Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಪ್ರೀತಿಯ ಓದುಗರೇ

ಪ್ರೀತಿಯ ಓದುಗರೇ

 

ನಮ್ಮ ಅಭ್ಯಂತರವೇನೂ ಇಲ್ಲ!

ಇದನ್ನು ಕೆಸರೆರಚಾಟ ಅನ್ನಿ, ವೈಯಕ್ತಿಕ ಆಕ್ರಮಣ ಅನ್ನಿ, ಮಾಧ್ಯಮದ ದುರ್ಬಳಕೆ ಅನ್ನಿ. ಹಾಗೆ ಅಂದುಕೊಳ್ಳುವ ಮುನ್ನ ಕೆಲ ಮೂಲಭೂತ ಪ್ರಶ್ನೆಗಳ ಬಗ್ಗೆಯೂ ಯೋಚಿಸಿ…

1. ಒಂದು ವೇಳೆ ನಿಮ್ಮ ಅಕ್ಕ, ತಂಗಿಯ ಬಗ್ಗೆ ಪತ್ರಿಕೆಗಳಲ್ಲಿ ಚಾರಿತ್ರ್ಯಹರಣ ಮಾಡಿದರೆ…
2. ನಿಮ್ಮ ತಾಯಿಯನ್ನು ನೀತಿಗೆಟ್ಟವಳು ಎಂದು ಬರೆದರೆ…
3. ನೀವೊಬ್ಬ ಯುವಕ/ಯುವತಿಯಾಗಿದ್ದರೆ ನಿಮ್ಮ ಜೀವನದಲ್ಲೂ ಅಫೇರ್ಗಳು, ಗೆಳೆಯ/ಗೆಳತಿಯರು ಇರುತ್ತಾರೆ. ಅವರ ಜತೆ ನೀವು ವಿಹರಿಸುತ್ತಿರುವುದು ಅಥವಾ ಇಂಟಿಮೇಟ್ ಆಗಿರುವುದು ಟ್ಯಾಬ್ಲಾಯ್ಡ್ಗಳಲ್ಲಿ ವರದಿಯಾಗಿ, ನಿಮ್ಮ ಖಾಸಗಿ ವಿಚಾರ ಸಾರ್ವಜನಿಕರ ಬಾಯಿಗೆ ಆಹಾರವಾದರೆ….
4. ನಿಮ್ಮ ಖಾಸಗಿ ಬದುಕು “ಕಾಸ್”ಭಾತ್ ಆದರೆ…
5. ಹೊಟ್ಟೆ-ಬಟ್ಟೆಗಾಗಿ ನಿಮ್ಮ ತಾಯಿಯೋ, ಅಕ್ಕನೋ ಲೇಡಿಸ್ ಪಿಜಿ ನಡೆಸುತ್ತಿದ್ದರೆ, ಆಕೆ “ಮಾಂಸದ ದಂಧೆ” ನಡೆಸುತ್ತಿದ್ದಾಳೆ ಎಂದು ಹಾಯ್ ಬೆಂಗಳೂರಿನಲ್ಲಿ ಬರೆದರೆ…
6. ಒಬ್ಬ ವೇಶ್ಯೆಗೂ Dignity of Living ಇದೆ. ವೇಶ್ಯೆ ಮೇಲೂ ಲೈಂಗಿಕ ದೌರ್ಜನ್ಯವೆಸಗುವಂತಿಲ್ಲ, ಅತ್ಯಾಚಾರವೆನಿಸುತ್ತದೆ. ಹಾಗಿರುವಾಗ ಒಬ್ಬ ಪತ್ರಕರ್ತ ವೇಶಧಾರಿ ವೇಶ್ಯೆಯರ ಬಗ್ಗೆ ಅಹಸ್ಯಕರವಾಗಿ ಬರೆದು, ಅವರಿಂದಲೂ ಸುಲಿಗೆ ಮಾಡಿದರೆ…
7. ನಿಮ್ಮ ಅಕ್ಕ, ತಂಗಿ ಅಥವಾ ತಾಯಿಯೋ ವಿಧವೆಯಾಗಿರಬಹುದು, ವಿಚ್ಛೇದಿತೆಯೂ ಆಗಿರಬಹುದು. ಹಾಗಂತ ಆಕೆ ರಸ್ತೆಯಲ್ಲಿ ಹೋಗುತ್ತಿರುವವರನ್ನೆಲ್ಲ ಹಾಸಿಗೆ ಕರೆಯುತ್ತಾಳೆ, ರೇಸ್ಕೋಸರ್್ ಬದಿ ನಿಂತು ಕುದುರೆ ಜೂಜಿನಲ್ಲಿ ಗೆದ್ದವರನ್ನೆಲ್ಲ ಮನೆಗೆ ಕರೆದುಕೊಂಡು ಹೋಗಿ ಸುಲಿಗೆ ಮಾಡುತ್ತಾಳೆಂದು ಬರೆದರೆ…
8. ಲೈಂಗಿಕ ಸುಖ ನೀಡುತ್ತಿಲ್ಲವೆಂಬ ಕಾರಣಕ್ಕೆ ಹೆಂಡತಿಗೆ ಗಂಡನಿಂದ, ಗಂಡನಿಂದ ಹೆಂಡತಿಗೆ ನ್ಯಾಯಾಲಯಗಳು ಡೈವೋಸರ್್ ನೀಡುತ್ತಿವೆ. ಒಂದು ವೇಳೆ, ಗಂಡನಾದವನು ಜೀವಾವಧಿ ಶಿಕ್ಷೆಗೆ ಗುರಿಯಾದ ಎಂದಿಟ್ಟುಕೊಳ್ಳಿ, ಹೆಣ್ಣಿನ ಲೈಂಗಿಕ ಹಕ್ಕಿಗೆ ಚ್ಯುತಿಯಾಗುತ್ತದೆ ಎಂಬ ಕಾರಣಕ್ಕೂ ಡೈವೋಸರ್್ ನೀಡಿದ ಘಟನೆ ವಾರದ ಹಿಂದಷ್ಟೇ ನಡೆದಿದೆ. ಒಬ್ಬಳು ವಿಧವೆ ಅಥವಾ ವಿಚ್ಛೇದಿತೆ ತನ್ನ ದೈಹಿಕ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು ಅನಿವಾರ್ಯತೆಗೆ ಬೀಳುವುದನ್ನು ಪತ್ರಿಕೆಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಬಳಸಿಕೊಂಡರೆ…
9. ಪ್ರಸ್ತುತ ಸುದ್ದಿಯಲ್ಲಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನುಸಿಂಘ್ವಿ ಸೆಕ್ಸ್ ಟೇಪ್ ಪ್ರಕರಣವನ್ನು ತೆಗೆದುಕೊಳ್ಳಿ. ಅದನ್ನು ಪ್ರಸಾರ ಮಾಡದಂತೆ ದಿಲ್ಲಿ ಹೈಕೋಟರ್್ ಮಾಧ್ಯಮ ವೃಂದಕ್ಕೇ ನಿರ್ಬಂಧ ಹಾಕಿದೆ. ಸಾಮಾಜಿಕ ತಾಣಗಳೂ ಅದನ್ನು ಪ್ರಕಟಿಸುವಂತಿಲ್ಲ. ಅಷ್ಟೇಕೆ, If you’ve shared Abhishek Manu Singhvi’s leaked video with friends online, you could go to jail ಎನ್ನುತ್ತದೆ ಸೈಬರ್ ಲಾ. ಒಬ್ಬ ಸಾರ್ವಜನಿಕ ವ್ಯಕ್ತಿಯ ರಂಗಿನಾಟವನ್ನೇ ಪ್ರಕಟಿಸುವಂತಿಲ್ಲ. ಹಾಗಿರುವಾಗ ಟ್ಯಾಬ್ಲಾಯ್ಡ್ಗಳಲ್ಲಿ ಅಮಾಯಕ ಹೆಣ್ಣುಮಕ್ಕಳ ಮಾನಹರಣವಾದರೆ…

