*/
Date : 21-03-2015, Saturday | no Comment
ಸುಗ್ರೀವಾಜ್ಞೆ ಎಂದರೆ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯಂಥ ಸನ್ನಿವೇಶದ ಸೃಷ್ಟಿಯೇ?
ನೀವು ಜಾರ್ಜ್ ಕ್ಯಾರ್ಲಿನ್ ಬಗ್ಗೆ ಕೇಳಿರಬಹುದು. ಆತ ಅಮೆರಿಕದ ಖ್ಯಾತ ಹಾಸ್ಯ ಅಥವಾ ವಿಡಂಬನೆಕಾರ. ಜತೆಗೆ ಒಳ್ಳೆಯ ಸಾಮಾಜಿಕ ಚಿಂತಕ, ಟೀಕಾಕಾರ. ಅತನ ಮಾತುಗಳೆಂದರೆ ಅದ್ಭುತ. ಏನೋ ಒಂಥರಾ ಸೆಳೆತ ಅವುಗಳಲ್ಲಿರುತ್ತಿತ್ತು. ನಮ್ಮ ಕಾಲದ ವೈರುಧ್ಯವೇನೆಂದರೆ ನಾವು ಆಗಸದೆತ್ತರದ ಮನೆ ಕಟ್ಟುತ್ತೇವೆ, ಆದರೆ ನಮ್ಮ ಮನಸ್ಸು ಮಾತ್ರ ಕುಬ್ಜ. ಅಗಲವಾದ ರಸ್ತೆ ನಿರ್ಮಾಣ ಮಾಡುತ್ತೇವೆ, ಆದರೆ ನಮ್ಮ ಯೋಚನೆಗಳು ಕಿರಿದು. ಹೆಚ್ಚು ಖರೀದಿಸುತ್ತೇವೆ, ಕಡಿಮೆ ಅನುಭವಿಸುತ್ತೇವೆ . ಮನೆ ದೊಡ್ಡದು, ಕುಟುಂಬ ಸಣ್ಣದು. ಅನುಕೂಲ ಹೆಚ್ಚಿದೆ, ಅದರೆ ಅನುಭವಿಸಲು ಇರುವುದು ಕಡಿಮೆ ಸಮಯ. ಪದ”ಗಳು ಬಹಳಿವೆ, ಪ್ರಜ್ಞೆ ಕಡಿಮೆ. ಜ್ಞಾನ ಹೆಚ್ಚು, “ವೇಚನೆ ಕಡಿಮೆ. ತಜ್ಞರು ಬಹಳಿದ್ದಾರೆ, ಸಮಸ್ಯೆಗಳೂ ಇನ್ನೂ ಹೆಚ್ಚಿವೆ. ಔಷಧಗಳುವ ಬಹಳಷ್ಟಿವೆ , ಆರೋಗ್ಯ ಕಡಿಮೆ…ಹೀಗೆ ಸಾಗುತ್ತವೆ ಆತನ ಒಂದೊಂದು ಮಾತುಗಳು.
ಈ ಜಾರ್ಜ್ ಕ್ಯಾರ್ಲಿನ್‌ನನ್ನೇಕೆ ಇಲ್ಲಿ ಎಳೆದು ತರಲಾಗುತ್ತಿದೆ ಎಂದು ಆಶ್ಚರ್ಯವಾಗುತ್ತಿದೆಯೇ?
ಕಳೆದ ತಿಂಗಳು ನಮ್ಮ ಮೈಸೂರಿನ ಪತ್ರಕರ್ತರೊಬ್ಬರು ಕರೆ ಮಾಡಿ, ಕೇಂದ್ರ ಸರ್ಕಾರ ತಂದಿರುವ ಭೂಸ್ವಾಧೀನ ಸುಗ್ರೀವಾಜ್ಞೆ ರೈತ ವಿರೋಧಿ ಎನ್ನುತ್ತಿದ್ದಾರಲ್ಲಾ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದರು. “ಮೊದಲನೆಯದಾಗಿ, ಹೊಸದಾಗಿ ತಂದಿರುವ ಸುಗ್ರೀವಾಜ್ಞೆಯನ್ನು ಈ ಟೀಕಾಕಾರರು ಓದಿಕೊಂಡಿದ್ದಾರಾ? ಒಂದು ವೇಳೆ ಓದಿದ್ದರೆ, ಸುಗ್ರೀವಾಜ್ಞೆಗೂ ರಾಹುಲ್ ಗಾಂಧಿ ಪ್ರಣೀತ 2013ರ ಭೂಸ್ವಾಧೀನ ಕಾಯಿದೆಗೂ ಇರುವ ವ್ಯತ್ಯಾಸವೇನು? ಈ ಬಗ್ಗೆ ಮೊದಲು ಉತ್ತರಿಸಲಿ, ಆನಂತರ ರಾಜ್ಯ ಮಟ್ಟದಲ್ಲಿ ಒಂದು ಚರ್ಚೆಯಾಗಲಿ ಬಿಡಿ” ಎಂದಿದ್ದೇ. ಆ ಪತ್ರಕರ್ತ ಮರುದಿನ ತನ್ನ ತಲೆಯಲ್ಲಿರುವ ಕಸವನ್ನೆಲ್ಲಾ ಸೇರಿಸಿ ಬರೆದರು. ಅದನ್ನು ಓದಿದ್ದೇ ತಡ, ಹೊಲಸು ಬಾಯಿಗೆ ಹೆಸರಾದ ಮಾಜಿಗಳೊಬ್ಬರು ನಾನು ಚರ್ಚೆಗೆ ಸಿದ್ಧ ಎಂದುಬಿಟ್ಟರು. ಆಗ “Never argue with an