Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಗತಿಸುತ್ತಿದೆಯೇಕೆ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’?

ಗತಿಸುತ್ತಿದೆಯೇಕೆ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’?

child
ಇಂಥದ್ದೊಂದು ಶೀರ್ಷಿಕೆಯಡಿ ಅಕ್ಟೋಬರ್ 31ರಂದು ‘ದಿ ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ದೊಡ್ಡ ವರದಿಯೊಂದು ಪ್ರಕಟವಾಗಿತ್ತು. “ನಮ್ಮ ಮನೆ ಜನರಿಂದ ತುಂಬಿತುಳುಕದೇ ಇದ್ದ ಒಂದೇ ಒಂದು ದಿನವನ್ನೂ ನನಗೆ ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಊಟದ ಟೇಬಲ್‌ನಲ್ಲಿ ಕುಳಿತುಕೊಳ್ಳುವಾಗ ಅಚ್ಚು ಮೆಚ್ಚಿನ ಕುರ್ಚಿಯಲ್ಲೇ ಕುಳಿತುಕೊಳ್ಳಬೇಕೆಂದು ನಾನು, ನನ್ನ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರ ಸದಾ ಕಿತ್ತಾಡುತ್ತಿದ್ದೆವು. ನನ್ನ ಗಂಡ ಅತುಲ್ ಭಾರ್ಗವ್‌ಗೆ ಕೂಡ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರನಿದ್ದಾನೆ. ಎಲ್ಲರೂ ಒಂದೇ ರೀತಿಯಲ್ಲಿ ಬೆಳೆದೆವು” ಎನ್ನುತ್ತಾರೆ ಫ್ಯಾಶನ್ ಡಿಸೈನರ್ ಅಂಜನಾ ಭಾರ್ಗವ್. ಆದರೆ ಅಂಜನಾ ಹಾಗೂ ಅತುಲ್ ಭಾರ್ಗವ್ ಮಾತ್ರ ಒಂದೇ ಮಗು ಸಾಕೆಂದು ನಿರ್ಧರಿಸಿದ್ದಾರೆ. “ನಮ್ಮ ಮಗಳು ಅಂಕಿತ ಅಪ್ಪ-ಅಮ್ಮನ ಗಮನ ಸೆಳೆಯಲು ಸಹೋದರ, ಸಹೋದರಿಯರ ಜತೆ ಹೋರಾಡಬೇಕಿಲ್ಲ. ಕೊಠಡಿ ಯನ್ನೂ ಹಂಚಿಕೊಳ್ಳಬೇಕಿಲ್ಲ” ಎಂದು ಒಂದೇ ಮಗು ಸಾಕೆಂಬ ತಮ್ಮ ನಿರ್ಧಾರವನ್ನು ವಿವರಿಸುತ್ತಾರೆ.

ಇದು ಭಾರ್ಗವ ಕುಟುಂಬವೊಂದರ ಕಥೆಯಲ್ಲ. ಮಧ್ಯಮ ಹಾಗೂ ಉನ್ನತ ಮಧ್ಯಮ ವರ್ಗದ ಬಹುತೇಕ ಕುಟುಂಬಗಳಲ್ಲಿ ಒಂದೇ ಮಗು ಸಾಕೆಂಬ ಧೋರಣೆ ಕಂಡುಬರುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಅಂಕಿ-ಅಂಶಗಳ ಪ್ರಕಾರ ಮಕ್ಕಳೇ ಬೇಡವೆನ್ನುವ, ಬೇಕೆಂದರೂ ಒಂದು, ಹೆಚ್ಚೆಂದರೆ ಎರಡು ಸಾಕೆನ್ನುವವರ ಸಂಖ್ಯೆ 2006ರ ವೇಳೆಗೆ ಶೇ 65ಕ್ಕೇರಿದೆ!! ಹಾಗಾಗಿ “ಹಮ್ ದೋ, ಹಮಾರೇ ದೋ” ಎಂಬ ಸರಕಾರದ ಕುಟುಂಬ ಯೋಜನೆಯ ಸ್ಲೋಗನ್ ಅನ್ನು, “ಹಮ್ ದೋ, ಹಮಾರಾ ಏಕ್” ಎಂದು ಮಾರ್ಪಡಿಸಬೇಕಾದ ಕಾಲ ಸದ್ಯದಲ್ಲೇ ಬರಬಹುದು ಎಂದು ವರದಿಯಲ್ಲಿ ಮಾರ್ಮಿಕವಾಗಿ ಹೇಳಲಾಗಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ನಡೆದ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ವರದಿಯನ್ನು ಪ್ರಕಟಿಸಲಾಗಿತ್ತು. ಅಷ್ಟಕ್ಕೂ ಅಪ್ಪ-ಅಮ್ಮ, ಅಣ್ಣ-ತಂಗಿ, ತಮ್ಮ-ಅಕ್ಕ, ಚಿಕ್ಕಮ್ಮ-ಚಿಕ್ಕಪ್ಪ, ದೊಡ್ಡಮ್ಮ-ದೊಡ್ಡಪ್ಪ, ಸೋದರ ಮಾವ-ಸೋದರತ್ತೆ ಹೀಗೆ ಮನೆಮಂದಿಯೆಲ್ಲ ಒಂದೆಡೆ ಕಲೆತು ಹಬ್ಬ-ಹರಿದಿನಗಳನ್ನು ಆಚರಿಸುವ ಕಾಲ ಇನ್ನು ಕೆಲವೇ ವರ್ಷಗಳಲ್ಲಿ ಸಂಪೂರ್ಣವಾಗಿ ಕ್ಷೀಣಿಸಿಹೋಗಿಬಿಡುತ್ತದೆನೋ ಎಂಬಂಥ ಅಪಾಯದತ್ತ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ ಸಾಗುತ್ತಿದೆ.

ಈ ಮೇಲಿನ ವರದಿಯನ್ನು ಓದಿದಾಗ ಮೂರೂವರೆ ವರ್ಷದ ಹಿಂದೆ (2006, ಅಗಸ್ಟ್ 19) ನಾನು ಬರೆದಿದ್ದ “ನಾವಿಬ್ಬರು, ನಮಗೊಂದೇ ಸಾಕಾ?” ಲೇಖನ ನೆನಪಾಯಿತು. ಅದು ಇಂದಿಗೂ ಎಷ್ಟು ಪ್ರಸ್ತುತ, ಅಪಾಯ ಬಂದಿದೆ ಎಷ್ಟು ಸನ್ನಿಹಿತ ಅನ್ನಿಸಿತು. ಹಾಗಾಗಿ ನಿಮಗೆ ಮತ್ತೊಮ್ಮೆ ನೆನಪಿಸಬೇಕೆನಿಸಿದೆ…
ಹೆಣ್ಣಿನ ಜನುಮಕೆ ಅಣ್ಣ-ತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ
ಸಾವಿರ ಹೊನ್ನ ಕಟ್ಟುವರು ಉಡಿಯೊಳಗೆ…
ಎಂಬ ಈ ಜಾನಪದ ಹಾಡು ಅದೆಷ್ಟು ಅರ್ಥಗರ್ಭಿತ?! ಯಾರೋ ನಮಗೆ ಪ್ರೀತಿ ಕೊಡಬಹುದು. ವಿಶ್ವಾಸವನ್ನೂ ತೋರಬಹುದು. ಬೇರೆ ಯಾರನ್ನೋ ಅಣ್ಣ ಅಂತಲೋ, ಅಕ್ಕ-ತಂಗಿ ಅಂತಲೋ ಒಪ್ಪಿಕೊಳ್ಳಬಹುದು. ಆ ಮೂಲಕ ಮನಸ್ಸನ್ನು ತೃಪ್ತಿಪಡಿಸಿಕೊಳ್ಳಲು, ಸಮಾಧಾನಪಡಿಸಿಕೊಳ್ಳಲು ಪ್ರಯತ್ನಿಸಬಹುದಷ್ಟೆ. ಆದರೆ ನಿಜವಾದ ಸಹೋದರತ್ವವೇ ಬೇರೆ. ಒಂದು ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗು ವಾಗ, ಮುಂದೇನು ಕಾದಿದೆ ಅನ್ನುವುದನ್ನು ಯಾರಿಂದಲೂ ಊಹಿಸಿಲು ಸಾಧ್ಯವಿಲ್ಲ. ಒಂದು ಕಡೆ ಗಂಡನ ಮನೆಯಲ್ಲಿ ಕಂಡು ಕೊಳ್ಳಲಿರುವ ಹೊಸ ಜೀವನ ಹುಟ್ಟು ಹಾಕುವ ಆಶಾಭಾವನೆ, ದೈಹಿಕ ಕಾಮನೆ. ಅವುಗಳು ತರುವ ನವೋತ್ಸಾಹ, ಕಾತುರ, ತುಡಿತ, ಮಿಡಿತ, ಜತೆಗೆ ಅಭದ್ರತೆ, ಆತಂಕಗಳೂ ಕಾಡಲಾರಂಭಿಸುತ್ತವೆ. ಸೇರಿದ ಮನೆಯಲ್ಲಿ ಏನು ಕಾದಿರುತ್ತೋ? ಹಾಗೆ ಕಷ್ಟವಾದಾಗ, ತೊಂದರೆಯಾದಾಗ ನೋವು ತೋಡಿಕೊಳ್ಳಲು ಬೆನ್ನಿಗೆ ಒಬ್ಬ ಅಣ್ಣನೋ, ತಮ್ಮನೋ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಕಷ್ಟಕ್ಕಾಗುತ್ತಾರೆ ಅನ್ನೋ ಭದ್ರತೆಯ ಭಾವನೆಯೇ ಅವಳಲ್ಲಿನ ಎಷ್ಟೋ ಆತಂಕಗಳನ್ನು ದೂರ ಮಾಡುತ್ತದೆ. ಅಂತಹ ‘ಸೆಕ್ಯೂರ್ ಫೀಲಿಂಗ್’ ಅಥವಾ ಭದ್ರ ಭಾವನೆ ತರುವ ಅಣ್ಣ-ತಮ್ಮಂದಿರೇ ಇಲ್ಲದಿದ್ದರೆ? ಬಹಳಷ್ಟು ಬಾರಿ ಜೀವನ ನರಕವಾದಾಗ ಬೆಂಗಾವಲಿಗೆ ನಿಲ್ಲುವ ಸಹೋದರರ ಕೊರತೆಯಿಂದಾಗಿಯೇ ಹತಾಶಳಾಗಿ ಬಾವೀನೋ, ಕೆರೇನೋ ನೋಡಿಕೊಳ್ಳಬೇಕಾದ ಸಂದರ್ಭಗಳೂ ಬರುತ್ತವೆ. ನಮಗೆ ಯಾರೇ ಸಹಾಯ ಮಾಡಬಹುದು. ಸಾಂತ್ವನದ ಮಾತುಗಳನ್ನಾಡಬಹುದು. ಆದರೆ ನಿಜವಾದ ಸಹೋದರತ್ವದಲ್ಲಿ ಸಿಗುವ ಸೆಕ್ಯೂರ್ ಫೀಲಿಂಗನ್ನು ಮತ್ತ್ಯಾರಲ್ಲೂ ಕಂಡುಕೊಳ್ಳಲು ಸಾಧ್ಯವಿಲ್ಲ.