10. ನಿಮ್ಮನ್ನು ಹಡಬೆ ನಾಯಿ, ಕಜ್ಜಿನಾಯಿ, ಷಂಡ, ಸ್ವಕುಚ ಮರ್ದನ, ತಾಯಿ ಗಂಡ, ಹಾದರದ ಪಿಂಡ ಎಂದು ಬರೆದರೆ….

ನಿಮಗೆ ಒಪ್ಪಿತವೇ?

ಇಲ್ಲ ಎಂದಾದರೆ ಕ್ರೈಮ್, ಸೆಕ್ಸ್ ಬಗ್ಗೆಯೇ ಬರೆದು, ಅಮಾಯಕರ ಬಗ್ಗೆ ರಂಗುರಂಗಿನ ಕಥೆಕಟ್ಟಿ, ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡುತ್ತಿರುವ, ಪತ್ರಿಕೋದ್ಯಮವನ್ನು ಸುಲಿಗೆಕೋರರ ತಾಣವಾಗಿಸುತ್ತಿರುವ 250 ಕೋಟಿಯ ಒಡೆಯ ರವಿ ಬೆಳಗೆರೆಯವರನ್ನು ಏನು ಮಾಡಬೇಕು? ಪ್ರತಿವಾರವೂ ಹೆಣ್ಣಿನ ಚಾರಿತ್ರ್ಯವಧೆ ನಡೆಯುವುದನ್ನು ನಿಲ್ಲಿಸಬೇಕೋ ಬೇಡವೋ? ಈತನ ಟ್ಯಾಬ್ಲಾಯ್ಡ್ನ ಮುಖಪುಟ ವರದಿಯಾದ ಒಂದೇ ಒಂದು ಸಕಾರಾತ್ಮಕ ಸುದ್ದಿಯನ್ನು ಹೇಳಿ ನೋಡೋಣ? ವಾರವಾರವೂ ಒಂದಿಲ್ಲೊಂದು ಹೆಣ್ಣುಮಗಳ ಬೆಡ್ರೂಮ್ ಕಥೆ ಬರೆಯುವ ಈತನ ಟ್ಯಾಬ್ಲಾಯ್ಡ್ನಲ್ಲಿ, “ಅಗ್ನಿ-5” ಕ್ಷಿಪಣಿಯ ಹಿಂದಿರುವ ಟೆಸ್ಸಿ ಥಾಮಸ್ಳಂಥ ಯಶಸ್ವಿ ಹೆಣ್ಣು ಮಗಳು ಯಾವತ್ತಾದರೂ ಮುಖಪುಟದ ಸುದ್ದಿಯಾಗಿದ್ದಾಳಾ? ಬೆಡ್ರೂಮ್ ಕಥೆ ಬರೆಯುವುದೂ ಒಂದು ಪತ್ರಿಕೋದ್ಯಮವಾ? ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ಆದರೆ ಆ ತಪ್ಪು, ಕೃತ್ಯ ವೈಯಕ್ತಿಕ ಮಟ್ಟ, ಮಿತಿಯಲ್ಲಿದ್ದರೆ ಯಾರಿಗೂ ಸಮಸ್ಯೆಯಿಲ್ಲ. ಅದರಿಂದ ಸಮಾಜಕ್ಕೆ ಹಾನಿ, ಘಾತುಕವಾಗುವಂತಿದ್ದರೆ ಬರೆಯಲಿ ಯಾರೂ ಬೇಡವೆನ್ನುವುದಿಲ್ಲ. ಆದರೆ ಅನ್ಯರ ಮಾನಹರಾಜು ಮಾಡುವುದನ್ನೇ ದಂಧೆಯಾಗಿಸಿಕೊಂಡರೆ? ಹೆಣ್ಣು ಮಕ್ಕಳ ಬಗ್ಗೆ ಅಸಹ್ಯಕರವಾಗಿ ಬರೆಯುವ ರವಿ ಬೆಳಗೆರೆ, ರೌಡಿಗಳ ಬಗ್ಗೆ, ಸಮಾಜಬಾಹಿರ ಶಕ್ತಿಗಳ ಬಗ್ಗೆ, ಕೊಲೆಗಡುಕರ ಬಗ್ಗೆ, ಹತ್ಯೆಗಳ ಬಗ್ಗೆ ಅತಿಂರಜಕವಾಗಿ ಬರೆಯುವುದೇಕೆ? ಘನಕಾರ್ಯ ಮಾಡಿದವರಂತೆ ವೈಭವೀಕರಿಸುವುದೇಕೆ? ರೌಡಿಗಳು ಸಮಾಜಘಾತುಕ ಶಕ್ತಿಗಳು, ಅವರನ್ನು ಮಟ್ಟಹಾಕಬೇಕು ಎಂದು ಈತ ಒಮ್ಮೆಯಾದರೂ ಬರೆದಿದ್ದನ್ನು ನೋಡಿದಿರಾ?