idiot. They will only bring you down to their level and beat you with experience” ಎಂಬ ಕ್ಯಾರ್ಲಿನ್ ಮಾತು ನೆನಪಾತು. ಹಾಗಾಗಿ ಪ್ರತಿಕಿಸುವ ಗೋಜಿಗೆ ಹೋಗದೆ, ಸುಗ್ರೀವಾಜ್ಞೆಯನ್ನು ಎಳೆ ಎಳೆಯಾಗಿ ವಿವರಿಸಿ ಲೇಖನ ಬರೆದು, ಅದರಲ್ಲಿ, “ಅಮಿತ್ ಶಾ ಅವರನ್ನು ಮಾರಿಗುಡಿ ಪೂಜಾರಿ ಎಂದು ಕರೆದ “ಸುಂದರಕಾಯದ “ಮಿಸ್ಟರ್ ಮೈಸೂರು” ಎಂದು ಮಾಜಿಗಳಿಗೆ ಕುಟುಕಿದ್ದೆ. ಅವರನ್ನು ಬಹಳ “ಸ್ಫುರದ್ರೂಪಿ” ಎಂದು ಕರೆಯುತ್ತಿರುವ “ಹಿಂದಿರುವ ವಿಡಂಬನೆಯನ್ನು ಅರ್ಥ ಮಾಡಿಕೊಳ್ಳುವಷ್ಟೂ ಜ್ಞಾನವಿಲ್ಲದ ಮಾಜಿಗಳು ಮತ್ತೆ ಬಾಯಿಂದ ಮಲ ವಿಸರ್ಜನೆ ಮಾಡಿದರು. ಇಂಥವರನ್ನು ದ್ರಷ್ಟಿಯಲ್ಲಿಟ್ಟುಕೊಂಡೇ If you argue with an idiot, there are two idiots ಅಂತ ಬಹುಶಃ ರಾಬರ್ಟ್ ಕಿಯೋಸಾಕಿ ಹೇಳಿದ್ದಿರಬಹುದು! ಗುದ್ದಾಡಿದರೆ ಗಂಧದ ಜತೆ ಗುದ್ದಾಡಬೇಕು, ಮೈಗೆ ಸುಗಂಧವಾದರೂ ಅಂಟಿಕೊಳ್ಳುತ್ತದೆ, ಹಂದಿಗಳ ಜತೆ ಗುದ್ದಾಡಿದರೆ ಅದಕ್ಕೆ ಮಜಾ, ನಮಗೆ ಹೊಲಸು ಅಂಟಿಕೊಳ್ಳುತ್ತದೆ ಎಂಬ ನಮ್ಮ ಹಿರಿಯರ ಮಾತಿನ ಅರ್ಥವೂ ಇದೇ ಅಲ್ಲವೆ?
ಅದಿರಲಿ, ಈ ಸುಗ್ರೀವಾಜ್ಞೆ ಎಂದರೇನು? ಸುಗ್ರೀವಾಜ್ಞೆ ಎಂದರೆ ತುರ್ತುಪರಿಸ್ಥಿತಿಯಂಥ ಭೀಕರ ಸನ್ನಿವೇಶವೇನಾದರೂ ಸ್ರಷ್ಟಿಯಾಗಲಿದೆಯೇ? ಏಕಿಂಥಾ ಭಯ-ಭೀತಿಯನ್ನು ಜನರಲ್ಲಿ ಹುಟ್ಟುಹಾಕುತ್ತಿದ್ದಾರೆ?
ಸೀತಾ ಅಪಹರಣದ ನಂತರ ರಾಮ-ಲಕ್ಷ್ಮಣರು ಆಕೆಗಾಗಿ ಅಲೆಯುತ್ತಿರುತ್ತಾರೆ. ಅದೇ ವೇಳೆಗೆ, ವಾಲಿಯಿಂದಾಗಿ ರಾಜ್ಯ ಕಳೆದುಕೊಂಡು ಸುಗ್ರೀವನೂ ಅಲೆಯುತ್ತಿರುತ್ತಾನೆ. ಈ ಸುಗ್ರೀವನ ಬಗ್ಗೆ ಶಬರಿ ರಾಮನಿಗೆ ಹೇಳುತ್ತಾಳೆ. ಹನುಮಂತನ ಮೂಲಕ ಸುಗ್ರೀವನ ಜತೆ ಸಂಪರ್ಕ ಸಾಧಿಸಿದ ರಾಮ, ವಾಲಿಯನ್ನು ಕೊಂದು ಕಿಷ್ಕಿಂದೆಯನ್ನು ಸುಗ್ರೀವನಿಗೆ ಕೊಟ್ಟಿದ್ದಕ್ಕೆ ಪ್ರತಿಯಾಗಿ ಆತ ಸೀತೆಯನ್ನು ಹುಡುಕಲು ಸಹಾಯ ಮಾಡುವ ಶಪಥ ಪಡೆಯುತ್ತಾನೆ. ಆದರೆ ರಾಜ್ಯ ಸಿಕ್ಕಮೇಲೆ ವಾಗ್ದಾನವನ್ನೇ ಮರೆತ ಸುಗ್ರೀವನ ಬಳಿಗೆ ಲಕ್ಷ್ಮಣನನ್ನು ಕಳುಹಿಸಿದ ರಾಮ ಎಚ್ಚರಿಕೆಯ ಸಂದೇಶ ಮುಟ್ಟಿಸುತ್ತಾನೆ. ಆಗ 2 ತಿಂಗಳೊಳಗಾಗಿ ಸೀತೆಯನ್ನು ಹುಡುಕುವುದಾಗಿ ಹೇಳಿದ ಸುಗ್ರೀವ, ಎಲ್ಲ ವಾನರಿಗೂ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಆದೇಶ ನೀಡಿ, ನಾಲ್ಕೂ ದಿಕ್ಕುಗಳಿಗೂ ಹೊರಡುತ್ತಾರೆ. ಇದೇ ಸುಗ್ರೀವಾಜ್ಞೆ. ಅಂದರೆ ಯಾರೂ ಮೀರಲಾರದ್ದು ಎಂಬರ್ಥ. ಸರ್ಕಾರ ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಹೊರಡಿಸುವ 6 ತಿಂಗಳ ಗಡುವು ಇರುವ ಆದೇಶ ಸುಗ್ರೀವಾಜ್ಞೆ ಎಂಬ ನುಡಿಗಟ್ಟಿನ ರೂಪದಲ್ಲಿ ಈಗ ಬಳಕೆಯಾಗುತ್ತಿದೆ. ಒಂದು ವೇಳೆ, ೬ ತಿಂಗಳೊಳಗಾಗಿ ಈ ಸುಗ್ರೀವಾಜ್ಞೆಯನ್ನು “ವಿಧೇಯಕದ ರೂಪದಲ್ಲಿ ಸದನದಲ್ಲಿಟ್ಟು ಅಂಗೀಕಾರ ಪಡೆದುಕೊಳ್ಳದಿದ್ದರೆ ಅದು ನಿರುಪಯುಕ್ತವಾಗಿ ಬಿಡುತ್ತದೆ ಅಷ್ಟೇ.
ಹಾಗಾದರೆ 2013 ರ ಭೂಸ್ವಾಧೀನ ಪರಿಹಾರ ಹಾಗೂ ಪುನರ್ವಸತಿ ಕಾದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸುವ ಅಗತ್ಯವೇನಿತ್ತು ಅಂತೀರಾ?
2013 ರ ಭೂಸ್ವಾಧೀನ ಕಾಯಿದೆ ಅಧಿಕೃತವಾಗಿ ಜಾರಿಗೆ ಬಂದಿದ್ದು 2014, ಜನವರಿ 1 ರಿಂದ. ಅದುವರೆಗೂ ಬ್ರಿಟಿಷರ ಕಾಲದ 1894ರ ಭೂಸ್ವಾಧೀನ ಕಾದೆಯೇ 120 ವರ್ಷ ನಮ್ಮ ದೇಶದಲ್ಲಿ ಜಾರಿಯಲ್ಲಿತ್ತು. ಈ ಕಾಯಿದೆಯಡಿ ಕೊಡುತ್ತಿದ್ದ ಪರಿಹಾರ ನಿಮ್ಮ ಭೂಮಿಯ ಬೆಲೆಗಿಂತ ತೀರಾ ಕಡಿಮೆ ಇತ್ತು. 2004 ರಿಂದ 2014 ರವರೆಗೂ ದೇಶವಾಳಿ, 589 ಎಸ್‌ಇಝೆಡ್‌ಗಳ ಹೆಸರಿನಲ್ಲಿ ಲಕ್ಷಾಂತರ ಎಕರೆ ರೈತರ ಭೂಮಿಯನ್ನು ಮೂರು ಕಾಸಿಗೆ ಸ್ವಾಧೀನ ಮಾಡಿಕೊಂಡು ಕೈಗಾರಿಕೋದ್ಯಮಿಗಳಿಗೆ ಧಾರೆ ಎರೆದ ಕಾಂಗ್ರೆಸ್‌ಗೆ ಒಟ್ಟು 54 ವರ್ಷ ದೇಶವಾಳಿದರೂ ಕಾಯಿದೆ ಬದಲಾಸಬೇಕೆಂದು ಅನಿಸಲೇ ಇಲ್ಲ! ಈ ನಡುವೆ ಎಸ್‌ಇಝೆಡ್ ಹೆಸರಿನಲ್ಲಿ, ಉದ್ಯಮದ ಹೆಸರಿನಲ್ಲಿ ನಡೆದ ಲೂಟಿಯ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗತೊಡಗಿತು. ಜತೆಗೆ ಕಾಂಗ್ರೆಸ್ಸಿನ ಅಳಿಯ ಹರ್ಯಾಣ ಹಾಗೂ ರಾಜಸ್ಥಾನಗಳಲ್ಲಿ ಮಾಡಿದ ಭೂಲೂಟಿ ಅಧಿನಾಯಕಿಯನ್ನು ಸಂಕಷ್ಟಕ್ಕೆ ಸಿಲುಕಿಸಿತು. ಈ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ನಾವು ಹೊಸ ಕಾಯಿದೆ ತರುತ್ತೇವೆ ಎಂದು ಕಾಂಗ್ರೆಸ್ ಹೊರಟಿತು. ಅದಕ್ಕೆ ಎಲ್ಲ ಪಕ್ಷಗಳೂ ಬೆಂಬಲಿಸಿದವು. 2013 ರಲ್ಲಿ ಕಾಯಿದೆಯೂ ಪಾಸು ಅಯಿತು. ಅಂಬೇಡ್ಕರ್ ಬರೆದ ಸಂವಿಧಾನಕ್ಕೇ ನೂರಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಸಂವಿಧಾನದ ಪೀಠಿಕೆಗೇ ಕಾಂಗ್ರೆಸ್ ತಿದ್ದುಪಡಿ ತಂದಿದೆ. ಹಾಗಿರುವಾಗ ಒಂದು ಕಾಯಿದೆ ಲೋಪದಿಂದ ಹೊರತಾಗಿರಲು ಸಾಧ್ಯವೆ? 