Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದೂರದ ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ತೊಳೆಯುತ್ತಿರುವ ಕೆಂಪಯ್ಯನವರ ಅಳಿಯ

ದೂರದ ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ತೊಳೆಯುತ್ತಿರುವ ಕೆಂಪಯ್ಯನವರ ಅಳಿಯ

ದೂರದ ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ತೊಳೆಯುತ್ತಿರುವ ಕೆಂಪಯ್ಯನವರ ಅಳಿಯ!

ಒಂದೆರಡು ತಿಂಗಳ ಹಿಂದೆ ದೆಹಲಿಯಿಂದ ವಿಮಾನದಲ್ಲಿ ವಾಪಸಾಗುವಾಗ ‘ಇಂಡಿಯಾ ಟುಡೆ’ ಮ್ಯಾಗಝಿನ್ ಕೈಗೆ ಸಿಕ್ಕಿತು. ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಾಗ ಅಚಾನಕ್ಕಾಗಿ ಒಬ್ಬ ಪೊಲೀಸ್ ಅಧಿಕಾರಿಯ -ಪೋಟೋ ಕಣ್ಣಿಗೆ ಬಿತ್ತು. ‘ಈ ಐಪಿಎಸ್ ಅಧಿಕಾರಿ ರಾಜಸ್ಥಾನದ ಅತಿ ದೊಡ್ಡ ಲಂಚ ಪ್ರಕರಣವನ್ನು ಬಯಲಿಗೆಳೆಯುವ ಮೊದಲು 7 ವರ್ಷ ಜೈಲಿನಲ್ಲಿದ್ದರು’ ಎಂಬ ಶೀರ್ಷಿಕೆಯಡಿ ಒಂದು ಕುತೂಹಲಕಾರಿ ಸ್ಟೋರಿ ಇತ್ತು. ಆದರೆ ಬಹಳ ಖುಷಿಕೊಟ್ಟ ಸಂಗತಿಯೇನೆಂದರೆ ಆ ಐಪಿಎಸ್ ಅಧಿಕಾರಿ ನಮ್ಮ ಕನ್ನಡದ ಕುವರ ಎಂ.ಎನ್. ದಿನೇಶ್ ಎಂಬುದು! ನಿಮಗೆ ಗೊತ್ತಾ, ಎಂ.ಎನ್. ದಿನೇಶ್ ರೌಡಿಗಳನ್ನು ಹುಟ್ಟಡಗಿಸಿದ್ದ ನಮ್ಮ ಖ್ಯಾತ ಐಪಿಎಸ್ ಅಧಿಕಾರಿ ಕೆಂಪಯ್ಯನವರ ಅಳಿಯನೂ ಹೌದು!

ಈ ದಿನೇಶ್ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಳ ಆಪ್ತರು, ಅಮಿತ್ ಶಾ ಅವರ ಪ್ರೀತಿಗೆ ಪಾತ್ರರಾದವರು ಎಂಬ ಮಾತುಗಳೂ ಮಾಧ್ಯಮ ವಲಯದಲ್ಲಿವೆ. ಅದೇನೇ ಇರಲಿ, ದಿನೇಶ್ ದೂರದ ರಾಜಸ್ಥಾನದಲ್ಲಿ ಮಾಡುತ್ತಿರುವ ಕೆಲಸ ಪ್ರತಿ ಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂಥದ್ದು. “ಇಂಡಿಯಾ ಟುಡೆ’ ಯಲ್ಲಿ ದಿನೇಶ್ ಅವರ ಬಗ್ಗೆ ಏನು ಬರೆಯಲಾಗಿದೆ ಎಂಬುದನ್ನು ಯಥಾವತ್ತಾಗಿ ಓದಿ…

   ಆತ ಜೀವನದಲ್ಲಿ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಸಿಕ್ಕಸಿಕ್ಕಲ್ಲಿ ಅವರನ್ನು ಖಳನಾಯಕನ ಹಾಗೆ ಚಿತ್ರಿಸಲಾಯಿತು. ಹಲವರು ಅವರಿಗೊದಗಿದ ಸ್ಥಿತಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು. ಇನ್ನು ಕೆಲವರು ಒಳಗೊಳಗೇ ಖುಷಿ ಪಟ್ಟರು. ನಿವೃತ್ತ ಐಪಿಎಸ್ ಅಧಿಕಾರಿಗಳೇ ಅವರ ಸ್ಥಿತಿಗೆ “ಡಟಿ೯ ಪಾಲಿಟಿಕ್ಸ್‍ಗೆ ಬಲಿಯಾದರು’ ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

