Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮೈನಿಂಗ್ ಮಾಫಿಯಾ, ಮಟ್ಟಹಾಕುವುದಕ್ಕೇಕೆ ಭಯ?

ಮೈನಿಂಗ್ ಮಾಫಿಯಾ, ಮಟ್ಟಹಾಕುವುದಕ್ಕೇಕೆ ಭಯ?

ಕರ್ನಾಟಕದ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಳೆದ ಶನಿವಾರ(Feb 6) ಮಾತಿಗೆ ನಿಂತಿದ್ದರು…

“ನಾನು 18 ಜನರ ತಂಡ ಕಟ್ಟಿಕೊಂಡು ಏಪ್ರಿಲ್-ಮೇ ತಿಂಗಳ ಸುಡು ಬಿಸಿಲಿನಲ್ಲಿ ಬಳ್ಳಾರಿಯ ಬೆಟ್ಟ-ಗುಡ್ಡಗಳನ್ನು ಅಲೆದು 1600 ಪುಟಗಳ ವರದಿ ತಯಾರಿಸಿದೆ. ಒಂದು ಟನ್ ಅದಿರಿಗೆ ಗಣಿ ಮಾಲೀಕರು ನೀಡುವ ರಾಜಸ್ವ ಧನ ಕೇವಲ 22 ರೂ! ಒಂದು ಟನ್ ಅದಿರನ್ನು ಅಗೆದು, ತೆಗೆದು ಲಾರಿಗೆ ತುಂಬಿಸಲು ಹೆಚ್ಚೆಂದರೆ 150 ರೂ.ಗಳಾಗಬಹುದು. ಅದನ್ನು ಬಂದರಿಗೆ ಸಾಗಿಸಿ ಚೀನಾದ ಹಡಗುಗಳಿಗೆ ಲೋಡ್ ಮಾಡಲು, ದಾರಿಯುದ್ದಕ್ಕೂ ನೀಡುವ ಲಂಚ ಎಲ್ಲಾ ಸೇರಿದರೂ ಅತಿಹೆಚ್ಚೆಂದರೆ ಟನ್‌ಗೆ 600-700ರೂಪಾಯಿ ಖರ್ಚಾಗುತ್ತದೆ. ಆದರೆ ಗಣಿ ಧಣಿಗಳಿಗೆ ಸಿಗುವ ಬೆಲೆಯೆಷ್ಟು?

2005, 06, 07ರಲ್ಲಿ ಟನ್‌ಗೆ 7 ಸಾವಿರ ರೂ. ಸಿಗುತ್ತಿತ್ತು!! ಆರು ಚಕ್ರದ ಲಾರಿಗೆ 15-16 ಟನ್ ಲೋಡ್ ಮಾಡಬಹುದು. ಆದರೆ ತುಂಬುವುದು 25 ಟನ್. ಇನ್ನು 10 ಚಕ್ರದ ಲಾರಿಗೆ 25 ಟನ್ ತುಂಬಿಸಬಹುದು. ಲೋಡ್ ಮಾಡುವುದು ಸರಿಸುಮಾರು 50 ಟನ್. ಹೀಗೆ ಓವರ್‌ಲೋಡ್ ಮಾಡಿದರೂ ರಾಜಸ್ವ ಧನ ನೀಡುವುದು ಕ್ರಮವಾಗಿ 15 ಹಾಗೂ 25 ಟನ್‌ಗೆ ಮಾತ್ರ. ಪುಡಿಗಾಸು ನೀಡುವುದರಲ್ಲೂ ಮೋಸ. ಸಂಡೂರಿನ ಜನರ ಗೋಳು ಹೇಳತೀರದು. ದಿನಕ್ಕೆ 10 ಸಾವಿರ ಲಾರಿಗಳು ಸಂಡೂರು ಮೂಲಕ ಮಂಗಳೂರು, ಕಾರವಾರ, ಗೋವಾ ಬಂದರುಗಳತ್ತ, ಅನ್‌ಲೋಡ್ ಮಾಡಿದ ಅಷ್ಟೇ ಸಂಖ್ಯೆಯ ಲಾರಿಗಳು ಸಂಡೂರು ಮೂಲಕ ಬಳ್ಳಾರಿಯತ್ತ ಬರುತ್ತವೆ. ಪ್ರತಿದಿನ ಎಷ್ಟು ಟನ್ ಸಾಗಾಟ ನಡೆಯುತ್ತದೆ, ಅದರಿಂದ ಗಣಿಧಣಿಗಳು ಗಳಿಸುತ್ತಿರುವ ಲಾಭ ಎಷ್ಟು ಎಂದು ಯೋಚನೆ ಮಾಡಿ. ಸರಕಾರಕ್ಕೆ ಬರಬೇಕಾದ ಕೋಟ್ಯಂತರ ರೂ. ಆದಾಯ ಸೋರಿ ಹೋಗುತ್ತಿದೆ, ಕೋಟ್ಯಂತರ ರೂ. ಮೌಲ್ಯದ ಅದಿರು ಲೂಟಿಯಾಗುತ್ತಿದೆ. ಈ ಅಕ್ರಮ ಗಣಿಗಾರರು ಒಂದು ತಲೆಮಾರನ್ನೇ ಹಾಳು ಮಾಡುತ್ತಿದ್ದಾರೆ. ಬಳ್ಳಾರಿಗೆ ಹೋದರೆ 15ರಿಂದ 25ರೊಳಗಿನ ವಯೋಮಾನದ ಯುವಕರು ಮೋಟಾರ್ ಬೈಕ್‌ಗಳಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿರುತ್ತಾರೆ. ಪ್ರತಿಯೊಬ್ಬರ ಕೈಗಳಲ್ಲೂ ಮೊಬೈಲ್ ಫೋನ್‌ಗಳಿರುತ್ತವೆ. ಯಾರಾದರೂ ಅಪರಿಚಿತ ವ್ಯಕ್ತಿಗಳು ಬಳ್ಳಾರಿಗೆ ಕಾಲಿಟ್ಟರೆ ಕೂಡಲೇ ಮಾಹಿತಿ ಕೊಡುವುದಷ್ಟೇ ಅವರ ಕೆಲಸ. ಶಾಲೆ-ಕಾಲೇಜು ಬಿಟ್ಟು ಗಣಿ ಮಾಲೀಕರಿಗೆ ಇನ್‌ಫಾರ್ಮರ್‍ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಗಣಿ ಲೂಟಿ ಮುಂದುವರಿದರೆ ಇನ್ನು ೧೦ ವರ್ಷಗಳಲ್ಲಿ ಎಲ್ಲವೂ ಬರಿದಾಗುವ ಅಪಾಯವಿದೆ. ಬಳ್ಳಾರಿಯಂತೂ ಹೋಯಿತು ಬಿಡಿ, ಸರಕಾರ ಇನ್ನಾದರೂ ಎಚ್ಚೆತ್ತು ಕ್ರಮ ಕೈಗೊಂಡರೆ ಕನಿಷ್ಠ ತುಮಕೂರು, ಚಿತ್ರದುರ್ಗಗಳನ್ನಾದರೂ ಉಳಿಸಿಕೊಳ್ಳಬಹುದು……”

ಹೀಗೆ ಅಕ್ರಮ ಗಣಿಗಾರಿಕೆಯ ರಾಕ್ಷಸ ರೂಪವನ್ನು ಅವರು ತೆರೆದಿಡುತ್ತಿದ್ದರೆ ನೆರೆದಿದ್ದವರ ಮುಖದಲ್ಲಿ ದಿಗ್ಭ್ರಮೆ, ಬೇಸರ. ಛೇ ಎಂಬ ಅಸಹಾಯಕತೆ, ಹತಾಶೆ….

