Date : 26-01-2009, Monday | 34 Comments
ದೋಷವಿದ್ದಿದ್ದು ಅವರ ಇಂಗ್ಲಿಷ್‌ನಲ್ಲಿ, ಗುಂಡಿಗೆಯಲ್ಲಲ್ಲ!
ನವೆಂಬರ್ 26 ರಂದು ನಮ್ಮ ಮುಂಬೈ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಯಾವ ನಖರಾ ತೋರುತ್ತಿದೆಯೋ ಅದೇ ಸೊಕ್ಕನ್ನು 2001ರಲ್ಲಿ ತಾಲಿಬಾನ್ ಕೂಡ ಪ್ರದರ್ಶಿಸಿತ್ತು. ‘ಸಾಕ್ಷ್ಯ ಕೊಡಿ, ನಮ್ಮ ನೆಲದಲ್ಲೇ ವಿಚಾರಣೆ ನಡೆಸುತ್ತೇವೆ’ಎಂದಿತ್ತು.
ನಮ್ಮ ಬಳಿಯಾದರೂ ಪಾಕಿಸ್ತಾನದ ಪಾತ್ರಕ್ಕೆ ಕನ್ನಡಿ ಹಿಡಿದಂತೆ ಕಸಬ್‌ನಾದರೂ ಇದ್ದಾನೆ. ಆದರೆ ಅಮೆರಿಕದ ಬಳಿ ಯಾವ ಸಾಕ್ಷ್ಯಗಳೂ ಇರಲಿಲ್ಲ. ಹಾಗಂತ ಅಮೆರಿಕದ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ಸಾಕ್ಷ್ಯಗಳನ್ನು ಕಲೆಹಾಕುತ್ತಾ ಕುಳಿತುಕೊಳ್ಳಲಿಲ್ಲ. 2001, ಸೆಪ್ಟೆಂಬರ್ 11ರ ದಾಳಿ ನಡೆದು 6 ದಿನಗಳ ಬಳಿಕ ಮಾಧ್ಯಮಗಳ ಮುಂದೆ ನಿಂತ ಬುಷ್, “ನಮ್ಮ ಶತ್ರುಗಳ್ಯಾರು, ಅವರಿಗೆ ಬೆಂಬಲ ನೀಡುತ್ತಿರುವವರ್‍ಯಾರು ಎಂದು ನಮಗೆ ಗೊತ್ತು. ಒಸಾಮಾ ಬಿನ್ ಲಾಡೆನ್‌ನೇ ಮುಖ್ಯ ಶಂಕಿತ. ಒಂದೋ ಲಾಡೆನ್ ಹಾಗೂ ಇತರ ಭಯೋತ್ಪಾದಕರನ್ನು ನಮಗೆ ಹಸ್ತಾಂತರ ಮಾಡಿ ಇಲ್ಲವೆ ಅಮೆರಿಕದ ದಾಳಿಗೆ ತುತ್ತಾಗಿ” ಎಂದರು.
ತಾಲಿಬಾನ್ ಬಗ್ಗಲಿಲ್ಲ.
“ನಮ್ಮ ನಿಲುವು ಸ್ಪಷ್ಟವಾಗಿದೆ. ಒಂದು ವೇಳೆ ಅಮೆರಿಕದ ಬಳಿ ಸಾಕ್ಷ್ಯಧಾರವಿದ್ದರೆ ಕೊಡಲಿ, ಒಸಾಮಾನನ್ನು ನಾವೇ ವಿಚಾರಣೆಗೆ ಒಳಪಡಿಸುತ್ತೇವೆ” ಎಂದರು ಪಾಕಿಸ್ತಾನದಲ್ಲಿದ್ದ ತಾಲಿಬಾನ್ ರಾಯಭಾರಿ ಅಬ್ದುಲ್ ಸಲೀಂ ಝಯೀಫ್. ಬುಷ್ ಮರು ಮಾತನಾಡಲಿಲ್ಲ. ಅಮೆರಿಕದ ಪಡೆಗಳು ಅರಬ್ಬೀ ಸಮುದ್ರದತ್ತ ಹೊರಟವು. ಅಮೆರಿಕದ ಮೇಲೆ ದಾಳಿ ನಡೆದು ತಿಂಗಳು ಕೂಡ ಆಗಿಲ್ಲ, “Operation Enduring Freedom” ಆರಂಭ ವಾಗಿಯೇ ಬಿಟ್ಟಿತು. “ಅಂತಹ ಸೋವಿಯತ್ ರಷ್ಯಾದವರೇ ಅಫ್ಘಾನಿಸ್ತಾನದಿಂದ ಕೈಸುಟ್ಟುಕೊಂಡು ಹೋಗಿದ್ದಾರೆ. ನೆರೆಯಲ್ಲೇ ಇದ್ದರೂ ತಾಲಿಬಾನಿಗಳನ್ನು ಮಣಿಸಲಾಗಲಿಲ್ಲ. ಇನ್ನು ಸಾವಿರಾರು ಮೈಲು ದೂರದಿಂದ ಬಂದು ಅಮೆರಿಕವೇನು ಮಾಡೀತು?” ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ತಕ್ಕಂತೆ “ಲಾಡೆನ್ ನಮ್ಮ ಅತಿಥಿ. ಅತಿಥಿಗಳಿಗೆ ಆಶ್ರಯ, ಸತ್ಕಾರ ನೀಡು ಎನ್ನುತ್ತದೆ ನಮ್ಮ ಪುಶ್ತೂನ್ ಸಂಸ್ಕೃತಿ” ಎಂದ ತಾಲಿಬಾನ್ ಲಾಡೆನ್‌ನನ್ನು ಹಸ್ತಾಂತರ ಮಾಡುವುದಿಲ್ಲ, ಆತನ ತಂಟೆಗೆ ಬಂದರೆ ನಾವೂ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಮುಟ್ಟಿಸಿತು. ಹಾಗಾಗಿ ಅಮೆರಿಕಕ್ಕೆ ಮುಖಭಂಗ ಖಚಿತ ಎಂದು ಪತ್ರಕರ್ತರೂ ಬರೆದರು.
ಆದರೆ ಆಗಿದ್ದೇನು?
2001, ಅಕ್ಟೋಬರ್ 7ರಂದು ದಾಳಿ ಆರಂಭವಾಯಿತು. ಅಮೆರಿಕದ ‘ಕಾರ್ಪೆಟ್ ಬಾಂಬಿಂಗ್’ಗೆ (ನೂರಾರು ಬಾಂಬ್‌ಗಳನ್ನು ಒಮ್ಮೆಲೆ ಸುರಿಯುವುದು) ಅಫ್ಘಾನಿಸ್ತಾನದ ಬೆಟ್ಟ-ಗುಡ್ಡಗಳೇ ಧ್ವಂಸವಾಗತೊಡಗಿದವು. ಆಕ್ರಮಣ ಆರಂಭವಾಗಿ 7 ದಿನ ಕಳೆಯುವಷ್ಟರಲ್ಲಿ ಅಂದರೆ ಅಕ್ಟೋಬರ್ 14ರಂದು ಹೇಳಿಕೆಯೊಂದನ್ನು ಹೊರಡಿಸಿದ ತಾಲಿಬಾನ್, “ಒಂದು ವೇಳೆ ಅಮೆರಿಕ ಬಾಂಬ್ ದಾಳಿಯನ್ನು ನಿಲ್ಲಿಸಿ ಸಾಕ್ಷ್ಯ ಕೊಟ್ಟರೆ ವಿಚಾರಣೆ ನಡೆಸಲು ಲಾಡೆನ್ನನನ್ನು ಮೂರನೇ ರಾಷ್ಟ್ರಕ್ಕೆ ಹಸ್ತಾಂತರಿಸುತ್ತೇವೆ’ ಎಂದಿತು. ಅಮೆರಿಕದ ದಾಳಿ, ಅತಿಥಿ ಸತ್ಕಾರ ಮಾಡುವ ಪುಶ್ತೂನ್ ಸಂಸ್ಕೃತಿಯನ್ನೇ ಸಂಹಾರ ಮಾಡಿತ್ತು! “ಲಾಡೆನ್ ಅಪರಾಧಿಯೋ ಅಥವಾ ಅಮಾಯಕಯೋ ಎಂದು ಚರ್ಚೆ ನಡೆಸುವ ಅಗತ್ಯವಿಲ್ಲ. ಆತ ಅಪರಾಧಿ ಎಂದು ನಮಗೆ ಗೊತ್ತು” ಎಂದ ಬುಷ್, ತಾಲಿಬಾನ್ ಆಹ್ವಾನವನ್ನು ತಿರಸ್ಕರಿಸಿ ದಾಳಿಯನ್ನು ಮುಂದುವರಿಸಿದರು. ಇನ್ನೊಂದೆಡೆ ಜರ್ಮನಿ, ಫ್ರಾನ್ಸ್‌ನಂತಹ ಒಂದಿಷ್ಟು ಐರೋಪ್ಯ ಹಾಗೂ ಇತರ ರಾಷ್ಟ್ರಗಳು, ‘ವಿಶ್ವಸಂಸ್ಥೆಯ ಒಪ್ಪಿಗೆ ಪಡೆಯದೇ ಅಮೆರಿಕ ದಾಳಿ ನಡೆಸುತ್ತಿದೆ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಕರೆದು ಅಮೆರಿಕವನ್ನು ತರಾಟೆಗೆ ತೆಗೆದು ಕೊಳ್ಳಲು, ದಾಳಿಯನ್ನು ನಿಲ್ಲಿಸುವಂತೆ ಒತ್ತಡ ಹೇರಲು ಮುಂದಾದವು. ಅವುಗಳ ಚರ್ಚೆ, ಮಾತುಕತೆ, ಪರಸ್ಪರ ಕಿತ್ತಾಟ ಮುಗಿಯುವಷ್ಟರ ವೇಳೆಗೆ ಆಫ್ಘನ್ ಯುದ್ಧವೇ ಕೊನೆಗೊಂಡಿತ್ತು! ತಾಲಿಬಾನ್ ಪರಾರಿಯಾಗಿತ್ತು. ಕಾಬೂಲ್ ಕೈವಶವಾಗಿತ್ತು. ೨೦೦೧, ಡಿಸೆಂಬರ್ ೨೦ರಂದು ನಿರ್ಧಾರವೊಂದನ್ನು ಕೈಗೊಂಡ ಭದ್ರತಾ ಮಂಡಳಿ, ‘ಅಫ್ಘಾನಿಸ್ತಾನದಲ್ಲಿ ಮಧ್ಯಂತರ ಸರಕಾರ ಸ್ಥಾಪಿ ಸಲು ಎಲ್ಲ ರಾಷ್ಟ್ರಗಳೂ ಸಹಕಾರ ನೀಡಬೇಕು’ ಎಂದಿತು, ಜತೆಗೆ ಅಂತಾರಾಷ್ಟ್ರೀಯ ಶಾಂತಿ ಪಾಲನಾ ಪಡೆಯೊಂದನ್ನು ರಚಿಸಿ ಅಫ್ಘಾನಿಸ್ತಾನಕ್ಕೆ ಕಳುಹಿಸಿತು.
