Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದಲ್ಲವೇ ಸ್ವಾಮೀಜಿ?

ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದಲ್ಲವೇ ಸ್ವಾಮೀಜಿ?

ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಗೌರವಪೂರ್ವಕ ವಂದನೆಗಳು. ಜೂನ್ 25ರಂದು ನಾನು ಬರೆದ ‘ಧೀರೇಂದ್ರ ಬಹ್ಮಚಾರಿ, ಚಂದ್ರಾಸ್ವಾಮಿಗೂ ಈ ಸ್ವಾಮಿಗಳಿಗೂ ಏನು ವ್ಯತ್ಯಾಸ?’ ಎಂಬ ಲೇಖನದಲ್ಲಿ ನಿಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ, ನಿಮ್ಮ ಮಾತು ಧೋರಣೆಯಲ್ಲಿ ಯಡಿಯೂರಪ್ಪನವರ ಪಕ್ಷಪಾತಿಯಾಗಿರುವುದು ಕಾಣುತ್ತದೆ ಎಂಬ ವಾಸ್ತವದ ಯಥಾ ಚಿತ್ರಣಕ್ಕೆ ಪ್ರತಿಯಾಗಿ, ಪ್ರತ್ಯುತ್ತರದ ರೂಪದಲ್ಲಿ ಲೇಖನವನ್ನೇ ಬರೆದು ಕಳುಹಿಸಿದ್ದು ಖಂಡಿತ ಸ್ವಾಗತಾರ್ಹ. ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ಖುಷಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ ನಿಮಗೆ ಕೆಲವು ಪ್ರಶ್ನೆಗಳನ್ನೂ ಕೇಳಬೇಕೆಸುತ್ತಿದೆ. ನಿಮ್ಮ ಮೇಲಿನ ಗೌರವದ ನೆಲೆಯಲ್ಲೇ ಈ ಚರ್ಚೆಗೆ ಅನುವು ಮಾಡಿಕೊಡಿ. ಪೂಜ್ಯರೆ, ‘ವ್ಯಕ್ತಿ ದ್ವೇಷದ ರಾಜಕೀಯಕ್ಕೆ ನನ್ನನ್ನು ಎಳೆಯಬೇಡಿ’ ಎಂದು ಹೇಳಿದ್ದೀರಲ್ಲಾ, ನಿಮ್ಮನ್ನು ರಾಜಕೀಯಕ್ಕೆ ಎಳೆದು ತಂದಿರುವವರಾಗಲಿ, ತರಲು ಪ್ರಯತ್ನಿಸುತ್ತಿರುವವರಾಗಲಿ ಯಾರು ನೀವೇ ಹೇಳಿ? ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಜತೆ ಸಂಧಾನಕ್ಕೆ ಯತ್ನಿಸಿದರು ಎಂದು ಅರೋಪ ಮಾಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಅದಕ್ಕೆ ಪ್ರತಿಯಾಗಿ ತೊಡೆತಟ್ಟಿ ‘ಆಣೆ’ ಸವಾಲು ಹಾಕಿದ್ದು ಸಿಎಂ ಯಡಿಯೂರಪ್ಪನವರು. ಅವರಿಬ್ಬರೂ ರಾಜಕಾರಣಿಗಳು. ಆರೋಪ, ಪ್ರತ್ಯಾರೋಪಗಳು ಅವರ ನಿತ್ಯಕಾಯಕ ಹಾಗೂ ಬದುಕಿನ ದೈನಂದಿನ ಸಮಸ್ಯೆ, ಸವಾಲುಗಳು. ಇವರಿಬ್ಬರ ನಡುವೆ ಇದೇ ಮೊದಲೇನು ಇಂತಹ ಆರೋಪ, ಸವಾಲುಗಳು ಎದುರಾಗಿದ್ದಲ್ಲ. ಯಡಿಯೂರಪ್ಪನವರು ಹಿಂದೊಮ್ಮೆ ದೇವೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂದು ಅಬ್ಬರಿಸಿ ಕೊನೆಗೆ ಮೌನಕ್ಕೆ ಶರಣಾಗಿದ್ದು ಗೊತ್ತೇ ಇದೆ. ಈಗ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ನಡುವೆ ಯಾವ ಮಟ್ಟದ ಸಂಘರ್ಷ ನಡೆಯುತ್ತಿದೆಯೋ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡ ಹಾಗೂ ಕೃಷ್ಣ ಅವರ ನಡುವೆ ಇದಕ್ಕೂ ದೊಡ್ಡ ಬೀದಿ ಜಗಳ ನಡೆದಿತ್ತು. 

ಕರ್ನಾಟಕದ ಮಹಾಜನತೆಗೆ ಅದೆಲ್ಲ ಗೊತ್ತು, ಕಿತ್ತಾಡಿಕೊಂಡು ಸುಮ್ಮನಾಗುತ್ತಾರೆ ಎಂಬುದೂ ತಿಳಿದಿದೆ. ಹಾಗಿರುವಾಗ ‘ನಾನು ಕುಮಾರಸ್ವಾಮಿಯವರಿಗೆ ಕರೆ ಮಾಡಿ, ಈ ಆಣೆ, ಪ್ರಮಾಣವನ್ನು ಕೈಬಿಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪನವರಿಗೂ ಇದೇ ಮಾತನ್ನು ಹೇಳಿದ್ದೇನೆ’ ಎಂದು ಹೇಳಿಕೊಂಡವರು ಯಾರು ಸ್ವಾಮೀಜಿ? ಇಷ್ಟಕ್ಕೂ ಮಾಧ್ಯಮಗಳಾಗಲಿ, ಯಡಿಯೂರಪ್ಪ-ಕುಮಾರಸ್ವಾಮಿಯವರಾಗಲಿ ನಿಮ್ಮ ಸಲಹೆ ಕೇಳಿದ್ದರೆ? ಮಧ್ಯಸ್ಥಿಕೆ ವಹಿಸಿ ಎಂದು ಯಾರಾದರೂ ನಿಮ್ಮನ್ನು ಒತ್ತಾಯಿಸಿದ್ದರೆ ಅಥವಾ ಕರೆದಿದ್ದರೆ ಏಕಾಗಿ, ತಾವು ರಾಜಕೀಯ ಪ್ರಹಸನಕ್ಕೆ ತಲೆಹಾಕಿದಿರಿ? ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರ ರಾಜಕೀಯ ವ್ಯಕ್ತಿಗಳ ಅಣೆ ಅಖಾಡವಾಗಬಾರದು ಎಂಬ ಕಳಕಳಿಯಿಂದ ಹೇಳಿದೆ ಎನ್ನುತ್ತೀರಲ್ಲಾ, ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯವನ್ನು ಇಷ್ಟು ವರ್ಷಗಳಿಂದ ಕಾಪಾಡುತ್ತಾ ಬಂದಿರುವ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಅದರ ಉಸಾಬರಿ ನೋಡಿಕೊಳ್ಳುತ್ತಾರೆ ಬಿಡಿ. ಇಷ್ಟಕ್ಕೂ ಅವರೇನು ಉಡುಪಿಯ ನಿಮ್ಮ ಮಠದಲ್ಲಿ ಆಣೆ ಮಾಡುತ್ತೇವೆಂದು ಹೇಳಿರಲಿಲ್ಲವಲ್ಲಾ? ಅಲ್ಲದೆ ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಹಾಕುವುದು, ಹರಕೆ ಕೊಡುವುದು ಹೊಸದೇನೂ ಅಲ್ಲ.

ಇನ್ನು ಪಾವಿತ್ರ್ಯ ಕಾಪಾಡುವ ಪ್ರಶ್ನೆ ಎಲ್ಲಿಂದ ಬಂತು? ನೀವಾಗಿಯೇ ರಾಜಕೀಯ ತಿಕ್ಕಾಟದಲ್ಲಿ ಹಸ್ತಕ್ಷೇಪ ಮಾಡಿ, ನನ್ನನ್ನು ರಾಜಕೀಯಕ್ಕೆ ಎಳೆಯಬೇಡಿ ಎಂಬುದು ಎಂತಹ ಮಾತು ಸ್ವಾಮೀಜಿ? ಕರ್ನಾಟಕದಲ್ಲಿ ಆಗಾಗ್ಗೆ ಎದ್ದ ಬಂಡಾಯದಿಂದ ಬೇಸತ್ತಿದ್ದ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿಯವರು ತಮ್ಮನ್ನು ಭೇಟಿ ಮಾಡಲು 2 ಬಾರಿ ಯಡಿಯೂರಪ್ಪನವರಿಗೆ ಅವಕಾಶ ನಿರಾಕರಿಸಿದ್ದಾಗ ಮಧ್ಯಸ್ಥಿಕೆ ವಹಿಸಿದ್ದು ಯಾರು? ರಾಜಕಾರಣಿಗಳ ಮನೆಗೆ ಪಾದಪೂಜೆ ಮಾಡಿಸಿಕೊಳ್ಳಲು ಹೋಗುವವರು ಯಾರು ಎಂಬುದನ್ನು ಶ್ರೀಗಳು ನೆನಪಿಸಿಕೊಳ್ಳುವುದೊಳಿತು. ‘ವ್ಯಕ್ತಿ ದ್ವೇಷದ ರಾಜಕೀಯಕ್ಕೆ ನನ್ನನ್ನು ಎಳೆಯಬೇಡಿ’ ಎಂಬ ನಿಮ್ಮ ಅಳಲು ಅರ್ಥವಾಗುತ್ತದೆ ಬಿಡಿ. ಲಾಭವಾಗುವುದಿದ್ದರೆ ನೀವು ಯಾರನ್ನೂ ಎದುರುಹಾಕಿಕೊಳ್ಳುವುದಿಲ್ಲ ಎಂಬುದು ತಿಳಿದಿರುವ ಸಂಗತಿಯೇ. ದಿಲ್ಲಿಯ ವಸಂತ್್ಕುಂಜ್್ಲ್ಲಿರುವ ನಿಮ್ಮ ಮಠದ ಅರ್ಧ ಎಕರೆ ಜಮೀನನ್ನು ಕೊಟ್ಟಿದ್ದು ನರಸಿಂಹರಾವ್. ದೇವೇಗೌಡರು ಪ್ರಧಾನಿಯಾದಾಗ ಇನ್ನೂ ಒಂದು ಎಕರೆ ಪಡೆದುಕೊಂಡಿರಿ. ಹಾಗಿರುವ ವ್ಯಕ್ತಿ ದ್ವೇಷದ ರಾಜಕೀಯ ಮಾಡಲು ಹೇಗೆ ಸಾಧ್ಯ ಸ್ವಾಮೀಜಿ?

ರಾಜಕೀಯ ನಿಮ್ಮ ಕಾರ್ಯಸೂಚಿಯಿಂದ ಯಾವತ್ತು ಹೊರಗಿತ್ತು ಹೇಳಿ?

ಉಮಾಭಾರತಿಯವರಿಗೆ ದೀಕ್ಷೆ ನೀಡಿದ್ದು, ಆಕೆ ಮತ್ತೆ ಬಿಜೆಪಿಗೆ ಸೇರ್ಪಡೆಯಾಗುವುದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅದಕ್ಕಾಗಿ ಮಂಗಳೂರಿನಿಂದ ಪುತ್ತೂರಿನವರೆಗೂ ಉಮಾಭಾರತಿ ಜತೆ ಕಾರಲ್ಲಿ ತೆರಳಿ ಸಂಘಪರಿವಾರದ ನೇತಾರರನ್ನು ಭೇಟಿ ಮಾಡಿಸಿ ಭೂಮಿಕೆ ಸಿದ್ಧಪಡಿಸಿದ್ದು ಯಾರು? ನೀವೇ ಅಲ್ಲವೆ? 2004ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದಾಗ ‘ಎಸ್.ಎಂ. ಕೃಷ್ಣ ಅವರೇ ಪುನರಾಯ್ಕೆಯಾಗುತ್ತಾರೆ’ ಎಂದು ನೀವು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು ರಾಜಕೀಯ ಹಸ್ತಕ್ಷೇಪದ ದ್ಯೋತಕವೇ ಅಲ್ಲವೆ? ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯ ವಿಷಯಕ್ಕೆ ಬನ್ನಿ. ಸಚಿವ ಸೋಮಣ್ಣನವರ ವಿರುದ್ಧ ಕಾಂಗ್ರೆಸ್ ನೇತಾರ ಲೇಔಟ್ ಕೃಷ್ಣಪ್ಪನವರ ಪುತ್ರ ಪ್ರಿಯ ಕೃಷ್ಣ ಸ್ಪರ್ಧೆಗಿಳಿದಿದ್ದರು. ಬಹಳ ಜಿದ್ದಾಜಿದ್ದಿನಿಂದ ಕೂಡಿದ್ದ ಸಮರವದು. ಅಂತಹ ವೇಳೆಯಲ್ಲಿ ಪ್ರಿಯ ಕೃಷ್ಣ ಅವರ ಮನೆಗೆ ಅಬ್ಬರದಿಂದ ಹೋಗಿ ಪಾದಪೂಜೆ ಮಾಡಿಕೊಂಡಿರಲ್ಲಾ ನಿಮ್ಮನ್ನು ಗೌರವಿಸುವ ಆ ಕ್ಷೇತ್ರದ ಮತದಾರನಿಗೆ ಅದು ಯಾವ ಸಂದೇಶ ಕೊಡುವಂತಿತ್ತು?

 ಇನ್ನು ‘ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಭ್ರಷ್ಟಾಚಾರವನ್ನು ವಿರೋಧಿಸುವುದಲ್ಲ, ಎಲ್ಲಾ ಭ್ರಷ್ಟಾಚಾರಗಳನ್ನೂ ವಿರೋಧಿಸುತ್ತೇನೆ’  ಎಂಬ ನಿಮ್ಮ ಮಾತು ನಿಜಕ್ಕೂ ಸ್ಪಷ್ಟೋಕ್ತಿಯೇ ಸ್ವಾಮೀಜಿ? ಹಾಗಾದರೆ ಲಾಬಿ ಮಾಡುವುದು, ಭ್ರಷ್ಟರಿಂದ ದೇಣಿಗೆ ಪಡೆಯುವುದೂ ಭ್ರಷ್ಟಚಾರದ ಭಾಗಗಳೇ ಅಲ್ಲವೆ? ಈ ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ನಷ್ಟ ತಂದ 2ಜಿ ಹಗರಣದ ಪ್ರಮುಖ ರೂವಾರಿ ನೀರಾ ರಾಡಿಯಾಳನ್ನು ನನ್ನ ಶಿಷ್ಯೆ ಎಂದು ಹೇಗೆ ಹೇಳುತ್ತೀರಿ ಶ್ರೀಗಳೆ? ‘ಮಿಡ್ ಡೇ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆಕೆ ನನ್ನ ಆಪ್ತ ಶಿಷ್ಯೆ ಎಂದು ನೀವೇ ಹೇಳಿಕೊಂಡಿಲ್ಲವೆ? ದಿಲ್ಲಿಯ ಮಠ ಕಟ್ಟುವಾಗ ಆಕೆಯಿಂದ ದೇಣಿಗೆ ಪಡೆದಿರಲ್ಲಾ ಅದು ಸರಿನಾ? ಆಕೆಗೂ ನನಗೂ ಯಾವ ಸಂಪರ್ಕವೂ ಇಲ್ಲ ಎನ್ನುತ್ತೀರಿ, ಹಾಗಿದ್ದರೆ ಆಕೆ ಏಕಾಗಿ ದಕ್ಷಿಣದ ಅಂಚಿನಲ್ಲಿರುವ ಮಠದ ಯತಿಯೊಬ್ಬರಿಗೆ ದೇಣಿಗೆ ನೀಡಿದಳು? ಖ್ಯಾತ ಇಂಗ್ಲಿಷ್ ವಾರಪತ್ರಿಕೆ ‘ಔಟ್್ಲುಕ್್’ನ 2010 ಡಿಸೆಂಬರ್ 6ರ  ಸಂಚಿಕೆಯ

Niira, Of Two Eyes ಎಂಬ ಲೇಖನದಲ್ಲಿ ರಾಡಿಯಾಳನ್ನು ವಾಜಪೇಯಿ ಅಳಿಯ ರಂಜನ್ ಭಟ್ಟಾಚಾರ್ಯ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೇ ನೀವು ಎಂದು ಬರೆಯಲಾಗಿದೆಯಲ್ಲಾ ಇದು ಏನನ್ನು ಸೂಚಿಸುತ್ತದೆ?

ಒಮ್ಮೆ ಶಿಷ್ಯೆ ಎನ್ನುತ್ತೀರಿ, ಮಗದೊಮ್ಮೆ ಆಕೆ ಜತೆ ಯಾವ ಸಂಪರ್ಕವೂ ಇಲ್ಲ ಎನ್ನುತ್ತೀರಿ, ದೇಣಿಗೆ ಪಡೆದುಕೊಂಡಿದ್ದು ನಿಜ ಎಂದು ಒಪ್ಪಿಕೊಳ್ಳುತ್ತೀರಿ, ಇದರ ಅರ್ಥವೇನು? ಹಿಂದಿರುವ ಮರ್ಮವೇನು ಸ್ವಾಮೀಜಿ? ಆಕೆ ನೀಡಿದ ದೇಣಿಗೆ ಮೊತ್ತವೆಷ್ಟು? 50 ಕೋಟಿ ಎಂಬ ಅನುಮಾನಗಳಿದ್ದು, ಎಷ್ಟೆಂದು ನೀವೇ ಹೇಳಬಹುದಲ್ಲವೆ? ಭ್ರಷ್ಟಾಚಾರಿಗಳು ಯಾರೆಂಬುದನ್ನು ನ್ಯಾಯಾಲಯಗಳು ನಿರ್ಧರಿಸಬೇಕೇ ಹೊರತು ಮಠಾಧಿಪತಿಗಳಲ್ಲ ಎಂದು ಹೇಳುವ ನೀವು,  “I have a good opinion about her and she is in constant touch with me. I even spoke to her about the 2G scam and her tapped conversations. I think she has done nothing wrong” ಎಂದು ‘ಮಿಡ್ ಡೇ’ ಸಂದರ್ಶನದಲ್ಲಿ ರಾಡಿಯಾಗೆ ಶುದ್ಧಹಸ್ತಳೆಂಬ ಸರ್ಟಿಫಿಕೆಟ್ ನೀಡುತ್ತೀರಿ! ಇದೆಂಥಾ ಇಬ್ಬಂದಿ ನಿಲುವು ನಿಮ್ಮದು? ಸ್ವಾಮೀಜಿ, ನಿಮ್ಮ ಮಠದ ಆಯ-ವ್ಯಯ ಪಟ್ಟಿಯನ್ನು ಬಹಿರಂಗ ಮಾಡುವುದಾಗಿ ನೀವು ಹೇಳಿರುವುದು ಸ್ವಾಗತಾರ್ಹ ವಿಷಯವಾಗಿದ್ದರೂ ದೇಣಿಗೆ ಸಂಗ್ರಹಣೆ ವಿಷಯದಲ್ಲೂ ನಾವು ಶುದ್ಧಹಸ್ತತೆಯನ್ನು ನಿರೀಕ್ಷಿಸಬಹುದೇ?

ಯಾವ ಮಾರ್ಗದಲ್ಲಿ ದುಡಿದಿದ್ದರೂ ದೇಣಿಗೆ ನೀಡುತ್ತಿದ್ದಾರೆಂಬ ಏಕಮಾತ್ರ ಕಾರಣಕ್ಕೆ ಸ್ವೀಕರಿಸುವುದು ಸರಿಯೇ?

ಅದಿರಲಿ, ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡುವಂಥ ಗಿಮಿಕ್್ಗಳ ಹೊರತಾಗಿ ದಲಿತರನ್ನು ಸಮಾನವಾಗಿ ಕಾಣುವಂಥ ಯಾವ ಕೆಲಸ ನಡೆದಿದೆ? ಚಿತ್ರದುರ್ಗದ ನಮ್ಮ ಮುರುಘರಾಜೇಂದ್ರ ಶ್ರೀಗಳನ್ನು ತೆಗೆದುಕೊಳ್ಳಿ. ದಲಿತರಿಗೂ ಒಂದು ಮಠ ಬೇಕು, ಆ ಸಮುದಾಯವನ್ನೂ ಒಗ್ಗೂಡಿಸಬೇಕೆಂಬುದನ್ನು ಮನಗಂಡು ಮಾದಾರ ಚನ್ನಯ್ಯ ಸ್ವಾಮೀಜಿಯವರಿಗೆ ದೀಕ್ಷೆ ಕೊಟ್ಟಿದ್ದು, ತಮ್ಮ ಮಠಕ್ಕೆ ಸೇರಿದ ಜಮೀನನ್ನು ನೀಡಿ ಮಠ ಸ್ಥಾಪಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದು ಮುರುಘರಾಜೇಂದ್ರ ಸ್ವಾಮೀಜಿ. ಇಂದು ಮಾದಾರ ಚನ್ನಯ್ಯ ಸ್ವಾಮೀಜಿಯವರು ದಲಿತರನ್ನು(ಎಡ) ಒಗ್ಗೂಡಿಸುತ್ತಿರುವುದು ಮಾತ್ರವಲ್ಲ ತಮ್ಮ ಸಮುದಾಯದವರು ಮತಾಂತರಗೊಳ್ಳುವುದನ್ನು ತಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಹೇಳಿಕೆಯೊಂದನ್ನು ನೀಡಿದ ಮುರುಘಾ ಶರಣರು ‘ಮಾಂಸಾಹಾರಿಗಳೂ ಬಸವಧರ್ಮ ಸೇರುವುದಕ್ಕೆ ಅಭ್ಯಂತರವಿಲ’್ಲ ಎಂದರು. ಮತಾಂತರದ ಬಗ್ಗೆ ಭಾರೀ ಭಾರಿ ಮಾತನಾಡುವ ನಿಮ್ಮಲ್ಲಿ ಹೇಳಿಕೆಗಳನ್ನು ಹೊರತುಪಡಿಸಿ ಇಂತಹ ಸಹೃದಯತೆ, ಒಳಗೊಳ್ಳುವಿಕೆಯನ್ನು ಕಾಣಲು ಸಾಧ್ಯವೆ? ಹಿಂದೂ ಐಕ್ಯತೆಯ ಬಗ್ಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಸಹಭೋಜನ ಮಾಡೋಣ ಬನ್ನಿ ಎಂದು ಆಹ್ವಾನ ಕೊಟ್ಟಾಗ ಪಲಾಯನ ಮಾಡಿದ್ದೇಕೆ? ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸುತ್ತಿದ್ದೇವೆ ಎನ್ನುವ ನೀವು, ದಲಿತರನ್ನು ಮತ್ತೆ ಪ್ರತ್ಯೇಕವಾಗಿಡುವುದಕ್ಕಿಂತ ನಿಮ್ಮ ಪೂರ್ಣಪ್ರಜ್ಞಾ ವಿದ್ಯಾಪೀಠಗಳ ವಸತಿ ವಿದ್ಯಾರ್ಥಿ ನಿಲಯಗಳನ್ನೇ ದಲಿತ ವಿದ್ಯಾರ್ಥಿಗಳಿಗೂ ಏಕೆ ತೆರೆಯಬಾರದು?

ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿರುವ ನಿಮ್ಮ ಮಾಧ್ವ ಯುವಕ ವಿದ್ಯಾರ್ಥಿ ನಿಲಯದ ಬಾಗಿಲು ಅನ್ಯ ಜಾತಿ ಹಾಗೂ ದಲಿತರ ಪಾಲಿಗೆ ಮುಚ್ಚಿರುವುದೇಕೆ?