ಬಳ್ಳಾರಿಯನ್ನು ಲೂಟಿ ಮಾಡುತ್ತಿರುವುದು ಯಾರು? ಯಾರ ಆಡಳಿತದಲ್ಲಿ ಇದೆಲ್ಲಾ ನಡೆಯುತ್ತಿದೆ? ನರಸಿಂಹ ರಾವ್ ಸರಕಾರ ತೀನ್‌ಬೀಘಾ ಎಂಬ ಗ್ರಾಮವನ್ನು ಬಾಂಗ್ಲಾದೇಶಕ್ಕೆ ಭೋಗ್ಯಕ್ಕೆ ಕೊಟ್ಟಾಗ ‘ಭಾರತಾಂಬೆಯನ್ನೇ ಅಡವಿಟ್ಟ ಸರಕಾರ’ ಎಂದು ಬೊಬ್ಬೆ ಹಾಕಿ ರಾಷ್ಟ್ರೀಯ ವಿವಾದವನ್ನಾಗಿ ಪರಿಣಮಿಸಿದ್ದ ಬಿಜೆಪಿ ಈಗ ಮಾಡುತ್ತಿರುವುದೇನು? ಬಳ್ಳಾರಿಯಲ್ಲಿ ನಡೆಯುತ್ತಿರುವುದೂ ಭಾರತ ಮಾತೆಯ ಲೂಟಿಯೇ ಅಲ್ಲವೆ? ಲೂಟಿ ಮಾಡುತ್ತಿರುವವರು ಬಿಜೆಪಿ ಸರಕಾರದಲ್ಲೇ ಇರುವ ಘನತೆವೆತ್ತ ಮೂವರು ಮಂತ್ರಿವರ್ಯರೇ ಅಲ್ಲವಾ? ಸಂತೋಷ್ ಹೆಗ್ಡೆಯವರು ಬಳ್ಳಾರಿಯನ್ನು ಸುತ್ತಾಡಿ ೧೬೦೦ ಪುಟಗಳ ಸುದೀರ್ಘ ವರದಿ ಹಾಗೂ Action-to-be-taken  ರಿಪೋರ್ಟ್ (ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿ) ಕೊಟ್ಟಿದ್ದು 2008, ಡಿಸೆಂಬರ್ 18ರಂದು. ಆದರೆ ಯಡಿಯೂರಪ್ಪನವರ ಸರಕಾರ ಮಾಡಿದ್ದೇನು? ವರದಿ ಕೊಟ್ಟು ವರ್ಷ ಕಳೆದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲವೇಕೆ? ಅಂತಹ ಅಧಿಕಾರ, ಆತ್ಮಸ್ಥೆರ್ಯ ಆಳುವ ದೊರೆ ಯಡಿಯೂರಪ್ಪನವರಿಗಿಲ್ಲವೆ? ಅದಿರಲಿ, ಪ್ರಜಾಪ್ರಭುತ್ವಕ್ಕೆ ‘ಮಾಫಿಯಾ’ವನ್ನು ಮಟ್ಟಹಾಕುವ ತಾಕತ್ತೇ ಇಲ್ಲವೆ?

ಈ ಲಾಬಿ, ಮಾಫಿಯಾಗಳು ಭಾರತದಲ್ಲಿ ಮಾತ್ರ ಕಂಡುಬರುವ, ಬರುತ್ತಿರುವ ಸಮಸ್ಯೆ ಎಂದು ಭಾವಿಸಬೇಡಿ!