ಅಂತಹ ಸಹೋದರತೆ ಇನ್ನೆಷ್ಟು ದಿನ ಉಳಿದೀತು?

ಹೆಚ್ಚು ಮಕ್ಕಳನ್ನು ಹೆರುವುದಕ್ಕಿಂತ ಒಂದೇ ಮಗು ಮಾಡಿಕೊಂಡು, ಆ ಮಗುವಿಗೇ ಒಳ್ಳೆಯ ಎಜುಕೇಶನ್ ನೀಡಿದರಾಯಿತು. ಜೀವನ ಸಾರ್ಥಕ ಅನ್ನೋ ಭಾವನೆ ಈಗೀಗ ಹೆಚ್ಚಾಗಿ ಕಂಡುಬರುತ್ತಿದೆ. ಪಟ್ಟಣಗಳಲ್ಲಂತೂ ಮಕ್ಕಳೇ ದೊಡ್ಡ ಸಮಸ್ಯೆ ಎಂಬಂತೆ ಕಾಣುವ ಪ್ರವೃತ್ತಿ ಕಂಡುಬರುತ್ತಿದೆ. ಒಂದಕ್ಕಿಂತ ಹೆಚ್ಚಿಗೆ ಮಕ್ಕಳನ್ನು ಮಾಡಿ ಕೊಂಡರೆ ಫಿಗರ್ ಹಾಳಾಗುತ್ತೆ ಅನ್ನುವವರ ಸಂಖ್ಯೆ ಕಡಿಮೆ ಇದ್ದರೂ ‘ಕರಿಯರ್’ ಅನ್ನೋ ಪೆಡಂಭೂತ ಮಾತ್ರ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಗರ್ಭಿಣಿಯಾದರೆ ಕನಿಷ್ಠ ಒಂದೆರಡು ವರ್ಷಗಳಾದರೂ ಕರಿಯರ್ ಹಿಂದಕ್ಕೆ ಸಾಗುತ್ತದೆ, ದುಡಿಮೆಯೂ ನಿಂತುಹೋಗುತ್ತದೆ. ದುಡಿಯುವ ವೇಳೆಯಲ್ಲಿ ಮಕ್ಕಳಿಗೆ ಹೆಚ್ಚಿನ ಗಮನ ಕೊಡೋಕ್ಕಾಗಲ್ಲ-ಅಟೆನ್ಶನ್ ಪ್ರಾಬ್ಲಮ್. ಖರ್ಚೂ ಜಾಸ್ತಿ ಅಂತಾರೆ. ಹಾಗಾಗಿ ಒಂದೇ ಮಗು ಸಾಕು ಅನ್ನಲಾರಂಭಿಸಿದ್ದಾರೆ. ವೃತ್ತಿ ಪ್ರಾಧಾನ್ಯತೆಯಾಗಲಿ, ಒಂದೇ ಮಗುವಿಗೆ ಎಲ್ಲ ಸವಲತ್ತನ್ನೂ ನೀಡೋಣ ಎಂಬ ಆಲೋಚನೆಯಾಗಲಿ ತಪ್ಪಲ್ಲ.

ಆದರೆ…

ಒಂದೇ ಮಗುವಿರುವ ಪೋಷಕರನ್ನು ನೋಡಿ. ಆ ಮಗು ಶಾಲೆಯಿಂದಲೋ, ಪ್ಲೇ ಹೋಮ್‌ನಿಂದಲೋ ಬರುವುದು ಐದು ನಿಮಿಷ ತಡವಾದರೂ ಅಪ್ಪ-ಅಮ್ಮಂದಿರ ಬಿಪಿ ಜಾಸ್ತಿಯಾಗಿರುತ್ತೆ. ವರಿ ಶುರುವಾಗುತ್ತೆ. ಅಂತಹ ಆತಂಕ-ಚಿಂತೆಗಳ ಜತೆಯೇ ಮುಂದಿನ ಜೀವನವನ್ನು ದೂಡಬೇಕಾಗಿ ಬರುತ್ತೆ. ಇರೋ ಒಂದು ಮಗುವಿಗೆ ಏನಾದರೂ ಆಯಿತೆಂದರೆ ಅಪ್ಪ-ಅಮ್ಮ ಜೀವಂತ ಹೆಣವಾಗುತ್ತಾರೆ. ಕರಿಯರ್, ಅಟೆನ್ಶನ್ ಪ್ರಾಬ್ಲಮ್, ಖರ್ಚು ಅನ್ನೋ ಲೆಕ್ಕಾಚಾರಗಳು ಬದುಕನ್ನು ಶೂನ್ಯತೆಗೆ ದೂಡುವ ಅಪಾಯದಿಂದ ಕೂಡಿವೆ. ಮಕ್ಕಳೇ ಇಲ್ಲದಿದ್ದರೆ? ಒಂದೇ ಮಗುವಿದ್ದರೆ ಎಲ್ಲ ಪ್ರೀತಿಯನ್ನು ಆ ಮಗುವಿಗೇ ಧಾರೆ ಎರೆಯಬಹುದು ಅನ್ನೋದು ಭ್ರಮೆ. ಇಬ್ಬರಿದ್ದರೆ ಒಬ್ಬ ಲೇಟಾಗಿ ಬಂದರೂ ತಾವು ತಲೆಕೆಡಿಸಿಕೊಳ್ಳಲ್ಲ. ಅದೊಂದು ಡಿಫೆನ್ಸ್ ಮೆಕ್ಯಾನಿಸಮ್.