ಬಹುಶಃ “ಆಕಸ್ಮಿಕ” ಚಿತ್ರವೆನಿಸುತ್ತದೆ. ಹೆಣ್ಣನ್ನು ಸೂಳೆಯೆಂದು ಜರಿದಿದ್ದನ್ನು ಕಂಡು ಸಿಡಿಮಿಡಿಗೊಳ್ಳುವ ಡಾ. ರಾಜ್ ಕುಮಾರ್, “ಏ ಹೆಣ್ಣನ್ನು ಸೂಳೆಯನ್ನಾಗಿ ಮಾಡಿದವನು ಯಾರೋ, ಗಂಡೇ ಅಲ್ಲವೇನೋ…?” ಅಬ್ಬರಿಸುತ್ತಾರೆ. ಈ ರವಿ ಬೆಳಗೆರೆ ಅದೆಷ್ಟು ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿಲ್ಲ ಹೇಳಿ? Consensual sexನ ವಯೋಮಿತಿಯನ್ನು ಸಕರ್ಾರ 16 ವರ್ಷಕ್ಕೆ ಇಳಿಸಿದೆ, 16 ವರ್ಷದ ನಂತರ ಅದು ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು, ಅದನ್ನು ತಪ್ಪು-ಸರಿ ಎಂದು ತೀಪರ್ುಕೊಡಲು ನಾವ್ಯಾರೂ ಅಲ್ಲ. ಇವತ್ತು ಕಾಲೇಜು ವಿದ್ಯಾಥರ್ಿಗಳ ನಡುವೆ ಅದೆಷ್ಟು ಅಫೇರ್ಗಳಿಲ್ಲ ಹೇಳಿ? ಆದರೆ ಒಬ್ಬ ಹೆಣ್ಣಿನ ಬಗ್ಗೆ ಪತ್ರಿಕೆಯಲ್ಲಿ ಅವಹೇಳಕಾರಿಯಾಗಿ ಬರೆದು ಅಥವಾ ಬರೆಯುತ್ತೇನೆ ಎಂದು ಬೆದರಿಸಿ ಹಾಸಿಗೆ ಎಳೆದುಕೊಂಡು ಹೋಗುವ ಈ ವಿಕೃತ ಮನುಷ್ಯನನ್ನು ಮಟ್ಟಹಾಕಲು ಹೊರಟಿರುವುದು ತಪ್ಪಾ? ಇವತ್ತು ರವಿ ಬೆಳಗೆರೆಯಿಂದಾಗಿ ಒಂದು ಗಂಡು ಹೆಣ್ಣಿನ ನಡುವೆ ಸಹಜ ಸ್ನೇಹವನ್ನು ಇಟ್ಟುಕೊಳ್ಳುವುದಕ್ಕೂ ಅಂಜಬೇಕಾಗಿ ಬಂದಿದೆ. ನಿಮ್ಮ ಸಹೋದರಿ ಜತೆ ಕೈ ಕೈ ಹಿಡಿದು ಹೋಗುತ್ತಿದ್ದರೂ ಈತ ಸಂಬಂಧ ಕಲ್ಪಿಸಿ ಬರೆದು ಬಿಡುತ್ತಾನೆ. ಕೆಲವೊಮ್ಮೆ ಒಬ್ಬ ಮನುಷ್ಯನ ಸಹಜ ದೌರ್ಬಲ್ಯ ಕೂಡ ರವಿ ಬೆಳಗೆರೆಯ ಧೂರ್ತ ಉದ್ದೇಶಕ್ಕೆ ರಹದಾರಿಯಾಗುತ್ತಿದೆ. ಈ ರೀತಿಯ ಪತ್ರಿಕೋದ್ಯಮ ನಿಲ್ಲಬೇಕೋ ಬೇಡವೋ? “ಕಾಮರಾಜ ಮಾರ್ಗ”ದಲ್ಲಿ ಅನ್ಯರ ಹಾದರದ ಕಥೆ ಬರೆಯುವ ಈತ, ತನ್ನ ಹುಟ್ಟಿನ ಮೂಲದಲ್ಲೇ ಇರುವ ಅಂಥದ್ದೇ ಕಥೆಯ ಬಗ್ಗೆ, ತನ್ನಿಂದ ಜನಿಸಿರುವ ಮಗುವಿನ ಹುಟ್ಟಿನ ಮೂಲದಲ್ಲೂ ಇರುವ ಅದೇ ತೆರನಾದ ಗಾಥೆಯ ಬಗ್ಗೆ ಎಂದಾದರೂ ಬರೆದುಕೊಂಡಿದ್ದಾರಾ?

