Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > Happy B’day! ನಿಮ್ಮನ್ನು ಮರೆಯುವುದರೊಳಗೆ ನಿವೃತ್ತಿಯ ಮನಸ್ಸು ಮಾಡಿ ಸಚಿನ್!

Happy B’day! ನಿಮ್ಮನ್ನು ಮರೆಯುವುದರೊಳಗೆ ನಿವೃತ್ತಿಯ ಮನಸ್ಸು ಮಾಡಿ ಸಚಿನ್!

Why Tendulkar must retire now?

ಹಾಗಂತ ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ ಕಳೆದ ತಿಂಗಳು ಲೇಖನವೊಂದನ್ನು ಬರೆದಿದ್ದರು. 1951, ಡಿಸೆಂಬರ್. ಹೊಸದಿಲ್ಲಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯವೊಂದು ಆರಂಭವಾಯಿತು. ವಿಜಯ್ ಮರ್ಚೆಂಟ್ ಸೊಗಸಾದ ಸೆಂಚುರಿ ಹೊಡೆದರು. ಅದರ ಬೆನ್ನಲ್ಲೇ ಅಶ್ಚರ್ಯಕರವಾಗಿ ನಿವೃತ್ತಿ ಘೋಷಿಸಿಬಿಟ್ಟರು. ಈ ಬಗ್ಗೆ ಸ್ನೇಹಿತರೊಬ್ಬರು ಪ್ರಶ್ನಿಸಿದಾಗ, ‘ಇವನಿನ್ನೂ ಏಕೆ ರಿಟೈರ್ಡ್‌ಆಗಿಲ್ಲ?’ ಎಂದು ಜನ ಕೇಳುವವರೆಗೂ ಕಾಯಬಾರದು ಎಂದಿದ್ದರು. ಈ ದೃಷ್ಟಾಂತವನ್ನು ಉದಾಹರಿಸಿ ಗುಹಾ ಬರೆದಿದ್ದರು. ದುರಾದೃಷ್ಟವಶಾತ್, ‘ನೀವು ನಿವೃತ್ತಿಯಾಗುವುದು ಯಾವಾಗ?’ ಎಂದು ಸಚಿನ್ ತೆಂಡೂಲ್ಕರ್‌ನನ್ನು ಪರ್ತಕರ್ತರು ಕೇಳುವುದು ಕಳೆದ ನಾಲ್ಕೈದು ವರ್ಷಗಳಿಂದ ಮಾಮೂಲಿಯಾಗಿ ಬಿಟ್ಟಿದೆ. ಹಾಗೆ ಕೇಳಿದಾಗಲೆಲ್ಲ, ವಿಶ್ವಕಪ್ ಗೆಲ್ಲುವುದೇ ನನ್ನ ಜೀವಮಾನದ ಕನಸು ಎಂದು ಸಬೂಬು ಹೇಳುತ್ತಿದ್ದರು. 2011ರಲ್ಲಿ ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಆ ಕನಸನ್ನೂ ಈಡೇರಿಸಿದರು. ಆದರೂ ಸಚಿನ್ ಮಾತ್ರ ನಿವೃತ್ತಿ ತೆಗೆದುಕೊಳ್ಳುವ ಮನಸ್ಸು ಮಾಡಲಿಲ್ಲ. ಇದೇ ಸೂಕ್ತ ಸಮಯ ಎಂದು ಕಪಿಲ್ ದೇವ್, ಇಮ್ರಾನ್ ಖಾನ್ ಹೇಳಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಸಚಿನ್ ಆಡುತ್ತಿರುವುದನ್ನು ನೋಡಿದರೆ ಎಂಥವರಿಗೂ ಅಯ್ಯೋ ಎನಿಸುತ್ತದೆ. ಮೊನ್ನೆ ಬುಧವಾರ ಪತ್ರಕರ್ತರೊಬ್ಬರು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭವೊಂದರ ಸಂದರ್ಭದಲ್ಲಿ ಯಾವಾಗ ನಿವೃತ್ತಿಯಾಗುತ್ತೀರಿ ಎಂದು ಕೇಳಿದ್ದಕ್ಕೆ ಸಿಟ್ಟಿಗೆದ್ದ ತೆಂಡೂಲ್ಕರ್, “I’ll stick to my job, you stick to yours’, ನೀನು ನಿನ್ನ ಕೆಲಸ ಮಾಡು, ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಸಚಿನ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಪತ್ರಕರ್ತರೂ ಪರಚಿ, ನೀರಿಳಿಸಿ ಕಳುಹಿಸುತ್ತಿದ್ದರು, ಬಿಸಿಸಿಐ ಕೂಡ ತಂಡದಿಂದ ಹೊರಹಾಕಿ ಎಷ್ಟೋ ಕಾಲವಾಗಿರುತ್ತಿತ್ತು. ಇಷ್ಟಕ್ಕೂ ಸಚಿನ್ ಬಗ್ಗೆ ನಾವೇಕೆ ಇನ್ನೂ ಗೌರವ, ಪ್ರೀತಿ ಇಟ್ಟುಕೊಂಡಿದ್ದೇವೆ? ಆತ ನಿವೃತ್ತಿಯಾಗಬೇಕು ಎಂದು ಬಯಸುವುದರ ಹಿಂದೆಯೂ ಕಾಳಜಿಯೇ ಇದೇ ಎಂದು ಸಚಿನ್‌ಗೇಕೆ ಅರ್ಥವಾಗುವುದಿಲ್ಲ? ನಮ್ಮ ಪಾಲಿಗೆ ಆತ ಯಾರು?

ಮೈಕೆಲ್ ಜಾಕ್ಸನ್

ಫ್ರೆಡ್ಡಿ ಮರ್ಕ್ಯುರಿ

ಬ್ರೂಸ್ಲೀ

ಆರ್ನಾಲ್ಡ್ ಸ್ವಾಝನೆಗರ್

ಸಿಲ್ವೆಸ್ಟರ್ ಸ್ಟ್ಯಾಲನ್

ಜಾನ್ ಮೆಕೆನ್ರೋ

ಕಾರ್ಲ್ ಲೂಯಿಸ್

ಮಹಮ್ಮದ್ ಅಲಿ

ಮೈಕ್ ಟೈಸನ್

ಮಿಖಾಯಿಲ್ ಗೋರ್ಬಚೆವ್

ಈ ಮೇಲಿನ ಒಂದೊಂದು ಹೆಸರೂ ನಮ್ಮೊಳಗೆ ತಲ್ಲಣ ಉಂಟುಮಾಡಿದಂಥವು. ಇವರೆಲ್ಲರೂ ಆಯಾ ಕಾಲಘಟ್ಟಗಳಲ್ಲಿ ಜಗತ್ತಿನ ಜನರ ಮುಕುಟಮಣಿಗಳಾಗಿದ್ದವರು. ಇಷ್ಟೂ ಜನರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತಿಮಾನವ ಸಾಧನೆಯ ಮೂಲಕ ನಮ್ಮನ್ನು ದಿಗ್ಭ್ರಮೆಗೊಳಿಸಿದ್ದೂ ಉಂಟು, ಪ್ರೇರಕ ಶಕ್ತಿಗಳಾಗಿದ್ದೂ ಇದೆ. ಇವತ್ತು ಉಸೈನ್ ಬೋಲ್ಟ್ ಓಟ ಆ ಕ್ಷಣಕ್ಕೆ ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸಬಹುದು. ಆದರೆ ಒಂದು ತಲೆಮಾರಿಗೇ ಪ್ರೇರಣೆ ನೀಡಿದ್ದು ಕಾರ್ಲ್ ಲೂಯಿಸ್ ಮಾತ್ರ. ಆರ್ನಾಲ್ಡ್, ಸ್ಟ್ಯಾಲನ್ ದೇಹವನ್ನು ಕಂಡು ಅದೆಷ್ಟು ಕೋಟಿ ಯುವಕರು ಜಿಮ್‌ಗೆ ಹೋಗಿಲ್ಲ ಹೇಳಿ? ಮೈಕೆಲ್ ಜಾಕ್ಸನ್ ತರ ಕುಣಿಯಲು ಹೋಗಿ ಎಷ್ಟು ಜನ ಕಾಲನ್ನು ಟ್ವಿಸ್ಟ್ ಮಾಡಿಕೊಂಡಿಲ್ಲ? ಸೋವಿಯತ್ ರಷ್ಯಾದ ಮಿಖಾಯಿಲ್ ಗೊರ್ಬಚೇವ್ ಅವರ ಗ್ಲಾಸ್‌ನಾಸ್ಟ್ ಆ್ಯಂಡ್ ಪೆರಿಸ್ಟ್ರೋಯಿಕಾ ರಾಜಕೀಯರಂಗದಲ್ಲಿ ಸೃಷ್ಟಿಸಿದ ಕಂಪನವನ್ನು ಮರೆಯಲಾದೀತೆ? ಇಂಥ ಹೀರೋಗಳು ಜಾಗತಿಕ ವೇದಿಕೆಯಲ್ಲಿ ಮಿಂಚಿ ಮೆರೆಯುತ್ತಿದ್ದಾಗ ಭಾರತೀಯರಾದ ನಾವೂ ಒಬ್ಬ ಐಕಾನ್‌ಗಾಗಿ, ಪ್ರೇರಕ ಶಕ್ತಿಗಾಗಿ, ನಮ್ಮೆಲ್ಲರನ್ನೂ ಒಂದು ಮಾಡುವ ದೈವಕ್ಕಾಗಿ ಹಾತೊರೆದಿದ್ದಿದೆ. ನಮ್ಮ ನೆಲದಲ್ಲೂ ಅಂಥ ತಾರೆಯೊಂದು ಜನ್ಮಿಸಲಿ ಎಂದು ಮೊರೆಯಿಟ್ಟಿದ್ದಿದೆ.

