Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಷ್ಟಕ್ಕೂ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಏನು?

ಇಷ್ಟಕ್ಕೂ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಏನು?

ಇಷ್ಟಕ್ಕೂ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಏನು?

ಮಂಗಳೂರು, ಕೊಡಗು ಮತ್ತು ಮಲಬಾರ್ ಪ್ರದೇಶಗಳಲ್ಲಿ ಆತ ಎಸಗಿದ ದೌರ್ಜನ್ಯಗಳು  ಅಮಾನವೀಯವಾಗಿದ್ದವು. ತಾನು ದಾಳಿ ನಡೆಸಿ ವಶಪಡಿಸಿಕೊಂಡ ಪ್ರದೇಶಗಳ ನಾಗರಿಕರನ್ನು ಆತ  ಮತ್ತು ಆತನ ಸೈನಿಕರು ನಡೆಸಿಕೊಳ್ಳುತ್ತಿದ್ದ ರೀತಿ ಭಯಾನಕ.

ಟಿಪ್ಪು ಸುಲ್ತಾನನನ್ನು ಮಹಾನ್ ಹೀರೋ, ಪರಾಕ್ರಮಶಾಲಿ, ಮೈಸೂರಿನ ಹುಲಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಚಿತ್ರಿಸುವ ಪ್ರಯತ್ನ ಹಲವು ದಶಕಗಳಿಂದಲೂ ನಡೆಯುತ್ತಲೇ ಬಂದಿದೆ. ಭಗವಾನ್ ಎಸ್. ಗಿದ್ವಾನಿ ಬರೆದಿದ್ದ ‘ದಿ ಸೋರ್ಡ್ ಆಫ್  ಟಿಪ್ಪು ಸುಲ್ತಾನ್’ ಎಂಬ ಅತಿರಂಜಕ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು 1990ರಲ್ಲಿ ಸಂಜಯ್ ಖಾನ್ ದೂರದರ್ಶನಕ್ಕೆ ಧಾರಾವಾಹಿಯನ್ನು ನಿರ್ಮಿಸಲು ಹೊರಟಾಗ ರವಿ ವರ್ಮಾ ಎಂಬವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಸಂಜಯ್ ಖಾನ್ ಸೃಷ್ಟಿಸುತ್ತಿರುವ ಧಾರಾವಾಹಿ ಟಿಪ್ಪುವಿನ ನಿಜರೂಪವನ್ನು ತೋರಿಸುವ ಬದಲು ಹೀರೋನ ರೂಪವನ್ನು ಕೊಡಲಾಗುತ್ತಿದೆ. ನಿಜಜೀವನದಲ್ಲಿ ಆತನೊಬ್ಬ ಕ್ರೂರಿ ಧರ್ಮಾಂಧನಾಗಿದ್ದ ಎಂದು ಕೋರ್ಟ್‌ನಲ್ಲಿ ಆಧಾರ ಸಮೇತ ವಾದಿಸಲಾಯಿತು. ಟಿಪ್ಪುವಿನಿಂದ ಇನ್ನಿಲ್ಲದ ದೌರ್ಜನ್ಯಕ್ಕೊಳಗಾಗಿದ್ದ ಕೇರಳದ ಹಿಂದುಗಳು ಮತ್ತು ಕರಾವಳಿಯ ಕ್ರಿಶ್ಚಿಯನ್ನರೂ ಧ್ವನಿಯೆತ್ತಿದರು. ಸುಪ್ರೀಂಕೋರ್ಟ್‌ಗೂ ಅಹುದಹುದೆನಿಸಿತು.

‘ಇದೊಂದು ಕಾಲ್ಪನಿಕ ಧಾರಾವಾಹಿ. ಇದಕ್ಕೂ ಹಾಗೂ ಟಿಪ್ಪುವಿನ ಜೀವನಕ್ಕಾಗಲಿ, ಆತನ ಆಡಳಿತಕ್ಕಾಗಲಿ ಯಾವುದೇ ಸಂಬಂಧವಿಲ್ಲ’ ಎಂಬ ಸೂಚನೆಯನ್ನು ಧಾರಾವಾಹಿಯ ಪ್ರತಿ ಎಪಿಸೋಡ್‌ನ ಪ್ರಾರಂಭ ಹಾಗೂ ಕೊನೆಯಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ಸೂಚಿಸಿ, ಅದಕ್ಕೆ ನಿರ್ಮಾಪಕ ಸಂಜಯ್ ಖಾನ್ ಒಪ್ಪಿಕೊಂಡ ನಂತರ ಪ್ರಸಾರಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಏಕೆಂದರೆ…. ಧಾರಾವಾಹಿಯ ತೆರೆಯ ಮೇಲೆ ಬರುವ ಟಿಪ್ಪು ಸುಲ್ತಾನನೇ ನಿಜವಾದ ವ್ಯಕ್ತಿಯಾಗಿದ್ದ ಎಂದು ಜನ ತಪ್ಪಾಗಿ ಭಾವಿಸಬಾರದೆಂದು!

