Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ನೀವೇ ಹೇಳಿ, ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಾರು?

ನೀವೇ ಹೇಳಿ, ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಾರು?

ನಾನೇ ಕಟ್ಟಿದ ಪಕ್ಷವನ್ನು ನಾನೇಕೆ ಬಿಡಬೇಕು?

ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇ ನಾನು!

ನಾನು ಕಟ್ಟಿದ ಪಕ್ಷ ಬಿಜೆಪಿ!

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಾಯಿಂದ ಉದುರುತ್ತಿರುವ ಇಂತಹ ಹೇಳಿಕೆಗಳನ್ನು ಕಳೆದ 15 ದಿನಗಳಲ್ಲಿ ನೀವು ಸಾಕಷ್ಟು ಸಲ ಕೇಳಿರುತ್ತೀರಿ, ಓದಿರುತ್ತೀರಿ. ಅದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರ ಕಿವಿಗೂ ಬಿದ್ದಿದ್ದಾಗಿದೆ. ವಾರದ ಹಿಂದೆ”ಚಿಂತನ್ ಬೈಠಕ್್’ಗೆಂದು ಬೆಂಗಳೂರಿಗೆ ಬಂದಿದ್ದ ಗಡ್ಕರಿಯವರು ತೇನ್್ಸಿಂಗ್ ಹಿಮಾಲಯ ಹತ್ತಿದ ಕಥೆ ಹೇಳಿ ಹೋಗಿದ್ದಾರೆ. ಎವರೆಸ್ಟ್ ಏರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಆತನಿಗೆ ದೊರೆತರೂ ಆತನ ಜತೆ ಇನ್ನೂ ಇಬ್ಬರಿದ್ದರು. ಆತ ಬಿದ್ದಾಗ ಮೇಲೆತ್ತಿದರು, ಶಿಖರದ ತುದಿ ಮುಟ್ಟಲು ನೆರವಾದರು. ಒಬ್ಬರ ಸಾಧನೆ ಹಿಂದೆ ಹಲವರ ಪರಿಶ್ರಮ ಇರುತ್ತದೆ ಎನ್ನುವ ಮೂಲಕ ಮಾತಿನ ಪೆಟ್ಟುಕೊಟ್ಟು ಹೋಗಿದ್ದಾರೆ. ಆದರೂ ಹುಚ್ಚು ಕುದುರೆಯಂತಾಗಿರುವ ಯಡಿಯೂರಪ್ಪನವರಿಗೆ ಇದು ಅರ್ಥವಾಗುತ್ತಿಲ್ಲ. ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇ ನಾನು ಎಂದು ಬೊಬ್ಬೆ ಹಾಕುತ್ತಲೇ ಇದ್ದಾರೆ. ಅಂದಹಾಗೆ ಯಡ್ಡಿ ಮಾತಿನಲ್ಲಿ ಇರುವ ಹುರುಳಾದರೂ ಎಷ್ಟು? ಕರ್ನಾಟಕ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇ ಇವರಾ? ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರಿಲ್ಲದಿದ್ದರೆ ಬಿಜೆಪಿ ಎಂಬ ಪಕ್ಷವೇ ಇರುತ್ತಿರಲಿಲ್ಲವೆ? ಯಡಿಯೂರಪ್ಪನವರ ನಾಮಬಲವೊಂದರಿಂದಲೇ ಬಿಜೆಪಿ ಇಂದು ಅಧಿಕಾರಕ್ಕೇರಿದೆಯೇ?

Vajpayee, Karnataka’s hero!

 

ಈ ಶೀರ್ಷಿಕೆ ನಿಮಗ್ಯಾರಿಗೂ ನೆನಪಿರಲಿಕ್ಕಿಲ್ಲ ಬಿಡಿ. 2004ರಲ್ಲಿ ಲೋಕಸಭೆ ಹಾಗೂ ಕರ್ನಾಟಕ ವಿಧಾನಸಭೆಗಳೆರಡಕ್ಕೂ ಏಕಕಾಲದಲ್ಲಿ ಚುನಾವಣೆ ಘೋಷಣೆಯಾಗಿತ್ತು. ಕರ್ನಾಟಕ ಬಿಜೆಪಿ ಹೊಸ ಹುರುಪಿನೊಂದಿಗೇ ಪ್ರಚಾರಾಂದೋಲನಕ್ಕಿಳಿಯಿತು. ಹಾಗಂತ ನಾವು ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತೇವೆ, ಶುದ್ಧ ಆಡಳಿತ ನೀಡುತ್ತೇವೆ, ಕಾಂಗ್ರೆಸ್-ಜೆಡಿಎಸ್ ಸಹವಾಸ ಸಾಕು ನಮಗೂ ಒಂದು ಅವಕಾಶ ಕೊಡಿ, ಇಂಥವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಜನರ ಮುಂದೆ ಹೋಗಲಿಲ್ಲ.

Please vote for Vajpayee!!

ಎನ್ನುತ್ತಾ ಜನರ ಬಳಿಗೆ ಹೋಯಿತು. ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸೋನಿಯಾ ಅಲೆಯ ಬಗ್ಗೆ ಮಾತನಾಡಿದರೆ ಬಿಜೆಪಿ ಅಟಲ್ ಅಲೆಯನ್ನೇರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಯಿತು. ಆ ಚುನಾವಣೆಯಲ್ಲಿ ಬಿಜೆಪಿಯ ಉಮೇದುವಾರರು ವಾಜಪೇಯಿ ಹೆಸರಿನಲ್ಲಿ ಮತಯಾಚಿಸಿದರೆ ಹೊರತು, ತಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರಲ್ಲಿ ಯಾರೂ ವೋಟು ಕೇಳಲಿಲ್ಲ! ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಸಂಸದ ಹಾಗೂ ಘಟಾನುಘಟಿ ನಾಯಕ ಸಿ.ಕೆ. ಜಾಫರ್ ಷರೀಫ್ ಎದುರು ಚುನಾವಣೆಗೆ ನಿಂತಿದ್ದ ಎಸ್ಪಿ ಸಾಂಗ್ಲಿಯಾನಾ ಸ್ವತಃ ಒಬ್ಬ ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದರೂ“Vote for the Man’ಎಂದರು.