ಸ್ನೇಹಿತರೇ, ರವಿ ಬೆಳಗೆರೆ ಓದಿದ್ದು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ. ನಾನು ಪತ್ರಿಕೋದ್ಯಮದಲ್ಲೇ ಪದವಿ ಹಾಗೂ ಸ್ನಾತಕೋತ್ತರ ಪದವಿಗಳೆರಡನ್ನೂ ಪೂರೈಸಿದ್ದೇನೆ. ನನ್ನ 5 ವರ್ಷಗಳ ಅಧ್ಯಯನದಲ್ಲಿ ಎಲ್ಲಿಯೂ ರವಿ ಬೆಳಗೆರೆ ಬ್ರಾಂಡ್ ಆಫ್ ಜರ್ನಲಿಸಂ ಅನ್ನು ಓದಲಿಲ್ಲ. ಮಾನಹರಣ ಮಾಡುವ ಅಂಥದ್ದೊಂದು ಜರ್ನಲಿಸಮ್ಮೇ ಇಲ್ಲ, ಅದು ನಮ್ಮ ಸಮಾಜಕ್ಕೂ ಬೇಕಿಲ್ಲ. ನಾವು ಮಟ್ಟಹಾಕಲು ಹೊರಟಿರುವುದೂ ಅಂತಹ ಕೊಳಕು ಪತ್ರಿಕೋದ್ಯಮವನ್ನೇ ಹೊರತು ರವಿ ಬೆಳಗೆರೆ ಎಂಬ ವ್ಯಕ್ತಿಯನ್ನಲ್ಲ. ದುರದೃಷ್ಟವಶಾತ್, ಪಿ. ಲಂಕೇಶರು ಆರಂಭಿಸಿದ “Intellectually stimulating ” ಟ್ಯಾಬ್ಲಾಯ್ಡ್ ಜರ್ನಲಿಸಮ್ಮನ್ನು “Titillating” ಹಾಗೂ “Soft Pornography”ಯಾಗಿಸಿದ ಅಪಕೀತರ್ಿ ಬೆಳಗೆರೆಯಾದ್ದರಿಂದ ನಮ್ಮ ಹೋರಾಟದ ಗುರಿ ಅವರಾಗಿದ್ದಾರೆ. ಇದನ್ನು ಕೆಸರೆರಚಾಟ, ಇದು ನಿಲ್ಲಬೇಕು ಎನ್ನುವುದಾದರೆ ರವಿ ಬೆಳಗೆರೆ ಮಾದರಿಯ ಪತ್ರಿಕೋದ್ಯಮ ನಿಮಗೆ ಒಪ್ಪಿತವೇ? ನಿಮ್ಮ ಮಗಳ, ಅಕ್ಕ, ತಂಗಿಯ ಚಾರಿತ್ರ್ಯವಧೆಯಾಗುವುದನ್ನು ಸಹಿಸಿಕೊಳ್ಳುತ್ತೀರಾ? ಹಾಯ್ ಬೆಂಗಳೂರನ್ನು ನಿಮ್ಮ ಮಗನಿಗೋ, ಮಗಳಿಗೋ ಓದಲು ಕೊಡುತ್ತೀರಾ? ಕಾಮರಾಜ ಮಾರ್ಗ, ಪ್ರೊತಿಮಾ ಬೇಡಿ, ಕಂಪನಿ ಆಫ್ ವಿಮೆನ್ ಪುಸ್ತಕಗಳನ್ನು ನಿಮ್ಮ ಮನೆಯ ವೈಯಕ್ತಿಕ ಸಂಗ್ರಹಾಲಯದಲ್ಲಿಟ್ಟು ನಿಮ್ಮ ಮಗ/ಮಗಳಿಗೆ ಓದುವಂತೆ ಸೂಚಿಸುತ್ತೀರಾ? ಆ ಪೂಜಾ ನಿಮ್ಮ ಮಗಳೋ, ಆ ಆಶಲತಾ ನಿಮ್ಮ ತಾಯಿಯೋ ಎಂದಿಟ್ಟುಕೊಳ್ಳಿ, ಆಕೆಯನ್ನು ಬಗ್ಗೆ ರವಿ ಬೆಳಗೆರೆ ಬರೆದಿದ್ದನ್ನು ಓದಿದ ನಿಮ್ಮ ಬೀದಿಯ ಜನ ಯಾವ ದೃಷ್ಟಿಯಲ್ಲಿ ನೋಡಬಹುದು? ಹಾಯ್ ಬೆಂಗಳೂರ್ನ ಹುಸಿ ಕಥೆ ಓದಿ, ನಿಮ್ಮ ಮಗಳನ್ನು ಗಿರಾಕಿಗಳು ಬಂದು ಕರೆದರೆ ನಿಮ್ಮ ಮನಸ್ಸಿಗೆ ಅದೆಷ್ಟು ಘಾಸಿಯಾಗಬಹುದು? ಒಂದು ವೇಳೆ ನೀವು ಪೂಜಾಳ ತಂದೆ ಉಮಾಶಂಕರರ ಸ್ಥಾನದಲ್ಲಿದ್ದರೆ ಅವರ ನೋವು ಅನುಭವಕ್ಕೆ ಬರುತ್ತಿತ್ತು. ಕೆಲವೊಮ್ಮೆ ವಯಸ್ಸಿನ ಉದ್ವೇಗ, ಅಚಾತುರ್ಯಗಳಿಂದ ತಪ್ಪುಗಳಾಗುತ್ತವೆ, ಹಾಗಂತ ಮಗಳ ಅಚಾತುರ್ಯದ ಬಗ್ಗೆ ರಂಗುರಂಗಾಗಿ ಬೆಳಗೆರೆ ಬರೆದಾಗ, ಅಪ್ಪ-ಅಮ್ಮನಿಗಾಗುವ ಸಾಮಾಜಿಕ ಅವಮಾನ, ಸಂಕಟದ ಬಗ್ಗೆ ಒಮ್ಮೆಯಾದರೂ ಯೋಚಿಸಿದ್ದೀರಾ? ನಾವು ಬೆಳಗೆರೆಯನ್ನು ಮಟ್ಟಹಾಕಲು ಹೊರಟ ಕೂಡಲೇ ಮಾಧ್ಯಮದ ದುರ್ಬಳಕೆ ಎಂದು ಹುಯಿಲೆಬ್ಬಿಸುತ್ತಿರುವ ಮಹಾನುಭಾವರಿಗೆ, ರವಿ ಬೆಳಗೆರೆ ಕಂಡವರ ಹೆಣ್ಣುಮಕ್ಕಳ ಮಾನಹರಾಜು ಹಾಕಿ ರಾತ್ರಿ ಕುಡಿತಕ್ಕೆ ದುಡ್ಡು ಮಾಡಿಕೊಳ್ಳುತ್ತಿದ್ದಾಗ ಮಾಧ್ಯಮದ ದುರ್ಬಳಕೆಯಾಗುತ್ತಿದೆ ಎಂದನಿಸಿರಲಿಲ್ಲವೆ?

ನಿಮ್ಮ ಅಭಿಪ್ರಾಯಕ್ಕೆ ನಮ್ಮ ಗೌರವವಿದೆ, ಆದರೆ ನಾವಂತೂ ಸುಮ್ಮನಿರುವುದಿಲ್ಲ, ಇನ್ನು ಮುಂದೆ ರವಿ ಬೆಳಗೆರೆಯ ಟ್ಯಾಬ್ಲಾಯ್ಡ್ನಲಿಯಾವ ಹೆಣ್ಣುಮಗಳ ಚಾರಿತ್ರ್ಯಕ್ಕೆ ಕಳಂಕ ಅಂಟಿಸಿದರೂ ನಾವು ಸಹಿಸುವುದಿಲ್ಲ. ಅಷ್ಟೇಕೆ, ರವಿ ಬೆಳಗೆರೆಯವರು ದುಡ್ಡಿನಾಸೆ ಹಾಗೂ ವಿಕೃತ ಹತಾಶೆ ತೀರಿಸಿಕೊಳ್ಳಲು ತನ್ನ ಮಗ ಕರ್ಣನ ಕರ್ಣಕಠೋರ ಕಥೆಗಳು, ಅವರ ಅಳಿಯಂದಿರು ಹಾಗೂ ಪುತ್ರಿಯರ ರಂಗಿನಾಟಗಳ ಬಗ್ಗೆ ಹಾಯ್ ಬೆಂಗಳೂರಿನಲ್ಲಿ ಬರೆದರೂ ನಾವು ಒಪ್ಪುವುದಿಲ್ಲ!

