Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕಿಸೆಯಲ್ಲಿ ದುಡ್ಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ?

ಕಿಸೆಯಲ್ಲಿ ದುಡ್ಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ?

ಇಬ್ರಾಹಿಂ ಖಾನ್

ಇಕ್ಲಾಕ್ ಅಹ್ಮದ್

ಮೊಹಮದ್ ಜಹೀರ್

ಖುರ್ಷಿದ್ ಲಾಲಾ

ಇವರನ್ನು ಬಚಾವ್ ಮಾಡುವುದಕ್ಕಲ್ಲ, ಬಡಿದು ಸಾಯಿಸಲು ನಾನು ಬಯಸಿದ್ದೆ ರಾಥೋಡ್ ಸಾಬ್! Infact, ಆ ಕೆಲಸವನ್ನು ನೀವಿಂದು ಪೂರ್ಣಗೊಳಿಸಲಿದ್ದೀರಿ, ಈಗಲೇ… ಇಷ್ಟಕ್ಕೂ ನಿಮ್ಮ ಮನೆಗೆ ಜಿರಲೆಗಳು ಬಂದರೆ ಏನು ಮಾಡುತ್ತೀರಿ? ಅವುಗಳನ್ನು ಸಾಕಿ ಸಲಹುವುದಿಲ್ಲ, ಬಡಿದು ಸಾಯಿಸುತ್ತೀರಿ. ಈ ನಾಲ್ಕೂ ಜಿರಲೆಗಳು ನನ್ನ ಮನೆಯನ್ನು ಕೊಳಕು ಮಾಡುತ್ತಿದ್ದವು. ಅದನ್ನಿಂದು ಸ್ವಚ್ಛ ಮಾಡುತ್ತಿದ್ದೇನಷ್ಟೇ.

ಅಷ್ಟರಲ್ಲಿ ಮಾತನ್ನು ತುಂಡರಿಸಿದ ಮುಂಬೈ ಪೊಲೀಸ್ ಕಮಿಷನರ್ ರಾಥೋಡ್ ಕೇಳುತ್ತಾರೆ, ‘ನೀನ್ಯಾರು?’

 

ಎಲ್ಲಿ, ಯಾವ ಕ್ಷಣದಲ್ಲಿ ಬಾಂಬ್ ಸಿಡಿಯುತ್ತದೋ ಎಂಬ ಭಯದಿಂದಾಗಿ ಬಸ್ಸು, ಟ್ರೈನು ಹತ್ತುವುದಕ್ಕೂ ಹೆದರುತ್ತಿರುವ ವ್ಯಕ್ತಿಯೇ ನಾನು. ಬೆಳಗ್ಗೆ ಎದ್ದು ಕೆಲಸಕ್ಕೆ ಹೊರಟರೆ ಯಾವುದೋ ಯುದ್ಧಕ್ಕೆ ಹೋಗುತ್ತಿದ್ದಾನೆ, ವಾಪಸ್ ಬರುತ್ತಾನೋ ಇಲ್ಲವೋ ಎಂಬ ಭಯ ಆವರಿಸಿಕೊಳ್ಳುವ ಹೆಂಡತಿಯ ಗಂಡ ನಾನು. ಗಂಟೆ ಗಂಟೆಗೂ ಆಕೆ ಕರೆ ಮಾಡುತ್ತಾಳೆ, ಊಟ ಮಾಡಿದೆಯೋ ಇಲ್ಲವೋ, ಚಹಾ ಕುಡಿದೆಯೋ ಇಲ್ಲವೋ ಎಂದು ಕೇಳುತ್ತಾಳೆ. ಏಕೆಂದುಕೊಂಡಿರಿ? ಅವಳ ಉದ್ದೇಶ ಯೋಗಕ್ಷೇವು ವಿಚಾರಣೆಯಾಗಿರುವುದಿಲ್ಲ, ನಾನು ಬದುಕಿದ್ದೇನೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದಕ್ಕೆ! ಮುಂಬೈನ ಮಳೆಯಲ್ಲಿ ಮುಳುಗಿ ಸಾಯುತ್ತೇನೆ, ಬಾಂಬ್ ಸ್ಫೋಟದಲ್ಲಿ ಮಡಿಯುತ್ತೇನೆ, ಗಡ್ಡ ಬೆಳೆಸುವವರನ್ನು, ಟೋಪಿ ಹಾಕುವವರನ್ನು ನೋಡಿ ದಿಗಿಲುಗೊಳ್ಳುತ್ತೇನೆ, ವ್ಯಾಪಾರ ಮಾಡೋಣ ಅಂತ ಅಂಗಡಿ ಖರೀದಿ ಮಾಡುತ್ತೇನೆ, ಹೆಸರೇನಿಡಲಿ ಎಂದು ಹೆದರುತ್ತೇನೆ. ದಂಗೆ ವೇಳೆ ಹೆಸರು ನೋಡಿ ಬೆಂಕಿಹಚ್ಚಿಯಾರು ಎಂಬ ಭಯ. ಜಗಳ ಯಾರದ್ದೇ ಆಗಿರಲಿ, ವಿನಾಕಾರಣ ಸಾಯುವವನು ಮಾತ್ರ ನಾನು. ನಿಮಗೆ ದಟ್ಟ ಜನಸಂದಣಿ ಕಾಣುತ್ತದಲ್ಲವೆ ಅದನ್ನು ನೋಡಿ, ಅವನೇ ನಾನು… I am just a stupid common man, wanting to clean his house!

