Date : 06-06-2010, Sunday | 19 Comments
ಕಳೆದ ವರ್ಷ ಇದೇ ಜೂನ್ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆಗಿನ ಇಂಧನ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಯಾವ ರೀತಿ ಬೀದಿಯಲ್ಲಿ ನಿಂತು ಜಗಳವಾಡಿಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಿ. 2009, ಏಪ್ರಿಲ್ನಲ್ಲಿ ಲೋಕಸಭೆ ಚುನಾವಣೆ ಮುಗಿದು ಮೇನಲ್ಲಿ ಫಲಿತಾಂಶ ಹೊರಬಿದ್ದಿತ್ತು. ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅಲ್ಲಿಗೆ ಇಡೀ ಜಿಲ್ಲೆ ಅಪ್ಪ-ಮಗನ ನಿಯಂತ್ರಣಕ್ಕೆ ಒಳಪಟ್ಟಂತಾಯಿತು. ಇತ್ತ ಇಂಧನ ಖಾತೆ ಕೊಟ್ಟಿದ್ದರೂ ಅದನ್ನು ಸ್ವತಂತ್ರವಾಗಿ ‘ಡೀಲ್’ ಮಾಡಲು ಯಡಿಯೂರಪ್ಪನವರು ಅವಕಾಶ ಕೊಡುತ್ತಿಲ್ಲ ಎಂದು ಈಶ್ವರಪ್ಪನವರಿಗೆ ಕೋಪ ಬಂದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದ ಸಂದರ್ಭದಲ್ಲೇ ಸಂಘರ್ಷ ಆರಂಭವಾಯಿತು. “ಶಿವಮೊಗ್ಗ ಲೋಕಸಭೆ ಚುನಾವಣೆ ವೇಳೆ ಹಣ, ಹೆಂಡ ಹಂಚಲಾಯಿತು” ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಅಂದು ಮುಖ್ಯಮಂತ್ರಿಯವರ ಮಾನ ಹರಾಜು ಹಾಕಲು ನಿಂತಿದ್ದ ಈಶ್ವರಪ್ಪನವರ ಬಾಯಿಂದ ಇಂದು ಎಂತಹ ಆಣಿಮುತ್ತುಗಳು ಉದುರುತ್ತಿವೆ ನೋಡಿ?
“ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕಾಲದ ದೇವರಾಜ ಅರಸು ಇದ್ದಂತೆ. ಅವರು ಕೈಗೊಂಡ ಹಿಂದುಳಿದ, ಬಡಜನರ ಪರವಾದ ಕಾರ್ಯಕ್ರಮಗಳನ್ನು ನಾಡಿನ ಜನತೆ ಹಾಡಿ ಹೊಗಳುತ್ತಿದೆ”!
ಹಾಗಂತ 2010, ಮೇ 27ರಂದು ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪನವರು ಶಿವಮೊಗ್ಗದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಯವರಿಗೆ ಗೌರವ ಡಾಕ್ಟರೇಟ್ ಬಂದಾಗ, ‘ಯಡಿಯೂರಪ್ಪನವರು ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ‘ವರ್ಷದ ಜೋಕು’ (Joke of the year) ಮಾಡಿದ್ದರು! ಈಶ್ವರಪ್ಪನವರು ಯಡಿಯೂರಪ್ಪನವರನ್ನು ದೇವರಾಜ್ ಅರಸ್ಗೆ ಹೋಲಿಸಿರುವುದು ಈ ವರ್ಷದ ಜೋಕು ಎನ್ನಬೇಕೆ?! ಮುಂದೊಂದು ದಿನ ಯಡಿಯೂರಪ್ಪನವರ ಪದಚ್ಯುತಿಯಾದರೆ ಮುಖ್ಯಮಂತ್ರಿ ಸ್ಥಾನ ತನಗೇ ದಕ್ಕಬಹುದು ಅಥವಾ ದಕ್ಕಿಸಿಕೊಳ್ಳೋಣ ಎಂಬ ದೂರಾಲೋಚನೆಯಿಂದ ಮಂತ್ರಿ ಪದವಿ ಬಿಟ್ಟು ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಈಶ್ವರಪ್ಪನವರ ಉದ್ದೇಶವೇನೇ ಇರಲಿ. ಪಕ್ಷದ ಅಧ್ಯಕ್ಷರಾಗಿ ಸರಕಾರ ಹಾಗೂ ಮುಖ್ಯಮಂತ್ರಿಯವರನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ, ಭಟ್ಟಂಗಿತನಗಳೂ ಅತ್ತ ಕಡೆ ಇರಲಿ. ಆದರೆ ಸಮರ್ಥನೆಯ ಭರದಲ್ಲಿ ಕೆಟ್ಟ ಹೋಲಿಕೆಗಳನ್ನು ಮಾಡುವುದು ಎಷ್ಟು ಸರಿ?
ಎಲ್ಲಿಯ ದೇವರಾಜ್ ಅರಸ್, ಎಲ್ಲಿಯ ಯಡಿಯೂರಪ್ಪ?