83 Responses to “ಪ್ರೀತಿಯ ಓದುಗರೇ”

  1. Avinash says:

    I can proudly say I am a big reader of your articles, but one who has read R.B’s articles cannot and will not say this. We are with u……

  2. Nalini says:

    well said. We don’t think that your fight is personal, Pratap. Belagere is a social evil and he needs to stop writing nonsense in his tabloid. You are on the right track. All kannadigas should realize this and fight this battle. Your point is well taken.

  3. well_written says:

    Bravo!! D first person(a true journalist) who can use media to talk about such a cheap person who really dunno the values of being human… How the hell tat guy comes on tv and stands in front of public?? How do public see him?? I pity helpless public as well as helpless middle class families who cannot show there anger on so called human being…. Words wont stop to scold neither the eyebrows stop frowning whenever I see him on tv or I hear his name… CHEAPEST GUY ON EARTH….

  4. Mahesh says:

    Hello Pratap,

    I would first like to congratulate you for taking an initiative like this.
    It is really nice to see a journalist taking on people in journalism and making the money with very bad taste. I think Mr. Ravi Belegare so called ‘whatever’ by himself has to no answers to your valid questions. I would say out of 250 crore whatever he has earned 99.99 % of which has come from either blackmailing or writing against people with poor publicity.
    Newspapers like the ones he runs must vanish and these kind of people needs to be punished with highest punishment. If he can write about anyone its not a crime but if someone writes about himself he will act as though he is one great saint.
    I complete agree with the points you had mentioned and I am very happy to support your initiative.
    I am not against people becoming rich or whatever. But the way they become should not be upon the sorrows of others. Mr. Belegare is a kind of person who belongs to latter.
    If he stops writing such insulting things or even the paper like his vanishes I am the most happiest person.
    Hats of to your initiative. I request you to please continue this and I am glad to support to your good cause.
    Mr Belegare you should be ashamed whatever you are now. Shame on yourself.

    Mahesh

  5. Satish says:

    I am sure the readers here would consider this as social responsibility more than personal war against RB. You have very well highlighted the points. This should be more than enough to explain ‘others’ who might consider this as misuse of media or personal war.

    Does your website have option share the articles here into facebook and twitter?

  6. jagadeesh says:

    nice lines….

  7. vinod says:

    nice pratap ji

  8. vasudeva mysore says:

    Well said Pratap, every women has her own identity as daughter, wife, mother and grand mother we have to respect each role. But some insects in our country doesn’t value women and i wonder how that RB would have seen his mother as mother only or as prostitute so shameless. Others who supports them (to RB supporter) may be of same category only shameless creatures.

    That RB should realize and until his dirty tabloid is stopped till that this fight should go on. We are Indians, since our History women has been respected even though there may be women harassment but this type of making every women characterless was never in our history and this fatherless idiot is useless to live in India. I think this Hai Bangalore is the first Indian tabloid in the history to portray every women in India as characterless and prostitute. Great job RB go on, soon people will assassinate you.

    Suvarna news is doing great job and also those who have suffered because of RB should come up and speak. Just want to advice that come up with new issues of RB and give information about his daughters and son, doesn’t know anything about them.

    All the best…

  9. Vinayakumar says:

    Good article pratap..keep it up…We should give end to this type of misusing the journalism.

  10. Shashi says:

    Good One Pratap !! go ahead with this war. On one fine day we will not see Hi Bangalore in paper stallss.

  11. Raghu says:

    Awesome article Pratap. Well done.

  12. Sunil says:

    ಪ್ರತಾಪ್, ನೀವು ಹೇಳಿದ್ದು 100% ನಿಜ. ಇನ್ನು ನಮ್ಮ ಜನ ಹೀಗೆ ಅವನ ರಗಳೆಗಳನ್ನ ಸಹಿಸಿ ಇದ್ದರೆ ಅದು ನಮ್ಮ ತಾಯಿಗೆ ಮಾಡುವ ಅವಮಾನ.

  13. VADIRAJ says:

    Great Pratap, Go ahead

  14. Facts says:

    lankesh pathrike is anti communal and its reoprts more less against one community so it is not fare to give clean chit to that perticular tabloid . M/s Gowri shankar is Pesudo Secualrist doesnt deserve any appreciation form ur side .

  15. Jayasimha says:

    Illi Tappu aagirivudu anta patrikegalannu oduva vyaktigalinda. Kettadanne Oduva mansau kettadanne bayasuttade. Anthaha patrikegalannu nillisuvudarinda yaavude nashtavilla. Nimma horaatakke Namma bembalavide

  16. Nagaraj shetty says:

    Tappu madidavanige shasti agale beku . Patrikodyamavannu tanna pitrarjitha asti endu tilididdane .

  17. Prashanth says:

    You have written correctly and we should ban this weekly paper when we found such harrassed articles.. public is also having he same feeling like that the news paper is meant for people who have ‘SLUM’ kind of thinking…who can think at low level about the society.
    Also Just FYI that, once i had a chance to look at the book ‘Indireya maga Sanjaya’, its about sanjay gandhi s\o Indira Gandhi. When i opened the book the first line i saw is “Yentha Kelasa Madibitta, Soole Maga!!!”. What kind of language is this? I just felt like its a language used by third class people and closed the book.. not sure was this communicated to Gandhi family from our Karnataka state congress politicians??
    ALso just fyi, I rememeber he writing an article about ‘Belimutt Swamiji’ 10 -12 yrs back and hurt our feelings a lot.. We know how that swamiji is.. but we got confirmed that this fellow writes such articles all for money thats it…

  18. suresh Prasad says:

    I completely agree with you sir, But why did u telecast the video of that shimoga student in suvarna news???

  19. bhaskara says:

    manyare,

    NONDAVARU KANUUNU KRAMA TEGEDU KOLLABEKU AAGA MaTRA

    IDU SARIYAGUTTADE

  20. Rajendra Prasad says:

    I am with you… Great work for a great thing…

  21. Gireesh says:

    Very rightly said

  22. Shivaraj says:

    Dear Pratap,

    Nimma Saamajika kalakalige Dhanyavadagalu. Nimma dhairya mechuvantaddu. Nimma odugaru yaru Nimmannu dooshisuvudilla. Yaradaru Nimmannu dooshisidare adu ‘Kolagere’ avara abhimanigalu matra. Friends Pratap avaru samajika hitadrusti inda
    bareda esto olleya lekhanagalanna mechiddiri hagu navu enadaru madalu sadyave anta keliddiri. Iga Pratap avaru kevala lekhanadallaste allade swataha ondu dusta shaktiyannu matta hakalu horatiddare. Dayavittu modalinante avarannu bembalisi.