ಇನ್ನು ಆ ಒಂದೇ ಮಗುವಿನ ಪ್ರವೃತ್ತಿಯನ್ನು ಗಮನಿಸಿ. ಇರುವು ದೊಂದೇ ಮಗು ಅಂತ ಅಪ್ಪ-ಅಮ್ಮ ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ. ಅಗತ್ಯಕ್ಕಿಂತ ಹೆಚ್ಚಾಗಿಯೇ ಸವಲತ್ತು ಒದಗಿಸುತ್ತಾರೆ. ಇದರಿಂದಾಗಿ ಆ ಮಗುವಿನಲ್ಲಿ ಹಂಚಿಕೊಳ್ಳುವ, ಸಹಿಸಿಕೊಳ್ಳುವ ಸ್ವಭಾವವೇ ಇರುವುದಿಲ್ಲ. ಜತೆಗೊಬ್ಬ ತಮ್ಮನೋ, ತಂಗಿಯೋ ಇದ್ದರೆ? ಎರಡು ಮಕ್ಕಳಿದ್ದರೆ ಆ ಮಕ್ಕಳು ಕಿತ್ತಾಡಬಹುದು. ಸಿಗುವ ತಿಂಡಿ ಪ್ರಮಾಣ ಕಡಿಮೆಯಾಗಬಹುದು. ಆದರೆ ಅದರಿಂದ ಮಗು ಹಂಚಿ ತಿನ್ನುವ ಸ್ವಭಾವವನ್ನು ರೂಢಿಸಿಕೊಳ್ಳುತ್ತದೆ. ಮಕ್ಕಳ ಆ ಕಿತ್ತಾಟದಲ್ಲಿ ಅಪ್ಪ-ಅಮ್ಮಂದಿರಿಗೂ ಒಂಥರಾ ಸುಖ ಇದ್ದೇ ಇದೆ. ಮುತ್ತಿಕ್ಕಿ ಸಮಾಧಾನಪಡಿಸುವ ಸುಂದರ ಕ್ಷಣವಾದರೂ ಲಭ್ಯವಾಗುತ್ತದೆ. ಒಂದು ಮಗು ಗಟ್ಟಿಯಾಗಿ ಪಾಠ ಓದುತ್ತಿದ್ದರೆ, ಇನ್ನೊಂದು ತಾನೂ ಓದಲು ಪ್ರಾರಂಭಿಸುವುದನ್ನು ನೀವು ಗಮನಿಸಿರಬಹುದು. ಮಕ್ಕಳ ಮಧ್ಯೆ ಆರೋಗ್ಯಕರ ಸ್ಪರ್ಧೆಯೂ ಏರ್ಪಡುತ್ತದೆ. ಅಪ್ಪ-ಅಮ್ಮಂದಿರಿಗೂ ಅಷ್ಟೇ-ಒಂದು ಮಗು ಓದುವುದರಲ್ಲಿ ಹಿಂದೆ ಉಳಿದರೂ ಮತ್ತೊಂದು ಮಗುವಿನಲ್ಲಿ ಸಮಾಧಾನ ಕಂಡುಕೊಳ್ಳಬಹುದು. ಎರಡೂ ಮಕ್ಕಳೂ ಸಮಾನ ಅಂತ ನಾವೆಷ್ಟೇ ಹೇಳಿದರೂ ಅದು ನಮ್ಮ ಮನಸ್ಸನ್ನು ನಾವೇ ತೃಪ್ತಿಪಡಿಸಿಕೊಳ್ಳುವ ಪ್ರಯತ್ನವಷ್ಟೆ. ಒಂದೇ ಮಗುವಿದ್ದವರಿಗೆ ಪರ್ಯಾಯವೇ ಇರುವುದಿಲ್ಲ.

ಒಂದೇ ಮಗು ಸಾಕೆನ್ನುವ ಹಿಂದಿರುವ ಆಲೋಚನೆಯೇನೋ ಉದಾತ್ತವಾದದ್ದೇ. ಆದರೆ ಅಪ್ಪ-ಅಮ್ಮ ದುಡಿದ ಹಣವನ್ನು ಖರ್ಚು ಮಾಡುವಾಗ ಗಂಡುಮಕ್ಕಳು ಸಾಮಾನ್ಯವಾಗಿ ವಿವೇಚನೆ ಯನ್ನೇ ತೋರುವುದಿಲ್ಲ. ಅಪ್ಪ ಕೊಟ್ಟ ಹಣ ನೋಡಿ… ಬೆಲೆ ಗೊತ್ತಾ ಗೋದಾದರೂ ಹೇಗೆ? ತನ್ನ ಮಗ ಎಂಜಿನಿಯರಿಂಗ್ , ಮೆಡಿಕಲ್ ಅಥವಾ ಎಂಬಿಎ ಓದುತ್ತಿದ್ದಾನೆ ಅಂತ ಹಣ ಕಳುಹಿಸುತ್ತಾರೆ. ಒಬ್ಬನೇ ಮಗ ಅಥವಾ ಮಗಳು ಅಂತ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ಎರಡೆರಡು ಸಿಟಿ ಬಸ್ ಚೇಂಜ್ ಮಾಡಿ, ನೂಕುನುಗ್ಗಲಲ್ಲಿ ಓಲಾಡಿಕೊಂಡು ಬ್ಯಾಂಕೋ, ಫ್ಯಾಕ್ಟರಿಯೋ, ಸರಕಾರಿ ಕಚೇರಿಯೋ, ಖಾಸಗಿ ಕಂಪನಿಯಲ್ಲೋ ಬೆವರು ಸುರಿಸಿ ಕೆಲಸ ಮಾಡಿ ಹಣ ಕಳುಹಿಸುವವರು ಅಪ್ಪ-ಅಮ್ಮ ಆಗಿರುವುದರಿಂದ ಖರ್ಚು ಮಾಡುವ ಮಕ್ಕಳಿಗೆ ಹಣದ ಬೆಲೆಯೇ ಗೊತ್ತಾಗುವುದಿಲ್ಲ. ಹೆಚ್ಚಿಗೆ ಮಕ್ಕಳನ್ನು ಮಾಡಿಕೊಂಡರೆ ಖರ್ಚು ಜಾಸ್ತಿ ಆಗುತ್ತೆ ಎಂಬಂತೆ ವರ್ತಿಸುವ ಅಪ್ಪ-ಅಮ್ಮಂದಿರನ್ನು ಮಕ್ಕಳೇ ಮೂರ್ಖರನ್ನಾಗಿ ಮಾಡುತ್ತಾರೆ. ಏಕೆಂದರೆ ಕೇಳಿದ್ದನ್ನೆಲ್ಲ ಕೊಡಿಸುವ, ದೂರದಲ್ಲಿ ಕಲಿಯುತ್ತಿರುವ ಮಗ ಕಂಗಾಲಾದಾನೆಂಬ ಭಯದಿಂದ ತಾವು ಕಂಗಾಲಾದರೂ ಕೇಳಿದಷ್ಟು ಹಣ ಕಳುಹಿಸುವ ಪೋಷಕರೇ ಮಕ್ಕಳಿಗೆ ದುಡ್ಡಿನ ಬೆಲೆಯೆಷ್ಟೆಂಬುದು ಅರಿವಾಗಲು ಬಿಡುವುದಿಲ್ಲ.