ಪ್ರಜಾಪ್ರಭುತ್ವದ ಮೊದಲ ಪ್ರಯೋಗ ನಡೆದಿದ್ದು ಗ್ರೀಸ್‌ನಲ್ಲಿ. 2000 ವರ್ಷಗಳ ಹಿಂದೆ. ಆಗಲೂ ಮಾಫಿಯಾ ಇತ್ತು. ಏಷ್ಯಾದ ರಾಷ್ಟ್ರಗಳೊಂದಿಗೆ ಸಂಭಾರ ಪದಾರ್ಥಗಳು, ಕುದುರೆಗಳ ವ್ಯಾಪಾರ ನಡೆಸುತ್ತಿದ್ದ ಗ್ರೀಸ್‌ನ ವರ್ತಕರು(ಟ್ರೇಡರ್‍ಸ್) ಜನಪ್ರತಿನಿಧಿಗಳನ್ನು ನಿಯಂತ್ರಣ ಮಾಡುತ್ತಿದ್ದರು. ಉಳಿದ ರಾಷ್ಟ್ರಗಳಲ್ಲಿ  ಶ್ರೀಮಂತರು ಆಳುವವರು ಯಾರು ಎಂಬುದನ್ನು ನಿರ್ಧಾರ ಮಾಡುತ್ತಿದ್ದರು. ಬ್ರಿಟನ್ ಕೂಡ ಇಂಥದ್ದೊಂದು ಲಾಬಿ, ಮಾಫಿಯಾದಿಂದ ಮುಕ್ತವಾ ಗಿರಲಿಲ್ಲ. ಅಲ್ಲಿನ ಭೂ ಮಾಲೀಕರು Knightsಗಳನ್ನು (ಸೈನಿಕರು) ಇಟ್ಟುಕೊಂಡಿದ್ದರು. ನಮ್ಮ ಬಿಹಾರದ ಭೂ ಮಾಲೀಕರ ‘ರಣವೀರ ಸೇನೆ’ ಯಾವ ಕೆಲಸವನ್ನು ಮಾಡುತ್ತದೆಯೋ Knights ಅದೇ ಕೆಲಸ ಮಾಡುತ್ತಿದ್ದರು. ಇಂತಹ ಪರಿಸ್ಥಿತಿ ಬದಲಾಗಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆಯತೊಡಗಿತು. ಹಾಗಾಗಿ ‘ಡೆಮಾಕ್ರಸಿ’ ಕಾಲ ಕ್ರಮೇಣ  ಒಂದು ನಿರ್ದಿಷ್ಟ ರೂಪ ಪಡೆದುಕೊಳ್ಳುತ್ತಾ ಬಂತು. ಒಂದು ವ್ಯವಸ್ಥೆಯಾಗಿ ಹೊರಹೊಮ್ಮಿತು. ಥಾಮಸ್ ಹಾಬ್ಸ್, ಜಾನ್ ಲಾಕ್, ಜಾನ್ ರಾಲ್ ಮುಂತಾದವರು ಇದಕ್ಕೊಂದು ಸ್ಪಷ್ಟ ರೂಪ ಕೊಡಲು ಪ್ರಯತ್ನಿಸಿದರು. ಪ್ರಜಾಪ್ರಭುತ್ವವೆಂದರೆ “Social contract” ಎಂದರು. ಅಂದರೆ ನಾವು ನಾವೇ ಮಾಡಿಕೊಂಡ ಒಪ್ಪಂದವೇ ಪ್ರಜಾಪ್ರಭುತ್ವ. ಮೊದಲು Jungle Rule ಇತ್ತು. ಅಡವಿಯ ನಿಯಮವೇನು? ಬಲವಿದ್ದವನು ಆಳುತ್ತಿದ್ದ, ಬೇಕಾದಷ್ಟು ಕೂಡಿಹಾಕಿಕೊಳ್ಳುತ್ತಿದ್ದ, ಮನಸಿಗೆ ಬಂದಷ್ಟು ಹೆಂಡತಿಯರನ್ನು ಹೊಂದುತ್ತಿದ್ದ, ಇತರರ ಹೆಣ್ಣು-ಹೊನ್ನು-ಮಣ್ಣನ್ನೂ ಬಲಪ್ರಯೋಗ ದಿಂದ ತನ್ನ ವಶ ಮಾಡಿಕೊಳ್ಳುತ್ತಿದ್ದ. ಯಾವನ ಬಳಿ ತಾಕತ್ತಿದೆಯೋ ಅವನೇ ರಾಜ, ಅವನೇ ಪಾಳೇಗಾರ. ಇಂತಹ ಪರಿಸ್ಥಿತಿಯಲ್ಲಿ ರೂಪುಗೊಂಡಿದ್ದೇ ಪ್ರಜಾಪ್ರಭುತ್ವ. ನೀನು ನನ್ನ ತಂಟೆಗೆ ಬರಬೇಡ, ನಾನು ನಿನ್ನ ಉಸಾಬರಿಗೆ ಬರುವುದಿಲ್ಲ. ಬಡವ-ಶ್ರೀಮಂತ ಇಬ್ಬರಿಗೂ ದುಡಿಯುವ, ಬದುಕುವ ಸಮಾನ ಹಕ್ಕುಗಳನ್ನು ಕೊಟ್ಟುಕೊಂಡ ವ್ಯವಸ್ಥೆ ಡೆಮಾಕ್ರಸಿ ಆಗಿತ್ತು. ಅದಕ್ಕೇ ಅದನ್ನು “Social contract theory” ಎಂದಿದ್ದು. ಇಂಥದ್ದೊಂದು ವ್ಯವಸ್ಥೆ ಬಂತಾದರೂ ಕಾಲಕಾಲಕ್ಕೆ ಸವಾಲುಗಳೂ ಎದುರಾಗತೊಡಗಿದವು. ಅವುಗಳೇ ಈ ಲಾಬಿ ಗ್ರೂಪ್ಸ್. ಕೆಲ ಲಾಬಿಗಳಿಗೆ ಪ್ರಜಾಪ್ರಭುತ್ವ ತಾತ್ಕಾಲಿಕವಾಗಿ ಮಣಿದಿದ್ದೂ ಇದೆ. ಕಳೆದ ತಿಂಗಳು ಕೊಪನ್‌ಹೇಗನ್‌ನಲ್ಲಿ ನಡೆದ ಹವಾಮಾನ ಬದಲಾವಣೆ ಮೇಲಿನ ಜಾಗತಿಕ ಶೃಂಗಸಭೆಯನ್ನೇ ತೆಗೆದುಕೊಳ್ಳಿ. ಅಲ್ಲಿ ಕೆಲಸ ಮಾಡಿದ್ದು “Industrial Lobby”. ಆ ಲಾಬಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರೇ ತಲೆಬಾಗಬೇಕಾಯಿತು. Birth of democracyಯಿಂದ ಹಿಡಿದು ಇಲ್ಲಿಯವರೆಗೂ ಒಂದಿಲ್ಲೊಂದು ಲಾಬಿಗಳು ಪ್ರಭಾವ ಬೀರಿದ್ದು, ನಿಯಂತ್ರಣ ಸಾಧಿಸಿದ್ದೂ ಇದೆ. ಇದರ ವಿರುದ್ಧ ಸಾಮಾಜಿಕ ಹೋರಾಟಗಳು ಆರಂಭವಾಗಿದ್ದಿದೆ. ಭಾರತದಲ್ಲಿ ಮೊದಲು ನಕ್ಸಲಿಸಂ ತಲೆಯೆತ್ತಿದ್ದು ಪಶ್ಚಿಮ ಬಂಗಾಳದಲ್ಲಿ. ಅದರ ಬೆನ್ನಲ್ಲೇ ಆಂಧ್ರದಲ್ಲೂ ಕಾಣಿಸಿಕೊಂಡಿತು. ಆದರೆ ಕಾರಣಗಳು ಮಾತ್ರ ವಿಭಿನ್ನವಾಗಿದ್ದವು. ಪಶ್ಚಿಮ ಬಂಗಾಳದಲ್ಲಿ ಜಮೀನುದಾರಿ ಪದ್ಧತಿ ನಕ್ಸಲಿಸಂಗೆ ಕಾರಣವಾದರೆ ಆಂಧ್ರದಲ್ಲಿ ‘ಬಡ್ಡಿಮಕ್ಕಳ’(Money Laundering) ದೌರ್ಜನ್ಯದ ವಿರುದ್ಧ ಎದ್ದ ಧ್ವನಿಯೇ ನಕ್ಸಲಿಸಂ. ನಮ್ಮಲ್ಲಿ ಈ ಜಮೀನುದಾರಿ ಪದ್ಧತಿಯನ್ನು ಹುಟ್ಟುಹಾಕಿದ್ದೇ ಬ್ರಿಟಿಷರು. ಅಂದರೆ ತೆರಿಗೆ ಸಂಗ್ರಹವನ್ನು ಸುಲಭ ಹಾಗೂ ಸರಳ ಮಾಡಿಕೊಳ್ಳುವುದಕ್ಕಾಗಿ ಬ್ರಿಟಿಷರು ಜಮೀನುದಾರರನ್ನು ಸೃಷ್ಟಿಸಿದ್ದರು. ಅದು ಕಾಲಾಂತರದಲ್ಲಿ ದೊಡ್ಡ ದೌರ್ಜನ್ಯಕ್ಕೆ ಎಡೆ ಮಾಡಿಕೊಟ್ಟಿತು. ಜ್ಯೋತಿ ಬಸು ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಭೂ ಸುಧಾರಣೆ ಜಾರಿಗೆ ತಂದಿತು.  ಒಂದೇ ಒಂದು ಕಾನೂನಿನ ಮೂಲಕ ಜಮೀನುದಾರಿ ಪದ್ಧತಿಯಂತಹ ದೊಡ್ಡ ಸಮಸ್ಯೆಯನ್ನೇ ಹೋಗಲಾಡಿಸಬಹುದಾದರೆ ಇನ್ನು ಬಳ್ಳಾರಿಯ ಮೈನಿಂಗ್ ಮಾಫಿಯಾವನ್ನು ಕಾನೂನಿನ ಮೂಲಕ ಮಟ್ಟಹಾಕುವುದಕ್ಕಾಗುವುದಿಲ್ಲವೆ?

