Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ‘ಬನ್ನಿ ಭಾರತದ ಮೇಲೆ ದಾಳಿ ಮಾಡಿ’ ಎಂದನಲ್ಲ, ಇದೆಂಥಾ ರಾಷ್ಟ್ರಪ್ರೇಮ?!

‘ಬನ್ನಿ ಭಾರತದ ಮೇಲೆ ದಾಳಿ ಮಾಡಿ’ ಎಂದನಲ್ಲ, ಇದೆಂಥಾ ರಾಷ್ಟ್ರಪ್ರೇಮ?!

‘ಬನ್ನಿ ಭಾರತದ ಮೇಲೆ ದಾಳಿ ಮಾಡಿ’ ಎಂದನಲ್ಲ, ಇದೆಂಥಾ ರಾಷ್ಟ್ರಪ್ರೇಮ?!

ಕೊಡಗಿನ ಇತಿಹಾಸವನ್ನು ತಡಕಾಡಿದರೆ ಈಗಲೂ ಟಿಪ್ಪು ಕಾಲದಲ್ಲಿ ಮತಾಂತರವಾದ ಒಂದು ಕಾಲದ ಕೊಡವರು ಕಾಣಸಿಗುತ್ತಾರೆ. ಇಂದಿಗೂ ಕೊಡವ ಮಾಪಿಳ್ಳೆಗಳೆಂದು ಕರೆಸಿಕೊಳ್ಳುತ್ತಿದ್ದಾರೆ. ತೀರಾ ಇತ್ತೀಚಿನ ವರ್ಷಗಳವರೆಗೂ ಕೊಡವ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದ ಕೊಡವ ಮಾಪಿಳ್ಳೆಗಳು, ಕೊಡವರಂಥ ಐನ್ ಮನೆಗಳು, ಕೊಡವ ಆಯುಧಗಳು, ಕೊಡವ ಆಭರಣಗಳನ್ನು ಹೊಂದಿರುವ ಇವರಿಗೆ ಇವತ್ತಿಗೂ ಕೊಡವ ಕುಟುಂಬಗಳಿಗೆ ಇರುವಂತೆ ಮನೆಹೆಸರುಗಳಿವೆ. ವೀರಾಜಪೇಟೆ ತಾಲೂಕಿನಲ್ಲಿ ಆಲೀರ, ಚೀರಂಡ, ಚಿಮ್ಮಚೀರ (ಈ ಹೆಸರಿನ ಕೊಡವ ಕುಟುಂಬಗಳೂ ಇವೆ), ದುದ್ದಿಯಂಡ, ಕದ್ದಡಿಯಂಡ, ಕೊಳುಮಂಡ, ದೇವಣಗೇರಿ ಗ್ರಾಮದಲ್ಲಿ ಪುಲಿಯಂಡ, ವೀರಾಜಪೇಟೆ ಸುತ್ತಮುತ್ತ ಕೂವಲೇರ, ಈತಲ್​ತಂಡ, ಮೀತಲ್​ತಂಡ, ಕುಪ್ಪೋಡಂಡ, ಕಪ್ಪಂಜೀರ, ಮಡಿಕೇರಿ ತಾಲೂಕಿನಲ್ಲಿ ಕಾಳೇರ, ಚೆಕ್ಕೇರ, ಚೆರ್​ವುಕಾರಂಡ, ಮಣಿಯಂಡ, ಬಲಸೋಜಿಕಾರಂಡ, ಮಂಡೇಯಂಡ ಹೆಸರಿನ ಮನೆಗಳಿವೆ. ಇನ್ನೂ ಒಂದು ವಿಚಿತ್ರವೆಂದರೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿರುವ ಮುಸಲ್ಮಾನ ಮನೆತನದ ಹೆಸರು ಹರಿಶ್ಚಂದ್ರ! ಇದು ಏನನ್ನು ಸೂಚಿಸುತ್ತದೆ? ಟಿಪ್ಪುವಿನ ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಕೊಡಗಿನ ಹಲವು ದೇವಸ್ಥಾನಗಳಲ್ಲಿನ ಅರ್ಚಕರೇ ಮಂಗಳೂರಿಗೆ ಓಡಿಹೋದರು. ಹಲವು ದೇವಾಲಯಗಳಲ್ಲಿ ಪೂಜೆಗಳು ನಿಂತುಹೋದವು. ಕೆಲವು ದೇವಸ್ಥಾನಗಳನ್ನು ತರಗೆಲೆ-ಸೊಪ್ಪುಗಳಿಂದ ಅಡಗಿಸಿಡಲಾಯಿತು (ಉದಾಹರಣೆಗೆ, ವೀರಾಜಪೇಟೆ ಮಲೆತಿರಿಕೆ ಭಗವತಿ ದೇವಸ್ಥಾನ). ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನಕ್ಕೂ ಕಂಟಕ ಬಂದೊದಗಿತ್ತು. ಕೊಡಗಿನ ಅರಸ ಟಿಪ್ಪುವಿನ ಭಯದಿಂದ ಓಂಕಾರೇಶ್ವರ ದೇವಸ್ಥಾನದ ಕಳಶವನ್ನು ತೆಗೆದು ಗುಂಬಜ್ ಅನ್ನು ನಿರ್ವಿುಸಿದ. ದೂರದಿಂದ ನೋಡಿದರೆ ಇದು ಮಸೀದಿಯಂತೆ ಕಾಣುತ್ತಿತ್ತು. ಇಂದಿಗೂ ಓಂಕಾರೇಶ್ವರ ದೇವಸ್ಥಾನ ಗುಂಬಜ್ ಆಕಾರದಲ್ಲೇ ಇದೆ.