ಒಂದೇ ಮಗು ಸಾಕು ಅಂತ ನಾವು ನೆಪ ಹೇಳಬಹುದು ಅಷ್ಟೇ. ಅದರ ಹಿಂದೆ ಅಂತಹ ಯಾವ ಘನ ಲಾಜಿಕ್ ಇರುವುದಿಲ್ಲ. ನಮ್ಮ ಅಪ್ಪ ಅಥವಾ ತಾತ ನಮಗಿಂತಲೂ ಕಡಿಮೆ ಆದಾಯದಲ್ಲಿ ನಮ್ಮೆಲ್ಲರನ್ನೂ ಓದಿಸಿದ್ದಾರೆ. ಅಣ್ಣನಿಗೆ ಎಛಿಟಞಛಿಠ್ಟಿqs ಆಟ್ಡ ತಂದು ಕೊಟ್ಟರೆ, ತಂಗಿ-ತಮ್ಮ ಎಲ್ಲರೂ ಅದನ್ನೇ ಉಪಯೋಗಿಸಿ ಗಣಿತ ಕಲಿತಿದ್ದಾರೆ. ಆದರೆ ಒಂದೇ ಮಗು ಸಾಕೆನ್ನುವ ಈಗಿನ ಪೋಷಕರು ಎರಡೆರಡು ಎಛಿಟಞಛಿಠ್ಟಿqs ಆಟ್ಡಗಳನ್ನು ಒಟ್ಟೊಟ್ಟಿಗೇ ತರುತ್ತಾರೆ. ಒಂದು ಕಳೆದುಹೋದರೆ ಇನ್ನೊಂದು ಸ್ಟಾಕ್ ಇರಲಿ ಅಂತ. ಅದೊಂದೇ ಕಾರಣಕ್ಕೆ ಮಕ್ಕಳೇನು ಉದ್ಧಾರವಾಗುತ್ತಿಲ್ಲ. ಆದರೆ ಅವುಗಳಿಗೆ ಕಷ್ಟದ ಅರಿವೇ ಆಗುವುದಿಲ್ಲ. ಅರಿವಾಗಲು ಪೋಷಕರೇ ಬಿಡುವುದಿಲ್ಲ.

ಮತ್ತೊಂದು ದುರಂತವೆಂದರೆ ಸಾಕುವ ತಾಕತ್ತಿದ್ದವರು ಒಂದೇ ಮಗು ಸಾಕೆನ್ನುತ್ತಾರೆ. ಆದರೆ ಬಡವರು ಮಕ್ಕಳು ಮಾಡುವುದಕ್ಕೆ ಮಿತಿಯೇ ಇರುವುದಿಲ್ಲ. ಇಷ್ಟಕ್ಕೂ ಸಾಕುವ ತಾಕತ್ತಿಲ್ಲದವರು ಸಂಖ್ಯೆ ಹೆಚ್ಚು ಮಾಡಿಕೊಳ್ಳಬೇಕೆಂಬ ಏಕಮಾತ್ರ ಉದ್ದೇಶ ಹೊಂದಿರುವವರು ಡಜನ್‌ಗಟ್ಟಲೆ ಹುಟ್ಟಿಸುವುದರಿಂದ ಜನಸಂಖ್ಯಾ ಸ್ಫೋಟವಾಗುತ್ತೇ ಹೊರತು, ಸಾಕುವ ತಾಕತ್ತಿದ್ದವರು ಕನಿಷ್ಠ ಎರಡು ಮಕ್ಕಳನ್ನು ಮಾಡಿ ಕೊಳ್ಳುವುದರಿಂದ ಯಾವುದೇ ಅಪಾಯವಿಲ್ಲ. ಅದು ಸಾಮಾಜಿಕ ಹಾಗೂ ಮಾನಸಿಕ ಭದ್ರತೆಯ ದೃಷ್ಟಿಯಿಂದಲೂ ಅಗತ್ಯ. ಎಲ್ಲರೂ ಒಂದೇ ಮಗು ಸಾಕೆಂದರೆ ಮುಂದೊಂದು ದಿನ ದೇಶ ರಕ್ಷಣೆ ಮಾಡುವ ಮಿಲಿಟರಿಗೆ ಸೇರುವವರೇ ಇಲ್ಲವಾಗುತ್ತಾರೆ. ಒಂದೇ ಮಗು ಇರುವ ಯಾವ ಪೋಷಕರು ತಾನೇ ಮಿಲಿಟರಿಗೆ ಕಳುಹಿಸುವ ರಿಸ್ಕ್ ತೆಗೆದುಕೊಳ್ಳುತ್ತಾರೆ ಹೇಳಿ?

