Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ವಯಸ್ಸಿಗೆ ಬಂದ ಒಬ್ಬನೇ ಮಗನನ್ನು ದೇಶಕ್ಕೆ ಬಲಿಕೊಟ್ಟು ಜೀವಂತ ಶವದಂತೆ ಬದುಕುತ್ತಿರುವ ತಂದೆಯರೂ ಇದ್ದಾರೆ, ಗುರ್ ಮೆಹರ್!

ವಯಸ್ಸಿಗೆ ಬಂದ ಒಬ್ಬನೇ ಮಗನನ್ನು ದೇಶಕ್ಕೆ ಬಲಿಕೊಟ್ಟು ಜೀವಂತ ಶವದಂತೆ ಬದುಕುತ್ತಿರುವ ತಂದೆಯರೂ ಇದ್ದಾರೆ, ಗುರ್ ಮೆಹರ್!

ವಯಸ್ಸಿಗೆ ಬಂದ ಒಬ್ಬನೇ ಮಗನನ್ನು ದೇಶಕ್ಕೆ ಬಲಿಕೊಟ್ಟು ಜೀವಂತ ಶವದಂತೆ ಬದುಕುತ್ತಿರುವ ತಂದೆಯರೂ ಇದ್ದಾರೆ, ಗುರ್ ಮೆಹರ್!

‘ಕಿಸಿಕೋ ರಿಸರ್ವೇಶನ್ ಚಾಹಿಯೇ ತೋ ಕಿಸಿಕೋ ಆಝಾದಿ! ಹಮೇ ಕುಚ್ ನಹೀ ಚಾಹಿಯೇ ಭಾಯಿ, ಬಸ್ ಅಪ್ನಿ ರೆಜಾಯಿ!’ ಕೆಲವರಿಗೆ ಮೀಸಲು ಬೇಕಾದರೆ ಇನ್ನು ಕೆಲವರಿಗೆ ಸ್ವಾತಂತ್ರ್ಯ ಬೇಕಂತೆ. ಅಣ್ಣಾ, ನನಗೆ ಏನೂ ಬೇಡ ಹೊದ್ದುಕೊಳ್ಳಲು ಒಂದು ಕಂಬಳಿ ಬಿಟ್ಟು! ಹಾಗಂತ ಹೇಳಿದ್ದು ಯಾರು ಅಂತ ನೆನಪಾಯಿತಾ?! 2016, ಫೆಬ್ರವರಿ 21. ಅಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಕಾಶ್ಮೀರ ಕಣಿವೆಯ ಪ್ಯಾಂಪೊರ್‌ನಲ್ಲಿ ಸರಕಾರಿ ಕಚೇರಿಯೊಳಗೆ ಅಡಗಿ ಕುಳಿತಿದ್ದ ಉಗ್ರರನ್ನು ಸದೆ ಬಡಿಯಲು ಹೋಗಿದ್ದ ಐವರು ಭಾರತೀಯ ಸೈನಿಕರು ಹುತಾತ್ಮರಾದರು. ಅವರನ್ನು ಮುನ್ನಡೆಸುತ್ತಿದ್ದ ಪ್ಯಾರಾ ಕಮ್ಯಾಂಡೋ ಮತ್ತಾರೂ ಅಲ್ಲ ರಾಜಧಾನಿ ದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ 23 ವರ್ಷದ ಪದವೀಧರ ಕ್ಯಾಪ್ಟನ್ ಪವನ್ ಕುಮಾರ್.
