Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ‘ ಕೃಷ್ಣಾ ‘ ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ?

‘ ಕೃಷ್ಣಾ ‘ ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ?

‘ ಕೃಷ್ಣಾ ‘ ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ?

ಬಹುಶಃ ಕನಾ೯ಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅಡೆತಡೆಗಳನ್ನು, ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ಎಸ್.ಎಂ. ಕೃಷ್ಣ ಅವರು. ನಾಳೆಗೆ ಕೃಷ್ಣ ಅವರು 85ಕ್ಕೆ ಕಾಲಿಡುತ್ತಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಹಾಗೂ ಕಾ೦ಗ್ರೆ ಸಿಗರಿಗೆ ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿಟ್ಟು ನಡೆಯುವಂಥ  ಸದ್ಬುದ್ಧಿ  ಕೊಡಲಿ.

“Nearly all men can stand adversity, but if you want to test a man’s character,
give him power’ಅಂದರೆ ಒಬ್ಬ ಮನುಷ್ಯನ ವ್ಯಕ್ತಿತ್ವ ಅಥವಾ ಗಟ್ಟಿತನವನ್ನು ಪರೀಕ್ಷಿಸಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ನೋಡು ಎಂದಿದ್ದರು ಅಮೆರಿಕದ ಪ್ರಖ್ಯಾತ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್. ಎಷ್ಟೋವ್ಯಕ್ತಿಗಳು ಅವರ ಕೌಟುಂಬಿಕ ಹಿನ್ನೆಲೆಯಿಂದಲೋ, ಅದೃಷ್ಟದ ಬಲದಿಂದಲೋ, ಪರಿಸ್ಥಿತಿ ಸಹಜವಾಗಿಯೇ ಕಲ್ಪಿಸಿದ ಅನುಕೂಲಕರ ಸನ್ನಿವೇಶದಿಂದಲೋ ಅಥವಾ ಇನ್ನಾರದ್ದೋ ಶ್ರೀರಕ್ಷೆಯಿಂದಲೋ ಅಧಿ ಕಾರದ ಗದ್ದುಗೆಯೇರಿದ ನೂರಾರು ಉದಾಹರಣೆಗಳಿವೆ. ಆದರೆ ಗದ್ದುಗೆಯೇರಿದ ಮೇಲೆ ಯೋಗ್ಯತೆಯನ್ನು ಎತ್ತರಿಸಿಕೊಳ್ಳಲಾಗದೆ, ದೂರದೃಷ್ಟಿ ಹಾಗೂ ಸೂಕ್ಷ್ಮೆ ಗ್ರಾಹಿತ್ವದ ಕೊರತೆಯಿಂದ ಅಧಿಕಾರದ  ಸ್ಥಾನವೇ ಅವರನ್ನು ತರಗೆಲೆಯಂತೆ ಮಾಡಿದ್ದುಂಟು. ಆದರೆ ಯೋಗ್ಯತೆಯಿಟ್ಟುಕೊಂಡು ಉನ್ನತ ಸ್ಥಾನಕ್ಕೇರಿದ ಹಾಗೂ ಏರಿದ ನಂತರ ಎದುರಾದ ಸಮಸ್ಯೆಗಳನ್ನು ಸಮಥ೯ವಾಗಿ ನಿಭಾಯಿಸಿ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟ ನಾಯಕರು ಮಾತ್ರ ಕೆಲವೇ ಕೆಲವು ಮಂದಿ. ಅಂಥ ವಿರಳ ನಾಯಕರಲ್ಲಿ ನಮ್ಮ ಕನಾ೯ಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಒಬ್ಬರು. ಅವರ ಬಗ್ಗೆ ಯೋಚಿಸಿದಾಗಲೆಲ್ಲ ಅಬ್ರಹಾಂ ಲಿಂಕನ್ ಮಾತು ನೆನಪಿಗೆ ಬರುತ್ತದೆ. ಕೃಷ್ಣ ಅವರು ಎದುರಿಸಿದ ಸಮಸ್ಯೆಗಳು ಒಂದೋ, ಎರಡೋ?!