ಯಾಕಾಗಿ? ಅವತ್ತು ವಾಜಪೇಯಿಯವರನ್ನು ಮತ್ತೆ ಪ್ರಧಾನಿ ಮಾಡುವುದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ವೋಟು ಕೊಡಿ ಎಂದು ಕೇಳುವ ಬದಲು ವಿಧಾನಸಭೆ ಚುನಾವಣೆಗೂ ವಾಜಪೇಯಿಯವರ ಹೆಸರನ್ನೇ ರಾಜ್ಯ ಬಿಜೆಪಿ ಬಳಸಿಕೊಂಡಿದ್ದೇಕೆ? ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಬಿ.ಎಸ್. ಯಡಿಯೂರಪ್ಪನವರ ಹೆಸರಿನಲ್ಲೇಕೆ ಮತ ಯಾಚಿಸಿರಲಿಲ್ಲ?

ಎರಡು ಕಾರಣಗಳಿದ್ದವು.

ಒಂದೆಡೆ ಮತ್ತೆ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರವೇ ಅಧಿಕಾರಕ್ಕೇರುತ್ತದೆ ಎಂಬ ಭಾವನೆ ಸೃಷ್ಟಿಯಾಗಿತ್ತು. ಆರು ವರ್ಷಗಳ ಅಧಿಕಾರಾವಧಿಯಲ್ಲಿ ಸತತ ಬರದ ಹೊರತಾಗಿಯೂ ವಾಜಪೇಯಿ ಸರ್ಕಾರ ಒಳ್ಳೆಯ ಆಡಳಿತವನ್ನೇ ನೀಡಿತ್ತು. 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ದೇಶದ ಅತ್ಮಸ್ಥೆರ್ಯವನ್ನು ಹೆಚ್ಚಿಸಿದ್ದ, ಕಾರ್ಗಿಲ್ ಯುದ್ಧದಲ್ಲಿ ಜಯಗಳಿಸಿದ್ದ ವಾಜಪೇಯಿಯವರ ವರ್ಚಸ್ಸು ಇನ್ನೂ ಹೆಚ್ಚಾಗಿತ್ತು. ಇನ್ನೊಂದೆಡೆ 1999ರ ವಿಧಾನಸಭೆ ಚುನಾವಣೆಯಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿತರಾಗಿದ್ದ ಬಿ.ಎಸ್. ಯಡಿಯೂರಪ್ಪನವರು, ಪಕ್ಷವನ್ನು ಅಧಿಕಾರಕ್ಕೇರಿಸುವುದಿರಲಿ ಪ್ರತಿಪಕ್ಷ ನಾಯಕನಾಗುವುದಕ್ಕೂ ಸಾಧ್ಯವಿಲ್ಲದಂತೆ ಸ್ವತಃ ಸೋತು ನೆಲಕಚ್ಚಿದ್ದರು! ಅವರ ನಂತರ”ಸೆಕೆಂಡ್ ಇನ್ ಕಮಾಂಡ್್’ನಂತಿದ್ದ ಕೆ.ಎಸ್. ಈಶ್ವರಪ್ಪನವರನ್ನೂ ಶಿವಮೊಗ್ಗದ ಜನ ಸೋಲಿಸಿದ್ದರು. ಹಾಗಿರುವಾಗ ಈ ಸೋತ ಕುದುರೆಗಳ ಹೆಸರಿನಲ್ಲಿ ರೇಸಿಗಿಳಿಯಲು ಯಾರು ತಾನೇ ಧೈರ್ಯ ತೋರುತ್ತಾರೆ? ಹಾಗಾಗಿ ವಾಜಪೇಯಿ ಅಲೆಯ ಲಾಭ ಪಡೆದುಕೊಂಡು ರಾಜ್ಯದಲ್ಲಿ ಅಧಿಕಾರಕ್ಕೇರಲು ಬಿಜೆಪಿ ಮುಂದಾಯಿತು. ಮಿತ್ರಪಕ್ಷಗಳು ತೋರಿದ ಹೀನಾಯ ಪ್ರದರ್ಶನ, ಕೆಲ ಮಿತ್ರಪಕ್ಷಗಳ ಆಯ್ಕೆಯಲ್ಲಾದ ಎಡವಟ್ಟು, ವಾಜಪೇಯಿ ಹೇಗೂ ಗೆಲ್ಲುತ್ತಾರೆ ಎಂದು ಮತಗಟ್ಟೆಗೆ ಹೋಗದೇ ಕುಳಿತ ಸುಶಿಕ್ಷಿತರ ಉದಾಸೀನದಿಂದಾಗಿ ಕೇಂದ್ರದಲ್ಲಿ ಎನ್್ಡಿಎ ವಿಫಲವಾದರೂ ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತು. ವಿಧಾನಸಭೆ ಚುನಾವಣೆಯಲ್ಲೂ ಅದರ ಪ್ರಭಾವ ಕಂಡುಬಂದು ಬಿಜೆಪಿ ಸಂಖ್ಯಾಬಲ 79ಕ್ಕೇರಿತು. ಅದನ್ನು ಬಹಳ ಚೆನ್ನಾಗಿಯೇ ಗುರುತಿಸಿದ ರೀಡಿಫ್ ಡಾಟ್ಕಾಮ್,”ಕರ್ನಾಟಕದ ಹೀರೋ ವಾಜಪೇಯಿ’ ಎಂಬ ಶೀರ್ಷಿಕೆ ನೀಡಿ ವರದಿ ಮಾಡಿತ್ತು.

ಹೌದು!

