Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಐದೂವರೆ ಲಕ್ಷ ಎಂಜಿನಿಯರ್‌ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ?

ಐದೂವರೆ ಲಕ್ಷ ಎಂಜಿನಿಯರ್‌ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ?

ಅವತ್ತು ಭಾರತೀಯ ಬಾಹ್ಯಾಕಾಶ ವಿಜಾನದ ಪಿತಾಮಹ ವಿಕ್ರಂ ಸಾರಾಭಾಯಿ ಅವರಿಂದ ಪ್ರೇರಿತರಾಗಿದ್ದ ಸತೀಶ್ ಧವನ್, ಅಬ್ದುಲ್ ಕಲಾಂ ಮುಂತಾದ ವಿಜಾನಿಗಳು ಒಂದು ಜಗುಲಿಯಂತಹ ಜಾಗದಲ್ಲಿ ಕುಳಿತು ದೇಶದ ಮೊದಲ ಉಪಗ್ರಹವಾದ ‘ಆರ್ಯಭಟ’ವನ್ನು Assemble ಮಾಡಿದ್ದರು. ಅದಕ್ಕೂ ಮೊದಲು ಒಂದೊಂದು ಬಿಡಿ ಭಾಗಗಳನ್ನೂ ಸೈಕಲ್ ಮೇಲೆ ತಂದಿದ್ದರು. ಎಲ್ಲ ಭಾಗಗಳನ್ನೂ ಜೋಡಿಸಿದ ನಂತರ ಸೋವಿಯತ್ ರಷ್ಯಾಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಬೈಕನೂರ್ ಉಡಾವಣಾ ಕೇಂದ್ರದಿಂದ 1975ರಲ್ಲಿ ಭೂಸ್ಥಿರ ಕಕ್ಷೆಯಲ್ಲಿ ಸ್ಥಿರಗೊಳಿಸಿದ್ದರು.

ಆನಂತರ ರೂಪುಗೊಂಡ ‘ಭಾಸ್ಕರ-1’ ‘ಭಾಸ್ಕರ-2’ಗಳನ್ನೂ ರಷ್ಯಾದ ಬಾಹ್ಯಾಕಾಶ ಕೇಂದ್ರದಿಂದಲೇ ಆಗಸಕ್ಕೆ ಉಡಾವಣೆ ಮಾಡಬೇಕಾಗಿ ಬಂತು. ಅಷ್ಟಕ್ಕೂ ಅಮೆರಿಕ, ರಷ್ಯಾ, ಫ್ರಾನ್ಸ್ ಮುಂತಾದ ಮೂರೇ ರಾಷ್ಟ್ರಗಳ ಬಳಿ ಮಾತ್ರ ಅಂತಹ ಉಡಾವಣಾ ತಂತ್ರeನ ಹಾಗೂ ವಾಹಕವಿತ್ತು. ಆದರೇನಂತೆ ಮೂರನೇ ಉಪಗ್ರಹವಾದ ‘ರೋಹಿಣಿ’ಯನ್ನು ಸ್ವಂತ ಉಡಾವಣಾ ವಾಹಕದ ಮೂಲಕ ಲಾಂಚ್ ಮಾಡುವ ಸಾಹಸಕ್ಕೆ ಕೈಹಾಕಿತು ಇಸ್ರೊ(ISRO). ಅದೇ SLV(Satellite Launch Vehicle). ಇಸ್ರೊ ತೋರಿದ ಧೈರ್ಯವೇನೋ ಮೆಚ್ಚುವಂಥದ್ದಾಗಿತ್ತು. ಆದರೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನಮ್ಮ ಎಸ್‌ಎಲ್‌ವಿಗಳು ಆಗಸಕ್ಕೆ ನೆಗೆದ ಕೆಲವೇ ಕ್ಷಣಗಳಲ್ಲಿ ಉಪಗ್ರಹ ಸಮೇತ ಬಂಗಾಳಕೊಲ್ಲಿಗೆ ಬೀಳಲಾರಂಭಿಸಿದವು. ಅವೇನು ಒಂದೆರಡು ವೈಫಲ್ಯಗಳಲ್ಲ, ಹಾರಿಸಿದವುಗಳೆಲ್ಲ ಮತ್ತೆ ಕೆಳಕ್ಕೇ ಬರುತ್ತಿದ್ದವು. ಹಾಗಾಗಿ SLVಗಳನ್ನು Sea Loving Vehiclesಎಂದು ಜನ ಜರಿಯಲಾರಂಭಿಸಿದರು. ಮತ್ತೆ ಕೆಲವರು ಬಜಾಜ್ ಸ್ಕೂಟರ್‌ನಂತೆ ಒಂದು ಕಡೆ ವಾಲಿಸಿ ಸ್ಟಾರ್ಟ್ ಮಾಡಿದರೆ ಆಗಸಕ್ಕೆ ನೆಗೆಯಬಹುದೇನೋ ಎಂದು ಗೇಲಿ ಮಾಡಹತ್ತಿದರು. ಇತ್ತ ವ್ಯಂಗ್ಯಚಿತ್ರಕಾರರು ತಲೆಕೆಳಗಾದ (Upside down) ರಾಕೆಟ್‌ನ ಕಾರ್ಟೂನ್ ಬರೆದು ಕಿಚಾಯಿಸಿದರೆ, ಪತ್ರಕರ್ತರು  “20 ಕೋಟಿ ಸಮುದ್ರದ ಪಾಲು”, “30 ಕೋಟಿ ಬಂಗಾಳ ಕೊಲ್ಲಿಗೆ”, “40 ಕೋಟಿ ನೀರಿಗೆ” ಎಂದು ಥರಥರಹದ ತಲೆಬರಹ ಕೊಟ್ಟು ಬರೆಯಲಾರಂಭಿಸಿದರು.

ಅವು ಎಂಥವರೂ ಆತ್ಮಸ್ಥೈರ್ಯ ಕಳೆದುಕೊಳ್ಳುವಂತಹ ಸೋಲುಗಳಾಗಿದ್ದವು.

ಆದರೂ ಇಸ್ರೊ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಒಂದೆಡೆ ಉಪಗ್ರಹ ತಯಾರಿಕೆಗಿಂತ ಉಡಾವಣೆಗೇ ಹೆಚ್ಚು ದುಡ್ಡು ಕೊಟ್ಟು ರಷ್ಯಾದ ಬೈಕನೂರ್ ಹಾಗೂ ಫ್ರಾನ್ಸ್‌ನ ‘ಫ್ರೆಂಚ್ ಗಯಾನಾ’ದಿಂದ ಇನ್ಸಾಟ್ ಹೆಸರಿನ ಸಾವಿರಾರು ಕೆಜಿ ತೂಗುವ ಬೃಹತ್ ಉಪಗ್ರಹಗಳನ್ನು ಲಾಂಚ್ ಮಾಡುತ್ತ, ಮತ್ತೊಂದೆಡೆ ಸಣ್ಣ ಗಾತ್ರದ ಉಪಗ್ರಹಗಳನ್ನು ಸುಮಾರು 350 ಅಥವಾ 800ಕಿ.ಮೀ.ನಂತಹ ಕಡಿಮೆ ಎತ್ತರದ ಭೂಕಕ್ಷೆಗೆ ನಮ್ಮ ಎಸ್‌ಎಲ್‌ವಿಗಳ ಮೂಲಕವೇ ಉಡಾಯಿಸುವ ಪ್ರಯತ್ನವನ್ನು ಜಾರಿಯಲ್ಲಿಟ್ಟುಕೊಂಡಿತು. 1990ರ ವೇಳೆಗೆ ನಮ್ಮ ಎಸ್‌ಎಲ್‌ವಿಗಳು ವಿಶ್ವಾಸವಿಟ್ಟು ಉಡಾವಣೆ ಮಾಡಬಹುದಾದಂತಹ ಲಾಂಚ್ ವೆಹಿಕಲ್‌ಗಳಾಗಿ ರೂಪುಗೊಂಡವು. ಇಂತಹ ಯಶಸ್ಸಿನಿಂದ ಉತ್ತೇಜನಗೊಂಡ ಇಸ್ರೊ, ಎಎಸ್‌ಎಲ್‌ವಿ, ಪಿಎಸ್‌ಎಲ್‌ವಿಯನ್ನು ದಾಟಿ ಜಿಎಸ್‌ಎಲ್‌ವಿ(ಜಿಯೋಸಿಂಕ್ರೊನಸ್ ಸೆಟಲೈಟ್ ಲಾಂಚ್ ವೆಹಿಕಲ್) ಅಂದರೆ 26 ಸಾವಿರ ಕಿ.ಮೀ. ದೂರದ ಭೂಸ್ಥಿರ ಕಕ್ಷೆಗೆ ಸಾವಿರಾರು ಕೆಜಿ ತೂಕದ ಉಪಗ್ರಹಗಳನ್ನು ಕೊಂಡೊಯ್ದು ಸ್ಥಿರಗೊಳಿಸುವ ತಂತ್ರeನದ ಅಭಿವೃದ್ಧಿಗೆ ಮುಂದಾಯಿತು. ಈ ಹಿನ್ನೆಲೆಯಲ್ಲಿ ರಷ್ಯಾ ಜತೆ ಒಪ್ಪಂದವನ್ನೂ ಮಾಡಿಕೊಂಡಿತು. ಆದರೆ 1998ರಲ್ಲಿ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಕ್ರಯೋಜೆನಿಕ್ ಎಂಜಿನ್ ಹಾಗೂ ತಂತ್ರeನಗಳೆರಡನ್ನೂ ವರ್ಗಾಯಿಸುವುದಾಗಿ ಮಾಡಿದ್ದ ವಾಗ್ದಾನದಿಂದ ರಷ್ಯಾ ಹಿಂದೆ ಸರಿಯಬೇಕಾಯಿತು. ಆದರೆ ಇಸ್ರೊ ಧೃತಿಗೆಡಲಿಲ್ಲ.

ಇತ್ತ ೧೯೭೭ರಲ್ಲಿ ಜನತಾ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಅಮೆರಿಕದ ಕಂಪನಿಗಳಾದ ಕೋಕಾ ಕೋಲಾ ಹಾಗೂ ಐಬಿಎಂ ಅನ್ನು ಭಾರತದಿಂದಲೇ ಓಡಿಸಿದರು. ಮುನಿಸಿಕೊಂಡ ಅಮೆರಿಕ ಕಂಪ್ಯೂಟರ್ ಚಿಪ್‌ಗಳನ್ನು ನಾವು ಆಮದು ಮಾಡಿಕೊಳ್ಳುವುದರ ಮೇಲೆಯೇ ನಿರ್ಬಂಧ ಹೇರಿತು, ನಮ್ಮ ಸೆಟಲೈಟ್‌ಗಳಿಗೆ ಬೇಕಾದ ಟ್ರಾನ್ಸ್‌ಪಾಂಡರ್‌ಗಳನ್ನು ಆಮದು ಮಾಡಿಕೊಳ್ಳಲಾಗದಂತಹ ಪರಿಸ್ಥಿತಿಯನ್ನು ಸೃಷ್ಟಿಸಿತು, ತನ್ನ ‘ಕ್ಲಾಸಿಕ್’ ಸೂಪರ್ ಕಂಪ್ಯೂಟರ್ ಅನ್ನು ಕೊಡುವುದಿಲ್ಲ ಅಂದಿತು. ಸಂಕಷ್ಟಕ್ಕೆ ಸಿಲುಕಿದ ಸರಕಾರ ಪುಣೆಯಲ್ಲಿ ‘ಸಿ-ಡಾಕ್’(ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್) ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಸಾಫ್ಟ್‌ವೇರ್ ಅಭಿವೃದ್ಧಿಗೆ ಕೈಹಾಕಿತು. ಅಮೆರಿಕ ಕೊಡದಿದ್ದರೇನಂತೆ, ನಮ್ಮ ವಿಜಾನಿಗಳೇ ‘ಪರಮ್’ ಎಂಬ ಮೊಟ್ಟಮೊದಲ ಸೂಪರ್ ಕಂಪ್ಯೂಟರನ್ನು ತಯಾರಿಸಿದರು. ಅದಕ್ಕೂ ಮೊದಲು ಆರಂಭವಾಗಿದ್ದ ‘ಸಿ-ಡಾಟ್’ (ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್) ಎಂಬ ಮತ್ತೊಂದು ಸಂಸ್ಥೆ, ಟೆಲಿಫೋನ್ ಎಕ್ಸ್‌ಚೇಂಜ್, ರೂರಲ್ ಎಕ್ಸ್‌ಚೇಂಜ್‌ಗಳನ್ನು ತಯಾರಿಸುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಅಮೋಘ ಬದಲಾವಣೆಗೆ ನಾಂದಿ ಹಾಡಿತ್ತು. ಹೀಗಾಗಿ ನಮ್ಮ ಸಂಪರ್ಕ ತಂತ್ರeನ ಗಮನಾರ್ಹ ಪ್ರಗತಿ ತೋರಿತು. ‘ಸಿ-ಡಾಟ್’ನಿಂದಾಗಿ ವಿಎಸ್‌ಎನ್‌ಎಲ್, ಎಂಟಿಎನ್‌ಎಲ್, ಬಿಎಸ್‌ಎನ್‌ಎಲ್‌ಗಳಂತ ‘ಗೇಟ್‌ವೇ’ ಸಿದ್ಧಗೊಂಡರೆ, ವಿಶ್ವದರ್ಜೆಯ ಜಿಎಸ್‌ಎಲ್‌ವಿಗಳನ್ನು ತಯಾರು ಮಾಡಿದ ಇಸ್ರೊ, ಸಂಪರ್ಕ ಕ್ರಾಂತಿಗೆ ಅಗತ್ಯವಾದ ಕೆಲಸ ಮಾಡಿತು.

ಇತ್ತೀಚೆಗೆ ಇಸ್ರೊ ಹೊಸದೊಂದು ದಾಖಲೆ ನಿರ್ಮಿಸಿದೆ!