ಪ್ರಜಾಪ್ರಭುತ್ವಕ್ಕೆ ಇಂತಹ ಲಾಬಿ, ಮಾಫಿಯಾಗಳು ಅಪರಿ ಚಿತವೇನಲ್ಲ. ಅಂತಹ ಎಷ್ಟೋ ಮಾಫಿಯಾ, ಲಾಬಿಗಳನ್ನು ಕಾನೂನಿನ ಮೂಲಕ ಮಟ್ಟಹಾಕಿದೆ. ಅಮೆರಿಕ ದೇಶ ಷಿಕಾಗೋ ಮಾಫಿಯಾವನ್ನು ಮಟ್ಟಹಾಕಲು 100 ವರ್ಷ ತೆಗೆದುಕೊಂಡಿರಬಹುದು. ‘ಗಾಡ್‌ಫಾದರ್’ ಸೀರಿಸ್‌ನಿಂದ 1994ರಲ್ಲಿ ಬಿಡುಗಡೆಯಾದ ‘Pulp Fiction’ ಚಿತ್ರದವರೆಗೂ ಮಾಫಿಯಾ ಹೇಗೆ ಕಾರ್ಯನಿರ್ವಹಿಸುತ್ತಿತ್ತು, ಎಷ್ಟು ಭಯಾನಕವಾಗಿತ್ತು, ಆಳುವ ಸರಕಾರವನ್ನೇ ಹೇಗೆ ನಲುಗಿಸಿತ್ತು ಎಂಬುದನ್ನು ಎಳೆಎಳೆಯಾಗಿ ತೋರಿಸಿದ್ದಾರೆ. ಅದನ್ನು ಮಟ್ಟಹಾಕುವುದಕ್ಕಾಗಿ ಪ್ರಾರಂಭವಾಗಿದ್ದೇ CIA, FBI. ಕೊನೆಗೂ ಸಮಸ್ಯೆಯನ್ನು ಪರಿಹರಿಸಿದರು. ಬ್ರೆಝಿಲ್‌ನಲ್ಲಿ ಶುಗರ್ ಕೇನ್-ಇಥೆನಾಲ್ ಲಾಬಿ ಹಾಗೂ ಫುಟ್‌ಬಾಲ್ ಲಾಬಿಗಳದ್ದೇ ದರ್ಬಾರು ನಡೆಯುತ್ತಿತ್ತು. ರಾಷ್ಟ್ರೀಯ ರಜಾದಿನವನ್ನು ಯಾವತ್ತು ಘೋಷಣೆ ಮಾಡಬೇಕು ಎಂಬುದನ್ನು ಫುಟ್‌ಬಾಲ್ ಲಾಬಿ ನಿರ್ಧರಿಸುತ್ತಿತ್ತು. ಕೊನೆಗೆ ಅಲ್ಲಿನ ಸರಕಾರ ಕಾನೂನು ತರುವ ಮೂಲಕ ಕಬ್ಬು-ಸಕ್ಕರೆ ಉತ್ಪಾದನೆ-ಮಾರಾಟವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಹಾಗೆ ಸಕ್ಕರೆ ಕ್ಷೇತ್ರದ ಮಾಫಿಯಾವನ್ನು ತುಳಿಯಿತು. ಇತ್ತ ಜಿಲ್ಲೆಗೊಂದು ಫುಟ್ಬಾಲ್ ತಂಡವನ್ನು ರಚಿಸಿಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಫುಟ್ಬಾಲ್ ಲಾಬಿಗೆ ಕಡಿವಾಣ ಹಾಕಿತು. ಆಗ ಬ್ರೆಝಿಲ್‌ನಲ್ಲಿ ಇದ್ದಿದ್ದು ರಾಷ್ಟ್ರೀಯ  ತಂಡವೊಂದೇ. ನಮ್ಮ ಐಪಿಎಲ್ ಥರ ಜಿಲ್ಲಾ ಮಟ್ಟದಲ್ಲಿ ಕ್ಲಬ್ ಫುಟ್ಟಾಲ್ ಟೀಮ್‌ಗಳನ್ನು ರಚಿಸಿಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಏಕಸ್ವಾಮ್ಯವನ್ನು ಒಡೆಯಿತು.

No lobby is above law.