ಇದು ಟಿಪ್ಪುವಿನ ಮತಭ್ರಾಂತ ಕ್ರೂರ ಮನಸ್ಥಿತಿಗೊಂದು ಉದಾಹರಣೆ. ಅವನಲ್ಲಿ ಹುಲಿಯ ಗುಣಗಳಿಗಿಂತ ನರಭಕ್ಷಕ ತೋಳದ ಲಕ್ಷಣಗಳೇ ಹೆಚ್ಚಾಗಿ ಕಾಣಿಸತೊಡಗಿದವು. ಜನ ಮಾತ್ರವಲ್ಲ ನೆರೆಹೊರೆಯ ಪಾಳೇಗಾರರು, ರಾಜರೂ ಚಿಂತಿತರಾದರು. ಬ್ರಿಟಿಷರಿಗಿಂತ ಆರ್ಕಾಟಿನ ನವಾಬ, ಹೈದರಾಬಾದಿನ ನಿಜಾಮ, ಮಲಬಾರಿನ ನಾಯರ್, ಕ್ರಿಶ್ಚಿಯನ್ನರು, ಕೊಡಗಿನವರಿಗೇ ಟಿಪ್ಪುವನ್ನು ಮಟ್ಟಹಾಕುವುದು ಅನಿವಾರ್ಯವಾಯಿತು. ಇವರೆಲ್ಲ ಒಗ್ಗೂಡಿ ಟಿಪ್ಪುವಿನ ಈ ದೌರ್ಜನ್ಯಗಳಿಂದ ಮುಕ್ತಿ ಕೊಡುವಂತೆ ಬ್ರಿಟಿಷರನ್ನು ಕೇಳಿಕೊಂಡರು. ಮಂಗಳೂರು ಒಪ್ಪಂದವನ್ನು ಟಿಪ್ಪು ಉಲ್ಲಂಘಿಸಿರುವುದನ್ನು ನೆನಪಿಸಿದರು. ಈ ಅವಧಿಯಲ್ಲಿ ‘ಇಸ್ಲಾಂ’ ಹೆಸರಿನಲ್ಲಿ ಹಲವಾರು ಬಾರಿ ನಿಜಾಮನಲ್ಲಿಗೆ, ಉತ್ತರ ಭಾರತದ ಹಲವು ಮುಸಲ್ಮಾನ ದೊರೆಗಳಿಗೆ ಮತ್ತು ಮೊಘಲ್ ದೊರೆಗೂ ರಾಯಭಾರಿಗಳನ್ನು ಕಳಿಸಿ ಇಂಗ್ಲಿಷರನ್ನು ಓಡಿಸಲು ತನಗೆ ಸಹಕಾರ ಬೇಕೆಂದು ಟಿಪ್ಪು ಕೇಳಿದ್ದ. ಅದೇ ವೇಳೆ ಇರಾನ್ (ಪರ್ಷಿಯಾ), ಅಪ್ಘಾನಿಸ್ತಾನ, ಟರ್ಕಿ ಮೊದಲಾದ ದೇಶಗಳ ಮುಸ್ಲಿಂ ದೊರೆಗಳನ್ನು ಭಾರತಕ್ಕೆ ದಾಳಿ ಮಾಡಲು ಆಹ್ವಾನಿಸಿದ್ದ. ಆ ಮೂಲಕ ಇಲ್ಲಿನ ಕಾಫಿರರನ್ನು (ಹಿಂದುಗಳು) ಸೋಲಿಸಿ, ಇಂಗ್ಲಿಷರನ್ನು ದೇಶ ಬಿಟ್ಟೋಡಿಸುವ ತಂತ್ರ ರೂಪಿಸಿದ್ದ. ಫ್ರೆಂಚರಲ್ಲಿಯೂ ಸಂಧಾನ ಕುದುರಿಸುವ ಯತ್ನ ಮಾಡುತ್ತಿದ್ದ. ಇದೆಲ್ಲವನ್ನೂ ಇಂಗ್ಲಿಷರು ಗಮನಿಸುತ್ತಿದ್ದರು. ಇಲ್ಲಿ ಟಿಪ್ಪು ಹಾವಳಿ ಮಿತಿ ಮೀರಿತು. ಪೂರ್ತಿ ದಕ್ಷಿಣ ಭಾರತದ ರಾಜರು, ನವಾಬರು, ಆಳರಸರ ಪೈಕಿ ಟಿಪ್ಪುಗೆ ಒಬ್ಬನೇ ಒಬ್ಬ ಸ್ನೇಹಿತ, ಮಿತ್ರ ಇರಲಿಲ್ಲ. ಎಲ್ಲರೂ ವಿರುದ್ಧವಿದ್ದರು. ಎಲ್ಲಕ್ಕಿಂತಲೂ ವಿಪರ್ಯಾಸವೆಂದರೆ ಅವನ ರಾಜ್ಯದೊಳಗಿನ ಸಾಮಂತ ಅರಸರು, ಪಾಳೇಗಾರರು ಮತ್ತು ಅವನ ಸೈನ್ಯದೊಳಗಿನ, ಸರ್ಕಾರದಲ್ಲಿನ ಹಲವು ಅಧಿಕಾರಿಗಳೇ ಟಿಪ್ಪುವಿನ ನಿರಂಕುಶ, ಮತೀಯವಾದಿ ಆಡಳಿತಕ್ಕೆ ವಿರುದ್ಧವಿದ್ದರು.

ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡರೆ ಟಿಪ್ಪು ಬ್ರಿಟಿಷರ ವಿರುದ್ಧ, ಈ ದೇಶವನ್ನು ಅವರ ಕಪಿಮುಷ್ಟಿಯಿಂದ ಬಿಡುಗಡೆ ಮಾಡಲು ಹೋರಾಟ ನಡೆಸಿದನೆಂದು ಅನಿಸುತ್ತದೆಯೇ? ಇಡೀ ದಕ್ಷಿಣ ಭಾರತದ ಇದ್ದಬದ್ದ ರಾಜರುಗಳೆಲ್ಲ ಪರಕೀಯ ಬ್ರಿಟಿಷರನ್ನು ಓಲೈಸಲು, ಅವರ ಆಶ್ರಯ ಪಡೆಯಲು ನೇರವಾಗಿ ಟಿಪ್ಪುವಿನ ದೌರ್ಜನ್ಯಗಳೇ ಕಾರಣವೆಂದು ಅನಿಸುವುದಿಲ್ಲವೇ? ಈಗ ಟಿಪ್ಪುವನ್ನು ಹಾಡಿಹೊಗಳುತ್ತಾ ಹುಯಿಲೆಬ್ಬಿಸುವವರು, ಟಿಪ್ಪುವನ್ನು ಮಹಾನ್ ದೇಶಪ್ರೇಮಿ ಎಂದು ಬಣ್ಣಿಸುವುದಾದರೆ ಅಂದು ಬ್ರಿಟಿಷರ ಜೊತೆಗೆ ಸೇರಿಕೊಂಡ ಈ ಎಲ್ಲ ರಾಜರು, ನವಾಬರು, ಪಾಳೇಗಾರರು ದೇಶದ್ರೋಹಿಗಳೇ? ಸ್ವಭಾವತಃ ವೀರರಾಗಿರುವ ಕೊಡವರು, ನಾಯರ್​ಗಳೆಲ್ಲ ಟಿಪ್ಪುವಿನ ವಿರುದ್ಧ ಹೋರಾಡಲಿಕ್ಕಾಗಿಯೇ ಬ್ರಿಟಿಷರ ಜೊತೆ ಅನಿವಾರ್ಯವಾಗಿ ಕೈ ಜೋಡಿಸಿದರಲ್ಲ, ಅವರೂ ದೇಶದ್ರೋಹಿಗಳೇ? ಇಷ್ಟಕ್ಕೂ ಟಿಪ್ಪು ಭಾರತವನ್ನು ಬ್ರಿಟಿಷರಿಂದ ಬಿಡುಗಡೆ ಮಾಡಬೇಕೆಂದು ಪ್ರಯತ್ನಿಸಿದನಾ?

ಊಹ್ಞೂಂ…

ಅವನು ಬ್ರಿಟಿಷರನ್ನು ಅನಿವಾರ್ಯವಾಗಿ ಎದುರುಹಾಕಿಕೊಂಡ. ಏಕೆಂದರೆ ಹೈದರನ ಕಾಲದಿಂದಲೂ, ಬಳಿಕ ಟಿಪ್ಪುವಿನ ಕಾಲದಲ್ಲೂ ಅವರ ವಿರೋಧಿಗಳು ಬ್ರಿಟಿಷರ ಜೊತೆಗೇ ಕೈ ಜೋಡಿಸಿದರು. ಬ್ರಿಟಿಷರೊಂದಿಗೆ ಹೈದರಾಲಿಗೂ ಮೈತ್ರಿ ಸಾಧಿಸುವ ಆಸೆಯಿತ್ತು. ಆದರೆ ಅದು ಕೈಗೂಡದೆ ಆತ ಫ್ರೆಂಚರನ್ನು ಅಪ್ಪಿಕೊಂಡ. ಈ ಅಪ್ಪ ಮಗ ನೆರೆಹೊರೆಯವರ ಮೇಲೆಯೇ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ದಾಳಿ ನಡೆಸಿ, ದೌರ್ಜನ್ಯವೆಸಗಿ, ಲೂಟಿಕೊಳ್ಳೆ ಹೊಡೆದದ್ದರಿಂದಲೇ ವಿರೋಧಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗಿದರು. ಅವರೆಲ್ಲರೂ ಟಿಪ್ಪುವನ್ನು ಎದುರಿಸಲು ಬ್ರಿಟಿಷರ ಪರ ನಿಂತು ಬ್ರಿಟಿಷರೇ ನಾಯಕತ್ವ ವಹಿಸುವಂತೆ ಮಾಡಿದರು. ಬ್ರಿಟಿಷರ ವಿರುದ್ಧ ಸಂಚು ಮಾಡಿದ ಟಿಪ್ಪು ಅದೇ ಸಮಯಕ್ಕೆ ಫ್ರೆಂಚರನ್ನು ಭಾರತಕ್ಕೆ ದಾಳಿ ಮಾಡಲು ಆಹ್ವಾನಿಸಿ, ಪೂರ್ತಿ ಭಾರತವನ್ನೇ ಅವರ ವಶಕ್ಕೊಪ್ಪಿಸಲು ಸಿದ್ಧತೆ ನಡೆಸಿದ್ದನಲ್ಲ, ‘ಬನ್ನಿ ಭಾರತದ ಮೇಲೆ ದಾಳಿ ಮಾಡಿ’ ಎಂದು ಆಹ್ವಾನಿಸಿದನಲ್ಲ, ಇದೆಂಥಾ ರಾಷ್ಟ್ರಪ್ರೇಮ?!

