Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Featured > ಸ್ಯಾಟಲೈಟ್ ರೈಲು ನಿಲ್ದಾಣಕ್ಕೆ ಆಗ್ರಹ

ಸ್ಯಾಟಲೈಟ್ ರೈಲು ನಿಲ್ದಾಣಕ್ಕೆ ಆಗ್ರಹ

ಮೈಸೂರು ವಿಭಾಗದ ರೈಲ್ವೆ ಪ್ರಯಾಣದ ಅಭಿವೃದ್ದಿ;ರೈಲ್ವೆಸಚಿವರಿಗೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹರಿಂದ ಹಲವು ಬೇಡಿಕೆ

ಮೈಸೂರು.ಜ,20,2016: ಮೈಸೂರು ವಿಭಾಗದಲ್ಲಿ ರೈಲ್ವೆ ಪ್ರಯಾಣದ ಅಭಿವೃದ್ದಿಗಾಗಿ ಮುಂದಿನ 2016-17 ಸಾಲಿನ ರೈಲ್ವೆ ಬಜೆಟ್ ನಲ್ಲಿ ಕೆಲವು ಬೇಡಿಕೆ ಈಡೇರಿಸಬೇಕೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಾನ್ಯ ರೈಲ್ವೆ ಸಚಿವರ ಬಳಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ ಅವರು, ಪ್ರಯಾಣಿಕರ ಬೇಡಿಕೆ ,ಪ್ರವಾಸೋದ್ಯಮ ಗಮನದಲ್ಲಿರಿಸಿಕೊಂಡು ಈ ಬೇಡಿಕೆಯನ್ನು ಸಚಿವರಲ್ಲಿ ಮಾಡಲಾಗಿದೆ.ಈಗಾಗಲೇ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಹೊಸ ಯೋಜನೆಗಳ ಬಗ್ಗೆ ಕೂಲಂಕುಷ ಮಾಹಿತಿ ಪಡೆಯಲಾಗಿದೆ.ಇದರನ್ವಯ ಮುಂದಿನ ಆರೇಳು ವರ್ಷಗಳ ರೈಲ್ವೆ ಯೋಜನೆಯ ಚಿತ್ರಣವನ್ನು ಅರಿತು ಈ ಯೋಜಿತ ಪಟ್ಟಿಯನ್ನು ಮಾನ್ಯ ರೈಲ್ವೆ ಸಚಿವರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರತಾಪ್ ಸಿಂಹ ಅವರು ಮುಂದಿನ ಬಜೆಟ್ ನಲ್ಲಿ ಸೇರಿಸಲು ಸೂಚಿಸಿರುವ ಯೋಜನೆಗಳು ಹೀಗಿವೆ ನೋಡಿ…….

ಮೈಸೂರು-ಕುಶಾಲನಗರ-ಮಡಿಕೇರಿ ಹೊಸ ರೈಲ್ವೇ ಮಾರ್ಗದ (110 ಕಿ.ಮೀ) ಮಂಜೂರಾತಿ…….
ಕನರ್ನಾಟಕದ ಕೊಡಗು ಜಿಲ್ಲೆಯು ಪ್ರಸ್ತುತ ಯಾವುದೇ ರೈಲ್ವೇ ಸಂಪರ್ಕವನ್ನು ಹೊಂದಿಲ್ಲದಿರುವುದರಿಂದ ಕೊಡಗನ್ನು ಭಾರತದ ರೈಲ್ವೆಯ ನಕಾಶೆಯಲ್ಲಿ ತರಬೇಕೆಂದು ಈ ಪ್ರದೇಶದ ಜನರ ಒತ್ತಾಯವಿದೆ. ಕೆಲ ವರ್ಷಗಳ ಹಿಂದೆಯೇ ಮೈಸೂರು-ಕುಶಾಲನಗರ ರೈಲ್ವೇ ಸಂಪರ್ಕಕ್ಕಾಗಿ ಒಂದು ಅಂದಾಜನ್ನು ರೈಲ್ವೇ ಮಂಡಳಿಗೆ ಸಲ್ಲಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಕಳೆದ ವರ್ಷದ ಬಜೆಟ್ನಲ್ಲಿ ಅದು ಮಂಜೂರಾಗಲಿಲ್ಲ. ಆಗಿನ ಗೌರವಾನ್ವಿತ ರೈಲ್ವೆ ಸಚಿವರು ಅವರ ಬಜೆಟ್ ಭಾಷಣದಲ್ಲಿ ಅಂದಾಜು ಮಾಡಿದ ಯೋಜನೆಯ ಸ್ಥಳ ಸಮೀಕ್ಷೆ ಕೆಲಸವನ್ನು ಪೂರ್ಣಗೊಳಿಸಿ ಏಕೀಕೃತ ವರದಿಯನ್ನು ಪರಿಗಣನೆಗಾಗಿ ರೈಲ್ವೆ ಮಂಡಳಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಲಾಗಿತ್ತು. ಈ ನಿಟ್ಟಿನಲ್ಲಿ ರೈಲ್ವೆ ಸವರ್ೇಕ್ಷಣಾ ವರದಿಯು ಅಂತಿಮ ಹಂತದಲ್ಲಿದ್ದು ಮಂಡಳಿಗೆ 2016ರ ಕೊನೆಯಲ್ಲಿ ಸಲ್ಲಿಸಲಾಗುವುದು ಎಂದು ನೈರುತ್ಯ ರೆಲ್ವೆ ಅಧಿಕಾರಿಗಳಿಂದ