   ಏಕೆಂದರೆ ದಿನೇಶ್ ಏಳು ವಷ೯ ಜೈಲಲ್ಲಿ ಕಳೆಯಬೇಕಾಗಿತ್ತು. ಜೈಲಿನಿಂದ ಹೊರಬಂದ ಮೇಲೂ ರಾಜಸ್ಥಾನದ ಜನ ಅವರನ್ನು “ದುಷ್ಟ ರಾಜಕೀಯಕ್ಕೆ ಬಲಿಯಾದ ದಕ್ಷ’ ಎಂದು ಕರೆದರು. ಆದರೆ ಆ ವ್ಯಕ್ತಿ ಅದನ್ನು ಕೇವಲ ತನ್ನ ಹಳೆಯ ನೋವುಗಳು ಎಂದು ಕೊಂಡು ಕೊರಗುತ್ತಾ ಕೂರಲಿಲ್ಲ. ಅದೇ ದಕ್ಷತೆಗೆ ಮತ್ತಷ್ಟು ಶಕ್ತಿ ತುಂಬಿಕೊಂಡರು. ಹೊಸ ಭರವಸೆಯಿಂದ ಮತ್ತೆ ಕತ೯ವ್ಯಕ್ಕೆ ಇಳಿದರು. ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಐಜಿಪಿಯಾಗಿ ಅಧಿಕಾರ ವಹಿಸಿಕೊಂಡರು. ರಾಜ್ಯದ ಹೊಸ ಭವಿಷ್ಯವನ್ನು ಕಟ್ಟುವ ಧಾವಂತದಲ್ಲಿ ಕೆಲಸ ಮಾಡತೊಡಗಿದರು.

   2016, ಎಪ್ರಿಲ್ 4. ಎಂ. ಎನ್. ದಿನೇಶ್ ಶಹಾಪುರದ ಸ ಬ್ ಡಿವಿಶನಲ್ ಮ್ಯಾಜಿ ಸ್ಟ್ರೇ ಟ್ ಭರತ್ ಭೂಷಣ್ ಗೋಯಲರನ್ನು ಬಂಧಿಸಿದ್ದರು. ದೆಹಲಿ-ಜೈಪುರ ಹೆದ್ದಾರಿಯಲ್ಲಿ ಆಯುವೇ೯ದ ಔಷಧಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪರವಾನಗಿಗಾಗಿ ಗೋಯಲ್ ಉದ್ಯಮಿಯೊಬ್ಬರಿಗೆ 25 ಲಕ್ಷ ರುಪಾಯಿ ಲಂಚದ ಬೇಡಿಕೆಯನ್ನು ಇಟ್ಟಿದ್ದರು. ಅದರ ಮೊದಲ ಕಂತು 3.5 ಲಕ್ಷವನ್ನು ಗೋಯಲ್ ಸ್ವೀಕರಿಸುತ್ತಿದ್ದಾಗಲೇ ಅವರನ್ನು ದಿನೇಶ್ ಬಂಧಿಸಿದ್ದರು.

ಗೋಯಲ್‍ನ ಕೆಳ ಅಧಿಕಾರಿ ಗೋಪಾಲ್ ಸಿಂಗ್ ಶೆಖಾವತ್ ರನ್ನು ಕೂಡಾ ಆಯುವೇ೯ದ ಘಟಕ ಸ್ಥಾಪಿಸುವ ಉದ್ಯಮಿಗಳು ಆಮಿಷಕ್ಕೆ ಒಳಪಡಿಸಿದ್ದರು. ಘಟಕ ಪೂಣ೯ವಾಗುವುದರೊಳಗೆ 13 ಲಕ್ಷ ನೀಡುವುದಾಗಿ ಒಪ್ಪಂದವಾಗಿತ್ತು. ಮತ್ತು 3.8 ಲಕ್ಷಗಳನ್ನು ಅದಾಗಲೇ ಆತನಿಗೆ ನೀಡಲಾಗಿತ್ತು.