2013 ರ ಭೂಸ್ವಾಧೀನ ಕಾಯಿದೆ 2014 ಜನವರಿ 1 ರಿಂದ ಜಾರಿಗೆ ಬಂದ ಮೇಲೆ ಅದರ ವಾಸ್ತವಿಕ ಸಮಸ್ಯೆಗಳು, ಅಡಚಣೆಗಳು ಎಲ್ಲ ರಾಜ್ಯಗಳ ಅನುಭವಕ್ಕೂ ಬಂದವು. ಈ ಕಾಯಿದೆಯ ಲೋಪಗಳ ಬಗ್ಗೆ ಅತಿ ಉಗ್ರವಾಗಿ ಧ್ವನಿಯೆತ್ತಿದ್ದೇ ಕಾಂಗ್ರೆಸ್ ಆಡಳಿವಿದ್ದ ಮಹಾರಾಷ್ಟ್ರ, ಹರ್ಯಾಣ, ಕೇರಳ, ಕರ್ನಾಟಕಗಳು. ಅದರಲ್ಲೂ ಮಹಾರಾಷ್ಟ್ರ ಮತ್ತು ಹರ್ಯಾಣಗಳು ಗ್ರಾಮೀಣ ಭಾಗದಲ್ಲಿ 4 ಪಟ್ಟು ಪರಿಹಾರಕ್ಕೆ ಬದಲು ಎರಡೇ ಪಟ್ಟು ಕೊಟ್ಟವು. ಒಪ್ಪಿಗೆ ಪ್ರಮಾಣವನ್ನು ಶೇ. 70 ಕ್ಕೆ ಬದಲು, 50 ಕ್ಕೆ ಇಳಿಸಬೇಕೆಂದು ಪತ್ರ ಬರೆದವು. ಹೀಗಾಗಿ ನರೇಂದ್ರ ಮೋದಿಯವರ ಸರ್ಕಾರ 2014, ಮೇ 26 ರಂದು ಅಧಿಕಾರ ವಹಿಸಿಕೊಂಡ ನಂತರ ಜೂನ್ 27 ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಕರೆದರು. ಅದರಲ್ಲಿ ಭಾಗಿಯಾದ 36 ರಲ್ಲಿ 32 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಾಯಿದೆಗೆ ವಿರೋಧ ವ್ಯಕ್ತಪಡಿಸಿದವು, ತಿದ್ದುಪಡಿಗೆ ಒತ್ತಾಯಿಸಿದವು!
ಅದಕ್ಕೆ ಸ್ಪಂದಿಸಿದ್ದೇ ತಪ್ಪಾ?
ಅದು ಸರಿ, ಕಾಯಿದೆಗೆ ತಿದ್ದುಪಡಿ ತಂದು ಸಂಸತ್ತಿನ ಮುಂದಿಡುವ ಬದಲು ಸುಗ್ರೀವಾಜ್ಞೆ ಹೊರಡಿಸಿದ್ದೇಕೆ ಎಂದು ಕೇಳುತ್ತೀರಾ? 2013 ರ ಕಾಯಿದೆಯನ್ನು ರೂಪಿಸಿದಾಗ ನಮ್ಮ ಕಾಂಗ್ರೆಸ್ ಕಣ್ಮಣಿಗಳು ಅದರಲ್ಲಿನ ಸೆಕ್ಷನ್ 105 ರಲ್ಲಿ ಷೆಡ್ಯೂಲ್(ಅನುಸೂಚಿ)-4 ಸ್ರಷ್ಟಿ ಮಾಡಿ ಅದರಲ್ಲಿ 13 ಕಾಯಿದೆಗಳನ್ನು ಸೇರಿಸಿದ್ದರು. 1-1957 ರ ಕಲ್ಲಿದ್ದಲು ಸ್ವಾಧೀನ ಹಾಗೂ ಅಭಿವೃದ್ಧಿ ಕಾಯಿದೆ 2-1956ರ ರಾಷ್ಟ್ರೀಯ ಹೆದ್ದಾರಿ ಕಾಯಿದೆ 3-1885 ರ ಗಣಿ ಭೂಸ್ವಾಧೀನ ಕಾಯಿದೆ 4-1885 ರ ರೈಲು ಮಾರ್ಗ ಕಾಯಿದೆ 5-1989 ರ ರೈಲ್ವೆ ಕಾಯಿದೆ 6-1958 ರ ಐತಿಹಾಸಿಕ ಸ್ಮಾರಕ ಹಾಗೂ ಕಟ್ಟಡಗಳ ಕಾಯಿದೆ 7-1962 ರ ತೈಲ ಹಾಗೂ ಖನಿಜ ಪೈಪ್‌ಲೈನ್ ಕಾಯಿದೆ 8-1948 ರ ದಾಮೋದರ ಕಣಿವೆ ಕಾಯಿದೆ 9-2003 ರ ವಿದ್ಯುತ್ ಕಾಯಿದೆ 10-1952 ರ ಸ್ಥಿರಾಸ್ತಿ ಕಾಯಿದೆ 11-1948 ರ ನಿರ್ವಸಿತಗರ ಪುನರ್ವಸತಿ ಕಾಯಿದೆ 12 -ಮೆಟ್ರೋ ರೈಲ್ವೇ ಕಾಯಿದೆ ಹಾಗೂ 13-1962 ರ ಅಣುಶಕ್ತಿ ಕಾಯಿದೆ.