ವಾರೆನ್ ಹೇಸ್ಟಿಂಗ್ಸ್​ನ ಬಳಿಕ 1786ರಲ್ಲಿ ಗವರ್ನರ್ ಜನರಲ್ಲನಾಗಿ ಅಧಿಕಾರಕ್ಕೆ ಬಂದಿದ್ದು ಲಾರ್ಡ್ ಕಾರ್ನ್​ವಾಲಿಸ್. ಟಿಪ್ಪುವಿನ ಮೇಲೆ ಯುದ್ಧ ಸಾರಿ ಅವನನ್ನು ಬಗ್ಗಿಸಲು ಕಾಲ ಕೂಡಿ ಬಂದಿತ್ತು. ಮರಾಠರು, ನಿಜಾಮನ ಸೈನ್ಯದ ಜೊತೆ ಹಲವಾರು ಚಿಕ್ಕಪುಟ್ಟ ರಾಜರ ಸೈನ್ಯಗಳೂ ಬ್ರಿಟಿಷರ ಜೊತೆ ಸೇರಿದವು. ಲಾರ್ಡ್ ಕಾರ್ನ್​ವಾಲಿಸ್ ಈ ಭಾರಿ ಸೈನ್ಯಕ್ಕೆ ‘ಗ್ರಾಂಡ್ ಆರ್ವಿು’ ಎಂದೇ ಹೆಸರಿಟ್ಟ. 1791ರ ಮಾರ್ಚ್​ನಲ್ಲಿ ಗ್ರಾಂಡ್ ಆರ್ವಿುಯ ಯುದ್ಧ ಕಾರ್ಯಾಚರಣೆಗಳು ವಿಧಿವತ್ತಾಗಿ ಶುರುವಾದವು. ಮೊದಲ ಬಾರಿಗೆ ಬ್ರಿಟಿಷ್ ಸೈನ್ಯವು ಸ್ವತಃ ಗವರ್ನರ್ ಜನರಲ್ ಕಾರ್ನ್​ವಾಲಿಸ್​ನ ಮುಂದಾಳತ್ವದಲ್ಲಿ ಧಾರವಾಡದ ಮೂಲಕ ಬೆಂಗಳೂರಿಗೆ ಲಗ್ಗೆ ಇಟ್ಟಿತು. ಮೂರನೇ ಮೈಸೂರು ಯುದ್ಧದ ಮುನ್ನುಡಿಯಂತೆ ಟಿಪ್ಪುವಿನ ಬೆಂಗಳೂರು ಕೋಟೆ ಮೇಲೆ ಆಕ್ರಮಣ ಮಾಡಲಾಯಿತು. ಗ್ರಾಂಡ್ ಆರ್ವಿು ಬೆಂಗಳೂರಿನ ಕಾರ್ಯಾಚರಣೆಯಲ್ಲಿದ್ದಾಗ, ಹೈದರಾಬಾದಿನ ನಿಜಾಮನ ಸೈನ್ಯವೂ ದಕ್ಷಿಣದತ್ತ ಹೊರಟಿತು. ಅತ್ತ ಕಡೆಯಿಂದ ಮುಂಬಯಿಯ ಬ್ರಿಟಿಷ್ ಸೈನ್ಯ ಸಮುದ್ರ ಮಾರ್ಗವಾಗಿ ಜನರಲ್ ರಿಚರ್ಡ್ ಅಬ್ರೆಕ್ರೊಂಬಿ ನೇತೃತ್ವದಲ್ಲಿ ತಲಚ್ಚೇರಿಗೆ ಆಗಮಿಸಿ, ಅಲ್ಲಿ ಮಲಬಾರ್​ನಿಂದ ಸ್ಥಳೀಯ ಸೈನಿಕರನ್ನು, ನಾಯರ್​ಗಳ ಬಹುದೊಡ್ಡ ಪಡೆಯನ್ನು ಸೇರಿಸಿಕೊಂಡು ಮಡಿಕೇರಿ ಮಾರ್ಗವಾಗಿ ಮೈಸೂರಿನತ್ತ ಪಯಣಿಸತೊಡಗಿತು. ಅಲ್ಲಿ ಕೊಡಗಿನ ರಾಜನ ಸೈನ್ಯವೂ ಈ ಭಾರಿ ಸೈನ್ಯದೊಂದಿಗೆ ಸೇರಿಕೊಂಡಿತು.