ಇವತ್ತು, ಅಡಗೂಲಜ್ಜಿ ಕಥೆಗಳನ್ನು ಬಿಡಿ. ಅಜ್ಜ-ಅಜ್ಜಿಯನ್ನೇ ಕಾಣದ ಎಷ್ಟೋ ಮಕ್ಕಳಿದ್ದಾರೆ. ಮುಂದೊಂದು ದಿನ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಚಿಕ್ಕಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಸೋದರಮಾವ, ಸೋದರತ್ತೇಯರೇ ಇರುವುದಿಲ್ಲ. ಮಕ್ಕಳ ಒಟ್ಟಾರೆ ಬೆಳವಣಿಗೆಯಲ್ಲಿ ಕುಟುಂಬ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲವನ್ನೂ ಅಪ್ಪ-ಅಮ್ಮಂದಿರ ಬಳಿಯೇ ಹೇಳಿಕೊಳ್ಳೋಕಾಗಲ್ಲ. ಅಕ್ಕನೋ, ತಂಗಿಯೋ ಅಥವಾ ಅಣ್ಣ-ತಮ್ಮಂದಿರೋ ಇದ್ದರೆ ಚೆನ್ನ. ಭಾವೋದ್ವೇಗದಲ್ಲಿ ಎಸಗುವ ತಪ್ಪುಗಳನ್ನು ತಡೆಯಲು ಚಿಕ್ಕಮ್ಮ-ಚಿಕ್ಕಪ್ಪ, ದೊಡ್ಡಪ್ಪ-ದೊಡ್ಡಮ್ಮಂ ದಿರೂ ಬೇಕಾಗುತ್ತಾರೆ. ಆದರೆ ಅಪ್ಪ-ಅಮ್ಮ, ನಾನು ಎಂಬಾಚೆಗೆ ಯೋಚಿಸದ ಸಮಾಜದಲ್ಲಿ ಗಂಡಸರೆಲ್ಲ ಅಂಕಲ್‌ಗಳಾಗಿ, ಹೆಂಗಸರೆಲ್ಲ ಆಂಟಿಯರಾಗಿದ್ದಾರೆ. ಅಂದರೆ ಸಂಬಂಧಗಳ ಬಗ್ಗೆ ಆಪ್ತತೆ ಬೆಳೆಸುವ ಕೆಲಸವೇ ಆಗುತ್ತಿಲ್ಲ. ಅಂದಮೇಲೆ ಯಾವ ಚಿಕ್ಕಪ್ಪ? ಯಾವ ಚಿಕ್ಕಮ್ಮ? ಪರಿಸ್ಥಿತಿ ಈಗಲೇ ಹೀಗಿರುವಾಗ ಮುಂದಿನ ಒಬ್ಬಂಟಿ ಪೀಳಿಗೆಗೆ ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮರನ್ನೆಲ್ಲ ಪರಿಚಯಿಸಿಕೊಳ್ಳುವ ಸಂದರ್ಭವೇ ಬರುವುದಿಲ್ಲ. ಮನುಷ್ಯ ಒಂದೆಡೆ ಸೆಲ್ಫ್ ಸೆಂಟರ್ಡ್ ಆಗುತ್ತ ಹೋಗುತ್ತಾನೆ. ಇನ್ನೊಂದೆಡೆ ಅಭದ್ರತೆಯೂ ಕಾಡುತ್ತ ಹೋಗುತ್ತದೆ. ಅಮೆರಿಕದಂಥ ಸಮಾಜದಲ್ಲಿ ಅಲ್ಲಿನ ಹುಡುಗರು ಕೋಪ ನೆತ್ತಿಗೇರಿದಾಗ ಒಂದು ಕ್ಷಣವೂ ಆಲೋಚಿಸದೇ ಎದುರಿನ ವನನ್ನು ಗುಂಡಿಕ್ಕುತ್ತಿರುವುದರ ಹಿಂದೆ, ಸಂಬಂಧಗಳ ಬಗ್ಗೆ ಆಪ್ತತೆ ಇರದಿರುವುದು ಹಾಗೂ ಕೌಟುಂಬಿಕ ವ್ಯವಸ್ಥೆ ಇಲ್ಲದಿರುವುದರ ಪ್ರಭಾವವಿದೆ ಎಂದೆನಿಸುವುದಿಲ್ಲವೇ? ನಮ್ಮ ಸಮಾಜವೂ ಅದೇ ರೀತಿ ಆಗಬೇಕಾ?