  23. SparK says:

    Power is often the source of atrocities; such power has to be kept under leash by investigative journalism.

    Congratulations for what you’ve achieved so far and good luck in the future.

    Give us the truth in its bare bones.

    SparK

  24. dhananjaya says:

    you are the role model for the youth.you are absolutely correct,we have to eliminate the worst,antisocial,greedy, loafer,pornwriter.

  25. Murali says:

    We don’nt want such type of journalist for our society…ASAP he should stop his So called attitude and writting for better society..

  26. siddarthkesari says:

    sir nimma alochanegalu uthama, mathu niswartha.. nanage journalism bagge gothilla adhare nanobba odhuganagi belagere yanthaha gomuka vyagrarannu kandisuttene… sathyakke savilla sir go ahead..

  27. Mahaswapna says:

    ಬಿಬಿಸಿ ನ್ಯೂಸ್
    ಬೆಳಗೆರೆ ಬುಕ್ಸ್ ಅಂಡ್ ಕಾಪಿ
    ಕಾಫಿ ಅಲ್ಲ ಕಾಪಿ. ಯಾಕಂದ್ರೆ ಅವನದ್ದು ಒರಿಜಿನಲ್ ಅಂತ ಯಾವ ಪುಸ್ತಕ ಇದೆ ಹೇಳಿ. ಇನ್ನು ಕಾಫಿ ಆಫರ್ ಮಾಡಬೇಕು ಅಂದ್ರೆ ಅದಕ್ಕೆ ಪುಸ್ತಕ ಮಾರಾಟ ಆಗಬೇಕು. ಆಗೋ ವ್ಯಾಪಾರ ಕಾಫಿಪುಡಿಗೆ ಹಾಲಿಗೆ ಕೂಡ ವರ್ಕೌಟ್ ಆಗ್ತಾ ಇಲ್ಲ. ಇನ್ನು ಕಾಫಿ ಎಲ್ಲಿಂದ ಕೊಟ್ಟಾನು. ಇದರ ಬದಲು ಕಾಫಿ ಹೋಟೆಲ್ ಆದ್ರೂ ಇಟ್ಟಿದ್ರೆ, ಕಾಫಿಗೊಂದು ಪುಸ್ತಕ ಫ್ರೀ ಅಂತ ಕೊಟ್ಟು ಸ್ಟಾಕ್ ಕ್ಲಿಯರ್ ಮಾಡಿಕೊಳ್ಳಬಹುದಿತ್ತೋ ಏನೋ. ಕಡೇಪಕ್ಷ ಕೈ ಒರೆಸ್ಕೊಳೋ ಟಿಶ್ತೂ ಥರ ಆದ್ರೂ ಉಪಯೋಗಿಸ್ತಿದ್ರು.

    ನಿನ್ನೆ ಕಂಡ ಬ್ರೇಕಿಂಗ್ ದೃಶ್ಯ:

    ಬೆಳಗೆರೆಯ ನಿಜಬಣ್ಣ ಬಯಲಾದ ಪರಿಣಾಮವೋ ಏನೋ, ಬಿಬಿಸಿಯಲ್ಲಿದ್ದ ಹೆಣ್ಮಕ್ಕಳು ಅಂಗಡಿ ಬಾಗಿಲಿಗೆ ಕ್ಯಾಕರಿಸಿ ಕೆಲಸ ಬಿಟ್ಟಿರಬೇಕು. ಮಧ್ಯಾನ ಹನ್ನೆರಡಾದರೂ ಅಂಗಡಿ ತೆರೆದಿಲ್ಲ! ಏನೂ ಹೇಳೋದಿಕ್ಕಾಗೋದಿಲ್ಲ ಸಾರ್. ಲಾಕ್ ಆದ ಅಂಗಡಿಯೊಳಗೆ ಅವನ ಪುಸ್ತಕಗಳನ್ನೇ ಹಾಸಿಗೆ ಹೊದಿಕೆ ಮಾಡಿಕೊಂಡು ಅಲ್ಲೇ ಯಾರೊಂದಿಗಾದ್ರೂ ಆತ ಮಿಲನಮಹೋತ್ಸವ ಮಾಡಿಕೊಳ್ತಾ ಇದ್ರೂ ಏನೂ ಆಶ್ಚರ್ಯವಿಲ್ಲ.
    ಹಾಗೇನಾದ್ರೂ ಅನುಮಾನವಿತ್ತ್ತೋ ಏನು ಕತೆಯೋ. ಬೆಳಗೆರೆಯ ಎರಡನೇ ಅಧಿಕೃತ ಪತ್ನಿ ಯಶೋಮತಿ ಎಂಟ್ರಿ ಆಗೇ ಹೋಯ್ತು. ಒಂದಷ್ಟು ಹುಡುಗರೊಂದಿಗೆ! ಮುಚ್ಚಿರೋ ಬಾಗಿಲೆದುರು ದುಮುದುಮು ಓಡಾಡಿ, ಒಂದೆರಡು ಫೋನ್ ಮಾಡಿ ಅಲ್ಲೇ ಕಟ್ಟೆ ಮೇಲೆ ಕೂತೇ ಬಿಟ್ಟಳು. ಕೊನೆಗೆ ಭೀಮಾ ತೀರದ ಆತನ ಸಾಕುಮಕ್ಕಳು ಬೀಗ ತೆಗೆದು ಷಟರ್ ಎತ್ತಿದರು. ಆಗ ಗಂಟೆ ಒಂದು. ಒಳಗಡೆ ಬೆಳಗೆರೆ ಇರಲಿಲ್ಲ. ಆತ ಇನ್ನೆಲ್ಲೋ ಎಷ್ಟನೆಯ ಅನಧಿಕೃತ ಪತ್ನಿಯೊಂದಿಗೆ ಸೃಷ್ಟಿಕ್ರಿಯೆಯಲ್ಲಿ ಬ್ಯುಸಿ ಇದ್ದನೋ ಏನೋ ಪಾಪ.

