*/
Date : 23-04-2013 | 9 Comments. | Read More
Why Tendulkar must retire now? ಹಾಗಂತ ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ ಕಳೆದ ತಿಂಗಳು ಲೇಖನವೊಂದನ್ನು ಬರೆದಿದ್ದರು. 1951, ಡಿಸೆಂಬರ್. ಹೊಸದಿಲ್ಲಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯವೊಂದು ಆರಂಭವಾಯಿತು. ವಿಜಯ್ ಮರ್ಚೆಂಟ್ ಸೊಗಸಾದ ಸೆಂಚುರಿ ಹೊಡೆದರು. ಅದರ ಬೆನ್ನಲ್ಲೇ ಅಶ್ಚರ್ಯಕರವಾಗಿ ನಿವೃತ್ತಿ ಘೋಷಿಸಿಬಿಟ್ಟರು. ಈ ಬಗ್ಗೆ ಸ್ನೇಹಿತರೊಬ್ಬರು ಪ್ರಶ್ನಿಸಿದಾಗ, ‘ಇವನಿನ್ನೂ ಏಕೆ ರಿಟೈರ್ಡ್ಆಗಿಲ್ಲ?’ ಎಂದು ಜನ ಕೇಳುವವರೆಗೂ ಕಾಯಬಾರದು ಎಂದಿದ್ದರು. ಈ ದೃಷ್ಟಾಂತವನ್ನು ಉದಾಹರಿಸಿ ಗುಹಾ ಬರೆದಿದ್ದರು. ದುರಾದೃಷ್ಟವಶಾತ್, ‘ನೀವು ನಿವೃತ್ತಿಯಾಗುವುದು ಯಾವಾಗ?’ […]
Date : 16-04-2013 | 24 Comments. | Read More
ಅಂಬೇಡ್ಕರ್ ಎಂದರೆ ಹಿಂದು ಧರ್ಮದಲ್ಲಿನ ಹುಳುಕುಗಳನ್ನು ಎತ್ತಿ ತೋರಿದವರು, ಜಾತಿ ವ್ಯವಸ್ಥೆಯ ಕೆಡುಕು ಮತ್ತು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದವರು, ಕೇವಲ ದಲಿತ ನಾಯಕರು, ಮೀಸಲಾತಿಯ ಪ್ರತಿಪಾದಕರು ಎಂದು ದಯವಿಟ್ಟು ಭಾವಿಸಬೇಡಿ. ಅವರೊಬ್ಬ ಅಪ್ರತಿಮ ರಾಷ್ಟ್ರವಾದಿಯೂ ಹೌದು. ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ ಹೊರಟೇಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್ ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು […]
Date : 09-04-2013 | 15 Comments. | Read More
ಮೊನ್ನೆ ಗುರುವಾರ ಬೆಳಗ್ಗೆ ಭಾರತೀಯ ಕೈಗಾರಿಕಾ ಒಕ್ಕೂಟ(CII)ವನ್ನು ಉದ್ದೇಶಿಸಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ರಾಹುಲ್ ಗಾಂಧಿಯವರು ಮಾಡಿದ ಭಾಷಣವನ್ನು ಕೇಳಿದ ನಂತರ ಖಂಡಿತ ಅವರ ಕಟ್ಟಾ ವಿರೋಧಿಗಳಲ್ಲೂ ಅಯ್ಯೋ ಎಂಬ ಭಾವನೆ ಮೂಡಿರದೆ ಇರದು. ಭಾಷಣ ಮುಗಿಸುವ ವೇಳೆಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ನಲ್ಲಿ ಜಾಗತಿಕ ಮಟ್ಟದ(ವರ್ಲ್ಡ್ವೈಡ್) Trendingನಲ್ಲಿ (ಚಾಲ್ತಿಯಲ್ಲಿರುವ ವಿಷಯ) ರಾಹುಲ್ ಎರಡನೇ ಸ್ಥಾನಕ್ಕೇರಿ ಬಿಟ್ಟಿದ್ದರು. Pappu, PappuCII, Rahul Gandhi ಇನ್ನು ಮುಂತಾದ ಹೆಸರಿನ ಹ್ಯಾಶ್ಟ್ಯಾಗ್ಗಳು (ಪದ, ಪದಗುಚ್ಛ) […]
Date : 01-04-2013 | 21 Comments. | Read More
Should i marry every woman I sleep with? ‘ನನ್ನ ಪತ್ನಿಯನ್ನು ಮದುವೆಯಾಗುತ್ತೀಯಾ?’ ಎಂದು ಕವಾಸ್ ಮಾಣಿಕ್ಷಾ ನಾನಾವತಿ ಕೇಳಿದಾಗ ಪ್ರೇಮ್ ಭಗವಾನ್ ದಾಸ್ ಅಹುಜಾ ಹೇಳಿದ ಮಾತುಗಳಿವು. ಕವಾಸ್ ಮಾಣಿಕ್ಷಾ ನಾನಾವತಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದರು. ಹಾಗಾಗಿ ಕರ್ತವ್ಯದ ಸಲುವಾಗಿ ಸದಾ ಮನೆಯಿಂದ ದೂರವೇ ಇರುತ್ತಿದ್ದರು. ಈ ಮಧ್ಯೆ 1959, ಏಪ್ರಿಲ್ 27ರಂದು ಮನೆಗೆ ಮರಳಿದಾಗ ಪತ್ನಿ ಸಿಲ್ವಿಯಾ ಏಕೋ ತನ್ನಿಂದ ವಿಮುಖಳಾಗಿರುವುದನ್ನು ಗಮನಿಸುತ್ತಾರೆ. ಆಕೆ ಸಮೀಪದಲ್ಲೇ ಇದ್ದ ಸ್ಫುರದ್ರೂಪಿ ಪ್ಲೇ […]
Date : 01-04-2013 | 15 Comments. | Read More
ಅದು 1928, ಅಕ್ಟೋಬರ್ 30. ಸೈಮನ್ ಆಯೋಗ ಇಂಗ್ಲೆಂಡ್ನಿಂದ ಆಗಮಿಸಿತ್ತು, ಭಾರತೀಯರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕೆಂಬುದನ್ನು ನಿರ್ಧರಿಸಲು. ಅದು ಲಾಹೋರ್ ರೈಲು ನಿಲ್ದಾಣಕ್ಕೆ ಬಂದಿಳಿಯುವ ವೇಳೆಗೆ ಲಾಲಾ ಲಜಪತ್ರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ‘ನೌಜವಾನ್ ಭಾರತ್ ಸಭಾ’ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಸ್ಟೇಷನ್ನಿನಲ್ಲಿ ಇಳಿದ ಕೂಡಲೇ ಸೈಮನ್ ಕಮಿಷನ್ನಿಗೆ ಕಪ್ಪು ಬಾವುಟ ತೋರಿಸುವ ಮತ್ತು ‘ವಾಪಸ್ಸು ಹೋಗಿ’ ಎಂದು ಘೋಷಣೆ ಹಾಕುವ ಯೋಜನೆ ಅದಾಗಿತ್ತು. ಸೈಮನ್ ವಿರೋಧಿ ಪ್ರದರ್ಶನದ ನಿರ್ಧಾರ ಆಗುತ್ತಿದ್ದಂತೆಯೇ ಲಾಲಾ […]