ಮೊನ್ನೆ ಬುಧವಾರ ಮುಂಬೈ ಸರಣಿ ಸ್ಫೋಟ ಸಂಭವಿಸಿದ ನಂತರ, ಅಸಹಾಯಕತೆ-ಹತಾಶೆ-ನೋವು ನಮ್ಮೆಲ್ಲರನ್ನೂ ಆವರಿಸಿರುವ, ದೂರದ ಮುಂಬೈನಲ್ಲಿ ಮಡಿದವರಿಗಾಗಿ ನಮ್ಮ ಮನಸ್ಸು ದುಃಖದ ಮಡುವಿಗೆ ಬಿದ್ದಿರುವ ಈ ಸಂದರ್ಭದಲ್ಲಿ “A wednesday‘ ಚಿತ್ರ ಹಾಗೂ ಅದರಲ್ಲಿ ಮುಂಬೈ ಪೊಲೀಸ್ ಕಮಿಷನರ್ ರಾಥೋಡ್ ಮತ್ತು ಕಾಮನ್ ಮ್ಯಾನ್ ನಡುವೆ ನಡೆಯುವ ಸಂಭಾಷಣೆಗಳು ಬಹುವಾಗಿ ಕಾಡುತ್ತಿವೆ. ಭಯೋತ್ಪಾದಕ ದಾಳಿಗಳು, ಹತ್ಯಾಕಾಂಡಗಳು, ತನ್ನವರನ್ನು ಕಳೆದುಕೊಂಡ ನೋವು, ಸರ್ಕಾರದ ಷಂಡತನ ಒಬ್ಬ ಸಾಮಾನ್ಯ ಮನುಷ್ಯನನ್ನು ಹೇಗೆ ಪ್ರತಿ ಭಯೋತ್ಪಾದನೆಗೆ ತಳ್ಳುತ್ತದೆ ಎಂಬುದನ್ನು ಅದರ ಒಂದೊಂದು ಡೈಲಾಗ್್ಗಳೂ ಬಿಚ್ಚಿಡುತ್ತವೆ.

ರಾಥೋಡ್: ಸ್ಟುಪಿಡ್ ಕಾಮನ್ ಮ್ಯಾನ್ ಹೇಗೆ ಹೋದ, ಅದೂ 6 ಕೆಜಿ ಆರ್್ಡಿಎಕ್ಸ್ ಜತೆ?

ಕಾಮನ್ ಮ್ಯಾನ್: ಓ… ನಿಮಗೇನಾದರೂ ಕಷ್ಟವಾಗುತ್ತಿದೆಯೇ ರಾಥೋಡ್ ಸಾಬ್? ನಾನು ಜೀವನವಿಡೀ ನರಳುತ್ತಾ ಸಾಯುತ್ತಿರಬೇಕಿತ್ತಾ? ಇದೆಲ್ಲಾ ಅಚಾನಕ್ಕಾಗಿ ಆಗಿದ್ದಲ್ಲಾ, ಸಮಯ ಸಿಕ್ಕಿರಲಿಲ್ಲ ಅಂದುಕೊಳ್ಳಿ. ಮುರುಕು ರೊಟ್ಟಿ ಸಂಪಾದಿಸುವುದರಲ್ಲೇ ಕಾಲ ಕಳೆದುಹೋಯಿತು.

ರಾಥೋಡ್: ಒಬ್ಬ ಇಬ್ರಾಹಿಂನನ್ನು ನಾವು ಕೊಲ್ಲದಿದ್ದರೆ ನೀನು ಅಮಾಯಕರನ್ನೆಲ್ಲ ಸಾಯಿಸಿ ಬಿಡುತ್ತೀಯಾ?

