Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Featured > ಕರ್ನಾಟಕ ರಾಜ್ಯ ಮುಕ್ತ ವಿವಿ ; ಯುಜಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂಸದ ಸಿಂಹ

ಕರ್ನಾಟಕ ರಾಜ್ಯ ಮುಕ್ತ ವಿವಿ ; ಯುಜಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂಸದ ಸಿಂಹ

 

ಕರ್ನಾಟಕ ರಾಜ್ಯ ಮುಕ್ತ ವಿವಿ ; ಯುಜಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂಸದ ಸಿಂಹ..

ಪ್ರಧಾನಿ ನರೇಂದ್ರ ಮೋದಿಗೆ ಸಂಸದ ಸಿಂಹ ಬರೆದಿರುವ ಪತ್ರ
ಮೈಸೂರು, ಜು.07 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೋರ್ಸ್ ಗಳ ಮಾನ್ಯತೆ ರದ್ದತಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟು ನಿವಾರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಸಂಸದ ಪ್ರತಾಪ ಸಿಂಹ ಪತ್ರ ಬರೆದಿದ್ದಾರೆ.

ಗ್ರಾಮೀಣ ಭಾಗದ ಅದರಲ್ಲೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಪೂರಕವಾಗಿ ಕೆಎಸ್ ಒಯು ಕಳೆದ ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ. ಇಲ್ಲಿ ಪದವಿ ಪಡೆದವರು ಇಂದು ಸಮಾಜದ ಉನ್ನತ ಸ್ಥಾನಗಳಲ್ಲಿದ್ದಾರೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಮುಕ್ತ ವಿವಿ ಅತ್ಯುತ್ತಮ ಹಾಗೂ ಸುಸಜ್ಜಿತ ಕ್ಯಾಂಪಸ್ ಹೊಂದಿರುವುದು ಸಹ ಹೆಮ್ಮೆಯ ಸಂಗತಿಯಾಗಿದೆ. ಈ ಸಂಸ್ಥೆಗೆ ಒಮ್ಮೆ ಭೇಟಿ ನೀಡುವಂತೆಯೂ ಪ್ರಧಾನಿಯನ್ನು ಸಂಸದರು ಆಹ್ವಾನಿಸಿದ್ದಾರೆ.

ಪ್ರಧಾನಿಗೆ ಸಂಸದ ಸಿಂಹ ಬರೆದಿರುವ ಪತ್ರದ ಪೂರ್ಣ ಪಾಠ ಹೀಗಿದೆ…………..

ನಮಸ್ಕಾರಗಳು:

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯು.ಜಿ.ಸಿ) ಜೂನ್ 16, 2015 ರಂದು ಹೊರಡಿಸಿದ ಸೂಚನೆಯ ಸಂಬಂಧವಾಗಿ ತಮಗೆ ಈ ಪತ್ರ ಬರೆಯುತ್ತಿದ್ದೇನೆ. ಈ ಸೂಚನೆಯ ಮೂಲಕ ಕನರ್ಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕಾರ್ಯಕ್ರಮಗಳು ಯು.ಜಿ.ಸಿ.ಯ ಮಾನ್ಯತೆಯನ್ನು ಪಡೆದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಿದ್ದೀರಿ. ವಿಶ್ವವಿದ್ಯಾನಿಲಯದ ಕುರಿತಾಗಿ, ಅದರಲ್ಲೂ ಅಲ್ಲಿ ಅಭ್ಯಸಿಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಬಗ್ಗೆ, ನಾನು ಆತಂಕಿತನಾಗಿದ್ದೇನೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದೊಡನೆ ನನಗಿರುವ ಸಂಬಂಧವನ್ನು ಮೊದಲು ತಮಗೆ ಪರಿಚಯಿಸಲು ಇಚ್ಛಿಸುತ್ತೇನೆ. ವಿಶ್ವವಿದ್ಯಾನಿಲಯದ ಕೇಂದ್ರ ಕಛೇರಿಯಿರುವ ಮೈಸೂರು ಕ್ಷೇತ್ರವನ್ನು ನಾನು ಲೋಕಭೆಯಲ್ಲಿ ಪ್ರತಿನಿಧಿಸುತ್ತೇನೆ. ಕ.ರಾ.ಮು.ವಿಯ ಹತ್ತಾರು ಸಾವಿರ ವಿದ್ಯಾರ್ಥಿಗಳು ಮತ್ತು ಶೇ 90% ಕ್ಕಿಂತ ಹೆಚ್ಚಿನ ಸಂಖ್ಯೆಯ ನೌಕರರು (ಬೋಧಕ ಹಾಗೂ ಬೋಧಕೇತರರೂ ಸೇರಿದಂತೆ) ನನ್ನ ಕ್ಷೇತ್ರದ ನಿವಾಸಿಗಳು. ಮಿಗಿಲಾಗಿ, ನಾನು ಉನ್ನತ ಶಕ್ಷಣ ಕ್ಷೇತ್ರದಲ್ಲಿ ಆಸಕ್ತಿಯುಳ್ಳವನು ಹಾಗೂ ಅದರ ಮೂಲಕ ನನ್ನ ರಾಜ್ಯದ ಸಾಮಾನ್ಯ ಮನುಷ್ಯ ತನ್ನ ಬದುಕನ್ನು ಉತ್ತಮಗೊಳಿಸಿಕೊಳ್ಳಲು ಇರುವ ಸಾಧ್ಯತೆಗಳ ಬಗ್ಗೆ ನಂಬಿಕೆ ಹೊಂದಿರುವವನು. ಈ ಹಿನ್ನಲೆಯಲ್ಲಿ, ಕರಾಮುವಿಯ ಇಂದಿನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಅದರ ಭವಿಷ್ಯವನ್ನು ಸಧೃಡಗೊಳಿಸಿಕೊಳ್ಳಲು ತಮಗೆ ಪತ್ರ ಬರೆಯುತ್ತಿದ್ದೇನೆ. ವಿಶ್ವವಿದ್ಯಾನಿಲಯಕ್ಕೆ ಸಮಬಂಧಿಸಿದ ಎಲ್ಲ ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಿಕೊಳ್ಳಬೇಕೆಂಬ ನನ್ನ ಆಕಾಂಕ್ಷೆ ಮತ್ತು ಧೃಡ ಸಂಕಲ್ಪಗಳನ್ನು ತಾವೂ ಹೊಂದಿದ್ದೀರಿ ಎಂದು ನಾನು ವಿಶ್ವಾಸಪೂರ್ವಕವಾಗಿ ಆಶಿಸುತ್ತೇನೆ.