ಕರ್ನಾಟಕದಲ್ಲಿ ಬಿಜೆಪಿ ಬೆಳೆದಿದ್ದು ಯಾವುದೋ ಒಬ್ಬ ಸ್ಥಳೀಯ ನಾಯಕ, ಜಾತಿಯಿಂದಲ್ಲ. 1983ರಷ್ಟು ಹಿಂದೆಯೇ ರಾಮಕೃಷ್ಣ ಹೆಗಡೆಯವರು ಸರ್ಕಾರ ರಚಿಸಲು ಸಹಾಯ ಮಾಡುವಷ್ಟರ ಮಟ್ಟಿಗೆ ಬಿಜೆಪಿ ಬೆಳೆಯಲು ಕಾರಣವಾಗಿದ್ದು ಆರೆಸ್ಸೆಸ್ ಸ್ವಯಂ ಸೇವಕರು ಹಾಗೂ ರಾಷ್ಟ್ರವಾದಿ ಮನಸ್ಸುಗಳು. ಅಂದಿನಿಂದಲೂ ಕರ್ನಾಟಕದಲ್ಲಿ ಜನ ವೋಟು ನೀಡಿದ್ದು ವಾಜಪೇಯಿ, ಆಡ್ವಾಣಿ, ಯಾದವರಾವ್ ಜೋಶಿಯವರಂತಹ ನಾಯಕರಿಂದಾಗಿ ಹಾಗೂ ಬಿಜೆಪಿಯ ರಾಷ್ಟ್ರೀಯ ಚಿಂತನೆಯಿಂದ ಪ್ರಭಾವಿತರಾಗಿಯೇ ಹೊರತು ಬೇರಿನ್ನಾವ ಕಾರಣಕ್ಕೂ ಅಲ್ಲ. 1990ರ ದಶಕದ ಅಯೋಧ್ಯಾ ಚಳವಳಿ ಬಿಜೆಪಿಯ ಹೆಸರನ್ನು ಮನೆಮನೆಗೂ ತಲುಪಿಸಿತು, ಅದರಿಂದ ರಾಜ್ಯ ಬಿಜೆಪಿಗೂ ಒಂದು ದೊಡ್ಡ ಬಲಬಂದಿತು. ಬಿಜೆಪಿ ಒಂದು ದೇಶಪ್ರೇಮಿ, ಧರ್ಮನಿಷ್ಠ ಪಕ್ಷ ಎಂಬ ಭಾವನೆ ಜನರಲ್ಲಿ ಮೂಡುವಂತಾಯಿತು. ಅದರಿಂದಾಗಿ ಬಸವರಾಜ ಪಾಟೀಲ್ ಸೇಡಂ, ಬಾಬಾ ಗೌಡ ಪಾಟೀಲ್, ಬಸವರಾಜ ಪಾಟೀಲ್ ಯತ್ನಾಳ್ ಮುಂತಾದ ನಾಯಕರು ಉತ್ತರ ಕರ್ನಾಟಕದಲ್ಲಿ ಹೊರಹೊಮ್ಮಿದರು. ಯಡಿಯೂರಪ್ಪನವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಕೂಡ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದರು. ಮಂಗಳೂರಿನಲ್ಲಿ ಯಾರ ಹಂಗೂ ಇಲ್ಲದೆ ಆಯಾಚಿತವಾಗಿ ಬಿಜೆಪಿ ಗೆಲ್ಲುತ್ತಾ ಬಂತು. ಒಕ್ಕಲಿಗರ ಪ್ರಾಬಲ್ಯದ ಚಿಕ್ಕಮಗಳೂರಿನಲ್ಲಿ ಲಿಂಗಾಯತರಾದ ಡಿ.ಸಿ. ಶ್ರೀಕಂಠಪ್ಪನವರನ್ನು ಗೆಲ್ಲಿಸುತ್ತಾ ಬರಲಿಲ್ಲವೆ? ಮಲೆನಾಡಿನ ಒಕ್ಕಲಿಗರು, ಕೊಡವರು, ಕರಾವಳಿ ಜನ, ಉತ್ತರ ಕರ್ನಾಟಕದವರು ಬಿಜೆಪಿಯ ಸಾಂಪ್ರದಾಯಿಕ ಮತದಾರರಾಗಿ ಪರಿಣಮಿಸಿದರು. ಬಿಜೆಪಿ ಮತ ನೀಡುವುದಕ್ಕೆ ಮುಖ್ಯ ಕಾರಣವೇ ವಾಜಪೇಯಿ, ಆಡ್ವಾಣಿಯವರಾಗಿ ಬಿಟ್ಟರು. ಆರು ವರ್ಷ ವಾಜಪೇಯಿ ನೀಡಿದ ಒಳ್ಳೆಯ ಆಡಳಿತ ಕರ್ನಾಟಕದ ಬಿಜೆಪಿ ಬಗ್ಗೆಯೂ ಜನ ಭರವಸೆ ಹೊಂದುವಂತೆ ಮಾಡಿತು. ಅದರ ಪರಿಣಾಮವಾಗಿ 2004ರಲ್ಲಿ 79 ಸ್ಥಾನಗಳು ಲಭಿಸಿದವು.

ಹಾಗಿರುವಾಗ ಬಿಜೆಪಿಯನ್ನು ಕಟ್ಟಿದ್ದೇ ನಾನು ಎಂದು ಯಡ್ಡಿ ಹೇಗೆ ಹೇಳುತ್ತಾರೆ?

ವಾಜಪೇಯಿ ಹೆಸರಲ್ಲಿ ಗೆದ್ದಿದ್ದ ಎಪ್ಪತ್ತೊಂಬತ್ತು ಸೀಟುಗಳು 2008ರ ಚುನಾವಣೆಯಲ್ಲಿ 110ಕ್ಕೇರುವುದಕ್ಕೂ ಯಡಿಯೂರಪ್ಪನವರ ನಾಮಬಲವೊಂದೇ ಕಾರಣವಲ್ಲ. ಕುಮಾರಸ್ವಾಮಿಯವರು ಮಾಡಿದ ವಚನಭ್ರಷ್ಟತೆ ಲಿಂಗಾಯತ ಸಮುದಾಯ ಧ್ರುವೀಕರಣಗೊಳ್ಳಲು, ಬಿಜೆಪಿಯ ಸಂಖ್ಯಾಬಲ 31 ಹೆಚ್ಚಾಗಲು ಕಾರಣವಾಯಿತು. ಹೀಗೆ ಪರಿಸ್ಥಿತಿ, ಸನ್ನಿವೇಶ, ಜಾತಿ ಲೆಕ್ಕಾಚಾರಗಳು ಯಡಿಯೂರಪ್ಪನವರಿಗೆ ವರದಾನ ಆದವು, ಅವರೊಬ್ಬ ಬಲಿಷ್ಠ ಜಾತಿ ನಾಯಕನನ್ನಾಗಿಯೂ ಹೊರಹೊಮ್ಮಿಸಿದವು. ಜತೆಗೆ ಹಣಬಲದಿಂದ ಜಾತಿ ಲೆಕ್ಕಾಚಾರವನ್ನೂ ತಲೆಕೆಳಗು ಮಾಡಿ ಗೆಲ್ಲಬಹುದು ಎಂಬುದು ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಿಂದ ಸಾಬೀತಾಯಿತು.

This is plain and simple.

