Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Latest News > ಸಾಂಬಾರ ಪಾರ್ಕ್ ನಿರ್ಮಾಣಕ್ಕೆ ಪ್ರಯತ್ನ; ಪ್ರತಾಪ್ ಸಿಂಹ

ಸಾಂಬಾರ ಪಾರ್ಕ್ ನಿರ್ಮಾಣಕ್ಕೆ ಪ್ರಯತ್ನ; ಪ್ರತಾಪ್ ಸಿಂಹ

ಸಾಂಬಾರ ಪಾರ್ಕ್ ನಿರ್ಮಾಣಕ್ಕೆ ಪ್ರಯತ್ನ; ಪ್ರತಾಪ್ ಸಿಂಹ
**********************************************************
ಮಡಿಕೇರಿ ಜು.25(ಕ. ವಾ):-ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಕರಿಮೆಣಸು, ಏಲಕ್ಕಿ, ಶುಂಠಿ ಮತ್ತಿತರ ಸಾಂಬಾರ ಪದಾರ್ಥಗಳನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಆ ನಿಟ್ಟಿನಲ್ಲಿ ‘ಸಾಂಬಾರ ಪಾರ್ಕ್ ‘ ಸ್ಥಾಪಿಸುವ ನಿಟ್ಟಿನಲ್ಲಿ ವಾಣಿಜ್ಯ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ಕೊಡಗು ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಂಬಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ ಲಾಭವನ್ನು ಇತರೆ ರಾಜ್ಯಗಳು ಪಡೆದುಕೊಳ್ಳುತ್ತಿದೆ. ಈ ಸಂಬಂಧ ಕೇಂದ್ರದ ಮಟ್ಟದಲ್ಲಿ ಚಚರ್ಿಸಲಾಗಿದ್ದು, ಜಿಲ್ಲೆಯಲ್ಲಿ ಸಾಂಬಾರ ಪಾಕರ್್ ನಿಮರ್ಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಇದಕ್ಕಾಗಿ 50 ಎಕರೆ ಜಾಗ ಕೊಡಿಸಬೇಕಿದೆ ಎಂದು ಸಂಸದರು ತಿಳಿಸಿದರು. ಇದಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಒಪ್ಪಿಗೆ ನೀಡಿದರು.
ಜಿಲ್ಲೆಯಲ್ಲಿ ಕಾಫಿ ಬೆಳೆ ಜೊತೆಗೆ ಕರಿಮೆಣಸನ್ನು ಬೆಳೆಯಲಾಗುತ್ತದೆ. ಆದರೆ ಆರ್.ಟಿ.ಸಿ.ಯಲ್ಲಿ ನಮೂದು ಆಗಿರುವುದಿಲ್ಲ. ಆರ್.ಟಿ.ಸಿ.ಯಲ್ಲಿ ಕರಿಮೆಣಸು, ಏಲಕ್ಕಿ ಮತ್ತಿತರ ಬೆಳೆಯನ್ನು ನಮೂದಿಸುವಂತಾಗಬೇಕು ಎಂದು ಅವರು ಕೋರಿದರು.
ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲು ಪ್ರಸ್ತಾವನೆ ಕಳುಹಿಸಿಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಸದರಾದ ಪ್ರತಾಪ್ ಸಿಂಹ ಅವರು ನಿದರ್ೇಶನ ನೀಡಿದರು.
ಜಿ.ಪಂ.ಅಧ್ಯಕ್ಷರಾದ ಶರೀನ್ ಸುಬ್ಬಯ್ಯ ಅವರು ಕಾಡಾನೆ ಹಾವಳಿಯಿಂದ ಇಲ್ಲಿನ ಜನರು ಜೀವದ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಆ ನಿಟ್ಟಿನಲ್ಲಿ ಕಾಡಾನೆ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂಬಂಧ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಕಾಡಾನೆ ಹಾವಳಿಗೆ ಎಷ್ಟು ಮಂದಿ ತುತ್ತಾಗಿದ್ದಾರೆ. ಇವರಿಗೆ ಕೂಡಲೇ ಪರಿಹಾರ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಣ್ಯ ಪ್ರದೇಶದ ಗಡಿಭಾಗದಲ್ಲಿ ಸೋಲಾರ್ ಬೇಲಿ ನಿಮರ್ಾಣ, ಹಾಗೆಯೇ ತಲಕಾವೇರಿ ವನ್ಯಧಾಮದಲ್ಲಿರುವ ಕೆರೆಗಳ ಹೂಳು ತೆಗೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.