ರಾಜ್‍ಕುಮಾರ್ ಅಪಹರಣ
ನಾಗಪ್ಪ ಹತ್ಯೆ
ವಿಠಲೇನಹಳ್ಳಿ ಗೋಲಿಬಾರ್
ಮೂರು ವಷ೯ ಸತತ ಬರ
ಮುನ್ನೂರಕ್ಕೂ ಹೆಚ್ಚು ರೈತರ ಆತ್ಮಹತ್ಯೆ
ಕಾವೇರಿ ಗಲಾಟೆ
ಜಯಲಲಿತಾ ಕಿರಿಕ್ಕು

ಬಹುಶಃ ಕನಾ೯ಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅಡೆತಡೆಗಳನ್ನು, ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ಎಸ್.ಎಂ. ಕೃಷ್ಣ ಅವರು. ಇಷ್ಟಾಗಿಯೂ ಸಾವ೯ಜನಿಕವಾಗಿ ಎಂದೂ ಅವರು ತಾಳ್ಮೆ ಕಳೆದುಕೊಳ್ಳಲಿಲ್ಲ. ಎಂದಿನ ಸಭ್ಯತೆ, ಸಜ್ಜನಿಕೆಯನ್ನು ಬಿಡಲಿಲ್ಲ. ಒಬ್ಬ ಮುಖ್ಯಮಂತ್ರಿ ಹೇಗಿರಬೇಕೆಂದರೆ ಕೃಷ್ಣ ಅವರಂತೆ ವಿದ್ಯಾವಂತ, ಬುದ್ಧಿವಂತ, ದೂರದೃಷ್ಟಿ ಹೊಂದಿರುವಾತ ಆಗಿರಬೇಕೆಂದು ಬೇರೆ ರಾಜ್ಯಗಳಿಗೆ ನಾವು ಉದಾಹರಣೆ ಕೊಡುವಂತೆ ಇದ್ದರು. ಅವರು ಉಡುಗೆ ತೊಡುಗೆಯಲ್ಲಿ ಮಾತ್ರ ಶಿಸ್ತನ್ನು ಹೊಂದಿದ್ದರು ಎಂದು ಭಾವಿಸಬೇಡಿ, ಕನಾ೯ಟಕದ ವಿತ್ತ ಸಚಿವಾಲಯಕ್ಕೂ ಶಿಸ್ತನ್ನು ತಂದರು. ಸ್ವತಃ ವಿತ್ತ ಸಚಿವರೂ ಆಗಿದ್ದ ಕೃಷ್ಣ, Karnataka Fiscal Responsibility Act – 2002 ಅಥವಾ ವಿತ್ತೀಯ ಹೊಣೆಗಾರಿಕೆ ಕಾಯಿದೆಯನ್ನು ಜಾರಿಗೆ ತಂದರು.

     ಅಂದರೆ ಆದಾಯದ(ಆಯ) ಆಧಾರದ ಮೇಲೆ ಸರಕಾರ ಖಚ೯ನ್ನು(ವ್ಯಯ) ಮಾಡಬೇಕು, ವ್ಯಯ ಆಯಕ್ಕಿಂತ ಜಾಸ್ತೀಯಾಗಬಾರದು ಎಂದು ಕಟ್ಟುನಿಟ್ಟಾದ ಚೌಕಟ್ಟು ಹಾಕಿಕೊಟ್ಟರು. ಹಾಗಂತ ಖಚ೯ನ್ನು ತಡೆಯುವುದಕ್ಕಾಗುವುದಿಲ್ಲ. ಅಭೀವೃದ್ಧಿ ಕಾಯ೯ಗಳಿಗೆ ಅಪರಿಮಿತ ಹಣ ಬೇಕಾಗುತ್ತದೆ ಎಂಬುದನ್ನು ಮನಗಂಡು, ಆದಾಯವನ್ನು ಹೆಚ್ಚಿಸುವುದರ ಬಗ್ಗೆ ಅತಿಹೆಚ್ಚಿನ ಗಮನಹರಿಸಿದರು. ಮುಂದಿನ ಎಲ್ಲ ಮುಖ್ಯಮಂತ್ರಿಗಳೂ ಹೆಚ್ಚೂಕಡಿಮೆ ಅದೇ ಚೌಕಟ್ಟಿನಲ್ಲಿ ನಡೆದರು, ಸಿದ್ಧರಾಮಯ್ಯನ್ನೊಬ್ಬರನ್ನು ಬಿಟ್ಟು! ಅದರ ಪರಿಣಾಮವೇ ಬಿಜೆಪಿ ಸರಕಾರ 5 ವಷ೯ಗಳಲ್ಲಿ ಮಾಡಿದ ಸಾಲದ ಎರಡೂವರೆ ಪಟ್ಟನ್ನು ಸಿದ್ದರಾಮಯ್ಯನವರು ಮೂರು ವಷ೯ದಲ್ಲೇ ಮಾಡಿದ್ದಾರೆ! ಇದೇನೇ ಇರಲಿ, ರಾಜ್ಯದ ಖಜಾನೆಯನ್ನು ಭದ್ರಪಡಿಸಿದ್ದು, ಆಥಿ೯ಕತೆಯನ್ನು ಸರಿಪಡಿಸಿದ್ದು ಮಾತ್ರವಲ್ಲ, ಅಡಳಿತ ವ್ಯವಸ್ಥೆಯನ್ನೂ ತ್ವರಿತ ಹಾಗೂ ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವ ಸಲುವಾಗಿ ಭೂ ದಾಖಲೆಗಳ ಗಣಕೀಕರಣಕ್ಕೆ ಕೈಹಾಕಿದರು ಕೃಷ್ಣ.