ಆ ಮೊರೆಗೆ ದೇವರು ಸ್ಪಂದಿಸಿದಾಗ ಸಿಕ್ಕವನೇ ಸಚಿನ್ ರಮೇಶ್ ತೆಂಡೂಲ್ಕರ್!

ಅವತ್ತು 1989ರಲ್ಲಿ ಪಾಕಿಸ್ತಾನದಲ್ಲಿ ನೀನು ಟೆಸ್ಟ್‌ಗೆ ಪದಾರ್ಪಣೆ ಮಾಡಿದೆ. ಮೂರನೇ ಟೆಸ್ಟ್‌ನಲ್ಲಿ ಇಮ್ರಾನ್ ಖಾನ್, ವಾಸಿಂ ಅಕ್ರಂ ಮತ್ತು ವಕಾರ್ ಯೂನಿಸ್ ದಾಳಿಗೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿದ್ದರು. ಇನ್ನೊಂದು ಬದಿಯಲ್ಲಿ ಸಿದ್ಧು ಅಸಹಾಯಕನಾಗಿ ನಿಂತಿದ್ದ. ಆ ವೇಳೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ನೀನು ಬ್ಯಾಟ್ ಹಿಡಿದು ಬಂದೆ. ನೋಡನೋಡುತ್ತಿದ್ದಂತೆಯೇ ವಕಾರ್ ಹಾಕಿದ ಬೌನ್ಸರ್ ನಿನ್ನ ಮೂಗನ್ನೇ ಚಚ್ಚಿತು. ರಕ್ತ ಬಳಬಳನೆ ಸುರಿಯಲಾರಂಭಿಸಿತು. ಧಾವಿಸಿ ಬಂದ ದೈಹಿಕ ತಜ್ಞ ಮೂಗಿಗೆ ಬ್ಯಾಂಡೇಜ್ ಹಾಕಿದ. ಇನ್ನೇನು ನೀನು ಪೆವಿಲಿಯನ್‌ನತ್ತ ಸಾಗುತ್ತೀಯಾ ಅಂತ ಅಂದು ಕೊಂಡೆವು. ಉಹೂಂ ಪೆಟ್ಟು ತಿಂದರೂ ಹೇಡಿಯಂತೆ ಶತ್ರುವಿಗೆ ನೀನು ಬೆನ್ನು ತೋರಲಿಲ್ಲ. ವಕಾರ್ ಎಸೆದ ಲಾಸ್ಟ್ ಬಾಲನ್ನು ಬೌಂಡರಿಗಟ್ಟಿದಾಗ ನಿನ್ನಲ್ಲೊಬ್ಬ ಸೇನಾನಿ ಕಂಡುಬಂದ. ಅಬ್ಬಾ ಕೊನೆಗೂ ಕೀಳರಿಮೆಯಿಂದ, ಆತ್ಮವಿಶ್ವಾಸದ ಕೊರತೆಯಿಂದ ನರಳುತ್ತಿದ್ದ ನಮಗೊಬ್ಬ ಗಂಡುಗಲಿ ಸಿಕ್ಕಿದ ಎಂದು ಆನಂದ ಪಟ್ಟೆವು. ರದ್ದಾದ ಏಕದಿನ ಪಂದ್ಯದಲ್ಲಿ ಆಗಿನ ಸ್ಪಿನ್ ಮಾಂತ್ರಿಕ ಅಬ್ದುಲ್ ಖಾದಿರ್ ಅವರ ಬೌಲಿಂಗ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಬಾರಿಸಿದಾಗಲಂತೂ ನಮ್ಮ ಖುಷಿಗೆ ಎಲ್ಲೆಯೇ ಇರಲಿಲ್ಲ. 150 ವರ್ಷಗಳ ಕಾಲ ಬ್ರಿಟಿಷರಿಗೆ ನಮ್ಮ ನೆಲ, ಜಲವಷ್ಟೇ ಅಲ್ಲ ಮನಸ್ಸನ್ನೂ ದಾಸ್ಯಕ್ಕಿಟ್ಟು ಸ್ವಾತಂತ್ರ್ಯ ಬಂದ ಮೇಲೂ ದಾಸ್ಯದ ಗುಂಗಿನಿಂದ ಹೊರಬರಲು ಹೆಣಗುತ್ತಿರುವಾಗ, ನಮಗೂ ಆಳುವ ತಾಕತ್ತಿದೆ ಅನ್ನೋದನ್ನು ನೀನು ಬ್ಯಾಟ್ ಮೂಲಕ ಸಾಬೀತು ಮಾಡಿದೆ. ಆಗ ನಾವೇ ನೀನಾಗಿ ಖುಷಿಪಟ್ಟೆವು.

ಈ ನಡುವೆ 1992ರಲ್ಲಿ ನಿನ್ನ ಅಗ್ನಿ ಪರೀಕ್ಷೆಗೆಂದು ವೇದಿಕೆ ಸಜ್ಜಾಗಿತ್ತು. ಅದು ಜಗತ್ತಿನಲ್ಲಿಯೇ ಅತ್ಯಂತ fastest and bouncyಪಿಚ್ ಎಂಬ ಖ್ಯಾತಿ ಪಡೆದಿದ್ದ ಪರ್ತ್ ಭಾರತ ಸೋಲುವುದು ಪೂರ್ವ ನಿರ್ಧರಿತ ಎಂದು ಅದಾಗಲೇ ಷರಾ ಬರೆದಿದ್ದರೂ ಎಲ್ಲರ ಕಣ್ಣು ನಿನ್ನ ಮೇಲಿತ್ತು. ಆ ದಿನ ನೀ ಬ್ಯಾಟ್ ಹಿಡಿದು ಬಂದೆ- ಪರ್ತ್‌ನಲ್ಲಿ ಆಡಿದ ಮೊದಲ ಇನಿಂಗ್ಸ್‌ನಲ್ಲೇ ಶತಕ ಬಾರಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಪಡೆದೆ. ನೀ ಹೊಡೆದ 118 ರನ್‌ಗಳು ನಿಜಕ್ಕೂ ಅದ್ಭುತ. ಮುಂದಿನ ಟೆಸ್ಟ್ ಸಿಡ್ನಿಯಲ್ಲಿ. ಪಟಪಟನೆ ವಿಕೆಟ್ ಕಳೆದುಕೊಂಡಿದ್ದ ಭಾರತ ಡ್ರಾ ಮಾಡಿಕೊಳ್ಳಲು ಹೆಣಗುತ್ತಿತ್ತು. ಆಗ ರವಿಶಾಸ್ತ್ರಿ ಹೆಗಲಿಗೆ ಹೆಗಲು ಕೊಟ್ಟು ನೀ ಗಳಿಸಿದ ಅಜೇಯ 148 ರನ್‌ಗಳು ಭಾರತವನ್ನು ಮುಖಭಂಗದಿಂದ ತಪ್ಪಿಸಿತು. ಅದೇ ವರ್ಷ ಕೇಪ್‌ಟೌನ್‌ನಲ್ಲಿ ಅಜರ್ ಜತೆಗೂಡಿ ನೀ ಗಳಿಸಿದ 169ರನ್‌ಗಳು ತಂದುಕೊಟ್ಟ ಖುಷಿ ಇಂದಿಗೂ ಮನದಲ್ಲಿ ಬೆಚ್ಚಗಿದೆ.