ತಿಳಿದುಬಂದಿದೆ. ನೈರುತ್ಯ ರೈಲ್ವೆ ನಿಮರ್ಾಣ ಇಲಾಖೆಯ ಅಧಿಕಾರಿಗಳು ನನಗೆ ನೀಡಿದ ಯೋಜನೆಯ ಮುಖ್ಯಾಂಶಗಳನ್ನು ಅನುಬಂಧ “ಎ” ನಲ್ಲಿ ತೋರಿಸಲಾಗಿದೆ.

2.ಮೈಸೂರಿನಲ್ಲಿ ಸ್ಯಾಟಲೈಟ್ ನಿಲ್ದಾಣದ ಅಭಿವೃದ್ಧಿ……..

ಮೈಸೂರು ರೈಲು ನಿಲ್ದಾಣವು ಸೀಮಿತ ಸಾಮಥ್ರ್ಯವನ್ನು ಹೊಂದಿದ್ದು ಇತ್ತೀಚೆಗೆ ಮೈಸೂರು-ಬೆಂಗಳೂರು ನಡುವಿನ ಜೋಡಿ ಮಾರ್ಗವು ಪೂರ್ಣಗೊಂಡಿದ್ದು ರೈಲುಗಳು ಓಡಾಡಲು ಪ್ರಾರಂಭಿಸಿವೆ. ಮೈಸೂರಿನ ಸಮಗ್ರ ಆಥರ್ಿಕ ಅಭುವೃದ್ಧಿಗೆ ಇನ್ನೂ ಹೆಚ್ಚಿನ ರೈಲುಗಳು ಓಡಿಸಲು ಬೇಡಿಕೆ ಇದೆ. ಆದ್ದರಿಂದ ಹೆಚ್ಚುವರಿ ಸಂಚಾರವನ್ನು ನಿರ್ವಹಿಸಲು ಪಯರ್ಾಯ ನಿಲ್ದಾಣದ ತುತರ್ು ಆವಶ್ಯಕತೆ ಇದೆ. ಅದಕ್ಕಾಗಿ ನೈರುತ್ಯ ರೈಲ್ವೆಯು ಮೈಸೂರು, ಚಾಮರಾಜನಗರ ವಿಭಾಗಗಳಲ್ಲಿ ಕಳಕೊಳ ರೈಲ್ವೆ ನಿಲ್ದಾಣವನ್ನು ಮತ್ತೊಂದು ಕೊನೆಯ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯನ್ನು ಚಚರ್ಿಸಿ ಮಾನ್ಯ ಸಚಿವರ ಮುಂದೆ ಇಡಲಾಗಿದೆ.

