Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ರಾಜ್ಯಕ್ಕಂಟಿದ ಶಾಪ ಈ ನಮ್ಮ ರಾಜ್ಯಪಾಲ, ಮುಖ್ಯಮಂತ್ರಿ!

ರಾಜ್ಯಕ್ಕಂಟಿದ ಶಾಪ ಈ ನಮ್ಮ ರಾಜ್ಯಪಾಲ, ಮುಖ್ಯಮಂತ್ರಿ!

1. ಈ ದೇಶದ ಯಾವುದಾದರೊಂದು ರಾಜ್ಯ ಸಂವಿಧಾನದ ವಿಧಿವಿಧಾನಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದರೆ ಅಂತಹ ರಾಜ್ಯಕ್ಕೆ ಮೊದಲು ಎಚ್ಚರಿಕೆ ನೀಡಬೇಕು.

2. ರಾಜ್ಯಪಾಲರಿಂದ ವರದಿ ತರಿಸಿಕೊಳ್ಳಬೇಕು ಮತ್ತು ಸರಕಾರದಿಂದ ವಿವರಣೆ ಕೇಳಬೇಕು.

3. ಕೂಡಲೇ ಕ್ರಮತೆಗೆದುಕೊಳ್ಳದಿದ್ದರೆ ಅರಾಜಕ ಪರಿಸ್ಥಿತಿ ಏನಾದರೂ ಸೃಷ್ಟಿಯಾಗಬಹುದೇ ಎಂಬ ಸಾಧ್ಯಾಸಾಧ್ಯತೆಯನ್ನೂ ತಿಳಿದುಕೊಳ್ಳಬೇಕು.

4. ಬಾಹ್ಯ ಆಕ್ರಮಣ ಅಥವಾ ಆಂತರಿಕ ಬಿಕ್ಕಟ್ಟೇನಾದರೂ ಸೃಷ್ಟಿಯಾಗಿದ್ದರೆ, ಆಡಳಿತಯಂತ್ರ ಹದಗೆಟ್ಟು ಹೋಗುವ ಸಾಧ್ಯತೆ ಇದೆ ಎಂದಾದರೆ

ಹಾಗೂ

5. ಆ ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ಮುರಿದು ಬಿದ್ದಿದ್ದರೆ, ಎಲ್ಲ ಪ್ರಯತ್ನಗಳ ಹೊರತಾಗಿಯೂ ಆಡಳಿತ ಯಂತ್ರವನ್ನು ಸರಿಪಡಿಸಲು ಸಾಧ್ಯವಿಲ್ಲವಾಗಿದ್ದರೆ, ಸಮಸ್ಯೆಯನ್ನು ಸರಿಪಡಿಸಲು ಬೇರೆ ಮಾರ್ಗಗಳೇ ಇಲ್ಲವೆಂದಾದರೆ ಅಂತಹ ಸಂದರ್ಭದಲ್ಲಿ 356ನೇ ವಿಧಿ ಪ್ರಯೋಗಿಸಿ  ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬಹುದು.

ಹಾಗಂತ ಸಂವಿಧಾನದಲ್ಲೇ ಸ್ಪಷ್ಟವಾಗಿ ಹೇಳಲಾಗಿದೆ. ಸರ್ಕಾರಿಯಾ ಆಯೋಗದ ಅಭಿಪ್ರಾಯ  ಮತ್ತು ಶಿಫಾರಸ್ಸು ಕೂಡಾ ಇದೇ ಆಗಿತ್ತು. ಅಂತಹ ಯಾವ ಪರಿಸ್ಥಿತಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಸೃಷ್ಟಿಯಾಗಿದೆ? ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ? ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ, ವ್ಯವಸ್ಥೆ ಮುರಿದು ಬಿದ್ದಿದೆ ಎಂದು ಹೇಳುವುದಕ್ಕಾದರೂ ಸಾಧ್ಯವಿದೆಯೆ? ಸುಪ್ರೀಂ ಕೋರ್ಟ್ ಈಗ ನೀಡಿರುವ ತೀರ್ಪು ಕೂಡ ಅಂತಿಮವೇನಲ್ಲ. ಮರುಪರಿಶೀಲಿಸುವಂತೆ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಬಹುದು. ಈ ಮಧ್ಯೆ ಬಂಡಾಯವೆದ್ದಿದ್ದ 11 ಶಾಸಕರೇ ಮತ್ತೆ ಯಡಿಯೂರಪ್ಪನವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಯಾವ ಆಧಾರದ ಮೇಲೆ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಿದೆ ಎಂದು ಹೇಳಲು ಸಾಧ್ಯ? ಜತೆಗೆ 2010 ಅಕ್ಟೋಬರ್ 11ರಂದು ಇದ್ದ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸರಕಾರಕ್ಕೆ ಬಹುಮತವಿಲ್ಲ, ರಾಷ್ಟ್ರಪತಿ ಆಡಳಿತ ಹೇರಿ ಎಂದು ಶಿಫಾರಸ್ಸು ಮಾಡಲು ಹೇಗೆ ತಾನೇ ಸಾಧ್ಯವಿದೆ? ಹಾಗೇನಾದರೂ ‘Retrospective effect’ನಲ್ಲಿ ಕ್ರಮತೆಗೆದುಕೊಳ್ಳಬಹುದೆಂದಾದರೆ ಎಸ್.ಆರ್. ಬೊಮ್ಮಾಯಿ ಸರಕಾರವನ್ನು ವಜಾ ಮಾಡಿದ್ದು 1988ರಲ್ಲಿ, ಅದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು 1994ರಲ್ಲಿ. ಹಾಗಾದರೆ  ‘Retrospective effect’ನಲ್ಲಿ ಬಹುಮತ ಸಾಬೀತುಪಡಿಸುವಂತೆ ಬೊಮ್ಮಾಯಿಯವರಿಗೆ 1994ರಲ್ಲಿ ಸೂಚಿಸುವುದಕ್ಕಾಗುತ್ತಿತ್ತೆ? ಇಂತಹ ವಸ್ತುಸ್ಥಿತಿ ಕಣ್ಣ ಮುಂದಿದ್ದರೂ ಈ ಭಾರದ್ವಾಜ್ ಏಕೆ ಏಜೆಂಟರಂತೆ ವರ್ತಿಸುತ್ತಿದ್ದಾರೆ? ಆಗಿಂದಾಗ್ಗೆ ಬಿಜೆಪಿ ನಡೆಸುತ್ತಿರುವ ಅಪರೇಶನ್ ಕಮಲವನ್ನು ಖಂಡಿತ ಯಾರೂ ಒಪ್ಪಲು ಸಾಧ್ಯವಿಲ್ಲ. ಆದರೆ ಅದನ್ನು ಪ್ರಶ್ನಿಸಲು ಕಾಂಗ್ರೆಸ್್ಗಾಗಲಿ, ಮಾಜಿ ಕಾಂಗ್ರೆಸ್ಸಿಗ ಹಾಗೂ ಹಾಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗಾಗಲಿ ಯಾವ ನೈತಿಕ ಹಕ್ಕಿದೆ?