   ಪಹಣಿ, ಪಟ್ಟಾಗಳನ್ನು ಕೇಳಿದರೆ ತಿಂಗಳು ತಳ್ಳುತ್ತಿದ್ದರೆ, ಕಾಸು ಕೊಟ್ಟರಷ್ಟೇ ಕಾಪಿ ಕೊಡುತ್ತಿದ್ದರು. ಅಂಥ ವ್ಯವಸ್ಥೆಗೆ ಚಾಟಿಯೇಟು ಕೊಟ್ಟು, ತಂತ್ರಜ್ಞಾನವನ್ನು ತಂದು ಬದಲಾಯಿಸಿದರು. ಕನ್ನಡ ಸಾಫ಼್ಟ್‍ವೇರ್ ಅಭೀವೃದ್ಧಿಗೆ ಹಾಗೂ ಸರಕಾರಿ ಕಚೇರಿಗಳಲ್ಲಿ ಅದರ ಅಳವಡಿಕೆಗಾಗಿ ಭೂಮಿ ಯೋಜನೆ ಹೆಸರಿನಲ್ಲಿ ಗಣಕೀಕರಣ ಮಾಡಿದರು.
ನೀವು ಕನಾ೯ಟಕ ರಾಜಕಾರಣದ ಇತಿಹಾಸವನ್ನು ನೋಡಿದರೆ ಒಂದೊಂದು ಕಾಲಘಟ್ಟಗಳಲ್ಲಿ ಒಂದೊಂದು ಲಾಬಿಗಳು ರಾಜಕಾರಣವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟು- ಕೊಳ್ಳಲು ಪ್ರಯತ್ನಿಸುತ್ತಾ ಬಂದಿವೆ. ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ತಲೆದೋರಿದ ಹೆಂಡದ ಲಾಬಿಯಿಂದ ಹಿಡಿದು ಸಿದ್ದರಾಮಯ್ಯನವರ ಕಾಲದ ಸ್ಯಾಂಡ್ ಮ್ಯೆನಿಂಗ್ ಲಾಬಿವರೆಗೂ ನೀವು ದೃಷ್ಟಿ ಹಾಯಿಸಬಹುದು. ಮೊದಲಿಗೆ ಹೆಂಡದ ದೊರೆಗಳು, ನಂತರ ಎಜುಕೇಶನ್ ಲಾಬಿ, ಮ್ಯೆನಿಂಗ್ ಮಾಫಿಯಾ, ರಿಯಲ್ ಎಸ್ಟೇಟ್ ದುಡ್ಡಿನ ದಪ೯, ಮರಳು ದಂಧೆ ಹೀಗೆ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲೊಂದಾದ ಹೆಂಡದ ದೊರೆಗಳು ಸೆಕೆಂಡ್ಸ್ ಮೂಲಕ ತೆರಿಗೆ ಕದಿಯುತ್ತಿದ್ದರು. ಇಂಥ ಕಳ್ಳರನ್ನು ಮಟ್ಟಹಾಕಲು ಹಾಗೂ ರಾಜ್ಯದ ಅದಾಯವನ್ನು ಹೆಚ್ಚಿಸಲು 2003ರಲ್ಲಿ ಕನಾ೯ಟಕ ಸ್ಟೇಟ್ ಬೆವೆರೇಜಸ್ ಕಾಪೊ೯ರೇಶನ್ ಲಿಮಿಟೆಡ್ ಸ್ಥಾಪನೆ ಮಾಡಿದರು. ಆ ಮೂಲಕ ಮದ್ಯ ವಿತರಣೆ ಹಾಗೂ ಮಾರಾಟ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದು ಬೊಕ್ಕಸಕ್ಕೆ ಲಾಭ ಮಾಡಿದರು ಕೃಷ್ಣ. ಈ ಹಿಂದೆಲ್ಲ ಹೆಂಡದ ದೊರೆಗಳು ರಾಜಕಾರಣಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ಆದರೆ ಇಂದು ಹೆಂಡದಿಂದ ರಿಯಲ್ ಎಸ್ಟೇಟ್, ಮರಳುಗಾರಿಕೆವರೆಗೂ ಎಲ್ಲ ದಂಧೆಗಳನ್ನು ರಾಜಕಾರಣಿಗಳೇ ಸ್ವತಃ ನಿಯಂತ್ರಿಸುತ್ತಿದ್ದಾರೆ ಎಂಬುದು ಬೇರೇ ಮಾತು ಬಿಡಿ!