ಈಶ್ವರಪ್ಪನವರೇ, ಯಾವ ದೃಷ್ಟಿಯಲ್ಲಿ ಯಡಿಯೂರಪ್ಪ ನಿಮಗೆ ದೇವರಾಜ್ ಅರಸ್ ಅವರಂತೆ ಕಾಣುತ್ತಿದ್ದಾರೆ? ಮನಸ್ಸಿಗೆ ಬಂದಂತೆ ಹೋಲಿಕೆ ಮಾಡಲು, ಬಾಯಿಗೆ ಬಂದಂತೆ ಮಾತನಾಡಲು ಡಿ. ದೇವರಾಜ್ ಅರಸ್ ಅವರೇನು ಸಾಮಾನ್ಯ ವ್ಯಕ್ತಿಯೇ? 1972ರಿಂದ 1980ರವರೆಗೂ ಸುಮಾರು ೮ ವರ್ಷ ಕರ್ನಾಟಕವನ್ನಾಳಿದ ಅರಸ್ ಜತೆ ಹೋಲಿಸುವ ಮೊದಲು ಆ ವ್ಯಕ್ತಿ ಮಾಡಿದ ಸಾಧನೆಯಾದರೂ ಎಂಥದ್ದು ಎಂದು ಒಮ್ಮೆ ಯೋಚಿಸಿ? ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಅಕಾಲಿಕ ನಿಧನದ ನಂತರ ಇಂದಿರಾ ಗಾಂಧಿಯವರು ಪ್ರಧಾನಿಯಾದಾಗಲೇ ಕಾಂಗ್ರೆಸ್ ವಿಭಜನೆಯ ದಾರಿ ಹಿಡಿದಿತ್ತು. ಮೊರಾರ್ಜಿ ದೇಸಾಯಿ, ಜಗಜೀವನ್ರಾಮ್, ಎಸ್. ನಿಜಲಿಂಗಪ್ಪ, ಕಾಮರಾಜ ನಾಡಾರ್, ಸಂಜೀವ ರೆಡ್ಡಿ, ಸದೋಬಾ ಪಾಟೀಲ್, ಅತುಲ್ಯ ಘೋಷ್ ಮುಂತಾದ ಮಹಾನ್ ಧುರೀಣರು ಇಂದಿರಾ ವಿರುದ್ಧ ಧ್ರುವೀಕರಣಗೊಂಡಿದ್ದರು. ಇವರ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವ ರೆಡ್ಡಿಯವರ ವಿರುದ್ಧ ವಿ.ವಿ. ಗಿರಿಯವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಉಮೇದುವಾರರನ್ನಾಗಿ ಮಾಡಿ ಇಂದಿರಾ ಗಾಂಧಿಯವರು ಗೆಲ್ಲಿಸಿದ್ದು ನಿರೀಕ್ಷಿತ ಒಡಕಿಗೆ ಔಪಚಾರಿಕ ಚಾಲನೆ ನೀಡಿತು. ಕಾಂಗ್ರೆಸ್(ಎಸ್) ಹಾಗೂ ಕಾಂಗ್ರೆಸ್(ಐ-ಇಂದಿರಾ)ಎಂಬ ಎರಡು ಚೂರಾಯಿತು. ಹೀಗೆ 1969ರಲ್ಲಿ ಕಾಂಗ್ರೆಸ್ ಮೊಟ್ಟಮೊದಲ ಬಾರಿಗೆ ಇಬ್ಭಾಗವಾದಾಗ ಕರ್ನಾಟಕದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದ ದೇವರಾಜ್ ಅರಸ್ ಹೆಚ್ಚೂಕಡಿಮೆ ರಾಜಕೀಯದಿಂದ ನಿವೃತ್ತಿ ಯನ್ನೇ ಹೊಂದಿದ್ದರು. ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಮುಂತಾದ ಬಲಿಷ್ಠ ನಾಯಕರೆಲ್ಲ ಇಂದಿರಾ ವಿರುದ್ಧದ ಪಾಳಯ ಸೇರಿದ್ದರಿಂದಾಗಿ ದೊಡ್ಡ ಬಣ ಅವರದ್ದಾಗಿ ಅಧಿಕಾರವನ್ನು ತಾವೇ ಪಡೆದುಕೊಂಡರು. ಈ ಪಾಳಯದಿಂದ ಆಹ್ವಾನ ಬಂದರೂ ದೇವರಾಜ್ ಅರಸ್ ಮಾತ್ರ ಹೋಗಲಿಲ್ಲ. ಬದಲಿಗೆ ಇಂದಿರಾ ಗಾಂಧಿಯವರ ಜತೆ ಕೈಜೋಡಿಸಿದರು. ಮುಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಜಯಗಳಿಸಿದ ಕಾರಣ ೧೯೭೨, ಮಾರ್ಚ್ ೨೦ರಂದು ದೇವರಾಜ್ ಅರಸ್ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಅದು ‘ಮೂರು’ ದೃಷ್ಟಿಯಲ್ಲಿ ಒಂದು ಹೊಸ ಪರ್ವಕ್ಕೆ ನಾಂದಿ ಯಾಯಿತು.