ಕಾಮನ್ ಮ್ಯಾನ್: ಇಲ್ಲದಿದ್ದರೂ ಅವರು ಇಂದಲ್ಲ ನಾಳೆ, ಒಂದಲ್ಲ ಒಂದು ಸ್ಫೋಟದಲ್ಲಿ ಸತ್ತೇ ಸಾಯುತ್ತಾರೆ ಸಾಬ್. ಇಬ್ರಾಹಿಂ ಖಾನ್್ನಂಥ ವ್ಯಕ್ತಿಗಳೇ ಸಾಯಿಸುತ್ತಾರೆ. ಕಳೆದ ಬಾರಿ ಟ್ರೈನ್್ನಲ್ಲಿ ಸಾಯಿಸಿದ್ದರು, ಈ ಬಾರಿ ಇನ್ನೆಲ್ಲಾದರೂ ಕೊಲ್ಲುತ್ತಾರೆ. ಅವರು ಸಾಯಿಸುತ್ತಿರುವವರೆಗೂ ನಾವು ಉತ್ತರ ಕೊಡುವುದನ್ನು ಕಲಿಯುವುದಿಲ್ಲ.

ರಾಥೋಡ್: ನೀನ್ಯಾರು?

ಕಾಮನ್ ಮ್ಯಾನ್: ಅಂದರೆ?

ರಾಥೋಡ್: ಹಿಂದುವೋ, ಮುಸ್ಲಿಮನೋ ಅಥವಾ…

ಕಾಮನ್ ಮ್ಯಾನ್: ನನಗೆ ಕೊಡುವುದು ತರುವುದು ಏನೂ ಇಲ್ಲ

ರಾಥೋಡ್: ಇದೇ…

ಕಾಮನ್ ಮ್ಯಾನ್: ನಾನು ಹೇಳಿದೆನಲ್ಲಾ, I am just a stupid common man. ಏನನ್ನೂ ಸಾಬೀತುಪಡಿಸುವ ಇರಾದೆ ನನಗಿಲ್ಲ. ನಾನು ನಿಮಗೆ ನೆನಪು ಮಾಡಿಕೊಡಲು ಬಯಸುವುದಿಷ್ಟೇ-ಜನರೊಳಗೆ ಕೋಪ ಮಡುಗಟ್ಟಿದೆ. ಅದನ್ನು ಟೆಸ್ಟ್ ಮಾಡಲು ಹೋಗಬೇಡಿ. We are Resilient by Force, not by Choice. ನಿಮ್ಮನ್ನು ಹೆದರಿಸಲು ನನಗೆ 4 ವಾರ ಸಾಕಾದವು. ಹಾಗಿರುವಾಗ ನಮ್ಮನ್ನು ಕೊಲ್ಲುವವರು ನಮಗಿಂತ ಬುದ್ಧಿವಂತರಾಗಿರಲು ಸಾಧ್ಯವೆ? ಬಾಂಬ್ ಅಂತ ಟೈಪ್ ಮಾಡಿ, ್ನಇಂಟರ್ನೆಟ್್ನಲ್ಲಿ ಸರ್ಚ್ ಕೊಡಿ, 351 ಸೈಟ್್ಗಳು ಸಿಗುತ್ತವೆ. ಬಾಂಬನ್ನು ಹೇಗೆ ತಯಾರಿಸುತ್ತಾರೆ, ಅದಕ್ಕೆ ಬೇಕಾದ ವಸ್ತುಗಳಾವುವು ಎಂಬ ಎಲ್ಲ ಮಾಹಿತಿ ದೊರೆಯುತ್ತದೆ, ಅದೂ ಪುಕ್ಕಟೆಯಾಗಿ! ನಾವು ಬಟ್ಟೆ ತೊಳೆಯಲು ಬಳಸುವ ಸೋಪಿನಲ್ಲೂ ಒಂದು ಬಾಂಬ್ ಮಾಡಲು ಸಾಧ್ಯವಿದೆ ಎಂದು ನಿಮಗೆ ಗೊತ್ತಾ? ಹ್ಞಾಂ, ಒಬ್ಬ ಸಾಮಾನ್ಯ ಮನುಷ್ಯನಿಗೆ ಇದಕ್ಕಿಂತ ಉಪಯುಕ್ತ ಉತ್ಪನ್ನ ಇದುವರೆಗೂ ತಯಾರಾಗಿಲ್ಲ. ತಪ್ಪು ನಮ್ಮದು, ನಾವು ಬಹಳ ಬೇಗ  Used ಆಗಿಬಿಡುತ್ತೇವೆ. ಇಂಥ ಘಟನೆಗಳು ಸಂಭವಿಸಿದಾಗ ಚಾನೆಲ್್ಗಳನ್ನು ತಡಕಾಡಿ, ಎಸ್ಸೆಮ್ಮೆಸ್ ಕಳುಹಿಸಿ, ಫೋನ್ ಮಾಡಿ, ಸದ್ಯ ನಾವು ಬದುಕಿದೆವಲ್ಲಾ ಎಂದು ಪರಿಸ್ಥಿತಿ ವಿರುದ್ಧ ಹೋರಾಡುವ ಬದಲು ಅಡ್ಜೆಸ್ಟ್ ಮಾಡಿಕೊಂಡು ಬಿಡುತ್ತೇವೆ. ನಮ್ಮದೂ ಮಜಬೂರಿ ಅಲ್ಲವಾ ಸಾಬ್? ನಮಗೆ ಮನೆ ನಡೆಸುವುದಕ್ಕೆ ಬರುತ್ತದೆ. ಆದರೆ ಸರಕಾರವನ್ನು ಏಕೆ ಚುನಾಯಿಸುತ್ತೇವೆ ಎಂದರೆ ಅದು ದೇಶವನ್ನು ಸಂಭಾಳಿಸಲಿ ಎಂದು. ಸರ್ಕಾರ, ಪೋಲಿಸ್ ಫೋರ್ಸ್, ಇಂಟೆಲಿಜೆನ್ಸ್ ಇನ್ನು ಮುಂತಾದ ನೀವು ‘ಪೆಸ್ಟ್ ಕಂಟ್ರೋಲ್್’ ಇದ್ದಂತೆ, ಆದರೆ ಏನೂ ಮಾಡುವುದಿಲ್ಲ. Why are you not nipping them in the bud? ಏಕೆ ಅವರನ್ನು ಮೊಳಕೆಯಲ್ಲೇ ಚಿವುಟುತ್ತಿಲ್ಲ? ಒಬ್ಬ ಅಪರಾಧಿಯೋ ಅಲ್ಲವೋ ಎಂದು ಸಾಬೀತು ಮಾಡಲು ನಿಮಗೆ 10 ವರ್ಷ ಬೇಕಾಗುತ್ತದೆ. ಇದು ನಿಮ್ಮ ಕಾರ್ಯದಕ್ಷತೆಗೆ ಸವಾಲು ಎಂದೆನಿಸುವುದಿಲ್ಲವೆ? ಈ ನಾಟಕ ನಿಲ್ಲಬೇಕು,  This whole bloddy system is flawed!