1998ರಲ್ಲಿ ಶಾರ್ಜಾದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸೆಂಚುರಿ ಹೊಡೆದು ಕಪ್ ತಂದು ಕೊಟ್ಟಿದ್ದೂ ನೆನಪಿದೆ. ಟೆನ್‌ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಆ ಆಟ ಇಂದಿಗೂ ನೇರ ಪ್ರಸಾರ ಆಗುತ್ತಿದೆ ಅನ್ನೋ ರೀತಿ ಟಿ.ವಿ. ಮುಂದೆ ಕೂತು ಕುತೂಹಲದಿಂದ ವೀಕ್ಷಿಸುತ್ತೇವೆ. 2003ರ ವರ್ಲ್ಡ್‌ಕಪ್‌ನಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 271 ರನ್ ಹೊಡೆದಾಗ ಸೋತುಬಿಡ್ತೀವೇನೋ ಅಂತ ಅನ್ನಿಸಿತ್ತು. ಆದರೆ ರಣಹದ್ದಿನಂತೆ ಬರುವ ಶೋಯೆಬ್ ಅಖ್ತರ್‌ನ ಬೌಲಿಂಗ್‌ನ ಲಯವನ್ನೇ ಹಾಳು ಮಾಡಿ, ಅಂದು ನೀನು ಗಳಿಸಿದ ಬಿರುಸಿನ 98 ರನ್‌ಗಳು ಭಾರತದ ಗೆಲುವಿಗೆ ಕಾರಣವಾದವು. ಪಾಕ್ ವಿರುದ್ಧ ನಾಲ್ಕನೇ ಯುದ್ಧದಲ್ಲಿ ಜಯಿಸಿದಷ್ಟು ಖುಷಿಯಾಯಿತು.

ಜತೆಗೆ ನೀನೆಂದೂ ಸೋಗು ಹಾಕಿದವನಲ್ಲ. ಅಂದು ನಿನ್ನ ಹುಟ್ಟುಹಬ್ಬದ ದಿನ ಶಾರ್ಜಾದಲ್ಲಿ ಸೆಂಚುರಿ ಹೊಡೆದು ಪತ್ನಿಗೆ ಅರ್ಪಿಸಿದೆ. ಕೆಲವರು ಬೇಸರಪಟ್ಟು ಕೊಂಡರು. ಆದರೆ ಅವತ್ತು ಈ ಸೆಂಚುರಿ ಶತಕೋಟಿ ಭಾರತೀಯರಿಗೆಂದು ಎಲ್ಲರಂತೆ ನೀನೂ ಸೋಗು ಹಾಕಬಹುದಿತ್ತು. ಆದರೆ ಟೀಕಾಕಾರರ ಬಗ್ಗೆ ತಲೆಕೆಡಿಸಿಕೊಳ್ಳದೆ, ಪತ್ನಿಯ ಮೇಲಿನ ಪ್ರೀತಿಯನ್ನು ತೋರಿಸಿಕೊಂಡೆ! ಆಟವೊಂದೇ ಅಲ್ಲ, ವ್ಯಕ್ತಿತ್ವದಿಂದಲೂ ಆದರ್ಶ ವ್ಯಕ್ತಿಎನಿಸಿದೆ. ಸೋಗಲಾಡಿತನಕ್ಕೆ ಬದಲು ಆಟದಿಂದ ದೊಡ್ಡವನೆನಿಸಿದೆ. ಹೆಸರು ಹೇಳಿಕೊಳ್ಳದೆ ತೆರೆಮರೆಯಲ್ಲಿ ಮುಕ್ತ ಮನಸ್ಸಿನಿಂದ ದಾನ ಕಾರ್ಯವನ್ನು ಮಾಡುತ್ತಾ ಬಂದಿದ್ದೀಯಾ. ಮ್ಯಾಚ್ ಫಿಕ್ಸಿಂಗ್ ಕಳಂಕ ಎಲ್ಲರನ್ನೂ ಅಂಟಿದರೂ ನಿನ್ನ ನಿಷ್ಠೆ ಬಗ್ಗೆ, ದೇಶಪ್ರೇಮದ ಬಗ್ಗೆ ನಮ್ಮ ಮನದಲ್ಲಿ ಕಿಂಚಿತ್ತೂ ಸಂಶಯ ಮೂಡಲಿಲ್ಲ.

ಇಷ್ಟಕ್ಕೂ Conಗಳ (ವಂಚಕರು) ನಡುವೆ ಐಕಾನ್ ಆಗಿ ಉಳಿದವನು ನೀನು!

ಸಚಿನ್ ಮೇಲೆ ನಾವು ಇಟ್ಟಿರುವ ವಿಶ್ವಾಸ, ಕೊಟ್ಟಿರುವ ಸ್ಥಾನ ಅಂಥದ್ದು. ಭಾರತದಲ್ಲಿ ಕ್ರಿಕೆಟ್ಟೇ ಧರ್ಮ ಎನ್ನುವುದಾದರೆ ಅದಕ್ಕೆ ತೆಂಡೂಲ್ಕರ್ ದೇವರು. ಹೌದು, ಸಚಿನ್ ಕ್ರಿಕೆಟ್ ಪಾದಾರ್ಪಣೆ ಮಾಡಿದ ಆಸುಪಾಸಿನಲ್ಲಿ ಉಚ್ಚ್ರಾಯಸ್ಥಿತಿಗೆ ಬಂದ ಪಿಟಿ ಉಷಾ, ವಿಶ್ವನಾಥನ್ ಆನಂದ್ ಕೂಡ ನಮ್ಮ ಮುಕುಟಮಣಿಗಳಾಗಿದ್ದವರೇ. ಆದರೆ ಸಚಿನ್ ನಮ್ಮನ್ನು ಆವರಿಸಿದಷ್ಟು ಬೇರಾರಿಗೂ ಆಗಲಿಲ್ಲ. ಕಪಿಲ್ ದೇವ್ ವಿಶ್ವಕಪ್ ಗೆಲ್ಲಿಸುವ ಮೂಲಕ ನಮಗೆ ಖುಷಿ ತಂದರೇ ಹೊರತು ನಾವೆಂದೂ ಕಪಿಲ್‌ರಿಂದ ದೊಡ್ಡದೇನನ್ನೂ ನಿರೀಕ್ಷಿಸಿದವರಲ್ಲ. ಸುನೀಲ್ ಗವಾಸ್ಕರ್ ಸಚಿನ್‌ಗಿಂತ ಸಾಕಷ್ಟು ಮೊದಲೇ ಟೆಸ್ಟ್‌ನಲ್ಲಿ 34 ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರಾದರೂ ನಾವು ಸಂಭ್ರಮಿಸಿದ್ದು ಮಾತ್ರ ಸಚಿನ್ ಸೆಂಚುರಿ ಹೊಡೆದಾಗಲಷ್ಟೇ. ಆತ ಏಕಾಂಗಿಯಾಗಿ ದೇಶವನ್ನು ಗೆಲ್ಲಿಸಿದ ಪಂದ್ಯಗಳ ಸಂಖ್ಯೆ ವಿರಳವಾಗಿರಬಹುದು. ಆದರೆ ಒಂದಿಡೀ ತಲೆಮಾರನ್ನು ಯಾರಾದರೂ ಬಹುವಾಗಿ ಪ್ರೇರೇಪಿಸಿದ್ದರೆ, ಹುರಿದುಂಬಿಸಿದ್ದರೆ ಅದು ಸಚಿನ್ ಮಾತ್ರ. ಆತ ಸತತವಾಗಿ ವಿಫಲಗೊಂಡಾಗ ನಮ್ಮ ಮನಸ್ಸು ಬೇಸರಗೊಂಡು, ನೋವು ತಿಂದು ಕಟುವಾಗಿ ಟೀಕಿಸಿದ್ದೂ ಇದೆ. ಇಷ್ಟಕ್ಕೂ ಬ್ಯಾಟಿಂಗ್‌ನಲ್ಲಿ ಸೃಷ್ಟಿಸಬಹುದಾದ ಪ್ರತಿ ದಾಖಲೆಯೂ ಸಚಿನ್ ಹೆಸರಲ್ಲೇ ಇರಬೇಕೆಂದು ಆತನಿಗಿಂತ ಹೆಚ್ಚಾಗಿ ಬಯಸಿದ್ದವರು ನಾವೇ. ಸಚಿನ್ ಬಗ್ಗೆ ಯಾರಾದರೂ ಅನ್ಯಥಾ ಮಾತನಾಡಿದಾಗ ಅವರ ಮೈಮೇಲೆ ಎರಗಿ ಬೀಳುತ್ತಿದ್ದವರೂ, ಏರಿ ಹೋಗುತ್ತಿದ್ದವರೂ ನಾವೇ. This little Bonzer plays like me ಎಂದು ಡಾನ್ ಬ್ರಾಡ್‌ಮನ್ ಹೇಳಿದಾಗ ಸಚಿನ್‌ಗಿಂತಲೂ ಹೆಮ್ಮೆಯಿಂದ ಬೀಗಿದ್ದವರೂ ನಾವೇ. ಸ್ವಂತಕ್ಕಾಗಿ ದೇವರನ್ನು ಭಜಿಸುವ ನಾವು ನಿಸ್ವಾರ್ಥವಾಗಿ ದೈವದ ಮುಂದೆ ಯಾರಿಗಾದರೂ ಪ್ರಾರ್ಥಿಸಿದ್ದರೆ ಅದು ಸಚಿನ್ ಶತಕಕ್ಕಾಗಿಯಷ್ಟೇ. ಭಾರತ ಸೋತಾಗಲೂ ಸಚಿನ್ ಹೊಡೆದನಲ್ಲಾ ಸಾಕು ಎಂದು ಅದೆಷ್ಟು ಸಲ ನಮಗೇ ನಾವೇ ಸಮಾಧಾನ ಮಾಡಿಕೊಂಡಿಲ್ಲ? ಭಗವಂತನ ಮೇಲೆ ವಿಶ್ವಾಸದ ಭಾರ ಹಾಕುವ ನಮ್ಮ, ನಿರೀಕ್ಷೆಯ ಭಾರವನ್ನು ಹೊತ್ತವನು ಸಚಿನ್ ಮಾತ್ರ.