ಈ ಸಂಬಂಧ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಮನುಮುತ್ತಪ್ಪ ಅವರು ತಲಕಾವೇರಿ ವನ್ಯಧಾಮದಲ್ಲಿ ಎರಡು ಕೆರೆಗಳು ಹೂಳು ತುಂಬಿದ್ದು, ಹೂಳು ತೆಗೆಯುವಂತಾಗಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ಕಡ್ಡಾಯವಾಗಿ ಇರಬೇಕು. ಶೌಚಾಲಯಕ್ಕೆ ನೀರು ಸರಬರಾಜು ವ್ಯವಸ್ಥೆ ಮಾಡಬೇಕು. ವಿದ್ಯಾಥರ್ಿನಿಯರಿಗೆ ಪ್ರತ್ಯೇಕ ಶೌಚಾಲಯವಿರಬೇಕು. ಆ ನಿಟ್ಟಿನಲ್ಲಿ ಯಾವ ಯಾವ ಶಾಲೆಗಳಲ್ಲಿ ಶೌಚಾಲಯ ಇಲ್ಲ. ಹಾಗೆಯೇ ಮೇಜು, ಕುಚರ್ಿ ಮತ್ತಿತರ ಪೀಠೋಪಕರಣ ಬೇಕಿದೆ ಎಂಬ ಬಗ್ಗೆ ಸವರ್ೆ ಮಾಡಿ ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿದರ್ೇಶಕರಿಗೆ ಪ್ರತಾಪ್ ಸಿಂಹ ಅವರು ನಿದರ್ೇಶನ ನೀಡಿದರು.
2016ರ ಜೂನ್ ವೇಳೆಗೆ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ಕಡ್ಡಾಯವಾಗಿ ಇರಬೇಕು ಮತ್ತು ಬಳಕೆಯಾಗಬೇಕು. ಶೌಚಾಲಯ ಇಲ್ಲವೆಂದು ದೂರುಗಳು ಕೇಳಿ ಬರದಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಪ್ರತಾಪ್ ಸಿಂಹ ಅವರು ಹೇಳಿದರು.
ಮೂಲ ನಿವಾಸಿ ಗಿರಿಜನರಿಗೆ ವೈಯಕ್ತಿಕ ಹಾಗೂ ಸಮುದಾಯ ಹಕ್ಕು ಪತ್ರಗಳನ್ನು ಆದಷ್ಟು ತ್ವರಿತವಾಗಿ ವಿತರಿಸಬೇಕು. ಸಮಸ್ಯೆಗಳಿದ್ದಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಸಂಸದರು ಪೌಷ್ಠಿಕ ಆಹಾರವನ್ನು ಎಲ್ಲಾ ಮೂಲ ನಿವಾಸಿ ಗಿರಿಜನರಿಗೆ ವಿತರಿಸುವಂತಾಗಬೇಕು ಎಂದು ಅವರು ಹೇಳಿದರು.
ಈ ಸಂಬಂಧ ಮಾತನಾಡಿದ ಜಿ.ಪಂ.ಅಧ್ಯಕ್ಷರಾದ ಶರೀನ್ ಸುಬ್ಬಯ್ಯ ಅವರು ಕುಡಿಯ ಹಾಗೂ ಬೆಟ್ಟಕುರುಬ ಗಿರಿಜನರಿಗೆ ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಪೌಷ್ಠಿಕ ಆಹಾರ ನೀಡುವಂತಾಗಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಕರ್ಾರದ ದುಡ್ಡು ಬೇರೆಯವರ ಪಾಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಗಿರಿಜನರ ಹೆಸರಿನಲ್ಲಿ ಸಕರ್ಾರೇತರ ಸಂಸ್ಥೆಗಳು ಬಲಿಷ್ಠವಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಮುಂದಾಗಬೇಕು. ಸಕರ್ಾರದ ಸೌಲಭ್ಯಗಳನ್ನು ಮೂಲನಿವಾಸಿ ಗಿರಿಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಸಂಸದರು ನಿದರ್ೇಶನ ನೀಡಿದರು.