ಹಾಸನದಲ್ಲಿನ ಲೆವೆಲ್ ಕ್ರಾಸಿಂಗ್ ನಂ.3ರ ಬದಲಾಗಿ ರಸ್ತೆ ಸೇತುವೆ ನಿರ್ಮಾಣ…..
ಹೊಸದಾಗಿ ನಿರ್ಮಾಣವಾಗಿರುವ ಹಾಸನ ಬಸ್ ನಿಲ್ದಾಣದ ಬಳಿ ಇರುವ ರೈಲ್ವೆ ಕ್ರಾಸಿಂಗ್ ನಂ.3ರಲ್ಲಿ ವಾಹನಗಳ ಬೃಹತ್ ಸಾಂದ್ರತೆಯಿಂದ ವಾಹನಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ. ಇದರ ಬದಲಾಗಿ ರಸ್ತೆ ಸೇತುವೆ ನಿರ್ಮಾಣ ಸಮಂಜಸ ಎಂದು ತಿಳಿದುಬಂದಿದೆ. ಅದಕ್ಕಾಗಿ ನೈರುತ್ಯ ರೈಲ್ವೆಯು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಈ ಯೋಜನೆಯು ಕಳೆದ ಬಜೆಟ್ ನಲ್ಲಿ ಬಂಜೂರಾಗಲಿಲ್ಲವೆಂದು ನನಗೆ ತಿಳಿದುಬಂದಿದೆ. ಅದನ್ನು ಸಚಿವರ ಗಮನಕ್ಕೆ ತಿಳಿಯಪಡಿಸಲಾಗಿದೆ.

3.ಬೆಂಗಳೂರು ಸಿಟಿ-ಸಿಕಂದರಾಬಾದ್ ಎಕ್ಶ್ ಪ್ರೆಸ್ ರೈಲನ್ನು ಮೈಸೂರಿನವರೆಗೂ ವಿಸ್ತರಣೆ:

ಮೈಸೂರು-ಸಿಕಂದರಾಬ್ ನಡುವೆ ಯಾವುದೇ ರೈಲು ಸಂಚಾರ ಇಲ್ಲದಿರುವುದರಿಂದ ಮೈಸೂರು, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮಾನ್ಯ ಸಚಿವರಿಗೆ ವಿನಂತಿ ಮಾಡಿಕೊಂಡಿದ್ದೇನೆ.

ಬೆಂಗಳೂರು ಸಿಟಿ-ಮುಂಬೈ ಸಿಎಸ್ಟಿ ಉದ್ಯಾನ್ ಎಕ್ಸ್ ಪ್ರೆಸ್ ರೈಲನ್ನು ಮೈಸೂರಿನವರೆಗೂ ವಿಸ್ತರಣೆ……….
ಈ ಮಾರ್ಗಕ್ಕಾಗಿ ಈ ಭಾಗದ ಜನರ ಬೇಡಿಕೆ ಮೊದಲಿನಿಂದಲೂ ಇದ್ದು ಮುಂಬೈ ಮತ್ತು ಪುಣೆಗೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಇದರಿಂದ ಪ್ರವಾಸೋದ್ಯಮ ಮತ್ತು ಬೆಂಗಳೂರು ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಬಹುದೆಂದು ಈ ಬೇಡಿಕೆಯನ್ನು ಇಡಲಾಗಿದೆ.

ಮೈಸೂರು-ಬೆಂಗಳೂರು ನಡುವೆ ಹೊಸ ರೈಲು………
ನಾವು ಬೇಡಿಕೆ ಇಟ್ಟಿರುವ ಈ ರೈಲು 12-00ಗಂಟೆಗೆ ಮೈಸೂರು ಬಿಟ್ಟು ಬೆಂಗಳೂರಿನಿಂದ 16-30ಕ್ಕೆ ಹೊರಡಬಹುದು. ಇದರಿಂದ ಚಾಮುಂಡಿ ಎಕ್ಸ್ಪ್ರೆಸ್ಸಿನ ನಿಬಿಡತೆಯನ್ನು ನಿವಾರಿಸಬಹುದು. ಬಡ ಮತ್ತು ಮಧ್ಯಮವರ್ಗದ ಕಾರ್ಮಿಕರಿಗೆ ಇದರಿಂದ ಉಪಯೋಗವಾಗುತ್ತದೆ. ಅಸಂಘಟಿತ ಕ್ಷೇತ್ರದ ಕಾಮರ್ಿಕರಿಗೆ ಇದು ಹೆಚ್ಚು ಅನುಕೂಲವಾಗುತ್ತದೆ.