ಇಷ್ಟಕ್ಕೂ ಚುನಾಯಿತ ಪ್ರತಿನಿಧಿಗಳನ್ನು ಖರೀದಿಸುವ ಕೆಲಸವನ್ನು ಆರಂಭಿಸಿದ್ದು ಯಾವ ಪಕ್ಷ? ಜೆಎಂಎಂ ಲಂಚ ಹಗರಣ ಯಾವ ಪಕ್ಷದ ಪಾಪದ ಕೂಸು? 1993, ಜುಲೈನಲ್ಲಿ ನಡೆದ ವಿಶ್ವಾಸಮತ ಗೊತ್ತುವಳಿ ಸಂದರ್ಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಬೆಂಬಲ ಪಡೆಯುವ ಸಲುವಾಗಿ ಶಿಬು ಸೊರೇನ್, ಸೂರಜ್ ಮಂಡಲ್, ಅನಾದಿ ಚರಣ್ ದಾಸ್್ಗೆ ತಲಾ 50 ಲಕ್ಷ ನೀಡಿದ್ದು, ಇದೇ ತೆರನಾದ ಆಮಿಷವೊಡ್ಡಿ ಅಜಿತ್ ಸಿಂಗ್ ಪಕ್ಷದ 5 ಸಂಸದರನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಸಂಸತ್ತಿನಲ್ಲಿ ಕುದುರೆ ವ್ಯಾಪಾರ ಆರಂಭಿಸಿದ ಅಪಕೀರ್ತಿ ಯಾವ ಪಕ್ಷಕ್ಕೆ ಸಲ್ಲಬೇಕು? ಇದೇನು ಬರೀ ಅರೋಪವಲ್ಲ. 2000ದಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನರಸಿಂಹರಾವ್, ಬೂಟಾ ಸಿಂಗ್ ಅವರನ್ನು ದೋಷಿಗಳಾಗಿ ಮಾಡಿತು. ಈ ಹಿನ್ನೆಲೆಯಲ್ಲಿ ಜೆಎಂಎಂನ 4 ಹಾಗೂ ಅಜಿತ್ ಸಿಂಗ್ ಅವರ ಪಕ್ಷದ 5 ಸದಸ್ಯರನ್ನು ಹೊರಗಿಟ್ಟು ‘Retrospective effect’ನಲ್ಲಿ ನೋಡುವುದಾದರೆ 1993ರಲ್ಲಿ ರಾವ್ ಸರಕಾರ ಕೂಡ ಬಹುಮತ ಸಾಬೀತುಪಡಿಸಿರಲಿಲ್ಲವೆಂದಾಗಲಿಲ್ಲವೆ? ಇಂತಹ ಇತಿಹಾಸ, ಹಿನ್ನೆಲೆ ಇಟ್ಟುಕೊಂಡಿರುವ ಕಾಂಗ್ರೆಸ್ಸಿಗರು ಯಾವ ಮುಖ ಇಟ್ಟುಕೊಂಡು ಬಿಜೆಪಿಯವರ ಆಪರೇಶನ್ ಕಮಲವನ್ನು ಟೀಕಿಸುತ್ತಾರೆ?

ಕಾಂಗ್ರೆಸ್ ಹಾಕಿಕೊಟ್ಟಿದ್ದ ಇಂತಹ ಮೇಲ್ಪಂಕ್ತಿ ಇದ್ದರೂ 1999ರಲ್ಲಿ ವಿಶ್ವಾಸಮತ ಯಾಚಿಸಿದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಾವ ರೀತಿ ನಡೆದುಕೊಂಡಿದ್ದರು?