     ಮತ್ತೆ ಕೃಷ್ಣ ಅವರ ಸಾಧನೆಯ ವಿಷಯಕ್ಕೆ ಬರುವುದಾದರೆ, ಇವತ್ತು ಬೆಂಗಳೂರನ್ನು ಒಂದು ತಕ್ಕಡಿಗೆ, ಕನಾ೯ಟಕದ ಉಳಿದ ಭಾಗವನ್ನು ಮತ್ತೊಂದು ತಕ್ಕಡಿಗೆ ಇಟ್ಟರೆ ಬೆಂಗಳೂರೇ ಹೆಚ್ಚು ತೂಗುತ್ತದೆ! ಏಕೆಂದರೆ ಕೆಂಪೇಗೌಡ ಬೆಂಗಳೂರಿನ ನಿಮಾ೯ತೃವಾದರೂ ಆ ಬೆಂಗಳೂರಿಗೆ ಐಟಿ ಗರಿಯನ್ನು ಇಟ್ಟು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಸರುವಾಸಿಯಾಗುವಂತೆ ಮಾಡಿದ್ದು ಕೃಷ್ಣ ಅವರು. ಅದು ಟ್ಯಾಕ್ಸ್ ಹಾಲಿಡೇ ಇರಬಹುದು, ಉಚಿತ ಭೂಮಿ ನೀಡಿಕೆ ಇರಬಹುದು, ಮೂಲಭೂತ ಸೌಕಯ೯ಗಳನ್ನು ಕಲ್ಪಿಸುವುದು ಹಾಗೂ ಉದ್ಯಮ ಕ್ಷೇತ್ರದ ಎಲ್ಲ ಬೇಡಿಕೆಗಳಿಗೂ ಸ್ಪಂದಿಸುವುದು ಇರಬಹುದು, ಇಂತಹ ಕೆಲಸಗಳಿಂದ ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನತ್ತ ಮುಖಮಾಡುವಂತೆ ಮಾಡಿದರು. ಹಾಗಾಗಿ ಇವತ್ತು ಬೆಂಗಳೂರೊಂದರಿಂದ ಬರುವ ಆದಾಯವನ್ನು ಇಡೀ ಕನಾ೯ಟಕ ಸರಿಗಟ್ಟಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಖಜಾನೆ ತುಂಬುವುದೇ ಬೆಂಗಳೂರಿನಿಂದ. ಹಾಗಂತ ಕೃಷ್ಣ ಅವರು ಐಟಿ ಅಭೀವೃದ್ಧಿಗೆ ಬರೀ ಬೆಂಗಳೂರನ್ನೇ ಆಯ್ದುಕೊಳ್ಳಲಿಲ್ಲ, ಮ್ಯೆಸೂರು, ಮಂಗಳೂರು, ಹುಬ್ಬಳ್ಳಿಗಳತ್ತಲೂ ದೃಷ್ಟಿಹಾಯಿಸಿದರು. ಹಾಗಾಗಿಯೇ ಈ ನಗರಗಳಲ್ಲೂ ಇಂದು ಐಟಿ ತಾಣಗಳನ್ನು ಕಾಣುತ್ತಿದ್ದೇವೆ. ರೈತನೊಬ್ಬನಿಗೆ ಸಹಾಯ ಮಾಡಿದರೆ ಸಾಲದು ಅಂತ, ಆ ರೈತನ ಮಗ ಎಂಜಿನಿಯರಿಂಗ್ ಮಾಡಿದರೆ ಅವನಿಗೆ ಉದ್ಯೋಗ ನೀಡುವ, ಭವಿಷ್ಯ ಕಟ್ಟಿ- ಕೊಳ್ಳಲು ವೇದಿಕೆ ಸೃಷ್ಟಿ ಮಾಡಿಕೊಡುವ ಕೆಲಸವನ್ನು ಕೃಷ್ಣ ಮಾಡಿದರು. ನೂರಾರು ಸಾಫ಼್ಟ್‍ವೇರ್ ಕಂಪನಿಗಳು ಬೆಂಗಳೂರನ್ನು ಅರಸಿಕೊಂಡು ಬರುವಂತೆ ಮಾಡಿ ಲಕ್ಷಾಂತರ  ಉದ್ಯೋಗ ಸೃಷ್ಟಿಸಿದರು. ಹಾಗಾಗಿಯೇ ಸುಶಿಕ್ಷಿತರ, ವಿದ್ಯಾವಂತರ, ಮಧ್ಯಮವಗ೯ದವರ ಪ್ರೀತಿಗೆ ಪಾತ್ರರಾದರು. ಇವತ್ತು ಬೆಂಗಳೂರಿನ ಟ್ರಾಫಿಕ್ ನಮಗೆ ಉಸಿರು ಕಟ್ಟಿಸಿರಬಹುದು, ಆದರೆ ಕೃಷ್ಣ ಅವರ ಕೆಲಸ  ಲಕ್ಷಾಂತರ  ಪದವೀಧರರಿಗೆ ಬೆಂಗಳೂರಿನಲ್ಲಿ ಬದುಕು ಸೃಷ್ಟಿಸಿದ್ದು ಅಷ್ಟೇ ನಿಜ. ಇದೇನು ಕಡಿಮೆ ಸಾಧನೆಯೇ?