ಹಾಗಂತ ಯಡಿಯೂರಪ್ಪನವರ ಕೊಡುಗೆಯನ್ನೂ ಅಲ್ಲಗಳೆಯುವುದಕ್ಕಾಗಲಿ, ಬದಿಗಿಡುವುದಕ್ಕಾಗಲಿ ಸಾಧ್ಯವಿಲ್ಲ. ಆದರೆ, ಅವರು ತನ್ನಿಂದಲೇ ಬಿಜೆಪಿ ಬೆಳೆದಿದ್ದು ಎಂಬುದು ಮಾತ್ರ ಶುದ್ಧ ಸುಳ್ಳು. ತನ್ನಿಂದಲೇ ಬಿಜೆಪಿ ಎನ್ನುವುದಕ್ಕೆ ಯಡಿಯೂರಪ್ಪನವರೇನು ನರೇಂದ್ರ ಮೋದಿಯಲ್ಲ. ಜತೆಗೆ ಇವತ್ತು ಬಿಜೆಪಿ ರಾಷ್ಟ್ರಮಟ್ಟದಲ್ಲಿ ತಲೆತಗ್ಗಿಸುವಂತಾಗಿದ್ದರೆ, ಬಿಜೆಪಿಗೆ ಕಳಂಕ ಅಂಟಿದ್ದರೆ, ತೃತೀಯ ರಂಗ ಕಟ್ಟಲು ಹೊರಟಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜೆಪಿಯನ್ನು ಹಗರಣಪೂರಿತ ಪಕ್ಷ ಎಂದು ಜರಿಯುವಂತಾಗಿದ್ದರೆ ಅದಕ್ಕೆ ಯಡಿಯೂರಪ್ಪನವರೇ ಕಾರಣ. ಯಡಿಯೂರಪ್ಪನವರಿಂದಾಗಿ ಬಿಜೆಪಿ ಕೇಂದ್ರದಲ್ಲಿ ಎಷ್ಟು ಬಾರಿ ಮುಖಭಂಗಕ್ಕೊಳಗಾಯಿತು, ಎಷ್ಟು ಬಾರಿ ಮುಜುಗರಕ್ಕೀಡಾಯಿತು, ಎಷ್ಟು ಬಾರಿ ಬಾಯಿಯಿದ್ದರೂ ದನಿ ಉಡುಗಿದಂತೆ ಕುಳಿತುಕೊಳ್ಳಬೇಕಾಯಿತು ಯೋಚಿಸಿ? 1.76 ಲಕ್ಷ ಕೋಟಿಯ 2ಜಿ ಹಗರಣದ ಬಗ್ಗೆ ಧ್ವನಿಯೆತ್ತಿದರೆ, ಕಾಂಗ್ರೆಸ್”ಯಡಿಯೂರಪ್ಪಾಜಿ’ ಎಂದು ಬಿಜೆಪಿಯ ಬಾಯಿ ಮುಚ್ಚಿಸುತ್ತಿತ್ತು. ಕಾಮನ್ವೆಲ್ತ್ ಹಗರಣ, ಅದರ್ಶ ಹೌಸಿಂಗ್ ಸೊಸೈಟಿ ಹಗರಣ, ಲವಾಸಾ ಹಗರಣಗಳ ಬಗ್ಗೆಯೂ ಬಿಜೆಪಿ ಧ್ವನಿಯೆತ್ತದಂತಾಗಿದ್ದೇ ಈ ಯಡಿಯೂರಪ್ಪನವರಿಂದಾಗಿ. ಯಡ್ಡಿ ರಾಜೀನಾಮೆ ಕೊಡುವವರೆಗೂ ಬಿಜೆಪಿಗೆ ಮುಖ ಎತ್ತುವುದಕ್ಕೆ ಸಾಧ್ಯವಾಗಿರಲಿಲ್ಲ. ಇಷ್ಟಕ್ಕೂ ಯಡಿಯೂರಪ್ಪನವರನ್ನು ಬಿಟ್ಟರೆ ಬಿಜೆಪಿಯಲ್ಲಿ ಇಂತಹ ಮಹಾನ್ ಭ್ರಷ್ಟರು ಯಾರಿದ್ದಾರೆ ಹೇಳಿ? ಛತ್ತೀಸ್್ಗಢದ ರಮಣ್ ಸಿಂಗ್, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ಗುಜರಾತ್್ನ ನರೇಂದ್ರ ಮೋದಿ, ಉತ್ತರಾಂಛಲದ ಬಿ.ಸಿ. ಖಂಡೂರಿಯಂಥ ನಾಯಕರು ಹಗರಣ ಮುಕ್ತ ಆಡಳಿತ ನೀಡುತ್ತಿದ್ದರೆ ಯಡ್ಡಿ ಮಗ್ಗುಲ ಮುಳ್ಳಾಗಿ ಬಿಟ್ಟರು. ಇವತ್ತು ಬಿಜೆಪಿ ಕೂಡ ಒಂದು ಮಹಾಭ್ರಷ್ಟ ಪಕ್ಷವೆಂಬ ಕಳಂಕ, ಹಣೆಪಟ್ಟಿ ಪಡೆಯಲು ಮುಖ್ಯ ಕಾರಣವೇ ಯಡಿಯೂರಪ್ಪ. ಒಂದಂತೂ ನಿಜ, ಯಡಿಯೂರಪ್ಪನವರ ಬೆದರಿಕೆ, ಮೊಂಡುತನದಿಂದ ಖಂಡಿತ ಮತ್ತೆ ಮುಖ್ಯಮಂತ್ರಿಗಾದಿ ಬರುವುದಿಲ್ಲ. ನ್ಯಾಯಾಲಯದಿಂದ ದೋಷಮುಕ್ತರಾಗದ ಹೊರತು ಯಡ್ಡಿ ಮುಖ್ಯಮಂತ್ರಿಯಾಗುವುದು ಕನಸು. ಪಕ್ಷ ಒಡೆಯಲು ಮುಂದಾದರೂ ಬಿಜೆಪಿ ಯಡ್ಡಿಯನ್ನು ಮತ್ತೆ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸುವುದಿಲ್ಲ. ಈ ಹಿಂದೆ 2002ರಲ್ಲಿ ಶವಪೆಟ್ಟಿಗೆ (ಕಾಫಿನ್ ಸ್ಕ್ಯಾಮ್) ಹಗರಣ ಬಯಲಿಗೆ ಬಂದಾಗ ವಾಜಪೇಯಿಯವರು ಜಾರ್ಜ್ ಫರ್ನಾಂಡಿಸ್ ಅವರ ರಾಜಿನಾಮೆ ಪಡೆದುಕೊಂಡರೂ ತನಿಖೆ ಸಂಪೂರ್ಣವಾಗಿ ಕೊನೆಗೊಳ್ಳುವ ಮೊದಲೇ ಮತ್ತೆ ಸಂಪುಟಕ್ಕೆ ತೆಗೆದುಕೊಂಡರೆಂಬ ಕಾರಣಕ್ಕೆ ಪ್ರತಿಪಕ್ಷಗಳು ಸುಮಾರು ಎರಡೂವರೆ ವರ್ಷ ಜಾರ್ಜ್ ಅವರನ್ನು ಸದನದಲ್ಲಿ ಬಹಿಷ್ಕರಿಸಿದ್ದವು, ಜಾರ್ಜ್್ಗೆ ಸದನದಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳದೆ ಮುಖಭಂಗ ಮಾಡಿದ್ದವು. ಹಾಗಿರುವಾಗ ಹಸಿ ಹಸಿ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಿರುವ ಯಡಿಯೂರಪ್ಪನವರು ನ್ಯಾಯಾಲಯದಿಂದ ದೋಷಮುಕ್ತರಾಗುವ ಮೊದಲೇ ಮುಖ್ಯಮಂತ್ರಿ ಗಾದಿಗೇರಿಸಲು ಸಾಧ್ಯವಾದರೂ ಇದೆಯೇ? ಈ ಮಧ್ಯೆ”ಇಂಡಿಯಾ ಟುಡೆ’ ನಡೆಸಿದ ರಾಷ್ಟ್ರೀಯ ಸಮೀಕ್ಷೆ ಬಿಜೆಪಿ ಪರ ಅಲೆಯೇಳುತ್ತಿರುವುದನ್ನು ಸೂಚಿಸಿದೆ. ಇನ್ನೆರಡು ವರ್ಷಗಳಲ್ಲಿ (2014) ಲೋಕಸಭೆ ಚುನಾವಣೆ ಬರಲಿದೆ. ಅಣ್ಣಾ ಹಜಾರೆಯಿಂದಾಗಿ ದೇಶಾದ್ಯಂತ ಭ್ರಷ್ಟಾಚಾರ ವಿರೋಧಿ ಭಾವನೆ ನೆಲೆಗೊಂಡಿದೆ. ಇಂಥ ಪರಿಸ್ಥಿತಿಯಲ್ಲಿ ಭ್ರಷ್ಟ ಯಡ್ಡಿಯವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವ ಸಾಹಸಕ್ಕೆ ಬಿಜೆಪಿ ಕೈಹಾಕೀತೇ? ಅಥವಾ ಒಂದು ರಾಜ್ಯಕ್ಕಾಗಿ ಕೇಂದ್ರದ ಚುಕ್ಕಾಣಿ ಕಳೆದುಕೊಳ್ಳುವ ಮೂರ್ಖತನ ಮಾಡೀತೆ?