ಅಂದು ಅಟಲ್ ಕೂಡ ಖರೀದಿಗಿಳಿಯಬಹುದಿತ್ತು. ಬಹುಮತ ಸಾಬೀತಿಗೆ ಬೇಕಿದ್ದಿದ್ದು ಒಂದು ವೋಟು. ಒಂದು ವೋಟಿನಿಂದ (269-270) ಸರಕಾರ ಕಳೆದುಕೊಳ್ಳುವುದಕ್ಕೆ ಅಟಲ್ ಸಿದ್ಧರಾದರೇ ಹೊರತು, ಖರೀದಿಗಿಳಿಯಲಿಲ್ಲ. ಆ ಸಂದರ್ಭದಲ್ಲೂ ಕಾಂಗ್ರೆಸ್ ಎಲ್ಲ ರೀತಿಯ ಅನೈತಿಕ ಕೆಲಸಗಳನ್ನೂ ಮಾಡಿತ್ತು. 1999 ಫೆಬ್ರವರಿಯಲ್ಲೇ ಒರಿಸ್ಸಾದ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್್ನ ಗಿರಿಧರ್ ಗಮಾಂಗ್ ಏಪ್ರಿಲ್ ಬಂದರೂ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಇಂಥದ್ದೊಂದು ತಾಂತ್ರಿಕ ಕಾರಣದ ಲಾಭ ಪಡೆದುಕೊಂಡ ಕಾಂಗ್ರೆಸ್, ಗಮಾಂಗ್ ಅವರನ್ನು ದಿಲ್ಲಿಗೆ ಕರೆಸಿ ವಾಜಪೇಯಿ ಸರಕಾರದ ವಿರುದ್ಧ ವೋಟು ಹಾಕಿಸಿತು. ಅಷ್ಟೇ ಅಲ್ಲ, ಎನ್್ಡಿಎ ಮಿತ್ರಪಕ್ಷವಾಗಿದ್ದ ನ್ಯಾಷನಲ್ ಕಾನ್ಫರೆನ್ಸ್್ನ ಸಂಸದ ಸೈಫುದ್ದೀನ್ ಸೋಝ್ ವ್ಹಿಪ್ ಉಲ್ಲಂಘಿಸಿ ವಾಜಪೇಯಿಯವರ ವಿರುದ್ಧ ವೋಟು ಹಾಕಿದರು. ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದು, 2004ರಲ್ಲಿ ಮಂತ್ರಿ ಮಾಡಿದ್ದು ಯಾವ ಪಕ್ಷ?

ಕಾಂಗ್ರೆಸ್್ನ ಅನೈತಿಕ ಹಾಗೂ ಪ್ರಜಾತಂತ್ರ ವಿರೋಧಿ ಕೆಲಸಗಳು ಅಷ್ಟಕ್ಕೇ ನಿಲ್ಲಲಿಲ್ಲ!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸ್ಪೀಕರ್ ಬೋಪಯ್ಯ ಸೇರಿ ಪಿತೂರಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಹಾಗೂ ರಾಜ್ಯಪಾಲರು ಈಗ ಅರೋಪಿಸುವುದಾದರೆ ಇದೇ ಹಂಸರಾಜ್ ಭಾರದ್ವಾಜ್ ಕಾನೂನು ಮಂತ್ರಿಯಾಗಿದ್ದ ಯುಪಿಎ ಸರಕಾರ 2008ರಲ್ಲಿ ಮಾಡಿದ್ದೇನು? ಅಮೆರಿಕದ ಜತೆಗಿನ ನಾಗರಿಕ ಅಣು ಸಹಕಾರ ಒಪ್ಪಂದವನ್ನು ವಿರೋಧಿಸಿ  2008, ಜುಲೈ 8ರಂದು ಎಡಪಕ್ಷಗಳು ಕೇಂದ್ರದ ಕಾಂಗ್ರೆಸ್ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದವು. 2008, ಜುಲೈ 22ರಂದು ಯುಪಿಎ ಮೊದಲ ಅವಿಶ್ವಾಸ ಗೊತ್ತುವಳಿ ಎದುರಿಸಿತು. 59 ಸಂಸದರನ್ನು ಹೊಂದಿದ್ದ ಎಡಪಕ್ಷಗಳ ಬೆಂಬಲ ವಾಪಸ್್ನಿಂದಾಗಿ ತೀರಾ ಅಲ್ಪಮತಕ್ಕಿಳಿದಿದ್ದ ಕಾಂಗ್ರೆಸ್, 256-275 ಅಂತರದ 19 ಮತಗಳ ವಿಜಯ ಸಾಧಿಸಿದ್ದು ಹೇಗೆ? ಅಂದು 21 ಸಂಸದರು ಅಡ್ಡಮತ ಹಾಕಿದರು. 10 ಜನರು ವೋಟೇ ಹಾಕಲಿಲ್ಲ. ಅಂದು ಕಾಂಗ್ರೆಸ್ ಸರಕಾರ ಉಳಿಸಿಕೊಂಡಿದ್ದು  ಅಡ್ಡ ಮಾರ್ಗದ ಮೂಲಕವೇ ಅಲ್ಲವೇ? ಬಿಜೆಪಿ ಸಂಸದರಾದ ಅಶೋಕ್ ಅರ್ಗಲ್, ಫಗನ್ ಸಿಂಗ್ ಕುಲಸ್ತೆ, ಮಹಾವೀರ್ ಭಾಗೋರಾ ಕಾಂಗ್ರೆಸ್ ಪರ ವೋಟು ಹಾಕಿದರೆ, ಕರ್ನಾಟಕದಿಂದ ಆಯ್ಕೆಯಾಗಿದ್ದ ಬಿಜೆಪಿ  ಸಂಸದರಾದ ಸಾಂಗ್ಲಿಯಾನಾ ಹಾಗೂ  ಮನೋರಮಾ ಮಧ್ವರಾಜ್ ಗೈರುಹಾಜರಾದರು. ಅವತ್ತು ಈ ಐವರು  ಬಿಜೆಪಿ ಸಂಸದರನ್ನು ಕಾಂಗ್ರೆಸ್ ಖರೀದಿ ಮಾಡಿರಲಿಲ್ಲವೆ? ನಾನು ದುಡ್ಡು ತೆಗೆದುಕೊಂಡಿಲ್ಲ, ಅದರೆ ನನಗೆ ರಾಜ್ಯಪಾಲರ ಹುದ್ದೆ ನೀಡುತ್ತೇನೆಂದು ಸೋನಿಯಾ ಗಾಂಧಿಯವರು ಭರವಸೆ ನೀಡಿದ್ದರು ಎಂದು ಸ್ವತಃ ಮನೋರಮಾ ಮಧ್ವರಾಜ್ ಅವರೇ ಇತ್ತೀಚೆಗೆ ಹೇಳಿದ್ದಾರೆ. ಈ ರೀತಿಯ ಆಮಿಷ, ಅನ್ಯಪಕ್ಷಗಳ ಸಂಸದರ ಖರೀದಿ  ಪ್ರಜಾತಂತ್ರ ವಿರೋಧಿ ಕೆಲಸವಾಗಿರಲಿಲ್ಲವೆ?  ಇತ್ತೀಚೆಗಷ್ಟೇ ‘ದಿ ಹಿಂದು’ ಪತ್ರಿಕೆ ಹೊರಹಾಕಿದ ವಿಕಿಲೀಕ್ಸ್್ನಲ್ಲಿ ಇದನ್ನೆಲ್ಲ ಬಯಲು ಮಾಡಲಾಗಿದೆ. ಸಂಸದರ ಖರೀದಿಗಾಗಿ ಯುಪಿಎ ಅಮೆರಿಕದಿಂದ ಹಣ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಇಂತಹ ಗಂಭೀರ ಅರೋಪಗಳು ಕೇಳಿಬಂದಾಗ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದೇನು ಗೊತ್ತೆ?