  ಹೀಗೆ ಪ್ರತಿ ದಿನ ದಿನೇಶ್ ಮತ್ತು ಅವರ ತಂಡ ಹತ್ತಾರು ಭ್ರಷ್ಟಾಚಾರ ಹಗರಣಗಳನ್ನು ರೆಡ್‍ಹ್ಯಾಂಡಾಗಿ ಹಿಡಿಯ ಲಾರಂಭೀಸಿತ್ತು. ಇಂದು ಸರಕಾರದ ಪಾರದಶ೯ಕ ಆಡಳಿತ ಯಶಸ್ವಿಯಾಗಿದ್ದರೆ ಅದಕ್ಕೆ ಕಾರಣ ದಿನೇಶ್ ಮತ್ತು ಅವರ ತಂಡದ ಕಾಯ೯. ಇವರ ತಂಡ ಮಾಡುವ ದಾಳಿಗಳನ್ನು ರಾಜ್ಯದ ಜನತೆ ಕೊಂಡಾಡುತ್ತಿದೆ. ಗೋಯಲ್ ಪ್ರಕರಣ ನಡೆದ ಮರುದಿನವೇ ದಿನೇಶ್ ಮತ್ತು ಅವರ ತಂಡ ಅಬಕಾರಿ  ಇನ್ಸ್‌ಪೆಕ್ಟರ್ ಪೂಜಾ ಯಾದವ್‍ಳನ್ನು ಬಂಧಿಸಿತು. ಅಕ್ರಮ ಮದ್ಯಕ್ಕೆ ಅನುವು ಮತ್ತು ಬಿಲ್ವಾರಾದಲ್ಲಿ ನಡೆದ ಹರಾಜಿನಲ್ಲಿ ನಡೆದ ಅಕ್ರಮಕ್ಕಾಗಿ ಆಕೆಯನ್ನು 40 ಸಾವಿರ ರು.ಗಳನ್ನು ಲಂಚವಾಗಿ ಸ್ವೀಕರಿ ಸುತ್ತಿದ್ದಾಗಲೇ ದಿನೇಶ್ ಬಂಧಿಸಿದ್ದರು. ದಿನೇಶ್ ಅವರ ತಂಡ ಆಕೆಯ ಮನೆಯಲ್ಲಿ 5 ಲಕ್ಷ ರುಗಳು ಮತ್ತು 19 ಬಾಟಲಿ ಅಂತಾರಾಜ್ಯ ಮದ್ಯವನ್ನು ವಶಪಡಿಸಿಕೊಂಡಿತು. ಅದಾದ ಮರುದಿನವೇ ಮಾಲವೀಯ ನಗರದಲ್ಲಿ ಅಕ್ರಮ ಕಟ್ಟಡಕ್ಕೆ 70 ಸಾವಿರ ರು. ಲಂಚ ಪಡೆದು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅಹಮದ್ ಎಂಬ ಮಧ್ಯವತಿ೯ ಮತ್ತು ಜೈಪುರ ಮುನ್ಸಿಪಲ್ ಕಾಪೊ೯ರೇಷನ್‍ನ ಇಬ್ಬರು ಅಧಿಕಾರಿಗಳನ್ನು ದಿನೇಶ್ ಮತ್ತು ತಂಡ ಬಂಧಿಸಿತು.

   ದಿನೇಶ್ ಅವರ ದಾಳಿಗಳು ಇಂಥವಕ್ಕೆ ಮಾತ್ರ ಸೀಮಿತವಾಗಲಿಲ್ಲ. ಕಳೆದ ಮಾಚ್‍೯ನಲ್ಲಿ ಸರಕಾರ ನಡೆಸುತ್ತಿದ್ದ, ಭಾರೀ ಹಳೆಯ ಹಿಂಗೋರಿಯಾ ಕಸಾಯಿಖಾನೆಯನ್ನು ನಿಲ್ಲಿಸಲು ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡುವಲ್ಲಿ ದಿನೇಶ್ ಯಶಸ್ವಿಯಾದರು. ಮತ್ತು ಅಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಸಾಕ್ಷಿ ಸಮೇತ ಹಿಡಿದು ಎಂಟು ಜನರನ್ನು ಬಂಧಿಸಿದರು. ಅದಕ್ಕೂ ಹದಿನೈದು ದಿನಗಳ ಕೆಳಗೆ ಭೂವ್ಯವಹಾರಕ್ಕೆ ಸಂಬಂಧಿಸಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಜೈಪುರ ಅಭೀವೃದ್ಧಿ ಪ್ರಾಧಿಕಾರದ ನಾಲ್ಕು ಅಧಿಕಾರಿಗಳನ್ನು ಬಂಧಿಸಿ ದಿನೇಶ್ ಜೈಲಿಗಟ್ಟಿದ್ದರು.

ಇಂಥ ಖಡಕ್ ಅಧಿಕಾರಿ ದಿನೇಶ್ ಅವರ ಹೋರಾಟದ ಹಿಂದೆ ದೊಡ್ಡ ಕಥೆಯೇ ಇದೆ. ಆ ಕಥೆಯೇ ಇಂದಿನ ದಿನೇಶ್ ಅವರನ್ನು ಖಡಕ್ ಆಗುವ೦ತೆ ರೂಪಿಸಿದೆ.