ಒಂದೇ ಮಗು ಮಾಡಿಕೊಳ್ಳುವ ಮತ್ತೊಂದು ಸಮಸ್ಯೆಯೆಂದರೆ ಆ ಮಗುವಿಗೆ ಭ್ರಾತೃತ್ವ ಅನ್ನುವುದೇ ಅರ್ಥವಾಗುವುದಿಲ್ಲ. ಅದು ಗಂಡಾಗಿರಲಿ, ಹೆಣ್ಣಾಗಿರಲಿ, ಒಂಟಿಯಾಗಿ ಬೆಳೆದ ಮಗು ಶಾಲೆಗೆ ಹೋದಾಗ ಒಂದು ಹುಡುಗಿಯನ್ನು ತಂಗಿ ಅಥವಾ ಅಕ್ಕ ಅಂತಲೂ, ಹುಡುಗನನ್ನು ಅಣ್ಣ ಅಥವಾ ತಮ್ಮ ಅಂತಲೂ ನೋಡಬಹುದೆಂದು ಅದಕ್ಕೆ ಗೊತ್ತೇ ಆಗುವುದಿಲ್ಲ. ಒಬ್ಬ ಹುಡುಗ ಯಾವುದಾದರೂ ಹುಡುಗಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದರೆ ಸಾರ್ವಜನಿಕರು, “ನಿನಗೇನು ಅಕ್ಕ-ತಂಗಿ ಯಾರೂ ಇಲ್ವೇನೋ?” ಎಂದು ಗದರಿಸು ವುದನ್ನು ನೀವು ನೋಡಿರಬಹುದು. ಎಲ್ಲರೂ ಒಂದೊಂದೇ ಹಡೆದುಕೊಂಡರೆ?! ಬೆನ್ನಿಗೊಬ್ಬ ಅಣ್ಣ-ತಮ್ಮ, ತಂಗಿ-ಅಕ್ಕ ಇರು ವುದು ಮಗುವಿನ ವ್ಯಕ್ತಿತ್ವ ರೂಪಿಸುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜತೆಗೆ ಒಂದೇ ಮಗು ಬೇಕೆನ್ನುವವರು ಸಾಮಾನ್ಯವಾಗಿ ಗಂಡು ಮಗುವನ್ನೇ ಬಯಸುವುದರಿಂದ ಲಿಂಗ ಅನುಪಾತದಲ್ಲಿ ತೀವ್ರ ಅಸಮತೋಲನ ಉಂಟಾಗಬಹುದು. ಖಂಡಿತ, ‘ನಾವಿಬ್ಬರು, ನಮಗಿಬ್ಬರು’ ಎಂಬ ಪಾಲಿಸಿಯನ್ನು ಎಲ್ಲರೂ ಪಾಲಿಸಿದರೆ ಜನಸಂಖ್ಯೆ ಅನ್ನೋದು ಸಮಸ್ಯೆ ಆಗುವುದಿಲ್ಲ. ಅತ್ತೆ-ಮಾವನನ್ನು ನಿರುಪಯುಕ್ತರು ಎಂದು ಭಾವಿಸುವುದನ್ನು ಬಿಟ್ಟು, ಜತೆಗಿಟ್ಟುಕೊಂಡರೆ ಕಚರಿಗೆ ಹೋದಾಗ ಮಕ್ಕಳನ್ನು ನೋಡಿಕೊಳ್ಳು ವವರಾರು ಎಂಬ ಸಮಸ್ಯೆಗೂ ಪರಿಹಾರ ಸಿಗುತ್ತದೆ.

‘ಗಂಡಾಗಲಿ, ಹೆಣ್ಣಾಗಲಿ ಮಗು ಒಂದೇ ಇರಲಿ’ ಎನ್ನುವವರಿಗೆ ಕರಿಯರ್ ಪ್ರಶ್ನೆ ಮುಂದಿಡುವವರಿಗೆ, ಈ ವಿಷಯ ತೀರಾ ಸಿಲ್ಲಿಯಾಗಿ ಕಾಣಿಸಬಹುದು. ಆದರೆ ಐವತ್ತು ವರ್ಷಗಳಾಚೆಗಿನ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಿ. ಅವತ್ತು ನಾವು ಇರದಿರಬಹುದು. ಆದರೆ ನಮ್ಮ ಜನಾಂಗ ಹಾಗೂ ಧರ್ಮದ ಅಳಿವು-ಉಳಿವಿನ ಪ್ರಶ್ನೆಯೂ ಎದುರಾದೀತು!

18 Responses to “ಗತಿಸುತ್ತಿದೆಯೇಕೆ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’?”

 1. Muttanna kuddannavar says:

  Really good

 2. Muttanna kuddannavar says:

  Really good..

 3. suguresh says:

  Hi,

  This week article does not hold much important

 4. few of my friends who are the lonely child of their parents think that they are really lucky for being one,but they really don’t know what they are missing.i’v also heard many parents saying often that ‘he/she is my lonely son/daughter…….’do the love of parents divide if they have more than one child?i don’t think so.in fact we get additional love of our siblings.may be we won’t get that much of importance what a lonely child gets,but surely with little compromises and sacrifices we will be tougher to lead the life in a better way……..
  but is that possible to give good education and all facilities for two children equally by a lower middle class person(who are large in number in our country as i think) in this present society????
  good article,i liked it….

 5. kumar says:

  All young couples should read, understand and implement your thoughts. Most relevant.