ಶ್ರೀಗಳೇ, ನಮ್ಮ ಪುರಾಣ ಪುಣ್ಯಕಥೆಗಳು ಹಾಗೂ ಅವುಗಳಲ್ಲಿರುವ ಮೌಲ್ಯಗಳನ್ನು ನಿಮಗೆ ಹೊಸದಾಗಿ ಹೇಳಿಕೊಡಬೇಕಿಲ್ಲ. ಪತಿವ್ರತೆ ಎಂದು ಗೊತ್ತಿದ್ದರೂ ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ. ಏಕೆಂದರೆ, ಸಮಾಜದ ಅಭಿಪ್ರಾಯಕ್ಕೆ ಆತ ಮಣಿಯಬೇಕಾಯಿತು. ಶಮಂತಕ ಮಣಿಯನ್ನು ಕದಿಯದಿದ್ದರೂ ಶ್ರೀಕೃಷ್ಣ ಆರೋಪ ಹೊತ್ತು ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಬೇಕಾಗಿ ಬಂತು. ಹಾಗಿರುವಾಗ ಸಮಾಜದ ಗೌರವಕ್ಕೆ ಪಾತ್ರರಾಗಿರುವ,  ಸಮಾಜದ ಸಾಕ್ಷೀಪ್ರಜ್ಞೆಯನ್ನು ಎತ್ತಿಹಿಡಿ ಯುವ ಸ್ಥಾನದಲ್ಲಿರುವ ನೀವು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೂ ನಂಬಬಾರದು ಇನ್ನು ಮುಂತಾದ ಸಬೂಬು ಕೊಟ್ಟು, ತರ್ಕ ಮಾಡಿ ಭ್ರಷ್ಟರನ್ನು ಸಮರ್ಥಿಸುವುದು ಸರಿಯೇ? 

 ಇಷ್ಟೆಲ್ಲ ಪ್ರಶ್ನೆಗಳ ಹೊರತಾಗಿಯೂ ನಿಮ್ಮನ್ನು ಗೌರವಿಸಲು, ನಿಮ್ಮ ಬಗ್ಗೆ ಹೆಮ್ಮೆಪಡಲು ನಮಗೆ ಸಾಕಷ್ಟು ಕಾರಣಗಳಿವೆ. ಅಯೋಧ್ಯೆ ಚಳವಳಿಗೆ ನೀವು ಧುಮುಕಿದ ರೀತಿ, ಹಿಂದು ಜಾಗೃತಿಗೆ ನೀವು ಕೊಟ್ಟ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಇಂದು ಧರ್ಮಕ್ಕೆ ಎದುರಾಗುವ ಅಪಾಯಗಳು ಮಾತ್ರವಲ್ಲ, ಒಬ್ಬ ಸಾಮಾನ್ಯ ರೈತನಿಗೆ ಸಮಸ್ಯೆ ಎದುರಾದಾಗಲೂ ನೀವು ಧ್ವನಿ ಎತ್ತುತ್ತೀರಿ. ಎಸ್್ಇಝೆಡ್, ನಂದಿಕೂರು ಯೋಜನೆ ವಿಷಯದಲ್ಲಿ ನೀವು ಮಾಡಿದ ಹೋರಾಟ ಖಂಡಿತ ನೆನಪಿದೆ. ಇಂತಹ ನಿಮ್ಮ ಸೇವೆ, ಹೋರಾಟಗಳಿಂದಾಗಿ ನಿಮ್ಮನ್ನು ಮೆಚ್ಚುವ, ಗೌರವಿಸುವ ಅಸಂಖ್ಯ ಅಭಿಮಾನಿಗಳಿದ್ದಾರೆ. ಹಾಗೆ ಮೆಚ್ಚುವವರ ಮನದಲ್ಲೂ ನಿಮ್ಮ ರಾಜಕೀಯ ಸಖ್ಯದ ಬಗ್ಗೆ ಇರುಸು-ಮುರುಸುಗಳಿವೆ. ಈ ಹಿನ್ನೆಲೆಯಲ್ಲಿ, ನಾಡೇ ಮೆಚ್ಚುವ ನೀವು ಭ್ರಷ್ಟ ರಾಜಕಾರಣಿಗಳ ದೊಂಬರಾಟದಿಂದ ದೂರವಿದ್ದು ಧರ್ಮಕಾರ್ಯವನ್ನು ಮುಂದುವರಿಸಬೇಕೆಂಬುದೇ ನಮ್ಮ ವಿನಮ್ರ ಮನವಿ, ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದು ಎಂಬುದೇ ನಮ್ಮ ಕಳಕಳಿ.

50 Responses to “ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದಲ್ಲವೇ ಸ್ವಾಮೀಜಿ?”

 1. Raghunandan says:

  Well Saide, Pratap it hurts but he still can do something.. Hope he will understand

 2. Santoshi says:

  Superb!!..

 3. shrikrishna says:

  ಪ್ರತಾಪ್..ರಾಜಕಾರಣಿಗಳ ಬಗ್ಗೆ ಹೇಳಲೇನು ಉಳಿದಿಲ್ಲ.ಇನ್ನು ಅವರ ಜೊತೆ ಸೇರಿ ಆಟ ಆಡುತ್ತಿರುವ ಶ್ರೀಗಳ ಬಗ್ಗೆ ಏನು ಹೇಳಲಿ?
  ಈ ಮಠಾಧೀಶರಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ವಿಚಾರಗಳು ಮಾತ್ರ ಸೀಮಿತವಾಗಿದ್ದರೆ ಅದಕ್ಕೆ ಬೆಲೆ.ಇಲ್ಲದಿದ್ದರೆ ಅಲ್ಲಲ್ಲಿ ಬೆಳೆಯುವ ನಾಯಿಕೊಡೆಯ ಬೆಲೆಯಷ್ಟೇ. ಇನ್ನೊಂದು ವಿಚಾರ, ಇಂದಿನ ಕಾಲದಲ್ಲಿ ಶೋಷಿತರು ಯಾರು? ಸಾಮಾನ್ಯ ವರ್ಗದವರೋ ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವೆಂದೇನು ಕರೆಯುತ್ತೇವೆ ಅವರೋ? ಎಲ್ಲಾ ಸೌಲಭ್ಯಗಳೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂದಾಯವಾಗುತ್ತಿದೆ ಸಾಲದೆಂಬಂತೆ ಶ್ರೀಗಳ ಸಪೋರ್ಟ್. ಒಟ್ಟಿನಲ್ಲಿ ಅಂದು ಅಂಬೇಡ್ಕರ್ ಮಾಡಿದ ‘ಪುಣ್ಯ’ಕೆಲಸವನ್ನು ಸಾಮಾನ್ಯವರ್ಗದ ಜನರು ಅನುಭವಿಸುತ್ತಿದ್ದಾರೆ.

 4. shrikrishna says:

  ಪ್ರತಾಪ್..ರಾಜಕಾರಣಿಗಳ ಬಗ್ಗೆ ಹೇಳಲೇನು ಉಳಿದಿಲ್ಲ.ಇನ್ನು ಅವರ ಜೊತೆ ಸೇರಿ ಆಟ ಆಡುತ್ತಿರುವ ಶ್ರೀಗಳ ಬಗ್ಗೆ ಏನು ಹೇಳಲಿ?
  ಈ ಮಠಾಧೀಶರಿಗೆ ತಮ್ಮ ವ್ಯಾಪ್ತಿಯಲ್ಲಿ ಬರುವ ಧಾರ್ಮಿಕ ವಿಚಾರಗಳು ಮಾತ್ರ ಸೀಮಿತವಾಗಿದ್ದರೆ ಅದಕ್ಕೆ ಬೆಲೆ.ಇಲ್ಲದಿದ್ದರೆ ಅಲ್ಲಲ್ಲಿ ಬೆಳೆಯುವ ನಾಯಿಕೊಡೆಯ ಬೆಲೆಯಷ್ಟೇ.
  ಇನ್ನೊಂದು ವಿಚಾರ, ಇಂದಿನ ಕಾಲದಲ್ಲಿ ಶೋಷಿತರು ಯಾರು? ಸಾಮಾನ್ಯ ವರ್ಗದವರೋ ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವೆಂದೇನು ಕರೆಯುತ್ತೇವೆ ಅವರೋ? ಎಲ್ಲಾ ಸೌಲಭ್ಯಗಳೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂದಾಯವಾಗುತ್ತಿದೆ ಸಾಲದೆಂಬಂತೆ ಶ್ರೀಗಳ ಸಪೋರ್ಟ್. ಒಟ್ಟಿನಲ್ಲಿ ಅಂದು ಅಂಬೇಡ್ಕರ್ ಮಾಡಿದ ‘ಪುಣ್ಯ’ಕೆಲಸವನ್ನು ಸಾಮಾನ್ಯವರ್ಗದ ಜನರು ಅನುಭವಿಸುತ್ತಿದ್ದಾರೆ.

 5. Jayakumar says:

  shree pratapji your opinion is currect….

 6. Rohith Shetty says:

  ಪ್ರತಾಪ್…. ಸರಿಯಾಗಿ ಹೇಳಿದ್ದಿರಿ….
  ನಮ್ಮ ಸಮಾಜದಲ್ಲಿ ತುಂಬಾ ಗೌರವದ ವ್ಯಕ್ತಿಗಳಿದ್ದಾರೆ… ಆದರೆ ಕೆಲವರು ತಮ್ಮ ಕೆಲಸ ಮಾಡಿಕೊಂಡು ಹೋಗ್ತಾರೆ…
  ಇನ್ನು ಕೆಲವರು ಎಲ್ಲ ಕಡೆ ಮೂಗು ತೂರಿಸ್ತಾರೆ. ಆಮೇಲೆ ಎಲ್ಲ ಗೌರವ ಕಳ್ಕೋತಾರೆ.

  ಆದ್ರೆ ನಿಮ್ಮ ನಮ್ಮಂತವರನ್ನ ನೋಡಿ… ಕೆಲವು ವ್ಯಕ್ತಿಗಳ ಮೇಲೆ ಗೌರವ ಇರುತ್ತೆ…. ಆದ್ರೆ ಅವರ ಕೆಲವು ಪಾರ್ಟ್ ಟೈಮ್ ಕೆಲಸಗಳಿಂದ ಅವರನ್ನ ಬೈಯೋಕು ಆಗೋಲ್ಲ… ಹೊಗೊಳೋಕು ಆಗೋಲ್ಲ.

  ಅದ್ರು ನಿಮ್ಮ ಉದ್ದೇಶ ಖುಷಿ ಕೊಟ್ಟಿದೆ…. ಇನ್ನಾದ್ರು ಶ್ರೀ ಗಳು ರಾಜಕೀಯದಿಂದ ದೂರ ಇದ್ದು ಗೌರವ ಉಳಿಸಿಕೊಳ್ಳಲಿ ( ಶ್ರೀ ಯುತ ಹೆಗ್ಗಡೆಯವರಂತೆ ) ಇಲ್ಲ ರಾಜಕೀಯಕ್ಕೆ ಇಳಿದು ಇನ್ನೊಬ್ಬ ಯಡಿಯೂರಪ್ಪ ಅಗಲಿ.

  ಮುಂದಿನದ್ದು ಅವರಿಗೆ ಬಿಟ್ಟಿದ್ದು…..
  ಇನ್ನು ಜಾಸ್ತಿ ಅವರಿಗೆ ಹೇಳುವಷ್ಟು ದೊಡ್ಡವರಲ್ಲ ನಾವು…..

 7. PK says:

  Boss..Superb article..! hats off to u.Inuu thumba kalla swami galu idhare ervara jothe..nevu avara bagge nu swalpa barthira..nevu bariodahadre swalpa information nanu kodthini..Kukke subramnya da Narashima mata da Vidya prasanna swami mathu avra younger brother sudarshan joisa..swami hesru helkondu badavara jaga kabalisodhu..sand mafia and ..mata da denige duddalli brother hesari acre gattlae land madikonidhare..idhu saladake declaration alli poor formares ge hogi ro land yella minster gala influnce use madi athikrama vagi kabalistha idhare..innu plenty info with prof ready give..

  Please do the needful.

 8. Rachanna says:

  ದಯವಿಟ್ಟು ಎಲ್ಲ ಸ್ವಾಮಿಜಿಗಳಲ್ಲಿ ನನ್ನ ಬಿನ್ನಹ, ತಾವುಗಳ ಈ ರಾಜಕೀಯ ವಿಷಯದಲ್ಲಿ ತಲೆಹಾಕದೆ ಧರ್ಮ ಸಂಘಟನೆ ಮಾಡಿದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ.!

 9. Raghavendra Udupa says:

  Everyone needs publicity nowadays.. better to shut one’s mouth than be in the limelight. Nice article though..