ಕರಾಮುವಿಯ ಇಂದಿನ ಪರಿಸ್ಥಿತಿಯನ್ನು ಪರಿಚಯಿಸಿಕೊಳ್ಳಲು ಎಲ್ಲ ದಾಖಲೆಗಳನ್ನು ಹಾಗೂ ಮಾಧ್ಯಮದಲ್ಲಿ ಬಂದಿರುವ ವರದಿಗಳನ್ನು ಓದಿದ್ದೇನೆ. ಜೊತೆಗೆ ವಿಶ್ವವಿದ್ಯಾನಿಲಯದ ಆಡಳಿತವರ್ಗದವರು, ನೌಕರರು ಮತ್ತು ವಿದ್ಯಾರ್ಥಿಗಳೊಡನೆ ಚರ್ಚೆ ಮಾಡಿದ್ದೇನೆ. ವಿಶ್ವವಿದ್ಯಾನಿಲಯದ ಮೇಲಿರುವ ಆಪಾದನೆಗಳು ಗಂಭೀರವಾದವುಗಳು ಮತ್ತು ಯು.ಜಿ.ಸಿ.ಯ ನ್ಯಾಯಬದ್ಧ ಬೇಡಿಕೆಗಳನ್ನು ತಕ್ಷಣವೇ ಕರಾಮುವಿ ಪರಿಶೀಲಿಸಬೇಕೆಂಬುದರ ಅರಿವು ನನಗಿದೆ. ಅಲ್ಲದೆ ಕರಾಮುವಿಯು ಸಾರ್ವಜನಿಕವಾಗಿ ಈ ಹಿಂದೆ ಅಸ್ತಿತ್ವದಲ್ಲಿದ್ದ ದೂರಶಿಕ್ಷಣ ಮಂಡಳಿಯ (ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಅಂಗ) ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿತ್ತು ಹಾಗೂ ಈಗ ಯು.ಜಿ.ಸಿ.ಯ ಅಂಗವಾಗಿರುವ ದೂರಶಿಕ್ಷಣ ಬ್ಯೂರೊದ ಸೂಚನೆಗಳನ್ನು ಅನುಸರಿಸಿಲ್ಲ ಎಂಬುದೂ ನನಗೆ ತಿಳಿದಿದೆ. 2009 ರಲ್ಲಿ ಸರ್ವೋಚ್ಛ ನ್ಯಾಯಾಲಯವು ಪ್ರೊ. ಯಶ್ಪಾಲ್ ವಿ ಛತ್ತೀಸ್ಗಡ್ ರಾಜ್ಯ ವಿವಾದದಲ್ಲಿ ನೀಡಿದ ತೀರ್ಪಿನ ನಂತರ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣಿಯ ಸಂಬಂಧದಲ್ಲಿ ಹಲವು ಬದಲಾವಣಿಗಳಾದವು. ಯು.ಜಿ.ಸಿ. ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳೆರಡು ವಿಶ್ವವಿದ್ಯಾನಿಲಯಗಳ ಭೌಗೋಳಿಕ ವ್ಯಾಪ್ತಿಯನ್ನು ಕಡ್ಡಾಯಗೊಳಿಸಿದೆ ಹಾಗೂ ದೂರಶಿಕ್ಷಣ ಮಾಧ್ಯಮದ ಮೂಲಕ ತಾಂತ್ರಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಲೂ ಪ್ರಯತ್ನಿಸಿವೆ. ಈ ವಿಚಾರದಲ್ಲಿ ನಾನು ಗಮನಿಸಿರುವುದೇನೆಂದರೆ 1992ರ ಕರಾಮುವಿ ಮಸೂದೆಯು ತನಗೆ ಅನುಕೂಲಕರವಾದ ನೀತಿಯನ್ನು ರೂಪಿಸುವ ಅಧಿಕಾರವನ್ನು ವಿಶ್ವವಿದ್ಯಾನಿಲಯಕ್ಕೆ ನೀಡಿದೆ. ಇದನ್ನು ಯು.ಜಿ.ಸಿ. ಕೂಡ ಪರೋಕ್ಷವಾಗಿ ಗುರುತಿಸಿದೆ. ಹಾಗಾಗಿಯೇ, ಗಮನಿಸಿ, ಯು.ಜಿ.ಸಿ. ಈಗ ಕರ್ನಾಟಕ ಸರಕಾರಕ್ಕೆ ಕರಾಮುವಿಯ ಮಸೂದೆಗೆ ತಕ್ಷಣವೇ ತದ್ದುಪಡಿ ಮಾಡಿ, ವಿಶ್ವವಿದ್ಯಾನಿಲಯಕ್ಕೆ ಯು.ಜಿ.ಸಿ.ಯ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಲು ಅವಕಾಶ ನೀಡುವ ಆಚ್ಛೇದಗಳನ್ನು ತೆಗೆಯುವಂತೆ ಒತ್ತಾಯಿಸುತ್ತಿದೆ.