ಕಳೆದ ವರ್ಷದ ಏಪ್ರಿಲ್‌ನಲ್ಲಿ ವಿಶ್ವದ ವಿವಿಧ ರಾಷ್ಟ್ರಗಳ ೮ ಉಪಗ್ರಹಗಳನ್ನು ಒಮ್ಮೆಲೇ, ಒಂದೇ ಉಡಾವಣಾ ವಾಹಕದಿಂದ ಯಶಸ್ವಿಯಾಗಿ ಲಾಂಚ್ ಮಾಡಿದ್ದು, ಜಗತ್ತಿನ ಯಾವ ರಾಷ್ಟ್ರವೂ ಇಂತಹ ಸಾಹಸ ಮಾಡಿಲ್ಲ. ಇವತ್ತು ನೀವು ಕೈಯಲ್ಲೆತ್ತಿಕೊಂಡು ‘ಹಲೋ’ ಎನ್ನುತ್ತೀರಲ್ಲಾ ಆ ಮೊಬೈಲ್ ಕೊಟ್ಟಿದ್ದು ಸಾಫ್ಟ್‌ವೇರ್ ಕ್ಷೇತ್ರವಾಗಿದ್ದರೂ ನಿರ್ಜೀವ ಮೊಬೈಲ್‌ಗೆ ಜೀವ ತುಂಬಿರುವುದು ಇಸ್ರೋದ ಉಪಗ್ರಹಗಳು. ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಬೆಂಗಳೂರಿನಲ್ಲಿ ಕುಳಿತು ಅಮೆರಿಕ, ಬ್ರಿಟನ್, ಜರ್ಮನಿಯ ಕೆಲಸ ಮಾಡಲು ಸಾಧ್ಯವಾಗಿದ್ದರೆ ಅದರ ಹಿಂದೆ ಇಸ್ರೊ ಮತ್ತು ಸಿ-ಡಾಟ್‌ಗಳ ಪರಿಶ್ರಮವಿದೆ. ಸಂಪರ್ಕವೇ ಇಲ್ಲ ಅಂದರೆ ಸಾಫ್ಟ್‌ವೇರ್ ಕ್ಷೇತ್ರ ತಲೆಯೆತ್ತುವುದಕ್ಕಾದರೂ ಹೇಗೆ ಸಾಧ್ಯವಾಗುತ್ತಿತ್ತು?

ಇಂದು ಅಭಿವೃದ್ಧಿಶೀಲ ರಾಷ್ಟ್ರಗಳು ಇಸ್ರೋದ ಉಪಗ್ರಹಗಳನ್ನು, ಟ್ರಾನ್ಸ್‌ಪಾಂಡರ್‌ಗಳನ್ನು ಖರೀದಿ ಮಾಡುತ್ತಿವೆ, ಅವುಗಳ ಉಡಾ ವಣೆಗೂ ಇಸ್ರೋದ ಬಳಿಗೇ ಬರುತ್ತಿವೆ, ಯಶಸ್ವಿ ಚಂದ್ರಯಾನದ ಮೂಲಕ ಬಾಹ್ಯಾಕಾಶ ತಂತ್ರeನದ ವಿಷಯದಲ್ಲಿ ನಾವು ಯಾರಿಗೂ ಕಡಿಮೆಯಲ್ಲ ಎಂದು ಸಾಬೀತುಪಡಿಸಿದೆ. ಅಂದು ಐಎಂಎಫ್, ವರ್ಲ್ಡ್ ಬ್ಯಾಂಕ್, ಎಡಿಬಿಯಿಂದ ಸಾಲತೆಗೆದುಕೊಂಡು ಬರುತ್ತಿದ್ದ ಕಾಲದಲ್ಲಿ ಸರಕಾರ ಕೊಡುತ್ತಿದ್ದ ಪುಡಿಗಾಸಿನಲ್ಲಿ ಕಷ್ಟಪಟ್ಟು, ಆರಂಭಿಕ ಸೋಲಿನ ನೋವು, ಅವಮಾನ ನುಂಗಿಕೊಂಡು ಮೇಲೆ ಬಂದ ಇಸ್ರೊ ಇಂದು ಜಗತ್ತಿನ ಅತ್ಯಂತ ಮುಂದುವರಿದ ರಾಷ್ಟ್ರಗಳು ಭಯಪಟ್ಟುಕೊಳ್ಳುವಂತೆ ಮಾಡಿದೆ. “ಇಸ್ರೊ ನೋಡಿ ಪಾಠ ಕಲಿಯಿರಿ” ಎಂದು ಅಮೆರಿಕದ “ಏರೋಸ್ಪೇಸ್ ಇಂಡಸ್ಟ್ರೀಸ್ ಅಸೋಷಿಯೇಶನ್”(AIA), ಒಮಾಮ ಅವರಿಗೆ ಕಿವಿಮಾತು ಹೇಳಿದೆ. ಅಂದರೆ ಜಗತ್ತಿನ ಏಕೈಕ ಸೂಪರ್ ಪವರ್ ರಾಷ್ಟ್ರ, ‘ಇಸ್ರೊ’ ಸಾಧನೆ ಬಗ್ಗೆ ಹೆದರಿಕೊಂಡಿದೆ. ಆದರೆ ಅದೇ ದೇಶದ ಅಧ್ಯಕ್ಷ ಒಬಾಮ ಬುಧವಾರ 787 ಶತಕೋಟಿ ಡಾಲರ್ “stimulus plan” ಘೋಷಣೆ ಮಾಡಿದ ಕೂಡಲೇ ಭಾರತದ ಸಾಫ್ಟ್‌ವೇರ್ ಕ್ಷೇತ್ರ ಥರಥರ ನಡುಗಲು ಆರಂಭಿಸಿದೆ!

ಏಕೆ?

ಇಸ್ರೊ, ಡಿಆರ್‌ಡಿಓ, ಸಿ-ಡಾಟ್, ಡಾಕ್ ನಂತಹ ಸರಕಾರಿ ಸಂಸ್ಥೆಗಳೇ ಹೆದರದ ಅಮೆರಿಕಕ್ಕೆ ಬರೀ ಬುದ್ಧಿವಂತರೇ ತುಂಬಿರುವ ನಮ್ಮ ಸಾಫ್ಟ್‌ವೇರ್ ಕ್ಷೇತ್ರವೇಕೆ ಬೆಚ್ಚಿಬೀಳುತ್ತಿದೆ? ಹಾಲಿವುಡ್ ನಟ ಆರ್ನಾಲ್ಡ್ ಸ್ವಾಝನಗರ್ 2006ರಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಆಯ್ಕೆಯಾದ ಬೆನ್ನಲ್ಲೇ “ಔಟ್ ಸೋರ್ಸಿಂಗ್” (ವ್ಯಾಪಾರ ಹೊರಗುತ್ತಿಗೆ)ಅನ್ನು ನಿಷೇಧ ಮಾಡಲು ಮುಂದಾಗಿದ್ದರು. ಅಂದೇ ನಾವು ಎಚ್ಚೆತ್ತುಕೊಳ್ಳಬಹುದಿತ್ತು. ಆದರೆ “ಯಾರು ಬಂದರೂ ನಮ್ಮನ್ನು ಏನೂ ಮಾಡುವುದಕ್ಕಾಗುವುದಿಲ್ಲ, ಅಮೆರಿಕದ ಕಂಪನಿಗಳು ಪ್ರಾಫಿಟ್ ನೋಡುತ್ತವೆ, ಚೀಪ್ ಲೇಬರ್‌ಗಾಗಿ ಭಾರತಕ್ಕೆ ಬರಲೇಬೇಕು” ಎನ್ನುತ್ತಿದ್ದವರು ಈಗೇಕೆ ನಡುಗ ಲಾರಂಭಿಸಿದ್ದೀರಿ?

ಇದು ಪರಸ್ಪರ ಹಳಿದುಕೊಳ್ಳುವ ಕಾಲವಲ್ಲದಿದ್ದರೂ ನಾವು ಎಡ ವಿದ್ದೆಲ್ಲಿ ಎಂಬುದನ್ನು ಮುಕ್ತವಾಗಿ ಚರ್ಚಿಸುವುದಕ್ಕೇಕೆ ಅಂಜಿಕೆ?

ನೀವೇ ಯೋಚನೆ ಮಾಡಿ, ಐಬಿಎಂ ಅಂದರೆ ಹಾರ್ಡ್‌ವೇರ್, ಸಿಸ್ಕೋ ಅಂದ್ರೆ ನೆಟ್‌ವರ್ಕಿಂಗ್, ಮೈಕ್ರೊಸಾಫ್ಟ್ ಮತ್ತು ಗೂಗ್ಲ್ ಅಂದ್ರೆ ಸಾಫ್ಟ್‌ವೇರ್, ನೋಕಿಯಾ ಅಂದ್ರೆ ಮೊಬೈಲ್ ಟೆಕ್ನಾಲಜಿ. ಅದೇ ರೀತಿ ನಮ್ಮ ದೇಶೀಯ ಕಂಪನಿಗಳಾದ ಟಾಟಾ ಅಂದ್ರೆ ಸ್ಟೀಲ್ ಮತ್ತು ಅಟೋಮೊಬೈಲ್ಸ್, ಬಿರ್ಲಾ ಅಂದರೆ ಸಿಮೆಂಟ್, ಕಿರ್ಲೋಸ್ಕರ್ ಅಂದರೆ ಎಂಜಿನ್ಸ್. ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಸತ್ಯಂ ಅಂದರೆ? ನಮ್ಮ ಸಾಫ್ಟ್‌ವೇರ್ ಕ್ಷೇತ್ರದ ದೈತ್ಯ ಕಂಪನಿಗಳು ಇವೇ ನಾಲ್ಕಲ್ಲವೆ? ಇವುಗಳ ಹೆಸರು ಕೇಳಿದ ಕೂಡಲೇ ಯಾವ ‘ಪ್ರಾಡಕ್ಟ್’ ನೆನಪಾಗುತ್ತದೆ? ಅಮೆರಿಕ ವರ್ಷಕ್ಕೆ ೭೦ ಸಾವಿರ ಎಂಜಿನಿಯರಿಂಗ್ ಪದವೀಧರರನ್ನು ರೂಪಿಸುತ್ತಿದೆ, ಇಡೀ ಯುರೋಪ್ (26 ದೇಶಗಳು) ವರ್ಷಕ್ಕೆ ರೂಪಿಸುವ ಒಟ್ಟು ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ೧ ಲಕ್ಷ. ಇತ್ತ ನಮ್ಮ AICTE(All India Council for Technical Education) ಪ್ರಕಾರ ಭಾರತದಲ್ಲಿ  ತಾಂತ್ರಿಕ ಪದವಿ ಕೊಡುವ ೧೧೩ ವಿಶ್ವವಿದ್ಯಾಲಯಗಳಿವೆ, ೨೦೮೮  ಕಾಲೇಜುಗಳಿವೆ. ಒಂದು ವರ್ಷಕ್ಕೆ ಐದೂವರೆ ಲಕ್ಷ ಎಂಜಿನಿಯರಿಂಗ್ ಪದವಿಧರರು ಕಾಲೇಜಿನಿಂದ ತೇರ್ಗಡೆಯಾಗಿ ಬರುತ್ತಿದ್ದಾರೆ. ಅವರಲ್ಲಿ ಶೇ. ೩೫ರಷ್ಟು ಪದವೀಧರರು ಕಂಪ್ಯೂಟರ್ ಸೈನ್ಸ್ ಹಾಗೂ ಇನ್‌ಫರ್ಮೇಷನ್ ಸೈನ್ಸ್ ಬ್ರಾಂಚ್‌ನವರಾಗಿದ್ದಾರೆ. ಆದರೂ  ನಮ್ಮಲ್ಲೇಕೆ ಆಪಲ್, ಐಬಿಎಂ, ಮೈಕ್ರೊಸಾಫ್ಟ್, ಡೆಲ್‌ನಂತಹ ಒಂದು ಕಂಪನಿಯೂ ರೂಪುಗೊಳ್ಳಲಿಲ್ಲ? ಅಷ್ಟು ಜನರಲ್ಲಿ ಬಿಲ್ ಗೇಟ್ಸ್, ಮೈಕೆಲ್ ಡೆಲ್, ಸ್ಟೀವ್ ಜಾಬ್ಸ್, ಜೋಸೆಫ್ ರಾಡ್ನಿ ಕ್ಯಾನಿಯನ್ ಥರದವರು ಒಬ್ಬನೂ ಏಕೆ ಹೊರಹೊಮ್ಮಲಿಲ್ಲ? ಗೇಟ್ಸ್, ಡೆಲ್, ಜಾಬ್ಸ್ ಇವರೆಲ್ಲ ಕಾಲೇಜನ್ನೇ ಅರ್ಧಕ್ಕೆ ಬಿಟ್ಟವರೆಂಬುದು ಬೇರೆ ಮಾತು. ಆದರೆ ಅತ್ಯಂತ ಪ್ರತಿಭಾನ್ವಿತರು ನಮ್ಮಲ್ಲಿದ್ದರೂ ‘Innovation’ ಎಂಬ ‘ಕಲ್ಚರ್’ ಏಕೆ ಕಾಣುತ್ತಿಲ್ಲ?