ಮೇಲೆ ಉಲ್ಲೇಖಿಸಿರುವುದು ಆತ ಹುತಾತ್ಮ ನಾಗುವ ಮೊದಲು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟಿಂಗ್. ಹಗಲು ರಾತ್ರಿಯೆನ್ನದೆ ಕೊರೆಯುವ ಚಳಿಯಲ್ಲಿ ಗಡಿ ಕಾಯುವ ಆತ ನನಗೊಂದು ಕಂಬಳಿಯಷ್ಟೇ ಕೊಡಿ ಎಂದು ಕೇಳಿದ್ದ, ಹಾಗೆ ಕೇಳಿ ಎರಡೇ ದಿನದಲ್ಲಿ ಆತನ ದೇಹ ತ್ರಿವರ್ಣ ಧ್ವಜ ಹೊದ್ದು ನಿರ್ಜೀವವಾಗಿ ಬಂತು. ಇದ್ದವನು ಒಬ್ಬನೇ ಮಗ. ಕಾಲೇಜಿಗೆ ಹೋಗು ವಾಗ, ಮನೆಗೆ ಬಂದಾಗ ಓಡಾಡುತ್ತಿದ್ದುದು ಹಾರ್ಲೆ ಡೇವಿಡ್‌ಸನ್ ಬೈಕು, ಫ್ಯಾನ್ಸಿ ಜೀಪು. ವಯಸ್ಸಿಗೆ ಬಂದ ಅಂಥ ಒಬ್ಬನೇ ಮಗನನ್ನು ಕಳೆದುಕೊಂಡರೆ ಆ ತಂದೆ-ತಾಯಿಯ ಸ್ಥಿತಿ ಏನಾಗಬಹುದು?. ಆದರೂ ‘ “I had one child, I gave him to the Army, to the nation. No father can be prouder’’. ನನಗಿದ್ದವನು ಒಬ್ಬನೇ ಮಗ. ಅವನನ್ನು ಸೇನೆಗೆ, ದೇಶಕ್ಕೆ ಕೊಟ್ಟೆ. ಒಬ್ಬ ತಂದೆಯಾದವನಿಗೆ ಅದಕ್ಕಿಂತ ಹೆಮ್ಮೆಯುಂಟೇ ಎಂದರು ಆತನ ಅಪ್ಪ ರಾಜ್‌ವೀರ್ ಸಿಂಗ್. ಅವತ್ತು ಜಿನುಗದ ಕಣ್ಣುಗಳು, ಮರುಗದ ಹೃದಯಗಳು ಯಾವುವೂ ಇರಲಿಕ್ಕಿಲ್ಲ!
ನಮ್ಮ ಯೋಧ ಹನುಮಂತಪ್ಪ ಕೊಪ್ಪದ್ 20 ಅಡಿ ಹಿಮದ ಕೆಳಗೆ ಜೀವ ಹಿಡಿದಿಟ್ಟುಕೊಂಡಿದ್ದನ್ನು ಕಂಡು ಆತನನ್ನು ಉಳಿಸಿಕೊಳ್ಳಲೇಬೇಕು ಎಂದು ಎಷ್ಟು ಜನ ದೇವರ ಮುಂದೆ ದೀಪ ಹಚ್ಚಲಿಲ್ಲ ಹೇಳಿ? ಆಳುವ ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ದೌಡಾಯಿಸಿದ್ದನ್ನು ನಾವು ನೋಡಿದ್ದೇವೆ. ಕಾರ್ಗಿಲ್ ಕದನ ಎಂದ ಕೂಡಲೇ ಮದುವೆಗೆ ಮುನ್ನ ಯುದ್ಧ ಮುಗಿಸಿ ಬರುತ್ತೇನೆಂದು ಹೋದವನು ಟೈಗರ್ ಹಿಲ್ ಗೆದ್ದುಕೊಟ್ಟನಾದರೂ ಕೊನೆಗೆ ಹೆಣವಾಗಿ ಬಂದ ವಿಕ್ರಮ್ ಬಾತ್ರಾ, ಮೇಜರ್ ಸುಧೀರ್ ವಾಲಿಯಾ, ಕ್ಯಾಪ್ಟನ್ ಸೌರಭ್ ಕಾಲಿಯಾ, ವಿಜಯಂತ್ ಥಾಪರ್, ಕ್ರೀಡಾಪಟು ವಾದವನು ಕೊನೆಗೆ ಲೆಜೆಂಡರಿ ಸೈನಿಕನಾದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ಅನೂಜ್ ನಯ್ಯರ್. ಒಬ್ಬೊಬ್ಬರೂ ಮೂವತ್ತೊರಳಗೇ ಮರೆಯಾದವರು. ಹೌದು, ಕುಪ್ವರಾದಲ್ಲಿ ಸೇನಾ ನೆಲೆ ರಕ್ಷಿಸುವ ಸಂದರ್ಭದಲ್ಲಿ ಹುತಾತ್ಮರಾದ ಗುರ್‌ಮೆಹರ್ ತಂದೆ ಮನ್‌ದೀಪ್ ಸಿಂಗ್ ಬಗ್ಗೆಯೂ ನಮಗೆ ಅಷ್ಟೇ ಗೌರವವಿದೆ. ಅವರ ಕುಟುಂಬ ಮಾಡಿದ ತ್ಯಾಗ, ಅನುಭವಿಸಿದ ನೋವು ನಮಗೆ ಅರ್ಥವಾಗುತ್ತದೆ. ಯುದ್ಧ, ಸಂಘರ್ಷಗಳು ಅತೀವ ಪ್ರಾಣಹಾನಿ, ನೋವು, ಸಂಕಟ ತರುತ್ತವೆ.