  ಅದು 2005. ಸೋಹ್ರಾಬುದ್ದೀನ್ ಎನ್‍ಕೌಂಟರ್ ದೇಶವಿಡೀ ಸುದ್ದಿ ಮಾಡಿತ್ತು. ಆಗ ರಾಜಸ್ಥಾನ ಹೊರತುಪಡಿಸಿದರೆ ಈ ದಿನೇಶ್ ಅವರ ಹೆಸರು ಹೊರಗೆಲ್ಲೂ ಕೇಳಿಬಂದಿರಲಿಲ್ಲ. ಏಕೆಂದರೆ ದೇಶಕ್ಕೆ ದೇಶವೇ ವಂಜಾರಾ ಅವರತ್ತ ನೋಡುತ್ತಿತ್ತು. ಏಕೆಂದರೆ ವಂಜಾರಾ ಅವರು ಗುಜರಾತ್‍ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಆಪ್ತರು ಎಂಬ ಒಂದೇ ಕಾರಣಕ್ಕಾಗಿ. ಆಗ ದಿನೇಶ್ ಉದಯಪುರದಲ್ಲಿ ಎಸ್‍ಪಿ ಆಗಿದ್ದರು. ಅದೇ ಹೊತ್ತಿಗೆ ಅಹಮದಾಬಾದಿನಲ್ಲಿ ಸೋಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಎನ್‍ಕೌಂಟರ್ ನಡೆದಿತ್ತು. ಈ ಎನ್‍ಕೌಂಟರ್ ರಾಜಕೀಯ ವಾಗಿ ಭಾರಿ ಚಚೆ೯ಯಾಗಿತ್ತು. ಅದರ ಫಲವಾಗಿ ಕೆಲವು ತಲೆದಂಡ ಬೇಕಿತ್ತು. ಪ್ರಾಮಾಣಿಕ ಅಧಿಕಾರಿ ದಿನೇಶ್ ಜೈಲುಪಾಲಾದರು. ಮೋದಿ ಹಾಗೂ ಅಮಿತ್ ಶಾ ಅವರನ್ನು ಹಣಿಯುವ ಕಾಂಗ್ರೆ ಸ್‍ನ ಪಿತೂರಿಗೆ ಬಲಿಯಾದರು.