ಹೆದರಿದ ‘ಮೈಸೂರಿನ ಹುಲಿ’, 1792ರ ಜನವರಿ 24ನೇ ತಾರೀಖಿಗೆ ಮದರಾಸಿನ ಬ್ರಿಟಿಷ್ ಗವರ್ನರ್​ಗೊಂದು ಪತ್ರ ಬರೆದು ರಾಜಿಗೆ ಮುಂದಾಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ 3ನೇ ಆಂಗ್ಲೋ-ಮೈಸೂರು ಯುದ್ಧ ವಾಸ್ತವದಲ್ಲಿ ಆರಂಭವಾಗುವ ಮೊದಲೇ ಹುಲಿ ಇಲಿಯಾಗಿ ಮುಗಿದು ಹೋಯಿತು. ಯುದ್ಧದ ನಿಯಮದಂತೆ ಸೋತವರು ಖರ್ಚನ್ನು ಭರಿಸಿಕೊಡಬೇಕಿತ್ತು. 1784ರಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದ ಕಾರಣಕ್ಕೆ ಬ್ರಿಟಿಷರು ಟಿಪ್ಪುವನ್ನು ನಂಬಲಾರದೆ ವೆಚ್ಚ ಭರಿಸುವವರೆಗೂ ಅವನ ಇಬ್ಬರು ಮಕ್ಕಳನ್ನು ಒತ್ತೆಯಾಗಿಟ್ಟುಕೊಂಡರು. ಕೊಟ್ಟ ನಂತರ ಅಷ್ಟೇ ಗೌರವಯುತವಾಗಿ ಬ್ರಿಟಿಷರು ವಾಪಸ್ ಕಳುಹಿಸಿದರು. ಸ್ವಾತಂತ್ರ್ಯ್ಕಾಗಿ ಆತ ಮಕ್ಕಳನ್ನು ಒತ್ತೆ ಇಡಲಿಲ್ಲ, ಬದಲಿಗೆ ಅಪನಂಬಿಕೆಗೆ ಒತ್ತೆಯಿಡಬೇಕಾಯಿತು. ಈ ಘಟನೆಯ ನಂತರ ಹಿಂದುಗಳ ವಿಶ್ವಾಸವನ್ನು ಗಳಿಸಿಕೊಂಡು ಮತ್ತೆ ಸೇನೆ ಕಟ್ಟಿ ಹೋರಾಡುವುದಕ್ಕಾಗಿ ಶೃಂಗೇರಿಗೆ ದಾನ, ನಂಜುಂಡನಿಗೆ ಆನೆ ದಾನದಂಥ ನಾಟಕವಾಡಿದ. ತೆರೆಮರೆಯಲ್ಲಿ ಟರ್ಕಿಯ ಖಲೀಫನಿಗೆ, ಆಫ್ಘಾನ್ ಮುಸ್ಲಿಂ ದೊರೆಗೆ ಪತ್ರ ಬರೆದು, ‘ಬನ್ನಿ ಭಾರತದ ಮೇಲೆ ದಾಳಿ ಮಾಡಿ ಇಸ್ಲಾಮೀಕರಣ ಮಾಡೋಣ’ವೆಂದ. ಫ್ರೆಂಚರಿಗೆ ಪತ್ರ ಬರೆದು ಭಾರತವನ್ನು ಅರ್ಧರ್ಧ ಹಂಚಿಕೊಳ್ಳೋಣವೆಂದು ಸಹಾಯಯಾಚಿಸಿದ. ಪಾಪದ ಕೊಡ ತುಂಬಿಬಂತು. 1799ರಲ್ಲಿ ಮತ್ತೆ ನಿಜಾಮ, ನವಾಬ, ನಾಯರ್ ಎಲ್ಲರೂ ಸೇರಿ ಟಿಪ್ಪುವಿನ ಮೇಲೆ ಆಕ್ರಮಣ ಮಾಡಿದರು. ಹುಲಿ ರಣರಂಗದಲ್ಲಿ ಹೋರಾಡುವ ಬದಲು ಶ್ರೀರಂಗಪಟ್ಟಣದ ಕೋಟೆಯೊಳಗೇ ಸತ್ತುಹೋಯಿತು. ಬ್ರಿಟಿಷರು ಟಿಪ್ಪುವಿನ ಮಗನ ಬದಲು ನ್ಯಾಯಯುತವಾಗಿ ಅಧಿಕಾರವನ್ನು ಯದುವಂಶಕ್ಕೆ ನೀಡಿ ದಿವಾನರನ್ನು ನೇಮಕ ಮಾಡಿದರು.