 10. Nagaraj says:

  Really good article..Now our society needs such articles..

 11. ನಮ್ಮ ಕೆಲವರ ಮನಸಿನಲ್ಲಿ ಸುಳಿದಾಡುತ್ತಿದ್ದ ಸಾಲುಗಳು ನಿಮ್ಮ ಮನದಲ್ಲೂ ಬಂದಿರುವುದು ಸ್ವಾಗತಾರ್ಹ.. ಹಿಂದಿನ ಕಾಲದಿಂದ ದಲಿತರೆಂದು ಪರಿಗಣಿತವಾಗಿರುವ ಹಿಂದೂ ಜನಾಂಗವನ್ನು ‘ದಲಿತ’ ಎಂಬ ಹಣೆ ಪಟ್ಟಿಯಿಂದ ಹೊರ ತರಬೇಕೆಂಬುದು ನಮ್ಮಂತಹ ಹಲವರ ಆಶಯ. ಈ ನಿಟ್ಟಿನಲ್ಲಿ ಪೂಜ್ಯ ಪೇಜಾವರ ಶ್ರೀಗಳೂ ಕಾರ್ಯಪ್ರವ್ರತ್ತರಾಗಿರುವುದು ಸಂತೋಷದ ವಿಷಯವೇ.. ಆದರೆ ದಲಿತರೊಂದಿಗೆ ಸಹಭೋಜನದ ವಿಷಯ ಬಂದಾಗ ಮೌನಕ್ಕೆ ಶರಣಾಗಿರುವುದು ಹಾಗೂ ತಮ್ಮ ಮಠದಲ್ಲಿರುವ ಅದೇ ಹಳೆಯ ದಲಿತ ವಿರೋಧಿ ಕಟ್ಟುಪಾಡುಗಳನ್ನು ಬದಲಾಯಿಸದಿರುವುದು ನನ್ನಂತಹ ಹಲವು ಕ್ರಾಂತಿಕಾರಿ ಹಿಂದೂಗಳಿಗೆ ಸರಿ ಕಾಣುತ್ತಿಲ್ಲ.! ವಯಕ್ತಿಕವಾಗಿ ಹೇಳಬೇಕೆಂದರೆ ನಮ್ಮ ಮನೆಯಲ್ಲಿ ದಲಿತರೆಂದು ಕರೆಯಲ್ಪಡುವವರು ಊಟ ಮಾಡುತ್ತಾರೆ.. ನಾವು ಅವರನ್ನು ನಮ್ಮ ಸಹೋದರರಂತೆ ಆದರಿಸುತ್ತೇವೆ. ನಾನು ಕಾರ್ಯ ನಿರ್ವಹಿಸುವ ಸಂಘಟನೆಯಾದ ‘ಹಿಂದೂ ಯುವ ಸೇನೆ’ (ಮಂಗಳೂರು) ಯಲ್ಲೂ ಹಲವು ಪ್ರಮುಖ ಸ್ಥಾನಗಳನ್ನು ಅವರಿಗೆ ನೀಡಲಾಗಿದೆ. ನಾವು ಪೂಜ್ಯ ಪೇಜಾವರ ಶ್ರೀ ಗಳಲ್ಲಿ ಕೇಳುವುದು ಒಂದೇ ದಯವಿಟ್ಟು ಮೊದಲು ನೀವು ಮಾದರಿಯಾಗಿ ತೋರಿಸಿ. ಆ ನಂತರ ನಿಮ್ಮ ಅಸಂಖ್ಯಾತ ಭಕ್ತರು ನಿಮ್ಮನ್ನು ಹಿಂಬಾಲಿಸುವರು.

 12. H.R.SHREEPADARAO says:

  good questions. and good arcle…

 13. respected sir ,

  very very informative article and also we know other face of the pejavar sree.

 14. Kedar says:

  Politics and Religion were never apart.Be it Vijaynagara Empire or Adilshahi rule the Seer’s or the head of religious institutions were pretty much part of governance.Your article on Pejwar seer is uncalled for and misleading.
  His contributions in bringing the amity with different castes is commandable.He is only seer who went to naxal hit area of shimoga and he is working on building schools and making there life better.Unfortunately our popular journalists were pretty busy in writing catchy political issues rather taking up the burning issues that people face on day to day basis.
  I can just say this article depicts the narrow mindedness of the writer who has tried to mislead the readers instead of giving the holistic works of pejawar seer.

 15. Chethan says:

  Brahmanarige holige,mattu mrishtaana bhojana maadisuva pejaawaraa matthu company itararige baree saaru matthu anna badisi kai toledu kolluttare..Paryaaya samayaadalli maadhva swaamijigala pallakki bhara yetthi punya praaapti aagudemba nambikeyinda shoodra wargawu indigu shochaaneeya stithiyaalide..
  Brahmana mukhadinda banada wa brahmana matthu Brahmana kaalininda sristhi yaadavanu shoodra yemba manuwaadada moorkhatanakke prajnaawantha wargawoo baliyaagiroodu duraadristha..
  Shankaraacharya matthu maadhwetara swaamigalannu Raakshasana avataara yennuva Udupiya maadhwa collegugalu ithara hindugalannu mriga galanthe vartisoode yee pejaawara matthu balagadawara karma..
  Kevala votu bandagaa naavella ondu naavella hindu yennuva RSS matthu BJP Bangaru Laxman nantaha dalitanannu manege kalisi gadkarinantaha Braahmanannu unnatha huddege niyukti goliside..
  Innadaru Paadaseve ya hesaralli kotigattale hana suriyuva shoodra samaajawu yeccethu kollabekaagide..Brahmanyavannu tiraskarisabekaagide..
  Jai Hind

 16. kousalya says:

  AWESOOOMEEEE…!!! I dono why these swamiji’s are behind politics…!!!

 17. Manu Prakash K says:

  Really very very good article. You r an excellent writer.

  ಸರಿಯಾದ ಪ್ರಶ್ನೆಯನ್ನೇ ಸ್ವಾಮೀಜಿಯವರಲ್ಲಿ ಕೇಳಿದ್ದೀರಿ. ಇಂಥಹ ಲೇಖನ ನಿಮ್ಮಿಂದ ಮಾತ್ರ ಬರೆಯಲು ಸಾದ್ಯ. ಆವತ್ತು ಅನಂತಮೂರ್ತಿ ಬಗ್ಗೆ ಇವತ್ತು ಸ್ವಾಮೀಜಿಯವರ ಬಗ್ಗೆ. ಅತಿ ಯೋಗ್ಯವಾದ ಬರಹ. ದನ್ಯವಾದಗಳು. ನಿಮ್ಮಿಂದ ಮುಂದೆ ಇಂಥಹ ಬರಹಗಳನ್ನು ನಿರೀಕ್ಷಿಸುತ್ತೆವೆ.

 18. Girish. says:

  I m not agree with this article… if u give permission to me .. i will write letter to you.. as a reaction to this article..

  I am waiting for your reply ..
  Thank you

 19. Vinay Biradar says:

  Its a tragedy that a seer of his stature is getting reminded of his duties like this. But the fact is plain and simple. The swamiji, has put down his ethics and has compromised with the respect that he commands from the masses. I believe, not only he, but all other petty self proclaimed or otherwise, religious gurus should get back to selfless empowerment of the downtrodden and not involve in selfish politics.
  It is best left to Yeddis and Cheddis.

 20. Nachiket says:

  Religious equality, unity in diversity everything sounds good in speeches. Swamijis of udupi are nothing but hypocrites. Even today brahmins get special treatment in udupi matts. Simple example is isolation of brahmins from other castes for lunch and dinner. Brahmins have separate rooms for seating while other castes are asked to sit outside in the elephant shed. But they forget casteism when it comes to temple funds.

 21. pramod shetty says:

  ಪ್ರತಾಪ ಸಿಮ್ಹರವರೇ, ನಿಮ್ಮ ಮಾತಿನಲ್ಲಿ ಯಾವೂದೇ ದ್ವೇಷವಿಲ್ಲ ,ಒಂದು ವೇಳೆ ಈ ಮಾತನ್ನು ಪೂಜ್ಯ ಸ್ವಾಮಿಜಿಯವರು ಧ್ವೇಷವೆಂದು ಬಾವಿಸದರೆ ,ರಾಜಕೀಯ ವ್ಯಕ್ತಿಗಳಿಗೂ, ಸ್ವಾಮೀಜಿ ಯವರಿಗೂ ಯಾವೂದೇ ವ್ಯತ್ಯಸವಿಲ್ಲವೆನ್ದಾಗ್ಗುತ್ತದೆ .ಪೂಜ್ಯ ಪೆಜಾವರಶ್ರೀಗಲೇ ನೀವು ನಮ್ಮ ಸಮಾಜದ ಮಾರ್ಗದರ್ಶಿ ,ನೀವೊಂದು ಅಮೂಲ್ಯ ವ್ಯಕ್ತಿ .ನಿಮ್ಮ ಬಗ್ಗೆ ಹೀಗೆ ಲೇಖನ ……..ಸ್ವಾಮಿಜಿಯವರೇ .,ನಾವು ಸಾಮಾನ್ಯ ಪ್ರಜೆಗಳು ಯಾರನ್ನು ನಂಬಲಿ?…………ಬಿಡಲಿ? …………
  ಕೃಷ್ಣಾ ಪರಮಾತ್ಮಾ ………………….

 22. yogish hunsur says:

  it is easy to find fault with everybody and u r doing it and your paid for it that is your job fine , anybody can do a little bit research and comment and criticize anybody you have done it again good. but i have doubt on your sincerity and genuineness that is missing in the article why ?

 23. ashwath.shetty says:

  nachike yagabeku e dongi swamiji galige.
  rajakiyada bagge valavu edre serikolali .evarigella drma,mata yake.

 24. ash says:

  HEY SIR

  GREATTTTTTT!!!!!!!!!!!!

  LET THE SOCIETY COME TO KNOW WHAT SOME MATHS DOING WHICH IS NOT TO BE DONE.

 25. srikanth says:

  pretty bad in taste. Just because you have the access/power it does not mean you could write anything/everything. It is easy to interpret everything to our convenience.
  Long way to learn facts of life….

 26. Suchithra janardhan says:

  Height of arrogancy.. Avrivaranna yake moogu thurisidrintha kelo badalu y u r involved in this antha spashtikarisbeku.. Journalists’genu indian constitution extra rights kottilvalla? Nimmashtte rights’na swamijigu namgu kottidhe.. Lekana harithavaagirbeku, bt arogant aagi nimgyake annodhu too much.. Yake avru e deshadha praje alwa? Let hm express hs veiws, dats none of ur business!! Amele duplicity of hindu sages question madta idini anthiri! u r d ONLY PERSON WHO SUPPORTED NITHYANANDHA! Nw tel me wotz duplicity??! U cl urself a nationalist!! Do u think v r less nationalist than u?? U dont like questioning UR OWN DUPLICATE FACE OF SO CALLED NATIONALIST!!

 27. nikhil says:

  well, with no offense to pratap simha,
  i don think swamiji’s r just to sit in temple n worship god.. as the leader or head of a community n specially as a citizen he got rights n its is responsiblity to interfere in politics if something is goin wrong na?

 28. pradeep says:

  I think all most all Mathas which are in news(rich) are Hundi (offering Box) of Black money of politicians and businessmans.. No control on Donations and charity .