‘ಈ ರೀತಿಯ ಅರೋಪಗಳಿಗೆ ಜನ ಯಾವ ರೀತಿ ಉತ್ತರ ಕೊಟ್ಟರು? ಮುಖ್ಯ ವಿರೋಧ ಪಕ್ಷ(ಬಿಜೆಪಿ) 14ನೇ ಲೋಕಸಭೆಯಲ್ಲಿ 138 ಸ್ಥಾನ ಹೊಂದಿತ್ತು. 15ನೇ ಲೋಕಸಭೆಯಲ್ಲಿ 116ಕ್ಕಿಳಿದಿದೆ. ಎಡಪಕ್ಷಗಳ ಬಲಾಬಲ 59ರಿಂದ ಕೇವಲ 24ಕ್ಕಿಳಿದಿದೆ. ಕಾಂಗ್ರೆಸ್ ಪಕ್ಷ ಮಾತ್ರ 145ರಿಂದ 206ಕ್ಕೆ ಏರಿಸಿಕೊಂಡಿದೆ. 61 ಸೀಟುಗಳ ಹೆಚ್ಚಳ. ಜನರ ತೀರ್ಪೇ ಅಂತಿಮ’ ಎಂದು ಬಿಟ್ಟರು.

ಅದೇ ಅಳತೆಗೋಲನ್ನು ಕರ್ನಾಟಕಕ್ಕೂ ಅನ್ವಯಿಸಿದರೆ?

ಮೊನ್ನೆಯಷ್ಟೇ ನಡೆದ ಉಪಚುನಾವಣೆಯಲ್ಲಿ ಮೂರಕ್ಕೆ ಮೂರೂ  ಸ್ಥಾನಗಳನ್ನು  ಬಿಜೆಪಿ ಪಡೆದುಕೊಂಡಿದೆ. ಆಪರೇಶನ್ ಕಮಲ ಹಾಗೂ  ಭ್ರಷ್ಟಾಚಾರ  ಆರೋಪಕ್ಕೆ ಜನ ನೀಡಿದ ತೀರ್ಪೇ ಈ ಫಲಿತಾಂಶ ಎಂದು ಬಿಜೆಪಿ ಕೂಡ ವಾದ ಮಾಡಬಹುದಲ್ಲವೆ?