ಇಷ್ಟಾಗಿಯೂ ಕೆಲವರು ನಮ್ಮ ಬೆಂಗಳೂರಿನಲ್ಲಿ ‘ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್’ ಇದೆ, ‘ನೋಕಿಯಾ’ದವರ ‘ಸಂಶೋಧನೆ ಮತ್ತು ಅಭಿವೃದ್ಧಿ’(R&D ) ಘಟಕ ಇದೆ, ಐಟಿಯವರ ಕೊಡುಗೆ ಕಣ್ಣಿಗೆ ಕಾಣದಿದ್ದರೂ ನೀವು ಬಳಸುವ ಪ್ರತಿಯೊಂದು ಎಲೆಕ್ಟ್ರಾನಿಕ್ ಉಪಕರಣಗಳ ‘ಒಳಗೆ’ ಇದೆ ಎಂದು ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳುತ್ತಿದ್ದಾರೆ! ಹೌದು, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಹಾಗೂ ನೋಕಿಯಾ ಮುಂತಾದ ಕೆಲವು ಕಂಪನಿಗಳು ಬೆಂಗಳೂರು ಮತ್ತು ಭಾರತದ ಇನ್ನಿತರ ಭಾಗಗಳಲ್ಲಿ ತಮ್ಮ R&D  ಘಟಕವನ್ನು ಸ್ಥಾಪನೆ ಮಾಡಿರಬಹುದು. ಅವುಗಳಲ್ಲಿ ರೂಪುಗೊಳ್ಳುತ್ತಿರುವ ತಂತ್ರಜಾನವನ್ನು ನಾವು ನಿತ್ಯವೂ ಬಳಕೆ ಮಾಡುತ್ತಿರುವ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಅಳವಡಿಸಿರಬಹುದು. ಹಾಗಂತ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ನೋಕಿಯಾ, ಮೈಂಡ್ ಟ್ರೀಗಳು ಭಾರತೀಯ ಕಂಪನಿಗಳಾದಾವೆ? ಅವುಗಳದ್ದು ಶುದ್ಧ ವ್ಯಾಪಾರ. ನೋಕಿಯಾ ಕಂಪನಿ ಬೆಂಗಳೂರಿನ R&D ಘಟಕದಲ್ಲಿ ಒಂದು ಸಂಶೋಧನೆ ಮಾಡಿ, ಹೊಸ ತಂತ್ರಜಾನವನ್ನು ರೂಪಿಸಿತೆಂದಿಟ್ಟುಕೊಳ್ಳಿ. ಆ ತಂತ್ರಜಾನವನ್ನು ಹೊಂದಿರುವ ಮೊಬೈಲನ್ನು ಭಾರತದ ಮಾರುಕಟ್ಟೆಗೇ ಬಿಡುತ್ತದೆ. ನೋಕಿಯಾ ಕಂಪನಿ ಭಾರತ ಮೊಬೈಲ್ ಕ್ಷೇತ್ರದಲ್ಲಿ ಶೇ.೫೦ಕ್ಕೂ ಹೆಚ್ಚು ಪಾಲು ಹೊಂದಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ನೋಕಿಯಾ ಮೊಬೈಲ್‌ಗಳು ಖರ್ಚಾಗುವುದೇ ಭಾರತದಲ್ಲಿ. ಅಂದರೆ ತಂತ್ರಜಾನವನ್ನು ಸಿದ್ಧಪಡಿಸಿದ್ದು ನಮ್ಮ ಎಂಜಿನಿಯರ್‌ಗಳೇ, ಮೊಬೈಲ್ ಖರೀದಿ ಮಾಡಿದವರೂ ಭಾರತೀಯ ಗ್ರಾಹಕರೇ. ನಮ್ಮ ಪ್ರತಿಭೆ, ನಮ್ಮದೇ ಗ್ರಾಹಕ. ಆದರೆ ಲಾಭ ಫಿನ್‌ಲ್ಯಾಂಡ್ ಕಂಪನಿಗೆ! ಒಂದು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ನೋಕಿಯಾ ಇಟ್ಟುಕೊಂಡು ಮಾತನಾಡಬೇಡಿ. ಒಟ್ಟಾರೆಯಾಗಿ ನೋಡಿ. ಜಗತ್ತು ನಮ್ಮನ್ನು ಹೇಗೆ ನೋಡುತ್ತಿದೆ? ಇಷ್ಟಕ್ಕೂ ಈ ಕಂಪನಿಗಳು  ಭಾರತಕ್ಕೇಕೆ ಬಂದಿವೆ?

Just for cost advantage!

ನಮ್ಮ ಮಾರುಕಟ್ಟೆಯಲ್ಲಿ ಬೇಡಿಕೆ ಇರುವವರೆಗೂ ನೋಕಿಯಾ ಭಾರತದಲ್ಲಿರುತ್ತದೆ,  ಲಾಭ ಕಡಿಮೆಯಾಗಲು ಆರಂಭಿಸಿದರೆ ಮೊದಲು ಒಂದಿಷ್ಟು ಜನರನ್ನು ಕೆಲಸದಿಂದ ಕಿತ್ತುಹಾಕುತ್ತಾರೆ, ತದನಂತರ ಬಂಡವಾಳವನ್ನೇ ಹಿಂತೆಗೆದುಕೊಂಡು, ಬಾಗಿಲು ಎಳೆದುಕೊಂಡು ಜಾಗ ಖಾಲಿ ಮಾಡುತ್ತಾರೆ. ಈಗ ಕಂಡು ಬರುತ್ತಿರುವುದು ಇಂತಹ ಪ್ರಕ್ರಿಯೆಗಳೇ ಅಲ್ಲವೆ? ಎಲ್ಲ ವಿದೇಶಿ ಕಂಪನಿಗಳು ಮಾಡುವುದೂ ಇದನ್ನೇ.

ಖಂಡಿತ ಯಾರೂ ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಸಾಮರ್ಥ್ಯವನ್ನು ಜರಿಯುತ್ತಿಲ್ಲ. ಅವರ ಪ್ರತಿಭೆ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯೂ ಸಾಫ್ಟ್‌ವೇರ್ ಎಂಜಿನಿಯರ್‍ಸ್ ಅಂದರೆ ಪ್ರತಿಭಾನ್ವಿತರು, ಅರಿತವರು ಎಂಬ ಭಾವನೆ ಹೊಂದಿದ್ದಾನೆ. ಆದರೆ  “ವರ್ಕ್ ಕಲ್ಚರ್” ಅಂದರೆ ಬೆಳಗ್ಗೆ ೮ ರಿಂದ ರಾತ್ರಿ ೧೦ ಗಂಟೆವರೆಗೆ ಕತ್ತ್ತೆ ಥರಾ ದುಡಿಯುವುದಕ್ಕೆ, ಸ್ಮಾರ್ಟ್ ಆಗಿ ಕೆಲಸ ಮಾಡುವುದಕ್ಕೆ ಸಂಬಂಧಪಟ್ಟಿದ್ದಲ್ಲ, Constant learning, Vision, Foresightednessಗೆ ಸಂಬಂಧಿಸಿದ್ದು. ಇಂತಹ ಕಲಿಕೆಯ ಸತತ ದಾಹ, ತುಡಿತ ಹಾಗೂ ದೂರದೃಷ್ಟಿಗಳು Innovationಗೆ ದಾರಿ ಮಾಡಿಕೊಡುತ್ತವೆ. ಒಂದು ವೇಳೆ, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ನೋಕಿಯಾ ಭಾರತದಲ್ಲಿ R&D ಘಟಕ ಸ್ಥಾಪಿಸಿ, ಇಲ್ಲಿನ ಪ್ರತಿಭೆಯನ್ನು ಉಪಯೋಗಿಸಿಕೊಂಡು ಹೊಸದನ್ನು ಸೃಷ್ಟಿಸಿ, ಕೊನೆಗೆ ಭಾರತೀಯ ಮಾರುಕಟ್ಟೆಯಲ್ಲೇ ತನ್ನ ವಸ್ತುವನ್ನು ಮಾರಬಹುದಾದರೆ, ಅದೇ ಕೆಲಸವನ್ನು ಭಾರತೀಯ ಕಂಪನಿಗಳೇ ಏಕೆ ಮಾಡಬಾರದು? ಇಸ್ರೊದವರೂ ಕೂಡ ಸ್ವಂತ ತಂತ್ರಜಾನವನ್ನು ಅಭಿವೃದ್ಧಿಪಡಿಸುವ ಬದಲು ರಷ್ಯಾ, ಫ್ರಾನ್ಸ್‌ನ ಉಪಗ್ರಹಗಳನ್ನೇ ಖರೀದಿ ಮಾಡಬಹು ದಿತ್ತು, ಫ್ರೆಂಚ್ ಗಯಾನಾ,  ಬೈಕನೂರ್‌ಗಳಿಂದಲೇ ಆಗಸಕ್ಕೆ ಉಡಾವಣೆ ಮಾಡಬಹುದಿತ್ತಲ್ಲವೆ? ರಿಮೋಟ್ ಸೆನ್ಸಿಂಗ್ (IRS), ಟ್ರಾನ್ಸ್‌ಪಾಂಡರ್‍ಸ್, ಉಪಗ್ರಹ ನಿಯಂತ್ರಣ ಸಾಫ್ಟ್‌ವೇರ್‌ನಂತಹ ಬುದ್ಧಿಗೇ ಸವಾಲೆಸೆಯುವಂತಹ ತಂತ್ರಜಾನಗಳನ್ನೇಕೆ ತಲೆಕೆಡಿಸಿ ಕೊಂಡು ಅಭಿವೃದ್ಧಿಪಡಿಸಬೇಕಿತ್ತು? ಅವುಗಳನ್ನು ಯಾಕಾಗಿ ದೇಶೀಯವಾಗಿ ರೂಪಿಸಿದರು?

ನಮ್ಮ ಸಾಫ್ಟ್‌ವೇರ್ ಕ್ಷೇತ್ರ ಎಡವಿದ್ದೇ ಇಲ್ಲಿ.

ದುರದೃಷ್ಟವಶಾತ್, ನಾವು ಹಾಡಿ ಹೊಗಳುವ ಮೂರ್ತಿ, ರಾಜು, ದೊರೈ, ಪ್ರೇಮ್‌ಜಿ ಮುಂತಾದ ಐಟಿ ದೊರೆಗಳು ಕೊನೆಯವರೆಗೂ ಕಾಂಟ್ರಾಕ್ಟರ್‌ಗಳಾಗಿಯೇ ಉಳಿದು ಬಿಟ್ಟರು. ಅಂದರೆ ವಿದೇಶಿ ಕಾಮಗಾರಿಗಳ ಗುತ್ತಿಗೆ ಪಡೆದುಕೊಂಡು ಬಂದು, ನಮ್ಮ ಪ್ರತಿಭಾವಂತ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಐಟಿ ಕೂಲಿಗಳನ್ನಾಗಿ ಮಾಡಿ, ‘ಕಮೀಷನ್’ ಹೊಡೆಯುವ ‘ಸ್ಟ್ರೀಟ್ ಸ್ಮಾರ್ಟ್‌ನೆಸ್’ನಲ್ಲೇ ಸ್ವರ್ಗಸುಖ ಕಾಣಲಾರಂಭಿಸಿದರು. ಹತ್ತಿಪ್ಪತ್ತು ವರ್ಷ ಟ್ಯಾಕ್ಸ್ ಹಾಲಿಡೇ ಪಡೆದುಕೊಂಡಿದ್ದಲ್ಲದೆ ಸಿಕ್ಕ ಅವಕಾಶಗಳಲ್ಲೆಲ್ಲ ಸರಕಾರವನ್ನೇ ತರಾಟೆ ತೆಗೆದುಕೊಳ್ಳಲು ಆರಂಭಿಸಿದರು. ಈ ದೇಶವನ್ನೇ ಬದಲಿಸುವ ‘ಐಡಿಯಾ’ ನಮ್ಮ ಬಳಿ ಇದೆ ಎಂಬಂತೆ ವರ್ತಿಸಲಾರಂಭಿಸಿದ ಇವರಿಗೆ ತಮ್ಮ ಕ್ಷೇತ್ರದ ಬಗ್ಗೆಯೇ ದೂರದೃಷ್ಟಿಗಳಿರಲಿಲ್ಲ. Self Righteousness  ಅನ್ನುವ ಹಾಗೆ ನಮಗೆ ಮಾತ್ರ ಎಲ್ಲ ಗೊತ್ತು, ನಾವು ಹೇಳಿದ್ದೇ ಸರಿ ಎಂಬ ದರ್ಪ ತೋರಿದ ಇವರಿಗೆ ಮುಂದೆ ಕಾದಿದ್ದ ಗಂಡಾಂತರವೇ ಕಾಣಲಿಲ್ಲ.  ಇನ್ಫೋಸಿಸ್, ವಿಪ್ರೊದಂತಹ ಕಂಪನಿಗಳು ‘Cream of Talent’ ಅನ್ನುತ್ತಾರಲ್ಲಾ ಅಂತಹ ಪ್ರತಿಭಾವಂತರನ್ನು ಪ್ರತಿ ಕಾಲೇಜುಗಳಿಂದಲೂ ಆಯ್ಕೆ ಮಾಡಿಕೊಂಡು ಬಂದು ಅಡುಗೆ ಭಟ್ಟ ಅಥವಾ ಗಾರೆ ಕೆಲಸದವನಂತೆ ಮಾಡಿಕೊಂಡಿದ್ದು ಎಷ್ಟು ಸರಿ? ಏಕೆ ನಮ್ಮ ಯಾವ ಖ್ಯಾತನಾಮ ಐಟಿ ಕಂಪನಿಗಳಲ್ಲೂ ಯೋಗ್ಯ  R&D ಘಟಕಗಳಿಲ್ಲ? ಏಕೆ ಪೂರ್ಣ ಕಾಲಿಕ Innovative ಯುನಿಟ್ ಹೊಂದಿಲ್ಲ? ಏಕೆಂದರೆ ನಮ್ಮ ಐಟಿ ದೊರೆಗಳಿಗೆ Globalised Knowledge ಅನ್ನು Localise ಮಾಡಬೇಕು ಎಂಬುದು ಗೊತ್ತಾಗಲೇ ಇಲ್ಲ. ‘ಪ್ರಾಜೆಕ್ಟ್’ ಮತ್ತು ‘ಪ್ರಾಡಕ್ಟ್’ ಮಧ್ಯೆ ಇರುವ ಮಹತ್ತರ ವ್ಯತ್ಯಾಸವೇ ಇವರಿಗೆ ಅರ್ಥವಾಗಲಿಲ್ಲ. ಅಂದರೆ ವಿದೇಶಿ ‘ಪ್ರಾಜೆಕ್ಟ್’ಗಳನ್ನು ಹಿಡಿಯಲು ಹವಣಿಸುವುದಕ್ಕಿಂತ ಜಾಗತಿಕ ಜಾನವನ್ನು ಸ್ಥಳೀಯಮಟ್ಟಕ್ಕೆ ತಂದು ಸಂಶೋಧನೆ ಮೂಲಕ ‘ಪ್ರಾಡಕ್ಟ್’ ರೂಪಿಸಿ, ಅವುಗಳನ್ನು ಹಿಡಿದುಕೊಂಡು ಕಂಪನಿಗಳ ಬಳಿಗೆ ಹೋಗಬೇಕು, ಮಾರುಕಟ್ಟೆಯಲ್ಲಿ ನಮ್ಮ ಪ್ರಾಡಕ್ಟ್‌ಗಳನ್ನೇ ಮಾರಾಟ ಮಾಡುವಂತಾಗಬೇಕು ಎಂಬುದನ್ನು ಅರಿತುಕೊಳ್ಳಲಿಲ್ಲ. ಇನ್ನೂ ಸರಳವಾಗಿ ಹೇಳುವುದಾದರೆ, ನಮ್ಮ ಸಾಫ್ಟ್‌ವೇರ್ ಕ್ಷೇತ್ರ ‘Servicing’ನಿಂದ ‘Research’ ಹಾಗೂ ‘Product development’ಗೆ ಗ್ರಾಜುಯೇಟ್ ಆಗಲೇ ಇಲ್ಲ. ಹಾಗಾಗಿ ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ‘Pursuit of Knowledge’ ಬಿಟ್ಟು ಕೂಲಿ ಕೆಲಸ ಮಾಡಬೇಕಾಗಿ ಬಂತು. ಸಾಫ್ಟ್‌ವೇರ್ ಕೋಡಿಂಗ್, ಡೆಸೈನಿಂಗ್‌ನಾಚೆ ಯೋಚಿಸಲು ಅವಕಾಶವೇ ದೊರೆಯಲಿಲ್ಲ. ಹಾಗಾಗಿ Core sector ನಮ್ಮಲ್ಲಿ ರೂಪುಗೊಳ್ಳಲಿಲ್ಲ.