ಕದನಗಳೇ ಇಲ್ಲದ ಜಗತ್ತು ನಮ್ಮೆಲ್ಲರಿಗೂ ಬೇಕು. ಆ ಕಾರಣಕ್ಕಾಗಿಯೇ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್‌ಗೆ ಬಸ್‌ಯಾತ್ರೆ ಕೈಗೊಂಡಿದ್ದರು. ಕೊನೆಗೆ ಪಾಕಿಸ್ತಾನದಿಂದ ಸಿಕ್ಕಿದ್ದು ಕಾರ್ಗಿಲ್ ಯುದ್ಧದ ಬಳುವಳಿ ಮತ್ತು ನಮ್ಮ 527 ಸೈನಿಕರ ಪ್ರಾಣಹರಣ. “Pakistan Did Not Kill My Dad, War Killed Him’ ಎನ್ನುವ ಮೊದಲು ಕಾರ್ಗಿಲ್ ಯೋಧನ ಮಗಳೆಂದು ಹೇಳಿಕೊಳ್ಳುವ ಗುರ್‌ಮೆಹರ್ ಕೌರ್ ಗೆ ಇದು ಗೊತ್ತಿರಲೇಬೇಕಲ್ಲವೆ? ಅಫ್ಘಾನಿಸ್ತಾನದ ಭೇಟಿಗೆ ಹೋದ ಪ್ರಧಾನಿ ನರೇಂದ್ರ ಮೋದಿಯವರು ಅಚಾನಕ್ಕಾಗಿ ಕರಾಚಿಯಲ್ಲಿ ವಿಮಾನ ನಿಲ್ಲಿಸಿ ನವಾಜ್ ಷರೀಫರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ವಾಪಸ್ಸಾದ ಕೂಡಲೇ ಪಾಕಿಸ್ತಾನದಿಂದ ಸಿಕ್ಕಿದ್ದು ಪಠಾಣ್‌ಕೋಟ್ ಅಟ್ಯಾಕ್ ಎಂಬುದೂ ತಿಳಿದಿರಲೇಬೇಕು ತಾನೇ? 2008ರ ಮುಂಬೈ ದಾಳಿಯ ರೂವಾರಿ ಹಫೀಸ್ ಸಯೀದ್‌ನನ್ನು ಸಾಕಿ ಸಲಹುತ್ತಿರುವ ಪಾಕಿಸ್ತಾನದ ಜತೆ ‘ಅಮನ್ ಕಿ ಆಶಾ’ ಎಂದು ಅಭಿಯಾನ ಮಾಡಿದವರಿಗೆ ಕೊನೆಗೆ ಉಳಿದಿದ್ದು ಖರ್ಚಾಗದ ಕಾಪಿಗಳೆಂಬ ರದ್ದಿ ಪೇಪರ್ ಅಷ್ಟೇ! ಸಿಖ್ಖಳಾದ ಗುರ್‌ಮೆಹರ್‌ಗೆ ಸಿಖ್ಖಪಂಥದ ಇತಿಹಾಸ, ಗುರುಗೋವಿಂದ್ ಸಿಂಗ್, ಅವರ ಮಕ್ಕಳನ್ನು ಕೊಂದವರ ಮತ ಇವೆಲ್ಲ ಗೊತ್ತಿರಲೇಬೇಕು ಅಲ್ಲವೆ? ಕನಿಷ್ಠ ಪಕ್ಷ, ಸಾಹಿತ್ಯದ ವಿದ್ಯಾರ್ಥಿಯಾದ ಆಕೆಗೆ ಖುಷವಂತ್ ಸಿಂಗರ Train To Pakistan’ ಪುಸ್ತಕದ ಪರಿಚಯವಾದರೂ ಇರಬೇಕಲ್ವಾ? ಹೋಗಲಿ ಬಿಡಿ, ಆಕೆ ಒಬ್ಬ ಅಚಲ ಶಾಂತಿದೂತೆ ಎಂದೇ ಭಾವಿಸೋಣ. ತಂದೆಯನ್ನು ಎರಡು ವರ್ಷದವಳಾಗಿದ್ದಾಗಲೇ ಕಳೆದುಕೊಂಡ ನೋವು ಆಕೆಯಲ್ಲಿ ಸಾವು, ಸಂಕಟ ತರುವ ಸಂಘರ್ಷ, ಯುದ್ಧಗಳು ಭಯ ಸೃಷ್ಟಿಸಿರಬಹುದು. ಅದರ ಬಗ್ಗೆ ಎರಡು ಮಾತಿಲ್ಲ.
ಆಕೆ 11 ತಿಂಗಳ ಹಿಂದೆ ಯುದ್ಧ, ಸಂಘರ್ಷದ ವಿರುದ್ಧ ಹಾಕಿರುವ ನಾಲ್ಕೂವರೆ ನಿಮಿಷದ ವಿಡಿಯೊವನ್ನು ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ಆಕೆಯ ವಾದವೂ ಒಪ್ಪುವಂಥದ್ದೇ ಮತ್ತು ಹಾಗೆ ವಾದ ಮಾಡಲು ಆಕೆಗೆ ಎಲ್ಲ ಹಕ್ಕಿದೆ. ಆದರೂ ಏಕಾಗಿ ಆಕೆಯ ಹಳೆಯ ವಿಡಿಯೊ, ಫೇಸ್‌ಬುಕ್ ಪೋಸ್ ಪುಟಗಳನ್ನು ಈಗ ಎಳೆದುತಂದು ಟೀಕಿಸಲಾಗುತ್ತಿದೆ ಎಂದುಕೊಂಡಿರಿ? ಕೆಲವರು ನಾರೀ ತುನಾರಾಯಣಿ(ಹೆಣ್ಣು ದೇವರಿಗೆ ಸಮಾನ) ಎನ್ನುತ್ತಾ ಮೋದಿಯವರನ್ನೇ ಪ್ರಶ್ನಿಸಲು ಮುಂದಾದರೆ, ಸಾಮಾನ್ಯವಾಗಿ ಬಹಳ ಗಂಭೀರವಾಗಿ, ಅರ್ಥಪೂರ್ಣವಾಗಿ ಮಾತನಾಡುವ ನಿವೃತ್ತ ವಿಂಗ್ ಕಮಾಂಡರ್ ಅತ್ರಿಯವರು, ಹೆಣ್ಣು ಮಗಳು…ಹೆಣ್ಣು ಮಗಳು… ಎನ್ನುತ್ತಾ ಭಾವೋದ್ರೇಕದಲ್ಲಿ ವಾಸ್ತವವನ್ನೇ ಮರೆತಂತೆ ಮಾತನಾಡತೊಡಗಿದ್ದಾರೆ!