ಕರ್ನಾಟಕದ ಬಿಜೆಪಿ ಸರಕಾರ ಈ ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರ, ಯಡಿಯೂರಪ್ಪನವರಷ್ಟು ಭ್ರಷ್ಟ ಮುಖ್ಯಮಂತ್ರಿಯನ್ನು ಈ ರಾಜ್ಯ ಕಂಡಿರಲಿಲ್ಲ, ವರ್ಷಕ್ಕೆ 5 ಲಕ್ಷ ಆಶ್ರಯ ಮನೆ ಕಟ್ಟುತ್ತೇವೆ, ಬಡವರನ್ನು ಉದ್ಧಾರ ಮಾಡುತ್ತೇವೆ ಎಂದೆಲ್ಲ ಹೇಳಿದ್ದ ಬಿಜೆಪಿ ಮೋಸವೆಸಗಿದೆ, ಉತ್ತರ ಕರ್ನಾಟಕದ ನೆರೆಸಂತ್ರಸ್ತರು ಬಿಸಿಲ ಬೇಗೆಯಲ್ಲಿ ಶೀಟಿನ ಸೂರಿನಡಿ ಬದುಕು ನೂಕುವಂತೆ ಮಾಡಿದೆ, ರಸ್ತೆಗಳನ್ನೇ ತಿಂದುಹಾಕಿದೆ, ಈ ರಾಜ್ಯ ತಲೆತಗ್ಗಿಸುವಂಥ ಕೆಲಸ ಮಾಡುತ್ತಿದೆ, ಈ ಸಿಎಂ ತೊಲಗಬೇಕು ಎಂಬುದರಲ್ಲಿ ಯಾವ ಸಂಶಯವೂ ಬೇಡ. ಹಾಗಂತ ಸರಕಾರವನ್ನು ಪತನಗೊಳಿಸಲು ಹಂಸರಾಜ ಹಿಡಿದಿರುವ ಮಾರ್ಗ ಮಾತ್ರ ಯಡಿಯೂರಪ್ಪನವರ ಭ್ರಷ್ಟಾಚಾರದಷ್ಟೇ ಅನೈತಿಕ. ಒಂದು ವೇಳೆ, ಭ್ರಷ್ಟಾಚಾರ, ಭೂಹಗರಣ, ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಮುಂತಾದುವುಗಳನ್ನಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸ್ಪೀಕರ್ ಬೋಪಯ್ಯ ರಾಜೀನಾಮೆ ನೀಡಬೇಕು ಎಂದಾದರೆ ಮನಮೋಹನ್ ಸಿಂಗ್ ಹಾಗೂ ಕೇಂದ್ರದ ಕಾಂಗ್ರೆಸ್ ಸರಕಾರ ಮೊದಲು ತೊಲಗಬೇಕು. ಈ ರಾಷ್ಟ್ರಕ್ಕೆ 1.76 ಲಕ್ಷ ಕೋಟಿ ಮೋಸ ಮಾಡಿರುವ 2ಜಿ ಹಗರಣ, ಯೆಸ್ ಬ್ಯಾಂಕ್ ಹಗರಣ, ಈ ರಾಷ್ಟ್ರ ವಿಶ್ವದ ಮುಂದೆ ತಲೆತಗ್ಗಿಸುವಂತೆ ಮಾಡಿದ 75 ಸಾವಿರ ಕೋಟಿ ರು.ಗಳ ಕಾಮನ್ವೆಲ್ತ್ ಹಗರಣ, ವಿಕಿಲೀಕ್ಸ್ ಹೊರಹಾಕಿದ 2008ರಲ್ಲಿ ನಡೆದ ಸಂಸದರ ಖರೀದಿ ಹಗರಣ… ಇವಿಷ್ಟೇ ಸಾಕಿದ್ದವು ಕೇಂದ್ರ ಸರಕಾರವನ್ನು ಕಿತ್ತೊಗೆಯಲು ಅಥವಾ ನೈತಿಕತೆ ಇರುವವರಿಗೆ ರಾಜೀನಾಮೆ ನೀಡಲು. ಇಷ್ಟಾಗಿಯೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಎಂದಾದರೂ ಭಾರದ್ವಾಜ್ ಅವರಂತೆ ವರ್ತಿಸಿದರೆ? ಪ್ರಧಾನಿ ಮನಮೋಹನ ಸಿಂಗ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲು ಮುಂದಾದರೆ?

ಅಲ್ಲ, ಭ್ರಷ್ಟಾಚಾರದ ಬಗ್ಗೆ ಇಷ್ಟೆಲ್ಲ ಮಾತನಾಡುವ ರಾಜ್ಯ ಕಾಂಗ್ರೆಸ್ ಎಂತಹ ಹಿನ್ನೆಲೆ ಹೊಂದಿದೆ?