ಖಂಡಿತ ನಮ್ಮ ಐಟಿ ದೊರೆಗಳು ಪ್ರಾರಂಭದಲ್ಲಿ ಕಾಮಗಾರಿ ಗುತ್ತಿಗೆ ಹಿಡಿಯುವ ಕೆಲಸವನ್ನು ಆರಂಭಿಸಿದ್ದು ತಪ್ಪೇನಾಗಿರಲಿಲ್ಲ. ಆದರೆ ಒಂದು ಹಂತದ ನಂತರ R&D ಬಗ್ಗೆ ಗಂಭೀರ ದೃಷ್ಟಿಹಾಯಿಸಬೇಕಿತ್ತು. ನಾವು ಯಾವತ್ತೂ ‘ಪ್ರಾಡಕ್ಟ್’ ಮೇಲೆ ಇನ್ವೆಸ್ಟ್ ಮಾಡುತ್ತಾ ಬಂದಿದ್ದೇವೆ, ಅಮೆರಿಕದವರು ‘ಪ್ರಾಡಕ್ಟ್’ಗೆ ಬದಲಾಗಿ ಆ ‘ಪ್ರಾಡಕ್ಟ್’ ಅನ್ನು ಸಂಶೋಧನೆ ಮಾಡುವವನ ಮೇಲೆ ಇನ್ವೆಸ್ಟ್ ಮಾಡುತ್ತಾರೆ. ಇದನ್ನು ನಮ್ಮವರೂ ಅರಿತುಕೊಂಡು Innovationಗೆ ಮುಂದಾಗಬೇಕಿತ್ತು. ಸಂಶೋಧನೆಯೆಂದರೆ ಕಂಪನಿಗಳು R&D ಘಟಕ ಸ್ಥಾಪನೆ ಮಾಡುವುದು, ಯಾವುದಾದರೂ ಐಐಎಂ ಅಥವಾ ಐಐಟಿಯಲ್ಲಿ ಒಂದು ‘ಸಂಶೋಧನಾ ಪೀಠ’ ಸ್ಥಾಪನೆ ಮಾಡುವುದಷ್ಟೇ ಅಲ್ಲ. ವಿವಿಧ ಕಾಲೇಜುಗಳ ಒಂದೊಂದು ಡಿಪಾರ್ಟ್‌ಮೆಂಟ್‌ಗಳನ್ನೇ ದತ್ತು ತೆಗೆದುಕೊಂಡು ವಿದ್ಯಾರ್ಥಿಗಳನ್ನು ಕಾಲೇಜು ಹಂತದಲ್ಲೇ ಸಂಶೋಧನೆಗೆ ಹಚ್ಚಬೇಕಾಗಿತ್ತು, Pure Science ಬಗ್ಗೆ ಆಸಕ್ತಿ ಹುಟ್ಟಿಸಬೇಕಿತ್ತು. ಇಂತಹ ಕೆಲಸವನ್ನು ಯಾವ ಕಂಪನಿ ಮಾಡಿತು? ಹಾಗಾಗಿ ನಮ್ಮ ಎಂಜಿನಿಯರ್‌ಗಳು ತಂತ್ರಜ್ಞರಾದರೇ ಹೊರತು, ಪರಿಣತಿಯನ್ನು ಸಾಧಿಸಲಿಲ್ಲ. ಎಲ್ಲವನ್ನೂ ಸರಕಾರದಿಂದಲೇ ನಿರೀಕ್ಷಿಸಲು ಸಾಧ್ಯವಿಲ್ಲ, Entrepreneurs ಆ ಕೆಲಸ ಮಾಡಬಹುದಿತ್ತು. ಅಂತಿಮವಾಗಿ ಎಂಜಿನಿಯರ್‌ಗಳ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುವವರು ಅವರೇ ಅಲ್ಲವೆ? ಆದರೆ “Seventy-five per cent of engineering graduates are unemployable” ಎಂದು ಹೇಳಿಕೆ ನೀಡುವ ನಾರಾಯಣಮೂರ್ತಿಯವರಿಗೆ ಅದರಲ್ಲಿ ತಮ್ಮ ಪಾಲೂ ಇದೆ ಎಂಬುದು ಅರ್ಥವಾಗುವುದಿಲ್ಲ!

ಭಾರತೀಯ ಕಂಪನಿಗಳ ಇಂತಹ ಮನಸ್ಥಿತಿಯಿಂದಾಗಿ ‘ನಾಮ್ ಕೇ ವಾಸ್ತೆ’ಗೆ ಒಂದಿಷ್ಟು ಸಂಶೋಧನೆಯ ಶಾಸ್ತ್ರ  ನಡೆ ಯುತ್ತಿದೆಯಷ್ಟೇ. ಅದನ್ನೇ ಕೆಲವರು ಇನ್ಫೋಸಿಸ್, ವಿಪ್ರೊಗಳ ಬಳಿ ನೂರಕ್ಕೂ ಹೆಚ್ಚು ಪೇಟೆಂಟ್‌ಗಳಿವೆ ಎಂದು ದೊಡ್ಡ ಸಾಧನೆಯೆಂಬಂತೆ ಹೇಳಿಕೊಳ್ಳುತ್ತಿದ್ದಾರೆ! ವಿಜಾನಿ ಎಂದರೆ ಐನ್‌ಸ್ಟೀನ್, ನ್ಯೂಟನ್ ನೆನಪಾಗುತ್ತಾರೆ, ಅಣೆಕಟ್ಟು ವಿದ್ಯುತ್ ಎಂದ ಕೂಡಲೇ ವಿಶ್ವೇಶ್ವರಯ್ಯ ಕಣ್ಣಮುಂದೆ ಬರುತ್ತಾರೆ. ನಾರಾಯಣಮೂರ್ತಿ, ಪ್ರೇಮ್‌ಜಿ ಎಂದ ಕೂಡಲೇ ಇನ್ಫೋಸಿಸ್, ವಿಪ್ರೊ ನೆನಪಾಗಬಹುದೇ ಹೊರತು, ಯಾವುದೇ ಪ್ರಾಡಕ್ಟ್ ಹೆಸರು ಮನಸ್ಸಿನಲ್ಲಿ ಸುಳಿದು ಬರುವುದಿಲ್ಲ. ಅಷ್ಟಕ್ಕೂ,  ಛೋಟಾ-ಮೋಟಾ ಪೇಟೆಂಟ್‌ಗಳನ್ನು ಎಷ್ಟೇ ಹೊಂದಿದ್ದರೂ ಒಂದು ಇಂಡಸ್ಟ್ರಿಯನ್ನೇ ಬದಲಾಯಿಸುವಂತಹ ಯಾವ ತಂತ್ರಜಾನವನ್ನು ಅಭಿವೃದ್ಧಿಪಡಿಸಿ ದ್ದಾರೆ? ಅದಿರಲಿ, ಅಮೆರಿಕದಲ್ಲಿ ‘ವೆಂಚರ್ ಕ್ಯಾಪಿಟಲ್’ ಎಂಬು ದಿದೆ. ಅಂದರೆ ನನ್ನ ಬಳಿ ಇಂಥದ್ದೊಂದು ಯೋಜನೆ ಇದೆ, ಅದರಿಂದ ಇಂತಹ ತಂತ್ರಜಾನವನ್ನು ಅಭಿವೃದ್ಧಿ ಮಾಡಬಹುದು ಎಂದು ನೀವು ವಿಶ್ವಾಸ ಮೂಡಿಸಿದರೆ, ಹೊಸ ಸಾಹಸ ಮಾಡುವವರಿಗೆ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಹಣತೊಡಗಿಸುವವರಿದ್ದಾರೆ. ಅವರನ್ನೇ ವೆಂಚರ್ ಕ್ಯಾಪಿಟಲಿಸ್ಟ್‌ಗಳು, ಅದನ್ನೇ ‘ವಿಸಿ ಫಂಡಿಂಗ್’ ಎನ್ನುವುದು. ಆದರೆ ನಮ್ಮ ದೇಶದಲ್ಲಿ ಇಷ್ಟೆಲ್ಲಾ ದುಡ್ಡು ಮಾಡಿದ ಸಾಫ್ಟ್‌ವೇರ್ ಕಂಪನಿಗಳಿದ್ದರೂ ಸಾಹಸಕ್ಕೆ ಮುಂದಾಗುವ, ಹೊಸ ಸಾಧನೆಯನ್ನು ಮಾಡುವ ತುಡಿತ ಹೊಂದಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಮೇಲೆ ವಿಶ್ವಾಸವಿಟ್ಟು ಬಂಡವಾಳ ತೊಡಗಿಸಲು ಏಕೆ ಮುಂದಾಗುವುದಿಲ್ಲ? Innovation ಬಗ್ಗೆ ನಮ್ಮ ಕಂಪನಿಗಳು ಏಕೆ ಆಸಕ್ತಿಯನ್ನೇ ತೋರುವುದಿಲ್ಲ? ಸಾಫ್ಟ್‌ವೇರ್ ಉದ್ದಿಮೆ ಪ್ರಾರಂಭವಾಗಿ 25 ವರ್ಷ, ಸಾಫ್ಟ್‌ವೇರ್ ಬೂಮ್ ಆರಂಭವಾಗಿ 15 ವರ್ಷಗಳು ಕಳೆದಿದ್ದರೂ ಸರ್ವಿಸಿಂಗ್‌ನಿಂದ ರೀಸರ್ಚ್‌ಗೇಕೆ ತೇರ್ಗಡೆಯಾಗಿಲ್ಲ? ಯಾರಿಗೆ ಇಂಗ್ಲಿಷ್ ಬರುವುದಿಲ್ಲ, ನಮ್ಮನ್ನು ಹಿಡಿಯಲು ಸಾಧ್ಯವೇ ಇಲ್ಲ ಎಂದು ನಾವು ಹೇಳುತ್ತಿದ್ದೆವೋ ಅಂತಹ ಚೀನಿಯರು ಲೆನೋವೋದಂತಹ ಕಂಪನಿಯನ್ನು ರೂಪಿಸಿದ್ದಾರೆ, ಐಬಿಎಂನ ಹಾರ್ಡ್‌ವೇರ್ ಯುನಿಟ್ಟನ್ನೇ ಖರೀದಿಸಿದ್ದಾರೆ. ನಾವೇಕೆ ಆ ಕೆಲಸ ಮಾಡಲಿಲ್ಲ?

ಇಂತಹ ಮನಸ್ಥಿತಿಯನ್ನು ಇಟ್ಟುಕೊಂಡು ಬಂದಿದ್ದರಿಂದಾಗಿಯೇ ಒಬಾಮ ಅವರ “stimulus plan’ ಬಗ್ಗೆ ನಮ್ಮ ಸಾಫ್ಟ್ ವೇರ್ ಕ್ಷೇತ್ರ ಬೆಚ್ಚಿಬೀಳುವಂತಾಗಿದೆ. ಹಾಗಂತ “ದುಡ್ಡು ಬೇಕೆಂದರೆ ವ್ಯಾಪಾರ ಹೊರಗುತ್ತಿಗೆ ನಿಲ್ಲಿಸಿ, ಎಚ್೧ಬಿ ವೀಸಾ ಹೊಂದಿರುವವರನ್ನು ಮನೆಗೆ ಕಳುಹಿಸಿ” ಎಂಬ ಪೂರ್ವ ಷರತ್ತು ಹಾಕಿರುವ ಒಬಾಮರನ್ನು ದೂರಿ ಪ್ರಯೋಜನವಿಲ್ಲ. ಅಷ್ಟಕ್ಕೂ ಕರ್ನಾಟಕದಲ್ಲಿ ರೈಲ್ವೆ ನೇಮಕಕ್ಕೆ ಬರುವ ಬಿಹಾರಿಗಳನ್ನು ನಾವು ಹೇಗೆ ಬೆದರಿಸುತ್ತೇವೆಯೋ, ಮರಾಠಿಗರು ಉತ್ತರ ಭಾರತದವರನ್ನು ಹೇಗೆ ಹಿಡಿದು ಚಚ್ಚುತ್ತಾರೋ ಅಮೆರಿಕನ್ನರೂ ಕೂಡ ಭಾರತೀಯರು ತಮ್ಮ ಕೆಲಸಕ್ಕೆ ಕುತ್ತು ತಂದಿದ್ದಾರೆ ಎಂಬ ಭಾವನೆ ಹೊಂದಿದ್ದಾರೆ. ನಮ್ಮ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಮುಂದಾಲೋಚನೆ ಇದ್ದಿದ್ದರೆ ಎಂದೋ ಸರ್ವೀಸಿಂಗ್‌ನಿಂದ ಪ್ರಾಡಕ್ಟ್ ಹಾಗೂ ರೀಸರ್ಚ್‌ಗೆ ಕಾಲಿಡಲು ಪ್ರಯತ್ನಿಸುತ್ತಿತ್ತು. ಆಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ, ಒಬಾಮಗೆ ಹೆದರುವ ಅಗತ್ಯವೂ ಎದುರಾಗುತ್ತಿರಲಿಲ್ಲ. ಇವತ್ತು ಬ್ಯಾಂಕಿಂಗ್, ಫೈನಾನ್ಸ್, ಮೆಕ್ಯಾನಿಕಲ್, ಆಟೊಮೊಬೈಲ್, ಮೊಬೈಲ್ ಮುಂತಾದ ಕ್ಷೇತ್ರಗಳೂ ಕುಸಿಯಲಾರಂಭಿಸಿದ್ದರೂ ಇವೆಲ್ಲವೂ ಐಟಿ ಫಲಾನುಭವಿ ಮತ್ತು ಐಟಿ Driven Sectorಗಳೇ.

ಇನ್ನೂ ಕಾಲ ಮಿಂಚಿಲ್ಲ.