ರಾಥೋಡ್: ಏಕೆ, ನಿನ್ನವರ್ಯಾರಾದರೂ ಸತ್ತಿದ್ದಾರಾ?

ಕಾಮನ್ ಮ್ಯಾನ್: ಅಲ್ಲೀವರೆಗೂ ನಾನು ಕಾಯಬೇಕಿತ್ತಾ?

ಇಂತಹ ಒಂದೊಂದು ಡೈಲಾಗ್್ಗಳೂ ನಮ್ಮೊಳಗಿಂದು ಮಡುಗಟ್ಟಿರುವ ಭಾವನೆಗಳಿಗೆ ಕನ್ನಡಿ ಹಿಡಿದಿವೆ ಎಂದೆನಿಸುತ್ತಿಲ್ಲವೆ?

ಈ ರೀಲು ರಿಯಲ್ಲಾಗುವ ಹಂತಕ್ಕೆ ಬಂದು ತಲುಪುತ್ತಿರುವ ಹಾಗಿದೆಯಲ್ಲವೆ? ಇನ್ನು ಎಷ್ಟು ದಿನ ಅಂತ ಇದನ್ನೆಲ್ಲಾ ಸಹಿಸಿಕೊಂಡು ಸುಮ್ಮನಿರುತ್ತೀರಿ? ಇನ್ನೆಷ್ಟು ಕಾಲ ಕೈಕಟ್ಟಿ ಕುಳಿತುಕೊಳ್ಳುತ್ತೀರಿ? ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡರೆ ಸಮಾಜ ಸಿಡಿದೇಳದೆ ಬೇರೆ ದಾರಿ ಏನಿದೆ? ಬುಧವಾರದ ಸರಣಿ ಸ್ಫೋಟದಲ್ಲಿ ಪ್ರಿಯಾ ಎನ್ನುವ ಹುಡುಗಿಯ ಕೈ ತುಂಡಾಗಿದೆ, ಮಹೇಶ್ ಕರ್ಮಚಾರಿ ಎಂಬ ಹಸುಳೆ ಜೀವನ್ಮರಣದ ನಡುವೆ ಹೋರಾಡುತ್ತಿದೆ. ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದರ ದುಃಖ, ಅಂಗಾಂಗಗಳು ಊನಗೊಂಡು ಜೀವನ ನಿತ್ಯ ನರಕವಾಗುವ ನೋವು ಈ ಸರ್ಕಾರಕ್ಕೆ ಅರ್ಥವಾಗುವುದು ಯಾವಾಗ? ಅಥವಾ ಅರ್ಥವಾಗಲಿ ಎಂದು ಆಶಿಸುತ್ತಾ ಕುಳಿತುಕೊಳ್ಳಬೇಕಾ? ಸಾವು ಅನಿವಾರ್ಯ, ಆದರೆ ಈ ರೀತಿ ಸಾವನ್ನು ಒಪ್ಪಿಕೊಳ್ಳುವುದಕ್ಕಾಗುತ್ತದಾ? ಇಂತಹ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರತೀಕಾರಕ್ಕೆ ಮುಂದಾದರೆ ‘ಸ್ಯಾಫ್ರಾನ್ ಟೆರರಿಸಂ’ ಎಂದು ಹಣೆಪಟ್ಟಿ ಕಟ್ಟುತ್ತಾರೆ. ಎಲ್ಲ ರೀತಿಯ ದೌರ್ಜನ್ಯ, ಆಕ್ರಮಣಗಳ ಹೊರತಾಗಿಯೂ ಇತಿಹಾಸದುದ್ದಕ್ಕೂ ಸಹಿಷ್ಣುತೆ ಪ್ರದರ್ಶಿಸುತ್ತಾ ಬಂದಿರುವ ಹಿಂದುಗಳನ್ನು ಕೋಮುವಾದಿಗಳು ಎನ್ನುತ್ತಾರೆ.

ಮಾಲೆಗಾಂವ್, ಅಜ್ಮೇರ್್ಗಳಲ್ಲಿ ನಡೆದಿದ್ದು ಹಿಂದು ಪ್ರತೀಕಾರವೇ ಹೊರತು ಭಯೋತ್ಪಾದನೆಯಲ್ಲ. ದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಬುಖಾರಿಯ ವಿರುದ್ಧ ವಾರೆಂಟ್ ಮೇಲೆ ವಾರೆಂಟ್ ಹೊರಡಿಸಿದರೂ ಆತನನ್ನು ಬಂಧಿಸುವ ತಾಕತ್ತು ಈ ಸರ್ಕಾರಕ್ಕಿಲ್ಲ. ಆದರೇ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಜೈಲಿಗೆ ದಬ್ಬುವಾಗ ಮಾತ್ರ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲಿಲ್ಲದ ಪೌರುಷ ಬಂದು ಬಿಡುತ್ತದೆ. ಮಾತೆತ್ತಿದರೆ ಕೇಸರಿ ಭಯೋತ್ಪಾದನೆ ಎನ್ನುತ್ತಾರೆ. ಅನುಮಾನ, ಆರೋಪ, ದೋಷಾರೋಪಗಳೇನೇ ಇರಲಿ, ಕಳೆದ 7 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಒಬ್ಬನೇ ಒಬ್ಬ ಹಿಂದುವನ್ನು ನ್ಯಾಯಾಲಯದಲ್ಲಿ ಭಯೋತ್ಪಾದಕನೆಂದು ಸಾಬೀತುಪಡಿಸಲು ಕಾಂಗ್ರೆಸಿನಿಂದಾಗಿದೆಯೇ? ಆದರೂ ಅಮೆರಿಕದ ಅಧಿಕಾರಿಗಳ ಜತೆಗಿನ ಖಾಸಗಿ ಮಾತುಕತೆ ವೇಳೆ ‘ಸ್ಯಾಫ್ರಾನ್ ಟೆರರಿಸಮ್ಮೇ’ ಅತಿ ದೊಡ್ಡ ಕಂಟಕ ಎನ್ನುತ್ತಾರೆ ರಾಹುಲ್ ಗಾಂಧಿ. ಈ ಮಗ ಮತ್ತು ಆತನ ಅಮ್ಮ, ಭಯೋತ್ಪಾದನೆಯಲ್ಲಿ ತೊಡಗಿರುವ ಸಮುದಾಯ ಹಾಗೂ ದೇಶದ ವಿರುದ್ಧ ಒಂದೇ ಒಂದು ಹೇಳಿಕೆ ಕೊಟ್ಟಿದ್ದನ್ನು ಉದಾಹರಿಸಿ ನೋಡೋಣ? ಅಷ್ಟೇಕೆ, ಮುಂಬೈ ದಾಳಿಗೆ ಅವಕಾಶ ಮಾಡಿಕೊಟ್ಟ ಅಸಮರ್ಥ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ ಯಾವ ಕ್ರಮಕೈಗೊಂಡಿದೆ ಹೇಳಿ? 26/11 ನಂತರ ಒತ್ತಡಕ್ಕೆ ಮಣಿದು ವಿಲಾಸ್್ರಾವ್ ದೇಶ್್ಮುಖ್ ರಾಜಿನಾಮೆ ಪಡೆಯುವ ನಾಟಕ ನಡೆಯಿತೇ ಹೊರತು ಮತ್ತೇನೂ ಅಲ್ಲ. ಅವರೊಬ್ಬ ಅಸಮರ್ಥ ವ್ಯಕ್ತಿ ಎಂದಾದ ಮೇಲೆ ಅವರನ್ನು 2009ರಲ್ಲಿ ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇಕೆ? ಮೊನ್ನೆ ನಡೆದ ಸಂಪುಟ ಪುನಾರಚನೆ ವೇಳೆ ದೇಶ್್ಮುಖ್್ಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನದ ಬಳುವಳಿ ನೀಡಿದೆ! ಕಾಂಗ್ರೆಸ್್ನ ಮಿತ್ರ ಪಕ್ಷವಾದ ಎನ್್ಸಿಪಿ ಕೂಡ 2008, ನವೆಂಬರ್್ನಲ್ಲಿ ತನ್ನ ಪಕ್ಷದ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ಆರ್.ಆರ್. ಪಾಟೀಲರ ರಾಜೀನಾಮೆ ಪಡೆದಿತ್ತು. ಆದರೆ 2009ರಲ್ಲಿ ಮತ್ತೆ ಉಪಮುಖ್ಯಮಂತ್ರಿ ಮಾಡಿತು! ಭಯೋತ್ಪಾದನೆ ಮೂಲೋತ್ಪಾಟನೆ ವಿಷಯದಲ್ಲಿ ಕಾಂಗ್ರೆಸ್್ಗೆ ಯಾವ ಕಾಳಜಿಯೂ ಇಲ್ಲ, ಈ ದೇಶವಾಸಿಗಳ ಬಗ್ಗೆ ಇಟಲಿಯಲ್ಲಿ ಜನಿಸಿದಾಕೆಗೆ ಯಾವ ಸಂವೇದನೆಗಳೂ ಇಲ್ಲ ಎಂಬುದು ಇದರಿಂದ ತಿಳಿಯುವುದಿಲ್ಲವೆ?