1. ಸರಕಾರದ ಮಟ್ಟದಲ್ಲಿ:
ಮೈಸೂರು ರಾಜ್ಯವೆಂಬ ಹೆಸರನ್ನೇ ಉಳಿಸಿಕೊಳ್ಳಬೇಕೆಂಬ ಕೂಗು ದೊಡ್ಡದಾಗುತ್ತಿದ್ದರೂ ಗಟ್ಟಿ ಮನಸ್ಸು ಮಾಡಿದ ಮುಖ್ಯಮಂತ್ರಿ ದೇವರಾಜ್ ಅರಸ್, 1973ರಲ್ಲಿ ನಮ್ಮ ರಾಜ್ಯಕ್ಕೆ “ಕರ್ನಾಟಕ”ವೆಂಬ ವಿಸ್ತೃತ ನೆಲೆಗಟ್ಟಿನ ಹೆಸರನ್ನಿಟ್ಟರು. ಅದರ ಬೆನ್ನಲ್ಲೇ (1974) “ಉಳುವವನಿಗೇ ಭೂಮಿ”(Land to the tiller) ಎಂಬ ಕಾಯಿದೆಯನ್ನು ಜಾರಿಗೆ ತಂದರು. ಅರಸು ಹೆಸರನ್ನು ಅಜರಾಮರ ಮಾಡಿದ್ದೇ ಆ ನಿರ್ಧಾರ. ಇಂದಿಗೂ ಕರ್ನಾಟಕದಲ್ಲಿ ನಕ್ಸಲಿಸಂ ಬೇರು ಬಿಡಲು ಸಾಧ್ಯವಾಗಿಲ್ಲ ಎಂದಾದರೆ ಅದಕ್ಕೆ ಅರಸು ಕಾರಣ. ಇಲ್ಲದಿದ್ದರೆ ಕರ್ನಾಟಕ ಇನ್ನೊಂದು ಆಂಧ್ರಪ್ರದೇಶವಾಗುತ್ತಿತ್ತು. ಅವರು ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಎಲ್ಲ ಶೋಷಿತ, ಹಿಂದುಳಿದ, ಅವಕಾಶ ವಂಚಿತ ಸಮುದಾಯಗಳಿಗೂ ಸ್ವಂತ ಭೂಮಿ, ದುಡಿಮೆಗೊಂದು ಮಾರ್ಗ ಸಿಕ್ಕಿತು. ಪ್ರತಿ ಕುಟುಂಬಕ್ಕೆ 52 ಎಕರೆ ಜಾಗ ಮಾತ್ರ ಬಿಟ್ಟು ಉಳಿದದ್ದನ್ನೆಲ್ಲ ಕಿತ್ತುಕೊಂಡು ಭೂರಹಿತರಿಗೆ ಕೊಟ್ಟರು. ಲಿಂಗಾಯತರು ಮತ್ತು ಒಕ್ಕಲಿಗರು ಕರ್ನಾಟಕ ರಾಜಕಾರಣವನ್ನು ಭೋಗ್ಯಕ್ಕೆ ಪಡೆದುಕೊಂಡಂತೆ ವರ್ತಿಸುತ್ತಿದ್ದ ಕಾಲದಲ್ಲಿ, ಆ ಜಾತಿಗಳಿಗೆ ಸೇರಿದ ಶಾಸಕರ ವಿರೋಧದ ಹೊರತಾಗಿಯೂ ಇಂಥದ್ದೊಂದು ಭೂಸುಧಾರಣೆಯನ್ನು ಜಾರಿಗೆ ತರುವುದೆಂದರೆ ಸಾಮಾನ್ಯ ಮಾತೆ?!
ನೀವು ‘ಸ್ಪೆಸಿಫಿಕ್ ರಿಸರ್ವೇಶನ್’ ಅಥವಾ ‘ನಿರ್ದಿಷ್ಟ ಜಾತಿವಾರು ಮೀಸಲು’ ಎಂಬುದನ್ನು ಕೇಳಿದ್ದೀರಾ? ಸಂವಿಧಾನದಲ್ಲೇ ಮೀಸಲು ಅವಕಾಶವನ್ನು ನೀಡಿದ್ದರೂ ಒಬಿಸಿಗಳಲ್ಲಿ (ಇತರ ಹಿಂದುಳಿದ ಜಾತಿ) ಯಾವ ಜಾತಿಗೆ, ಯಾವ ಯಾವ ಹಂತಗಳಲ್ಲಿ ಎಷ್ಟೆಷ್ಟು ಮೀಸಲು ನೀಡಬೇಕು ಎಂದು ನಿರ್ಧರಿಸಿದ್ದು ಹಾಗೂ ಅದನ್ನು ಕರ್ನಾಟಕದಲ್ಲಿ ಮೊದಲು ಜಾರಿಗೆ ತಂದಿದ್ದೇ ಅರಸು. ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಆರ್ಥಿಕ ಸಶಕ್ತೀಕರಣವೆಂದರೆ ಬರೀ ಎಸ್ಸಿ/ಎಸ್ಟಿಗಳ ಬಗ್ಗೆ ಗಮನ ಹೋಗುತ್ತಿತ್ತು. ಆದರೆ ದೇವರಾಜ್ ಅರಸು ಒಬಿಸಿಗಳ ಒಗ್ಗೂಡುವಿಕೆಗೆ, ಅವರ ಶ್ರೇಯೋಭಿವೃದ್ಧಿಗೆ ಮುಂದಾದರು. ‘ಹಿಂದುಳಿದ ವರ್ಗಗಳ ಆಯೋಗ’ ಎಂಬ ಶಾಶ್ವತ ವ್ಯವಸ್ಥೆಯನ್ನೇ ರೂಪಿಸಿದರು. ಆ ಮೂಲಕ ಪಾಲಿಸಿ ಮೇಕಿಂಗ್ ಅಥವಾ ನೀತಿ ನಿರೂಪಣೆ ಕಾರ್ಯದಲ್ಲಿ ಸ್ಪಷ್ಟ ಹಾಗೂ ನಿರ್ದಿಷ್ಟ ಚೌಕಟ್ಟು ಹಾಕಿಕೊಟ್ಟರು. ಇಂತಹ ಅಧಿಕಾರಿ, ಇಂತಹ ಜಾತಿಗೆ ಸೇರಿದ ಅಧಿಕಾರಿ ಈ ಹುದ್ದೆಗೆ ಬಂದರೆ ಮಾತ್ರ ನಮಗೆ ಲಾಭವಾಗುತ್ತದೆ ಎಂದು ಲೆಕ್ಕಹಾಕುವುದಕ್ಕೆ ಅಥವಾ ಆತಂಕಪಡುವುದಕ್ಕೆ ಅವಕಾಶವೇ ಇಲ್ಲದಂತೆ ಮಾಡಬೇಕೆಂಬ ಉದ್ದೇಶ ಅದರ ಹಿಂದಿತ್ತು. ಜತೆಗೆ ‘ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ’ವನ್ನೂ ಆರಂಭಿಸಿದರು. (ಈಗ ಅದಕ್ಕೆ ‘ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ’ ಎಂದೇ ಹೆಸರಿಡಲಾಗಿದೆ.) ಈ ನಿಗಮದ ಸ್ಥಾಪನೆಯ ಮೂಲಕ ಸಣ್ಣ ಉದ್ದಿಮೆ, ವ್ಯಾಪಾರಕ್ಕೆ ಸಾಲ ಕೊಡುವ ಯೋಜನೆ ಆರಂಭಿಸಿದರು. ಹಿಂದುಳಿಯುವಿಕೆಯ ಆಧಾರದ ಮೇಲೆ ಸಾಲ ಸಿಗಲಾರಂಭಿಸಿತು. ಯಾವ ಖಾತ್ರಿಯೂ ಇಲ್ಲದ ‘ಪೆಟ್ಟಿ ಬ್ಯುಸಿನೆಸ್’ ಅಥವಾ ಚಿಲ್ಲರೆ ವ್ಯಾಪಾರಕ್ಕೆ ಯಾರು ತಾನೇ ಸಾಲ ಕೊಡುತ್ತಿದ್ದರು? ಸಣ್ಣ-ಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಿದ್ದವರು ಸಾಮಾನ್ಯವಾಗಿ ಒಬಿಸಿಗಳೇ. ಅವರೆಲ್ಲರಿಗೂ ಅನುಕೂಲವಾಯಿತು.
ಇನ್ನು ಹಾಸ್ಟೆಲ್ ಸೌಲಭ್ಯ ಎಸ್ಸಿ, ಎಸ್ಟಿಗಳಿಗೆ ಮಾತ್ರ ಸೀಮಿತ ವಾಗಿತ್ತು. ಇತರ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆಂದು ಪಟ್ಟಣಕ್ಕೆ ಬಂದು, ಅಡ್ಮಿಶನ್ ಪಡೆದುಕೊಂಡರೂ ವಸತಿ ಸಮಸ್ಯೆಯಿಂದ ನರಳಬೇಕಿತ್ತು. ಈ ಹಿನ್ನೆಲೆಯಲ್ಲಿ ಒಬಿಸಿಗಳಿಗೂ ವಸತಿ ಬೇಕೆಂಬುದನ್ನು ಮನಗಂಡ ಅರಸು, ಬ್ಯಾಕ್ವರ್ಡ್ ಕ್ಲಾಸ್ ಹಾಗೂ ಮೈನಾರಿಟಿ ಹಾಸ್ಟೆಲ್ಗಳನ್ನು ತೆರೆದರು. ಎಲ್.ಜಿ. ಹಾವನೂರ್ ನೇತ್ವತ್ವದಲ್ಲಿ ಆಯೋಗವೊಂದನ್ನು ರಚಿಸಿ, ಅದರ ಶಿಫಾರಸ್ಸುಗಳಂತೆ ಶಿಕ್ಷಣ ಹಾಗೂ ಔದ್ಯೋಗಿಕ ಮೀಸಲನ್ನು ಜಾರಿಗೆ ತಂದರು. ಅಷ್ಟೇ ಅಲ್ಲ, ಮೀಸಲು ಸೌಲಭ್ಯವಿದ್ದರೂ ಎಸ್ಸಿ, ಎಸ್ಟಿ ಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಲು ‘ರೋಸ್ಟರ್ ಪದ್ಧತಿ’ಯನ್ನು ಜಾರಿಗೆ ತಂದಿದ್ದೇ ಅರಸು.
