಾನ್ಯ ಜನರ ಕೈ ನಿಯಂತ್ರಣ ಸಿಗದ ಹುದ್ದೆಗಳು. ಇವುಗಳಿಗೆ ಬೇಕಾದವರನ್ನು ಆರಿಸುವವರು ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು. ಹಾಗಾಗಿ ಹೆಚ್ಚಿನ ಸಂಧರ್ಬದಲ್ಲಿ ಅಯೋಗ್ಯರು ಬರುವ ಸಂಭವ ಹೆಚ್ಚು. ಜೈಲ್ ಸಿಂಗ್ ಇದ್ದಾಗ ಅವರನ್ನು ಇಂದಿರಾ ಚಮಚ, ಹೆಬ್ಬೆಟ್ಟು ಅಂತಲೇ ಕರೆಯುತ್ತಿದ್ದರು. ದೇಶಾಧ್ಯಕ್ಷ ಸ್ಥಾನಕ್ಕೆ ಪವರ್ ಕೂಡ ಇದೆ ಎಂದು ತೋರಿಸಿದ್ದು ಡಾ.ಅಬ್ದುಲ್ ಕಲಾಂ. ರಾಜ್ಯಪಾಲರ ಹುದ್ದೆಯ ಬಗ್ಗೆಯೂ ಹಾಗೆಯೇ ಅನ್ನಿಸಿದ್ದು ಭಾರದ್ವಾಜ್ ಬ೦ದು ಸ್ವಲ್ಪ ಸಮಯದ ವರೆಗೆ. ನಂತರ ಗೊತ್ತಲ್ಲ..ಪಕ್ಕಾ ಕಾಂಗ್ರೆಸ್ ಏಜಂಟ್ ರಾಜ್ಯ ಸರ್ಕಾರವನ್ನು ಬೀಳಿಸಲೆಂದೇ ಬಂದಂತಿತ್ತು. ಬಿಡಿ ಇದ್ಯಾರಿಗೂ ಗೊತ್ತಿರದ ವಿಚಾರವಲ್ಲ. ಆದರೆ ಪ್ರತಿಭಾ ಪಾಟಿಲ್ ಏನು ಮಾಡುತ್ತಿದ್ದಾರೆ? ಯಾವುದೊ ಯುದ್ಧ ಟ್ಯಾಂಕ್ ನ ಒಳ ಹೊಕ್ಕು ನಮ್ಮ ದೇವೇಗೌಡ ಒನ್ ವೇ ನಲ್ಲಿ ಟ್ರ್ಯಾಕ್ಟರ್ ಓಡಿಸಿ ‘ನಾನು ಮಣ್ಣಿನ ಮಗ’ ಅಂದಂತೆ ಈಕೆ ‘ವೀರ ಸೇನಾನಿ’ ಅನ್ನಿಸಿಕೊಳ್ಳಲು ಸಾದ್ಯವೇ? ಅವೆಲ್ಲಾ ಹೆಸರಿಗಾಗಿ, ಮೋಜಿಗಾಗಿ ಎಂದು ನಮ್ಮ ದೇಶದ ಹೆಚ್ಚಿನ ಜನರಿಗೆ ಗೊತ್ತಾಗುತ್ತದೆ. ಹಾಗೆ ನೋಡಿದರೆ ರಾಷ್ಟ್ರಪತಿ ಹುದ್ದೆ ಅತ್ಯಂತ ಹೆಚ್ಚಿನ ಅಧಿಕಾರದ್ದು. ಇವರಿಗೆ ಎಲ್ಲಾ ದಳಗಳ (ವಾಯುದಳ, ಭುದಳ ಮತ್ತು ನೌಕಾದಳ) ಸೂತ್ರ ಇವರ ಕೈಯಲ್ಲಿರುತ್ತದೆ, ಯುದ್ಧಕ್ಕಾಗಿ ಪ್ರಧಾನಿ ರೆಕಮಂಡ್ ಮಾಡಿದರೂ ಇವರ ಹೆಬ್ಬೆಟ್ಟು.. ಕ್ಷಮಿಸಿ, ಸಹಿ ಆಗಲೇಬೇಕು. ಅಂತೆಯೇ ನ್ಯಾಯಧಿಷರನ್ನು ನೇಮಿಸುವುದು, ರಾಜ್ಯಪಾಲರನ್ನು ನೇಮಿಸುವುದು, ಎಲೆಕ್ಷನ್ ಕಮಿಷನರ್ ನೇಮಿಸುವುದು, ಅಷ್ಟೇಕೆ ಯಾವ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವ ಅಧಿಕಾರವೂ ಇವರಿಗಿರುತ್ತದೆ. ಹಾಗೇ, ನೇಣುಗಂಬಕ್ಕೆರುವವರಿಗೆ ಕ್ಷಮಾ ಕರುಣಿಸುವ ಏಕೈಕ ವಯಕ್ತಿಕ ಅಧಿಕಾರ ನಮ್ಮ ರಾಷ್ಟ್ರ ಪತಿ, ಅಲ್ಲಲ್ಲ ರಾಷ್ಟ್ರಮಾತೆಗೆ (?) ಇದ್ದಿದ್ದು, ಅವರು ಅತ್ಯಂತ ಜಢ ರೂಪದಲ್ಲಿರುವುದನ್ನು ಪ್ರತಾಪ ಸಿಂಹ ಅತ್ಯಂತ ಗಂಭೀರವಾಗಿ ಧೈರ್ಯದಿಂದ ವಿವರಿಸಿದ್ದಾರೆ, ಅದಕ್ಕಾಗಿ ಅವರಿಗೆ ಧನ್ಯವಾದಗಳು.
    ಹಲವು ದೇಶಗಳಲ್ಲಿ ‘ಇವರು ನಮ್ಮ ದೇಶಾಧ್ಯಕ್ಷರು’ ಎಂದು ಕೊಳ್ಳುವುದಕ್ಕೆ ಹೆಮ್ಮೆ ಪಡುತ್ತಾರೆ. ಆದರೆ ನಮ್ಮ ದೇಶದಲ್ಲಿ? ರಾಷ್ಟ್ರ ಪತಿ ಹುದ್ದೆ ಇದೆ ಅಂತಲೇ ಅನಿಸುವುದಿಲ್ಲ! ನಿಜಕ್ಕೂ ನಿರ್ವೀರ್ಯ (ವೀರ್ಯ ಅಂದರೆ ಶೌರ್ಯಕ್ಕೆ / ಧೈರ್ಯಕ್ಕೆ ಸಮಾನವಾದ ಪದ, ಬರಿ ವಿರ್ಯಾನುವೊಂದೇ ಅಲ್ಲ!).
    ಇದೊಂದೇ ಅಲ್ಲ, ಹೆದರು ಪುಕ್ಕಲು ರಾಜಕಾರಣಿಗಳ ನಮ್ಮ ದೇಶದಲ್ಲಿ, ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ವಿಶೇಷ ಸವಲತ್ತು ಕೊಟ್ಟು ಕೊಟ್ಟು ಹಿಂದುಗಳಿಗೆ ರೋಷ ಬರುವಂತೆ ಮಾಡುತ್ತಿದ್ದರೂ ಏನೇನೂ ಬದಲಾವಣೆ ಆಗುತ್ತಿಲ್ಲ. ಯಾಕೆಂದರೆ ನಿರ್ವೀರ್ಯ ರಾಷ್ಟ್ರಪತಿಯ ಕೈಕೆಳಗೆ ನಿರ್ಲಜ್ಜ ರಾಜ ಕಾರಣಿಗಳು, ಈ ನಿರ್ಲಜ್ಜರ ಕೆಳಗೆ ನಮ್ಮಂಥಾ ಹೇಡಿ ಜನರು. ಇಂಥಾ ದೇಶದಲ್ಲಿ ಬದಲಾವಣೆ ಹೇಗೆ ತಾನೆ ಸಾದ್ಯ? ತಾಳಿ ಕೋಪಿಸಿಕೊಳ್ಳಬೇಡಿ.
    ಪ್ರತಿ ಸಲ ಯಾರಾದರು ಹೀಗೆ ಲೇಖನ ಬರೆದಾಗ ನಾವೇನು ಮಾಡುತ್ತೇವೆ? ನಾಲ್ಕು ದಿನ ಅದರಬಗ್ಗೆ ಚರ್ಚಿಸಿ, ಮುಂದಿನ ಪ್ರತಾಪಸಿಂಹ ಲೇಖನಕ್ಕಾಗಿ ಶನಿವಾರದ ಪೇಪರ್ ಬಿಚ್ಚುತ್ತೇವೆ, ನಂತರ ಇನ್ನೊಂದು ಸೈಕಲ್ ಅಷ್ಟೇ.