ಕಳೆದ ಏಪ್ರಿಲ್‌ನಲ್ಲಿ ಭಾರತ ವಿಶ್ವಕಪ್ ಗೆದ್ದಾಗ ನಮ್ಮ ಇಡೀ ತಂಡ ಟ್ರೋಫಿಗಿಂತ ಮೊದಲು ಹೊತ್ತು ಕುಣಿದಿದ್ದು ಸಚಿನ್‌ನನ್ನು. ಆ ಬಗ್ಗೆ ಕೇಳಿದಾಗ, He carried the burden of the nation for 21 years. It was time we carried him ಎಂದಿದ್ದ ವಿರಾಟ್ ಕೋಹ್ಲಿ.

ಸಚಿನ್‌ನನ್ನು ನಾವು ನೋಡುವುದು, ಇಟ್ಟಿರುವುದು ಅಷ್ಟು ಎತ್ತರದಲ್ಲಿ. ಹಾಗಂತ ತಂಡಕ್ಕೆ ಹೊರೆಯಾಗುವವರೆಗೂ ಆತ ಆಡಬೇಕೆಂದಲ್ಲ. ನ್ಯೂಜಿಲ್ಯಾಂಡ್‌ನ ರಿಚರ್ಡ್ ಹ್ಯಾಡ್ಲಿಯವರ 431 ವಿಕೆಟ್ ದಾಖಲೆಯನ್ನು ನಮ್ಮ ಕಪಿಲ್‌ದೇವ್ ಮುರಿಯಬೇಕೆಂದು ಇಡೀ ದೇಶವೇ ಬಯಸಿತ್ತು. ಆ ದಾಖಲೆ ಮುರಿಯುವಷ್ಟರಲ್ಲಿ ಯುವ ಜಾವಗಲ್ ಶ್ರೀನಾಥ್‌ರ ಎರಡು ಅಮೂಲ್ಯ ಕ್ರೀಡಾ ವರ್ಷಗಳೇ ಬಲಿಯಾಗಿ ಬಿಟ್ಟಿದ್ದವು. ಇವತ್ತು ಸಚಿನ್‌ನಿಂದಾಗಿ ಅಜಿಂಕ್ಯ ರಹಾನೆ ಅವರಂಥ ಯುವ ಪ್ರತಿಭೆಗಳಿಗೆ ಜಾಗವೇ ಇಲ್ಲದಂತಾಗಿ ಬಿಟ್ಟಿದೆ. ಸಚಿನ್ ಸ್ವಾರ್ಥಿಯಂತೆ ಕಾಣಲಾರಂಭಿಸಿದ್ದಾನೆ. ಆದರೆ ನಮ್ಮ ಕಣ್ಣರೆದುರಿಗೆ ಸಚಿನ್ ಚಿಕ್ಕವನಾಗುವುದು ನಮಗೇ ಬೇಸರವುಂಟು ಮಾಡುತ್ತದೆ. ಕಳೆದ ವರ್ಷ, ಅದೂ ಅಣ್ಣಾ ಹಝಾರೆಯವರ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೇ ಸ್ವತಂತ್ರ ಭಾರತ ಕಂಡ ಅತ್ಯಂತ ಭ್ರಷ್ಟ ಕೇಂದ್ರ ಸರ್ಕಾರದಿಂದ ರಾಜ್ಯಸಭೆಗೆ ನೇಮಕವಾದಾಗಲೇ ದೇಶವಾಸಿಗಳು ಭ್ರಮನಿರಸನಗೊಂಡಿದ್ದರು. ಟ್ವಿಟ್ಟರ್‌ನಲ್ಲಿ ಒಂದೇ ಗಂಟೆಯೊಳಗೆ 65 ಸಾವಿರ ಜನ ‘ಅನ್‌ಫಾಲೋ’ ಮಾಡಿದ್ದರು. ಜನ ನಿನ್ನನ್ನು ಶಪಿಸುವುದರೊಳಗೆ, ನಿನ್ನ ಈಗಿನ ಆಟವನ್ನು ನೋಡುತ್ತಾ ನೋಡುತ್ತಾ ಹಳೆಯ ವೈಭವ, ಖುಷಿಯನ್ನು ಮರೆತುಬಿಡುವೊದರೊಳಗೆ ಸೂಕ್ತ ನಿರ್ಧಾರ ತೆಗೆದುಕೋ ಸಚಿನ್.

ಅಂದಹಾಗೆ ಏಪ್ರಿಲ್ 24ಕ್ಕೆ ಸಚಿನ್‌ಗೆ 40 ವರ್ಷ.