ಭಾರತದಲ್ಲೂ ಅಂಥ ದಿಟ್ಟ, ದೂರದೃಷ್ಟಿಯುತ ಕ್ರಮಗಳನ್ನು ಕೈಗೊಂಡು ಲಾಬಿ, ಮಾಫಿಯಾಗಳನ್ನು ಮಟ್ಟಹಾಕಿದ ಉದಾಹರಣೆ ಗಳು ಸಾಕಷ್ಟಿವೆ. ಅಮಿತಾಭ್ ಬಚ್ಚನ್ ಅವರ ಹಳೆಯ ಹಿಂದಿ ಚಿತ್ರಗಳನ್ನು ನೋಡಿ. ಗೋಲ್ಡ್ ಮಾಫಿಯಾ ಹೇಗೆ ನಮ್ಮ ದೇಶವನ್ನು ಕಾಡುತ್ತಿತ್ತು ಎಂಬುದು ತಿಳಿಯುತ್ತದೆ. ನರಸಿಂಹರಾವ್ ಪ್ರಧಾನಿಯಾದ ಕೂಡಲೇ ಒಬ್ಬ ವ್ಯಕ್ತಿ ೫ ಕೆಜಿಯಷ್ಟು ಚಿನ್ನವನ್ನು ಮೈಮೇಲೆ ಹಾಕಿ ಕೊಂಡು ಬರಬಹುದು ಎಂಬ ನಿಯಮ ಜಾರಿಗೆ ತಂದರು. (A person can carry 5 kgs of Gold on his/her body) ಬೆಳಗಾಗು ವಷ್ಟರಲ್ಲಿ ಗೋಲ್ಡ್ ಸ್ಮಗ್ಲರ್‌ಗಳು ಪಾಪರ್ ಆಗಿಬಿಟ್ಟಿದ್ದರು! ಒಂದು ಕಾಲದಲ್ಲಿ ‘ಎಜುಕೇಶನ್ ಲಾಬಿ’ ಕರ್ನಾಟಕ ಸರಕಾರವನ್ನು ಆಟ ಆಡಿಸುತ್ತಿತ್ತು. ಯಾರೇ ಮುಖ್ಯಮಂತ್ರಿಯಾದರೂ ಖಾಸಗಿ ಮೆಡಿಕಲ್-ಇಂಜಿನಿಯರಿಂಗ್ ಕಾಲೇಜು ಮಾಲೀಕರಿಗೆ ತಲೆಬಾಗ ಬೇಕಿತ್ತು. ನಾವು ಯಾರನ್ನು ಬೇಕಾದರೂ ಅಧಿಕಾರದಿಂದ ಕೆಳಗುರುಳಿ ಸುತ್ತೇವೆ ಎಂಬಂತೆ ಮೆರೆಯುತ್ತಿದ್ದರು. ಜನತಾ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಿ. ಸೋಮಶೇಖರ್ ಹಾಗೂ ತದನಂತರ ವೀರಪ್ಪ ಮೊಯಿಲಿ ಈ ಇಬ್ಬರು ಸಿಇಟಿ ಜಾರಿಗೆ ತರುವ ಮೂಲಕ ‘ಎಜುಕೇಶನ್ ಲಾಬಿ’ಯ ಸದ್ದಡಗಿಸಿದರು. ಸೋಮಶೇಖರ್ ಅವರಂತಹ ಮಂತ್ರಿಗಳಿಲ್ಲದ ಕಾರಣ ಕಳೆದ ಐದಾರು ವರ್ಷಗಳಲ್ಲಿ ಮತ್ತೆ ‘ಎಜುಕೇಶನ್ ಲಾಬಿ’ ಬಾಲ ಬಿಚ್ಚಿದೆ ಎಂಬುದು ಬೇರೆ ಮಾತು. ಆದರೆ ಇಚ್ಛಾಶಕ್ತಿಯಿದ್ದರೆ ಯಾವ ಲಾಬಿಯನ್ನೂ ತುಳಿಯಬಹುದು ಎಂಬುದಕ್ಕೆ ಇವರು ಮಾದರಿ. ಇನ್ನು ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾದಾಗ ಜಾರಿಗೆ ತಂದ ‘ಭೂಮಿ’ ಯೋಜನೆಯನ್ನು ನೆನಪಿಸಿಕೊಳ್ಳಿ. ಒಂದು ಪಹಣಿ, ಪಟ್ಟಾದ ಫೋಟೋ ಕಾಪಿ ಪಡೆದುಕೊಳ್ಳಬೇಕಾದರೆ ಹರಸಾಹಸ ಮಾಡಬೇಕಿತ್ತು, ತಹಸೀಲ್ದಾರ್ ಕಚೇರಿಯ ತಿಮಿಂಗಿಲಗಳಿಗೆ ತಿನ್ನಿಸಬೇಕಿತ್ತು. ಎಸ್.ಎಂ. ಕೃಷ್ಣ ‘ಭೂಮಿ’ ಪ್ರಾಜೆಕ್ಟ್‌ನಡಿ ಭೂ ದಾಖಲೆಗಳ ಗಣಕೀಕರಣ ಮಾಡಿಸಿದರು. ಸಣ್ಣ ಶುಲ್ಕ ನಿಗದಿ ಮಾಡಿ, ಕ್ಷಣ ಮಾತ್ರದಲ್ಲಿ ಫೋಟೋ ಕಾಪಿ ಕೈಸೇರುವಂತೆ ಮಾಡಿದರು. ಆಗ ಬನ್ನಿ- ಈಗ ಬನ್ನಿ, ಆಮೇಲೆ ಬನ್ನಿ, ನಾಳೆ ಬನ್ನಿ ಎಂದು ಸತಾಯಿಸುವುದಕ್ಕೆ, ಲಂಚಕ್ಕೆ ಕಡಿವಾಣ ಬಿತ್ತು. ಹೀಗೆ Technology solved the problem.. ‘ಕರ್ನಾಟಕ ಬಿವರೇಜಸ್ ಕಾರ್ಪೊರೇಶನ್’ ಕೂಡ ಸ್ಥಾಪನೆ ಮಾಡಿದ ಕೃಷ್ಣ  ‘ಲಿಕ್ಕರ್ ಲಾಬಿ’ಯನ್ನೂ ಶಾಶ್ವತವಾಗಿ ಮಟ್ಟಹಾಕಿದರು. 10 ವರ್ಷಗಳ ಹಿಂದೆ ಕರ್ನಾಟಕ ಸರಕಾರದ ಮೂಗುದಾರ ಹಿಡಿದುಕೊಂಡಿದ್ದ ಮಾಲಿಕಯ್ಯ ಗುತ್ತೇದಾರ್, ಆದಿಕೇಶವಲು, ಹರಿಖೋಡೆ ಈಗ ಎಲ್ಲಿದ್ದಾರೆ? ನಮ್ಮಲ್ಲೇ ಇಂತಹ ಉದಾಹರಣೆಗಳಿರುವಾಗ ಬಳ್ಳಾರಿಯ ಗಣಿ ಕಳ್ಳರನ್ನು ಮಟ್ಟಹಾಕಲು ಏಕೆ ಸಾಧ್ಯವಾಗುವುದಿಲ್ಲ? ಏಕೆ ಒಂದು ಕಾನೂನು ತಂದು ಗಣಿಗಾರಿಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು, ಸೂಕ್ತ ತೆರಿಗೆ ಹಾಕಲು ಸಾಧ್ಯವಿಲ್ಲ? ಯೂನಿವರ್ಸಿಟಿಗಳಲ್ಲಿ ಕಾಲಹರಣ ಮಾಡುತ್ತಿರುವ ಪೊಲಿಟಿಕಲ್, ಸೋಷಿಯಲ್ ಸೈಂಟಿಸ್ಟ್‌ಗಳು ಇಂತಹ ಲೂಟಿಯ ಬಗ್ಗೆ ಏಕೆ ಸಂಶೋಧನೆ ನಡೆಸಬಾರದು? ಸಮಾಜಕ್ಕೆ ಅರಿವು, ಸರಕಾರಕ್ಕೆ ಮಾರ್ಗದರ್ಶನ ನೀಡಲು ಏಕೆ ಪ್ರಯತ್ನಿಸ ಬಾರದು? ಅಗೆದು, ತೆಗೆದು ಚೀನಾಕ್ಕೆ ಕಳುಹಿಸಿ ಯಾರೋ ದುಡ್ಡು ಮಾಡಿಕೊಳ್ಳಲು ಅವಕಾಶ ನೀಡುವ ಬದಲು ನಮ್ಮಲ್ಲೇ ಉಕ್ಕು ಸ್ಥಾವರ (ಸ್ಟೀಲ್ ಪ್ಲಾಂಟ್) ಸ್ಥಾಪಿಸಬಾರದೇಕೆ? ಸ್ಥಳೀಯರಿಗೆ ಕೆಲಸವೂ ಸಿಗುತ್ತದೆ, ಖನಿಜ ಸಂಪತ್ತೂ ದೇಶದಲ್ಲೇ ಉಳಿಯುತ್ತದೆ, ದೇಶವಾಸಿ ಗಳಿಗೆ ಉಪಯೋಗಕ್ಕೆ ಬರುತ್ತದೆ… ಅಲ್ಲವೆ?