2) ರಾಜಕೀಯ ಮಟ್ಟದಲ್ಲಿ:
ಖಂಡಿತ ಇಲ್ಲಿ ಜಾತಿ ಹುಡುಕುತ್ತಿಲ್ಲ. ಸ್ವಾತಂತ್ರ್ಯ ಚಳವಳಿಯನ್ನೇ ತೆಗೆದುಕೊಳ್ಳಿ. ಸಾಮಾನ್ಯವಾಗಿ ನೇತಾರರಾಗಿದ್ದವರೆಲ್ಲ ಮೇಲ್ಜಾತಿ ಯವರೇ ಆಗಿದ್ದರು. ಇತರ ಹಿಂದುಳಿದ ವರ್ಗದವರಿಗೂ ರಾಜಕೀಯ ಅಧಿಕಾರ ದಕ್ಕಬೇಕು, ಪ್ರಾತಿನಿಧಿತ್ವ ಸಿಗಬೇಕು ಎಂದು ಸ್ವಾತಂತ್ರ್ಯಾ ನಂತರ ನಮ್ಮ ರಾಜ್ಯದಲ್ಲಿ ಪ್ರಯತ್ನಿಸಿದ ಮೊದಲ ವ್ಯಕ್ತಿ ಅರಸ್. ಸಂಖ್ಯಾಬಲ ಇದ್ದ ಜಾತಿಯವರು ಮಾತ್ರ ಸಿಎಂ ಆಗಲು ಸಾಧ್ಯ ಎಂಬುದನ್ನು ಮುರಿದರು. ಯೋಗ್ಯತೆ ಇದ್ದರೆ ಯಾರೂ ಮುಖ್ಯಮಂತ್ರಿಯಾಗಬಹುದು ಎಂದು ಸಾಬೀತು ಮಾಡಿದರು. ಸಾಮಾಜಿಕ ನ್ಯಾಯದ ಜತೆ ಹಿಂದುಳಿದ ಜಾತಿ/ವರ್ಗಗಳನ್ನು ರಾಜಕೀಯವಾಗಿಯೂ ಮೇಲೆ ತರುವ ಕೆಲಸಕ್ಕೆ ಕೈಹಾಕಿದರು. ತೀರಾ ಸಣ್ಣ ಸಣ್ಣ , ಹೆಸರೂ ಕೇಳಲಾರದ ಜಾತಿಗಳವರಿಗೂ ಟಿಕೆಟ್ ನೀಡಿ ಗೆಲ್ಲಿಸಿದರು. ವೀರಪ್ಪ ಮೊಯಿಲಿ, ದೇವೇಂದ್ರಪ್ಪ ಘಾಳಪ್ಪ, ಬಂಗಾರಪ್ಪ ಮುಂತಾದವರನ್ನು ಸಂಪುಟಕ್ಕೆ ಸೇರಿಸಿಕೊಂಡು ಮಂತ್ರಿಗಳನ್ನಾಗಿ ಮಾಡಿದರು. ಸಾಮಾಜಿಕ ನ್ಯಾಯ ಪರಂಪರೆ ಆರಂಭವಾಗಿದ್ದೇ ಹೀಗೆ. ಬೀದರ್ನಲ್ಲಿ ಬಿ. ನಾರಾಯಣ್ರಾವ್, ಗುಲ್ಬರ್ಗದಲ್ಲಿ ಧರ್ಮಸಿಂಗ್, ಖರ್ಗೆ, ಬಾಬು ರಾವ್ ಚಿಂಚನ್ಸೂರ್, ಬಾಬುರಾವ್ ಚವ್ಹಾಣ್, ಬದಾಮಿಯ ಚಿಮ್ಮನಕಟ್ಟಿ, ಮಂಗಳೂರಿನಲ್ಲಿ ಮೊಯಿಲಿ, ಪೂಜಾರಿ, ಬ್ಲೇಸಿಯಸ್ ಡಿಸೋಜಾ, ಚಿಕ್ಕಬಳ್ಳಾಪುರದ ಆರ್.ಎಲ್. ಜಾಲಪ್ಪ, ರಾಯಚೂರಿನಲ್ಲಿ ಎಚ್.ಜಿ. ರಾಮುಲು, ಇವರಲ್ಲದೆ ಪತ್ತಾರ್, ವಿಶ್ವನಾಥ್, ರಘುಪತಿ ಮುಂತಾದವರನ್ನು ರಾಜಕೀಯಕ್ಕೆ ತಂದು, ಮೆಟ್ಟಿಲು, ಬುನಾದಿ ಹಾಕಿಕೊಟ್ಟವರೇ ಅರಸು.