ಈ ಮಧ್ಯೆ,”ಮತ್ತೊಮ್ಮೆ ಕುರ್ಚಿ ಬೇಕೆಂದು ದೆಹಲಿಗೆ ಹೋಗುವುದಿಲ್ಲ. ಇದಕ್ಕಾಗಿ ಮತ್ತೆ ಜನರ ಬಳಿಗೆ ಹೋಗುತ್ತೇನೆ’ ಎಂದಿದ್ದಾರೆ ಯಡಿಯೂರಪ್ಪ. 2008ರಲ್ಲಾದರೆ ವಚನಭ್ರಷ್ಟತೆ ಸೋಗಿನಲ್ಲಿ, ಜಾತಿಯ ಬೆಂಬಲದೊಂದಿಗೆ ಜನರ ಬಳಿಗೆ ಹೋಗಿದ್ದರು, ಈ ಬಾರಿ ಲೋಕಾಯುಕ್ತ ಹಾಗೂ ಲೋಕಾಯುಕ್ತ ಕೋರ್ಟ್್ನ ನ್ಯಾಯಮೂರ್ತಿ ಸುಧೀಂದ್ರ ರಾವ್ ವಿರುದ್ಧ ಜನರ ಬಳಿ ದೂರು ಹೇಳುತ್ತಾರೇನು? ಅಲ್ಲಾ, ಜನರ ಬಳಿಗೆ ಹೋಗಲು ಮೂರೂವರೆ ವರ್ಷಗಳಲ್ಲಿ ಜನರಿಗಾಗಿ ಏನು ಮಾಡಿದರು ಹಾಗೂ ಈಗ ಏನು ಮಾಡುತ್ತಿದ್ದಾರೆ? ರಾಜ್ಯದ ಹತ್ತಾರು ಜಿಲ್ಲೆಗಳು ಬರ ಎದುರಿಸುತ್ತಿವೆ. ಜನರ ಸಮಸ್ಯೆ ಆಲಿಸಲು, ಬರ ಪರಿಹಾರ ನೀಡಲು ಅಧಿಕಾರಿಗಳ ದಂಡುಕಟ್ಟಿಕೊಂಡು ಹಳ್ಳಿ ಹಳ್ಳಿಗಳಿಗೆ ಹೋಗುವ ಬದಲು ಭಟ್ಟಂಗಿಗಳ ದಂಡು ಕಟ್ಟಿಕೊಂಡು ಶೋ ಕೊಡುತ್ತಿದ್ದೀರಲ್ಲಾ ನಿಮ್ಮ ಆತ್ಮಸಾಕ್ಷಿಗೆ ಮುಜುಗರವಾಗುವುದಿಲ್ಲವೆ ಯಡಿಯೂರಪ್ಪನವರೇ? ಅಥವಾ  ದೇಶದ ಬಗ್ಗೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿರುವ ಸಂಘಪರಿವಾರದಿಂದ ಬಂದು ರೇಣುಕಾಚಾರ್ಯ, ಸೋಮಣ್ಣ, ಬಸವರಾಜ ಬೊಮ್ಮಾಯಿಯವರ”ಸಂಘ’ ಕಟ್ಟಿಕೊಂಡು ಓಡಾಡುತ್ತಿದ್ದೀರಲ್ಲಾ. ನಿಮಗೆ ಅತ್ಮಸಾಕ್ಷಿ ಎನ್ನುವುದೇ ಇಲ್ಲವೆ? ಇದ್ದರೂ ಅದು ನಿಮ್ಮನ್ನು ಚುಚ್ಚುವುದಿಲ್ಲವೆ? ನಿಮ್ಮ ಜತೆ ಇರುವವರಲ್ಲಿ ಒಂದಾದರೂ ಯೋಗ್ಯ, ವಿಶ್ವಾಸಾರ್ಹ ಮುಖವಿದೆಯೇ? ಇನ್ನು ಜಾತಿ ರಾಜಕಾರಣ ಮಾಡಲು ಹೋದವರೆಲ್ಲ ಏನಾದರು ಅಂತ ಗೊತ್ತಲ್ಲವೆ? ಜಾತಿಯನ್ನೇ ದಾಳವಾಗಿಸಿಕೊಂಡು ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿಕೊಂಡ ಎಸ್.ಬಂಗಾರಪ್ಪನವರಿಗೆ ಅಲ್ಪಸ್ವಲ್ಪ ಸೀಟುಗಳು ಬಂದರೂ ರಾಜಕೀಯವಾಗಿ ನಿರ್ನಾಮವಾಗಬೇಕಾಯಿತು. ಅದೇ ರೀತಿ ಜಾತಿ ರಾಜಕಾರಣ ಮಾಡಿದ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾದರು ಮಂಡ್ಯ, ಮೈಸೂರು ಹಾಗೂ ಹಾಸನದ ಕೆಲ ಭಾಗಗಳ ಒಕ್ಕಲಿಗರ ನಾಯಕರಾಗಿಯೇ ಉಳಿದರೇ ಹೊರತು ಎಂದೂ ರಾಷ್ಟ್ರನಾಯಕರೆನಿಸಿಕೊಳ್ಳಲಿಲ್ಲ. ನಿಮಗೂ ಆ ದೇವೇಗೌಡರಿಗೂ ಯಾವ ವ್ಯತ್ಯಾಸವಿದೆ? ಅವರು ಆಕಸ್ಮಿಕವಾಗಿ ಪ್ರಧಾನಿಯಾದರೂ ಎನ್ನುವುದನ್ನು ಬಿಟ್ಟರೆ ಸ್ವಾರ್ಥ, ಸ್ವಹಿತ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ ಇವುಗಳು ನಿಮ್ಮಿಬ್ಬರಲ್ಲೂ ಸಮನಾಗಿ ಹಂಚಿಕೆಯಾಗಿವೆ. ಅಲ್ಲಾ, ನಿಮ್ಮಿಬ್ಬರ ಮುಖದಲ್ಲಿ ಒಂದು ಸಹಜ ನಗುವನ್ನು ಈ ರಾಜ್ಯದ ಜನತೆ ಎಂದಾದರೂ ನೋಡಿದ್ದಾರಾ? ಒಂದು ಕಾಲದಲ್ಲಿ ಬಿಜೆಪಿಯನ್ನು ಭಾರತೀಯ ಜನಿವಾರ ಪಾರ್ಟಿ ಎಂದು ವಿರೋಧಿಗಳು ಜರಿಯುತ್ತಿದ್ದರು, ಅದನ್ನು ನೀವೀಗ ಎಲ್್ಜೆಪಿ ಮಾಡಲು ಹೊರಟಿದ್ದೀರಿ ಅಷ್ಟೇ! ಇತ್ತ ಎಂಎಸ್್ಡಬ್ಲ್ಯೂ ಓದಿದ್ದರೂ ಸಮಾಜ ಸೇವೆ ಹಾಗೂ ಯಡಿಯೂರಪ್ಪನವರ ಸೇವೆಯ ನಡುವಿನ ವ್ಯತ್ಯಾಸವನ್ನೇ ಅರಿಯದ ಶೋಭಾ ಕರಂದ್ಲಾಜೆ, ರೇಣು, ಸೋಮಣ್ಣ, ಬೊಮ್ಮಾಯಿಯವರಂಥ ಸೋಗಲಾಡಿಗಳನ್ನು ಬಗಲಿಗೆ ಹಾಕಿಕೊಂಡು ಪೌರುಷ ಪ್ರದರ್ಶನಕ್ಕೆ ಹೊರಟಿದ್ದೀರಲ್ಲಾ ನಿಮ್ಮಲ್ಲಿ ವಿವೇಚನೆಯೇ ಸತ್ತುಹೋಗಿದೆಯೇ? ಈ ರಾಜಕಾರಣಿಗಳ ಕಥೆ ಹಾಗಿರಲಿ, ನಾಡಿನ ಖ್ಯಾತನಾಮ ಮಠಾಧೀಶರಿಗೂ ವಿವೇಕದ ಕೊರತೆ ಕಾಡುತ್ತಿದೆಯೇ?