Law is intention, Implementation is action ಎಂಬ ಮಾತು ಯಡಿಯೂರಪ್ಪನವರಿಗೆ ಗೊತ್ತೇ ಇಲ್ಲವೆ? ಅದನ್ನು ಆದಷ್ಟು ಬೇಗ ಅರ್ಥಮಾಡಿಕೊಂಡು, ಕಾರ್ಯಪ್ರವೃತ್ತರಾಗದಿದ್ದರೆ ಬಾಲ್ದೋಟ, ಸಂತೋಷ್ ಲಾಡ್, ಅನಿಲ್ ಲಾಡ್, ಆರ್.ವಿ. ದೇಶಪಾಂಡೆ, ಎಂ.ಪಿ. ಪ್ರಕಾಶ್ ಪುತ್ರ, ಡಿ.ಕೆ. ಶಿವಕುಮಾರ್ ಮುಂತಾದವರು ಇನ್ನಷ್ಟು ಕೊಬ್ಬುತ್ತಾರೆ. ಗಾಲಿ ಜನಾರ್ದನ ರೆಡ್ಡಿಯಂಥವರು ದುಡ್ಡಿನ ಮದ ತಂದುಕೊಂಡು  At will ಸರಕಾರವನ್ನೇ ಬದಲಾಯಿಸಲು ಮತ್ತೆ ಮತ್ತೆ ಹೊರಡುತ್ತಾರೆ. ಆಗ ‘ಮೈನಿಂಗ್ ಮಾಫಿಯಾ’ದ ಎದುರು ಮುಖ್ಯಮಂತ್ರಿ ನಿರ್ವೀರ್ಯರಾಗಿ ನಿಲ್ಲಬೇಕಾಗಿ ಬರುತ್ತದೆ. ಇವತ್ತು ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ದುಡ್ಡಿನ ಬಲದಿಂದ ಈ ಮೈನಿಂಗ್ ಮಾಫಿಯಾ, ಶಾಸನ ಸಭೆಗಳನ್ನೇ ಹೊಕ್ಕಿಬಿಟ್ಟಿದೆ. ಮನೆ ಮಂದಿಯೆಲ್ಲಾ ಮಂತ್ರಿಗಳಾಗುವ ಮೂಲಕ ಕಾರ್ಯಾಂಗವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಪರಿಣಾಮವೇನಾಯಿತು? ನಾಚಿಕೆಗೇಡಿ ಬಿಜೆಪಿ ಸರಕಾರ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರ ವಿರುದ್ಧದ ಕೇಸುಗಳನ್ನು ವಾಪಸ್ ತೆಗೆದುಕೊಳ್ಳಲು ಬುಧವಾರ ನಿರ್ಧರಿಸಿದೆ! ಪ್ರಜಾಪ್ರಭುತ್ವಕ್ಕೇ ದೊಡ್ಡ ಅಪಾಯವಾಗಿ ಪರಿಣಮಿಸುತ್ತಿದ್ದಾರೆ.  ಬಳ್ಳಾರಿಯ ಮಾಜಿ ಮೇಯರ್ ಪದ್ಮಾವತಿ ಯಾದವ್ ಕೊಲೆಯಾಗಿ ಹೋಗಿದ್ದಾಳೆ. ಆಕೆಯ ಪೂರ್ವಾಪರವನ್ನು ತೆಗೆದುನೋಡಿ, ಅನುಮಾನ ಯಾರ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತದೆ ಎಂದು ಗೊತ್ತಾಗುತ್ತದೆ! ಮುಖ್ಯಮಂತ್ರಿ ಯಡಿಯೂರಪ್ಪನವರು ಕಳೆದ ಅಕ್ಟೋಬರ್‌ನಲ್ಲಿ ಮೈನಿಂಗ್ ಲಾರಿಗಳ ಮೇಲೆ 1000 ರೂ. ಸೆಸ್ ಹಾಕಿದಾಗ, ಅದನ್ನು ತೀವ್ರವಾಗಿ ವಿರೋಧಿಸಿದ್ದ ಗಾಲಿ ಜನಾರ್ದನ ರೆಡ್ಡಿ, “ಬಳ್ಳಾರಿ ನಮ್ಮದು” ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದರು! ಹಾಗಾದರೆ ಬಳ್ಳಾರಿಯಲ್ಲಿ ನಡೆಯುವ ಅಹಿತಕರ ಘಟನೆಗ ಅವರೇ ಕಾರಣ ಎಂದಾಗುವುದಿಲ್ಲವೆ?! ಇದಕ್ಕೆಲ್ಲಾ ಕೊನೆ ಹಾಡುವುದು ಯಾವಾಗ? ಕಾನೂನೊಂದನ್ನು ಜಾರಿಗೆ ತಂದು ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಈ ಸರಕಾರಕ್ಕೇನು ಧಾಡಿ?

Law is nothing but sound common sense ಎಂದಿದ್ದ ಸಾಕ್ರೆಟಿಸ್. ಮುಖ್ಯಮಂತ್ರಿ ಯಡಿಯೂರಪ್ಪನವರೇ, ಬರೀ ಬಾಯಲ್ಲೇ “ಸೌಂಡ್” ಮಾಡಬೇಡಿ ಸ್ವಾಮಿ!

27 Responses to “ಮೈನಿಂಗ್ ಮಾಫಿಯಾ, ಮಟ್ಟಹಾಕುವುದಕ್ಕೇಕೆ ಭಯ?”

 1. Vishwa says:

  Good article

 2. Nithin says:

  Excellent Book Sir.
  I had attended your Book Release function at Indian Culture.
  Nange yedeyalli benki kuditha ide.
  Now I cant find any difference between BJP and congress.
  I had voted BJP to give some good governance. Still I feel its the best of all, but “Reddy” yanta hulagalu iddaga!!!!!!.
  Thanks for awakening us .

 3. Tukaram says:

  hi Pratap

  Paapa ‘Rajakarani’ge adhikara idre aytu Sir. janakke uta ilde satroo…. dont care. antadralli e mannu, mining,mafia,gvt’ge mosa anta kelidre ‘hangandre’ enu anta kelalva ? kotkondu hodskollodandre ide alva ? BJP dakayitara paksha aytalla annode bejaru. nimma lekhana ‘avaaranna’ badalavane madutto gottilla. but janaranna badalayiso shaktiyide.

  Dhnyavadagalondige
  Tukaram

 4. Savitha says:

  Hello Pratap sir,

  Greetings! I recently came across your write ups. I must say that they are very interesting and thought provoking.

  If you don’t mind critism I would like to point out something to you.

  There is new term found “celebrity journalism”, you appear to me more like a “celebrity journalist”. Now, I don’t know if that is your intention or not. I see that more than often, commenting on other’s comments. My point being, it is good to be a public figure, it is a very influential and responsible role.

  Sir, journalism apart from being a lot of thing, it is a responsibility. One can make or break through it. You could be biasing people’s opinion. We could allow or lead people to make their own opnion.

  India is an independent country and so are the citizens of India, so I just voice my opinion hope you don’t mind.

  Sir, it so happens that the youth is self absorbed, be it their personal life or their career. They are very much unaware of the happening.

  When I speak to my friends, I know they wouldn’t have even touched the newspaper. Is there a way, to make the “Gen X” conscious of his/her surroundings?

  Thank you very much, for your time (i.e. if you even read this 😉 )

  Regards,
  Savitha

  P.S. : I am open to critism. I understand that you are very busy, but I sincerely hope taht you respond to this.

 5. ಮೈನಿಂಗ್ ಮಾಫಿಯಾವನ್ನು ಮಟ್ಟ ಹಾಕುವುದಕ್ಕೆ ಏಕೆ ಭಯ ಅಂತೀರಲ್ಲಾ, ಇದು ಯಡಿಯೂರಪ್ಪ ಕುರ್ಚಿಯಿಂದ ಇಳಿದು ಮನೆಗೆ ಹೋಗಿ ಅಂದ ಹಾಗಾಗುತ್ತಲ್ಲಾ?

  ಮಟ್ಟ ಹಾಕುವ ಧೈರ್ಯ ಇದ್ದಿದ್ದರೆ ದೂರದರ್ಶನದ ಕ್ಯಾಮೆರಾಗಳ ಮುಂದೆ ಕಣ್ನೀರು ಹಾಕ್ತಾ ಇರಬೇಕಾಗಿರಲಿಲ್ಲ ಯಡಿಯೂರಪ್ಪ.

  ಯಾರು ಯಾವುದೇ ರೀತಿಯ ಸ್ವೇಚ್ಛಾಚಾರ ನಡೆಸಿದರೂ ನಮ್ಮ ಸರಕಾರ ಯಾವುದೇ ಕ್ರಮ ಕೈಗೊಳ್ಲುತ್ತಿಲ್ಲ ಅನ್ನುವುದು ಜಾಹೀರಾಗಿದೆ. ಶ್ರೀರಾಮ ಸೇನೆ, ಭಜರಂಗದಳ, ಗಣಿ ಧನಿಗಳು ಇವರೆಲ್ಲರೂ ತಮಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಿರುವುದು ಯಡಿಯೂರಪ್ಪನವರು ಬರೀ ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿ ಕೂತಿದ್ದಾರೆ ಅನ್ನುವುದನ್ನು ಮತ್ತೆ ಮತ್ತೆ ಎತ್ತಿ ತೊರಿಸುತ್ತಿದೆ.

  ಇದೆಲ್ಲಾ ಯಾವಾಗ ಸರಿಯಾಗುತ್ತೋ ದೇವರೇ ಬಲ್ಲ.

 6. Dr. Gururaj says:

  Hi Pratap,

  Nice scanning of current situation with loads of references. I would say, MAFIA is nothing but another face of “CAPITALISM”.

  I wrote a comment for your “ಹೆತ್ತು-ಹೊತ್ತವರಿಗೆ ಕೊಡುವ ಬಳುವಳಿ ಇದೇನಾ?”, but it didn’t appear. May be my comment was opposing your article, but never mind.

  Every time like others, I don’t like to say “Nice article”, “Good article”..etc. It is individual’s feeling how he/she finds the meaning of a particular article. One may find some other meaning in the article what you are trying to say and a reader has every right to express his views.

  Anyways Keep up your good work.

  Dr. Gururaj
  FL. USA.

 7. Very good article. Every one forgetting “Law is intention, Implementation is action”. Its very sad. I hope Mr.Yedyoorappa read your article. At least he have to work on it now..
  Regards
  Shishir

 8. Mahantesh says:

  Mining Mafia is an example for In a country like india any thing is possible,

 9. Satish Hampali says:

  Hi Pratap,
  Nice article, eager to read the book Mining Mafia. currently in west africa and could not buy the book.
  It’s high time, Mr Yedeyoorappa acts positively on this.

  Rgds
  Satish Hampali

 10. Vishwesh Bhat says:

  Very Nice article. Indeed trule said for the CM ಬರೀ ಬಾಯಲ್ಲೇ “ಸೌಂಡ್” ಮಾಡಬೇಡಿ ಸ್ವಾಮಿ! 🙂

 11. Yogesh says:

  Mafia is every where. In these mining mafia is also one. It is very disappointing that nowadays we are seeing similar type of mafia in journalist(Ravi Belagere) also. Ravi Belagere’s articles on Reddy brothers is shameful. Fourth estate is becoming silent. But book on “Mining Mafia” is making sound…

 12. Chethan, Coorg says:

  Mosa yella kade irutte.. Aadre gotiddu mosa nadiyodu andre hege.. Idi Rajyada janatege gottu, Ballarili ivaga tinnoke mannu kooda sigolla anta… Aadru E karnataka da Captain ge yake inna avnu ***** anta tildilla? Hottege anna tindre tane gotagodu…. Captain eats reddy’s shit.

  Onedu dina nu ansalva.. E rajya na janagaligoskara aalona anta.. Nange ansutte namge swatantra sigde hogidre chennagirtittu anta.

 13. Sanketh Kumar says:

  Hello, nanage dinakke kanishta nalku sala kaaduva prashne,
  ” idakka navu BJP na astondu kastapattu, istapattu gelsiddu” !!??

 14. nandan says:

  Hey the article is pretty OK. i just feel this just one side of the story.
  The minigin in bellary is happening from past many years not from the time BJP Govt came in karnataka.
  Not only the 3 ministers of karanataka involved in these mining. Infact few of Andra Congress ministers are also involved in this.Looks like this should be handled at central level.

 15. simpson says:

  sir another tremendous article hats off to u sir keep up d good work sir… article on MAY NAME IS KHAN is praise worthy… y to waste money going to theatres n watch crap bull shit movies. my suggestion is 2 the youth to read ur books n gain large knowledge which is very very essential in these days

 16. Suresh Gujjar says:

  Dear Pratap Simha

  My sincere appreciation of your courage and forthright article on My Name is Khan movie. It was very good indeed. Keep it up!

 17. geetha says:

  hi Mr. pratap,
  My hearty wishes to u. Your articles are marvelous. You are doing very good job. I am proud of you.
  Always I am waiting for your great articles & books.

  Kaan Kholkar Kelisikolli Mr. Khan is very good article. Keep it up.

  All the best to u.

 18. parameshsk says:

  hi pratap
  gud article.

  but these (SRK)r misusing innosenceness of people,also people should think that he is only an actor.

  MOSA HOGAVAVARU IROVARGU MOSA MAADTHANE IRTHARE

 19. Thippeswamy N R says:

  nimma dhyrya tumba mechchuge & maadari sir . idanella nodtiddare namma sumvidhaanika vyavaste yestara mattige karya nirvavane maduttide yendu tiludu baruttade. nagrikate atiyagi belidantella anagarika chatuvatikegalu hechchaguttive viparyasa nodi yeno ago desha yneno aguttide.

 20. rajeev says:

  Dear Mr Pratap,
  Recently read your book ‘Mining Mafia’. it is an eye opener of sorts. You have very rightly pointed at the unholy nexus between the Mining mafia- politicians and journalists. In fact, i am an avid reader of the most popular tabloid of kannada. I held its editor in high regard. but after reading your book and retrospectively analysing how he has been ‘Nice’ to the mining barons throughout, i am left with many unanswered questions. In fact he has misled people by giving an altogether different ‘Heroic’ image to them. And why he would do that despite knowing in and out of everything that is going on there? No prizes for guessing!

 21. kiran says:

  Hi,

  Thanks for this article, this is the first time i have visited your web site. and found lots of information.
  I guess people have to decide which government should be there in the power n which should not be.

  People have to choose the goverment, which is striving for development and not the people who want only the power.

  Thanks for such a nice article.

 22. Kanchan says:

  Dear Pratap,

  I appreciate your work of creating awareness about the current socio-political system that is threatening the prosperity of the country. You have great analytical ability and know exactly where the loophole lies. You have done your work and done well. Now it is up to the public to arise and question the things. After all, the government is of the people and by the people. Keep up the good work.

 23. VinodKumar says:

  Thank You Pratap simha sir……….ma colleagues go for having coffee after finishing their assignments……..but i jus go through yo website bcoz i feel like drinking hot coffee when i read yo articles.It makes me to sit and think…………I think you should even work for a english magazines,newspapers so that the whole world comes to know about your thoughts.

 24. prathibha says:

  I don’t know how to send in kannada. Will anyone help me, please?