ಈ ಹಿಂದೆ ಕರಾಮುವಿಯು 2009ರ ನಂತರ ಹೊಸ ನಿಯಮಗಳು ಮತ್ತು ನಿರ್ದೇಶನಗಳನ್ನು ಪ್ರಶ್ನಿಸಿದ್ದರೂ, ಆಗಸ್ಟ್ 2015ರ ನಂತರ ಕರ್ನಾಟಕ ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ ತನ್ನ ನೀತಿಗಳಲ್ಲಿ ಹಲವಾರು ಬದಲಾವಣಿಗಳನ್ನು ಮಾಡಿಕೊಂಡಿದೆ. ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮತ್ತು ನಿರ್ವಹಣಾ ಮಂಡಳಿಗಳಲ್ಲಿ ತಾಂತ್ರಿಕ, ಪ್ರೊಫೆಷನಲ್ ಹಾಗೂ ಬ್ರಿಡ್ಜ್ ಕಾರ್ಯಕ್ರಮಗಳನ್ನು ನಿಲ್ಲಿಸಲು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕರಾಮುವಿಯು ತನ್ನ ಭೌಗೋಳಿಕ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸಲು ನಿರ್ಧರಿಸಿದೆ. ಇತ್ತೀಚೆಗೆ ವಿಶ್ವವಿದ್ಯಾನಿಲಯದ ಆಡಳಿತಗಾರರು ಮತ್ತಿತರರೊಡನೆ ಚರ್ಚಿಸಿದಾಗ, ನಾನು ತಿಳಿದಿದ್ದೇನೆಂದರೆ ಯು.ಜಿ.ಸಿ.ಯ ನಿರ್ದೇಶನಗಳನ್ನು ಅನುಸರಿಸಲು ಕರಾಮುವಿಯ ಸಂಪೂರ್ಣವಾಗಿ ಬದ್ಧವಾಗಿದೆ ಹಾಗೂ ಯು.ಜಿ.ಸಿಯ ನಿಯಂತ್ರಕ ಅಧಿಕಾರವನ್ನು ಸಂತೋಷದಿಂದ ಒಪ್ಪುತ್ತದೆ. ಇದಕ್ಕೆ ಬದಲಾಗಿ ವಿಶ್ವವಿದ್ಯಾನಿಲಯವು ಸಮಾನವಾಗಿ ಹಾಗೂ ನ್ಯಾಯಯುತವಾಗಿ ತನ್ನ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಮನವಿ ಮಾಡುತ್ತಿದೆ. ನಿರ್ಧಿಷ್ಟವಾಗಿ, ವಿಶ್ವವಿದ್ಯಾನಿಲಯವು ಯು.ಜಿ.ಸಿ.ಯ ಗಮನಕ್ಕೆ ತರಬಯಸುವ ಮುಖ್ಯ ವಿಚಾರವೆಂದರೆ ಕರಾಮುವಿಯ ಭೌಗೋಳಿಕ ವ್ಯಾಪ್ತಿಯನ್ನು ಖಾಸಗಿ ಮುಕ್ತ ವಿಶ್ವವಿದ್ಯಾನಿಲಯಗಳು ಮತ್ತು ಹಲವಾರು ರಾಜ್ಯ ವಿಶ್ವವಿದ್ಯಾನಿಲಯಗಳ ದೂರ ಶಿಕ್ಷಣ ನಿರ್ದೇಶನಾಲಯಗಳು ಉಲ್ಲಂಘಿಸುತ್ತಿವೆ ಎಂಬ ಅಂಶ. ನನ್ನ ವೈಯಕ್ತಿಕ ಅನುಭವದಲ್ಲಿಯೇ, ಮೈಸೂರು, ಬೆಂಗಳೂರು ಮತ್ತು ಕರ್ನಾಟಕದ ಇತರ ನಗರಗಳ ರಸ್ತೆಗಳಲ್ಲಿ ಈ ಸಂಸ್ಥೆಗಳ ಅಧ್ಯಯನ ಕೇಂದ್ರಗಳು ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡಿದ್ದೇನೆ ಹಾಗೂ ಹಲವಾರು ಬಾರಿ ತಾಂತ್ರಿಕ ಮತ್ತು ಸಂಶೋಧನೆಯ ಪದವಿಗಳನ್ನೂ ನೀಡುವುದನ್ನು ಗಮನಿಸಿದ್ದೇನೆ. ಕೆಲವು ಸಂಸ್ಥೆಗಳಿಗೆ ಯು.ಜಿ.ಸಿ.ಯ ಮಾನ್ಯತೆಯೂ ಇಲ್ಲ. ಹೀಗೆ ತಮ್ಮ ಬೌಗೋಳಿಕ ವ್ಯಾಪ್ತಿಯ ಆಚೆಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ. ನಾನು ಕರ್ನಾಟಕ ಸರಕಾರಕ್ಕೆ ಸಹ ಈ ವಿಚಾರದಲ್ಲಿ ಪತ್ರ ಬರೆದು, ಉನ್ನತ ಶಕ್ಷಣ ಸಚಿವಾಲಯ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ.