    ರಾಜ ಕಾರಣಿ ಗಳಂತೂ ಯಾವುದೇ ಅವ್ಯವಹಾರದಲ್ಲೂ ಕೈಗೆ ಸಿಗದೇ ಶಿಕ್ಷೆಯನ್ನು ತಪ್ಪಿಸಿಕೊಳ್ಳುತ್ತಾರೆ. ಎಂಥೆಂಥಾ ಪ್ರಕರಣ ಗಳನ್ನೂ ನೋಡಿದೆವು. ಪೇಪರಿನಲ್ಲಿ ಮೊದಲ ಪುಟದಲ್ಲಿ ಮೊದಲು ಬರುತ್ತದೆ. ಕೆಲ ದಿನಗಳ ನಂತರ, ಎರೆಡು ಮೂರು ಹೀಗೆ ಒಂದು ದಿನ ಎಲ್ಲೋ ಮೂಲೆಯಲ್ಲಿ ಕೇಸು ಕುಲಾಸೆ ಆಯಿತು ಅಂತ ಪ್ರಕಟಿಸುತ್ತಾರೆ. ಜನರಂತೂ ಅಲ್ಲಿ ಇಲ್ಲಿ ಬ್ಲಾಗು ಗಳಲ್ಲಿ, ಹರಟೆ ಕಟ್ಟೆಯಮೇಲೆ, ಮದುವೆ ಮುಂಜಿ ಗಳಲ್ಲಿ ಊಟಕ್ಕೆ ಮೊದಲು ನಂತರ ಸ್ವಲ್ಪ ಮೋಜಿಗಾಗಿ ಚರ್ಚಿಸಿ ನಮ್ಮ ಮನಸ್ಸಿನಿಂದ ಬಿಸಾಕುತ್ತಾರೆ. ಇನ್ನು ಒಂದೆರಡು ಸಭೆಗಳಲ್ಲಿ, ಮೆರವಣಿಗೆ ಗಳಲ್ಲಿ, ಉಪವಾಸ, ಮುಷ್ಕರದಲ್ಲಿ ಚರ್ಚೆಯಾಗಿ ಮುಂದೊಂದು ದಿನ ವಿಚಾರವೇ ಮುಲೆ ಗುಂಪಾಗುತ್ತದೆ, ಅಷ್ಟೇ.
    ಜಯಲಲಿತಗೇನಯಿತು? ಮತ್ತೆ ಮುಖ್ಯ ಮಂತ್ರಿ ಆದರು. ಮಾಯಾವತಿ? ಯಾರೂ ತಡೆಯುವವರೇ ಇಲ್ಲ! ನಮ್ಮ ಬಂಗಾರಪ್ಪ ಹೇಳ ಹೆಸರಿಲ್ಲದಂತೆ ತಪ್ಪಿಸಿಕೊಂಡರು. ಲಾಲು ಯಾದವ್, ದೇವೇಗೌಡ/ಕರುಣಾನಿಧಿ ಕುಟುಂಬ?’
    ಇನ್ನು ಅಲ್ಪ ಸಂಖ್ಯಾತರು (ಇವರು ಯಾವ ಲೆಕ್ಖದಲ್ಲಿ ಅಲ್ಪ ಸಂಖ್ಯಾತರು?) – ಕರ್ನಾಟಕ ಸರ್ಕಾರ ಚರ್ಚು ಗಲಾಟೆ ಗಳಲ್ಲಿ ದಾಖಲಾಗಿದ್ದ ಕ್ರಿಶ್ಚಿಯನ್ನರ ಕೇಸುಗಳನ್ನು ವಾಪಸ್ ತೆಗೆದು ಕೊಂಡಿದೆ! ತಪ್ಪು ಮಾಡಿದವರು ಹಿಂದುವಾಗಿರಲಿ ಮುಸ್ಲಿಂ, ಕ್ರಿಸ್ಚಿಯನ್ನರಗಿರಲಿ ಅವರೆಲ್ಲಾ ಅಪರಾಧಿಗಳಲ್ಲವೇ? ಹಾಗಾದರೆ ಇದ್ಯಾಕೆ ಬೇಧ? ಯಾರೂ ಕೇಳುವವರಿಲ್ಲ. ಇದು ನಮ್ಮ ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ!