 25. Ramesh Radder says:

  Hi Pratap,

  Very good effort to expose the mine lords and also the people supporting them including section of media. I really wonder with all the proofs and details nothing is being done.

  The question is who should raise the voice? People of Bellary or our representatives who are all in the control of mine lords. I really liked you mentioning the kannada tabloid( reporter) who is supporting these people through his well established tabloid. I really agree with you that even media people also should also have maximum responsiblity in taking favor of any incident as society still believes the media.

  I gone through your book at one stretch(very informative and shocking truths)

  Hats off to your great effort in creating awareness.

 26. ಪ್ರೀತಿಯ ಮಿತ್ರ…ನಿನ್ನ ಹಲವು ಲೇಖನಗಳನ್ನು ಓದಿ ಮೆಚ್ಚಿದ್ದೇನೆ. ಅದರಲ್ಲೂ ವಿಶೇಷವಾಗಿ ಗಣಿ ಮಾಫಿಯಾ ಕುರಿತ ನಿನ್ನ ಲೇಖನಕ್ಕೆ ನಿನ್ನನ್ನು ಯಾವ ರೀತಿ ಅಭಿನಂದಿಸಬೇಕೆಂದು ಗೊತ್ತಿಲ್ಲ. ನೀನು ಒಬ್ಬ ಕಟ್ಟರ್ ಬಲ ಪಂಥೀಯ ಅನ್ನೋದನ್ನು ಬದಿಗಿಟ್ಟು ನಾನು ನಿನ್ನ ಲೇಖನಗಳನ್ನು ವಿಮರ್ಷಿಸುತ್ತೇನೆ. “ನರೇಂದ್ರ ಮೋದಿ ಯಾರೂ ತುಳಿಯದ ಹಾದಿ” ಪುಸ್ತಕವನ್ನು ಒಂದೇ ದಿನದಲ್ಲಿ ಓದಿ ಮುಗಿಸಿದೆ. ನೀನು ಹೇಳುವ ವಿಷಯಗಳೆಲ್ಲ ಸುಳ್ಳು ಎಂದು ನಾನು ಹೇಳಲ್ಲ. ಆದರೆ ನಿನ್ನ ತಿಳುವಳಿಕೆ, ದೃಷ್ಟಿಕೋನಗಳಲ್ಲಿ ಖಂಡಿತ ತಪ್ಪಿದೆ. ಆದರೆ ಅದು ನಿನ್ನ ನಂಬಿಕೆ, ಸಿದ್ದಾಂತಗಳಿಗೆ ಬಿಟ್ಟ ವಿಚಾರವಾದ್ದರಿಂದ ಅದರ ಬಗ್ಗೆ ನಾನು ವಾದಕ್ಕಿಲ್ಲ. ಆದರೆ ನನ್ನ ಅತ್ಯಂತ ವಿನಯ ಪೂರ್ವಕ ಮನವಿ ಏನಂದರೆ ನಿನ್ನ ನಂಬಿಕೆ, ಸೈದ್ದಾಂತಿಕ ಬದ್ದತೆಗಳು ಇತರರನ್ನು ಇರಿಯದಿರಲಿ. ಮುಸಲ್ಮಾನರು ಅಮಾಯಕರು, ಪ್ರಾಮಾಣಿಕರು ಹಾಗೂ ಅವರಲ್ಲಿ ಯಾವುದೇ ತಪ್ಪಿಲ್ಲ ಅಂತ ನಾನು ಹೇಳಲ್ಲ. ಅದನ್ನು ರಚನಾತ್ಮಕವಾಗಿ ಟೀಕಿಸಿದರೆ ಸಾಕಲ್ಲವೇ? ೧೫ ಸಾವಿರ ಕೋಟಿ ಮುಸಲ್ಮಾನರನ್ನು ಹೊರಗಿಟ್ತು ದೇಶ ಕಟ್ಟುವ ಕನಸು ಪಂಚತಂತ್ರದ ಮಡಿಕೆ ವ್ಯಾಪಾರಿಯ ಕಥೆಗಿಂತ ಹೇಗೆ ಭಿನ್ನವಾಗಿರಲು ಸಾಧ್ಯ? ಎ.ಪಿ.ಜೆ.ಅಬ್ದುಲ್ ಕಲಾಮ್, ಮೊಹಮ್ಮದ್ ಕೈಫ್, ಜ಼ಹೀರ್ ಖಾನ್, ಸಾನಿಯಾ ಮಿರ್ಜಾ, ಅಜೀಂ ಪ್ರೇಂಜಿ, ಇರ್ಫಾನ್ ಪಠಾಣ್, ಅಬ್ದುಲ್ ಕಲಾಂ ಆಝಾದ್, ಸಲೀಂ ಆಲಿ, ನಿಸಾರ್ ಅಹಮದ್, ಅಮೀರ್ ಖಾನ್, ಇಂತಹ ಸಾವಿರಾರು ನಕ್ಷತ್ರಗಳೂ ಭಾರತೀಯ ಮುಸ್ಲಿಮ್ ಸಮಾಜದಿಂದ ಪುಟಿದೆದ್ದು ದೇಶಕ್ಕೆ ಹೆಮ್ಮೆ ತಂದು ಕೊಟ್ತಿಲ್ಲವೇ? ಭಾರತೀಯ ಮುಸ್ಲಿಮರಲ್ಲಿ ಶೇ ೯೯ ಭಾಗ ಇಂತಹ ಮೇಧಾವಿಗಳನ್ನು ಆದರ್ಶವಾಗಿರಿಸಿಕೊಂಡಿದೆಯೇ ಹೊರತು ರಣ ಹೇಡಿಗಳೂ, ಇಸ್ಲಾಮ್ ಮತ್ತು ಕುರಾನಿನ ಶತ್ರುಗಳೂ ಆಗಿರುವ ಉಗ್ರಗಾಮಿಗಳನ್ನಲ್ಲ. ಅಷ್ಟಕ್ಕೂ ಭಯೋತ್ಪಾದನೆಯ ರಾಜಕೀಯ ಫಲಾನುಭವಿಗಳು ಮತ್ತು ವಾಸ್ತವಿಕ ಬಲಿಪಶುಗಳು ಯಾರು ಎಂಬುದು ಪೂರ್ವಾಗ್ರಹ ಬಿಟ್ಟು ಚಿಂತಿಸುವ ಯಾರಿಗೂ ಅರ್ಥವಾಗುವಂತಹ ವಿಷಯ ತಾನೇ? ಇದೆಲ್ಲಾ ಹೇಳಲು ನಾನೊಬ್ಬ ಬುದ್ದಿ ಜೀವಿ ಏನೆಲ್ಲ. ಬುದ್ದಿ ಜೀವಿಗಳನ್ನು ಬೆಂಬಲಿಸುವವನೂ ಅಲ್ಲ. ಅಷ್ಟಕ್ಕೂ ಮಾನವೀಯತೆಗಿಂತ ದೊಡ್ಡ ಸಿದ್ದಾಂತ, ಧರ್ಮ, ಬೇರೆ ಯಾವುದೂ ಇಲ್ಲವಲ್ಲಾ?

 27. shivanand says:

  i read hi bengalore yesterday and i got to know some pecluliar & bad things about you..i dont believe its true sir..am i right