ಇಂಥ ವ್ಯಕ್ತಿಯನ್ನು ಯಾವ ಮಾನದಂಡ ಇಟ್ಟುಕೊಂಡು ಮೈಸೂರು ಹುಲಿ, ಸ್ವಾತಂತ್ರ್ಯ ಹೋರಾಟಗಾರ ಎನ್ನುತ್ತೀರಿ? ಒಬ್ಬ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲವೇ ಎಂದು ತಿಳಿಯಲು ಇತಿಹಾಸದ ಖಜಿಞಛ್ಝಿಜ್ಞಿಛಿ ನೋಡಬೇಕಾಗುತ್ತದೆ. ಹಾಗೆ ನೋಡಿದಾಗ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನ ಯಾವ ಹೋರಾಟವನ್ನೂ ಸ್ವಾತಂತ್ರ್ಯ ಹೋರಾಟ ಎನ್ನುವುದಕ್ಕಾಗುವುದಿಲ್ಲ. ಅಶೋಕ ಮಡಿದ ನಂತರ ಇಡೀ ದೇಶ ಒಬ್ಬ ಚಕ್ರಾಧಿಪತಿಯ ಆಡಳಿತಕ್ಕೆ ಒಳಪಟ್ಟ ಸಂದರ್ಭವೇ ಮತ್ತೆ ಒದಗಿ ಬಂದಿರಲಿಲ್ಲ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದವರೆಗೂ ಭಾರತ ಎಂಬ ಏಕಮಾತ್ರ ದೇಶದ ಪರಿಕಲ್ಪನೆಯೇ ಇರಲಿಲ್ಲ. ಎಲ್ಲರೂ ತಮ್ಮ ತಮ್ಮ ರಾಜ್ಯ, ಗಡಿ, ಆಡಳಿತ ಉಳಿಸಿಕೊಳ್ಳುವುದಕ್ಕಾಗಿ ಮತ್ತೊಬ್ಬರ ವಿರುದ್ಧ ಹೋರಾಡುತ್ತಿದ್ದರು. ಟಿಪ್ಪು ವಿರುದ್ಧ ಮರಾಠರು ಹೋರಾಡಿದಂತೆ ನವಾಬ, ನಾಯರ್​ಗಳೂ ಹೋರಾಡುತ್ತಿದ್ದರು. ಟಿಪ್ಪುಗೆ ಬ್ರಿಟಿಷರ ವಿರುದ್ಧ ಎಷ್ಟು ದ್ವೇಷವಿತ್ತೋ, ಮರಾಠರಿಗೆ ಹೈದರ್-ಟಿಪ್ಪು ಮೇಲೆ ಅಷ್ಟೇ ಕೋಪವಿತ್ತು. ಹೈದರಾಲಿ ಬಗೆದ ದ್ರೋಹದಿಂದ ರಾಜ್ಯ ಕಳೆದುಕೊಂಡಿದ್ದ ಒಡೆಯರ್ ವಂಶಸ್ಥರಿಗೂ ಈ ಅಪ್ಪ-ಮಗನನ್ನು ಕಂಡರಾಗುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು 1771ರಲ್ಲೇ ಹೈದರಾಲಿಗೆ ಆಹ್ವಾನ ಕೊಟ್ಟಿದ್ದ ಮರಾಠರಿಗೆ ಹೈದರಾಲಿ-ಟಿಪ್ಪುಗಿಂತಲೂ ಮೊದಲೇ ಬ್ರಿಟಿಷರ ಮೇಲೆ ವೈರತ್ವವಿತ್ತು. ಆದರೆ ಅದೇ ಮರಾಠರು ಮೂರು, ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಪರವಿದ್ದರು. ಅಷ್ಟು ಮಾತ್ರವಲ್ಲ, ಮೊಘಲರು ರಜಪೂತರ ವಿರುದ್ಧ, ಮರಾಠರು ಮೊಘಲರು ಹಾಗೂ ಬಹುಮನಿ ಸುಲ್ತಾನರ ವಿರುದ್ಧ ಹೋರಾಡುತ್ತಿದ್ದರು. ಎಲ್ಲರೂ ರಾಜ್ಯ ಕಳೆದುಕೊಂಡು ಬ್ರಿಟಿಷರು ಇಡೀ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವವರೆಗೂ ಒಬ್ಬ ‘ಕಾಮನ್ ಎನಿಮಿ’ ಎನ್ನುವವನೂ ಇರಲಿಲ್ಲ, ಸಾಂಘಿಕ ಹೋರಾಟದ ಕಾಲವೂ ಬಂದಿರಲಿಲ್ಲ. 1857ರ ಹೊತ್ತಿಗೆ ಎಲ್ಲ ರಾಜವಂಶಗಳು, ದೊರೆಗಳು, ಸುಲ್ತಾನರು, ನಿಜಾಮರು, ನವಾಬರು, ಪಾಳೇಗಾರರು ಸೋತು ಶರಣಾಗಿ ‘ಬ್ರಿಟಿಷ’ರೆಂಬ ಒಬ್ಬ ಸಾಮಾನ್ಯ ಶತ್ರು ಸೃಷ್ಟಿಯಾದ. ನಂತರ ಎಲ್ಲರೂ ಕೈಜೋಡಿಸಿ ಮೊದಲು ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ಮುಂದಾದರು. ಅಲ್ಲಿಂದ ಮುಂದಿನದ್ದನ್ನು ಮಾತ್ರ ಸ್ವಾತಂತ್ರ್ಯ ಹೋರಾಟ ಎನ್ನಬಹುದು. ಆ 1857ರ ಕದನವನ್ನೂ ಬ್ರಿಟಿಷರು ‘ಸಿಪಾಯಿ ದಂಗೆ’ ಎಂದು ಕರೆಯುವ ಮೂಲಕ ‘ದಂಗೆ’ಯ ರೂಪ ಕೊಡಲು ಪ್ರಯತ್ನಿಸಿದರು. ಖಛಿಟಟಢ Mಠಿಜ್ಞಿಢ ಅಥವಾ ಐಛಜಿಚ್ಞ Mಠಿಜ್ಞಿಢ ಎಂದೇ ಕರೆಯುತ್ತಿದ್ದರು ಮತ್ತು ಅದು ಹಾಗೆಯೇ ಉಲ್ಲೇಖಗೊಳ್ಳುತ್ತಿತ್ತು. ಕೊನೆಗೆ 1909ರಲ್ಲಿ ವಿನಾಯಕ ದಾಮೋದರ ಸಾವರ್ಕರ್ ತಾವು ಮರಾಠಿಯಲ್ಲಿ ಬರೆದ ‘ಖಜಛಿ ಏಜಿಠಠಿಟ್ಟಢ ಟ್ಛ ಠಿಜಛಿ ಗಚ್ಟ ಟ್ಛ ಐಛಛಿಟಛ್ಞಿಛಛ್ಞಿ್ಚ’ನಲ್ಲಿ 1857ರ ಕದನವನ್ನು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ (ಊಜ್ಟಿಠಠಿ ಗಚ್ಟ ಟ್ಛ ಐಛಛಿಟಛ್ಞಿಛಛ್ಞಿ್ಚ) ಎಂದು ವ್ಯಾಪಕವಾಗಿ ಬಳಸಿ ಪ್ರಚಲಿತಕ್ಕೆ ತಂದರು. ಅದಕ್ಕೂ ತಗಾದೆ ತೆಗೆದಿದ್ದ ಸಿಖ್ಖರು, 1845-46ರಲ್ಲಿ ನಡೆದಿದ್ದ ಮೊದಲ ಆಂಗ್ಲೋ-ಸಿಖ್ ಯುದ್ಧವನ್ನೇ ಊಜ್ಟಿಠಠಿ ಗಚ್ಟ ಟ್ಛ ಐಛಛಿಟಛ್ಞಿಛಛ್ಞಿ್ಚ ಎಂದು ಕರೆಯಬೇಕೆಂದು ಪಟ್ಟು ಹಿಡಿದಿದ್ದರು. ಇದೆಲ್ಲ ಏನನ್ನು ಸೂಚಿಸುತ್ತದೆ? 1857ರ ಸಿಪಾಯಿ ದಂಗೆಗಿಂತ ಮೊದಲಿದ್ದ್ಯಾವೂ ಸ್ವಾತಂತ್ರ್ಯ ಸಂಗ್ರಾಮಗಳಾಗಿರಲಿಲ್ಲ. ಹಾಗಾಗಿ ಯಾರನ್ನೂ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದಕ್ಕಾಗುವುದಿಲ್ಲ. ಅವು ತಮ್ಮ ರಾಜ್ಯ, ಭಾಗಗಳನ್ನು ಉಳಿಸಿಕೊಳ್ಳಲು ನಡೆಸುತ್ತಿದ್ದ ಹೋರಾಟಗಳಷ್ಟೇ ಆಗಿದ್ದವು. ಇಂತಹ ಸರಳ ಸತ್ಯವನ್ನೂ ಅರಿಯದ ತಿಳಿಗೇಡಿಗಳನ್ನು ಏನೆಂದು ಕರೆಯಬೇಕು? 1782ರಿಂದ 99ರವರೆಗೂ ಆಡಳಿತ ನಡೆಸಿದ, ಆ ಅವಧಿಯಲ್ಲಿ ತನ್ನ ರಾಜ್ಯ ಉಳಿಸಿಕೊಳ್ಳುವುದಕ್ಕಾಗಿ ಹಾಗೂ ಅನ್ಯರದ್ದನ್ನು ಕಬಳಿಸುವುದಕ್ಕಾಗಿ ಮರಾಠರು, ಕೊಡವರು, ಮಲಬಾರಿನ ರಾಜರು, ಕರ್ನಾಟಕದ ದೊರೆಗಳ ಜತೆಗೆ ಬ್ರಿಟಿಷರ ವಿರುದ್ಧವೂ ಹೋರಾಡಿದ ಟಿಪ್ಪು ಹೇಗೆ ‘ಸ್ವಾತಂತ್ರ್ಯ ಹೋರಾಟ’ಗಾರನಾಗಿ ಸೃಷ್ಟಿಯಾಗಿ ಬಿಡುತ್ತಾನೆ?! ಒಂದೇ ದೇಶ, ಒಂದೇ ವ್ಯವಸ್ಥೆ ಎನ್ನುವ ಕಲ್ಪನೆಗಳೇ ಇಲ್ಲದ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟ ಅನ್ನುವುದಾದರೂ ಹೇಗೆ ನಡೆಯಲು ಸಾಧ್ಯ? ಹಾಗಾದರೆ 1757ರಲ್ಲಿ ನಡೆದ ಪ್ಲಾಸಿ ಕದನದಲ್ಲಿ ಫ್ರೆಂಚರ ಸಹಾಯ ಪಡೆದೇ ಬ್ರಿಟಿಷರ ವಿರುದ್ಧ ಹೋರಾಡಿದ ಸಿರಾಜುದ್ದೀನ್ ದೌಲಾನನ್ನೂ ಏಕೆ ಸ್ವಾತಂತ್ರ್ಯ ಹೋರಾಟಗಾರ ಎನ್ನಬಾರದು? 1782ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಫ್ರೆಂಚರ ಸಹಾಯ ಪಡೆದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಾಗುವುದಾದರೆ, ಅವನಿಗಿಂತ 25 ವರ್ಷ ಮೊದಲೇ ಬ್ರಿಟಿಷರನ್ನು ಸೋಲಿಸಲು ಫ್ರೆಂಚರ ಜತೆ ಕೈಜೋಡಿಸಿದ್ದ ಸಿರಾಜುದ್ದೀನನೂ ಸ್ವಾತಂತ್ರ್ಯ ಹೋರಾಟಗಾರನೇ ಆಗಬೇಕಲ್ಲವೆ?