ಇವಿಷ್ಟೂ ಕಾಯಿದೆಗಳಿಗೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವಾಗ ರೈತರಿಂದ 70 ಪರ್ಸೆಂಟ್ ಒಪ್ಪಿಗೆಯೂ ಬೇಡ ಹಾಗೂ ಸಾಮಾಜಿಕ ಪರಿಣಾಮದ ಅಂದಾಜು ಮಾಡುವ ಅಗತ್ಯವೂ ಇಲ್ಲ ಎಂದಿತು! ಅಷ್ಟು ಮಾತ್ರವಲ್ಲ, ಇತರ ವಿಚಾರಗಳಿಗೆ ಅನ್ವಯವಾಗುವ 4 ಪಟ್ಟು ಪರಿಹಾರ ನೀಡುವ ಅಂಶ ಈ ಕಾನೂನುಗಳಿಗೆ ಅನ್ವಯವಾಗುತ್ತಿರಲಿಲ್ಲ!! ಇದಿಷ್ಟೇ ಅಲ್ಲ, ಈ 13 ಕಾಯಿದೆಗಳಡಿ ಭೂಸ್ವಾಧೀನ ಮಾಡಿಕೊಂಡಾಗ ಸಂತ್ರಸ್ತರಾಗುವ ರೈತರಿಗೆ “ನ್ಯಾಯಯುತ” ಪರಿಹಾರ ಹಾಗೂ ಪುನರ್ವಸತಿ ಈ ಎರಡೂ ಅಂಶಗಳು ಲಾಗೂ ಆಗುತ್ತಿರಲಿಲ್ಲ! ಇತ್ತ ಸಾಮಾಜಿಕ ಪರಿಣಾಮ ಅಂದಾಜು ಹಾಗೂ ಪರಿಹಾರ ನಿರ್ಧಾರದ ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ಏಕರೂಪದ ನಿಯಮ ತರಲೂ ಸಾಧ್ಯವಿರಲಿಲ್ಲ. ಹಾಗಾಗಿ ಸ್ಥಳೀಯ ಮಟ್ಟದಲ್ಲಿ ನಿಯಮ ರೂಪಿಸುವ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೇ ಬಿಡಲಾಗಿತ್ತು. ಪರಿಹಾರವನ್ನು ಇಂತಿಷ್ಟು ಎಂದು ಹೇಗೆ ನಿರ್ಧರಿಸುವುದು? ನಗರದಿಂದ ಇಂತಿಷ್ಟು ಕಿ.ಮಿ. ದೂರದವರೆಗೂ ಇಂತಿಷ್ಟು ಬೆಲೆ ಎಂದು ನೀತಿ ನಿಯಮಾವಳಿಗಳನ್ನು ರೂಪಿಸಬೇಕು. ದಯವಿಟ್ಟು ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿ, ಅವರು ಇಂಥ ನಿಯಮ ರೂಪಿಸಿದ್ದಾರಾ? ಅವರಿಗೆ ಮಾತ್ರವಲ್ಲ, ಎಲ್ಲ ರಾಜ್ಯಗಳಿಗೂ ಈ ಸಮಸ್ಯೆ ಎದುರಾಯಿತು ಹಾಗೂ ಕಾಯಿದೆ ಧೂಳು ಹಿಡಿದು ಕುಳಿತಿತು. ಈ ಕಾಯಿದೆ ಬಂದ ನಂತರ ಇಡೀ ದೇಶಾದ್ಯಂತ 1 ಎಕರೆ ಭೂಮಿಯನ್ನೂ ಸ್ವಾಧೀನ ಮಾಡಿಕೊಳ್ಳಲಾಗಲಿಲ್ಲ ! 20 ಲಕ್ಷ ಕೋಟಿ ರೂ.ಗಳ ಯೋಜನೆಗಳು ಸ್ಥಗಿತಗೊಂಡವು. ಈ ಮಧ್ಯೆ ಷೆಡ್ಯೂಲ್ 4ರಲ್ಲಿರುವ 13 ಕಾಯಿದೆಗಳಡಿ ಭೂಸ್ವಾಧೀನ ಮಾಡಿಕೊಂಡಾಗ ಪರಿಹಾರ, ಪುನರ್ವಸತಿಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ನಿಯಮಕ್ಕೆ ಮೊನ್ನೆ ಡಿಸೆಂಬರ್ 31 ರೊಳಗೆ ಸೂಕ್ತತಿದ್ದುಪಡಿ ತರದಿದ್ದರೆ ಕಾಯಿದೆ ಶಾಶ್ವತವಾಗಿ ಲಾಗೂ ಆಗಿ ರೈತರಿಗೆ ಘೋರ ಅನ್ಯಾಯವಾಗುವುದರಲ್ಲಿತ್ತು. ಹಾಗಾಗಿ ಡಿಸೆಂಬರ್ 31 ರಂದು ನಮ್ಮ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ, ಸೂಕ್ತ ಪರಿಹಾರ ಪುನರ್ವಸತಿ ನೀಡುವ ನಿರ್ಧಾರ ಕೈಗೊಂಡಿತು.