ಮೂಲನಿವಾಸಿ ಗಿರಿಜನರಿಗೆ ವಸತಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಹಾಡಿಗಳಲ್ಲಿ ವಸತಿ, ಕುಡಿಯುವ ನೀರು, ರಸ್ತೆ ಸಂಪರ್ಕ, ವಿದ್ಯುತ್, ಶೌಚಾಲಯ ಹೀಗೆ ಸೌಲಭ್ಯ ಇವೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಮೂಲ ನಿವಾಸಿ ಗಿರಿಜನರಿಗೆ ಕಲ್ಪಿಸಲಾಗುವ ಕಾರ್ಯಕ್ರಮಗಳು ಹಾಗೂ ಕಾಮಗಾರಿಗಳ ಸಂಬಂಧ ಸ್ಥಳ ಪರಿಶೀಲನಾ ಕಾರ್ಯಕ್ರಮವನ್ನು ಅಧಿವೇಶನ ಮುಗಿದ ಬಳಿಕ ಹಮ್ಮಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಪ್ರಕಟಿಸಿದರು.
ಐಟಿಡಿಪಿ ಇಲಾಖೆಯಲ್ಲಿ ಗಿರಿಜನರ ಶ್ರೇಯೋಭಿವೃದ್ಧಿಗಾಗಿ ಸುಮಾರು 25 ಕೋಟಿ ರೂ.ನಷ್ಟು ಹಣವಿದ್ದು, ಇದನ್ನು ಸಮಪರ್ಕವಾಗಿ ಬಳಕೆ ಮಾಬೇಕಿದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದರು.
ರಾಜೀವ್ ಗಾಂಧಿ ಸೇವಾ ಕೇಂದ್ರ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದರು ನಿದರ್ೇಶನ ನೀಡಿದರು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಸಮರ್ಫಕವಾಗಿ ತಲುಪಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವೈದ್ಯರು, ವಾಹನ, ಅಗತ್ಯ ಸಂಪನ್ಮೂಲ ಬೇಡಿಕೆ ಸಲ್ಲಿಸಬೇಕು. ಹೆಚ್ಚುವರಿ ಆಂಬ್ಯುಲೆನ್ಸ್ ವಾಹನಕ್ಕೆ ಬೇಡಿಕೆ ಸಲ್ಲಿಸಿದ್ದಲ್ಲಿ ಅನುದಾನ ಒದಗಿಸಲಾಗವುದು ಎಂದರು.
ಜಿ.ಪಂ.ಅಧ್ಯಕ್ಷರಾದ ಶರೀನ್ ಸುಬ್ಬಯ್ಯ ಅವರು ಮಾತನಾಡಿ ಅಂಬ್ಯುಲೆನ್ಸ್ ವಾಹನ ಇರುವ ಕಡೆ ಚಾಲಕರೇ ಇರುವುದಿಲ್ಲ. ಚಾಲಕರಿದ್ದಲ್ಲಿ ಸರಿಯಾಗಿ ಸಂಬಳ ನೀಡುವುದಿಲ್ಲ. ಹೀಗೆ ನಾನಾ ರೀತಿಯ ಸಮಸ್ಯೆಗಳಿದ್ದು ಇವುಗಳನ್ನು ಸರಿಸುಡಿಸುವಂತಾಗಬೇಕು ಎಂದು ಅವರು ಸಭೆಯ ಗಮನಕ್ಕೆ ತಂದರು.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ.ಆರ್.ಶ್ರೀರಂಗಪ್ಪ ಅವರು ಹಲವು ಮಾಹಿತಿ ನೀಡಿದರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಸದರು ನಿದರ್ೇಶನ ನೀಡಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಮನುಮುತ್ತಪ್ಪ ಅವರು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ 2011-12ರ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದರು.
ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಕೂಮರ್ಾರಾವ್ ಅವರು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ 10.65 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಬಿಡುಗಡೆಯಾಗಿರುವ ಅನುದಾನವನ್ನು ಆಯಾಯ ವರ್ಷದಲ್ಲಿ ಬಳಕೆ ಮಾಡುತ್ತಿದ್ದಲ್ಲಿ ಮತ್ತೆ ಅನುದಾನ ತರಿಸಿಕೊಳ್ಳುವುದು ಕಷ್ಷವಾಗಲಿದೆ. ಆದ್ದರಿಂದ ಬಿಡುಗಡೆಯಾದ ಅನುದಾನವನ್ನು ಆಯಾಯ ವರ್ಷದಲ್ಲೇ ಬಳಕೆ ಮಾಡಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಅಡುಗೆ ಅನಿಲ ಸರಬರಾಜು ಸಂಬಂಧಿಸಿದಂತೆ ದೂರುಗಳು ಕೇಳಿಬಂದರೆ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿಯವರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ತಾವೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿದರ್ೇಶಕರಿಗೆ ಸಂಸದರು ಎಚ್ಚರಿಕೆ ನೀಡಿದರು.