ಇಂತಹ ಕೆಲಸವನ್ನು ಗುಂಡಿಗೆ ಇದ್ದವನು ಮಾಡುತ್ತಾನೆಯೇ ಹೊರತು, ನಮ್ಮಂಥವರಲ್ಲ.
“My Government will not bend before such a show of terrorism“. 1999, ಡಿಸೆಂಬರ್ 24ರಂದು ಇಂಡಿಯನ್ ಏರ್‌ಲೈನ್ಸ್‌ನ ಐಸಿ-814 ವಿಮಾನವನ್ನು ಕಂದಹಾರ್‌ಗೆ ಅಪಹರಣ ಮಾಡಿದಾಗ ಮರುದಿನ ಮಾಧ್ಯಮಗಳ ಮುಂದೆ ಹೀಗೆ ಹೇಳಿದ್ದರು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಆದರೆ ಇಂತಹ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಭಯೋತ್ಪಾದಕರ ಜತೆ ಸಂಧಾನ ಮಾತುಕತೆ ಆರಂಭವಾಯಿತು. ಭಾರತದ ಜೈಲುಗಳಲ್ಲಿರುವ ಮೂವತ್ತೈದು ಭಯೋತ್ಪಾದಕರನ್ನು ಬಿಟ್ಟರೆ ಹಾಗೂ 20 ಕೋಟಿ ಡಾಲರ್ ಹಣ ನೀಡಿದರೆ ಮಾತ್ರ ಪ್ರಯಾಣಿಕರನ್ನು ಬಿಡುಗಡೆ ಮಾಡುವುದಾಗಿ ಅಪಹರಣಕಾರರು ಪೂರ್ವ ಷರತ್ತು ಹಾಕಿದರು. ಆ ವಿಷಯದಲ್ಲಿ ಸರಕಾರ ಚೌಕಾಶಿ ಆರಂಭಿಸಿತು. ಇತ್ತ ಸಿಟ್ಟಿಗೆದ್ದ ಪ್ರಯಾಣಿಕರ ಕುಟುಂಬದವರು ಹಾಗೂ ಸಂಬಂಧಿಕರು ಸರಕಾರ ವಿಳಂಬ ಮಾಡುತ್ತಿದೆಯೆಂದು ಆರೋಪಿಸಿ ಪ್ರಧಾನಿ ನಿವಾಸದ ಮೇಲೆಯೇ ಮುಗಿಬಿದ್ದರು. ಹೀಗೆ ಒತ್ತಡಕ್ಕೊಳಗಾದ ವಾಜಪೇಯಿಯವರು ಮೌಲಾನಾ ಮೊಹಮದ್ ಮಸೂದ್ ಅಜರ್, ಮುಷ್ತಾಕ್ ಅಹ್ಮದ್ ಝರ್ಗಾರ್ ಮತ್ತು ಅಹ್ಮದ್ ಉಮರ್ ಸಯೀದ್ ಷೇಕ್ ಮೊದಲಾದ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಲೊಪ್ಪಿದರು. ಡಿಸೆಂಬರ್ 30ರಂದು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಸ್ವತಃ ಭಯೋತ್ಪಾದಕರನ್ನು ಕರೆದೊಯ್ದು ಕಂದಹಾರ್‌ಗೆ ಬಿಟ್ಟು, 31ರಂದು 154 ಪ್ರಯಾಣಿಕರನ್ನು ಬಿಡಿಸಿಕೊಂಡು ಬಂದರು. ಇದು ಆರೆಸ್ಸೆಸ್‌ನ ಆಗಿನ ಸರಸಂಘಚಾಲಕರಾಗಿದ್ದ ರಾಜೇಂದ್ರ ಸಿಂಗ್ ಅವರನ್ನು ಎಷ್ಟು ಕುಪಿತಗೊಳಿಸಿತೆಂದರೆ “It’s an act of Hindu cowardice” ಎಂದು ಕಟುವಾಗಿ ಟೀಕಿಸಿದರು. ಆದರೆ ವಾಜಪೇಯಿಯವರು ಅಂದು ಸಂದಿಗ್ಧ ಸ್ಥಿತಿಯಲ್ಲಿದ್ದರು. ಒಂದೆಡೆ ಪ್ರಯಾಣಿಕರ ಸಂಬಂಧಿಕರ ಕೋಪ-ತಾಪ, ಮತ್ತೊಂದೆಡೆ ಅತ್ತು-ಕರೆಯುತ್ತಿರುವ ಮುಖಗಳನ್ನೇ ತೋರಿಸಿ ಇಡೀ ದೇಶವಾಸಿಗಳು ಕಣ್ಣೀರು ಹಾಕುವಂತೆ ಮಾಡುತ್ತಿದ್ದ ಮಾಧ್ಯಮಗಳು. ಜತೆಗೆ ೧೯೯೮ರಲ್ಲಿ ಅಣು ಪರೀಕ್ಷೆ ನಡೆಸಿದ್ದಕ್ಕಾಗಿ ಕುಪಿತಗೊಂಡಿದ್ದ ಅಮೆರಿಕ ಹಾಗೂ ಜಗತ್ತಿನ ಇತರ ರಾಷ್ಟ್ರಗಳ ಭಯ. ಅಂತಹ ಸಂದರ್ಭದಲ್ಲಿ ಆಡಳಿತದ ಅಷ್ಟೇನೂ ಅನುಭವವಿಲ್ಲದ ವಾಜಪೇಯಿ ಏನುತಾನೇ ಮಾಡಿಯಾರು? ‘ನನ್ನ ಸರಕಾರ ಭಯೋತ್ಪಾದನೆಯ ಇಂತಹ ಪ್ರದರ್ಶನದ ಮುಂದೆ ಮಂಡಿಯೂರುವುದಿಲ್ಲ’ ಎಂದಿದ್ದ ವಾಜಪೇಯಿ ಮೆತ್ತಗಾಗಿ, ಬೇಡಿಕೆಗಳಿಗೆ ಮಣಿದರು.
ಈ ಘಟನೆ ನಡೆದು ೯ ವರ್ಷಗಳ ನಂತರ ಮೊನ್ನೆ ಸಂಭವಿಸಿದ ನವೆಂಬರ್ ೨೬ರ ಮುಂಬೈ ದಾಳಿಯನ್ನೇ ತೆಗೆದುಕೊಳ್ಳಿ. ಇಡೀ ದೇಶವೇ ಒಕ್ಕೊರಲಿನಿಂದ ಹೇಳಿತು, ಯುದ್ಧವಾದರೂ ಸರಿ ಪಾಕಿಸ್ತಾನವನ್ನು ಮಟ್ಟಹಾಕಿ ಅಂತ. ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಬರಾಕ್ ಒಬಾಮ ಕೂಡ “ಪ್ರತಿಯೊಂದು ಸಾರ್ವಭೌಮ ರಾಷ್ಟ್ರಗಳಿಗೂ ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕಿದೆ” ಎನ್ನುವ ಮೂಲಕ ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಬಹುದು ಎಂಬ ಸೂಚನೆ ನೀಡಿದರು. ಆದರೆ ಪಾಕಿಸ್ತಾನದ ಮೇಲೆ ಬಾಂಬ್ ಹಾಕುವುದು ಬಿಡಿ, ಭಯೋತ್ಪಾದಕರ ತರಬೇತಿ ಶಿಬಿರಗಳ ಮೇಲೆ ಒಂದು ಸಣ್ಣ ಪಟಾಕಿಯನ್ನು ಬಿಸಾಡಲೂ ನಮ್ಮ ಕೇಂದ್ರ ಸರಕಾರಕ್ಕೆ ಆಗಲಿಲ್ಲ! ಏಳು ಗುಂಡುಗಳು ಹೊಟ್ಟೆಯನ್ನು ಹೊಕ್ಕಿದ್ದರೂ ಕಸಬ್‌ನ ಬಂದೂಕನ್ನು ಕೈಬಿಡದ ತುಕಾರಾಮ್ ಒಂಬ್ಳೆ ದೇಶವೇ ಮೆಚ್ಚುವ ಶೌರ್ಯ ತೋರಿ ಪಾಕಿಸ್ತಾನದ ಪಾತ್ರಕ್ಕೆ ಸಾಕ್ಷ್ಯ ಒದಗಿಸಿಕೊಟ್ಟರು. ಆದರೂ ದಾಳಿ ನಡೆದ ಮೂರು ತಿಂಗಳಾದರೂ ನಮ್ಮಿಂದ ಏನೂ ಮಾಡಲಾಗಿಲ್ಲ. ಈಗಾಗಲೇ ಪ್ರಧಾನಿ ಹಾಸಿಗೆ ಹಿಡಿದಿದ್ದಾರೆ, ಇನ್ನು ಸ್ವಲ್ಪ ದಿನ ಕಳೆದರೆ ಬಜೆಟ್ ಎನ್ನುತ್ತಾರೆ, ಅದು ಮುಗಿಯುವಷ್ಟರಲ್ಲಿ ಚುನಾವಣೆ ಘೋಷಣೆಯಾಗುತ್ತದೆ.