ಶಿವ್ ಶಿವಾ….!

80 Responses to “ನೀವೇ ಹೇಳಿ, ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಾರು?”

 1. Madhav says:

  Hi Sir,

  Very Good Article at right time…..Plz publish an Article on our Karnataka’s Hero Rahul Dravid….Why he retired suddenly..is there any politics in that..still he can able to play 2 years….why dravid only targeted by BCCI not laxman or sachin………We need the truth….

 2. Manja says:

  ಪ್ರತಾಪನ್ನ ತುಂಬಾ ಚೆನ್ನಾಗಿ ಬರೆದಿದ್ದೀರಾ
  ಇಂತ ಯಡ್ಡಿ ಯನ್ನು ದೇಶಭಕ್ತ ಅರೆಸ್ಸೇಸ್ಸ್ ಅಥವಾ ಅಡ್ವಾಣಿ ಹಾಗು ಅಟಲ್ ಜಿ ಅವರ
  ಬಿ ಜೆ ಪಿ ಯಾಕೆ ಇನ್ನು ಉಚ್ಚಾಟ್ಟಿಸಿಲ್ಲ ಎಂಬುದೇ ಸೋಜಿಗದ ಪ್ರಶ್ನೆ ????

 3. Manja says:

  ಪ್ರತಾಪಣ್ಣ ತುಂಬಾ ಚೆನ್ನಾಗಿ ಬರೆದಿದ್ದೀರಾ
  ಇಂತ ಯಡ್ಡಿ ಯನ್ನು ದೇಶಭಕ್ತ ಅರೆಸ್ಸೇಸ್ಸ್ ಅಥವಾ ಅಡ್ವಾಣಿ ಹಾಗು ಅಟಲ್ ಜಿ ಅವರ
  ಬಿ ಜೆ ಪಿ ಯಾಕೆ ಇನ್ನು ಉಚ್ಚಾಟ್ಟಿಸಿಲ್ಲ ಎಂಬುದೇ ಸೋಜಿಗದ ಪ್ರಶ್ನೆ ????