Why Tendulkar must retire now?ಹಾಗಂತ ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ ಕಳೆದ ತಿಂಗಳು ಲೇಖನವೊಂದನ್ನು ಬರೆದಿದ್ದರು. 1951, ಡಿಸೆಂಬರ್. ಹೊಸದಿಲ್ಲಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯವೊಂದು ಆರಂಭವಾಯಿತು. ವಿಜಯ್ ಮರ್ಚೆಂಟ್ ಸೊಗಸಾದ ಸೆಂಚುರಿ ಹೊಡೆದರು. ಅದರ ಬೆನ್ನಲ್ಲೇ ಅಶ್ಚರ್ಯಕರವಾಗಿ ನಿವೃತ್ತಿ ಘೋಷಿಸಿಬಿಟ್ಟರು. ಈ ಬಗ್ಗೆ ಸ್ನೇಹಿತರೊಬ್ಬರು ಪ್ರಶ್ನಿಸಿದಾಗ, ‘ಇವನಿನ್ನೂ ಏಕೆ ರಿಟೈರ್ಡ್‌ಆಗಿಲ್ಲ?’ ಎಂದು ಜನ ಕೇಳುವವರೆಗೂ ಕಾಯಬಾರದು ಎಂದಿದ್ದರು. ಈ ದೃಷ್ಟಾಂತವನ್ನು ಉದಾಹರಿಸಿ ಗುಹಾ ಬರೆದಿದ್ದರು. ದುರಾದೃಷ್ಟವಶಾತ್, ‘ನೀವು ನಿವೃತ್ತಿಯಾಗುವುದು ಯಾವಾಗ?’ ಎಂದು ಸಚಿನ್ ತೆಂಡೂಲ್ಕರ್‌ನನ್ನು ಪರ್ತಕರ್ತರು ಕೇಳುವುದು ಕಳೆದ ನಾಲ್ಕೈದು ವರ್ಷಗಳಿಂದ ಮಾಮೂಲಿಯಾಗಿ ಬಿಟ್ಟಿದೆ. ಹಾಗೆ ಕೇಳಿದಾಗಲೆಲ್ಲ, ವಿಶ್ವಕಪ್ ಗೆಲ್ಲುವುದೇ ನನ್ನ ಜೀವಮಾನದ ಕನಸು ಎಂದು ಸಬೂಬು ಹೇಳುತ್ತಿದ್ದರು. 2011ರಲ್ಲಿ ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಆ ಕನಸನ್ನೂ ಈಡೇರಿಸಿದರು. ಆದರೂ ಸಚಿನ್ ಮಾತ್ರ ನಿವೃತ್ತಿ ತೆಗೆದುಕೊಳ್ಳುವ ಮನಸ್ಸು ಮಾಡಲಿಲ್ಲ. ಇದೇ ಸೂಕ್ತ ಸಮಯ ಎಂದು ಕಪಿಲ್ ದೇವ್, ಇಮ್ರಾನ್ ಖಾನ್ ಹೇಳಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಸಚಿನ್ ಆಡುತ್ತಿರುವುದನ್ನು ನೋಡಿದರೆ ಎಂಥವರಿಗೂ ಅಯ್ಯೋ ಎನಿಸುತ್ತದೆ. ಮೊನ್ನೆ ಬುಧವಾರ ಪತ್ರಕರ್ತರೊಬ್ಬರು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭವೊಂದರ ಸಂದರ್ಭದಲ್ಲಿ ಯಾವಾಗ ನಿವೃತ್ತಿಯಾಗುತ್ತೀರಿ ಎಂದು ಕೇಳಿದ್ದಕ್ಕೆ ಸಿಟ್ಟಿಗೆದ್ದ ತೆಂಡೂಲ್ಕರ್, “I’ll stick to my job, you stick to yours’, ನೀನು ನಿನ್ನ ಕೆಲಸ ಮಾಡು, ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ವೇಳೆ ಸಚಿನ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಪತ್ರಕರ್ತರೂ ಪರಚಿ, ನೀರಿಳಿಸಿ ಕಳುಹಿಸುತ್ತಿದ್ದರು, ಬಿಸಿಸಿಐ ಕೂಡ ತಂಡದಿಂದ ಹೊರಹಾಕಿ ಎಷ್ಟೋ ಕಾಲವಾಗಿರುತ್ತಿತ್ತು. ಇಷ್ಟಕ್ಕೂ ಸಚಿನ್ ಬಗ್ಗೆ ನಾವೇಕೆ ಇನ್ನೂ ಗೌರವ, ಪ್ರೀತಿ ಇಟ್ಟುಕೊಂಡಿದ್ದೇವೆ? ಆತ ನಿವೃತ್ತಿಯಾಗಬೇಕು ಎಂದು ಬಯಸುವುದರ ಹಿಂದೆಯೂ ಕಾಳಜಿಯೇ ಇದೇ ಎಂದು ಸಚಿನ್‌ಗೇಕೆ ಅರ್ಥವಾಗುವುದಿಲ್ಲ? ನಮ್ಮ ಪಾಲಿಗೆ ಆತ ಯಾರು?ಮೈಕೆಲ್ ಜಾಕ್ಸನ್ ಫ್ರೆಡ್ಡಿ ಮರ್ಕ್ಯುರಿ ಬ್ರೂಸ್ಲೀ ಆರ್ನಾಲ್ಡ್ ಸ್ವಾಝನೆಗರ್ ಸಿಲ್ವೆಸ್ಟರ್ ಸ್ಟ್ಯಾಲನ್ ಜಾನ್ ಮೆಕೆನ್ರೋಕಾರ್ಲ್ ಲೂಯಿಸ್ ಮಹಮ್ಮದ್ ಅಲಿಮೈಕ್ ಟೈಸನ್ ಮಿಖಾಯಿಲ್ ಗೋರ್ಬಚೆವ್ ಈ ಮೇಲಿನ ಒಂದೊಂದು ಹೆಸರೂ ನಮ್ಮೊಳಗೆ ತಲ್ಲಣ ಉಂಟುಮಾಡಿದಂಥವು. ಇವರೆಲ್ಲರೂ ಆಯಾ ಕಾಲಘಟ್ಟಗಳಲ್ಲಿ ಜಗತ್ತಿನ ಜನರ ಮುಕುಟಮಣಿಗಳಾಗಿದ್ದವರು. ಇಷ್ಟೂ ಜನರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತಿಮಾನವ ಸಾಧನೆಯ ಮೂಲಕ ನಮ್ಮನ್ನು ದಿಗ್ಭ್ರಮೆಗೊಳಿಸಿದ್ದೂ ಉಂಟು, ಪ್ರೇರಕ ಶಕ್ತಿಗಳಾಗಿದ್ದೂ ಇದೆ. ಇವತ್ತು ಉಸೈನ್ ಬೋಲ್ಟ್ ಓಟ ಆ ಕ್ಷಣಕ್ಕೆ ನಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸಬಹುದು. ಆದರೆ ಒಂದು ತಲೆಮಾರಿಗೇ ಪ್ರೇರಣೆ ನೀಡಿದ್ದು ಕಾರ್ಲ್ ಲೂಯಿಸ್ ಮಾತ್ರ. ಆರ್ನಾಲ್ಡ್, ಸ್ಟ್ಯಾಲನ್ ದೇಹವನ್ನು ಕಂಡು ಅದೆಷ್ಟು ಕೋಟಿ ಯುವಕರು ಜಿಮ್‌ಗೆ ಹೋಗಿಲ್ಲ ಹೇಳಿ? ಮೈಕೆಲ್ ಜಾಕ್ಸನ್ ತರ ಕುಣಿಯಲು ಹೋಗಿ ಎಷ್ಟು ಜನ ಕಾಲನ್ನು ಟ್ವಿಸ್ಟ್ ಮಾಡಿಕೊಂಡಿಲ್ಲ? ಸೋವಿಯತ್ ರಷ್ಯಾದ ಮಿಖಾಯಿಲ್ ಗೊರ್ಬಚೇವ್ ಅವರ ಗ್ಲಾಸ್‌ನಾಸ್ಟ್ ಆ್ಯಂಡ್ ಪೆರಿಸ್ಟ್ರೋಯಿಕಾ ರಾಜಕೀಯರಂಗದಲ್ಲಿ ಸೃಷ್ಟಿಸಿದ ಕಂಪನವನ್ನು ಮರೆಯಲಾದೀತೆ? ಇಂಥ ಹೀರೋಗಳು ಜಾಗತಿಕ ವೇದಿಕೆಯಲ್ಲಿ ಮಿಂಚಿ ಮೆರೆಯುತ್ತಿದ್ದಾಗ ಭಾರತೀಯರಾದ ನಾವೂ ಒಬ್ಬ ಐಕಾನ್‌ಗಾಗಿ, ಪ್ರೇರಕ ಶಕ್ತಿಗಾಗಿ, ನಮ್ಮೆಲ್ಲರನ್ನೂ ಒಂದು ಮಾಡುವ ದೈವಕ್ಕಾಗಿ ಹಾತೊರೆದಿದ್ದಿದೆ. ನಮ್ಮ ನೆಲದಲ್ಲೂ ಅಂಥ ತಾರೆಯೊಂದು ಜನ್ಮಿಸಲಿ ಎಂದು ಮೊರೆಯಿಟ್ಟಿದ್ದಿದೆ.ಆ ಮೊರೆಗೆ ದೇವರು ಸ್ಪಂದಿಸಿದಾಗ ಸಿಕ್ಕವನೇ ಸಚಿನ್ ರಮೇಶ್ ತೆಂಡೂಲ್ಕರ್!