ಈ ಸಂಬಂಧ ಮಾಹಿತಿ ನೀಡಿದ ಆಹಾರ ಇಲಾಖೆ ಉಪ ನಿದರ್ೇಶಕರಾದ ಚಂದ್ರಕಾಂತ್ ನಾಯಕ್ ಅವರು ಪೊನ್ನಂಪೇಟೆ ಮತ್ತು ಗೋಣಿಕೊಪ್ಪದ ಗ್ಯಾಸ್ ಏಜೆನ್ಸಿಯವರು ಮಿತಿ ಮೀರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದ್ದು, ಈ ಸಂಬಂಧ ನೋಟೀಸ್ ನೀಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಸಕರ್ಾರಿ ಜೂನಿಯರ್ ಕಾಲೇಜು ಕ್ಯಾಂಪಸ್ನಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿ.ಯು ಕಾಲೇಜು, ಪ್ರಥಮ ದಜರ್ೆ ಕಾಲೇಜು ಹಾಗೂ ಬಿ.ಆರ್.ಸಿ. ಕೇಂದ್ರವೂ ಸಹ ಇದೆ. ಎಲ್ಲರೂ ಕಿತ್ತಾಡುವುದನ್ನು ಬಿಟ್ಟು ಹೊಂದಾಣಿಕೆಯಿಂದ ಹೋಗುವಂತೆ ಅವರು ಸಲಹೆ ಮಾಡಿದರು. ಈ ಸಂಬಂಧ ಮಂಗಳವಾರ ಸಭೆ ಕರೆದಿದ್ದೇನೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಲಿಮಿಟೆಡ್ ಕಂಪನಿಗಳು ಸಾಕಷ್ಟು ಇದ್ದು, ಇವುಗಳಿಂದ ಶೇ.2ರಷ್ಟು ಸಿ.ಎಸ್.ಆರ್ ಫಂಡ್ನ್ನು ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಪ್ರತಾಪ್ ಸಿಂಹ ಅವರು ತಿಳಿಸಿದರು.
ಮನುಮುತ್ತಪ್ಪ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿನ ಅನುದಾನಿತ ಶಾಲೆಗಳಲ್ಲಿ ಬಡ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಸಿ.ಎಸ್.ಆರ್ ಫಂಡ್ನ್ನು ಅನುದಾನಿತ ಶಾಲೆಗಳಿಗೆ ಒದಗಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಪ್ರಧಾನ ಮಂತ್ರಿ ಜನಧನ ಯೋಜನೆ, ಜೀವನ್ ಜ್ಯೋತಿ ಯೋಜನೆ, ಅಟಲ್ ಬಿಹಾರಿ ಪಿಂಚಣಿ ಯೋಜನೆ ಮತ್ತಿತರ ಯೋಜನೆಗಳು ಎಲ್ಲಾ ಜನರಿಗೂ ತಲುಪುವಂತಾಗಬೇಕು. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್ ಅವರು ಮಾತನಾಡಿ ಹಾಡಿಯ ಎಲ್ಲಾ ಕುಟುಂಬದವರೆಲ್ಲರೂ ಬ್ಯಾಂಕ್ ಖಾತೆ ಹೊಂದುವಂತಾಗಲು ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ವಿಕಲಚೇತನರಿಗೆ ಸಕರ್ಾರಿ ಸೌಲಭ್ಯ ಪಡೆಯುವಂತಾಗಲು ಪ್ರಮಾಣ ಪತ್ರ ನೀಡುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆಯಾದರೂ ತಾಲ್ಲೂಕು ಮಟ್ಟದಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಅಪ್ಪಚ್ಚುರಂಜನ್ ಅವರು ಸಲಹೆ ಮಾಡಿದರು.
ಭಾರತ್ ಸಂಚಾರ್ ನಿಗಮ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಅಂತಜರ್ಾಲ ಸಂಪರ್ಕವನ್ನು ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಬ್ರಾಂಡ್ಬ್ಯಾಂಡ್ ಸೇವೆಯನ್ನು ತ್ವರಿತವಾಗಿ ಒದಗಿಸಬೇಕು. ಜೊತೆಗೆ ತಮ್ಮ ಸೇವೆಯನ್ನು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ಸಂಸದರು ಹಾಗೂ ಶಾಸಕರು ನಿದರ್ೇಶನ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಉದಾರ ಮನೋಭಾವದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೆಲಸ ಮಾಡಬೇಕು ಸಂಸದರು ಸಲಹೆ ಮಾಡಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಕುಶಾಲಪ್ಪ, ವಿ.ಪಿ.ವಿಜಯ, ತಾ.ಪಂ.ಅಧ್ಯಕ್ಷರಾದ ಕಾಂಡಂಡ ಪ್ರತಿಜಾ ಅಚ್ಚಪ್ಪ, ನಾನಾ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.