     ಅಂದು ಎಸ್.ಎಂ. ಕೃಷ್ಣ ಅವರು ಬೆಂಗಳೂರು ಅಜೆಂಡಾ ಟಾಸ್ಕ್ ಫೋಸ೯ನ್ನು ರಚನೆ ಮಾಡಿದಾಗ ನಾರಾಯಣಮೂತಿ೯ ಆದಿಯಾಗಿ ಉದ್ಯಮ ಕ್ಷೇತ್ರದ ಅತಿರಥ ಮಹಾರಥರು ಅದರ ಸದಸ್ಯರಾಗಲು ಒಪ್ಪಿಕೊಂಡಿದ್ದರು. ಅದು ಕೃಷ್ಣರ ಮೇಲಿದ್ದ  ನ೦ಬಿಕೆ, ವಿಶ್ವಾಸವನ್ನು ತೋರುತ್ತದೆ. ಈ ನಡುವೆ ರಾಜ್ ಕುಮಾರ್ ಅಪಹರಣ, ಸತತ ಬರ, ರೈತರ ಆತ್ಮಹತ್ಯೆ, ವಿಠಲೇನಹಳ್ಳಿ ಗೋಲಿಬಾರ್, ನಾಗಪ್ಪ ಹತ್ಯೆ, ಜಯಾ ಕ್ಯಾತೆ, ಕಾವೇರಿ ಗಲಾಟೆಗಳು ನಡೆದವು. ಈ ಒಂದೊಂದು ಘಟನೆಗಳೂ ರಾಜ್ಯ ಬೆಚ್ಚಿ ನಿಬ್ಬೆರಗಾಗುವಂತೆ ಮಾಡಿದ್ದವು. ಒಬ್ಬ ಸಾಮಾನ್ಯ ವ್ಯಕ್ತಿ ಅವರಾಗಿದ್ದರೆ ಉಡುಗಿ ಹೋಗುತ್ತಿದ್ದರು. ಆದರೆ ಇಂತಹ ಸಮಸ್ಯೆಗಳ ನಡುವೆಯೂ ಮೂರು ವಷ೯ಗಳ ಸತತ ಬರ ಬಂದಾಗ ಅಂತಜ೯ಲಮಟ್ಟವನ್ನು ಹೆಚ್ಚಿಸಬೇಕಾದರೆ ಬೀಳುವ ಹನಿ ಹನಿ ನೀರನ್ನೂ ಕಾಪಿಟ್ಟುಕೊಳ್ಳಬೇಕೆಂದು ಭಾವಿಸಿ ಕೆರೆಗಳ ಪುನಶ್ಚೇತನಕ್ಕೆಂದೇ “ಕಾಯಕ ಕೆರೆ’ ಎಂಬ ಯೋಜನೆ ಜಾರಿಗೆ ತಂದಿದ್ದರು. ಇನ್ನು ಮ್ಯೆಸೂರು-ಬೆಂಗಳೂರು ಹೆದ್ದಾರಿಯನ್ನು ಅಗಲೀಕರಣ ಮಾಡುವ ನಿಧಾ೯ರ ಕೈಗೊಳ್ಳುವುದಕ್ಕೇ ಸಿದ್ದರಾಮಯ್ಯನವರಿಗೆ ಎರಡೂವರೆ ವಷ೯ ಬೇಕಾಯಿತು. ಕೇಂದ್ರ ಸರಕಾರ ದುಡ್ಡು ಕೊಡುತ್ತೇವೆ ಎಂದು ವಷ೯ದ ಹಿಂದೆಯೇ ಒಪ್ಪಿಕೊಂಡಿದ್ದರೂ ಸರಿಯಾದ ಡಿಪಿಆರ್ ಸಲ್ಲಿಸಲು ಇದುವರೆಗೂ ಆಗಿಲ್ಲ. ಆದರೆ ಕೃಷ್ಣ ಅವರು ನಾಲ್ಕುಪಥಗಳ ಬೆಂಗಳೂರು-ಮ್ಯೆಸೂರು ಹ್ಯೆವೆಯನ್ನು ನಾಲ್ಕೂಮುಕ್ಕಾಲು ವಷ೯ದ ಅಧಿಕಾರಾವಧಿ ಯಲ್ಲಿ ನಿಮಾ೯ಣವನ್ನೇ ಮಾಡಿಬಿಟ್ಟಿದ್ದರು! ಈಗಿನವರು ಅಡಿಗಲ್ಲು ಇಡುವುದಕ್ಕೇ ವಷ೯ಗಳು ಬೇಕು, ಕೃಷ್ಣ ನೋಡನೋಡುತ್ತಲೇ ವಿಕಾಸಸೌಧವನ್ನು ಪೂಣ೯ಗೊಳಿಸಿದ್ದರು. ಬಡವರ ನರಳಿಕೆಯನ್ನು ನೋಡಲಾರದೆ ಆರೋಗ್ಯ ಸೇವೆಗೆ ಹೊಸ ಭಾಷ್ಯ ಬರೆದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದರು. ಖಾಸಗಿ ಆಸ್ಪತ್ರೆಗಳನ್ನೂ ಆ ಯೋಜನೆಯ ವ್ಯಾಪ್ತಿಗೆ ತಂದು ಕ್ಲಿಷ್ಟ ಸೇವೆಗಳೂ ಬಡವರಿಗೆ ಸಿಗುವಂತೆ ಮಾಡಿದರು. ಊರೂರಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ಆರಂಭಿಸಿ , ಸಾಲ ಸವಲತ್ತು ನೀಡಿ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ತರಲು ಮುಂದಾದರು. ರೈತ ಸಂಪಕ೯ ಕೇಂದ್ರಗಳನ್ನು ಸ್ಥಾಪಿಸಿದರು, ಸ್ವಸಹಾಯ ಸಂಘಗಳನ್ನು ಆರಂಭೀಸಿದರು. ಇಂಥ ಯೋಜನೆಗಳು ಐಟಿಯಾಚೆಗಿನ ಕೃಷ್ಣ ಅವರ ದೂರದೃಷ್ಟಿ ಹಾಗೂ ಕಾಳಜಿಯ ಧ್ಯೋತಕವಾಗಿದ್ಡವು .