Make no mistake,  2008ರಿಂದ ಇದುವರೆಗೂ ಒಂದೂ ಪ್ರಮುಖ ಭಯೋತ್ಪಾದಕ ದಾಳಿ ಮುಂಬೈನಲ್ಲಿ ನಡೆದಿರಲಿಲ್ಲವೆಂದಾದರೆ ಅದಕ್ಕೆ ಭಾರತ ಕಾರಣವಲ್ಲ. ಅಂತಾರಾಷ್ಟ್ರೀಯ ಒತ್ತಡ ಹಾಗೂ ಪ್ರತಿಕೂಲ ಪರಿಣಾಮಕ್ಕೆ ಹೆದರಿ ಪಾಕಿಸ್ತಾನ ತೆಪ್ಪಗಿತ್ತೇ ಹೊರತು, ಭಾರತದ ಪೌರುಷಕ್ಕೆ ಅಂಜಿಯಲ್ಲ. ಇನ್ನು ಬಹಳ ಕುತೂಹಲಕಾರಿ ಅಂಶವೆಂದರೆ ಜುಲೈ 13 ಕಸಬ್್ನ ಜನ್ಮದಿನ. ಸರಣಿ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದ ಹೇಮಂತ್ ಮೆಹ್ತಾ ಎಂಬವರು ‘ಈ ಸ್ಫೋಟ ಕಸಬ್ ಜನ್ಮದಿನದ ಉಡುಗೊರೆಯಂತೆ. ಆದರೆ ನಮ್ಮ ಗೃಹ ಸಚಿವ ಪಿ. ಚಿದಂಬರಂ ಪಾಕಿಸ್ತಾನಕ್ಕೆ ಯಾವ ಉಡುಗೊರೆ ಕೊಡುತ್ತಾರೆ?’ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದರು. ಸಂಸತ್ತಿನ ಮೇಲೆ ಆಕ್ರಮಣ ಮಾಡಿದ ಅಫ್ಜಲ್ ಗುರುವನ್ನೇ ಗಲ್ಲಿಗೆ ಹಾಕದೆ ಸಾಕಿ ಸಲಹುತ್ತಿರುವ ಈ ಸರ್ಕಾರ ಯಾವ ಉಡುಗೊರೆ ಕೊಟ್ಟೀತು? 2004ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 21 ಭಯೋತ್ಪಾದಕ ದಾಳಿಗಳಾಗಿವೆ ಎಂದರೆ ನಂಬುತ್ತೀರಾ?