 29. ಅಜಯ says:

  ರಾಜ್ಯದಲ್ಲಿ ಇಬ್ಬರು ಪ್ರಮುಖ ರಾಜಕಾರಣಿಗಳು ಕಿತ್ತಾಡಿಕೊಳ್ಳುತ್ತಿರುವಾಗ ಅವರಿಬ್ಬರನ್ನೂ ಸಂಪರ್ಕಿಸಿ ಹಾಗೆ ಮಾಡಬೇಡಿ ಎಂದು ಹೇಳುವುದರಲ್ಲಿ ತಪ್ಪೇನಿದೆ? ಅದೂ ಕೂಡ ಸಮಾಜಕಾರ್ಯವೇ ಆಗುವುದಿಲ್ಲವೇ? ಧರ್ಮಪೀಠವು ಸಮಯಬಂದಾಗ ರಾಜಪೀಠವೂ ಆಗಬೇಕಾಗುತ್ತದೆ. ಹೀಗೆ ದೇವರುಗಳ ಮೇಲೆ ಆಣೆ ಹಾಕುತ್ತಾ ದೇವರನ್ನು ರಾಜಕೀಯಕ್ಕೆ ತರುತ್ತಿರುವ ರಾಜಕಾರಣಿಗಳಿಂದ ಆ ಧರ್ಮಕ್ಷೇತ್ರಕ್ಕೂ ದೇವರಿಗೂ ಜನರಭಾವನೆಗಳಿಗೂ ತೊಂದರೆ ಆದರೆ ಅದು ಹಿಂದೂ ಧರ್ಮಕ್ಕೆ ಆದ ತೊಂದರೆಯೇ ಅಲ್ಲವೇ? ಅದನ್ನು ತಪ್ಪಿಸಲು ಪೇಜಾವರರು ಪ್ರಯತ್ನ ಪಟ್ಟಿದ್ದರಲ್ಲಿ ತಪ್ಪೇನೂ ಇದೆ ಅನ್ನಿಸುತ್ತಿಲ್ಲ. ರಾಜಕೀಯ ಮತ್ತು ಧರ್ಮ ಹಿಂದಿನಿಂದಲೂ ಒಂದಕ್ಕೊಂದು ನಂಟಿನಿಂದಲೆ ಇರುವುದು. ಧರ್ಮಕ್ಕೆ ರಾಜನ, ಅಧಿಕಾರದ ಆಶ್ರಯ ಬೇಕು. ರಾಜನಿಗೆ ಧರ್ಮ ಬೇಕು.

  ರಾಜಕಾರಣಿಗಳು ಮಠಕ್ಕೆ ಹೋದಾಗ ಅವರನ್ನು ಬರಬೇಡಿ ಎಂದು ದೂರ ತಳ್ಳಲಾಗುವುದಿಲ್ಲ. ರಾಜನಿಗೆ ಸಲಹೆ ಸೂಚನೆ, ಸಮಯಬಂದಾಗ ಆದೇಶವನ್ನೂ ಧರ್ಮಗುರುಗಳು ನೀಡಬೇಕಾಗುತ್ತದೆ. ಇದು ಸನಾತನ ಪದ್ಧತಿ. ಹಿಂದಿನಿಂದಲೂ ಹೀಗೆ ನೆಡೆದು ಬಂದಿದೆ. ಕರ್ನಾಟಕದಲ್ಲಿ ಎಲ್ಲಾ ಪ್ರಮುಖ ಮಠಾಧಿಪತಿಗಳೂ ರಾಜಕಾರಣಕ್ಕೆ ಕೈ ಹಾಕುತ್ತಾರೆ. ನೀವು ಎಲ್ಲ ಸ್ವಾಮೀಜಿಗಳನ್ನೂ ಪ್ರಶ್ನಿಸಿದ್ದಿರಿ, ಆದರೆ ಪೇಜಾವರರು ಮಾತ್ರ ಅದಕ್ಕೆ ಪ್ರಾಮಾಣಿಕವಾಗಿ ಪ್ರತಿಕ್ರಯಿಸಿದರು. ಅದಕ್ಕೆ ಅವರನ್ನೇ ನೀವು ಟಾರ್ಗೆಟ್ ಮಾಡಿಕೊಂಡಿರಿ. ಇದೇ ನೀವು ಅವರಿಗೆ ಕೊಡುವ ಗೌರವ? ಅವರು ಅವರ ಪಾಡಿಗೆ ಆಧ್ಯಾತ್ಮಿಕ ಮಾಡಿಕೊಂಡಿದ್ದರೆ ನಮ್ಮ ಮಠಾಧಿಪತಿಗಳು ರಾಜ್ಯಕ್ಕೆ, ಜನರಿಗೆ ಏನೂ ಮಾಡುವುದಿಲ್ಲ ಅಂತ ಟೀಕಿಸುತ್ತೀರಿ. ಅವರು ಜನರ ನಡುವೆ ಬಂದರೆ ಅವರನ್ನು ಹೀಗೆ ಟೀಕಿಸುತ್ತೀರಿ. !

  ನೀರಾ ರಾಡಿಯಾ ಆಗಲೀ, ಮತ್ಯಾರಾದರೂ ಆಗಲಿ ಗುರುಗಳ ಶಿಷ್ಯರಾಗಿದ್ದಲ್ಲಿ ತಪ್ಪೇನಿದೆ? ಅವರು ಹಗರಣದಲ್ಲಿ ರಾಜಕೀಯದಲ್ಲಿ ಸಿಲುಕಿದಾಕ್ಷಣ ಅದಕ್ಕೆ ಗುರುಗಳನ್ನೇಕೆ ಗುರಿಮಾಡಬೇಕು?! ಒಬ್ಬ ಗುರುವಿಗೆ ನೂರು ಶಿಷ್ಯರಿರುತ್ತಾರೆ. ಆದರೆ ಎಲ್ಲಾ ಶಿಷ್ಯರ ಎಲ್ಲಾ ಕೆಲಸಗಳಿಗೂ ಗುರುಗಳೇ ಜವಾಬ್ದಾರರಾಗಬೇಕಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗಿದೆ ಅಂತ ಶ್ರೀಗಳು ಹೇಳಿದರೆ ಅವರು ಆಡಳಿತ ಪಕ್ಷದ ವಿರೋಧಿಯಂತೆ ಬಿಂಬಿಸುತ್ತೀರಿ. ಸುಮ್ಮನಿದ್ದರೆ ಅವರು ಏನೂ ಮಾಡುವುದಿಲ್ಲ ಅನ್ನುತ್ತೀರಿ. ಮಾತಾಡಿದರೆ ಇವರಿಗ್ಯಾಕೆ ರಾಜಕೀಯ ಅನ್ನುತ್ತೀರಿ. ಅವರು ತಾನೆ ಏನು ಮಾಡಿಯಾರು ಪಾಪ.