   ಇಂಥ ಕೃಷ್ಣ ಮಾರ್ಗವನ್ನು ತುಳಿದಿದ್ದರೆ ಸಾಕಿತ್ತು, ಹಾಲಿ ಮುಖ್ಯಮಂತ್ರಿ ಸಿದ್ದಾರಾಮಯ್ಯನವರು ಒಬ್ಬ ಜನಪ್ರಿಯ ಮುಖ್ಯಮಂತ್ರಿಯಾಗಿ ಬಿಡುತ್ತಿದ್ದರು. ಮುಖ್ಯಮಂತ್ರಿಗಳೇ ನಿಮಗೆ ಗೊತ್ತಾ, ನೀವು ಮೂರು ವರ್ಷ ಅಧಿಕಾರಾವಧಿ  ಮುಗಿಸಿದ್ದೀರಿ. ಕೇವಲ ಎರಡು ವರ್ಷ ಪೂರೈಸಿದಾಗಲೇ ಎಸ್.ಎಂ. ಕೃಷ್ಣ ಅವರಿಗೆ ದೇಶದ ನಂಬರ್-1 ಮುಖ್ಯಮಂತ್ರಿ ಎಂದು ಪ್ರತಿಷ್ಠಿತ ಇಂಡಿಯಾ ಟುಡೆ ಮ್ಯಾಗಝಿನ್ ಎರಡನೇ ಬಾರಿಗೆ ಕಿರೀಟಕೊಟ್ಟಿತ್ತು!  In two years and four
months as chief minister, Somanahalli Malaiah
Krishna continues to lead with elegance,
clarity and efficiency that have for the second
successive year seen him being rated as India’s
best chief minister  ಎಂದು ವಿವರಣೆ ಕೊಟ್ಟಿತ್ತು. ಸುಲಭವಾಗಿ ಸಿಗುವ ಹಾಗೂ ಹೊಸ ಯೋಚನೆ, ಯೋಜನೆಗಳ ಪ್ರಯೋಗಕ್ಕೆ ತೆರೆದುಕೊಳ್ಳುವ ವ್ಯಕ್ತಿ ಕೃಷ್ಣ ಎಂದು ನಾರಾಯಣಮೂತಿ೯ ಹೊಗಳಿದ್ದರು. ಆದರೆ ಇವತ್ತು ಏನಾಗುತ್ತಿದೆ? ಯಾಕಾಗಿ ಸಾಫ಼್ಟ್‍ವೇರ್ ಕಂಪನಿಗಳು, ಹೊಸ ಯೋಚನೆಯಾದ ಸ್ಟಾಟ್‍೯ ಅಪ್‍ಗಳು ಆಂಧ್ರದತ್ತ ಮುಖಮಾಡಿವೆ? ಚಂದ್ರಬಾಬು ನಾಯ್ಡು ಈ ಹಿಂದೆ ಆಂಧ್ರದ ಮುಖ್ಯಮಂತ್ರಿಯಾಗಿದ್ದಾಗ ಅವರಷ್ಟೇ ಚತುರ ಹಾಗೂ ಕುಶಲಮತಿ ಮತ್ತು ಅವರಿಗಿಂತಲೂ ಬುದ್ಧಿವಂತ ಎಸ್.ಎಂ. ಕೃಷ್ಣ ಕನಾ೯ಟಕದ ಮುಖ್ಯಮಂತ್ರಿಯಾಗಿದ್ದರು. ದುರದೃಷ್ಟವಶಾತ್ 12 ವಷ೯ಗಳ ನಂತರ ಚಂದ್ರಬಾಬು ನಾಯ್ಡು ಆಂಧ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಮರಳಿದ್ದರೆ, ಕನಾ೯ಟಕದಲ್ಲಿ ಅಭೀವೃದ್ಧಿ ವಿಷಯದಲ್ಲಿ ಎಸ್.ಎಂ. ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ನಡೆಯುವ ಬದಲು ಮುಖ್ಯಮಂತ್ರಿಗಳು ರಿಗ್ರೆ ಸ್ಸಿವ್ ಮನಸ್ಥಿತಿಯನ್ನು ತೋರುತ್ತಿದ್ದಾರೆ. ಹಾಗಾಗಿ ಕಂಪನಿಗಳು ಆಂಧ್ರದತ್ತ ಮುಖಮಾಡಿವೆ ಒಬ್ಬ ವಿದೇಶಾಂಗ ಸಚಿವರಾಗಿಯೂ ವಿನೂತನವಾದ ಪಾಸ್‍ಪೋಟ್‍೯ ಸೇವಾ ಕೇಂದ್ರ ಯೋಜನೆಯನ್ನು ಜಾರಿಗೆ ತಂದರು ಕೃಷ್ಣ. ಮಧ್ಯವತಿ೯ಗಳ ದಂಧೆ, ರಾಷ್ಟ್ರೀಯ ಭದ್ರತೆಗೆ ದಕ್ಕೆ, ಭಯೋತ್ಪಾದಕರ ಕೈಗೆ ಪಾಸ್‍ಪೋಟ್‍೯ ಸಿಗಬಾರದು, ಕಮಿಷನ್ ದಂಧೆ ನಡೆಯಬಾರದು, ಜನರಿಗೆ ಸುಲಭವಾಗಿ ಪಾಸ್‍ಪೋಟ್‍೯ ಸಿಗಬೇಕು ಎಂದು ದೇಶಾದ್ಯಂತ ನೂರಾರು ಪಾಸ್‍ಪೋಟ್‍೯ ಸೇವಾ ಕೇಂದ್ರಗಳನ್ನು ಆರಂಭಿಸಿದರು  . .

     ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿಯೂ ಅದೃಷ್ಟ ಎನ್ನುವುದು ಕೃಷ್ಣ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರಿಗೆ 2004ರಲ್ಲಿ ಕೈಕೊಟ್ಟಿತು. ಸಮಯಕ್ಕೆ ಸರಿಯಾಗಿ ಅಂದರೆ ಅಕ್ಟೋಬರ್‍ನಲ್ಲಿ ಚುನಾವಣೆ ನಡೆದಿದ್ದರೆ ಇಬ್ಬರೂ ಮತ್ತೆ ಅಧಿಕಾರಕ್ಕೆ  ಬರುತ್ತಿದ್ದರೇನೋ. ಏಕೆಂದರೆ ಆ ವಷ೯ ಮಾನ್ಸೂನ್‍ನಲ್ಲಿ ಒಳ್ಳೆಯ ಮಳೆಯಾಯಿತು. ಆದರೆ ಏಪ್ರಿಲ್ -ಮೇನಲ್ಲಿ ಚುನಾವಣೆ ನಡೆದಿದ್ದರಿಂದ ಸತತ ಬರ ಇಬ್ಬರ ಭವಿಷ್ಯಕ್ಕೂ ಬರೆ ಎಳೆಯಿತು! ಕಡೆಯದಾಗಿ ಒಂದು ಪ್ರಶ್ನೆ: ಇವತ್ತಿನ ರಾಜಕಾರಣಿಗಳನ್ನು ನೋಡಿದಾಗ ಅಥವಾ ಅವರನ್ನು ಕಲ್ಪಿಸಿಕೊಂಡಾಗ ಕಣ್ಣಮುಂದೆ ಬರುವ ಆಕಾರ ಯಾವುದು? ಸಿಂಟೆಕ್ಸ್ ಡಬ್ಬಿಯನ್ನೂ ನಾಚಿಸುವಂಥ ಡೊಳ್ಳೊಟ್ಟೆ, ಗರಿ ಗರಿಯಾದ ಬಿಳಿ ಬಿಳಿ ಬಟ್ಟೆ, ಕೈ ಕುತ್ತಿಗೆಯಲ್ಲಿ ನಾಯಿ ಚೈನಿನಂಥ ಚಿನ್ನದ ಸರ, ಎಲ್ಲ ಬೆರಳುಗಳಿಗೂ ಗಜಗಾತ್ರದ ಹರಳಿನ ಉಂಗುರ ಮತ್ತು ಬಿಳಿ ಫಾ ಚೂ೯ನರ್ ಕಾರು.