ಇಂತಹ ನಮ್ಮ ಜನರು, ನಾಯಕರಿಗೆ ಜಾರ್ಜ್ ಬುಷ್ ಅವರನ್ನು ಟೀಕಿಸುವ ನೈತಿಕ ಹಕ್ಕಿದೆಯೇ?
ಜಾರ್ಜ್ ಬುಷ್ ಅವರು ಅಫ್ಘಾನಿಸ್ತಾನದ ಮೇಲೆ ಆಕ್ರ ಮಣ ಮಾಡಿದ್ದು ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ಒಬ್ಬ ಸಾಮಾನ್ಯ ವ್ಯಕ್ತಿಯಿರಬಹುದು, ಒಂದು ರಾಷ್ಟ್ರದ ನಾಯಕನಿರಬಹುದು ಪ್ರತಿಫಲದ ನಿರೀಕ್ಷೆಯಿಲ್ಲದೆ ತನ್ನ ಹಣ, ಬಲವನ್ನು ವ್ಯಯಮಾಡಿ ಯಾರದ್ದೋ ಮೇಲೆ ಯುದ್ಧ ಮಾಡುವುದಿಲ್ಲ. ಹಾಗಾಗಿ ಅಮೆರಿಕ ತನ್ನ ಹಿತಾಸಕ್ತಿಗಾಗಿ ಅಫ್ಘಾನಿಸ್ತಾನ, ಇರಾಕ್ ಮೇಲೆ ದಾಳಿ ಮಾಡಿತು ಎಂದು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ. ಆದರೆ ಬುಷ್ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿದ್ದರಿಂದ ಭಾರತಕ್ಕಾದ ಲಾಭ ಗಳೇನು ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?
ಹತ್ತು, ಹದಿನೈದು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಯಾವ ಪರಿಸ್ಥಿತಿ ಇತ್ತು ಯೋಚನೆ ಮಾಡಿ. ನಮ್ಮ ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಸಂಪೂರ್ಣವಾಗಿ ಹೊರಹಾಕಿದ ನಂತರ ಭಯೋತ್ಪಾದಕರ ಮುಂದಿದ್ದ ಏಕೈಕ ಸವಾಲು ನಮ್ಮ ಸೈನಿಕರು. ಆಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳೆಂಥವು? “ಸೈನಿಕರ ಜತೆ ಕಾದಾಟ, ಇಬ್ಬರು ವಿದೇಶಿ ಬಾಡಿಗೆ ಹಂತಕರ ಹತ್ಯೆ”, “ಒಬ್ಬ ಸೈನಿಕ ಹತ್ಯೆ, ವಿದೇಶಿ ಬಾಡಿಗೆ ಹಂತಕರು ಪರಾರಿ”. ಈ ವಿದೇಶಿ ಬಾಡಿಗೆ ಹಂತಕರು ಅಥವಾ Foreign Mercenaries ಯಾರು? ಇವರು ದುಡ್ಡು ಅಥವಾ ಇನ್ನಾವುದೋ ಉದ್ದೇಶ ಸಾಧನೆಗಾಗಿ ಕಾಶ್ಮೀರಕ್ಕೆ ಆಗಮಿಸುತ್ತಿದ್ದು ಯಾವ ರಾಷ್ಟ್ರದಿಂದ? ಇವತ್ತು ಪಾಕಿಸ್ತಾನವನ್ನು Epicenter of terrorism ಅಥವಾ ಭಯೋತ್ಪಾದನೆಯ ಕೇಂದ್ರಸ್ಥಾನ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಹತ್ತು ವರ್ಷಗಳ ಹಿಂದೆ ಅಂತಹ ಅಪಖ್ಯಾತಿ ಅಫ್ಘಾನಿಸ್ತಾನಕ್ಕಿತ್ತು. ಕಾಶ್ಮೀರಕ್ಕೆ ಬಂದು ಹೋರಾಡುತ್ತಿದ್ದ ಬಾಡಿಗೆ ಹಂತಕರಿಗೆ ತರಬೇತಿ ನೀಡುತ್ತಿದ್ದುದು ಐಎಸ್‌ಐ ಹಾಗೂ ತಾಲಿಬಾನ್. ಇಂದಿಗೂ ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ನಮ್ಮ ರಕ್ಷಣಾ ಪಡೆಗಳ ನಡುವೆ ಕಾಳಗ ನಡೆಯುತ್ತದೆಯಾದರೂ ಕಳೆದ ಏಳೆಂಟು ವರ್ಷಗಳಿಂದ “ವಿದೇಶಿ ಬಾಡಿಗೆ ಹಂತಕರು” ಎಂಬ ಹೆಸರು ಕಾಣಿಸುವುದಿಲ್ಲ. ಅದಕ್ಕೆ ಕಾರಣವೇನು? ೨೦೦೧, ಅಕ್ಟೋಬರ್ ೭ರಂದು ಜಾರ್ಜ್ ಬುಷ್ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದ ಕಾರಣ ತಾಲಿಬಾನಿಗಳು ಮೊದಲು ತಮ್ಮ ಸ್ವಂತ ನೆಲೆಯನ್ನೇ ಉಳಿಸಿಕೊಳ್ಳಲು ಹೋರಾಡಬೇಕಾಗಿ ಬಂತು. ಕಾಶ್ಮೀರಕ್ಕೆ ಬಂದು ಹೋರಾಡುವ ಮಾತು ಹಾಗಿರಲಿ, ಅಫ್ಘಾನಿಸ್ತಾನವೇ ಕೈಬಿಟ್ಟು ಹೋಗುವ ಸ್ಥಿತಿ ಎದುರಾಯಿತು. ಹಾಗಾಗಿ ವಿದೇಶಿ ಭಯೋತ್ಪಾದಕರು ಕಾಶ್ಮೀರಕ್ಕೆ ಬರುವುದು ನಿಂತುಹೋಯಿತು ಹಾಗೂ ಕಾಶ್ಮೀರದಲ್ಲಿ ಪರಿಸ್ಥಿತಿ ತಿಳಿಗೊಳ್ಳತೊಡಗಿತು. ಅತ್ತ ಕೇವಲ ಎರಡೂವರೆ ತಿಂಗಳಲ್ಲಿ ಅಮೆರಿಕದ ಎದುರು ಸೋತುಸುಣ್ಣಾದ ತಾಲಿಬಾನಿಗಳು ಜೀವ ಉಳಿಸಿಕೊಳ್ಳುವುದೇ ದೊಡ್ಡ ವಿಷಯವಾಯಿತು. ಪ್ರಾಣಭಯದಿಂದ ಪಾಕಿಸ್ತಾನದ ಗಡಿಯೊಳಕ್ಕೆ ನುಸುಳಿ ಪರ್ವತಶ್ರೇಣಿಗಳಲ್ಲಿ ಅಡಗಿ ಕುಳಿತರು. ಅವರನ್ನೂ ಬೆನ್ನಟ್ಟಿ ಹೋದ ಬುಷ್, ತನ್ನ ಗಡಿಯನ್ನು ಮುಚ್ಚುವಂತೆ ಪಾಕಿಸ್ತಾನಕ್ಕೆ ಸೂಚಿಸಿದರು. ಪಾಕಿಸ್ತಾನ ತನ್ನ ಸೈನಿಕರನ್ನು ಆಫ್ಘನ್ ಗಡಿಯಲ್ಲಿ ನಿಯೋಜನೆ ಮಾಡಬೇಕಾಗಿ ಬಂತು. ಹಾಗೆ ಬುಷ್ ಅವರು ಪಾಕಿಸ್ತಾನ ತನ್ನ ಪಡೆಯನ್ನು ಅಫ್ಘಾನಿಸ್ತಾನದ ಗಡಿಯಲ್ಲಿ ನಿಯೋಜನೆ ಮಾಡುವಂತೆ ಮಾಡಿದ ಕಾರಣ, ನಮ್ಮ ಸೈನಿಕರತ್ತ ಗುಂಡುಹಾರಿಸಿ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿಸುತ್ತಿದ್ದ ಪಾಕ್ ಸೇನೆಯ ಕುತಂತ್ರಕ್ಕೂ ಕಡಿವಾಣ ಬಿತ್ತು.