ಅವತ್ತು 1989ರಲ್ಲಿ ಪಾಕಿಸ್ತಾನದಲ್ಲಿ ನೀನು ಟೆಸ್ಟ್‌ಗೆ ಪದಾರ್ಪಣೆ ಮಾಡಿದೆ. ಮೂರನೇ ಟೆಸ್ಟ್‌ನಲ್ಲಿ ಇಮ್ರಾನ್ ಖಾನ್, ವಾಸಿಂ ಅಕ್ರಂ ಮತ್ತು ವಕಾರ್ ಯೂನಿಸ್ ದಾಳಿಗೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತರಗೆಲೆಗಳಂತೆ ಉದುರಿದ್ದರು. ಇನ್ನೊಂದು ಬದಿಯಲ್ಲಿ ಸಿದ್ಧು ಅಸಹಾಯಕನಾಗಿ ನಿಂತಿದ್ದ. ಆ ವೇಳೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ನೀನು ಬ್ಯಾಟ್ ಹಿಡಿದು ಬಂದೆ. ನೋಡನೋಡುತ್ತಿದ್ದಂತೆಯೇ ವಕಾರ್ ಹಾಕಿದ ಬೌನ್ಸರ್ ನಿನ್ನ ಮೂಗನ್ನೇ ಚಚ್ಚಿತು. ರಕ್ತ ಬಳಬಳನೆ ಸುರಿಯಲಾರಂಭಿಸಿತು. ಧಾವಿಸಿ ಬಂದ ದೈಹಿಕ ತಜ್ಞ ಮೂಗಿಗೆ ಬ್ಯಾಂಡೇಜ್ ಹಾಕಿದ. ಇನ್ನೇನು ನೀನು ಪೆವಿಲಿಯನ್‌ನತ್ತ ಸಾಗುತ್ತೀಯಾ ಅಂತ ಅಂದು ಕೊಂಡೆವು. ಉಹೂಂ ಪೆಟ್ಟು ತಿಂದರೂ ಹೇಡಿಯಂತೆ ಶತ್ರುವಿಗೆ ನೀನು ಬೆನ್ನು ತೋರಲಿಲ್ಲ. ವಕಾರ್ ಎಸೆದ ಲಾಸ್ಟ್ ಬಾಲನ್ನು ಬೌಂಡರಿಗಟ್ಟಿದಾಗ ನಿನ್ನಲ್ಲೊಬ್ಬ ಸೇನಾನಿ ಕಂಡುಬಂದ. ಅಬ್ಬಾ ಕೊನೆಗೂ ಕೀಳರಿಮೆಯಿಂದ, ಆತ್ಮವಿಶ್ವಾಸದ ಕೊರತೆಯಿಂದ ನರಳುತ್ತಿದ್ದ ನಮಗೊಬ್ಬ ಗಂಡುಗಲಿ ಸಿಕ್ಕಿದ ಎಂದು ಆನಂದ ಪಟ್ಟೆವು. ರದ್ದಾದ ಏಕದಿನ ಪಂದ್ಯದಲ್ಲಿ ಆಗಿನ ಸ್ಪಿನ್ ಮಾಂತ್ರಿಕ ಅಬ್ದುಲ್ ಖಾದಿರ್ ಅವರ ಬೌಲಿಂಗ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಬಾರಿಸಿದಾಗಲಂತೂ ನಮ್ಮ ಖುಷಿಗೆ ಎಲ್ಲೆಯೇ ಇರಲಿಲ್ಲ. 150 ವರ್ಷಗಳ ಕಾಲ ಬ್ರಿಟಿಷರಿಗೆ ನಮ್ಮ ನೆಲ, ಜಲವಷ್ಟೇ ಅಲ್ಲ ಮನಸ್ಸನ್ನೂ ದಾಸ್ಯಕ್ಕಿಟ್ಟು ಸ್ವಾತಂತ್ರ್ಯ ಬಂದ ಮೇಲೂ ದಾಸ್ಯದ ಗುಂಗಿನಿಂದ ಹೊರಬರಲು ಹೆಣಗುತ್ತಿರುವಾಗ, ನಮಗೂ ಆಳುವ ತಾಕತ್ತಿದೆ ಅನ್ನೋದನ್ನು ನೀನು ಬ್ಯಾಟ್ ಮೂಲಕ ಸಾಬೀತು ಮಾಡಿದೆ. ಆಗ ನಾವೇ ನೀನಾಗಿ ಖುಷಿಪಟ್ಟೆವು.ಈ ನಡುವೆ 1992ರಲ್ಲಿ ನಿನ್ನ ಅಗ್ನಿ ಪರೀಕ್ಷೆಗೆಂದು ವೇದಿಕೆ ಸಜ್ಜಾಗಿತ್ತು. ಅದು ಜಗತ್ತಿನಲ್ಲಿಯೇ ಅತ್ಯಂತ fastest and bouncyಪಿಚ್ ಎಂಬ ಖ್ಯಾತಿ ಪಡೆದಿದ್ದ ಪರ್ತ್ ಭಾರತ ಸೋಲುವುದು ಪೂರ್ವ ನಿರ್ಧರಿತ ಎಂದು ಅದಾಗಲೇ ಷರಾ ಬರೆದಿದ್ದರೂ ಎಲ್ಲರ ಕಣ್ಣು ನಿನ್ನ ಮೇಲಿತ್ತು. ಆ ದಿನ ನೀ ಬ್ಯಾಟ್ ಹಿಡಿದು ಬಂದೆ- ಪರ್ತ್‌ನಲ್ಲಿ ಆಡಿದ ಮೊದಲ ಇನಿಂಗ್ಸ್‌ನಲ್ಲೇ ಶತಕ ಬಾರಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಪಡೆದೆ. ನೀ ಹೊಡೆದ 118 ರನ್‌ಗಳು ನಿಜಕ್ಕೂ ಅದ್ಭುತ. ಮುಂದಿನ ಟೆಸ್ಟ್ ಸಿಡ್ನಿಯಲ್ಲಿ. ಪಟಪಟನೆ ವಿಕೆಟ್ ಕಳೆದುಕೊಂಡಿದ್ದ ಭಾರತ ಡ್ರಾ ಮಾಡಿಕೊಳ್ಳಲು ಹೆಣಗುತ್ತಿತ್ತು. ಆಗ ರವಿಶಾಸ್ತ್ರಿ ಹೆಗಲಿಗೆ ಹೆಗಲು ಕೊಟ್ಟು ನೀ ಗಳಿಸಿದ ಅಜೇಯ 148 ರನ್‌ಗಳು ಭಾರತವನ್ನು ಮುಖಭಂಗದಿಂದ ತಪ್ಪಿಸಿತು. ಅದೇ ವರ್ಷ ಕೇಪ್‌ಟೌನ್‌ನಲ್ಲಿ ಅಜರ್ ಜತೆಗೂಡಿ ನೀ ಗಳಿಸಿದ 169ರನ್‌ಗಳು ತಂದುಕೊಟ್ಟ ಖುಷಿ ಇಂದಿಗೂ ಮನದಲ್ಲಿ ಬೆಚ್ಚಗಿದೆ.1998ರಲ್ಲಿ ಶಾರ್ಜಾದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸೆಂಚುರಿ ಹೊಡೆದು ಕಪ್ ತಂದು ಕೊಟ್ಟಿದ್ದೂ ನೆನಪಿದೆ. ಟೆನ್‌ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಆ ಆಟ ಇಂದಿಗೂ ನೇರ ಪ್ರಸಾರ ಆಗುತ್ತಿದೆ ಅನ್ನೋ ರೀತಿ ಟಿ.ವಿ. ಮುಂದೆ ಕೂತು ಕುತೂಹಲದಿಂದ ವೀಕ್ಷಿಸುತ್ತೇವೆ. 2003ರ ವರ್ಲ್ಡ್‌ಕಪ್‌ನಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 271 ರನ್ ಹೊಡೆದಾಗ ಸೋತುಬಿಡ್ತೀವೇನೋ ಅಂತ ಅನ್ನಿಸಿತ್ತು. ಆದರೆ ರಣಹದ್ದಿನಂತೆ ಬರುವ ಶೋಯೆಬ್ ಅಖ್ತರ್‌ನ ಬೌಲಿಂಗ್‌ನ ಲಯವನ್ನೇ ಹಾಳು ಮಾಡಿ, ಅಂದು ನೀನು ಗಳಿಸಿದ ಬಿರುಸಿನ 98 ರನ್‌ಗಳು ಭಾರತದ ಗೆಲುವಿಗೆ ಕಾರಣವಾದವು. ಪಾಕ್ ವಿರುದ್ಧ ನಾಲ್ಕನೇ ಯುದ್ಧದಲ್ಲಿ ಜಯಿಸಿದಷ್ಟು ಖುಷಿಯಾಯಿತು.ಜತೆಗೆ ನೀನೆಂದೂ ಸೋಗು ಹಾಕಿದವನಲ್ಲ. ಅಂದು ನಿನ್ನ ಹುಟ್ಟುಹಬ್ಬದ ದಿನ ಶಾರ್ಜಾದಲ್ಲಿ ಸೆಂಚುರಿ ಹೊಡೆದು ಪತ್ನಿಗೆ ಅರ್ಪಿಸಿದೆ. ಕೆಲವರು ಬೇಸರಪಟ್ಟು ಕೊಂಡರು. ಆದರೆ ಅವತ್ತು ಈ ಸೆಂಚುರಿ ಶತಕೋಟಿ ಭಾರತೀಯರಿಗೆಂದು ಎಲ್ಲರಂತೆ ನೀನೂ ಸೋಗು ಹಾಕಬಹುದಿತ್ತು. ಆದರೆ ಟೀಕಾಕಾರರ ಬಗ್ಗೆ ತಲೆಕೆಡಿಸಿಕೊಳ್ಳದೆ, ಪತ್ನಿಯ ಮೇಲಿನ ಪ್ರೀತಿಯನ್ನು ತೋರಿಸಿಕೊಂಡೆ! ಆಟವೊಂದೇ ಅಲ್ಲ, ವ್ಯಕ್ತಿತ್ವದಿಂದಲೂ ಆದರ್ಶ ವ್ಯಕ್ತಿಎನಿಸಿದೆ. ಸೋಗಲಾಡಿತನಕ್ಕೆ ಬದಲು ಆಟದಿಂದ ದೊಡ್ಡವನೆನಿಸಿದೆ. ಹೆಸರು ಹೇಳಿಕೊಳ್ಳದೆ ತೆರೆಮರೆಯಲ್ಲಿ ಮುಕ್ತ ಮನಸ್ಸಿನಿಂದ ದಾನ ಕಾರ್ಯವನ್ನು ಮಾಡುತ್ತಾ ಬಂದಿದ್ದೀಯಾ. ಮ್ಯಾಚ್ ಫಿಕ್ಸಿಂಗ್ ಕಳಂಕ ಎಲ್ಲರನ್ನೂ ಅಂಟಿದರೂ ನಿನ್ನ ನಿಷ್ಠೆ ಬಗ್ಗೆ, ದೇಶಪ್ರೇಮದ ಬಗ್ಗೆ ನಮ್ಮ ಮನದಲ್ಲಿ ಕಿಂಚಿತ್ತೂ ಸಂಶಯ ಮೂಡಲಿಲ್ಲ.