   ಹೀಗೆ 7 ವಷ೯ಗಳ ಕಾಲ ಅಂದರೆ, 2014ರವರೆಗೂ ದಿನೇಶ್ ಜೈಲಿನಲ್ಲಿದ್ದರು. ಜೈಲಿನಲ್ಲಿದ್ದಷ್ಟು ವಷ೯ ಅವರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿರಲಿಲ್ಲ. ಆ ಕಾರಣಕ್ಕೆ ಅವರು ಬಿಡುಗಡೆ ಗೊ೦ಡರು. ಜೈಲಿಂದ ಹೊರಬಂದ ದಿನೇಶರನ್ನು ಪೊಲೀಸ್ ಇಲಾಖೆಯಿಂದ ಹೊರತಾದ ಜವಾಬ್ದಾರಿ ನೀಡಬೇಕೆಂಬ ಒತ್ತಾಯ ಕೇಳಿಬರತೊಡಗಿತು. ಪರಿಣಾಮ ದಿನೇಶ್ ಅವರನ್ನು ರಾಜಸ್ಥಾನದ ಸಣ್ಣ ಕೈಗಾರಿಕಾ ಮಂಡಳಿ ನಿದೇ೯ಶಕರನ್ನಾಗಿ ನೇಮಕ ಮಾಡಲಾಯಿತು. ಒಂದು ಕಾಲದಲ್ಲಿ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ದಿನೇಶ್ ತಮ್ಮ ಕ್ಷೇತ್ರವೇ ಅಲ್ಲದ ಕೈಗಾರಿಕಾ ಮಂಡಳಿಯಲ್ಲಿ ಕೊಳೆಯತೊಡಗಿದರು. ಭ್ರಷ್ಟ ವ್ಯವಸ್ಥೆಯನ್ನು ದಿನನಿತ್ಯ ನೋಡುತ್ತಾ ಕೈಕೈ ಹಿಸುಕಿಕೊಳ್ಳುವುದೊಂದನ್ನು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ. ಹೀಗೆ ಒಂದು ವಷ೯ ಚಡಪಡಿಕೆಯಿಂದ ಕಳೆದ ದಿನೇಶ್ “ನನ್ನನ್ನು ಭ್ರಷ್ಟಾಚಾರ ನಿಗ್ರಹದಳಕ್ಕಾದರೂ (ಎಸಿಬಿ) ಹಾಕಿ’ ಎಂದು ಸರಕಾರವನ್ನು ಕೇಳಿಕೊಂಡರು. ರಾಜಸ್ಥಾನದ ಹೊಸ ಸರಕಾರ ಅವರ ಬೇಡಿಕೆಯನ್ನು ಒಪ್ಪಿತು. ಒಪ್ಪಿತು ಎನ್ನುವುದಕ್ಕಿಂತ ದಿನೇಶರನ್ನು ಹೊಸ ಸರಕಾರ ನಂಬಿತು. ಆ ನಂಬಿಕೆಯನ್ನು ದಿನೇಶ್ ಹುಸಿ ಮಾಡಲಿಲ್ಲ. ಎಸಿಬಿ ಅಧಿಕಾರ ವಹಿಸಿಕೊಂಡ ಮೂರೇ ತಿಂಗಳಲ್ಲಿ ಸರಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಅಶೋಕ್ ಸಿಂಯನ್ನು ಬಂಧಿಸಿ ಸರಕಾರಿ ಮಟ್ಟದಲ್ಲಿ ನಡೆಯುತ್ತಿದ್ದ ಭಾರಿ ಲಂಚದ ಜಾಲವನ್ನು ಬಯಲಿಗೆಳೆದರು. ಜತೆಗೆ ಸಂಜಯ್ ಜಾ ಎನ್ನುವ ದಲ್ಲಾಳಿಯನ್ನೂ ಬಂಧಿಸಿ ಆ ಜಾಲದ ಬೇರನ್ನೇ ಕಿತ್ತೆಸೆದರು. ಈ ಪ್ರಕರಣದಿಂದ ರಾಜಸ್ಥಾನದ ಭ್ರಷ್ಟರು ದಿನೇಶ್ ಎಂದರೆ ಅಕ್ಷರಶಃ ನಡುಗತೊಡಗಿದರು. ದಿನೇಶ್ ಅವರಿಗೆ ಹಳೆಯ ಕಾಂಗ್ರೆಸ್ ಸರಕಾರದ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಸರಕಾರಿ ಅಧಿಕಾರಿಗಳು ಎಷ್ಟೊಂದು    ಹೆದರಿದವೆಂದರೆ “ದಿನೇಶ್ ರಾಜಸ್ಥಾನದಲ್ಲಿ ಅಮಿತ್ ಷಾರ ಪ್ರತಿನಿಧಿ, ಈತ ಅಮಿತ್ ಷಾರ ಅಣತಿಯಂತೆ ಕೆಲಸ ಮಾಡುವವನು, ಇವನು ವಸುಂಧರಾ ರಾಜೇ ಬದಲು ಅಮಿತ್ ಷಾರಿಗೆ ವರದಿ ಒಪ್ಪಿಸುತ್ತಾನೆ, ದಿನೇಶ್ ಅನ್ನು ಅಮಿತ್ ಷಾ ಸಬರಮತಿ ಜೈಲಲ್ಲಿ ಭೇಟಿಯಾಗಿದ್ದರು’ ಎಂದೆ ಲ್ಲಾ ಟೀಕಿಸಲಾರಂಭೀಸಿದರು. ಈ ಟೀಕೆಗಳಿಗೆ ದಿನೇಶ್ ನಕ್ಕು ಸುಮ್ಮನಾದರೇ ವಿನಾ ಅವರನ್ನು ಕತ೯ವ್ಯ ವಿಮುಖ ಮಾಡಲು ಕಾಂಗ್ರೆ ಸಿಗರಿಗೆ ಸಾಧ್ಯವಾಗಲಿಲ್ಲ.