ಈಗ ಹೇಳಿ, ರೈತರ ಹಿತಾಸಕ್ತಿ ಕಾಪಾಡಲು, 4 ಪಟ್ಟು ಪರಿಹಾರದ ಜತೆಗೆ ಪುನರ್ವಸತಿ ಕಲ್ಪಿಸಲು, ಭೂಮಿ ಕಳೆದುಕೊಳ್ಳುವ ರೈತನ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಲು ಮೊದಲಿಗೆ ಸುಗ್ರೀವಾಜ್ಞೆ ಹಾಗೂ ತದನಂತರ ತಿದ್ದುಪಡಿ ತಂದಿದ್ದು ತಪ್ಪಾ? ಯಾರು ರೈತ ವಿರೋಧಿಗಳು, 4 ಪಟ್ಟು ಪರಿಹಾರ ಹಾಗೂ ಪುನರ್ವಸತಿಯನ್ನೇ ಕಲ್ಪಿಸದ ಕಾಂಗ್ರೆಸ್ಸಿಗರೋ ಅಥವಾ ರೈತರ ವಿರುದ್ಧ ಕ್ರಮತೆಗೆದುಕೊಳ್ಳುವುದಿರಲಿ ಯೋಚಿಸಲೂ ಸಾಧ್ಯವಿಲ್ಲ ಎಂದ ಪ್ರಧಾನಿ ನರೇಂದ್ರ ಮೋದಿಯವರೋ?
ನಮ್ಮ ಮಾತು ಬಿಡಿ, ಸೋನಿಯಾ ಗಾಂಧಿಯವರು ಯಾವ ರಾಷ್ಟ್ರೀಯ ಸಲಹಾ ಮಂಡಳಿ(ಎನ್‌ಎಸಿ) ಮಾಡಿಕೊಂಡು 10 ವರ್ಷ ದೇಶವಾಳಿದರೋ ಆ ಸಲಹಾ ಮಂಡಳಿಯ ಸದಸ್ಯರಾಗಿದ್ದ ಎನ್.ಸಿ. ಸಕ್ಸೇನಾ ಅವರೇ ಜಯರಾಮ್ ರಮೇಶ್‌ರ ಭೂಸ್ವಾಧೀನ ಕಾದೆ ರೈತ ವಿರೋಧಿ ಮಾತ್ರವಲ್ಲ, ಕೈಗಾರಿಕಾ ವಿರೋಧಿಯೂ ಅಗಿತ್ತು, ಅದಕ್ಕೆ ತಿದ್ದುಪಡಿ ಅಗತ್ಯವಿತ್ತು ಎಂದಿದ್ದಾರೆ! ಇನ್ನು ಸರ್ಕಾರಿಗೆ 70 ಹಾಗೂ ಖಾಸಗಿ ಸ್ವಾಧೀನಕ್ಕೆ 80 ಪರ್ಸೆಂಟ್ ರೈತರ ಒಪ್ಪಿಗೆ ಪಡೆದುಕೊಳ್ಳಬೇಕೆಂಬ ನಿಯಮ ಕೈಬಿಟ್ಟ ವಿಚಾರಕ್ಕೆ ಬರೋಣ. ಕಾಂಗ್ರೆಸ್ ತಂದ ಕಾಯಿದೆಯಲ್ಲಿ 13 ವಿಚಾರಗಳಿಗೆ ಒಪ್ಪಿಗೆ ಬೇಡವೆಂದಿದ್ದರು. ನಾವು ಆ ಪಟ್ಟಿಗೆ ಮೊದಲು 5 ನ್ನು ಸೇರಿಸಿ ಈಗ 2 ಡನ್ನು ಕೈಬಿಟ್ಟಿದ್ದೇವೆ ಅಷ್ಟೇ. ಇನ್ನೂ ಮಜಾ ಕೇಳಿ, ಅಮೆರಿಕ ಹಾಗೂ ಚೀನಾ ಇವು ಎರಡು ತದ್ವಿರುದ್ಧ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳಲ್ಲವೆ? ಒಂದು ಪ್ರಜಾತಂತ್ರ ಹಾಗೂ ಇನ್ನೊಂದು ಕಮ್ಯುನಿಸ್ಟ್ ರಾಷ್ಟ್ರ. ಆಶ್ಚರ್ಯವೆಂದರೆ ಈ ಎರಡೂ ರಾಷ್ಟ್ರಗಳಲ್ಲೂ ಈ ‘ಒಪ್ಪಿಗೆ’ ನಿಯಮವೇ ಇಲ್ಲ! ಜತೆಗೆ 5 ವರ್ಷಗಳೊಳಗೆ ಯೋಜನೆಯನ್ನು ಪೂರ್ಣಗೊಳಿಸದಿದ್ದರೆ ಆ ಭೂಮಿಯನ್ನು ಮರಳಿ ರೈತರಿಗೆ ಕೊಡುವ ನಿಯಮ ತೆಗೆದುಕೊಳ್ಳಿ. ಯಾರೋ ಒಬ್ಬ ರೈತ ಕೋರ್ಟು ಮೆಟ್ಟಿಲು ಹತ್ತಿದ ಎಂದಿಟ್ಟುಕೊಳ್ಳಿ. ಕೇಸು ಮೂರು ವರ್ಷ ನಡೆಯಿತೆಂದು ಭಾವಿಸಿ. ಇನ್ನೆರಡು ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವೆ? ಹಾಗಾಗಿ ಗಡುವನ್ನು ಹತ್ತು ವರ್ಷಕ್ಕೆ ಏರಿಸಿದ್ದೇವೆ ಅಷ್ಟೆ. ರಾಜ್ಯಕ್ಕೆ ಮೋದಿಯವರು ಐಐಟಿ ಕೊಟ್ಟಿದ್ದಾರೆ. ಮುಂದೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕೊಡುತ್ತಾರೆ. ಒಂದೊಂದಕ್ಕೂ ತಲಾ 500 ಎಕರೆ ಭೂಮಿ ಬೇಕು. ಹಾಗೆ ಸ್ವಾಧೀನ ಮಾಡಿಕೊಳ್ಳಲು ಹೋದಾಗ ಒಬ್ಬ ರೈತ ತಗಾದೆ ತೆಗೆದು ಕೋರ್ಟಿಗೆ ಹೋಗಿ 5 ವರ್ಷವಾದರೆ ಇಡೀ ಐಐಟಿಯನ್ನೇ ಕೈಬಿಟ್ಟು ರೈತನಿಗೆ ಭೂಮಿ ಹಿಂದಿರುಗಿಸುತ್ತೀರಾ?