ಈ ತಾಂತ್ರಿಕ ವಿಚಾರಗಳನ್ನು ಯು.ಜಿ.ಸಿ. ಹಾಗೂ ದೂರಶಿಕ್ಷಣ ಬ್ಯೂರೊ, ಕರ್ನಾಟಕ ರಾಜ್ಯ ಸರಕಾರ ಮತ್ತು ಕರಾಮುವಿ ಜೊತೆಗೂಡಿ ಬಗೆಹರಿಸಿಕೊಳ್ಳುತ್ತವೆ ಎಂಬ ನಂಬಿಕೆ ನನಗಿದೆ. ಆದರೆ ನಾನಿಂದು ತಮಗೆ ಪತ್ರ ಬರೆಯುತ್ತಿರುವುದು ಕೇವಲ ಕರಾಮುವಿಯ ಭವಿಷ್ಯವನ್ನು ಭದ್ರ ಪಡಿಸಲು ಮಾತ್ರವಲ್ಲ. ನನಗೆ ಅದಕ್ಕಿಂತ ಹೆಚ್ಚು ಮುಖ್ಯವಾದ ಹಾಗೂ ಪ್ರಿಯವಾದ ಮತ್ತೊಂದು ವಿಚಾರವಿದೆ. ಅದೆಂದರೆ ಕರಾಮುವಿಯ ವಿದ್ಯಾರ್ಥಿಗಳ ಭವಿಷ್ಯ.
ಕರಾಮುವಿಯ ಸಾಮಾನ್ಯ ವಿದ್ಯಾರ್ಥಿ ಬೇರಾವ ರಾಜ್ಯ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಯಂತಲ್ಲ. ಕರಾಮುವಿಯ ವಿದ್ಯಾರ್ಥಿ ಸಮುದಾಯ ರಾಜ್ಯದ ಡೆಮೊಗ್ರಾಫಿಕ್ (ಜನಸಮುದಾಯದ) ವೈವಿಧ್ಯತೆಯ ಪ್ರತಿಫಲನವಾಗಿದೆ. ಈ ಕಾರಣದಿಂದಲೇ ನಾನಿಂದು ತಮಗೆ ಈ ಪತ್ರ ಬರೆಯುತ್ತಿದ್ದೇನೆ. ಶೇ 60% ರಷ್ಟು ಕರಾಮುವಿಯ ವಿದ್ಯಾರ್ಥಿಗಳು ಮಹಿಳೆಯರು. ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳ ಪ್ರಮಾಣ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಸಮುದಾಯದ ಶೇ 90 ರಷ್ಟಿದೆ. ಶೇ 80 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಕರ್ನಾಟಕದ ಹಳ್ಳಿಗಳು ಮತ್ತು ಸಣ್ಣ ನಗರಗಳಿಗೆ ಸೇರಿದವರು. ಇವರಾರಿಗೂ ಸಾಂಪ್ರದಾಯಿಕ ವಿಶ್ವವಿದ್ಯಾನಿಲಯವೊಂದರಲ್ಲಿ ಶಿಕ್ಷಣ ಪಡೆಯುವ ಅವಕಾಶ ದೊರಕುವುದಿಲ್ಲ. ಅವರ ಬಳಿ ಇದಕ್ಕೆ ಸಂಪನ್ಮೂಲಗಳೂ ಇಲ್ಲ. ಆದರೆ, ಶಿಕ್ಷಣ ಪಡೆಯಲು ಮತ್ತು ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಅವರ ಬದ್ಧತೆ ಅಖಂಡವಾದುದು ಮತ್ತು ಶ್ಲಾಘನೀಯವಾದುದು.
ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾಗಳನ್ನು ಪಡೆಯಲಿಚ್ಛಿಸುವ ಹಾಗೂ ಆ ಮೂಲಕ ಬದುಕಿನಲ್ಲಿ ಹೊಸ ಅವಕಾಶಗಳನ್ನು ಪಡೆಯಲು ಆಶಿಸುವ ಶಿಕ್ಷಕರು ಮತ್ತು ಗುಮಾಸ್ತರನ್ನು ನಾನು ಕಂಡಿದ್ದೇನೆ. ಜ್ಞಾನದ ಹಸಿವಿನಿಂದ ಸ್ಫೂರ್ತಿ ಪಡೆದು ಸಾಹಿತ್ಯ, ಇತಿಹಾಸ ಮತ್ತು ರಾಜಕೀಯ ಶಾಸ್ತ್ರಗಳನ್ನು ಅಭ್ಯಸಿಸುವ ನಿವೃತ್ತ ಮತ್ತು ಕೆಲಸ ಮಾಡುತ್ತಿರುವ ವೃತ್ತಿಪರರನ್ನು ನಾನು ನೋಡಿದ್ದೇನೆ. ಕಲಿಕೆಯ ಹಂಬಲವಿರುವ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಸ್ನಾತಕೋತ್ತರ ಪದವಿ ಪಡೆಯಲಿಚ್ಛಿಸುವ ರೈತರು ಮತ್ತು ವ್ಯವಹಾರಗಾರರ ಪರಿಚಯ ನನಗಿದೆ. ನನ್ನ ವೃತ್ತಿಯಾದ ಪತ್ತಿಕೋದ್ಯಮದಲ್ಲಿಯೇ ಕರಾಮುವಿಯಿಂದ ಪದವಿ ಗಳಿಸಿದ ಪತ್ರಕರ್ತರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಕರಾಮುವಿಯಲ್ಲಿ ಸಂಶೋಧನೆ ಮಾಡಿ, ಅದರ ಆಧಾರದ ಮೇಲೆ ಹೊಸ ಸಾರ್ವಜನಿಕ ನೀತಿಯನ್ನು ರೂಪಿಸಿದ ಹಲವಾರು ಐ.ಎ.ಎಸ್. ಅಧಿಕಾರಿಗಳ ಉದಾಹರಣಿ ನನ್ನ ಮುಂದಿದೆ. ಕರಾಮುವಿಯ ಪದವೀಧರರು ಕರ್ನಾಟಕ ಆಡಳಿತ ಸೇವೆಯಲ್ಲಿ ಹಾಗು ಕರ್ನಾಟಕದಾದ್ಯಂತ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ಹಾಗೂ ಅದಕ್ಕೆ ಮೊದಲು ಎರಡು ದಶಕಗಳಿಗೂ ಹೆಚ್ಚು ಕಾಲ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಾಗಿ ಕರ್ನಾಟಕ ರಾಜ್ಯಕ್ಕೆ ಈ ಸಂಸ್ಥೆಯು ಬಹುದೊಡ್ಡ ಕೊಡುಗೆಯನ್ನು ನೀಡಿದೆ.