Never confuse the size of  your paycheck with the size of your talent. You are much more than your pay check ಎಂಬ ಮರ್ಲಾನ್ ಬ್ರ್ಯಾಂಡೋ ಅವರ ಡೈಲಾಗನ್ನು ನೆನಪಿಸಿಕೊಳ್ಳಿ. ಇಲ್ಲಿಯವರೇ ಅಮೆರಿಕಕ್ಕೆ ಹೋಗಿ ಜಗತ್ತನ್ನು ನಿಬ್ಬೆರಗಾಗಿಸಬಹುದಾದರೆ ಇಲ್ಲೇ ಇರುವವರು ಏಕೆ ಅಂತಹ ಸಾಧನೆ ಮಾಡುವುದಕ್ಕಾಗುವುದಿಲ್ಲ? ಈ ಹಿನ್ನೆಲೆಯಲ್ಲಿ ನಮ್ಮ ಐಟಿ ದೊರೆಗಳು ಹಾಗೂ ಐಟಿ ಕ್ಷೇತ್ರದಲ್ಲಿರುವವರು ದುಡ್ಡಿನಾಚೆಗಿನ Innovation  ಎಂಬ ಪ್ರಪಂಚವನ್ನು ಕಾಣುವಂತಹ ದೂರದೃಷ್ಟಿಯನ್ನು ಬೆಳೆಸಿಕೊಳ್ಳಬೇಕಷ್ಟೆ. ಅದರಿಂದ ಐಟಿಗೇ ಒಳಿತು. ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳ Top-notch talent ಮೇಲೆ ನಮಗೆ ಖಂಡಿತ ವಿಶ್ವಾಸವಿದೆ. ನಮ್ಮ ದೇಶಕ್ಕೆ ಒಳ್ಳೆಯ ಹೆಸರು ತಂದುಕೊಟ್ಟ ಐಟಿ ಬಗ್ಗೆ ನಮ್ಮೆಲ್ಲರಿಗೂ ಅಭಿಮಾನವಿದೆ. ಅನುಮಾನ ಬೇಡ.

66 Responses to “ಐದೂವರೆ ಲಕ್ಷ ಎಂಜಿನಿಯರ್‌ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ?”

  1. Neha says:

    Thanks for great article!!

  2. Kiran Kumar says:

    Hi Pratap,

    Really true article. I too believed this thing and i used to say the same things to some of my friends.

  3. Kiran Kumar says:

    Hi Pratap,
    Good Article. I completely agree with you, in fact i too was discussing the same things with some of my friends.

  4. Niranjan says:

    Lekhana sakath aagide. Idakke sambanda patta haage Hi Bangalorenalli ondu article bandide. Adaralli Pratapna hangisidaare. Vayaktika dwesha iddare neravaagi thappu maadiddare sariyaada lekhana prakatisali. Hindomme Sudha Murthy avarige patra baredu ugisikondiddu sampaadakarige marethu hogide. Ee lekhanada ore-kore enide annodanna thilisali. Pratap, Nimma-Niluvina abhimaniyaagi ondu request. Nimma-article bagge bareda aa lekhanada vishaya nimma websitenalli haaki. Patrikodyamadalloo paalegaarike shuruvaagideya? antha anumaana aagtide.

  5. harsha says:

    Agreed, completely true. Its well written with good R & D from ur part 🙂
    But this article does not addresses any of the dubious statements that were made in ur previous article!!

  6. ಕನ್ನಡದ ಕಂದ says:

    ಪ್ರತಾಪ್, ನೀವು ಹೇಳಿದಂತೆ CDAC ಬಂದದ್ದೆ ಆಗಲಿ ISRO cryogenic engine ಅಭಿವೃದ್ದಿ ಪಡಿಸಿದ್ದೆ ಆಗಲಿ, ಅದು ಅಮೆರಿಕ, ರಷ್ಯ ಗಳು ಅವರವರ ಪ್ರಾಡಕ್ಟ್ ಕೊಡದೆ ಇದ್ದಾಗ, ಕೊಡುತ್ತಿದ್ದಾಗ ಅಲ್ಲ. ನೋಡೋಣ ಈ ಕಷ್ಟದ ಕಾಲದಲ್ಲಿ software ಕ್ಷೇತ್ರದಲ್ಲಿ ಏನು ಅಭಿವೃದ್ದಿ ಆಗುತ್ತದೋ ಎಂದು.

  7. Basanna says:

    no comments Pratap….

    It’s an eternal truth…. 🙂

  8. Vijay says:

    I trully support this article Prathap. Superb…………….

  9. shashanka says:

    Prathap….. Prathap……..
    Hats off to the article again………..
    Made me feel proud about ISRO again…….
    Thanks ;’)

  10. Basu says:

    Hi Pratap,
    Good Article. I completely agree with you, but u didnt consider the fact in it.
    Specially in IT industry nobody would be ready to pay you if you want do reserch on something, they just want immidiate profit soon after they recruit employes specially in Indian companies. Like as you said in your article, that name(Contractors)holds better for them.
    Thanks alot for providing us some usefull information about IT future preview in the last two articles.

  11. Mallikarjun M H says:

    Thanks for the great idea hidden in your article.
    I hope everyone will get different new idea after reading this.
    I hope,atleast a engineer will achive what Pratap expecting after reading this.

  12. ravi says:

    Very good article!!

  13. vinutha says:

    ನಿಮ್ಮ ಹಿಂದಿನ ಲೇಖನ ಸೃಷ್ಟಿಸಿದ್ದ ಗೊಂದಲಗಳಿಗೆ ಈಗಿನ ಲೇಖನ ಉತ್ತರವೆಂಬಂತೆ ಭಾವಿಸಲಾಗಿದೆ. ಆದರೆ, ಆರ್ಥಿಕತೆಯ ಹಿನ್ನೆಲೆಯಲ್ಲಿ ಬಂದ ನಿಮ್ಮ ಕುರುಡು ಕಾಂಚಾಣ…. ಕ್ಕೂ, ತಾಂತ್ರಿಕತೆಯ ಆಧಾರದ ಮೇಲೆ ಇಂದು ಮುಂದಿಟ್ಟಿರುವ ಪ್ರಶ್ನೆಗೂ, ವೃತ್ತಿಪರತೆ, ಹಣದ ಮೌಲ್ಯದ ಅರಿವಿನ ಕುರಿತಾದ ಮೊದಲ ಲೇಖನಕ್ಕೂ, ಪರಿಶ್ರಮ, ಪ್ರತಿಭೆಯನ್ನಾಧರಿಸಿದ ಎರಡನೆಯ ಲೇಖನಕ್ಕೂ, ಸಂಬಳಕ್ಕಾಗಿ ದುಡಿಯುವ ಐಟಿ ಕಾರ್ಮಿಕರ ಕುರಿತಾದ ಮೊದಲ ಭಾಗಕ್ಕೂ, ಬಂಡವಾಳ ಹೂಡುವ ಐಟಿ ದೊರೆಗಳ ಕುರಿತಾದ ಎರಡನೆಯ ಭಾಗಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕೂ ಇದಕ್ಕೂ ಐಟಿ ಕ್ಷೇತ್ರ ಎಂಬ ಪದವಷ್ಟೇ ಕೊಂಡಿ.

    ಹೊಸ ಚಿಂತನೆಯನ್ನು ಮುಂದಿಟ್ಟಿರುವ, ಐಟಿ ಕ್ಷೇತ್ರದ ಸಮಸ್ಯೆಯನ್ನು ಗುರುತಿಸುವ ಪ್ರಯತ್ನಕ್ಕಾಗಿ ನಿಮಗೆ ಅಭಿನಂದನೆಗಳು. ಕೇವಲ ನಮ್ಮ Open House, All Hands Meet ಗಳಲ್ಲಿ ಕಳೆದು ಹೋಗುತ್ತಿದ್ದ ಪ್ರಶ್ನೆ ಇಂದು ಸಾರ್ವಜನಿಕ ವೇದಿಕೆಯಲ್ಲಿದೆ. ನೀವೇ ಹೇಳುವಂತೆ, ಪರಸ್ಪರ ಹಳಿದುಕೊಳ್ಳದೆ ಮುಕ್ತ ಚರ್ಚೆಯಾಗಲಿ. ನಮ್ಮ ಆಶಯವೂ ಅದೇ.

    ISRO, DRDO ಮೊದಲಾದವುಗಳ ಇತಿಹಾಸ ಕೆದಕಿದಾಗ, ಅಬ್ದುಲ್ ಕಲಮರ ’Wings of Fire’ ಓದಿದಾಗ, ಎಂತಹವರ ಜಂಘಾಬಲವೂ ಉಡುಗಿಬಿಡಬೇಕು. ಉಳಿಪೆಟ್ಟು ತಿಂದೂ, ತಿಂದೂ ರೂಪುಗೊಂಡ ಶಿಲ್ಪಗಳಿವು. ದೇಶದ ವೈಜ್ಞಾನಿಕ ಪ್ರಗತಿಯ ರೂವಾರಿಗಳು. ಸೋಲಿನಲ್ಲೂ ಅದರ Top Management ಅವರ ಮೇಲಿಟ್ಟ ನಂಬಿಕೆ, ವಿಶ್ವಾಸಗಳು ಉದಾತ್ತವಾದವುಗಳು. (ಇಂತಹುದೊಂದು ನಂಬಿಕೆಯನ್ನು ನಮ್ಮ ಐಟಿ ಕ್ಷೇತ್ರದ ಮೇಲೂ ಇಡುವಂತಾದಲ್ಲಿ??!!) ಸ್ವಾತಂತ್ರ್ಯಾಪೂರ್ವದಲ್ಲೇ, ಭಾರತೀಯರ ಪ್ರತಿಭೆ ಗುರುತಿಸಿ, ಅವರಿಗೆ ಒತ್ತಾಸೆಯಾಗಿರಲೆಂದು, ಶ್ರೀಯುತ Jamsetji Nusserwanji Tata ರವರು ಕಂಡ ಕನಸು, ‘Research Institute’ ಅಥವಾ ‘University of Research’ ಎಂದು ಪ್ರಾರಂಭವಾಯಿತು. ಅದೇ ಇಂದಿನ ನಮ್ಮೆಲ್ಲರ ಹೆಮ್ಮೆಯ ಭಾರತೀಯ ವಿಜ್ಞಾನ ಸಂಸ್ಥೆ. (೧೯೦೯ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅದರ ಬೆಳವಣಿಗೆಗೆ ಶ್ರಮಿಸಿದ ಎಲ್ಲರಿಗೂ, ಇಂದು ಅದರ ಫಲಾನುಭವಿಗಳಾದ ನಮ್ಮೆಲ್ಲರಿಂದ ಕೃತಜ್ಞತೆಗಳು, ಈ ಮೂಲಕ). ಅಂತಹುದೊಂದು vision ಇಟ್ಟುಕೊಂಡಿದ್ದ ಮತ್ತೊಬ್ಬ ಟಾಟಾ ಮತ್ತೆ ಬರಲಿಲ್ಲವೆಂಬುದೂ ಅಷ್ಟೇ ಖೇದಕರ. ಈ ಎಲ್ಲ ಸಂಸ್ಥೆಗಳಿಗೂ ಅವುಗಳದೇ ಆದ limitation ಗಳಿವೆ. ದೇಶದ ತಾಂತ್ರಿಕತೆಯ ಕೇಂದ್ರವಾದ ಇವುಗಳೊಳಗೆ ಎಲ್ಲರೂ ಹೋಗುವುದು ಸಾಧ್ಯವಿಲ್ಲ. ಅದು ಸೂಕ್ತವೂ ಅಲ್ಲ. ಅವು ತೋರಿಸಿದ ದಾರಿಯಲ್ಲಿ ನಡೆಯುವುದಷ್ಟೇ ಸೂಕ್ತ.

    ಸ್ವಾತಂತ್ರ್ಯಾಪೂರ್ವದಲ್ಲಿ, ಟಾಟಾ, ಬಿರ್ಲಾ, ವಿಶ್ವೇಶ್ವರಯ್ಯನಂತಹವರು ದೇಶದ ಆರ್ಥಿಕ ಪ್ರಗತಿಗಾಗಿ ಕೈಗಾರಿಕೀಕರಣಗೊಳಿಸಿದರು. ಸ್ವಾತಂತ್ರ್ಯಾನಂತರ ಕೆಲವು ಸರ್ಕಾರಿ ಸ್ವಾಮ್ಯಗಳಾದವು. ಕೆಲವು ಹಾಗೆಯೇ ವ್ಯಕ್ತಿಯ/ಕುಟುಂಬದ ಆಡಳಿತದಲ್ಲಿಯೇ ನಡೆದುಕೊಂಡು ಬಂದವು. ಅವುಗಳ ಮಾರುಕಟ್ಟೆ ಭಾರತವೇ ಆಗಿದ್ದಿತು. ನಮ್ಮಲ್ಲಿಯೂ ವಿದೇಶೀ ಉತ್ಪನ್ನಗಳ ಹಾವಳಿ ಕಡಿಮೆಯಿದ್ದಿತು. ಹಾಗಾಗಿ ಇವು ಎಲ್ಲರಿಗೂ ಚಿರಪರಿತ. ನಾವು ಇಂದು ನೋಡುತ್ತಿರುವ ಆರ್ಥಿಕ ಚಿತ್ರಣಕ್ಕೂ, ಕೇವಲ ಸ್ವಾತಂತ್ರ್ಯಾನಂತರದ ಚಿತ್ರಣಕ್ಕೂ ವ್ಯತ್ಯಾಸವಿದೆ. ಈ ವಿಂಗಡನೆಯೇ ಸೂಕ್ತವಲ್ಲವೇನೋ. ಬಹುಶ:, ಭಾರತವನ್ನು ಜಾಗತಿಕ ಮಾರುಕಟ್ಟೆಗೆ ತೆರೆದಿಟ್ಟ ನಂತರದ ಹಾಗೂ ಅದರ ಮೊದಲಿನ ಕಾಲವಂದು ವಿಂಗಡಿಸಬಹುದೇನೊ. ೯೦ ರ ದಶಕದಲ್ಲಿ ನಾವು ಜಾಗತೀಕರಣವನ್ನು ಬರಮಾಡಿಕೊಂಡೆವು. ಆಗ, ವಿದೇಶಗಳಲ್ಲಿ ಆಗಲೇ ಸಾಕಷ್ಟು establish ಆಗಿದ್ದ, ಲಾಭದಲ್ಲಿ ನಡೆಯುತ್ತಿದ್ದ ಕಂಪನಿಗಳು, ಪ್ರಾಡಕ್ಟ್ ಗಳು ಭಾರತಕ್ಕೆ ಲಗ್ಗೆಯಿಟ್ಟವು. ಅವರ ಲಾಭಾಂಶದ ಸ್ವಲ್ಪ ಮಾತ್ರ ಹಣಹೂಡಿಕೆ ಸಾಕಾಗಿತ್ತು ಅವರು ಭಾರತದಲ್ಲಿ ಹೆಜ್ಜೆಯಿಡಲು ಅಥವಾ ತಳವೂರಲು (??). ಇವುಗಳಿಂದಾಗಿ ಬಹುಪಾಲು ನಮ್ಮ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಪೆಟ್ಟು ತಿಂದವು, ಮುಚ್ಚಿಯೇ ಹೋದವು. ಟೆಲೆಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಸಂಪರ್ಕ ಕ್ರಾಂತಿ ಸಾಧಿಸಿದ್ದ, ಅಂದಿನ C-DoT, ಇಂದಿನ BSNL ನ ಏಕಾಧಿಪತ್ಯ ನಶಿಸಿಹೋಗಿದೆ. ಇಂದಿಗೂ ಮುಕ್ತ ಮಾರುಕಟ್ಟೆಯಲ್ಲಿ ತನ್ನನ್ನು ತಾನು ನಿರೂಪಿಸಲು ಹೆಣಗುತ್ತಿದೆ. ಸ್ವಲ್ಪ ಮಟ್ಟಿಗಾದರೂ ಸ್ಪರ್ಧೆ ನೀಡಿದ ವಿಡಿಯೋಕಾನ್, ಬಿಪಿಲ್ ನಂತಹ ಸಂಸ್ಥೆಗಳು ಏನಾದವು?