ಇದರ ಪರಿಣಾಮವಾಗಿಯೇ ಭಯೋತ್ಪಾದಕರ ಉಪಟಳ ವಿಲ್ಲದೆ ೨೦೦೨ರಲ್ಲಿ ವಾಜಪೇಯಿ ಸರಕಾರ ಕಾಶ್ಮೀರದಲ್ಲಿ ಮೊಟ್ಟ ಮೊದಲ ಬಾರಿಗೆ ಮುಕ್ತ ಹಾಗೂ ನ್ಯಾಯಸಮ್ಮತ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಸಾಧ್ಯವಾಯಿತು. ಪ್ರತ್ಯೇಕತಾವಾದಿಗಳ ಬಹಿಷ್ಕಾರ ಕರೆಯ ಹೊರತಾಗಿಯೂ ಕಳೆದ ಡಿಸೆಂಬರ್‌ನಲ್ಲಿ ಮತ್ತೆ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಸಾಧ್ಯವಾಗಿದ್ದರೆ ಅದರ ಹಿಂದೆಯೇ ಇಂತಹ ಅಂಶಗಳ ಕಾಣಿಕೆಯಿದೆ. ಕಾಶ್ಮೀರ ಸಿಡಿದು ಸ್ವತಂತ್ರವಾಗದಂತೆ ತಡೆದಿದ್ದು ಖಂಡಿತ ನಮ್ಮ ರಕ್ಷಣಾ ಪಡೆಗಳೇ. ಆದರೆ ಇಂದು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ತಿಳಿಯಾದ ಪರಿಸ್ಥಿತಿಗೆ ತಾಲಿಬಾನನ್ನು ಅಮೆರಿಕ ಸದೆ ಬಡಿದಿದ್ದು ಹಾಗೂ ಪಾಕಿಸ್ತಾನಕ್ಕೆ ಕಡಿವಾಣ ಹಾಕಿರುವುದು ಕಾರಣವೇ ಹೊರತು ನಮ್ಮ ಪ್ರಧಾನಿ ಆರಂಭಿಸಿದ ಮುಜಫರಾಬಾದ್ ರೈಲು ಸಂಚಾರವಾಗಲಿ, ಅಭಿವೃದ್ಧಿ ಪ್ಯಾಕೇಜ್‌ಗಳಾಗಲಿ ಅಥವಾ ಇನ್ನಾವುದೇ ‘ಸಿಬಿಎಂ’ಗಳಾಗಲಿ (ವಿಶ್ವಾಸ ಮೂಡಿಸುವ ಕ್ರಮಗಳು) ಅಲ್ಲ.
ಇದಿಷ್ಟೇ ಅಲ್ಲ. ತಾಲಿಬಾನನ್ನು ಮಟ್ಟಹಾಕಿದ ನಂತರ ಹಮೀದ್ ಕರ್ಜಾಯಿ ನೇತೃತ್ವದಲ್ಲಿ ಅಫ್ಘಾನಿಸ್ತಾನದಲ್ಲಿ ಒಂದು ಪ್ರಜಾತಾಂತ್ರಿಕ ಸರಕಾರ ಸ್ಥಾಪನೆಯಾಗಿದೆ. ಅಲ್ಲಿನ ಹೆದ್ದಾರಿ ಹಾಗೂ ಸಂಪರ್ಕ ಜಾಲಗಳ ನಿರ್ಮಾಣ ಕಾರ್ಯದ ಗುತ್ತಿಗೆಗಳು ಭಾರತದ ಕಂಪನಿಗಳಿಗೆ ದೊರೆತಿವೆ. ನಮ್ಮ ಎಂಜನಿಯರ್‌ಗಳು ಹಾಗೂ ಕಾರ್ಮಿಕರಿಗೆ ಅಲ್ಲಿ ಉದ್ಯೋಗ ದೊರೆತಂತಾಗಿದೆ. ಆ ರಾಷ್ಟ್ರದ ಪುನರ್‌ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದರಿಂದ ಅಫ್ಘಾನಿಸ್ತಾನದ ಜತೆ ಭಾರತ ಉತ್ತಮ ಬಾಂಧವ್ಯ ಹೊಂದು ವಂತಾಗಿದೆ. ತಾಲಿಬಾನ್ ಆಡಳಿತವಿದ್ದಾಗ ಅಫ್ಘಾನಿಸ್ತಾನ ಪಾಕ್‌ಗೆ ಮಿತ್ರ ಹಾಗೂ ಭಾರತದ ಪಾಲಿಗೆ ಕಂಟಕವಾಗಿತ್ತು. ಆದರೆ ಅಮೆರಿಕದ ಕೈವಶವಾದ ಮೇಲೆ ಅಫ್ಘಾನಿಸ್ತಾನ ಪಾಕ್‌ಗೆ ಕಂಟಕ ಹಾಗೂ ಭಾರತಕ್ಕೆ ಮಿತ್ರರಾಷ್ಟ್ರವಾಗಿದೆ. ಅಫ್ಘಾನಿಸ್ತಾನದ ಮೂಲಕ ಭಾರತ ತನಗೆ ಅಪಾಯವೊಡ್ಡುತ್ತಿದೆ, ಬಲೂಚಿಸ್ತಾನದಲ್ಲಿ ಬುಡಕಟ್ಟು ಜನಾಂಗಗಳನ್ನು ಎತ್ತಿಕಟ್ಟುತ್ತಿದೆ ಎಂದು ಪಾಕ್ ಹೆದರುತ್ತಿದೆ. ಇದರಿಂದ ಅದು ಎಷ್ಟು ಹತಾಶಗೊಂಡಿದೆಯೆಂದರೆ ಕಾಬೂಲ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯ ಮೇಲೆ ಬಾಂಬ್ ದಾಳಿ ಮಾಡುವಷ್ಟು ಅದರ ಕೋಪ ನೆತ್ತಿಗೇರಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವಿದ್ದಾಗ, ಒಬ್ಬ ಅಪ್ರಾಪ್ತ ವಯಸ್ಕ ಬಾಲಕಿ ಇರಬಹುದು, ಮುದುಕಿ ಆಗಿರಬಹುದು. ಆಕೆ ಮನೆಯಿಂದ ಹೊರಹೋಗುವಾಗ ಅಪ್ಪ, ಅಣ್ಣ-ತಮ್ಮ ಅಥವಾ ಗಂಡ ಹೀಗೆ ಯಾರಾದರೂ ಒಬ್ಬ ಗಂಡಸು ಜತೆಯಲ್ಲಿರಬೇಕಿತ್ತು. ಒಬ್ಬಂಟಿಯಾಗಿ ಹೊರಬಂದರೆ ತಾಲಿಬಾನಿಗಳು ಗುಂಡಿಟ್ಟು ಕೊಲೆ ಗೈಯ್ಯುತ್ತಿದ್ದರು. ಗಂಡಸರು ಕಡ್ಡಾಯವಾಗಿ ಗಡ್ಡ ಬೆಳೆಸಬೇಕಿತ್ತು. ಮಹಿಳೆಯರು ಬುರ್ಖಾವಿಲ್ಲದೆ ಓಡಾಡುವಂತಿರ ಲಿಲ್ಲ. ನೀವೇ ಯೋಚನೆ ಮಾಡಿ, ಈಗ್ಗೆ ಕೆಲವೇ ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಬುರ್ಖಾ ಹಾಕದಿದ್ದ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ಅವರ ತಲೆ ಬೋಳಿಸುವ ಘಟನೆಗಳು ಜರುಗುತ್ತಿದ್ದವು. ಅದು ತಾಲಿಬಾನ್ ಆಡ ಳಿತದ ಲಕ್ಷಣವಲ್ಲವೆ? ಇಂದು ಅಂತಹ ಯಾವ ಅವಘಢಗಳೂ ಸಂಭವಿಸುತ್ತಿಲ್ಲ. ಏಕೆಂದರೆ ಬುಷ್ ಅಫ್ಘಾನಿಸ್ತಾನದಲ್ಲೇ ತಾಲಿ ಬಾನನ್ನು ಮಟ್ಟಹಾಕಿದ್ದರಿಂದ ಕಾಶ್ಮೀರದ ತಾಲಿಬಾನೀಕರಣಕ್ಕೂ ಕಡಿವಾಣ ಬಿದ್ದಿದೆ.
ಇನ್ನು ಇರಾಕ್ ಮೇಲೆ ಅಮೆರಿಕ ಮಾಡಿದ ದಾಳಿ, ಹೇಳಿದ ಸುಳ್ಳುಗಳನ್ನು ತೆಗೆದುಕೊಂಡು ನಾವೇನು ಮಾಡಬೇಕು?
ಅಷ್ಟಕ್ಕೂ ಇರಾಕ್‌ನ ಬೆಂಬಲಕ್ಕೆ ನಿಲ್ಲಲು ಸದ್ದಾಂ ಹುಸೇನ್ ಅವರೇನು ಸಾಧು-ಸಂತರಾಗಿರಲಿಲ್ಲ. ಸ್ವಂತ ಅಳಿಯಂದಿರನ್ನೇ ಕೊಲ್ಲಿಸಲು ಹೇಸದ ಆತ ೬ ಲಕ್ಷ ಕುರ್ದಿಶ್ ಮುಸ್ಲಿಮರನ್ನೇ ಮಾರಣ ಹೋಮ ಮಾಡಿಸಿದ್ದ. ಇತ್ತ ಅಣ್ವಸ್ತ್ರ ಹೊಂದಲು ಹವಣಿಸುತ್ತಿರುವ ಇರಾನ್‌ಗೆ ಬುಷ್ ಕಡಿವಾಣ ಹಾಕಿದ್ದರಿಂದ ಪರೋಕ್ಷವಾಗಿ ಭಾರತಕ್ಕೂ ಲಾಭವಾಗಿದೆ. ಒಂದು ವೇಳೆ, ಇರಾನ್ ಕೂಡ ಅಣ್ವಸ್ತ್ರ ಹೊಂದಿದ್ದರೆ ಅರಬ್ಬಿ ಸಮುದ್ರದೆಡೆಯಲ್ಲಿರುವ ಭಾರತದ ಮತ್ತೊಂದು ನೆರೆಯ ರಾಷ್ಟ್ರ ಕೂಡ ಅಣ್ವಸ್ತ್ರ ಹೊಂದಿದಂತಾಗುತಿತ್ತು. ಅಕಸ್ಮಾತ್ ಭಾರತ-ಪಾಕಿಸ್ತಾನದ ನಡುವೆ ಸಂಘರ್ಷವೇರ್ಪಟ್ಟರೆ ಇರಾನ್ ಯಾರನ್ನು ಬೆಂಬಲಿಸುತ್ತಿತ್ತು? ಮತ್ತೊಂದು ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನವನ್ನು ಬೆಂಬಲಿಸುತ್ತಿತ್ತೇ ಹೊರತು ಭಾರತವನ್ನಲ್ಲ. ಈ ಹಿನ್ನೆಲೆಯಲ್ಲಿ ಬುಷ್ ಹಾಕಿದ ಕಡಿವಾಣದಿಂದ ಭಾರತಕ್ಕೂ ಅನುಕೂಲವಾಗಿದೆ.