    ನೋಡ್ತಾ ಇರಿ, ಅಬ್ದುಲ್ ಕರಿಂ ತೆಲಗಿ, ಮುಂಬೈ ದಾಳಿಯ ಉಗ್ರ ಕಸಬ್, ರಿಯಾಜ್ ಭಟ್ಕಲ್, ಪಾರ್ಲಿಮೆಂಟ್ ಧಾಳಿಕೋರರು, ಐಐ ಎಸ ಸಿ ದಾಳಿ ಕೋರರು…. ಎಲ್ಲರೂ ಆರಾಮವಾಗಿ ಜೈಲಲ್ಲಿ ತಿಂದುಂಡು ನಂತರ ಯಾವುದೊ ಒಂದು ನೆಪದಿಂದ ಕಡಿಮೆ ಶಿಕ್ಷೆಯಲ್ಲಿ ಬಿಡುಗಡೆ ಹೊಂದುತ್ತಾರೆ.
    ನನಗೆ ನಮ್ಮ ಪೋಲೀಸರ ಮೇಲೆ ಕನಿಕರವಾಗುತ್ತದೆ.ಪಾಪ, ಅವರು ಜನರತ್ರ, ಅಧಿಕಾರಿಗಳು, ರಾಜಕೀಯ ಪುಧಾರಿಗಳ ಕೆಟ್ಟ ಬಾಯಿಂದ ಬೈಸಿಕೊಂಡು ಕಣ್ಣಿಗೆ ಎಣ್ಣೆ ಹಚ್ಚಿ ಕೊಂಡು ಹಗಲು ರಾತ್ರಿ ಒದ್ದಾಡಿ ಖದೀಮರನ್ನು ಹಿಡಿದುಕೊಂಡು ಬಂದರೆ, ಕೆಲವೇ ದಿನಗಳಲ್ಲಿ ಕೇಸುಗಳು ಏನಾಗುತ್ತದೋ ಬಲ್ಲವನೇ ಬಲ್ಲ! ಇದು ನಮ್ಮ ದೇಶ, ನಮ್ಮ ನ್ಯಾಯಾಲಯಗಳು.
    ಪಾಕಿಸ್ಥಾನಕ್ಕೆ ಒಂದು ಲಿಸ್ಟ್ ಕೊಡುತ್ತಾರೆ ಅದರಲ್ಲಿ ಕೆಲವು ಕೈದಿಗಳು ಭಾರತದ ಜೈಲುಗಳಲ್ಲಿ ಇದ್ದಾರೆ ಅಂತ ಮರುದಿನ ಪೇಪರಲ್ಲಿ ಬರುತ್ತದೆ, ಇದು ಬೇಜವಾಬ್ದಾರಿಯೋ ಇಲ್ಲಾ ಬೇಕಂತಲೇ ಮಾಡುತ್ತಾರೋ ಗೊತ್ತಿಲ್ಲ. ಹೋಗಲಿ ಪಾಕಿಸ್ತಾನದವರು ಆ ಇಪ್ಪತ್ತು ಖದಿಮರನ್ನ ಕೊಟ್ಟು ಕೈತೊಳೆದುಕೊಂಡರು ಅಂತಲೇ ಇಟ್ಟು ಕೊಳ್ಳೋಣ, ಅವರನ್ನು ತಂದು ಏನು ಮಾಡುತ್ತಾರೆ ಇವರು? ಭಾರತದಲ್ಲಿ ಹಲವು ಕೋಟಿ ಜನರು ಒಪ್ಪೊತ್ತಿನ ಊಟಕ್ಕಿಲ್ಲದಿರುವಾಗ ಇವರನ್ನು ಜೈಲಿನಲ್ಲಿಟ್ಟು ಮಾಂಸಮೃಷ್ಟಾನ್ನದ ಮಜ್ಜನ ಮಾಡಿಸುತ್ತಾರೆನು?
    hmm.. ಇಂಥವಕ್ಕೆಲ್ಲ ಯಾರಲ್ಲೂ ಉತ್ತರವಿಲ್ಲ. ಇನ್ನು ಬರೆಯುವುದಕ್ಕೆ ಬೇಕಷ್ಟಿವೆ, ಸಧ್ಯಕ್ಕೆ ಇದನ್ನು ಸಮರ್ಥವಾಗಿ ಮಾಡುತ್ತಿರುವ ಪ್ರತಾಪ ಸಿಂಹಗೆ ಜೈ ಅನ್ನೋಣ!
    -ವೆಂಕಿ ದೊಡ್ಮನೆ.