ಇಷ್ಟಾಗಿಯೂ ನಮ್ಮ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ನಾಡಿದ್ದು ನವೆಂಬರ್ 10ರಂದು ಟಿಪ್ಪು ಜಯಂತಿಯನ್ನು ಮಾಡಲು ಹೊರಟಿದ್ದಾರೆ! ನಾವು ಇತ್ತೀಚೆಗೆ ವಾಲ್ಮೀಕಿ ಜಯಂತಿ ಆಚರಿಸಿದೆವು, ವರ್ಷಕ್ಕೊಮ್ಮೆ ಗಾಂಽ ಜಯಂತಿ, ವಿವೇಕ ಜಯಂತಿ, ಬುದ್ಧ ಜಯಂತಿ, ಬಸವ ಜಯಂತಿ, ಕನಕ ಜಯಂತಿ, ಕೆಂಪೇಗೌಡ ಜಯಂತಿ, ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತೇವೆ. ಇಂಥ ಒಂದೊಂದು ಜಯಂತಿಗಳ ಹಿಂದೆಯೂ ಒಂದೊಂದು ಮಹಾನ್ ಚೇತನಗಳಿವೆ, ಒಂದು ಸಾತ್ವಿಕ ಕಾರಣವಿದೆ, ಒಂದು ಮೌಲ್ಯ, ಭಕುತಿ, ಶ್ರದ್ಧೆಯಿದೆ, ಅವರಿಂದ ಇಡೀ ಸಮಾಜ ಉಪಕೃತವಾಗಿರುವ ಹಿನ್ನೆಲೆ ಇದೆ. ಆದರೆ ಮೈಸೂರಿನ ಮಗನಾಗಿ, ಕುಡಿಯುವ ನೀರು, ತಿನ್ನುವ ಅನ್ನ, ಸೇವಿಸುವ ಗಾಳಿಯಲ್ಲೂ ಯದುವಂಶದ ಋಣವನ್ನಿಟ್ಟುಕೊಂಡಿದ್ದರೂ ನಾಲ್ವಡಿ ಕೃಷ್ಣರಾಜರ ಜಯಂತಿಯನ್ನು ನಾಡಿನಾದ್ಯಂತ ಮಾಡಬೇಕು ಎಂದೆನಿಸದೇ ಯದುವಂಶಕ್ಕೆ ದ್ರೋಹ ಬಗೆದು ಆಡಳಿತ ಕಿತ್ತುಕೊಂಡ ಹೈದರನ ಮಗನ ಜಯಂತಿ ಮಾಡಬೇಕೆನಿಸಿತಲ್ಲಾ ಸಿದ್ದರಾಮಯ್ಯನವರೇ, ನಿಮ್ಮ ಭಾವ, ಭಕುತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ! ಒಬ್ಬ ಕಾನೂನು ಪದವೀಧರನಾಗಿ, ಸುಪ್ರೀಂಕೋರ್ಟೇ ಪರೋಕ್ಷವಾಗಿ ಕ್ರೂರಿ ಎಂದು ಒಪ್ಪಿಕೊಂಡಿರುವ ವ್ಯಕ್ತಿಯ ಜಯಂತಿ ಮಾಡಲು ಮುಂದಾಗಿದ್ದೀರಲ್ಲಾ ನಿಮ್ಮ ಆತ್ಮಸಾಕ್ಷಿಗೆ ಏನಾಗಿದೆ? ನೀವು ಜಯಂತಿ ಮಾಡಲು ಹೊರಟಿರುವ ಟಿಪ್ಪುವಿನ ನಿಜಸ್ವರೂಪವಾದರೂ ಏನು? ಲೆವಿನ್ ಬಿ. ಬೌರಿಂಗ್‌ನ ‘ಹೈದರ್ ಅಲಿ ಆಂಡ್ ಟಿಪ್ಪು ಸುಲ್ತಾನ್: ಆಂಡ್ ದಿ ಸ್ಟ್ರಗಲ್ ವಿತ್ ದಿ ಮುಸಲ್ಮಾನ್ ಪವರ‍್ಸ್ ಆಫ್  ದಿ ಸೌತ್’, ಜಿ.