ಗ್ರಾಮೀಣ ವಿದ್ಯುತ್ ಸಮರ್ಪಕ ನಿರ್ವಹಣೆಗೆ 4,377 ಲಕ್ಷ ರೂ. ಬಿಡುಗಡೆಗೆ ಪ್ರಸ್ತಾವನೆ
***************************************************************************
ಮಡಿಕೇರಿ ಜು.25(ಕ. ವಾ):-ಸಂಸದರಾದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿದ್ಯುತ್ ಸಮಿತಿ ಸಭೆಯು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್, ಜಿ.ಪಂ. ಅಧ್ಯಕ್ಷರಾದ ಚೋಡುಮಾಡ ಶರೀನ್ ಸುಬ್ಬಯ್ಯ, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್, ಜಿ.ಪಂ. ಸಿಇಓ ಎಂ. ಕೂಮರ್ಾರಾವ್ ಮತ್ತಿತರರು ಇದ್ದರು.
ಕೇಂದ್ರ ಸಕರ್ಾರದ ಪುರಸ್ಕೃತ ಯೋಜನಾ ವರದಿ ಅನುಷ್ಠಾನ ಮತ್ತು ನಿರ್ವಹಣೆ ಗುಣಮಟ್ಟದ ವಿದ್ಯುತ್ಚ್ಛಕ್ತಿ ಸರಬರಾಜಿಗೆ ಒತ್ತು ನೀಡುವುದು. ಗ್ರಾಹಕರ ಹಿತ ಕಾಪಾಡುವುದು. ವಿದ್ಯುತ್ಚ್ಛಕ್ತಿ ಉಳಿತಾಯ ಮತ್ತು ಮಿತಬಳಕೆ ಮಾಡುವ ನಿಟ್ಟಿನಲ್ಲಿ ಗ್ರಾಹಕರನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ದೀನ ದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 24*7 ವಿದ್ಯುತ್ ಪೂರೈಸಲು ಹಾಗೂ ವಿದ್ಯುತ್ ಸಂಪರ್ಕವಿಲ್ಲದ ಬಿಪಿಎಲ್ ಫಲಾನುಭವಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಶ್ಯವಿರುವ ಪ್ರಸರಣ ಹಾಗೂ ವಿತರಣಾ ಜಾಲವನ್ನು ಸಿದ್ದಪಡಿಸುವುದು ಹಾಗೂ ಬಲ ಪಡಿಸುವುದು.
11 ಕೆ.ವಿ ವಿದ್ಯುತ್ ಮಾರ್ಗಗಳು, ವಿತರಣಾ ಪರಿವರ್ತಕಗಳು ಹಾಗೂ ಗ್ರಾಹಕರ ಸ್ಥಾವರಗಳ ಮಾಪಕೀಕರಣ ಮತ್ತು ಮಾಪಕಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮಾಹಿತಿ ತಂತ್ರಜ್ಞಾನ ಬಳಸಿಕೊಳ್ಳುವುದು ಮತ್ತಿತರ ಬಗ್ಗೆ ಚಚರ್ೆ ನಡೆಯಿತು.
ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ 4,377 ಲಕ್ಷ ರೂ.ಗಳ ಪ್ರಸ್ತಾವನೆಯನ್ನು ಇಂಧನ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಯೋಜನೆಯಡಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗಿದೆ ಎಂದು ಸೆಸ್ಕ್ ಸೂಪರಿಡೆಂಟ್ ಎಂಜಿನಿಯರ್ ಮುನಿಗೋಪಾಲ ರಾಜು ಅವರು ಮಾಹಿತಿ ನೀಡಿದರು.
ಹಾಗೆಯೇ ಮೂರು ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯುತ್ ಜಾಲದ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಒಟ್ಟು 1,138 ಲಕ್ಷ ರೂ.ಗಳ ಯೋಜನೆಯ ಪ್ರಸ್ತಾವನೆಯನ್ನು ಇಂಧನ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕರು ಮಾಹಿತಿ ನೀಡಿದರು.
ಸಮಿತಿ ಸಭೆಯ ಮಾಹಿತಿ ನೀಡಿದರು. ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಸೋಮಶೇಖರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು ಮತ್ತಿತರರು ಇದ್ದರು.

sam

Comments are closed.