ವೀರೇಂದ್ರ ಸೆಹವಾಗ್, ನಾನು ತ್ರಿಶತಕ ಹೊಡೆಯಲಿಲ್ಲ, ನನ್ನ ಬ್ಯಾಟು ಹೊಡೆಯಿತು ಎಂದು ಮಾರ್ಮಿಕವಾಗಿ ಹೇಳಿದ್ದು, ಫೋಗೋಟ್ ಸಹೋದರಿಯರು, ಒಲಂಪಿಯನ್ ಯೋಗೇಶ್ವರ ದತ್, ನಟ ರಣದೀಪ್ ಹೂಡಾ ಧ್ವನಿಗೂಡಿಸಿದ್ದು ಸುಖಾಸುಮ್ಮನೆಯೇ? ಕಶ್ಮೀರ್ ಮಾಂಗೇ ಆಝಾದಿ ಬಸ್ತರ್ ಮಾಂಗೇ ಆಝಾದಿ ಹಮ್‌ಕೊ ಚಾಹಿಯೇ ಆಝಾದಿ ಎನ್ನುತ್ತಾ ದಿಲ್ಲಿಯ ರಾಮ್ಜಸ್ ಕಾಲೇಜಿನಲ್ಲಿ ಘೋಷಣೆ ಕೂಗುತ್ತಿದ್ದವರೇನು ಶಾಂತಿದೂತರೇ? ಆಝಾದಿಗಾಗಿ ಕಾಶ್ಮೀರದಲ್ಲಿ ಅವರು ಹಿಡಿದಿರುವ ಎಕೆ-47ನ ನಳಿಕೆಯಿಂದ ಹೊರಬರುವುದು ಶಾಂತಿಯ ಸಂಕೇತದದ ಬಿಳಿ ಗುಲಾಬಿ ಹೂವುಗಳೇ? ಇದುವರೆಗೂ 15 ಸಾವಿರಕ್ಕೂ ಅಧಿಕ ಸೈನಿಕರು ದೇಶಕ್ಕಾಗಿ ಪ್ರಾಣ ಕಳೆದುಕೊಂಡರಲ್ಲ ಅವರನ್ನು ಬಲಿ ತೆಗೆದುಕೊಂಡಿದ್ದು ಇದೇ ಆಝಾದಿಗಾಗಿನ ಸಂಘರ್ಷವೇ ಅಲ್ಲವೆ? ಒಂದು ವರ್ಷದ ಹಿಂದೆ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ‘ಭಾರತ್ ತೇರೆ ಟುಕ್ಡೆ ಹೋಂಗೆ, ಇನ್ಸಾಲ್ಹಾ’ (ಭಾರತವನ್ನು ತುಂಡರಿಸುತ್ತೇವೆ), ‘ಅಫ್ಜಲ್‌ಗುರು ಹಮ್ ಶರ್ಮಿಂದಾ ಹೈ, ತೇರೆ ಖಾತಿಲ್ ಜಿಂದಾ ಹೈ’(ಅಫ್ಜಲ್ ಗುರು ನಮಗೆ ನಾಚಿಕೆಯಾಗುತ್ತಿದೆ, ನಿನ್ನನ್ನು ಕೊಂದವರು ಇನ್ನೂ ಬದುಕಿದ್ದಾರೆಂದು) ಎಂದು ಘೋಷಣೆ ಕೂಗಿದವರು ಇದೇ ಆಝಾದಿ ಚಳವಳಿಕಾರರೇ ಅಲ್ಲವೆ? ಇವನ್ನೆಲ್ಲ ನೋಡಿ ಕೊಂಡು ಎಬಿವಿಪಿ ಸುಮ್ಮನಿರಬೇಕಿತ್ತೇ? ಇದರ ಹಿಂದಿರುವ ವ್ಯಕ್ತಿ ದೇಶದ್ರೋಹದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ತಾನೆ? ಹೀಗಿದ್ದರೂ ‘ನಾನು ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ನಾನೇನು ಎಬಿವಿಪಿಗೆ ಹೆದರುವುದಿಲ್ಲ.