ಎ. ಹೆನ್ರಿಯ ‘ದಿ ಟೈಗರ್ ಆಫ್  ಮೈಸೂರ್: ದಿ ಸ್ಟೋರಿ ಆಫ್  ದಿ ವಾರ್ ವಿತ್ ಟಿಪ್ಪು ಸುಲ್ತಾನ್’, ಮೇಜರ್ ಡಿರೋಮ್ ಬರೆದ ಐತಿಹಾಸಿಕ ದಾಖಲೆಗಳಾದ ‘ಎ ನೆರೇಟಿವ್ ಆಫ್  ದಿ ಕ್ಯಾಂಪೇನ್ ಇನ್ ಇಂಡಿಯಾ ವಿಚ್ ಟರ್ಮಿನೇಟೇಡ್ ದಿ ವಾರ್ ವಿತ್ ಟಿಪ್ಪು ಸುಲ್ತಾನ್ ಇನ್ 1792’, ವಿಲಿಯಂ ಲೊಗಾನ್‌ನ ‘ಮಲಬಾರ್ ಮ್ಯಾನ್ಯುವಲ್’, ಲೂಯಿಸ್ ರೈಸ್‌ನ ‘ದಿ ಹಿಸ್ಟರಿ ಆಫ್  ಮೈಸೂರ್ ಆಂಡ್ ಕೂರ್ಗ್’ ಅಥವಾ ಕೊಡವರ ನೋವನ್ನು ಸಾರುವ, ಟಿಪ್ಪುವಿನ ಕ್ರೌರ್ಯ ಹಾಗೂ ಮತಾಂಧತೆಯನ್ನು ಬಿಂಬಿಸುವ ಐ.ಎಂ. ಮುತ್ತಣ್ಣ ಅವರ ‘ಟಿಪ್ಪು ಎಕ್ಸ್‌ರೇಡ್’ ಇವುಗಳಲ್ಲಿ ಒಂದನ್ನಾದರೂ ಓದಿದ್ದರೆ ನೀವೆಂಥಾ ಸಮಾಜದ್ರೋಹದ ಕೆಲಸಕ್ಕೆ ಕೈಹಾಕುತ್ತಿದ್ದೀರಿ ಎಂಬುದರ ಕನಿಷ್ಠ ಅರಿವಾದರೂ ನಿಮಗಿರುತ್ತಿತ್ತು ಮುಖ್ಯಮಂತ್ರಿಯವರೇ.

ಇಷ್ಟಕ್ಕೂ ನಿಮ್ಮ ಹೀರೋ ಟಿಪ್ಪು ಮಾಡಿದ ಘನ ಕಾರ್ಯಗಳಾದರೂ ಯಾವುವು? ಕರ್ನಾಟಕದ ಸುಪುತ್ರ ಎಂದು ಹೊಗಳಲು ಆತ ಕನ್ನಡಕ್ಕೆ ಕೊಟ್ಟಿರುವ ಕೊಡುಗೆ ಯಾವುದು? ಪರ್ಷಿಯನ್ ಭಾಷೆಯ ಹೇರಿಕೆಯೇ? ಅದನ್ನು ಡಾ. ಭೈರಪ್ಪನವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ. ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು, ಕನ್ನಡದಲ್ಲಿ ಓದಿ ಬರೆಯದೆ ಇರುವುದು, ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ -ರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ ಎನ್ನತ್ತಾರೆ ಭೈರಪ್ಪ. ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಬದಲಿಸಿ -ರ್ಸಿ ಭಾಷೆಯನ್ನು ತಂದವರಾರು? ಮುಖ್ಯಮಂತ್ರಿಯವರೇ, ನಿಮ್ಮ ಸ್ನೇಹಿತರಾದ ಶ್ರೀನಿವಾಸ ಪ್ರಸಾದರ ಕಂದಾಯ ಇಲಾಖೆಯಲ್ಲಿ ಹಾಸುಹೊಕ್ಕಾಗಿರುವ ಖಾತೆ, ಖಿರ್ದಿ, ಪಹಣಿ, ಖಾನೀಸುಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮಲ್ದಾರ, ಶಿರಸ್ತೇದಾರ ಈ ಪದಗಳು ಎಲ್ಲಿಂದ ಬಂದವು? ಆಡಳಿತದ ಪ್ರತಿಯೊಂದು ಶಬ್ದವೂ -ರ್ಸಿಯಾದದ್ದು ಟಿಪ್ಪುವಿನ ಕಾಲದಲ್ಲಿಯೇ ಅಲ್ಲವೆ?