 6. Harsha says:

  ಬಹಳ ಸಮಯೋಚಿತವಾದ ಅರ್ಥಗರ್ಬಿತವಾದ ಅತ್ಯುತ್ತಮ ಲೇಖನ.
  ನಾನು ನಿಮ್ಮ ಅಭಿಪ್ರಾಯದೊಂದಿಗೆ ಸಂಪೂರ್ಣ ಸಹಮತಿಸುತ್ತೇನೆ

 7. nivedita says:

  Hi! Mr. Pratap, the article is just reflecting the mental conflicts i’m going through at present.
  growing as a single child, i had always missed the sibling love and was tired of overprotective mom. but I grew up as a matured person. my mom is proud that her daughter is successful becoz she could give more attention to me and advises same to others.
  growing up as a more academic person i had a second thought for marriage(used to think do I really need one?) but in our society that made me proceed further easily with a man next to me. anyway found a person of my choice thought that is it now I can concentrate on my career I need not waste my time having kids , there are “N” number of them in our society who needs mother care but my thoughts were wrong, i could face family and society but my profession demanded it. for a pediatritician , parents were more comforted with a saying ” I understnd your concerns as I have one too and have gone through all that” . so I had one child, now she is a toddler and I thought I ‘m done with my work time to get back to career.
  I’m totally wrong, in a foreign country my daughter is searching for a big family every older child is a Akka/Anna for her, older people tata/ajji. we live in a world who has never seen those affections. She does’t care for anything other then the affection she has seen in India. It is hurting to see her missing allthat.
  Professionally I haven’t reached my goal yet,Now I’m carrying second one but totally unplanned.Is it my destiny? or my daughter’s wish?
  I’m nearing due date but never shared the news with anyone in India.
  Am I scared to inform my mom who asks me everyday about my career, Am I scared of friends who might laugh at me for what I was saying earlier? My daughter needs it, I needed it when I was young later realized that there are no substitutes and accepted the reality. Am I scared of loosing myself(something I craved and worked hard to reach all these years), and compromise with life. Am I scared to enjoy the family life as I had never cared any of wordly desires? I ‘m thinking everyday and night sitting in this house looking in the window with all dry and bare trees where there is no life, searching for answers of my own conflicts

 8. Jagadish Namboodiri says:

  I have read your previous article in VK. It’s a genuine topic… and I total agree with your views… Personally I feel Girl or boy… You should have two for you two…
  Just think… what if lonely child is been lost in unexpected circumstance…? Than both parents will be lonely at their end of life… and no one will there to do the last rituals…?
  Everyone is bothered about carrier.. But how many days you can work and how much you will earn…. My father usually says that “Children’s are the biggest asset and earning of his life”….
  Though I and my brother are too far geographically…. I feel he is my best friend … I express anything and everything with him… I truly thank my parents for giving me a brother…. And personally I feel I should

  Lat note : ಎತ್ತು ಇಲ್ಲದವಗೆ ಎದೆ ಇಲ್ಲ, ಮಕ್ಕಳ್ ಇಲ್ಲದವಗೆ ಮನೆ ಇಲ್ಲ (Not ಮಗು)

  ಮಕ್ಕಳಿರಲವ್ವ ಮನೆ ತುಂಬ…..

 9. @nivedita
  i am really moved by your response…….best wishes for your future…….

 10. ARJUN GOWDA says:

  ALLA GURU, NEENENO HINDU,HINDU SAMAJA ANTA TALE KEDISKOTIYA. AADRE NAM JANA………………………………
  ERLI, EVAG EN MADBAHUDU,ENEN MADBEKU ANNODANN HELU(BARI)GURU.

  HEEGE AADRE MUNDE BHARATA MUNDE…………………..

 11. sowmya says:

  Pratap,
  If more kids mean they will get ignore by parents, that too they ignore first child as all parents love their youngest kid. As i am the one always ignored by my Parents!.Do you have any hing to say about this.

 12. savitha says:

  hey, i remember the previous article as well.. but this is no diffrnt from that isnt it? lemme ask u onething.. should the children be our own? cant we go for a child who has no one to care .. y cant it be give birth to a child, and give life to another?

 13. MOHAN says:

  HECHCHU MAKKALIDDASTU HECHCHU SANTOSHA,MAKKALE NIJAVAADA AASTHI.OBBA MAGA ILLA OBBA MAGALU VIDYAAVANTARAAGADIDDARE MATTOBBARU VIDYAAVANTARAAGUTTARE,OBBA TANDE TAAYIYANNU NODIKOLLADIDDARE MATTOBBARU NODIKOLLUTTAARE.ELLA VIDHADALLU HECHCHU MAKKALIDDASTU OLLEYADU IDU NANNA ANUBHAVA.

 14. malathi S says:

  Article that makes us sit a while and ponder

  @ Nivedita

  was touched reading your response. Why are you in such a turmoil?Every thing has a solution. go ahead and call your mom. She will be glad. And i am positive you will find time for everything. reaching your professional goal as well as looking after your kids. At the moment enjoy your motherhood.

  the other thing is ‘grass on the other side is always greener’

  Good luck

  🙂

  malathi S

 15. naveen says:

  hi pratap………,

  -i came across the misusing of bhagyalakshmi yojana which was implemented by karnataka govt which is one of the exellent programme for a girl child whose family is below poverty line.

  -but unfortunately this prog has been misusing with the help of primary health care workers.

  -who ll be eligible for this prog ? : below poverty line people who are getting less than 11000 rs per year.

  but people who are getting more than 30000 per month are getting paid by this prog which ll be bond of one lakh rs in the name of girl child which ll be matured when she is 18 yrs.

  anganwadi workers creating fake income cert and addresss proof to create this bond and they were getting 6- 7 thousand rs per bond

  its very unfortunate that the prog is not reaching the needy people who r really below poverty line and the govt money is missued .

  i request sir u to study on this issue n write an article so through that govt may take some action.

  by the mean time govt should not stop this prog bcoz it helping many poor people

  just do surveilance on this prog and to stop the misusing of govt funds.

  sorry to say this i dont hav any proof , but i came acroos these things..

  thank u …. along with u for all the good work u do .

  regards bye sir.

 16. Smitha says:

  Hi Pratap,
  Its very nice article

 17. Ahalya P G says:

  really good…….i agree with u sir, bcoz i’m also lonely daughter of my parents…….so i know it well………i am feeling very sad becoz of not having a brother or sister…….