 4. Vinutha says:

  Hi Prathap,

  Superb truth brought out to the media..
  When will CORRUPTION come to end. When will India become Corruption free like other nations.

 5. shantharam says:

  ಅಧಿಕಾರದಿಂದ ಜನ ಹಾಳಾಗುವುದಿಲ್ಲ…ಜನರಿಂದ ಅಧಿಕಾರ ದುರುಪಯೋಗವಾಗುತ್ತೆ ಅಂತಾರೆ …ಈ ಯಡಿಯೂರಪ್ಪನಿಗೆ.. ಅರಳು ಮರಳು …ಜನ ಈ ರಾಜಕಾರಣಿಗಳಿಗೆ ಕಲ್ಲಿನಲ್ಲಿ ಹೊಡೆಯುವ ಕಾಲ ಬೇಗ ಬರಬಹುದು…

 6. Sukesh says:

  Sooperb article .. Sir,

  Completely agree with your Thoughts….
  Yaddi onthara bisi thuppa … !! BJP ge !!!

 7. Karthik says:

  Article is very practical.. The decision of high command decides the 2014 central election fate.. Yeddy should be sacked..

 8. Girish says:

  Hi sir,

  M your fan but, Nanu nimgae one question keltini . news paper illa andidrae niv nimma article baredu agae itkol baekittu ok . vajapayee name elkondu vote kaeli halli halligae hogiddu BSY . Dont underestimate BSY
  High-command navru Party fund anta koti gattale duddu iskotarae cm gala atra adu corruption alva .Yallaru adannae madodu advani yatrae madidralla bus yatrae karchu yaru kotru yalla party fund du means namma duddae yallru aste BSY matra alla sir.
  Rss navru samavesha madtaralla adakkae duddu yallinda baruttae pratap sir nivae heli “PRACTICAL AGI THINK MADI” sir ,nanu kooda BJP karyakartanae.

 9. charushree says:

  ya its fact,,,,its unfortunate to us ,,,,,,,we thought that the aims and desires of politicians,,,are ony exposed ,,to fill up their vote bag,,,,,,,,,.

 10. ANIL BALGI says:

  DEAR SIR,
  YOU ONCE AGAIN PROOVED PEN IS SHARPER THAN THE SWORD. WE THE PEOPLE OF GSB (KONKANIS )COMMUNITY CONSIDER VAJAPAYEE JEE AS A GOD AND KEEPING HIS PHTO IN OUR DEVARKONE. I WAS VERY PROUD FOLLOWER OF BJP AND RSS SINCE FROM MY CHILD HOOD. BUT THIS YADDIYURAPPA SPOILED NOT ONLY THE PARTY REPUTATION BUT FAITH TOO.

  WHAT HE IS THINKING BJP IS JUST LINGAYATH PAKSHA. CHE SAME ON HIM .

 11. susanna says:

  Good article, Always Stand for the truth, educate people to vote right candidate.

 12. Deepthi says:

  Hi Pratap,
  Nice article..

 13. Saraswathi says:

  kalla sulla andre e yeddi matra.. karnatakada maan maryade yella haal madida.. begane uchatisi.. illa andre namntha BJP navaru doora hogabekagutte.

 14. Janani says:

  Sir, Its really good article for present situations… Sir, don’t you think “Mundhina prajegala jeevana indhina cinema nirmapakara kaiyyallidhe endhu”?!!!!!!!!!!!!!!!

 15. ANIL says:

  i think it may be… but without yeddi, BJP not sucess
  eg; udupi election

 16. preethika says:

  Gud one!…

 17. sathwik says:

  it is vey nc artcl… because of this man BJP lost its glory….

 18. Samrudha says:

  Awsm article Pratapji. He has not done anything to “Karnataka” in his period. He has done only one thing that hiking state Govt employees Salary. He doesnt deserve to b a CM. Bangalore improved in S.M Krishna’s Period. Even he is corrupted but in his time Bangalore became silicon city. We need a leader who can improve our state, so that people in the city will improve. He can learn from “S.M Krishna”….

 19. ANIL says:

  HI PRATHAP SIR.. Its really a good and true article..because of late S.BANGARAPPA BJP got huge votes n 7 constituency in shimoga ..without BANGARAPPAJI’S fan following it would had taken many more years o time would not had come fa BJP…. ONLY 2 -3 SEATS WOULD THEY VE GOT IN SHIMOGA DISTRICT…MR.yedyurappa talks like witho him nothing is possible… the samaavesha’s n abhinanadan programmes are done with only by giving money they bring people from villeges its damn true fact,wher ever u observe the day where yedyurappa does pro that day evening all wine shops ll be full….its dangerous for the people indirectly they these type of so called big leaders are misguiding the people and are making them to addict for drinking and spoiling many poor families… its only ma point of view by observing these so called leaders…

 20. maruti dasar says:

  All devru e bjp goverment swalpanadru abiruddi kelasavannu madisutare endare tammannu tave abiruddisikollutiddre swami
  nanu bjp goverment mele estondu
  nambok

  e ittidde e nann makklu tama elebele bhehisikolludukke

 21. Shashi says:

  Pratap Sir,

  the whole political system in karnataka is spoiled by this man & so called his followers. As Journalism has got such a powerful in its “Pen”, i request you to publish the Various scandels, various activities of Shriman Yeddi & his team during BJP in power in karnataka state. You have to publish articles starting from 2008 when thy got power for the first time(full). U should write articles about Y Sampangi, Halappa, Renukacharya, Savadi, Ex medical minister, world famous Reddy brothers and list goea on& on….also Swamys from various Maths,you should expose their karma kandas in ur writings. So that they should not get Power back. Thay all should loose elections. You should make aware about people Do not vote for BJP. Its not a Vajpeyi, Advani BJP. BJP should nver come ti powwer in Karnataka.

 22. SparK says:

  Nice article…

  ellara mane dose, toote…

  A honest politician is hard to come by… perhaps one in a Million…
  A honest citizen is hard to come by… one in a Million…

  We all are chasing our dreams; the side effects we cause all the while…

  I’m going to paraphrase Thoreau here… rather than love, than money, than faith, than fame, than fairness… give me truth.