ನಾನು ಏಕಾಂಗಿಯಲ್ಲ, ನನ್ನ ಜತೆ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದ್ದಾನೆ’ ಎನ್ನುತ್ತಾ ‘ಎಬಿವಿಪಿ ವಿರುದ್ಧ ವಿದ್ಯಾರ್ಥಿಗಳು’ ಎಂಬ ಹ್ಯಾಶ್‌ಟ್ಯಾಗ್ ಹಾಕುತ್ತಾಳಲ್ಲಾ ಈ ಗುರ್ ಮೆಹರ್, 20 ವರ್ಷದ ಅಮಾಯಕ ಹೆಣ್ಣುಮಗಳೇ? ನಾನು ಏಕಾಂಗಿಯಲ್ಲ, ನನ್ನ ಜೊತೆ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದ್ದಾನೆ ಎನ್ನುತ್ತಾಳಲ್ಲಾ ಆಕೆ ಓದುತ್ತಿರುವ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹೀಗೆ ನಾಲ್ಕರಲ್ಲಿ ಮೂರನ್ನು ಗೆದ್ದುಕೊಂಡಿರುವ ಎಬಿವಿಪಿ ಜತೆ ವಿದ್ಯಾರ್ಥಿಗಳಿದ್ದಾರೋ ಅಥವಾ ಈ ಪೋಸ್ಟರ್ ಪ್ರವೀಣೆಯ ಜತೆಗೋ? ಕಳೆದ ವರ್ಷ ಆಝಾದಿ ಹೆಸರಿನಲ್ಲಿ ಯಾವ ರೀತಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂಬುದು ಗೊತ್ತಿದ್ದ ಕಾರಣಕ್ಕೇ ಅಲ್ಲವೆ ಈ ಬಾರಿ ಎಬಿವಿಪಿ ಅವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದು? ಅದರಲ್ಲಿ ತಪ್ಪೇನಿದೆ? ಕಳೆದ ವರ್ಷ ಆಝಾದಿ, ಮಹಿಳಾ ಹಕ್ಕು ಎಂದೆಲ್ಲ ಮಾತನಾಡುತ್ತಿದ್ದ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯ ಸದಸ್ಯ ಅನಮೋಲ್ ರತನ್, ಸಹಪಾಠಿಗೆ ಮತ್ತು ಬರುವ ಪಾನೀಯ ಕುಡಿಸಿ ರೇಪ್ ಮಾಡಿ ಈಗ ಜೈಲಿನಲ್ಲಿದ್ದಾನೆ. ಈ ಕಮ್ಯುನಿಸ್ಟರು ಹೇಳುವುದು ವೇದ, ತಿನ್ನುವುದು ಬದನೆಕಾಯಿ. ಇಂಥವರ ಮತ್ತು ಆಮ್ ಆದ್ಮಿ ಪಾರ್ಟಿಯ ಜತೆ ಸಂಪರ್ಕ ಇಟ್ಟುಕೊಂಡಿರುವ ಗುರಮೆಹರ್ ಕೌರ್‌ಳೇನು ಅಮಾಯಕಳು ಎಂದುಕೊಳ್ಳಬೇಡಿ! ಹನ್ನೊಂದು ತಿಂಗಳ ಹಿಂದೆ ಹಾಕಿದ ವಿಡಿಯೊ ನೋಡುತ್ತಾ, ಮುಂದಿನ ದಿನಗಳಲ್ಲಿ ಆಕೆ ಹೇಗೆ ನಡೆದುಕೊಂಡಿದ್ದಾಳೆ ಎಂಬುದನ್ನು ಮರೆಯಬೇಡಿ. ಡಿಲೀಟ್ ಮಾಡಲಾಗಿರುವ ಆಕೆಯ ಫೇಸ್‌ಬುಕ್ ಟೈಮ್ ಲೈನ್ ನೋಡಿದ್ದರೆ ಅವಳ ನಿಜಬಣ್ಣ ನಿಮಗೆ ಅರ್ಥವಾಗುತ್ತಿತ್ತು!