ಕರ್ನಾಟಕ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಬೇರು ಬಿಟ್ಟಿದ್ದ 56 ಸಾವಿರ ಕೋಟಿ ರೂ.ಗಳ ಸ್ಟ್ಯಾಂಪ್ ಪೇಪರ್ ಹಗರಣದ ರೂವಾರಿಗಳು ಯಾರು? ಆ ಕಾಲಕ್ಕೆ ಇಂಥದ್ದೊಂದು ಕಂಡು ಕೇಳರಿಯದ ಭಾರೀ ಹಗರಣ ನಡೆದಿದ್ದು ಕಾಂಗ್ರೆಸ್ ರಾಜ್ಯ ಸರಕಾರಗಳ ಅವಧಿಯಲ್ಲೇ ಅಲ್ಲವೆ? ಇಂತಹ ಪಕ್ಷದಿಂದ ಬಂದಿರುವ ಹಾಗೂ ‘ನನ್ನ ಕಾಂಗ್ರೆಸ್ ಹಿನ್ನೆಲೆ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಹೇಳಿಕೊಳ್ಳುವ ಭಾರದ್ವಾಜ್ ಅವರಿಗೆ ಪ್ರಜಾತಂತ್ರ ಹಾಗೂ ನೈತಿಕತೆ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯಾದರೂ ಇದೆಯೇ, ನೀವೇ ಹೇಳಿ? ರಾಜ್ಯಪಾಲರಾದ ಮೇಲೂ ಪಕ್ಷದ ಏಜೆಂಟರಂತೆ ವರ್ತಿಸುವುದು ಎಷ್ಟು ಸರಿ? ರಾಜ್ಯಪಾಲರ ವರ್ತನೆಗೂ ವಿರೋಧ ಪಕ್ಷಕಾಂಗ್ರೆಸ್ ಅನುಸರಿಸುತ್ತಿರುವ ಧೋರಣೆಗೂ ಯಾವ ವ್ಯತ್ಯಾಸ ಕಾಣುತ್ತಿದೆ? ಸಂವಿಧಾನದ 355, 356ನೇ ವಿಧಿಗಳ ಬಗ್ಗೆ ಹೇಳುತ್ತಾ, ‘Such articles will never be called into operation and that they would remain a dead letter’ಎಂದಿದ್ದರು ಸಂವಿಧಾನ ಶಿಲ್ಪಿ ಅಂಬೇಡ್ಕರ್. ಆದರೆ ಹಂಸರಾಜ ಭಾರದ್ವಾಜ್ ನಡೆದುಕೊಳ್ಳುತ್ತಿರುವ ರೀತಿ ಹೇಗಿದೆ?

ಬಹಳ ಬೇಸರದ ವಿಚಾರವೆಂದರೆ ನಮ್ಮ ರಾಜ್ಯಕ್ಕೆ ಏಕಿಂಥ ಗತಿ ಬಂತು? ಭವ್ಯ ಇತಿಹಾಸ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆ ಹೊಂದಿರುವ, ಜಗತ್ತಿನ ಅಗ್ರಮಾನ್ಯ ಎಂಜಿನಿಯರ್್ಗಳಲ್ಲಿ ಒಬ್ಬರಾದ ವಿಶ್ವೇಶ್ವರಯ್ಯನವರಿಗೆ ಜನ್ಮ ನೀಡಿದ, ಐಟಿಗೆ ನೀಡಿದ ಆಧ್ಯತೆಯಿಂದಾಗಿ ವಿಶ್ವಮನ್ನಣೆ ಗಳಿಸಿದ ರಾಜ್ಯ ಈಗ ಯಾವ ಕಾರಣಗಳಿಗಾಗಿ ಸುದ್ದಿ ಮಾಡುತ್ತಿದೆ? ಒಂದೆಡೆ ವಿಕ್ಷಿಪ್ತ ಮನಸ್ಥಿತಿಯ ರಾಜ್ಯಪಾಲ, ಮತ್ತೊಂದೆಡೆ ಈ ದೇಶದ ಬಗ್ಗೆ ಪ್ರೀತಿ, ಅಭಿಮಾನ ಹೊಂದಿರುವವರೇ ಪ್ರಮುಖ ಮತದಾರರಾಗಿರುವ ಬಿಜೆಪಿ ಬೆಂಬಲಿಗರನ್ನು ತಲೆತಗ್ಗಿಸುವಂತೆ ಮಾಡಿರುವ ಮಹಾಭ್ರಷ್ಟ ಮುಖ್ಯಮಂತ್ರಿ. ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿಯವರ ಭ್ರಷ್ಟ, ಅನೈತಿಕ ಕೆಲಸಗಳನ್ನು ಸಮರ್ಥಿಸಿಕೊಳ್ಳುವುದರಲ್ಲೇ ಸರಕಾರ ತನ್ನ ಕಾಲವನ್ನೆಲ್ಲ ಹರಣ ಮಾಡುವಂತೆ ಮಾಡಿರುವ ಯಡಿಯೂರಪ್ಪ ಹಾಗೂ ನಕ್ಷತ್ರಿಕನಂತೆ ಕಾಡುತ್ತಿರುವ ರಾಜ್ಯಪಾಲ ಇವರಿಬ್ಬರೂ ನಿಜಕ್ಕೂ ನಮ್ಮ ರಾಜ್ಯದ ಪಾಲಿಗೆ ದೊಡ್ಡ ಶಾಪ.

ಇವರಿಬ್ಬರೂ ಮೊದಲು ತೊಲಗಬೇಕು.

42 Responses to “ರಾಜ್ಯಕ್ಕಂಟಿದ ಶಾಪ ಈ ನಮ್ಮ ರಾಜ್ಯಪಾಲ, ಮುಖ್ಯಮಂತ್ರಿ!”

 1. Ajish says:

  Dear Pratap,

  Every word you wrote in this article is true. The source of corruption in India is congress. When the other parties does the same congress’ will talk about moral and ethics. In a sense we also part of these mysteries, b’coz its always difficult to choose among the best ‘robbers’ during the elections. when we are going to wake up from this sleep?

  Thanks for your article. I need a small favor from you. Is there a english transcript of this article so that I can share this with my non-kannadiga friends?

  Thanks again

 2. Operationa kamala says:

  So Pratap you say , let BJP loot the democracy in the name of “Operation kamala” and justify the Speaker’s action of protecting CM by unconstitutionally disqualifying the MLAs ( more pity the independents!). And let the Reddy and co loot our state’s natural resource. And expect the Governor to be a constitutional puppet!!!.
  By the way its only because of BJP’s own men, BJP is in such position. The Yeddy leadership is such a way that revolt within party is a daily issue.
  You should allways be unbaised when you write about these topics. You should write both the faces of a matter or else people will be misguided.