  Hat’s off and thumb’s up to you Simha
  SparK

 23. pratap mysore says:

  every group of People has its community Leader.this is natural and nothing wrong in it.
  Yediyurappa’s lobbying and asset making is opposable.

  at the same time:
  what about DK shi’s assets?
  Gowda,Kumarswamy,revanna’s assets?
  SM krishna’s crores of assets, his son in laws lobbyed Coffee day through out the streets of BAngalore maddur mysore?
  Siddaramaiah’s hundreds of acres in chamarajnagr ?
  BJP lingo Arun jaitley’s 350 cr assets ? how can a pracising advocate make it?
  what about Sushma’s recent apartments in Delhi Boss? is it a charity thing?
  what about modi’s unconditional support to unstiff and hallowed business men Ambani’s?
  what about Anantkumar’s estates,sites, bungalows?

 24. Malappa S N says:

  ಮಾನ್ಯ ಪ್ರತಾಪ್ ಸಿಂಹರಿಗೆ ನನ್ನ ನಮಸ್ಕಾರಗಳು, ನಾನು ನಿಮ್ಮ ಬೆಮ್ಬಲಿಗರಲಿ ನಾನೊಬ್ಬ, ಯಡ್ಡಿ ಬಗ್ಗೆ ಚಡ್ಡಿ ಬೀಚು ಹಂಗ ಬರಿದಿರಿ ನೋಡ್ರಿ, ಯಡ್ಡಿ ಒಮ್ಮೆ ನೋಡಲಿ ಈ ಅಂಕಣ್. ಯಡ್ಡಿ ಹಿಂದ ಬಾಳ ಮಂದಿ ಅದರ ಲಿಂಗಾಯತರು. ಯಾಕಂದರ್ ಅಂವ ಲಿಂಗಾಯತರು ಅಂಥ್ನ. ಒಂದು ಕಾಲದಲಿ ಬಿಜೆಪ ಅಂದ್ರ ಮರ್ಯಾದಿ ಇತ್ತು, ಈಗ ಈ ಯಡ್ಡಿ ಮತ್ತು ಕರ್ನಾಟಕ ಬಿಜೆಪ ಯಿಂದ ಎಲ್ಲೇ ಮರ್ಯಾದಿ ಹೋಯಿತು. ಬಿಜೆಪ ಬರಿ ಕಲ್ಲತನಸುಲಿಗೆ ಯಲ್ಲಿ ತೊಡಗಿದೆ.

 25. Malappa S N says:

  ಮಾನ್ಯ ಪ್ರತಾಪ್ ಸಿಂಹರಿಗೆ ನನ್ನ ನಮಸ್ಕಾರಗಳು, ನಾನು ನಿಮ್ಮ ಬೆಮ್ಬಲಿಗರಲಿ ನಾನೊಬ್ಬ, ಯಡ್ಡಿ ಬಗ್ಗೆ ಚಡ್ಡಿ ಬೀಚು ಹಂಗ ಬರಿದಿರಿ ನೋಡ್ರಿ, ಯಡ್ಡಿ ಒಮ್ಮೆ ನೋಡಲಿ ಈ ಅಂಕಣ್. ಯಡ್ಡಿ ಹಿಂದ ಬಾಳ ಮಂದಿ ಅದರ ಲಿಂಗಾಯತರು. ಯಾಕಂದರ್ ಅಂವ ಲಿಂಗಾಯತರು ಅಂಥ್ನ. ಒಂದು ಕಾಲದಲಿ ಬಿಜೆಪ ಅಂದ್ರ ಮರ್ಯಾದಿ ಇತ್ತು, ಈಗ ಈ ಯಡ್ಡಿ ಮತ್ತು ಕರ್ನಾಟಕ ಬಿಜೆಪ ಯಿಂದ ಎಲ್ಲೇ ಮರ್ಯಾದಿ ಹೋಯಿತು. ಬಿಜೆಪ ಬರಿ ಕಲ್ಲತನಸುಲಿಗೆ ಯಲ್ಲಿ ತೊಡಗಿದೆ. ……………BJP

 26. pushkar says:

  ಎಲ್ಲಿವರೆಗೂ ನಾವು ಸರಿ ಹೊಗೊದಿಲ್ಲವೋ ಅಲ್ಲೀವರೆಗೂ ಇಂತಹವರು ಇದ್ದೆ ಇರ್ತಾರೆ. ಇವತ್ತಿಗೂ ನಮ್ಮ ದೇಶದಲ್ಲಿ ಜನ ಜಾತಿ ನೋಡಿ ಮತ ಹಾಕ್ತಾರೆ. ಅಭಿವೃದ್ದಿ ನೋಡಿ ಅಥವಾ ಮನುಷ್ಯನ ರಾಜಕೀಯ ನೀತಿ ನೋಡಿ ಮತ ಹಾಕೋರು ನೂರಕ್ಕೆ ಐದು ಜನನೂ ಸಿಗೋಲ್ಲ. ಎಲ್ಲರೂ ಅವರವರ ಜಾತಿಗೆ, ದುಡ್ಡು ಕೊಡೋರಿಗೆ, ಹೆಂಡ ಹಂಚೋರಿಗೆ ಮತ ಹಾಕ್ತಾರೆ. ಯದಿಯೂರಪ್ಪನಿಗೂ ಚೆನ್ನಾಗಿ ಗೊತ್ತು ನಮ್ ದೇಶದ ಜನ ಮತ ಹಾಕೋದು ಜಾತಿ ನೋಡಿ, ಅಭಿವೃದ್ದಿ ನೋಡಿ ಅಲ್ಲ ಅಂತ. ಅದಿಕ್ಕೆ ಅವರು ಹೀಗೆ ಮಾಡ್ತಾರೆ. ಒಂದೇ ಒಂದು ಸಲ ನಮ್ ಜನ ಜಾತಿ, ದುಡ್ಡು, ಹೆಂಡದ ಆಮಿಷ ಬಿತ್ತು ಸರಿಯಾಗಿ ಮತ ಹಾಕಿದ್ರೆ ಎಲ್ಲ ತಾನಾಗಿ ತಾನೇ ಸರಿ ಹೋಗುತ್ತೆ.

 27. RASHITH GOWDA says:

  sir,

  nice article……

 28. u b goudar says:

  next 6 hours what about c b i next step

 29. athma says:

  nice article,