ಇಸ್ಲಾಂ ಧರ್ಮದೆಡೆಗೆ ತೀವ್ರ ಒಲವು ಹೊಂದಿದ್ದ ಟಿಪ್ಪು ತನ್ನ ರಾಜ್ಯವನ್ನು ‘ಖುದಾದಾದ್ ಸರ್ಕಾರ್’ (ದೇವರು ದಯಪಾಲಿಸಿದ ರಾಜ್ಯ) ಅಂತ ಕರೆದುಕೊಳ್ಳ ಲಾರಂಭಿಸಿದ. ಇಸ್ಲಾಂ ಧರ್ಮದ ಅನುಸಾರವಾಗಿಯೇ ತನ್ನ ರಾಜ್ಯದ ಆಡಳಿತ ನಡೆಯಬೇಕೆಂಬ ಉತ್ಕಟ ಇಚ್ಛೆಯಿತ್ತು. ಅದಕ್ಕನುಸಾರವಾಗಿಯೇ ಆತ ತನ್ನ ವಶವಿದ್ದ ಪ್ರದೇಶಗಳ ಹೆಸರನ್ನು ಬದಲಿಸುವ ಕೆಲಸಕ್ಕೆ ಕೈ ಹಾಕಿದ. ಕರಾವಳಿ ಪ್ರದೇಶಕ್ಕೆ ಆತ ‘ಯಾಮ್‌ಸುಬಾ’ ಅಂತ ಹೆಸರಿಟ್ಟ. ದಟ್ಟಕಾಡುಗಳಿಂದ ಕೂಡಿದ ಮಲೆನಾಡು ಪ್ರದೇಶಕ್ಕೆ ‘ತರನ್‌ಸುಬಾ’ ಅಂತ ಕರೆದ. ಬಯಲುಸೀಮೆ ‘ಘಬ್ರಾ ಸುಬಾ’ ಆಯಿತು. ಸರ್ಕಾರಿ ದಾಖಲೆ, ಕಡತಗಳಲ್ಲಿ, ಆಡಳಿತದ ವ್ಯವಹಾರಗಳಲ್ಲಿ ಇವೇ ಹೆಸರನ್ನು ಬಳಕೆಗೆ ತಂದ. ಇದೇ ರೀತಿ ಊರುಗಳ ಹೆಸರನ್ನೂ ಬದಲಿಸಿದ. ತಾನು ಹುಟ್ಟಿದ ಊರು ದೇವನಹಳ್ಳಿಯನ್ನು ‘ಯುಸ-ಬಾದ್’ ಎಂದು ಬದಲಿಸಿದ. ಅಂದರೆ ಇಸ್ಲಾಂ ಧರ್ಮದ ಅನುಸಾರವಾಗಿ ಹಿಂದಿನ ಪ್ರವಾದಿ ಈಸಾಯಿ (ಏಸುಕ್ರಿಸ್ತ) ತಂದೆ ಯೂಸು- (ಜೋಸೆಫ್)ರವರ ವಾಸಸ್ಥಾನವೆಂದು ಅರ್ಥ. ಅದೇ ರೀತಿ ಚಿತ್ರದುರ್ಗವನ್ನು ‘ಫಾರೂಕ್‌ಯಾಬ್ ಹಿಸಾರ್’ (ಶುಭಕರವಾಗಿ ವಶಪಡಿಸಿ ಕೊಳ್ಳಲಾದ ಕೋಟೆ) ಅಂತ ಬದಲಿಸಿದ. ‘ಗುತ್ತಿ’ಗೆ ಟಿಪ್ಪು ಇತ್ತ ಹೆಸರು ‘ಫಝ್ ಹಿಸಾರ್’, ಹಾಗೆಯೇ ಸದಾಶಿವಗಢಕ್ಕೆ ‘ಮಜೀದಾಬಾದ್’, ಮಂಗಳೂರಿಗೆ ‘ಜಮಾಲಾಬಾದ್’ ಮುಂತಾದ ಹೆಸರುಗಳನ್ನಿಟ್ಟ. ಮೈಸೂರು ನಝರಾಬಾದ್ ಆಯಿತು. ಮಡಿಕೇರಿಗೆ ಟಿಪ್ಪು ಇಟ್ಟ ಹೆಸರು ಜಾ-ರಾಬಾದ್, ಸಕಲೇಶಪುರ ಮಂಜ್ರಾಬಾದ್ ಆಯಿತು.