 3. neovinod says:

  Typical Pratap Simha article once again. Good more Sir..

  Another must read note from Nitin Gupta
  http://www.facebook.com/notes/nitin-gupta/the-curious-case-of-rahul-gandhi/10150165037156384?refid=0

 4. neovinod says:

  Spelling mistake..
  “Good one Sir..”

 5. Vijaya Shetty says:

  Super article sir… Thanks for that…

 6. Naveen kushalappa says:

  obba kalla innobba kalla nannu kalla marga dindha oadisalu prayathna maduthiddare ..

 7. Vaishali says:

  Super article Pratap. This s required in right time.

 8. siddu says:

  ‘BJP’ge sikka avakaashavannu upayogisikolladiralu aantarikavaagi haagu baahyavaagi halavaaru kaaranagalive. Bi-election nadedaru.. BJP spashta bahumathavannu padedukolluvudaralli samshayavilla. Aadare ivarigella neethi paatada avashyakate ide. Ella raajakiya dhurinarige omme “PANCHATANTRA”da kathegalannu Bhodisuva ‘KARYAAGAARA’vannu hammikollabekagide.
  Namma ‘Karnatakada’ abhiuvruddhige nannalli kelavondu yochanegalive. Adakke Yuvakaru avashyakavaagi bekaagide. Prathapji nimmannu omme bhetiyaagi aa yochaneya bagge helabekendiruve. Nimma address or phone number nanage beku. Karnatakavannu kevala 10yrs nalli ondu sundara raajyavannagisuva aase. Dayamaadi taavu sahaya Maadi.

 9. Mahesh Jain says:

  Nijakkoo Sari ; e moolaka eradoo pakshagalu tamma gundiyannu taave todikolluttiddave !

 10. santhosh shetty says:

  ಖಂಡಿತ sir ಇವರಿಬ್ಬರೂ ನಮ್ಮ ರಾಜ್ಯದ ಪಾಲಿಗೆ ದೊಡ್ಡ ಶಾಪ,ಮೊದಲು ಇವರಿಬ್ಬರೂ ತೊಲಗಬೇಕು.

 11. narayana says:

  ya its right pratap u r analysis is super.

 12. JADIYAPPA says:

  Wonderful article …….. with all evidence and witness.

 13. drsriramvdongre says:

  excellent article

 14. drsriramvdongre says:

  ಈ ಲೇಖನ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಇಬ್ಬರಿಗೂ ಹಿಡಿದ ಕನ್ನಡಿಯಂತಿದೆ

 15. naren says:

  good one

 16. sandeep says:

  SUPERB ARTICLE.

 17. Mallu says:

  HI, prathap, your article is superb, but I dont know why now a day’s your writing against our popular CM.BSY.

  He is having support/behind of 2.5 crore people in Karntaka.that means they are not fool. please just dont think about last three years, just go back to yediyurappa’s last 40 years of political life. now your talking about BJP right, just imagine without BSY, is BJp can win??? its millian dollar Question.

  I will assure Without BSY bjp cant imporove in state. even it wont cross two digit.

 18. CHATRAPATHI MAHIPAL..... says:

  anna u will aways be right…..but stop writing about this blady politicsions and politics…..,write something about swatantra veer sawarkar….28 th of this month his jayanthi so plz write something about him ….this is humble request of your sweet young brother……..

 19. Rudra says:

  Its Right articles

 20. santhosh says:

  Hi pratap,

  This is a very good article !!!! I completely agree with u’r view, no doubt congress involved in Horse trading in 2008, but that was for national interest, all parties including left, BJP , jds wanted to stop alliance with america, which was not advisable. But todays Karnataka government is involved in all sorts of corruption, the majority proving which happened last year was big shame to all kannadigas, how did our speaker behave at that time?? . I agree government should not be dissolved illegally, but other than suresh kumar, no one else is uncorrupted in present government. How did yedyurappa saved his seat last year, no other chief minister supported cast’ism that openly. Coming to governor, we all know that he i a congress agent, he should be removed from Karnataka, but once the majority proving is been declared illegal, he has rights to give report to central government. Central congress is not performing well, so the ppl gave der reply in recent elections in Andra, TN !!! Hope the government changes both in central and state !!!! Central government is not taking actions against raising prices, terrorism etc . they no more reserve rights to be in power, so does Karnataka government. we all watched how yedyurappa hijacked party high command last year. Katta, Ashok, Ramchandra gowda , Yedyurappa, Shobha, Hallappa , Boppayaa ,Reddy’s , Gubbi suresh All r involved in 1 or other scams !!!! I’m really feeling guilty for voting Karnataka BJP . All these can be solved only when Modiji becomes PM, but even in BJP high command lot of politics is going on !!!! only GOD has to save this country from these DOG’s. Hope Governor, Central government, State Government will be changed ASAP !!!

 21. kirankumar says:

  both are useless body in my state, i did big mistake by voting BJP party

 22. hemavathi says:

  its good article .