  28. Mruttyunjaya Yaligar says:

    yes 100% I agree with you sir

  29. Keshav says:

    Hi Dear Pratap Simha

    ನೀವು ಮಾಡುತಿರುವ ಕೆಲಸ ನಿಜವಾಗಲು ಮೆಚ್ಹಬೇಕಾದದ್ದು, ಕೆಲವು ಸೊಗಲಾಡಿಗಳ ಮಾತಿಗೆ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಈ ರವಿಬೆಳೆ(ಕೊಳೆ)ಗೆರೆಯಂತಹ ಘೊಮುಖ ವ್ಯಾಘ್ರನ ನಿಜರೂಪ ಜನರಿಗೆ ತಿಳಿಯಬೇಕು, ಇವನೆಂತ ಕಾಮುಕ ಎಂಬುದು ಜಗತ್ತಿಗೆ ತಿಳಿಯಬೇಕು.ಇವನ ಪೇಪರ್ ನೋಡೊದಿಕ್ಕೆ ಅಸಹ್ಯವಾಗುತ್ತದೆ, ಇವನ ಆ ತಲೆ ಕೆಟ್ಟ ಬರಹಗಳು (ಹಡಬೆ ನಾಯಿ, ಕಜ್ಜಿನಾಯಿ, ಷಂಡ, ಸ್ವಕುಚ ಮರ್ದನ, ತಾಯಿ ಗಂಡ, ಹಾದರದ ಪಿಂಡ) ಸಮಾಜದ ಸ್ವಾಸ್ಥ್ಯವನ್ನೆ ಹಾಳು ಮಾಡುತ್ತಿವೆ. ಇಂತಾ ಅಯೊಗ್ಯನಿಗೆ ತಕ್ಕ ಶಾಸ್ತಿ ಆಗಬೇಕು.ಈ ಹೋರಾಟದಲ್ಲಿ ನಿಮಗೆ ಯಸಸ್ಸು ಸಿಗಲಿ, ಹೆಣ್ಣು ಮಕ್ಕಳ ಮತ್ತು ಅವರ ತಂದೆ ತಾಯಂದಿರ ಕಣ್ಣೀರಿನ ಕಥೆ ಕೊನೆಯಾಗಲಿ, ನೊಂದವರಿಗೆ ನ್ಯಾಯ ಸಿಗಲಿ, ಈ ರೀತಿಯ ಒಂದು ಹೋರಾಟ ಬೇಕಿತ್ತು, ಇದನ್ನು ಮುಂದುವರಿಸಿ, ನಾವೆಲ್ಲಾ ನಿಮ್ಮ ಜೊತೆ ಇದ್ದೇವೆ…….,

  30. Uday.M says:

    good job..! go ahead bro..

  31. kannadiga says:

    Brother…Then what about “Company of a women” written by Khushvanth Singh,what do u say about many writers,thinkers,actress or actors who used women for the sake of their brevity,their profit ? Kindly stop this all rivalry and try to improve our society…

  32. Mahaswapna says:

    ಬಿ ಬಿ ಸಿ ನ್ಯೂಸ್:
    ಬಿ ಬಿ ಸಿ ಅಲಿಯಾಸ್ ಬೆಳಗೆರೆ ಬುಕ್ಸ್ ಅಂಡ್ ಕಾಪಿ! ಹೌದು. ಕಾಫಿ ಅಲ್ಲ ಅದು ಕಾಪಿ. ಯಾಕಂದ್ರೆ ಅವನು ಬರೆದಿರೋದೆಲ್ಲ ಕಾಪಿನೇ. ಇನ್ನು, ಕಾಫಿ ಆಫರ್ ಮಾಡಬೇಕು ಅಂದ್ರೆ ಪುಸ್ತಕ ಮಾರಾಟ ಆಗಬೇಕು. ಆದರೆ, ಅಂಗಡಿಲಿ ಆಗ್ತಾ ಇರೋ ವ್ಯಾಪಾರ ಕಾಫಿಪುಡಿ, ಸಕ್ಕರೆ, ಹಾಲಿಗೇ ಸಾಕಾಗ್ತಾ ಇಲ್ಲ. ಇನ್ನು ಕಾಫಿ ಎಲ್ಲಿಂದ ಕೊಟ್ಟಾನು. ಇದರ ಬದಲು ಒಂದು ಕಾಫಿ ಕ್ಯಾಂಟೀನೇ ಮಾಡಿದ್ರೆ, ಕಾಫಿ ಜೊತೆ ಕಾಫಿ ತಗೊಂಡವ್ರಿಗೊಂದು ಬುಕ್ ಫ್ರೀ ಕೊಟ್ಟಿದ್ರೆ ಹಾಗಾದ್ರೂ ಸ್ಟಾಕ್ ಕ್ಲಿಯರ್ ಆಗ್ತ ಇತ್ತು. ಕಡೇ ಪಕ್ಷ ಕೈ ಒರೆಸ್ಕೊಳೋಕೆ ಅಂತಾದ್ರೂ ಟಿಷ್ಯೂ ಥರ ಉಪಯೋಗಿಸ್ತಿದ್ರು. ಹೋಗ್ಲಿ ಬಿಡಿ.