  42. its very nice article.and ha first we hang these congress ministers to make india in good position.otherwise ts s continue as usual.

  43. Kumar says:

    Always we need pro Indian govt for all these damages caused by these bloody vote bank, power hungry politicians they are also destroyers of Nation.

  44. ಮುಂದಿನ ೫೦ ವರ್ಷಗಳಲ್ಲಿ ಭಾರತ ಭಾರತವಾಗಿರುದು ಸಂಶಯವಾಗಿದೆ, ಈಗಿನ ಕೇಂದ್ರ ಸರ್ಕಾರ ನಮ್ಮ ಸರ್ವನಾಶದ ಸಂಕೇತ.
    ನಾವು ಹಾಳಾದರೂ ಇವರುಗಳೇ ರಾಜ್ಯಭಾರ ನಡೆಸುತ್ತಿರುತ್ತಾರೆ ಈಗಿನ ವೋಟ್ ಬ್ಯಾಂಕ್ ಜನಸಂಖ್ಯೆ ಮುಂದೆ ವೃದ್ದಿಸುವುದರಿಂದ!
    ಹಾಗೂ ಇಂಥ ಸಂದರ್ಭದಲ್ಲಿ ವಿರೋಧ ಪಕ್ಷಗಳು (Watch Dog of Democracy) ದೇಶಕ್ಕೆ ಮೋಸಮಾಡುವ ಆಡಳಿತ ನಡೆಸುವ ಸರ್ಕಾರದ ಕುತ್ತಿಗೆ ಕೈ ಹಾಕುವಂತಿರಬೇಕು.
    ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಕೆಟ್ಟ ರಾಜಕಾರಣಿಗಳೇ ತೊಡಕಾಗಿದ್ದಾರೆ.

    ಭಾರತ,ಭಾರತ,ಭಾರತ…..

  45. shivu says:

    nice article…. it shows our politicians carelessness….

  46. Pulakeshi says:

    My blood boils when I think of this shameless attitude of the congress. They have not done anything to the country except claiming to win the freedom for us. That also the British gave us the freedom not because of the congg but because of Gandhiji’s freedom movement. I think instead of hanging Afzal we should hang the cong leaders. They are no good & are a shame on our country.

  47. jagadeesh says:

    The article is good and based on true facts and it is not emotional based .

  48. medha hegde says:

    HAI……..
    True and heart touching article. As u have told OUR POLICE should have allowed those terrorist to enter the parliament.. Shame on us……….

  49. veeresh says:

    Too good article by Pratap