ನನ್ನ ವಿಶ್ವಾಸಪೂರ್ವಕ ಆಶಯವೇನೆಂದರೆ ಕರಾಮುವಿಯ ಈ ತನ್ನ ಪರಂಪರೆಯನ್ನು ಬೆಳಸುತ್ತ ಮತ್ತಷ್ಟು ಚೈತನ್ಯ ಪಡೆದು ಬೆಳೆಯಲಿ. ಅದು ಹೊಸದೊಂದು ಪಥವನ್ನು ಅನ್ವೇಷಿಸಿ, ತನ್ನ ನಿಯಂತ್ರಕ ಸಂಸ್ಥೆಗಳೊಡನೆ ವಿಶ್ವಾಸದ ಮತ್ತು ನಂಬಿಕೆಯ ಸಂಬಂಧವನ್ನು ಬೆಳೆಸಿಕೊಳ್ಳುತ್ತದೆ ಎಂದು ನಾನು ಆಶಿಸುತ್ತೇನೆ. ನನ್ನ ಆಶಯಕ್ಕೆ ಇತಿಹಾಸದಿಂದ ಸಾಕಷ್ಟು ಪುಷ್ಟಿ ದೊರಕುತ್ತದೆ. ಇದರ ಜೊತೆಗೆ, ಕರಾಮುವಿಯು ಕಳೆದ ದಶಕದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಮೈಸೂರಿನಲ್ಲಿ ಸುಂದರವಾದ ಮತ್ತು ಸುಸಜ್ಜಿತವಾದ ಕ್ಯಾಂಪಸ್ ನಿರ್ಮಿಸಿದೆ. ಈಗ ರಾಜ್ಯಾದ್ಯಂತ ಪ್ರಾದೇಶಿಕ ಕೇಂದ್ರಗಳನ್ನು ಜಿಲ್ಲಾಕೇಂದ್ರಗಳಲ್ಲಿ ತೆಗೆದಿದೆ ಹಾಗೂ ಈ ಕೇಂದ್ರಗಳು ಆಡಳಿತ ಹಾಗೂ ಶೈಕ್ಷಣಿಕ ಕೇಂದ್ರಗಳಾಗಿ ಕೆಲಸ ಮಾಡುವಂತೆ ಸಜ್ಜುಗೊಳಿಸುತ್ತಿದೆ. ಇತ್ತೀಚಿಗೆ ವಿಶ್ವವಿದ್ಯಾನಿಲಯವು ಹೊಸ ತಲೆಮಾರಿನ, ಜಾಗತಿಕವಾಗಿ ಬೋಧನೆಯ ಮತ್ತು ಸಂಶೋಧನೆಯ ಅನುಭವವಿರುವ, ಬೋಧಕ ವೃಂದದ ಸದಸ್ಯರನ್ನು ಕೆಲಸಕ್ಕೆ ತೆಗೆದುಕೊಂಡಿದೆ. ಈ ಎಲ್ಲ ಕಾರ್ಯಗಳನ್ನು ನೆರವೇರಿಸುವಾಗ ಕರಾಮುವಿಯು ಕರ್ನಾಟಕದೊಳಗಿನ ಲಕ್ಷಾಂತರ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಮಾಡಲಾಗಿದೆ.ವಿಶ್ವವಿದ್ಯಾನಿಲಯದ ಆಡಳಿತವರ್ಗದವರು, ಅದರಲ್ಲೂ ಕುಲಪತಿಗಳಾದ ಪ್ರೊ.ಎಂ.ಜಿ.ಕೃಷ್ಣನ್ರವರು, ಯು.ಜಿ.ಸಿಯ ಎಲ್ಲ ನಿರ್ದೇಶನಗಳನ್ನು ಅನುಸರಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಕರಾಮುವಿಯ ಆಡಳಿತ ವರ್ಗದವರನ್ನು ದೆಹಲಿಗೆ ಕರೆತಂದು ತಮ್ಮೊಡನೆ ಹಾಗೂ ತಮ್ಮ ಸಹೋದ್ಯೋಗಿಗಳೊಡನೆ ಭೇಟಿ ಮಾಡಿಸಲು ನಾನು ಉತ್ಸುಕನಾಗಿದ್ದೇನೆ. ಹಾಗೆಯೇ ವಿಶ್ವವಿದ್ಯಾನಿಲಯದ ಕಾರ್ಯನಿರ್ವಹಣಿಯ ಬಗ್ಗೆ ಅರಿಯಲು ಮೈಸೂರಿಗೆ ಮತ್ತು ಕರಾಮುವಿಗೆ ಭೇಟಿ ನೀಡಿ ಎಂದು ತಮಗೂ ಆಹ್ವಾನಿಸುತ್ತಿದ್ದೇನೆ.
ತಾವು ನನ್ನ ಪತ್ರಕ್ಕೆ ಗುಣಾತ್ಮಕವಾಗಿ ಪ್ರತಿಕ್ರಿಯಿಸುವಿರಿ ಎಂದು ವಿಶ್ವಾಸಪೂರ್ವಕವಾಗಿ ಆಶಿಸುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

(ಪ್ರತಾಪ್ ಸಿಂಹ)

Ksouuc

Comments are closed.