 30. Subbayya Bhat Varmudi says:

  [ನಿಮ್ಮ ಉದ್ದೇಶ ಶುದ್ಧಿಯ ಬಗ್ಗೆ ಪ್ರಶ್ನೆಗಳೇಳಬಾರದಲ್ಲವೇ ಸ್ವಾಮೀಜಿ?]
  {ಹಿಂದೂ ಐಕ್ಯತೆಯ ಬಗ್ಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಸಹಭೋಜನ ಮಾಡೋಣ ಬನ್ನಿ ಎಂದು ಆಹ್ವಾನ ಕೊಟ್ಟಾಗ ಪಲಾಯನ ಮಾಡಿದ್ದೇಕೆ? ದಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸುತ್ತಿದ್ದೇವೆ ಎನ್ನುವ ನೀವು, ದಲಿತರನ್ನು ಮತ್ತೆ ಪ್ರತ್ಯೇಕವಾಗಿಡುವುದಕ್ಕಿಂತ ನಿಮ್ಮ ಪೂರ್ಣಪ್ರಜ್ಞಾ ವಿದ್ಯಾಪೀಠಗಳ ವಸತಿ ವಿದ್ಯಾರ್ಥಿ ನಿಲಯಗಳನ್ನೇ ದಲಿತ ವಿದ್ಯಾರ್ಥಿಗಳಿಗೂ ಏಕೆ ತೆರೆಯಬಾರದು?
  ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿರುವ ನಿಮ್ಮ ಮಾಧ್ವ ಯುವಕ ವಿದ್ಯಾರ್ಥಿ ನಿಲಯದ ಬಾಗಿಲು ಅನ್ಯ ಜಾತಿ ಹಾಗೂ ದಲಿತರ ಪಾಲಿಗೆ ಮುಚ್ಚಿರುವುದೇಕೆ?}
  ಶ್ರೀ ಪ್ರತಾಪ ಸಿಂಹರು ಬರೆದ ಮೇಲಿನ ಬರಹದ ಉಲ್ಲೇಖಿತ ಅಂಶಗಳ ಬಗ್ಗೆ ಮಾತ್ರ ಅಸಮ್ಮತಿ ಇದೆ.
  ನನ್ನ ಅಭಿಪ್ರಾಯ ಇಲ್ಲಿದೆ.
  ಮೇಲಿನ ವಾಕ್ಯಗಳು ಕೇವಲ ಅವರ ಮತ್ತು ಈಗಿನ ಸಮಾಜದಲ್ಲಿ ರೂಢಿಯಾದ ಸಾರ್ವತ್ರಿಕ ಅಜ್ಞಾನದ ದ್ಯೋತಕವಷ್ಟೆ. ಹಿಂದು ವೈದಿಕ, ಯೌಗಿಕ, ಆಗಮಿಕ ಪರಂಪರೆಗಳ ಬಗ್ಗೆ ಇರುವ ತೀವ್ರ ಅಜ್ಞಾನದ ಪ್ರದರ್ಶನವಷ್ಟೆ. ಹೊರತು ಧೋರಣಾತ್ಮಕ ದೋಷವಾಗಿರಲಾರದು.
  ಇದು ಹೇಗೆಂದರೆ-
  ಈಗ ಕಾಣುತ್ತಿರುವ ಮಠದ/ಗಳ (ಬ್ರಾಹ್ಮಣ) ಮತ್ತು ಹಲವಾರು ದೇವಸ್ಥಾನಗಳ (ಧರ್ಮಸ್ಥಳವೂ ಸಹಿತ) ನಡವಳಿಕೆಗಳ ಹಿಂದೆ ಈ ಮೇಲಿನ ಪರಂಪರೆಗಳಿವೆ. ಅವುಗಳಲ್ಲಿ ಬಹುಪಾಲೂ ಮೂಲ ಕಾರಣದ ಅರಿವಿಲ್ಲದೇ ಬಳಕೆಯಲ್ಲಿ ಇರುವುದಾಗಿರಬಹುದಾದರೂ ಕಾರಣವೇ ಇಲ್ಲ ಎನ್ನಲಾಗದು. ಇನ್ನು ಹಲವಾರು ಅಂತಹ ನಡವಳಿಕೆಗಳು ಕಾಲಾನುಕ್ರಮ ಗತಿಯಲ್ಲಿ ಸಾಕಷ್ಟು ದುರುಪಯೋಗವಾದುದೂ ಹೌದು.
  ಪ್ರಸ್ತುತ-
  “ಸಹಭೋಜನ, ಸ್ಪೃಶ್ಯಾಸ್ಪೃಶ್ಯತೆ”ಗಳು ಶಾಸ್ತ್ರೀಯವಾಗಿ ವೈಜ್ಞಾನಿಕವಾಗಿ (not so called modern scientific) ಏನು ಎನ್ನುವುದು ಇಲ್ಲಿ ಚಿಂತನೀಯವಾಗಿದೆ. ಜೀವನ ಪದ್ಧತಿ- ಅದರ ಹಿಂದಿರುವ ಮಾನಸಿಕ ಸ್ಥಿತಿ, ಸಂಸ್ಕಾರಗಳು, ಉಪಾಸನೆಗಳು, ಉದ್ಯೋಗ ಇತ್ಯಾದಿಗಳು ಮತ್ತು ಅವುಗಳಿಗೆ ಸೂಕ್ತವಾದ ಆಚಾರಗಳು ಹಲವಾರು ರೀತಿಗಳಲ್ಲಿ ಇರಲೇಬೇಕಾಗುತ್ತದೆ. ಇದರೊಂದಿಗೆ ದೇಶಕಾಲ ಪರಿಸ್ಥಿತಿಗಳೂ ಗಮನೀಯವಾಗುತ್ತವೆ. ಎಲ್ಲವೂ ಪರಸ್ಪರ ಅನುಯೋಜ್ಯವಾಗಿರಲೇ ಬೇಕು. ಸತ್ವ- ರಜ- ತಮೋ ಭೇದಾದಿಗಳು, ಪಂಚಭೂತಾದಿ- ಚಕ್ರಾದಿ ಭಿನ್ನತೆಗಳು, ವೈದಿಕ ಮೂಲವಾದ ಸಂವೇದನಾಪೂರ್ವಕ ಕರ್ಮ- ತತ್ರ ದೇವತಾ ಭಿನ್ನತೆಗಳು, ಇತ್ಯಾದಿಗಳು ಇಲ್ಲಿ ಆಧಾರಭೂತವಾದವುಗಳು. ಇವುಗಳಲ್ಲಿ ಹಲವು ಸಮ್ಮಿಶ್ರಣೀಯವಾಗಿದ್ದರೆ ಇನ್ನು ಹಲವು ಪರಸ್ಪರ ಸುದೂರವಿರಬೇಕು. ಇವುಗಳಲ್ಲಿ ಮೇಲುಕೀಳು ವಂಚನೆ ಇತ್ಯಾದಿ ಯಾವುದೂ ಇಲ್ಲ- ಕೇವಲ ಹೇಗಿರಬೇಕೋ ಹಾಗಿರಬೇಕೆನ್ನುವ ಪ್ರಾಕೃತಿಕ ನಿಯಮ ಮಾತ್ರವಿರುವುದು.
  ಈ ಆಧಾರದ ಕೆಲವು ಆಚಾರಗಳನ್ನಿಲ್ಲಿ ಅರಿವಿಗಾಗಿ ಉದಾಹರಿಸುತ್ತೇನೆ. ೧)ಹೋಮ ಪೂಜಾದಿಗಳಲ್ಲಿ ಅಗ್ನಿ(ಆರತಿ ಇತ್ಯಾದಿ) ಸ್ಪರ್ಶ-ಕ್ರಿಯೆ ಯನ್ನು ಮಾಡಿದ ನಂತರ ಜಲಸ್ಪರ್ಶ ಯಾ ತದುದ್ದೇಶದ ಅನ್ಯ ಕ್ರಿಯೆಯನ್ನು ಮಾಡುವುದು ಕಡ್ಡಾಯವಾಗಿದೆ. ೨)ರಕ್ಷೋಧಿಪತಿಯಾದ ನಿರೃತಿಗೆ ಆಹುತಿ ಕೊಟ್ಟ ನಂತರ ಜಲದಿಂದ ಶುದ್ಧಿಗೋಳ್ಳಬೇಕು. ೩)ಏಕಾಸನವು ನಿಷಿದ್ಧ – ಸ್ಪರ್ಷವೂ ನಿಷಿದ್ಧ (ಬ್ರಾಹ್ಮಣರೊಳಗೇ ಆದರೂ). ಆಗಮೋಕ್ತ ಕೆಲವು ದೇವಾಲಯಗಳಲ್ಲಿ ದೇವರ ಬಟ್ಟೆಗಳನ್ನು ಕೆಲವು ಸಂದರ್ಭಗಳಲ್ಲಿ ಅಗಸನ ಹೊರತಾಗಿ ಯಾರೇ ಶುದ್ಧೀಕರಿಸಿದರೂ ಅದು ಶುದ್ಧಿಯೆನಿಸುವುದಿಲ್ಲ. ೪)ದೇವರಿಗೆ ಪೂಜೆಗೆ ಉಪಯೋಗಿಸಿದ ಹಳತು ಹೂವನ್ನು ಇಟ್ಟ ಸ್ಥಳವನ್ನೂ ಕೂಡಾ ಗೋಮಯಾದಿ ಶುದ್ಧೀಕರಣ ಮಾಡಬೇಕು. ೫)ಒಂದು ಸಪರಿವಾರ ದೇವತಾ ಪ್ರತಿಷ್ಠೆ ಇರುವಲ್ಲಿ ಅನ್ಯ ದೇವತಾಹ್ವಾನವು ನಿಷಿದ್ಧವಾಗಿದೆ. ೬)ಇದೇ ರೀತಿ ವ್ಯಕ್ತಿಗತವಾದ ಹಲವಾರು ಆಚಾರಗಳೂ ಇವೆ.
  ಅವೆಲ್ಲ ಮೇಲುಕೀಳು ವಂಚನೆ ಇತ್ಯಾದಿ ಯಾವುದೂ ಅಲ್ಲ- ಕೇವಲ ಹೇಗಿರಬೇಕೋ ಹಾಗಿರಬೇಕೆನ್ನುವ ಪ್ರಾಕೃತಿಕ ನಿಯಮ ಮಾತ್ರವಿರುವುದು. ಇವುಗಳ ಹಿಂದೆ ಪಾಂಚಭೌತಿಕ ಯೋಗನಿಯಮಗಳು ಇವೆ. ಸಂವೇದನಾಪೂರ್ವಕ ಕರ್ಮ- ತತ್ರ ದೇವತಾ ಭಿನ್ನತೆಗಳು ಇತ್ಯಾದಿಗಳೂ ಇವೆ. (ಇವುಗಳನ್ನೆಲ್ಲಾ ಆಧುನಿಕ ಪರಿಭಾಷೆಯಲ್ಲಿ ಅರ್ಥವಿಸಲು “Pranic Heeling” ನ್ನು ವಿಸ್ತಾರವಾಗಿ ಅವಲೋಕಿಸುವುದು ಸ್ವಲ್ಪ ಸಹಾಯಕವಾದೀತು.)
  ಇವುಗಳೆಲ್ಲಾ ಅರಿವು- ಶ್ರದ್ಧೆ ಇತ್ಯಾದಿಗಳ ಕೊರತೆ, ಪುರೋಹಿತಶಾಹಿತ್ವ, ದೌರ್ಬಲ್ಯ, ವಂಚನೆಗಳಿಂದಾಗಿ ನೀವು(ಪ್ರತಾಪ ಸಿಂಹರು) ಪ್ರಕಟಗೊಳಿಸಿದಂತಹ ಸಾರ್ವತ್ರಿಕ ಅಜ್ಞಾನಕ್ಕೆ ದಾರಿಯಾಗಿದೆ. (ಇದಕ್ಕೆ ತುಲ್ಯವಾದ ಅವಿವೇಕೀ ಮನಸ್ಥಿತಿಗೆ ಇನ್ನೊಂದು ಉದಾಹರಣೆ- ದಲಿತವಾಣಿಯೆನಿಸಿದ ಶ್ರೀ ಸಿದ್ಧಲಿಂಗಯ್ಯನವರು ಆಡಿದ ಅಭಿಪ್ರಾಯದ ಆಶಯವನ್ನು ಅರ್ಥವಿಸಲು ಹೆಚ್ಛಿನ ಯಾರೂ ತಯಾರಿಲ್ಲ ನೋಡಿ.) ಈ ಸ್ಥಿತಿಗೆ ಬ್ರಾಹ್ಮಣರಾದಿಯಾಗಿ ಎಲ್ಲರೂ ಕಾರಣರು. ಪುರೋಹಿತಶಾಹಿತ್ವಕ್ಕೆ ತುಲ್ಯವಾದ ಸ್ಥಿತಿ ದಲಿತರಲ್ಲೂ ಉಂಟಾಗಿದೆಯಲ್ಲ!.
  ಧರ್ಮಸ್ಥಳದಲ್ಲೂ ಬ್ರಾಹ್ಮಣ ಭೋಜನವು ಪ್ರತ್ಯೇಕವಾಗಿ ನಡೆಯುತ್ತದೆ. ಸರ್ವರಿಗೂ ಭೋಜನವಿದೆ. ಹೆಚ್ಚು ಯಾಕೆ, ಪ್ರತಿದಿನ ದೇವರಿಗೆ ಅನ್ನಾದಿಗಳನ್ನು ನಿವೇದಿಸುವ ಒಟ್ಟಿಗೇ ೧೨ ಮಂದಿ ಬ್ರಾಹ್ಮಣರಿಗೆ ಭೋಜನವು ನಡೆಯುತ್ತದೆ. ಇದರ ಹಿಂದೆ ಮೇಲುಕೀಳು- ಭೇದಭಾವಗಳಿಲ್ಲ- ಔಚಿತ್ಯ ಆವಶ್ಯಕತೆಗಳು ಮಾತ್ರ ಇವೆ.
  ಉಡುಪಿಯಲ್ಲೂ ಬ್ರಾಹ್ಮಣಭೋಜನ ಮತ್ತು ಎಲ್ಲರಿಗೂ ಭೋಜನ ಇದೆ. ಮೂಲಭೂತವಾಗಿ ವಿಶೇಷವಾಗಿ ಉಡುಪಿ ಮಠಗಳು ಮಾಧ್ವ ಬ್ರಾಹ್ಮಣರಿಗಾಗಿಯೇ ಇರುವವುಗಳು, ಒಟ್ಟಿಗೆ ವೈಷ್ಣವ ಮತವನ್ನು ಅನುಸರಿಸುತ್ತಾ ಪ್ರತಿಪಾದಿಸುತ್ತ ಸಮಾಜದ ಎಲ್ಲಾ ಜನರಿಗಾಗಿ ಇರುವವುಗಳು. ಅಲ್ಲಿ ಬೇಕಾದಷ್ಟು ತಿದ್ದಬೇಕಾದ ವಿಚಾರಗಳಿವೆ ಎನ್ನುವುದು ಸರ್ವವಿದಿತವಾಗಿದೆ. ಹಾಗೆಂದು ಸಮಾಜದ ಡೊಂಕು ತಿದ್ದಲು ಬರಬೇಡಿ, ಅಂತಹ ನೈತಿಕತೆ ನಿಮ್ಮಲ್ಲಿ ಇಲ್ಲ ಎನ್ನುವ ಅರ್ಥದಲ್ಲಿ ನೀವು(ಪ್ರತಾಪ ಸಿಂಹರು) ಶ್ರೀ ಪೇಜಾವರರಿಗೆ ಉತ್ತರಿಸಿದ್ದು ತೀರಾ ಬಾಲಿಶವಾಗಿದೆ. ಯಾಕೆಂದರೆ ಮೊತ್ತಮೊದಲಾಗಿ ಏನನ್ನು ತಿದ್ದಬೇಕಾದರೂ ಎಲ್ಲ ತಪ್ಪು ಒಪ್ಪುಗಳೊಂದಿಗೆ “ಹಿಂದು” ಅಥವಾ ಇನ್ನೇನೋ ಹೆಸರಿನ ನಮ್ಮ ರಾಷ್ಟ್ರೀಯ ಪರಂಪರೆ ಉಳಿದಿರಬೇಕಲ್ಲಾ!? ನೀವು ಹೇಳಿದಂತೆ ಆದರೆ ಉಳಿವಿಗಾಗಿ ಪ್ರಯತ್ನಿಸಲು ಅರ್ಹರು ಮತ್ತು ಭಾಗವಹಿಸಲು ವ್ಯಕ್ತಿಗಳು ಸಿಗುವುದು ಅಸಾಧ್ಯ. ಯಾಕೆಂದರೆ ಎಲ್ಲರ ಒಳಗೂ ಒಂದಲ್ಲ ಒಂದು ಹುಳುಕು ಇದ್ದೇ ಇರುತ್ತದೆ. ಆ ಹುಳುಕು ಉದ್ದಿಷ್ಟ ವಿಚಾರದಲ್ಲಿ ಎಷ್ಟು ಗಮನೀಯ ಎನ್ನುವುದು ಮಾತ್ರ ಮುಖ್ಯವಾಗಬೇಕು.
  ಇನ್ನು,ಶ್ರೀ ಪೇಜಾವರ ಸ್ವಾಮಿಗಳ ದಲಿತಪರ ಕಾರ್ಯಾಚರಣೆಯ ಹಿಂದಿರುವ ಮನಸ್ಥಿತಿ ಮತ್ತು ಉದ್ದೇಶಗಳನ್ನು ಪ್ರಶ್ನಿಸುವುದರಲ್ಲಿ ತಪ್ಪಿಲ್ಲ- ಆದರೆ ಅದರೊಂದಿಗೇ ಜೋಡಿಸಿದ ಸಮರ್ಥನೆ ಬಾಲಿಶವಾಗಬಾರದು.
  ಪ್ರತಾಪರೆ, ಏಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳಿವೆ. ಎಲ್ಲರೂ ಅವನ್ನು ತಮ್ಮ ತಮ್ಮ ಇತಿಮಿತಿಗಳಲ್ಲೇ ನಿಭಾಯಿಸುವುದು ಅನಿವಾರ್ಯ; ಬರೆದಷ್ಟು- ಕಿರುಚಿದಷ್ಟು ಸುಲಭವಲ್ಲ.
  ಸತ್ಯ ಹೇಳಬೇಕು-ಅಕಾಲದಲ್ಲಿ ಅಯುಕ್ತ ರೀತಿಯಲ್ಲಿ ಅಲ್ಲ. ಗುರಿ, ಜವಾಬ್ದಾರಿಗಳು ಇದ್ದಾಗ ಸತ್ಯದ ನಿಭಾವಣೆ ಬಲು ಕಷ್ಟ. ನಿಮ್ಮಂತಹ ರಾಷ್ಟ್ರೀಯವಾದಿ ಪತ್ರಕರ್ತರಿಗೆ ಇದರ ಅರಿವು ಸನ್ಯಾಸಿ/ಮಠಾಧಿಪತಿಗಳಷ್ಟೇ ಇರಬೇಕು.
  ಏನೇ ಆದರೂ ಶ್ರೀಗಳಿಗೆ ನಿಮ್ಮ ಪ್ರಶ್ನೆಗಳು ಸರಿಯಾಗಿಯೇ ಇರುವಂತೆ ಕಾಣುತ್ತಿದೆ, ಈ ಮೇಲೆ ಹೇಳಿದ ಅಂಶಗಳ ಹೊರತು.