ದೂರವನ್ನು ಆಳತೆ ಮಾಡುವ ವಿಧಾನದಲ್ಲಿಯೂ ಟಿಪ್ಪು ಧರ್ಮವನ್ನು ತಂದ. ಆ ಕಾಲದಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ ‘ಕೋಸ್’ ಎಂಬ ಅಳತೆ ಸಾಮಾನ್ಯ ಇಂಗ್ಲಿಷ್ ಕ್ರಮದಲ್ಲಿ ಎರಡು ಮೈಲಿಯಷ್ಟು ದೂರವಾಗುತ್ತಿತ್ತು. ಟಿಪ್ಪು ಈ ಕೋಸ್‌ಗಳ ಅಳತೆಯನ್ನು ಬದಲಿಸಿದ. ಕೈಯ ಒಂದು ಹೆಬ್ಬೆರಳು ಎಷ್ಟು ಅಗಲವಾಗಿರುತ್ತದೋ ಅದಕ್ಕೆ ಸರಿಯಾಗಿ ಹೊಸ ಅಳತೆ ನಿಗದಿಯಾಯಿತು. 24 ಹೆಬ್ಬೆರಳುಗಳ ಅಗಲ ಎಷ್ಟಿರುತ್ತದೋ ಅದರ ಎರಡರಷ್ಟು ಉದ್ದ ಒಂದು ಘಟಕವಾಯಿತು. ಇಸ್ಲಾಂ ಧಾರ್ಮಿಕ ‘ಕಲ್ಮಾಹ್’ದಲ್ಲಿ ಇಪ್ಪತ್ನಾಲ್ಕು ಅಕ್ಷರಗಳಿವೆ ಎಂಬುದೇ ಇದಕ್ಕೆ ಆಧಾರ. ಇನ್ನು ತನ್ನದೇ ಆದ ನಾಣ್ಯಗಳನ್ನು ಚಲಾವಣೆಗೆ ತಂದ ಟಿಪ್ಪು ಅವುಗಳಿಗೆ ಮುಸ್ಲಿಂ ಸಂತರ ಹೆಸರನ್ನಿಟ್ಟ. ತಾಮ್ರದ ನಾಣ್ಯಗಳಿಗೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಯಲ್ಲಿ ನಕ್ಷತ್ರಗಳ ಹೆಸರಿಟ್ಟ. ಆಗಿನ ಕಾಲದಲ್ಲಿ ಚಲಾವಣೆಯಲ್ಲಿದ್ದ ‘ಪಗೋಡ’ ಎಂಬ ಹೆಸರಿನ ನಾಣ್ಯಗಳಿಗೆ ‘ಅಹ್ಮದಿ’ ಅಂತ ಹೆಸರಿಟ್ಟ. ಇದು ಪ್ರವಾದಿಯವರ ಅನೇಕ ಹೆಸರುಗಳಲ್ಲೊಂದು. ಎರಡು ಪಗೋಡಾ ಬೆಲೆ ಇರುವ ನಾಣ್ಯಕ್ಕೆ ‘ಸಾದಿಕ್’ ಎಂಬ ಹೆಸರಿಟ್ಟ. ಇದು ಮೊದಲ ಖಲೀ-ರ ಹೆಸರು. ಒಂದು ಪೈಸೆ ನಾಣ್ಯಕ್ಕೆ ‘ಝೆಹ್ರಾ’, ಎರಡು ಪೈಸೆ ನಾಣ್ಯಕ್ಕೆ ‘ಔತ್ಮಾನೀ’… ಇತ್ಯಾದಿ ಹೊಸ ಹೆಸರುಗಳನ್ನಿಡುತ್ತಾ ಹೋದ. ಕೆಲವೊಮ್ಮೆ ತಾನೇ ಇಟ್ಟ ಹೆಸರುಗಳನ್ನು ಮತ್ತೆ ಬದಲಾಯಿಸಿ ಹೊಸ ಹೆಸರಿಟ್ಟ. ‘-ರೂಕಿ’, ‘ಜಾಫಾರ್ ’ ಇತ್ಯಾದಿ ಹೆಸರಿನ ನಾಣ್ಯಗಳೂ ಇದ್ದವು. ‘ಹೈದರಿ’ ಎಂಬ ಹೆಸರಿನ ರೂಪಾಯಿ ಇತ್ತು. ‘ಇಮಾಮಿ’ ಎಂಬ ನಾಣ್ಯವೂ ಇತ್ತು. ಇಂಥ ಸಾವಿರಾರು ಉದಾಹರಣೆ ಕೊಡಬಹುದು. ಇಂಥ ವ್ಯಕ್ತಿಯನ್ನು ಕನ್ನಡದ ಕುವರ ಎನ್ನುತ್ತಾರಲ್ಲಾ ಇವರ ದುರ್ಬುದ್ಧಿಗೆ ಏನನ್ನಬೇಕು ಹೇಳಿ?