ಪಾಕಿಸ್ತಾನದ ಗಡಿಯೊಳಕ್ಕೆ ನುಗ್ಗಿ ನಮ್ಮ ಸೈನಿಕರು ಮಾಡಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನೀವೆಲ್ಲ ಹೆಮ್ಮೆಪಟ್ಟಿದ್ದಿರಿ ತಾನೇ? ಆದರೆ ಗುರ್‌ಮೆಹರ್ ಕೌರ್‌ಳ 2016, ನವೆಂಬರ್ 2ರ ಫೇಸ್‌ಬುಕ್ ಪೋಸ್ಟಿಂಗ್ ನೋಡಿ. ಕಮ್ಯುನಿಸ್ಟ ರಾದ ಕವಿತಾ ಕೃಷ್ಣನ್ ಹಾಗೂ ಮತಾಂತರಿ ಜಾನ್ ದಯಾಳ್ ಜತೆ ಪತ್ರಿಕಾಗೋಷ್ಠಿಯಲ್ಲಿ ಕುಳಿತು ಸರ್ಜಿಕಲ್ ಸ್ಟ್ರೈಕನ್ನು ಈಕೆ ಟೀಕಿಸುತ್ತಿರುವ ಫೋಟೊವಿದೆ! ಸರ್ಜಿಕಲ್ ಸ್ಟ್ರೈಕ್ ವಿರೋಧಿಸಿ ನವೆಂಬರ್ 9ರಂದು ನಡೆದ ಹೋರಾಟಕ್ಕೆ ಎಲ್ಲರಿಗೂ ಆಹ್ವಾನವನ್ನೂ ಕೊಟ್ಟಿದ್ದಾಳೆ!! ಈ ಶಾಂತಿಧೂತೆ ಪಠಾಣ್‌ಕೋಟ್ ದಾಳಿ ವಿರೋಧಿಸಿ ಪ್ರತಿಕಾಗೋಷ್ಠಿಯಾಗದಿದ್ದರೂ ಕನಿಷ್ಠ ಫೇಸ್ ಬುಕ್‌ನಲ್ಲಿ ಒಂದು ಪೋಸ್ಟನ್ನಾದರೂ ಹಾಕಬಹುದಿತ್ತಲ್ಲವೆ? ಈಕೆಯ ಇಬ್ಬಂದಿ ನಿಲುವಿಗೆ ಇನ್ನೊಂದು ನಿದರ್ಶನ ಕೊಡಲೇ? 2016, ಡಿಸೆಂಬರ್ 20ರಂದು ಟರ್ಕಿಯಲ್ಲಿದ್ದ ರಷ್ಯಾ ರಾಯಭಾರಿ ಆ್ಯಂಡ್ರೆ ಕಾರ್ಲೋವ್‌ರನ್ನು ಕೊಂದ ನಂತರ ‘You killed million V/s One’ಶೀರ್ಷಿಕೆಯಡಿ ಪೋಸ್ಟಿಂಗ್ ಹಾಕಿಕೊಂಡು ಸೇಡಿನ ಹತ್ಯೆ ಎಂದು ಸಮರ್ಥಿಸಿಕೊಂಡಿದ್ದಳು! ಈಕೆಯ ನಿಲುವು, ಫೇಸ್‌ಬುಕ್ ಪೋಸ್ಟಿಂಗ್, ಪಾಲ್ಗೊಂಡಿರುವ ಪತ್ರಿಕಾಗೋಷ್ಠಿಗಳು ಆಕೆಯಲ್ಲಿ ಒಬ್ಬ ಶಾಂತಿಧೂತೆಯನ್ನು ಬಿಂಬಿಸುತ್ತಿಲ್ಲ.
ಆಕೆ ಕಮ್ಯುನಿಸ್ಟರ ಪ್ರಭಾವಕ್ಕೆ ಒಳಗಾಗಿದ್ದಾಳೆ ಅಷ್ಟೇ. ಯಾವಾಗ ಬಣ್ಣ ಬಯಲಾಯಿತೋ ಆಗ ನಾನೊಬ್ಬ ಹುತಾತ್ಮನ ಮಗಳು ಎನ್ನುತ್ತಾ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಅಷ್ಟೇ. ಎರಡು ವರ್ಷದ ಹಿಂದಷ್ಟೇ ಭಯೋತ್ಪಾದಕರ ಗುಂಡು ತಗುಲಿ ಹುತಾತ್ಮರಾದ ಕರ್ನಲ್ ಎಂ.ಎನ್. ರಾಯ್ ಅವರ 11 ವರ್ಷದ ಮಗಳು ಅಲಕಾ, ಅಪ್ಪನನ್ನು ಕಳೆದುಕೊಂಡ ದುಃಖದ ಕ್ಷಣದಲ್ಲೂ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೊದಲು ಗೂರ್ಖಾ ರೆಜಿಮೆಂಟಿನ ಯುದ್ಧ ಕಹಳೆಯನ್ನು ಮೊಳಗಿಸಿದ್ದನ್ನು ಮೆಚ್ಚಿ ಕಣ್ಣೀರಾಗಿದ್ದೇವೆ. ಈ ದೇಶದಲ್ಲಿ ಸಾವಿರಾರು ಸೈನಿಕರ ಮಕ್ಕಳು ಅಪ್ಪನನ್ನು ಕಳೆದುಕೊಂಡು ಬೆಳೆಯುತ್ತಿದ್ದಾರೆ. ‘ಪುತ್ರ ವಿಯೋಗಂ ನಿರಂತರಂ’ ಎನ್ನುತ್ತಾರೆ.