2008ರಲ್ಲಿ ಮುಂಬೈ ದಾಳಿ ನಡೆದಾಗ, ‘ಪ್ರತಿಯೊಂದು ಸಾರ್ವಭೌಮ ರಾಷ್ಟ್ರಕ್ಕೂ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕಿದೆ’ ಎಂದರು ಆಗಿನ್ನೂ ್ನಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬರಾಕ್ ಒಬಾಮ. ಅಂತಹ ಸೂಚನೆ ಸಿಕ್ಕಿದರೂ ಪಾಕ್ ವಿರುದ್ಧ ಹುಲ್ಲುಕಡ್ಡಿ ಎತ್ತುವ ಧೈರ್ಯ ತೋರಲಿಲ್ಲ. ನಾವು ಮುಂದೊಂದು ದಿನ ಆರ್ಥಿಕವಾಗಿ ಮಾತ್ರ ಸೂಪರ್ ಪವರ್ ಆಗಬಹುದಷ್ಟೇ. ಕಿಸೆಯಲ್ಲಿ ದುಡ್ಡು ತುಂಬಿಕೊಂಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ? ಅಮೆರಿಕದ ಬಗ್ಗೆ ಮಾತನಾಡುವುದಕ್ಕೂ ನಾಚಿಕೆಯಾಗಬೇಕು. ಅವರು ಸದ್ದಾಂನನ್ನು ಹಿಡಿದು ನ್ಯಾಯಾಲಯದ ಕಟಕಟೆಗೆ ಎಳೆದು ತರಲಿಲ್ಲ. ಗುಂಡು ಹಾಕಿದರು. ಒಸಾಮನನ್ನು ಹಿಡಿದು ನ್ಯಾಯದೇವತೆ ಮುಂದೆ ನಿಲ್ಲಿಸಲಿಲ್ಲ, ನಿನ್ನ ಕಡೆ ಆಸೆ ಏನೆಂದು ಕೇಳಿ ಬಿರ್ಯಾನಿಯನ್ನೂ ತಿನ್ನಿಸಲಿಲ್ಲ. ಕೊಂದು ಸಮುದ್ರಕ್ಕೆ ಬಿಸಾಡಿದರು.

ಆದರೆ ನಾವೇನು ಮಾಡುತ್ತಿದ್ದೇವೆ?

ಧರ್ಮಕ್ಕಾಗಿ ಸತ್ತವರಿಗೆ ದೇವರು ಸ್ವರ್ಗದಲ್ಲಿ ಬಗೆ ಬಗೆಯ ಭೋಜನಗಳು ಮತ್ತು 72 ಕನ್ಯೆಯರನ್ನು ಕೊಡುತ್ತಾನೆಂಬ ನಂಬಿಕೆ ಇಸ್ಲಾಮಿಕ್ ಭಯೋತ್ಪಾದಕರಲ್ಲಿದೆ! ಕಸಬ್್ಗೆ ಬಿರ್ಯಾನಿ ಸರ್ವ್ ಮಾಡಿ ಬಾಯಿ ರುಚಿ ತೀರಿಸಿರುವ ಕಾಂಗ್ರೆಸ್ಸಿಗರು, 72 ಕನ್ಯೆಯರನ್ನೂ ಕೊಡುವುದಕ್ಕಾಗಿ ಬಹುಶಃ ಆತನನ್ನು ಇನ್ನೂ ಜಿಂದಾ ಇಟ್ಟುಕೊಂಡಿದ್ದಾರೆ. ಅಷ್ಟನ್ನೂ ಇಲ್ಲೇ ಕೊಟ್ಟುಬಿಟ್ಟರೆ ಸಾಯುವ ಪ್ರಮಯವೇ ಬರುವುದಿಲ್ಲ. ನಮ್ಮ ರಾಷ್ಟ್ರಪತಿಗಳು ಆತನ ಕ್ಷಮಾದಾನ ಅರ್ಜಿಯ ಮೇಲೆ ನಿರ್ಧಾರ ತೆಗೆದುಕೊಳ್ಳುವ ಹೊತ್ತಿಗೆ ಕಸಬ್್ಗೆ ಸಹಜ ಸಾವು ಬಂದು ಬಿಟ್ಟಿರುತ್ತದೆ.