    ಜಾಗತಿಕ ಮಾರುಕಟ್ಟೆಗೆ ಸರಿಯಾದ ತಯಾರಿಯಿಲ್ಲದೆ ನಾವು ಹೆಜ್ಜೆಯಿಟ್ಟೆವೇ? ತರಬೇತಿಗೊಳಿಸದೇ ನಮ್ಮನ್ನು ತಳ್ಳಲಾಯಿತೇ? ಗೊತ್ತಿಲ್ಲ. ಇಂತಹುದೊಂದು ಸಂದರ್ಭದಲ್ಲಿ, ಸಂಸ್ಥೆಯೊಂದನ್ನು ಕಟ್ಟಿ ಅದು ಲಾಭಗಳಿಸುವಂತೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ (ಸಿಕ್ಕ ಅವಕಾಶವನ್ನು ಬಳಸಿಕೊಂಡ ಪ್ರೇಮ್ ಜಿ, ನಾರಾಯಣ ಮೂರ್ತಿಯವರನ್ನು, ಗೇಟ್ಸ್, ಜಾಬ್ಸ್ ರಿಗೆ ಹೋಲಿಸಲು ಸಾಧ್ಯವಿಲ್ಲವೇ?). ಹಾಗಾಗಿ ’Service Orientation’ ಕೇವಲ ಅಗತ್ಯವಾಗಿರಲಿಲ್ಲ, ಅನಿವಾರ್ಯವಾಗಿತ್ತು. ನಂತರವಾದರೂ ’Product Orientation’ ಆಗಬಹುದಿತ್ತಲ್ಲ. ಇದಕ್ಕೆ ನನಗೆ ದೊರೆತ ಉತ್ತರ –
    “ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳಿಗೆ ನಾವು ಸರ್ವೀಸ್ ಕೊಡುತ್ತಿದ್ದೇವೆ. ಹೊಸ ಪ್ರಾಡಕ್ಟ್ ಒಂದನ್ನು ತಂದರೆ ಅವರೊಂದಿಗೇ ಸ್ಪರ್ಧೆಗಿಳಿಯಬೇಕು. ಆಗ Service business ಕೂಡ ಹೊಡೆಸಿಕೊಳ್ಳುತ್ತದೆ. ಅದನ್ನು ಬಿಟ್ಟು ಲಾಭಾಂಶ ಇಲ್ಲ. ಲಾಭಾಂಶವಿಲ್ಲದೇ ಹೊಸ ಪ್ರಾಡಕ್ಟ್ ಗೆ ಕೈ ಹಾಕುವಷ್ಟು ಬಂಡವಾಳವಿಲ್ಲ. ಅದು ಜಾಣತನವೂ ಅಲ್ಲ. ಯಾಕೆಂದರೆ ನಮ್ಮ ಪ್ರಾಡಕ್ಟ್ ಗಳ ಮಾರುಕಟ್ಟೆ ಭಾರತಕ್ಕೆ ಸೀಮಿತವಾಗಬಹುದು. ಜಾಗತಿಕ ಮಟ್ಟದಲ್ಲಿ client brand establish ಆಗಿದೆ.”

    ಹಾಗಾದರೆ ನಮ್ಮ Innovation ಏನೂ ಇಲ್ಲವೇ? ಹೊಸ ಹೊಸ ತಂತ್ರಾಂಶಗಳ ಕುರಿತಾದ ಈ Innovation Drive ಗೆ ಅರ್ಥವೇನೆಂದು ಕೇಳಿದಾಗ ಸಿಕ್ಕ ಉತ್ತರ –
    “ಇಂದು ನೊಕಿಯಾದ ಹೊಸ ಮೊಬೈಲ್ ಗೆ, HP ಪ್ರಿಂಟರ್ ಗೆ ನಾವಿನ್ನೊಂದು ಹೊಸ ಮೊಬೈಲ್, ಪ್ರಿಂಟರ್ ತರುವುದೇ Innovation ಅಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಬಹಳ ಪ್ರಾಡಕ್ಟ್ ಗಳಿದ್ದು, ಗ್ರಾಹಕ ಆಗಲೇ confuse ಆಗಿದ್ದಾನೆ. ಹೀಗಿರುವಾಗ ಹೊಸ ಪ್ರಾಡಕ್ಟ್ ಎಷ್ಟು sustain ಆಗುವುದೆಂದು ಹೇಳಬರುವುದಿಲ್ಲ. ಹಾಗಾಗಿ ಸ್ಪರ್ಧಿಸುವ ಬದಲು, ಸಹಯೋಗದೊಂದಿಗೆ ಹೊಸ ತಂತ್ರಜ್ಞಾನಗಳನ್ನು ತರುವುದು Innovation. ಆದ್ದರಿಂದ ಇಂದು service orientation ಎನ್ನುವುದು ಕೇವಲ cheap labour ಗೆ ಸೀಮಿತವಾಗಿಲ್ಲ. ಅದನ್ನೂ ಮೀರಿ ಬೆಳೆದಿದೆ.”

    ಗ್ರಾಹಕನೇ ಪ್ರಭುವಾಗಿರುವ, ಮುಕ್ತವಾಗಿರುವ ಮಾರುಕಟ್ಟೆಯಲ್ಲಿ, ಕೇವಲ ಪ್ರಾಡಕ್ಟ್ ಗಳನ್ನೇ ನಂಬಿಕೊಂಡಿದ್ದರೆ ಇಷ್ಟೊಂದು ಉದ್ಯೋಗಗಳ ಸೃಷ್ಟಿ ಸಾಧ್ಯವಿತ್ತೇ? ಸರಕಾರಿ ಸ್ವಾಮ್ಯದ ಸಂಸ್ಥೆಗಳು/ ಸಂಶೋಧನೆ ಆಧಾರವಾಗಿರಿಸಿಕೊಂಡ ಸಂಸ್ಥೆಗಳು ಸೃಷ್ಟಿಸಿರುವ ಉದ್ಯೋಗಗಳೆಷ್ಟು? ಪ್ರಾಂತೀಯ, ಜಾತಿಯ ಆಧಾರದ ಮೇಲೆ ನಿಂತಿರುವದರಿಂದ ಪ್ರತಿಭೆಗೆ ಮನ್ನಣೆ ದೊರಕದೆ ಹತಾಶವಾದವರೆಷ್ಟು? ಈ ನಿರ್ಬಂಧಗಳನ್ನು ಮೀರಿ ನಿಂತ ಐಟಿ ಕ್ಷೇತ್ರ ಜನರಿಗೆ ಹತ್ತಿರವಾದದ್ದು ಅಸಹಜವೇ? ದೂರದೃಷ್ಟಿಯಿಲ್ಲದೆ ಬೆಳೆದಿದ್ದರೆ, ಇಂದು ಕೇವಲ ಭಾರತೀಯ ಐಟಿ ಕ್ಷೇತ್ರ ಬವಣೆ ಅನುಭವಿಸಬೇಕಿತ್ತಲ್ಲವೇ? Product Oriented ಜಪಾನ್, ಚೀನಾ ದ ಆರ್ಥಿಕ ಸ್ಥಿತಿಯೂ ಏಕೆ ನಲುಗುತ್ತಿದೆ? ರಫ್ತು ಆಧಾರಿತ ಕ್ಷೇತ್ರಗಳೆಲ್ಲವೂ ಇಂದು ಬಳಲುತ್ತಿರುವುದು ಸತ್ಯವಲ್ಲವೇ? ಇದರಲ್ಲಿ ಜಾಗತೀಕರಣದ ಕೊಡುಗೆಯೆಷ್ಟು? ಇಂದು ತಪ್ಪೆಲ್ಲವೂ ಐಟಿ ಕ್ಷೇತ್ರದ ದಿಗ್ಗಜರದಾದರೆ, ಅವರಿಗೆ ದೂರದರ್ಶಿತ್ವ ಇಲ್ಲವೆಂದಾಗಿದ್ದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನೇಕೆ ಅವರಿಗೆ ನೀಡಬೇಕಿತ್ತು? ಎಲ್ಲಿ ಎಡವಬಹುದೆಂದರಿತವರು ಅವರಿಗೆ ಎಚ್ಚರಿಸುವ ಪ್ರಯತ್ನವನ್ನೇಕೆ ಮಾಡಲಿಲ್ಲ? ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ದೇವೆಯೇ? ತಪ್ಪು ಜರುಗಿದ್ದೇ ಆಗಿದಲ್ಲಿ, ಸರಿಪಡಿಸುವ ಬಗೆಗಳೆಂತು? ಸಾಮಾನ್ಯ ಕಾರ್ಮಿಕರಿಂದಲೂ ಸಾಧ್ಯವೇ ಅಥವಾ ಬಂಡವಾಳ ಹೂಡಲು ಸಾಧ್ಯವಿರುವವರಿಂದ ಮಾತ್ರ ಸಾಧ್ಯವೇ?

    (ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ದೊರೆತೀತೆಂದು ಭಾವಿಸುತ್ತೇನೆ)

  14. MURALI says:

    Hello Pratap,
    I agree with your opinion on Brain Drain which is affecting India.But the true base is the the entire corrupt political & Administrative system we rest upon.The money wasted in wrong hands would be utilised for good renumeration in the research sector of ISRO & utilize the talents we have ……………

  15. Chethana says:

    “No Comments” 🙂

  16. Raveesh Kote says:

    Nice one Pratap,
    I think the issue u have raised is directly related to the mentality of indians. If the things are going well for us then we will be very much satisfied with that and dont dare to think beyond that. we try to avert risk as much as possible for the fear of failure.This applies to IT gaints also. when they were doing services work initially, they were getting nice profits so management was happy, share holders were happy and employees were also happy. So when the things were going on so smoothly tey didnt dare to think beyond that and all were satisfied. they didnt realise the importace of product development….. lets hope at least now they will realise

  17. vijay says:

    Hi Prathap

    I posted my comments before 3 hrs. buts its not not displayed………?

  18. Harsha says:

    Hi Friends,
    Good Article….

    Indias must re-structure india to be Great India and teach all big brothers that Indian is their Father.

    Mr.Pratap could u publish a article in Vijata karnataka main page as to what the true indians hate about pseudo secularists parties and also what people expext from Modi like people to do in near future if he becomes Indian PM.

    Like…
    We must quit using all american useless products and use Indian company made products.
    use Indian textile garments, Indian food items intead of going mad behind US Brands which are useless and stop drinking products of Coca Cola and Pepsi, Mc Donalds, KFC and Subway.

    I would like to a give an example.
    I live in Germany.
    Here i see no American, UK or Fench company products in so much hype as it is in india.
    All German brands are german company made.
    any one u name it.
    its all german in germany or french in France.
    So we see that german economy is still strong compared to indian as i see it here there is no much impact on its economy due to current financial downturn.
    Jai Hindustan.

  19. ರವೀ೦ದ್ರ ಕಶ್ಯಪ says:

    ನಮಸ್ಕಾರ ಪ್ರತಾಪ್ ರವೆರೆ

    ಅ೦ಕಣ ಚೆನ್ನಾಗಿದೆ. ನಿಮ್ಮ ಹಲವಾರು ಲೇಖನದಲ್ಲಿ ನಿಮ್ಮ ಒಬ್ಬ ಉತ್ತಮ ಅ೦ಕಣಕಾರರಿಗಿರಬಾರದ ಉದ್ರೇಕ ಎದ್ದು ಕಾನುತಿತ್ತು. ಆದರೆ ಈ ಲೇಖನ್ನ ನೀವು ಸಮಾನಚಿತ್ತರಾಗಿ ಬರೆದಿದ್ದೀರಿ. ಹಾಗಾಗಿ ಇದು ಚೆನ್ನಾಗಿ ಮೂಡಿಬ೦ದಿದೆ.

    ಆದರೆ, ಮತ್ತೆ ಆ ವಾದ ನನಗೆ ಹಿಡಸಲಿಲ್ಲ. ಐ.ಟಿ ಯವರ ಸಾಫ್ಟವೇರ್ ಇಸ್ರೋದ ಉಪಗ್ರಹಗಳಿಲ್ಲದೆ ನಿಷ್ಪ್ರಯೋಜಕ ಎ೦ದು. ಉಪಗ್ರಹಗಳನ್ನು ಬಳಸಿಕೊಳ್ಳದ ತ೦ತ್ರಜ್ಞಾನವಿಲ್ಲದೆ ಉಪಗ್ರಹಗಳು ಕೇವಲ ಬಾಹ್ಯಾಕಾಶ ಕಸವಲ್ಲವೆ. ಸಾಫ್ಟವೇರ್ ನಿ೦ದ, ಸಾಫ್ಟವೇರ್ ಗಾಗಿ ಹಾರ್ಡವೇರ್ ಮತ್ತು ಹಾರ್ಡವೇರ್ ನಿ೦ದ, ಹಾರ್ಡವೇರ್ ಗಾಗಿ ಸಾಫ್ಟವೇರ್. ಇದನ್ನು ತಿಳಿದು ನಡೆಯುವುದು ಉತ್ತಮ.