3)ಸಾಮಾಜಿಕ ಮಟ್ಟದಲ್ಲಿ:
ದಕ್ಷಿಣದಲ್ಲಿ ಒಕ್ಕಲಿಗರು, ಉತ್ತರದಲ್ಲಿ ಲಿಂಗಾಯತರು ಎಂಬ ಪರಂಪರೆಯನ್ನು ಮುರಿದರು. ‘ಅವರು ಆಳುವವರು, ನಾವು ಆಳಿಸಿಕೊಳ್ಳುವವರು’ ಎಂಬ ಹಿಂದುಳಿದ ಜಾತಿ/ವರ್ಗಗಳಲ್ಲಿದ್ದ ಭಾವನೆಯನ್ನು ದೂರ ಮಾಡಲು ಪ್ರಯತ್ನಿಸಿದರು. ನೀವು ಯಾರಿಗೂ ಹೆದರಬೇಕಾಗಿಲ್ಲ, ನಿಮಗೂ ಸ್ವತಂತ್ರವಾಗಿ ಬದುಕುವ, ಆಳ್ವಿಕೆ ನಡೆಸುವ ಹಕ್ಕಿದೆ ಎಂದು ಮನವರಿಕೆ ಮಾಡಿಕೊಟ್ಟರು. ಪಂಚಾಯಿತಿ ವ್ಯವಸ್ಥೆಯನ್ನು ಮೊದಲು ಜಾರಿಗೆ ತಂದಿದ್ದು, ಅಧಿಕಾರ ವಿಕೇಂದ್ರೀಕರಣಕ್ಕೆ ಮೊದಲು ಪ್ರಯತ್ನಿಸಿದ್ದು ರಾಜಸ್ಥಾನವಾದರೂ, ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲನ್ನು ವ್ಯವಸ್ಥಿತವಾಗಿ ಮೊದಲು ಜಾರಿಗೆ ತಂದಿದ್ದು ಅರಸು. ಭಾರತದಲ್ಲಿ ಮೇಲ್ಜಾತಿಯವರ ಪ್ರಮಾಣ ಕೇವಲ 15 ಪರ್ಸೆಂಟ್, ಇತರ ಹಾಗೂ ಹಿಂದುಳಿದ ಜಾತಿ/ವರ್ಗಗಳ ಸಂಖ್ಯೆ 85 ಪರ್ಸೆಂಟ್. ಅದನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ‘A curious mix’ ಎಂದಿದ್ದರು. ಅಂದು ಹಿಂದುಳಿದವರಿಗೆ ಸೂಕ್ತ ಮೀಸಲು ಕೊಡದಿದ್ದರೆ ಇಂದಿಗೂ ಸರಿಯಾಗಿ ಪ್ರಾತಿನಿಧಿತ್ವ ಸಿಕ್ಕಿರುತ್ತಿರಲಿಲ್ಲ. ಈ 85 ಪರ್ಸೆಂಟ್ ಜನರ ಬಾಳನ್ನು ಎತ್ತರಿಸಲು ಶ್ರಮಿಸಿದವರ ಸಾಲಿನಲ್ಲಿ ಅರಸು ಬರುತ್ತಾರೆ. ಬಿಹಾರಕ್ಕೆ ಕರ್ಪೂರಿ ಠಾಕೂರ್ ಹೇಗೋ, ಕರ್ನಾಟಕಕ್ಕೆ ಅರಸು ಹಾಗೇ.
ಅಷ್ಟು ಮಾತ್ರವಲ್ಲ, ಕರ್ನಾಟಕದಲ್ಲಿ ಜನತಾದರ್ಶನವನ್ನು ಆರಂಭಿಸಿದ ಹಾಗೂ ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸಿದ ವ್ಯಕ್ತಿ ದೇವರಾಜ್ ಅರಸ್. ನಾಡಿನ ಸಂಸ್ಕೃತಿಗಾಗಿ ಕೊಡುಗೆಯನ್ನು ನೀಡಿದ ಹಿರಿಯರಿಗೆ ರಾಜ್ಯ ಪ್ರಶಸ್ತಿ ನೀಡುವ, ಬಡತನದಲ್ಲಿ ಬಳಲುತ್ತಿರುವ ಸಾಹಿತಿ-ಕಲಾವಿದರಿಗೆ ಮಾಸಾಶನ ಕೊಡ ಮಾಡುವ, ಕನ್ನಡವೇ ಆಡಳಿತ ಭಾಷೆ ಎಂದು ಘೋಷಿಸಿದ ಅಂತಹ ಮಹಾನ್ ವ್ಯಕ್ತಿಗೆ ಹಾಲಿ ಮುಖ್ಯಮಂತ್ರಿಯವರನ್ನು ಯಾವ ದೃಷ್ಟಿಯಲ್ಲಿ ಹೋಲಿಸುತ್ತಿದ್ದೀರಿ ಈಶ್ವರಪ್ಪ? ನಿಮ್ಮ ಯಡಿಯೂರಪ್ಪನವರು ಬಡಬಗ್ಗರಿಗೆ, ದೀನದಲಿತರಿಗೆ ಮಾಡಿ ರುವ ಘನಕಾರ್ಯವಾದರೂ ಏನು?
1. ಪಡಿತರ ಚೀಟಿ ವಿತರಣೆ ಮಾಡಿ ೭ ವರ್ಷ ಆಯಿತು.
2. ಪರೀಕ್ಷೆ ಸಮಯದಲ್ಲೂ ಸರಿಯಾಗಿ ಕರೆಂಟ್ ಕೊಡಲಿಲ್ಲ, ಈಗಲೂ ಕೊಡುತ್ತಿಲ್ಲ.
3. ಪ್ರಣಾಳಿಕೆಯಲ್ಲಿ ವರ್ಷಕ್ಕೆ 3 ಲಕ್ಷ ಮನೆ ಕಟ್ಟುವ ಭರವಸೆ ಕೊಟ್ಟಿದ್ದರೂ ಇದುವರೆಗೂ ಆಶ್ರಯ ಮನೆಗಳನ್ನು ಕಟ್ಟಿಲ್ಲ.