 31. suresh says:

  pratap..
  yaake eege aagabidatha iddiri..
  neevu innobba gowri lankesha….

 32. suresh says:

  en gowri friend aadala…..

 33. shashikala says:

  Hi,Pejawara shree yavara PRATHYUTHTHARA vannu nimma web nallu hakiyalla……

 34. ದಿನೇಶ್ says:

  ನೀವು ಹೇಳಿದ್ದು ಸತ್ಯ ಸಿಂಹರವರೆ. ಸ್ವಾಮೀಜಿಗಳು ಧರ್ಮ ಸ್ಥಾಪನೆ ಅಷ್ಟೇ ಅಲ್ಲದೆ ದೈವ ಸಾಕ್ಷಾತ್ಕಾರದ ಬಗ್ಗೆಯೂ ಬೋಧಿಸಬೇಕಾಗುತ್ತದೆ…

 35. Vijay says:

  Superb!!!!!

 36. naveen says:

  Hi,

  Simha roars, it is quite obvious! Simha sir then it should even be applicable to Dr.Heggade to ask the corrupt politicians to rectify themselves and come to Shri Kshetra. If you have guts plz do write asking all Heggade like influential Dharmadhikaris/Gurus in karnataka to command all corrupt ministers not to visit their Kshetras unless/until they cme out of the allegations agnst thm. Or let all the ministers come to Dharmasthala and take oath in front of Manjuntaha to prove their loyalty/honesty to the state. Mr. Simha Do you fear you will be singled out? If not then write! WE ALL SUPPORT SIMHA’S CAMPAIGN AGAINST FOUL POLITICS.

 37. Arjun says:

  Highly arrogant article–
  You claim to be a proud hindu nationalist. According to sanaatan Dharma- power lies in 4 things- knowledge (brahmins- policy making), weapon(kshatriya- policy implementation), money (vaishya- retail), land (shudra- production). In history, all kings have listened to the court pandits and vidvaans before taking any step. In due course of time, due to jainism and buddhism- the caste system arouse and everyone started misusing it which invited the foreigners. Anyways, coming back to this article- who are you to advise the swamiji what he should do- as a citizen of his country- he has every right to involve with people in power- this land doesnot bar religious heads in participation in politics. You must infact credit him for avoiding the swearing scene in dharmastala for avoiding bad precedence to future politics. He eats in isolation and that doesnot mean he avoids eating with anyone- its one of the norms of being a sanyaasi. If muruga mata allows meat eating to join basava tatva- isnot that contradiction of kalabeda, kolabeda… Infact let me remind that basavanna also accepted the lower castes when they gave up their bad and unhealthy habits including meat eating. What matas are getting today is almost nothing compared to the evangelical institutions that are receiving from abroad today which encourage nothing but breakdown of our nation state and culture. I appreciate your concern for corruption by BJP govt but its nothing compared to the external forces that are awaiting the destruction of our country’s unity. Uma bharathi is a pakka hindu nationalist which is why pejavar swami encouraged her back to party. Similarly niira radia is only an insider who knows a lot about 2G scam and has done brokering on behalf of her parties. Pejavar swami’s work deserves much accolades and you cannot dictate which method he has to adopt.

 38. somashekar says:

  gÁdPÁgÀtÂUÀ¼ÀÄ, C¢üPÁjUÀ¼ÀÄ ªÀÄvÀæªÀ®èzÉà C£ÉÊwPÀªÁV zÉÃtÂUÉ ¥ÀqÉzÀ ªÀÄoÀUÀ¼ÀÄ ¨sÀæµÁÖZÁgÀPÉÌ ºÉÆgÀvÉãÀ®è. KPÉAzÀgÉ ¤ÃgÁ gÁrÃAiÀiÁ CAvÀºÀªÀgÀ£ÀÄß ²µÉåAiÀÄ£ÁßV ¥ÀqÉzÀÄPÉÆArgÀĪÀ ¸Áé«ÄfÃAiÀĪÀgÀ ªÀÄoÀªÀÇ PÀÆqÀ ¨sÀæµÀÖªÉ. AiÀÄrAiÀÄÆgÀ¥Àà£ÀªÀgÀ ‘¨sÀÆ ºÀUÀgÀt’¸ÀA§A¢ü¹zÀAvÉ ¢°èAiÀÄ £ÁAiÀÄPÀgÀÄUÀ¼ÀÄ £ÁAiÀÄPÀvÀézÀ §zÀ¯ÁªÀuÉ §AiÀĹzÁUÀ gÁdåzÀ PÉ®ªÀÅ ¸Áé«ÄfÃUÀ¼ÀÄ ¨ÉA§® ¤AvÀªÀÅ EzÀÄ ¸Áé«Äfà ¯ÉÃ¥ÀPÉÌ PÉÊUÀ£ÀßrAiÀiÁVzÉ. ¥ÀævÁ¥ï ¹AºÀ ¸Ágï F §UÉÎV£À «µÀAiÀÄUÀ½UÉ ZÀZÉðAiÀÄ£ÀÄß ¸ÁéUÀw¹, ¥ÀgÀ «gÉÆÃzsÀUÀ¼À£ÀÄß ©A©ü¹ ªÀiÁ»w ¤Ãr JAzÀÄ ¤ªÀÄä°è £Á£ÀÄ ¥Áæyð¹PÉƼÀÄîvÉÛãÉ.

 39. Omkar says:

  Pratap simha, You have crossed all barriers. i have had read lot of your articles & appreciated.But, this article shows your immeturity in writing skills.And Blaming Holy Saint & Questioning like this?

  If you related to publishing House,you became Hitler to comment like this! This will lead you to different path!

  Iam totally diagree with you & condemn such articles….Shame on you ..you are targetting a Holy Saint!!!

  Before writing something against a Holy saint ..First You introspect yourself!

 40. shruthi says:

  Arrogaood at times Pratap Simha, but not always.Well you may be a thorough nationalist but has to come a long way to be a mature journalist

 41. shruthi says:

  what you said is correct

 42. shruthi says:

  but arrogance is good always.you are thorough nationalist but not a mature journalist

 43. deepak says:

  Hats off to your way of presentation and graceful use of kannada but please use it for spreading our culture and any other knowledge you have

 44. ಸರಿಯಾದ ಪ್ರಶ್ನೆಯನ್ನೇ ಸ್ವಾಮೀಜಿಯವರಲ್ಲಿ ಕೇಳಿದ್ದೀರಿ. ಇಂಥಹ ಲೇಖನ ನಿಮ್ಮಿಂದ ಮಾತ್ರ ಬರೆಯಲು ಸಾದ್ಯ.
  ದನ್ಯವಾದಗಳು. ನಿಮ್ಮಿಂದ ಮುಂದೆ ಇಂಥಹ ಬರಹಗಳನ್ನು ನಿರೀಕ್ಷಿಸುತ್ತೆವೆ.

 45. sajnay says:

  Even Mother Teresa accepted donation from dictators,despots like ‘baby doc’ duvalier in Haiti and others.does that demean her achievements?

 46. Balachandra Bhat says:

  Dear Pratap,
  ನಿಮ್ಮ ‘ರಾಷ್ಟ್ರೀಯತೆ’ ಯ ದ್ರಷ್ಟಿಕೊನವನ್ನು ನಾವು ಗೌರವಿಸುತ್ತೇವೆ. ನೀವು ಎಲ್ಲ ಧರ್ಮಗಳ grey area ಗಳ ಬಗ್ಗೆ ಬರೆಯುವದು ಸಮಂಜಸವಾಗಿಯೇ ಇದೆ. ಆದರೆ ನಿಮ್ಮ ಲೇಖನ ಯಾಕೆ ಬರೆ ಶ್ರೀಗಳ ಬಗ್ಗೆ ಮಾತ್ರ ವಿವರಿಸಿದೆ?ನೀವು ಹೇಳಿದಂತೆ duplicity of Hindu Sages ಬಗ್ಗೆ ನೀವು ಲೇಖನವನ್ನು ಬರೆದಿದ್ದರೆ, ಕರ್ನಾಟಕ ಅಥವಾ ಭಾರತದಲ್ಲಿರುವ ಎಲ್ಲ ಮಠಗಳ ಅವ್ಯವಹಾರ, ಹಾಗೂ ಪಾಲನೆಯಲ್ಲಿರುವ ಜಾತಿ ವ್ಯವಸ್ತೆಯ ಬಗ್ಗೆ ಬರೆದಿದ್ದರೆ ಇನ್ನೂ ಸಮಂಜಸವಾಗಿರುತ್ತಿತ್ತು. ಉಡುಪಿಯ ಶ್ರೀಗಳು ಒಬ್ಬರಲ್ಲ, ಅವರಂತೆ ಅಥವ ಅವರಿಗಿಂತ ಹೆಚ್ಚಾಗಿ ಮುಖವಾದ ಧರಿಸಿದವರು ಬಹಳಷ್ಟು ಜನ ಇದ್ದಾರೆ. ಹಾಗೆ ನೋಡಿದರೆ ಉಡುಪಿಯ ಸ್ವಾಮಿಗಳು ರಾಜಕೀಯದಲ್ಲಿ ಮೂಗು ತೋರಿಸುವದು, ರಾಡಿಯಾಗೆ clean chit ನೀಡಿರುವದು ನೈತಿಕವಾಗಿ ತಪ್ಪೇ. ಅದು ಅವರ ಅಜ್ನಾನವೂ ಆಗಿರಬಹುದು ಅಥವಾ ಸ್ವಾರ್ಥವೂ ಇರಬಹುದು. ಆದರೆ ಭಾರತೀಯ ಪ್ರಜೆಯಾಗಿ ಅವರಿಗೆ ಮಾತನಾಡುವ ಹಕ್ಕು ಇದ್ದೆ ಇದೆ. ಅವರು ಹಾಗೆ ಮಾತನಾಡಬಾರದು ಎಂದು ಹೇಳಲು ನಿಮಗೇನು ಹಕ್ಕಿದೆ? ಅವರ ಹೇಳಿಕೆಗಳಿಂದ ಅವರ ತೂಕ ಕಡಿಮೆಯಾಯಿತು ಅಷ್ಟೇ. ಅಲ್ಲದೆ ಕಾನೂನಿನ ಪರೀದಿಯಲ್ಲಿ ಅವರು ಮೊಸವೆಸಗಿದ್ದರೆ, ಅದನ್ನು ನೀವು ಬರೆದಿದ್ದರೆ ಇನ್ನೂ ಸಮಂಜಸವಾಗಿರುತ್ತಿತ್ತು.ಆದರೆ ಕಾನೂನಿನ ಕಟ್ಟಳೆಯೊಳಗೆ ತಪ್ಪೆಸಗಿದ ಬಹಳಷ್ಟು ಜನ ಸ್ವಾಮೀ ವಲಯದಲ್ಲೇ ಇರುವಾಗ ಇವರ ಬಗ್ಗೆ ಮಾತ್ರ ಇಷ್ಟುದ್ದವಾಗಿ ಎರಡೆರಡು ಬಾರಿ ಹೇಗೆ ಬರೆದಿರಿ?
  ಇನ್ನು ನೈತಿಕತೆಯ ಬಗ್ಗೆ ಬರೋಣ.ಸ್ವಾಮಿಗಳು ನೈತಿಕವಾಗಿ ತಪ್ಪೆಸಗಿದ್ದಾರೆ ನಿಜ. ಅದೆಷ್ಟು ಮಂದಿ ನೈತಿಕವಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿದ್ದಾರೆ ಹೇಳಿ? ನಿಮ್ಮ ವಿಷಯವನ್ನೇ ತೆಗೆದುಕೊಳ್ಳಿ. ಒಂದು ಸಲ introspection ಮಾಡಿಕೊಳ್ಳಿ. ನೀವು ಬರೆದಿರುವ ಅದೆಷ್ಟೋ ಲೇಖನಗಳು ಅಂತರ್ಜಾಲದಿಂದ ಜಾಲಾಡಿ ತೆಗೆದಿದ್ದು ಎಂದು ನೆನಪಿದೆಯೇ?ಭಗತ್ ಸಿಂಗ್ ಬರೆದ ಲೇಖನವನ್ನೇ ತೆಗೆದುಕೊಳ್ಳಿ. ಆತ ಒಬ್ಬ communist ಅಲ್ಲ ಎಂದು ಬರೆದ ಲೇಖನವನ್ನು ತಾವು Depine Damodaran ಎಂಬ blogger ನ ಲೇಖನವನ್ನು ditto ಕಾಪಿ ಮಾಡಿದ್ದೆ ಅಲ್ಲವೇ?ಕನ್ನಡ ವಿಶ್ವಸಮ್ಮೇಳನದ ಬಗ್ಗೆ ಬರೆದ ಲೇಖನವು Deccan Herald ನ ಲೇಖನದ copy ಅಲ್ಲವೇ?ಹಾಗೆ ಬರೆದ ಲೇಖನಗಳ ಮೂಲವನ್ನೂ ನೀವು ಬಹಿರಂಗ ಪಡಿಸದೇ ಪ್ರಕಟಿಸುವದು ಪತ್ರಿಕಾಧರ್ಮಕ್ಕೆ ವಿರುದ್ದವಲ್ಲವೇ? ಇದನ್ನೇ ದೊಡ್ಡ issue ಎಂಬಂತೆ ಯಾವುದಾದರೂ ಪತ್ರಿಕೆಯಲ್ಲಿ ನಿಮ್ಮ ಬಗ್ಗೆ ಬರೆದು ಬಿಂಬಿಸಬಹುದೇ? ಇನ್ನು Facebook ನಲ್ಲಿ “If u are expecting me to keep mum on d double speak n’ duplicity of Hindu sages,pls leave my community” ಎಂದು ಹೇಳುವದರ ಮೂಲಕ ಮತ್ತೊಮ್ಮೆ ನಿಮ್ಮ adolescence ನ್ನು ಸಾದರಪಡಿಸಿದಿರಿ. Y do u think those who have different opinions about your article r expecting u to keep mum on duplicity of Hindu sages?
  ನೀವು ಶ್ರೀಗಳ ಬಗ್ಗೆ ಬರೆದುದರ ಆಗ್ಗೆ ನಮಗೆ ಬೇಸರವೆನಿಲ್ಲ. ಆದರೆ ಸಮಗ್ರ ಲೇಖನದಲ್ಲಿ Hindu ಧರ್ಮದಲ್ಲಿನ ಎಲ್ಲ ಧರ್ಮ ಮುಖಂಡರುಗಳ duplicity ಯ ಬಗ್ಗೆ ಚಿತ್ರಣ ನೀಡಬಹುದಿತ್ತು. ಆದರೆ ಇಷ್ಟು ಅಪ್ರಭುದ್ಧವಾದ ಲೇಖನವನ್ನು ನಾವು ನಿರೀಕ್ಷಿರಿರಲಿಲ್ಲ.