ಇನ್ನು ಟಿಪ್ಪುವನ್ನು ಮೈಸೂರಿನ ಹುಲಿ ಎಂದು ಕರೆಯುವ ಮೊದಲು ಆತ ಗೆದ್ದ ಇತಿಹಾಸ ಪ್ರಸಿದ್ಧ ಒಂದು ಯುದ್ಧವನ್ನು ದಯವಿಟ್ಟು ಉದಾಹರಿಸಿ? ಕ್ರೌರ್ಯಕ್ಕೂ ಶೌರ್ಯಕ್ಕೂ ಬಹಳ ವ್ಯತ್ಯಾಸವಿದೆ. ಟಿಪ್ಪು ಶೌರ್ಯ ತೋರಿದ ಯುದ್ಧ ಯಾವುದಿದೆ ಹೇಳಿ? ಟಿಪ್ಪು ಮೈಸೂರಿನ ಹುಲಿಯಾಗಿದ್ದು ಹೇಗೆ ಗೊತ್ತೆ? ಇದಕ್ಕೊಂದು ಕುತೂಹಲಕಾರಿ ಹಿನ್ನೆಲೆಯೂ ಇದೆ. ಆತನ ತಂದೆಯ ಹೆಸರು ಹೈದರ್. ಅಂದರೆ ಅರೇಬಿಕ್‌ನಲ್ಲಿ ಸಿಂಹ. ಆದರೆ ದಕ್ಷಿಣ ಭಾರತದಲ್ಲಿ ಸಿಂಹಗಳೇ ಇರಲಿಲ್ಲ. ಬದಲಾಗಿ ಹುಲಿಗಳಿದ್ದವು. ಅದರಲ್ಲೂ ಕರ್ನಾಟಕದಲ್ಲಂತೂ ಹುಲಿಗಳು ಅಽಕ. ಈ ಕಾರಣಕ್ಕಾಗಿ ಟಿಪ್ಪು ಹುಲಿಯನ್ನು ತನ್ನ ಚಿಹ್ನೆಯಾಗಿ ಆರಿಸಿಕೊಂಡ. ತನ್ನ ಆಡಳಿತಕ್ಕೂ ಇದೇ ಲಾಂಛನವಾಗಿ ಬಳಸಿಕೊಂಡ. ಇನ್ನೂರು ವರ್ಷ ಕುರಿಯಂತೆ ಬದುಕುವುದಕ್ಕಿಂತ ಎರಡು ದಿನ ಹುಲಿಯಂತೆ ಬದುಕುವುದು ಒಳ್ಳೆಯದೆಂಬುದು ಆಗಾಗ ಆತ ಹೇಳುತ್ತಿದ್ದ ಮಾತು. ಹುಲಿಯನ್ನೇ ಲಾಂಛನ ಮಾಡಿಕೊಂಡರೆ, ಅದು ತನ್ನ ವಿರೋಽಗಳಲ್ಲೂ ಒಂದು ರೀತಿಯ ಭಯ ಹುಟ್ಟಿಸಬಹುದು ಅಂತಲೂ ಆತ ಭಾವಿಸಿದ. ತನ್ನ ಸೈನಿಕರ ಸಮವಸಗಳ ಮೇಲೂ ಹುಲಿಯ ಪಟ್ಟೆಗಳನ್ನು ಕಸೂತಿ ಮಾಡಿಸಿದ. ತನ್ನ ಬಂದೂಕು, ಖಡ್ಗ ಮುಂತಾದವುಗಳ ಮೇಲೂ ಹುಲಿಯ ಚಿಹ್ನೆ ಬಳಸಿದ. ಹಲವಾರು ಹುಲಿಗಳನ್ನು ತನ್ನ ಅರಮನೆಯಲ್ಲಿ ಸಾಕಿದ. ತನ್ನ ಆಯುಧಗಳಲ್ಲಿ ‘ಅಸಾದ್ ಉಲ್ಲಾ ಅಲ್ ಘಾಲಿಬ್’ ಅಂತ ಬರೆಸಿದ. ತನ್ನ ಸಿಂಹಾಸನದಲ್ಲೂ ಜೀವಂತ ಹುಲಿಯ ಮುಖದಷ್ಟೆ ಗಾತ್ರದ ಹುಲಿಯ ಮುಖವನ್ನು ಬಂಗಾರದಲ್ಲಿ ಎರಕ ಹೊಯ್ಯಿಸಿ ಅಲಂಕರಿಸಿದ. ಹೀಗೆ ಹುಲಿಯನ್ನು ಸೋಲಿಸದೇ ಅಥವಾ ಹುಲಿಯಂತೆ ರಣರಂಗದಲ್ಲಿ ಕಾದಾಡದೇ ಟಿಪ್ಪು ಮೈಸೂರಿನ ಹುಲಿಯಾಗಿ ಬಿಟ್ಟ!