4. ಸಿಇಟಿ ಮೂಲಕ ಆಯ್ಕೆ ಮಾಡಿದ ಕೂಡಲೇ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಶುಲ್ಕವನ್ನು ಸರಕಾರವೇ ಭರಿಸಬೇಕು ಎಂಬ ನಿಯಮ ಇದ್ದರೂ ೨೦೦೮ರಿಂದ ಇದುವರೆಗೂ ದುಡ್ಡು ಕೊಟ್ಟಿಲ್ಲ.
5. ಅಲ್ಲಾ, ಯಡಿಯೂರಪ್ಪನವರು ಯಾವ ಕೆಳಜಾತಿಯವರನ್ನು ಬೆಳೆಸಿದ್ದಾರೆ?
6. ಆಪರೇಶನ್ ಕಮಲ ಮಾಡಿದಾಗಲೂ ‘ಯಾವ’ ಜಾತಿಯವರಿಗೆ ಗಾಳ ಹಾಕಿದರು?
7. ತಮ್ಮ ಜಾತಿಯನ್ನು ಬಿಟ್ಟು ಹೊರಗಿನವರ ಬಗ್ಗೆ ಯೋಚನೆಯೇ ಮಾಡದ ವ್ಯಕ್ತಿಯನ್ನು ದೇವರಾಜ್ ಅರಸ್ಗೆ ಹೋಲಿಸುವುದು ಸರೀನಾ?
ನಾಳೆ ಜೂನ್ 6. ದೇವರಾಜ್ ಅರಸ್ ಅವರ ಪುಣ್ಯತಿಥಿ. ಅವರು ನಿಧನರಾಗಿ 28 ವರ್ಷಗಳು ತುಂಬುತ್ತವೆ. ಈಶ್ವರಪ್ಪನವರೇ, ಏಕೆ ಕೆಟ್ಟ ಹೋಲಿಕೆಗೆ ಅರಸು ಅವರ ಹೆಸರನ್ನು ಬಳಸಿಕೊಳ್ಳುತ್ತೀರಿ?
Let him, Rest in peace.
The article is a real tribute to Mr. Devraj Urs. I heard from many elders (previous generations govt. servicemen) that Karnataka was under ‘Linngayaths’ and ‘Vokkaligas’ in every terms (jobs, promotions.. etc) those early days…
Ok… Though you talk too much about ‘caste’ in this article the truth still prevails… We can not completely ignore what was happening in the past…
Hi pratap . . . . . . . Good article. Nice 🙂 but you only concentrat on politics . Write an article about some other topics. And writing style is amazing. Bye see you in next week.
hello pratap sir
u r right that it is not right that k.s.ishwarrappa compared mr. yadeyurappa with devaraj arasu. one thing which troubled me is,, you made three sub heads like
1. ಸರಕಾರದ ಮಟà³à²Ÿà²¦à²²à³à²²à²¿
2) ರಾಜಕೀಯ ಮಟà³à²Ÿà²¦à²²à³à²²à²¿:
3)ಸಾಮಾಜಿಕ ಮಟà³à²Ÿà²¦à²²à³à²²à²¿:
but in each sub category u talked abt caste, caste and caste only.
i dont no why
u said that after making reservations also how those people didn’t got chance.
but whether u thought that ….coz of these reservations so many intelligent people r not getting chances.
i am not against that people. i respect humans apart of their caste.
but when it comes to education and profession field, the winner should be the deserved one, not the one who has reservation.
before so many years there is harresment but now a days its not like that.
Govt. itself says that we dont have to make difference between us”all are equal”. but Govt. itself making difference between us by these reservations.
before it was only sc/st but now its obc and all. approxm’tly 50% seats will go to them and 50% seats will be there for gen merit . thats why people are loosing interest from GOVT. Jobs. there are migrating to IT/BT, MNC’s e,t,c…
even i have friends of lower class.. but truly they are on top class., genuine people.
they never used their reservations anywhere, even in college fees also..
they said that they r capable to pay , so they dont need.
really great people..!!!!!!!!!
it shows that” TOP CLASS AND LOW CLASS IS NOT IN CASTE,,, IT IS IN OUR CULTURE, CHARACTER AND OUR BEHAVIOUR”..
WHICH MAKES US WHETHER TOP OR LOW.
ಪà³à²°à²¤à²¾à²ª ಸಿಂಹ…
ನಿಮà³à²® ನೇರ ನà³à²¡à²¿à²¯ ಮಾತà³à²—ಳೠಇಷà³à²Ÿà²µà²¾à²—ಿಬಿಡà³à²¤à³à²¤à²µà³†….
good one….
ಪà³à²°à²¤à²¾à²ªà³,
ಸಮಯೋಚಿತವಾದ ಪà³à²°à²¬à³à²¦à³à²§ ಲೇಖನ.
ನಿಜವಾಗಿಯೂ ಅವರೆಲà³à²²à²¾ ಮಾಡಿದà³à²¦à³ ತೀರ ಕೆಟà³à²¤ ಹೋಲಿಕೆ. ಅರಸà³à²°à²µà²° ಹೆಸರನà³à²¨à³ ಈರೀತಿ ಕೆಡಿಸà³à²µà³à²¦à³ ಸೂಕà³à²¤à²µà²²à³à²².