 23. Nagendra Shastry says:

  Dear Pratap;

  Superb article..We voted BJP thinking they will work and they are honest…Now I am ashamed of myself to say that I have voted for a govt leaded by yadyurappa..He is num 1 corrupt in the state today and doing extreme casteism..We alredy know the value of Congress and JDS..Now we got to know these fellow’s value…We dont know whom to vote in next election…

 24. ಸುನಿಲ್ ಬಾಬು ಜಿ .ಎಸ್ says:

  ಈ ನಿಮ್ಮ ಲೇಖನ ರಾಜ್ಯದ ಇಂದಿನ ದುಸ್ತಿತಿಯನ್ನು ಸಾರಿ ಸಾರಿ ಹೇಳುವಂತಿದೆ …….ಲಾಲ್ ಬಹಾದ್ದೂರ್ ಶಾಸ್ತ್ರೀ ರೈಲ್ವೆ ಮಂತ್ರಿ ಯಾಗಿದ್ದ ಅವಧಿ ಯಲ್ಲಿ ಒಂದು ರೈಲು ಹಳ್ಳಿ ತಪ್ಪಿ ಅಪಘಾತವಾದ ದುರಂತದ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು ಎಂದು ಎಲ್ಲೋ ಓದಿದ ನೆನಪು…… ಆದರೆ ನೈತಿಕತೆ ಅನ್ನೋ ಪದ ಇಂದಿನ ರಾಜಕಾರಣಿಗಳಿಗೆ ಮರೆತೆ ಹೋಗಿದೆ …..ಇನ್ನಾದರೂ ಮತದಾರ ಎಚ್ಚೆತ್ತು ಕೊಳ್ಳಬೇಕು ……

 25. Gowrish says:

  nijavaglu thumba bejaaargtide… Last paragraph and last line makes one to shoot these two guys, and other such vulgar creatures in India… It hurts when people from other states staying in Karnataka tease us about these things.

  Some where I read Mr. HRB said he is “ATHITHI of Karnataka” and people of Karnataka will treat him like that. But if he forgets and continues to misbehave and fiddle with Karnataka people like this, them he will get his “THITHI” in Karnataka.

  Mr BSY – one question – you may be around 60 – 70, at this age, what was the need to cheat people of Karnataka when all these years you fought like a veteran? You will never ever get a SECOND chance. Fraud you are…

 26. krishna says:

  sariyagi yeliddira ,karnatakadindda evaribbaru tolagabeku,avaga janate nemmadi inda irabahudu.

 27. nithin says:

  yes your article is
  correct.

 28. kiran says:

  thank you sir for your wonderfull artcle..

 29. Balakrishna Bhat says:

  khanditha .. Congress nanna bembala ide … Brastachara , Hagaranagalu … Eniddaru adu Congress na hakku … BJP adaralli todaguvudendare … khandita shisalagadu…

 30. Nithin K S says:

  Superb article Sir 🙂

 31. hanamesh.purohit says:

  its a nice article. as always you have proved your ability in this also. I suggest you to translate the book THIS HAPPENED IN KASHMIR written by Krishana meheta. KANNADIGAS need to know more about those days.

 32. Chandraneel says:

  wow.. Mr Pratap no words can define your style of writing, its amazing, simple yet so powerful.. 1 more thing “Operationa kamala” please read the article once more before commenting. You responded like a typical politician and an ARDENT BJP supporter.

 33. Deepa says:

  Yes, wt u r telling is obsolutly r8t……. ರಾಜ್ಯಕ್ಕಂಟಿದ ಶಾಪ ಈ ನಮ್ಮ ರಾಜ್ಯಪಾಲ, ಮುಖ್ಯಮಂತ್ರಿ! dz sentecne z really meaningful……. U hv written 1 article about yediyurappa in vijaya karnataka,wn he passed 60yr is d age limit of gvt.employees, he dint even read dt i thnk so, if he does dt, defntly he’ll chng dt…. Atleast dt Chief Minister of karnataka shuld learn frm Narendra Modi, he is such a good admin,he is also in BJP only,y dnt he c his achievmnts…
  Cheee v r really unlucky fellows in dz matter…:( He shuld feel shy frm his adminstration…… This govt.is d child of Corruption…….

 34. ash says:

  HEY PRATAP

  WHERE DO U COLLECT ALL THESE INFORMATION BOSSS??

 35. Karunakar says:

  Dear Pratap

  The best articles…please keep writing and continue your job of exposing these corrupt people.

 36. geetanjali says:

  u came back with ur original style of writting…………………………………………..keep up the spirit always high

 37. ramsundar maiya says:

  GOOD DEAR PRATAP

 38. ramsundar maiya says:

  GOOD ONE DEAR PRATAP

 39. PRAMOD SHETTY says:

  good one ,

 40. Hemanth says:

  nivu heliddu satyakke samipavadudu.. adare enu maduvadu..mattu namma jana anatavaranne.. mattu ade hina paksha cangressanne arisi taruttaralla enu maduvadu..
  nanagantu Congress hina Rajakiya Nodi Nodi bejaragi bittide.. mattu avanu yavano Digwijaya singha antu Huchhu Naayi idda haage.. bayagi bandadde bogaluttane..
  avanu Sonia Gandiya kaalu kelage malagida naayiya hage maduttane…
  innu enenu kadideyo namma Deshakke …..!

 41. manjunath hegde says:

  good article

 42. Prasanna Bhat says:

  ಇದೊಂದು ಹಾವೂ ಸಾಯದು, ಕೋಲೂ ಮುರಿಯದು ಎನ್ನುವಂತಿದೆ…