ದಿನೇಶ್ ಎಂ.ಎನ್ ಈಗ ರಾಜ್ಯದ ಜನರ ಪಾಲಿಗೆ ಗಂಡೆದೆಗೆ ಮತ್ತೊಂದು ಹೆಸರು. ಲಂಚಕೋರ ಅಧಿಕಾರಿಗಳ ಪಾಲಿಗೆ ದುಸ್ವಪ್ನ. ಇವರ ಬಗ್ಗೆ ಫೇಸ್ ‍ಬುಕ್‍ನಲ್ಲಿ ಹಲವು ಪೇಜ್ ಗಳು, ಅಭಿಮಾನಿಗಳು ಹುಟ್ಟಿಕೊಂಡಿವೆ. ಒಂದು ಪೇಜ್‍ನಲ್ಲಿ ದಿನೇಶರಿಗೆ 29 ಸಾವಿರ ಅಭೀಮಾನಿಗಳಿದ್ದಾರೆ. ಸರಕಾರಿ ವ್ಯಕ್ತಿತ್ವವೊಂದು ಇಷ್ಟೊಂದು  ಅಭೀಮಾನಿಗಳನ್ನು ಹೊಂದಿರುವುದು ವಿಶೇಷ ಎಂದು ಪತ್ರಿಕೆಗಳು ಬರೆದಿವೆ. ಎಲ್ಲಾ ಅಭಿಮಾನಿಗಳ ಬಾಯಲ್ಲಿ ಇಂದು ದಿನೇಶ್ ಒಬ್ಬ ರಿಯಲ್ ಸಿಂಗಂ ಆಗಿದ್ದಾರೆ. ಅವರ ತಾಕತ್ತು ಮತ್ತು ಆ ತಾಕತ್ತು ಮಾಡಿತೋರಿಸುವ ಕಾಯ೯ಗಳಿಂದ ದಿನೇಶ್ ಅವರ ಅಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾಜ ಸ್ಥಾನದ ಜನ ಇದುವರೆಗೆ ಸಿನಿಮಾಗಳಲ್ಲಿ ನೋಡಿದ್ದನ್ನು ಈಗ ಪ್ರತ್ಯಕ್ಷ ನೋಡುತ್ತಿದ್ದಾರೆ.