ಬುಷ್ ನೇರವಾಗಿಯೂ ಭಾರತಕ್ಕೆ ಹಲವಾರು ಅನುಕೂಲ ಗಳನ್ನು ಮಾಡಿಕೊಟ್ಟಿದ್ದಾರೆ.
ಯಾರೇನೇ ಬೊಬ್ಬೆ ಹಾಕಿದರೂ ನಮ್ಮ ಜತೆ ಮಾಡಿಕೊಂಡ ಅಣು ಸಹಕಾರ ಒಪ್ಪಂದದ ಹಿಂದೆ ಭಾರತವನ್ನು ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಸಬೇಕೆಂಬ ಅಮೆರಿಕದ ಉದ್ದೇಶ ಇದ್ದೇ ಇದೆ. ಒಂದು ವೇಳೆ ಟೀಕಾಕಾರರು ಹೇಳುತ್ತಿರುವಂತೆ ಅಣು ಒಪ್ಪಂದ ಭಾರತಕ್ಕೆ ಮಾರಕ ಎನ್ನುವುದಾದರೆ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯಲ್ಲಿ (ಐಎಇಎ) ಚೀನಾವೇಕೆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುತ್ತಿತ್ತು? ಪಾಕಿಸ್ತಾನದ ಜತೆ ತಾನೂ ಕೂಡ ಅಂತಹದ್ದೇ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಚೀನಾವೇಕೆ ಒತ್ತಾಯಿಸುತ್ತಿತ್ತು? ಕ್ಲಿಂಟನ್ ಅವರಂತೆ ‘ಸಿಟಿಬಿಟಿ’ಯೆಂಬ ಬೆದರುಗೊಂಬೆಯನ್ನಿಟ್ಟುಕೊಂಡು ಆಟವಾಡಿಸದೇ ಅಣುಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿಹಾಕದಿದ್ದರೂ ಭಾರತವೊಂದು ಅಣ್ವಸ್ತ್ರ ರಾಷ್ಟ್ರವೆಂದು ಒಪ್ಪಿಕೊಳ್ಳುವ ಔದಾರ್ಯವನ್ನು ಬುಷ್ ತೋರಿದರು. ಕಲ್ಲಿದ್ದಲು ಮುಂತಾದ ಹಾನಿಕಾರಕ ಶಕ್ತಿಮೂಲಗಳು ಹಾಗೂ ತೈಲದ ಮೇಲಿನ ಅತಿಯಾದ ಅವಲಂಬನೆಯನ್ನು ಬಿಡಿ. ಜೈವಿಕ ಇಂಧನವನ್ನು ಅಭಿವೃದ್ಧಿಪಡಿಸಿ, “Go Green” ಎಂದು ಭಾರತಕ್ಕೆ ಬುದ್ಧಿ ಹೇಳಿದ್ದೂ ಕೂಡ ಬುಷ್ ಆಡಳಿತವೇ. ಔಟ್‌ಸೋರ್ಸಿಂಗ್ (ವ್ಯಾಪಾರ ಹೊರಗುತ್ತಿಗೆ) ವಿರುದ್ಧ ಅಮೆರಿಕದಾದ್ಯಂತ ವಿರೋಧ ವ್ಯಕ್ತವಾದರೂ, ಕ್ಯಾಲಿಫೋರ್ನಿಯಾದಂತಹ ರಾಜ್ಯ ಕಾನೂನನ್ನೇ ತರಲು ಹೊರಟರೂ ಬುಷ್ ಮಾತ್ರ ಔಟ್‌ಸೋರ್ಸಿಂಗ್ ಪರವಾಗಿ ನಿಂತರು. ಇಲ್ಲದೇ ಹೋಗಿದ್ದರೆ ನಮ್ಮ ಸಾಫ್ಟ್‌ವೇರ್ ಎಂಜಿನಿಯರ್‌ಗಳೂ ಎಂದೋ ಕೆಲಸ ಕಳೆದುಕೊಳ್ಳುತ್ತಿದ್ದರು.
ಬುಷ್ ಮೇಲೆ ಸಾವಿರ ಜೋಕುಗಳು ಹುಟ್ಟಿರಬಹುದು, ಅವರ ಇಂಗ್ಲಿಷ್‌ನಲ್ಲಿ ವ್ಯಾಕರಣವಿಲ್ಲದೇ ಇರಬಹುದು. ಆದರೆ ದೋಷವಿದ್ದಿದ್ದು ಇಂಗ್ಲಿಷ್‌ನಲ್ಲೇ ಹೊರತು ಅವರ ಗುಂಡಿಗೆಯಲ್ಲಲ್ಲ. ಸೌದಿ ಅರೇಬಿಯಾಕ್ಕೆ ಕಡಿವಾಣ ಹಾಕಿದ್ದು, ಮಧ್ಯ ಏಷ್ಯಾದ ಮೇಲೆ ಹಿಡಿತ ಸಾಧಿಸಿದ್ದು, ಒಪೆಕ್(ತೈಲ ರಫ್ತು ರಾಷ್ಟ್ರಗಳ ಒಕ್ಕೂಟ) ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ತಾಲಿಬಾನನ್ನು ಮಟ್ಟಹಾಕಿದ್ದು, ಇರಾಕ್‌ನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡಿದ್ದು, ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ತೆರೆ ಎಳೆದಿದ್ದು, ಉತ್ತರ ಕೊರಿಯಾಕ್ಕೆ ಲಗಾಮು ಹಾಕಿದ್ದು, ಆಫ್ರಿಕಾಕ್ಕೆ ಅಪಾರ ಸಹಾಯ ನೀಡಿದ್ದು, ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟ ಆರಂಭಿಸಿದ್ದು ಬುಷ್ ಹೆಗ್ಗಳಿಕೆ. ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ಪುಕ್ಕಟೆ ಪ್ರಚಾರಕ್ಕಾಗಿ ಬಾಲ್ಕನ್ (ಯುಗೋಸ್ಲಾವಿಯಾ) ಮುಸ್ಲಿಮರ ಬೆಂಬಲಕ್ಕೆ ಹೊರಟರು, ತಾಲಿಬಾನ್, ಉತ್ತರ ಕೊರಿಯಾದಂತಹ ರೋಗಿಷ್ಠ ವ್ಯವಸ್ಥೆಗಳು ಬೆಳೆಯಲು ಬಿಟ್ಟಿದ್ದರು. ಆದರೆ ಅವುಗಳನ್ನು ಮಟ್ಟಹಾಕಿದ್ದು ಬುಷ್. ಇಂತಹ ಬುಷ್ ತಮ್ಮ ಅಧಿಕಾರಾವಧಿಯ ಕೊನೆಯ ಭಾಗದಲ್ಲಿ ಅಮೆರಿಕದವರಿಗೇ ಅಪ್ರಿಯರಾಗಿದ್ದು ಖಂಡಿತ ದುರದೃಷ್ಟ. ಅಷ್ಟಕ್ಕೂ ಆರ್ಥಿಕ ಹಿಂಜರಿತಕ್ಕೆ ಬುಷ್ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಎಂಐಟಿ, ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಐಐಎಂ-ಐಐಟಿಗಳಲ್ಲಿ ಕಲಿತು ಕಂಪನಿಗಳ ‘ಸಿಇಓ’ಗಳಾಗಿದ್ದ ಮಹಾ ಮೇಧಾವಿಗಳು ಮಾಡಿದ ತಪ್ಪಿನ ಪಾತ್ರ ಆರ್ಥಿಕ ಹಿಂಜರಿತದಲ್ಲಿ ಬಹುವಾಗಿದೆ. ರಾಮಲಿಂಗರಾಜು ಅವರಂತಹ ಠಕ್ಕರು ಅಲ್ಲೂ ಇದ್ದಾರೆ. ಆದರೆ ಸಂಕಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬಂತೆ ಎಲ್ಲದಕ್ಕೂ ಮಾಧ್ಯಮಗಳು ಬುಷ್ ಅವರನ್ನೇ ದೂರಿದವು. ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್‌ಗೆ ಮಣಿಯದೆ ೮ ವರ್ಷಗಳ ಕಾಲ ಜರ್ಮನಿಯ ವಿರುದ್ಧ ಹೋರಾಡಿದ ಮಹಾನ್ ನಾಯಕ ವಿನ್‌ಸ್ಟನ್ ಚರ್ಚಿಲ್ ಅವರನ್ನೇ ಅರ್ಥವ್ಯವಸ್ಥೆಯನ್ನು ಹಾಳುಮಾಡಿದರೆಂದು ದೂರಿ ಜನ ಚುನಾವಣೆಯಲ್ಲಿ ಸೋಲಿಸಿದ್ದರು. ಇನ್ನು ಅಂತಹದ್ದೇ ಕಾರಣಕ್ಕಾಗಿ ಬುಷ್ ಅಪಖ್ಯಾತಿ ಪಡೆದಿದ್ದರಲ್ಲಿಯೂ ಯಾವ ಆಶ್ಚರ್ಯವಿಲ್ಲ. ಆದರೇನಂತೆ ಇಂಟರ್‌ನೆಟ್ ಆಧಾರಿತ ಬ್ಲಾಗ್, ಡಾಟ್‌ಕಾಂಗಳಂತಹ ಯಾವ ಮೀಡಿಯಾ ಹೌಸ್‌ಗಳ ಹಿಡಿತದಲ್ಲಿರದ ಇಂಡಿಪೆಂಡೆಂಟ್ ಮೀಡಿಯಾಗಳಲ್ಲಿ ಬುಷ್ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯವೇ ಇದೆ. ಇತ್ತೀಚೆಗೆ ಭಾರತ ಹಾಗೂ ನೈಜೀರಿಯಾ, ತಾಂಜನಿಯಾದಂತಹ ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಹತ್ತಾರು ದೇಶಗಳಲ್ಲಿ ನಡೆದ ಸಮೀಕ್ಷೆಗಳು ಬುಷ್ ಜನಪ್ರಿಯತೆಯನ್ನು ಖಚಿತಪಡಿಸಿವೆ.