ಒಂದು ವೇಳೆ, ಬ್ರಿಟಿಷರು ಇಡೀ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳದಿದ್ದರೆ, ನಮ್ಮನ್ನು ದಾಸ್ಯಕ್ಕೆ ತಳ್ಳುವ ಮೂಲಕ ಎಲ್ಲರ ಕಾಮನ್ ಎನಿಮಿ ಆಗದಿದ್ದರೆ ಅಥವಾ ಬ್ರಿಟಿಷರು ಭಾರತಕ್ಕೆ ಬರದೇ ಹೋಗಿದ್ದರೆ ನಾವು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೆವು? ಬ್ರಿಟಿಷರು ಬರುವುದಕ್ಕಿಂತ ಮೊದಲು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದೆವು? ಇದೇ ನಿಜಾಮ, ನವಾಬ, ಸುಲ್ತಾನ, ಅಹ್ಮದ್, ಮೊಹ್ಮದ್​ಗಳ ವಿರುದ್ಧವೇ ತಾನೇ? ಹಾಗಿರುವಾಗ ಬ್ರಿಟಿಷರಿಗೂ ನಿಜಾಮ, ನವಾಬ ಹಾಗೂ ಸುಲ್ತಾನರಿಗೂ

ಏನು ವ್ಯತ್ಯಾಸ? ಭಾರತದ ಮೇಲೆ ತಮ್ಮ ತಮ್ಮ ನಿಯಂತ್ರಣ ಸಾಧಿಸಲು ಇವರು ಪರಸ್ಪರ ಹೊಡೆದಾಡಿದ್ದನ್ನು ಯಾವ ಮಾನದಂಡದಿಂದ ಸ್ವಾತಂತ್ರ್ಯ ಹೋರಾಟ ಎನ್ನಲು ಸಾಧ್ಯ? ಬ್ರಿಟಿಷರಿಗಿಂತಲೂ ದುರುಳನಾಗಿದ್ದ ಟಿಪ್ಪು ಅದ್ಯಾವ ದೃಷ್ಟಿಯಲ್ಲಿ ಸ್ವಾತಂತ್ರ್ಯ ಹೋರಾಟ ಗಾರನಾಗಿಬಿಟ್ಟ? ಒಂದು ವೇಳೆ, ಟಿಪ್ಪುವಿನ ಕ್ರೌರ್ಯಕ್ಕೆ ತುತ್ತಾಗಿದ್ದು ಹಿಂದು, ಕ್ರಿಶ್ಚಿಯನ್, ಕೊಡವರ ಬದಲು ಕುರುಬರಾಗಿದ್ದರೆ ಸಿದ್ದರಾಮಯ್ಯನವರು ಜಯಂತಿ ಮಾಡಲು ಹೊರಡುತ್ತಿದ್ದರೆ? ದೇವಟ್ಟಿ ಪರಂಬುವಿನಲ್ಲಿ ಕಗ್ಗೊಲೆಯಾದ ಒಂದು ಲಕ್ಷ ಕೊಡವರ ನೋವು ನಿಮಗೆ ಅರ್ಥವಾಗುವುದಿಲ್ಲ ಬಿಡಿ. ಆದರೆ, ನಿಮ್ಮ ಮಾತು ಕೇಳಿ ಬಹು ವೀರಾವೇಶದಿಂದ ಟಿಪ್ಪು ಜಯಂತಿ ಆಚರಿಸಲು ಹೊರಟವರಿಗೆ ಒಂದು ಪ್ರಶ್ನೆ; ನಿಮ್ಮ ಧರ್ಮದಲ್ಲಿ ವ್ಯಕ್ತಿ ಪೂಜೆ, ಮೂರ್ತಿ ಪೂಜೆ ಹಾಗೂ ಭಾವಚಿತ್ರದ ಆರಾಧನೆ ನಿಷಿದ್ಧ.ಟಿಪ್ಪುವಿನ ವಿಷಯದಲ್ಲಿ ಇದನ್ನೆಲ್ಲ ಗಾಳಿಗೆ ತೂರಲು ಹೊರಟಿರುವುದರ ಹಿಂದಿನ ಮರ್ಮವೇನು?

 

tippu2

Comments are closed.