ಒಂದೠತಿದà³à²¦à³ ಪಡಿ. ಕಾಂಗà³à²°à³‡à²¸à³ (ಇಂದಿರಾ) ಸà³à²¥à²¾à²ªà²¨à³† ಆದದà³à²¦à³ ೧೯à³à³¦à²° ದಶಕದ ಉತà³à²¤à²°à²¾à²°à³à²§à²¦à²²à³à²²à²¿, ೧೯೬೯ ರಲà³à²²à²¿ ಅಲà³à²².
ಮà³à²‚ದೆ ದೇವರಾಜೠಅರಸೂ ಕೂಡ ಇಂದಿರಾ ಕಾಂಗà³à²°à³‡à²¸à³à²¸à²¨à³à²¨à³ ಬಿಟà³à²Ÿà³ ಕಾಂಗà³à²°à³‡à²¸à³ (ಅರಸà³) ಸà³à²¥à²¾à²ªà²¿à²¸à²¿à²¦à³à²¦à²°à³ ಅವರ ಜೊತೆಗೆ ಮಣಿಪಾಲದ ಶà³à²°à³€ ಟಿ.ಎ.ಪೈಯವರಿದà³à²¦à²°à³. ೧೯೮೦ರ ಚà³à²¨à²¾à²µà²£à³†à²¯à²²à³à²²à²¿ ಪೈಯವರೠಅರಸೠಕಾಂಗà³à²°à³‡à²¸à²¿à²¨à²¿à²‚ದ ಸà³à²ªà²°à³à²§à²¿à²¸à²¿à²¦à²¾à²—, ಕಾಂಗà³à²°à³‡à²¸à²¿à²—ೆ ಅà²à³à²¯à²°à³à²¥à²¿ ಸಿಗದೇ ಇದà³à²¦à²¾à²—, ಉಡà³à²ªà²¿à²¯à²²à³à²²à²¿ ರಿಕà³à²·à²¾ ಚಾಲಕರ ಸಂಘದ ನಾಯಕರಾಗಿದà³à²¦ ಆಸà³à²•ರೠಫೆರà³à²¨à²¾à²‚ಡೀಸೠಅನಯಾಸವಾಗಿ ಕಾಂಗà³à²°à³‡à²¸à³ ಟಿಕೆಟೠಗಿಟà³à²Ÿà²¿à²¸à²¿à²•ೊಂಡದà³à²¦à³. ನಂತರದ ಅವರ ರಾಜಕೀಯ ಜೀವನ ಈಗ ಇತಿಹಾಸ.
B.J.P(Mr.yeddurappa)completed 2yrs of his power…………… devraj arus ruled for 8 yrs and you hav listed the progress of devraj arus in 8 yrs………… so ithink let us wait and see for 5 yrs……… wat do u think???????????????
A very good article. A writer must always highlight the issues like this without any hesitation. I am really proud of you.
I request you to write an artcile analyising the “investor meet-2010” recently held at Blore and compare the same with What SM krishna did. Are these meets really turned up into big investments??? I am happy even if this Govt eats 20% of what investments they mentioned. But they should give full support to investors with high spirit and in the interest of ppl of KA.
Regards
Anantharama Shetty
Abu Dhabi
Dear Pratap,
U r wrong.
U don’t know much about Arasu.
Yeddi is much better than him
ಗಾಳಿ ಬಿಸಿದ ಕಡೆ ತೂರಿಕೂ anno gaade matin nenapu bartaide….ella rajakarnigale aste…
Karyavasi kattekalu- ishwarappa’s policy..:-D
Dear Pratap,
Whatever you written which is 100% currect,but apart from that you need to know much more about what really Arasu was, you don’t Arasu’s another face.
after death every one will becom good, even though it’s nice Artical……,
“If your vision is good, every one is good in this whole world”
i agree with veenus , even my opinion is same, i except a comment for this from pratap sir,..pls do reply
A very good article.
@veenus
I think ur wrong.now reservation is applicable only for those prpole who comes below creamy layer that means those who r sc/st or obc and they r having income above two laks..they will not get any reservation and they r considered as general only(above creamy layer).
A very good article.
@veenus
I think ur wrong.now reservation is applicable only for those people who comes below creamy layer that means those who r sc/st or obc and they r having income above two laks..they will not get any reservation and they r considered as general only(above creamy layer).
So according to me the reservation is a good factor to achive equality in the society.
@Pradeepn @ Narayan
who said that reservetion is not there for sc/st and obc who r having income above 2 laks?
no..sc/st and obc yavrige eshte income idru reservation ide..it happened to my close friend..she is very rich and still she got all the reservations..it is not at all good to give the reservation on the basis of caste..NA…NA…NA………
i really like ur thougth, u gave clear & correct information about aarasu………. thanx a lot.
hmm…….u jst read this book “aravattu varshagalu”,written by D.Devaraja urs brother D.Kemparaja urs(farmer cine star in kannada during 1960’s)……….to know about him well……………….
In that u can understand well why urs make that land redistribution process………….and what actually the situation was there in karnataka during that time……………
Evaga lingayatara vokkaligarege avakashave kammi aggide Reservation inda namallu badavaru idare central alli GM ge sersidare