ಇಷ್ಟಾಗಿಯೂ ಯಾವನೋ ಬೂಟು ಬಿಸಾಡಿದಾಗ ತಾವೇ ಬಿಸಾಡಿದಷ್ಟು ಖುಷಿಪಟ್ಟವರೂ ನಮ್ಮಲ್ಲಿದ್ದಾರೆ. ಮುಸ್ಲಿಮ್ ರಾಷ್ಟ್ರಗಳನ್ನೇ ಗುರಿಯಾಗಿಸಿಕೊಂಡರು ಎಂದಂದುಕೊಂಡು ಬುಷ್ ಅವರನ್ನು ದ್ವೇಷಿಸುವವರೂ ಇದ್ದಾರೆ. ಆದರೆ ಅದು ಬುಷ್ ಇರಲಿ, ಒಬಾಮ ಆಗಿರಲಿ. ಅಮೆರಿಕದವರು ಯಾವ ಬಾಕಿಯನ್ನೂ ಉಳಿಸಿಕೊಳ್ಳುವುದಿಲ್ಲ. ಅಮೆರಿಕದ ಪರ್ಲ್ ಹಾರ್ಬರ್ ಮೇಲೆ ಜಪಾನ್ ದಾಳಿ ಮಾಡಿತು, ಅಣುಬಾಂಬ್ ಮೂಲಕ ಉತ್ತರ ಕೊಟ್ಟಿತು ಅಮೆರಿಕ. ತಾಲಿಬಾನ್ ದಾಳಿ ಮಾಡಿತು, ಅಮೆರಿಕ ತಾಲಿಬಾನ್‌ನ ಮೂಲಸ್ಥಾನವನ್ನೇ ನಾಶ ಮಾಡಿತು. ವಿನಾಕಾರಣ ಎಲ್ಲದಕ್ಕೂ ಅಮೆರಿಕವನ್ನು ತೆಗಳುವ ಬದಲು ಅದರ ಒಳ್ಳೆಯ ಗುಣಗಳನ್ನು ನಾವೇಕೆ ರೂಢಿಸಿಕೊಳ್ಳಬಾರದು? ಅಂದು ಅಫ್ಘಾನಿ ಸ್ತಾನದ ಮೇಲೆ ಆಕ್ರಮಣ ಮಾಡುವಾಗ, “Our war on terror begins with Al Qaeda, but it does not end there” ಎಂದಿದ್ದರು ಬುಷ್. ಅವರ ಮಾತು ನಿಜವಾಗಲಿ, ಒಬಾಮ ಅವರ ಮುಂದಿನ ಗುರಿ ಪಾಕಿಸ್ತಾನವಾಗಲಿ. ನಮ್ಮನ್ನಾಳುವವರಲ್ಲಂತೂ ಅಂತಹ ತಾಕತ್ತಿಲ್ಲ.
Thank you Bush, We certainly love you!
houdu pratap avare….
Bush ene maadirabahudu…. aadre nanaganisuva prakaara avarannu naavu dveshisalu yaava kaaranavu illa….. kevala tamma svartha saadhanege deshada hitavanne bali koduvavariginta Bush eshto melu…. tamma deshada saluvaagi yuddha maadidaru adarindaa namma deshakke laabhavaagiddantu nija alve….. Yes…. We Love u Mr.Bush
george bush is truly great ………….compared to our devegowda and sonia he is awesome…………
Preatap sir, neevu nimma hendina ankana dalli bush bagge tamaashe agi matadiddira n ee ankana dalli avara bagge tumba olleya vicharagalannu tilisiddira. nimage danyavadagalu.
Adare arthavagade ulididdu endare, namma rajakaranigalige aa tarahada dairya yaake ella??
@Pratap – Nice article
@siddu – v good points
@siddu, well written explanation and letting us know the other side of the story as well. Thanks for the info 🙂
Pratap, this is the second time i’m writing a comment for your articles, i get a feeling you are getting complacent or taking the reader for granted, thinking that ppl will read whatever you write.??? please the readers respect you for your boldness and also the way you present facts. Please do the homework well before writing articles and don’t take us for granted. from few weeks your articles have lost that grip and feel its written for the heck of it. Pls don’t disappoint us :-((
Dear Siddu n Indy, my book is getting released on Feb 8th. There will be a interactive session with readers. Y don’t u guys come? So that, v can have a open debate. The problem is, I don’t have enough time to answer to each n every doubt n questions shore up here.
And Siddu, I always welcome criticism, but it should be based on merit. Even u have criticised me in the past for ur own cooked up reasons n I ignored it. But this time, I am deleting ur post, for the simple reason it’s not worth keeping.
As Mark Twain said, “A lie can travel halfway around the world while the truth is still putting its shoes”. Hope, u understand the value of ur arguments and may be u are too old n timid to understand the importance of defending the nation even by supreme sacrifice.
Thanq
@Siddu,
Agree that Afghan is not as powerful as Pakistan (assumption, coz I don’t live there). Look @ the statements issued by PM and others, it never conveys the message to Pakistan that 1. attacks on India is awful 2. India is serious about this. Pakistan is fooling us by giving blunt statements and on our part we are not acting swiftly, its 3 months now, and we have hardly done anything. We shocked the British by non violence, courtesy Mahatma Gandhi, was that not waging the WAR against British?
I’ll leave to UPA to adapt ways to tackle the “WAR ON TERRORâ€, as far as I’m concerned, war on Pakistan is the way to go. One big unified effort we can make world terror free.
Our UPA (chaired by Mrs. Gandhi) don’t want to do anything to damage their chances with elections round the corner.
I think Prathap is talking of Intent of the leaders here.
@Prathap,
Can we have poll in this website (or on vijyakarnataka.com) on ways to Tackle WAR ON TERROR? We would like to air our opinion
@Others
Any idea/ suggestion on the thought?
Hi Pratap,
Nice one…..
ವಿನಾಕಾರಣ ಎಲà³à²²à²¦à²•à³à²•ೂ ಅಮೆರಿಕವನà³à²¨à³ ತೆಗಳà³à²µ ಬದಲೠಅದರ ಒಳà³à²³à³†à²¯ ಗà³à²£à²—ಳನà³à²¨à³ ನಾವೇಕೆ ರೂಢಿಸಿಕೊಳà³à²³à²¬à²¾à²°à²¦à³?
this is really right.
ಒಬಾಮ ಅವರ ಮà³à²‚ದಿನ ಗà³à²°à²¿ ಪಾಕಿಸà³à²¤à²¾à²¨à²µà²¾à²—ಲಿ. ನಮà³à²®à²¨à³à²¨à²¾à²³à³à²µà²µà²°à²²à³à²²à²‚ತೂ ಅಂತಹ ತಾಕತà³à²¤à²¿à²²à³à²²…………?
adu iddare Mr.Modige maatra………………. Modi mundina PM aagali…….
Good Article
Great! pratap . excellent article. thanks very much.
wonderful article.
Hi Pratapji, this Article is very impressive n informative.Actually i was also
support Mr.Bush towards his attack on Taliban,but he had no huge proofs.
Any way he is the man with strong willpower and guts.
Actually we don’t have any rights to blame Mr.BUSH.
ಯಾವà³à²¦à³‡ ಒಬà³à²¬ ಮನà³à²·à³à²¯à²¨à²²à³à²²à³‚ ಕೆಟà³à²Ÿ ಮತà³à²¤à³ ಒಳà³à²³à³†à²¯ ಎರಡೂ ಗà³à²£à²—ಳಿರà³à²¤à³à²¤à²µà³†. ಅದೠಎಷà³à²Ÿà³ ಪà³à²°à²®à²¾à²£à²¦à²²à³à²²à²¿ ಇರà³à²¤à³à²¤à²¦à³† ಎನà³à²¨à³à²µà³à²¦à³ ಆ ಮನà³à²·à³à²¯à²¨ ವà³à²¯à²•à³à²¤à²¿à²¤à³à²µà²µà²¨à³à²¨à³ ತಿಳಿಸà³à²¤à³à²¤à²¦à³†. ರಾಜಕೀಯ ವà³à²¯à²•à³à²¤à²¿à²—ಳಲà³à²²à²¿ ಸà³à²µà²¾à²°à³à²¥ ಗà³à²£à²—ಳೠಸಾಮನà³à²¯. ಹಾಗಿದà³à²¦à³‚ ರಾಜಕಿಯದವರೇ ಆದ ವಾಜಪೇಯಿ ಹಾಗೠದೇವೇಗೌಡನನà³à²¨à³ ಹೋಲಿಸಲಾಗದà³. ಯಾಕೆ ಅಂತ ನಿಮಗೆ ಗೊತà³à²¤à³.
ಅದೇ ರೀತಿ, ಒಬà³à²¬ ಮನà³à²·à³à²¯ ನನಗೆ ಒಳà³à²³à³†à²¯à²¨à²¾à²—ಿರಬಹà³à²¦à³. ನಿಮಗೆ ಕೆಟà³à²Ÿà²µà²¨à²¾à²—ಿರಬಹà³à²¦à³.