ಇಷ್ಟಕ್ಕೂ Conಗಳ (ವಂಚಕರು) ನಡುವೆ ಐಕಾನ್ ಆಗಿ ಉಳಿದವನು ನೀನು!ಸಚಿನ್ ಮೇಲೆ ನಾವು ಇಟ್ಟಿರುವ ವಿಶ್ವಾಸ, ಕೊಟ್ಟಿರುವ ಸ್ಥಾನ ಅಂಥದ್ದು. ಭಾರತದಲ್ಲಿ ಕ್ರಿಕೆಟ್ಟೇ ಧರ್ಮ ಎನ್ನುವುದಾದರೆ ಅದಕ್ಕೆ ತೆಂಡೂಲ್ಕರ್ ದೇವರು. ಹೌದು, ಸಚಿನ್ ಕ್ರಿಕೆಟ್ ಪಾದಾರ್ಪಣೆ ಮಾಡಿದ ಆಸುಪಾಸಿನಲ್ಲಿ ಉಚ್ಚ್ರಾಯಸ್ಥಿತಿಗೆ ಬಂದ ಪಿಟಿ ಉಷಾ, ವಿಶ್ವನಾಥನ್ ಆನಂದ್ ಕೂಡ ನಮ್ಮ ಮುಕುಟಮಣಿಗಳಾಗಿದ್ದವರೇ. ಆದರೆ ಸಚಿನ್ ನಮ್ಮನ್ನು ಆವರಿಸಿದಷ್ಟು ಬೇರಾರಿಗೂ ಆಗಲಿಲ್ಲ. ಕಪಿಲ್ ದೇವ್ ವಿಶ್ವಕಪ್ ಗೆಲ್ಲಿಸುವ ಮೂಲಕ ನಮಗೆ ಖುಷಿ ತಂದರೇ ಹೊರತು ನಾವೆಂದೂ ಕಪಿಲ್‌ರಿಂದ ದೊಡ್ಡದೇನನ್ನೂ ನಿರೀಕ್ಷಿಸಿದವರಲ್ಲ. ಸುನೀಲ್ ಗವಾಸ್ಕರ್ ಸಚಿನ್‌ಗಿಂತ ಸಾಕಷ್ಟು ಮೊದಲೇ ಟೆಸ್ಟ್‌ನಲ್ಲಿ 34 ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರಾದರೂ ನಾವು ಸಂಭ್ರಮಿಸಿದ್ದು ಮಾತ್ರ ಸಚಿನ್ ಸೆಂಚುರಿ ಹೊಡೆದಾಗಲಷ್ಟೇ. ಆತ ಏಕಾಂಗಿಯಾಗಿ ದೇಶವನ್ನು ಗೆಲ್ಲಿಸಿದ ಪಂದ್ಯಗಳ ಸಂಖ್ಯೆ ವಿರಳವಾಗಿರಬಹುದು. ಆದರೆ ಒಂದಿಡೀ ತಲೆಮಾರನ್ನು ಯಾರಾದರೂ ಬಹುವಾಗಿ ಪ್ರೇರೇಪಿಸಿದ್ದರೆ, ಹುರಿದುಂಬಿಸಿದ್ದರೆ ಅದು ಸಚಿನ್ ಮಾತ್ರ. ಆತ ಸತತವಾಗಿ ವಿಫಲಗೊಂಡಾಗ ನಮ್ಮ ಮನಸ್ಸು ಬೇಸರಗೊಂಡು, ನೋವು ತಿಂದು ಕಟುವಾಗಿ ಟೀಕಿಸಿದ್ದೂ ಇದೆ. ಇಷ್ಟಕ್ಕೂ ಬ್ಯಾಟಿಂಗ್‌ನಲ್ಲಿ ಸೃಷ್ಟಿಸಬಹುದಾದ ಪ್ರತಿ ದಾಖಲೆಯೂ ಸಚಿನ್ ಹೆಸರಲ್ಲೇ ಇರಬೇಕೆಂದು ಆತನಿಗಿಂತ ಹೆಚ್ಚಾಗಿ ಬಯಸಿದ್ದವರು ನಾವೇ. ಸಚಿನ್ ಬಗ್ಗೆ ಯಾರಾದರೂ ಅನ್ಯಥಾ ಮಾತನಾಡಿದಾಗ ಅವರ ಮೈಮೇಲೆ ಎರಗಿ ಬೀಳುತ್ತಿದ್ದವರೂ, ಏರಿ ಹೋಗುತ್ತಿದ್ದವರೂ ನಾವೇ. This little Bonzer plays like me ಎಂದು ಡಾನ್ ಬ್ರಾಡ್‌ಮನ್ ಹೇಳಿದಾಗ ಸಚಿನ್‌ಗಿಂತಲೂ ಹೆಮ್ಮೆಯಿಂದ ಬೀಗಿದ್ದವರೂ ನಾವೇ. ಸ್ವಂತಕ್ಕಾಗಿ ದೇವರನ್ನು ಭಜಿಸುವ ನಾವು ನಿಸ್ವಾರ್ಥವಾಗಿ ದೈವದ ಮುಂದೆ ಯಾರಿಗಾದರೂ ಪ್ರಾರ್ಥಿಸಿದ್ದರೆ ಅದು ಸಚಿನ್ ಶತಕಕ್ಕಾಗಿಯಷ್ಟೇ. ಭಾರತ ಸೋತಾಗಲೂ ಸಚಿನ್ ಹೊಡೆದನಲ್ಲಾ ಸಾಕು ಎಂದು ಅದೆಷ್ಟು ಸಲ ನಮಗೇ ನಾವೇ ಸಮಾಧಾನ ಮಾಡಿಕೊಂಡಿಲ್ಲ? ಭಗವಂತನ ಮೇಲೆ ವಿಶ್ವಾಸದ ಭಾರ ಹಾಕುವ ನಮ್ಮ, ನಿರೀಕ್ಷೆಯ ಭಾರವನ್ನು ಹೊತ್ತವನು ಸಚಿನ್ ಮಾತ್ರ.ಕಳೆದ ಏಪ್ರಿಲ್‌ನಲ್ಲಿ ಭಾರತ ವಿಶ್ವಕಪ್ ಗೆದ್ದಾಗ ನಮ್ಮ ಇಡೀ ತಂಡ ಟ್ರೋಫಿಗಿಂತ ಮೊದಲು ಹೊತ್ತು ಕುಣಿದಿದ್ದು ಸಚಿನ್‌ನನ್ನು. ಆ ಬಗ್ಗೆ ಕೇಳಿದಾಗ, He carried the burden of the nation for 21 years. It was time we carried him ಎಂದಿದ್ದ ವಿರಾಟ್ ಕೋಹ್ಲಿ. ಸಚಿನ್‌ನನ್ನು ನಾವು ನೋಡುವುದು, ಇಟ್ಟಿರುವುದು ಅಷ್ಟು ಎತ್ತರದಲ್ಲಿ. ಹಾಗಂತ ತಂಡಕ್ಕೆ ಹೊರೆಯಾಗುವವರೆಗೂ ಆತ ಆಡಬೇಕೆಂದಲ್ಲ. ನ್ಯೂಜಿಲ್ಯಾಂಡ್‌ನ ರಿಚರ್ಡ್ ಹ್ಯಾಡ್ಲಿಯವರ 431 ವಿಕೆಟ್ ದಾಖಲೆಯನ್ನು ನಮ್ಮ ಕಪಿಲ್‌ದೇವ್ ಮುರಿಯಬೇಕೆಂದು ಇಡೀ ದೇಶವೇ ಬಯಸಿತ್ತು. ಆ ದಾಖಲೆ ಮುರಿಯುವಷ್ಟರಲ್ಲಿ ಯುವ ಜಾವಗಲ್ ಶ್ರೀನಾಥ್‌ರ ಎರಡು ಅಮೂಲ್ಯ ಕ್ರೀಡಾ ವರ್ಷಗಳೇ ಬಲಿಯಾಗಿ ಬಿಟ್ಟಿದ್ದವು. ಇವತ್ತು ಸಚಿನ್‌ನಿಂದಾಗಿ ಅಜಿಂಕ್ಯ ರಹಾನೆ ಅವರಂಥ ಯುವ ಪ್ರತಿಭೆಗಳಿಗೆ ಜಾಗವೇ ಇಲ್ಲದಂತಾಗಿ ಬಿಟ್ಟಿದೆ. ಸಚಿನ್ ಸ್ವಾರ್ಥಿಯಂತೆ ಕಾಣಲಾರಂಭಿಸಿದ್ದಾನೆ. ಆದರೆ ನಮ್ಮ ಕಣ್ಣರೆದುರಿಗೆ ಸಚಿನ್ ಚಿಕ್ಕವನಾಗುವುದು ನಮಗೇ ಬೇಸರವುಂಟು ಮಾಡುತ್ತದೆ. ಕಳೆದ ವರ್ಷ, ಅದೂ ಅಣ್ಣಾ ಹಝಾರೆಯವರ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೇ ಸ್ವತಂತ್ರ ಭಾರತ ಕಂಡ ಅತ್ಯಂತ ಭ್ರಷ್ಟ ಕೇಂದ್ರ ಸರ್ಕಾರದಿಂದ ರಾಜ್ಯಸಭೆಗೆ ನೇಮಕವಾದಾಗಲೇ ದೇಶವಾಸಿಗಳು ಭ್ರಮನಿರಸನಗೊಂಡಿದ್ದರು. ಟ್ವಿಟ್ಟರ್‌ನಲ್ಲಿ ಒಂದೇ ಗಂಟೆಯೊಳಗೆ 65 ಸಾವಿರ ಜನ ‘ಅನ್‌ಫಾಲೋ’ ಮಾಡಿದ್ದರು. ಜನ ನಿನ್ನನ್ನು ಶಪಿಸುವುದರೊಳಗೆ, ನಿನ್ನ ಈಗಿನ ಆಟವನ್ನು ನೋಡುತ್ತಾ ನೋಡುತ್ತಾ ಹಳೆಯ ವೈಭವ, ಖುಷಿಯನ್ನು ಮರೆತುಬಿಡುವೊದರೊಳಗೆ ಸೂಕ್ತ ನಿರ್ಧಾರ ತೆಗೆದುಕೋ ಸಚಿನ್. ಅಂದಹಾಗೆ ಏಪ್ರಿಲ್ 24ಕ್ಕೆ ಸಚಿನ್‌ಗೆ 40 ವರ್ಷ.