    ಇವತ್ತು ನರೇಂದ್ರ ಮೋದಿಯವರು ಮಾಡುವ ಒಳ್ಳೆಯ ಕೆಲಸವನ್ನು ಮಾತ್ರವಲ್ಲ, ಅವರು ಧರಿಸುವ ಉಡುಗೆ ತೊಡುಗೆಯನ್ನೂ ಜನ ಫಾ ಲೋ ಮಾಡುತ್ತಾರೆ. ಅಮೆರಿಕದಲ್ಲಿ ಕಲಿತ ಕೃಷ್ಣ ಈ ವಿಷಯದಲ್ಲಿ ಮೊದಲೇ ಮಾದರಿಯಾಗಿದ್ದವರು. ಅವರು ಉಡುಗೆಯ ತೊಡುಗೆಯಲ್ಲೂ ಮಾದರಿ, ಮಾತು-ಕತೆಯಲ್ಲೂ ಟಾಕು ಠೀಕು. ನೋಟದಲ್ಲೂ ಠೀವಿ. ಎಂದೂ ಎಲ್ಲೆ ಮೀರದ ಮಾತು, ಸಭ್ಯತೆಯ ಗೆರೆ ದಾಟದ ನಡತೆ. ನಾಳೆಗೆ ಕೃಷ್ಣ ಅವರಿಗೆ 84 ವಷ೯ ತುಂಬಿ 85ಕ್ಕೆ ಕಾಲಿಡುತ್ತಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಹಾಗೂ ಕಾಂಗ್ರೆ ಸಿಗರಿಗೆ ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿಟ್ಟು ನಡೆಯುವಂಥ ಸದ್ಬುದ್ಧಿ  ಕೊಡಲಿ.

sm krishna

Comments are closed.