ಈಗ ಸ್ವಲ್ಪ ಇತಿಹಾಸಕ್ಕೆ ಹೊರಳೋಣ. ‘ಸುಲ್ತಾನ್’ ಅಥವಾ ‘ರಾಜ’, ‘ದೊರೆ’ ಎಂಬ ಅರ್ಥದ ಈ ಪದ ಟಿಪ್ಪು ತನ್ನ ತಂದೆ ಹೈದರಾಲಿಯ ಮರಣಾನಂತರ ಅಽಕಾರವೇರಿದ ಮೇಲೆ ಪಡೆದದ್ದಾಗಿರಲಿಲ್ಲ. ಅದು ಅವನ ಖಾಲಿ ಹೆಸರಾಗಿತ್ತು. ಹೈದರಾಲಿ ಬದುಕಿರುವಾಗಲೇ ಆತ ಟಿಪ್ಪು ‘ಸುಲ್ತಾನ್’ ಆಗಿದ್ದ. 1782ರಲ್ಲಿ ಚಿತ್ತೂರಿನಲ್ಲಿ ಸೇನಾ ಶಿಬಿರದಲ್ಲೇ, ಯುದ್ಧದ ಮಧ್ಯೆಯೇ ಹೈದರಾಲಿ ಏಕಾಏಕಿ ಸತ್ತಿದ್ದರಿಂದ, ಅನಿವಾರ್ಯವಾಗಿ ಟಿಪ್ಪು ಸೇನೆಯ ನಾಯಕತ್ವ ವಹಿಸಿದ. ಮುಂದೆ ಶುರುವಾಯಿತು ಅಂಧಾ ದರ್ಬಾರ್. ಮಂಗಳೂರು, ಕೊಡಗು ಮತ್ತು ಮಲಬಾರ್ ಪ್ರದೇಶಗಳಲ್ಲಿ ಆತ ಎಸಗಿದ ದೌರ್ಜನ್ಯಗಳು ಅಮಾನವೀಯವಾಗಿದ್ದವು. ತಾನು ದಾಳಿ ನಡೆಸಿ ವಶಪಡಿಸಿಕೊಂಡ ಪ್ರದೇಶಗಳ ನಾಗರಿಕರನ್ನು ಆತ ಮತ್ತು ಆತನ ಸೈನಿಕರು ನಡೆಸಿಕೊಳ್ಳುತ್ತಿದ್ದ ರೀತಿ ಭಯಾನಕ. ರಾಜ್ಯಕ್ಕೆ ರಾಜ್ಯವನ್ನೇ ಕೊಳ್ಳೆ ಹೊಡೆಯುವುದರ ಜೊತೆಗೆ ಜನರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಮತ್ತು ಅವರ ಮನೆ, ಆಸ್ತಿಪಾಸ್ತಿಗಳಿಗೆ ಕೊಳ್ಳಿಯಿಡುತ್ತಿದ್ದ. ಅದಕ್ಕೆಂದೇ ತನ್ನ ಸೈನ್ಯದಲ್ಲಿ ಕುದುರೆ ಸವಾರರ ಪಡೆಯೊಂದನ್ನು ರಚಿಸಿದ್ದ. ಅದಕ್ಕೆ ‘ಕಝಕ್’ ಎಂಬ ವಿಶೇಷ ಹೆಸರನ್ನೂ ನೀಡಿದ್ದ. ಇದರ ಜೊತೆಗೆ ಟಿಪ್ಪು ತನ್ನ ದಾಳಿಗಳ ವೇಳೆ ಸೆರೆಸಿಕ್ಕ ರಾಜರನ್ನು, ಅಽಕಾರಿಗಳನ್ನು, ಸೈನಿಕರನ್ನು ಮತ್ತು ಇತರ ನಾಗರಿಕರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದ. ಕೊಡಗು, ಮಲಬಾರ್, ಮಂಗಳೂರು ಪ್ರದೇಶಗಳಿಂದ ಸಾವಿರಾರು ಜನರನ್ನು ಬಂಽಸಿ ಶ್ರೀರಂಗಪಟ್ಟಣಕ್ಕೆ ಕರೆತಂದು ಸೆರೆಮನೆಗಳಲ್ಲಿಟ್ಟಿದ್ದ. ತನಗೆ ಸೆರೆಯಾಳುಗಳಾಗಿ ಸಿಕ್ಕಿದ್ದ ಆಂಗ್ಲರನ್ನು ಹಲವು ಬಾರಿ ನಿರ್ದಯವಾಗಿ ಚಿತ್ರಹಿಂಸೆ ನೀಡಿ ಸಾಯಿಸುತ್ತಿದ್ದ. ಕೆಲವರನ್ನು ಕಬ್ಬಾಳದುರ್ಗದ ದುರ್ಭೇದ್ಯ ಕೋಟೆಯಲ್ಲಿ ಬಂಽಯಾಗಿಡುತ್ತಿದ್ದ. ಅವರಿಗೆ ಆಹಾರವನ್ನೇ ಕೊಡದೆ ಸಾಯಿಸುತ್ತಿದ್ದ, ಕೆಲವರನ್ನು