    ವರ್ಕ ಕಲ್ಚರ್ ಕೂಡ ಹಾಗೆ genericಆಗಿ ಹೇಳುವ೦ತಿಲ್ಲ. ನನ್ನ ಉನ್ನತ ವ್ಯಾಸ೦ಗದ ಹಲವಾರು ಸ್ನೇಹಿತರು ಡಿ.ಆರ್.ಡಿ.ಓ, ಹೆಚ್.ಎ.ಎಲ್ ಹಾಗು ಇಸ್ರೋ ದಿ೦ದ ಬ೦ದಿದ್ದರು. ಅವರಿಗೆ ಅನೇಕರಿಗೆ ಕಲಿಕೆಯಲ್ಲಿ ಆಸಕ್ತಿಯೇ ಇರಲಿಲ್ಲ. ಸುಮ್ಮನೆ ಬಡ್ತಿ ಹಾಗೂ ಹೆಚ್ಚು ಪಗಾರಕ್ಕಾಗಿ ಒದುತ್ತಿದ್ದರು. ಹಾಗಾಗಿ ಈ collectivist ದೃಷ್ಟಿಕೋನವನ್ನು ದಯವಿಟ್ಟು ಬಿಡಿ. ಈ ಕ೦ಪೆನಿಗಳೂ ಕೂಡ ಕೆಲವು module ಗಳನ್ನು ತಾವಾಯಾಗಿಯೆ ತಯಾರಿಸುವುದನ್ನು ಬಿಟ್ಟು israel, germany ಮತ್ತು u.k ಗಳಿ೦ದ ತರಿಸಿಕೊಳ್ಳುವುದು೦ಟು. ನಮ್ಮ ಸೇನೆಯವರು ಕೂಡ ಭಾರತದಲ್ಲಿ ಅದನ್ನು ತಯಾರುಮಾಡುವ ಸೌಲಭ್ಯಗಳಿದ್ದರೂ ಐದಾರು ಪಟ್ಟು ಹೆಚ್ಚಿನ ಬೆಲೆಗೆ ಪರದೇಶದಿ೦ದ ಅದನ್ನು ಖರೀದಿಸುವುದು೦ಟು. ನಮ್ಮಲ್ಲೆ ನಮ್ಮವರಿಗೇ ಮಾನ್ಯತೆಯಿಲ್ಲ. ಸೇನೆಯ ಒ೦ದು contract ಸಿಗಬೇಕಾದರೆ ಎಷ್ಟೋ ತಿ೦ಗಳು ತೆಗೆದುಕೊಳ್ಳುತ್ತದೆ. ಮೇಲಾಗಿ ಲ೦ಚ ಬೇರೆ. ಇದರಿ೦ದಾಗಿ ಎ೦ತಹ ಉತ್ಸಾಹಿಯಾಗಿದ್ದರೂ ಕ್ರಮೇಣ ಜಿಗುಪ್ಸೆ ಬ೦ದುಬಿಡುತ್ತದೆ.

    ನೀವು ಇನೋವೆಷನ್ ಬಗ್ಗೆ ಹೇಳಿರುವುದು ಸರಿಯೆ. ಆದರೆ ನಮ್ಮಲ್ಲಿ ೨೦೦೦ ಇ೦ಜಿನೀಯರಿ೦ಗ್ ಕಾಲೇಜುಗಳಿರಬಹುದು. ಆದರೆ ಅಷ್ಟು ಅಪಾರ ಸ೦ಖ್ಯೆಯ ಕಾಲೇಜುಗಳಿರುವುದರಿ೦ದ ಹೊರಗೆ ಬರುವ ಅಭಿಯ೦ತರುಗಳ ಗುಣಮಟ್ಟ ಮು೦ಚಿನ೦ತೆ ಇಲ್ಲ. ಇ೦ತಹ ಕೆಲವು ಗುಣಮಟ್ಟವಿಲ್ಲದ ಅಭಿಯ೦ತರುಗಳಿಗೆ white-collared ಕೂಲಿ ಕೆಲಸ ಮಾಡದೆ ಬೇರೆ ದಾರಿಯಿಲ್ಲ. AICTE ಗೆ ಕಾಲೇಜುಗಳಿಗೆ ಪರವಾನಗಿ ನೀಡುವುದಕ್ಕಿ೦ತ ಮು೦ಚೆ ಇದರ ಬಗ್ಗೆ ಯೋಚನೆ ಮಾಡಬೇಕು. ಐ.ಐ.ಟಿ ವಿಷಯದಲ್ಲೂ ಹಾಗೆಯೆ, ಈಗಿರುವ ಏಳು ಸ೦ಸ್ಥಾನಗಳಲ್ಲೆ ಅಧ್ಯಾಪಕರ ಕೊರತೆ ಇದೆ. ಇವುಗಳಿ೦ದಲೆ ಭಾರತಕ್ಕೆ ಆಗುತ್ತಿರುವ ಲಾಭ ಅಷ್ಟರಲ್ಲೆ ಇದೆ. ಈಗ ಮತ್ತೆ ಆರು ಹೊಸ ಐ.ಐ.ಟಿ ಸ್ಥಾಪಿಸುತ್ತಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ? ನಮ್ಮಲ್ಲಿ ಯಾವಾಗಲೂ qualityಗಿ೦ತ quantityಯ ಮೇಲೆ ಗಮನ ಹೆಚ್ಚು. ನೀವು ಹೇಳಿದ ಹಾಗೆ ಸ್ವತ೦ತ್ರ entrepreneursನ ಸ೦ಖ್ಯೆ ಕಡಿಮೆಯೆ.

    ಆದರೆ ಸ್ಥಿತಿ ಉತ್ತಮವಾಗುತ್ತಿದೆ. ನಮ್ಮ ಜನಗಳಿಗೂ ಯಾವುದೋ ವಿದೇಶಿ ಉದ್ದಿಮೆಗೆ ಕೆಲಸ ಮಾಡುವುದಕ್ಕಿ೦ತ ಸ್ವ೦ತ ಉದ್ದಿಮೆಯೇ ಲೇಸು ಎ೦ಬ ಭಾವನೆ ಬರುತ್ತಿದೆ. ನನ್ನ ಹಲವಾರು ಮಿತ್ರರು ಸ್ವ೦ತ ಉದ್ದಿಮೆ ಇದೆ. ಎಲ್ಲ ಐ.ಐ.ಟಿಗಳಲ್ಲಿಯೂ ಈಗ ಪ್ರಾಧ್ಯಾಪಕರಿಗೂ ತಮ್ಮ ಉದ್ದಿಮೆ ಶುರುಮಾಡಲು ಅನುಮತಿ ನೀಡಲಾಗಿದೆ. ಪ್ರತಿ ಐ.ಐ.ಟಿಗಳಲ್ಲಿಯೂ enterpreneurship parkನ ಅಡಿಯಲ್ಲಿ ಪ್ರಾಧ್ಯಾಪಕರಿಗೆ ಹಾಗೂ ವಿಧ್ಯಾರ್ಥಿಗಳಿಗೆ ಎರಡು ವರ್ಷಗಳವರೆಗೆ ಹಣಸಹಾಯ ಮಾಡಲಾಗುತ್ತಿದೆ. ಐ.ಐ.ಟಿ (ಬಾ೦ಬೆ) ಯಲ್ಲಿಯೆ ಇದರಡಿಯಲ್ಲಿ ಕೆಲವು ಒಳ್ಳೆಯ ಹೆಸರು ಮಾಡಿರುವ ಕ೦ಪೆನಿಗಳು ಬ೦ದಿವೆ. ಇನ್ನೂ ಹೆಚ್ಚು ಈ ರೀತಿಯಾದ ಕಾರ್ಯವಾಗಬೇಕು. ಸರ್ಕಾರ ಕೂಡ ಈ ರೀತಿಯಾದ start-up ಕ೦ಪೆನಿಗಳಿಗೆ ವಿಶೇಷ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಲು ಮು೦ದಾಗಬೇಕು. ಕಡಿಮೆ ಬಡ್ದಿಯ ಜಾಗದಲ್ಲಿ ಕ೦ಪೆನಿಯ ಕೆಲವು ಸ್ಟಾಕ್ ಆಪ್ಷನ್ಸ್ ಸರ್ಕಾರಕ್ಕೆ ನೀಡಬಹುದು. ತಮ್ಮ೦ತಹ ಯುವ ಪತ್ರಕರ್ತರು ಈ ದಿಕ್ಕಿನಲ್ಲಿ ಸರ್ಕಾರದ ಮನವೊಲಿಸಬೇಕು. ನಿಮ್ಮ ನಿಲುವು ಸರಿಯಾಗಿದ್ದರೆ ಯುವಕರ ಬೆ೦ಬಲ ನಿಮ್ಮೊ೦ದಿಗೆ ಯಾವಾಗಲೂ ಇರುತ್ತದೆ.

    ಉದ್ದಿಮೆದಾರರು ಎಡವಿದ್ದನ್ನು ಹೇಳಿದ್ದೀರಿ. ಆದರೆ ಸರ್ಕಾರ ನಿದ್ರಿಸುತ್ತಿದೆಯಲ್ಲ, ಅವರನ್ನು ಎಬ್ಬಿಸುವವರು ಯಾರು. ಉದ್ದಿಮೆದಾರರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಸಿದ್ಧರಿದ್ದಾರೆ. ಆದರೆ ಸರ್ಕಾರ proactive ಆಗಬೇಕು. ನಮ್ಮ ತಪ್ಪುಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ಇನ್ನು ಸರ್ಕಾರದ ಸರದಿ.

    ದಯವಿಟ್ಟು ಯಾವುದೆ ವಿಷಯದ ಬೆಗ್ಗೆ ಬರೆಯುವಾಗ ಸಮಾನಚಿತ್ತರಾಗಿರಿ. ವಿಷಯದ flipsideನ್ನು ಗಮನಿಸಿ. ತಮ್ಮಲ್ಲಿ ಅಪಾರ ಪ್ರತಿಭೆ ಇದೆ, ನಿರ್ಭೀತವಾಗಿ ಬರೆಯುವ ತಾಕತ್ತಿದೆ. ಆದರೆ ಸೂಕ್ಷ್ಮತೆ ಮತ್ತು ಆರ್ಧ್ರತೆಯನ್ನು ಬೆಳಸಿಕೊಳ್ಳಿ. ನಿಮ್ಮ ಲೇಖನಿಯನ್ನು ಬರಿ ಕ೦ಡವರ ಮೇಲೆ ರಾಡಿ ಎರಚಲು ಬಳಸಬೇಡಿ.

    ಶುಭ ಹಾರೈಕೆಗಳೊ೦ದಿಗೆ,
    ಧನ್ಯವಾದಗಳು

  20. Rajagopal says:

    As for me, there are 2 main reasons why none could become a ಗೇಟ್ಸ್, ಜಾಬ್ಸ್, or a ಡೆಲ್.

    1. Try to offer an innovator’s job to a young engineer with American salary and infrastructure in these days. I am sure you will be in for a rude shock, he or she refuses. Logic? If you are so much wanted here, America must be craving for you and it makes sense to wait for a call from America.

    2. Young engineers are shocked by rude rebuttals from their bosses whenever they offered to innovate/improve imported technologies or develop an indigenous one.

    To sum it up, you want to eat fruit but don’t want to wait till it grows; far from growing it on your own.

    Thanks

  21. Raghavendra says:

    ಪ್ರೀತಿಯ ಪ್ರತಾಪ್ ,
    ನಿಜವಾದ ನಿಮ್ಮ ಒಳ ಖಾಳಜಿ ಏನು ಅನ್ನೋದನ್ನ ಇನ್ನೊಂದು ಲೇಖನದ ಮೂಲಕವೇ
    ಸರಿಯಾಗಿ ತಿಳಿಸಿಕೊಟ್ಟಿದ್ದಿರಿ .ತಲೆಗೆ ತಿಳಿದಂತೆ ಅರ್ಥಯಿಸಿಕೊಂಡು ಬಾಯಿಗೆ ಬಂದಂತೆ
    ಹೇಳಿದ ಎಲ್ಲರೂ ಬಾಯಿ ಮುಚ್ಚಿಕೊಂಡು ಸರಿಯಾಗಿ ಕುಳಿತು ಯೋಚಿಸಲಿ .
    ಇಷ್ಟಕ್ಕೂ ಸತ್ಯದ ಅರಿವಾಗೋದು ಸ್ವಲ್ಪ ತಡವೇ ಅಲ್ವ ……….

  22. bhargavi bhat says:

    i have sent a mail regarding this article,i hope you have read that.

  23. Anonymous says:

    Hi Prathap,
    I have read your article, assuming that this is not the continuation of your IT bashing article last week I consider it moderate. You are right and you really have right to ask the questions that you put. But some of them I can answer/or give more explainations.
    As you know there are two sectors of work: Product based(Manufactured based) and Service based. This service can be financial services, consulting and others. When you speak about Innovation, there is innovation in both service and product based areas. You can ask me what innovation is there in service based, how gratefully you can satisfy your customer is the biggest strong point. Of course this kind of innovation is not seen. For example imagine door delivery of food. I am sure initially no hotel was doing door delivery food. But now all big hotels do that. This is one example of innovation. Previously this service sector was not given importance unlike now.
    Coming to software sector in India It started and 90% of this is based on service based companies. Infosys, Wipro or TCS. The kind of innovation that is happening here may not be seen to outside world but there is one. IF at all you want to build a product based company first thing that you need is not talent, but money. There should be real investors that should invest in product based as the returns that you get are not fast. This risk no one is taking or though they are taking it is less compared to the service sector.
    There are some products that came from India.
    We have a financial services product from Infosys called Finacle. Coming to search engine we have guruji.com and asklaila.com[Search engine is a product in internet domain]. TCS has a separate branch called as TCS financials. We have it but the product development is overshadowed by the services sector.
    Product sector is the next step after services. They are coming it, it will take some time. Even if you take the case of other industries in India, I am sure they will be services given and then they came up to build the product. IT is just 10 years old compared to Aerospace and others. I can ask a question to aerospace industry why dont we have a Sukhoi or a MIG or a F16 or the the recent Typhoon?
    Finally we can’t criticise that we don’t have a product. We are giving good service and this too is same as having a product. If that is the case England the whole country is based on services. What should I say about it then?
    I appreciate the questions that you have put as every Indian has a right to ask.

    Have a nice day.