   ದಿನೇಶ್ ಅವರ ಬಗ್ಗೆ ಅವರ ಮಾಗ೯ದಶ೯ಕ ಸಿಆರ್‍ಪಿಎಫ಼್‍ನ ಸುಧೀರ್ ಪ್ರತಾಪ್ ಸಿಂಗ್, “ಆತ ಒಬ್ಬ ಅದ್ಭುತ ವೃತ್ತಿಪರ ಮತ್ತು ವೃತ್ತಿನಿಷ್ಠ ಕೆಲಸಗಾರ. ಸಾವ೯ಜನಿಕ ಸ್ನೇಹಿ ಮನಸ್ಸಿರುವ ವ್ಯಕ್ತಿ’ ಎಂದು ಬಣ್ಣಿಸುತ್ತಾರೆ. 90ರ ದಶಕದಲ್ಲಿ ಇದೇ ಸುಧೀರ್ ಪ್ರತಾಪ್ ಸಿಂಗ್ ಅಡಿಯಲ್ಲಿ ದಿನೇಶ್ ತರಬೇತಿ ಪಡೆದಿದ್ದರು. ತಮ್ಮ ವೃತ್ತಿಯ ಆರಂಭದ ದಿನಗಳಲ್ಲೇ ದಿನೇಶ್ ದೊಡ್ಡವರನ್ನು ಎದುರು ಹಾಕಿ ಕೊಳ್ಳತೊಡಗಿದರು. ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಸರಕಾರಿ ಹಿರಿಯ ಅಧಿಕಾರಿಗಳು ಮತ್ತು ಮಂತ್ರಿಗಳು ದಿನೇಶ್ ರನ್ನು ಕಾನೂನಿನ ಪ್ರಕಾರ ತಪ್ಪಿತಸ್ಥ ಮಾಡಬೇಕೆಂದು ಹೊಂಚು ಹಾಕುತ್ತಲೇ ಇದ್ದರು. ಹಲವುಬಾರಿ ರಾಜಕೀಯ ಒತ್ತಡಗಳಿಗೆ ಒಳಗಾದರು. ಆದರೂ ಅವರು ತೋಡಿದ್ದ ಹೊಂಡಕ್ಕೆ ಬಲಿಯಾಗುವ ಮನುಷ್ಯ ದಿನೇಶ್ ಆಗಿರಲಿಲ್ಲ. ಆದರೆ ಆಡಳಿತ ಅವರನ್ನು ಹಣಿಯಲು ನಾಜೂಕಾದ ತಂತ್ರವೊಂದನ್ನು ಹೆಣೆಯಿತು. ಕರೌಲಿ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದ ಡಕಾಯಿತ ತಂಡಗಳ ವಿರುದ್ಧ ಕಾಯಾ೯ಚರಣೆಗೆ ದಿನೇಶ್ ಅವರನ್ನು ನಿಯೋಜಿಸಿತ್ತು. ಎಷ್ಟೇ ಆದರೂ ಅಲ್ಲಿನ ಡಕಾಯಿತ ತಂಡಗಳನ್ನು ಸಂಪೂಣ೯ ನಾಶ ಮಾಡಲಾಗುವುದಿಲ್ಲ ಎಂಬುದು ಆಡಳಿತಕ್ಕೂ ಗೊತ್ತಿತ್ತು. ಆದರೆ ದಿನೇಶ್ ಕರೌಲಿಯಲ್ಲೂ ಮೋಡಿ ಮಾಡಿದರು. ಹತ್ತು ಪ್ರಮುಖ ಡಕಾಯಿತ ತಂಡಗಳನ್ನು ಬೇಟೆಯಾಡಿದರು. ತಿಮರ್‍ಘರ್ ಕೋಟೆಯಲ್ಲಿ ಕಳವಾಗಿದ್ದ ಪ್ರಾಚೀನ ವಿಗ್ರಹವನ್ನು ಪತ್ತೆ ಹಚ್ಚಿ ಜನರ ಮನಸ್ಸನ್ನು ಗೆದ್ದರು. ಈ ಡಕಾಯಿತ ತಂಡಗಳಿಗೆ ಬೆಂಬಲ ನೀಡುತ್ತಿದ್ದ ಸ್ಥಳೀಯ ರಾಜಕಾರಣಿಗಳ ಹೆಸರನ್ನು ಬಯಲಿಗೆಳೆದರು.
ಅಧಿಕಾರಿ ವಗ೯ ಬೀಸಿದ್ದ ಬಲೆಯನ್ನೇ ಬಳಸಿ ದುಷ್ಟರನ್ನು ಸೆರೆಹಿಡಿದಿದ್ದರು ದಿನೇಶ್. ಕೆಲವು ನಿಷ್ಠಾವಂತ ಪತ್ರಿಕೆಗಳು, “ವನವಾಸಕ್ಕೆಂದು ಕಳಿಸಿದರೆ ರಾವಣನನ್ನೇ ವಧಿಸಿ ಬಂದ’ ಎಂದು ಬರೆದವು. ಆದರೆ ಕೆಲವು ಪತ್ರಿಕೆಗಳು ಅಲ್ಲೂ ದಿನೇಶ್ ಅವರ ಬೆನ್ನು ಬಿದ್ದವು, ಡಕಾಯಿತರು ಶರಣಾಗತರಾಗಲು ಬಯಸಿದ್ದರು. ಆದರೆ ದಿನೇಶ್ ಅದಕ್ಕೆ ಆಸ್ಪದ ಕೊಡುತ್ತಿಲ್ಲ ಎಂದು ಬರೆದವು. ನಿಜಕ್ಕೂ ದಿನೇಶ್‍ಗೆ ಡಕಾಯಿತರ ಮನವೊಲಿಕೆ ಮುಂತಾದ ಸಂಗತಿಗಳ ಬಗ್ಗೆ ಆಸಕ್ತಿ ಇರಲಿಲ್ಲ. ಮತ್ತು ಅದು ಅವರನ್ನು ನಿಗ್ರಹಿಸುವ ವಿಧಾನವಲ್ಲ ಎಂದು ಅವರು ನಂಬಿದ್ದರು. ಈ ಬಗ್ಗೆ 2001ರಲ್ಲಿ ಇಂಡಿಯಾ ಟುಡೆಗೆ ನೀಡಿದ ಸಂದಶ೯ನವೊಂದರಲ್ಲಿ ದಿನೇಶ್, “ನನಗೆ ಹೂಹಾರ ಹಾಕಿ ಶರಣಾಗತಿ ಮಾಡಿಸಲು ಗೊತ್ತಿಲ್ಲ. ಪೊಲೀಸ್ ಠಾಣೆಗೆ ನಡೆಸಿಕೊಂಡು ಹೋಗುವುದು ಮತ್ತು ತಪ್ಪಿತಸ್ಥರನ್ನು ಕಾನೂನಿನ ಕೈಗೆ ಕೊಡುವುದು ಮಾತ್ರ ಗೊತ್ತಿದೆ’ ಎಂದು ಹೇಳಿದ್ದರು. ಅದೇ ಸಮಯದಲ್ಲಿ ದಿನೇಶ್ ಅವರ ಗೆಳೆಯ ಧೋಲ್ಪರುದ ಎಸ್‍ಪಿ ಆಗಿದ್ದ ಬಿಜು ಜೋಸೆಫ಼್ ಡಕಾಯಿತರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ದಿನೇಶ್ ಧೈಯ೯ಗೆಡಲಿಲ್ಲ. ಡಕಾಯಿತರ ಕಾಯಾ೯ಚರಣೆಯಿಂದ ಹಿಮ್ಮೆಟ್ಟಲಿಲ್ಲ. ಅಲ್ಲೂ ರಾಜಕೀಯ ಒತ್ತಡ ತೀವ್ರವಾಗತೊಡಗಿತು. ಕವಿತಾ ಶ್ರೀವಾಸ್ತವ ಎಂಬ ನಾಗರಿಕ ಹಕ್ಕುಗಳ ಸಂಘಟನೆ ಹೋರಾಟಗಾತಿ೯ಯೊಬ್ಬರು ದಿನೇಶ್ ಸವಾಯ್ ಮಾಧೋಪುರ್ ಎಂಬಲ್ಲಿ ಡಕಾಯಿತ ನಾಯಕ ರಾಂಸಿಂಗ್ ಗುಜ೯ರ್ ಅವರನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಿದರು!