ವಿಷವುಣಿಸಿ ಹತ್ಯೆಗೈದಿದ್ದ. ಅದೇ ರೀತಿ ಸೆರೆಸಿಕ್ಕಿದ್ದ ನೂರಕ್ಕೂ ಅಽಕ ಇಂಗ್ಲಿಷರನ್ನು ಟಿಪ್ಪು ಶ್ರೀರಂಗಪಟ್ಟಣದ ಸೆರೆಮನೆಯಲ್ಲಿಟ್ಟಿದ್ದ. 1784ರಲ್ಲಿ ಬ್ರಿಟಿಷರೊಂದಿಗೆ ಮಂಗಳೂರಿನಲ್ಲಿ ಒಪ್ಪಂದ ಮಾಡಿಕೊಂಡ ಟಿಪ್ಪು ಮಲಬಾರ್, ಮಂಗಳೂರು ಪ್ರದೇಶಗಳನ್ನು ಬ್ರಿಟಿಷರಿಂದ ತನ್ನ ವಶಕ್ಕೆ ಪಡೆದುಕೊಂಡು ಅದಕ್ಕೆ ಬದಲಾಗಿ ತನ್ನ ಬಂಧನದಲ್ಲಿದ್ದ ಇಂಗ್ಲಿಷರನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಟಿಪ್ಪು ಮಾತಿನಂತೆ ನಡೆದುಕೊಳ್ಳದೆ ಒಪ್ಪಂದ ಉಲ್ಲಂಸಿದ್ದ. ಸೆರೆಯಲ್ಲಿದ್ದ ಬಹುಪಾಲು ಇಂಗ್ಲಿಷರು ಅಲ್ಲೇ ಕೊನೆಯುಸಿರೆಳೆದರು. ನರಗುಂದಕ್ಕೆ ಮುತ್ತಿಗೆ ಹಾಕಿದ್ದ ತನ್ನ ಸೈನ್ಯದ ದಳಪತಿಗೆ ಟಿಪ್ಪು ಒಂದು ಪತ್ರ ಬರೆದಿದ್ದ-‘ಒಂದು ವೇಳೆ ದಾಳಿ ಮಾಡಬೇಕಾದ ಸಂದರ್ಭ ಒದಗಿದ್ದೇ ಆದಲ್ಲಿ, ಅಲ್ಲಿ ಜೀವಂತವಾಗಿರುವ ಎಲ್ಲವನ್ನೂ… ಗಂಡಸರೇ ಇರಲಿ, ಹೆಂಗಸರೇ ಇರಲಿ, ಯುವಕರೇ ಇರಲಿ, ಮುದುಕರೇ ಇರಲಿ, ಮಕ್ಕಳು, ನಾಯಿ, ಬೆಕ್ಕು ಮತ್ತು ಜೀವವಿರುವುದೆಲ್ಲವನ್ನೂ ಕತ್ತರಿಸಿ ಹಾಕಿ. ಆದರೆ ಆ ಒಬ್ಬ ‘ಕಾಲಾಪಂಡಿತ’ನನ್ನು (ನರಗುಂದದ ಸೇನಾಪತಿ) ಹೊರತುಪಡಿಸಿ…’. ಇದು ಟಿಪ್ಪು ತನ್ನ ಸೇನೆಗೆ ನೀಡುತ್ತಿದ್ದ ಸೂಚನೆಗಳ ರೀತಿ! ಕೊಡಗಿನಲ್ಲಿನ ತನ್ನ ಅಽಕಾರಿಯೊಬ್ಬನಿಗೆ ಟಿಪ್ಪು ಬರೆದ ಪತ್ರ ಈ ರೀತಿ ಇತ್ತು- ‘ನೀನು ಕೊಡಗಿಗೆ ದಾಳಿ ನಡೆಸಿ, ಅಲ್ಲಿ ಸಿಕ್ಕವರನ್ನು ಕತ್ತರಿಸಿ ಹಾಕು ಅಥವಾ ಬಂಽಸು. ಆದರೆ ಎಲ್ಲರನ್ನು… ಸತ್ತವರನ್ನೂ… ಮತ್ತು ಸೆರೆಸಿಕ್ಕಿದವರನ್ನೂ, ಮಹಿಳೆಯರನ್ನು ಮತ್ತು ಮಕ್ಕಳನ್ನು ಸೇರಿಸಿ ಎಲ್ಲರನ್ನೂ ಮುಸ್ಲಿಮರನ್ನಾಗಿ ಮಾಡತಕ್ಕದ್ದು’. ಪರ್ಷಿಯನ್ ಭಾಷೆಯಲ್ಲಿ ಟಿಪ್ಪು ಬರೆದ ಈ ಪತ್ರದ ಮೂಲಪಾಠ ಹೀಗಿದೆ- ‘ಕಸಾನಿಕೀಹ್ ಕುಶ್‌ತಾಹ್ ಶುದಾಂದ್ ವಾ ಕಸಾನಿಕೀಹ್ ಅಸಿರ್ ಶುವಾಂದ್, ಮಹ್‌ಝಾನ್ ವಾ ಬಚಾಹ್, ಹಮಹ್ಹಾರ ಮುಸ್ಲಾಮನ್ ನಮಯಂದ್’

tippu1

Comments are closed.