ನೀವೠನಮà³à²® ದೇಶದ ಯಾವà³à²¦à³‡ ಮà³à²¸à³à²²à²¿à²®à²¨à²¨à³à²¨à³ ಕೇಳಿ ಬà³à²·à³ ಬಗà³à²—ೆ? ಅಥವಾ ಅಮೆರಿಕದ ಬಗà³à²—ೆ?
ಆತ ‘ತಮà³à²® ಇಸà³à²²à²¾à²‚’ ದೇಶದ ಮೇಲೆ ಧಾಳಿ ಮಾಡಿದ ಇವರನà³à²¨à³ ಕನಸಿನಲà³à²²à²¿à²¯à³‚ ಪà³à²°à³€à²¤à²¿à²¸à²²à²¾à²°.
ಬà³à²·à³, ಮà³à²·à²°à²«à³ ನೊಂದಿಗೆ ಸೇರಿ ಮೊದಲಿಗೆ ಚಿನà³à²¨à²¾à²Ÿà²µà²¨à³à²¨à²¾à²¡à²¿à²¦à²°à³‚ ಅಧಿಕಾರದ ಕೊನೆಯ ಹಂತದಲà³à²²à²¿ ತಪà³à²ªà²¨à³à²¨à³ ಸರಿ ಮಾಡಿಕೊಂಡರà³.
ಅಮೆರಿಕದಂಥ ವಿಶà³à²µà²¦ ನಾಯಕ ರಾಷà³à²Ÿà³à²°à²µà²¨à³à²¨à²¾à²³à³à²µà²¾à²— ಕೆಟà³à²Ÿ/ಒಳà³à²³à³†à²¯ ಈ ಎರಡೂ ಗà³à²£à²—ಳೂ ಮà³à²–à³à²¯. ಯಾಕೆಂದರೆ ಈಗಿನ ಪà³à²°à²ªà²‚ಚದಲà³à²²à²¿ ಮೋಹನ ಕರಮಚಂದ ಗಾಂಧಿ/ವಾಜಪೇಯಿ/MMS ತರಹ ‘ಮೌನ/ತಾಳà³à²®à³†’ ತೋರಿಸà³à²¤à³à²¤à²¿à²¦à³à²¦à²°à³† ಮಹಮದೠಘಜà³à²¨à²¿à²¯à³ ನಮà³à²® ದೇವಾಲಯಗಳ ಮೇಲೆ ಧಾಳಿ ಮಾಡಿ ಕೊಳà³à²³à³† ಹೊಡೆದ ಹಾಗಾಗà³à²¤à³à²¤à²¦à³†!
ಇವತà³à²¤à²¿à²¨ à²à³Œà²¤à²¿à²• ಜಗತà³à²¤à²¿à²¨à²²à³à²²à²¿ ಒಂದೠವಸà³à²¤à³/ಮನà³à²·à³à²¯/ದೇಶ….. “ಇದರಿಂದ ನಮಗೇನೠಉಪಯೋಗ ಇದೆ/ಆಗಿದೆ ” ಅಂತ ನೋಡಬೇಕೇ ಹೊರತೠಬೇರೆಯವರಿಗೆ ಹೇಗೆ ಅನà³à²¨à³à²µà³à²¦à³, ಗೌಣ, ಲೆಕà³à²•ಕà³à²•ೆ ಬರà³à²µà³à²¦à²¿à²²à³à²².
ಈ ನಿಟà³à²Ÿà²¿à²¨à²²à³à²²à²¿ ಇಡೀ ಪà³à²°à²ªà²‚ಚದ ಮà³à²¸à³à²²à²¿à²‚ ರಾಷà³à²Ÿà³à²°à²—ಳೠಅಮೆರಿಕವನà³à²¨à³/ಬà³à²·à³ ರನà³à²¨à³ ತೆಗಳಿದರೂ ಕೂಡ à²à²¾à²°à²¤à²•à³à²•ೆ ಇವರಿಂದ ಅನà³à²•ೂಲವಾಗಿದೆ.
ಇವತà³à²¤à³ ನಾನà³-ನೀವೠಪà³à²°à²ªà²‚ಚದ ಯಾವà³à²¦à³Š ಮೂಲೆಯಲà³à²²à²¿ ಕà³à²³à²¿à²¤à³ ಹೀಗೆ ಚರà³à²šà³† ಮಾಡà³à²µà³à²¦à³ ಸಾಧà³à²¯à²µà²¾à²—ಿದà³à²¦à²°à³† ಅದಕà³à²•ೆ ಅಮೆರಿಕದ ಸಂಶೋಧನೆಗಳೇ ಕಾರಣವೇ ಹೊರತೠಯಾವà³à²¦à³‡ ಮà³à²¸à³à²²à²¿à²‚ ರಾಷà³à²Ÿà³à²°à²µà²²à³à²². ಅದೇರೀತಿ ಅಮೇರಿಕಾ ಒದಗಿಸಿರà³à²µ ಅವಕಾಶ – ಅಣೠಶಕà³à²¤à²¿à²¯ ಬಳಕೆಯಿಂದ ನಮà³à²® ವಿದà³à²¯à³à²¤à³ ಸಮಸà³à²¯à³† ನಿವಾರಣೆಯಾಗà³à²¤à³à²¤à²¦à³†.
ಇವತà³à²¤à³ ಪೂರà³à²µà²¦ ಮಲೇಶಿಯದಿಂದ ಹಿಡಿದೠಪಶà³à²šà²¿à²®à²¦ ಮೊರಾಕà³à²•ೋ ವರೆಗೂ ಎಲà³à²²à²¾ ಮà³à²¸à³à²²à²¿à²® ದೇಶಗಳೠಅಮೆರಿಕವನà³à²¨à³, ಇಸà³à²°à³‡à²²à²¨à³à²¨à³ ದà³à²µà³‡à²·à²¿à²¸à³à²¤à³à²¤à²µà³†. ‘ಶತà³à²°à³à²µà²¿à²¨ ಶತà³à²°à³ ನಮಗೆ ಮಿತà³à²°’ ಎಂಬ ಚಾಣಕà³à²¯ ಸೂತà³à²°à²µà²¨à³à²¨à³ ನಾವೠಅನà³à²¸à²°à²¿à²¸à²¬à³‡à²•ೇ ಹೊರತà³, ಇಸà³à²°à³‡à²²à²¿à²¨ ತರಹ ಧೈರà³à²¯ ಪà³à²°à²¦à²°à³à²¶à²¿à²¸à²¬à³‡à²•ೆ ಹೊರತೠಇನà³à²¨à³‚ ಅಳà³à²®à³à²‚ಜಿಯಂತೆ ಕà³à²³à²¿à²¤à³ ‘ಶಾಂತಿ-ಶಾಂತಿ’ ಅನà³à²¨à³à²µà³à²¦à²°à²²à³à²²à²¿ ಅರà³à²¥à²µà³‡ ಇಲà³à²².
ಅಮೇರಿಕಾ ಇರಾಕಿನ ಮೇಲೆ ಧಾಳಿಮಾಡಿದಾಗ ಮೈಸೂರà³, ಬೆಂಗಳೂರೠಸೇರಿದಂತೆ ದೇಶದ ಹಲವಾರೠಕಡೆ ಸತà³à²¯à²¾à²—à³à²°à²¹/ಧರಣಿ ಮಾಡಿದ ನಮà³à²® ಬà³à²¦à³à²¦à²¿ ಜೀವಿಗಳಿಗೆ, ನಮà³à²®à²µà²°à³ ಕಾಶà³à²®à³€à²°à²¦à²²à³à²²à²¿ ಸಾವಿರಾರೠಮಂದಿ ಪà³à²°à²¾à²£ ಕಳೆದà³à²•ೊಳà³à²³à³à²µà²¾à²— ಧರಣಿ ಮಾಡà³à²µ ‘ಬà³à²¦à³à²¦à²¿’ ಇರಲಿಲà³à²²à²µà³†?
ಇಂಥ ದà³à²°à³à²¬à³à²¦à³à²¦à²¿ ಜೀವಿಗಳನà³à²¨à³ ಅನà³à²¸à²°à²¿à²¸à³à²µ ಸಾಮನà³à²¯ ಜನ ಎಂಥ ಮà³à²°à³à²–ರಿರಬಹà³à²¦à³?
ತಾಲಿಬಾನೇ ಅಗಲಿ ಸದà³à²¦à²¾à²®à³‡ ಅಗಲಿ, ಬೆಳೆದಿದà³à²¦à²°à³† ಅದರ ಅಪಾಯ ಯಾವತà³à²¤à³‚ à²à²¾à²°à²¤à²•à³à²•ೆ ತಟà³à²Ÿà³à²¤à³à²¤à²¿à²¤à³à²¤à³. ನಿಮಷಕà³à²•ೊಮà³à²®à³† ಬದಲಾವಣೆಯಾಗà³à²µ ಮà³à²¸à³à²²à²¿à²‚ ದೇಶಗಳನà³à²¨ ನಂಬಿಕೊಳà³à²³à³à²µà³à²¦à³, ಸà³à²¨à³‡à²¹ ಬೆಳೆಸà³à²µà³à²¦à³ ಅವರವರ ಕಲà³à²ªà²¨à³†à²—ೆ ಬಿಟà³à²Ÿà²¿à²¦à³à²¦à³!