ಇನ್ನು ಬಹುಮುಖ್ಯವಾದ ಫಲವತ್ತಾದ ಅಥವಾ ಬಹು ಬೆಳೆ ಬೆಳೆಯುವ ಭೂಮಿಯನ್ನು(ಮಲ್ಟಿ ಕ್ರಾಪ್ಸ್) ಸ್ವಾಧೀನದಿಂದ ಹೊರಗಿಟ್ಟಿದ್ದ ವಿಚಾರವನ್ನು ತೆಗೆದುಕೊಳ್ಳಿ. ಮೊನ್ನೆ ಗುರುವಾರವಷ್ಟೇ, ರಾಜ್ಯದ ಲೋಕೋಪಯೋಗಿ ಸಚಿವರಾದ ಎಚ್.ಸಿ. ಮಹಾದೇವಪ್ಪನವರು ನೀಡಿರುವ ಹೇಳಿಕೆಯನ್ನು ನೋಡಿ. “ಬೆಂಗಳೂರು-ಮೈಸೂರು ನಡುವೆ ಅಷ್ಟಪಥ(8 ಲೇನ್) ಹೆದ್ದಾರಿ ನಿರ್ಮಾಣ ಮಾಡುತ್ತೇವೆ. 800 ಕೋಟಿ ವೆಚ್ಚದ ಫ್ಲೈಓವರ್ ಬದಲು 1200 ಕೋಟಿ ವೆಚ್ಚದಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣ ಮಾರ್ಗವಾಗಿ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡುತ್ತೇವೆ” ಎಂದಿದ್ದಾರೆ. ಈ ಬೈಪಾಸನ್ನು ಭತ್ತ ಹಾಗೂ ಕಬ್ಬು ಬೆಳೆಯುವ(ಮಲ್ಟಿಕ್ರಾಪ್ಸ್) ಕೃಷಿ ಭೂಮಿಯ ಮೇಲಲ್ಲದೆ ಕೆ.ಅರ್. ನಗರದ ಮಾಜಿ ಕಪಟ ವಕೀಲನ ಬೊಳುದಲೆ ಮೇಲೆ ನಿರ್ಮಾಣ ಮಾಡಲು ಸಾಧ್ಯವೆ? “ಯುಪಿಎ ಇದ್ದಾಗ ರಾಜ್ಯದಲ್ಲಿ 2 ಸಾವಿರ ಕಿ. ಮೀ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ರಾಜ್ಯದ ಸಂಸದರು, ಕಾಂಗ್ರೆಸ್ ಸಂಸದೀಯ ನಾಯಕರ ಜತೆ ಚರ್ಚಿಸಿ 8 ಸಾವಿರ ಕಿ.ಮಿ.ನಷ್ಟು ರಸ್ತೆಯನ್ನು ಹೆದ್ದಾರಿಯಾಗಿ ನಿರ್ಮಾಣ ಮಾಡಲು ನಾವು ಕೇಂದ್ರದ ಅನುಮತಿ ಕೋರಿದ್ದೇವೆ” ಎಂದೂ ಮಹಾದೇವಪ್ಪ ಹೇಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ರಾಷ್ಟ್ರೀಯ ಹೆದ್ದಾರಿ ಬರೀ ಬರಡು ಭೂಮಿಯ ಮೇಲೆ ಹೋಗಲು ಸಾಧ್ಯವೆ? ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಾಷ್ಟ್ರೀಯ ಹೆದ್ದಾರಿಯಾಗಬೇಕಾದರೆ ಅದು ಬಹು ಬೆಳೆ ಬೆಳೆಯುವ ಕೃಷಿ ಭೂಮಿಯ ಮೇಲೆ ಹಾದುಹೋಗದೆ ಇದ್ದೀತೆ? ಅಥವಾ ಮೈಸೂರಿನಿಂದ ಕುಶಾಲ ನಗರಕ್ಕೆ ರೈಲು ಹಳಿ ಹಾಕಬೇಕಾದರೆ ಕೃಷಿ ಭೂಮಿ ಹೋಗುವುದಿಲ್ಲವೆ? ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮಹಾದೇವಪ್ಪನವರನ್ನು ಹಾಗೂ ರಾಜ್ಯ ಕಾಂಗ್ರೆಸ್ಸನ್ನು ಈ ಟೀಕಾಕಾರರು ರೈತ ವಿರೋಧಿ ಎಂದು ಕರೆಯುತ್ತಾರಾ? ಇನ್ನು ಈ ಕಾದೆದೆಯಲ್ಲಾ, ಅದು ಅಪ್ಷನಲ್ . ಅಂದರೆ ಐಚ್ಛಿಕ. ರಾಜ್ಯಗಳು ಅದನ್ನು ಜಾರಿಗೊಳಿಸದೆಯೂ ಇರಬಹುದು. ಸಿದ್ದರಾಮಯ್ಯನವರು ಬೇಡವೆಂದಾದರೆ ಈ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೊಳಿಸದೇ ಇರಲು ಇದರಲ್ಲಿ ಅವಕಾಶವಿದೆ. ಹೋಗಿ ಹೇಳಿರಲ್ಲಾ?!