ಮಗನ ಸಾವು ಬದುಕಿನ ಕಡೇವರೆಗೂ ಕಾಡುತ್ತದೆ ಎಂಬ ಮಾತಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಸಂದರ್ಭದಲ್ಲೂ ದೇಶಕ್ಕಾಗಿ ಮಗನನ್ನು ಕೊಟ್ಟೆ ಎಂದ ಕ್ಯಾಪ್ಟನ್ ಪವನ್ ಕುಮಾರ್ ತಂದೆ ರಾಜ್‌ವೀರ್ ಸಿಂಗರನ್ನು ಕಂಡು ಹೆಮ್ಮೆಪಟ್ಟಿದ್ದೇವೆ. ದಯವಿಟ್ಟು ಹುತಾತ್ಮ ಯೋಧನ ಮಗಳು ಎಂಬ ಒಂದೇ ಕಾರಣಕ್ಕೆ ಹಂಡೆಗಟ್ಟಲೆ ಕಣ್ಣೀರು ಸುರಿಸಬೇಡಿ. ಏಕೆಂದರೆ…. ಕಾಶ್ಮೀರದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿರುವಾಗ ನೆರೆಹೊರೆಯವರೆಲ್ಲ ಬಂದು ನಮ್ಮ ಸೈನಿಕರ ಮೇಲೆಯೇ ಕಲ್ಲೆಸೆಯಲು ಆರಂಭಿಸುತ್ತಾರೆ. ನಮ್ಮ ಸೇನಾಪಡೆ ನಾಗರಿಕರ ಮೇಲೆ ಗುಂಡು ಹಾರಿಸುವುದಿಲ್ಲ ಎಂಬ ಕಾರಣಕ್ಕೆ. ಆ ಮೂಲಕ ಭಯೋತ್ಪಾದಕರು ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತಾರೆ. ಇಂಥ ಕಲ್ಲುತೂರಾ ಟಗಾರರನ್ನೂ ಭಯೋತ್ಪಾದಕರ ಪರವಾಗಿ ಕೆಲಸ ಮಾಡುವವರು (over-ground workers or terrorists) ಅಥವಾ ಭಯೋತ್ಪಾದಕರೆಂದೇ ಪರಿಗಣಿಸಬೇಕಾಗುತ್ತದೆ ಎಂದು ಜನರಲ್ ಬಿಪಿನ್ ರಾವತ್ ಇತ್ತೀಚೆಗೆ ಹೇಳಿರುವುದನ್ನು, ಕಲ್ಲು ತೂರುವವರ ಮೇಲೂ ಬಂದೂಕು ತಿರುಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದನ್ನು ನೀವೂ ನೋಡಿರಬಹುದು.
ದಿಲ್ಲಿಯಲ್ಲಿ ಆಝಾದಿ ಹೆಸರಿನಲ್ಲಿ ಬೊಬ್ಬೆ ಹಾಕುವವರೂ ಬೌದ್ಧಿಕ ಭಯೋತ್ಪಾದಕರಲ್ಲದೆ ಮತ್ತೇನು? ಅಂಥವರನ್ನು ಹೆಡೆಮುರಿಕಟ್ಟಲು ಮುಂದಾದ ರಾಷ್ಟ್ರಭಕ್ತ ಎಬಿವಿಪಿ ವಿರುದ್ಧವೇ ಹರಿಹಾಯುವವರನ್ನು ಏನೆನ್ನಬೇಕು ನೀವೇ ಹೇಳಿ?!

20170304_072137

Comments are closed.