ಜಾರà³à²œà³ ಬà³à²·à³ ಮತಾಂತರವನà³à²¨à³ ಬೆಂಬಲಿಸಿ à²à²¾à²°à²¤à²¦à²²à³à²²à²¿ ಹಲವಾರೠಮಿಷನರಿಗಳನà³à²¨à³ ಹà³à²Ÿà³à²Ÿà³à²¹à²¾à²•ಿದ ಕಾರಣಕà³à²•ಾಗಿ ನಾನೠಕೂಡ ದà³à²µà³‡à²·à²¿à²¸à³à²¤à³à²¤à³‡à²¨à³†. (ಆದರೆ ಇದಕà³à²•ೆ ಕಾರಣ ಬà³à²·à³ ಒಂದೇ ಅಲà³à²² ಹಲವರೠಇದರ ಹಿಂದೆ ಇದà³à²¦à²¾à²°à³†). ಹಾಗಂತ ಸಾರಾಸಗಟಾಗಿ ‘ಬà³à²·à³ ಕೆಟà³à²Ÿà²µà²¨à³’ ಅಂತ ಹೇಳà³à²µà³à²¦à²¿à²²à³à²². ಮತಾಂತರ ನಮà³à²® ಆಂತರಿಕ ಶತà³à²°à³, ನಾವೠನಿಯಂತà³à²°à²¿à²¸à²¬à²¹à³à²¦à³.
ಆದರೆ ನಮà³à²® ಬಾಹà³à²¯ ಶತà³à²°à³à²—ಳನà³à²¨à³ ಬಗà³à²—ೠಬಡಿದ, ಬಡಿಯà³à²¤à³à²¤à²¿à²°à³à²µ ಬà³à²·à³ / ಅಮೇರಿಕಾ ಖಂಡಿತವಾಗಿಯೂ ನಮà³à²® ಮಿತà³à²°.
ಇಷà³à²Ÿà²•à³à²•ೂ ಯಾರೇ ಹೊಗಳಲಿ ತೆಗಳಲಿ ಅದಕà³à²•ೊಂದೠಹಿನà³à²¨à³†à²²à³†, ಉದà³à²¦à³‡à²¶ ಇದà³à²¦à³‡ ಇರà³à²¤à³à²¤à²¦à³†. ನಮà³à²® ದೇಶವನà³à²¨à³ ಪà³à²°à³€à²¤à²¿à²¸à³à²µà²µà²°à²¿à²—ೆ, ನಮà³à²® ಶತà³à²°à³à²—ಳನà³à²¨à³ ನಿಯಂತà³à²°à²¿à²¸à²¿à²¦ ಅಮೇರಿಕಾ/ಬà³à²·à³ ಬಗà³à²—ೆ ಪà³à²°à³€à²¤à²¿ ಇರà³à²µà³à²¦à³ ಸಹಜವಾದದà³à²¦à³. ಆದà³à²¦à²°à²¿à²‚ದ ನನಗೆ ಪà³à²°à²¤à²¾à²ªà²¸à²¿à²‚ಹರ ಈ ಲೇಖನ ಇಷà³à²Ÿà²µà²¾à²¯à²¿à²¤à³.
(‘ಇರಾಕà³/ಸದà³à²¦à²¾à²‚/ತಾಲಿಬಾನೠಬದà³à²•ಿದà³à²¦à²°à³† ವಿಶà³à²µà²•à³à²•ೆ ಎಂಥಹ ಅಪಾಯವಿತà³à²¤à³’ ಅಂತ ಇನà³à²¨à³‚ ಸà³à²µà²²à³à²ª ವಿವರಿಸಿದà³à²¦à²°à³† ಇನà³à²¨à³‚ ಹೆಚà³à²šà³ ಪರಿಣಾಮಕಾರಿಯಾಗಿರà³à²¤à³à²¤à²¿à²¤à³à²¤à³)
ವಿರೋಧ ಪಕà³à²·à²µà²¿à²²à³à²²à²¦à²¿à²¦à³à²¦à²°à³† ಆಡಳಿತ ಸರಿಯಾಗಿ ನಡೆಯಲಾರದà³, ಅವರೂ ಮà³à²–à³à²¯, ಆರೋಗà³à²¯à²•ರವಾದ ಟೀಕೆಗಳಿರಲಿ.
ಪà³à²°à²¤à²¾à²ªà³, ನಿಮà³à²® ಅà²à²¿à²¯à²¾à²¨ ಹೀಗೇ ಮà³à²‚ದà³à²µà²°à³†à²¯à²²à²¿, ನಿಮà³à²® ಹಿಂದೆ à²à²¾à²°à²¤à²µà²¨à³à²¨à³ ಪà³à²°à³€à²¤à²¿à²¸à³à²µ ನಾವಿದà³à²¦à³‡à²µà³†.
beautifully written. keep it up.
Nice article…as usual….
Hi Venkatesh,
thanks for beautifully written. keep it up…..
Dear pratap,
It is beautifully written from you. and am reading every article wchich ur write-up is too good and truth.
And Same i finding in your website to psot some Topic, but i haven`t find so i am sending here So please find the below content which we have writtened and you should write-good write up on this
Beware of Indian News Channels!!!
I am sure most of you will be surprised to know,
Who are the controllers and directors of the famous Indian news channels/papers?
If you have watched our news channels closely and in its entirety, it will not be difficult for us to say to whom they are favor to and to whom they against. Obliviously the answer is simple it’s a mission against the Hindus and Hindu Culture and in other words it’s called Secularism.
We all know how the Christianity & Islamism spread over the world and also how fast the Hindu culture is vanishing in India.
Most of us do not know the real Indian history. We think and believe that whatever we have read in school days and in the higher education is right.
When British’s have left India in 1947, Mekale said – We may not rule India, but the education system that we have enforced in India will make black skinned Englishmen’s. These people (Indian’s) will look like Indian’s but their thoughts and culture will be like Englishmen’s. They will forget their own culture and become Englishmen’s.
Yes. Indeed it is true.
Our education system was created by Left wings (Communists) of India. Our history was written by the left wings of India. And the whole system was lead by the left ideologist the great (?) Prime Minister Jawaharlal Nehru! Who was against Sanskrit as a national language and was fought against Sanskrit flavored Hindi as a national language. He wanted English as our national language! Thank God, it did not happen. But indirectly he succeeded in forcing English culture in us.
We have read the history that is not genuine. We are not watching the news that we supposed to watch. Instead we are watching the news what media wants us to watch. Its media which controls (showcase) the news! It’s the media who decides what right and what is wrong! And media is indeed controlled by the missionaries and the purpose is mission against HINDUS and against unique HINDU culture.
Some of recent news footages clearly indicate the intension of our news channels.
1. Recent (24/01/2009) attack on pub by ‘Sri Rama Sene’ – Projected as a national news and showed as ‘Mangalore Horror’ throughout 26th of Jan, where they found attack on one pub is bigger news than republic day news. This is just because it is done by Hindu activists! There were some rape cases happened during the 31st December in Mumbai pubs. But our media did find it was big news in that.
2. Attack on churches in Mangalore – TOI headlined it as a Massacre of Christians in Karnataka. During that attack not even single Christian got wounded. It made our Prime Minister to apologies at the world forum. This is just because it is done by Hindu activists!
3. Hindu Terror (Malegaon blasts) – Created by the media. For every minute they were creating the story and showcasing it. They could not find any big news in blasts happened in India history.
And it continues…
Indian media has a great role to play in our democracy. If we have such media, who are controlled by such missionaries, then there is no future for the great Hindu culture.
Finally in the name of globalization we are losing the values of HINDUISM.
thanks
regards
Soorya
Thanks pratap. Nija helbeku andre nanu bush bagge bari -ve yochne madta idde. Nimma e article odida mele tumba vishaya gottaytu. Adeno gottilla nimma lekhana odta idre… kudalella setedu nillutte. ha ha. keep it up.
Hello every body, When you want to send the comments in kannada, please type in kannada script. It really causes me the headache to read and understand the comments of kannada which are written in Roman letters.
very good article. thaks . i recently came to know about your website. it is interesting.
Prathap,
Where is your book release function scheduled ?
hai pratap your aritical its so good but?
hi pratap nice article…………………………………
your revolutionary articles may be introduced to the primary and high shcool children.
hello Pratap,
can you tell us where is venue where your book is getting released…??
THIS IS REGARDING 31-1-09 ARTICLE
Am sorry i couldn’t wait for the article to be posted in the site.I will be busy next week and hence i will be posting my comments here itself.I will post the same thing there after the article comes online.
I have never waited as much for your article as i did this week.If i say that i was disappointed that would be an understatement.I expected a much better article.I have to agree with Indy.Your past few articles were terribly disappointing.It looks as if you are busy with some other work and you are scribbling out something just for the sake of filling up Saturday’s editorial page.I want the old Pratap Simha back.I know that you don’t take too kindly to criticism.But being a huge fan,i just feel that it is my duty to pass a frank opinion.
Going back to today’s article,there was no need to go way out of the track and criticize Venkatachala.According to you,he used the media for publicity.You feel that he was wrong in taking the media along with him and exposing corrupt people.But what is wrong in exposing corrupt people?I feel that what he did was perfectly right.After all he was letting the people know who is corrupt and who is not.Whats wrong in that?If the media makes a big news its well and good.Swalpa maryade iddavru innondsala mosadalli hana maaduvaga eradu sala yochistare.The very fact that our Karnataka politicians did not want to give another term to him proves that he was efficient.Lets appreciate him for his good work and be grateful rather than needlessly questioning his intentions.Sincere taxpayers have no reason to criticize him.We only benefited from his good work.It is only the corrupt people who have a reason to hate him.
Regards
Good article…….. keep it up, I love to read your article. good bless you. Jai hind
dear Pratap,
Neevu yavude Article bareyuvagaliu onde drastikonadinda yochisttiri endu nanna anisike.
sir your article is super. But i know Bush is not our hero and not vilan
Thank you Pratap for giving kind informations to us… I like your articles very much..
Continue like this way only…
Hi Pratap,
The article is good…don’t think about to pseudosecularist peoples, all the true Indians will support you..keep going.
Great and mind blowing article.The rael truths are completly hidden by these media’s.
Hi prathap sir
The all articles are good. All the best your future Keep going.
Thank you