ಮೈಸೂರು -ಬೆಂಗಳೂರು ನಡುವೆ ಡೀಸೆಲ್ ಮಲ್ಟಿಪಲ್ ಯೂನಿಟ್ಸ್ ಮತ್ತು ಪ್ರಮುಖ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್ಸ್………..
ಈ ಯೋಜನೆಯು ಮೈಸೂರು ವಿಭಾಗದಲ್ಲಿ ಜೋಡಣೆಯಾದರೆ ಹತ್ತಿರದ ನಗರ ಪ್ರದೇಶಗಳಿಗೆ ಕೆಲಸ ಹುಡುಕಿಕೊಂಡು ಹೋಗುವ ಹಾಗೂ ಅತೀ ಕಡಿಮೆ ಆದಾಯದ ಹಿನ್ನೆಲೆಯಿರುವ ಜನರಿಗೆ ಹಾಗೂ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಕೈಗಾರಿಕಾ ವಲಯಗಳಿಗೆ ಅನುಕೂಲವಾಗುವುದು.

ಯಶವಂತಪುರ-ವಾಸ್ಕೋ (ವಾರಕ್ಕೆರಡುಬಾರಿ) ರೈಲನ್ನು ಮೈಸೂರಿನವರೆಗೆ ವಿಸ್ತರಿಸುವುದು………
ಗೋವಾ ಮತ್ತು ಮೈಸೂರು ಎರಡೂ ಪ್ರವಾಸಿ ತಾಣಗಳಾಗಿರುವುದರಿಂದ ಪ್ರವಾಸಿಗಳ ಅನುಕೂಲಕ್ಕೆ ಇದು ಸಹಕಾರಿಯಾಗುವುದು. ಮತ್ತು ಮೈಸೂರಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೂ ಇದು ಪೂರಕವಾಗುವುದು.

ಮೈಸೂರಿನ ಬಳಿ ಇರುವ ಕಡಕೊಳ ರೈಲ್ವೆ ನಿಲ್ದಾಣವನ್ನು ಸ್ಯಾಟಲೈಟ್ ರೈಲ್ವೆ ಟಮರ್ಿನಲ್ ಆಗಿ ಆಭಿವೃದ್ಧಿಪಡಿಸುವುದು……..
ಮೈಸೂರು ನಿಲ್ದಾಣದ ದಟ್ಟಣೆಯನ್ನು ತಗ್ಗಿಸಲು ಮತ್ತು ನಿಲ್ದಾಣವು ಸೀಮಿತ ಜಾಗವನ್ನು ಹೊಂದಿರುವುದರಿಂದ ಸರಾಗ ಸಂಚಾರದ ಉದ್ದೇಶದಿಂದ ಬೆಂಗಳೂರಿನ ಯಶವಂತಪುರ ನಿಲ್ದಾಣ ಮಾದರಿಯಲ್ಲಿ ಮೈಸೂರಿನಲ್ಲಿ ಎರಡನೆಯ ಟಮರ್ಿನಲ್ ಅನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಕಡಕೊಳದಲ್ಲಿ ಇಂಥ ನಿಲ್ದಾಣವನ್ನು ನಿಮರ್ಾಣ ಮಾಡುವುದರಿಂದ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ವ್ಯಾಪಾರ ವಹಿವಾಟು ಕೂಡಾ ಹೆಚ್ಚುವುದು.

ಈ ಯೋಜನೆಗಳನ್ನು 2016-17ರ ಬಜೆಟ್ ನಲ್ಲಿ ಸೇರ್ಪಡೆ ಮಾಡಬೇಕೆಂದು ರೈಲ್ವೆ ಸಚಿವರ ಬಳಿ ಪ್ರತಾಪ್ ಸಿಂಹ ಅವರು ಮನವಿ ಮಾಡಿದ್ದಾರೆ.

satel;lite

Comments are closed.