9 Responses to “Happy B’day! ನಿಮ್ಮನ್ನು ಮರೆಯುವುದರೊಳಗೆ ನಿವೃತ್ತಿಯ ಮನಸ್ಸು ಮಾಡಿ ಸಚಿನ್!”

 1. Ravi says:

  Any of our article that has said AK Advani to retire from politics..I guess ur just fit for 24×7 channel 🙂

 2. Supriya says:

  Superb…..

 3. ravi says:

  sachin should pay at least in test cricket for 2 more years.its bez now indian test team need one senior player to guide these young players..soooooooooooooooooo..!

 4. Chandru says:

  Junk aritcle…

 5. braj says:

  Pratap,
  I agree with u. He is loosing it all, what he has earned in the last 20+ years. I was fan of Sachin before he scored his 100th century. After that i dont feel like watching his game. We waited for arround 2 years for his 100th century and that came against Bangladesh. What a blunder!
  Also he retired from the ODI just few hours before the England Series began last year, I think he had realized (or got intimation) that he would be dropped from the squad. Otherwise he would have retired.

 6. jayaraj says:

  Not good article..

 7. jayaraj says:

  sachin is God of cricket.. U cant just say he should be retired.. People love him stil even he dont play well, none of his true fans blame for his bad performance.. Those who dont like him are just criticizing as u written in this article.. Please dont comment on sachin so easily.. HE IS LEGEND

 8. Raghuram Reddy K B says:

  Pratap usually I like your all articles except Sachin’s retirement which you wrote in your recent article(Instead of article I would like to call it as your opinion). Let me ask you few questions please respond.
  You don’t think so that Advani who is 85 years old is still having an eye on PM seat?
  You don’t think so due to his desire only he is not at all declaring Narendra Modi as PM candidate for 2014 elections?

  Sachin is a person who was loved by all type of people in India and also all other cricket playing countries. When an 85 years old person is eagerly waiting to rule the country why can’t 40 years old person should have desire to play cricket when he is really one of the potential player compare to other youngsters?

 9. It is really convenience answer to all the master fans.

  But still , what (?) my will not accept it.