    ಆ ವಿಷಯ ಬಿಡಿ. ಗುರುವಾರ ಕಂಡ ದೃಶ್ಯ ಇದು.!
    ಮಾಧ್ಯಮಗಳಿಂದ ಬೆಳಗೆರೆಯ ನಿಜಬಣ್ಣ ಬಯಲಾದ ಪರಿಣಾಮವೋ ಏನೋ, ಅವನ ಕಾಪಿ ಅಂಗಡಿಲಿ ಕೆಲಸಕ್ಕಿದ್ದ ಹುಡುಗೀರು ಇವನ ಮೂತಿಯಿರೋ ಅಂಗಡಿ ಬಾಗಿಲಿಗೆ ಕ್ಯಾಕರಿಸಿ ಕೆಲಸ ಬಿಟ್ಟುಹೋಗಿರಬೇಕು! ಮಧ್ಯಾನ ಹನ್ನೆರಡು ಗಂಟೆಯಾದ್ರೂ ಅಂಗಡಿ ಕ್ಲೋಸು. ಓಪನ್ ಇದ್ರೂ ಏನ್ ವ್ಯತ್ಯಾಸ ಆದೀತು ಬಿಡಿ. ಅಯ್ಯೋ ಹೌದು. ಏನೂ ಊಹಿಸೋಕಾಗಲ್ಲ. ಈತ ಅಂಗಡಿ ಶಟರ್ ಎಳೆದುಕೊಂಡು, ಅಲ್ಲೇ ಪುಸ್ತಕಗಳ ಪಲ್ಲಂಗ ಮಾಡಿಕೊಂಡು ಯಾರದ್ರೂ ಸಿಕ್ಕವರನ್ನು ಹಿಡ್ಕೊಂಡು ಬಂದು ಮಿಲನಮಹೋತ್ಸವ ಮಾಡಿಕೊಳ್ತಾ ಇದ್ರೂ ಆಶ್ಚರ್ಯವಿಲ್ಲ.
    ಆ ಹೊತ್ತಿಗೆ ಅಲ್ಲಿಗೆ ಅವನ ಎರಡನೇ ಅಧಿಕೃತ ಪತ್ನಿ ಯಶೋಮತಿಯ ಆಗಮನವಾಯಿತು. ಹುಡುಗರ ಗ್ಯಾಂಗ್ ಜೊತೆಗೆ! ಮುಚ್ಚಿದ ಅಂಗಡಿಯ ಬಾಗಿಲ ಮುಂದೆ ಶತಪಥ ತಿರುಗಿದಳು. ಯಾರಿಗೋ ಫೋನ್ ಮೇಲೆ ಫೋನಾಯಿಸಿದಳು. ಆಮೇಲೆ ದುಮುದುಮು ಎನ್ನುತ್ತಲೇ ಕಟ್ಟೆಯ ಮೇಲೆ ತಳವೂರಿ ಕೂತುಬಿಟ್ಟಳು. ಆಮೇಲೆ ಸ್ವಲ್ಪ ಹೊತ್ತಲ್ಲಿ ಹುಡುಗರು ಷಟರ್ ಎತ್ತಿದರು. ಭೀಮಾ ತೀರದ ಇವನ ಸಾಕುಮಕ್ಕಳ ಥರ ಇದ್ದರು. ಅಂತೂ ಇಂತೂ ಒಂದು ಗಂಟೆಗೆ ಅಂಗಡಿ ಓಪನ್ ಆಯ್ತು. ಒಳಗಡೆ ಬೆಳಗೆರೆ ಇರಲಿಲ್ಲ! ಯಜಮಾನ್ರು ಇನ್ನೆಲ್ಲಿ ತಮ್ಮ ಎಷ್ಟನೇ ಅನಧಿಕೃತ ಪತ್ನಿಯ ಜೊತೆ ಸೃಷ್ಟಿಕ್ರಿಯೆಯಲ್ಲಿ ಬ್ಯುಸಿಯೋ.! ಹೋಗ್ಲಿಬಿಡಿ.

  33. Gangadhara S says:

    Please go ahead against this BELEGERE journalism… all youth will support you..

  34. Mahesh Hegde says:

    bettale jagattu 7ralli ella pagegalu sariyagi display agta illa……..

  35. naveen says:

    ya ur right

  36. @rjun says:

    Pratap,
    When the whole world knows it’s a pig, why do u waste ur precious time to prove it? I would like to see your wonderful writtings on the great national and international personalities, and matter of some importance…

  37. Ramesh says:

    Hi Pratap,

    The fight you are doing is really admirable but dont restrict your fight only on one person, there are other tabloids and channels which are doing the same thing.
    its not about bringing stay on publishing bad and false articles in his papper/channels, society should ban such tabloid itself from circulation.

    The day it happens will be a real victory for you and the society, i wish we can see that day to be happened for the welfare of the people and for a prosperous society.

    we are with you in this fight pratap.

    Ramesh

  38. JP GILIYAR says:

    Very strange to read Ravi Belegare article….. now days media press all displaying some nonsense matters and making money……..everywhere same fight for money…writing some hot news and getting attention from public…….his more than 100 articles about same sex related story …..Without any proof how he is writing???
    Prathap please tell us how we can fight against like this nonsense writer …

  39. praveen says:

    Dear Sir,
    You r great, We will proud of you.
    Thank you.

  40. Rohit says:

    go sir ……..v r vth u..

  41. Abishek says:

    hats up Pratap

  42. ಚರ್ಚಾಸ್ಪದ ವಿಷಯ.

    ರವಿ ಬೆಳಗೆರೆಯ ಕೊಳಕುಗಳನ್ನ ಜನರ ಮುಂದಿಡಬೇಕಾದ ಅನಿವಾರ್ಯತೆಯಿದೆ. ಆದರೆ, ಬರೀ ಅದನ್ನೇ ಸೇಡಿನಂತೆ ತೀರಿಸಿಕೊಳ್ಳುತ್ತಾ ಹೋದರೆ ಜನರಿಗೆ ರೇಜಿಗೆ ಹುಟ್ಟಿಸುತ್ತದೆ. ಈ ಎಚ್ಚರ ವಹಿಸಬೇಕು ಅಷ್ಟೇ.

    ಆದರೆ, ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲ ಪತ್ರಕರ್ತರೂ ಮರ್ಯಾದೆ ಕಳೆದುಕೊಂಡಿದ್ದಾರೆ. ಯಾರನ್ನೂ ನಂಬುವ ಸ್ಥಿತಿಯಲ್ಲಿ ಜನರಿಲ್ಲ.

  43. ಎಲ್ಲ ಎಂದರೆ, ಬಹುತೇಕ ಎಲ್ಲ ಪ್ರಮುಖರು.

  44. harish gowda says:

    Dear Pratap, i liked your article. your doing wonderful work. keep doing. today its someone’s sister tomorrow may our sisters. i dont know when rb will understand this.

  45. Shridhar Gangadhar says:

    I am surprised that, you are wasting your time on criticizing Ravi.

    Pratap Sir, Sorry, you may also loose the credibility if you keep on doing this.

    Please concentrate on the the real issues nation is facing.
    you are Brilliant writer.

    Keep writing 🙂

  46. Akshata R.Maiya says:

    go ahead sir all the best……………..

  47. pallavi says:

    hi,

    hats off to your courage and integrity in the times of suspecting everything related to media. finally somebody is brave, intelligent, courageous enough to fight against somebody who is beyond doubt the biggest crook the Kannada press has seen .when everybody thought why pick a fight with his dirty pen, you not only called him for an open battle but fought a fair fight and won.yes, sometimes in the larger interest someone has to clean the mess.’ hats off Pratap for showing the world the real worth of a pseudo hero. hope we curb our curiosity to read only what titillates… may your pen always takes the path of truth.

  48. Vishnu says:

    A great job this, pratap!!!…. Media now is considered as the fourth organ of government.Media has the power to mould the line of thought of the people . Taking this into consideration , it is high time that people involved in this field realised their responsibility and acted accordingly.

    We expect you to keep a positive, clean and morally right approch towards journalism. Pls dont try emulating RB and try not to defame people involved with him.
    Dont take it as a personal skirmish.Expose him in the subtlest manner possible..
    Follow the words of krishna “satyam bruyat priyam bruyat”

  49. VIRUPAKSHA GOWDA says:

    we are with you.. Go ahead…

  50. vinod kulal says:

    gud job done