ಕಡೆಯದಾಗಿ, ಹೊಸ ಕಾಯಿದೆಯಲ್ಲಿ ನಾವು ರೈತರ ಹಿತಾಸಕ್ತಿಯನ್ನು ಕಾಪಾಡಲು ಎಲ್ಲ ಮುಂಜಾಗ್ರತೆಗಳನ್ನೂ ತೆಗೆದುಕೊಂಡಿದ್ದೇವೆ. ಭೂಮಿ ಕಳೆದುಕೊಳ್ಳುವ ರೈತನ ಕುಟುಂಬದ ಸದಸ್ಯರೊಬ್ಬರಿಗೆ 4 ಪಟ್ಟು ಪರಿಹಾರದ ಜತೆಗೆ ಕಡ್ಡಾಯ ಉದ್ಯೋಗ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಗೆ ಮಾತ್ರ ಭೂಸ್ವಾಧೀನ ಮಾಡಿಕೊಳ್ಳಲಾಗುವುದು. ಖಾಸಗಿ ಕಾಲೇಜು ಅಥವಾ ಆಸ್ಪತ್ರೆಗಳಿಗೆ ಭೂಸ್ವಾಧೀನವಿಲ್ಲ. ಯೋಜನೆಗೆ ಬೇಕಾದ ಕನಿಷ್ಠ ಭೂಮಿಯನ್ನು ಮಾತ್ರ ಸ್ವಾಧೀನ ಮಾಡಿಕೊಳ್ಳಲಾಗುವುದು. ಕೈಗಾರಿಕಾ ಕಾರಿಡಾರ್‌ಗಳಿಗೆ ಭೂಮಿ ಸ್ವಾಧೀನ ಮಾಡಿಕೊಂಡರೂ ಅದು ಒಂದು ಕಿ. ಮಿ. ಚೌಕಟ್ಟನ್ನು ಮೀರುವಂತಿಲ್ಲ. ನಿಮ್ಮ ತಕರಾರುಗಳನ್ನು ಹೈಕೋರ್ಟ್ ಬದಲು ಜಿಲ್ಲಾ ಮಟ್ಟದಲ್ಲೇ ಆಲಿಸಲಾಗುವುದು. ಒಂದು ವೇಳೆ, ಯಾವುದಾದರೂ ಸರ್ಕಾರಿ ಅಧಿಕಾರಿ ನಿಮಗೆ ಉಪದ್ರವ ಕೊಟ್ಟರೆ ಸಿಪಿಸಿ(ಕ್ರಿಮಿನಲ್ ಅಪರಾಧ ಕಾಯಿದೆ)ಯ 197 ನೇ ಸಂಹಿತೆಯ ಪ್ರಕಾರ ಸ್ಥಳೀಯ ನ್ಯಾಯಾಲಯ ಮೊಕದ್ದಮೆ ದಾಖಲಿಸಿಕೊಳ್ಳಬಹುದು. ಹಾಗಾಗಿ ಗಾಳಿ ಮಾತಿಗೆ ಕಿಮಿಗೊಡುವ ಮೂಲಕ ಭಯಭೀತರಾಗುವ ಬದಲು ದಯವಿಟ್ಟು ನಿಶ್ಚಿಂತೆಯಿಂದಿರಿ . ಇಷ್ಟಕ್ಕೂ ಎಸ್‌ಇಝೆಡ್ ಹೆಸರಿನಲ್ಲಿ ನವೀ ಮುಂಬುಯಲ್ಲಿ 1250 ಹೆಕ್ಟೇರ್ ಜಾಗವನ್ನು ಮುಖೇಶ್ ಅಂಬಾನಿಯೊಬ್ಬರಿಗೇ ದಾನ ಕೊಟ್ಟಿರುವ ಹಾಗೂ ಚೀನಾದವರು ನಮ್ಮ ಅಕ್ಷಾಯ್ ಚಿನ್ ಅನ್ನು ಕಬಳಿಸಿ ನಿಯಂತ್ರಣಕ್ಕೆ ತೆಗೆದುಕೊಂಡಾಗ ಮರಳಿ ವಶಪಡಿಸಿಕೊಳ್ಳುವ ಬದಲು Not a single blade of grass grows there’ (ಅಲ್ಲಿ ಒಂದು ಹಲ್ಲು ಕಡ್ಡಿಯೂ ಬೆಳೆಯುವುದಿಲ್ಲ) ಎನ್ನುತ್ತಾ ಚೀನಾಕ್ಕೆ ಬಿಟ್ಟುಕೊಟ್ಟ ನೆಹರು ಅವರ ಕಾಂಗ್ರೆಸ್ಸಿಗರಿಂದ ನಮಗೆ ಭೂಮಿಯ ಮಹತ್ವದ ಬಗ್ಗೆ ಪಾಠ ಬೇಕಿಲ್ಲ!!