 ಏಷ್ಯನ್ ಡ್ರಾಮಾ ಕೃತಿಯಲ್ಲಿ ಅದರ ಕರ್ತೃ ಗನ್ನರ್ ಮಿರ್ದಾಲ್ ಭಾರತವನ್ನುದ್ದೇಶಿಸಿ ಅದ್ಯಾವ ಕ್ಷಣದಲ್ಲಿ “Soft state‘ ಬರೆದರೋ ಏನೋ, ಐವತ್ತು ವರ್ಷ ದೇಶವಾಳಿದ, ಈಗಲೂ ಆಳುತ್ತಿರುವ ಕಾಂಗ್ರೆಸ್ ಈ ದೇಶವನ್ನು ಅಕ್ಷರಶಃ ಷಂಡರಾಷ್ಟ್ರವನ್ನಾಗಿಸಲು ಹೊರಟಿದೆಯಲ್ಲಾ ಅದಕ್ಕೆ ಏನನ್ನಬೇಕು? ಶಿವಾಜಿ ಮಹಾರಾಜ, ಸುಭಾಶ್ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಝಾದ್್ಗೆ ಜನ್ಮವಿತ್ತ ಈ ಭರತಖಂಡವನ್ನ ಯಾವ ಸ್ಥಿತಿಗೆ ತಂದುಬಿಟ್ಟಿತು?

59 Responses to “ಕಿಸೆಯಲ್ಲಿ ದುಡ್ಡಿದ್ದರೇನು ಬಂತು, ಎದೆಯಲ್ಲಿ ಗುಂಡಿಗೆ ಇಲ್ಲದೆ ಹೋದರೆ?”

 1. Ravi R Gowda says:

  ಹಾಯ್ ಪ್ರತಾಪ್,

  ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ ಯಾವಾಗ ಬರ್ತಿತ್ತು ಅಂದ್ರೆ ಮಹಾತ್ಮ ಅನ್ಸ್ಕೊಂಡಿರೋ ಗಾಂಧೀಗೆ ಇನ್ನೂ ಹತ್ತು ವರ್ಷ ಮುಂಚೀನೆ ಗುಂಡು ಹೊಡೀಬೇಕಿತ್ತು, ಮತ್ತೊಮ್ಮೆ ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ ಬರಬೇಕು ಅಂದ್ರೆ ಈಗಿರೋ ಗಾಂಧೀಗಳಿಗೂ ಗುಂಡು ಹೊಡೀಬೇಕು. ಆಗ ಭಾರತ ವಿಭಜನೆ ಆದಾಗ ಭಾರತ ಸಂಪೂರ್ಣ ಹಿಂದೂ ರಾಷ್ಟ್ರ ಆಗುವಂತಹ ಅವಕಾಶವನ್ನು ತಪ್ಪಿಸಿದಾತ ಆ ಗಾಂಧಿ, ಆವಾಗ್ಲೇ ಈ ಭಯೋತ್ಪಾದಕ ತುರ್ಕರೊಂದಿಗೆ ಭಯೋತ್ಪಾದನೆಯೂ ಹೊರಟು ಹೋಗ್ತಿತ್ತು. ನಮ್ಮ ಹಿಂದುತ್ವವನ್ನ ಉಳಿಸಿಕೊಳ್ಳೋದಿಕ್ಕೆ ನಾವು ಹೋರಾಡಬೆಕಾದಂತಹ ಪರಿಸ್ತಿತಿ ನಿರ್ಮಾಣ ಆಗ್ತಿರ್ಲಿಲ್ಲ.

  ರವಿ ಆರ್.ಗೌಡ
  ಸಕಲೆಶಪುರ

 2. Praveen says:

  Very Good Article!!!

 3. kiran says:

  100% your right sir

 4. punith says:

  @ ravi r gowda ur correct

 5. kamalaksha says:

  thumba chennagi bareyutire

 6. Vikas says:

  When I see comments like good article or awosome article I feel like Prathap shima is an entertainer, well he is not he is good writer please award him with your openions & comments dont insult him just by saying good article

 7. Satish says:

  One more Ghodse should take birth.. Bloody fake gandhis..

 8. prashanth jain says:

  dear prathap,eye opng clm.keep it up

 9. Nanobba indian…
  Nanage savira varshagala kaala badukuva aase adakkagi inde saayalu sidda pratap sir….