 47. Deepak nayak says:

  With All The Respect To The Only Swamiji Whom I Feel like Respecting,

  PRATAP
  You Have Got A Fire To Question
  You Have Got A Fire To Dig In
  You Have Got A Fire Of Logic

  When You Speak… Everything Shuts….

  AND I FEEL FIRE IN MYSELF…….

  THANKS A TON…….

 48. Hayavadana says:

  ದೇಶ ಕಂಡ ಶ್ರೇಷ್ಠಸಂತ, ಮತ್ತು ದಾರ್ಶನಿಕರೆಂದು ಕೇವಲ ವಿಪ್ರಸಮುದಾಯವಷ್ಟೇ ಅಲ್ಲದೆ ವಿಶ್ವದಲ್ಲಿ ವೈಚಾರಿಕ, ನಿಷ್ಪಕ್ಷಪಾತ, ಆವೇಶರಹಿತ ಪ್ರಜ್ಞೆ ಇರುವವರೆಲ್ಲರೂ ಶ್ರೀ ವಿಶ್ವೇಶತೀರ್ಥರನ್ನು ಒಪ್ಪುತ್ತಾರೆ. ಶ್ರೀಗಳಿಗೆ 80ರ ದಶಕದಲ್ಲಿ ಜ್ಞಾನೋದಯವಾಗಿರುವುದಲ್ಲ; ಹೊರತು ಅವರಿಗೆ ವಾಸ್ತವದ ಅರಿವಾಗಿ 40 ವರುಷಗಳು ಸಂದಿವೆ. ಆದ್ದರಿಂದಲೇ ಅವರು ಆ ನಿಟ್ಟಿನಲ್ಲಿ ಗಂಭೀರವಾಗಿ ಪ್ರವೃತ್ತರಾಗಿದ್ದಾರೆ. ಅವರು ಕೇವಲ ವಿಪ್ರಸಮುದಾಯದ ಉದ್ಧಾರಕ್ಕಾಗಿ ಸಂಸ್ಥೆಗಳನ್ನು ಕಟ್ಟಿಲ್ಲ. ಹಿಂದುಳಿದವರ, ಬಡವರ, ಅಶಕ್ತರ ಏಳ್ಗೆಗಾಗಿ, ಉದ್ಧಾರಕ್ಕಾಗಿ ವಸತಿನಿಲಯಗಳನ್ನು, ಶಿಕ್ಷಣಸಂಸ್ಥೆಗಳನ್ನು ಕಟ್ಟಿದ್ದಾರೆ. ಧರ್ಮಶಾಸ್ತ್ರದ ಒಳಗನ್ನು ಸರಿಯಾಗಿ ಅರಿಯದೆ ಹೀನ ಆಚರಣೆಗಳು ಬೆಳೆಯುತ್ತಿವೆ ಎಂಬುದನ್ನು ಮನಗಂಡು, ಆ ನಿಟ್ಟಿನಲ್ಲಿ ಸರಿಯಾದ ಧಾರ್ಮಿಕ ಅರಿವಿಗಾಗಿ ಆಧ್ಯಾತ್ಮಿಕ ಕೇಂದ್ರಗಳನ್ನೂ ನಡೆಸುತ್ತಿದ್ದಾರೆ.
  ನೀವು ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಇರುವುದು ಅಚ್ಚರಿಯಾಗುತ್ತಿದೆ. ಮತ್ತು ಬೇಸರವೂ ಆಗುತ್ತಿದೆ.
  ಪೇಜಾವರ ಶ್ರೀಪಾದರದ್ದು ಹಾಸ್ಯಾಸ್ಪದ ಕಾರ್ಯಕ್ರಮವೆಂದು ಹೇಳುತ್ತೀರಿ. ನಿಮಗೆ ನೇರವಾದ ಪ್ರಶ್ನೆಯೊಂದನ್ನು ಕೇಳುತ್ತೇನೆ ನೀವು ವಿಪ್ರಸಮುದಾಯ ಅಥವಾ ಅದರ ಮುಖಂಡರಿಂದ ಪ್ರಾಮಾಣಿಕವಾಗಿ ಬಯಸುವುದಾದರೂ ಏನನ್ನು? ನೀವು ಸಮಾಜವನ್ನು ತಪ್ಪುದಾರಿಗೆಳೆಯುತ್ತಿದ್ದೀರಿ, ಇದು ಸರಿಯೇನು? ಈ ಹಿನ್ನೆಲೆಯಲ್ಲಿ ನಿಮ್ಮನ್ನು, ನಿಮ್ಮ ವಾದಗಳನ್ನು ಸಮಾಜ ಎಷ್ಟುಮಾತ್ರಕ್ಕೆ ನಂಬಬಹುದು?
  ಪೇಜಾವರ ಶ್ರೀಪಾದರು ಹಿಂದೆ ಇದ್ದ ಅಶಾಸ್ತ್ರೀಯ ಪದ್ದತಿಗಳನ್ನು ತೊಡೆಯಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅವರು ಕೇವಲ ಭಾಷಣ ಬಿಗಿಯುತ್ತಿಲ್ಲ; ಸ್ವತಃ ಪ್ರವೃತ್ತರಾಗಿದ್ದಾರೆ. ಈ ಗಂಭೀರ ಪ್ರಯತ್ನದಲ್ಲಿ ಹಾಸ್ಯ ನಿಮಗಾಗಿಯೇ ಹುಟ್ಟಿಕೊಂಡು, ನಿಮಗೆ ಮಾತ್ರ ಕಾಣಿಸುತ್ತಿದೆ! ದಲಿತರ ತಲೆ ಸವರಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬಂತೆ ಬಿಂಬಿಸಿ ಎಂದಿಗೂ ಅವರನ್ನು ವಿಕಾಸಕ್ಕೆ ಬರದಂತೆ ಮಾಡುವ ಕೆಲವು ಬುದ್ಧಿಜೀವಿಗಳೆಂಬ ಹಿತಶತ್ರುಗಳ ಗುಂಪಿಗೆ ತಾವು ಸೇರದಿರಿ. ದಲಿತೋದ್ಧಾರದ ಬಗ್ಗೆ ಪತ್ರ ಬರೆವ ನೀವು ಅದರ ಬಗ್ಗೆ ಜಾಗೃತರಾಗಿದ್ದದ್ದೇ ಆದರೆ ಶೇಕಡಾ ನೂರರಷ್ಟು ಶ್ರೀಗಳಿಗೆ ಬೆಂಬಲ ನೀಡಬೇಕಿತ್ತು. ಶ್ರೀಗಳ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆಯೋ ಇಲ್ಲವೋ- ಸಿಗುತ್ತದೆಯೋ ಇಲ್ಲವೋ? ಸಮಾಜದ ಪ್ರತಿಸ್ಪಂದನೆ ಹೇಗಿದ್ದರೆ ಒಳ್ಳೆಯದು? ಈ ನಿಟ್ಟಿನಲ್ಲಿ ಸಮಾಜವನ್ನು ಹೇಗೆ ನಿರ್ದೇಶಿಸಬೇಕು? ಎಂಬ ಚರ್ಚೆಯನ್ನು ಬಿಟ್ಟು ಅದನ್ನು ಹೇಗೆ ಕೆಡಿಸಬಹುದು ಎಂಬ ದುರುದ್ದೇಶದ ವ್ಯಕ್ತಿನಿಂದನೆಗಿಳಿದಿರುವ ನಿಮ್ಮಂಥವರಿಂದ ಸಮಾಜವಾದರೂ ಏನನ್ನು ನಿರೀಕ್ಷಿಸಬಹುದು?
  ಇನ್ನು, ಶ್ರೀಗಳು ಆರಂಭಿಸಿರುವ ಈ ಹೋರಾಟಕ್ಕೆ ಬ್ರಾಹ್ಮಣಸಮಾಜವೂ ಸೇರಿದಂತೆ ಸಮಾಜದ ಎಲ್ಲರೂ ಕೈಗೂಡಿಸಿದರೆ ಸಾಮಾಜಿಕಸಾಮರಸ್ಯ ಆಗಿಯೇ ಆಗುತ್ತದೆ ಎಂಬುದು ನನ್ನ ಖಚಿತ ಅಭಿಮತ.

 49. Vishnu says:

  article is good..’pejavara srigalu’ avra ootada paddati kuruti already tilisi aagide matte ade prashne kelo avashyakate eetta???

 50. somashekhar says:

  i agree with wat u written

  those ppl who are opposing u were immature
  u r rocking pratap anna