ಈ ರಾಂಸಿಂಗ್ ಗುಜ೯ರ್ 25 ಕೊಲೆ ಮತ್ತು 30 ಅಪಹರಣ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದ. ನಂತರ ದಿನೇಶ್ ಇಹನ್ಜುಮುನುಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪೋಸ್ಟಿಂಗ್ ಆದರು. ಆ ಪ್ರದೇಶ ಅಕ್ರಮ ಮದ್ಯದ ಸುತ್ತ ನಡೆಯುವ ಎಲ್ಲಾ ದಂಧೆಗಳಿಗೆ ಕುಖ್ಯಾತಿ ಪಡೆದಿತ್ತು. ಅದು ಮರಿ ಪುಜ್ಞರಿಗಳು ಮದ್ಯದ ದಂಧೆಗಳಿಂದ ವಿಧಾನಸಭೆಗಳ ಕನಸು ಕಾಣುತ್ತಿದ್ದ ಪ್ರದೇಶವಾಗಿತ್ತು. ಅಲ್ಲೂ ದಿನೇಶ್‍ರನ್ನು ಎತ್ತಂಗಡಿ ಮಾಡುವ ಪ್ರಯತ್ನಗಳು ನಡೆದವು ಆದರೆ, ದಿನೇಶ್ ಯಾವುದಕ್ಕೂ ಜಗ್ಗಿಲ್ಲ. ಏಕೆಂದರೆ ಅಂದು ವಿನಾಕಾರಣ ಜೈಲುಪಾಲಾದಾಗ ಬಂದೀಖಾನೆಯ ಸರಳುಗಳ ಹಿಂದಿನ ಬದುಕನ್ನು ಶಿಕ್ಷೆ ಎಂದುಕೊಂಡು ಕೊರಗಲಿಲ್ಲ. ಆ ಸಮಯವನ್ನು ಅವರು ಶಕ್ತಿ ಸಂಚಯಕ್ಕೆ ಬಳಸಿಕೊಂಡರು. ಆತ್ಮಾವಲೋಕನದ ಸಮಯ ಎಂದುಕೊಂಡರು. ದೇಹವನ್ನು ಮತ್ತಷ್ಟು ಹುರಿಗಟ್ಟಿಸಿಕೊಂಡರು. ದಿನೇಶ್ ಅವರು ಕನಸಿನ ಉದ್ಯೋಗವನ್ನು ಇಂದು ಮಾಡದೇ ಇರಬಹುದು. ಬಂದೂಕಿನ ಟ್ರಿಗ್ಗರನ್ನು ಅದುಮದೇ ಇರಬಹುದು. ಆದರೆ ಬಂದೂಕು ಮತ್ತು ಗುಂಡುಗಳಿಗೂ ವೇಗವಾಗಿ ಅವರ ಕೆಲಸ ನಡೆಯುತ್ತಿದೆ. ಪಕ್ಕಾ ದಾಖಲೆಗಳು, ರಂಗೋಲಿ ಕೆಳಗೆ ತೂರುವ ತಂತ್ರಗಾರಿಕೆಗಳೊಂದಿಗೆ ಅವರು ಮತ್ತು ಅವರ ತಂಡದ ಕೆಲಸಗಳು ನಡೆಯುತ್ತಿವೆ.

  ಇಂತಹ ಶ್ಲಾಘನೀಯ ಕೆಲಸ ಮಾಡುತ್ತಿರುವ ದಿನೇಶ್ ಬಗ್ಗೆ ನಮಗೆ ಸಹಜವಾಗಿಯೇ ಹೆಮ್ಮೆಯೆನಿಸುತ್ತದೆಯಲ್ಲವೇ?

  Dinesh Kemppaih

Comments are closed.