  24. Shivananda says:

    Bitter truth. I will not deny single word in your article.
    We (with in IT or ITES) are also aware & concerned at these things.
    India doesn’t have a brand which is famous world wide in any sector (aerospace, automible, media etc) for that matter. Our biggest export is “Man power”.
    Finland is little bigger than Karnataka but it has such big brand as NOKIA (nothing is manufactured or designed there today) let us accept it is their acheivement.We shall also aspire and achieve something like that.

    I can also ask how may Rupert Murdoch or Warren buffet has media industry India produced which is more than 100 yrs old(print media included)???. Sorry I am not getting to blame game yet this is also truth.

    Alternate thought as a engineering students during 90s, Our biggest worry was getting job & start supporting the family. Rich guys used to write GRE and go to USA. People with reservation and influence would join GOVT sector.
    Only option in front of us during those days was to join a small or medium scale company in Peenya,Bangalore and work for Rs2000-3000/month.
    IT boom gave us the opportunity to earn and lead a life with dignity. I always stand by NRN, Premji et. al (I have never worked for both of them till now) as these are the people who gave employment for lakhs & lakhs of people(direct & indirect).
    Thanks Pratap for bringing this topic in open for discussion.
    Salutations to Sarabhai, Dhawan, Kalam and ISRO.
    -Regards,
    Shivananda.

  25. Praveen says:

    Dear Prathap Simha,

    A good article again by you and congratulations about it.

    I see few views for the reason why we (Indians) or IT industries have not shown entrepreneurship qualities or innovative qualities.
    1. The way Indians have brought up in their lives. I mean we are taught and trained to avoid risks and not choose known road rather than creating road on our own or finding the our own road. So, we observe very negligible amount of people are encouraged to do what a child or person wishes to do in their lives. Rather most of Indians are forced to gain education simply to get job and settle down for life time. In our society person who does not score get into Engineering or Medical (for sake of getting into professional course) are considered as useless person. We do not bother whether a person is really interested or whether he can really wants to contribute to what he/she studies and wants to grow in their respective fields.
    2. Even though somebody has innovative ideas, they are not courageous enough to take upon Indian politics and bureaucratic hurdles. Rather they go to western countries to pursue their dreams.
    3. Though some of current Indian entrepreneurs start up a company (either through help from Venture capitalists from western countries or their own). Unfortunately these companies aim at creating one good product and wait for some MNC taking them over (buy them). Such companies lack vision and are not long lasting.

    So, I feel this can be changed by the
    1. Encouraging enterpruenership in young indians,
    2. Make necessary amendments in constitution to over come Political and red tapism.
    3. Changing our education system to emphasis on creativity rather than just cloning the children with lessons.
    4. Indians should adapt to thinking that not to “walk around” a problem rather “Walk through” the problem.
    5. Brought out the rational thinking in society through Educationists, Thinkers and inculcate nationalism in Indians.

    Many other very good thoughts have shared in this forum too.

  26. harsha says:

    my comments which were posted one day before, are still ‘awaiting moderation’ and who have posted comments today are already there to see 🙁

  27. ಅಣ್ಣಯ್ಯ, ಪ್ರಶ್ನೆಗೆ ಉತ್ರ ತುಂಬಾ ಸುಲಭ. ಈಗಿರೋ ಸಾಫ್ಟ್ವೇರಿಂಜಿನೀಯರ್ಕಮ್ಯೂನಿಟೀಲಿ ಎಷ್ಟ್ಜನಕ್ಕೆ ನಿಜ್ವಾಗ್ಲೂ‌ software ಬಗ್ಗೆ, programming ಬಗ್ಗೆ ಆಸಕ್ತಿ, ಇಷ್ಟ, passion ಇದೆ? :)‌

    computers, programming, software ಬಗ್ಗೆ ಎಷ್ಟ್ಜನ fascinate ಆಗಿ ಅದನ್ನೆ ಪ್ರೊಫೆಶನ್ನಾಗಿ / course of study ಆಗಿ ತಗೋತಾರೆ?‌(ಕೇವಲ ಸಂಬ್ಳಕಲ್ಲದೇ)

    ಸಮಸ್ಯೆ ಎಮ್ಮೆನ್ಸಿಗಳಿಂದನೂ ಆಗಿದೆ, ಆದರೆ ಅಷ್ಟೇ ಹೊಣೆ ನಮ್ಜನಾ ಕೂಡಾ, ಈ ಸಮಸ್ಯೆಗೆ. ಇದೊಂದು vicious cycle. ಕಡ್ಮೆ ದುಡ್ಡಲ್ಲಿ ಕೂಲಿಗಳು ಸಿಕ್ಕಾಗ ಎಲ್ರೂ ಬಳ್ಕೊಂಡೇ ಬಳ್ಸ್ಕೋತಾರೆ, ನೀನೇನು, ನಾನೇನು. ಅಲ್ಲ್ವಾ?‌ ಮೇಲಿರೋ ಕಮೆಂಟ್ #17 ಕೂಡ ನಾನ್ಕೇಳ್ಬೇಕು ಅಂದ್ಕೊಂಡಿದ್ದೇ ಇದೆ.

    ನಮ್ಜನರಲ್ಲಿ ದುಡ್ಡಿನ್ದುರಾಸೆ ಕಡ್ಮೆ ಆಗಿ , ಜ್ನಾನದಾಸೆ ಹೆಚ್ಚಾದಾಗ, ಎಲ್ಲ ಸರಿ ಹೋಗ್ಬೋದು, ಅಷ್ಟೆ..

    ದೇವ್ರೊಳ್ಳೇದ್ಮಾಡ್ಲಿ !
    _ರಾಘವ_

  28. indy says:

    Hi Pratap,

    A thoughtful article. Biggest thing in your blog i love to read is the comments everyone puts in. Your article has certainly stimulated so many of us to write what we think or share our thoughts on the questions you raise. Yes, last weeks artilce did irritate a lot of people including me………:) but it did bring out a lot of positive things which exists with the IT/BPO industry.

    Keep it going! good job! really looking forward for more thought provoking articles. A small suggestion may bringing out both pros n cons of a topic you choose write would be a great approach!!

  29. Dear Readers,
    By this time, it is very clear that – Pratap simha has used the technique of ‘confuse if you cannot convince’. His both article ‘Kurudu Kanchana’ and this one, are completely biased and have ‘no value’ in it.

    By the way – According to simha – Definition of a cowboy? Very funny!!! It is as funny as his definition as ‘What is work culture’.
    Overall, Pratap simha is wasting the precious space in Vijaya Karnataka by writing such article….

    Dear Pratap Simha,
    Please dont waste your time, and our time by writing such shabby articles.

  30. ಇಲ್ಲೊಂದು ಕಮೆಂಟ್ (#23) ಹಾಕಿದ್ದೆ ಬೆಳ್ಗೆ 2:40 ಸುಮಾರಿಗೆ, ಅದ್ನ ಡಿಲೀಟ್ಮಾಡಿರೋ ಹಾಗಿದೆ ತಾವು 😉

    ಅದ್ನೆ ಇಲ್ಲಿ ಹಾಕಿದೀನಿ, ನೋಡ್ಬೋದು. 🙂

  31. anjali says:

    dear sir
    awesome!!!!!
    thank you for a great article .
    where r dos IT guys now,
    guys plz do comment nw on our beloved pratap.

  32. Sindhoo says:

    Hi,
    Article is very informative. And it correctly highlights the flaws of our IT industry.
    I would like to share my views on it.
    I found the following comments very good.
    Vinutha(10), Raveendra kashyapa(16), Praveen(22)

    Recession has brought worries not only to IT inductry, but to all other industries. I can think of few reasons on failing to innovate:

    1. In the present education system, those who get top marks are given high respect. Students just concentrate on marks rather than knowledge.
    Ofcourse we cannot blame only them for it. There are so many students completing graduation every year. They are judged on the basis of marks to be eligible for the interviews. Heavy syllabus of engineering and very short duration to complete it, naturally makes them study only selected things. There is no proper knowledge gained to get good ideas.

    2. For new product ideas, we need to look at different products present in the market. There is little information available on this unless we personally check the websites regularly. I was going through the list of award winning products and shocked to see some of the ideas there. Such simple ideas must have come in many minds, but might have got neglected since they sound silly.

    3. There is no money for innovations. No company in India will invest on research and development, when they are earning handsome amount by giving service to foreign companies. The mindset is like that. We hesitate to take risk.

    4. People in the age group 45 and above hardly know to use computers. They do neither encourage nor understand new ideas in this field. There should be buyers for the innovative products. We tend to use pirated softwares, what kind of market we can expect for the innovations? Should we target only foreign market? Then who invests the initial capital for it?
    I hope we can expect innovations after 10-15 years.

    It is bad that we keep praising the IT companies when everything is going fine and point fingers at them when some undesired things happen. IT people are just normal people. Why don’t we treat them equally and understand their insecurities rather than finding faults?

  33. Sudhee says:

    Hi Mr Prathap,
    Really you have given right answers to the questions raised in “Hi bang…”
    Hats off to you…

  34. preetham says:

    Hi Mr Prathap,
    Really you have given right answers to the questions raised in “Hi bangalore”

  35. Keshav says:

    Hi Pratap,
    Really true article. I too believed this thing……..
    thank u for this……………

  36. harsha says:

    guys…what was the article in ‘hi bangalore’?
    Pratap could u please post it

  37. Praveen AB says:

    Dear Pratap,

    You had done a wonderfull job. I think this article will definitely changes the way we think in future.

    Thanks a lot for this

  38. Rajashekar says:

    Hi Prathap,

    Thanks for such a meanigful, heart touching artilce…..

  39. Harish says:

    Thank you for your article sir,
    India has never been a country which has encouraged research culture. We just want to imitate the westerners. From the colonial period we have lost the ability to innovate or to think out of the box. we have remained faithful servents of oppressing and oppoutunistic masters. Service sectors and contractors
    (Narayana murthy, Azim premji etc) have left no stone unturned to supply the servents. Oligarchy is on the rise. Major industrialists are usurping the power and forcing the youth of india to serve the foriegners. It is here that the youth of india has to wake up and do something for their own country and bring back the glories of India. Sure your article is an eye opener.
    Thank u

  40. Sanathan says:

    It was a very good reply. Nam deshadalli samasye galige korathe illa..adannu intha maadhyama davaru avakaasha sikkidhe, janaru odhtaare anta attractive heading kottu..eradu dialogue na hange esedu taavu ellara madhye dhodda hero aagtare ashte. Nijavaagiyu avrige concern irodilla…

    Ashtakku ee vayya murthi galigo, premji go heloshtu ghanandari kelsa en maadidhane…vishveshwar bhatru kammi sambla kodstaare anta taanu corp field ge hogtini, HR aagi kelsa maadtini anta helta iddaddu namge gottilve…!

    Paper nalli 5X5 inches jaaga kotre naanu intha bejan article galanna bardu ugra ‘prataap’i aagbodu.Aadre ee thara ‘simha’ gharjane indha yaar hotte nu tumballa..idr badhlu ‘R&D vani’ antlo ‘sanje R&D’ antlo ondu patrike company tegdu, avare heluvante media kshetra dalliro mafia galannu meeri beleyoke/belesoke , maadari patrikeyondhanna janarige kodoke try maadli…

    Yaakendre naale janru ‘Vijay karnatakada simha da ‘prataap’a column na mundhe’ anta helbardu antha ..ashte…

  41. sanjeev kumar sirnoorkar says:

    hi pratap
    article is very nice……

  42. Vinayak says:

    Just superab****

  43. pradeepa says:

    Mr Pratap

    I suggest you use your energy to expose all unethical policies that are followed in the corporate IT industries like harassing their employees, misusing all the subsidies that are given by the governments, sending people to onsite by showing false credentials etc instead of writing these kind of articles which serves no purpose. Just for the sake of filling you column space dont write these kind of articles.

  44. Gururaj Vasudevamurthy says:

    kaNNteresuva lekhana….,,, I am sure that it can make our conutry’s software professionals ‘think’ …,
    Also.., We should be so proud of our ISRO…. and our scientists…

  45. santosh says:

    Its really wonderful article, it is real fact ……………………………….very wonderful

  46. kamath says:

    steve jobs atva dell ga innovation thara navu namma dasha problem galiga navu sol. na hudu ko bahu du and monna kuvempu university ya chitradurga dalli nadada science exhibtion nalli nada politics ga lu inta innovation thanni ru yarachi danta

  47. Deepak H says:

    Hi Pratap,
    Great article.
    Really, Its true whatever you said in your article.
    I regularly read your article.

  48. Dr. Gururaj says:

    Hi Pratap,
    Nice article, I must agree some of your points, since it is the failure of designed education system of our nation. Since I feel, education system should me made in such a way to produce manpower to make use of their country’s resources rather than making man power to serve for other country.
    Also I would like to comment on the comments made by some people
    I just read gone through comment of Vinutha. Her comment seems to be more of marketing style. She has not understood your view of innovation. If she thinks that “Product development” is also a type of innovation, then I hv no comments rather than laughing at this view.
    Coming following strange comment on one brother of my nation (Comment no #23)
    1. Try to offer an innovator’s job to a young engineer with American salary and infrastructure in these days. I am sure you will be in for a rude shock, he or she refuses. Logic? If you are so much wanted here, America must be craving for you and it makes sense to wait for a call from America.

    My question him is “Do U need so much of big amount of American salary to buy a Kg of rice or some vegetables in India?”……Please come out of this fantasy of high salary.

  49. Dr. Gururaj says:

    Hi Pratap,
    Nice article, I must agree some of your points, since it is the failure of designed education system of our nation. Since I feel, education system should me made in such a way to produce manpower to make use of their country’s resources rather than making man power to serve for other country.
    Also I would like to comment on the comments made by some people
    I just read gone through comment of Vinutha. Her comment seems to be more of marketing style. She has not understood your view of innovation. If she thinks that “Product development” is also a type of innovation, then I hv no comments rather than laughing at this view.
    Coming following strange comment on one brother of my nation (Comment no #23)
    1. Try to offer an innovator’s job to a young engineer with American salary and infrastructure in these days. I am sure you will be in for a rude shock, he or she refuses. Logic? If you are so much wanted here, America must be craving for you and it makes sense to wait for a call from America.

    My question him is “Do U need so much of big amount of American salary to buy a Kg of rice or some vegetables in India?”……Please come out of this fantasy of high salary.

    Dr. Gururaj
    Research Scholar
    FL. USA

  50. Maheshkumar says:

    Hi Pratap,
    Nice artical

    thanks….
    Maheshkumar